ದಿನಾಂಕ :03/12/2020 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ  ಪೊಲೀಸ್ ಠಾಣೆ ಮೊ.ಸಂ.287/2020 ಕಲಂ: 504 ಐ.ಪಿ.ಸಿ :-

          ದಿನಾಂಕ: 01-12-2020 ರಂದು ಅರ್ಜಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರ ಸಹಾಯಕರು [ ವಿಧಾನಸೌಧ ಶಾಸಕರ ಭವನದ ಸಿಬ್ಬಂಧಿ, ಕರ್ನಾಟಕ ಸರ್ಕಾರ ಬೆಂಗಳೂರು] ಹಾಗೂ ಸರ್ಕಾರಿ ನೌಕರರು ಆಗಿರುವ ಮೋಹನ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಾದ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಹಾಗೂ ಇತರೆ ಜಾಲತಾಣಗಳಲ್ಲಿ ಬಿಜೆಪಿ ಸಂಸದರು ಹಾಗೂ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ರವರ ಹಾಗೂ ಮಾನ್ಯ ಮುಜರಾಯಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರುಇ ಕುರಿತು ಅವಹೇಳನಕಾರಿ ಮತ್ತು ಅಶ್ಲೀಲ ಪದಗಳನ್ನು ಬಳಕೆ ಮಾಡಿ ಹಂಚಿಕೊಂಡಿದ್ದಾರೆ.  ಮೋಹನ್ ಕುಮಾರ್ ರವರು ಸಾಮಾಜಿಕ ಜಾಲತಾಣದಲ್ಲಿ ಬಳಕೆ ಮಾಡಿರುವ ಅಸಹ್ಯ ಪದಬಳಕೆಯಿಂದ ಬಿಜೆಪಿ ರಾಜ್ಯಾದ್ಯಕ್ಷರ ಹಾಗೂ ಸಚಿವರು ಸೇರಿದಂತೆ ಇತರೆ ಪದಾಧಿಕಾರಿಗಳ ಮಾನಕ್ಕೆ ದಕ್ಕೆ ಆಗಿ ಸಮಾಜದಲ್ಲಿ ಅವರುಗಳ ಗೌರವಕ್ಕೆ ಚ್ಯುತಿ ಉಂಟಾಗಿದೆ.  ಆದ್ದರಿಂದ ಮೋಹನ್ ಕುಮಾರ್ ರವರನ್ನು ಕೂಡಲೇ ಬಂದಿಸಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ಬಾಗೇಪಲ್ಲಿ ಮಂಡಲ ಭಾರತೀಯ ಜನತಾ ಪಾರ್ಟಿಯ ವತಿಯಿಂದ ತಮ್ಮಲ್ಲಿ ಕೋರಿದೆ, ಎಂದು ನೀಡಿದ  ದೂರಿನ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ ಉಲ್ಲೇಖ ಸಂಖ್ಯೆ: 700/2020 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಪಾದಿತನ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ  ಘನ ನ್ಯಾಯಾಲಯಕ್ಕೆ ಮನವಿ ಪತ್ರವನ್ನು ಸಲ್ಲಿಸಿಕೊಂಡಿರುತ್ತೆ.  ದಿ: 02-12-2020 ರಂದು ಸಂಜೆ 5:30 ಗಂಟೆಗೆ ನ್ಯಾಯಾಲಯದ ಪಿ.ಸಿ 235 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೆ.

2) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.432/2020 ಕಲಂ: 454,380 ಐ.ಪಿ.ಸಿ :-

          ದಿನಾಂಕ: 02/12/2020 ರಂದು ರಾತ್ರಿ 8.15 ಗಂಟೆಗೆ ಶ್ರೀನಿವಾಸ ಬಿನ್ ವೆಂಕಟೇಶಪ್ಪ, 38 ವರ್ಷ, ಒಕ್ಕಲಿಗರು, ಜಿರಾಯ್ತಿ, ರಾಚಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ತಮ್ಮ ತಂದೆ ತಾಯಿ ಹಾಗೂ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ತಾವುಗಳು ಮನೆಯನ್ನು ಬಿಟ್ಟು ಎಲ್ಲಿಗಾದರೂ ಹೊರಗೆ ಹೋಗುವಾಗ ಮನೆಗೆ ಬೀಗವನ್ನು ಹಾಕಿ ಕೀಯನ್ನು ಮನೆಯ ಹೊರಗಡೆ ಇರುವ ಅಟ್ಟದ ಮೇಲೆ ಇಡುತ್ತೇವೆ. ಅದರಂತೆ ಈ ದಿನ ದಿನಾಂಕ:02/12/2020 ರಂದು ಬೆಳಿಗ್ಗೆ 08.00 ಗಂಟೆ ಸಮಯದಲ್ಲಿ ತಮ್ಮ ಮನೆಯವರೆಲ್ಲರೂ ತೋಟದ ಕೆಲಸಕ್ಕೆ  ಹೋದರು. ತಾನು ಸ್ವಂತ ಕೆಲಸದ ಮೇಲೆ ಕೋಲಾರಕ್ಕೆ ಹೋದೆನು. ತಾನು ಕೆಲಸ ಮುಗಿಸಿಕೊಂಡು ಇದೇ ದಿನ ಮದ್ಯಾಹ್ನ 12.30 ಗಂಟೆಗೆ ಮನೆಗೆ ವಾಪಸ್ಸು ಬಂದಾಗ ತಮ್ಮ ಮನೆಯ ಬಾಗಿಲು ತೆರೆದಿತ್ತು. ತಾನು ಒಳಗಡೆ ಹೋಗಿ ನೋಡಲಾಗಿ ರೂಂನಲ್ಲಿಟ್ಟಿದ್ದ ಬೀರುವನ್ನು ಕಿತ್ತು ಹಾಕಿದ್ದು ಅದರಲ್ಲಿಟ್ಟಿದ್ದ 3,090/- ರೂ ನಗದು ಹಣ, ಸುಮಾರು 45 ಗ್ರಾಂ ತೂಕದ ಮೂರು ಎಳೆಯ ಚೈನು, 25 ಗ್ರಾಂ ತೂಕದ ಬ್ರಾಸ್ ಲೈಟ್, 12 ಗ್ರಾಂ ತೂಕದ ಬಿಳಿ ಕಲ್ಲಿನ ಓಲೆ ಮತ್ತು ಮಾಟಿಗಳು ಕಾಣಿಸಲಿಲ್ಲ. ತಾನು ಗಾಬರಿಗೊಂಡು ಮನೆಯಲ್ಲಿ ಹುಡಕಾಡಲಾಗಿ ಎಲ್ಲಿಯೂ ಸಿಕ್ಕಿರುವುದಿಲ್ಲ. ನಂತರ ತಾನು ತೋಟದ ಕೆಲಸಕ್ಕೆ ಹೋಗಿದ್ದ ತಮ್ಮ ಮನೆಯವರಿಗೆ ಈ ಬಗ್ಗೆ ಕೇಳಲಾಗಿ ತಾವು ಬೆಳಿಗ್ಗೆ ಮನೆಯನ್ನು ಬಿಟ್ಟ ನಂತರ ಮತ್ತೆ ಮನೆಗೆ ವಾಪಸ್ಸು ಬಂದಿರುವುದಿಲ್ಲವೆಂದು ತಿಳಿಸಿದರು. ಈ ದಿನ ಬೆಳಿಗ್ಗೆ 8.00 ರಿಂದ 12.30 ಗಂಟೆಯ ಮದ್ಯೆ ತಾವು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ತಮ್ಮ ಮನೆಯ ಬೀಗವನ್ನು ಹೊಡೆದು ಒಳಗಡೆ ಪ್ರವೇಶಿಸಿ ಮನೆಯ ರೂಂನಲ್ಲಿನ ಬೀರುವಿನಲ್ಲಿಟ್ಟಿದ್ದ ಒಟ್ಟು 82 ಗ್ರಾಂ  ತೂಕದ ಬಂಗಾರದ ವಡವೆಗಳನ್ನು ಹಾಗೂ 3,090/- ರೂ ನಗದು ಹಣವನ್ನು ಕಳ್ಳತನ  ಮಾಡಿಕೊಂಡು ಹೋಗಿರುತ್ತಾರೆ. ಮೇಲ್ಕಂಡ ವಡವೆಗಳ ಒಟ್ಟು ಬೆಲೆ ಸುಮಾರು 4 ಲಕ್ಷ 10 ಸಾವಿರ ರೂ ಆಗಿದ್ದು ಇದರೊಂದಿಗೆ ನಗದು ಹಣ ಸೇರಿ ಒಟ್ಟು 4,13,090/-(ನಾಲ್ಕು ಲಕ್ಷ ಹದಿಮೂರು ಸಾವಿರದ ತೊಂಭತ್ತು) ರೂ ಬೆಲೆ ಬಾಳುವ ವಡವೆ ಮತ್ತು ನಗದು ಹಣವನ್ನ್ಲು ಕಳ್ಳತನ ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

3) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.156/2020 ಕಲಂ: ಮನುಷ್ಯ ಕಾಣೆ :-

          ಪಿರ್ಯಾದಿದಾರರಾದ ಕೆ.ಎಸ್.ನಾರಾಯಣಸ್ವಾಮಿ ಬಿನ್ ಸುಬ್ಬನ್ನ, 52ವರ್ಷ, ವಕ್ಕಲಿಗರು, ಶಿಕ್ಷಕರು, ವಾಸ ಅಶ್ವಿನಿ ಬಡಾವಣೆ, ಚಿಂತಾಮಣಿ ನಗರ  ನನಗೆ 1ನೇ ಚೈತ್ರಾ, 2ನೇ ಮಗ 22 ವರ್ಷ ವಯಸ್ಸಿನ ಚೇತನ್ ರೆಡ್ಡಿ ಎಂದು ಇರುತ್ತಾರೆ. ನನ್ನ ಮಗ ಚೇತನ್ ರೆಡ್ಡಿ ಕಳೆದ ವರ್ಷ ಬೆಂಗಳೂರಿನಲ್ಲಿ ಬಿ.ಇ. ವ್ಯಾಸಂಗ ಮುಗಿಸಿ ಮನೆಯಲ್ಲಿಯೇ ಇದ್ದ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದನು. ಹೀಗಿರುವಾಗ ದಿನಾಂಕ:02/11/2020 ರಂದು ನಾನು ಮತ್ತು ನನ್ನ ಹೆಂಡತಿ ಬೆಂಗಳೂರಿನಲ್ಲಿ ವೈಯುಕ್ತಿಕ ಕೆಲಸದ ನಿಮಿತ್ತ ಬೆಳಿಗ್ಗೆ ಹೋಗಿದ್ದೆವು. ಮನೆಯಲ್ಲಿ ನನ್ನ ಮಗ ಚೇತನ್ ರೆಡ್ಡಿ ಒಬ್ಬನೇ ಇದ್ದ. ನಂತರ ಇದೇ ದಿನ ಸಂಜೆ ಸುಮಾರು 05-45 ಗಂಟೆಯ ಸಮಯದಲ್ಲಿ ನಾವು ಚಿಂತಾಮಣಿಗೆ ಬಂದು ನೋಡಲಾಗಿ ನಮ್ಮ ಮನೆಗೆ ಬೀಗ ಹಾಕಿದ್ದರಿಂದ ನನ್ನ ಮಗನ ಮೊಬೈಲ್ ನಂ.7996005072 ಗೆ ಕರೆ ಮಾಡಿದಾಗ ನನ್ನ ಮಗ ‘ ನಾನು ಚಿಂತಾಮಣಿಯ ನಗರದಲ್ಲಿರುವ ಸೈಬರ್ ಸೆಂಟರ್ ಬಳಿ ಹೋಗಿ ಬರುತ್ತೇನೆ, ಮನೆಗೆ ಬೀಗ ಹಾಕಿ, ಮನೆಯ ಕಿಟಕಿ ಬಳಿ ಕೀ ಅನ್ನು ಇಟ್ಟಿರುತ್ತೇನೆ, ಎಂದು ಹೇಳಿದನು.ನಂತರ ರಾತ್ರಿಯಾದರೂ ಸಹ ಮನೆಗೆ ಬರಲಿಲ್ಲ. ನಮಗೆ ಗಾಬರಿಯಾಗಿ ನನ್ನ ಮಗನಿಗೆ ಕರೆ ಮಾಡಲಾಗಿ ಮೊಬೈಲ್ ಪೋನ್ ಸ್ವಿಚ್ ಆಪ್ ಬರುತ್ತಿದ್ದು, ನಾವು ಅಕ್ಕಪಕ್ಕದಲ್ಲಿ ಹಾಗೂ ನಮಗೆ ಪರಿಚಯಸ್ಥರ ಮನೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗದೇ ಕಾಣೆಯಾಗಿರುತ್ತಾನೆ. ಕಾಣೆಯಾದ ನನ್ನ ಮಗನನ್ನು ಹುಡುಕಾಡುತ್ತಿದ್ದು, ಪತ್ತೆಯಾಗದೇ ಇರುವುದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಆದ್ದರಿಂದ ಕಾಣೆಯಾಗಿರುವ ನನ್ನ ಮಗನನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

4) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.311/2020 ಕಲಂ: 15(A),32(3) ಕೆ.ಇ ಆಕ್ಟ್:-

          ಈ ದಿನ ದಿನಾಂಕ -20/10/2020 ರಂದು ಸಂಜೆ 05:30 ಗಂಟೆಗೆ ಪೊಲೀಸ್ ವೃತ್ತ ನಿರೀಕ್ಷಕರು ಗೌರಿಬಿದನೂರು ವೃತ್ತ ರವರು ಠಾಣೆಗೆ ಹಾಜರಾಗಿ ಸೂಚಿಸಿರುವುದೇನೆಂದರೆ ವೃತ್ತನಿರೀಕ್ಷಕರಾದ ರವಿ.ಎಸ್ ರವರು ಸಿಬ್ಬಂದಿಯವರಾದ ಹೆಚ್ ಸಿ 221 ಮತ್ತು ಎ ಪಿ ಸಿ 133 ರವರೊಂದಿಗೆ ಮೇಳ್ಯಾ,ಖೋನಾಪುರ, ಜಗರೆಡ್ಡಿಹಳ್ಳಿ ಮುಂತಾದ ಕಡೆ ಗಸ್ತು ಮಾಡುತ್ತಿದ್ದಾಗ ಸಂಜೆ 04 ಗಂಟೆಗೆ ಬಾತ್ಮೀದಾರರ ಕಡೆಯಿಂದ ಬಂದ ಮಾಹಿತಿ ಮೇರೆಗೆ ಹೊಗಿ ನೊಡಲಾಗಿ ಬೈಚಾಪುರ ಗ್ರಾಮದ ರಾಮಸ್ವಾಮಿ ಬಿನ್ ಲೇಟ್ ಶೇಷಯ್ಯ,43 ವರ್ಷ,ವೈಷ್ಣವ ಜನಾಂಗ,ಕೂಲಿ ಕೆಲಸ ರವರು ಅವರ ಮನೆಯ ಪಕ್ಕದಲ್ಲಿ ಸರ್ವಜನಿಕ ಸ್ಥಳದಲ್ಲಿ ಮದ್ಯದ ಟೆಟ್ರಾಪಾಕೆಟ್ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟು,ಮದ್ಯಮಾರಾಟ ಮಾಡುತ್ತಿದ್ದುದು ಖಚಿತಪಡಿಸಿಕೊಂಡು ನಾವು ಸುತ್ತುವರೆದು ಹಿಡಿದು ಕೊಂಡು ಮದ್ಯಮಾರಾಟ ಮಾಡಲು ಪರವಾನಗಿ ಇಲ್ಲದ್ದನ್ನು ಖಚಿತ ಪಡಿಸಿಕೊಂಡು ಅವರ ಬಳಿ ಇದ್ದ HYWARDS CHEERS WHISKY 90ML 19 ಟೆಟ್ರಾ ಪಾಕೆಟ್ ಗಳು, 2 ಖಾಲಿ HYWARDS CHEERS WHISKY 90ML ಪಾಕೆಟ್ ಗಳು ಮತ್ತು 2 ಖಾಲಿ ವಾಟರ್ ಪಾಕೆಟ್ ಗಳು ಇದ್ದು ಅವುಗಳು ಒಟ್ಟು 1 ಲೀಟರ್ 710 ಮಿ.ಲೀ.ಮದ್ಯವಿದ್ದು ಅವುಗಳ ಟ್ಟು ಬೆಲೆ 667.47 ರೂಗಳಾಗಿರುತ್ತದೆ.ಈ ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿತನೊಂದಿಗೆ ಬಂದು ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಎನ್ ಸಿ ಆರ್ ದಾಖಲಿಸಿರುತ್ತೆ,ನ್ಯಾಯಾಲದ  ಆದೇಶದ ವರದಿಯನ್ನು ಪಡೆದು ಠಾಣಾ ಮೊ.ಸಂ  311 /2020 ಕಲಂ 15(A)32(3) KE ACT ರಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

5) ಶಿಡ್ಲಘಟ್ಟ  ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.313/2020 ಕಲಂ: 87  ಕೆ.ಪಿ  ಆಕ್ಟ್:-

          ದಿನಾಂಕ 02/12/2020 ರಂದು ಮದ್ಯಾಹ್ನ 3-45 ಗಂಟೆಯಲ್ಲಿ ಪಿರ್ಯಾದಿದಾರರಾದ  ಪಿ.ಎಸ್.ಐ. DCB CEN ಪೊಲೀಸ್ ಠಾಣೆ ರವರು ನೀಡಿದ ವರದಿಯನ್ನು ಘನ ನ್ಯಾಯಾಲಯ ಪಿ ಸಿ 90 ರಾಜ್ ಕುಮಾರ್ ರವರು ತೆಗೆದುಕೊಂಡು ಹೋಗಿ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಮದ್ಯಾಹ್ನ 3-50 ಗಂಟೆಯಲ್ಲಿ ತಂದು ಹಾಜರುಪಡಿಸಿದ್ದಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ 02-12-2020 ರಂದು ಮದ್ಯಾಹ್ನ ಸುಮಾರು 3-45 ಗಂಟೆ ಸಮಯದಲ್ಲಿ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮುತ್ತೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಹಿಂಭಾಗದ ಸರ್ಕಾರಿ ಕೆರೆ ಅಂಗಳದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಹೆಡ್ ಮತ್ತು ಟೈಲ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಸ್ಥಳದಲ್ಲಿ ದಾಳಿ ಮಾಡಿ ಕ್ರಮ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಕೋರಿದ್ದು  ಘನ ನ್ಯಾಯಾಲಯದ  ಅನುಮತಿ ಪತ್ರದಂತೆ  ಠಾಣಾ ಮೊ ಸಂ:313/2020 ಕಲಂ:87 K P ACT 87 ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

6) ಶಿಡ್ಲಘಟ್ಟ  ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.314/2020 ಕಲಂ: 15(A),32(3)  ಕೆ.ಇ  ಆಕ್ಟ್:-

          ದಿನಾಂಕ: 02-12-2020 ರಂದು ಸಂಜೆ 4.00 ಗಂಟೆಯಲ್ಲಿ ಸಿಪಿಸಿ-14 ಗೋವಿಂದಪ್ಪ ರವರು ಹಾಜರುಪಡಿಸಿದ ವರದಿ, ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ: 02-12-2020 ರಂದು  ಪಿ.ಎಸ್.ಐ ಸಾಹೇಬರು ನನಗೆ ಗುಪ್ತಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಗುಪ್ತಮಾಹಿತಿ ಸಂಗ್ರಹಿಸುವ ಸಲುವಾಗಿ  ಹನುಮಂತಪುರ, ಚೀಮನಹಳ್ಳಿ, ವರದನಾಯಕನಹಳ್ಳಿ, ಅಬ್ಲೂಡು ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಅಬ್ಲೂಡು ಗ್ರಾಮದ ಕಡೆ ಹೋಗುತ್ತಿದ್ದಾಗ ಬಾತ್ಮಿದಾರರಿಂದ ಅಬ್ಲೂಡು ಗ್ರಾಮದ ಮಂಜುಶ್ರೀ ಮಿಲಿಟರಿ ಹೋಟೆಲ್ ಮುಂದೆ ಗ್ರಾಮದ ಸಿಮೆಂಟ್ ರಸ್ತೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ  ಬಂದ ಖಚಿತ  ಮಾಹಿತಿ ಮೇರೆಗೆ ಕೂಡಲೇ ಮಂಜೂಶ್ರೀ ಹೋಟೆಲ್ ಗ್ರಾಮದ ಸಿಮೆಂಟ್ ರಸ್ತೆಯ ಬಳಿ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ತನ್ನ ಕೈಯಲ್ಲಿದ್ದ ಒಂದು ಗೋಣಿಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಬೆನ್ನಟ್ಟಿ ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ವೆಂಕಟೇಶಪ್ಪ ಬಿನ್ ಮುನಿಯಪ್ಪ, 60 ವರ್ಷ, ವಕ್ಕಲಿಗರು, ಮಿಲಿಟ್ರಿ ಹೋಟೆಲ್ ನಲ್ಲಿ ಕೆಲಸ, ವಾಸ: ಅಬ್ಲೂಡು ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿರುತ್ತಾನೆ ಆತನ ಬಳಿ ಇದ್ದ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 1] 90 ಎಂ ಎಲ್ ಸಾಮರ್ಥ್ಯದ ORIGINAL CHOICE WHISKY ನ 6 ಟೆಟ್ರಾ ಪಾಕೆಟ್ ಗಳಿರುತ್ತೆ. ನಾನು ವಶಕ್ಕೆಪಡೆದುಕೊಂಡಿರುವ ಆರೋಪಿ ವೆಂಕಟೇಶಪ್ಪ ಬಿನ್ ಲೇಟ್ ಮುನಿಯಪ್ಪ ಮತ್ತು  ಮದ್ಯದ ಟೆಟ್ರಾ ಪಾಕೆಟ್ ಗಳಿದ್ದ ಪ್ಲಾಸ್ಟಿಕ್ ಚೀಲವನ್ನು ಮುಂದಿನ ಕ್ರಮದ ಬಗ್ಗೆ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ವೆಂಕಟೇಶಪ್ಪ ಬಿನ್ ಲೇಟ್ ಮುನಿಯಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

7) ಶಿಡ್ಲಘಟ್ಟ  ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.315/2020 ಕಲಂ: 15(A),32(3)  ಕೆ.ಇ  ಆಕ್ಟ್:-

          ದಿನಾಂಕ: 02-12-2020 ರಂದು ಸಂಜೆ 4.00 ಗಂಟೆಯಲ್ಲಿ ಸಿಪಿಸಿ-14 ಗೋವಿಂದಪ್ಪ ರವರು ಹಾಜರುಪಡಿಸಿದ ವರದಿ, ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ: 02-12-2020 ರಂದು  ಪಿ.ಎಸ್.ಐ ಸಾಹೇಬರು  ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಗುಪ್ತಮಾಹಿತಿ ಸಂಗ್ರಹಿಸುವ ಸಲುವಾಗಿ  ಹನುಮಂತಪುರ, ಚೀಮನಹಳ್ಳಿ, ವರದನಾಯಕನಹಳ್ಳಿ, ಅಬ್ಲೂಡು ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 6-45 ಗಂಟೆ ಸಮಯದಲ್ಲಿ ಚಾಗೆ ಗ್ರಾಮದ ಕಡೆ ಹೋಗುತ್ತಿದ್ದಾಗ ಬಾತ್ಮಿದಾರರಿಂದ  ಚಾಗೆ ವೆಂಕಟೇಶಪ್ಪ ಬಿನ್ ಚಿಕ್ಕತಿಮ್ಮಪ್ಪ ರವರ ಮನೆಯ ಮುಂದೆ  ರವರ ಮನೆಯ  ಮುಂದೆ ಗ್ರಾಮದ ಸಿಮೆಂಟ್ ರಸ್ತೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ  ಬಂದ ಖಚಿತ  ಮಾಹಿತಿ ಮೇರೆಗೆ ಕೂಡಲೇ ವೆಂಕಟೇಶಪ್ಪ ರವರ ಮನೆಯ  ಬಳಿ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ತನ್ನ ಕೈಯಲ್ಲಿದ್ದ ಒಂದು ಗೋಣಿಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಬೆನ್ನಟ್ಟಿ ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ   ಕೃಷ್ಣಮೂರ್ತಿ ಬಿನ್ ವೆಂಕಟಪ್ಪ,ಸುಮಾರು 21 ವರ್ಷ,ಪ.ಜಾತಿ, ಜಿರಾಯ್ತಿ, ಚಾಗೆ   ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿರುತ್ತಾನೆ ಆತನ ಬಳಿ ಇದ್ದ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 1] 90 ಎಂ ಎಲ್ ಸಾಮರ್ಥ್ಯದ Original Choice Deluxe  Whisky ನ 05  ಟೆಟ್ರಾ ಪಾಕೆಟ್ಗಳು 2] ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು ಗಳು ಇರುತ್ತೆ,  ಮತ್ತು  ಸ್ಥಳದಲ್ಲಿ ಬಿದ್ದಿದ್ದ  3] 2 ಖಾಲಿ ವಾಟರ್ ಪಾಕೇಟ್ ಗಳು ಎತ್ತಿಕೊಂಡು. ನಾನು ವಶಕ್ಕೆಪಡೆದುಕೊಂಡಿರುವ ಆರೋಪಿ ಕೃಷ್ಣಮೂರ್ತಿ ಬಿನ್ ವೆಂಕಟಪ್ಪ ಮತ್ತು  ಮದ್ಯದ ಟೆಟ್ರಾ ಪಾಕೆಟ್ ಗಳಿದ್ದ ಗೋಣಿ ಚೀಲವನ್ನು ಮುಂದಿನ ಕ್ರಮದ ಬಗ್ಗೆ  ರಾತ್ರಿ 7-15 ಗಂಟೆಯಲ್ಲಿ  ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಕೃಷ್ಣಮೂರ್ತಿ ಬಿನ್ ವೆಂಕಟಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.