ದಿನಾಂಕ :03/08/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 64/2020 ಕಲಂ. 380,457 ಐ.ಪಿ.ಸಿ :-

          ದಿನಾಂಕ: 02/08/2020 ರಂದು ಮಧ್ಯಾಹ್ನ 3-00 ಗಂಟೆಗೆ  ಪಿರ್ಯಾದಿದಾರರಾದ ಶ್ರೀ.ಚೌಡರೆಡ್ಡಿ  ಬಿನ್ ಲೇಟ್ ರಾಮನ್ನ  ವಕ್ಕಲಿಗರು 35 ವಾಸ:ನಲ್ಲಗುಟ್ಲಹಳ್ಳಿ  ಗ್ರಾಮ   ರಾಗುಟ್ಟಹಳ್ಳಿ ಗ್ರಾಮ ಪಂಚಾಯ್ತಿ  ಮುಂಗಾನಹಳ್ಳಿ  ಹೋಬಳಿ  ಚಿಂತಾಮಣಿ  ತಾಲ್ಲೂಕು  ಮೊ ನಂ: 9448969541 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ.  ಚಿಂತಾಮಣಿ ತಾಲ್ಲೂಕು  ಮುಂಗಾನಹಳ್ಳಿ  ಹೋಬಳಿ ರಾಗುಟ್ಟಹಳ್ಳಿ  ಗ್ರಾಮ  ಪಂಚಾಯ್ತಿ  ವ್ಯಾಪ್ತಿಗೆ  ಸೇರಿದ ನಲ್ಲಗುಟ್ಲಹಳ್ಳಿ  ಗ್ರಾಮದಲ್ಲಿ  ಸ್ಥಳ ಹೊಂದಿಗರಾಗಿದ್ದು ಹಾಲಿ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ವೆಂಕಟರವಣಪ್ಪ ರವರ ಮನೆಯಲ್ಲಿ  ಬಾಡಿಗೆ  ಮಾಡಿಕೊಂಡು ವಾಸ ವಿದ್ದು   ಈಗ್ಗೆ  ಸುಮಾರು  3 ತಿಂಗಳ ಹಿಂದೆ  ಕೋವಿಡ್ 19 ಸಾಂಕ್ರಾಮಿಕ ರೋಗಕ್ಕೆ  ಭಯಪಟ್ಟು  ತನ್ನ ಸ್ವಂತ ಗ್ರಾಮ  ನಲ್ಲಗುಟ್ಲಹಳ್ಳಿ  ಗ್ರಾಮಕ್ಕೆ  ಬಂದು  ತನ್ನ  ಸ್ವಂತ  ವಾಸದ  ಮನೆಯಲ್ಲಿ 3 ತಿಂಗಳ ನಿಂದ ವಾಸವಾಗಿದ್ದು ಹಾಗೂ  ನಲ್ಲಗುಟ್ಲಹಳ್ಳಿ ಗ್ರಾಮ ದಿಂದ ಚಿಂತಾಮಣಿ  ನಗರದ  ತಮ್ಮ ಬಾಡಿಗೆ  ಮನೆಗೆ ಬಂದು ಹೋಗುತ್ತಿದ್ದು  ಹಾಗೂ ನಲ್ಲಗುಟ್ಲಹಳ್ಳಿ  ಗ್ರಾಮದ  ತನ್ನ ಸ್ವಂತ ಮನೆಯ ಬೀರೂ ವಿನಲ್ಲಿ ಬಂಗಾರದ  ಒಡವೆಗಳಾದ  1) ನಕ್ಲೆಸ್  ಒಂದು 2) ಕತ್ತಿನ ಸರಗಳು ಮೂರು. 3 )ತಾವು ಧರಿಸುವ ಬಂಗಾರದ 5 ಉಂಗರಗಳು  ಮತ್ತು ಮಕ್ಕಳ 10 ಉಂಗರುಗಳು 4) ಕರಿಮುತ್ತಿನ ಸರ 1 , 5) 7 ಜೋತೆ ಕಿವಿ ಓಲೆಗಳು ಹಾಗೂ ಕಿವಿ ಓಲೆಗೆ   ಸಂಬದಿಸಿದ  2 ಸರಗಳು 6) ಬೆಳ್ಳಿ ಡಾಬು 7) ಅರಿಶಿಣ ಕುಂಕುಮ ಬಟ್ಟಲು 2  ಇತ್ಯಾದಿ ಬಂಗಾರದ ಒಡೆವೆಗಳನ್ನು  ಇಟ್ಟು ಭದ್ರಪಡಿಸಿದ್ದು. ಹಾಗೂ ದಿನಾಂಕ: 04/07/2020 ರಂದು ಶನಿವಾರ ಮಧ್ಯಾಹ್ನ  ಸುಮಾರು 3-00 ಗಂಟೆ ವೇಳೆಯಲ್ಲಿ  ನಲ್ಲಗುಟ್ಲಹಳ್ಳಿ ಗ್ರಾಮದ  ತನ್ನ ಸ್ವಂತ ಮನೆಗೆ ಬೀಗ ಹಾಕಿ ತಾನು, ತನ್ನ ಹೆಂಡತಿ ಮಕ್ಕಳು  ಚಿಂತಾಮಣಿ ನಗರದ  ತನ್ನ ಬಾಡಿಗೆ ಮನೆಗೆ  ಹೋಗಿ ವಾಸವಿದ್ದು ಆಗಾಗ  ಚಿಂತಾಮಣಿ  ನಗರ ದಿಂದ  ನಲ್ಲಗುಟ್ಲಹಳ್ಳಿ ಗ್ರಾಮದ ತನ್ನ ಸ್ವಂತ ಮನೆಗೆ  ಬಂದು  ಹೋಗುತ್ತಿದ್ದು. ದಿನಾಂಕ: 01/08/2020  ಶನಿವಾರ ದಿನ  ಮಧ್ಯ ರಾತ್ರಿ ವೇಳೆ ಸಮಯದಲ್ಲಿ  ಯಾರೋ ಕಳ್ಳ ದುಷ್ಕರ್ಮಿಗಳು  ತನ್ನ ಮನೆ ಬೀಗ ಹೊಡೆದು ಹಾಕಿ ನಂತರ ಮನೆಯೊಳಗೆ  ಪ್ರವೇಶಿಸಿ  2 ಬೀರೂ ಗಳು ಕಬ್ಬಿಣದ ಪೆಟ್ಟಿಗೆ ಹೊಡೆದುಹಾಕಿ  ತಾನು ಇಟ್ಟಿರುವ  ಬಂಗಾರದ ಒಡವೆಗಳಾದ  1)  ನಕ್ಲೆಸ್  ಒಂದು 2)ಕತ್ತಿನ ಸರಗಳು  ಮೂರು .3)ತಮ್ಮದು  5 ಉಂಗರು  ಚಿಕ್ಕಮಕ್ಕಳದು 10 ಉಂಗುರ 4) ಕರಿ ಮುತ್ತಿನ ಸರ ಒಂದು  5)  7 ಜೋತೆ ಕಿವಿ ಓಲೆಗಳು ಹಾಗೂ ಕಿವಿ ಓಲೆಗೆ   ಸಂಬದಿಸಿದ  2 ಸರಗಳು 6) ಬೆಳ್ಳಿ ಡಾಬು 7) ಅರಿಶಿಣ ಕುಂಕುಮ ಬಟ್ಟಲು 2  ಇತ್ಯಾದಿಗಳನ್ನು ಎತ್ತಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಹಾಗೂ ಇವುಗಳ ಬೆಲೆ ಸುಮಾರು 5 ಲಕ್ಷ ರೂಪಾಯಿಗಳಾಗಿರುತ್ತೆ.  ಆದ್ದರಿಂದ  ತಮ್ಮ ಮನೆಯಲ್ಲಿ  ಒಡವೆಗಳನ್ನು ಕಳ್ಳತನ ಮಾಡಿರುವ ಕಳ್ಳರನ್ನು ಮತ್ತು  ಒಡವೆಗಳನ್ನು ಪತ್ತೆ ಮಾಡಿ ಕಾನೂನುರೀತ್ಯ  ಕ್ರಮ ಜರುಗಿಸಬೇಕಾಗಿ ಕೋರಿ ನೀಡಿರುವ ದೂರಾಗಿರುತ್ತೆ.

  1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 36/2020 ಕಲಂ. 379 ಐ.ಪಿ.ಸಿ :-

          ದಿನಾಂಕ 02/08/2020 ರಂದು ಪಿರ್ಯಾದಿ ನರೇಶ್  ಬಿನ್ ಶಂಕರಪ್ಪ 27 ವರ್ಷ, ಕುರುಬರು ಪಾನಿಪುರಿ ವ್ಯಾಪಾರ  ಚಾಮರಾಜಪೇಟೆ  ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕಿಕೃತ ದೂರಿನ ಸಾರಾಂಶವೇನೆಂದರೆ ತಾನು 2016 ನೇ ಇಸವಿಯಲ್ಲಿ ಸ್ವಂತ ಉಪಯೊಗಕ್ಕಾಗಿ ಕೆಎ 40 ಇಎ 1789 ನಂಬರ್ ನ ಟಿವಿಎಸ್ ಕಂಪನಿಯ ಸ್ಟಾರ್ ಸಿಟಿ ಪ್ಲಸ್ ದ್ವಿಚಕ್ರ ವಾಹನವನ್ನು ಖರೀದಿಸಿದ್ದು, ಅಂದಿನಿಂದ ಸದರಿ ದ್ವಿಚಕ್ರ ವಾಹನವನ್ನು ಉಪಯೊಗಿಸುತ್ತಿದ್ದು ದಿನಾಂಕ 24/07/2020 ರಂದು ಸಂಜೆ ಎಂದಿನಂತೆ ತಾನು ಪಾನಿಪುರಿ ವ್ಯಾಪಾರಕ್ಕಾಗಿ ತನ್ನ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದು ರಾತ್ರಿ ಸುಮಾರು 9-30 ಗಂಟೆಗೆ ಪಾನಿಪುರಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗಿ ದ್ವಿಚಕ್ರ ವಾಹನವನ್ನು ಮನೆಯ ಮುಂದೆ ನಿಲ್ಲಿಸಿದ್ದು.  ನಂತರ ದಿನಾಂಕ 25/07/2020 ರಂದು ಬೆಳಗ್ಗೆ ಸುಮಾರು 7-00 ಗಂಟೆಗೆ ಎದ್ದು ಮನೆಯ ಮುಂದೆ ನೋಡಲಾಗಿ ತನ್ನ ದ್ವಿಚಕ್ರ ವಾಹನ ಮನೆಯ ಮುಂದೆ ಇಲ್ಲದೇ ಇದ್ದು ನಂತರ ತಾನು ಮನೆಯ ಸುತ್ತಮುತ್ತ ಸ್ನೇಹಿತರು, ಪರಿಚಯಸ್ತರು ಸಂಬಂದಿಕರು ನನಗೆ ಗೊತ್ತಿರುವ ಎಲ್ಲ ಕಡೆಗಳಲ್ಲಿ ಹುಡುಕಿದರೂ ಸಹ ನನ್ನ ದ್ವಿ ಚಕ್ರ ವಾಹನ ಪತ್ತೆಯಾಗಿರುವುದಿಲ್ಲ.  ಯಾರೋ ಕಳ್ಳರು ತನ್ನ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ತನ್ನ ದ್ವಿಚಕ್ರ ವಾಹನವನ್ನು ಮತ್ತು ಕಳುವು ಮಾಡಿರುವ ಅರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 287/2020 ಕಲಂ. 143,341,323,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ: 02/08/2020 ರಂದು ಸಂಜೆ 7.30 ಗಂಟೆಗೆ ಎನ್.ಮಂಜುನಾಥ್ ಬಿನ್ ನೀಲಿ ನಂಜುಂಡಪ್ಪ, 42 ವರ್ಷ, ಬಲಜಿಗರು, ವಕೀಲ ವೃತ್ತಿ, ಅಶ್ವಿನಿ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ವಕೀಲರಾಗಿ ಕೆಲಸ ಮಾಡಿಕೊಂಡಿರುತ್ತೇನೆ. ಹಾಗೆಯೇ ರಾಷ್ಟ್ರೀಯ ಹಿತಾ ರಕ್ಷಣಾ ವೇದಿಕೆಯ ವಕ್ತಾರಾಗಿರುತ್ತೇನೆ. ಈ ಹಿಂದೆ ಸದರಿ ಸಂಘದಿಂದ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪಟ್ಟಿ ಮಾಡಿ ಇಲಾಖಾವಾರು ಮೇಲಾಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿಕೊಂಡಿರುತ್ತೇವೆ. ಅದರಂತೆ ಅಧಿಕಾರಿಗಳು ಸಹ ಹಲವು ಅಕ್ರಮಗಳನ್ನು ತಡೆಯುವಲ್ಲಿ ಯಶಸ್ವಿಯಾದರು. ಆದರೆ ಸದರಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಹಸು ಮಾಂಸದ ಮಾರಾಟವನ್ನು ತಡೆಯುವಲ್ಲಿ ಸ್ಥಳೀಯ ಅಧಿಕಾರಿಗಳು ವಿಫಲರಾಗಿ ತುಂಬಾ ವಿಳಂಬ ದೋರಣೆಯನ್ನು ಮಾಡುತ್ತಿದ್ದರಿಂದ ರಾಷ್ಟ್ರೀಯ ಹಿತಾ ರಕ್ಷಣಾ ವೇದಿಕೆಯವರು ಇದರಿಂದ ತುಂಬಾ ಬೇಸತ್ತು ಹೋಗಿದ್ದರು. ಈಗಿರುವಲ್ಲಿ ಈ ದಿನ ದಿನಾಂಕ:02/08/2020 ರಂದು ಚಿನ್ನಸಂದ್ರ ಗ್ರಾಮಕ್ಕೆ ಚಿಕ್ಕಬಳ್ಳಾಪುರ ಡಿ.ಸಿ ಮೇಡಂ ರವರು ಹಾಗೂ ಚಿಕ್ಕಬಳ್ಳಾಪುರ ಎಸ್.ಪಿ ರವರುಗಳು ಬಂದಿರುವ ವಿಚಾರವನ್ನು ತಿಳಿದ ತಾನು ಮತ್ತು ರಾಷ್ಟ್ರೀಯ ಹಿತಾ ರಕ್ಷಣಾ ವೇದಿಕೆ ಅಧ್ಯಕ್ಷರಾದ ಸುನಿಲ್.ಪಿ.ವಿ, ಸಮಾಜ ಸೇವಕರಾದ ಅದೇ ಗ್ರಾಮದ ಮನೋಹರ್ ರೆಡ್ಡಿ ರವರುಗಳ ಸಂಜೆ ಸುಮಾರು 5.45 ಗಂಟೆಗೆ ಚಿನ್ನಸಂದ್ರ ಗ್ರಾಮಕ್ಕೆ ಹೋಗಿ, ಅಲ್ಲಿ ನೆರೆದಿದ್ದ ಡಿ.ಸಿ ಮೇಡಂ ಮತ್ತು ಎಸ್.ಪಿ ರವರನ್ನು ಭೇಟಿ ಮಾಡಿ ಚಿಂತಾಮಣಿ ತಾಲ್ಲೂಕು ಮತ್ತು ಚಿನ್ನಸಂದ್ರ ಗ್ರಾಮದಲ್ಲಿ ಗೋವುಗಳನ್ನು ಕಡಿದು ಮಾಂಸವನ್ನು ಮಾರಾಟ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮವನ್ನು ತ್ವರಿತವಾಗಿ ತೆಗೆದುಕೊಳ್ಳಬೇಕೆಂದು ವಿಷಯವನ್ನು ತಿಳಿಸಿದಾಗ ಡಿ.ಸಿ ಮೇಡಂ ರವರು ಕ್ರಮ ಕೈಗೊಳ್ಳುವುದಾಗಿ ಅಲ್ಲಿ ನೆರೆದಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ರವರಿಗೆ ಹಾಗೂ ತಹಸೀಲ್ದಾರ್ ರವರಿಗೆ ತಿಳಿಸಿ ಅಲ್ಲಿಂದ ಹೊರಟರು. ಅಷ್ಟರಲ್ಲಿ ಅಲ್ಲಿ ನೆರೆದಿದ್ದ ಹಾಲಿ ಟಿ.ಪಿ.ಎಸ್ ನ ಸದಸ್ಯ ಕೃಷ್ಣಪ್ಪ ಏಕಾಏಕಿ ತಮ್ಮ ಬಳಿ ಬಂದು ನಮ್ಮ ಗ್ರಾಮ ನಮ್ಮ ಇಷ್ಟ, ಈ ಗ್ರಾಮದ ಬಗ್ಗೆ ತೆಲೆಕೆಡಿಸಿಕೊಳ್ಳಲು ನಾವಿದ್ದೇವೆ. ನೀವೇಕೆ ಈ ವಿಚಾರದಲ್ಲಿ ದೂರುಗಳನ್ನು ಹೇಳುವುದು ಎಂದು ಅವಾಚ್ಯ ಶಬ್ದಗಳಿಂದ ಬೈದು ತಾನು ಧರಿಸಿದ್ದ ಮಾಸ್ಕ್ ಅನ್ನು ಅವರು ಕೀಳುತ್ತಿದ್ದಂತೆ ಅಲ್ಲಿ ನೆರೆದಿದ್ದ ಮುಸಲ್ಮಾನರ ಪೈಕಿ ಸುಲ್ತಾನ್ ಷರೀಪ್, ಖಮರ್, ಇಮ್ರಾನ್, ಬಾಂಡ್ಲಿ ಏಜಾಜ್, ರಿಯಾಜ್, ಬಾಬನ್, ಚಾಪಲ ರಿಜ್ವಾನ್ ಮತ್ತು ಅವರುಗಳ ಸಹಚರರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಚಿಂತಾಮಣಿಗೆ ಹಿಂದಿರುಗುತ್ತಿದ್ದ ತಮ್ಮಗಳನ್ನು ಅಡ್ಡ ಗಟ್ಟಿ ಅಚಾಚ್ಯ ಶಬ್ದಗಳಿಂದ ಬೈದು, ಇನ್ ಕಿ ಮಾಕಿ ಚೋದು, ಇನೊ ಸಬ್ಬಿಕೋ ಮಾರ್ರೇ ಇನ್ನೋನೋ ಹಮಾರಾ ಜೀನಾ ಕರಾಬ್ ಕರ್ದಿಯಾ ಇನ್ ಹಿಂದೂವೋಕೋ, ಖಾಪಿರೊಂಕೋ ಮಾರೋ ಎಂದು ಉರ್ದು ಭಾಷೆಯಲ್ಲಿ ಬೈದಾಡಿಕೊಂಡು ಕೈಗಳಿಂದ ಅಲ್ಲಿ ನೆರೆದಿದ್ದ ತನ್ನನ್ನು ಮತ್ತು ಸುನಿಲ್, ಮನೋಹರ್ ರೆಡ್ಡಿ ರವರನ್ನು ಹೊಡೆದರು. ತನಗೆ ಕತ್ತಿನ ಭಾಗ, ತಲೆ, ಬೆನ್ನಿಗೆ, ಕೈಗಳಿಗೆ ಮತ್ತು ಮುಖಕ್ಕೆ ಹೊಡೆದರು. ಸುನಿಲ್ ರವರಿಗೂ ಮುಖ, ತಲೆ ಕೈಗಳಿಗೆ ಮತ್ತು ಬೆನ್ನಿನ ಹಿಂಭಾಕ್ಕೆ ಹೊಡೆದರು. ಆಗ ಅಡ್ಡ ಬಂದ ಮನೋಹರ್ ರೆಡ್ಡಿ ರವರಿಗೂ ಸಹ ಮುಖ, ತಲೆ ಕೈಗಳಿಗೆ ಮತ್ತು ಬೆನ್ನಿಗೆ ಹೊಡೆದರು. ಆಗ ಅಲ್ಲಿಯೇ ಇದ್ದ ಪೊಲೀಸ್ ರವರು ತಮ್ಮನ್ನು ಅವರಿಂದ ರಕ್ಷಿಸಿದರು. ನಂತರ  ತಾವುಗಳು  ತಮ್ಮ  ದ್ವಿಚಕ್ರ  ವಾಹನಗಳಲ್ಲಿ ಚಿಂತಾಮಣಿಗೆ ಬರುತ್ತಿದ್ದಾಗ ಮೇಲ್ಕಂಡವರು ತಮ್ಮನ್ನು ಹೊಡೆಯಲು ಅಟ್ಟಿಸಿಕೊಂಡು ಬಂದಿದ್ದು, ಆ ಸಮಯದಲ್ಲೂ ಸಹ ಅವರು ಇವರನ್ನು ಪ್ರಾಣ ಸಹಿತ ಬಿಡಬಾರದು ಎಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಸದರಿ ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಮತ್ತು ಸದರಿ ವ್ಯಕ್ತಿಗಳಿಂದ ತಮಗೆ ಪ್ರಾಣ ಭಯ ವಿದ್ದ ಕಾರಣ ಭದ್ರತೆಯನ್ನು ನೀಡಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 288/2020 ಕಲಂ. 143,447,427,506(B),149 ಐ.ಪಿ.ಸಿ :-

          ದಿನಾಂಕ: 03/08/2020 ರಂದು ಬೆಳಗಿನ ಜಾವ 00.30 ಗಂಟೆಗೆ ನಾಗರಾಜಪ್ಪ ಬಿನ್ ಮುನಿಯಪ್ಪ, 25 ವರ್ಷ, ವಕ್ಕಲಿಗರು, ಜಿರಾಯ್ತಿ, ನಾಯಿಂದ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಸೇರಿದ ನಾಯಿಂದ್ರಹಳ್ಳಿ ಗ್ರಾಮದ ಪಂಚಾಯ್ತಿ ಜಂಜರು ನಂ.125, ಆಸ್ತಿ ನಂ.151 ವಿಸ್ತೀರ್ಣ 40X40 ಅಡಿಗಳ ಪ್ರದೇಶದಲ್ಲಿ ತಾನು ಈಗ್ಗೆ ಸುಮಾರು 30 ವರ್ಷಗಳಿಂದ ಜಾನುವಾರು ಕಟ್ಟಿಕೊಂಡು ಹುಲ್ಲುವಾಮೆ ಹಾಕಿಕೊಂಡು ಪಶುಸಂಗೋಪನೆ ಮಾಡಿಕೊಂಡು ಸ್ವಾಧೀನಾನುಭವದಲ್ಲಿರುತ್ತೇನೆ. ಸದರಿ ಪ್ರದೇಶಕ್ಕೆ ಕಲ್ಲು ಚಪ್ಪಡಿ ಕಾಂಪೌಂಡ್ ಸಹ ಇದ್ದು, ಈಗ್ಗೆ ಒಂದು ವಾರದಿಂದ ಮಳೆ ಹೆಚ್ಚಾಗಿದ್ದರಿಂದ ಜಾನುವಾರು ರಕ್ಷಣೆಗಾಗಿ ಮೊದಲಿನಿಂದಲೂ ಇದ್ದ ಚಪ್ಪರ ದುರಸ್ತಿ ಮಾಡುತ್ತಿದ್ದೆ. ಹೀಗಿರುವಲ್ಲಿ ಈ ದಿನ ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಗೊಲ್ಲರ ಕೋಮಿಗೆ ಸೇರಿದ ರಾಮಕೃಷ್ಣಪ್ಪ ಬಿನ್ ಸಂಗಪ್ಪ, ಡಿಶ್ ಶ್ರೀರಾಮ, ಕ್ರಿಷ್ಣಪ್ಪ ಬಿನ್ ಪೂತುಲಪ್ಪ, ಪಾಪಣ್ಣ, ನಾನೆಪ್ಪ ಬಿನ್ ದೊಡ್ಡ ಮುನಿಶಾಮಪ್ಪ, ಗೋಪಿನಾಥ್, ಮುರಳಿ, ಶ್ರೀನಿವಾಸ್ ಬಿನ್ ಕೃಷ್ಣಪ್ಪ, ನಾರಾಯಣಸ್ವಾಮಿ ಬಿನ್ ನಾಗರಾಜಪ್ಪ, ಸುರೇಶ್ ಬಿನ್ ಮುನೇಗೌಡ, ಸಂಜಯ್, ಸುನಿಲ್ ಬಿನ್ ಮುನೇಗೌಡ, ಅಭಿಲಾಷ್, ನಾಗರಾಜಪ್ಪ, ಮುನೇಗೌಡ, ಮಂಜುನಾಥ ಬಿನ್ ರಾಜಪ್ಪ, ಮಂಜುನಾಥ ಬಿನ್ ಕೃಷ್ಣಪ್ಪ, ನಾರಾಯಣಸ್ವಾಮಿ ಬಿನ್ ಕೃಷ್ಣಪ್ಪ, ಅನಿಲ್, ರಾಜೇಶ್ ಬಿನ್ ಶಿವಪ್ಪ, ನಾರಾಯಣಸ್ವಾಮಿ ಬಿನ್ ಹನುಮಪ್ಪ, ರಾಜೇಶ್ ಬಿನ್ ಡಿಶ್ ಶ್ರೀರಾಮಪ್ಪ, ವಿಜಯ್ ಕುಮಾರ್, ಅರುಣ್ ಕುಮಾರ್, ರಾಮಪ್ಪ ಬಿನ್ ಪೋತುಲಪ್ಪ, ಲೋಕೇಶ್, ವೆಂಕಟೇಶಪ್ಪ, ಕಲ್ಯಾಣ್, ಶ್ರೀನಿವಾಸ್ ಬಿನ್ ನಾರಾಯಣಸ್ವಾಮಿ, ನಾನೆಪ್ಪ ಬಿನ್ ಪೋತುಲಪ್ಪ, ನಾರಾಯಣಸ್ವಾಮಿ ಬಿನ್ ನಾನೆಪ್ಪ, ಕೃಷ್ಣಮೂರ್ತಿ, ರಾಜಪ್ಪ ಬಿನ್ ದೊಡ್ಡ ವೆಂಕಟಶಾಮಿ, ರಾಮಪ್ಪ ಬಿನ್ ಲೇಟ್ ಕೃಷ್ಣಪ್ಪ, ಪುಟ್ಟಮ್ಮ, ಲಕ್ಷ್ಮಿದೇವಮ್ಮ ಕೋಂ ನಾರಾಯಣಸ್ವಾಮಿ, ಜಯಪ್ರಧ, ನಾಗಮಣಿ ಕೋಂ ಮುನೇಗೌಡ, ಲಕ್ಷ್ಮಿದೇವಮ್ಮ ಕೋಂ ಡಿಶ್ ಶ್ರೀರಾಮ, ದ್ಯಾವಮ್ಮ, ವೆಂಕಟಲಕ್ಷ್ಮಮ್ಮ, ರತ್ನಮ್ಮ ಕೋಂ ರಾಮಪ್ಪ, ಕೋಮಲ, ಲಕ್ಷ್ಮಮ್ಮ ಕೋಂ ಲೇಟ್ ರಾಮಪ್ಪ, ಸುಷ್ಮ, ಸುರೇಖ, ಆಶಾ, ಸುವರ್ಣ, ಪ್ರೇಮ, ನಾಗಮಣಿ ಕೋಂ ಶ್ರೀನಿವಾಸ, ಯರ್ರಮ್ಮ, ತ್ರಿವೇಣಿ, ಪವನ್, ಶ್ರೀಕಾಂತ್, ಶ್ರೀನಿವಾಸ ಬಿನ್ ದಾಸಪ್ಪನವರ ಕೃಷ್ಣಪ್ಪ, ಮನೋಹರ್, ಪವಿತ್ರ, ಸುವರ್ಣಮ್ಮ, ಅಶ್ವಥಮ್ಮ, ಸೀನಪ್ಪ, ಶಿವಪ್ಪ, ರಾಮಕೃಷ್ಣ ಬಿನ್ ನಾರಾಯಣಸ್ವಾಮಿ, ಸುರೇಶ ಬಿನ್ ರಾಮಪ್ಪ, ಮುನಿರಾಜು, ರಾಮಚಂದ್ರ, ಜಯಮ್ಮ, ಶಂಕರ, ಮಧುಶ್ರೀ, ನಂಜುಂಡಪ್ಪ, ಓಭಯ್ಯ ನವರ ನಾರಾಯಣಸ್ವಾಮಿ, ಪ್ರತಾಪ್, ಅಂಜಲಿ ಮತ್ತು ನಾಗರತ್ನಮ್ಮ ರವರುಗಳು ವಿನಾ ಕಾರಣ ತಮ್ಮ ಮೇಲೆ ಜಗಳ ತೆಗೆದು ಮೇಲ್ಕಂಡ ತಮ್ಮ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ಏಕೋದ್ದೇಶದಿಂದ ತನಗೆ ನಷ್ಠವನ್ನುಂಟು ಮಾಡಬೇಕೆಂಬ ಉದ್ದೇಶದಿಂದ ಹಾಗೂ ತನ್ನನ್ನು ಸಾಯಿಸುವ ಉದ್ದೇಶದಿಂದ ತನ್ನ ಮೇಲ್ಕಂಡ ಅಸ್ತಿಯಲ್ಲಿದ್ದ ಜಾನುವಾರುಗಳನ್ನು ಆಚೆಗೆ ಓಡಿಸಿ ಚಪ್ಪರವನ್ನು ತಳ್ಳಿ ಕಾಂಪೌಂಡ್ ಕಲ್ಲು ಚಪ್ಪಡಿಗಳನ್ನು ಹೊಡೆದು ಹಾಕಿ ಚಪ್ಪರಕ್ಕೆ ಹಾಕಿದ್ದ ಪೈಪುಗಳು ಮತ್ತು ಜಿಂಕ್ ಶೀಟ್ ಗಳನ್ನು ಹಾಳು ಮಾಡಿ ಸುಮಾರು ಎರಡು ಲಕ್ಷ ನಷ್ಠವನ್ನು ಉಂಟುಮಾಡಿರುತ್ತಾರೆ. ಆ ಪೈಕಿ ಪುರುಷ ಆರೋಪಿಗಳು ಮಚ್ಚು ಮತ್ತು ಲಾಂಗುಗಳನ್ನು ಹಾಗೂ ಮಹಿಳಾ ಆರೋಪಿಗಳು ದೊಣ್ಣೆ ಪರಕೆ ಮತ್ತು ಕಾರದ ಪುಡಿಗಳನ್ನು ತಮಗೆ ತೋರಿಸಿ ಈ ಪ್ರದೇಶದೊಳಗೆ ಬಂದರೆ ನಿಮ್ಮನ್ನು ಇಲ್ಲಿಯೇ ಸಾಯಿಸಿ, ಊತು ಬಿಡುವುದಾಗಿ ಬೆದರಿಕೆ ಹಾಕಿ ಗಡಾರೆ, ಲಾಂಗ್, ಮಚ್ಚು, ದೊಣ್ಣೆ ಪರಕೆ, ಕಾರದ ಪುಡಿಯನ್ನು ತನ್ನ ಮೇಲೆ ಎರಚಿರುತ್ತಾರೆ. ಆದ್ದರಿಂದ ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 289/2020 ಕಲಂ. 341,323,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ 03-08-2020 ರಂದು ಬೆಳಗ್ಗೆ 11-00 ಗಂಟೆಗೆ ಸುಲ್ತಾನ್ ಷರೀಪ್ ಬಿನ್ ಅಪ್ಸರ್ ಪಾಷ, 45 ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ. ಚಿನ್ನಸಂದ್ರ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ 02-08-2020 ರಂದು ಮಾನ್ಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರು ಕೋವಿಡ್ ರೋಗದ ಹಿನ್ನಲೆಯಲ್ಲಿ ತಮ್ಮ ಗ್ರಾಮಕ್ಕೆ ಭೇಟಿ ನೀಡಿ ಸಂಜೆ 5-00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಗ್ರಾಮ ಪಂಚಾಯ್ತಿ ಕಛೇರಿ ಬಳಿ ಬಂದಾಗ ಚಿಂತಾಮಣಿ ನಗರದ ವಾಸಿಗಳಾದ ವಕೀಲರಾದ ಮಂಜುನಾಥ ಮತ್ತು ಪಿ.ವಿ ಸುನಿಲ್ ಹಾಗೂ ತಮ್ಮ ಗ್ರಾಮದ ವಾಸಿ ಮನೋಹರ ರೆಡ್ಡಿ (ಹಾಲಿ ವಾಸ ಚಿಂತಾಮಣಿ ನಗರ) ಎಂಬುವವರು ಮಾನ್ಯ ಜಿಲ್ಲಾಧಿಕಾರಿಗಳ ಬಳಿ ಬಂದು ಚಿನ್ನಸಂದ್ರ ಗ್ರಾಮದಲ್ಲಿ ಹಲವಾರು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ನೀವು ಕೂಡಲೇ ಕ್ರಮ ಕೈಗೊಳ್ಳಿ ಎಂದು ಮನವಿಯನ್ನು ಸಲ್ಲಿಸಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳು ಅಲ್ಲಿಂದ ಹೊರಟ ನಂತರ ತಾನು ತಮ್ಮ ಮನೆಗೆ ಹೋಗಲು ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮೇಲ್ಕಂಡ ಮೂರು ಜನರು ತನ್ನನ್ನು ಅಡ್ಡಗಟ್ಟಿ, ಏನೋ ಬೋಳಿ ಮಗನೇ, ನಿಮ್ಮ ಗ್ರಾಮದಲ್ಲಿ ನೀನೇ  ಹಲವಾರು  ಅಕ್ರಮ ಚಟುವಟಿಕೆಗಳನ್ನು ಮಾಡಿಸುತ್ತಿದ್ದಿಯಾ ಎಂದು ಅವಾಶ್ಚ ಶಬ್ದಗಳಿಂದ ಬೈದು ಆ ಪೈಕಿ ಮಂಜುನಾಥ ರವರು  ಕೈಗಳಿಂದ ತನಗೆ ಮೈ ಮೇಲೆ ಹೊಡೆದು ನೋವುಂಟು ಮಾಡಿದನು. ಮನೋಹರ ರೆಡ್ಡಿ ಮತ್ತು ಸುನೀಲ್ ರವರು ಸಹ ಕೈಗಳಿಂದ ತನಗೆ ಮೈ ಮೇಲೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ತಮ್ಮ ಗ್ರಾಮದ ವಾಸಿ ಸಿ.ಕೆ ವಾಜೀದ್ ಬಿನ್ ಖೂದ್ದೂಸ್ ಮತ್ತು ಸಿ.ವಿ ಆಂಜಪ್ಪ ಬಿನ್ ವೆಂಕಟರವಣಪ್ಪ ರವರು ಬಂದು ಅವರಿಂದ ತನ್ನನ್ನು ಬಿಡಿಸಿದರು. ಮೇಲ್ಕಂಡವರು ಅಲ್ಲಿಂದ ಹೋಗುವಾಗ ಈ ದಿನ ಬದುಕಿಕೊಂಡಿದ್ದಿಯಾ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದರು. ಮೇಲ್ಕಂಡ ಮೂರು ಜನರು ಈ ಹಿಂದೆಯೂ ಸಹ ತಮ್ಮ ಗ್ರಾಮದ ಬಗ್ಗೆ  ವಿವಿದ ಇಲಾಖಾ ಅಧಿಕಾರಿಗಳಿಗೆ  ಸುಳ್ಳು ಆರೋಪಗಳ ದೂರುಗಳನ್ನು ನೀಡಿರುತ್ತಾರೆ. ತಮ್ಮ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂರು ಅನ್ನೋನ್ಯತೆಯಿಂದ ಇದ್ದು ತಮ್ಮಗಳ ನಡುವೆ ದ್ವೇಷ ಬಾವನೆ ಉಂಟುಮಾಡುವ ದುರುದ್ದೇಷದಿಂದ ಇಲಾಖಾ ಅಧಿಕಾರಿಗಳಿಗೆ ಸುಳ್ಳು ದೂರುಗಳನ್ನು ನೀಡುತ್ತಿರುತ್ತಾರೆ. ಆದ್ದರಿಂದ ಮೇಲ್ಕಂಡ ಮೂರು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 81/2020 ಕಲಂ. 323,324,504,506 ಐ.ಪಿ.ಸಿ :-

          ದಿನಾಂಕ 02-07-2020 ರಂದು ಸಂಜೆ 05.00 ಗಂಟೆಗೆ ಪಿರ್ಯಾಧಿದಾರರಾದ ಸಜ್ಜಾದ್ ಖಾನ್ ಬಿನ್ ಲೇಟ್ ಭಾಷಖಾನ್,50 ವರ್ಷ, ಮುಸ್ಲೀಂರು, ಕೂಲಿ ಕೆಲಸ, ಹುಸೇನ್ ಷಾ ವಲ್ಲಿ ದರ್ಗಾ ಹಿಂಭಾಗ, ಮುರುಗಮಲ್ಲಾ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 01-08-2020 ರಂದು ಸಂಜೆ 05.00 ಗಂಟೆ ಸಮಯದಲ್ಲಿ ಬಕ್ರೀದ್ ಹಬ್ಬವಾದ್ದರಿಂದ ತನ್ನ ಮಗನಾದ ಕರೀಂಖಾನ್ ರವರು ಅವರ ಸ್ನೇಹಿತರ ಜೊತೆ ಪಾನಿಪೂರಿ ತಿನ್ನುವ ಸಲುವಾಗಿ ಸ್ನೇಹಿತರಾದ ರಫೀಕ್, ಸಲ್ಮಾನ್ @ ಚಿನ್ನು, ನದಿಮ್ ರವರೊಂದಿಗೆ ಮುರುಗಮಲ್ಲಾ ಬಸ್ ನಿಲ್ದಾಣದ ಬಳಿ ಇದ್ದ ಗಂಡ್ರಗಾನಹಳ್ಳಿ ಗ್ರಾಮದ ಸುರೇಶ್ ರವರ ಪಾನಿಪೂರಿ ಅಂಗಡಿ ಬಳಿ ಹೋಗಿದ್ದ ಸಮಯದಲ್ಲಿ ಆಟೋದಲ್ಲಿ ಮ್ಯೂಜಿಕ್ ಹಾಕಿಕೊಂಡಿದ್ದನ್ನ ನೆಪ ಮಾಡಿಕೊಂಡು ಸುರೇಶ್ ತನ್ನ ಮಗ ಮತ್ತು ಸ್ನೇಹಿತರನ್ನು ಕುರಿತು “ಹೇ ಸೂಳೇ ನನ್ನ ಮಕ್ಕಳೇ ನಿಮಗೆ ಧಿಮಾಕು ಜಾಸ್ತಿ ನನ್ನ ಮಕ್ಕಳು ನೀವುಗಳು ಗ್ರಾಮದಲ್ಲಿ ಇರಬಾರದು” ಎಂದು ಅವಾಚ್ಯವಾಗಿ ಬೈದ ಸಮಯದಲ್ಲಿ ತನ್ನ ಮಗನಾದ ಕರೀಂಖಾನ್ ಯಾಕಪ್ಪ ಸುಮ್ಮನೆ ಬೈಯ್ದಾಡುತ್ತಿರುವುದು ಎಂದು ಕೇಳಿದ್ದಕ್ಕೆ ತನ್ನ ಮಗನನ್ನು ಹಿಡಿದುಕೊಂಡು ಕೈಗಳಿಂದ ಹೊಟ್ಟೆಗೆ ಗುದ್ದಿ ಕಾಲುಗಳಿಂದ ಎದೆಗೆ ಒದ್ದು ಪಾನಿಪೂರಿ ಹಾಕುವ ಸೌಟ್ ನಿಂದ ಎದೆ ಭಾಗಕ್ಕೆ ಹೊಡೆದು ಮೂಗೇಟುಗಳು ಉಂಟುಮಾಡಿದಾಗ ಅಲ್ಲಿಯೇ ಇದ್ದ ರಫೀಕ್, ಸಲ್ಮಾನ್ @ ಚಿನ್ನು, ನದಿಮ್ ರವರು ಜಗಳ ಬಿಡಿಸಿದರೂ ಸಹ  ನಿಮ್ಮನ್ನು ಒಂದು ಗತಿ ಕಾಣಿಸುತ್ತೇನೆ ಎಂತ  ಪ್ರಾಣ ಬೆದರಿಕೆ ಹಾಕಿರುತ್ತಾನೆ. ಎಂದು ತನ್ನ ಮಗನು ಮನೆಯಲ್ಲಿ ತನಗೆ ತಿಳಿಸಿದ್ದು, ತಕ್ಷಣ ನಾವು ತನ್ನ ಮಗನನ್ನು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಿರುತ್ತೇವೆ. ತನ್ನ ಮಗನ ಮೇಲೆ ವಿನಾಕಾರಣ ಜಗಳ ತೆಗೆದು ಹಲ್ಲೆ ಮಾಡಿದ  ಸುರೇಶ್, ಗಂಡ್ರಗಾನಹಳ್ಳಿ ಗ್ರಾಮ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಮುದ್ರಿತ ದೂರಿನ ಸಾರಾಂಶವಾಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 176/2020 ಕಲಂ. 379 ಐ.ಪಿ.ಸಿ & 3 PREV. OF DAMAGE TO PUBLIC PROPERTY ACT :-

          ಘನ ನ್ಯಾಯಾಲಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಲಕ್ಷ್ಮೀನಾರಾಯಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ 03/08/2020 ರಂದು ಬೆಳಿಗ್ಗೆ 6-00 ಗಂಟೆಯಲ್ಲಿ ನನಗೆ ಬಾತ್ಮಿದಾರರಿಂದ ರಾಯನಕಲ್ಲು ಗ್ರಾಮದ ಸರ್ಕಾರಿ ಕೆರೆಯಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರನ್ನು ನಿಲ್ಲಿಸಿಕೊಂಡು ಕೆರೆಯ ಅಂಗಳವನ್ನು ಅಗೆದು ವಿರೂಪಗೊಳಿಸಿ ಸರ್ಕಾರಿ ಖನಿಜ ಸಂಪತ್ತಾದ ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರಿನ ಟ್ರಾಲಿಗೆ ತುಂಬಿಸುತ್ತಿರುವುದಾಗಿ ಬಾತ್ಮಿದಾರರಿಂದ ಮಾಹಿತಿ ಬಂದಿದ್ದರ ಮೇರೆಗೆ ಕೂಡಲೇ ಠಾಣೆಯ ಪಿಸಿ-311, ಗೂಳಪ್ಪ ಶ್ರೀ ಶೈಲ್ ನಿಂಗನೂರು, ಪಿಸಿ 173, ಸತೀಶ ಹಾಗೂ ಜೀಪ್ ಚಾಲಕ ಎಪಿಸಿ 120, ನಟೇಶ್ ರವರನ್ನು ಮತ್ತು ಪಂಚರನ್ನು ಕರೆದುಕೊಂಡು ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-395 ರಲ್ಲಿ ರಾಯನಕಲ್ಲು ಗ್ರಾಮದ ಸರ್ಕಾರಿ ಕೆರೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿದ್ದವರು ಸ್ವಲ್ಪ ದೂರದಿಂದಲೇ ಪೊಲೀಸ್ ಜೀಪ್ ನ್ನು ನೋಡಿ ಮರಳು ತುಂಬುತ್ತಿದ್ದ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಕೆರೆಯ ಅಂಗಳದಲ್ಲೇ ಬಿಟ್ಟು ಮರಳು ತುಂಬಲು ತಂದಿದ್ದ ಪರಿಕರಗಳೊಂದಿಗೆ ಓಡಿ ಪರಾರಿಯಾದರು. ನಾವು ಪಂಚರು ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ KA-40-TA-7346 ಎಂತ ನೊಂದಣಿ ಸಂಖ್ಯೆ ಇರುವ ಕೆಂಪು ಬಣ್ಣದ 9000 MASSEY Ferguson ಟ್ರ್ಯಾಕ್ಟರ್ ಇಂಜಿನ್ ಇದ್ದು, ಇದರ ಟ್ರಾಲೀಯನ್ನು ಪರಿಶೀಲಿಸಲಾಗಿ ನೀಲಿ ಮತ್ತು ಹಳದಿ ಬಣ್ಣದಿಂದ ಕೂಡಿರುವ ಟ್ರಾಲೀಯಾಗಿದ್ದುಇದರ ಮೇಲೆ ಆರ್.ಟಿ.ಓ ನೊಂದಣಿ ಸಂಖ್ಯೆ ಇರುವುದಿಲ್ಲ. ಸದರಿ ಟ್ರಾಕ್ಟರಿನ ಟ್ರಾಲಿಯ ತುಂಬ ಮರಳು ತುಂಬಿದ್ದು ಅಕ್ರಮ ಮರಳು ಸಾಗಾಣಿಕೆಯಾದ್ದರಿಂದ ಮಾಲೀಕ ಟ್ರ್ಯಾಕ್ಟರ್ ನ್ನು ಬಿಟ್ಟು ಪರಾರಿಯಾಗಿರುತ್ತಾರೆ. ಸದರಿ ಟ್ರ್ಯಾಕ್ಟರಿನ ಚಾಲಕ ಮತ್ತು ಮಾಲೀಕ ಯಾವುದೇ ಪರವಾನಗಿ ಇಲ್ಲದೇ ಸರ್ಕಾರಿ ಖನಿಜ ಸಂಪತ್ತಾದ ಮರಳನ್ನು ಕಳ್ಳತನವಾಗಿ ಸಾಗಿಸಲು ಟ್ರ್ಯಾಕ್ಟರ್ ಟ್ರಾಲೀಗೆ ತುಂಬುತ್ತಿದ್ದರಿಂದ ಸದರಿ ಮೇಲ್ಕಂಡ ಟ್ರ್ಯಾಕ್ಟರ್ ಮತ್ತು ಟ್ರಾಲೀಯನ್ನು ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 7-00 ಗಂಟೆಯಿಂದ 8-00 ಗಂಟೆಯವರೆಗೆ ಮಹಜರು ಮಾಡಿ ಮರಳು ತುಂಬಿದ್ದ ಮೇಲ್ಕಂಡ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಮಂಚೇನಹಳ್ಳಿ ಪೊಲೀಸ್ ಠಾಣೆಯ ಬಳಿ ತಂದು ನಿಲ್ಲಿಸಿ ಬೆಳಿಗ್ಗೆ 9-00 ಗಂಟೆಗೆ ಸದರಿ ಟ್ರಾಕ್ಟರ್ ಮತ್ತು ಟ್ರಾಲಿಯ ಚಾಲಕ ಮತ್ತು ಮಾಲೀಕನ ಮೇಲೆ ಠಾಣಾ ಮೊಸಂ: 176/2020 ಕಲಂ: 379 ಐಪಿಸಿ ಮತ್ತು 3 ಪಿಡಿಪಿ ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.206/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ: 02-08-2020 ರಂದು ಸಂಜೆ 7.10 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀ. ಬಿ.ಎನ್. ಶರತ್ ಕುಮಾರ್, ಪಿ.ಎಸ್.ಐ., ಡಿಸಿಬಿ-ಸಿಇಎನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ರವರು ಠಾಣೆಯಲ್ಲಿ ಹಾಜರಾಗಿ 4 ಜನ ಆರೋಪಿಗಳು ಹಾಗೂ ಮಹಜರ್ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 02-08-2020 ರಂದು ತಾನು ಹಾಗೂ ಸಿಬ್ಬಂಧಿಯವರು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗಸ್ತಿನಲ್ಲಿದ್ದಾಗ ಸಂಜೆ 5.00 ಗಂಟೆಗೆ ಬಾತ್ಮಿದಾರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದಿಂದ ಭಕ್ತರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ರೆಡ್ಡಪ್ಪ ಲೇ-ಔಟ್ ನಲ್ಲಿ ಕಾನೂನು ಬಾಹಿರ ಅಂದರ್ ಬಾಹರ್ ಇಸ್ಪೀಟು ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡಿ ದಾಳಿಯಲ್ಲಿ 1) ರಾಮಕೃಷ್ಣ ಬಿನ್ ಮುನಿಯಪ್ಪ, 31 ವರ್ಷ, ಪ.ಜಾತಿ, ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 2) ನವೀನ್ ಕುಮಾರ್ ಬಿನ್ ಲೇಟ್ ಚನ್ನಬೈರಪ್ಪ, 34 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 3) ರಾಜು ಬಿನ್ ಲೇಟ್ ಬಚ್ಚಪ್ಪ, 47 ವರ್ಷ, ಕೊರಚರು, ಬಿದಿರು ಕೆಲಸ, ವಾಸ: ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು 4) ವೆಂಕಟರವಣಪ್ಪ ಬಿನ್ ಲೇಟ್ ಮುನಿಕೆಂಚಪ್ಪ, 45 ವರ್ಷ, ಪ.ಜಾತಿ, ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರನ್ನು ಹಾಗೂ ಜೂಜಾಟಕ್ಕೆ ಬಳಸಿದ್ದ 1) ಒಂದು ಹಳೆ ನ್ಯೂಸ್ ಪೇಪರ್, 2) 52 ಇಸ್ಪೀಟು ಎಲೆಗಳು ಹಾಗೂ ಪಣಕ್ಕೆ ಇಟ್ಟಿದ್ದ 3) 4240-00 ರೂ ನಗದು ಹಣವನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ವಶಕ್ಕೆ ಪಡೆದುಕೊಂಡಿದ್ದು, ವಶಕ್ಕೆ ಪಡೆದುಕೊಂಡಿದ್ದವರಿಂದ ಸ್ಥಳದಿಂದ ಪರಾರಿಯಾದ ಇತರೆ 4 ಜನರು ಹೆಸರು ವಿಳಾಸವನ್ನು ತಿಳಿಯಲಾಗಿ 5)ತಿಲಕ್ ಬಿನ್ ಕಿಟ್ಟಪ್ಪ, 25 ವರ್ಷ, ಭಜಂತ್ರಿ ಜನಾಂಗ, ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 6) ಪ್ರಕಾಶ್, 40 ವರ್ಷ, ಕುರುಬರು, ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 7) ನರಸಿಂಹಮೂರ್ತಿ, 40 ವರ್ಷ, ಕೂಲಿ ಕೆಲಸ, ಕಾಚಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು 8) ಶಿವ, 40 ವರ್ಷ, ಕಾಚಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರುಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಕೈಗೊಂಡ ಮಹಜರ್, ಮಾಲು ಹಾಗೂ 4 ಜನ ಆರೋಪಿಗಳನ್ನು ಹಾಜರುಪಡಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.