ದಿನಾಂಕ :02/07/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.152/2020 ಕಲಂ. 279,337 ಐ.ಪಿ.ಸಿ :-

          ದಿ: 01-07-2020 ರಂದು ಸಂಜೆ 6:15 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ತೆರಳಿ ಗಾಯಾಳುವಿನ ಹೇಳಿಕೆ ದೂರನ್ನು ಪಡೆದುಕೊಂಡು ಠಾಣೆಗೆ 7:15 ಗಂಟೆಗೆ ಬಂದಿದ್ದರ ಸಾರಾಂಶ –  ದಿ: 01-07-2020 ರಂದು ನಾನು ನಮ್ಮ ಗ್ರಾಮದಿಂದ ನಮ್ಮ ಅತ್ತೆಯವರಾದ ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಹೋಬಳಿ ಹನುಮಂತರಾಯನಪಲ್ಲಿ ಗ್ರಾಮದ ಸುಜಾತ ರವರ ಮನೆಗೆ ಹೋಗಲು AP-2 6387 CD 100 ದ್ವಿಚಕ್ರ ವಾಹನದಲ್ಲಿ NH-44 ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ, ನನ್ನ ಹಿಂಬಧಿಯಿಂದ ಬರುತ್ತಿದ್ದ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಾಗೇಪಲ್ಲಿ ಪುರದ ಟಿ.ಬಿ ಕ್ರಾಸ್ ಬಳಿ ಸಂಜೆ ಸುಮಾರು 4:30 ಗಂಟೆಯಲ್ಲಿ ನಾನು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮವಾಗಿ ನಾನು ಕೆಳಗ್ಗೆ ಬಿದ್ದು ಹೋಗಿದ್ದು, ನನ್ನ ದ್ವಿಚಕ್ರ ವಾಹನ ಜಖಂಗೊಂಡು ನನ್ನ ಬಲಕಾಲಿಗೆ ರಕ್ತಗಾಯವಾಗಿ ಎಡಕಾಲಿಗೆ ತರಚಿದ ಗಾಯಗಳಾಗಿ ಎದೆಯ ಬಳಿ ಮೂಗೇಟು ಉಂಟಾಯಿತು, ತಲೆಗೆ ಮೂಗೇಟಾಯಿತು.  ಅಪಘಾತವನ್ನುಂಟು ಮಾಡಿದ ಕಾಲಿನ ನೊಂದಣಿ ಸಂಖ್ಯೆ ನೋಡಲಾಗಿ KA-03-MV-3386 ಮಹೀಂದ್ರ ಕಾರಾಗಿತ್ತು.  ಸ್ಥಳದಲ್ಲಿದ್ದ ಸಾರ್ವಜನಿಕರು ನನ್ನನ್ನು ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು.  ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಚಾಲನೆ ಮಾಡಿಕೊಂಡು ಬಂದು ನನಗೆ ಅಪಘಾತವನ್ನುಂಟು ಮಾಡಿದ KA-03-MV-3386 ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.49/2020 ಕಲಂ. 87 ಕೆ.ಪಿ ಆಕ್ಟ್ :-

          ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಶ್ರಿ ಟಿ,ಎನ್ ಪಾಪಣ್ಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ದಿನಾಂಕ:01/07/2020 ರಂದು ಮದ್ಯಾಹ್ನ 15-30 ಗಂಟೆಯ ಸಮಯದಲ್ಲಿ ನಾನು ಯರ್ರಯ್ಯಗಾರಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಚಿಂತಾಮಣಿ ತಾಲ್ಲೂಕು ವೇಂಪಲ್ಲಿ ಕ್ರಾಸ್ ಬಳಿ ಆಂಜನೇಯಸ್ವಾಮಿ ದೇವಸ್ಥಾನದ ಹಿಂಬಾಗದಲ್ಲಿರುವ ತೆಲ್ಲಗುಟ್ಟದಲ್ಲಿ ಯಾರೋ ಆಸಾಮಿಗಳು ಕಾನೂನು ಬಾಹಿರವಾಗಿ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ವರ್ತಮಾನ ಮೇರೆಗೆ ನಾನು ಠಾಣಾ ಸಿಬ್ಬಂದಿಯವರಾದ ಸಿಪಿಸಿ-02 ಅರುಣ್ ಎ. ಸಿಪಿಸಿ – 262 ಅಂಬರೀಶ್,  ಹಾಗೂ ಜೀಪ್ ಚಾಲಕ ಎಪಿಸಿ-65 ವೆಂಕಟೇಶ್, ಹೆಚ್ ಜಿ -135 ಚಂದ್ರಪ್ಪ ರವರೊಂದಿಗೆ ವೇಂಪಲ್ಲಿ ಕ್ರಾಸ್ ಬಳಿಗೆ  ಮದ್ಯಾಹ್ನ 15-40 ಗಂಟೆಗೆ ಹೋಗಿ ಜೀಪ್ ನ್ನು ನಿಲ್ಲಿಸಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರೊಂದಿಗೆ ವೇಂಪಲ್ಲಿ ಕ್ರಾಸ್ ನ ಬಳಿಯಿರುವ ಆಂಜನೇಯಸ್ವಾಮಿ ದೇವಾಲಯದ ಹಿಂಬದಿಯಲ್ಲಿರುವ ತೆಲ್ಲಗುಟ್ಟದ ಬಳಿಗೆ ಕಾಲ್ನಡಿಗೆಯಲ್ಲಿ ಹೋಗಿ ಮರೆಯಲ್ಲಿ  ನಿಂತು ನೋಡಲಾಗಿ ಯಾರೋ ಆಸಾಮಿಗಳು  ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿ ಅಲ್ಲಿದ್ದ 5 ಜನ  ಆಸಾಮಿಗಳನ್ನು ವಶಕ್ಕೆ ಪಡೆದು  ಅವರುಗಳ  ಹೆಸರು ಮತ್ತು ವಿಳಾಸ ಕೇಳಲಾಗಿ 1) ವೆಂಕಟರಮಣಪ್ಪ ಬಿನ್ ಲೇಟ್ ನಾರಯಣಪ್ಪ, 45 ವರ್ಷ, ನಾಯಕರು, ವ್ಯವಸಾಯ, ವಾಸ: ವೇಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ ನಂ:8105804489. 2) ಲಕ್ಷ್ಮಣ ಬಿನ್ ನಾರಾಯಣಸ್ವಾಮಿ,36 ವರ್ಷ, ನಾಯಕರು, ವ್ಯವಸಾಯ, ವಾಸ; ಪಸಲನಾಯಕನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ ನಂ:9740603627. 3) ಸದಾಶಿವ ಬಿನ್ ಸುಬ್ಬಾರೆಡ್ಡಿ, 55 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ವೇಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ: 9164706605.4) ಮೂರ್ತಿ @ ನರಸಿಂಹಮೂರ್ತಿ ಬಿನ್ ಚಿಕ್ಕ ನರಸಿಂಹಪ್ಪ, 26 ವರ್ಷ, ನಾಯಕರು, ಕೂಲಿಕೆಲಸ, ವಾಸ: ವೇಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ:7975168445. 5) ರಮೇಶ್ ಬಿನ್ ಲೇಟ್ ಸಿದ್ದಪ್ಪ, 45 ವರ್ಷ, ಕೊರಚರು ( ಯರಿಕುಲ) ಅಡುಗೆ ಭಟ್ಟರು ಕೆಲಸ, ವಾಸ: ವೇಂಪಲ್ಲಿ ಕ್ರಾಸ್ ಚಿಂತಾಮಣಿ ತಾಲ್ಲೂಕು ಮೊ ನಂ: 9900520995 ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಕಲ್ಲು ಬಂಡೆಯ ಮೇಲೆ ಹಾಸಿದ್ದು, ಸದರಿ ಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆ ಇರುತ್ತೆ.  ಪಂಚರ ಸಮಕ್ಷಮ ಇವುಗಳನ್ನು ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 3.500/- ರೂಗಳಿರುತ್ತೆ. ಇಸ್ಪೀಟ್ ಜೂಜಾಟ ಆಡುತ್ತಿದ್ದ 5 ಆಸಾಮಿಗಳನ್ನು, ಅವರು ಆಟಕ್ಕೆ ಪಣವಾಗಿಟ್ಟಿದ್ದ, 3.500/-  ರೂಗಳ ನಗದು ಹಣವನ್ನು, ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ ಸ್ಥಳದಲ್ಲಿಯೇ ಸಂಜೆ 16-15 ಗಂಟೆಯಿಂದ 17-15 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು, ಆರೋಪಿಗಳು ಮತ್ತು ಮಾಲಿನೊಂದಿಗೆ ಠಾಣೆಗೆ ರಾತ್ರಿ 18-00 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 136/2020 ರಂತೆ ದಾಖಲಿಸಿಕೊಂಡಿರುತ್ತೆ.

ನಂತರ ಠಾಣೆಯ ಹೆಚ್ ಸಿ 107 ಮುಸ್ತಪ ರವರು ಠಾಣೆಯ ಎನ್ ಸಿ ಆರ್ ನಂ:136/2020 ರಲ್ಲಿ ಆರೋಪಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 19-45 ಗಂಟೆಗೆ ಬಂದು ಹಾಜರುಪಡಿಸಿದ್ದನ್ನು ಪಡೆದು ಠಾಣೆಯ ಮೊ,ಸಂಖ್ಯೆ:49/2020 ಕಲಂ:87 ಕೆ ಪಿ ಆಕ್ಟ್ ರೀತ್ಯಾ  ಸ್ವತಃ ಪ್ರಕರಣ ದಾಖಲಿಸಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.50/2020 ಕಲಂ. ಮನುಷ್ಯ ಕಾಣೆ :-

          ದಿನಾಂಕ: 02/07/2020ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾದರಾದಬಿ .ಮದ್ದಿರೆಡ್ಡಿ ಬಿನ್  ಲೇಟ್ ಬೈಯಣ್ಣ 45 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು.ಮೊ ನಂ: 9481434415ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನಗೆ ಒಟ್ಟು 3 ಜನ  ಮಕ್ಕಳಿದ್ದು, 1ನೇ ಜಿ ಎಂ ಮೋಹನ್, 2ನೇ ಜಿ ಎಂ  ಮಾಲತಿ,  3ನೇ ಜಿ ಎಂ ಭರತ್,   ಎಂಬುವರಾಗಿರುತ್ತಾರೆ. ನನ್ನ ಮಗ  ಜಿ ಎಂ ಮೋಹನ್  ರವರು ಈಗ್ಗೆ 2 ವರ್ಷಗಳ ಹಿಂದೆ  ವ್ಯಾಸಂಗ ಮಾಡಲು ಇಷ್ಟವಿಲ್ಲದೇ ಇದ್ದುದರಿಂದ ಪ್ರಥಮ ಪದವಿ ವ್ಯಾಸಂಗವನ್ನು ಮಧ್ಯದಲ್ಲಿ  ಬಿಟ್ಟು, ನಮ್ಮ ತೋಟದಲ್ಲಿ ವ್ಯವಸಾಯ ಮಾಡಿಕೊಂಡಿದ್ದನು.  ದಿನಾಂಕ: 20/06/2020 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ನಾನು ನನ್ನ ಮಗ ಜಿ ಎಂ ಮೋಹನ್ ರವರಿಗೆ  ತೋಟದ ಬಳಿಗೆ ಹೋಗಿ ಟೋಮೆಟೋ ಬೆಳೆಗೆ  ನೀರಿನ ಡ್ರಿಫ್ ಪೈಪಗಳ ಗೇಟ್ ವಾಲನ್ನು  ತಿರುವಿಕೊಂಡು ಬಾ ಎಂದು ಹೇಳಿದ್ದು,  ಆದರಂತೆ ನನ್ನ ಮಗ ತೋಟದ ಬಳಿಗೆ ಹೋದವನು. ಸಂಜೆಯಾದರು ಮನೆಗೆ ವಾಪಸ್ಸು ಬರಲ್ಲಿಲ. ನನಗೆ  ಗಾಬರಿಯಾಗಿ ನನ್ನ ಪತ್ನಿ ಶಂಕರಮ್ಮ ರವರಿಗೆ ಮಗನ ಬಗ್ಗೆ ಕೇಳಲಾಗಿ ಜಿ ಎಂ ಮೋಹನ್  ಮನೆಗೆ ಬಂದಿರುವುದಿಲ್ಲವೆಂದು ತಿಳಿಸಿದರು. ನಂತರ ನಾನು ನನ್ನ ಮಗನ ಮೋಬೈಲ್ ಸಿಮ್ ನಂಬರ್ 7022998956 ಗೆ ಕೆರೆಮಾಡಿದಾಗ ಸ್ವಿಚಾಪ್ ಬಂದಿರುತ್ತೆ. ನಾನು ಮತ್ತು ನನ್ನ ಪತ್ನಿ ಹಾಗೂ ನನ್ನ ಮಕ್ಕಳು, ನನ್ನ ಮಗನನ್ನು ನಮ್ಮ ತೋಟದ ಬಳಿ ಹಾಗೂ ನಮ್ಮ ಗ್ರಾಮದಲ್ಲಿ ಮತ್ತು ನಮ್ಮ ಮನೆಯ ಅಕ್ಕಪಕ್ಕದ ಮನೆಗಳಲ್ಲಿ, ನನ್ನ ಮಗನ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಡಲಾಗಿ ನನ್ನ ಮಗ ಪತ್ತೆಯಾಗಿರುವುದಿಲ್ಲ. ಇದುವರೆವಿಗೂ ನಾವು ನನ್ನ ಮಗನನ್ನು ನಮ್ಮ ಸಂಬಂದಿಕರ ಮನೆಗಳಲ್ಲಿ ವಿಚಾರ ತಿಳಿಸಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ.ಆದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾಣೆಯಾಗಿರುವ ನನ್ನ ಮಗ ಜಿ ಎಂ ಮೋಹನ್  ರವರನ್ನು ಪತ್ತೇ ಮಾಡಿಕೊಡಬೇಕಾಗಿ ಕೋರಿಕೊಟ್ಟು ದೂರಿನ ಸಾರಾಂಶವಾಗಿರುತ್ತೆ.

 1. ಚೇಳೂರು ಪೊಲೀಸ್ ಠಾಣೆ ಮೊ.ಸಂ.41/2020 ಕಲಂ. 379 ಐ.ಪಿ.ಸಿ :-

          ದಿನಾಂಕ:01/07/2020 ರಂದು ಮದ್ಯಾಹ್ನ: 15:30 ಗಂಟೆಗೆ ಪಿಎಸ್ಐ ರವರಾದ ಶ್ರೀಮತಿ ಚಂದ್ರಕಲಾ ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:01/07/2020 ರಂದು ಮಧ್ಯಾಹ್ನ14-00 ಗಂಟೆಯ ಸಮಯದಲ್ಲಿ  ಸರ್ಕಾರಿ ಜೀಪ್ ನಂಬರ್ ಕೆಎ-42ಜಿ61 ನಲ್ಲಿ ನಾನು ಹಾಗೂ ಠಾಣೆಯ ಸಿಬ್ಬಂದಿಯಾದ ಸಿ.ಹೆಚ್.ಸಿ 149 ಇನಾಯಿತ್ ವುಲ್ಲಾ, ಸಿ.ಪಿ.ಸಿ 519 ಚಂದ್ರ ಶೇಖರ್ ಮತ್ತು ಸಿ,ಪಿ,ಸಿ 113 ಲಿಂಗರಾಜು ಮತ್ತು ಡ್ರೈವರ್ ಆಗಿ  ಎ.ಪಿ.ಸಿ98  ಶ್ರೀನಾಥ ರವರೊಂದಿಗೆ ಚಾಕವೇಲು, ಪುಲಿಗಲ್, ರಾಮಚಂದ್ರಾಪುರದ  ಕಡೆ ಗಸ್ತು ಮಾಡಿಕೊಂಡು  ಬಿ.ಬೆಲ್ಲಾಲಂಪಲ್ಲಿಯ ಕಡೆ ಬಂದಾಗ  ಬಿ.ಬೆಲ್ಲಾಲಂಪಲ್ಲಿಯ ಬೀಟ್ ಸಿಬ್ಬಂದಿಯಾದ ಸಿ.ಪಿ.ಸಿ 108 ರಾಜಶೇಖರ್ ಮತ್ತು ಸಿ.ಪಿ.ಸಿ 09 ರವರು ಹಗಲು ಗಸ್ತು ಮಾಡುತ್ತಾ ಸಿಕ್ಕಿದ್ದು ಸದರಿಯವರು ಇದೇ ಗ್ರಾಮದ ಈಶ್ವರ ರೆಡ್ಡಿ  ಮತ್ತು ನಾರಾಯಣಪ್ಪ ರವರ ಜಮೀನಿನ ಬಳಿ ಇರುವ ಸರ್ಕಾರಿ ರಾಜ ಕಾಲುವೆಯಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರ್ ನ್ನು ರಾಜ ಕಾಲುವೆಯಲ್ಲಿ ನಿಲ್ಲಿಸಿಕೊಂಡು ಅದರ ಟ್ರಾಲಿಗೆ ಮರಳನ್ನು ತುಂಬುತ್ತಿರುವುದಾಗಿ ಖಚಿತ ಮಾಹಿತಿ ಬಂದಿದೆ ಎಂದು ವಿಚಾರ ತಿಳಿಸಿದ್ದು ಅದರಂತೆ ಸಿ.ಪಿ.ಸಿ 108 ರಾಜಶೇಖರ್ ಮತ್ತು ಸಿ.ಪಿ.ಸಿ 09 ನಾರಾಯಣಸ್ವಾಮಿ ರವರೊಂದಿಗೆ   ಬಿ.ಬೆಲ್ಲಾಲಂಪಲ್ಲಿ ಗ್ರಾಮದಿಂದ  ಇದ್ದಿಲವಾರಪಲ್ಲಿ ಗ್ರಾಮದ ಕಡೆ ಹೋಗುವ ಮಣ್ಣು ರಸ್ತೆಯಲ್ಲಿ ಹೋದಾಗ  ಈಶ್ವರ ರೆಡ್ಡಿ ಮತ್ತು ನಾರಾಯಣಪ್ಪ ರವರ ಜಮೀನಿನ ಬಳಿ ಇರುವ ಸರ್ಕಾರಿ ರಾಜ ಕಾಲುವೆಯಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರ್ ಗೆ ಮರಳನ್ನು ತುಂಬುತ್ತಿದ್ದು ಸಮವಸ್ತ್ರದಲ್ಲಿದ್ದ  ನಮ್ಮಗಳನ್ನು ಕಂಡು ಮರಳು ತುಂಬುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ಸದರಿ ಟ್ರಾಕ್ಟರ್ ನ ನೊಂದಣಿ ಸಂಖ್ಯೆಯನ್ನು ನೋಡಲಾಗಿ EICHER 333 ಕಂಪನಿಯ ಕೆಎ 40-ಎಂ-6152 ಟ್ರಾಕ್ಟರ್ ನ್ನು ಮತ್ತು ನೊಂದಣಿ ಸಂಖ್ಯೆ ಇಲ್ಲದ ಟ್ರಾಲಿಯಾಗಿದ್ದು, ಸದರಿ ನೊಂದಣಿ ಸಂಖ್ಯೆ ಇಲ್ಲದ ಟ್ರಾಲಿಯಲ್ಲಿ ಅರ್ಥ ಭಾಗಕ್ಕೆ ಮರಳನ್ನು ತುಂಬಿರುತ್ತೆ. ನಂತರ ಸದರಿ ಟ್ರಾಕ್ಟರ್ ನ್ನು  ಸಿ,ಹೆಚ್,ಸಿ 149 ಇನಾಯತ್ ವುಲ್ಲಾ ರವರ ಸಹಾಯದಿಂದ ಠಾಣೆಯ ಬಳಿಗೆ ಮಧ್ಯಾಹ್ನ 15-30 ಗಂಟೆಗೆ ಚಾಲನೆ ಮಾಡಿಕೊಂಡು ಬಂದಿದ್ದು ನಂತರ ಸದರಿ ಟ್ರಾಕ್ಟರ್ ನ ಇಂಜನ್ ಮತ್ತು ಚಾಸಿಸ್  ನಂಬರ್ ನ್ನು  ಪರಿಶೀಲಿಸಲಾಗಿ ಇಂಜನ್ ನಂಬರ್ -S 324B96534 ಮತ್ತು 922814118491 ಆಗಿದ್ದು ಟ್ರಾಲಿಗೆ ಯಾವುದೇ ನೊಂದಣಿ ಸಂಖ್ಯೆ ಬರೆದಿರುವುದಿಲ್ಲಾ ಆದ್ದರಿಂದ  EICHER 333 ಕಂಪನಿಯ ಕೆಎ 40-ಎಂ-6152 ಟ್ರಾಕ್ಟರ್ ಮತ್ತು ನೊಂದಣಿ ಸಂಖ್ಯೆ ಇಲ್ಲದ ಟ್ರಾಲಿಯಲ್ಲಿ ಅರ್ಥಭಾಗಕ್ಕೆ ಮರಳು ತುಂಬಿದ  ಟ್ರಾಕ್ಟರ್ ಹಾಗೂ ಟ್ರಾಲಿಯ  ಚಾಲಕ/ಮಾಲೀಕನ  ವಿರುದ್ದ ಮುಂದಿನ ಕ್ರಮಕ್ಕಾಗಿ  ನೀಡಿದ ವರದಿಯನ್ನು ಪಡೆದು ಠಾಣಾ ಮೊಸಂ:41/2020  ಕಲಂ 379 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.255/2020 ಕಲಂ.143,147,148,323,324,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ: 01/07/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಕೃಷ್ಣಮೂರ್ತಿ ಬಿನ್ ಲೇಟ್ ನಾರಾಯಣಪ್ಪ, 39 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ಮೈಲಾಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 6.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 01/07/2020 ರಂದು ಬೆಳಿಗ್ಗೆ 08.00 ಗಂಟೆ ಸಮಯದಲ್ಲಿ ತನ್ನ ಅಣ್ಣನ ಮಗನಾದ 2 ವರ್ಷದ ರಷಣ್ ತೇಜ್ ರವರು ತಮ್ಮ ಮನೆಯ ಬಳಿ ಬಹಿರ್ದೆಸೆಗೆ ಹೋಗುತ್ತಿದ್ದಾಗ ತಮ್ಮ ಗ್ರಾಮದ, ತಮ್ಮ ಜನಾಂಗದ ನಾಗರತ್ನಮ್ಮ ಕೋಂ ವಾಸುದೇವ ಮತ್ತು ಸುಷ್ಮಿತವದನ ಕೋಂ ಮಣಿ ರವರು ರಷಣ್ ತೇಜ್ ರವರ ಮೇಲೆ ನೀರನ್ನು ಚೆಲ್ಲಿರುತ್ತಾರೆ. ಆಗ ಮನೆಯ ಬಳಿ ಇದ್ದ ತನ್ನ ತಾಯಿ ಮುನಿಯಮ್ಮ ರವರು ಸ್ಥಳಕ್ಕೆ ಹೋಗಿ ಏಕೆ ಮಗುವಿನ ಮೇಲೆ ನೀರು ಎರಚುತ್ತಿರುವುದು ಎಂದು ಕೇಳಿದ್ದಕ್ಕೆ ನಾಗರತ್ನಮ್ಮ, ಸುಷ್ಮಿತವದನ ರವರು ತನ್ನ ತಾಯಿಯ ಮೇಲೆ ಜಗಳ ಮಾಡುತ್ತಿದ್ದಾಗ ತಾನು, ತನ್ನ ಚಿಕ್ಕಮ್ಮ ವೆಂಕಟಮ್ಮ, ತನ್ನ ಚಿಕ್ಕಪ್ಪನ ಮಗ ನವೀನ್ ರವರು ಸ್ಥಳಕ್ಕೆ ಹೋಗಿ ಜಗಳ ಬಿಡಿಸುತ್ತಿದ್ದಾಗ, ನಾರಾಯಣಸ್ವಾಮಿ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಮೈ ಮೇಲೆ, ಬಲ ಮುಂಗೈಗೆ ಹೊಡೆದು ಗಾಯಗಳನ್ನುಂಟು ಮಾಡಿರುತ್ತಾನೆ. ನಾಗರತ್ನಮ್ಮ ಮತ್ತು ಸುಷ್ಮಿತವದನ ರವರು ತನ್ನ ತಾಯಿ ಮತ್ತು ತನ್ನ ಚಿಕ್ಕಮ್ಮ ರವರನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಅವರ ಮೈ ಮೇಲೆ ಹೊಡೆದು ಮೈ ಕೈ ನೋವನ್ನುಂಟು ಮಾಡಿರುತ್ತಾರೆ. ನಾರಾಯಣಸ್ವಾಮಿ ರವರ ಮಗ ಚರಣ್ ರವರು ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ನವೀನ್ ರವರ ಎಡ ಮೊಣಕೈಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ. ಯಶೋಧಮ್ಮ ರವರು ತನ್ನ ತಾಯಿ ಮತ್ತು ತನ್ನ ಚಿಕ್ಕಮ್ಮ ರವರ ಮೈ ಮೇಲೆ ಕೈಗಳಿಂದ ಹೊಡೆದು ಮೈ ಕೈ ನೋವನ್ನುಂಟು ಮಾಡಿರುತ್ತಾರೆ. ಹಾಗೂ ಸದರಿ ಮೇಲ್ಕಂಡವರು ಸ್ಥಳದಿಂದ ಹೋಗುವಾಗ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಮುಗಿಸಿ ಬಿಡುವುದಾಗಿ ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.256/2020 ಕಲಂ. 143,147,148,323,324,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ: 01/07/2020 ರಂದು ಸಂಜೆ 7.15 ಗಂಟೆಗೆ ನಾರಾಯಣಸ್ವಾಮಿ ಬಿನ್ ಗಂಜೂರು ಕದಿರಪ್ಪ, 49 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ಮೈಲಾಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 01/07/2020 ರಂದು ಬೆಳಿಗ್ಗೆ 08.30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಚಂದ್ರಪ್ಪ ರವರ ಮಗನಾದ 2 ವರ್ಷ ವಯಸ್ಸಿನ ರಕ್ಷಣ್ ಎಂಬುವನು ತಮ್ಮ ಮನೆಯ ಬಳಿ ಬಹಿರ್ದೆಸೆಗೆ ಕುಳಿತುಕೊಂಡಿದ್ದಾಗ, ತಾನು ಅಲ್ಲಿದ್ದ ರಕ್ಷಣ್ ರವರ ತಾಯಿಯಾದ ವೆಂಕಟಮ್ಮ ರವರನ್ನು ಕುರಿತು ಏನಮ್ಮ ಮಗುಗೆ ಬುದ್ದಿ ಇಲ್ಲ ನಿನಗೆ ಬುಧ್ದಿ ಇಲ್ಲವಾ ಇಲ್ಲಿ ಅವನನ್ನು ಬಹಿರ್ದೆಸೆಗೆ ಕೂರಿಸಿರುವುದು ಸರಿಯೇ ಎಂದು ಹೇಳಿದಾಗ, ಮೇಲ್ಕಂಡ ವೆಂಕಟಮ್ಮ ಕೋಂ ಚಂದ್ರಪ್ಪ, ಮೂರ್ತಿ ಬಿನ್ ನಾರಾಯಣಪ್ಪ, ಪವನ್ ಬಿನ್ ವೆಂಕಟೇಶಪ್ಪ, ಮುನಿರಾಜು ಬಿನ್ ವೆಂಕಟೇಶಪ್ಪ ಮತ್ತು ನಾರಾಯಣಸ್ವಾಮಿ @ ನಾನ ಬಿನ್ ನರಸಿಂಹಪ್ಪ ಎಂಬುವರು ಅಕ್ರಮಗುಂಪು ಕಟ್ಟಿಕೊಂಡು ಬಂದು ತನ್ನ ಮೇಲೆ ಜಗಳ ತೆಗೆದು ಆ ಪೈಕಿ ವೆಂಕಟಮ್ಮ ಎಂಬುವರು ತನ್ನನ್ನು ಕುರಿತು ಏನೋ ಬೋಳಿ ನನ್ನ ಮಗನೇ ನಿನಗೆ ಎಷ್ಟು ದಿಮಾಕು ನನಗೆ ಪ್ರಶ್ನೆ ಮಾಡುತ್ತೀಯಾ ಎಂದು ಕೆಟ್ಟ ಮಾತುಗಳಿಂದ ಬೈದಿರುತ್ತಾಳೆ. ಮೂರ್ತಿ ಎಂಬುವನು ದೊಣ್ಣೆಯಿಂದ ತನ್ನ ತಲೆಯ ಮೇಲೆ ಹೊಡೆದು ನೋವುಂಟು ಮಾಡಿರುತ್ತಾನೆ. ಆಗ ತನ್ನ ತಮ್ಮನಾದ ಶಂಕರಪ್ಪ, ತನ್ನ ಮಗಳಾದ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆ ಮದನಪಲ್ಲಿ ವಾಸಿಯಾದ ಸುಷ್ಮಿತ ಕೋಂ ಮಣಿ ಮತ್ತು ತನ್ನ ತಂಗಿಯಾದ ಹೊಸಕೋಟೆ ತಾಲ್ಲೂಕು ಸೊಣದೇನಹಳ್ಳಿ ಗ್ರಾಮದ ವಾಸಿಯಾದ ನಾಗರತ್ನಮ್ಮ ಕೋಂ ವಾಸು ರವರು ಜಗಳ ಬಿಡಿಸಲು ಬಂದಾಗ ಪವನ್ ಎಂಬುವನು ದೊಣ್ಣೆಯಿಂದ ತನ್ನ ತಂಗಿ ನಾಗರತ್ನಮ್ಮ ರವರ ಹೊಟ್ಟೆಯ ಮೇಲೆ ಹೊಡೆದು ಗಾಯಪಡಿಸಿರುತ್ತಾನೆ. ಮುನಿರಾಜು ಎಂಬುವನು ಕೈಗಳಿಂದ ತನ್ನ ತಮ್ಮ ಶಂಕರಪ್ಪ ರವರ ಮೈ-ಮೇಲೆ ಹೊಡೆದು ನೋವುಂಟು ಮಾಡಿರುತ್ತಾನೆ. ನಾರಾಯಣಸ್ವಾಮಿ @ ನಾನ ಬಿನ್ ನರಸಿಂಹಪ್ಪ ಎಂಬುವನು ಕೈಗಳಿಂದ ತನ್ನ ಮಗಳಾದ ಸುಷ್ಮಿತ ರವರ ಮೈ-ಮೇಲೆ ಹೊಡೆದು ನೋವುಂಟು ಮಾಡಿ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲ ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ತಾವು 4 ಜನರು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಈ ದಿನ ಸಂಜೆ ಊರಿನ ಹಿರಿಯರು ಗ್ರಾಮದಲ್ಲಿ ನ್ಯಾಯಪಂಚಾಯ್ತಿ ಮಾಡೋಣ ಎಂದು ತಿಳಿಸಿದ್ದು, ಆದರೆ ಪಂಚಾಯ್ತಿ ಮಾಡದೆ ಇರುವುದರಿಂದ ತಡವಾಗಿ ದೂರು ನೀಡುತ್ತಿದ್ದು, ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.77/2020 ಕಲಂ. 188,269 ರೆ/ವಿ 34 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ: 01/07/2020 ರಂದು ಸಂಜೆ 6-00 ಗಂಟೆಗೆ ಘನ ನ್ಯಾಯಾಲಯದ ಪಿ.ಸಿ 509 ರವರು ಘನ ನ್ಯಾಯಾಲಯದ ಪಿಸಿಆರ್ ನಂ 133/2020 ರ ಪ್ರತಿಯನ್ನು ತಂದು ಹಾಜರುಪಡಿಸಿದ್ದನ್ನು ಪಡೆದು ಸಾರಾಂಶವೇನೆಂದರೆ  ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ನಾರಾಯಣಸ್ವಾಮಿ ಪಿ.ಎಸ್.ಐ(ಕಾ.ಸು-1) ಆದ ತಾನು ಘನ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುವುದೆನೆಂದರೇ, ಪ್ರಸ್ತುತ ದೇಶದಾದ್ಯಂತ ಮಾರಣಾಂತಿಕ ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯಾದ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾವು ಸರ್ಕಾರವು ಸಮರೋಪಾದಿಯಾಗಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಕರ್ನಾಟಕ ರಾಜ್ಯಾದ್ಯಂತ ಸರ್ಕಾರ ಲಾಕ್ ಡೌನ್ ಆದೇಶವನ್ನು ಮಾಡಿರುತ್ತೆ. ಸರ್ಕಾರದ ಆದೇಶದಂತೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸುವುದು, ಹೋಟೆಲ್/ಅಂಗಡಿಗಳಲ್ಲಿ ಗ್ರಾಹಕರಿಗೆ ಸಾನಿಟೈಜರ್ ಬಳಸುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯವಾಗಿರುತ್ತೆ. ದಿನಾಂಕ:29/06/2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ತಾನು ಸಿಬ್ಬಂದಿಯವರಾದ ಹೆಚ್.ಸಿ-245 ಸೋಮಶೇಖರ್ ಸಿ.ಪಿ.ಸಿ-426 ಸರ್ವೇಶ್ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಕರೋನ ವೈರೆಸ್ ತಡೆಗಟ್ಟುವ ನಿಟ್ಟಿನಲ್ಲಿ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ:ಕೆಎ-07-ಜಿ-188 ರಲ್ಲಿ ಜೀಪ್ ಚಾಲಕನಾಗಿ ಚೌಡಪ್ಪ ಎ.ಪಿ.ಸಿ-64 ರವರೊಂದಿಗೆ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ, ಚಿಂತಾಮಣಿ ನಗರದ ಗಜಾನನ ಸರ್ಕಲ್ ಬಳಿ ಶ್ರೀ.ಮಂಜುನಾಥ ಟಿಫನ್ ಸೆಂಟರ್ ನಲ್ಲಿ ಹೋಟೆಲ್ ಮಾಲೀಕರಾದ ಶ್ರೀ.ಹೆಚ್.ಜಿ.ಶೇಖರ್ ಬಿನ್ ಗೋವಿಂದಪೂಜಾರಿ, 60 ವರ್ಷ, ಈತನ ಮಗ ಶ್ರೀ.ಮೋಹನ್ ಬಿನ್ ಹೆಚ್.ಜಿ ಶೇಖರ್ ಇವರುಗಳು ಹೋಟೆಲ್ ಗೆ ಬರುವ ಗ್ರಾಹಕರಿಗೆ ಯಾವುದೇ ರೀತಿಯ ಸಾನಿಟೈಜರ್, ಮಾಸ್ಕ್ ಬಳಸದೇ ಮತ್ತು ಸಾಮಾಜಿಕ ಅಂತರವನ್ನು ಕಾಪಾಡದೇ ಹೋಟೆಲ್ ನಲ್ಲಿ ಗ್ರಾಹಕರನ್ನು ಒಬ್ಬರ ಪಕ್ಕದಲ್ಲಿ ಒಬ್ಬರನ್ನು ಕುಳ್ಳರಿಸಿಕೊಂಡು ತಿಂಡಿಯನ್ನು ಸರಬರಾಜು ಮಾಡುತ್ತಿರುತ್ತಾರೆ. ರಾಷ್ಟ್ರದಾಂತ್ಯ ಕೋವಿಡ್-19 ಸಾಂಕ್ರಾಮಿಕ ಖಾಯಿಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಲಾಕ್ ಡೌನ್ ಆದೇಶವನ್ನು ಮೇಲ್ಕಂಡ ಹೆಚ್.ಜಿ ಶೇಖರ್ ಬಿನ್ ಗೋವಿಂದಪೂಜಾರಿ ಈತನ ಮಗ ಮೋಹನ್ ಬಿನ್ ಹೆಚ್.ಜಿ.ಶೇಖರ್,31 ವರ್ಷ, ಬಿಲ್ಲವ ಜನಾಂಗ, ವಾಸ ವೆಂಕಟಗಿರಿಕೋಟೆ, ಚಿಂತಾಮಣಿ ಟೌನ್ ರವರುಗಳು ಉಲ್ಲಂಘನೆ ಮಾಡಿರುವುದಾಗಿ, ಸದರಿ ಹೋಟೆಲ್ ನಲ್ಲಿ ಗ್ರಾಹಕರು ಸಾಮಾಜಿಕ ಅಂತರವನ್ನು ಕಾಪಾಡದೇ ಹೋಟೆಲ್ ನಲ್ಲಿ ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ತಿಂಡಿ ತಿನ್ನುತ್ತಿರುವುದರ ಬಗ್ಗೆ ಸ್ಥಳದಲ್ಲಿ ಮೊಬೈಲ್ ನಲ್ಲಿ  ಭಾವ ಚಿತ್ರಗಳನ್ನು ಹಾಗೂ ವಿಡಿಯೋವನ್ನು ಮಾಡಿರುತ್ತೆ. ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿರುವ ಮೇಲ್ಕಂಡವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಕಲಂ 200 ಸಿ.ಆರ್.ಪಿ.ಸಿ ರೀತ್ಯಾ ಅನುಮತಿ ನೀಡಲು ಘನ ನ್ಯಾಯಾಲಯದಲ್ಲಿ ಕೋರಿ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.150/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:01/07/2020 ರಂದು ಠಾಣಾ ಹೆಚ್.ಸಿ.137 ಶ್ರೀ ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ್ದೇನೆಂದರೆ ದಿನಾಂಕ:30/06/2020 ರಂದು ಪಿ.ಎಸ್.ಐ ಶ್ರೀ ಲಕ್ಷ್ಮಿನಾರಾಯಣ ರವರು ಮಾಲು ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ:30/06/2020 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಅದ್ದೇಕೊಪ್ಪ ಗ್ರಾಮದ ಬಳಿ ಇರುವ ಉತ್ತರ ಪಿನಾಕಿನಿ ನದಿಯ ಬಳಿ ಇರುವ ಹೊಂಗೆ  ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿಸಿ-537 ಆನಂದ್ ಕುಮಾರ್, ಪಿ.ಸಿ.283 ಅರವಿಂದ, ಪಿ.ಸಿ.175 ನವೀನ್ ಕುಮಾರ್, ಪಿ.ಸಿ.311 ಗೂಳಪ್ಪ, ಪಿ.ಸಿ.336 ಉಮೇಶ್ ಶಿರಶ್ಯಾಡ್ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸಕರ್ಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 3:30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು  ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ವರದರಾಜ್ ಬಿನ್ ಗೋಪಾಲಪ್ಪ, 39 ವರ್ಷ, ಕುಂಬಾರರು, ವ್ಯವಸಾಯ ವರವಣಿ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಗಂಗಾಧರಪ್ಪ ಬಿನ್ ಲೇಟ್ ವೆಂಕಟಪ್ಪ, 40 ವರ್ಷ, ಕುರುಬರು, ಕುರಿ ವ್ಯಾಪಾರ, ವಾಸ ಬೀರಮಂಗಲ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ಹನುಮಂತಪ್ಪ ಬಿನ್ ಲೇಟ್ ಮುನಿಶ್ಯಾಮಪ್ಪ, 50 ವರ್ಷ, ನಾಯಕರು, ವ್ಯವಸಾಯ ವಾಸ ಅದ್ದೆಕೊಪ್ಪ ಗ್ರಾಮ,  ಗೌರಿಬಿದನೂರು ತಾಲ್ಲೂಕು 4) ಹನುಮಂತಪ್ಪ ಬಿನ್ ದೊಡ್ಡ ಆವುಲಕೊಂಡಪ್ಪ 45 ವರ್ಷ, ನಾಯಕರು, ವ್ಯವಸಾಯ ವಾಸ ಅದ್ದೆಕೊಪ್ಪ ಗ್ರಾಮ, ಗೌರಿಬಿದನೂರು ತಾಲ್ಲೂಕು, 5) ಮೆಹಬೂಬ್ ಪಾಷ ಬಿನ್ ಲೇಟ್ ರಜಾಕ್ ಸಾಬ್, 44 ವರ್ಷ, ಮುಸ್ಲಿಂ ಜನಾಂಗ, ಚಾಲಕ ಕೆಲಸ, ವಾಸ ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ಚಿಕ್ಕಪಿಳ್ಳಪ್ಪ ಬಿನ್ ಲೇಟ್ ಯರ್ರಪ್ಪ, 50 ವರ್ಷ, ನಾಯಕರು, ವ್ಯವಸಾಯ, ಗೌರಿಬಿದನೂರು ತಾಲ್ಲೂಕು. 7) ಗೋವಿಂದಪ್ಪ ಬಿನ್ ರಾಮಪ್ಪ, 40 ವರ್ಷ, ನಾಯಕರು, ಕೂಲಿ ಕೆಲಸ, ವಾಸ ಅದ್ದೆಕೊಪ್ಪ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆರೋಪಿತರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 8200/- (ಎಂಟು ಸಾವಿರದ ಇನ್ನೂರು ರೂಪಾಯಿಗಳು ಮಾತ್ರ.)  ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು ಸಂಜೆ 4-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂ. 310/2020 ರಂತೆ ದಾಖಲಿಸಿ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರರಕಣ ದಾಖಲಿಸಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.151/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:01/07/2020 ರಂದು ಹೆಚ್.ಸಿ.137 ಶ್ರೀ ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ತಂದು ಹಾಜರುಪಡಿಸಿದ್ದೇನೆಂದರೆ ದಿನಾಂಕ:30/06/2020 ರಂದು ಪಿ.ಎಸ್.ಐ ಶ್ರೀ ಲಕ್ಷ್ಮಿನಾರಾಯಣ ರವರು ಮಾಲು ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಢಿದ ದೂರಿನ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ:30/06/2020 ರಂದು ಮದ್ಯಾಹ್ನ 5-15 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಕುಂಟಚಿಕ್ಕನಹಳ್ಳಿ ಗ್ರಾಮದ ಬಳಿ ಇರುವ ಸರ್ಕಾರಿ ಹಳ್ಳದ ಬಳಿ ಇರುವ ಜಾಲಿ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿಸಿ-537 ಆನಂದ್ ಕುಮಾರ್, ಪಿ.ಸಿ.175 ನವೀನ್ ಕುಮಾರ್, ಪಿ.ಸಿ.311 ಗೂಳಪ್ಪ, ಪಿ.ಸಿ.336 ಉಮೇಶ್ ಶಿರಶ್ಯಾಡ್ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸಕರ್ಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 5-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು  ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಶ್ರೀನಿವಾಸರೆಡ್ಡಿ ಬಿನ್ ವೆಂಕಟರಾಮರೆಡ್ಡಿ, 40 ವರ್ಷ, ಒಕ್ಕಲಿಗರು, ಜಿರಾಯ್ತಿ, ಕುಂಟಚಿಕ್ಕನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಕೃಷ್ಣಕುಮಾರ್ ಬಿನ್ ಕದಿರಪ್ಪ, 36 ವರ್ಷ, ಆದಿಕರ್ನಾಟಕ, ಜನಾಂಗ, ಕೂಲಿ ಕೆಲಸ, ರೆಡ್ಡಿದ್ಯಾವರಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ವೆಂಕಟರಾಮರೆಡ್ಡಿ ಬಿನ್ ರಾಮಕೃಷ್ಣರೆಡ್ಡಿ, 45 ವರ್ಷ, ಒಕ್ಕಲಿಗರು, ಜಿರಾಯ್ತಿ, ಕುಂಟಚಿಕ್ಕನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 4) ವೆಂಕಟೇಶಪ್ಪ ಬಿನ್ ಲೇಟ್ ಸುಬ್ಬರಾಯಪ್ಪ, 45 ವರ್ಷ, ಅಗಸರು, ಕೂಲಿ ಕೆಲಸ, ವಾಸ ಕುಂಟಚಿಕ್ಕನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 5) ಪ್ರಕಾಶ್ ಬಿನ್ ಲೇಟ್ ಲಿಂಗಪ್ಪ, 55 ವರ್ಷ, ಲಿಂಗಾಯತರು, ಕೂಲಿ ಕೆಲಸ, ಮಿಂಡೇನಹಳ್ಳಿ  ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ಜಗಧೀಶ್ ಬಿನ್ ಲೇಟ್ ಮಾರ್ಕಂಡಯ್ಯ, 30 ವರ್ಷ, ಲಿಂಗಾಯತರು, ವ್ಯವಸಾಯ ಮಿಂಡೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು. 7) ಉಗ್ರಪ್ಪ ಬಿನ್ ಲೇಟ್ ನಂಜುಂಡಪ್ಪ, 65 ವರ್ಷ, ಲಿಂಗಾಯತ ಜನಾಂಗ, ವ್ಯವಸಾಯ, ಮಿಂಡೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆರೋಪಿತರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 5200/- (ಐದು ಸಾವಿರದ ಇನ್ನೂರು ರೂಪಾಯಿಗಳು ಮಾತ್ರ.)  ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು ಸಂಜೆ 5-45 ಗಂಟೆಯಿಂದ ಸಂಜೆ 6-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಠಾಣಾ ಎನ್.ಸಿ.ಆರ್ 311/2020 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.152/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ: 02/07/2020 ರಂದು ಮದ್ಯಾಹ್ನ 1-00 ಗಂಟೆಗೆ ಹೆಚ್.ಸಿ 137, ಮಂಜುನಾಥ್ ರವರು ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಹಾಜರುಪಡಿಸಿದ್ದೆನೆಂದರೆ, ದಿನಾಂಕ:01/07/2020 ರಂದು ಪಿಎಸ್.ಐ ರವರು ಮಾಲು ಮಹಜರ್ ಮತ್ತು ಆರೋಪಿರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ:01/07/2020 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ಬಸವನಹಳ್ಳಿ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯ ಅಂಗಳದಲ್ಲಿರುವ  ಜಾಲಿ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.219 ಶ್ರೀನಿವಾಸಮೂರ್ತಿ, ಪಿ.ಸಿ.532 ಚಿಕ್ಕಣ್ಣ, ಪಿಸಿ-537 ಆನಂದ್ ಕುಮಾರ್, ಪಿ.ಸಿ.311 ಗೂಳಪ್ಪ, ಪಿ.ಸಿ.336 ಉಮೇಶ್ ಶಿರಶ್ಯಾಡ್, ಪಿ.ಸಿ.283 ಅರವಿಂದ, ಪಿ.ಸಿ.175 ನವೀನ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 4-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಕೊಂಡಪ್ಪ ಬಿನ್ ದೊಡ್ಡಬಾಲಪ್ಪ, 35 ವರ್ಷ, ಬೋವಿ ಜನಾಂಗ, ಜಿರಾಯ್ತಿ, ಬಸವನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಗೋವಿಂದರಾಜು ಬಿನ್ ವೆಂಕಟೇಶಪ್ಪ, 38 ವರ್ಷ, ಬೋವಿ ಜನಾಂಗ ಜಿರಾಯ್ತಿ, ವಾಸ ಬಸವನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ಜಿ.ಎಸ್. ರಮೇಶ್ ಬಿನ್ ಸಂಜೀವಪ್ಪ, 56 ವರ್ಷ, ಒಕ್ಕಲಿಗರು, ಜಿರಾಯ್ತಿ ಗುಂಡಂಗೆರೆ ಗ್ರಾಮ ಸಾಸಲು ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  4) ನರಸಿಂಹಮೂರ್ತಿ ಬಿನ್ ಮುನಿಯಪ್ಪ, 39 ವರ್ಷ, ಗೊಲ್ಲರು, ಚಾಲಕ ವೃತ್ತಿ, ಬಂಕೇನಹಳ್ಳಿ ಗ್ರಾಮ, ದೊಡ್ಡಬಳ್ಳಾಪುರ  ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ತಿಳಿಸಿದ್ದು, ಆರೋಪಿತರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 7400/- (ಏಳು ಸಾವಿರದ ನಾಲ್ಕು ನೂರು ರೂಪಾಯಿಗಳು ಮಾತ್ರ.)  ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ್ದನ್ನು ಪ್ರಕರಣ ದಾಖಲಿಸಲು ಘನ ನ್ಯಾಯಲಯದ ಅನುಮತಿಯನ್ನು ಪಡೆಯಲು ಠಾಣಾ ಎನ್.ಸಿ.ಆರ್ 312/2020 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.153/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ: 02/07/2020 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರಾದ ರಾಹುಲ್ ಖಾನ್ ಬಿನ್ ನಜೀರ್ ಅಹಮ್ಮದ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನನ್ನ ಅಣ್ಣ ಅಪ್ರೋಜ್ ಖಾನ್ . ಎನ್ ಬಿನ್ ನಜೀರ್ ಅಹಮ್ಮದ್, 32 ವರ್ಷ, ಲಾರಿ ಚಾಲಕ ವೃತ್ತಿ ರವರು ಮತ್ತು ನಮ್ಮ ಸಂಬಂಧಿ ನಮ್ಮ ಗ್ರಾಮದ ರಹಮತುಲ್ಲಾ ಬಿನ್ ರಸುಲ್ ಖಾನ್, 46 ವರ್ಷ, ಆಟೋ ಚಾಲಕ ರವರು ದಿ: 27/06/2020 ರಂದು ನನ್ನ ಅಣ್ಣ ನನ್ನ KA40-EE-6594 ಅಪ್ಪಾಚಿ ದ್ವಿ ಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದು ಬೆಂಗಳೂರಿನಲ್ಲಿ ಕೆಲಸವನ್ನು ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿರುವಾಗ ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ಬೆಂಗಳೂರು ಗೌರಿಬಿದನೂರು ಎಸ್.ಎಚ್ 9 ರಸ್ತೆಯ ಕಮಾಲಾಪುರ ಗ್ರಾಮದ ಬಳಿ ಬರುತ್ತಿರುವಾಗ ರಸ್ತೆಯ ಅಂಚಿನಲ್ಲಿ ಹಾಕಿರುವ ಸೂಚನಾಪಲಕಕ್ಕೆ ದ್ವಿ ಚಕ್ರ ವಾಹನವನ್ನು ನನ್ನ ಅಣ್ಣ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಯಿಸಿರುವುದಾಗಿ ನನಗೆ ಯಾರೋ ದೂರವಾಣಿ ಮೂಲಕ ತಿಳಿಸಿದ್ದು ತಕ್ಷಣ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ದ್ವಿ ಚಕ್ರ ವಾಹನ ಚಾಲನೆ ಮಾಡುತ್ತಿದ್ದ ನನ್ನ ಅಣ್ಣನಿಗೆ ಎಡಕೈ ಮತ್ತು ಎಡಗಾಲಿಗೆ ಗಾಯವಾಗಿದ್ದು ದ್ವಿ ಚಕ್ರ ವಾಹನದಲ್ಲಿ ಹಿಂದೆ ಕುಳಿತಿದ್ದ ರಹಮತುಲ್ಲಾ ರವರಿಗೆ ತಲೆಗೆ ಕೈಕಾಲುಗಳಿಗೆ ಮತ್ತು ನಡುವಿಗೆ ಗಾಯವಾಗಿದ್ದು ಸ್ಥಳಕ್ಕೆ ಬಂದ 108 ಅಂಬುಲೆನ್ಸ್ ವಾಹನದಲ್ಲಿ ಇಬ್ಬರನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ವೈದ್ಯರ ಸಲಹೆಯ ಮೇರೆಗೆ ಗಾಯಾಳುಗಳನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಸೇರಿಸಿದ್ದು ಗಾಯಾಳುಗಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇದ್ದರಿಂದ ನಾನೇ ಚಿಕಿತ್ಸೆಕೊಡಿಸಿ ಈ ದಿನ ದಿ: 02/07/2020 ರಂದು ತಡವಾಗಿ ದೂರು ನೀಡುತ್ತಿದ್ದು ನಮ್ಮ ಅಣ್ಣ ದ್ವಿ ಚಕ್ರ ವಾಹನವನ್ನು ವೇಗವಾಗಿ ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದ್ದು ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ದೂರು.