ದಿನಾಂಕ :04/07/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 155/2020 ಕಲಂ. 269, 271 ಐಪಿಸಿ :-

  ದಿ: 03-07-2020 ರಂದು ರಾತ್ರಿ 9:15 ಗಂಟೆಗೆ ಪಿ.ಸಿ 305 ರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ – ಈ ಮೂಲಕ   ಹರೀಶ ಪಿ.ಸಿ  305 ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ನಾನು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ  ಎರಡು ವರ್ಷಗಳಿಂದ ಪೊಲೀಸ್ ಪೇದೆಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತೇನೆ. ದಿನಾಂಕ:03/07/2020 ರಂದು ಠಾಣಾಧಿಕಾರಿಗಳು ನನಗೆ ಮತ್ತು ಹೆಚ್.ಜಿ 576 ಶ್ರೀಧರ ವಿ  ರವರಿಗೆ ಬಾಗೇಪಲ್ಲಿ ಪುರದ 4 ನೇ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿರುತ್ತಾರೆ.  ಆದೇಶದಂತೆ ನಾನು ರಾತ್ರಿ 8:00 ಗಂಟೆಗೆ ಠಾಣೆಗೆ ಹಾಜರಾಗಿ ಬೀಟು ಪುಸ್ತಕವನ್ನು ಪಡೆದುಕೊಂಡು ಹೆಚ್.ಜಿ 576 ರವರೊಂದಿಗೆ  ಗಸ್ತನ್ನು ಪ್ರಾರಂಭಿಸಿ ಡಿ.ವಿ.ಜಿ ರಸ್ತೆ, ಕೋರ್ಟ್ ಹಿಂಬಾಗ, ಡಿಪೋ ರಸ್ತೆ ಕಡೆಗೆ ಗಸ್ತು ಮಾಡಿಕೊಂಡು ಗಂಗಮ್ಮ ಗುಡಿ ದೇವಸ್ಥಾನದ  ಕಡೆಗೆ ಗಸ್ತು ಮಾಡುತ್ತಿದ್ದಾಗ,  ರಾತ್ರಿ  ಸುಮಾರು 8:45 ಗಂಟೆಯಲ್ಲಿ  ಯಾರೋ ಒಬ್ಬ ವ್ಯಕ್ತಿ ದೇವಸ್ಥಾನದ ಮುಂಬಾಗದಲ್ಲಿ  ಮಾಸ್ಕ್ ಅನ್ನು ಧರಿಸದೆ ಕುಳಿತುಕೊಂಡಿದ್ದು,  ಆತನನ್ನು ಸಾಮಾಜಿಕ ಅಂತರದಿಂದ ಗಮನಿಸಲಾಗಿ ಸದರಿ ವ್ಯಕ್ತಿಯ ಕೈಗೆ ಕೋವಿಡ್-19 ಗೆ ಸಂಬಂದಿಸಿದ ಸೀಲ್ ಹಾಕಿರುತ್ತಾರೆ. ನಾನು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಆನಂದ ಬಿನ್ ನಾಗನ್ನ, 24 ವರ್ಷ, ಆದಿಕರ್ನಾಟಕ ಜನಾಂಗ, ತರಕಾರಿ ವ್ಯಾಪಾರ, ವಾಸ-ಆನಂದ ವೈನ್ಸ್ ಪಕ್ಕ, ಘಂಟಂವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಸ್ವಂತ ಸ್ಥಳ ಚೊಕ್ಕನಪಲ್ಲಿ ಗ್ರಾಮ, ಇಂದಿರನಗರ, ಆಸ್ಪರಿ ಮಂಡಲಂ, ಕರ್ನೂಲ್ ಜಿಲ್ಲೆ, ಆಂದ್ರಪ್ರದೇಶ ಮೊ:7652790500 ಎಂತ ತಿಳಿಸಿದ್ದು, ಆತನನ್ನು ವಿಚಾರ ಮಾಡಲಾಗಿ ತಮ್ಮ ಸ್ವಂತ ಊರು ಆಂದ್ರಪ್ರದೇಶವಾಗಿದ್ದು, ವ್ಯಾಪಾರ ಮಾಡಿಕೊಂಡು ಘಂಟಂವಾರಿಪಲ್ಲಿಯಲ್ಲಿ ಇರುವುದಾಗಿ ತಿಳಿಸಿರುತ್ತಾರೆ. ಅಲ್ಲದೆ  ಆರೋಗ್ಯ ಇಲಾಖೆಯವರು ನನಗೆ ಹೊಂ ಕ್ವಾರೆಂಟೈನಲ್ಲಿರುವಂತೆ ಸೂಚಿಸಿ, ನನ್ನ ಕೈಗೆ ಸೀಲ್ ಹಾಕಿರುತ್ತಾರೆಂದು ತಿಳಿಸಿದನು. ನಾನು ನಿನ್ನ ಕೈಗೆ ಸೀಲ್ ಹಾಕಿದ್ದರೂ ಹೋಂ ಕ್ವಾರೆಂಟೈನ್ ನಲ್ಲಿರುವಂತೆ ತಿಳಿಸಿದ್ದರೂ, ಏಕೆ ಈ ರೀತಿ  ದೇವಸ್ಥಾನದ ಮುಂಬಾಗದಲ್ಲಿ ಕುಳಿತಿರುವುದಾಗಿ ಕೇಳಿದಾಗ, ಮನೆಯಲ್ಲಿ ಇದ್ದು ಬೇಸರವಾಗಿರುವುದರಿಂದ ಮನೆಯಿಂದ ಹೊರಗಡೆ ದೇವಸ್ಥಾನದ ಮುಂಬಾಗದಲ್ಲಿ ಕುಳಿತುಕೊಂಡಿರುವುದಾಗಿ ತಿಳಿಸಿರುತ್ತಾನೆ. ಕೋವಿಡ್-19 ಬಗ್ಗೆ ಸದರಿ ಆಸಾಮಿಗೆ ಈಗಾಗಲೇ ಮಾಹಿತಿ ನೀಡಿ ಹೋಂ ಕ್ವಾರೆಂಟೈನ್ ಸೀಲ್ ಹಾಕಿದ್ದರೂ ಸಹಾ ಸಾಂಕ್ರಾಮಿಕ ರೋಗ ಹರುಡುವುದೆಂದು ತಿಳಿದಿದ್ದರೂ ಅದನ್ನು ನಿರ್ಲಕ್ಷಿಸಿ ಸಾರ್ವಜನಿಕರು ಬರುವ ದೇವಸ್ಥಾನದ ಮುಂಬಾಗದಲ್ಲಿ ಕುಳಿತುಕೊಂಡಿರುತ್ತಾನೆ. ಸಾಂಕ್ರಾಮಿಕ ರೋಗದ ಬಗ್ಗೆ ನಿರ್ಲಕ್ಷತೆ ಮಾಡಿ ಹೊಂ ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸಿರುವ ಮೇಲ್ಕಂಡ ಆಸಾಮಿಯ ವಿರುದ್ದ ಮುಂದಿನ ಕ್ರಮಕ್ಕಾಗಿ ರಾತ್ರಿ 9:15 ಗಂಟೆಗೆ ಠಾಣೆಗೆ ಹಾಜರಾಗಿ ವರದಿಯನ್ನು ನೀಡಿರುತ್ತೇನೆ, ಎಂದು ನೀಡಿದ ವರಧಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 258/2020 ಕಲಂ. 87 ಕೆ.ಪಿ. ಅಕ್ಟ್ :-

  ಈ ದಿನ ದಿನಾಂಕ: 03/07/2020 ರಂದು ಸಂಜೆ 7.30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿ.ಪಿ.ಸಿ-339 ಕರಿಯಪ್ಪ ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ಈ ದಿನ ದಿನಾಂಕ: 03-07-2020 ರಂದು ಸಂಜೆ 4-00 ಗಂಟೆಯ ಸಮಯದಲ್ಲಿ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ದೊಡ್ಡಹಳ್ಳಿ ಗ್ರಾಮದ ಬಳಿಯಿರುವ ಸರ್ಕಾರಿ ಶಾಲೆಯ ಹಿಂಬಾಗದಲ್ಲಿನ ಹುಣಸೇ ಮರದ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಹೆಚ್.ಸಿ-249 ಶ್ರೀ.ಸಂದೀಪ್ ಕುಮಾರ್, ಹೆಚ್.ಸಿ-124 ಶ್ರೀ ನರಸಿಂಹಮೂರ್ತಿ, ಹೆಚ್.ಸಿ-41 ಜಗದೀಶ, ಸಿಪಿಸಿ-544 ಶ್ರೀ ವೆಂಕಟರವಣ, ಸಿ.ಪಿ.ಸಿ-197 ಅಂಬರೀಶ, ಸಿಪಿಸಿ-239 ಮಣಿಕಂಠ, ಸಿಪಿಸಿ-430 ನರಸಿಂಹಯ್ಯ ಹಾಗೂ ಚಾಲಕ ಎ.ಹೆಚ್.ಸಿ-38 ಮುಖೇಶ್ ಮತ್ತು ಪಂಚರೊಂದಿಗೆ KA-40-G-326 ನಂಬರಿನ ಠಾಣೆಯ ಸರ್ಕಾರಿ ಜೀಪಿನಲ್ಲಿ ದೊಡ್ಡಹಳ್ಳಿ ಗ್ರಾಮದ ಬಳಿಯಿರುವ ಸರ್ಕಾರಿ ಶಾಲೆಯ ಬಳಿ ಹೋಗಿ ಜೀಪನ್ನು ನಿಲ್ಲಿಸಿ ನೋಡಲಾಗಿ ಸರ್ಕಾರಿ ಶಾಲೆಯ ಹಿಂಭಾಗದಲ್ಲಿರುವ ಹುಣಸೇ ಮರದ ಕೆಳಗೆ ಕೆಲವರು ಗುಂಪು ಕಟ್ಟಿಕೊಂಡು ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಆ ಪೈಕಿ ಕೆಲವರು ಕೋಳಿ ಹುಂಜಗಳ ಸಮೇತ ಓಡಿ ಹೋಗಿದ್ದು, ಉಳಿದಂತೆ ಸ್ಥಳದಲ್ಲಿದ್ದ 03 ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರುಗಳ ಹೆಸರು, ವಿಳಾಸ ಕೇಳಲಾಗಿ 1)ಆರ್.ಮಂಜುನಾಥ ಬಿನ್ ರಾಮಪ್ಪ, 36 ವರ್ಷ, ಬಲಜಿಗರು, ಜಿರಾಯ್ತಿ, ಕೊಮ್ಮೇಪಲ್ಲಿ ಗ್ರಾಮ, ಮಿಟ್ಟಹಳ್ಳಿ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ಎಂತಲೂ, 2) ವೆಂಕಟರೆಡ್ಡಿ ಬಿನ್ ಲೇಟ್ ಚೌಡಪ್ಪ, 35 ವರ್ಷ, ವಕ್ಕಲಿಗರು, ಜಿರಾಯ್ತಿ, ಯಗವಗೋಳ್ಳಹಳ್ಳಿ ಗ್ರಾಮ, ಮಿಂಡಿಗಲ್ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ಎಂತಲೂ, 3) ಮೂರ್ತಿ ಬಿನ್ ಲೇಟ್ ತಿಮ್ಮಣ್ಣ, 28 ವರ್ಷ, ನಾಯಕರು, ಜಿರಾಯ್ತಿ, ಎಲ್.ಎನ್.ಹೊಸೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು, ನಂತರ ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಕೋಳಿ ಹುಂಜ, ಪಣಕ್ಕಿಟ್ಟಿದ್ದ 1,400/- ರೂ ನಗದು ಹಣ ದೊರೆತಿರುತ್ತದೆ. ಆರೋಪಿಗಳು ಜೂಜಾಟವಾಡಲು ತಂದಿದ್ದ ಕೆಎ-40 ವಿ-6044 ನೋಂದಣಿ ಸಂಖ್ಯೆಯ ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ಮತ್ತು ಕೆಎ-40 ಎಕ್ಸ್-5024 ನೋಂದಣಿ ಸಂಖ್ಯೆಯ ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರವಾಹನಗಳು ಸ್ಥಳದಲ್ಲಿದ್ದು, ಸದರಿ ಮಾಲುಗಳನ್ನು ಸಂಜೆ 5-00 ರಿಂದ ಸಂಜೆ 6-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು, ಮಾಲು, ಅಮಾನತ್ತು ಪಂಚನಾಮೆ ಹಾಗೂ ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ನಂತರ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ನಿವೇದಿಸಿಕೊಂಡಿದ್ದು, ಸದರಿ ನಿವೇದನೆಯನ್ನು ಘನ ನ್ಯಾಯಾಲಯವು  ಅಂಗೀಕರಿಸಿ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿರುವುದಾಗಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 78/2020 ಕಲಂ. 143,269,353,504,506 ರೆ/ವಿ 149 ಐಪಿಸಿ :-

  ದಿನಾಂಕ: 03/07/2020 ರಂದು ಸಂಜೆ 5:15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹೆಚ್ .ವಿ ಹರೀಶ್ , ಪೌರಾಯುಕ್ತರು, ನಗರಸಭೆ ಚಿಂತಾಮಣಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 02/07/2020 ರಂದು ಬೆಳಿಗ್ಗೆ  11:00 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಜೆ ಜೆ ಕಾಲೋನಿ ವಾಸಿಯಾದ ನಾಗರಾಜ್ (ಕೆ.ಎಲ್ .ಎನ್) ಮತ್ತು ವಿನೋಭ ಕಾಲೋನಿ ವಾಸಿಯಾದ ಕೃಷ್ಣಮೂರ್ತಿ, ತಬರೇಜ್ ಮತ್ತು ಇತರರು ಸೇರಿ ತಾನು ಹಾಗೂ ತನ್ನ ಸಿಬ್ಬಂದಿ ವರ್ಗದವರು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಇವರುಗಳು ತನ್ನ ಮೇಲೆ ವಿನಾಃ ಕಾರಣ ನೀರು ಬಿಡಲಿಲ್ಲ ಎಂಬ ನೆವೊಡ್ಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಸಹ ಪ್ರಯತ್ನಿಸಿ ಕಛೇರಿಗೆ ಸಂಬಂಧಪಟ್ಟ ಪಿಠೋಪಕರಣಗಳನ್ನು ತಳ್ಳಿ ಸಿಬ್ಬಂದಿ ವರ್ಗದವರನ್ನು ಬೆದರಿಸಿ, ಕಛೇರಿಯಿಂದ ಹೊರದಬ್ಬಿ ವಿನಾಃ ಕಾರಣ ಸುಳ್ಳು ಆರೋಪಗಳನ್ನು ಹೊರಸಿ ಮಹಾಮರಿ ಕೊರೊನಾ ವೈರಸ್ ಚಿಂತಾಮಣಿ ನಗರದಲ್ಲಿ ಹರಡಿದ್ದು, ವೈರಸ್ ಹರಡದಂತೆ ಹಲವಾರು ಯೋಜನೆಗಳ ಕಾರ್ಯ ರೂಪ ತರಲು ತಾವುಗಳು ಪ್ರಯತ್ನಸುತ್ತಿದ್ದು, ಸದರಿಯವರುಗಳು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಪ್ರತಿಭಟನೆಗಳನ್ನು ಮಾಡಿ ತಮ್ಮ ಕರ್ತವ್ಯಗಳಿಗೆ ಅಡ್ಡಿಪಡಿಸಿದ್ದು, ಆದ್ದರಿಂದ ಮೇಲ್ಕಂಡ ರವರುಗಳು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದರಿಂದ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 166/2020 ಕಲಂ. 323,324,504 ಐಪಿಸಿ :-

  ದಿನಾಂಕ 03/07/2020 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಯಲ್ಲಪ್ಪ ಬಿನ್ ಲೇಟ್ ನಂಜಪ್ಪ,  50 ವರ್ಷ, ಕುರುಬ ಜನಾಂಗ,  ಜಿರಾಯ್ತಿ, ವಾಸ ಹುದೂತಿ   ಗ್ರಾಮ, ಗೌರಿಬಿದನೂರು  ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 02/07/2020 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ತಾನು ಮನೆಯಲ್ಲಿದ್ದಾಗ ತಮ್ಮ ಗ್ರಾಮದ ತಮ್ಮ ಜನಾಂಗದ  ಶ್ರೀರಾಮಪ್ಪ ಬಿನ್ ಹನುಮಂತಪ್ಪ, 50 ವರ್ಷ, ರವರು ತಮ್ಮ ಮನೆಯ ಮುಂಬಾಗದ ರಸ್ತೆಯಲ್ಲಿ  ಅವಾಚ್ಯ ಶಬ್ದಗಳಿಂದ ಬೈದಾಡುಕೊಳ್ಳುತ್ತಿದ್ದಾಗ ತಾನು ಮನೆಯಿಂದ ಹೊರಗೆ ಬಂದಿದ್ದು ಶ್ರೀರಾಮಪ್ಪ ತನ್ನ ಕೈಯಲ್ಲಿದ್ದ  ಮಚ್ಚಿನಿಂದ ತನ್ನ ತಲೆಯ ಮೇಲೆ ಹೊಡೆಯಲು ಬಂದಾಗ ತಾನು ಹಿಂದಕ್ಕೆ  ಬಾಗಿದಾಗ ಮಚ್ಚಿನ ಮಣಚು(ತುದಿ)  ತನ್ನ ತಲೆಗೆ ತಗಲಿ ತಲೆಯಲ್ಲಿ ರಕ್ತಗಾಯವಾಗಿರುತ್ತೆ. ಕೂಡಲೇ ಮನೆಯಲ್ಲಿದ್ದ ತನ್ನ ಮಗ  ಮಹೇಶ ಮತ್ತು ತನ್ನ ತಮ್ಮ ನಾದ ಜಗನ್ನಾಥ ರವರು ಹೊರಗೆ ಬಂದು ತನ್ನನ್ನು ಬಿಡಿಸಿ ತನ್ನನ್ನು ಯಾವುದೋ ಒಂದು ಆಟೋದಲ್ಲಿ ಚಿಕಿತ್ಸೆಗಾಗಿ  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ತನ್ನನ್ನು ಅವಾಚ್ಯ ಶಬ್ದಗಳಿಂದ  ಬೈದು ಹಲ್ಲೆ ಮಾಡಿರುವ  ಶ್ರೀರಾಮಪ್ಪ ನ ಮೇಲೆ ಸೂಕ್ತ ಕ್ರಮ ಜರುಗಿಸಲು ಕೋರಿ ಪಿರ್ಯಾದು.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 167/2020 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

  ದಿನಾಂಕ 30.5.2020 ರಂದು ಸಂಜೆ 4-00 ಗಂಟೆಗೆ ಪಿ.ಎಸ್.ಐ ಶ್ರೀ. ಮೋಹನ್.ಎನ್. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 30/05/2020 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಬಂದರ್ಲಹಳ್ಳಿ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿ.ಸಿ-302 ಕುಮಾರ್ ನಾಯಕ್ ಮತ್ತು ಪಿ.ಸಿ-518 ಆನಂದ , ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ ಬಂದರ್ಲಹಳ್ಳಿ ಗ್ರಾಮದಲ್ಲಿ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ಮದ್ಯಾಹ್ನ 2-00 ಗಂಟೆಗೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯು ಸಹಾ ಓಡಿ ಹೋಗಿದ್ದು, ಆಸಾಮಿಯ ಹೆಸರು ವಿಳಾಸ ಕೇಳಿ ತಿಳಿಯಲಾಗಿ , ಶ್ರೀ. ಚಂದ್ರಶೇಖರ್ ಬಿನ್ ಲೇಟ್ ಆದಿನಾರಾಯಣಪ್ಪ, 50 ವರ್ಷ, ಬಲಜಿಗರು, ವ್ಯವಸಾಯ, ಬಂದರ್ಲಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದ HAY WARDS CHEERS WHISKY ಯ 26 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 2 ಲೀಟರ್ 340 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 788.32 /- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 2-00 ಗಂಟೆಯಿಂದ ರಿಂದ 3-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 26 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 4-00 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 168/2020 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

  ದಿನಾಂಕ 11-05-2020 ರಂದು ಮಧ್ಯಾಹ್ನ 13-00 ಗಂಟೆಗೆ ಶ್ರೀ ಎನ್. ಮೋಹನ್ , ಪಿ.ಎಸ್.ಐ. ಗೌರಿಬಿದನೂರು ಗ್ರಾಮಾಂತರ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ ದಿನಾಂಕ: 11-05-2020 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ನಾನು ಮತ್ತು ಪಿ.ಸಿ. 518 ಆನಂದ, ಪಿ.ಸಿ. 433 ಬಾಬಾಜಾನ್, ಚಾಲಕ ಎ.ಹೆಚ್.ಸಿ.32 ಗಂಗುಲಪ್ಪ ರವರೊಂದಿಗೆ ನಗರಗೆರೆ ಹೊರಠಾಣೇ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ನಕ್ಕಲಹಳ್ಳಿ ಗ್ರಾಮದಲ್ಲಿ ಮುದ್ದಲೋಡು ರಸ್ತೆಯ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಆಸಾಮಿಗಳು ಮನೆಯ ಬಳಿ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 518 ಆನಂದ, ಪಿ.ಸಿ. 433 ಬಾಬಾಜಾನ್, ಚಾಲಕ ಎ.ಹೆಚ್.ಸಿ.32 ಗಂಗುಲಪ್ಪ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ ನಕ್ಕಲಹಳ್ಳಿ ಗ್ರಾಮಕ್ಕೆ ಹೋಗಿ, ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ನಕ್ಕಲಹಳ್ಳಿ-ಮುದ್ದಲೋಡು ರಸ್ತೆಯಿಂದ ಪೂರ್ವಕ್ಕೆ ಮನೆಯಿದ್ದು ಯಾರೋ ಒಬ್ಬ ಆಸಾಮಿಯು ತನ್ನ ಕೈಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ನಿಂತಿದ್ದು, ಮನೆಯ ಪಕ್ಕದಲ್ಲಿರುವ ಮುದ್ದಲೋಡು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಇತರೇ 4 ಜನರು ಕುಳಿತಿದ್ದು, ಅವರಿಗೆ ಪ್ಲಾಸ್ಟಿಕ್ ಚೀಲವನ್ನು ಹಿಡಿದಿದ್ದ ಆಸಾಮಿಯು ಪ್ಲಾಸ್ಟಿಕ್ ಚೀಲದಿಂದ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, 4 ಜನರು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ 4 ಜನರು ಅಲ್ಲಿಂದ ಓಡಿಹೋಗಿದ್ದು, ಚೀಲವನ್ನು ಹಿಡಿದು ಮಧ್ಯದ ಪಾಕೆಟ್ ಗಳನ್ನು ಕೊಟ್ಟು, ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯು ಚೀಲವನ್ನು ಬಿಸಾಡಿ ಅಲ್ಲಿಂದ ಓಡಿಹೋಗಿದ್ದು ಸ್ಥಳದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 22 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1.ಲೀಟರ್ 980 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 667/- ರೂ.ಗಳಾಗಿರುತ್ತೆ. ಸ್ಥಳದಲ್ಲಿ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಮದ್ಯವನ್ನು ಮಾರಾಟವನ್ನು ಮಾಡುತ್ತಿದ್ದ ಆಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ಮುರಳಿ ಬಿನ್ ಅಶ್ವಥಪ್ಪ, 38 ವರ್ಷ, ಈಡಿಗರು, ವ್ಯಾಪಾರ, ವಾಸ ನಕ್ಕಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಯಿತು. ಸದರಿ ಮನೆಯು ಆರೋಪಿಯ ಮನೆಯಾಗಿದ್ದು, ಆಸಾಮಿಯು ಮಾರಾಟ ಮಾಡಲು, ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ದಾಖಲೆಯನ್ನು ಹೊಂದಿಲ್ಲದೇ ಅಕ್ರಮವಾಗಿ ಮದ್ಯವನ್ನು ಸಾರ್ವಜನಿಕ ರಸ್ತೆಯಲ್ಲಿ ಮಾರಾಟವನ್ನು ಮಾಡಿ ಕುಡಿಯಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುತ್ತಾನೆ. ನಂತರ ಸ್ಥಳದಲ್ಲಿ ಬೆಳೀಗ್ಗೆ 11-30 ಗಂಟೆಯಿಂದ 12-15 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಸ್ಥಳದಲ್ಲಿ ದೊರೆತ 1) HAY WARDS CHEERS WHISKY ಯ 22 ಟೆಟ್ರಾ ಪಾಕೆಟ್ ಗಳು, 2) ಒಂದು ಪ್ಲಾಸ್ಟಿಕ್ ಚೀಲ,3)ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 4) HAY WARDS CHEERS WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ವಶಪಡಿಸಿಕೊಂಡು, ಠಾಣೆಗೆ 13-00 ಗಂಟೆಗೆ ವಾಪಸ್ಸು ಬಂದಿದ್ದು, ಪಂಚನಾಮೆ ಮತ್ತು ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ] , 32(3) ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿರುವುದು.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 84/2020 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

  ದಿನಾಂಕ: 03/07/2020 ರಂದು ಸಂಜೆ 18-15 ಗಂಟೆಗೆ ಡಿ.ಸಿ.ಬಿ-ಸಿ.ಇ.ಎನ್ ಪೊಲೀಸ್ ಠಾಣೆಯ ಹೆಚ್.ಸಿ. 85 ನರಸಿಂಹರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಚಿಕ್ಕಬಳ್ಳಾಪುರ ಡಿ.ಸಿ.ಬಿ-ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸ್ಪ ಪೆಕ್ಟರ್ ರಾಜಣ್ಣ ಎನ್. ರವರ ಆದೇಶದಂತೆ ತಾನು ಮತ್ತು ಹೆಚ್.ಸಿ. 192 ರಾಜಗೋಪಾಲ ರವರೊಂದಿಗೆ ಸರ್ಕಾರಿ ದ್ವಿಚಕ್ರವಾಹನದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗೌರಿಬಿದನೂರು ತಾಲ್ಲೂಕಿನ ಕೋನಗಾನಹಳ್ಳಿ ಗ್ರಾಮದಲ್ಲಿದ್ದಾಗ ಬಾತ್ಮೀಯಂತೆ ಸನ್ನಪ್ಪ ಬಿನ್ ಚಿಕ್ಕತಿಮ್ಮಪ್ಪ ರವರು ಗೌರಿಬಿದನೂರು ನಗರದ ಪುಷ್ಟಾಂಜಲಿ ಚಿತ್ರಮಂದಿರ ಪಕ್ಕದಲ್ಲಿ ಹಾಸಿರುವ ಕಲ್ಲುಗಳ ಮೇಲೆ ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂತ ಬಂದ ಮಾಹಿತಿಯಂತೆ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು  ದಾಳಿಮಾಡಿದ್ದು, ಮದ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಸನ್ನಪ್ಪ ಬಿನ್ ಚಿಕ್ಕತಿಮ್ಮಪ್ಪ 39 ವರ್ಷ, ಉಪ್ಪಾರ ಜನಾಂಗ, ವ್ಯಾಪಾರ, ವಾಸ ಕೊನಗಾನಹಳ್ಳಿ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲದಲ್ಲಿ 1) 23 ಮದ್ಯ ತುಂಬಿದ ಹೈವಾರ್ಡ್ಸ್ ಕಂಪನಿಯ 90 ಎಂ.ಎಲ್ ನ ಟೆಟ್ರಾ ಪಾಕೆಟ್ ಗಳು, 2 ಮದ್ಯ ಕುಡಿದ ನಿಶಾನೆ ಇರುವ ಪ್ಲಾಸ್ಟಿಕ್ ಗ್ಲಾಸುಗಳು, 3.) 02 ಖಾಲಿ  90 ಎಂ.ಎಲ್ ನ ಹೈವಾರ್ಡ್ಸ್ ಕಂಪನಿಯ ಟೆಟ್ರಾ ಪಾಕೆಟ್ ಗಳು,4.) ಒಂದು ಲೀಟರ್ ಒಂದು ಪ್ಲಾಸ್ಟಿಕ್ ಖಾಲಿ ವಾಟರ್ ಬಾಟಲ್ ಇದ್ದು, ಸದರಿಯವುಗಳನ್ನು ಆಮಾನತ್ತು ಪಡಿಸಿಕೊಂಡಿದ್ದು, ಒಟ್ಟು 2.70 ಮಿ.ಲೀ ಇದ್ದು,  ಒಟ್ಟು ಬೆಲೆ 808 ರೂಗಳಾಗಿರುತ್ತೆ.  ಸದರಿ ಆಸಾಮಿ ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು  ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 85/2020 ಕಲಂ. 78(3) ಕರ್ನಾಟಕ ಪೊಲೀಸ್ ಆಕ್ಟ್ :-

  ದಿನಾಂಕ: 04/07/2020 ರಂದು ಬೆಳಿಗ್ಗೆ 10-30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪೊಲೀಸ್ ಕಾನ್ಸ್ ಟೇಬಲ್ ಪಿ.ಸಿ. ರಂಗನಾಥ ಕುಮಾರ್ ರವರು ನ್ಯಾಯಾಲಯದಿಂದ  ಪ್ರ.ವ.ವರದಿಯನ್ನು ದಾಖಲಿಸಲು ಅನುಮತಿ ಆದೇಶವನ್ನು ನೀಡಿದ್ದರ ಸಾರಾಂಶವೇನೆಂದರೆ, ದಿನಾಂಕ 29/06/2020 ರಂದು ರಾತ್ರಿ 9:30 ಗಂಟೆಯಲ್ಲಿ DCB-CEN ಪೊಲೀಸ್ ಠಾಣೆಯ ರಾಜಗೋಪಾಲ ಹೆಚ್.ಸಿ 192 ರವರು ಠಾಣೆಗೆ ಹಾಜರಾಗಿ  ದಿನಾಂಕ 29/06/2020 ರಂದು ಸಂಜೆ 6:30 ಗಂಟೆಯಲ್ಲಿ ಗೌರಿಬಿದನೂರು ನಗರದಲ್ಲಿ ಗಸ್ತು ಮಾಡುತ್ತಿರುವಾಗ ನಗರದ ರಜಾಬ್ ಗಲ್ಲಿ ಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶ್ರೀಮತಿ ಮಮತ ಕೋಂ ಕುಮಾರ್ ರವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮಟ್ಕಾ ಅಂಕಿಗಳನ್ನು ಕಾನೂನು ಬಾಹೀರವಾಗಿ ಬರೆದು ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಪಂಚರ ಸಮಕ್ಷಮ ಆ ಮಟ್ಕಾ ಜೂಜಾಟದ ಮೇಲೆ ದಾಳಿ ಮಾಡಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮಹಬೂಬ್ ಬಾಷ ಬಿನ್ ಲೇಟ್ ರೆಹಮಾನ್ 43 ವರ್ಷ, ಕೂಲಿ ಕೆಲಸ, ವೀರಾಂಡಹಳ್ಳಿ, ಗೌರಿಬಿದನೂರು ನಗರ ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಪರಿಶೀಲಿಸಲಾಗಿ 1) ಒಂದು ಬಾಲ್ ಪಾಯಿಂಟ್ ಪೆನ್ನು, 2) ಮಟ್ಕಾ ಚೀಟಿ, ಮತ್ತು 3) ನಗದು ಹಣ 1330 ರೂಪಾಯಿಗಳು ಇದ್ದು ಎಲ್ಲವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ವಶಕ್ಕೆ ಪಡೆದು ಠಾಣೆಗೆ ಹಾಜರಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ದಾಖಲು ಮಾಡಿ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 71/2020 ಕಲಂ. 279,337 ಐಪಿಸಿ :-

  ದಿನಾಂಕ 03-07-2020 ರಂದು ಪಿರ್ಯಾಧಿದಾರರಾದ ಶಂಕರಪ್ಪ ಬಿನ್ ನಾರಾಯಣಸ್ವಾಮಿ, 52 ವರ್ಷ, ನಾಯಕರು, ವಾಟರ್ ಮ್ಯಾನ್ ಕೆಲಸ, ವಾಸ ಆದೇಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 26-06-2020 ರಂದು ಸಂಜೆ ಕೆ.ಎ-67 ಇ-0687 ನೊಂದಣಿ ಸಂಖ್ಯೆಯ ಟಿ.ವಿ.ಎಸ್ ಎಕ್ಸ್ ಎಲ್ ದ್ವಿಚಕ್ರವಾಹನದಲ್ಲಿ ತಮ್ಮ ಪಕ್ಕದ ಗ್ರಾಮವಾದ ಕಿಕ್ಕೇರಿಗೆ ಹೋಗಿ ರಾತ್ರಿ 08.00 ಗಂಟೆ ಸಮಯದಲ್ಲಿ ಚೇಳೂರು-ಚಿಂತಾಮಣಿ ರಸ್ತೆಯ ಸಿದ್ದೇಪಲ್ಲಿ ಕ್ರಾಸ್ ಬಳಿ ವೆಂಕಟರವಣಪ್ಪ ರವರ ಮನೆಯ ಮುಂದಿನ ರಸ್ತೆಯಲ್ಲಿ ಬರುತ್ತಿದ್ದಾಗ ಎದುರುಗಡೆಯಿಂದ ಕೆ.ಎ-02 ಎ.ಎಫ್-2162 ನೋಂದಣಿ ಸಂಖ್ಯೆಯ ಮಾರುತಿ ಸ್ವೀಪ್ಟ್ ಡಿಸೈರ್ ಕಾರು ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಪರಿಣಾಮ  ತನ್ನ ಎಡಕಾಲು ಮೊಣಕಾಲು ಕೆಳೆಗೆ ಕಾಲಿನ ಮೂಳೆ ಮುರಿದಿರುತ್ತೆ. ದ್ವಿಚಕ್ರವಾಹನ ಹಾಗೂ ಕಾರು ಸಹ ಜಖಂ ಆಗಿರುತ್ತದೆ. ಕೂಡಲೇ ಅಲ್ಲಿದ್ದ ಕನಿಶೆಟ್ಟಿಹಳ್ಳಿ ಗ್ರಾಮದ ಗಣಪತಿ ಬಿನ್ ಸುಬ್ಬಪ್ಪ, ಗೋಪಾಲಪುರ ಗ್ರಾಮದ ಭಾಸ್ಕರ್ ಬಿನ್ ನಾಗಪ್ಪ ರವರು ಬಂದು ಉಪಚರಿಸಿ 108 ಅಂಬ್ಯೂಲೇನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ನರೇಂದ್ರ ಖಾಸಗಿ ಆಸ್ವತ್ರೆಗೆ ದಾಖಲಿಸಿದ್ದು ಸದರಿ ಆಸ್ವತ್ರೆಯಲ್ಲಿ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿರುತ್ತಾರೆ. ಆಸ್ವತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತಿದ್ದರಿಂದ  ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಅಪಘಾತಪಡಿಸಿದ ಕೆ.ಎ-02 ಎ.ಎಫ್-2162 ನೋಂದಣಿ ಸಂಖ್ಯೆಯ ಮಾರುತಿ ಸ್ವೀಪ್ಟ್ ಡಿಸೈರ್ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.