ದಿನಾಂಕ :02/12/2020 ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.173/2020 ಕಲಂ: 201,420 ಐ.ಪಿ.ಸಿ & 78(I),78(III) ಕೆ.ಪಿ ಆಕ್ಟ್:-

     ದಿ:01.12.2020 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ರಾಜಣ್ಣ ಪಿ.ಐ , ಡಿಸಿಬಿ ಸಿ.ಇ.ಎನ್ ಪೊಲೀಸ್ ಠಾಣೆರವರು ಆರೋಪಿಗಳು, ಮಾಲು ಮತ್ತು ಪಂಚನಾಮೆಯೊಂದಿಗೆ ನೀಡಿದ ವರಧಿಯ ಸಾರಾಂಶವೇನೆಂದರೆ ದಿ:01.12.2020 ರಂದು ಸಂಜೆ 4-30 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಬಂದ ಮಾಹಿತಿ ಮೇರೆಗೆ ಠಾಣೆಯ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಮಾಹಿತಿಯನ್ನು ತಿಳಿಸಿ ನಂತರ ತಾನು ಪಂಚರ ಕಮತ್ತು ಸಿಬ್ಬಂದಿಯವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ 40 ಜಿ 270 ರಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಅಣಕನೂರು ಗ್ರಾಮದ  ಗೇಟ್ ಬಳಿಗೆ ಸಂಜೆ 5-00 ಗಂಟೆಗೆ ಹೋಗಿ ಜೀಪನ್ನು ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಲ್ಲಸಿ ಪಂಚರು ಮತ್ತು ನಾವುಗಲು ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿ ಕೈಯಲ್ಲಿ ಒಂದು ಬಿಳಿ ಹಾಳೆಯನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ಬನ್ನಿ ಮಟ್ಕಾ ಅಂಕಿಗಳನ್ನು ಬರೆಸಿಕೊಂಡು 1 ರೂಪಾಯಿಗೆ 70 ರೂ ಕೊಡುತ್ತೆನೆಂತ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಿದ್ದು ಸದರಿಯವನನ್ನು ಪಂಚರ ಸಮಕ್ಷಮ ನಾವುಗಳು ವಶಕ್ಕೆ ಪಡೆದು ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಮುನಿಕೃಷ್ಣಪ್ಪ ಬಿನ್ ಲೇಟ್ ಮುನಿಯಪ್ಪ 34 ವರ್ಷ, ಆದಿ ಕರ್ನಾಟಕ ಜನಾಂಗ ಆಟೋ ಚಾಲಕ ವಾಸ ನಾಯನಹಳ್ಳಿ ಗ್ರಾಮ  ಚಿಕ್ಕಬಳ್ಲಾಪುರ ತಾಲ್ಲೂಕು ಎಂತ ತಿಳಿಸಿರುತ್ತಾನೆಂದು ನಂತರ ಆತನ ಬಳಿ ಪರಿಶೀಲಿಸಲಾಗಿ ವಿವಿಧ ಮೊತ್ತಗಳನ್ನು ಬರೆದಿರುವ 02 ಮಟ್ಕಾ ಚೀಟಿಗಳನ್ನು ಒಂದು ಬಾಲ್ ಪಾಯಿಂಟ್ ಪೆನ್ನು ಇಂದು ವಿವೋ ಕಂಪನಿಯ ಟಚ್ ಸ್ಕ್ರೀನ್ ಮೊಬೈಲ್ ಹಾಗೂ ಒಟು 26,910 ರೂ ಗಳು ನಗದು ಹಣವಿದ್ದು ನಂತರ ಸದರಿ ಆಸಾಮಿಯನ್ನು ವಿಚಾರ ಮಾಡಲಾಗಿ ತಾನು ಪ್ರತಿ ದಿನ ಮಟ್ಕಾ ಅಂಕಿಗಳನ್ನು ಬರೆದು ಇದರಿಂದ ಬಂದ ಹಣ ಮತ್ತು ಮಟ್ಕಾ ಚೀಟಿಗಳನ್ನು ಅಣಕನೂರು ಗ್ರಾಮದ ವಾಸಿಯಾದ ಕರಗಪ್ಪ ಎಂಬುವವರಿಗೆ ಪೋನ್ ಮುಖಾಂತರ ಸಂಪರ್ಕಿಸಿ ಅವರಿಗೆ ನೀಡಿ ಅವರಿಂದ ಕಮೀಷನ್ ಹಣವನ್ನು ಪಡೆಯುತ್ತಿರುತ್ತೆನೆಂತ ತಿಳಿಸಿ ಈ ದಿನವು ಸಹ ಕರಗಪ್ಪರವರಿಗೆ ಪೊನ್ ಮಾಡಿರುವುದಾಗಿ ತಿಳಿಸಿದ್ದು ಅಷ್ಟರಲ್ಲಿ ಒಬ್ಬ ಆಸಾಮಿ ಸದರಿ ಸ್ಥಳಕ್ಕೆ ಬಂದಿದ್ದು ಸದರಿ ಆಸಾಮಿಯನ್ನು ನೋಡಿ ಮುನಿಕೃಷ್ಣಪ್ಪ ರವರು ಇವರೆ ಅಣಕನೂರು ಗ್ರಾಮದ ವಾಸಿ ಕರಗಪ್ಪ ಎಂತ ನಮಗೆ ತಿಳಿಸಿದ್ದು ನಂತರ ನಾವುಗಳು ಪಂಚರ ಸಮಕ್ಷಮ ಆತನನ್ನು ಸುತ್ತುವರೆದು ಹಿಡಿಯುವಷ್ಟುರಲ್ಲಿ ಆತನು ತನ್ನ ಜೇಬಿನಲ್ಲಿದ್ದ ಒಂದು ವಿವೊ ಕಂಪನಿಯ ಟಚ್ ಸ್ಕ್ರೀನ್ ಮೊಬೈಲ್ ಹಾಗೂ ಸ್ಯಾಮ್ ಸಾಮಗ್ ಕಂಪನಿಯ ಟಚ್ ಸ್ಕ್ರೀನ್ ಮೊಬೈಲನ್ನು ನೆಲಕ್ಕೆ ಜೋರಾಗಿ ಹೊಡೆದಿದ್ದರಿಂದ ಸದರಿ ಮೊಬೈಲ್ಲಿನ ಡಿಸ್ಲ್ಪೆ ಹೊಡೆದು ಹೋಗಿ ಸದರಿ ಎರಡು ಮೋಬೈಲ್ ಗಳಲ್ಲಿ ಕೃತ್ಯಕ್ಕೆ ಸಂಬಂದಿಸಿದ ಮಟ್ಕಾ ಜೂಜಾಟದ ವಿವರಗಳನ್ನು ಸಾಕ್ಷ್ಯಗಳನ್ನು ನಾಶಪಡಿಸಿರುತ್ತಾರೆ ನಂತರ ಆತನ ಪೂರ್ಣ ಹೆಸರು ವಿಳಾಸ ಕೇಳಲಾಗಿ ಕರಗಪ್ಪ ಎ.ಎಲ್ ಬಿನ್ ಲೇಟ್ ಲಕ್ಷ್ಮಯ್ಯ 61 ವರ್ಷ ವಕ್ಕಲಿಗರು ಜಿರಾಯ್ತಿ ವಾಸ ಅಣಕನೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದನು. ನಂತರ ಮಟ್ಕಾ ಜೂಜಾಟಕ್ಕೆ ಬಳಸಿದ್ದ ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಸಾರ್ವಜನಿಕರಿಂದ ಹಣವನ್ನು ಪಡೆದು ಹೆಚ್ಚಿನ ಹಣವನ್ನು ಕೊಡುತ್ತೇನೆಂತ ವಂಚಿಸಿ ಮಟ್ಕಾ ಚೀಟಿಗಳನ್ನು ಬರೆದು ಮೋಸ ಮಾಡಿರುವ ಹಾಗೂ ಕೃತ್ಯಗಳನ್ನು ಮರೆ ಮಾಚುವ ಉದ್ದೇಶದಿಂದ ಮೊಬೈಲುಗಳಲ್ಲಿದ್ದ ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಿರುವ ಮೇಲ್ಕಂಡ ಆರೋಪಿತರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ವರಧಿಯ ಮೇರೆಗೆ ಈ ಪ್ರ ವ ವರಧಿ.

2) ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.174/2020 ಕಲಂ: 279,304(A) ಐ.ಪಿ.ಸಿ:-

     ದಿನಾಂಕ: 02/12/2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಚಿಕ್ಕಬಳ್ಳಾಪುರ ತಾಲ್ಲೂಕು ಮೊಗಲಕುಪ್ಪೆ ಗ್ರಾಮದ ವಾಸಿ ಎಂ.ಆರ್.ಚಂದ್ರಶೇಖರ್ ಬಿನ್ ರಾಮರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು ಹುನೇಗಲ್ ಗ್ರಾಮದ ವಾಸಿ ಶ್ರೀ. ಬಾಲಕೃಷ್ಣ ಮತ್ತು ಶ್ರೀ. ವಿಜಯಕುಮಾರ್ ರವರ ಲಾರಿಗಳಿಗೆ ಲೋಡ್ ಮತ್ತು ಅನ್ ಲೋಡ್ ಮಾಡುವ  ಉಸ್ತುವಾರಿಯನ್ನು ಮಾಡಿಕೊಂಡಿರುತ್ತೇನೆ. ದಿನಾಂಕ:02-12-2020 ರಂದು ಬೆಳಗಿನ ಜಾವ ಸುಮಾರು 1.30 ರಿಂದ 2.00 ಗಂಟೆ ಮದ್ಯೆ ನಾನು    ಚಿಕ್ಕಬಳ್ಳಾಪುರ ತಾಲ್ಲೂಕು ಕರಿಗಾನಪಾಳ್ಯ ಗ್ರಾಮದ ಬಳಿ ಇರುವ ಪೇಜರ್ ನಾರಾಯಣಸ್ವಾಮಿ ರವರ  ಕ್ವಾರಿಯಲ್ಲಿ ಬಳಿ ಇದ್ದಾಗ AP-15-TB-5958  ಮಹೇಂದ್ರ ನವಿಸ್ಟರ್ ರ ಲಾರಿಯ ಚಾಲಕ ಹುನೇಗಲ್ ಗ್ರಾಮದ  ನಾಗೇಶ್ ಬಿನ್ ಲೇಟ್  ಹನುಮಂತಪ್ಪ  ರವರು  ವಾಹನವನ್ನು ರೆಡ್ಡಿಗೊಲ್ಲವಾರಹಳ್ಳಿ ಕಡೆಯಿಂದ ಲೋಡ್ ಗಾಗಿ ಕ್ವಾರಿಯ ಒಳಗಡೆ ಬಂದು ನಂತರ ಯು-ಟರ್ನ್ ಮಾಡಿಕೊಂಡು  ರಸ್ತೆಯ ಕಡೆಗೆ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ  ಕ್ವಾರಿಯ ಮುಂದೆ ಕೌಂಪಾಂಡ್ ಗೆ ಇಟ್ಟಿರುವ ಕಲ್ಲಿನ ಬಳಿ ಇದ್ದ  ಬೆಂಗಳೂರು ಗ್ರಾಮಾಂತರ ಜಿಲ್ಲೆದೊಡ್ಡಬಳ್ಳಾಪುರ ತಾಲ್ಲೂಕು ಗಂಡರಾಜಪುರ ಗ್ರಾಮದ ವಾಸಿ 18ವರ್ಷದ ಜಿ.ಎಂ. ನಂದನ್ ಕುಮಾರ್  ಬಿನ್ ಮುನಿಯಪ್ಪ ಎಂಬುವರಿಗೆ ಡಿಕ್ಕಿ ಹೊಡೆಯಿಸಿ ಅಪಘಾತ ಮಾಡಿರುತ್ತಾನೆ. ಅಪಘಾತದಲ್ಲಿ ಜಿ.ಎಂ. ನಂದನ್ ಕುಮಾರ್ ರವರ ತಲೆಗೆ ತೀವ್ರತರವಾದ ರಕ್ತಗಾಯವಾಯಿತು. ಆ ಕೂಡಲೇ ನಾನು, ಹುನೇಗಲ್ ಗ್ರಾಮದ ಶ್ರೀನಿವಾಸ ಬಿನ್ ತಿಮ್ಮಣ್ಣ ಮತ್ತು ಇತರೆಯವರು ಕಾರಿನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ದಾಖಲು ಮಾಡಿದ್ದು ವೈದ್ಯಾಧಿಕಾರಿಗಳು ಗಾಯಾಳು ಜಿ.ಎಂ. ನಂದನ್ ಕುಮಾರ್ ರವರನ್ನು ಪರೀಕ್ಷೆ  ಮಾಡಿ ಮಾರ್ಗ ಮದ್ಯೆ ಮೃತಪಟ್ಟಿರುತ್ತಾನೆಂದು ತಿಳಿಸಿದರು. ಅಪಘಾತ ಮಾಡಿದ AP-15-TB-5958  ಮಹೇಂದ್ರ ನವಿಸ್ಟರ್ ರ ಲಾರಿಯ ಚಾಲಕ ನಾಗೇಶ್ ಬಿನ್ ಲೇಟ್  ಹನುಮಂತಪ್ಪ   ರವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಕಾರಣವಾಗಿರುತ್ತೆ. ಅಪಘಾತ ಮಾಡಿದ  AP-15-TB-5958  ಮಹೇಂದ್ರ ನವಿಸ್ಟರ್ ರ ಲಾರಿಯ ಚಾಲಕ ನಾಗೇಶ್ ಬಿನ್ ಲೇಟ್  ಹನುಮಂತಪ್ಪ ರವರ  ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ.

3) ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.429/2020 ಕಲಂ: 379  ಐ.ಪಿ.ಸಿ:-

     ದಿನಾಂಕ: 01/12/2020 ರಂದು ರಾತ್ರಿ 8.00 ಗಂಟೆಗೆ ಬಿ.ರಮೇಶ್ ಬಿನ್ ಟಿ.ಬೈರೆಡ್ಡಿ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ಚೌಡದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಯಾದ ಟಿ.ಬೈರೆಡ್ಡಿ ರವರ ಹೆಸರಿನಲ್ಲಿ ತಮ್ಮ ಗ್ರಾಮದ ಸರ್ವೇ ನಂಬರ್ 16 ರಲ್ಲಿ 1 ಎಕರೆ 26 ಗುಂಟೆ ಜಮೀನಿದ್ದು. ಸದರಿ ಜಮೀನಿನಲ್ಲಿ ತಾವು ಈಗ್ಗೆ 12 ವರ್ಷಗಳ ಹಿಂದೆ ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆದು ಅರಣ್ಯ ಇಲಾಖೆಯಿಂದಲೇ ನೀಡಿದ ಸುಮಾರು 1500 ಶ್ರೀಗಂಧದ ಸಸಿಗಳನ್ನು ಪಡೆದು ಮರಗಳನ್ನು ಬೆಳೆಸಿರುತ್ತೇನೆ. ಹೀಗಿರುವಾಗ ದಿನಾಂಕ: 30/11/2020 ರಂದು ತಾನು ಸದರಿ ಮೇಲ್ಕಂಡ ತಮ್ಮ ಜಮೀನಿನಲ್ಲಿ ಸಂಜೆ 6.00 ಗಂಟೆಯವರೆಗೂ ಕೆಲಸ ಮಾಡಿಕೊಂಡು ಮನೆಗೆ ಹೋಗಿರುತ್ತೇನೆ. ನಂತರ ತಾನು ಈ ದಿನ ದಿನಾಂಕ: 01/12/2020 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಮೇಲ್ಕಂಡ ತಮ್ಮ ಜಮೀನಿನ ಬಳಿ ಹೋದಾಗ ಯಾರೋ ಆಸಾಮಿಗಳು ತಾವು ಬೆಳೆಸಿದ್ದ 1500 ಶ್ರೀಗಂಧ ಮರಗಳ ಪೈಕಿ ಎರಡು ಮರಗಳು ಕಟಾವು ಮಾಡಿದ್ದು, ಇನ್ನೂ ಕೆಲವು ಮರಗಳು ಅರ್ಧಕ್ಕೆ ಗರಗಸದಿಂದ ಕಟಾವು ಮಾಡಿರುವುದು ಕಂಡು ಬಂದಿರುತ್ತೆ. ಕಟಾವು ಮಾಡಿರುವ ಕೆಲವು ಶ್ರೀಗಂಧ ಮರದ ತುಂಡುಗಳನ್ನು ಅಲ್ಲಿಯೇ ಬಿಟ್ಟು ಇನ್ನು ಕೆಲವು ತುಂಡುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಇದೇ ತೋಟದಲ್ಲಿ 18/09/2013 ರಂದುಕಳ್ಳತನವಾಗಿದ್ದು, ಸದರಿ ಸಮಯದಲ್ಲಿ ಕಳ್ಳರನ್ನು ಬಂದಿಸಲಾಗಿರುತ್ತೆ. ಸದರಿ ಕಟಾವಾಗಿರುವ ಶ್ರೀಗಂಧದ ಮರಗಳ ನಿಖರವಾದ ಬೆಲೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ತಿಳಿಯಬೇಕಾಗಿರುತ್ತೆ. ಮೇಲ್ಕಂಡ ಶ್ರೀಗಂಧದ ಮರಗಳನ್ನು ದಿನಾಂಕ: 30/11/2020 ರಂದು ಸಂಜೆ 6.00 ಗಂಟೆಯಿಂದ ಈ ದಿನ ದಿನಾಂಕ: 01/12/2020 ರಂದು ಬೆಳಿಗ್ಗೆ 11.00 ಗಂಟೆಯ ಮದ್ಯೆ ಯಾರೋ ಆಸಾಮಿಗಳು ಕಳ್ಳತನ ಮಾಡುವ ಉದ್ದೇಶದಿಂದ ಕಟಾವು ಮಾಡಿರುತ್ತಾರೆ. ಆದ್ದರಿಂದ ತಾವುಗಳು ಕೂಲಂಕುಶವಾಗಿ ಪರಿಶೀಲಿಸಿ ತಮ್ಮ ಬಾಬತ್ತು ಶ್ರೀಗಂಧ ಮರಗಳನ್ನು ಕಟಾವು ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಸದರಿ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

4) ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.430/2020 ಕಲಂ: 279,337  ಐ.ಪಿ.ಸಿ:-

     ದಿನಾಂಕ: 02/12/2020 ರಂದು ಮದ್ಯಾಹ್ನ 2.15 ಗಂಟೆಗೆ ಶ್ರೀಮತಿ ಸುಶೀಲಮ್ಮ ಕೋಂ ಮುನಿರಾಜಪ್ಪ, 45 ವರ್ಷ, ವಕ್ಕಲಿಗರು, ಕೂಲಿ ಕೆಲಸ, ಟಿ.ವಡ್ಡಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಗಂಡನಾದ ಮುನಿರಾಜಪ್ಪ ಬಿನ್ ಲೇಟ್ ಬಂಡೆಪ್ಪ, 48 ವರ್ಷ, ಕೂಲಿ ಕೆಲಸ ರವರು ದಿನಾಂಕ:01/12/2020 ರಂದು ಸಂಜೆ 5.00 ಗಂಟೆ ಸಮಯದಲ್ಲಿ ಸ್ವಂತ ಕೆಲಸದ ನಿಮಿತ್ತ ಕೈವಾರ ಕ್ರಾಸ್ ಗೆ ಹೋಗಿ ಬರಲು ತಮ್ಮ ಬಾಬತ್ತು ಕೆಎ -0 ಇಎ-9023 ನೊಂದಣಿ ಸಂಖ್ಯೆಯ ಟಿ.ವಿ.ಎಸ್ ಎಕ್ಸ್ ಎಲ್ 100 ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋಗಿರುತ್ತಾರೆ. ಹೀಗಿರುವಾಗ ಅದೇ ದಿನ ರಾತ್ರಿ 8.15 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ತನಗೆ ಪೋನ್ ಮಾಡಿ ನಿಮ್ಮ ಗಂಡನಾದ ಮುನಿರಾಜಪ್ಪ ರವರಿಗೆ ತಳಗವಾರ ಗೇಟ್ ಬಳಿ ಅಪಘಾತವಾಗಿದೆ, ಗಾಯಗೊಂಡಿದ್ದ ಮುನಿರಾಜಪ್ಪವರನ್ನು 108 ಅಂಬ್ಯೂಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿ ತಿಳಿಸಿದ್ದು, ನಂತರ ಕೂಡಲೇ ತಾನು, ತನ್ನ ಮಗನಾದ ಭರತ್ ಮತ್ತು ತಮ್ಮ ಗ್ರಾಮದ ಮುನಿರಾಜು ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು. ತನ್ನ ಗಂಡನ ಎಡಭುಜಕ್ಕೆ ರಕ್ತಗಾಯ, ಎಡ ಮೊಣಕೈ ತರಚಿದ ಗಾಯ ಮತ್ತು ಎಡಮೊಣಕಾಲಿನ ಕೆಳಗೆ ಮೂಳೆಮುರಿತದ ರಕ್ತಗಾಯವಾಗಿರುತ್ತದೆ. ನಂತರ ಈ ಅಪಘಾತದ ಬಗ್ಗೆ ತನ್ನ ಗಂಡ ಮುನಿರಾಜಪ್ಪರವರನ್ನು ವಿಚಾರ ಮಾಡಲಾಗಿ ದಿನಾಂಕ: 01/12/2020 ರಂದು ಸಂಜೆ ಸ್ವಂತ ಕೆಲಸದ ನಿಮಿತ್ತ ಕೈವಾರ ಕ್ರಾಸ್ ಹೋಗಿ ಕೆಲಸ ಮುಗಿಸಿಕೊಂಡು ನಂತರ ಪುನಃ ಗ್ರಾಮಕ್ಕೆ ಹೋಗಲು ಕೈವಾರ ಕ್ರಾಸ್ ಬಿಟ್ಟು ತಳಗವಾರ ಕಡೆಗೆ ಸಂಜೆ 7.45 ಗಂಟೆ ಸಮಯದಲ್ಲಿ ಮೇಲ್ಕಂಡ ದ್ವಿಚಕ್ರ ವಾಹನವನ್ನು ತಾನು ಚಾಲನೆ ಮಾಡಿಕೊಂಡು ಕಡಪ-ಬೆಂಗಳೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ತಳಗವಾರ ಗೇಟ್ ಬಳಿ ಬಂದಾಗ ಅದೇ ಸಮಯಕ್ಕೆ ಟಿ.ಹೊಸೂರು ಕಡೆಯಿಂದ ಬಂದ ಕೆಎ-40 ಎ-3783 ನೊಂದಣಿ ಸಂಖ್ಯೆಯ ಮಹೇಂದ್ರ ಬೊಲೆರೊ ಗೂಡ್ಸ್ ವಾಹನದ ಚಾಲಕನು ಯಾವುದೇ ಮುನ್ಸೂಚನೆ ಕೊಡದೇ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತನ್ನ ವಾಹನವನ್ನು ಬಲಕ್ಕೆ ತಿರುಗಿಸಿ ತನಗೆ ಡಿಕ್ಕಿ ಹೊಡೆದಿದ್ದರ ಪರಿಣಾಮ ತಾನು ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದರ ಪರಿಣಾಮ ತನಗೆ ರಕ್ತಗಾಯವಾಗಿರುತ್ತೆಂದು ತಿಳಿಸಿರುತ್ತಾರೆ. ನಂತರ ಗಾಯಗೊಂಡಿದ್ದ ತನ್ನ ಗಂಡನನ್ನು ಚಿಂತಾಮಣಿ ಸರ್ಕಾ ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ನಗರದ ರಾಧಕೃಷ್ಣ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ತನ್ನ ಗಂಡನ ಅರೈಕೆಯನ್ನು ನೋಡಿಕೊಂಡಿದ್ದರಿಂದ ಪೊಲೀಸ್ ಠಾಣೆಯಲ್ಲಿ ಇದುವರೆಗೂ ಕಂಪ್ಲೆಂಟ್ ನೀಡಲು ಸಾಧ್ಯವಾಗಿರುವುದಿಲ್ಲ. ತನ್ನ ಗಂಡ ಮುನಿರಾಜಪ್ಪರವರು ಇನ್ನು ರಾಧಕೃಷ್ಣ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳತ್ತಿರುತ್ತಾರೆ. ಆದ್ದರಿಂದ ತನ್ನ ಗಂಡನಿಗೆ ಅಪಘಾತಪಡಿಸಿದ ಮೇಲ್ಕಂಡ ಕೆಎ-40 ಎ-3783 ನೊಂದಣಿ ಸಂಖ್ಯೆಯ ಮಹೇಂದ್ರ ಬೊಲೆರೊ ಗೂಡ್ಸ್ ವಾಹನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

5) ಗೌರಿಬಿದನೂರು ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.308/2020 ಕಲಂ: 15(A),32(3) ಕೆ.ಇ ಆಕ್ಟ್:-

     ದಿನಾಂಕ 01/12/2020 ರಂದು ಬೆಳಗ್ಗೆ 12-30 ಗಂಟೆಯಲ್ಲಿ ಘನ ನ್ಯಾಯಾಲಯದ ಆದೇಶವನ್ನು ನ್ಯಾಯಾಲಯ ಕರ್ತವ್ಯ ಪಿಸಿ 205 ರವರು ಈ ಪ್ರತಿಯನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ. ದಿನಾಂಕ;- 24/10/2020 ರಂದು ಮದ್ಯಾಹ್ನ 1-45 ಗಂಟೆಯಲ್ಲಿ ಗೌರಿಬಿದನೂರು ವೃತ್ತ ನಿರೀಕ್ಷಕರಾದ ಶ್ರೀ. ಎಸ್.ರವಿ ಆದ ನಾನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ದಿನಾಂಕ;- 24/10/2020 ರಂದು ಸರ್ಕಾರಿ ಜೀಪ್ ನಂ ಕೆ-40-ಜಿ-1222 ರಲ್ಲಿ ಹೆಚ್.ಸಿ 224, ವೆಂಕಟೇಶ ರವರೊಂದಿಗೆ  ಹೊಸೂರು ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಮುರಳಿ ಮೋಹನ ಬಿನ್ ಲೇಟ್ ಗಜ್ಜಪ್ಪ ರವರ ಅಂಗಡಿಯ ಪಕ್ಕದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಬಸ್ ನಿಲ್ದಾಣದಲ್ಲಿ ಪಂಚರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ ದಾಳಿಗೆ ಸಹಕರಿಸಲು ಕೋರಿದ್ದರ ಮೇರೆಗೆ ಪಂಚರು ಒಪ್ಪಿ ದಾಳಿ ಮಾಡಿ ಸ್ಥಳದಲ್ಲಿದ್ದ ಮುರಳಿಮೋಹನನ್ನು ಸುತ್ತುವರೆದು ದಾಳಿ ಮಾಡಿ ಅಲ್ಲಿಂದ 20 ಹೈವಾರ್ಡ್ಸ್ ಟೆಟ್ರಾ ಪಾಕೆಗಳನ್ನು ಮತ್ತು 2 ಖಾಲಿ ಟೆಟ್ರಾ ಪಾಕೆಟ್ ಗಳು ಒಂದು ಲೀಟರ್ ನೀರಿನ ಬಾಟಲನ್ನು ಬೆಲೆ 702/- ರೂ  ಪಂಚರ ಸಮಕ್ಷಮ ಅಮಾನತು ಪಡಿಸಿಕೊಂಡು ಸದರಿ ವ್ಯಕ್ತಿಯ ಬಳಿ ಮದ್ಯ ಮಾರಾಟ ಮಾಡಲು ಏನಾದರು ಪರವಾನಗಿ ಇದೆಯೇ ಎಂತ ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿದ್ದು ಕೂಡಲೇ ಮಾಲು ಮತ್ತು ಆರೋಪಿ ವಶಕ್ಕೆ ಪಡೆದು ಪಂಚರ ಸಮಕ್ಷಮ ಪಂಚನಾಮೆ ಬೆಳಗ್ಗೆ 11-00 ಗಂಟೆಯಿಂದ 11-40 ಗಂಟೆವರೆಗೆ ಬರೆದು ಠಾಣೆಗೆ ಕರೆ ತಂದು ಈ ಮೆಮೋದೊಂದಿಗೆ ನೀಡುತ್ತಿದ್ದು, ಘನ ನ್ಯಾಯಾಲಯದಿಂದ ಅನುಮತಿ ಪಡದುಕೊಂಡು ಆರೋಪಿಯ ವಿರುದ್ಧ ಕಲಂ: 15 [ಎ] 32(3) ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

6) ಗೌರಿಬಿದನೂರು ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.309/2020 ಕಲಂ: 427,447 ಐ.ಪಿ.ಸಿ:-

     ದಿನಾಂಕ 1/12/2020 ರಂದು 16-30 ಗಂಟೆಗೆ ಪಿರ್ಯಾದಿ ಡಿ ನರಸಿಂಹರೆಡ್ಡಿ ಬಿನ್ ದೊಡ್ಡದಾಸಪ್ಪ, 74 ವರ್ಷ, ವಾಸ ಮನೆ ನಂ 72, 2ನೇ ಅಡ್ಡ ರಸ್ತೆ 1ನೇ ಮುಖ್ಯ ರಸ್ತೆ ಚಿಕ್ಕಲಕ್ಷ್ಮಯ್ಯ ಬಡಾವಣೆ, ಡಿ.ಆರ್.ಸಿ ಪೋಸ್ಟ್, ಬೆಂಗಳೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ಪಿರ್ಯಾದಿ ರವರು ಸ್ವಾದೀನಾದಲ್ಲಿರುವ  ಕುರುಬರಹಳ್ಳಿ ಗ್ರಾಮದ ಸರ್ವೆ ನಂ 107/2, ರಲ್ಲಿ 0.13 ಗುಂಟೆ 108/3 ರಲ್ಲಿ 18 ಗುಂಟೆ ಹಾಗೂ 93/4 ರಲ್ಲಿ 11 ಗುಂಟೆ ಜಮೀನು ಇದ್ದು ಇದರಲ್ಲಿ ರಾಗಿ ಬೆಳೆಯನ್ನು ಬೆಳೆದಿದ್ದು ನವೆಂಬರ್ ಕೊನೇ ವಾರದಲ್ಲಿ ಖಟಾವು ಮಾಡಲು ತಯಾರಿ ನಡೆಸಿದ್ದು ಅದರೆ ದಿನಾಂಕ 8/11/2020 ರಂದು ಸದರಿ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ರಾಜಗೋಪಾಲರೆಡ್ಡಿ ರವರು ಅಕ್ರಮವಾಗಿ ಪ್ರವೇಶಿಸಿ ಖಟಾವು ಮಾಡಿರುತ್ತಾರೆ ಈ ಬೆಳೆ ಸುಮಾರು 25,000/- ದಿಂದ 30,000 ಬೆಳೆ ಬಾಳುತ್ತದೆ. ತನ್ನ ಆರೋಗ್ಯ ಸಮಸ್ಯೆ ಇರುವುದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೆನೆ ಅದ್ದರಿಂಧ ಅಕ್ರಮವಾಗಿ ಪ್ರವೇಶ ಮಾಡಿ ಬೆಳೆ ಖಟಾವು ಮಾಡಿರುವ ರಾಜಗೋಪಾಲರೆಡ್ಡಿ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

7) ಗೌರಿಬಿದನೂರು ಪುರ  ಪೊಲೀಸ್ ಠಾಣೆ ಮೊ.ಸಂ.196/2020 ಕಲಂ: 87 ಕೆ.ಪಿ ಆಕ್ಟ್:-

     ದಿನಾಂಕ 01/12/2020 ರಂದು ಸಂಜೆ 5:30 ಗಂಟೆಯಲ್ಲಿ ಪಡೆದ ನ್ಯಾಯಾಲಯ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:24/11/2020 ರಂದು ರಾಜಣ್ಣ ಪೊಲೀಸ್ ಇನ್ಸ್ ಪೆಕ್ಟರ್ DCB-CEN ಪೊಲೀಸ್ ಠಾಣ ಚಿಕ್ಕಬಳ್ಳಾಪುರ ರವರು ಮದ್ಯಾನಃ ಸುಮಾರು 01-00 ಗಂಟೆಗೆ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಉತ್ತರ ಪಿನಾಕಿನಿ ನದಿಯಲ್ಲಿ ಹೊಸೂರು  ನಾಗರಾಜ ತೋಟದ ಕೆಳಬಾಗದ ನದಿಯಲ್ಲಿ ಜಾಲಿ ಗಿಡದ ಜೆಳಗೆ ಅಂದರ್ ಬಾಹರ್ ಇಸ್ಪೇಟು ಜೂಜು ಆಡುತ್ತಿದ್ದವರನ್ನು  ಪಂಚರ ಸಮಕ್ಷಮ ಸುತ್ತುವರಿದು ಮೂರು ಜನರನ್ನು ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ 1)ಆರೀಪ್ ಬಿನ್ ಶಬ್ಬೀರ್,25 ವರ್ಷ,ಮುಸ್ಲಿಂ ಜನಾಂಗ, ಕಾರ್ ಚಾಲಕ, ವಾಸ ವಿನಾಯಕ ನಗರ, ಗೌರೀಬಿದನೂರು ಟೌನ್, 2) ಅಜ್ಮೀರ್ ಬಿನ್ ಇಮ್ರಾನ್,23 ವರ್ಷ,ಮುಸ್ಲಿಂ ಜನಾಂಗ, ಟೈಲ್ಸ್ ಕೆಲಸ, ವಾಸ ನದಿ ಗಡ್ಡೆ ಆಂಜನೇಯ ದೇವಾಲಯದ ಬಳಿ, ಗೌರಿಬಿದನೂರು ಟೌನ್, 3) ಶಾಮೀರ್ ಬಿನ್ ಸಿರಾಜ್,27 ವರ್ಷ,ಮುಸ್ಲಿಂ ಜನಾಂಗ, ಸೌತೇಕಾಯಿ ವ್ಯಾಪಾರ, ವಾಸ ಟಿಪ್ಪುನಗರ, ಗೌರೀಬಿದನೂರು ಟೌನ್ ಎಂದು ತಿಳಿಸಿದ್ದು ಆರೋಪಿಗಳನ್ನು ಮತ್ತು ಪಣಕ್ಕೆ ಇಟ್ಟಿದ್ದ 4040-00 ನಗದು ಹಣ, 52 ಇಸ್ಪೀಟ್ ಎಲೆಗಳು ಮತ್ತು ನೆಲದಲ್ಲಿ ಹಾಸಿದ್ದ ಬೆಡ್ ಶೀಟ್ ನ್ನು ಪಂಚರ ಸಮಕ್ಷಮ  ಅಮಾನತ್ತು ಪಡಿಸಿಕೊಂಡಿದ್ದು, ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಎನ್.ಸಿ.ಆರ್ ದಾಖಲಾಗಿದ್ದು ಈ ದಿನ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

8) ಗೌರಿಬಿದನೂರು ಪುರ  ಪೊಲೀಸ್ ಠಾಣೆ ಮೊ.ಸಂ.197/2020 ಕಲಂ: 394,34 ಐ.ಪಿ.ಸಿ:-

     ದಿನಾಂಕ 02/12/2020 ರಂದು ಬೆಳಿಗ್ಗೆ 9:45 ಗಂಟೆಯಲ್ಲಿ ಹೆಚ್.ಸಿ 55 ಅಜ್ಜಪ್ಪ ರವರು ಹಾಜರುಪಡಿಸಿದ ಗಾಯಾಳು ಕಸುವಪ್ಪ ಬಿನ್ ಆಂಜಿನಪ್ಪ, 65 ವರ್ಷ, ಈಡಿಗ ಜನಾಂಗ, ಪಾರ್ವತಿ ನರ್ಸಿಂಗ್ ಫಾರಂ ನಲ್ಲಿ ಕೆಲಸ ಗುಂಡಾಪುರ ಗ್ರಾಮ, ಗೌರಿಬಿದನೂರು ನಗರ ರವರ ಹೇಳಿಕೆಯ ಸಾರಾಂಶವೇನೆಂದರೆ, ತನ್ನ ಮಗನಾದ ಸುರೇಶ್ ರವರು ಪ್ರತಿ ದಿನ ರಾತ್ರಿ ತನ್ನ ಜೊತೆಯಲ್ಲಿ ನರ್ಸರಿ ಫಾರಂ ನಲ್ಲಿ ಮಲಗುತ್ತಿದ್ದರು. ದಿನಾಂಕ 01/12/2020 ರಂದು ರಾತ್ರಿ ತನ್ನ ಮಗ ಕಾದಲವೇಣಿ ಗ್ರಾಮಕ್ಕೆ ಹೋಗಿದ್ದು ರಾತ್ರಿ 1:00 ಗಂಟೆ ಸಮಯದಲ್ಲಿ ಯಾರೋ ಇಬ್ಬರು ಅಪರಿಚಿತರು ಬಂದು ತನ್ನನ್ನು ಎಬ್ಬಿಸಿ ಕುಡಿಯಲು ನೀರು ಕೇಳಿದ್ದು ತಾನು ಇಲ್ಲವೆಂದು ತಿಳಿಸಿದಾಗ ಹಣವನ್ನು ಕೊಡುವಂತೆ ಹೇಳಿ ತನ್ನ ಬಳಿ ಇದ್ದ ಕೋಲಿನಿಂದ ಹೊಡೆದು 500 ರೂಪಾಯಿಗಳನ್ನು ಕಿತ್ತುಕೊಂಡು ನಂತರ ಇನ್ನೂ ಹೆಚ್ಚಿನ ಹಣವನ್ನು ಕೊಡುವಂತೆ ಕಾಲುಗಳಿಂದ ಒದ್ದಾಗ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿರುತ್ತಾನೆ. ನಂತರ ಬೆಳಿಗ್ಗೆ 8:00 ಗಂಟೆಯಲ್ಲಿ ತನ್ನ ಮಗ ಸುರೇಶ ರವರು ಬಂದು ನಡೆದ ವಿಚಾರವನ್ನು ತಿಳಿದುಕೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಆದ್ದರಿಂದ ತನ್ನನ್ನು ಹೊಡೆದು ಹಣವನ್ನು ಕಿತ್ತುಕೊಂಡು ಹೋಗಿರುವ ಅಪರಿಚಿತ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೇನೆ.

9) ಕೆಂಚಾರ್ಲಹಳ್ಳಿ  ಪೊಲೀಸ್ ಠಾಣೆ ಮೊ.ಸಂ.134/2020 ಕಲಂ: 279,337 ಐ.ಪಿ.ಸಿ:-

     ದಿನಾಂಕ 02-12-2020 ರಂದು ಹೆಚ್.ಸಿ-200 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ವೆಂಕಟಸ್ವಾಮಿ ಬಿನ್ ಸಿದ್ದಪ್ಪ, 29 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಾಸ ಚಿಲಕಲನೇರ್ಪು ಗ್ರಾಮ, ಚಿಂತಾಮಣಿ ತಾಲ್ಲೂಕು, ಹಾಲಿ ವಾಸ ಚೊಕ್ಕರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಠಾಣೆಗೆ ಮದ್ಯಾಹ್ನ 12.00 ಗಂಟೆಗೆ ಹಾಜರುಪಡಿಸಿದ ಸಾರಾಂಶವೇನೆಂದರೆ, ತಾನು ಕೂಲಿ ಕೆಲಸಕ್ಕೆ ಹತ್ತಿರವಾಗುತ್ತೆಂದು ಚೊಕ್ಕರೆಡ್ಡಿಹಳ್ಳಿ ಗ್ರಾಮದ ವೆಂಕಟೇಶ್ ರವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಈಗ್ಗೆ 01 ತಿಂಗಳಿಂದ ವಾಸವಾಗಿರುತ್ತೇನೆ. ದಿನಾಂಕ 01-12-2020 ರಂದು ತನ್ನ ತಂದೆ ತಾಯಿಯನ್ನು ನೋಡಿಕೊಂಡು ಬರೋಣವೆಂದು ತನ್ನ 06 ವರ್ಷದ ಮಗನಾದ ರಾಜು ರವರೊಂದಿಗೆ ತನ್ನ ಸ್ವಂತ ಗ್ರಾಮವಾದ ಚಿಲಕಲನೇರ್ಪು ಗ್ರಾಮಕ್ಕೆ ತನ್ನ ಬಾಬತ್ತು ದ್ವಿಚಕ್ರ ವಾಹನ ನೊಂದಣಿ ಸಂಖ್ಯೆ KA-01,EZ-9844 ರ CT-100 ವಾಹನದಲ್ಲಿ ಸಂಜೆ 06.00 ಗಂಟೆಯಲ್ಲಿ ತಮ್ಮ ಗ್ರಾಮದ ಬಳಿ ಇರುವ ಕೆರೆಕಟ್ಟೆಯ ಥಾರ್ ರಸ್ತೆಯ ಚೇಳೂರು-ಚಿಂತಾಮಣಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ KA-40,A-2671 ಬೊಲೋರೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ ಕಾರಣ ತಾನು ದ್ವಿಚಕ್ರ ವಾಹನದ ಸಮೇತ ಕೆಳಕ್ಕೆ ಬಿದ್ದು ತನಗೆ ಮುಖಕ್ಕೆ, ಬಲಕೈ ಬೆರಳುಗಳ ಬಳಿ ತರುಚಿದ ಗಾಯವಾಗಿ ಬಲಕಾಲು ಮಂಡಿ ಕೆಳಗೆ ಮೂಳೆ ಮುರಿತದ ರಕ್ತಗಾಯವಾಗಿರುತ್ತದೆ. ತನ್ನ ಮಗನಿಗೆ ಹಣೆಯ ಬಳಿ ಹಾಗೂ ಎರಡು ಕಾಲುಗಳ ಬಳಿ ತರುಚಿದ ಗಾಯವಾಗಿರುತ್ತದೆ. ಅಷ್ಠರಲ್ಲಿ ದಾರಿಯಲ್ಲಿ ಹೋಗುತ್ತಿದ್ದ ತಮ್ಮ ಗ್ರಾಮದ ಬಾಲಾಜಿ, ಓಬಳೇಶ ಮತ್ತಿತರು ತಮ್ಮನ್ನು ಉಪಚರಿಸಿ 108 ಅಂಬ್ಯೂಲೇನ್ಸ್ ವಾಹನದಲ್ಲಿ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಿರುತ್ತಾರೆ. ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪಘಾತ ಪಡಿಸಿದ  KA-40,A-2671 ಬೋಲೇರೋ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ  ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

10) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.312/2020 ಕಲಂ: 323,324,504,506 ಐ.ಪಿ.ಸಿ:-

     ದಿನಾಂಕ: 01-12-2020 ರಂದು ಸಂಜೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಮೇರೆಗೆ ಗಾಯಾಳು ಮಟಮರೆಡ್ಡಿ ಬಿನ್ ನಂಜುಂಡಪ್ಪ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ವಾರಹುಣಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಸಂಜೆ 6.30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿದ್ದರ ಸಾರಾಂಶವೆನೆಂದರೆ, ದಿನಾಂಕ: 30-11-2020 ರಂದು ಸಂಜೆ 6.30 ಗಂಟೆಯಲ್ಲಿ ಫಿರ್ಯಾದಿದಾರರ ಹೆಂಡತಿಯಾದ ಶ್ರೀಮತಿ ಅಂಬಿಕಾ ರವರು ರೇಷ್ಮೆ ಸಾಕಾಣಿಕೆ ಕೆಲಸ ಮಾಡಲು ಬರುತ್ತಿದ್ದ ಕೂಲಿ ಆಳುಗಳು ಆ ದಿನ ಬರದ ಕಾರಣ ಅವರನ್ನು ಬೈದಾಡಿಕೊಳ್ಳುತ್ತಿದ್ದು ತನ್ನ ತಮ್ಮನಾದ ನಾರಾಯಣಸ್ವಾಮಿ ರವರು ಆತನನ್ನೆ ಬೈಯುತ್ತಿರುವುದಾಗಿ ತಿಳಿದು ತನ್ನ ಹೆಂಡತಿಯ ಮೇಲೆ ಜಗಳ ತೆಗೆದು ಆಕೆಯನ್ನು ಬೈದಾಡುತ್ತಿದ್ದಾಗ ತಾನು ಅಡ್ಡ ಹೋಗಿ ತನ್ನ ಹೆಂಡತಿ ನಿಗೇನು ಬೈದಿಲ್ಲ ಎಂದು ಹೇಳುತ್ತಿದ್ದಂತೆ ತನ್ನ ತಮ್ಮ ತನಗೆ ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಮೈ ಮೇಲೆ ಹೊಡೆದು ನೂವುಂಟು ಮಾಡಿ ಸ್ಥಳದಲ್ಲಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ಗಡ್ಡದ ಮೇಲೆ ಮತ್ತು ಗಂಟಲಿನ ಕೆಳಭಾಗದ ಎದೆಯ ಮೇಲೆ ಒಡೆದು ರಕ್ತಗಾಯಪಡಿಸಿದಾಗ ತನ್ನ ಹೆಂಡತಿ ಅಂಬಿಕಾ ಮತ್ತು ತಮ್ಮ ಪಕ್ಕದ ಮನೆಯ ವಾಸಿ ವೆಂಕಟರೆಡ್ಡಿ ಬಿನ್ ಹನುಮಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿದಾಗ ಆತನು ತನ್ನನ್ನು ಕುರಿತು ಈ ಹಿಂದೆಯೇ ಸಹ ನೀನು ನನ್ನ ಕೈಯಲ್ಲಿ ತಪ್ಪಿಸಿಕೊಂಡಿದ್ದೀಯ ಇನ್ನೊಂದು ಸಲ ನನ್ನ ತಂಟೆಗೆ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿ ಆತನ ಕೈಯಲ್ಲಿದ್ದ ಕಲ್ಲನ್ನು ಅಲ್ಲಿಯೇ ಬಿಸಾಕಿ ಹೋಗಿದ್ದು ವೆಂಕಟರೆಡ್ಡಿ ರವರು ತನ್ನನ್ನು ಯಾವುದೋ ಒಂದು ವಾಹನದಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ಚಿಂತಾಮಣಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಈ ದಿನ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಿಸಿದ್ದು, ಮೇಲ್ಕಂಡ ನಾರಾಯಣಸ್ವಾಮಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.