ದಿನಾಂಕ :03/07/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.153/2020 ಕಲಂ. 269,271 ಐ.ಪಿ.ಸಿ :-

          ದಿ: 02-07-2020 ರಂದು ರಾತ್ರಿ 8:15 ಗಂಟೆಗೆ ಪಿ.ಸಿ 280 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ನಾನು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ  ಎರಡು ವರ್ಷಗಳಿಂದ ಪೊಲೀಸ್ ಪೇದೆಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತೇನೆ. ದಿನಾಂಕ:02/07/2020 ರಂದು ಠಾಣಾಧಿಕಾರಿಗಳು ನನಗೆ ಕೋವಿಡ್-19 ಪ್ರಯುಕ್ತ ವಿಶೇಷ ಸಂಜೆ ಗಸ್ತು ಕರ್ತವ್ಯಕ್ಕೆ ನೇಮಿಸಿರುತ್ತಾರೆ. ಆದೇಶದಂತೆ ನಾನು ಸಂಜೆ 4:00 ಗಂಟೆಯಿಂದ ಗಸ್ತನ್ನು ಪ್ರಾರಂಭಿಸಿ ಡಿ.ವಿ.ಜಿ ರಸ್ತೆ, ಏಟಿಗಡ್ಡಪಲ್ಲಿ ಗ್ರಾಮ, ಹೊಸಹುಡ್ಯ ಗ್ರಾಮ ಗಳ ಕಡೆಗೆ ಗಸ್ತು ಮಾಡಿಕೊಂಡು ಸಾರ್ವಜನಿಕರಲ್ಲಿ ಕೋವಿಡ್ -19 ಬಗ್ಗೆ ಜಾಗೃತಿಯನ್ನು ಮೂಡಿಸಿಕೊಂಡು ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು, ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವಂತೆ, ಆಗಾಗ ಸ್ಯಾನಿಟೈಸರ್ ಅನ್ನು ಬಳಸುವಂತೆ  ತಿಳುವಳಿಕೆಯನ್ನು ನೀಡಿರುತ್ತೇನೆ. ನಂತರ ಸಂಜೆ ಸುಮಾರು 7:45 ಗಂಟೆಯಲ್ಲಿ ಘಂಟಂವಾರಿಪಲ್ಲಿಯ ಎನ್.ಹೆಚ್-44 ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ, ಯಾರೋ ಒಬ್ಬ ವ್ಯಕ್ತಿ ರಸ್ತೆಯಲ್ಲಿ ಮಾಸ್ಕ್ ಅನ್ನು ಧರಿಸದೆ ಓಡಾಡುತ್ತಿದ್ದು, ಆತನನ್ನು ಸಾಮಾಜಿಕ ಅಂತರದಿಂದ ಗಮನಿಸಲಾಗಿ ಸದರಿ ವ್ಯಕ್ತಿಯ ಕೈಗೆ ಕೋವಿಡ್-19 ಗೆ ಸಂಬಂದಿಸಿದ ಸೀಲ್ ಹಾಕಿರುತ್ತಾರೆ. ನಾನು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ನಾಗೇಂದ್ರ ಬಿನ್ ರಾಮನ್ನ, 26 ವರ್ಷ, ಆದಿಕರ್ನಾಟಕ ಜನಾಂಗ, ತರಕಾರಿ ವ್ಯಾಪಾರ, ವಾಸ-ಆನಂದ ವೈನ್ಸ್ ಪಕ್ಕ, ಘಂಟಂವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಸ್ವಂತ ಸ್ಥಳ ಚೊಕ್ಕನಪಲ್ಲಿ ಗ್ರಾಮ, ಇಂದಿರನಗರ, ಆಸ್ಪರಿ ಮಂಡಲಂ, ಕರ್ನೂಲ್ ಜಿಲ್ಲೆ, ಆಂದ್ರಪ್ರದೇಶ ಮೊ:8008666043 ಎಂತ ತಿಳಿಸಿದ್ದು, ಆತನನ್ನು ವಿಚಾರ ಮಾಡಲಾಗಿ ತಮ್ಮ ಸ್ವಂತ ಊರು ಆಂದ್ರಪ್ರದೇಶವಾಗಿದ್ದು, ವ್ಯಾಪಾರ ಮಾಡಿಕೊಂಡು ಘಂಟಂವಾರಿಪಲ್ಲಿಯಲ್ಲಿ ಇರುವುದಾಗಿ ತಿಳಿಸಿರುತ್ತಾರೆ. ಅಲ್ಲದೆ  ಆರೋಗ್ಯ ಇಲಾಖೆಯವರು ನನಗೆ ಹೊಂ ಕ್ವಾರೆಂಟೈನಲ್ಲಿರುವಂತೆ ಸೂಚಿಸಿ, ನನ್ನ ಕೈಗೆ ಸೀಲ್ ಹಾಕಿರುತ್ತಾರೆಂದು ತಿಳಿಸಿದನು. ನಾನು ನಿನ್ನ ಕೈಗೆ ಸೀಲ್ ಹಾಕಿದ್ದರೂ ಹೋಂ ಕ್ವಾರೆಂಟೈನ್ ನಲ್ಲಿರುವಂತೆ ತಿಳಿಸಿದ್ದರೂ, ಏಕೆ  ಈ ರೀತಿ ರಸ್ತೆಯಲ್ಲಿ ಓಡಾಡುತ್ತಿರುವುದೆಂದು ಕೇಳಿದಾಗ, ಮನೆಯಲ್ಲಿ ಇದ್ದು ಬೇಸರವಾಗಿರುವುದರಿಂದ ಮನೆಯಿಂದ ಹೊರಗಡೆ ಬಂದು ರಸ್ತೆಯಲ್ಲಿ ಓಡಾಡಿಕೊಂಡಿರುವುದಾಗಿ ತಿಳಿಸಿರುತ್ತಾನೆ. ಕೋವಿಡ್-19 ಬಗ್ಗೆ ಸದರಿ ಆಸಾಮಿಗೆ ಈಗಾಗಲೇ ಮಾಹಿತಿ ನೀಡಿ ಹೋಂ ಕ್ವಾರೆಂಟೈನ್ ಸೀಲ್ ಹಾಕಿದ್ದರೂ ಸಹಾ ಸಾಂಕ್ರಾಮಿಕ ರೋಗ ಹರುಡುವುದೆಂದು ತಿಳಿದಿದ್ದರೂ ಅದನ್ನು ನಿರ್ಲಕ್ಷಿಸಿ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಓಡಾಡಿಕೊಂಡಿರುತ್ತಾನೆ. ಸಾಂಕ್ರಾಮಿಕ ರೋಗದ ಬಗ್ಗೆ ನಿರ್ಲಕ್ಷತೆ ಮಾಡಿ ಹೊಂ ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸಿರುವ ಮೇಲ್ಕಂಡ ಆಸಾಮಿಯ ವಿರುದ್ದ ಮುಂದಿನ ಕ್ರಮಕ್ಕಾಗಿ ರಾತ್ರಿ 8:15 ಗಂಟೆಗೆ ಠಾಣೆಗೆ ಹಾಜರಾಗಿ ವರದಿಯನ್ನು ನೀಡಿರುತ್ತೇನೆ, ಎಂದು ನೀಡಿದ ದೂರನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.154/2020 ಕಲಂ. 323,324,447,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ: 03-07-2020 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಕೆ.ವಿ ರಮೇಶ ಬಿನ್ ಕೆ.ವೆಂಕಟರವಣಪ್ಪ, 58 ವರ್ಷ, ಬಲಜಿಗರು, ಜಿರಾಯ್ತಿ, ಕೊತ್ತಕೋಟೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:30/11/2015 ರಂದು ಬಾಗೇಪಲ್ಲಿ ತಾಲ್ಲೂಕು ಕಾರಕೂರು ಗ್ರಾಮದ ಹಳೆಯ ಸರ್ವೇ ನಂಬರ್ 75 ರಲ್ಲಿ 2.28 ಗುಂಟೆ ಕರಾಬು 2 ಎಕರೆ ಜಮೀನಿನ ಸ್ವಯಾರ್ಜಿತ ಮಾಲೀಕರಾದ ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ,  ಶ್ರೀನಿವಾಸಪುರ ಗ್ರಾಮದ ಮುನಿಶ್ಯಾಮಿ ಬಿನ್ ನೇಯ್ಗೆರಾಮಪ್ಪ ರವರು ನನಗೆ ಜಿ.ಪಿ.ಎ ಮಾಡಿಕೊಟ್ಟಿರುತ್ತಾರೆ. ಈ ಜಮೀನನ್ನು ಮುನಿಶ್ಯಾಮಿ ರವರು 762/1982-83 ರಂತೆ ಕ್ರಯಕ್ಕೆ ಪಡೆದುಕೊಂಡಿರುತ್ತಾರೆ. ನಂತರ ದಿನಾಂಕ:07/12/2015 ರಂದು ನಾನು  ಜಮೀನಿನ ಹೊಸ ಸರ್ವೇ ನಂಬರ್ 75/8 ರ 2.28 ಗುಂಟೆ ಕರಾಬು 2 ಎಕರೆ  ಅನ್ನು  2972/2015-16 ರಂತೆ ಕ್ರಯ ಮಾಡಿಕೊಂಡಿರುತ್ತೇನೆ. ಅಂದಿನಿಂದ ನಾನು ಅನುಭವದಲ್ಲಿರುತ್ತೇನೆ. ದಿನಾಂಕ:03/07/2020 ರಂದು ಬೆಳಿಗ್ಗೆ 10:00 ಗಂಟೆಯಲ್ಲಿ ನಾನು ಈ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ, ಮುನಿಶ್ಯಾಮಿ ರವರ ಮಗನಾದ ಶ್ರೀನಿವಾಸಪುರ ಗ್ರಾಮದ ನೇಯ್ಗೆ ಜನಾಂಗದ ಎಸ್.ಎಂ ನಾಗರಾಜ ಆತನ ತಮ್ಮನಾದ ಅಶೋಕ ರವರು ನೀಯಮ್ಮ ದೊಂಗ ನಾಕೊಡಕಾ ನಿನ್ನಿ ಚೆಂಪಕ ಕಾನಿ ಮಾಕಿ ಸಮಾದಾನಂ ಲೆದು ಎಂದು ನನ್ನನ್ನು ಅವಾಚ್ಯ ಶಬ್ದಗಗಳಿಂದ ಬೈಯ್ದು,  ನಾಗರಾಜನು ದೊಣ್ಣೆಯಿಂದ ನನ್ನ ಕೈಗಳಿಗೆ ಮತ್ತು ಕಾಲುಗಳಿಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದನು. ಅಶೋಕನು ತನ್ನ ಕೈಗಳಿಂದ ನನ್ನ ಕೆನ್ನೆಗೆ  ಮತ್ತು ಎಡ ಕಣ್ಣಿನ ಬಳಿ ಹೊಡೆದನು.  ನಾಗರಾಜನು  ಕೈಯಲ್ಲಿ ಮಚ್ಚನ್ನು ಹಿಡಿದು ಜಮೀನಿನ ತಂಟೆಗೆ ಬಂದರೆ ನಿನ್ನನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ಆಗ ನಮ್ಮ ಗ್ರಾಮದ ಅಂಜಿನಪ್ಪ ಬಿನ್ ಲೇಟ್ ವೆಂಕಟರಾಯಪ್ಪ ಮತ್ತು ಮಂಜುನಾಥ ಬಿನ್ ಲೇಟ್ ವೆಂಕಟರಾಯಪ್ಪ ಇತರರು  ಜಗಳವನ್ನು ಬಿಡಿಸಿರುತ್ತಾರೆ. ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಗಳಿಂದ ಹೊಡೆದು, ಪ್ರಾಣಬೆದರಿಕೆ ಹಾಕಿರುವ ನಾಗರಾಜ ಬಿನ್ ಮುನಿಶ್ಯಾಮಿ, ಅಶೋಕ ಬಿನ್ ಮುನಿಶ್ಯಾಮಿ ರವರ ಮೇಲೆ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.51/2020 ಕಲಂ. 32,34,43(A) ಕೆ.ಇ ಆಕ್ಟ್:-

          ದಿನಾಂಕ:02/07/2020 ರಂದು ರಾತ್ರಿ 11-00 ಗಂಟೆಯಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ,ಎಸ್,ಐ ಶ್ರೀ ಟಿ,ಎನ್.ಪಾಪಣ್ಣ, ಆದ ನಾನು ಠಾಣೆಯ ಸಿಬ್ಬಂದಿ, ಜೀಪ್ ಚಾಲಕ  ಎಪಿಸಿ-65 ವೆಂಕಟೇಶ್ ರವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣೆಯ ಸರಹದ್ದಿನ ರಾತ್ರಿ ಗಸ್ತು ಕರ್ತವ್ಯವನ್ನು ಪ್ರಾರಂಭಿಸಿ ಕಡದನಮರಿ , ಅಂಕಾಲಮಡಗು ಚೆಕ್ ಪೋಸ್ಟ್ ಓಬಳಾಪುರ, ಬಿಲ್ಲಾಂಡ್ಲಹಳ್ಲಿ , ರಾಯಪಲ್ಲಿ , ಕೋನಕುಂಟ್ಲ ಕಡೆ ಗಸ್ತು ಮಾಡಿಕೊಂಡು ದಿನಾಂಕ:03/07/2020 ರಂದು ಬೆಳಗಿನ ಜಾವ ಸುಮಾರು 3-00 ಗಂಟೆಯ ಸಮಯದಲ್ಲಿ ಕಂಬಾಲಪಲ್ಲಿ ಚೆಕ್ ಪೋಸ್ಟ್ ಬಳಿಗೆ ಬಂದಾಗ ಚೆಕ್ ಪೋಸ್ಟ್ ಕರ್ತವ್ಯದಲ್ಲಿ  ಪಿಸಿ 416 ಸಚಿನ್ ಕುಮಾರ್ ಚಂದ್ರಶೇಖರ್ ಬೋಳಗುಂಡ, ಆರೋಗ್ಯ ಇಲಾಖೆಯ ಪವನ್ ಕುಮಾರ್ ಕೆ ಆರ್ , ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಅಟೆಂಡರ್ ಕೆಲಸ ವಾಸ: ಬಟ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು  ಹಾಗೂ ನರಸಪ್ಪ ಬಿನ್ ಲಕ್ಷ್ಮಣ, ಗ್ರಾಮ ಸಹಾಯಕ ಯನುಮಲಪಾಡಿ ಗ್ರಾಮ  ಚಿಂತಾಮಣಿ ತಾಲ್ಲೂಕು  ರವರು ಕರ್ತವ್ಯದಲ್ಲಿದ್ದರು.  ಅದೇ ಸಮಯಕ್ಕೆ ಯಾರೋ 4 ಜನ ಆಸಾಮಿಗಳು 2 ದ್ವಿಚಕ್ರವಾಹನಗಳಲ್ಲಿ ಮುಂಗಾನಹಳ್ಳಿ ಕಡೆಯಿಂದ  ಕಂಬಾಲಹಳ್ಳಿ ಚೆಕ್ ಪೋಸ್ಟ್ ಬಳಿಗೆ ಬಂದಿದ್ದು, ನಾನು ಅವರನ್ನು ನಿಲ್ಲಿಸಿ ಪರಿಶೀಲಿಸಲು ಚೆಕ್ ಪೋಸ್ಟ್ ಸಿಬ್ಬಂದಿ ಪಿಸಿ 416 ಸಚಿನ್ ಕುಮಾರ್ ಚಂದ್ರಶೇಖರ್ ಬೋಳಗುಂಡ ರವರಿಗೆ ಸೂಚಿಸಿದ್ದು, ಸಿಬ್ಬಂದಿಯವರು ದ್ವಿಚಕ್ರವಾಹನಗಳನ್ನು ನಿಲ್ಲಿಸಲು ಸೂಚಿಸಿದಾಗ 2 ದ್ವಿಚಕ್ರವಾಹನಗಳಲ್ಲಿದ್ದ 4 ಜನ ಆಸಾಮಿಗಳು ಪೈಕಿ ದ್ವಿಚಕ್ರವಾಹನಗಳ ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರು ಆಸಾಮಿಗಳು ದ್ವಿಚಕ್ರವಾಹನಗಳಿಂದ ಜಿಗಿದು ಓಡಿ ಹೋಗಲು ಪ್ರಯತ್ನಿಸಿದ್ದು, ನಾನು ಮತ್ತು ಸಿಬ್ಬಂದಿಯವರು ಆಸಾಮಿಗಳನ್ನು ಹಿಂಬಾಲಿಸಲಾಗಿ ಇಬ್ಬರು ಆಸಾಮಿಗಳು ಕತ್ತಲಿನಲ್ಲಿ ಪರಾರಿಯಾಗಿರುತ್ತಾರೆ. ದ್ವಿಚಕ್ರವಾಹನಗಳಲ್ಲಿದ್ದ  ಮತ್ತಿಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸ ತಿಳಿಯಲಾಗಿ 1) ವಿ ಮಂಜುನಾಥ ಬಿನ್ ಜಯಪ್ಪ,38 ವರ್ಷ, ಗೊಲ್ಲರು, ವ್ಯವಸಾಯ, ವಾಸ: ರಂಗಸಮುದ್ರಂ,ಗ್ರಾಮ, ಬಿ ಕೊತ್ತಕೋಟ ಮಂಡಲಂ, ಚಿತ್ತುರು ಜಿಲ್ಲೆ ಮೊ ನಂ: 759997039,2) ನಾಗರಾಜ ಕೊಂ ನರಸಿಂಹಲು, 42 ವರ್ಷ, ಗೊಲ್ಲರು, ವ್ಯವಸಾಯ, ವಾಸ: ರಂಗಸಮುದ್ರಂ,ಗ್ರಾಮ, ಬಿ ಕೊತ್ತಕೋಟ ಮಂಡಲಂ, ಚಿತ್ತುರು ಜಿಲ್ಲೆ ಮೊ ನಂ: 7036633721 ಓಡಿ ಹೋದ ಆಸಾಮಿಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ 3) ಬಾಲಾಜಿ ಬಿನ್ ಲೆಟ್ ರಾಮಚಂದ್ರಪ್ಪ, 40 ವರ್ಷ, ಉಪ್ಪಾರ ಜಲಿಜ ಜನಾಂಗ,ವ್ಯವಸಾಯ,  ವಾಸ: ರಂಗಸಮುದ್ರಂ,ಗ್ರಾಮ, ಬಿ ಕೊತ್ತಕೋಟ ಮಂಡಲಂ, ಚಿತ್ತೂರು ಜಿಲ್ಲೆ . 4) ಪ್ರಭಾಕರ ಬಿನ್ ನಾರೆಪ್ಪ,38 ವರ್ಷ, ವಾಲ್ಮೀಕಿ ಜನಾಂಗ, ವ್ಯವಸಾಯ, ವಾಸ: ರಂಗಸಮುದ್ರಂ,ಗ್ರಾಮ, ಬಿ ಕೊತ್ತಕೋಟ ಮಂಡಲಂ, ಚಿತ್ತೂರು ಜಿಲ್ಲೆ. ಆಂದ್ರಪ್ರದೇಶ.ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಬಿಸಾಕಿದ್ದ ಗೊಣಿ ಚೀಲಗಳಲ್ಲಿದ್ದ ಬಾಕ್ಸ್ ಗಳ ಬಗ್ಗೆ ಕೇಳಲಾಗಿ  ಇವು ಮದ್ಯದ ಬಾಕ್ಸ್ ಗಳೆಂದು ಇವುಗಳನ್ನು ನಮ್ಮ  ಗ್ರಾಮದಲ್ಲಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸಲು ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಪುರ ಕ್ರಾಸ್ ಬಳಿಯಿರುವ ಬಾರ್ ನಿಂದ ತೆಗೆದುಕೊಂಡು ಬಂದಿರುವುದಾಗಿ ತಿಳಿಸಿದ್ದು, ಬಾಕ್ಸ್ ಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಳ್ಳಲು  ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ 1 ಗೋಣಿ ಚೀಲದಲ್ಲಿದ್ದ 3 ರಟ್ಟಿನ ಬಾಕ್ಸ್ ಗಳನ್ನು ಪರಿಶೀಲಿಸಲಾಗಿ  1) OLD TAVERN WHISKY 180 ML ನ , 109 ಪಾಕೆಟ್ ಗಳಿದ್ದು, ಒಂದರ ಬೆಲೆ 86.75  ರೂಗಳಾಗಿರುತ್ತೆ.  ಮತ್ತೋಂದು ಗೋಣಿ ಚೀಲದಲ್ಲಿದ್ದ 2 ರಟ್ಟಿನ ಬಾಕ್ಸ್ ಗಳನ್ನು  ಪರಿಶೀಲಿಸಲಾಗಿ 2) HAYWARDS WHISKY  90 ML   ನ 154 ಪಾಕೆಟ್ ಗಳಿದ್ದು ಒಂದರ ಬೆಲೆ 35.13. ರೂಗಳಾಗಿರುತ್ತೆ. ಒಟ್ಟು ಮದ್ಯವು 33 ಲೀಟರ್ 480 ಎಂ ಎಲ್ ಮದ್ಯವಿದ್ದು, ಇವುಗಳ ಒಟ್ಟು ಬೆಲೆ 14.865. ರೂಗಳಾಗಿರುತ್ತೆ. ಇವುಗಳಲ್ಲಿ ತಲಾ ಒಂದೊಂದು ಪಾಕೆಟ್ ಗಳನ್ನು ಎಪ್ ಎಸ್ ಎಲ್ ತಜ್ಞರ ಪರೀಕ್ಷೆಗಾಗಿ ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿ ಹೊಲಿದು BTL ಅಕ್ಷರದ ಸೀಲ್ ನಿಂದ ಸೀಲ್ ಮಾಡಿರುತ್ತೆ.  ನಂತರ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ದ್ವಿಚಕ್ರವಾಹನಗಳನ್ನು ಪರಿಶೀಲಿಸಲಾಗಿ 1) ಎಪಿ 07ಎ ಎಮ್ 4259 ನೊಂದಣಿ ಸಂಖ್ಯೆಯ ಬಜಾಜ್ ಪ್ಲಾಟೀನ್ ಸಿಲ್ವರ್ ಬಣ್ಣದ ದ್ವಿಚಕ್ರವಾಹನವಾಗಿರುತ್ತೆ. 2) ನೊಂದಣಿ ಸಂಖ್ಯೆಯಿಲ್ಲದ ಸ್ಟಾರ್ ಸಿಟಿ ಕೆಂಪು ಬಣ್ಣದ ದ್ವಿಚಕ್ರವಾಹನವಾಗಿರುತ್ತೆ. ಮೇಲ್ಕಂಡ ಮದ್ಯದ ಮಾಲುಗಳನ್ನು ಮತ್ತು ಮದ್ಯ ಸಾಗಾಣಿಕೆ ಮಾಡುತ್ತಿದ್ದ,ಇಬ್ಬರು ಆಸಾಮಿಗಳನ್ನು ಮತ್ತು 2 ದ್ವಿಚಕ್ರವಾಹನಗಳನ್ನು  ಪಂಚರ ಸಮಕ್ಷಮ ವಿದ್ಯುತ್ ದ್ವೀಪದ ಬೆಳಕಿನಲ್ಲಿ ಬೆಳಗಿನ ಜಾವ 3-45 ಗಂಟೆಯಿಂದ  4-45 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಇಬ್ಬರು ಆರೋಪಿಗಳನ್ನು   ಮತ್ತು ಮದ್ಯದ  ಮಾಲುಗಳನ್ನು ಹಾಗೂ 2 ದ್ವಿಚಕ್ರವಾಹನಗಳ ಸಮೇತ ಬೆಳಗಿನ ಜಾವ  5-15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಗಳ ವಿರುದ್ದ ಠಾಣಾ ಮೊ.ಸಂ 51/2020 ಕಲಂ:32,34,43(ಎ) ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.67/2020 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ:03-07-2020 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾಧಿಯಾದ ರಾಘವೇಂದ್ರ.ಎಸ್. ಬಿನ್ ಶಂಕರಪ್ಪ.ಎಸ್.ಎನ್, 20 ವರ್ಷ, ನೇಕಾರರು, ಬಿ.ಕಾಂ ವ್ಯಾಸಾಂಗ, ದಿಬ್ಬೂರಹಳ್ಳಿ ಗ್ರಾಮ , ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತಾನು ಮೇಲ್ಕಂಡ ವಿಳಾಸದಾರನಾಗಿದ್ದು ಈಗ್ಗೆ  4 ವರ್ಷಗಳಿಂದ ತಾನು ತಮ್ಮ ತಂದೆ ತಾಯಿಯೊಂದಿಗೆ ಸಾದಲಿ ಗ್ರಾಮದ ತಮ್ಮ ತಾತನವರ ಮನೆಯಲ್ಲಿ  ವಾಸವಾಗಿರುತ್ತೇನೆ. ತಮ್ಮ ತಂದೆ ತಾಯಿಗೆ ಇಬ್ಬರು ಮಕ್ಕಳಿದ್ದು ಒಂದನೇ ಪ್ರಿಯಾಂಕ ಎರಡನೇ ನಾನಾಗಿರುತ್ತೇನೆ. ತಮ್ಮ ತಂದೆಯಾದ ಶಂಕರಪ್ಪ. ಎಸ್.ಎನ್ ಬಿನ್ ಲೇಟ್ ನಾರಾಯಣಪ್ಪ, 50 ವರ್ಷ ರವರು ಲಾರಿ ಕ್ಲೀನರ್ ಕೆಲಸ ಮಾಡಿಕೊಂಡಿದ್ದು ಟಮ್ಯಾಟೋ ಸಾಗಿಸುವ ಲಾರಿಗಳಿಗೆ ಹೋಗುತ್ತಿರುತ್ತಾರೆ. ದಿನಾಂಕ: 02/07/2020 ರಂದು ಸಂಜೆ ಸುಮಾರು 2.00 ಗಂಟೆ ಸಮಯಕ್ಕೆ ತಮ್ಮ ತಂದೆ ಲಾರಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋಗಿರುತ್ತಾರೆ. ಇದೇ ದಿನ ರಾತ್ರಿ ಸುಮಾರು 1.00 ಗಂಟೆ ಸಮಯದಲ್ಲಿ ತಾನು ಸಾದಲಿ ಗ್ರಾಮದ ತಮ್ಮ ಮನೆಯಲ್ಲಿದ್ದಾಗ ಸಾದಲಿ ಗ್ರಾಮದ ವಾಸಿ ಮಲ್ಲಿಕಾರ್ಜುನಪ್ಪ ಬಿನ್ ಲೇಟ್ ಪುಟ್ಟಣ್ಣ್ಪರವರು ತಮ್ಮ ಮನೆಯ ಬಳಿ ಬಂದು ತಮ್ಮ ತಂದೆ ಶಂಕರಪ್ಪರವರು ಬರುತ್ತಿದ್ದ ಲಾರಿ ತಿಮ್ಮನಾಯಕನಹಳ್ಳಿ ಗೇಟ್ ಬಳಿ ಅಫಘಾತವಾಗಿ ಗಾಯಗೊಂಡು ಮೃತನಾಗಿರುತ್ತಾನೆಂತ ತಿಳಿಸಿದ್ದು ಅದರಂತೆ ತಾನು, ತಮ್ಮ ಗ್ರಾಮದ ವಾಸಿಗಳಾದ ಸಂತೋಷ ಬಿನ್ ಮುನಿಸ್ವಾಮಿ ಮತ್ತು  ಮಲ್ಲಿಕಾರ್ಜುನಪ್ಪರವರೊಂದಿಗೆ ಅಫಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ  ಚಿಂತಾಮಣಿ-ಬಾಗೇಪಲ್ಲಿ ರಸ್ತೆಯ ತಿಮ್ಮನಾಯಕನಹಳ್ಳಿ ಗೇಟ್ ಮುಂದೆ ಇರುವ ದೊಡ್ಡ ಮೋರಿಯ ಬಳಿ AP-39-W-5698  ಲಾರಿ ನಂಬರಿನ ಟಮ್ಯಾಟೋ ತುಂಬಿದ ಲಾರಿ  ಅಫಘಾತವಾಗಿದ್ದು ಅಲ್ಲಿದ್ದವರನ್ನು ವಿಚಾರಮಾಡಲಾಗಿ ಇದೇ ದಿನ ರಾತ್ರಿ ಸುಮಾರು 11.15 ಗಂಟೆ ಸಮಯದಲ್ಲಿ ಚಿಂತಾಮಣಿ ಕಡೆಯಿಂದ ಟಮ್ಯಾಟೋ ತುಂಬಿಕೊಂಡು ಬರುತ್ತಿದ್ದ AP-39-W-5698  ಲಾರಿಯ  ಚಾಲಕ ಲಾರಿಯನ್ನು ಮೇಲ್ಕಂಡ ಸ್ಥಳದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಬಿದ್ದಿದ್ದು ಲಾರಿಯಲ್ಲಿದ್ದ ಚಾಲಕನ ಬಲಗೈಗೆ ರಕ್ತಗಾಯವಾಗಿದ್ದು ಲಾರಿಯಲ್ಲಿದ್ದ ಕ್ಲೀನರ್ ಲಾರಿಯ ಕೆಳಗೆ ಸಿಕ್ಕಿ ಸ್ಥಳದಲ್ಲಿಯೇ ಮೃತನಾಗಿದ್ದು ಗಾಯಗೊಂಡ ಚಾಲಕನನ್ನು ಹಾಗು ಮೃತನ ಮೃತದೇಹವನ್ನು ಅಂಬ್ಯೂಲೆನ್ಸ್ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುವುದಾಗಿ ತಿಳಿಸಿರುತ್ತಾರೆ. ನಂತರ ತಾವು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ತಮ್ಮ ತಂದೆಯವರ ಮೃತದೇಹ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ. ತಮ್ಮ ತಂದೆಯವರ ತಲೆ ಮತ್ತು ದೇಹದ ಇತರೇ ಕಡೆ ರಕ್ತ ಗಾಯಗಳಾಗಿದ್ದು ಮೃತರಾಗಿರುತ್ತಾರೆ. ಆದ್ದರಿಂದ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಫಘಾತಪಡಿಸಿ ತಮ್ಮ ತಂದೆಯವರ ಸಾವಿಗೆ ಕಾರಣನಾದ AP-39-W-5698  ಲಾರಿ ಮತ್ತು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿರುವ ದೂರಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.163/2020 ಕಲಂ. 4,8,9,11 KARNTAKA PREVENTION OF COW SLANGHTER & CATTLE PREVENTION ACT-1964, 11(1) (A),11(1) (D) PREVENTION OFCRUELTY TO ANIMALS ACT, 1960, 177,192(A) INDIAN MOTOR VEHICLES ACT & 1,2,3,4,125(E) The Central Motor Vehicle Rules 2015:-

          ದಿನಾಂಕ 02/07/2020 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ನವೀನ್ ಎಸ್.ವಿ. ಬಿನ್ ವೆಂಕಟೇಶ್, 29 ವರ್ಷ, ಶೆಟ್ಟಿಬಲಜಿಗ, ಪೋಟೋಗ್ರಾಫರ್ , ಎನ್. ಕೆ. ಸ್ಟುಡಿಯೋ, ವಾಸ ಬಿ.ಜಿ.ಎಸ್. ಸ್ಕೂಲ್ ಹತ್ತಿರ,  ಸಾಯಿಬಾಬ ದೇವಸ್ಥಾನ ರಸ್ತೆ, ಸಾಯಿನಗರ, ಗೌರಿಬಿದನೂರು ಟೌನ್. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 02-07-2020 ರಂದು  ಬೆಳಿಗ್ಗೆ 09-30 ಗಂಟೆಯಲ್ಲಿ ತಾನು ಮನೆಯಲ್ಲಿದ್ದಾಗ ತನ್ನ ಸ್ನೇಹಿತ ಹುದುಗೂರಿನ ಶಿವು ಎಂಬುವರು ತನಗೆ ಪೋನ್ ಮಾಡಿ ಹುದುಗೂರಿನಿಂದ ಗೌರಿಬಿದನೂರು ಕಡೆಗೆ  ಹಸಿರು ಬಣ್ಣದ ಆಟೋ ನಂ ಕೆ.ಎ.06-ಎ-9569 ಆಟೋದಲ್ಲಿ ನಾಟಿ ಹಸು ಮತ್ತು ಸೀಮೆ ಹಸು ಕರುವನ್ನು  ಕಸಾಯಿಖಾನೆಗೆ ಸಾಗಾಣಿಕೆಯನ್ನು ಮಾಡುತ್ತಿರುವ ಬಗ್ಗೆ ತಿಳಿಸಿದನು. ನಂತರ ತಾನು ಮತ್ತು ತನ್ನ ಸ್ನೇಹಿತ ನಿಖಿಲ್ ಬಿನ್ ಲೇಟ್ ಬಿ.ಕೆ. ರಮೇಶ್  ಇಬ್ಬರು  ಗಂಗಸಂದ್ರ  ಗ್ರಾಮದ ಬಳಿ ಹೋಗುತ್ತಿದ್ದಾಗ ಎದುರುಗಡೆಯಿಂದ  ಹಸಿರು ಬಣ್ಣದ ಆಟೋ ನಂ ಕೆ.ಎ.06-ಎ-9569 ಬರುತ್ತಿದ್ದು ಅನುಮಾನಗೊಂಡು ನಿಲ್ಲಿಸಿ ನೋಡಲಾಗಿ ಆಟೋದಲ್ಲಿ  ಒಂದು ನಾಟಿ ಹಸು ಮತ್ತು ಒಂದು ಸೀಮೆ ಹಸುವಿನ ಕರು ಇತ್ತು. ಆಟೋಡ್ರೈವರ್ ನನ್ನು ಕೇಳಲಾಗಿ ನ್ಯಾಮಗೋಂಡ್ಲು ಗ್ರಾಮದ ಬಾಲಪ್ಪ ಎಂಬುವರ  ಬಳಿ  ಗೌರಿಬಿದನೂರಿನ ಸಂತೇ ತೋಪಿನ ಕಸಾಯಿಖಾನೆಯ ರುಮಾನ್ ಬಿನ್ ಸಾಲಾರ್ ಮತ್ತು ಸಾಲಾರ್ ರವರು ಒಂದು ನಾಟಿ ಹಸು ಮತ್ತು ಒಂದು ಸೀಮೆ ಹಸುವಿನ ಕರುವನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ಖರೀದಿಸಿರುತ್ತಾರೆ.  ಅದರಂತೆ ತಾನು ಒಂದು ನಾಟಿ ಹಸು ಮತ್ತು ಒಂದು ಸೀಮೆ ಹಸು ಕರುವನ್ನು ಆಟೋದಲ್ಲಿ  ಗೌರಿಬಿದನೂರು ಟೌನ್ ನ ಸಂತೇತೋಪಿನಲ್ಲಿರುವ ರುಮಾನ್ ಮತ್ತು ಸಾಲಾರ್ ರವರ  ಕಸಾಯಿಖಾನೆಗೆ ಸಾಗಾಣಿಕೆಯನ್ನು ಮಾಡುತ್ತಿದ್ದೇನೆಂದು  ಹೇಳಿದನು. ನಂತರ ಆಟೋ ಡ್ರೈವರ್ ನ ಹೆಸರು ಕೇಳಲಾಗಿ ಮುಸ್ತಾಫಾ ಬಿನ್ ಅಮೀರ್ ಖಾನ್, 47 ವರ್ಷ, ಕಾಕನತೋಪು, ಗೌರಿಬಿದನೂರು ಟೌನ್ ಎಂದು ಹೇಳಿದನು. ಮೇಲ್ಕಂಡ ಆಟೋ ಡ್ರೈವರ್ ಮುಸ್ತಾಫಾ, ಸಂತೇ ತೋಪಿನ ಕಸಾಯಿಖಾನೆಯ ರುಮಾನ್ ಬಿನ್ ಸಾಲಾರ್ , ಸಾಲಾರ್ ಮತ್ತು ನ್ಯಾಮಗೋಂಡ್ಲು ಬಾಲಪ್ಪರವರು ಒಂದು ನಾಟಿ ಹಸು ಮತ್ತು ಒಂದು ಸೀಮೆ ಹಸುವಿನ ಕರುವನ್ನು ಅಮಾನವೀಯ ರೀತಿಯಲ್ಲಿ ಕಸಾಯಿಖಾನೆಗೆ ಕತ್ತರಿಸಲು ಅಕ್ರಮವಾಗಿ ಸಾಗಾಣಿಕೆಯನ್ನು ಮಾಡುತ್ತಿರುತ್ತಾರೆ. ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.164/2020 ಕಲಂ.279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ 02/07/2020 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮಿನರಸಮ್ಮ ಕೊಂ ಸುನಿಲ್ ,  24 ವರ್ಷ, ಆದಿ ಕರ್ನಾಟಕ,  ಕೂಲಿ ಕೆಲಸ, ವಾಸ ಮುಧುಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ 1 ನೇ ರಿತಿಕ್ , 6 ನೇ ವರ್ಷ,  2ನೇ ನಿಹಾರಿಕ, 04 ವರ್ಷ,  ಆಗಿದ್ದು, ದಿನಾಂಕ 27-06-2020 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ತಾನು ಮನೆಯಲ್ಲಿದ್ದಾಗ ತನ್ನ ಮಗ ರಿತಿಕ್ ಆಟ ಡಲು ಹೊರಗೆ ಹೋಗಿದ್ದು, ತಮ್ಮ ಗ್ರಾಮದ ವಾಸಿ ರಾಮು ಎಂಬುವವರು ತನಗೆ ರಿತಿಕ್  ಗೆ  ಆಕ್ಸಿಡೆಂಟ್  ಆಗಿರುವ ಬಗ್ಗೆ ತಿಳಿಸಿದರು. ತಾನು ಬಂದು ನೋಡಿದ್ದು ತಮ್ಮ ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆ ದಾಟುವಾಗ ತನ್ನ ಮಗನಿಗೆ ಕೋಟಾಲದಿನ್ನೆ  ಕಡೆಯಿಂದ  ಗೌರಿಬಿದನೂರು ಕಡೆಗೆ ಹೋಗುತ್ತಿದ್ದ ಕೆ.ಎ-03-ಎಂ.ಡಬ್ಲೂ- 8274 ಮಾರುತಿ ಸ್ವಿಫ್ಟ್ ಕಾರು ಅಪಘಾತವನ್ನು ಮಾಡಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾರೆ.  ತನ್ನ ಮಗನಿಗೆ  ಎಡಕಾಲಿಗೆ ರಕ್ತಗಾಯವಾಗಿದ್ದು, ತನ್ನ ಮಗನನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ ತನ್ನ ಮಗನನ್ನು ಬೆಂಗಳೂರಿನ ಸಂಜಯ್ ಗಾಂದಿ  ಆಸ್ಪತ್ರೆಯಲ್ಲಿ  ಚಿಕಿತ್ಸೆಗಾಗಿ ಸೇರಿಸಿದ್ದು, ತನ್ನ ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ  ತಡವಾಗಿ ಬಂದು ದೂರು ನೀಡುತ್ತಿದ್ದು, ತನ್ನ ಮಗನಿಗೆ ಅಪಘಾತ ಮಾಡಿ ಸ್ಥಳದಲ್ಲಿ ನಿಲ್ಲಿಸದೇ ಹೋಗಿರುವ ಕೆ.ಎ-03-ಎಂ.ಡಬ್ಲೂ- 8274 ಮಾರುತಿ ಸ್ವಿಫ್ಟ್ ಕಾರು ಮತ್ತು ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.67/2020 ಕಲಂ.279,337 ಐ.ಪಿ.ಸಿ :-

          ದಿನಾಂಕ 02/07/2020 ರಂದು ಮಧ್ಯಾಹ್ನ 13-00 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಅರುಣ ಕೋಂ ಮುರಳಿ, 26 ವರ್ಷ, ಕೆಂದನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆ ಪಡೆದು ಠಾಣೆಗೆ ಹಾಜರಾಗಿ ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ: ದಿನಾಂಕ 02/07/2020 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ತಾನು ತನ್ನ ತವರು ಮನೆಯಾದ ಬಾಗೇಪಲ್ಲಿ ತಾಲ್ಲೂಕು ಗೌನವಾರಪಲ್ಲಿ ಗ್ರಾಮದಿಂದ ಕೆಎ-40-ವೈ-7689 ನೋಂದಣಿ ಸಂಖ್ಯೆ ಟಿ.ವಿ.ಎಸ್. ವಿಕ್ಟರ್ ದ್ವಿಚಕ್ರವಾಹನದಲ್ಲಿ ತನ್ನ ಗಂಡ ವಾಹನವನ್ನು ಚಾಲನೆ ಮಾಡಿಕೊಂಡು ತಾನು ಮತ್ತು ತನ್ನ 6 ತಿಂಗಳ ಮಗು ಹಿಂಬದಿಯಲ್ಲಿ ಕುಳಿತುಕೊಂಡು ಚೇಳೂರು-ಚಿಂತಾಮಣಿ ರಸ್ತೆಯ ಮೋಟಮಾಕಲಹಳ್ಳಿ ಕ್ರಾಸ್- ನಡಂಪಲ್ಲಿ ಕ್ರಾಸ್ ನಡುವಿನ ರಸ್ತೆಯಲ್ಲಿ ಬರುತ್ತಿರುವಾಗ ರಸ್ತೆಯಲ್ಲಿ ಗುಂಡಿ ತಪ್ಪಿಸಲು ತನ್ನ ಗಂಡ ಎದುರುಗಡೆಯಿಂದ ಬಂದ ಕೆಎ-03-ಇಇ-8411 ನೋಂದಣಿ ಸಂಖ್ಯೆಯ ಸ್ಲೇಂಡರ್ ದ್ವಿಚಕ್ರವಾಹನಕ್ಕೆ ತಾಕಿಸಿ ತಮ್ಮ ದ್ವಿಚಕ್ರವಾಹನವನ್ನು ಕೆಳಗೆ ಬಿಳಿಸಿದ ಪರಿಣಾಮ ತನಗೆ ಬಲಮೊಣಕಾಲು ಕೆಳಗೆ ಮುರಿದು, ಎಡಭಾಗದ ಸೊಂಟಕ್ಕೆ ಮೂಗೇಟು ಆಗಿದ್ದು, ತನ್ನ ಗಂಡನಾದ ಮುರಳಿಗೆ ಬಲಮೊಣಕಾಲು ಕೆಳಗೆ, ಪಾದಕ್ಕೆ, ಬಲಗೈ ಮಧ್ಯದಬೆರಳಿಗೆ ರಕ್ತಗಾಯವಾಗಿ ಬಲಮುಂಗೈಗೆ ಮೂಗೇಟು ಆಗಿರುತ್ತದೆ. ಆದರೆ ತನ್ನ ಮಗುವಿಗೆ ಯಾವುದೇ ರೀತಿಯ ಗಾಯ ಆಗದೇ ಇದ್ದು, ಕೆಎ-03-ಇಇ-8411 ನೋಂದಣಿ ಸಂಖ್ಯೆಯ ಸ್ಲೇಂಡರ್ ದ್ವಿಚಕ್ರವಾಹನ ಸವಾರನಿಗೂ ಬಲಕಾಲುಗೆ ಗಾಯವಾಗಿದ್ದು, ಅಲ್ಲಿದ್ದವರು ತಮ್ಮನ್ನು ಉಪಚರಿಸಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ 108 ಅಂಬ್ಯೂಲೆನ್ಸ್ ವಾಹನದಲ್ಲಿ ಕಳುಹಿಸಿಕೊಟ್ಟಿದ್ದು, ಅತೀವೇಗ ಮತ್ತು ಅಜಾಗರೂಕತೆಯಿಂದ ದ್ವಿಚಕ್ರವಾಹನವನ್ನು ತನ್ನ ಗಂಡನಾದ ಮುರಳಿ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದ್ದು, ಮುರಳಿ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ದೂರು.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.68/2020 ಕಲಂ. 279,304(A) ಐ.ಪಿ.ಸಿ :-

          ದಿನಾಂಕ 03-07-2020 ರಂದು ಬೆಳಗ್ಗೆ 08.00 ಗಂಟೆಗೆ ಪಿರ್ಯಾಧಿದಾರರಾದ ಮಂಜುನಾಥ ಬಿನ್ ಚಿಕ್ಕಮಾರಪ್ಪ, 35 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಶೆಟ್ಟಿಕೆರೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ 60 ವರ್ಷ ವಯಸ್ಸಿನ ಚಿಕ್ಕಮಾರಪ್ಪ ರವರ ಹೆಸರಿನಲ್ಲಿ ತಮ್ಮ ಗ್ರಾಮದ ಸರ್ವೆ ನಂ 29/1 ರಲ್ಲಿನ 2 ಎಕರೆ ಜಮೀನಿನಲ್ಲಿರುವ ಟಮೋಟೋ ಬೆಳೆ ಬೆಳೆದಿದ್ದು ಪಸಲು ಬಂದಿರುತ್ತದೆ. ದಿನಾಂಕ 03-07-2020 ರಂದು ಮುಂಜಾನೆ ಟಮೋಟೋವನ್ನು ಬಾಕ್ಸ್ ಗಳಲ್ಲಿ ತುಂಬಿಸಿ ಕೆ.ಎ-01 ಎ.ಹೆಚ್-1268 ನೊಂದಣಿ ಸಂಖ್ಯೆಯ 407 ಟೆಂಪೋಗೆ ಲೋಡ್ ಮಾಡಿದ್ದು ಟೆಂಪೋದಲ್ಲಿ ಚಾಲಕ ಚಂದ್ರಪ್ಪ, ಕ್ಲೀನರ್ ರಾಮಚಂದ್ರ ಹಾಗೂ ತಮ್ಮ ತಂದೆಯಾದ ಚಿಕ್ಕಮಾರಪ್ಪ ರವರು ಚಿಂತಾಮಣಿ  ಮಾರುಕಟ್ಟೆಗೆ ಹೋಗಲು ಹೋದರು. ಹೋದ ಸ್ವಲ್ಪ ಸಮಯದ ನಂತರ 5.30 ಗಂಟೆ ಸಮಯದಲ್ಲಿ ಚಾಲಕ ಚಂದ್ರಪ್ಪ ತನಗೆ ಕರೆ ಮಾಡಿ ಟೆಂಪೋ ಶೆಟ್ಟಿಕೆರೆ-ಬುರುಡಗುಂಟೆ ಟಾರ್ ರಸ್ತೆಯ ಬುರುಡಗುಂಟೆ ಗ್ರಾಮದ ಮಲ್ಲಿಕಾರ್ಜುನಪ್ಪ ಜಮೀನು ಬಳಿ ಉರುಳಿ ಬಿದ್ದಿದ್ದು ಕೂಡಲೇ ಬರುವಂತೆ ತಿಳಿಸಿದಾಗ ತಾನು ಮತ್ತು ತಮ್ಮ ಗ್ರಾಮದ ಮುನಿರೆಡ್ಡಿ ರವರು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಟೆಂಪೋ ರಸ್ತೆಯ ಬಲಬಾಗಕ್ಕೆ ಬಿದ್ದು ಪುನಃ ಎಡಕ್ಕೆ ಉರುಳಿ ಬಿದ್ದ ಪರಿಣಾಮ ಎಡಭಾಗದಲ್ಲಿ ಕುಳಿತಿದ್ದ ತಮ್ಮ ತಂದೆ ಟೆಂಪೋ ಕೆಳಗೆ ಸಿಲುಕಿದ್ದರು ಕೂಡಲೇ ಅಲ್ಲಿದ್ದವರು ಟೆಂಪೋವನ್ನು ಎತ್ತಿದ್ದು ಟೆಂಪೋ ಕೆಳಗೆ ಸಿಲುಕಿದ್ದ ತಮ್ಮ ತಂದೆಯ ಎಡ ಕಣ್ಣಿನ ಮೇಲ್ಬಾಗ ಎಡಕೆನ್ನೆಗೆ ಗಾಯವಾಗಿ ಕತ್ತಿನ ಭಾಗದಲ್ಲಿ ಟೆಂಪೋ ಬಿದ್ದಿರುವುದರಿಂದ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಆದರೆ ಟೆಂಪೋ ಚಾಲಕ ಮತ್ತು ಕ್ಲೀನರ್ ಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ವಿಚಾರಿಸಲಾಗಿ ಕೆ.ಎ-01 ಎ.ಹೆಚ್-1268 407 ಟೆಂಪೋ ಚಾಲಕ ಮಾರುಕಟ್ಟೆಗೆ ಹೋಗುವ ಸಲುವಾಗಿ ಟಮೋಟೋ ಲೋಡ್ ಇದ್ದ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದಾಗ ವಾಹನ ನಿಯಂತ್ರಣ ತಪ್ಪಿ ಶೆಟ್ಟಿಕೆರೆ-ಬುರುಡಗುಂಟೆ ಟಾರ್ ರಸ್ತೆಯಲ್ಲಿನ ಮಲ್ಲಿಕಾರ್ಜುನಪ್ಪ ಜಮೀನು ಬಳಿ ಬಲಭಾಗಕ್ಕೆ ಬಿದ್ದು ಪುನಃ ಎಡಭಾಗಕ್ಕೆ ಬಿದ್ದರುವುದಾಗಿ ತಿಳಿಯಿತು. ಕೂಡಲೇ ಮೃತದೇಹವನ್ನು ಚಿಂತಾಮಣಿ ಸರ್ಕಾರಿ ಆಸ್ವತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದು ಅಪಘಾತಕ್ಕೆ 407 ಟೆಂಪೋ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿದ್ದರಿಂದ ಆತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಲಿಖಿತ ದೂರಿನ ಸಾರಾಂಶವಾಗಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.69/2020 ಕಲಂ. 323,324,504,506 ಐ.ಪಿ.ಸಿ & 3(1)(r),3(1)(s) The Scheduled Castes and the Scheduled Tribes (Prevention of Atrocities) Amendment Bill:-

          ದಿನಾಂಕ 03-07-2020 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶಂಕರಪ್ಪ ಬಿನ್ ರಂಗಪ್ಪ, 48 ವರ್ಷ, ಬಲಜಿಗರು, ಜಿರಾಯ್ತಿ, ವಾಸ ಮುರುಗಮಲ್ಲಾ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ತಂದು ಬೆಳಗ್ಗೆ 11.00 ಗಂಟೆಗೆ ಠಾಣೆಗೆ ಹಾಜರುಪಡಿಸಿದರ ಸಾರಾಂಶವೇನೆಂದರೆ, ತಮ್ಮ ಬಾಬತ್ತು ಜಮೀನಿನಲ್ಲಿ ಚಲಮಕೋಟೆ ಗ್ರಾಮದ ಆದಿ ಕರ್ನಾಟಕ ಜನಾಂಗದ ರಾಮಕ್ರಿಷ್ಣಪ್ಪ ಬಿನ್ ಚಿಕ್ಕನಾರೆಪ್ಪ ರವರು ಕೆಲಸ ಮಾಡಿಕೊಂಡಿದ್ದು, ದಿನಾಂಕ 02-07-2020 ರಂದು ಸಂಜೆ ತಾನು ಮತ್ತು ರಾಮಕ್ರಿಷ್ಣಪ್ಪ ರವರು ಜಮೀನಿನ ಕೆಲಸ ಮುಗಿಸಿಕೊಂಡು ತಮ್ಮ ಮನೆಯ ಬಳಿ ಬಂದಾಗ ತಮ್ಮ ಮನೆಯ ಪಕ್ಕದ ವಾಸಿಯಾದ ಅಕ್ಬರ್ ಬಿನ್ ಮೆಹಬೂಬ್ ಸಾಬ್ ರವರು ರಾತ್ರಿ ಸುಮಾರು 10.30 ಗಂಟೆ ಸಮಯದಲ್ಲಿ ಹಳೇ ವೈಮನಸ್ಸಿನಿಂದ ತನ್ನಮೇಲೆ ಜಗಳ ತೆಗೆದು “ಲೋಫರ್ ನನ್ನ ಮಗನೇ, ಸೂಳೆ ನನ್ನ ಮಗನೇ, ನಿನ್ನಮ್ಮನೇ ಕೇಯ್ಯಾ” ಎಂದು ಅವಾಚ್ಯವಾಗಿ ಬೈಯ್ದಾಡುತ್ತಾ ಏಕಾಏಕಿ ಬಂದು ತನ್ನ ಕೈಯಲ್ಲಿದ್ದ ಲಾಂಗ್ ನಂತಹ ಆಯುಧದಿಂದ ತನ್ನ ಹಣೆಗೆ ಹೊಡೆದು ರಕ್ತಗಾಯಪಡಿಸಿದನು. ಆಗ ಪಕ್ಕದಲ್ಲಿಯೇ ಇದ್ದ ರಾಮಕ್ರಿಷ್ಣಪ್ಪ, ಆದಿ ಕರ್ನಾಟಕ ಜನಾಂಗ ರವರು ಅಡ್ಡಬರಲಾಗಿ ಅವರಿಗೂ ಸಹ ಅದೇ ಆಯುಧದಿಂದ ಬಲಕೈಗೆ ಹೊಡೆದು ರಕ್ತಗಾಯಪಡಿಸಿದನು. ತಮ್ಮ ಕೂಗಾಟ ಕೇಳಿ ಅಲ್ಲಿದ್ದ ಹರೀಶ್ ಬಿನ್ ಆಂಜಪ್ಪ, ವೆಂಕಟಲಕ್ಷ್ಮಮ್ಮ ಕೋಂ ನಾರಾಯಣಸ್ವಾಮಿ ಮತ್ತು ಇತರರು ಬಂದು ಜಗಳ ಬಿಡಿಸಿ ಆತನ ಕೈಯಲ್ಲಿದ್ದ ಲಾಂಗ್ ನಂತಹ ಆಯುಧವನ್ನು ಕಿತ್ತುಕೊಂಡಿದ್ದು, ಆದರೂ ಸಹ ಆತನು “ನನ್ನ ಮಕ್ಕಳೇ ನಿಮ್ಮಿಬ್ಬರನ್ನು ಸಾಯಿಸುವತನಕ ಬಿಡುವುದಿಲ್ಲಾ” ಎಂದು ಪ್ರಾಣ ಬೆದರಿಕೆ ಹಾಕಿ ಪುನಃ ನಮ್ಮಿಬ್ಬರನ್ನು ಕೈಗಳಿಂದ ಮೈಮೇಲೆ ಹೊಡೆದು ಮೂಗೇಟು ಉಂಟುಮಾಡಿದಾಗ ಹರೀಶ ಮತ್ತು ತನ್ನ ಮಗನಾದ ಶ್ರೀಕಾಂತ ರವರು ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ತಮ್ಮನ್ನು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಗಲಾಟೆ ಸಮಯದಲ್ಲಿ ತನ್ನ ಕತ್ತಿನಲ್ಲಿದ್ದ ಚೈನ್ ಮತ್ತು ಜೇಬಿನಲ್ಲಿದ್ದ ಹಣ ಎಲ್ಲಿಯೋ ಬಿದ್ದು ಹೋಗಿರುತ್ತದೆ. ತಮ್ಮ ಮೇಲೆ ಹಲ್ಲೆ ಮಾಡಿ ಅವಾಚ್ಯವಾಗಿ ಬೈದು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ ಅಕ್ಬರ್ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ಸಾರಾಂಶವಾಗಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.70/2020 ಕಲಂ. 323,324,427,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ 03-07-2020 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಕೆ.ಎಂ ಅಕ್ಬರ್ ಬಿನ್ ಮೆಹಬೂಬ್ ಸಾಬ್, 51 ವರ್ಷ, ಮುಸ್ಲೀಂರು, ಬಿ.ಎಂ.ಟಿ.ಸಿ ಕಂಡಕ್ಟರ್, ವಾಸ ಮುರುಗಮಲ್ಲಾ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಠಾಣೆಗೆ ಬೆಳಗ್ಗೆ 11.30 ಗಂಟೆಗೆ ತಂದು ಹಾಜರುಪಡಿಸಿದ ಸಾರಾಂಶವೇನೆಂದರೆ, ತಮ್ಮ ಮನೆಯ ಪಕ್ಕದ ಮನೆಯ ವಾಸಿಯಾದ ಶಂಕರಪ್ಪ ರವರು ಹಳೇ ವೈಮನಸ್ಸಿನ ಹಿನ್ನೆಲೆಯಲ್ಲಿ ಯಾವಾಗಲೂ ಮನೆಯ ಬಳಿ ಬೈಯ್ದಾಡುತ್ತಿದ್ದರು. ದಿನಾಂಕ 02-07-2020 ರಂದು ರಾತ್ರಿ 09.30 ಗಂಟೆ ಸಮಯದಲ್ಲಿ ತಾನು ಮನೆಯ ಬಳಿ ಇದ್ದಾಗ ಶಂಕರಪ್ಪ ರವರು ಅವಾಚ್ಯ ಶಬ್ದಗಳಿಂದ ಬೈಯ್ದಾಡುತ್ತಿದ್ದಾಗ ತಾನು ಕೇಳಿದ್ದಕ್ಕೆ ತನಗೆ ಶಂಕರಪ್ಪ ಮತ್ತು ಆತನ ಬಳಿ ಕೆಲಸ ಮಾಡುವ ರಾಮಕ್ರಿಷ್ಣಪ್ಪ ರವರು ಬಂದು ತನ್ನನ್ನು ಹಿಡಿದುಕೊಂಡು ಕೈಗಳಿಂದ ಮೈಮೇಲೆ ಹೊಡೆದು ಕಾಲುಗಳಿಂದ ಒದ್ದು ಅಲ್ಲಿದ್ದ ಕಲ್ಲು, ಇಟ್ಟಿಗೆ ಮೊದಲಾದವುಗಳನ್ನು ತೆಗೆದುಕೊಂಡು ಬೀಸಿದ್ದರಿಂದ ತಮ್ಮ ಮನೆಯ ಬಳಿ ನಿಲ್ಲಿಸಿದ್ದ ಆಟೋ, ಟಾಟಾಸುಮೋ ವಾಹನಗಳ ಗ್ಲಾಸುಗಳು ಜಖಂ ಆಗಿದ್ದು, ತನಗೂ ಮೈಮೇಲೆ ಬಿದ್ದು ಮೂಗೇಟು ಆಗಿರುತ್ತದೆ. ನಂತರ ಸದರಿಯವರು “ನಿನ್ನನ್ನು ಸಾಯಿಸುತ್ತೇನೆ” ಎಂದು ಪ್ರಾಣ ಬೆದರಿಕೆ ಹಾಕಿದರು.ಆಗ ತಮ್ಮ ಗ್ರಾಮದ ಅಲಿ ಬಿನ್ ವಲೀಂಸಾಬ್, ಅನ್ವರ್ ಮತ್ತು ಸುಜಾದ್ ಪಾಷ ಬಿನ್ ವಲೀ ಅಹ್ಮದ್ ಜಾನ್ ರವರು ಬಂದು ಜಗಳ ಬಿಡಿಸಿದನು. ತಾನು ಆವೇಳೆಯಾದ್ದರಿಂದ ರಾತ್ರಿ ಆಸ್ವತ್ರೆಗೆ ಬಾರದೇ ಇದ್ದು ಮೈ-ಕೈ ನೋವು ಜಾಸ್ತಿ ಆಗಿದ್ದರಿಂದ ಬೆಳಗ್ಗೆ ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇನೆ. ತನ್ನ ಮೇಲೆ ಜಗಳ ತೆಗೆದು ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ಸಾರಾಂಶವಾಗಿರುತ್ತೆ.