ದಿನಾಂಕ : 02/10/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 313/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:01/10/2019 ರಂದು ಮದ್ಯಾಹ್ನ 14:45 ಗಂಟೆಗೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ನವೀನ್ ರವರು ಮಾಲು, ಆರೋಪಿ, ಪಂಚನಾಮೆಯೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ  ದಿನಾಂಕ:01.10.2019 ರಂದು  13:45 ಗಂಟೆಯಲ್ಲಿ ನಾನು  ಠಾಣೆಯಲ್ಲಿರುವಾಗ್ಗೆ  ಬಾಗೇಪಲ್ಲಿ  ಪುರದ ಹೌಸಿಂಗ್ ಬೋರ್ಡ್ ಏರಿಯಾದ ಆದಿನಾರಾಯಣಪ್ಪ ರವರ ಮನೆಯ ಮುಂಬಾಗದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ  ತಮಗೆ ಬಂದ ಮಾಹಿತಿಯ ಮೇರೆಗೆ  ಸಿಬ್ಬಂದಿಗಳಾದ ಪಿ.ಸಿ 455 ಅಶ್ವತ್ಥಪ್ಪ  ಮತ್ತು  ಜೀಪ್ ಚಾಲಕ ಅಲ್ತಾಫ್ ಪಾಷ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537 ವಾಹನದಲ್ಲಿ ಪಂಚರೊಂದಿಗೆ ಸ್ಥಳಕ್ಕೆ 13:55 ಗಂಟೆಗೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು  ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದನು. ಸದರಿ ಸ್ಥಳದಲ್ಲಿ  ಪರಿಶೀಲಿಸಲಾಗಿ  90 ಎಂ.ಎಲ್. ನ HAYWARDS CHEERS  Whisky  ಯ 03  ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  ಒಂದು ಲೀಟರ್ ನ 2 ಖಾಲಿ ವಾಟರ್ ಬಾಟಲ್ ಗಳು ಮತ್ತು ಮದ್ಯಸೇವನೆ ಮಾಡಿರುವ  04 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ HAYWARDS CHEERS WHISKY 07 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 0.630 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 212/- ರೂಪಾಯಿಗಳಾಗಿರುತ್ತದೆ.  ಆಸಾಮಿಯ ಹೆಸರು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಆದಿನಾರಾಯಣಪ್ಪ ಬಿನ್ ಲೇಟ್ ರಂಗಪ್ಪ, 56 ವರ್ಷ, ನಾಯಕರು, ಕೂಲಿಕೆಲಸ, ಹೌಸಿಂಗ್ ಬೋರ್ಡ್ ಏರಿಯಾ, 1ನೇ ವಾರ್ಡ್, ಬಾಗೇಪಲ್ಲಿ ಪುರ ಎಂದು ತಿಳಿಸಿದ್ದು, ನಿನ್ನ ಬಳಿ ಮಧ್ಯವನ್ನು ಮಾರಾಟ ಮಾಡಲು ಸ್ಥಳಾವಕಾಶ ನೀಡಲು  ಯಾವುದೇ ಪರವಾನಗಿ ಇದೆಯೇ ಎಂದು ಕೇಳಲಾಗಿ ಇರುವುದಿಲ್ಲವೆಂದು ತಿಳಿಸಿ  ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಸ್ಥಳದಲ್ಲಿದ್ದ  90 ಎಂ.ಎಲ್. ನ HAYWARDS CHEERS  Whisky  ಯ 03  ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  ಒಂದು ಲೀಟರ್ ನ 2 ಖಾಲಿ ವಾಟರ್ ಬಾಟಲ್ ಗಳು ಮತ್ತು ಮದ್ಯಸೇವನೆ ಮಾಡಿರುವ  04 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ HAYWARDS CHEERS WHISKY 07 ಟೆಟ್ರಾ ಪ್ಯಾಕೇಟ್ ಗಳನ್ನು  ಅಮಾನತ್ತು ಪಡಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯಾಗಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 314/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:01/10/2019 ರಂದು ಸಂಜೆ 5:30 ಗಂಟೆಗೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ. ನವೀನ್ ಪಿ.ಎಂ ರವರು ಮಾಲು, ಆರೋಪಿ, ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ:01.10.2019 ರಂದು  15:00 ಗಂಟೆಯಲ್ಲಿ ನಾನು  ಠಾಣೆಯಲ್ಲಿರುವಾಗ್ಗೆ  ಬಾಗೇಪಲ್ಲಿ  ತಾಲ್ಲೂಕು ಮಿಟ್ಟೇಮರಿ ಹೋಬಳಿ ಮೂಗಚಿನ್ನೇಪಲ್ಲಿ ಗ್ರಾಮದ ಚಿಕ್ಕನಾರಾಯಣಮ್ಮ ರವರ ಮನೆಯ ಮುಂಬಾಗದ ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಆಸಾಮಿಯು ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ  ಬಂದ ಮಾಹಿತಿಯ ಮೇರೆಗೆ  ಸಿಬ್ಬಂದಿಗಳಾದ ಪಿ.ಸಿ 176 ಶಶಿಕುಮಾರ, ಮ.ಹೆಚ್.ಸಿ 164 ಮಮತ ಮತ್ತು  ಜೀಪ್ ಚಾಲಕ ಅಲ್ತಾಫ್ ಪಾಷ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537 ವಾಹನದಲ್ಲಿವಾಹನದಲ್ಲಿ ಪಂಚರೊಂದಿಗೆ ಸ್ಥಳಕ್ಕೆ 15:30 ಗಂಟೆಗೆ ಹೋಗಿ ನೋಡಲಾಗಿ ಯಾರೋ ಒಬ್ಬ ಮಹಿಳೆಯು  ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದರು. ಸದರಿ ಸ್ಥಳದಲ್ಲಿ  ಪರಿಶೀಲಿಸಲಾಗಿ  90 ಎಂ.ಎಲ್. ನ HAYWARDS CHEERS  Whisky  ಯ 04  ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  ಒಂದು ಲೀಟರ್ ನ 2 ಖಾಲಿ ವಾಟರ್ ಬಾಟಲ್ ಗಳು ಮತ್ತು ಮದ್ಯಸೇವನೆ ಮಾಡಿರುವ  03 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ HAYWARDS CHEERS WHISKY 08 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 0.720 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 242/- ರೂಪಾಯಿಗಳಾಗಿರುತ್ತದೆ. ಆಸಾಮಿಯ ಹೆಸರು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಚಿಕ್ಕನಾರಾಯಣಮ್ಮ ಕೋಂ ಗಂಗುಲಪ್ಪ, 62 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ಮೂಗಚಿನ್ನೇಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ನಿನ್ನ ಬಳಿ ಮಧ್ಯವನ್ನು ಮಾರಾಟ ಮಾಡಲು ಸ್ಥಳಾವಕಾಶ ನೀಡಲು  ಯಾವುದೇ ಪರವಾನಗಿ ಇದೆಯೇ ಎಂದು ಕೇಳಲಾಗಿ ಇರುವುದಿಲ್ಲವೆಂದು ತಿಳಿಸಿ  ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾಳೆ. ಸ್ಥಳದಲ್ಲಿದ್ದ 90 ಎಂ.ಎಲ್. ನ HAYWARDS CHEERS  Whisky  ಯ 04  ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  ಒಂದು ಲೀಟರ್ ನ 2 ಖಾಲಿ ವಾಟರ್ ಬಾಟಲ್ ಗಳು ಮತ್ತು ಮದ್ಯಸೇವನೆ ಮಾಡಿರುವ  03 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ HAYWARDS CHEERS WHISKY 08 ಟೆಟ್ರಾ ಪ್ಯಾಕೇಟ್ ಗಳು ಗಳನ್ನು  ಅಮಾನತ್ತು ಪಡಿಸಿಕೊಂಡಿದ್ದು ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯಾಗಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 315/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:01/10/2019 ರಂದು ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ನವೀನ್ ಪಿ.ಎಂ ರವರು ಮಾಲು, ಪಂಚನಾಮೆ ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ; 01.10.2019 ರಂದು ಸಂಜೆ 5-40 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಗೂಳೂರು ಹೋಬಳಿ ನಲ್ಲಪ್ಪರೆಡ್ಡಿಪಲ್ಲಿ ಗ್ರಾಮದ ವಾಸಿಯಾದ ರಾಮಾಂಜಿ ಬಿನ್ ಲೇಟ್ ವೆಂಕಟಸ್ವಾಮಿ ರವರ ಚಿಲ್ಲರೆ ಅಂಗಡಿ ಮುಂಭಾಗ ಖಾಲಿ ಜಾಗದಲ್ಲಿ ಯಾರೋ ಕೆಲವರು ಕುಳಿತುಕೊಂಡು ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು, ಹೆಚ್.ಸಿ. 103 ಶಂಕರರೆಡ್ಡಿ, ಪಿಸಿ 280 ಮುರಳಿ ಹಾಗೂ ಜೀಪ್ ಚಾಲಕ ಎ.ಹೆಚ್.ಸಿ. 34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ.40.ಜಿ.537 ವಾಹನದಲ್ಲಿ ಹೋಗಿ ಬಾಗೇಪಲ್ಲಿ ಪುರದ ಗೂಳೂರು ವೃತ್ತದಲ್ಲಿದ್ದ ಪಂಚರನ್ನು ಕರೆದು ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವುಗಳು ಮತ್ತು ಪಂಚರು ಸ್ಥಳಕ್ಕೆ ಸಂಜೆ 6-00 ಗಂಟೆಗೆ ಹೋಗಿ ನೋಡಲಾಗಿ ಯಾರೋ ಕೆಲವರು ಗುಂಪಾಗಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದು, ಅವರುಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ನಾವುಗಲು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್. ನ  Haywards Cheers Whisky  02 ಖಾಲಿ ಟೆಟ್ರಾ ಪಾಕೆಟ್, ಒಂದು ಲೀಟರ್ ಸಾಮಥ್ಯ ಹೊಂದಿರುವ 1 ಖಾಲಿ ವಾಟರ್ ಬಾಟಲ್, ಮದ್ಯಸೇವನೆ ಮಾಡಿರುವ 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಮತ್ತು ಮದ್ಯವಿರುವ  90 ಎಂ.ಎಲ್. ನ  Haywards Cheers Whisky  07 ಟೆಟ್ರಾ ಪಾಕೆಟ್ ಗಳಿದ್ದು, ಒಟ್ಟು 0.720 ಲೀಟರ್ ಮದ್ಯವಿದ್ದು, ಇವುಗಳ ಒಟ್ಟು ಬೆಲೆ 212/- ರೂ.ಗಳಾಗಿರುತ್ತೆ. ಸದರಿ ಸ್ಥಳದ ಮಾಲೀಕರಾದ ರಾಮಾಂಜಿ ಬಿನ್ ರಘಪ್ಪ, 30 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ನಲ್ಲಪ್ಪರೆಡ್ಡಿಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯಾಗಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 316/2019 ಕಲಂ. 279 ಐ.ಪಿ.ಸಿ:-

     ದಿನಾಂಕ; 02.10.2019 ರಂದು ಬೆಳಿಗ್ಗೆ 10-45 ಗಂಟೆಗೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ; 29.09.2019 ರಂದು ನಾನು ಮತ್ತು ನಮ್ಮ ಕಂಪನಿಯ ಟಿ.ಎನ್. 90.ಸಿ.7969 ಅಶೋಕ ಲೈಲ್ಯಾಂಡ್ ಲಾರಿಯಲ್ಲಿ ಆಲೂಗಡ್ಡೆಯನ್ನು ತುಂಬಿಕೊಂಡು ತಮಿಳುನಾಡಿನ ತಿರುಚನಾಪಲ್ಲಿಗೆ ಬರುತ್ತಿದ್ದು, ಇದಕ್ಕೆ ಚಾಲಕನಾಗಿ ನಾನು ಮತ್ತು ಗುರುವರೆಡ್ಡಿ ಸೆನ್ ಬಿನ್ ರೆಡ್ಡಿಯಾರ್ ಬಿನ್ ಸೆನ್ ರೆಡ್ಡಿಯಾರ್, 45 ವರ್ಷ, ವಕ್ಕಲಿಗರು, ಚಾಲಕ ಕೆಲಸ, ರೆಡ್ಡಿಯಾರ್ ಅವದತ್ತೂರ್, ಸೇಲಂ, ತಮಿಳುನಾಡು ರವರು ಇದ್ದೆವು. ದಿನಾಂಕ; 02.10.2019 ರಂದು ಬೆಳಗಿನ ಜಾವ 02-00 ಗಂಟೆಗೆ ನಾನು ವಾಹನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಗುರುವರೆಡ್ಡಿ ರವರು ವಾಹನವನ್ನು ಚಾಲನೆ ಮಾಡುತ್ತಿದ್ದು, ಬೆಳಗಿನ ಜಾವ ಸುಮಾರು 04-00 ಗಂಟೆ ಸಮಯದಲ್ಲಿ ಬಾಗೇಪಲ್ಲಿ ತಾಲ್ಲೂಕು ಪರಗೋಡು ಸಮೀಪ ಎನ್ ಹೆಚ್ 7 ರಸ್ತೆಯಲ್ಲಿ ಬರುತ್ತಿದ್ದಾಗ ಗುರುವರೆಡ್ಡಿ ರವರು ನನ್ನನ್ನು ಎಬ್ಬಿಸಿ ನನಗೆ ಎದೆನೋವು, ಎದೆನೋವು ಎಂದು ಕೂಗಿಕೊಂಡೆನು. ತಕ್ಷಣ ನಾನು ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಇಂಡಿಕೇಟರ್ ಹಾಗೂ ಡೇಂಜರ್ ಲೈಟ್ ನ್ನು ಹಾಕಿ ನಿಲ್ಲಿಸಿದೆನು. ನಾನು ವಾಹನದಿಂದ ಕೆಳಗೆ ಇಳಿದು ಗುರುವರೆಡ್ಡಿ ರವರನ್ನು ರಸ್ತೆಯ ಬದಿ ಮಲಗಿಸಿ ಆಸ್ಪತ್ರೆಗೆ ಸಾಗಿಸೋಣವೆಂದು ರಸ್ತೆಯಲ್ಲಿ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ನಿಲ್ಲಿಸಲಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು 108 ಆಂಬುಲೈನ್ಸ್ ವಾಹನಕ್ಕೆ ಕರೆ ಮಾಡಿ ಬರುವುದಾಗಿ ತಿಳಿಸಿ ಹೋದರು. ಅಷ್ಟರಲ್ಲಿ ನಾನು ನಿಲ್ಲಿಸಿದ್ದ ನಮ್ಮ ಕಂಪನಿಯ ಟಿ.ಎನ್. 90.ಸಿ.7969 ಅಶೋಕ ಲೈಲ್ಯಾಂಡ್ ಲಾರಿಗೆ ಚಿಕ್ಕಬಳ್ಳಾಫುರ ಕಡೆಯಿಂದ ಕೆಎ.40.ಎ.9091 ಈಚರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ನಮ್ಮ ಲಾರಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ್ದರ ಪರಿಣಾಮ ನಮ್ಮ ಕಂಪನಿಯ ಲಾರಿಯ ಹಿಂಭಾಗ ಮತ್ತು ಕೆಎ.40.ಎ.9091 ಈಚರ್ ವಾಹನ ಜಖಂಗೊಂಡಿರುತ್ತೆ. ನಾನು ಎದೆನೋವಿನಿಂದ ನರಳುತ್ತಿದ್ದ ಗುರುವರೆಡ್ಡಿ ರವರನ್ನು 108 ಆಂಬುಲೈನ್ಸ್ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆನು. ನಮ್ಮ ಕಂಪನಿಯವರಿಗೆ ವಿಚಾರವನ್ನು ತಿಳಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು, ನಮ್ಮ ಕಂಪನಿಯ ಟಿ.ಎನ್. 90.ಸಿ.7969 ಅಶೋಕ ಲೈಲ್ಯಾಂಡ್ ಲಾರಿಗೆ ಅಪಘಾತವನ್ನುಂಟು ಮಾಡಿದ ಕೆಎ.40.ಎ.9091 ಈಚರ್ ವಾಹನದ ಚಾಲಕನ ವಿರುದ್ದ ಕಾನೂನಿನ ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 279/2019 ಕಲಂ. 279-337-304(ಎ) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ 01.10-2019 ರಂದು ಸಂಜೆ 5.00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರ ಸಾರಂಶವೆನೆಂದರೆ ದಿನಾಂಕ:01/10/2019 ರಂದು ಮದ್ಯಾಹ್ನ ಸುಮಾರು 1.00 ಗಂಟೆ ಸಮಯದಲ್ಲಿ ತಮ್ಮ ತಂದೆಯವರು  ಮನೆಯಲ್ಲಿ ಊಟ ಮಾಡಿ  ಹೊರಗಡೆ  ಹೋದರು ಮದ್ಯಾಹ್ನ ಸುಮಾರು 1.45 ಗಂಟೆಗೆ ತಮ್ಮ ಗ್ರಾಮದ  ನಾರಾಯಣಸ್ವಾಮಿ ಬಿನ್ ನಂಜಪ್ಪ ರವರ ಮನೆಯ ಬಳಿ ನಮ್ಮ ಗ್ರಾಮದಿಂದ ಚಿಕ್ಕಬಳ್ಳಾಪುರಕ್ಕೆ ಬರುವ ರಸ್ತೆಯಲ್ಲಿ  ತನ್ನ ತಂದೆಯವರಿಗೆ  ಅಪಘಾತದಲ್ಲಿ ಗಾಯಗಳಾಗಿರುತ್ತದೆ. ಎಂದು ವಿಚಾರ ತಿಳಿದು ತಾನು ಮತ್ತು ತನ್ನಮನೆಯವರು  ಕೂಡಲೆ  ಸ್ಥಳಕ್ಕೆ ಹೋಗಿ  ನೋಡಲಾಗಿ ತನ್ನ ತಂದೆಯವರು ರಸ್ತೆಯಲ್ಲಿ ಬಿದ್ದಿದ್ದು. ಯಾವುದೋ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ನನ್ನ ತಂದೆಯವರಿಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿ ಸ್ಥಳದಲ್ಲಿ ವಾಹನ ನಿಲ್ಲಿಸದೆ ವಾಹನ ಸಮೇತ ಚಾಲಕ ಹೋರಟು ಹೋಗಿರುತ್ತಾನೆ. ಅಪಘಾತ ಮಾಡಿದ ವಾಹನ ಯಾವುದೆಂಬುದು ತನಗೆ ಗೊತ್ತಿಲ್ಲ. ಕೂಡಲೆ ತನ್ನ ತಂದೆಯವರನ್ನು 108 ಅಂಬುಲೇನ್ಸ್ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಸಾಗಿಸಿ ದಾಖಲಿಸಿದೆವು ಅಲ್ಲಿ ವೈದ್ಯರು ಚಿಕಿತ್ಸೆಗಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸುವಂತೆ ನೀಡಿದ ಸಲಹೆ ಮೇರೆಗೆ ಅಂಬುಲೇನ್ಸ್ ವಾಹನದಲ್ಲಿ ಬೆಂಗಳೂರಿಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ದೇವನಹಳ್ಳಿ ಸಮೀಪ ಮದ್ಯಾಹ್ನ ಸುಮಾರು 3.00 ಗಂಟೆಗೆ ಮರಣ ಹೊಂದಿರುತ್ತಾರೆ.   ಹೆಣವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಿರುತ್ತೆ. ಅಪಘಾತ ಮಾಡಿದ ವಾಹನವನ್ನು ಪತ್ತೆಮಾಡಿ ಸದರಿ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ಇದ್ದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 268/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:01/10/2019 ರಂದು ನ್ಯಾಯಾಲಯದ ಪಿ ಸಿ 509 ರವರು  ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಂಜೆ 17-00 ಗಂಟೆಗೆ ತಂದು ಹಾಜರುಪಡಿಸಿದ್ದನ್ನು ಪಡೆದಿದ್ದು ಸಾರಾಂಶವೇನೆಂದರೆ ದಿ: 30/09/19 ರಂದು ಸಂಜೆ 6-00 ಗಂಟೆಯಲ್ಲಿ ನಾರಾಯಣಸ್ವಾಮಿ ಜಿ.ಸಿ ,ಪೊಲೀಸ್ ಇನ್ಸ್ ಪೆಕ್ಟರ್ ರವರು ತನಗೆ ಒದಗಿಸಿದ ಸರ್ಕಾರಿ ಜೀಪ್ ಸಂಖ್ಯೆ: ಕೆಎ 40 ಜಿ 356  ವಾಹನದಲ್ಲಿ ಸಿಬ್ಬಂದಿಯವರಾದ ನಾಗಭೂಷಣ ಸಿಹೆಚ್ ಸಿ 126 , ರವಿಂದ್ರ ಪಿಸಿ 539 ರವರೊಂದಿಗೆ ಗಜಾನನ  ಸರ್ಕಲ್ , ಪ್ಲವರ್ ಸರ್ಕಲ್ ಕಡೆಗಳಲ್ಲಿ ನಗರ ಗಸ್ತಿನಲ್ಲಿದ್ದಾಗ ನಗರದ ನಸೀಬ್ ಶಾದಿ ಮೊಹಲ್ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು  ತಾವು ಸೊಣ್ಣಶೆಟ್ಟಿಹಳ್ಳಿ ಬಳಿ ಹೋಗಿ ಅಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಅವರನ್ನು ಜೀಪಿನಲ್ಲಿ ಕರೆದುಕೊಂಡು ಶಾದಿ ಮೊಹಲ್  ನಸೀಬ್ ಬಳಿಗೆ ಹೋಗಿ ಮರೆಯಲ್ಲಿ ಜೀಪುನ್ನು ನಿಲ್ಲಿಸಿ, ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಅಸಾಮಿ ರಸ್ತೆಯ ಬದಿಯಲ್ಲಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಹಣ ಕಟ್ಟುವಂತೆ ಪ್ರೇರೆಪಿಸುತ್ತಾ , ಮಟ್ಕಾ ಚೀಟಿ ಬರೆಯುತ್ತಿದ್ದನು ತಾವು ಪಂಚರೊಂದಿಗೆ ಸುತ್ತುವರೆದು ದಾಳಿ ಮಾಡುವಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು  ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಮುನ್ನ ಬಿನ್ ಲೇಟ್ ಬಾಷಾ ಸಾಬ್ , 42 ವರ್ಷ, ಮುಸ್ಲಿಂರು, ಟಿಪ್ಪುನಗರ, ಚಿಂತಾಮಣಿ ನಗರ ಎಂದು ತಿಳಿಸಿದ್ದು, ಆತನನ್ನು ಅಂಗಶೋಧನೆ ಮಾಡಲಾಗಿ 570 ರೂ ಹಣ ಮತ್ತು ಒಂದು ಪೆನ್ನು ಹಾಗು ಮಟ್ಕಾ ಚೀಟಿ ಇದ್ದು, ಈಬಗ್ಗೆ ವಿಚಾರಿಸಲಾಗಿ ಇದು ಸಾರ್ವಜನಿಕರಿಂದ ಮಟ್ಕಾ ಆಡಿ ಸಂಪಾದಿಸಿರುವ ಹಣವೆಂದು ತಿಳಿಸಿದ್ದು, ಪಂಚಾಯ್ತಿದಾರರ ಸಮಕ್ಷಮದಲ್ಲಿ ಮೇಲಿನವುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಅಸಾಮಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಮೇರೆಗೆ ಠಾಣಾ ಎನ್.ಸಿ.ಆರ್ ನಂ 223/19 ರಂತೆ ದಾಖಲಿಸಿ ಇದು ಅಸಂಜ್ಞೇಯ ಅಪರಾಧವಾಗಿರುವುದರಿಂದ ಘನ ನ್ಯಾಯಾಲಯದ ಅನುಮತಿಯನ್ನು ಪಡೆದಕೊಂಡು ಠಾಣ ಮೊ.ಸಂ 268/19 ಕಲಂ 78(3) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 409/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:30-09-2019 ರಂದು ಸಂಜೆ 3.30 ಗಂಟೆಗೆ ಶ್ರೀ. ಸುಬ್ರಮಣಿ ಸಿ.ಹೆಚ್.ಸಿ-71 ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30-09-2019 ರಂದು ಬೆಳಗ್ಗೆ ನನಗೆ ಇನ್ಸಪೆಕ್ಟರ್ ಶ್ರೀ. ಡಿ.ಹೆಚ್ ಮುನಿಕೃಷ್ಣ ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಕಡೆ ಗಸ್ತು ಮಾಡಿಕೊಂಡು ಆಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ನೀವೇ ದಾಳಿ ಮಾಡಿ ಸಂಬಂಧಪಟ್ಟ ಠಾಣೆಗೆ ವರದಿ ನೀಡಲು ಸೂಚಿಸಿ ನೇಮಿಸಿ ಕಳುಹಿಸಿಕೊಟ್ಟಿದ್ದು , ಅದರಂತೆ ನಾನು ಈ ದಿನ ನಾನು ನಗರಗೆರೆ ಹೋಬಳಿ ವಾಟದಹೊಸಳ್ಳಿ ಕಡೆ ಮದ್ಯಾಹ್ನ 1.30 ಗಂಟೆ ಸಮಯದಲ್ಲಿ ಗಸ್ತು ಮಾಡುತ್ತಿದ್ದಾ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಹುಣಸೇನಹಳ್ಳಿ ಗ್ರಾಮದ ಖಾದರ್ ಸಾಬೀ ರವರ ಪಂಚರ್ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಹುಣಸೇನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಮಟ್ಕಾ ಆಡುತ್ತಿರುವ ವಿಚಾರವನ್ನು ತಿಳಿಸಿ ಮಟ್ಕಾ ಆಡುತ್ತಿದ್ದವರ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸಲು ಕೋರಿದ್ದರ ಮೇರೆಗೆ ಅವರು ಓಪ್ಪಿಕೊಂಡು ಪಂಚರೊಂದಿಗೆ ಹೋಗಿ ಮಟ್ಕಾ ಆಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ  ಆತನ ಬಳಿ ಇದ್ದ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ 1] ಒಂದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ 3] ನಗದು ಹಣ 480/-ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ. ಮಟ್ಕಾ ಚೀಟಿ ಬರೆಯುತ್ತಿದ್ದ ರಂಗದಾಮಪ್ಪ ಬಿನ್ ಲೇಟ್ ಪುಟ್ಟರಂಗಪ್ಪ, 38 ವರ್ಷ, ಸಾದರ ಗೌಡರು, ಕೂಲಿ ಕೆಲಸ, ವಾಸ ಹುಣಸೇನಹಳ್ಳಿ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮಾಲುಗಳನ್ನು ಮತ್ತು ಆಪಾಧಿತನನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯಾಗಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 410/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:30-09-2019 ರಂದು ಸಂಜೆ 4.00 ಗಂಟೆಗೆ ಶ್ರೀ. ರಾಜಗೋಪಾಲ ಸಿ.ಹೆಚ್.ಸಿ-192 ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30-09-2019 ರಂದು ನನಗೆ ಇನ್ಸಪೆಕ್ಟರ್ ಶ್ರೀ. ಡಿ.ಹೆಚ್ ಮುನಿಕೃಷ್ಣ ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಕಡೆ ಗಸ್ತು ಮಾಡಿಕೊಂಡು ಆಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ನೀವೇ ದಾಳಿ ಮಾಡಿ ಸಂಬಂಧಪಟ್ಟ ಠಾಣೆಗೆ ವರದಿ ನೀಡಲು ಸೂಚಿಸಿ ನೇಮಿಸಿ ಕಳುಹಿಸಿಕೊಟ್ಟಿದ್ದು , ಅದರಂತೆ ನಾನು ಈ ದಿನ ನಾನು ನಗರಗೆರೆ ಹೋಬಳಿ ಕಡೆ ಮದ್ಯಾಹ್ನ ಗಸ್ತು ಮಾಡುತ್ತಿದ್ದಾಗ ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಹುಣಸೇನಹಳ್ಳಿ ಗ್ರಾಮದ ಖಾದರ್ ಸಾಬೀ ರವರ ಪಂಚರ್ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಹುಣಸೇನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಮಟ್ಕಾ ಆಡುತ್ತಿರುವ ವಿಚಾರವನ್ನು ತಿಳಿಸಿ ಮಟ್ಕಾ ಆಡುತ್ತಿದ್ದವರ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸಲು ಕೋರಿದ್ದರ ಮೇರೆಗೆ ಅವರು ಓಪ್ಪಿಕೊಂಡಿದ್ದು, ನಂತರ ಪಂಚರೊಂದಿಗೆ ಹೋಗಿ ಮಟ್ಕಾ ಆಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ  ಆತನ ಬಳಿ ಇದ್ದ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ 1] ಒಂದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ 3] ನಗದು ಹಣ 510/-ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ. ಮಟ್ಕಾ ಚೀಟಿ ಬರೆಯುತ್ತಿದ್ದ ಮುಸ್ತಾಕ್ ಬಿನ್ ಅಲ್ಲಾ ಬಕಾಷ್, 28 ವರ್ಷ,  ಮುಸ್ಲೀಂರು, ಚಾಲಕ, ಚಿನ್ನ ಮಾರ್ಕೆಟ್ ಬಳಿ, ಹಿಂದೂಪುರ ಟೌನ್, (ಎಸ್.ಎನ್ ಪೇಟೆ) ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮಾಲುಗಳನ್ನು ಮತ್ತು ಆಪಾಧಿತನನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯಾಗಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 411/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:30-09-2019 ರಂದು ಸಂಜೆ 4.20 ಗಂಟೆಗೆ ಶ್ರೀ. ಗಿರೀಶ್ ಸಿ.ಹೆಚ್.ಸಿ-208 ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30-09-2019 ರಂದು ನನಗೆ ಮತ್ತು ಸಿಪಿಸಿ-535 ಶ್ರೀನಿವಾಸ ರವರಿಗೆ ಇನ್ಸಪೆಕ್ಟರ್ ಶ್ರೀ. ಡಿ.ಹೆಚ್ ಮುನಿಕೃಷ್ಣ ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಆಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ನೀವೇ ದಾಳಿ ಮಾಡಿ ಸಂಬಂಧಪಟ್ಟ ಠಾಣೆಗೆ ವರದಿ ನೀಡಲು ಸೂಚಿಸಿ ನೇಮಿಸಿ ಕಳುಹಿಸಿಕೊಟ್ಟಿದ್ದು , ಅದರಂತೆ ನಾವು ಈ ದಿನ ವೆಳಪಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಏನೆಂದರೆ ಹುಣಸೇನಹಳ್ಳಿ ಗ್ರಾಮದ ಇಂತಿಯಾಜ್ ಮನೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾವು ಹುಣಸೇನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಮಟ್ಕಾ ಆಡುತ್ತಿರುವ ವಿಚಾರವನ್ನು ತಿಳಿಸಿ ಮಟ್ಕಾ ಆಡುತ್ತಿದ್ದವರ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸಲು ಕೋರಿದ್ದರ ಮೇರೆಗೆ ಅವರು ಓಪ್ಪಿಕೊಂಡಿದ್ದು, ನಂತರ ಪಂಚರೊಂದಿಗೆ ಹೋಗಿ ಮಟ್ಕಾ ಆಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ  ಆತನ ಬಳಿ ಇದ್ದ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ 1] ಒಂದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ 3] ನಗದು ಹಣ 520/-ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ. ಮಟ್ಕಾ ಚೀಟಿ ಬರೆಯುತ್ತಿದ್ದ ಇಂತಿಯಾಜ್ ಬಿನ್ ಹಾಷಿಂಸಾಬ್, 40 ವರ್ಷ,  ಮುಸ್ಲೀಂರು, ಚಾಲಕ, ಹುಣಸೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮಾಲುಗಳನ್ನು ಮತ್ತು ಆಪಾಧಿತನನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯಾಗಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 412/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:30-09-2019 ರಂದು ಸಂಜೆ 4.50 ಗಂಟೆಗೆ ಶ್ರೀ. ಸಿ.ರಮೇಶ್ ಸಿ.ಹೆಚ್.ಸಿ-205 ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30-09-2019 ರಂದು ನನಗೆ ಇನ್ಸಪೆಕ್ಟರ್ ಶ್ರೀ. ಡಿ.ಹೆಚ್ ಮುನಿಕೃಷ್ಣ ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಆಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ನೀವೇ ದಾಳಿ ಮಾಡಿ ಸಂಬಂಧಪಟ್ಟ ಠಾಣೆಗೆ ವರದಿ ನೀಡಲು ಸೂಚಿಸಿ ನೇಮಿಸಿ ಕಳುಹಿಸಿಕೊಟ್ಟಿದ್ದು , ಅದರಂತೆ ನಾವು ಈ ದಿನ ಗೌರಿಬಿದನೂರು ತಾಲ್ಲೂಕು ವ್ಯಾಪ್ತಿ ವೆಳಪಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಮದ್ಯಾಹ್ನ 3.20 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಏನೆಂದರೆ ಹುಣಸೇನಹಳ್ಳಿ ಗ್ರಾಮದ ವಾಲ್ಮೀಕಿ ಜನಾಂಗದ ರಾಮಾಂಜಿ ರವರ ಹಳೆಯ ಮನೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾವು ಹುಣಸೇನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಮಟ್ಕಾ ಆಡುತ್ತಿರುವ ವಿಚಾರವನ್ನು ತಿಳಿಸಿ ಮಟ್ಕಾ ಆಡುತ್ತಿದ್ದವರ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸಲು ಕೋರಿದ್ದರ ಮೇರೆಗೆ ಅವರು ಓಪ್ಪಿಕೊಂಡಿದ್ದು, ನಂತರ ಪಂಚರೊಂದಿಗೆ ಹೋಗಿ ಮಟ್ಕಾ ಆಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ  ಆತನ ಬಳಿ ಇದ್ದ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ 1] ಒಂದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ 3] ನಗದು ಹಣ 520/-ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ. ಮಟ್ಕಾ ಚೀಟಿ ಬರೆಯುತ್ತಿದ್ದ ಗಂಗಾಧರಪ್ಪ ಬಿನ್ ಲೇಟ್ ಗಂಗಪ್ಪ, 42 ವರ್ಷ, ಜಿರಾಯ್ತಿ, ಉಪ್ಪಾರ ಜನಾಂಗ, ಹುಣಸೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು  ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮಾಲುಗಳನ್ನು ಮತ್ತು ಆಪಾಧಿತನನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯಾಗಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 413/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:30-09-2019 ರಂದು ಸಂಜೆ 5.30 ಗಂಟೆಗೆ ಶ್ರೀ. ಗಿರೀಶ್ ಸಿ.ಹೆಚ್.ಸಿ-208 ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30-09-2019 ರಂದು ನನಗೆ ಮತ್ತು ಸಿಪಿಸಿ-535 ಶ್ರೀನಿವಾಸ ರವರಿಗೆ ಇನ್ಸಪೆಕ್ಟರ್ ಶ್ರೀ. ಡಿ.ಹೆಚ್ ಮುನಿಕೃಷ್ಣ ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಆಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ನೀವೇ ದಾಳಿ ಮಾಡಿ ಸಂಬಂಧಪಟ್ಟ ಠಾಣೆಗೆ ವರದಿ ನೀಡಲು ಸೂಚಿಸಿ ನೇಮಿಸಿ ಕಳುಹಿಸಿಕೊಟ್ಟಿದ್ದು , ಅದರಂತೆ ನಾವು ಈ ದಿನ ಹುಣಸೇನಹಳ್ಳಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ಸಂಜೆ 4-00 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಏನೆಂದರೆ ಹುಣಸೇನಹಳ್ಳಿ ಗ್ರಾಮದ ಇಂತಿಯಾಜ್ ಮನೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾವು ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಮಟ್ಕಾ ಆಡುತ್ತಿರುವ ವಿಚಾರವನ್ನು ತಿಳಿಸಿ ಮಟ್ಕಾ ಆಡುತ್ತಿದ್ದವರ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸಲು ಕೋರಿದ್ದರ ಮೇರೆಗೆ ಅವರು ಓಪ್ಪಿಕೊಂಡಿದ್ದು, ನಂತರ ಪಂಚರೊಂದಿಗೆ ಹೋಗಿ ಮಟ್ಕಾ ಆಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ  ಆತನ ಬಳಿ ಇದ್ದ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ 1] ಒಂದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ 3] ನಗದು ಹಣ 510/-ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ. ಮಟ್ಕಾ ಚೀಟಿ ಬರೆಯುತ್ತಿದ್ದ ಫಾರೂಕ್ ಬಿನ್ ಷೇಖ್ ಅಹಮದ್, 34 ವರ್ಷ, ಮುಸ್ಲೀಂರು, ಕಾರ್ಪೆಂಟರ್ ಕೆಲಸ, ಮಾಡಲ್ ಕಾಲೋನಿ, ಹಿಂದೂಪುರ ಟೌನ್, ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮಾಲುಗಳನ್ನು ಮತ್ತು ಆಪಾಧಿತನನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯಾಗಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 414/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:30-09-2019 ರಂದು ಸಂಜೆ 5.40 ಗಂಟೆಗೆ ಶ್ರೀ. ರಾಜಗೋಪಾಲ ಸಿ.ಹೆಚ್.ಸಿ-192 ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30-09-2019 ರಂದು ನನಗೆ ಇನ್ಸಪೆಕ್ಟರ್ ಶ್ರೀ. ಡಿ.ಹೆಚ್ ಮುನಿಕೃಷ್ಣ ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಆಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ನೀವೇ ದಾಳಿ ಮಾಡಿ ಸಂಬಂಧಪಟ್ಟ ಠಾಣೆಗೆ ವರದಿ ನೀಡಲು ಸೂಚಿಸಿ ನೇಮಿಸಿ ಕಳುಹಿಸಿಕೊಟ್ಟಿದ್ದು , ಅದರಂತೆ ನಾನು ಈ ದಿನ ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಸ್ತು ಮಾಡುತ್ತಿದ್ದಾಗ ಸಂಜೆ 4-00 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಏನೆಂದರೆ ಹುಣಸೇನಹಳ್ಳಿ ಗ್ರಾಮದ ಖಾದರ್ ಸಾಬೀ ರವರ ಪಂಚರ್ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಹುಣಸೇನಹಳ್ಳಿ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಮಟ್ಕಾ ಆಡುತ್ತಿರುವ ವಿಚಾರವನ್ನು ತಿಳಿಸಿ ಮಟ್ಕಾ ಆಡುತ್ತಿದ್ದವರ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸಲು ಕೋರಿದ್ದರ ಮೇರೆಗೆ ಅವರು ಓಪ್ಪಿಕೊಂಡಿದ್ದು, ನಂತರ ಪಂಚರೊಂದಿಗೆ ಹೋಗಿ ಮಟ್ಕಾ ಆಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ  ಆತನ ಬಳಿ ಇದ್ದ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ 1] ಒಂದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ 3] ನಗದು ಹಣ 490/-ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ. ಮಟ್ಕಾ ಚೀಟಿ ಬರೆಯುತ್ತಿದ್ದ ಬಿ.ನರಸಿಂಹಲು ಬಿನ್ ಲೇಟ್ ಯರ್ರಪ್ಪ, 65 ವರ್ಷ, ವಾಲ್ಮೀಕಿ ಜನಾಂಗ, ಪೇಯಿಂಟಿಂಗ್ ಕೆಲಸ, ಬಸವನಪಲ್ಲಿ ಗ್ರಾಮ ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮಾಲುಗಳನ್ನು ಮತ್ತು ಆಪಾಧಿತನನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯಾಗಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 415/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:30-09-2019 ರಂದು ಸಂಜೆ 6.30 ಗಂಟೆಗೆ ಶ್ರೀ.ಸಿ.ರಮೇಶ್, ಸಿ.ಹೆಚ್.ಸಿ-205 ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30-09-2019 ರಂದು ನನಗೆ ಇನ್ಸಪೆಕ್ಟರ್ ಶ್ರೀ.ಡಿ.ಹೆಚ್ ಮುನಿಕೃಷ್ಣ ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಆಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ನೀವೇ ದಾಳಿ ಮಾಡಿ ಸಂಬಂಧಪಟ್ಟ ಠಾಣೆಗೆ ವರದಿ ನೀಡಲು ಸೂಚಿಸಿ ನೇಮಿಸಿ ಕಳುಹಿಸಿಕೊಟ್ಟಿದ್ದು , ಅದರಂತೆ ನಾನು ಈ ದಿನ ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಸ್ತು ಮಾಡುತ್ತಿದ್ದಾಗ ಸಂಜೆ 5-00 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಏನೆಂದರೆ ಹುಣಸೇನಹಳ್ಳಿ ಗ್ರಾಮದ ಖಾದರ್ ಸಾಬೀ ರವರ ಪಂಚರ್ ಅಂಗಡಿ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಹುಣಸೇನಹಳ್ಳಿ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಮಟ್ಕಾ ಆಡುತ್ತಿರುವ ವಿಚಾರವನ್ನು ತಿಳಿಸಿ ಮಟ್ಕಾ ಆಡುತ್ತಿದ್ದವರ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸಲು ಕೋರಿದ್ದರ ಮೇರೆಗೆ ಅವರು ಓಪ್ಪಿಕೊಂಡಿದ್ದು, ನಂತರ ಪಂಚರೊಂದಿಗೆ ಹೋಗಿ ಮಟ್ಕಾ ಆಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ ಆತನ ಬಳಿ ಇದ್ದ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ 1] ಒಂದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ 3] ನಗದು ಹಣ 490/-ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ. ಮಟ್ಕಾ ಚೀಟಿ ಬರೆಯುತ್ತಿದ್ದ ಮಂಜುನಾಥ ಬಿನ್ ಲೇಟ್ ಚೌಡಪ್ಪ, 45 ವರ್ಷ, ಕುರುಬರು, ಕೂಲಿ ಕೆಲಸ, ವಾಸ ಕುಟಪಿ ಗ್ರಾಮ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮಾಲುಗಳನ್ನು ಮತ್ತು ಆಪಾಧಿತನನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯಾಗಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 416/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:30-09-2019 ರಂದು ಸಂಜೆ 6.40 ಗಂಟೆಗೆ ಶ್ರೀ. ಗಿರೀಶ್, ಸಿ.ಹೆಚ್.ಸಿ-208 ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30-09-2019 ರಂದು ನನಗೆ ಮತ್ತು ಸಿಪಿಸಿ-535 ಶ್ರೀನಿವಾಸ ರವರಿಗೆ ಇನ್ಸಪೆಕ್ಟರ್ ಶ್ರೀ.ಡಿ.ಹೆಚ್ ಮುನಿಕೃಷ್ಣ ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಆಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ನೀವೇ ದಾಳಿ ಮಾಡಿ ಸಂಬಂಧಪಟ್ಟ ಠಾಣೆಗೆ ವರದಿ ನೀಡಲು ಸೂಚಿಸಿ ನೇಮಿಸಿ ಕಳುಹಿಸಿಕೊಟ್ಟಿದ್ದು , ಅದರಂತೆ ನಾವು ಈ ದಿನ ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಸ್ತು ಮಾಡುತ್ತಿದ್ದಾಗ ಸಂಜೆ 5-00 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಏನೆಂದರೆ ಹುಣಸೇನಹಳ್ಳಿ ಗ್ರಾಮದ ಇಂತಿಯಾಜ್ ರವರ ಮನೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾವು ಹುಣಸೇನಹಳ್ಳಿ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಮಟ್ಕಾ ಆಡುತ್ತಿರುವ ವಿಚಾರವನ್ನು ತಿಳಿಸಿ ಮಟ್ಕಾ ಆಡುತ್ತಿದ್ದವರ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸಲು ಕೋರಿದ್ದರ ಮೇರೆಗೆ ಅವರು ಓಪ್ಪಿಕೊಂಡಿದ್ದು, ನಂತರ ಪಂಚರೊಂದಿಗೆ ಹೋಗಿ ಮಟ್ಕಾ ಆಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ ಆತನ ಬಳಿ ಇದ್ದ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ 1] ಒಂದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ 3] ನಗದು ಹಣ 510/-ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ. ಮಟ್ಕಾ ಚೀಟಿ ಬರೆಯುತ್ತಿದ್ದ ಬಿ.ಚಿರಂಜಿವಿ ಬಿನ್ ಲಕ್ಷ್ಮಯ್ಯ, 27 ವರ್ಷ, ನಾಯಕರು, ಪೇಯಂಟಿಂಗ್ ಕೆಲಸ, ವಾಸ ಜೂಮಾಕಲಪಲ್ಲಿ ಗ್ರಾಮ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮಾಲುಗಳನ್ನು ಮತ್ತು ಆಪಾಧಿತನನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯಾಗಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 417/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:30-09-2019 ರಂದು ಸಂಜೆ 6.50 ಗಂಟೆಗೆ ಶ್ರೀ. ಸುಬ್ರಮಣಿ ಸಿ.ಹೆಚ್.ಸಿ-171 ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30-09-2019 ರಂದು ನನಗೆ ಇನ್ಸಪೆಕ್ಟರ್ ಶ್ರೀ.ಡಿ.ಹೆಚ್ ಮುನಿಕೃಷ್ಣ ಡಿಸಿಬಿ, ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಆಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ನೀವೇ ದಾಳಿ ಮಾಡಿ ಸಂಬಂಧಪಟ್ಟ ಠಾಣೆಗೆ ವರದಿ ನೀಡಲು ಸೂಚಿಸಿ ನೇಮಿಸಿ ಕಳುಹಿಸಿಕೊಟ್ಟಿದ್ದು, ಅದರಂತೆ ನಾನು ಈ ದಿನ ಗೌರಿಬಿದನೂರು ತಾಲ್ಲೂಕು ನಗರಗೆರೆ ವ್ಯಾಪ್ತಿಯಲ್ಲಿ ಗಸ್ತು ಮಾಡುತ್ತಿದ್ದಾಗ ಸಂಜೆ 5-15 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಏನೆಂದರೆ ಹುಣಸೇನಹಳ್ಳಿ ಗ್ರಾಮದ ವೆಂಕಟೇಶಪ್ಪ ರವರ ಮನೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಹುಣಸೇನಹಳ್ಳಿ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಮಟ್ಕಾ ಆಡುತ್ತಿರುವ ವಿಚಾರವನ್ನು ತಿಳಿಸಿ ಮಟ್ಕಾ ಆಡುತ್ತಿದ್ದವರ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸಲು ಕೋರಿದ್ದರ ಮೇರೆಗೆ ಅವರು ಓಪ್ಪಿಕೊಂಡಿದ್ದು, ನಂತರ ಪಂಚರೊಂದಿಗೆ ಹೋಗಿ ಮಟ್ಕಾ ಆಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ ಆತನ ಬಳಿ ಇದ್ದ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ 1] ಒಂದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ 3] ನಗದು ಹಣ 510/-ರೂ ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತದೆ. ಮಟ್ಕಾ ಚೀಟಿ ಬರೆಯುತ್ತಿದ್ದ ಹರೀಶ್ ಬಿನ್ ಆದೆಪ್ಪ, 28 ವರ್ಷ, ನಾಯಕರು, ಹೂವಿನ ವ್ಯಾಪಾರ, ಕೆಂಚನಪಲ್ಲಿ ಗ್ರಾಮ,  ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮಾಲುಗಳನ್ನು ಮತ್ತು ಆಪಾಧಿತನನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯಾಗಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 418/2019 ಕಲಂ. 379 ಐ.ಪಿ.ಸಿ:-

     ದಿನಾಂಕ 01/10/2019 ರಂದು ಗೌರೀಬಿದನೂರು ಪೊಲೀಸ್ ಠಾಣೆಯ, ಪೊಲೀಸ್ ಉಪನಿರೀಕ್ಷಕರಾದ ಮೋಹನ್ ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:01/10/2019 ರಂದು ರಾತ್ರಿ ಸುಮಾರು 7.30 ಗಂಟೆಗೆ ಗೌರಿಬಿದನೂರು ತಾಲ್ಲೂಕು ಚಿಕ್ಕಗಂಗಸಂದ್ರ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯಲ್ಲಿ ಯಾರೋ ಆಸಾಮಿಗಳು ಕಳ್ಳತನದಿಂದ ಮರಳನ್ನು ಟ್ರಾಕ್ಟರ್ ಗೆ ತುಂಬಿಸಿ ಸಾಗಾಣಿಕೆ ಮಾಡುತ್ತಿರುತ್ತಾರೆಂದು ನನಗೆ ಭಾತ್ಮೀ ದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ದಾಳಿ ಮಾಡಲು ಪಂಚರಾಗಿ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡ ನಂತರ ಠಾಣೆಯಿಂದ ಸರ್ಕಾರಿ ಜೀಪು ಸಂಖ್ಯೆ ಕೆ ಎ 40–ಜಿ-281 ರಲ್ಲಿ.ಪೊಲೀಸ್ ಸಿಬ್ಬಂದಿಯವರಾದ ತಿಪ್ಪೇಶ್ ಪಿ ಸಿ 208,ಗುರುಸ್ವಾಮಿ ಪಿ ಸಿ 281  ರವರುಗಳೊಂದಿಗೆ ಪೊಲೀಸ್ ಠಾಣೆಯಿಂದ ಹೊರಟು  ಚಿಕ್ಕಗಂಗಸಂದ್ರ ಗ್ರಾಮದಲ್ಲಿರುವ  ಕೆರೆಯ ಬಳಿ ಹೋದಾಗ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರ್ ಟ್ರಾಲಿಗೆ ಮರಳನ್ನು ತುಂಬಿಸುತ್ತಿದ್ದು, ಪೋಲೀಸ್ ಜೀಪನ್ನು ನೋಡಿ ಮರಳು ತುಂಬಿಸುತ್ತಿದ್ದ ಆಸಾಮಿಗಳು ಪರಿಕರಗಳೊಂದಿಗೆ ಓಡಿ ಹೋಗಿದ್ದು,ಅವರನ್ನು ನಾವುಗಳು ಬೆನ್ನಟ್ಟಿದರು ಕತ್ತಲಲ್ಲಿ ಸಿಗಲಿಲ್ಲ. ಕೂಡಲೆ ಟ್ರಾಕ್ಟರ್ ಬಳಿಗೆ ಬಂದು ಪರಿಶೀಲಿಸಲಾಗಿ ಮಹೀಂದ್ರ ಕಂಪನಿಯ AP – 04-M- 4931 ನೊಂದಣಿ ಸಂಖ್ಯೆಯ ಟ್ರಾಕ್ಟರ್ ಇಂಜಿನ್ ಆಗಿದ್ದು,ಟ್ರಾಲಿಗೆ ಯಾವುದೇ ನೊಂದಣಿ ಸಂಖ್ಯೆ ಇರುವುದಿಲ್ಲ.ಟ್ರಾಲಿಗೆ ಬಾಡಿ ತುಂಬಾ ಮರಳು ತುಂಬಿರುತ್ತೆ. AP –04-M- 4931 ನೊಂದಣಿ ಸಂಖ್ಯೆಯ ಟ್ರಾಕ್ಟರ್ ಟ್ರಾಲಿ ಮಾಲೀಕ ಮತ್ತು ಚಾಲಕರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮರಳನ್ನು ಸಾಗಾಣಿಕೆ ಮಾಡಲು ನಿಷೇಧವಿದ್ದರು ಸಹ ಟ್ರಾಕ್ಟರ್ ಟ್ರಾಲಿಗೆ ಮರಳನ್ನು ಕಳ್ಳತನದಿಂದ ತುಂಬಿಸಿ ಸಾಗಣಿಕೆ ಮಾಡುತ್ತಿರುತ್ತಾರೆ.ಸ್ಥಳದಲ್ಲಿ ರಾತ್ರಿ ಪೋಲೀಸ್ ಜೀಪಿನ ಬೆಳಕಿನಲ್ಲಿ ರಾತ್ರಿ 8.00 ಗಂಟೆಯಿಂದ 9.00 ಗಂಟೆಯವರೆವಿಗು ಮರಳು ತುಂಬಿರುವ ಟ್ರಾಕ್ಟರ್ ಟ್ರಾಲಿಯನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು, ಟ್ರಾಕ್ಟರ್ ಟ್ರಾಲಿಯನ್ನು ಠಾಣೆಯ ಆವರಣಕ್ಕೆ ಸ್ಥಳಾಂತರಿಸಿ ರಾತ್ರಿ 9.30 ಗಂಟೆಗೆ ಠಾಣೆಗೆ ಬಂದು ಟ್ರಾಕ್ಟರ್ ಟ್ರಾಲಿಯ ಚಾಲಕ ಮತ್ತು ಮಾಲೀಕನ ವಿರುದ್ಧ  ಕಲಂ; 379 ಐ ಪಿ ಸಿ ರೀತ್ಯಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಠಾಣಾಧಿಕಾರಿಗಳಿಗೆ ಸೂಚಿಸಿದ್ದರ ಮೇರೆಗೆ ಮುಂದಿನ ಕ್ರಮ ಜರುಗಿಸಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 190/2019 ಕಲಂ. 323-332-353-504 ಐ.ಪಿ.ಸಿ:-

     ದಿನಾಂಕ: 01/10/2019 ರಂದು ಸಂಜೆ 5-00 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ  ಮೋಹನ್ ಕುಮಾರ್ ವೈ.ಎನ್. ಸಿ.ಪಿ.ಸಿ. 205 ಗೌರಿಬಿದನೂರು ಗ್ರಾಮಾಂತರ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಘನ ADD CJ & JMFC  ನ್ಯಾಯಾಲಯದ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ.  ಈ ದಿನ ದಿನಾಂಕ 01/10/2019 ರಂದು ಬೆಳಿಗ್ಗೆ 12.15 ಗಂಟೆಯಲ್ಲಿ ನ್ಯಾಯಾಲಯದ ಕಲಾಪಗಳು ನಡೆಯುತ್ತಿದ್ದಾಗ ನ್ಯಾಯಾಲಯದ ಹೊರಗೆ ನ್ಯಾಯಾಲಯದ ಆವರಣದಲ್ಲಿ ಯಾರೋ ಒಬ್ಬ ಅಸಾಮಿಯು ಅಸಭ್ಯವಾಗಿ ವರ್ತಿಸುತ್ತಾ ಕೂಗಾಡುತ್ತಿದ್ದು, ನಾನು ಆತನನ್ನು ನ್ಯಾಯಾಲಯದ ಕಲಾಪಗಳು ನಡೆಯುತ್ತಿದೆ ಅದಕ್ಕೆ ತೊಂದರೆಯಾಗುತ್ತಿದೆ ನಿಶ್ಯಬ್ದವಾಗಿರು ಎಂದು ಹೇಳಿದಾಗ ಆತ ಇದಕ್ಕಿದ್ದಂತೆ ನನ್ನ ಮೇಲೆ ನೀನು ಯಾವ ಪೊಲೀಸ್, ಕಾನೂನು ಸರಿಯಿಲ್ಲ, ಸಂವಿಧಾನ ಸರಿಯಿಲ್ಲ, ನ್ಯಾಯಮೂರ್ತಿಗಳು ಸರಿಯಿಲ್ಲ, ಮತ್ತು ಪೊಲೀಸ್ ಅಧಿಕಾರಿಗಳು ಸರಿಯಿಲ್ಲ, ಪೊಲೀಸರು ಲೋಫರ್ ನನ್ನ ಮಕ್ಕಳು ಎಂದು ನನ್ನ ಪೊಲೀಸ್ ಸಮವಸ್ತ್ರವನ್ನು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಓಡಿ ಹೋಗಿರುತ್ತಾನೆ. ನಂತರ ಸಾರ್ವಜನಿಕರನ್ನು ಆತನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರ ಮಾಡಲಾಗಿ ಆತನ ಹೆಸರು ಅರುಣ್ ಕುಮಾರ್ ಬಿನ್ ರಾಮೇಗೌಡ, ಹಿಂದೂಸಾದರು, ವ್ಯವಸಾಯ ರೆಡ್ಡಿದ್ಯಾವರಹಳ್ಳಿ ಗ್ರಾಮ ಎಂದು ತಿಳಿಸಿರುತ್ತಾರೆ. ನಂತರ ನಾನು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದು ಸಂಜೆ ಠಾಣೆಗೆ ಹಾಜರಾಗಿರುತ್ತೇನೆ. ಆದ್ದರಿಂದ ತಾವುಗಳು ನ್ಯಾಯಾಲಯದ ಆವರಣದಲ್ಲಿ ಗಲಾಟೆ ಮಾಡಿದ ಆಸಾಮಿಗೆ ಬುದ್ದಿ ಹೇಳಿ ತಡೆಯಲು ಹೋದ ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿರುವ  ಅರುಣ್ ಕುಮಾರ್ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ.190/2019 ಕಲಂ:323, 332, 353, 504 ಐಪಿಸಿ ರೀತ್ಯಾ ಪ್ರಕರಣ  ದಾಖಲಿಸಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 191/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ 01/10/2019 ರಂದು ರಾತ್ರಿ 8:00 ಗಂಟೆಗೆ ವಿ.ಅವಿನಾಶ್ ಪಿ.ಎಸ್.ಐ ಗೌರಿಬಿದನೂರು ಪುರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ.ದಿನಾಂಕ: 01-10-2019 ರಂದು ಸಂಜೆ 6:30 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ಪುರದ ಸಂತೇ ಮೈದಾನ ಈಶ್ವರ ದೇವಾಲಯದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ, ಕೂಡಲೇ ನಾನು ಠಾಣೆಗೆ ಪಂಚರನ್ನು ಕರೆಯಿಸಿಕೊಂಡು ಅವರಿಗೆ ವಿಚಾರವನ್ನು ತಿಳಿಸಿದ್ದು, ಅವರು ಒಪ್ಪಿಕೊಂಡ ನಂತರ ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ 49 ಫಯಾಜ್ ರವರೊಂದಿಗೆ ನಡೆದುಕೊಂಡು ಸಂತೇ ಮೈದಾನ ಈಶ್ವರ ದೇವಾಲಯದ ಮುಂಭಾಗ ಹೋಗಿ ಸ್ವಲ್ಫ ದೂರದಲ್ಲಿ  ಮರೆಯಲ್ಲಿ ನಿಂತು ನೋಡಿದಾಗ  ಈಶ್ವರ ದೇವಾಲಯದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿರುವುದು ಕಂಡುಬಂದಿದ್ದು. ನಾವು ಪಂಚರ ಸಮ್ಮುಖದಲ್ಲಿ ಅವನನ್ನು ಸಿಬ್ಬಂದಿ ಮುಖಾಂತರ ಹಿಡಿದುಕೊಂಡಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  ತನ್ನ ಹೆಸರು ಷೇಕ್ ಅಹಮದ್ ಬಾಬು ಬಿನ್ ಇಮಾಮ್ ಸಾಬ್, 48ವರ್ಷ, ಮುಸ್ಲಿಂ ಜನಾಂಗ ಕೂಲಿ ಕೆಲಸ, ನದಿಗಡ್ಡೆ ಗೌರಿಬಿದನೂರು ಪುರ ಎಂದು ತಿಳಿಸಿದ್ದು, ಅವರಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೆ ಪರವಾನಗಿ ಇಲ್ಲದೇ ಇದ್ದು, ಆರೋಪಿತನ ಬಳಿ ಒಂದು ಮಟ್ಕಾಚೀಟಿ ಹಾಗೂ ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 1120/- ರೂಪಾಯಿಗಳು  ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದ್ದು, ಸಂಜೆ 6:45 ಗಂಟೆಯಿಂದ  7:45 ಗಂಟೆಯವರೆಗೆ ಪಂಚನಾಮೆಯನ್ನು ಸ್ಥಳದಲ್ಲಿಯೆ ಠಾಣೆಗೆ ಒದಗಿಸಿರುವ ಲ್ಯಾಪ್ ಟ್ಯಾಪ್ ನಲ್ಲಿ ಟೈಪ್ ಮಾಡಿ ಆರೋಪಿ ಹಾಗೂ ಮಾಲಿನೊಂದಿಗೆ ರಾತ್ರಿ 8:00  ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮುಂದಿನ ಕ್ರಮಕ್ಕಾಗಿ  ವರಧಿಯನ್ನು ನೀಡಿದ್ದರ ಮೇರೆಗೆ ಎನ್.ಸಿ.ಆರ್ ದಾಖಲಿಸಿ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣಾ ಮೊ ಸಂ 191/2019 ಕಲಂ 78 ಕ್ಲಾಸ್ 3 ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 319/2019 ಕಲಂ. 279-337 ಐ.ಪಿ.ಸಿ:-

     ದಿನಾಂಕ 01/10/2019 ರಂದು ಬೆಳಿಗ್ಗೆ 11-45 ಗಂಟೆಗೆ ಪಿರ್ಯಾಧಿ ಒಂಟೂರು ಗ್ರಾಮದ ನರಸಿಂಹಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 30/09/2019 ರಂದು ಸಂಜೆ ಸುಮಾರು 5-00 ಗಂಟೆಯ ಸಮಯದಲ್ಲಿ ತನ್ನ ಮಗ ದೇವರಾಜ, 25 ವರ್ಷ, ಜಿರಾಯ್ತಿ ರವರು ಪೆರೆಸಂದ್ರ ಕ್ರಾಸ್ ನಲ್ಲಿ ಕೆಲಸ ಇದೆ ಎಂದು ಹೇಳಿ ಮನೆಯಿಂದ ತಮ್ಮ ಬಾಬತ್ತು ಕೆಎ40-ಡಬ್ಲ್ಯೂ-6428 ರ ದ್ವಿಚಕ್ರವಾಹನದಲ್ಲಿ ತಾನು ಚಾಲನೆ ಮಾಡಿಕೊಂಡು ಹೋದನು. ಹೀಗಿರುವಲ್ಲಿ ದಿನಾಂಕ 30/09/2019 ರಂದು ರಾತ್ರಿ ಸುಮಾರು 8-00 ಗಂಟೆಯ ಸಮಯದಲ್ಲಿ ತಾನು ತಮ್ಮ ಮನೆಯಲ್ಲಿರುವಾಗ ತನ್ನ ಮಗ ದೇವರಾಜರವರಿಗೆ ಮಾರನಾಯಕನಹಳ್ಳಿ ಗ್ರಾಮದ ಹತ್ತಿರ ಗುಡಿಬಂಡೆ-ಪೆರೆಸಂದ್ರ ಹೋಗುವ ರಸ್ತೆಯಲ್ಲಿ ರಸ್ತೆ ಅಪಘಾತವಾಗಿದ್ದು, ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರಗೆ ಕರೆದುಕೊಂಡು ಹೋಗುತ್ತಿರುವುದಾಗಿ ವಿಷಯ ತಿಳಿಯಿತು. ಆಗ ತಾನು ಮತ್ತು ತನ್ನ ಬಾಮೈದ ಗಂಗರಾಜ ಬಿನ್ ಆವುಲಪ್ಪ 40 ವರ್ಷ, ರವರು ತಕ್ಷಣ ಸದರಿ ಆಸ್ಪತ್ರೆ ಬಳಿ ಹೋದೆನು. ವಿಷಯ ನಿಜವಾಗಿದ್ದು, ತನ್ನ ಮಗ ದೇವರಾಜ ರವರ ತಲೆಗೆ ಮತ್ತು ಬಲಕೈಗೆ ಹಾಗೂ ಬಲಕಾಲಿಗೆ ರಕ್ತಗಾಯಗಳಾಗಿದ್ದವು. ವಿಚಾರಣೆ ಮಾಡಲಾಗಿ ದಿನಾಂಕ 30/09/2019 ರಂದು ರಾತ್ರಿ ಸುಮಾರು 07-30 ಗಂಟೆಯ ಸಮಯದಲ್ಲಿ ನನ್ನ ಮಗ ದೇವರಾಜ ರವರು ತನ್ನ ಬಾಬತ್ತು ಕೆಎ40-ಡಬ್ಲ್ಯೂ-6428 ರ ದ್ವಿಚಕ್ರವಾಹನದಲ್ಲಿ ಪೆರೆಸಂದ್ರ ಕ್ರಾಸ್ ನಿಂದ ನಮ್ಮ ಗ್ರಾಮಕ್ಕೆ ಬರಲು ಮಾರನಾಯಕನಹಳ್ಳಿ ಗ್ರಾಮದ ಹತ್ತಿರ ಗುಡಿಬಂಡೆ-ಪೆರೆಸಂದ್ರ ಹೋಗುವ ರಸ್ತೆಯಲ್ಲಿ ಬರುತ್ತಿದ್ದಾಗ ಇವನ ಎದರುಗಡೆಯಿಂದ ಬಂದ ಅಂದರೆ ಗುಡಿಬಂಡೆ ಕಡೆಯಿಂದ ಹೋದ ಕೆಎ40-6674 ಟಾಟ ಏಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನನ್ನ ಮಗ ಬರುತ್ತಿದ್ದ ಮೇಲ್ಕಂಡ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ್ದರಿಂದ ನನ್ನ ಮಗ ದೇವರಾಜ ರವರಿಗೆ ಮೇಲ್ಕಂಡಂತೆ ಗಾಯಗಳು ಆಗಿರುವ ಬಗ್ಗೆ ವಿಚಾರ ತಿಳಿಯಿತು.        ಇಲ್ಲಿನ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಯಲಹಂಕದ ಶುಶೃಷ ಆಸ್ಪತ್ರೆಗೆ ತನ್ನ ದೊಡ್ಡಮಗ ಶಿವಪ್ಪ 28 ವರ್ಷ, ತನ್ನ ಅಣ್ಣನ ಮಗ ಸುರೇಶ ಬಿನ್ ಆವುಲಪ್ಪ 25 ವರ್ಷ ರವರು ಕರೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿರುತ್ತಾರೆ. ಕೃತ್ಯ ನಡೆದ ಸ್ಥಳವನ್ನು ನೋಡಿ ಈಗ ಠಾಣೆಗೆ  ಬಂದು ದೂರು ನೀಡುತ್ತಿದ್ದು, ರಸ್ತೆ ಅಪಘಾತ ಉಂಟು ಪಡಿಸಿದ ಕೆಎ40-6674 ಟಾಟ ಏಸ್ ವಾಹನದ ಚಾಲಕನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 320/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 01/10/2019 ರಂದು ಡಿ,ಸಿ,ಬಿ ಮತ್ತು ಸಿ,ಇ.ಎನ್ ಪೊಲೀಸ್ ಠಾಣೆಯ ಪಿ.ಐ ಶ್ರೀ ಮುನಿಕೃಷ್ಣ ಡಿ.ಎಚ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 01/10/2019 ರಂದು ಗುಡಿಬಂಡೆ ಪೊಲೀಸ್ ಠಾಣೆ ಸರಹದ್ದಿನಲ್ಲಿ ಕನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಕರ್ತವ್ಯದಲ್ಲಿದ್ದಾಗ ಸಂಜೆ 5.00 ಘಂಟೆಯಲ್ಲಿ ಪೆರೇಸಂದ್ರ ಗ್ರಾಮದಲ್ಲಿದ್ದಾಗ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ತಾನು ಮತ್ತು ಸಿಬ್ಬಂದಿಗಳಾದ ಸಿ.ಎಚ್.ಸಿ 208 ಗಿರೀಶ್, ಸಿ.ಎಚ್.ಸಿ 205 ರಮೇಶ, ಸಿ,ಎಚ್,ಸಿ 85 ನರಸಿಂಹ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-270 ರಲ್ಲಿ ಪಂಚರನ್ನು ಬರಮಾಡಿಕೊಂಡು ಗುಡಿಬಂಡೆ ಪೊಲೀಸ್ ಠಾಣೆ ಸರಹದ್ದಿನ ವರ್ಲಕೊಂಡ ಗ್ರಾಮದ ಶ್ರೀನಿವಾಸಚಾರಿ ಬಿನ್ ಲೇಟ್ ರಾಮಚಾರಿ, 58 ವರ್ಷ, ವಿಶ್ವಕರ್ಮ, ಚಿಲ್ಲರೆ ಅಂಗಡಿ ವ್ಯಾಪಾರಿ, ರವರು ತನ್ನ ಚಿಲ್ಲರೆ ಅಂಗಡಿ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಮದ್ಯಸೇವನೆಗೆ ಸ್ಥಳವಕಾಶ ಮಾಡಿಕೊಟ್ಟಿದ್ದರ ಮೇಲೆ ದಾಳಿ ಮಾಡಿ ಶ್ರೀನಿವಾಸಚಾರಿ ರವರನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ 1) ಮದ್ಯ ಸೇವನೆ ಮಾಡಿರುವ ನಿಶಾನೆ ಇರುವ 02 ಪ್ಲಾಸ್ಟಿಕ್ ಗ್ಲಾಸುಗಳು, 2) 180 ಎಂ,ಎಲ್ ನ ಓಲ್ಡ್ ಟಾವೆರೆನ್ ವಿಸ್ಕಿ ಕಂಪನಿಯ 02 ಖಾಲಿ ಮದ್ಯದ ಟೆಟ್ರಾ  ಪಾಕೆಟ್ಗಳು 3) ಒಂದು ಲೀಟರ್ನ ಒಂದು ಖಾಲಿ ಪ್ಲಾಸ್ಟಿಕ್ ನೀರಿನ ಬಾಟೆಲ್ 4) 180 ಎಂ,ಎಲ್ ನ 10 ಓಲ್ಡ್ ಟಾವೆರೆನ್ ವಿಸ್ಕಿ ಕಂಪನಿಯ ಮದ್ಯದ ಟೆಟ್ರಾ  ಪಾಕೆಟ್ಗಳನ್ನು ಕೇಸಿನ ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡಿರುವ ಮದ್ಯವು 1 ಲೀಟರ್ 800 ಎಮ್.ಎಲ್ ಇದ್ದು ಇದರ ಬೆಲೆ 741/ರೂಗಳಾಗಿರುತ್ತೆ. ಆರೋಪಿತನನ್ನು ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 134/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 02/10/2019 ರಂದು ಬೆಳಿಗ್ಗೆ 10-30 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:-02/10/2019 ರಂದು ಬೆಳಿಗ್ಗೆ ನಾನು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ರಾಸಪಲ್ಲಿ ಗ್ರಾಮದಲ್ಲಿ ಯಾರೋ ಒಬ್ಬ ಅಸಾಮಿ ತನ್ನ  ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟು ತೊಂದರೆ ಉಂಟು ಮಾಡುತ್ತಿರುವುದಾಗಿ ಮ ಹೆಚ್.ಸಿ 251 ಸಾವಿತ್ರಮ್ಮ  ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಸರ್ಕಾರಿ ವಾಹನ ಸಂಖ್ಯೆ ಕೆಎ 40 ಜಿ 140 ಜೀಪ್ ನಲ್ಲಿ ನಾನು, ಚಾಲಕನಾದ ಎ ಹೆಚ್ ಸಿ-29 ಮುರಳೀಧರ, ಮ ಹೆಚ್.ಸಿ 251 ಸಾವಿತ್ರಮ್ಮ ರವರೊಂದಿಗೆ ರಾಸಪಲ್ಲಿಗೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರೊಂದಿಗೆ ರಾಸಪಲ್ಲಿ ಗ್ರಾಮದ ಚಿಲ್ಲರೆ ಅಂಗಡಿ ಮಾಲೀಕನಾದ ನರಸಿಂಹಪ್ಪ ರವರು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಸದರಿ ಸ್ಥಳವನ್ನು ಸುತ್ತುವರಿದಾಗ ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಓಡಿಹೋಗಿದ್ದು,  ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಚಿಲ್ಲರೆ ಅಂಗಡಿಯ ಮಾಲೀಕ ನರಸಿಂಹಪ್ಪ ಸಹ ಓಡಿ ಹೋಗಿರುತ್ತಾನೆ. ಓಡಿ ಹೋದ ಅಸಾಮಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ ನರಸಿಂಹಪ್ಪ @ ಪೆದ್ದೋಡು ಬಿನ್ ಗಂಗುಲಪ್ಪ, 40 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ರಾಸಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪೇಪರ್  ಗ್ಲಾಸ್ ಗಳು, ಖಾಲಿ ಇದ್ದ ಎರಡು  HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿಯೇ  ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಇದ್ದು ಪರಿಶೀಲಿಸಲಾಗಿ 90 ಎಂ.ಎಲ್ ನ HAYWARDS CHEERS WHISKEY ಮಧ್ಯದ 13 ಟೆಟ್ರಾ ಪ್ಯಾಕೆಟ್ ಗಳು ಇದ್ದು ಒಂದರ ಬೆಲೆ 30.32/- ರೂ  ಆಗಿದ್ದು, 13 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 394.16/-ರೂ ಆಗಿರುತ್ತೆ. ಮದ್ಯ ಒಟ್ಟು 1170 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೆ ಇರುವುದರಿಂದ ನರಸಿಂಹಪ್ಪ ಓಡಿ ಹೋಗಿರುತ್ತಾನೆ. ನಂತರ HAYWARDS CHEERS WHISKEY 90 ಎಂ.ಎಲ್ ಮಧ್ಯದ 13 ಟೆಟ್ರಾ ಪ್ಯಾಕೆಟ್ ಗಳನ್ನು, ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪೇಪರ್ ಗ್ಲಾಸ್ ಗಳನ್ನು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಗಳನ್ನು ಬೆಳಿಗ್ಗೆ 9-00 ರಿಂದ 10-00 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ.  ಸದರಿ ಮಾಲನ್ನು ನಿಮ್ಮ ಮುಂದೆ ಈ ನನ್ನ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ನರಸಿಂಹಪ್ಪ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 264/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:01/10/2019 ರಂದು ಠಾಣಾ ಹೆಚ್.ಸಿ.137 ಶ್ರೀ ಮಂಜುನಾಥ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:01/10/2019 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ನಾನು ಗ್ರಾಮ ಗಸ್ತು ಮಾಡುತ್ತಿದ್ದಾಗ, ನನಗೆ ಬಂದ ಮಾಹಿತಿ ಏನೇಂದರೆ  ಬಿಸಲಹಳ್ಳಿ ಗ್ರಾಮದ ಗೋವಿಂದಪ್ಪ ಬಿನ್ ಲೇಟ್ ಅಂಜಿನಪ್ಪ,   ಎಂಬುವರು ಬಿಸಲಹಳ್ಳಿ  ಗ್ರಾಮದ ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರೊಂದಿಗೆ  ಬೆಳಿಗ್ಗೆ 11-15  ಗಂಟೆಯ ಸಮಯಕ್ಕೆ ಬಿಸಲಹಳ್ಳಿ ಗ್ರಾಮದ ಗೋವಿಂದಪ್ಪ ಬಿನ್ ಲೇಟ್ ಅಂಜಿನಪ್ಪ,  ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಗೋವಿಂದಪ್ಪ ಬಿನ್ ಲೇಟ್ ಅಂಜಿನಪ್ಪ,   65ವರ್ಷ, ಒಕ್ಕಲಿಗರು ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಬಿಸಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್.ಸಾಮರ್ಥ್ಯದ ಮಧ್ಯ ತುಂಬಿರುವ ಹೈವಾಡ್ಸ್ ಚಿಯರ್ಸ್ ವಿಸ್ಕಿಯ 12  ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು  ಪಂಚನಾಮೆಯ ಮೂಲಕ  ಬೆಳಿಗ್ಗೆ 11-30 ಗಂಟೆಯಿಂದ 12-30 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 372/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಗೋವಿಂದಪ್ಪ ಬಿನ್ ಲೇಟ್ ಅಂಜಿನಪ್ಪ, ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 138/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ.02.10.2019 ರಂದು ಪಿ.ಎಸ್.ಐ ರವರು ಆರೋಪಿ ಮತ್ತು ಮಾಲನ್ನು ಮಹಜರ್ ನೊಂದಿಗೆ ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ಶ್ರೀ.ಲಿಯಾಕತ್ ಉಲ್ಲಾ ಪಿ.ಎಸ್.ಐ ರವರು ದಿನಾಂಕ:02/10/2019 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಠಾಣೆಯ ಸಿಬ್ಬಂದಿಯವರಾದ ಪಿ.ಸಿ.134 ಧನಂಜಯ್, ಪಿ.ಸಿ.129 ರಾಮಚಂದ್ರ ಪಿ.ಸಿ.126. ವೆಂಕಟೇಶ್ ರವರೊಂದಿಗೆ ಶಿಡ್ಲಘಟ್ಟ ನಗರದ ಗಸ್ತಿನಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ಟಿ.ಬಿ ರಸ್ತೆಯ ಕೃಷ್ಣಸ್ವಾಮಿ ದೇವಾಲಯದ ಸಮೀಪ ಬೀಡಾ ಅಂಗಡಿಯ ಮುಂದೆ ಪಾನ್ ಬೀಡಾ ವ್ಯಾಪಾರಿಯೊಬ್ಬರು ಸಾರ್ವಜನಿಕರ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಮಾಹಿತಿ ಬಂದಿದ್ದು, ಪಂಚಾಯ್ತಿದಾರರು ಬರಮಾಡಿಕೊಂಡು ಇವರು ಸಿಬ್ಬಂಸಿಯವರನ್ನು ಕರೆದುಕೊಂಡು ಬೆಳಿಗ್ಗೆ 9-25 ಗಂಟೆಗೆ ಸದರಿ ಸ್ಥಳದಲ್ಲಿ ದಾಳಿ ಮಾಡಿದಾಗ ಪಾನ್ ಬೀಡಾ ಅಂಗಡಿ ಮುಂದೆ ಯಾರೋ ಸಾರ್ವಜನಿಕರು ಮದ್ಯಪಾನ ಸೇವನೆ ಮಾಡುತ್ತಿದ್ದು, ನಮ್ಮನ್ನು  ಕಂಡು ಮದ್ಯಪಾನ ಮಾಡುತ್ತಿದ್ದ 2 ಜನ ಆಸಾಮಿಗಳು ಓಡಿ ಹೋಗಿದ್ದು, ಸದರಿ ಸ್ಥಳದಲ್ಲಿದ್ದ ವ್ಯಾಪಾರ ಮಾಡುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಆಕೆಯ ಹೆಸರು ವಿಳಾಸ ಕೇಳಲಾಗಿ ಮುನಿನಾರಾಯಣ ಬಿನ್ ಗೌಡಪ್ಪ, 48 ವರ್ಷ, ತಿಗಳರು, ಪಾನ್ ಬೀಡಾ ವ್ಯಾಪಾರಿ, ಕೆ.ಕೆ.ಪೇಟೆ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾನೆ. ಸದರಿ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಿ ಬಿಸಾಡಿದ್ದ 90 ಎಂ.ಎಲ್ ನ ರಾಜಾ ವಿಸ್ಕೀ ಲೇಬಲ್ ಇರುವ 02 ಖಾಲಿ ಮದ್ಯದ ಪಾಕೇಟ್ ಗಳು, ಪಕ್ಕದಲ್ಲಿ 90 ಎಂ.ಎಲ್ ನ ರಾಜ ವಿಸ್ಕಿ ಲೇಬಲ್ ಇರುವ 06 ಮದ್ಯದ ಪಾಕೇಟ್ ಇದ್ದು ಇವುಗಳ ಬೆಲೆ 182-00 ರೂಗಳಾಗಿದ್ದು ಹಾಗೂ ಮದ್ಯಪಾನ ಸೇವನೆ ಮಾಡಿರುವ 02-ಖಾಲಿ ಪ್ಲಾಸ್ಟೀಕ್ ಪೇಪರ್ ಗ್ಲಾಸ್ ಗಳು ಇರುತ್ತೆ. ಅಂಗಡಿ ವ್ಯಾಪಾರಿ ಮುನಿನಾರಾಯಣ ರವರು ಸಾರ್ವಜನಿಕರ ಸ್ಥಳದಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಸದರಿ ಅಂಗಡಿ ವ್ಯಾಪಾರಿ ಮುನಿನಾರಾಯಣ ರವರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ದೊರೆತ ಮೇಲ್ಕಂಡ ಮಾಲುಗಳನ್ನು ಮುಂದಿನ ಕ್ರಮದ ಬಗ್ಗೆ ಬೆಳಿಗ್ಗೆ 9-30 ರಿಂದ 10-00 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲು ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ಒಪ್ಪಿಸಿ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲು ಮಾಡಿರುತ್ತೇನೆ.