ದಿನಾಂಕ :02/08/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 179/2020 ಕಲಂ. 269,323,353,504,506 ರೆ/ವಿ 34 ಐ.ಪಿ.ಸಿ &  4 KARNATAKA PROHIBITION OF VIOLENCE AGAINST MEDICARE SERVICE PERSONNEL AND DAMAGE TO PROPERTY IN MEDICARE SERVICE INSTITUTIONS ACT , 2009:-

          ದಿ: 01-08-2020 ರಂದು ಸಂಜೆ 5:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಡಾ.ಸತ್ಯನಾರಾಯಣರೆಡ್ಡಿ.ಸಿಎನ್. ತಾಲ್ಲೂಕು ಆರೋಗ್ಯಾಧಿಕಾರಿಗಳು, ಬಾಗೇಪಲ್ಲಿ ತಾಲ್ಲೂಕು, ಬಾಗೇಪಲ್ಲಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ನಾನು ಬಾಗೇಪಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾಗಿ ಸುಮಾರು ಮೂರೂವರೆ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ.  ಅದರಂತೆ ನಾನು ದಿ: 31-07-2020 ರಂದು ಬಾಗೇಪಲ್ಲಿ ತಾಲ್ಲೂಕು, ಘಂಟಂವಾರಿಪಲ್ಲಿ ಪಂಚಾಯ್ತಿ, ಕಸಬಾ ಹೊಸಹುಡ್ಯ ಗ್ರಾಮದಲ್ಲಿ ಎರಡು ಕೊರೋನಾ ಪ್ರಕರಣಗಳು ದೃಡಪಟ್ಟಿರುವ ಹಿನ್ನೆಲೆಯಲ್ಲಿ, ಸಾಂಕ್ರಾಮಿಕ ರೋಗವಾದ ಕೋವೀಡ್-19 ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಮೇಲ್ಕಂಡ ರೋಗಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ವ್ಯಕ್ತಿಗಳಿಗೆ ಕೊರೋನಾ ಪರೀಕ್ಷೆ ನಡೆಸುವ ಸಲುವಾಗಿ ನಾನು ಮತ್ತು ನಮ್ಮ ಸಿಬ್ಬಂಧಿಯವರಾದ 1] ವೆಂಕಟೇಶಪ್ಪ.ಕೆಎಮ್, ಲ್ಯಾಬ್ ಟೆಕ್ನಾಲಜಿಸ್ಟ್, 2] ಚೇತನ್, ಡೇಟಾ ಎಂಟ್ರಿ ಆಪರೇಟರ್ ರವರುಗಳು ದಿ: 01-08-2020 ರಂದು ಮದ್ಯಾಹ್ನ 2:00 ಗಂಟೆಗೆ ನಮ್ಮ ವಾಹನ ಸಂಖ್ಯೆ: KA-07-G-206 ರಲ್ಲಿ ನಮ್ಮ ಚಾಲಕ ಶ್ರೀನಿವಾಸ ರವರೊಂದಿಗೆ ಹೊಸಹುಡ್ಯ ಗ್ರಾಮದ ರೋಗಿಗಳ ಮನೆಯ ಬಳಿಗೆ ಹೋಗಿ, ಅವರ ಮನೆಯ  ಅಕ್ಕಪಕ್ಕದ ಮನೆಗಳಲ್ಲಿರುವವರಿಗೆ ಕೊರೋನಾ ರಾಪೀಡ್ ಆಂಟಿಜನ್ ಟೆಸ್ಟ್ ಮಾಡಿದಾಗ, ಅವರಲ್ಲಿ ಬಾಲಕೃಷ್ಣ @ ಬಾಲ ಎಂಬುವವರ ಅಣ್ಣನಿಗೆ ಪಾಸಿಟೀವ್ ಬಂದಿರುತ್ತದೆ. ನಂತರ ಸುಮಾರು ಮದ್ಯಾಹ್ನ 3:30 ಗಂಟೆಗೆ ನಾವುಗಳು ಅವರ ಮನೆಯ ಬಳಿಗೆ ಹೋಗಿ, ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರ ವಿವರಗಳನ್ನು ಕೇಳುತ್ತಿದ್ದಾಗ, ಸೋಂಕಿತ ವ್ಯಕ್ತಿಯ ತಮ್ಮ  ಬಾಲಕೃಷ್ಣ @ ಬಾಲ ಎಂಬುವವರು ಬಂದು ‘ ನೀವು ಮಾಡುತ್ತಿರುವ ಟೆಸ್ಟ್ ಗಳೆಲ್ಲವೂ  ಸುಳ್ಳು, ನಿಮಗೆ ಸರ್ಕಾರದಿಂದ ಹಣವು ಬರುವುದರಿಂದ, ನಮಗೆ ಈ ರೀತಿ ಸುಳ್ಳು ಪರೀಕ್ಷೆಗಳನ್ನು ಮಾಡುತ್ತಿದ್ದೀರಾ ? ಎಷ್ಟು ದೈರ್ಯ ನಿಮಗೆ, ನಮ್ಮ ಮನೆಯ ಹತ್ತಿರ ಬಂದು ನಮಗೇ ಟೆಸ್ಟ್ ಮಾಡುವುದಕ್ಕೆ ನನ್ನ ಮಕ್ಕಳಿರಾ’, ಎಂದು ಇತ್ಯಾಧಿ ಕೆಟ್ಟ ಪದಗಳಿಂದ ಅವಾಚ್ಯವಾಗಿ ನಿಂಧಿಸುತ್ತಾ ನಮ್ಮ ಮೇಲೆ ಜಗಳಕ್ಕೆ ಬಂದಿದ್ದು, ಆತನೊಂದಿಗೆ ಇದ್ದ ಮಂಜು ಮತ್ತು ಅನಿಲ್ ಎಂಬುವವರು ಸಹ ಕೆಟ್ಟ ಮಾತುಗಳಿಂದ ಬೈಯ್ಯತ್ತಾ, ಎಲ್ಲರೂ ನಮ್ಮನ್ನು ಹಿಡಿದುಕೊಂಡು ಎಳೆದಾಡಿದ್ದು, ಬಾಲಕೃಷ್ಣ ನನ್ನನ್ನು ಕೈಗಳಿಂದ ಹೊಡೆದು ಮೂಗೇಟು ಉಂಟು ಮಾಡಿದ್ದು, ನಾನು ಬಿಡಿಸಿಕೊಳ್ಳುವಷ್ಟರಲ್ಲಿ ಅಲ್ಲಿಯೇ ಇದ್ದ ದೊಣ್ಣೆಯನ್ನು ಎತ್ತಿಕೊಂಡು ನನ್ನ ಬಳಿ ಬಂದು ನಿನ್ನನ್ನು ಮುಗಿಸಿಬಿಡುತ್ತೇನೆಂದು ಹೊಡೆಯಲು ಎತ್ತಿರುತ್ತಾನೆ.  ಅಷ್ಟರಲ್ಲಿ ನಮ್ಮ ಸಿಬ್ಬಂಧಿಯವರಾದ ವೆಂಕಟೇಶಪ್ಪ ಮತ್ತು ಚೇತನ್ ರವರು ಅಡ್ಡಬಂದು, ನನ್ನನ್ನು ರಕ್ಷಿಸಿ, ನಾವು ಸ್ಥಳದಿಂದ ಹೊರಟುಹೋಗೋಣವೆಂದು ಹೇಳಿದ್ದು, ಅಲ್ಲಿಂದ ನಾವುಗಳು ವಾಪಸ್ಸು ಬಂದು ಬಿಟ್ಟಿರುತ್ತೇವೆ.  ಆದ್ದರಿಂದ ನಮ್ಮ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯವಾಗಿ ನಿಂಧಿಸಿ, ಕೈಗಳಿಂದ ಹೊಡೆದು ಮೂಗೇಟು ಉಂಟು ಮಾಡಿ,  ದೊಣ್ಣೆಯನ್ನು ತೆಗೆದುಕೊಂಡು ಬಂದು ಕೊಲೆ ಬೆದರಿಕೆ ಹಾಕಿರುವ ಮೇಲ್ಕಂಡ ಹೊಸಹುಡ್ಯ ಗ್ರಾಮದ ವಾಸಿಗಳಾದ ಬಾಲ @ ಬಾಲಕೃಷ್ಣ, ಮಂಜು ಮತ್ತು ಅನಿಲ್ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಈ ಮೂಲಕ ಕೋರುತ್ತೇನೆ, ಎಂದು ದೂರು.

  1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 35/2020 ಕಲಂ. ಮನುಷ್ಯ ಕಾಣೆ:-

          ದಿನಾಂಕ: 01-08-2020 ರಂದು ಬೆಳಗ್ಗೆ 7-30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ವೈಧ್ಯರಾದ ಡಾ|| ವಿಜಯಾ ರವರು  ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ,  ದಿನಾಂಕ: 30-07-2020 ರಂದು  ಬೆಳಗ್ಗೆ 9-30 ಗಂಟೆಯಲ್ಲಿ ಚಿಂತಾಮಣಿ ತಾಲ್ಲೂಕು ಸೀತಾರಾಮಪುರ ಗ್ರಾಮದ ವಾಸಿಯಾದ ಆಂಜಿನಪ್ಪ 55 ವರ್ಷ ಎಂಬುವವರು ವಿಷ ಸೇವಿಸಿರುವುದಾಗಿ  ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿರುತ್ತಾರೆ.  ಅವರಿಗೆ ಕೊವೀಡ್-19 ಪರೀಕ್ಷೆ ಮಾಡಲಾಗಿ  positive ಬಂದ್ದಿದ್ದರಿಂದ ಅವರನ್ನು  ಅದೇ ದಿನ ದಿನಾಂಕ: 30-07-2020 ರಂದು  ಚಿಕ್ಕಬಳ್ಳಾಪುರ ಕೋವಿಡ್ ಅಸ್ಪತ್ರೆಗೆ ದಾಖಲಸಿ ಚಿಕಿತ್ಸೆಯನ್ನು  ಪಡೆಯುತ್ತಿದ್ದು ದಿನಾಂಕ: 31-07-2020 ರಂದು  ರಾತ್ರಿ 8-00 ಗಂಟೆಯಲ್ಲಿ  ಆಂಜಿನಪ್ಪ ಊಟ ಸೇವನೆ ಮಾಡಿರುತ್ತಾರೆ. ನಂತರ  9-00 ಗಂಟೆಯಲ್ಲಿ  ರಾತ್ರಿ ಪಾಳೆಯ  ವೈದ್ಯರು ಹಾಗೂ ಶುಶ್ರೂಶಕರು  ರಾತ್ರಿ ರೌಂಡ್ಸ್ ಗೆ  ಹೋಗಿ ನೋಡಿದಾಗ ಆಂಜಪ್ಪ ರವರು  ತನ್ನ ಹಾಸಿಗೆಯಲ್ಲಿ ಇಲ್ಲದೆ ಇರುವುದು ಕಂಡು ಬಂದಿದ್ದು  ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂಧಿಯವರು  ಆಂಜಿನಪ್ಪ ರವರನ್ನು  ಆಸ್ಪತ್ರೆ ಹಾಗೂ  ಹೋರಗೆ ಸುತ್ತ ಮುತ್ತಲೂ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಆಗ ಆತನ ಮಗನನ್ನು ದೂರವಾಣಿಯ ಮುಖಾಂತರ ಸಂಪರ್ಕಿಸಿ ವಿಷಯವನ್ನು ತಿಳಿಸಿರುತ್ತಾರೆ.  ಈ ವಿಷಯವಾಗಿ  ರೋಗಿಯನ್ನು ಪತ್ತೆ ಮಾಡಿ ಕೊಡುವ ಬಗ್ಗೆ  ಕೋರಿ ನೀಡಿದ ದೂರಿನ ಮೇರೆಗೆ  ಪ್ರಕರಣವನ್ನು  ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 286/2020 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ: 01/08/2020 ರಂದು ರಾತ್ರಿ 8.10 ಗಂಟೆಗೆ ಶ್ರೀ. ಅಶ್ವಥನಾರಾಯಣಸ್ವಾಮಿ, ಎ.ಎಸ್.ಐ, 59 ವರ್ಷ, ಚಿಂತಾಮಣಿ ಗ್ರಾಮಾಂತರ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 01/08/2020 ರಂದು ತನಗೆ ಹೆದ್ದಾರಿ ಗಸ್ತು-3 ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾನು ಕೆಎ-03 ಜಿ-1423 ನೋಂದಣಿ ಸಂಖ್ಯೆಯ ಹೈವೈ ಪೆಟ್ರೋಲ್ ವಾಹನದಲ್ಲಿ ಚಾಲಕನಾದ ಎಪಿಸಿ 04 ಆರ್.ಶ್ರೀನಿವಾಸ ರವರೊಂದಿಗೆ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯಲ್ಲಿ ಗಸ್ತು ಮಾಡಿಕೊಂಡು ಸಂಜೆ 6.45 ಗಂಟೆ ಸಮಯದಲ್ಲಿ ಮಾಡಿಕೆರೆ ಕ್ರಾಸ್ ಕಡೆಯಿಂದ ಮುನಗನಹಳ್ಳಿ-ಚಿನ್ನಸಂದ್ರ ಮಾರ್ಗಮದ್ಯೆ ಹೋಗುತ್ತಿದ್ದಾಗ, ರಸ್ತೆಯ ಬದಿಯಲ್ಲಿ ಜನರು ಸೇರಿದ್ದು ತಾವು ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯ ಮುಖ, ಹಣೆಗೆ ರಕ್ತಗಾಯಗಳಾಗಿ ಕೈ-ಕಾಲುಗಳಿಗೆ ತರಚಿದ ಗಾಯಗಳಾಗಿದ್ದು ಆತನನ್ನು ಸಾರ್ವಜನಿಕರು ಉಪಚರಿಸುತ್ತಿದ್ದರು. ಸ್ಥಳದಲ್ಲಿ ಕೆಎ-08 ಕ್ಯೂ-6170 ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನ ಬಿದ್ದಿದ್ದು ಜಖಂ ಆಗಿರುತ್ತೆ. ತಾನು ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಸದರಿ ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ಸದರಿ ದ್ವಿಚಕ್ರ ವಾಹನದ ಸವಾರ ಬೆಂಗಳೂರು ಕಡೆಯಿಂದ ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಹಿಂದುಗಡೆಯಿಂದ ಬರುತ್ತಿದ್ದ ಯಾವುದೋ ಒಂದು ವಾಹನವನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೆ ಹೊರಟು ಹೋದ ಪರಿಣಾಮ ಆತನು ವಾಹನ ಸಮೇತ ಬಿದ್ದು ಗಾಯಗೊಂಡಿರುವುದಾಗಿ ತಿಳಿಸಿರುತ್ತಾರೆ. ನಂತರ ತಾವು ಸ್ಥಳಕ್ಕೆ ಆಂಬುಲೆನ್ಸ್ ನ್ನು ಕರೆಯಿಸಿಕೊಂಡು ಸದರಿ ಗಾಯಗೊಂಡಿದ್ದ ವ್ಯಕ್ತಿಯನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತೇವೆ. ನಂತರ ಅಪಘಾಕ್ಕೀಡಾದ ದ್ವಿಚಕ್ರ ವಾಹನದ ಸವಾರನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಬಸವರಾಜ ಬಿನ್ ನರಸಿಂಹಪ್ಪ, ಟಿ.ಸಿ.ಪಾಳ್ಯ, ಕೆ.ಆರ್.ಪುರಂ, ಬೆಂಗಳೂರು ಎಂದು ತಿಳಿದು ಬಂದಿರುತ್ತೆ. ಆದ್ದರಿಂದ ಅಪಘಾತಪಡಿಸಿ ಹೊರಟು ಹೋಗಿರುವ ವಾಹನವನ್ನು ಪತ್ತೆ ಮಾಡಿ ಅದರ ಚಾಲಕನ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 190/2020 ಕಲಂ. 279 ಐ.ಪಿ.ಸಿ:-

          ದಿನಾಂಕ 01/08/2020 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿ ಆದಿನಾರಯಣಪ್ಪ ಬಿನ್ ಯರ್ರಪ್ಪ, 47ವರ್ಷ,ಬೋವಿ ಜನಾಂಗ, ಶಂಖಂವಾರಪಲ್ಲಿ ಗ್ರಾಮ, ಬಾಗೇಪಲ್ಲಿತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ಪಿರ್ಯಾದಿ, ಮತ್ತು ಚಾಲಕ ವಿಜಯ್ ಕುಮಾರ್ ರವರು ದಿನಾಂಕ 30/07/2020 ರಂದು ಕೆಲಸದ ನಿಮಿತ್ತ ಬಾಡಿಗಾಗಿ KA-40-B-0177 ಸ್ವಿಪ್ಟ್ ಕಾರಿನಲ್ಲಿ ಚಾಲಕನೊಂದಿಗೆ ಬಂದಿದ್ದು ನಂತರ ಗೌರಿಬಿದನೂರು ನಿಂದ ಹಿಂದೂಪುರಕ್ಕೆ ಸುಮಾರು 11-00 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ ಚಿಕ್ಕಕುರುಗೊಡು ಗ್ರಾಮದಿಂದ ಸ್ವಲ್ಪ ದೂರದಲ್ಲಿ ಹೋಗುತ್ತಿದ್ದಾಗ ನಾಯಿಯು ಅಡ್ಡ ಬಂದಿದ್ದಕ್ಕೆ ಚಾಲಕನು ಅದನ್ನು ಪ್ರಣಾಪಾಯದಿಂದ ಪಾರು ಮಾಡಲು ಹೋಗಿ ರಸ್ತೆಯ ಡಿವೈಡರ್ ಗೆ ಬಡಿದು ರಸ್ತೆಯ ಎಡ ಬಾಗದ ಚರಂಡಿಗೆ ಮುಗಿಚ್ಚಿ ಬಿದ್ದಿದ್ದು ಆಸಮಯದಲ್ಲಿ ನನಗೂ ಮತ್ತುಚಾಲಕನಿಗೆ ಯಾವುದೇ ಪ್ರಾಣಾಪಾಯವಾಗಿರುವುದಿಲ್ಲ ಸದರಿ ಕಾರಿನ ಮುಂಭಾಗ ಜಿನ್ ಐದು ಡೊರ್ ಗಳು ಜಖಂ ಆಗಿರುತ್ತೆ ಈ ಘಟನೆಯು ಚಾಲಕನ ಅತಿವೇಗ ಅಜಾಗರೂಕತರಯಿಂದ ಚಾಲನೆ ಮಾಡಿದ್ದು ಅದ್ದರಿಂದ ಕಾರಿನ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ದೂರು ಪಿರ್ಯಾದಿ ತುರ್ತು ಕೆಲಸ ಇದ್ದುದರಿಂದ ನನ್ನ ಕೆಲಸ ಮುಗಿಸಿಕೊಂಡು ಬಂದು ತಡವಾಗಿ ದೂರು ನೀಡಿರುತ್ತೇನೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 174/2020 ಕಲಂ. 457,380 ಐ.ಪಿ.ಸಿ:-

          ದಿನಾಂಕ:02/08/2020 ರಂದು ಪಿರ್ಯಾದಿದಾರರಾದ ಶ್ರೀ ರಾಮಚಂದ್ರಪ್ಪ ಎನ್. ಬಿನ್ ನರಸಿಂಹಪ್ಪ 34 ವರ್ಷ ಪ.ಜಾತಿ ಅಲ್ಲಿಪುರ ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಅಲ್ಲೀಪುರ ಗ್ರಾಮದ ಬಸ್ ನಿಲ್ದಾಣದಲ್ಲಿ ರಾಮು ಎಂಟರ್ ಪ್ರೈಸೆಸ್ ನಲ್ಲಿ ಬ್ಯಾಂಕ್ ಆಫ್ ಬರೋಡದ ಬಿಸೆನೆಸ್ ಕರೆಸ್ ಪಾಂಡೆನಸ್ ಸೇವಾಸಿಂದೂ, ಕಾಮನ್ ಸರ್ಇಸ್ ಸೆಂಟರ್ ಹಾಗೂ ಮೊಬೈಲ್ ಅಂಗಡಿಯನ್ನು ಇಟ್ಟುಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಾನು ಎಂದಿನಂತೆ ದಿನಾಂಕ:01/08/2020 ರಂದು ಬೆಳಿಗ್ಗೆ 8-00 ಗಂಟೆಗೆ ಅಂಗಡಿಯನ್ನು ತೆರೆದು ಕೆಲಸಗಳನ್ನು ಮುಗಿಸಿಕೊಂಡು ರಾತ್ರಿ 8-45 ಗಂಟೆಯಲ್ಲಿ ಅಂಗಡಿಯ ಬಾಗಿಲನ್ನು ಹಾಕಿಕೊಂಡು ಮನೆಗೆ ಹೋಗಿದ್ದು, ನನಗೆ ನಮ್ಮ ಭಾವ ನಾಗರಾಜ ಬಿನ್ ವೆಂಕಟರವಣಪ್ಪ ರವರು ಫೋನ್ ಮಾಡಿ ನಿನ್ನ ಅಂಗಡಿಯನ್ನು ಯಾರೋ ಕಳ್ಳರು ಕಿತ್ತಿರುವುದಾಗಿ ದಿನಾಂಕ:02/08/2020 ರಂದು ಬೆಳಿಗ್ಗೆ 07-15 ಗಂಟೆಗೆ ತಿಳಿಸಿದ್ದು, ನಾನು ತಕ್ಷಣ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ನಾನು ಅಲ್ಲಿನ ಸ್ಥಳಿಯರ ಸಹಾಯದಿಂದ ಅಂಗಡಿಯ ಒಳಗೆ ಹೋಗಿ ಪರಿಶೀಲನೆ ಮಾಡಲಾಗಿ ನನ್ನ ಅಂಗಡಿಯ ಒಳಗೆ ನಾನು ಪ್ರತಿ ದಿನ ವ್ಯವಹಾರ ನಡೆಸಿ ಅದರಿಂದ ಬಂದ ಹಣವನ್ನು ಹಾಕಿದ್ದ ಡ್ರಾವನ್ನು ಎಳೆದು ಅದರಲ್ಲಿದ್ದ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ನಾನು ಪ್ರತಿ ದಿನ ಹಣ ಡ್ರಾನಲ್ಲಿ ಇಟ್ಟು ಹೋಗುತ್ತಿದ್ದು, ನನಗೆ ನನ್ನ ವ್ಯವಹಾರದ ಹಣ ಎಷ್ಟು ಕಳ್ಳತನವಾಗಿದೆ ಎಂದು ತಿಳಿಯದೆ ಇದ್ದು, ಮತ್ತೆ ಕಳುವಾದ ಹಣ ಎಷ್ಟೆಂದು ತಿಳಿಸುತ್ತೇನೆ ಹಾಗೂ ಹಣವನ್ನು ಬಿಟ್ಟು ಬೇರೇನೂ ವಸ್ತುಗಳು ಸಹ ಕಳುವಾಗಿರುವುದಿಲ್ಲ ಅದ್ದರಿಂದ ನನ್ನ ಅಂಗಡಿಯ ಶೇಟರ್ ನ ಬೀಗವನ್ನು ಹೊಡೆದು ಕಳವು ಮಾಡಿದ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 175/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ:02-08-2020 ರಂದು  ಬೆಳಿಗ್ಗೆ 11-45 ಗಂಟೆಗೆ ಪಿರ್ಯಾದಿದಾರರಾದ  ರಂಜಿತ್ ಎಸ್.ಬಿ. ಬಿನ್ ಶಂಕರಪ್ಪ ಬಿ.ಸಿ. 31 ವರ್ಷ  ಒಕ್ಕಲಿಗರು ಖಾಸಗಿ ವೃತ್ತಿ ಗೊಡ್ರಹಳ್ಳಿ ಗ್ರಾಮ ಹೊಳವನಹಳ್ಳಿ ಹೋಬಳಿ ಕೊರಟಗೆರೆ ತಾಲ್ಲೂಕು  ತುಮಕೂರು ಜಿಲ್ಲೆ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 01-08-2020  ರಂದು ನಾನು ನನ್ನ ಕೆ.ಎ-06-ಇ.ಎಲ್- 0282 ರ ಹೊಂಡ ಯುನಿಕಾನ್ ದ್ವಿ ಚಕ್ರವಾಹನದಲ್ಲಿ  ದೊಡ್ಡಬಳ್ಳಾಪುರ ದಿಂದ ನಮ್ಮ ಗ್ರಾಮಕ್ಕೆ ಹೋಗಲು ನಾನು ಮುಖ್ಯ ರಸ್ತೆಯಲ್ಲಿ  ತರಿದಾಳು ಕ್ರಾಸ್ ಬಳಿ ಬೆಳಿಗ್ಗೆ 08-45 ಗಂಟೆಯಲ್ಲಿ ಹೋಗುತ್ತಿರುವಾಗ ತರಿದಾಳು ಗ್ರಾಮದ ಕಡೆಯಿಂದ ಬಂದ ಕೆ.ಎ-64-ಕೆ-8834 ರ ದ್ವಿ ಚಕ್ರವಾಹನ ಸವಾರ ಗಣೇಶ  ತರಿದಾಳು ಗೌರೀಬಿದನೂರು ತಾಲ್ಲೂಕು ರವರು ವಾಹನವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿದ ಪರಿಣಾಮ  ಕೆಳಗೆ ಬಿದ್ದಾಗ ಬಲಗಾಲಿಗೆ ಹಿಮ್ಮಡಿಗೆ, ಎಡಕೈ, ಮತ್ತು ಎದೆಗೆ ಹಾಗೂ ಕತ್ತಿನ ಬಾಗಕ್ಕೆ ಗಾಯಗಳಾಗಿದ್ದು. ಅಪಘಾತವನ್ನುಂಟುಮಾಡಿದ ದ್ವಿ ಚಕ್ರವಾಹನ ಸವಾರನಿಗೂ ಸಹ ಕಾಲುಗಳಿಗೆ ಮತ್ತು ನಡುವಿಗೆ ಗಾಯಗಳಾಗಿದ್ದು. ಅಲ್ಲಿನ ಸ್ಥಳಿಯರ ಸಹಾಯದಿಂದ ಉಪಚರಿಸಿ ಅಲ್ಲಿಗೆ ಬಂದ ತನ್ನ ತಮ್ಮ ಮಲ್ಲಿಕಾರ್ಜುನ ರವರು ಚಿಕಿತ್ಸೆಗಾಗಿ ಗೌರೀಬಿದನೂರು ಮಾನಸ ಖಾಸಗಿ ಆಸ್ವತ್ರೆಗೆ ದಾಖಲಾಗಿದ್ದು. ಅಪಘಾತಪಡಿಸಿದ ಕೆ.ಎ-64-ಕೆ-8834 ರ ದ್ವಿ ಚಕ್ರವಾಹನ ಸವಾರ ನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ  ದೂರು.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 46/2020 ಕಲಂ. ಮನುಷ್ಯ ಕಾಣೆ:-

          ದಿನಾಂಕ:01/08/2020 ರಂದು ಸಂಜೆ 04-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಸುಮಾರು 20 ವರ್ಷಗಳ ಹಿಂದೆ ಪಾತಪಾಳ್ಯ ಗ್ರಾಮದ ವೆಂಕಟರವಣಪ್ಪನ ಮಗನಾದ ಸುಬ್ರಮಣಿ ರವರನ್ನು ವಿವಾಹವಾಗಿ ನಮಗೆ 02 ಜನ ಮಕ್ಕಳಿರುತ್ತಾರೆ, ನಂತರ ನನ್ನ ಗಂಡ ಹೀಗ್ಗೆ 10 ವರ್ಷಗಳ ಹಿಂದೆ ಎನಗದಲೆ ಗ್ರಾಮದ ಸುಪ್ರಿಯಾ ರವರನ್ನು 02 ನೇ ಮದುವೆಯಾಗಿರುತ್ತಾರೆ, ಅವಳಿಗೂ ಸಹ 02 ಜನ ಗಂಡು ಮಕ್ಕಳಿರುತ್ತಾರೆ, ಸುಮಾರು 01 ತಿಂಗಳ ಹಿಂದೆ ಸುಪ್ರಿಯಾ ನಮ್ಮ ಮನೆಯನ್ನು ಬಿಟ್ಟು ಹೊರಟು ಹೋಗಿದ್ದು, ಈ ಸಂಬಂದ ನನ್ನ ಗಂಡ ಪತಪಾಳ್ಯ ಠಾಣೆಯಲ್ಲಿ ದೂರು ನೀಡಿ ಪೊಲೀಸರು ಆಕೆಯನ್ನು ಪತ್ತೆಮಾಡಿಕೊಟ್ಟಿರುತ್ತಾರೆ, ಆಗ ನಮ್ಮ ಗಂಡನಿಗೆ ಮತ್ತು ನಮ್ಮ ಭಾವ ಶ್ರೀನಿವಾಸ ಆತನ ಮಗ ಶ್ರೀಕಾಂತನಿಗೆ ಜಗಳವಾಗಿರುತ್ತೆ, ಹೀಗಿರುವಾಗ ನಮ್ಮ ಗಂಡ ದಿನಾಂಕ:27/07/2020 ರಂದು ಸಂಜೆ 06-00 ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಹೋದವರು ವಾಪಸ್ಸು ಮನೆಗೆ ಬಂದಿರುವುದಿಲ್ಲ, ನಾವು ನೆಂಟರ ಮನೆಗಳಲ್ಲಿ ಮತ್ತು ಗ್ರಾಮದಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ ನಮಗೆ ನಮ್ಮ ಬಾವ ಶ್ರೀನಿವಾಸ ಮತ್ತು ಆತನ ಮಗ ಶ್ರೀಕಾಂತನ ಮೇಲೆ ಅನುಮಾನವಿರುತ್ತೆ, ನಾವು ಇಷ್ಟು ದಿನ ಹುಡುಕಾಡುತ್ತಿದ್ದರಿಂದ ದೂರು ನೀಡುವುದು ತಡವಾಗಿರುತ್ತೆ, ಆದ್ದರಿಂದ ನನ್ನ ಗಂಡ ಸುಬ್ರಮಣಿರವರನ್ನು ಪತ್ತೆಮಾಡಿಕೊಡಲು ಕೋರುತ್ತೇನೆ ನನ್ನ ಗಂಡನ ಚಹರೆ ಗುರ್ತುಗಳು ಕಪ್ಪು ಮೈ ಬಣ್ಣ, ಸುಮಾರು 05-1/2 ಅಡಿ ಎತ್ತರ, ದೃಡಕಾಯ ಶರೀರ, ಕನ್ನಡ ತೆಲಗು ಹಿಂದಿ ಮಾತನಾಡುತ್ತಾರೆ, ಬಿಳಿ ಬಣ್ಣದ ಶರ್ಟು, ಕಪ್ಪು ಬಣ್ಣದ ಪ್ಯಾಂಟು ಧರಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಠಾಣಾ ಮೊ,ಸಂ 46/2020 ಕಲಂ ಗಂಡಸು ಕಾಣೆ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 203/2020 ಕಲಂ. 279,304(A) ಐ.ಪಿ.ಸಿ:-

          ದಿನಾಂಕ:02-08-2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಲಕ್ಷ್ಮಮ್ಮ  ಕೋಂ ಲೇಟ್ ರಾಜಪ್ಪ, ಸುಮಾರು 70 ವರ್ಷ,ವಕ್ಕಲಿಗರು, ಕೂಲಿಕೆಲಸ, ವಾಸ: ಆನೂರು ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಇಬ್ಬರು ಮಕ್ಕಳು 1 ನೇ ವೆಂಕಟೇಶ್, 2 ನೇ ಎ.ಆರ್.ಮೂರ್ತಿ ರವರಾಗಿರುತ್ತಾರೆ ಇಬ್ಬರಿಗೂ ಮದುವೆಗಳಾಗಿರುತ್ತೆ, ತನ್ನ ಗಂಡ ಈಗ್ಗೆ ಸುಮಾರು 30 ವರ್ಷದ ಹಿಂದೆ ಅನಾರೋಗ್ಯದ ಕಾರಣ ಮೃತಪಟ್ಟಿರುತ್ತಾನೆ. ತಾನು ತನ್ನ ಮಗನಾದ ಮೂರ್ತಿ ರವರ ಜೊತೆಯಲ್ಲಿಯೇ ಇರುತ್ತೇನೆ, ತನ್ನ ಮಗನಿಗೆ ಈಗ್ಗೆ 9 ವರ್ಷದ ಹಿಂದೆ ಚಿಕ್ಕತೇಕಹಳ್ಳಿ ಗ್ರಾಮದ ಸುಶೀಲಾ ರವರೊಂದಿಗೆ ಮದುವೆ ಮಾಡಿದ್ದು ಅವರಿಗೆ ಒಂದು ದೀಕ್ಷಿತಾ ಎಂಬ 8 ವರ್ಷದ ಹೆಣ್ಣು ಮಗು ಇರುತ್ತೆ, ತನ್ನ ಸೊಸೆ ಸುಶೀಲಾ ಈಗ್ಗೆ ಸುಮಾರು 5 ವರ್ಷದ ಹಿಂದೆ 2ನೇ ಮಗು ಹೆರಿಗೆ ಸಮಯದಲ್ಲಿ ತಾಯಿ-ಮಗು ಇಬ್ಬರು ಮೃತಪಟ್ಟಿರುತ್ತಾಳೆ, ತನ್ನ ಮಗ ಕೂಲಿ ಕೆಲಸ ಮಾಡಿಕೊಂಡಿದ್ದು ಪ್ರತಿ ದಿನ ಶಿಡ್ಲಘಟ್ಟಕ್ಕೆ ಕೆಲಸಕ್ಕೆ ಹೋಗಿ ಮತ್ತೆ ವಾಪಸ್ಸು ಬರುತ್ತಿದ್ದನು, ಹೀಗಿರುವಲ್ಲಿ ದಿನಾಂಕ:31-07-2020 ರಂದು ಬೆಳಿಗ್ಗೆ ಶಿಡ್ಲಘಟ್ಟಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿರುತ್ತಾನೆ ನಂತರ  ಅದೇ ದಿನ ರಾತ್ರಿ 8-50 ಗಂಟೆಯಲ್ಲಿ ತಮ್ಮ ಗ್ರಾಮದ ದೇವರಾಜ ಬಿನ್ ಲೇಟ್ ಮುನಿವೆಂಕಟಪ್ಪ  ರವರು ಪೋನ್ ಮಾಡಿ ಆನೂರು ಕೆರೆಯ ಕಟ್ಟೆಯ ಮೇಲೆ ನಿನ್ನ ಮಗ ಮೂರ್ತಿ ಗೆ ಅಪಘಾತವಾಗಿದೆ ಎಂದು ತಿಳಿಸಿದ್ದು ಆಗ ತಾನು ಮತ್ತು ತನ್ನ ಬಾವ ಕೃಷ್ಣಪ್ಪ ರವರ ಮಗ ಮಂಜುನಾಥ ರವರು ಸೇರಿ ತಕ್ಷಣ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ದೇವರಾಜ ರವರಿಂದ ವಿಚಾರ ತಿಳಿದುಕೊಳ್ಳಲಾಗಿ ತನ್ನ ಮಗ ಶಿಡ್ಲಘಟ್ಟದಲ್ಲಿ ಕೆಲಸ ಮುಗಿಸಿಕೊಂಡು ಮತ್ತೆ ಮನೆಗೆ ವಾಪಸ್ಸು ಬರಲು ರಾತ್ರಿ 8-45 ಗಂಟೆಯಲ್ಲಿ ಆನೂರು ಕೆರೆಯ ಕಟ್ಟೆಯ ಮೇಲೆ ರಸ್ತೆಯ ಎಡಬದಿಯಲ್ಲಿಯೇ ನಡೆದುಕೊಂಡು ಬರುತ್ತಿದ್ದಾಗ  ಶಿಡ್ಲಘಟ್ಟ ಕಡೆಯಿಂದ ಬಂದ KA-40 ED-0471 Hero Splender Plus ದ್ವಿಚಕ್ರವಾಹನದ ಚಾಲಕ ತನ್ನ  ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ತನ್ನ ಮಗ ಮೂರ್ತಿ ಗೆ ಹಿಂಬದಿಯಿಂದ ಡಿಕ್ಕಿಹೊಡೆಸಿದ ಪರಿಣಾಮ ತನ್ನ ಮಗ ಕೆಳಗಡೆ ಬಿದ್ದು ಹೋಗಿ ತಲೆಗೆ, ಬಲಕಾಲಿಗೆ, ಎಡಕಣ್ಣಿನ ಬಳಿ, ರಕ್ತಗಾಯಗಳಾಗಿದ್ದು ವಿಚಾರ ತಿಳಿದು ಸ್ಥಳಕ್ಕೆ ಬಂದ ತಾವು ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಹೋಗಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಅಲ್ಲಿನ ವೈದ್ಯರ ಸಲಹೆಯ  ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಿ ಜೀವನ್ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿ ನಂತರ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿರುತ್ತೇವೆ ಅಲ್ಲಿ ಚಿಕಿತ್ಸೆಪಡೆದುಕೊಳ್ಳುತ್ತಿದ್ದಾಗ ಅಪಘಾತದಲ್ಲಿ ಉಂಟಾದ ಗಾಯಗಳ ದೆಸೆಯಿಂದ ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ:02-08-2020 ರಂದು ಬೆಳಗಿನ ಜಾವ ಸುಮಾರು 4-00 ಗಂಟೆಯಲ್ಲಿ ತನ್ನ ಮಗ ಮೂರ್ತಿ ಮೃತ ಪಟ್ಟಿರುತ್ತಾನೆ. ತಾನು ತನ್ನ ಎ.ಆರ್. ಮೂರ್ತಿ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು. ತನ್ನ ಮಗನಿಗೆ ಅಪಘಾತವುಂಟು ಮಾಡಿ ಆತನ ಸಾವಿಗೆ ಕಾರಣನಾದ ಮೇಲ್ಕಂಡ ದ್ವಿಚಕ್ರವಾಹನದ ಸವಾರನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೊಟ್ಟ ದೂರು.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 204/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ:-02/08/2020 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ಅಶೋಕ್ ಕುಮಾರ್ ಬಿನ್ ಲೇಟ್ ದಾಸಪ್ಪ, 33 ವರ್ಷ, ಪ ಜಾತಿ, ಜಿರಾಯ್ತಿ, ವಾಸ-ನಲ್ಲೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೇ ನಂಬರ್ 60 ರಲ್ಲಿ ಸುಮಾರು ಒಂದು ಎಕರೆ ಜಮೀನು ಇದ್ದು, ಈ ಜಮೀನಿನಲ್ಲಿ ತಾನು ತನ್ನ ಅಣ್ಣ ನಾಗರಾಜ್ ಎನ್.ಡಿ (40 ವರ್ಷ) ರವರು ಜಿರಾಯ್ತಿ ಮಾಡಿಕೊಂಡಿದ್ದು, ತಮ್ಮ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡುವ ಸಲುವಾಗಿ ಜಮೀನಿನಲ್ಲಿ ಉಳುಮೆ ಮಾಡ ಬೇಕಾಗಿದ್ದರಿಂದ ಕೃಷಿ ಇಲಾಖೆ ಹಾಗು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕೃಷಿಯಂತ್ರ ಧಾರೆ ಕಚೇರಿಯಲ್ಲಿ ಉಳುಮೆ ಮಾಡಲು ಟ್ರಾಕ್ಟರ್ ಅನ್ನು ಬುಕ್ ಮಾಡಿದ್ದು, ಅದರಂತೆ ಮೇಲ್ಕಂಡ ಕಚೇರಿಯ ಕಡೆಯಿಂದ ಕೆಎ-40-ಟಿಎ-6109 ನೊಂದಣಿ ಸಂಖ್ಯೆಯ ಟ್ರಾಕ್ಟರ್ ಅನ್ನು ದಿನಾಂಕ 23/07/2020 ರಂದು ತಮಗೆ ಬಾಡಿಗೆಯಾಗಿ ನೀಡಿದ್ದು, ತನ್ನ ಅಣ್ಣನಾದ ನಾಗರಾಜ್ ರವರು ಸದರಿ ಟ್ರಾಕ್ಟರ್ ತಂದು ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಹೋಗಿದ್ದು, ಅದೇ ದಿನ ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ತನ್ನ ಅಣ್ಣ ನಾಗರಾಜ್ ರವರು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರಾಕ್ಟರ್ ನ ವೇಗವು ಸ್ವಲ್ಪ ಹೆಚ್ಚಾಗಿ ತನ್ನ ಅಣ್ಣ ನಿಯಂತ್ರಣ ತಪ್ಪಿ ಚಾಲಕನ ಸೀಟ್ ನಿಂದ ಕೆಳಗೆ ಬಿದ್ದು ಹೋಗಿ ಟ್ರಾಕ್ಟರ್ ನ ಚಕ್ರವು ತನ್ನ ಅಣ್ಣನ ಎಡಕೈ ಮತ್ತು ಎಡ ಕಾಲಿನ ಮೇಲೆ ಹರಿದು ರಕ್ತಗಾಯವಾಗಿದ್ದು ಕೂಡಲೇ ತಾನು ಮತ್ತು ತಮ್ಮ ಪಕ್ಕದ ಜಮೀನಿನವರಾದ ಶಿವಣ್ಣ, ಮಂಜುನಾಥ ರವರು ತನ್ನ ಅಣ್ಣನನ್ನು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಕರೆದುಕೊಂಡು ಹೋಗಿ ಕೋಲಾರದ ಗೌರವ ಆರ್ಥೋಪೆಟಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ತನ್ನ ಅಣ್ಣನ ಇನ್ನು ಆಸ್ಪತ್ರೆಯಲ್ಲಿ ಓಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾನೆ. ದಿನಾಂಕ 23/07/2020 ರಂದು ತನ್ನ ಅಣ್ಣ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಕೃಷಿ ಕೆಲಸದಲ್ಲಿ ನಿರತರಾಗಿದ್ದಾಗ ತನ್ನ ಅಣ್ಣ ಟ್ರಾಕ್ಟರ್ ಅನ್ನು ವೇಗವಾಗಿ ಚಾಲನೆ ಮಾಡುತ್ತಿದ್ದ ಕಾರಣದಿಂದಲೋ ಅಥವಾ ಟ್ರಾಕ್ಟರ್ ನಲ್ಲಿನ ತಾಂತ್ರಿಕ ಕಾರಣದಿಂದಲೋ ಟ್ರಾಕ್ಟರ್ ಏಕಾಏಕಿ ಅಲುಗಾಡಿದ ಕಾರಣ ತನ್ನ ಅಣ್ಣ ಟ್ರಾಕ್ಟರ್ ನಿಂದ ಕೆಳಗೆ ಬಿದ್ದು ಹೋಗಿ ಅಪಘಾತವಾಗಿದ್ದು, ತಾನು ತನ್ನ ಅಣ್ಣನ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಈ ಬಗ್ಗೆ ತಾವು ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 88/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ: 01/08/2020 ರಂದು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪ್ರಬಾರದಲ್ಲಿರುವ  ಪಿ.ಎಸ್.ಐ (ಕಾ.ಸು) ಶ್ರೀ. ಸಂಗಪ್ಪ ಮೇಟಿ ಆದ ನಾನು ಮತ್ತು ಶಿಡ್ಲಘಟ್ಟ ವೃತ್ತ ಸಿಪಿಐ ಸಾಹೇಬರು ದಿನಾಂಕ.01.08.2020 ರಂದು ಮದ್ಯಾಹ್ನ 02.15 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ತೈಬಾ ನಗರದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ನ್ಯಾಯಾಲಯದ ಪಿ.ಸಿ.129 ರವರ ಮೂಲಕ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪಂಚಾಯ್ತಿದಾರರು ಮತ್ತು ನಗರ ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 2-20 ಗಂಟೆಗೆ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 03 ಜನ ಆಸಾಮಿಗಳು ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 50/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 50/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿ ಸ್ಥಳದಲ್ಲಿದ್ದ 3-ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಯಾರಬ್ ಪಾಷ ಬಿನ್ ಅಲ್ಲಾ ಬಕಾಶ್, 21 ವರ್ಷ, ರೇಷ್ಮೆ ಕೆಲಸ, ಮುಸ್ಲಿಂ, ಸಂತೋಷ ನಗರ, ಶಿಡ್ಲಘಟ್ಟ ಟೌನ್ 2] ಬಾಬಾಜಾನ್ ಬಿನ್ ಬಾಷಾ, 26 ವರ್ಷ, ಮುಸ್ಲಿಂ, ರೇಷ್ಮೇ ಕೆಲಸ, ತೈಬಾ ನಗರ, ಶಿಡ್ಲಘಟ್ಟ ಟೌನ್ 3]  ಪೈರೋಜ್ ಬಿನ್ ಅಯಾಬ್ ಖಾನ್, 23 ವರ್ಷ, ಮುಸ್ಲಿಂ, ರೇಷ್ಮೇ ಕೆಲಸ, ತೈಬಾ ನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ. ಇತರರು ಓಡಿ ಹೋಗಿದ್ದು ಅವರ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಇವರುಗಳು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 2500/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿರುತ್ತೆ. ಇವುಗಳನ್ನು ಮದ್ಯಾಹ್ನ 2-30 ಗಂಟೆಯಿಂದ 3-00 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿರುತ್ತೆ. ನಂತರ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 3-ಜನರನ್ನು ವಶಕ್ಕೆ ಪಡೆದು ಠಾಣೆಗೆ ಆರೋಪಿಗಳನ್ನು, ಪಂಚನಾಮೆ ಮತ್ತು ಮಾಲು ಹಾಜರುಪಡಿಸಿದ್ದರ ಮೇರೆಗೆ ಠಾಣಾ ಮೊ.ಸಂ: 88/2020 ಕಲಂ: 87 ಕೆ.ಪಿ. ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.