ದಿನಾಂಕ :01/12/2020 ರ ಅಪರಾಧ ಪ್ರಕರಣಗಳು

1) ಚೇಳೂರು ಪೊಲೀಸ್ ಠಾಣೆ ಮೊ.ಸಂ.81/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ: 01/12/2020 ರಂದು  ಬೆಳಗ್ಗೆ 06-30 ಗಂಟೆಗೆ  ಪಿರ್ಯುದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು  ಪಡೆದುಕೊಂಡಿದ್ದರ ಸಾರಾಂಶವೇನೆಂದರೆ,  ದಿನಾಂಕ:30/11/2020 ರಂದು  ರಾತ್ರಿ  SHO ರವರು ರಾತ್ರಿ 8.30 ಗಂಟೆಯಲ್ಲಿ  ತನಗೆ ಮತ್ತು ಹೆಚ್.ಜಿ. 564 ರವಿಕುಮಾರ್ ರವರಿಗೆ  ಚೇಳೂರು ಠಾಣೆಯ ರಾತ್ರಿ ಸುಬಾಹು ಬೀಟ್ ಕರ್ತವ್ಯಕ್ಕೆ ನೇಮಿಸಿದ್ದು, ಸದರಿ ನೇಮಕದಂತೆ ನಾವು  ಚೇಳೂರು ಬಸ್ ನಿಲ್ದಾಣ, ಸಂತೆ ಮೈದಾನ ,ಶಾಂತಿ ನಗರ ,ಪದ್ಮನಾಭ ನಗರ. ಕೊಟೆಕ್ ಬ್ಯಾಂಕ್ RMC ಯಾರ್ಡ್ ಬಳಿ ಗಸ್ತು ಮಾಡುತ್ತಿದ್ದಾಗ  ಬೆಳಿಗ್ಗೆ ಸುಮಾರು 5:00 ಗಂಟೆಯ ಸಮಯದಲ್ಲಿ RMC ಯಾರ್ಡ್ ಗೇಟ್ ಬಳಿ ಯಾರೋ ಆಸಾಮಿಗಳು ಅಕ್ರಮವಾಗಿ ಮದ್ಯ ಪ್ಯಾಕೇಟ್ಗಳನ್ನು ಇಟ್ಟುಕೊಂಡು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟುಮಾಡುವ ರೀತಿಯಲ್ಲಿ ಮದ್ಯಪಾನ ಮಾಡುತ್ತಿರುವುದಾಗಿ ಮಾಹಿತಿ ದೊರೆತಿದ್ದು, ಸದರಿ ಮಾಹಿತಿಯ ಮೇರೆಗೆ ನಾವು  ಚೇಳೂರು ಗ್ರಾಮದ ಬಸ್ಸು ನಿಲ್ದಾಣಕ್ಕೆ ಬಂದು ಪಂಚರನ್ನು ಬರಮಾಡಿಕೊಂಡು, ತಾವು ಪಂಚರೊಂದಿಗೆ RMC ಯಾರ್ಡ ಬಳಿ ಹೋಗಿ  ಗೇಟಿನ ಮರೆಯಲ್ಲಿ  ನಿಂತು  ನೋಡಲಾಗಿ ಆರ್.ಎಂ.ಸಿ.ಯಾರ್ಡ್ ಆವರಣದಲ್ಲಿ ಕೆಲವರು  ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಆ ಪೈಕಿ  ಮದ್ಯಪಾನ ಮಾಡಲು ಅನವು ಮಾಡಿಕೊಟ್ಟಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು, ಸ್ಥಳದಲ್ಲಿ ಪರಿಶೀಲಿಸಲಾಗಿ ಸದರಿ ಸ್ಥಳದಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳು ಬಿದ್ದಿದ್ದು  ಅಕ್ರಮವಾಗಿ ಮದ್ಯ ಪಾಕೇಟ್ಗಳನ್ನು ಇಟ್ಟುಕೊಂಡು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುವ ರೀತಿಯಲ್ಲಿ  ಮದ್ಯಪಾನ ಮಾಡುತ್ತಿದ್ದು ,ನಾವು ವಶಕ್ಕೆ ಪಡೆದುಕೊಂಡಿದ್ದವನ   ಹೆಸರು ಮತ್ತು ವಿಳಾಸ ಕೇಳಲಾಗಿ  ಮಹೇಶ್. ಎಂ ಬಿನ್  ರಾಮನ್ನ ,26 ವರ್ಷ ಗಾರೇಕೆಲಸ,26 ವರ್ಷ ಎರಕುಲ ಜನಾಂಗ ,ಕೊಕ್ಕಂಟಿ ಕ್ರಾಸ್ ,ತನಕಲ್ ಮಂಡಲಂ, ಕದರಿ ತಾಲ್ಲೂಕು,ಅನಂತಪುರ ಜಿಲ್ಲೆ ಆಂದ್ರಪ್ರದೇಶ್ ಎಂದು ತಿಳಿಸಿದ್ದು , ಆತನಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ನಿಮ್ಮ ಬಳಿ ಯಾವುದಾದರು ಪರವಾನಿಗೆ ಇದೆಯೇ ಎಂದು ಕೇಳಲಾಗಿ , ನನ್ನ ಬಳಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ಸದರಿ ಸ್ಥಳದಲ್ಲಿದ್ದ ಮಧ್ಯ ಪಾಕೇಟ್ ಗಳನ್ನು ಪರಿಶೀಲಿಸಲಾಗಿ ಮದ್ಯ ತುಂಬಿದ್ದ 90 ಎಂ.ಎಲ್ ನ  ಬೆಂಗಳೂರು WHISKY 90 ml,15 ಟೆಟ್ರಾ ಪ್ಯಾಕೇಟ್ಗಳಿದ್ದು ಇವುಗಳು ಒಟ್ಟ 1.35 ltr  ಆಗಿರುತ್ತದೆ. ಪ್ರತಿ ಪ್ಯಾಕೇಟ್ ನ ಬೆಲೆ-27.98 ಎಂದು ನಮೂದಿಸಿದ್ದು ಇವುಗಳ  ಒಟ್ಟು =419.70 ರೂಗಳಾಗಿರುತ್ತೆ ಹಾಗೂ ಮಧ್ಯಪಾನ ಮಾಡಿರುವ  ಸ್ಥಳದಲ್ಲಿ ಪರಿಶೀಲಿಸಲಾಗಿ  ಬೆಂಗಳೂರು WHISKY 90 mlನ ಎರಡು ಖಾಲಿ  ಪಾಕೆಟ್ ಗಳು.   2 ಪ್ಲಾಸ್ಟಿಕ್ ಗ್ಲಾಸ್ ಗಳು ಬಿದ್ದಿದ್ದು ಸದರಿಯವುಗಳನ್ನು ಬೆಳಿಗ್ಗೆ 5.15 ರಿಂದ 6.15 ಗಂಟೆಯ ವರೆಗೆ ಧಾಳಿ ಪಂಚಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುವುದಾಗಿ ನೀಡಿದ ದೂರಿನ  ಮೇರೆಗೆ ಈ ಪ್ರ.ವ.ವರದಿ.

2) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.306/2020 ಕಲಂ: 15(A) ಕೆ.ಇ ಆಕ್ಟ್:-

          ದಿನಾಂಕ 09/08/2020 ರಂದು ಬೆಳಗ್ಗೆ 10-30 ಗಂಟೆಯಲ್ಲಿ ಘನ ನ್ಯಾಯಾಲಯದ ಆದೇಶವನ್ನು ನ್ಯಾಯಾಲಯ ಕರ್ತವ್ಯ ಪಿಸಿ 205 ರವರು ಈ ಪ್ರತಿಯನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ. ದಿನಾಂಕ;- 24/10/2020 ರಂದು ಮದ್ಯಾಹ್ನ 2-15 ಗಂಟೆಯಲ್ಲಿ ಗೌರಿಬಿದನೂರು ವೃತ್ತ ನಿರೀಕ್ಷಕರಾದ ಶ್ರೀ. ಎಸ್.ರವಿ ಆದ ನಾನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ದಿನಾಂಕ;- 24/10/2020 ರಂದು ಸರ್ಕಾರಿ ಜೀಪ್ ನಂ ಕೆ-40-ಜಿ-1222 ರಲ್ಲಿ ಹೆಚ್.ಸಿ 224, ವೆಂಕಟೇಶ ರವರೊಂದಿಗೆ  ಹೊಸೂರು ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಗೋವಿಂದಪ್ಪ ಬಿನ್ ಲೇಟ್ ಗಂಗಪ್ಪ ರವರ ಅಂಗಡಿಯ ಪಕ್ಕದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಬಸ್ ನಿಲ್ದಾಣದಲ್ಲಿ ಪಂಚರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ ದಾಳಿಗೆ ಸಹಕರಿಸಲು ಕೋರಿದ್ದರ ಮೇರೆಗೆ ಪಂಚರು ಒಪ್ಪಿ ದಾಳಿ ಮಾಡಿ ಸ್ಥಳದಲ್ಲಿದ್ದ ಗೋವಿಂದಪ್ಪ ಬಿನ್ ಲೇಟ್ ಗಂಗಪ್ಪ, 52 ವರ್ಷ, ಡಿಗರು, ಅಂಗಡಿ ವ್ಯಾಪಾರ, ಹೊಸೂರು ಗ್ರಾಮ. ನನ್ನು ಸುತ್ತುವರೆದು ದಾಳಿ ಮಾಡಿ ಅಲ್ಲಿಂದ 15 ಹೈವಾರ್ಡ್ಸ್ ಟೆಟ್ರಾ ಪಾಕೆಗಳನ್ನು ಮತ್ತು 2 ಖಾಲಿ ಗ್ಲಾಸ್,  ನೀರಿನ ಬಾಟಲನ್ನು ಪಂಚರ ಸಮಕ್ಷಮ ಅಮಾನತು ಪಡಿಸಿಕೊಂಡು ಬೆಲೆ 525/- ರೂಗಳು ಸದರಿ ವ್ಯಕ್ತಿಯ ಬಳಿ ಮದ್ಯ ಮಾರಾಟ ಮಾಡಲು ಏನಾದರು ಪರವಾನಗಿ ಇದೆಯೇ ಎಂತ ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿದ್ದು ಕೂಡಲೇ ಮಾಲು ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮ ಪಂಚನಾಮೆಯನ್ನು ಬೆಳಗ್ಗೆ 12-00 ಗಂಟೆಯಿಂದ 12-40 ಗಂಟೆವರೆಗೆ ಬರೆದು ಪೂರೈಸಿ ಠಾಣೆಗೆ ಕರೆ ತಂದು ಈ ಮೆಮೋದೊಂದಿಗೆ ನೀಡುತ್ತಿದ್ದು, ಘನ ನ್ಯಾಯಾಲಯದಿಂದ ಅನುಮತಿ ಪಡದುಕೊಂಡು ಆರೋಪಿಯ ವಿರುದ್ಧ ಕಲಂ: 15 [ಎ] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.307/2020 ಕಲಂ: 15(A) ಕೆ.ಇ ಆಕ್ಟ್:-

          ದಿನಾಂಕ 01/12/2020 ರಂದು ಬೆಳಗ್ಗೆ 11-30 ಗಂಟೆಯಲ್ಲಿ ಘನ ನ್ಯಾಯಾಲಯದ ಆದೇಶವನ್ನು ನ್ಯಾಯಾಲಯ ಕರ್ತವ್ಯ ಪಿಸಿ 205 ರವರು ಈ ಪ್ರತಿಯನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ. ಗೌರೀಬಿದನೂರು ಪೊಲೀಸ್ ವೃತ್ತ ನಿರೀಕ್ಷಕನಾದ ಶ್ರೀ ರವಿ.ಎಸ್. ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ: 06/10/2020 ರಂದು ಸಂಜೆ 6-00  ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು  ವೈಚಕೂರಹಳ್ಳಿ ಗ್ರಾಮದಲ್ಲಿ ಅಶ್ವತ್ಥಪ್ಪ ಬಿನ್ ಲೇಟ್ ಗಂಗಪ್ಪ, ಎಂಬುವರು ಅವರ  ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮಿದಾರರಿಂದ ಮಾಹಿತಿ ಬಂದಿದ್ದು, ನಾನು ಸಿಬ್ಬಂದಿಯವರಾದ  ಹೆಚ್.ಸಿ. 224,ವೆಂಕಟೇಶ್,  ಎಪಿಸಿ 133 ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1222 ರಲ್ಲಿ  ವೈಚಕೂರಹಳ್ಳಿ ಗ್ರಾಮಕ್ಕೆ ಹೋಗಿ ಜೀಪು  ನಿಲ್ಲಿಸಿ,  ಎಲ್ಲರೂ ಜೀಪಿನಿಂದ ಇಳಿದು ಮಾಹಿತಿ ಇದ್ದ  ಸ್ಥಳಕ್ಕೆ   ನಡೆದುಕೊಂಡು ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ, ವೈಚಕೂರಹಳ್ಳಿ ಗ್ರಾಮದ ಅಶ್ವತ್ಥಪ್ಪ ಬಿನ್ ಲೇಟ್ ಗಂಗಪ್ಪ, ನವರ ಅಂಗಡಿಯ ಮುಂದೆ ಅಶ್ವತ್ಥಪ್ಪ ಪ್ಲಾಸ್ಟೀಕ್ ಬ್ಯಾಗನ್ನು ಹಿಡಿದುಕೊಂಡಿದ್ದು,  ಇತರೇ ಇಬ್ಬರು ಜನರು ಕುಳಿತಿದ್ದರು. ಅವರಿಗೆ ಅಶ್ವತ್ಥಪ್ಪ ಪ್ಲಾಸ್ಟಿಕ್ ಬ್ಯಾಗ್ ನಿಂದ  ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಆ ಇಬ್ಬರು ಜನರು  ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಓಡಿಹೋಗಿದ್ದು,  ಅಶ್ವತ್ಥಪ್ಪ ಸಹ ಪ್ಲಾಸ್ಟೀಕ್ ಬ್ಯಾಗನ್ನು ಬಿಸಾಡಿ  ಓಡಿ ಹೋಗಲು ಪ್ರಯತ್ನಿಸಿದವನನ್ನು ಹಿಡಿದು ಕೊಂಡು, ಪ್ಲಾಸ್ಟಿಕ್ ಬ್ಯಾಗ್ ನ್ನು ಪರಿಶೀಲಿಸಲಾಗಿ,  ಅದರಲ್ಲಿ   90  ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 19 ಟೆಟ್ರಾ ಪಾಕೆಟ್ ಗಳು ಇದ್ದವು. ಇವುಗಳ ಒಟ್ಟು ಸಾಮರ್ಥ್ಯ 1 ಲೀ 710  ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 667.47/- ರೂ.ಗಳಾಗಿರುತ್ತೆ. ಸ್ಥಳದಲ್ಲಿ 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 2  ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಅಶ್ವತ್ಥಪ್ಪನನ್ನು ಮದ್ಯ ಮಾರಾಟ ಮಾಡಲು, ಮದ್ಯವನ್ನು ಸೇವಿಸಲು ಸ್ಥಳಾವಕಾಶ ಮಾಡಿಕೊಡಲು  ಪರವಾನಗಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾನೆ.  ನಂತರ  ಸ್ಥಳದಲ್ಲಿ ಸಂಜೆ 6-15 ಗಂಟೆಯಿಂದ ರಿಂದ 7-00 ಗಂಟೆಯವರೆಗೆ ಕೃತಕ ದೀಪದ ಬೆಳಕಿನಲ್ಲಿ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಮುಂದಿನ ಕ್ರಮಕ್ಕಾಗಿ ಸ್ಥಳದಲ್ಲಿ ದೊರೆತ 90 ಎಂ.ಎಲ್  ಸಾಮರ್ಥ್ಯದ HAY WARDS CHEERS  WHISKY ಯ 19  ಟೆಟ್ರಾ  ಪಾಕೆಟ್ ಗಳು, ಪ್ಲಾಸ್ಟಿಕ್ ಬ್ಯಾಗ್, ಸ್ಥಳದಲ್ಲಿ ಬಿದ್ದಿದ್ದ  02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  02 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ವಶಪಡಿಸಿಕೊಂಡು, ಠಾಣೆಗೆ ರಾತ್ರಿ 7-30  ಗಂಟೆಗೆ  ವಾಪಸ್ಸು ಆರೋಪಿ ಅಶ್ವತ್ಥಪ್ಪ ಮತ್ತು ಮಾಲಿನೊಂದಿಗೆ ಬಂದು,  ಮುಂದಿನ ಕ್ರಮಕ್ಕಾಗಿ  ಆರೋಪಿ ಮತ್ತು ಮಾಲನ್ನು ಈ ಮೆಮೋದೊಂದಿಗೆ  ನೀಡುತ್ತಿದ್ದು, ಘನ ನ್ಯಾಯಾಲಯದಿಂದ  ಅನುಮತಿ ಪಡದುಕೊಂಡು ಆರೋಪಿಯ ವಿರುದ್ಧ  ಕಲಂ: 15 [ಎ], ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ.