ದಿನಾಂಕ : 03/10/2019ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 318/2019 ಕಲಂ. 279-304(ಎ) ಐ.ಪಿ.ಸಿ:-

     ದಿ: 03-10-2019 ರಂದು ಬೆಳಗ್ಗೆ 8:15 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಎಂ. ನಾಗೇಶ್ವರಿ ಕೋಂ ಲೇಟ್ ಎಂ.ಹನುಮಂತರಾವ್.  40 ವರ್ಷ, ಗೊಲ್ಲರು,ಟೈಲರ್ ಕೆಲಸ,  ವಾಸ: ನಂ-17/249, ಪುಂಡಾಕರ್ ಬೀದಿ, ಗುಂತಾಕಲ್ ಟೌನ್ ಗುಂತಾಕಲ್ , ಅನಂತಪುರ ಜಿಲ್ಲೆ ಆಂಧ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನನ್ನ ಮಗ ಎಂ. ರವಿವರ್ಮ ಬಿನ್ ಲೇಟ್ ಎಂ. ಹನುಮಂತರಾವ್  ರವರು ಈಗ್ಗೆ  5 ವರ್ಷಗಳಿಂದ  ಪೋಟೋ ಗ್ರಾಫಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:01.10.2019 ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಗಿರಿಧಾಮದಲ್ಲಿ  ಪ್ರೀ ವೆಡ್ಡಿಂಗ್ ಪೋಟೋ ಶೂಟಿಂಗ್ ಗಾಗಿ  ಬೆಳಿಗ್ಗೆ ಸುಮಾರು  4-30 ಗಂಟೆ ಸಮಯದಲ್ಲಿ  ನಮ್ಮ ಮನೆಯನ್ನು ಬಿಟ್ಟು ಅವರ ಜೊತೆಯಲ್ಲಿ ಕೆಲಸ ಮಾಡುವ  ಅವರ ಸ್ನೇಹಿತ  ಸಲಾಂ ಬಾಷಾ ರವರ ಬಾಬತ್ತು ಎಪಿ-02, ಸಿಜೆ-3492 ನೊಂದಣಿ ಸಂಖ್ಯೆಯ ಬಾಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಬೆಳಿಗ್ಗೆ ಸುಮಾರು 7-30 ಗಂಟೆ ಸಮಯದಲ್ಲಿ ಸಲಾಂ ಬಾಷಾ ರವರು ತಮ್ಮ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ದ್ವಿಚಕ್ರ ವಾಹನದ ಹಿಂಭಾಗ ನನ್ನ ಮಗ ಎಂ.ರವಿವರ್ಮ ರವರನ್ನು ಕೂರಿಸಿಕೊಂಡು ಬಾಗೇಪಲ್ಲಿ ತಾಲ್ಲೂಕು  ಎನ್ .ಹೆಚ್-07 ರಸ್ತೆಯಲ್ಲಿ  ಪರಗೋಡು ಕೆರೆಕಟ್ಟೆಯ ಮೇಲೆ  ಹೋಗುತ್ತಿದ್ದಾಗ  ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗಕ್ಕೆ ಬಿದ್ದು ಹೋಗಿದ್ದು, ದ್ವಿಚಕ್ರ ವಾಹನ ಜಖಂಗೊಂಡು ದ್ವಿಚಕ್ರ ವಾಹನದಲ್ಲಿದ್ದ  ನನ್ನ ಮಗ ರವಿವರ್ಮ ಮತ್ತು ಸಲಾಂ ಬಾಷಾ ರವರು ರಸ್ತೆಯ ಮೇಲೆ ಬಿದ್ದು ಹೋಗಿದ್ದು, ನನ್ನ ಮಗ  ಎಂ. ರವಿವರ್ಮರವರಿಗೆ  ಹಣೆಯ ಮೇಲೆ, ಬಲಕೈ ಬೆರಳುಗಳಿಗೆ ಮುಖದ ಎಡಭಾಗಕ್ಕೆ ಮತ್ತು ತಲೆಯ  ಬಲಭಾಗ ರಕ್ತಗಾಯಗಳಾಗಿದ್ದು, ಸಲಾಂ ಬಾಷಾ ರವರಿಗೆ  ಎಡಭುಜಲಕ್ಕೆ ಮತ್ತು ಎಡಮೊಣಕಾಲಿಗೆ ರಕ್ತಗಾಯಗಳಾಗಿದ್ದು, ಸ್ಥಳದಲ್ಲಿದ್ದವರು ಉಪಚರಿಸಿ  ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಪ್ರೋಲೈಫ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುವುದಾಗಿ ವಿ.ಮಾರುತಿ ಬಿನ್ ನಾಗೇಂದ್ರ ಪ್ರಸಾದ್ ನನಗೆ ಪೋನ್ ಮಾಡಿ ತಿಳಿಸಿದ್ದು,  ನಾನು ಮತ್ತು ನಮ್ಮ ಸಂಬಂಧಿಕರು ಹೋಗಿ  ನೋಡಲಾಗಿ ವಿಚಾರ ನಿಜವಾಗಿರುತ್ತದೆ.  ನಂತರ ನಾವು ಅದೇ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸುವುದನ್ನು ಮುಂದುವರೆಸಿರುತ್ತೇವೆ.  ಆದರೆ  ಈ ದಿನ ದಿನಾಂಕ:02.10.2019 ರಂದು  ಮದ್ಯಾಹ್ನ 3-30 ಗಂಟೆ ಸಮಯದಲ್ಲಿ  ಚಿಕಿತ್ಸೆ ಫಲಕಾರಿಯಾಗದೇ ನನ್ನ ಮಗ ಎಂ. ರವಿವರ್ಮ ರವರು ಮೃತಪಟ್ಟಿರುತ್ತಾರೆ.  ನಂತರ ನಾವು ಮೃತ ದೇಹವನ್ನು  ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿರುತ್ತೇವೆ. ಅದ್ದರಿಂದ  ಈ ಅಪಘಾತಕ್ಕೆ ಕಾರಣನಾದ  ಎಪಿ-02, ಸಿಜೆ-3492 ನೊಂದಣಿ ಸಂಖ್ಯೆಯ ಬಾಬಜ್ ಪಲ್ಸರ್ ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸ ಬೇಕಾಗಿ ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 319/2019 ಕಲಂ.353-504 ಐ.ಪಿ.ಸಿ & 03 KARNATAKA PROHIBITION OF VIOLENCE AGAINST MEDICARE SERVICE PERSONNEL AND DAMAGE TO PROPERTY IN MEDICARE SERVICE INSTITUTIONS ACT , 2009:-

     ದಿ: 03-10-2019 ರಂದು ಮದ್ಯಾಹ್ನ 12:30 ಗಂಟೆಗೆ ಪಿರ್ಯಾಧಿದಾರರಾದ ಡಾ:ಸತ್ಯನಾರಾಯಣರೆಡ್ಡಿ, ಆಡಳಿತ ವೈದ್ಯಾಧಿಕಾರಿಗಳು ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು, ಬಾಗೇಪಲ್ಲಿ ತಾಲ್ಲೂಕು, ಬಾಗೇಪಲ್ಲಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ  ದಿ: 27-09-2019 ರಂದು ರಾತ್ರಿ ಪಾಳಯದಲ್ಲಿದ್ದ ಡಾ.ಮಮತಾ ರವರು ಮತ್ತು ಸಿಬ್ಬಂಧಿಯವರು ಕರ್ತವ್ಯದಲ್ಲಿದ್ದಾಗ, ರಾತ್ರಿ ಸುಮಾರು 9:30 ಸಮಯದಲ್ಲಿ ಆಂಜನೇಯ ಎಂಬುವವರು ಮದ್ಯಪಾನ ಮಾಡಿ ವೈದ್ಯರ ಮೇಲೆ ದಬ್ಬಾಳಿಕೆ ಮಾಡಿ ಏಕ ವಚನದಲ್ಲಿ ನಿಂಧಿಸಿ ನೀವು ಸರಿಯಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಬೇಜವಬ್ದಾರಿತನದಿಂದ ನೀವು ವರ್ತಿಸಿದ್ದೀರಿ ಎಂದು ಕರ್ತವ್ಯದಲ್ಲಿದ್ದ ನನ್ನನ್ನು, ನನ್ನ ಕರ್ತವ್ಯ ಮಾಡಲು ಬಿಡದೆ ಅಡ್ಡಿ ಮಾಡಿರುತ್ತಾರೆ ಎಂದು ದಿ: 27-09-2019 ರಂದು ರಾತ್ರಿ ಪಾಳಯದಲ್ಲಿ ಕರ್ತವ್ಯದಲ್ಲಿದ್ದ  ಡಾ.ಮಮತ ರವರು ತಿಳಿಸಿದ್ದು, ಸದರಿ ಆಸಾಮಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೋರಿದೆ ಹಾಗೂ ವೈದ್ಯರಿಗೆ ರಕ್ಷಣೆ ನೀಡಲು ಕೋರಲಾಗಿದೆ.  ಸದರಿ ವಿಚಾರವು ಈ ದಿನ ಪತ್ರಿಕೆಗಳಲ್ಲಿ ಬಿತ್ತರವಾಗಿದ್ದು, ತಿಳಿದುಕೊಂಡು ವೈದ್ಯರನ್ನು ಮತ್ತು ಸಿಬ್ಬಂಧಿಯವರಿಂದ ಮಾಹಿತಿ ಪಡೆದು ಈ ದಿನ ತಡವಾಗಿ ದೂರು ನೀಡಿರುತ್ತೆ.  ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಸಿ.ಇ.ಎನ್/ಡಿ.ಸಿ.ಬಿ ಪೊಲೀಸ್ ಠಾಣೆ ಮೊ.ಸಂ. 17/2019 ಕಲಂ. 420 ಐ.ಪಿ.ಸಿ & 66(ಡಿ) INFORMATION TECHNOLOGY ACT 2000:-

     ದಿನಾಂಕ:-03-10-2019 ರಂದು ಈ ಕೇಸಿನ ಪಿರ್ಯಾಧಿದಾರಾದ ಶ್ರೀಮತಿ ಸವಿತ ಎನ್,ವಿ  ಕೋಂ ಎನ್ ಎಸ್ ವೆಂಕಟೇಶ್ ನಾರಸಿಂಹ ಪೇಟೆ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಜಿಯೋ ಕಂಪನಿಯ 8660969335 ಸಂಖ್ಯೆಯ ಮೊಬೈಲ್ ಉಪಯೊಗಿಸುತ್ತಿದ್ದು ಪೇಸ್ ಬುಕ್ ನ್ನು ಸಹ ಉಪಯೋಗಿಸುತ್ತಿರುತ್ತೇನೆ, ಈಗಿರುವಲ್ಲಿ ದಿನಾಂಕ:-13-07-2019 ರಂದು ನನಗೆ ಶ್ರೀನಿವಾಸಲ ಮೂರ್ತಿ@ಕ್ರಿಸ್ಟ್ ಕೆರ್ವಿನ್ (ಮೊಬೈಲ್ ಸಂಖ್ಯೆ-+917428678290)  ಎಂಬುವವರು ಪೇಸ್ ಬುಕ್ ನಲ್ಲಿ ಪರಿಚಯವಾಗಿ ಸದರಿಯವರು ನನ್ನ ಮಗನಿಗೆ ಕೆಲಸಕೊಡಿಸುವುದಾಗಿ ತಿಳಿಸಿ ಮದರ್ಸ್ ಡೇ ದಿನ ನನ್ನನ್ನು ತಾಯಿ ಎಂದು ಪರಿಚಯಮಾಡಿಕೊಂಡು ನನಗೆ ಗಿಪ್ಟ್ ಆಗಿ ವಾಚ್, ಚೈನ್, ಬ್ರಾಸ್ ಲೈಟ್, ಮೊಬೈಲ್ ನ್ನು ಕೊರಿಯರ್ ಮುಖಾಂತರ ಇಟಲಿಯಿಂದ  ಕಳುಹಿಸಿಕೊಡುತ್ತಿದ್ದೇನೆ ಎಂದು ತಿಳಿಸಿದರು, ನಂತರ ದೆಹಲಿಯ ಇಂದಿರಾ ಗಾಂಧಿ ಏರ್ ಪೋರ್ಟ್ ನಿಂದ ಒಬ್ಬ ಮಹಿಳೆ ನನ್ನ ನಂಬರ್ ಗೆ 9990104863, +917045006172 ರ ಸಂಖ್ಯೆಗಳಿಂದ ಕಾಲ್ ಮಾಡಿ ನಿಮಗೆ ಕೋರಿಯರ್ ಬಂದಿದೆ ನಿಮಗೆ ಅದನ್ನು ಕಳುಹಿಸಲು ನೀವು 8.000/- ರೂ ಕಳುಹಿಸಬೇಕೆಂತ ತಿಳಿಸಿದರು, ಅದಕ್ಕೆ ನಾನು ಪೋನ್ ಪೇ ಮುಖಾಂತರ ಅವರು ಹೇಳಿದ್ದ 8.000/-ರೂಗಳನ್ನು 9990104863 ರ ಖಾತೆಗೆ ಕಳುಹಿಸಿಕೊಟ್ಟಿರುತ್ತೇನೆ, ನಂತರ ಅದೇ ಮಹಿಳೆ ಪುನಃ ನನಗೆ ಪೋನ್ ಮಾಡಿ ಕೊರಿಯರ್ ನಲ್ಲಿ 20.000 ಪೌಂಡ್ಸ್ ಹಣ ಇದೆ ಅದಕ್ಕೆ ನೀವು 49.000/- ರೂ ಕಷ್ಟಮ್ಸ್ ಟ್ಯಾಕ್ಸ್ ಕಟ್ಟಬೇಕು ಎಂತ ಹೇಳಿದಳು ಅದಕ್ಕೆ ನಾನು ನನ್ನ ಚಿಂತಾಮಣಿಯ  ಕಾರ್ಪೋರೇಷನ್ ಬ್ಯಾಂಕಿನ ಖಾತೆ ಸಂಖ್ತೆ-520101023536078 ಇಂದ ಅವರು ತಿಳಿಸಿದ್ದ ಐಡಿಬಿಐ ಬ್ಯಾಂಕಿನ ಖಾತೆ ಸಂಖ್ಯೆ-0233104000090775 ರ ಖಾತೆಗೆ ನೆಪ್ಟ್ ಮುಖಾಂತರ ಕಳುಹಿಸಿಕೊಟ್ಟಿರುತ್ತೇನೆ, ನಂತರ ಮಾರನೇ ದಿನ ಅದೇ ಮಹಿಳೆ ನನಗೆ ಪೋನ್ ಮಾಡಿ ಜಿ.ಎಸ್.ಟಿ ಕಟ್ಟಬೇಕು ಎಂತ ಹೇಳಿ ನನ್ನ ಖಾತೆಯಿಂದ 1.60000/- ರೂಗಳನ್ನುಅವರು ಹೇಳಿದ್ದ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ-2168010018027 ಸಂಖ್ಯೆಗೆ  ಹಣ ವರ್ಗಾವಣೆ ಮಾಡಿರುತ್ತೇನೆ, ನಂತರ ನನ್ನ ಗಂಡನ ಹೊಸಕೋಟೆ ಗ್ರಾಮೀನ ಬ್ಯಾಂಕಿನ ಖಾತೆ ನಂ: 004001000275 ರಿಂದ 3.85000/- ರೂಗಳನ್ನು ಹಾಗೂ ನನ್ನ ಖಾತೆಯಿಂದ 1.90000/-ರೂಗಳನ್ನು ಅವರು ನೀಡಿದ್ದ ಐಸಿಐಸಿ ಬ್ಯಾಂಕ್ ಖಾತೆ ಸಂಖ್ಯೆ-629205032719 ಗೆ  ಆರ್.ಟಿಜಿ.ಎಸ್ ಮಾಡಿರುತ್ತೇನೆ, ನಂತರ ನನ್ನ ಮಗನ ಸ್ನೇಹಿತನ ಖಾತೆಯಿಂದ ಕೋರ್ಟ್ ಅಪ್ರೂವಲ್ ಗೆ ಎಂತ ಹೇಳಿ 1.6000/- ರೂ ಹಣವನ್ನು ಪೆಡರಲ್  ಬ್ಯಾಂಕಿನ ಖಾತೆ ಸಂಖ್ಯೆ-14510100077074 ಗೆ ಹಣ ವರ್ಗಾವಣೆ ಮಾಡಿರುತ್ತೇನೆ, ಹೀಗೆ  ಹಲವಾರು ಕಾರಣಗಳನ್ನು ಹೇಳಿ ಅವರು ನೀಡಿದ್ದ  ಮೇಲ್ಕಂಡ ಖಾತೆಗಳಿಗೆ ಒಟ್ಟು11.22000/-ರೂಗಳನ್ನು  ವರ್ಗಾವಣೆ  ಮಾಡಿರುತ್ತೇನೆ,  ನಂತರ ವಿಲಿಯಮ್ಸ್ ಎಂಬುವವರು +447513168826 ರ ಸಂಖ್ಯೆಯಿಂದ ಪೋನ್ ಮಾಡಿ ನಾನು ಕ್ರಿಸ್ಟ್ ಪ್ರೆಂಡ್ ನಿಮ್ಮ ಹಣ ನಿಮಗೆ ವಾಪಸ್ಸು ಕೊಡಿಸುತ್ತೇನೆ ಎಂತ ಹೇಳಿ ನನಗೆ ನೀವು 20.000/- ರೂ ಕಳುಹಿಸಿ ಎಂತ ತಿಳಿಸಿರುತ್ತಾನೆ, ಆದರೆ ನಾನು ಹಣ ವರ್ಗಾವಣೆ ಮಾಡಿರುವುದಿಲ್ಲ,  ನಂತರ ವಿವಿಧ ಕಾರಣಗಳಿಗೆ ಮೇಲ್ಕಂಡವರು ಇನ್ನೂ 2.85000/-ರೂ ಹಣ ಕಳುಹಿಸಿ ಎಂತ ಕೇಳಿದ್ದು ಇದರಿಂದ ನನಗೆ ಅನುಮಾನ ಬಂದು ಈದಿನ ಠಾಣೆಗೆ ಬಂದು ದೂರು ನೀಡುತ್ತಿದ್ದು, ತಾವುಗಳು ಮೇಲ್ಕಂಡವರು ನನಗೆ ಗಿಪ್ಟ್ ಕಳುಹಿಸಿಕೊಡುತ್ತಿರುವುದಾಗಿ ಹಾಗೂ ನನ್ನ ಮಗನಿಗೆ ಕೆಲಸ ಕೊಡಿಸುತ್ತೇವೆ ಎಂತ ಮೋಸ ಮಾಡಿ ವಿವಿಧ ಕಾರಣಗಳನ್ನು ಹೇಳಿ ನನ್ನಿಂದ ಹಣ ವರ್ಗಾವಣೆ  ಮಾಡಿಕೊಂಡಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಂಡು ನನ್ನ ಹಣ ವಾಪಸ್ಸು ಕೊಡಿಸಬೇಕಾಗಿ ಕೋರಿ ನೀಡಿರುವ ದೂರಾಗಿರುತ್ತದೆ.

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 62/2019 ಕಲಂ.279-337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:-02/10/2019 ರಂದು ಪಿರ್ಯಾದಿ ಶ್ರೀ ರಾಮಚಂದ್ರಪ್ಪ ಬಿನ್ ಯರ್ರಪ್ಪ 65 ವರ್ಷ, ವಕ್ಕಲಿಗರು, ಜಿರಾಯ್ತಿ, ಕೊತ್ತನೂರು ಗ್ರಾಮ, ನಂದಿಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ ತಮ್ಮ ಅಣ್ಣನಾದ ಶ್ರೀ ಮುನಿ ಸೊಣ್ಣಪ್ಪ ಬಿನ್ ಯರ್ರಪ್ಪ 70 ವರ್ಷ, ವಕ್ಕಲಿಗರು, ಜಿರಾಯ್ತಿ, ಕೊತ್ತನೂರು ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ದಿನಾಂಕ:-01/10/2019 ರಂದು ತಮ್ಮ ಗ್ರಾಮದಿಂದ ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಎಚ್-44 ಬಿ.ಬಿ ರಸ್ತೆಯ ಈಸರ್ ಪೆಟ್ರೋಲ್ ಬಂಕ್ ಬಳಿ ಇರುವ ತೋಟಕ್ಕೆ ಹೋಗಿದ್ದು, ತೋಟದಿಂದ ಚದಲಪುರ ಕ್ರಾಸ್ ಹೋಗಲು ಸುಮಾರು ಬೆಳಿಗ್ಗೆ 05-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ – ಬೆಂಗಳೂರು ಈಸರ್ ಪೆಟ್ರೋಲ್ ಬಂಕ್ ನ ಮುಂಭಾಗದ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಚಿಕ್ಕಬಳ್ಳಾಪುರ ರಸ್ತೆಯ ಕಡೆಯಿಂದ ಬಂದ ಯಾವುದೋ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ನಮ್ಮ ಅಣ್ಣ ಮುನಿ ಸೊಣ್ಣಪ್ಪ ರವರಿಗೆ ಡಿಕ್ಕಿ ಹೊಡೆಯಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು,  ತಮ್ಮ ಅಣ್ಣ ಮುನಿ ಸೊಣ್ಣಪ್ಪ ರವರು ರಸ್ತೆಯಲ್ಲಿ ಬಿದ್ದಾಗ ಹಣೆಗೆ, ಗದ್ದಕ್ಕೆ, ಕೆನ್ನೆಗೆ, ಕೈ-ಕಾಲುಗಳಿಗೆ ಗಾಯಗಳಾಗಿದ್ದು, ಕಿವಿಯಲ್ಲಿ ರಕ್ತ ಬಂದಿರುವುದಾಗಿ ಈಸರ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಅರೂರು ಗ್ರಾಮದ ಬೈರಾರೆಡ್ಡಿ ಎ.ಎಚ್ ರವರು ತನಗೆ ಮೊಬೈಲ್ ಮೂಲಕ ಕರೆ ಮಾಡಿ ತಿಳಿಸಿದ್ದು, ತಕ್ಷಣ ನಾನು ಅಪಘಾತ ನಡೆದ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ತಕ್ಷಣ 108 ಆಂಬ್ಯೂಲೆನ್ಸ್ ಗೆ ಕರೆಮಾಡಿ ಅಲ್ಲಿಗೆ ಬಂದ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ಈ ದಿನ ತಡವಾಗಿ ದಿನಾಂಕ:-02/10/2019 ರಂದು ಸದರಿ ಅಪಘಾತ ಪಡಿಸಿ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುವ ದ್ವಿಚಕ್ರವಾಹನವನ್ನು ಮತ್ತು ಸವಾರನನ್ನು ಪತ್ತೇ ಮಾಡಿ ಸದರಿ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ದಿನಾಂಕ:-02/10/2019 ರಂದು ಸಂಜೆ 500 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 171/2019 ಕಲಂ.379 ಐ.ಪಿ.ಸಿ :-

     ಈ ದಿನ ಪಿರ್ಯಾದಿದಾರರಾದ ರಾಜಕುಮಾರ ಬಿನ್ ವೆಂಕಟೇಶಪ್ಪ, 31 ವರ್ಷ, ಭೋವಿ ಜನಾಂಗ, ಸಾದಲಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಸ್ನೇಹಿತನಾದ ಸಂತೋಷ್ ಕುಮಾರ್ ಬಿನ್ ಚಿಕ್ಕಮುನಿಸ್ವಾಮಿ ರವರು ಕೆ.ಎ 40-ವಿ-9815 ನೊಂದಣಿ ಸಂಖ್ಯೆಯ ನೀಲಿ ಬಣ್ಣದ ಬಜಾಜ್ ಪಲ್ಸರ್ 150-ಸಿಸಿ ದ್ವಿ ಚಕ್ರ ವಾಹನವನ್ನು ಹೊಂದಿದ್ದು, ಅದರ ಇಂಜನ್  ನಂಬರ್ DHZCEF88942, ಚಾಸಿಸ್ ನಂಬರ್ MD2A11CZ4ECF09576 ಆಗಿದ್ದು, ಸದರಿ ಸಂತೋಷ್ ಕುಮಾರ್ ರವರು ಬೆಂಗಳೂರಿನಲ್ಲಿ ಓಲಾ ಕ್ಯಾಬನ್ನು ಚಾಲನೆ ಮಾಡುತ್ತಿದ್ದರಿಂದ ಮೇಲ್ಕಂಡ ದ್ವಿ ಚಕ್ರ ವಾಹನವನ್ನು ತನಗೆ ನೀಡಿದ್ದು, ತಾನು ಓಡಿಸಿಕೊಂಡಿರುತ್ತೇನೆ. ಹೀಗಿರುವಲ್ಲಿ ದಿನಾಂಕ:28/09/2019 ರಂದು ತಾನು ಸದರಿ ಕೆ.ಎ 40 ವಿ-9815 ನೊಂದಣಿ ಸಂಖ್ಯೆಯ ನೀಲಿ ಬಣ್ಣದ ಬಜಾಜ್ ಪಲ್ಸರ್-150 ಸಿಸಿ ದ್ವಿ ಚಕ್ರ ವಾಹನವನ್ನು ರಾತ್ರಿ 9-30 ಗಂಟೆ ಸಮಯದಲ್ಲಿ ತಾನು ವಾಸವಿರುವ ಮನೆಯ ಮುಂಭಾಗ ಕಾಂಪೌಂಡ್ ಒಳಗಡೆ ನಿಲ್ಲಿಸಿ ಹ್ಯಾಂಡಲ್ ಲಾಕ್  ಮಾಡಿ ಗೇಟ್ ಹಾಕಿ ಮಲಗಿದ್ದು, ದಿನಾಂಕ:29/09/2019 ರಂದು ಬೆಳಿಗ್ಗೆ 6-00 ಸಮಯದಲ್ಲಿ ಎದ್ದು ನೋಡಲಾಗಿ ಸದರಿ ದ್ವಿ ಚಕ್ರ ವಾಹನವು ಮನೆಯ ಮುಂಭಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ. ತಕ್ಷಣ ತಾನು ಗಾಬರಿಯಾಗಿ ತಾನು ಎಲ್ಲಾ ಕಡೆಗಳಲ್ಲಿ ಹುಡಕಾಡಿದರೂ ಪತ್ತೇಯಾಗಿರುವುದಿಲ್ಲಿ. ನಂತರ ತನಗೆ ಪರಿಚಯವಿರುವವರನ್ನು ವಿಚಾರಿಸಲಾಗಿ ಎಲ್ಲಿಯೂ ಪತ್ತೇಯಾಗಿರುವುದಿಲ್ಲ. ನಂತರ ಸದರಿ ದ್ವಿ ಚಕ್ರ ವಾಹನದ ಮಾಲಿಕರಾದ ತನ್ನ ಸ್ನೇಹಿತನಾದ ಸಂತೋಷ್ ಕುಮಾರ್ ರವರಿಗೆ ವಿಚಾರವನ್ನು ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನಿಡುತ್ತಿದ್ದು, ಕಳ್ಳತನವಾಗಿರುವ ತನ್ನ ಸ್ನೇಹಿತನ ಬಾಬತ್ತು ಕೆಎ-40 ವಿ-9815 ನೊಂದಣಿ ಸಂಖ್ಯೆಯ ನೀಲಿ ಬಣ್ಣದ ಬಜಾಜ್ ಪಲ್ಸರ್-150 ಸಿಸಿ ದ್ವಿ ಚಕ್ರ ವಾಹನವನ್ನು ಮತ್ತು ಕಳ್ಳತನ ಮಾಡಿರುವವರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿದೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 419/2019 ಕಲಂ.324-504-506 ಐ.ಪಿ.ಸಿ :-

     ದಿನಾಂಕ 02/10/2019 ರಂದು ಪಿರ್ಯಾದಿದಾರರಾದ ನಾರಾಯಣಸ್ವಾಮಿ ಬಿನ್ ಚಿನ್ನಪ್ಪಯ್ಯ, ಗಂಗಸಂದ್ರ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ನಾನು ಬೆಂಗಳೂರಿನಲ್ಲಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ ನಮ್ಮ ಗ್ರಾಮದಲ್ಲಿ ನಮ್ಮ ತಂದೆ ತಾಯಿಯ ಜೊತೆ ನಮ್ಮ ಅಕ್ಕ ನರಸಮ್ಮ ರವರು ವಾಸವಿರುತ್ತಾರೆ. ದಿನಾಂಕ 01/10/2019 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ತನ್ನ ಅಕ್ಕ ನರಸಮ್ಮಳು ನನಗೆ ಕರೆ ಮಾಡಿ ನಮ್ಮ ಜನಾಂಗದ ಹನುಮಂತ @ ಗುಂಡು ರವರು ನಮ್ಮ ಅಪ್ಪ ಚಿನ್ನಪ್ಪಯ್ಯ ರವರಿಗೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಗಾಯಪಡಿಸಿದ್ದು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿರುತ್ತಾರೆ. ಎಂತ ತಿಳಿಸಿದ್ದು ನಾನು ತಕ್ಷಣ ಬಂದು ನಮ್ಮ ಅಪ್ಪನನ್ನು ವಿಚಾರಿಸಿದಾಗ ನಮ್ಮ ಅಪ್ಪ ತಿಳಿಸಿದ್ದೇನೆಂದರೆ, ದಿನಾಂಕ 01/10/2019 ರಂದು ಸಂಜೆ 6-30 ಗಂಟೆಯಲ್ಲಿ ಹನುಮಂತ @ ಗುಂಡು ರವರು ನರಸಮ್ಮಳನ್ನು ವಿನಾಃಕಾರಣ ಕುಡಿದು ಬಂದು ಬಾಯಿಗೆ ಬಂದಂತೆ ಬೈದು ಸ್ಥಳದಿಂದ ಹೊರಟುಹೋಗಿದ್ದು ಪುನಃ ಇದೇ ದಿನ ಸಂಜೆ 7-30 ಗಂಟೆಯ ಸಮಯದಲ್ಲಿ  ಹನುಮಂತ @ ಗುಂಡು ರವರು ಕೈಯಲ್ಲಿ ರಾಡ್ ಅನ್ನು ಹಿಡಿದುಕೊಂಡು ತಮ್ಮ ಮನೆಯ ಬಳಿ ಬಂದಾಗ ತಮ್ಮ ತಂದೆ ನನ್ನ ಮಗಳನ್ನು ಯಾಕೆ ಬೈದಿದ್ದು ಎಂತ ಕೇಳಿದ್ದಕ್ಕೆ ಹನುಮಂತ @ ಗುಂಡು ರವರು ಏಕಾಏಕಿ ನನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲೆ ಇದ್ದ ನರಸಮ್ಮ ರವರು ಜಗಳವನ್ನು ಬಿಡಿಸಿರುತ್ತಾರೆ. ನನ್ನ ಮಕ್ಕಳ ನನ್ನ ತಂಟೆಗೆ ಬಂದರೆ ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಹೊರಟುಹೋಗಿರುತ್ತಾನೆ ನಂತರ ಅಂಬ್ಯುಲೆನ್ಸ್ ನಲ್ಲಿ ತಾನು ಗೌರಿಬಿದನೂರು ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ದಾಖಲಾಗಿರುತ್ತೇನೆಂದು ತಿಳಿಸಿರುತ್ತಾರೆ ಆದ್ದರಿಂದ ಹನುಮಂತ @ ಗುಂಡು, 36 ವರ್ಷ, ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 321/2019 ಕಲಂ.279-304(ಎ) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ:02/10/2019 ರಂದು ಮದ್ಯಾನ್ಹ: 2.15 ಘಂಟೆಗೆ ಪಿರ್ಯಾದಿದಾರರಾದ  ಎನ್.ಚಂದ್ರಶೇಖರ್ ಬಿನ್ ನರಸಿಂಹಯ್ಯ 40 ವರ್ಷ ವಕ್ಕಲಿಗರು ನಡುವನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ: ಈ ದಿನ ದಿನಾಂಕ:02/10/2019 ಮದ್ಯಾನ್ಹ ಸುಮಾರು 12-30 ಘಂಟೆಯಲ್ಲಿ ತಾನು ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ಕೆ.ಎನ್.ಆರ್. ಕ್ಯಾಂಪಸ್ ಹತ್ತಿರ ಬೆಂಗಳೂರು ಕಡೆ ಹೋಗುವ ಎನ್.ಹೆಚ್-7 ರಸ್ತೆಯಲ್ಲಿ ಅಪಘಾತವಾಗಿದ್ದು ಜನರು ಸೇರಿದ್ದನ್ನು ತಾನು ನೋಡಿ ತಾನು  ಸಹ ಹತ್ತಿರ ಹೋಗಿ ನೋಡಲಾಗಿ ಅದು ತನ್ನ ಬಾಮೈದುನಾದ ನವೀನ್.ಕೆ.ಎ ಬಿನ್ ಅಶ್ವಥಪ್ಪ 27 ವರ್ಷ ವಕ್ಕಲಿಗರು ಜಿರಾಯ್ತಿ ವಾಸ ಕಮ್ಮಗುಟ್ಟಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಆಗಿದ್ದು ತನ್ನ ಬಾಮೈದ ನವೀನ್ ರವರು ತನ್ನ ಬಾಬ್ತು ಕೆ.ಎ-40 ಕ್ಯೂ-6799 ನೊಂದಣಿ ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೇಂಡರ್ ಪ್ಲಾಸ್  ದ್ವಿ ಚಕ್ರವಾಹನದಲ್ಲಿ ಎನ್.ಹೆಚ್-7 ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಕಡೆ ಹೋಗುತ್ತಿದ್ದಾಗ ಮದ್ಯಾನ್ಹ ಸುಮಾರು 12-00 ಘಂಟೆಯಿಂದ 12-30 ಘಂಟೆಯ ಒಳಗೆ ನವೀನ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಮೇಲ್ಕಂಡ ದ್ವಿ ಚಕ್ರವಾಹನಕ್ಕೆ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಹೋಡೆಯಿಸಿ ಅಪಘಾತಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ಮೇಲ್ಕಂಡ ದ್ವಿ ಚಕ್ರವಾಹನ ಜಖಂಗೊಂಡು ನವೀನ್ ಗೆ ತಲೆಗೆ ತೀವ್ರವಾದ ರಕ್ತಗಾಯವಾಗಿ ಕೈ ಮೇಲೆ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಮೃತದೇಹವು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿದ್ದು ನವೀನ್ ಗೆ ಅಪಘಾತಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಸದೇ ಹೊರಟು ಹೋದ ವಾಹನದ ಚಾಲಕನನ್ನು ಮತ್ತು ವಾಹನವನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 174/2019 ಕಲಂ.15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 02-10-2019 ರಂದು ಸಂಜೆ 16-10 ಗಂಟೆಗೆ ಪಿಎಸ್ಐ ಸಾಹೇಬರು ದಾಳಿಯಿಂದ ಠಾಣೆಗೆ ವಾಪಸ್ಸು ಬಂದು ಪಂಚನಾಮೆ, ಮಾಲು ಹಾಗೂ ಆರೋಪಿಯೊಂದಿಗೆ ನೀಡಿದ ಜ್ಞಾಪನದ ಸಾರಾಂಶ ವೇನೆಂದರೆ  ಪಿಎಸ್ಐ ರವರು ಇಧೇ ದಿನ ಮದ್ಯಾಹ್ನ  14-00 ಗಂಟೆ ಸಮಯದಲ್ಲಿ ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-296 ರಲ್ಲಿ ಚಾಲಕ ಪಾರೂಖ್ ಮತ್ತು ಸಿಬ್ಬಂದಿಯಾದ ನಾಗಪ್ಪ ಮತ್ತು ಶೇಖರಪ್ಪ ರವರೊಂದಿಗೆ ನಂದಿ  ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಆ ಸಮಯಕ್ಕೆ ನನಗೆ ಬಾತ್ಮೀದಾರರಿಂದ ಅವರಿಗೆ ಬಂದ ಖಚಿತವಾದ ಮಾಹಿತಿ ಏನೆಂದರೆ ಕುಪ್ಪಹಳ್ಳಿ ಗ್ರಾಮದ  ಗೋವಿಂದರಾಜು ಬಿನ್  ವೆಂಕಟಪ್ಪ  ತನ್ನ ಮನೆಯ  ಬಳಿ ಯಾವುದೇ ಲೈಸನ್ಸ್ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಢಲು ಸ್ಥಳವ ಕಾಶ ಮಾಡಿಕೊಟ್ಟಿರುತ್ತಾನೆಂದು ಮಾಹಿತಿ ಬಂದಿದ್ದು ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿ ದಾಳಿ ಮಾಡಲು ಕುಪ್ಪಹಳ್ಳಿ  ಗ್ರಾಮದ ಗೇಟಿಗೆ ಹೋಗಿ ಗೇಟಿನ ಬಳಿ  ಇದ್ದಂತಹ ಪಂಚರನ್ನು ಪಂಚರನ್ನಾಗಿ ಕರೆದುಕೊಂಡು ಅವರ ಸಮಕ್ಷಮದಲ್ಲಿ ಮದ್ಯಾಹ್ನ 14-30 ಗಂಟೆಗೆ ಕುಪ್ಪಹಳ್ಳಿ  ಗ್ರಾಮದ  ಗೋವಿಂದರಾಜು ಬಿನ್  ವೆಂಕಟಪ್ಪ  ರವರ  ಮನೆಯ  ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮನೆಯ  ಮುಂದೆ ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು  ಕುಡಿಯುತ್ತಿದ್ದ  ಲೋಟಗಳನ್ನು ಬಿಸಾಡಿ ಓಡಿ ಹೋದರು. ಮನೆಯ  ಮಾಲೀಕ ಹೆಸರು ವಿಳಾಸವನ್ನು ಕೇಳಲಾಗಿ ಗೋವಿಂದರಾಜು  ಬಿನ್  ವೆಂಕಟಪ್ಪ  33 ವರ್ಷ  ಪಜಾತಿ  ಜಿರಾಯ್ತಿ ಕುಪ್ಪಹಳ್ಳಿ   ಗ್ರಾಮ ಚಿಕ್ಕಬಳ್ಳಾಪುರ  ತಾಲ್ಲೂಕು ಎಂತಾ ತಿಳಿಸಿದನು, ಇವನ ಮನೆಯ  ಮುಂದೆ ಬಿಳಿ ಬಣ್ಣದ  ಪ್ಲಾಸ್ಟಿಕ್ ಚೀಲವೊಂದಿದ್ದು ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ HAYWARDS CHEERS WHISKY ಹೆಸರಿನ  20 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಬೆಲೆ  30  ರುಪಾಯಿ 32 ಪೈಸೆ .ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1 Leter.800 ML ಮದ್ಯವಿದ್ದು ಒಟ್ಟು ಬೆಲೆ 606/-ರೂ ಆಗುತ್ತದೆ.,2) HAYWARDS CHEERS WHISKY ಹೆಸರಿನ ಮದ್ಯದ 5 ಖಾಲಿ ಟೆಟ್ರಾ ಪ್ಯಾಕೇಟುಗಳು 3) 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಇವುಗಳನ್ನು ತನ್ನ ಮನೆಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಚಿಲ್ಲರೆ ಅಂಗಡಿಯ ಮಾಲೀಕನನ್ನು ಕೇಳಿದಾಗ ಮನೆಯ ಮಾಲೀಕ ತನ್ನ ಬಳಿ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚನಾಮೆಯ ಮೂಲಕ ಮದ್ಯಾಹ್ನ 14-40 ಗಂಟೆಯಿಂದ 15-40 ಗಂಟೆಯ ವರೆವಿಗೆ ಅಮಾನತ್ತು ಪಡಿಸಿಕೊಂಡು ಮನೆಯ ಮಾಲೀಕ  ಗೋವಿಂದರಾಜು  ಮತ್ತು ಸಿಕ್ಕ ಮಾಲುಗಳನ್ನು ವಶಕ್ಕೆ ಪಡೆದು ಠಾಣೆಗೆ  ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಫಿಯ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರವವರದಿ .

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 175/2019 ಕಲಂ.279-337 ಐ.ಪಿ.ಸಿ:-

     ದಿನಾಂಕ 03-10-2019 ರಂದು ಬೆಳಗ್ಗೆ 8-30 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು ಈಗ್ಗೆ 5 ತಿಂಗಳುಗಳಿಂದ  ಮುಷ್ಟೂರು  ಗ್ರಾಮದ ಬಳಿಯ ಮಂಜುನಾಥ ಬಾರ್ ನಲ್ಲಿ ಸಪ್ಲೈಯರ್ ಕೆಲಸ ಮಾಡುತ್ತಿದ್ದು ದಿನಾಂಕ 02-10-2019 ರಂದು ಗಾಂದೀ ಜಯಂತಿ ಹಬ್ಬದ ಪ್ರಯುಕ್ತ ಬಾರ್ಗೆ ರಜೆ ಇದ್ದುದರಿಂದ  ನಂದಿ ಬೆಟ್ಟಕ್ಕೆ ಹೋಗಲು ಕ್ಯಾಷಿಯರ್ ಅನಿಲ್ಕುಮಾರ್ ರವರ ಬಾಬತ್ತು  ದ್ವಿಚಕ್ರ ವಾಹನ  ಸಂಖ್ಯೆ  KA-40-EE-1561 ನೊಂದಣಿಯ SPLENDER PLUS   ರಲ್ಲಿ ನಾನು ಕ್ಯಾಷಿಯೆರ್ ಅನಿಲ್ಕುಮಾರ್ ಮಂಜು ರವರು ನಂದಿ ಬೆಟ್ಟಕ್ಕೆ ಬಂದೆವು, ನಂದಿ ಬೆಟ್ಟದಲ್ಲಿ ಸುತ್ತಾಡಿಕೊಂಡು ಚಿಕ್ಕಬಳ್ಳಾಪುರಕ್ಕೆ ವಾಪಸ್ಸು ಹೋಗಲು  ಕ್ಯಾಷಿಯರ್ ಅನಿಲ್ ಸವಾರನಾಗಿ  ನಾವಿಬ್ಬರೂ ಹಿಂದೆ ಕುಳಿತುಕೊಂಡು ಮೂರು ಜನರು ಸಂಜೆ 6-20 ಗಂಟೆಯ ಸಮಯದಲ್ಲಿ ಮಿರ್ಜಾ ಸರ್ಕಲ್ಲಿನಿಂದ 1 ಕಿಮಿ ಮುಂದೆ  ಚಿಕ್ಕಬಳ್ಳಾಪುರಕ್ಕೆ ಬರುವ  ರಸ್ತೆಯಲ್ಲಿ  ಬರುತ್ತಿದ್ದಾಗ  ನಂದಿ ಬೆಟ್ದದ ಕೆಳಗಿನಿಂದ ಬರುತ್ತಿದ್ದ KA-03-MY-9346  ರ ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನದ ಮುಂಬಾಗಕ್ಕೆ ಮುಕಾ-ಮುಖಿ ಡಿಕ್ಕಿ ಹೊಡೆಯಿಸಿದ ಪರಿಣಾಮ ನಾವೂ ಮೂರು ಜನರು ರಸ್ತೆಯ ಮೇಲೆ ಬಿದ್ದು ಹೋಗಿ ನನಗೆ ಬಲಕೈಗೆ ಬಲಕಾಲಿಗೆ ರಕ್ತಗಾಯ ಮತ್ತು ಮೂಗೇಟು ಕ್ಯಾಷಿಯರ್ ಅನಿಲ್ ಕುಮಾರನಿಗೆ ಬಲಕಾಲಿಗೆ ರಕ್ತಗಾಯ ತಲೆ ಮೈಮೇಲೆ ಮೂಗೇಟುಗಳು ಮತ್ತು ಮಂಜು ರವರಿಗೆ ಬಲಕಾಲಿಗೆ ರಕ್ತಗಾಯ ಹಾಗೂ ಮೈಮೇಲೆ ಮೂಗೇಟುಗಳು ಆಗಿದ್ದವು, ದ್ವಿಚಕ್ರ ವಾಹನ ಮತ್ತು ಕಾರಿನ ಬಲಬಾಗ ಜಖಂಗೊಂಡಿತ್ತು, ಗಾಯಗಳಾಗಿದ್ದ ಮೂರು ಜನರು  ರಸ್ತೆಯಲ್ಲಿ ಬಂದ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರಗೆ  ಬಂದು ಚಿಕಿತ್ಸೆಗೆ  ದಾಖಲಾಗಿದ್ದು ಮಂಜು ಮತ್ತು ಕ್ಯಾಷಿಯರ್ ಅನಿಲ್ ಕುಮಾರ್ ರವರಿಗೆ ಗಾಯಗಳು ಹೆಚ್ಚಿಗೆ ಆಗಿದ್ದರಿಂದ  ಅವರನ್ನು ಅಸಿಸ್ಟಿಂಟ್ ಕ್ಯಾಷಿಯರ್  ಶ್ರೀನಿವಾಸ ರವರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋದರು  ನಾನು ನಮ್ಮ ಬಾರ್ ಮಾಲೀಕ ಕೊಂಡಪ್ಪ ರವರಿಗೆ ಅಪಘಾತದ ವಿಚಾರವನ್ನು ತಿಳಿಸಿ  ತಡವಾಗಿ ಬಂದು ಈ ದಿನ ದೂರನ್ನು ನೀಡುತ್ತಿದ್ದು ನಮಗೆ ಅಪಘಾತ ಪಡಿಸಿದ KA-03-MY-9346 ನೊಂದಣಿಯ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಿಬೇಕೆಂದು ಕೊರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ,

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 139/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ. ಲಿಯಾಕತ್ ಉಲ್ಲಾ ಪಿ.ಎಸ್.ಐ (ಕಾ.ಸು) ಆದ ನಾನು ನಿವೇದಿಸಿಕೊಳ್ಳುವುದೇನಂದರೆ, ದಿನಾಂಕ:02/10/2019 ರಂದು ಮದ್ಯಾಹ್ನ 1-45 ಗಂಟೆಯಲ್ಲಿ ಠಾಣೆಯಯ ಕರ್ತವ್ಯದಲ್ಲಿದ್ದಾಗ ಶಿಡ್ಲಘಟ್ಟ ನಗರದ ಗಸ್ತಿನಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ಹಳೆಯ ಬಸ್ ನಿಲ್ದಾಣ ಹಿಂಭಾಗದ ಮಹೇಶ್ವರಿ ಹಿಂದೂ ಮಿಲ್ಟ್ರೀ ಹೋಟೆಲ್ ಮುಂದೆ ಹೋಟೆಲ್ ವ್ಯಾಪಾರಿಯೊಬ್ಬರು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಮಾಹಿತಿ ಬಂದಿದ್ದು, ಪಂಚಾಯ್ತಿದಾರರು ಬರಮಾಡಿಕೊಂಡು ಪಂಚರು ಮತ್ತು ಠಾಣೆಯ ಸಿಬ್ಬಂದಿಯವರಾದ ಪಿ.ಸಿ.134 ಧನಂಜಯ್, ಪಿ.ಸಿ.131 ರಾಜಪ್ಪ, ಪಿ.ಸಿ.126. ವೆಂಕಟೇಶ್ ರವರೊಂದಿಗೆ ಮದ್ಯಾಹ್ನ 2-10 ಗಂಟೆಗೆ ಸದರಿ ಸ್ಥಳದಲ್ಲಿ ದಾಳಿ ಮಾಡಿದಾಗ ಹೋಟೆಲ್ ಅಂಗಡಿ ಮುಂದೆ ಯಾರೋ ಸಾರ್ವಜನಿಕರು ಮದ್ಯಪಾನ ಸೇವನೆ ಮಾಡುತ್ತಿದ್ದು, ನಮ್ಮನ್ನು ಕಂಡು ಮದ್ಯಪಾನ ಮಾಡುತ್ತಿದ್ದ 3 ಜನ ಆಸಾಮಿಗಳು ಓಡಿ ಹೋಗಿದ್ದು, ಸದರಿ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಆಕೆಯ ಹೆಸರು ವಿಳಾಸ ಕೇಳಲಾಗಿ ಲಕ್ಷ್ಮಣರೆಡ್ಡಿ ಬಿನ್ ಬಿ.ಎಲ್.ನಾರಾಯಣಸ್ವಾಮಿ, 31 ವರ್ಷ, ವಕ್ಕಲಿಗರು, ಮಿಲ್ಟ್ರೀ ಹೋಟೆಲ್ ವ್ಯಾಪಾರಿ, ಸಿದ್ದಾರ್ಥನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾನೆ. ಸದರಿ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಿ ಬಿಸಾಡಿದ್ದ 90 ಎಂ.ಎಲ್ ನ ರಾಜಾ ವಿಸ್ಕೀ ಲೇಬಲ್ ಇರುವ 03 ಖಾಲಿ ಮದ್ಯದ ಪಾಕೇಟ್ಗಳು, ಪಕ್ಕದಲ್ಲಿ 90 ಎಂ.ಎಲ್ ನ ರಾಜ ವಿಸ್ಕಿ ಲೇಬಲ್ ಇರುವ 04 ಮದ್ಯದ ಪಾಕೇಟ್ ಇದ್ದು ಇವುಗಳ ಬೆಲೆ 121-00 ರೂಗಳಾಗಿದ್ದು ಹಾಗೂ ಮದ್ಯಪಾನ ಸೇವನೆ ಮಾಡಿರುವ 03-ಖಾಲಿ ಪ್ಲಾಸ್ಟೀಕ್  ಪೇಪರ್ ಗ್ಲಾಸ್ ಗಳು ಇರುತ್ತೆ. ಅಂಗಡಿ ವ್ಯಾಪಾರಿ ಲಕ್ಷ್ಮಣರೆಡ್ಡಿ ರವರು ಸಾರ್ವಜನಿಕರ ಸ್ಥಳದಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಸದರಿ ಅಂಗಡಿ ವ್ಯಾಪಾರಿ ಲಕ್ಷ್ಮಣರೆಡ್ಡಿ ರವರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ದೊರೆತ ಮೇಲ್ಕಂಡ ಮಾಲುಗಳನ್ನು ಮುಂದಿನ ಕ್ರಮದ ಬಗ್ಗೆ ಮದ್ಯಾಹ್ನ 2-15 ರಿಂದ 3-45 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲು ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ಒಪ್ಪಿಸಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ: 139/2019 ಕಲಂ: 32(3), 15(ಎ) ಕೆ.ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.