ದಿನಾಂಕ :04/01/2021 ರ ಅಪರಾಧ ಪ್ರಕರಣಗಳು

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.02/2021 ಕಲಂ. 302,201 ಐ.ಪಿ.ಸಿ :-

     ದಿನಾಂಕ 04/12/2020 ರಂದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾದಿ ಮಹಮದ್ ಷರೀಫ್ ಬಿನ್ ಲೇಟ್ ಅನ್ವರ್ ಪಾಷಾ  ರವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ತಾನು ಇದೇ ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆಯ ವಾಸಿಯಾಗಿದ್ದು ಬಾಳೆಹಣ್ಣು ವ್ಯಾಪಾರ ಮಾಡುತ್ತಾ ಜೀವನ ಮಾಡಿಕೊಂಡಿದ್ದು ತನಗೂ ಮತ್ತು ತನ್ನ ಪತ್ನಿಯಾದ ಮೆಹರೂನ್ನೀಸಾರವರಿಗೆ ಇಬ್ಬರು ಮಕ್ಕಳಾಗಿದ್ದು, ಹಿರಿಯವಳಾದ ರುಕ್ಸಾನಾ ಬಾನು ಎಂಬುವರನ್ನು ಸಾದೀಕ್ ಪಾಷ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು, ಅವರು ಈಗ ವಿದುರಾಶ್ವತ್ಥದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ತನ್ನ ಎರಡನೇ ಮಗನಾದ ಸುಮಾರು 27 ವರ್ಷ ವಯಸ್ಸಿನ ಇಮ್ರಾನ್ ಎಂಬುವನು ಹಿರೇಬಿದನೂರಿನಲ್ಲಿ ವೆಲ್ಡಿಂಗ್ ಶಾಪ್ ನ್ನು ಇಟ್ಟುಕೊಂಡು ವೆಲ್ಡಿಂಗ್ ಕೆಲಸ ಮಾಡಿಕೊಂಡಿರುತ್ತಾನೆ.  ತನ್ನ ಪತ್ನಿಯಾದ ಮೆಹರೂನ್ನೀಸಾರವರಿಗೆ ಸೊಂಟದ ನೋವಿನ ಕಾರಣದಿಂದ  ದಿನಾಂಕ: 30/12/2020 ರಂದು ಹಿಂದೂಪುರದ ಎಸ್.ಆರ್. ರಾಘವೇಂದ್ರ ಆಸ್ಪತ್ರೆಯಲ್ಲಿ ದಾಖಲಿಸಿ  ಅಲ್ಲಿ ಆಪರೇಷನ್ ಮಾಡಿಸಿ ತಾನು ಅಲ್ಲಿ ತನ್ನ ಪತ್ನಿಯನ್ನು ನೋಡಿಕೊಂಡು ಅಲ್ಲಿಯೇ ಇದ್ದೇ, ದಿನಾಂಕ:03/01/2021 ರಂದು ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ತನ್ನ ಮಗನಾದ ಇಮ್ರಾನ್ ರವರು ತನ್ನ  ಹೆಂಡತಿಯ ಮೊಬೈಲ್ ಗೆ  ಪೋನ್ ಮಾಡಿ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದು, ದಿನಾಂಕ: 04/01/2021 ರಂದು ತನ್ನ ಹೆಂಡತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ವಿಷಯವನ್ನು ತಿಳಿದು ಕಾರನ್ನು ತೆಗೆದುಕೊಂಡು ಬರಲೇ ಎಂದು ಕೇಳುತ್ತಿದ್ದನು.  ಆಗ ತನ್ನ ಹೆಂಡತಿಯು ತನ್ನ ಅಕ್ಕನ ಮಗನಾದ ಆನಂತಪುರದ ಬಾಬಾಜಾನ್ ರವರು ಕಾರನ್ನು ತೆಗೆದುಕೊಂಡು ಬಂದಿದ್ದಾರೆ ಅವರ ಜೊತೆಯಲ್ಲಿ ಊರಿಗೆ ಬರುತ್ತೇನೆ.  ನೀನು ಕಾರನ್ನು ತೆಗೆದುಕೊಂಡು ಬರಬೇಡವೆಂದು ತಿಳಿಸಿದರು.  ಈ ದಿನ ದಿನಾಂಕ:04/01/2021 ರಂದು ಬೆಳಿಗ್ಗೆ ಸುಮಾರು 09-30 ಗಂಟೆ ಸಮಯದಲ್ಲಿ ತನ್ನ ಸ್ನೇಹಿತನಾದ ಸುಮಂಗಲಿ ಬಡಾವಣೆಯ ಖಲೀಲ್ ರವರು ತನಗೆ ಪೋನ್ ಮಾಡಿ ನಿನ್ನ ಮಗನಾದ ಇಮ್ರಾನ್ ರವರನ್ನು ಯಾರೋ ಕೊಲೆ ಮಾಡಿದ್ದು, ಗೌರಿಬಿದನೂರಿಗೆ ಬರುವಂತೆ ತಿಳಿಸಿದರು. ತಾನು ಕೂಡಲೇ ಹಿಂದೂಪುರದಿಂದ ದ್ವಿಚಕ್ರವಾಹನದಲ್ಲಿ ಗೌರಿಬಿದನೂರಿನ ದರ್ಗಾದ ಹಿಂಭಾಗದಲ್ಲಿರುವ ಬೈಪಾಸ್ ರಸ್ತೆಯ ಪಕ್ಕದ ಶಶಿಭೂಷಣ್ ರವರ ಜಮೀನಿನ ಬಳಿಗೆ ಬಂದು ನೋಡಲಾಗಿ ಕೊಲೆಯಾಗಿರುವ ವ್ಯಕ್ತಿಯು ತನ್ನ ಮಗನಾದ ಇಮ್ರಾನ್ ಆಗಿದ್ದನು.  ತನ್ನ ಮಗನ ಸೊಂಟದ ಹಿಂಭಾಗ 3-4 ಜಾಗದಲ್ಲಿ ಎದೆಯ ಮೇಲೆ ಮತ್ತು ಹೊಟ್ಟೆ, ತಲೆಗೆ ಹಾಗೂ ಗುಪ್ತಾಂಗಗಳು ಸೇರಿದಂತೆ ದೇಹದ ಹಲವಾರು ಕಡೆ ಯಾವುದೋ ಹರಿತವಾದ ಆಯುಧಗಳಿಂದ ತಿವಿದು ಕೊಚ್ಚಿ ಕೊಲೆಮಾಡಿರುವುದು ಕಂಡುಬಂದಿತು.  ನಂತರ ತಾನು ತನ್ನ ಮಗನ ಸ್ನೇಹಿತರಾದ ಟಿಪ್ಪುನಗರ ಬಾಬಾಜಾನ್ ಮತ್ತು ಸುಮಂಗಲಿ ಬಡಾವಣೆಯ ಬಳಿಯಿರುವ ಮಹಮದ್ ವಷೀಮ್ ರವರನ್ನು ವಿಚಾರ ಮಾಡಲಾಗಿ ರಾತ್ರಿ 9-30 ಗಂಟೆ ಸಮಯದಲ್ಲಿ ಬೆಂಗಳೂರು ಸರ್ಕಲ್ ನಲ್ಲಿ ನಾವು ಮೂರು ಜನರು  ಊಟ ಕಟ್ಟಿಸಿಕೊಂಡು ಬಂದಿದ್ದು, ಇಮ್ರಾನ್ ರವರು  ನಮ್ಮನ್ನು ನಮ್ಮ ಮನೆಗಳಲ್ಲಿ ಬಿಟ್ಟು ತಮ್ಮ ಮನೆಗೆ ಹೋದರೆಂದು ತಿಳಿಸಿದರು.  ತನ್ನ ಮಗನನ್ನು ಯಾರೋ ವ್ಯಕ್ತಿಗಳು ತನ್ನ ಮಗನ ಮೇಲಿನ ಯಾವುದೋ ದ್ವೇಷದಿಂದ ಹರಿತವಾದ ಆಯುಧಗಳಿಂದ ದೇಹದ ಹಲವಾರು ಕಡೆ ತಿವಿದು ಕೊಚ್ಚಿ ಬೇರೆ ಎಲ್ಲೋ ಕೊಲೆ ಮಾಡಿ ನಂತರ ಸಾಕ್ಷ್ಯಾಧಾರಗಳನ್ನು ನಾಶ ಪಡಿಸುವ ಉದ್ದೇಶದಿಂದ ಬೈಪಾಸ್ ರಸ್ತೆ ಪಕ್ಕದಲ್ಲಿರುವ ಶಶಿಭೂಷಣ್ ರವರ ಜಮೀನಿನಲ್ಲಿ ತಂದು ಹಾಕಿರುವಂತೆ ಕಂಡುಬರುತ್ತಿದ್ದು ಈ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸಿ ತನ್ನ ಮಗನನ್ನು ಕೊಲೆ ಮಾಡಿದವರನ್ನು ಪತ್ತೆ ಮಾಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.02/2021 ಕಲಂ. 279,304(A)  ಐ.ಪಿ.ಸಿ :-

     ದಿನಾಂಕ:03/01/2021 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀಮತಿ ಸುನಂಧಮ್ಮ ಕೊಂ ಅಂಜಿನಪ್ಪ 40 ವರ್ಷ, ನಾಯಕರು, ಕೂಲಿ ಕೆಲಸ ವಾಸ:ಚೆಂಡೂರು ಗ್ರಾಮ, ಗುಡಿಬಂಡೆ ತಾಲ್ಲೂಕು ಮೊ:9535452014 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಸುಮಾರು 20 ವರ್ಷಗಳ ಹಿಂದೆ ಚೆಂಡೂರು ಗ್ರಾಮದ ಅಂಜಿನಪ್ಪ ರವರನ್ನು ಮದುವೆ ಮಾಡಿಕೊಂಡಿದ್ದು ತಮಗೆ 1 ನೇ ರಜನಿ 2 ನೇ ಅರ್ಚನಾ 3 ನೇ ಹರೀಶ್ ಎಂಬ ಮಕ್ಕಳಿದ್ದು, ತನ್ನ ಗಂಡ ಅಂಜಿನಪ್ಪ ರವರು ದಿನ ಕೂಲಿ ಕೆಲಸ ಮಾಡಿ ಅದರಲ್ಲಿ ದುಡಿದ ಹಣದಲ್ಲಿ ಸಂಸಾರ ನಡೆಸುತ್ತಿದ್ದು ಈ ದಿನ ದಿನಾಂಕ:03/01/2021 ರಂದು ಬೆಳಿಗ್ಗೆ 5 .30 ಗಂಟೆ ಸಮಯದಲ್ಲಿ ಕೆಲಸಕ್ಕೆಂದು ತನ್ನ ಗಂಡ ತನ್ನ ಬಾಬತ್ತು ಕೆ,ಎ 03 ಇ ಆರ್ 6724 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಲೆಂಡರ್ ದ್ವಿ ಚಕ್ರ ವಾಹನದಲ್ಲಿ ಹಾಗೂ ತಮ್ಮ ಗ್ರಾಮದ ರಂಗನಾಥ ಬಿನ್ ನಾರಾಯಣಪ್ಪ ಮತ್ತು ವೆಂಕಟರೋಣಪ್ಪ ಬಿನ್ ಕದಿರಪ್ಪ @ ಕುಂಟಪ್ಪ ರವರು ಇನ್ನೊಂದು ದ್ವಿ ಚಕ್ರ ವಾಹನದಲ್ಲಿ ಮಂಡಿಕಲ್ಲು ಗ್ರಾಮಕ್ಕೆ ಕೆಲಸಕ್ಕೆಂದು ಹೋಗಿದ್ದು. ನಂತರ ಇದೇ ದಿನ ಬೆಳಿಗ್ಗೆ 6.30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ರಂಗನಾಥ ರವರು ತನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದೇನೆಂದರೆ,  ಈ ದಿನ ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ತಾನು ಮತ್ತು ವೆಂಕಟರೋಣಪ್ಪ ರವರು ತನ್ನ ದ್ವಿ ಚಕ್ರ ವಾಹನದಲ್ಲಿ ಮಂಡಿಕಲ್ಲು ಗ್ರಾಮಕ್ಕೆ ಹೋಗಲು ಪೆರೇಸಂದ್ರ ಗ್ರಾಮದ ಮಾರ್ಗವಾಗಿ ಕಮ್ಮಗುಟ್ಟಹಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದಾಗ ನಿನ್ನ ಗಂಡ ಅಂಜಿನಪ್ಪ ರವರು ಕೆ,ಎ 03 ಇ ಆರ್ 6724 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಲೆಂಡರ್ ದ್ವಿ ಚಕ್ರ ವಾಹನದಲ್ಲಿ ಅದೇ ರಸ್ತೆಯಲ್ಲಿ ಬರುತ್ತಿದ್ದಾಗ ಕಮ್ಮಗುಟ್ಟಹಳ್ಳಿ ಕ್ರಾಸ್ ಬಳಿ ಮಂಡಿಕಲ್ಲು ಗ್ರಾಮದ ರಸ್ತೆಯ ಕಡೆಯಿಂದ ಕೆ,ಎ 40 ಎ 9861 ನೊಂದಣಿ ಸಂಖ್ಯೆಯ ಅಶೋಕ್ ಲೇ ಲ್ಯಾಂಡ್ ಕಂಪನಿಯ ಕ್ಯಾಂಟರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಕೆ,ಎ 03 ಇ ಆರ್ 6724 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಲೆಂಡರ್ ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದ ನಿನ್ನ ಗಂಡ ಅಂಜಿನಪ್ಪ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ದ್ವಿ ಚಕ್ರವಾಹನ ಜಖಂ ಗೊಂಡು ನಿನ್ನ ಗಂಡ ಅಂಜಿನಪ್ಪ ರವರಿಗೆ ತಲೆಗೆ ರಕ್ತಗಾಯವಾಗಿ ಎಡ ಕಾಲಿಗೆ ರಕ್ತಗಾಯವಾಗಿದ್ದು ನಿನ್ನ ಗಂಡನ್ನನ್ನು ಅಂಬುಲೆನ್ಸನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದರು. ನಂತರ ತಾನು ಮತ್ತು ತನ್ನ ಮೈದ ನಾರಾಯಣಸ್ವಾಮಿ ರವರು ಚಿಕ್ಕಬಳ್ಳಾಪುರ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ತನ್ನ ಗಂಡ ಅಂಜಿನಪ್ಪ ರವರಿಗೆ ಅಪಘಾತವಾಗಿರುವುದು ನಿಜವಾಗಿದ್ದು. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ ಆಸ್ಪತ್ರೆಗೆ ಅಂಬುಲೆನ್ಸ್ ನಲ್ಲಿ ಕಳುಹಿಸಿದ್ದು ನಿಮ್ಹಾನ್ಸ ಆಸ್ಪತ್ರೆಗೆ ಹೋಗಿ ತನ್ನ ಗಂಡ ಅಂಜಿನಪ್ಪ ರವರನ್ನು ಚಿಕಿತ್ಸೆಗೆ ದಾಖಲಿಸಿದ್ದು ನಂತರ ಇದೇ ದಿನ ದಿನಾಂಕ:03/01/2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ವೈದ್ಯರು ತನ್ನ ಗಂಡ ಅಂಜಿನಪ್ಪ ರವರಿಗೆ ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕರಿಯಾಗದೇ ಮೃತ ಪಟ್ಟಿರುವುದಾಗಿ ತಿಳಿಸಿದ್ದು. ತನ್ನ ಗಂಡನ ಮೃತ ದೇಹವು ಬೆಂಗಳೂರಿನ ನಿಮ್ಹಾನ್ಸ ಆಸ್ಪತ್ರೆಯ ಶವಗಾರದಲ್ಲಿದ್ದು ಮೇಲ್ಕಂಡಂತೆ ಅಪಘಾತ ಪಡಿಸಿದ ಕೆ,ಎ 40 ಎ 9861 ನೊಂದಣಿ ಸಂಖ್ಯೆಯ ಅಶೋಕ್ ಲೇ ಲ್ಯಾಂಡ್ ಕಂಪನಿಯ ಕ್ಯಾಂಟರ್ ವಾಹನದ ಚಾಲಕ ಮತ್ತು ವಾಹನದ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.