ದಿನಾಂಕ :01/08/2020 ರ ಅಪರಾಧ ಪ್ರಕರಣಗಳು

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 189/2020 ಕಲಂ. 379 ಐ.ಪಿ.ಸಿ:-

          ದಿನಾಂಕ 31-07-2020 ರಂದು  19-00 ಗಂಟೆಗೆ ಪಿರ್ಯಾದಿದಾರರಾದ  ಶ್ರೀ ಮೋಹನ್ .ಎನ್. ಪಿ.ಎಸ್.ಐ. ಗೌರಿಬಿದನೂರು ಗ್ರಾಮಾಂತರ ಠಾಣೆರವರು ಠಾಣೆಗೆ ಹಾಜರಾಗಿ  ಒಂದು ಮರಳು ತುಂಬಿದ  ಟ್ರ್ಯಾಕ್ಟರ್ ಮತ್ತು ಟ್ರೈಲರ್ ಅನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:31/07/2020 ರಂದು ಸಂಜೆ 5-00 ಗಂಟೆಯಲ್ಲಿ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಿಬ್ಬಂದಿಯಾದ ಪಿ.ಸಿ-518, ಆನಂದ, ಪಿ.ಸಿ.208 ತಿಪ್ಪೇಸ್ವಾಮಿ, ಪಿ.ಸಿ.408 ಶ್ರೀ ಶೈಲ ಪವಾರ್ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ. ಕೆಎ-40 ಜಿ-281 ರ ವಾಹನದಲ್ಲಿ ಗಸ್ತು ಮಾಡುತ್ತಿದ್ದಾಗ ಡಿಪಾಳ್ಯ ಹೋಬಳಿ ಹುದುಗೂರು ಗ್ರಾಮದ ಸರ್ಕಾರಿ ಕೆರೆಯಲ್ಲಿ ಯಾರೋ ಆಸಾಮಿಗಳು ನೈಸರ್ಗಿಕ ಖನಿಜ ಸಂಪತ್ತಾದ ಮರಳನ್ನು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಟ್ರಾಕ್ಟರ್ ನಲ್ಲಿ ತುಂಬಿಸಿ ಸಾಗಾಣಿಕೆ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಮತ್ತು ಸಿಬ್ಬಂದಿಯನ್ನು ಕರೆದುಕೊಂಡು ಹುದುಗೂರು ಗ್ರಾಮದಿಂದ ಪೂರ್ವಕ್ಕೆ ಇರುವ ಕೆರೆಯಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಕೆರೆಯ ಅಂಗಳದಲ್ಲಿ  ಒಂದು ಟ್ರಾಕ್ಟರ್ ನಿಂತಿದ್ದು, ಸದರಿ ಟ್ರಾಕ್ಟರ್ನ ಹಿಂಭಾಗದ ಟ್ರಾಲಿಗೆ ಮರಳನ್ನು ತುಂಬಿಸುತ್ತಿದ್ದರು,  ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮರಳನ್ನು ತುಂಬಿಸುತ್ತಿದ್ದವರು ಮತ್ತು ಟ್ರಾಕ್ಟರ್ ನ  ಚಾಲಕ ಟ್ರಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದರು. ನಂತರ ಟ್ರಾಕ್ಟರ್ ನ್ನು ಪರಿಶೀಲನೆ ಮಾಡಲಾಗಿ ಸದರಿ ಟ್ರಾಕ್ಟರ್ ಕೆಂಪು ಬಣ್ಣದ ಮಹೇಂದ್ರ ಮತ್ತು ಮಹೇಂದ್ರ ಕಂಪನಿಯ ಟ್ರಾಕ್ಟರ್ ಆಗಿರುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ನೊಂದಣಿ ಸಂಖ್ಯೆ ಇರುವುದಿಲ್ಲ . ಟ್ರಾಕ್ಟರ್ ಇಂಜಿನ್ ಚಾರ್ಸಿ ನಂಬರ್ ZKJT01230 ಆಗಿರುತ್ತದೆ. ಹಿಂಭಾಗದಲ್ಲಿ ನೀಲಿ ಬಣ್ಣದ ಅಲ್ಲಲ್ಲಿ ಬಣ್ಣ ಕಿತ್ತುಹೋಗಿರುವ ಟ್ರೈಲರ್ ಇದ್ದು ಬಾಡಿ ಮಟ್ಟದವರೆಗೆ ಮರಳು ತುಂಬಿರುತ್ತದೆ. ಸದರಿ ಟ್ರೈಲರ್ ಗೆ ನೊಂದಣಿ ಸಂಖ್ಯೆ ಇರುವುದಿಲ್ಲ. ಸದರಿ ಟ್ರಾಕ್ಟರ್ ನ ಚಾಲಕ ಮತ್ತು ಮಾಲೀಕ ಅಕ್ರಮವಾಗಿ ಯಾವುಧೇ ಪರವಾನಗಿ ಇಲ್ಲದೆ ಮರಳನ್ನು ಕಳವು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿದ್ದು ಸದರಿ ಟ್ರಾಕ್ಟರ್ ಮತ್ತು ಮರಳು ತುಂಬಿದ ಟ್ರೈಲರ್ ಅನ್ನು ಪಂಚರ ಸಮಕ್ಷಮ ಸಂಜೆ 17-30 ಗಂಟೆಯಿಂದ 18-30 ಗಂಟೆಯವರೆಗೆ ಪಂಚನಾಮೆಯ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಸಂಜೆ 19-00 ಗಂಟೆಗೆ ಮರಳು ತುಂಬಿರುವ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ನಿಮ್ಮ ವಶಕ್ಕೆನೀಡುತ್ತಿದ್ದು ಸದರಿ ಟ್ರಾಕ್ಟರ್ ಚಾಲಕ ಮತ್ತು ಮಾಲೀಕನ ವಿರುದ್ದ ಕಲಂ.379 ಐಪಿಸಿ ರೀತ್ಯ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 80/2020 ಕಲಂ. 78(3) ಕೆ.ಇ ಆಕ್ಟ್:-

          ದಿನಾಂಕ 31/07/2020 ರಂದು ಕೆ.ಎಂ.ಶ್ರೀನಿವಾಸಪ್ಪ, ಸಿಪಿಐ, ಚಿಂತಾಮಣಿ ಗ್ರಾಮಾಂತರ ವೃತ್ತ ರವರು ಮಾಲು, ಆರೋಪಿ ಶ್ರೀಕಾಂತ್, ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ: ದಿನಾಂಕ:-31/07/2020 ರಂದು ಮಧ್ಯಾಹ್ನ ನಾನು ಮತ್ತು ಪೊಲೀಸ್ ಸಿಬ್ಬಂದಿಯವರಾದ ಸಿಹೆಚ್ಸಿ-190, ವೀರಭದ್ರಾಚಾರಿ, ಸಿಹೆಚ್ಸಿ-106 ಶಂಕರಪ್ಪ ಹಾಗೂ ಚಾಲಕನಾದ ಎಹೆಚ್ಸಿ-39 ವೇಣು ರವರೊಂದಿಗೆ  ಕೆಎ-40-ಜಿ-540 ಸರ್ಕಾರಿ ವಾಹನದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಗಸ್ತಿನಲ್ಲಿದ್ದಾಗ ಸಿದ್ದೇಪಲ್ಲಿ ಕ್ರಾಸ್ ನಲ್ಲಿ  ಯಾರೋ ಕೆಲವು ಆಸಾಮಿಗಳು ಪೆನ್ನು, ಪೇಪರ್  ಹಾಗೂ ಮೊಬೈಲ್ ಮುಖಾಂತರ ಮಟ್ಕಾ ಜೂಜಾಟ ದಂಧೆಯನ್ನು ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ  ಸದರಿ ಮಟ್ಕಾ ಜೂಜಾಟ ದಂಧೆಯ ಮೇಲೆ ದಾಳಿ ಮಾಡುವ ಸಲುವಾಗಿ ಸಿದ್ದೇಪಲ್ಲಿ ಕ್ರಾಸ್  ಬಳಿ ಬಂದಿದ್ದು,ಭೂಮಿಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ಬಳಿ ಇದ್ದವರನ್ನು ಮಟ್ಕಾ ದಾಳಿ ಮಾಡಲು ಪಂಚಾಯ್ತಿದಾರರಾಗಿ ಬಂದು ಮಹಜರ್ ಗೆ  ಸಹಕರಿಸಲು ಕೋರಿದ್ದರ ಮೇರೆಗೆ ಸದರಿಯವರು ಒಪ್ಪಿಕೊಂಡಿದ್ದು, ಅದರಂತೆ ಅವರೊಂದಿಗೆ ನಾವು  ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಸರ್ಕಾರಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಸಿದ್ದೇಪಲ್ಲಿ ಕ್ರಾಸ್ ನ ಪ್ರಯಾಣಿಕರ ತಂಗುದಾಣದ ಬಳಿ ಬಂದು ಮರೆಯಲ್ಲಿ ನಿಂತು ನೋಡಲಾಗಿ  ಅಲ್ಲಿ ಯಾರೋ ಮೂರು ಜನ ಆಸಾಮಿಗಳು ಪೆನ್ನು, ಪೇಪರ್ ಹಾಗೂ ಮೊಬೈಲ್ ನ್ನು ಉಪಯೋಗಿಸಿ 10 ರೂ ಗೆ 750 ರೂ ನೀಡುವುದಾಗಿ ಜನರಿಗೆ ಕೂಗಿ ಹೇಳಿ ಹಣದ ಅಮಿಷವೊಡ್ಡಿ ಮಟ್ಕಾ ಜೂಜಾಟ ದಂಧೆಯನ್ನು ನಡೆಸುತ್ತಿದ್ದು, ಕೂಡಲೇ ಸದರಿಯವರನ್ನು ಸುತ್ತುವರೆಯಲಾಗಿ ಪಂಚರ ಸಮಕ್ಷಮ ಸಮವಸ್ತ್ರ್ತದಲ್ಲಿದ್ದ ಪೊಲೀಸರನ್ನು ನೋಡುತ್ತಿದ್ದಂತೆ ಅಲ್ಲಿದ್ದ ಇಬ್ಬರು ಆಸಾಮಿಗಳು ಓಡಿ ಹೋಗಿದ್ದು, ಇನ್ನೊಬ್ಬ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಶ್ರೀಕಾಂತ್ ಬಿನ್ ನರಸಿಂಹಪ್ಪ, 20 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಶ್ರೀರಾಮನಗರ, ಚಿಂತಾಮಣಿ ಟೌನ್ ಎಂದು ತಿಳಿಸಿದನು. ಓಡಿಹೋದ ಆಸಾಮಿಗಳ ಹೆಸರು ವಿಳಾಸ ಕೇಳಿ ತಿಳಿಯಲಾಗಿ ಆನಂದ, ಚಿಂತಾಮಣಿ ಟೌನ್ ಹಾಗೂ ಸೆವನ್ ಮಂಜು, ಚಿಂತಾಮಣಿ ಟೌನ್ ಎಂದು ತಿಳಿಸಿ ನಾನು ಕಲೆಕ್ಟ್ ಮಾಡಿದ ಹಣ ಅವರಿಗೆ ನೀಡುತ್ತಿದ್ದಾಗಿ ತಿಳಿಸಿರುತ್ತಾನೆ. ಶ್ರೀಕಾಂತ್ ಬಳಿ ತಲಾಷೆ ಮಾಡಲಾಗಿ ಒಂದು OPPO ಮೊಬೈಲ್ ಇದ್ದು. ಪಂಚರಾದ ನಮ್ಮಗಳ ಸಮಕ್ಷಮ ಆತನ ಮೊಬೈಲ್ ನ್ನು ಆತನಿಂದಲೇ ಓಪನ್ ಮಾಡಿಸಿ ವ್ಯಾಟ್ಸಾಪ್ ಸಂಧೇಶಗಳನ್ನು ಪರಿಶೀಲಿಸಲಾಗಿ ಆನಂದ ಎಂಬುವವರ ವ್ಯಾಟ್ಸಪ್ ನಂಬರ್ ನಿಂದ ಮಟ್ಕಾ ನಂಬರ್ ಅದಕ್ಕೆ ಬಾಜಿ ಕಟ್ಟಿದ ಹಣದ ವಿವರಗಳು ಇತ್ಯಾದಿ ಹಲವು ಸಂಧೇಶಗಳು ಬಂದಿದ್ದು, ಸದರಿ ಸಂಧೇಶಗಳನ್ನು ಪಂಚರ ಸಮಕ್ಷಮ ಸ್ಕ್ರೀನ್ ಶಾಟ್ ತೆಗೆಯಲಾಯಿತು. ಆತನ ಬಳಿ ಒಟ್ಟು 10530/- ರೂ ನಗದು ಹಣ, OPPO ಮೊಬೈಲ್, ಒಂದು ಪೆನ್ನು ಹಾಗೂ ಮಟ್ಕಾ ಚೀಟಿಯನ್ನು ಈ ಕೇಸಿನ ಮುಂದಿನ ನಡಾವಳಿಗಾಗಿ ಅಮಾನತ್ತುಪಡಿಸಿಕೊಂಡು ಮಧ್ಯಾಹ್ನ 3-00 ರಿಂದ 4-00 ಗಂಟೆವರೆಗೆ ಪಂಚನಾಮೆ ಕ್ರಮ ಜರುಗಿಸಿ ಆಸಾಮಿ ಶ್ರೀಕಾಂತ್ ನನ್ನು ವಶಕ್ಕೆ ಪಡೆದು ಮಾಲು, ಆರೋಪಿ ಶ್ರೀಕಾಂತ್, ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿದ್ದು, ಮಟ್ಕಾ ಜೂಜಾಟ ನಡೆಸುತ್ತಿದ್ದ ಮೂರು ಜನ ಆರೋಪಿತರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸತಕ್ಕದ್ದು. ಎಂದು ನೀಡಿದ  ವರದಿ  ಮೇರೆಗೆ ಠಾಣಾ ಎನ್.ಸಿ.ಆರ್ ಸಂಖ್ಯೆ: 92/2020 ರಂತೆ ದಾಖಲು ಮಾಡಿರುತ್ತೆ. ಈ ಎನ್.ಸಿ.ಆರ್ ಸಂಖ್ಯೆ: 92/2020 ಪ್ರಕರಣದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ  ಜೂಜಾಟ ಆಡುತ್ತಿದ್ದ ಆರೋಪಿಗಳ ವಿರುದ್ದ ಸಂಜ್ನೇಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಬೇಕಾಗಿ ಘನ ನ್ಯಾಯಾಲಯದಲ್ಲಿ ಮನವಿ ಮಾಡಿ ಅನುಮತಿ ಪಡೆದುಕೊಂಡು ರಾತ್ರಿ 11.30 ಗಂಟೆಗೆ ಠಾಣಾ ಮೊ.ಸಂ 80/2020 ಕಲಂ 78(3) ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 52/2020 ಕಲಂ. 427,506,34,504,324 ಐ.ಪಿ.ಸಿ:-

          ದಿನಾಂಕ 01-08-2020 ರಂದು ಬೆಳಗ್ಗೆ 6-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನ್ನ ಗಂಡನಾದ ನಂದ ರವರು ಈಗ್ಗೆ 1 ವರ್ಷದ ಹಿಂದೆ ಮರಣಹೊಂದಿದ್ದು ತಾನು ತನ್ನ ಮಗ  ರಾಮಚಂದ್ರಪ್ಪನ ಮನೆಯ ಮೇಲೆ ವಾಸವಾಗಿದ್ದು  ದಿನಾಂಕ 31-07-2020 ರಂದು ಬೆಳಗ್ಗೆ 10-45 ಗಂಟೆಯ ಸಮಯದಲ್ಲಿ ವರಮಹಾಲಕ್ಷ್ಮಿ ಹಬ್ಬವಿದ್ದು ಸದರಿ ಹಬ್ಬವನ್ನು ಮಾಡಲು ತಾನು ಮನೆಯ ಮೇಲೆ ತೆಂಗಿನ ಕಾಯಿಯನ್ನು ಹೊಡೆದಿದ್ದು ಹೊಡೆದಾಗ ಮನೆಯ ಕೆಳಗೆ ಶಬ್ದ ಬಂದಿದ್ದು ಸದರಿ ಶಬ್ದಕ್ಕೆ ನಮ್ಮ ಬಾವನ ಹೆಂಡತಿಯಾದ ಸಾವಿತ್ರಮ್ಮಳು ನಮ್ಮ ಮನೆಯ ಕೆಳಗಿನಿಂದ ಅವಾಚ್ಯವಾಗಿ ಬೈದುಕೊಳ್ಳುತ್ತಾ ಮೇಲಕ್ಕೆ ಬಂದಿದ್ದು ಆಸಮಯದಲ್ಲಿ ತಾನು ಯಾಕೆ ಈ ರೀತಿ ಬೈದುಕೊಳ್ಳುತ್ತಿರುವುದು ಎಂದು ಕೇಳಿದ್ದಕ್ಕೆ ಆಕೆಯು ತನ್ನನ್ನು ಅವಾಚ್ಯವಾಗಿ ಬೈಯ್ಯುತ್ತಿದ್ದಾಗ ನನ್ನ ಬಾವನ ಮಗನಾದ ಪುನೀತ್ ಕುಮಾರ್ ತನ್ನನ್ನು ಅವಾಚ್ಯವಾಗಿ ಬೈದು ಕೆಳಗಿನಿಂದ ಇಟ್ಟಿಗೆಗಳಿಂದ ಹೊಡೆದು ಮೇಲಕ್ಕೆ ಹತ್ತಿ ಇಟ್ಟಿಗೆಗಳ ಚೂರುಗಳಿಂದ ನನ್ನ ಎದೆಗ,ಬಲಕೈಗೆ ಹೊಡೆದು ಮೂಗೇಟುಗಳನ್ನುಂಟುಮಾಡಿ ಎಂಟೆಯಿಂದ ಡಕೈ ಬೆರಳುಗಳಿಗೆ ಹೊಡೆದು ರಕ್ತಗಾಯಪಡಿಸಿದ ನಂತರ ಇಬ್ಬರು ತನ್ನನ್ನು ಕುರಿತು ನೀನೇನಾದರೂ ಇನ್ನು ಮುಂದೆ ನಮ್ಮ ಮನೆಯ ಮೇಲೆ ಯಾವುದೇ ಶಬ್ದ ಮಾಡಿದ್ದೆ ಆದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ, ಸದರಿಯವರು ಪ್ಲಾಸ್ಟಿಕ್ ಡ್ರಮ್ ಮತ್ತು ಮನೆಯ ಸಾಮಾನುಗಳನ್ನು  ಚೆಲ್ಲಾ ಪಿಲ್ಲಿ ಮಾಡಿ ನಷ್ಟವನ್ನುಂಟು ಮಾಡಿರುತ್ತಾರೆ, ಆಗ ತನ್ನ ಮದುನನಾದ ಮನೋಹರನು ಮತ್ತು ಗ್ರಾಮದವರು ಸಮಾದಾನ ಮಾಡಿ  ತನ್ನನ್ನು ಚಿಕಿತ್ಸೆಗಾಗಿ ಆಸ್ಪತ್ರಗೆ ಕಳುಹಿಸಿಕೊಟ್ಟರು, ನಾನು ಆಸ್ಪತ್ರಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡು  ಈ ದಿನ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು   ತನ್ನನ್ನು ಹೊಡೆದು ಅವಾಚ್ಯವಾಗಿ  ಬೈದಿರುವ   ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 202/2020 ಕಲಂ. 143,149,324,114 ಐ.ಪಿ.ಸಿ:-

          ದಿನಾಂಕ 31/07/2020 ರಂದು ಪಿರ್ಯಾದಿದಾರರಾದ ವಿ.ಎನ್ ಶ್ರೀನಿವಾಸ ಮೂರ್ತಿ ಬಿನ್ ಲೇಟ್ ನಾರಾಯಣಪ್ಪ ವಾಸ-ವರದನಾಯಕನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಸ್ವಾಧೀನ ಅನುಭೋಗದಲ್ಲಿರುವ ಇದೇ ಶಿಡ್ಲಘಟ್ಟ ತಾಲ್ಲೂಕು ವರದನಾಯಕನಹಳ್ಳಿ ಗ್ರಾಮದ ಸರ್ವೇ ನಂಬರ್ 10/74 ರಲ್ಲಿರುವ 2 ಎಕರೆ ಜಮೀನಿನಲ್ಲಿ ಈ ದಿನ ದಿನಾಂಕ 31/07/2020 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಮಕ್ಕಳು ಉಳುಮೆ ಮಾಡುತ್ತಿದ್ದಾಗ ತನ್ನ ಚಿಕ್ಕಪ್ಪನ ಮಗನಾದ ವಿ.ಶಿವಾನಂದ ಎಂಬುವನು ಉಳುಮೆ ಮಾಡಲು ಅಡಿಪಡಿಸಿ ಕಲ್ಲಿನಿಂದ ಬೆನ್ನಿಗೆ, ತಲೆಗೆ ಹೊಡೆದು ಗಾಯ ಪಡಿಸಿದಾಗ ತನ್ನ ಚಿಕ್ಕ ಮಗ ಧರಣೀಂದ್ರ ರವರು ಅಡ್ಡ ಬಂದಿದ್ದಕ್ಕೆ ಶಿವಾನಂದ ಅದೇ ಕಲ್ಲಿನಿಂದ ತನ್ನ ಮಗನ ಬೆನ್ನಿಗೆ ಹೊಡೆದು ಗಾಯ ಪಡಿಸಿರುತ್ತಾನೆ. ಆತನ ಜೊತೆಯಲ್ಲಿ ಸುಮಾರು 20 ಜನ ಅಪರಿಚಿತರಿದ್ದು, ಅವರು ಶಿವಾನಂದ ರವರಿಗೆ ಅವರನ್ನು ಬಿಡ ಬೇಡ ಎಂದು ಪ್ರಚೋದಸಿರುತ್ತಾರೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 86/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ: 01/08/2020 ರಂದು ಮದ್ಯಾಹ್ನ 1-10 ಗಂಟೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚನಾಮೆ, ಆರೋಪಿಗಳು ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಶ್ರೀ. ಸಂಗಪ್ಪ ಮೇಟಿ ಆದ ತಾನು ಮದ್ಯಾಹ್ನ 12.15 ಗಂಟೆಯಲ್ಲಿದ್ದಾಗ ಶಿಡ್ಲಘಟ್ಟ ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಬಿಲಾಲ್ ಮಸೀದಿ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ನ್ಯಾಯಾಲಯದ ಪಿ.ಸಿ.129 ರವರ ಮೂಲಕ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪಂಚಾಯ್ತಿದಾರರು ಮತ್ತು ನಗರ ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 12.30 ಗಂಟೆಗೆ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ರೈಲ್ವೆ ರಸ್ತೆ ಪಕ್ಕದ ಮೈದಾನದಲ್ಲಿ ಯಾರೋ 03 ಜನ ಆಸಾಮಿಗಳು ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 50/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 50/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿ ಸ್ಥಳದಲ್ಲಿದ್ದ 3-ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಸದ್ದಾಂ ಬಿನ್ ಹಸೇನ್ ಸಾಬ್, 35 ವರ್ಷ, ರೇಷ್ಮೆ ಕೆಲಸ, ಮುಸ್ಲಿಂ, ರಹಮತ್ ನಗರ, ಶಿಡ್ಲಘಟ್ಟ ಟೌನ್ 2] ಅತಾವುಲ್ಲಾ ಬಿನ್ ಲೇಟ್ ಚಾಂದ್ ಪಾಷ, 19 ವರ್ಷ, ಮುಸ್ಲಿಂ, ರೇಷ್ಮೇ ಕೆಲಸ, ಅನ್ಸಾರಿ ಮೊಹಲ್ಲಾ ಹತ್ತಿರ, ಶಿಡ್ಲಘಟ್ಟ ಟೌನ್ 3] ವಾಸೀಂ ಬಿನ್ ಬಾಬು 24 ವರ್ಷ, ಮುಸ್ಲಿಂ, ರೇಷ್ಮೇ ಕೆಲಸ, 2ನೇ ಕಾರ್ಮಿಕ ನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ. ಇತರರು ಓಡಿ ಹೋಗಿದ್ದು ಅವರ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಇವರುಗಳು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 3000/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿರುತ್ತೆ. ಇವುಗಳನ್ನು ಮದ್ಯಾಹ್ನ 12-40 ಗಂಟೆಯಿಂದ 1-00 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡು ಠಾಣೆಗೆ ಹಾಜರಾಗಿ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ: 86/2020 ಕಲಂ: 87 ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 87/2020 ಕಲಂ. 87 ಕೆ.ಪಿ ಆಕ್ಟ್:-

          ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪ್ರಬಾರದಲ್ಲಿರುವ  ಪಿ.ಎಸ್.ಐ (ಕಾ.ಸು) ಶ್ರೀ. ಸಂಗಪ್ಪ ಮೇಟಿ ಆದ ತಾನು ದಿನಾಂಕ.01.08.2020 ರಂದು ಮದ್ಯಾಹ್ನ 02.10 ಗಂಟೆಗೆ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚನಾಮೆ, ಆರೋಪಿಗಳು ಮತ್ತು ಮಾಲುನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತಾನು ಶಿಡ್ಲಘಟ್ಟ ನಗರ ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಅನ್ಸಾರಿ ಮೊಹಲ್ಲಾ ಬಳಿ ಸಾರ್ವಜನಿಕರ ಸ್ಥಳದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ನ್ಯಾಯಾಲಯದ ಪಿ.ಸಿ.129 ರವರ ಮೂಲಕ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪಂಚಾಯ್ತಿದಾರರು ಮತ್ತು ನಗರ ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 1-30 ಗಂಟೆಗೆ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 03 ಜನ ಆಸಾಮಿಗಳು ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 50/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 50/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿ ಸ್ಥಳದಲ್ಲಿದ್ದ 3-ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಬಾಬು ಬಿನ್ ಅಮೀರ್ ಜಾನ್, 40 ವರ್ಷ, ರೇಷ್ಮೆ ಕೆಲಸ, ಮುಸ್ಲಿಂ, 2ನೇ ಕಾಮರ್ಿಕ ನಗರ, ಶಿಡ್ಲಘಟ್ಟ ಟೌನ್ 2] ಬಹದ್ದೂರ್ ಖಾನ್ ಬಿನ್ ಲೇಟ್ ರೆಹಮಾನ್ ಸಾಬ್, 38 ವರ್ಷ, ಮುಸ್ಲಿಂ, ರೇಷ್ಮೇ ಕೆಲಸ, ಬಿಲಾಲ್ ಮಸೀದಿ ಹತ್ತಿರ, ಶಿಡ್ಲಘಟ್ಟ ಟೌನ್ 3] ಏಜಾಜ್ ಬಿನ್ ಜಹಾಂಗೀರ್ ಸಾಬ್, 30 ವರ್ಷ, ಮುಸ್ಲಿಂ, ರೇಷ್ಮೇ ಕೆಲಸ, ಬಿಲಾಲ್ ಮಸೀದಿ ಹತ್ತಿರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ. ಇತರರು ಓಡಿ ಹೋಗಿದ್ದು ಅವರ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಇವರುಗಳು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 2500/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿರುತ್ತೆ. ಇವುಗಳನ್ನು ಮದ್ಯಾಹ್ನ 1-40 ಗಂಟೆಯಿಂದ 2-00 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡು ಹಾಜರಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ: 87/2020 ಕಲಂ: 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.