ದಿನಾಂಕ :01/07/2020 ರ ಅಪರಾಧ ಪ್ರಕರಣಗಳು

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.83/2020 ಕಲಂ. 15(A),32(3) ಕೆ.ಇ ಆಕ್ಟ್ :-

          ದಿನಾಂಕ 30/06/2020 ರಂದು ಸಂಜೆ 4:30 ಗಂಟೆ ಸಮಯದಲ್ಲಿ ರವಿಕುಮಾರ್ ಹೆಚ್.ಸಿ 235 ರವರು ಠಾಣೆಗೆ ಮಾಲು ಮತ್ತು ಆರೋಪಿಯೊಂದಿಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ತನಗೆ ಠಾಣೆಯಲ್ಲಿ ಹಗಲು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದೆನು. ಮದ್ಯಾಹ್ನ 15:30 ಗಂಟೆ ಸಮಯದಲ್ಲಿ ತನಗೆ ಎಸ್.ಓ:1017 ರಂತೆ ನೇಮಕ ಮಾಡಿರುವ 26 ನೇ ಗ್ರಾಮಗಸ್ತಿ ವ್ಯಾಪ್ತಿಗೆ ಬರುವ ಗುಂಡಾಪುರ ಗ್ರಾಮದಲ್ಲಿ ಯಾರೋ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಕೂಡಲೇ ತಾನು ಮತ್ತು ಚೀತಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಪಿ.ಸಿ:17 ಶ್ರೀ ಲಕ್ಷ್ಮಿನಾರಾಯಣ ರವರು ಗುಂಡಾಪುರ ಗ್ರಾಮಕ್ಕೆ ಹೋಗಿ, ಒಂದು ಮನೆಯ ಬಳಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿ ಒಂದು ಪ್ಲಾಸೀಕ್ ಚೀಲದಲ್ಲಿ ಕೆಲವು ಪಾಕೇಟುಗಳನ್ನು ಇಟ್ಟುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ನೀಡುತ್ತಿದ್ದು ಕಂಡು ಬಂದಿದ್ದು. ಕೂಡಲೇ ತಾನು ಮತ್ತು ಸಿ.ಪಿ.ಸಿ:17 ರವರು ಆಸಾಮಿಯಯನ್ನು ಹಿಡಿದುಕೊಂಡಿದ್ದು, ಆತನ ಬಳಿ ಇದ್ದ ಚೀಲವನ್ನು ಪರಿಶೀಲಿಸಲಾಗಿ, ಸದರಿ ಚೀಲದಲ್ಲಿ Haywards Cheers Whisky ಯ 90 ಎಂ.ಎಲ್ ನ 14 ಟೆಟ್ರಾ ಪಾಕೇಟುಗಳಿದ್ದು, ಮೂರು ಖಾಲಿ ಟೆಟ್ರಾ ಪಾಕೇಟುಗಳು ಮತ್ತು ಎರಡು ಪ್ಲಾಸ್ಟೀಕ್ ಲೋಟಗಳು ಸ್ಥಳದಲ್ಲಿ ಬಿದ್ದಿದ್ದವು. ಸದರಿ ಆಸಾಮಿಗೆ ಮದ್ಯಾಪಾನ ಮಾರಾಟ ಮಾಡಲು ಯಾವುದಾದರು ಪರವಾನಗಿ ಇದೇಯೆ ಎಂದು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ಸದರಿ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೃಷ್ಣಪ್ಪ ಬಿನ್ ಲೇಟ್ ಗಂಗಪ್ಪ, 55 ವರ್ಷ, ಈಡಿಗರು, ಕೂಲಿ ಕೆಲಸ, ಗುಂಡಾಪುರ ಗ್ರಾಮ ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು ಹಾಗೂ ಆತನ ಬಳಿ ಚೀಲದಲ್ಲಿ ದೊರೆತ Haywards Cheers Whisky ಯ 90 ಎಂ.ಎಲ್ ನ 14 ಟೆಟ್ರಾ ಪಾಕೇಟುಗಳು, ಮೂರು ಖಾಲಿ ಟೆಟ್ರಾ ಪಾಕೇಟುಗಳು ಮತ್ತು ಎರಡು ಪ್ಲಾಸ್ಟೀಕ್ ಲೋಟಗಳನ್ನು ವಶಕ್ಕೆ ಪಡೆದು 16:30 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.111/2020 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

          ದಿನಾಂಕ 30/06/2020 ರಂದು ಸಂಜೆ 6-30 ಗಂಟೆಗೆ ಪಿರ್ಯಾಧಿ ವರ್ಲಕೊಂಡ ಗ್ರಾಮವಾಸಿ ಅಶ್ವತ್ಥಮ್ಮ ಕೊಂ ಆದಿ ಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನ್ನ ಮಗನಾದ ಮಂಜುನಾಥ ರವರು ಕೆಎ40-ಯು-2642 ರ ದ್ವಿಚಕ್ರವಾಹನದಲ್ಲಿ ದಿನಾಂಕ 28/06/2020 ರಂದು ಮದ್ಯಾಹ್ನ ಸುಮಾರು 3-30  ಗಂಟೆಯ ಸಮಯದಲ್ಲಿ ವರ್ಲಕೊಂಡ ಗ್ರಾಮದಿಂದ ಚಿಕ್ಕಬಳ್ಳಾಪುರಕ್ಕೆ ಹೋಗಲು ಸಾದಲಿ ಕ್ರಾಸ್ ಹತ್ತಿರ  ಎನ್ ಹೆಚ್-07 ರ ರಸ್ತೆಯಲ್ಲಿ ಹೋಗುತ್ತಿದ್ದಾಗ ಇವರ ಹಿಂದುಗಡೆಯಿಂದ ಬಂದ ಯಾವುದೋ ಕಾರಿನ  ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಮಂಜುನಾಥ ರವರು ಹೋಗುತ್ತಿದ್ದ ಮೇಲ್ಜಕಂಡ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದರ ಪರಿಣಾಮ ತನ್ನ ಮಗನಿಗೆ ರಕ್ತಗಾಯವಾಗಿ ಕೆಳಗಿನ ಹಲ್ಲುಗಳು ಉದಿರಿದ್ದು, ರಸ್ತೆ  ಅಪಘಾತ ಉಂಟುಪಡಿಸಿದ ಹೊರಟು ಹೋದ ವಾಹನವನ್ನು ಪತ್ತೆ ಮಾಡಿ ಸದರಿ ವಾಹನದ  ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.149/2020 ಕಲಂ. 143,147,353,504,149 ಐ.ಪಿ.ಸಿ :-

          ದಿನಾಂಕ: 26/06/2020 ರಂದು  ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರ ಶ್ರೀ ಲೋಕೇಶ್ ಸಿಪಿಸಿ 111 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 26/06/2020 ರಂದು ಪಿ.ಎಸ್.ಐ ಸಾಹೇಬರು ನನಗೆ ಮತ್ತು ಪಿಸಿ 336, ಉಮೇಶ ಬಿ ಶಿರಶ್ಯಾಡ ರವರಿಗೆ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ನಾನು ಮತ್ತು ಉಮೇಶ ಬಿ ಶಿರಶ್ಯಾಡ ರವರು ರಾತ್ರಿ 8-00 ಗಂಟೆಗೆ ರಾತ್ರಿ ಗಸ್ತಿಗೆ ಠಾಣೆಗೆ ಹಾಜರಾಗಿರುತ್ತೇವೆ, ಮಾನ್ಯ ಪಿ.ಎಸ್.ಐ ಸಾಹೇಬರು ನಮಗೆ ಬ್ರೀಫಿಂಗ್ ಮಾಡಿ ಸುಭಾಹು 2 ನೇ ಬೀಟ್ ಗೆ ನೇಮಕ ಮಾಡಿದ್ದು ಅದರಂತೆ ನಾವುಗಳು ಇಬ್ಬರು ನನ್ನ ಬಾಬತ್ತು ದ್ವಿ ಚಕ್ರ ವಾಹನದಲ್ಲಿ ಮಿಣಕನಗುರ್ಕಿ, ಕಂಬಾಲಹಳ್ಳಿಗೇಟ್, ನಾಮಗೊಂಡ್ಲು ಗ್ರಾಮಗಳ ಕಡೆಗಸ್ತು ಮಾಡಿಕೊಂಡು ರಾತ್ರಿ 1-15 ಗಂಟೆಯಲ್ಲಿ ಡಿಪಾಳ್ಯ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಮಂಚೇನಹಳ್ಳಿ ಡಿಪಾಳ್ಯ ರಸ್ತೆಯಲ್ಲಿ ಆಂಜಿನೇಯ ದೇವಸ್ಥಾನದ ಮುಂಭಾಗ ಹಿರೋ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನದಲ್ಲಿ ಯಾರೋ 5 ಜನ ಅಸಾಮಿಗಳು ಅತಿವೇಗವಾಗಿ ಬರುತ್ತಿದ್ದು, ಗಸ್ತಿನಲ್ಲಿದ್ದ ನಾವು ಸದರಿ ದ್ವಿ ಚಕ್ರವಾಹನವನ್ನು ನಿಲ್ಲಿಸಲು ಹೋದಾಗ ದ್ವಿ ಚಕ್ರ ವಾಹನದಲ್ಲಿದ್ದವರು ನಮ್ಮ ಮೇಲೆಯೇ ದ್ವಿ ಚಕ್ರ ವಾಹನವನ್ನು ಬಿಡಲು ಬಂದಾಗ ನಾವುಗಳು ಸದರಿ ದ್ವಿ ಚಕ್ರ ವಾಹನವನ್ನು ತಡೆದು ಅವರಿಗೆ ಆವೇಳೆಯಲ್ಲಿ ಯಾಕೇ ಬರುತ್ತಿದ್ದೀರಾ ಎಂದು ಬುದ್ದಿವಾದ ಹೇಳಲು ಹೋದಾಗ ವಾಹನದಲ್ಲಿದ್ದವರು ಬೈಕ್ ನ್ನು ನಿಲ್ಲಿಸಿ ಅಕ್ರಮ ಗುಂಪುಕಟ್ಟಿಕೊಂಡು ಬಂದು ನಮ್ಮಗಳ ಮೇಲೆ ಗಲಾಟೆ ಮಾಡಿ ಆಪೈಕಿ ಒಬ್ಬ ನೀವು ಯಾರೋ ನಮ್ಮ ಬೈಕ್ ನ್ನು ನಿಲ್ಲಿಸುವುದಕ್ಕೆ ನಿನ್ನಮ್ಮನ್, ಇನ್ನೊಬ್ಬ ಶಾಟಕಿತ್ತುಕೊಳ್ಳುತ್ತೀರಾ ಏನಾಗುತ್ತೋ ನಿಮ್ಮ ಕೈಯಲ್ಲಿ ಎಂದು ಅವಾಚ್ಯಶಬ್ದಗಳಿಂದ ಬೈದು ಎಲ್ಲರೂ ಸೇರಿ ನಮಗೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಅದೇ ದ್ವಿ ಚಕ್ರವಾಹನದಲ್ಲಿ ಹೊರಟು ಹೋಗಿರುತ್ತಾರೆ. ಅವರು 5 ಜನರು ಅದ್ದರಿಂದ ನಾವಿಬ್ಬರೂ ಅವರನ್ನು ವಶಕ್ಕೆ ಪಡೆದುಕೊಳ್ಳಲು ಆಗಿರುವುದಿಲ್ಲ. ನಂತರ ಸದರಿ ಅಸಾಮಿಗಳ ಹೆಸರು ಮತ್ತು ವಿಳಾವನ್ನು ತಿಳಿಯಲಾಗಿ 1) ಭರತ್ ಬಿನ್ ಗೆದರೆ ನರಸಿಂಹಪ್ಪ, 24 ವರ್ಷ, ಕೂಲಿ ಕೆಲಸ, ವಾಸ ಬಿ ಬೊಮ್ಮಸಂದ್ರ ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು 2) ಮಂಜುನಾಥ್ ಬಿನ್ ರಾಮಣ್ಣ, 24 ವರ್ಷ, ಕೂಲಿ ಕೆಲಸ, ವಾಸ ಬಿ ಬೊಮ್ಮಸಂದ್ರ ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು 3) ಪ್ರದೀಪ್ ಬಿನ್ ಗಂಗಣ್ಣ, 24 ವರ್ಷ, ಕೂಲಿ ಕೆಲಸ, ವಾಸ ಬಿ ಬೊಮ್ಮಸಂದ್ರ ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು 4) ಸಂದೀಪ್ ಬಿನ್ ಕಿಟ್ಟಣ್ಣ, 25 ವರ್ಷ, ಕೂಲಿ ಕೆಲಸ, ವಾಸ ಬಿ ಬೊಮ್ಮಸಂದ್ರ ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು 5) ಸೀನಾ, 25 ವರ್ಷ, ಕೂಲಿ ಕೆಲಸ, ವಾಸ ಬಿ ಬೊಮ್ಮಸಂದ್ರ ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಯಿತು. ನಮ್ಮಗಳ ಮೇಲೆ ಗಲಾಟೆ ಮಾಡಿದ ಅಸಾಮಿಗಳ ವಿಳಾಸವನ್ನು ತಿಳಿದು ಈ ದಿನ ತಡವಾಗಿ ದೂರು ನೀಡುತ್ತಿದ್ದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಪ್ರ.ವ.ವರದಿ

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.150/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ:01/07/2020 ರಂದು ಠಾಣಾ ಹೆಚ್.ಸಿ.137 ಶ್ರೀ ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ್ದೇನೆಂದರೆ ದಿನಾಂಕ:30/06/2020 ರಂದು ಪಿ.ಎಸ್.ಐ ಶ್ರೀ ಲಕ್ಷ್ಮಿನಾರಾಯಣ ರವರು ಮಾಲು ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ:30/06/2020 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಅದ್ದೇಕೊಪ್ಪ ಗ್ರಾಮದ ಬಳಿ ಇರುವ ಉತ್ತರ ಪಿನಾಕಿನಿ ನದಿಯ ಬಳಿ ಇರುವ ಹೊಂಗೆ  ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿಸಿ-537 ಆನಂದ್ ಕುಮಾರ್, ಪಿ.ಸಿ.283 ಅರವಿಂದ, ಪಿ.ಸಿ.175 ನವೀನ್ ಕುಮಾರ್, ಪಿ.ಸಿ.311 ಗೂಳಪ್ಪ, ಪಿ.ಸಿ.336 ಉಮೇಶ್ ಶಿರಶ್ಯಾಡ್ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸಕರ್ಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 3:30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು  ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ವರದರಾಜ್ ಬಿನ್ ಗೋಪಾಲಪ್ಪ, 39 ವರ್ಷ, ಕುಂಬಾರರು, ವ್ಯವಸಾಯ ವರವಣಿ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಗಂಗಾಧರಪ್ಪ ಬಿನ್ ಲೇಟ್ ವೆಂಕಟಪ್ಪ, 40 ವರ್ಷ, ಕುರುಬರು, ಕುರಿ ವ್ಯಾಪಾರ, ವಾಸ ಬೀರಮಂಗಲ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ಹನುಮಂತಪ್ಪ ಬಿನ್ ಲೇಟ್ ಮುನಿಶ್ಯಾಮಪ್ಪ, 50 ವರ್ಷ, ನಾಯಕರು, ವ್ಯವಸಾಯ ವಾಸ ಅದ್ದೆಕೊಪ್ಪ ಗ್ರಾಮ,  ಗೌರಿಬಿದನೂರು ತಾಲ್ಲೂಕು 4) ಹನುಮಂತಪ್ಪ ಬಿನ್ ದೊಡ್ಡ ಆವುಲಕೊಂಡಪ್ಪ 45 ವರ್ಷ, ನಾಯಕರು, ವ್ಯವಸಾಯ ವಾಸ ಅದ್ದೆಕೊಪ್ಪ ಗ್ರಾಮ, ಗೌರಿಬಿದನೂರು ತಾಲ್ಲೂಕು, 5) ಮೆಹಬೂಬ್ ಪಾಷ ಬಿನ್ ಲೇಟ್ ರಜಾಕ್ ಸಾಬ್, 44 ವರ್ಷ, ಮುಸ್ಲಿಂ ಜನಾಂಗ, ಚಾಲಕ ಕೆಲಸ, ವಾಸ ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ಚಿಕ್ಕಪಿಳ್ಳಪ್ಪ ಬಿನ್ ಲೇಟ್ ಯರ್ರಪ್ಪ, 50 ವರ್ಷ, ನಾಯಕರು, ವ್ಯವಸಾಯ, ಗೌರಿಬಿದನೂರು ತಾಲ್ಲೂಕು. 7) ಗೋವಿಂದಪ್ಪ ಬಿನ್ ರಾಮಪ್ಪ, 40 ವರ್ಷ, ನಾಯಕರು, ಕೂಲಿ ಕೆಲಸ, ವಾಸ ಅದ್ದೆಕೊಪ್ಪ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆರೋಪಿತರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 8200/- (ಎಂಟು ಸಾವಿರದ ಇನ್ನೂರು ರೂಪಾಯಿಗಳು ಮಾತ್ರ.)  ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು ಸಂಜೆ 4-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂ. 310/2020 ರಂತೆ ದಾಖಲಿಸಿ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರರಕಣ ದಾಖಲಿಸಿರುತ್ತದೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.151/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ:01/07/2020 ರಂದು ಹೆಚ್.ಸಿ.137 ಶ್ರೀ ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ತಂದು ಹಾಜರುಪಡಿಸಿದ್ದೇನೆಂದರೆ ದಿನಾಂಕ:30/06/2020 ರಂದು ಪಿ.ಎಸ್.ಐ ಶ್ರೀ ಲಕ್ಷ್ಮಿನಾರಾಯಣ ರವರು ಮಾಲು ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಢಿದ ದೂರಿನ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ:30/06/2020 ರಂದು ಮದ್ಯಾಹ್ನ 5-15 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಕುಂಟಚಿಕ್ಕನಹಳ್ಳಿ ಗ್ರಾಮದ ಬಳಿ ಇರುವ ಸರ್ಕಾರಿ ಹಳ್ಳದ ಬಳಿ ಇರುವ ಜಾಲಿ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿಸಿ-537 ಆನಂದ್ ಕುಮಾರ್, ಪಿ.ಸಿ.175 ನವೀನ್ ಕುಮಾರ್, ಪಿ.ಸಿ.311 ಗೂಳಪ್ಪ, ಪಿ.ಸಿ.336 ಉಮೇಶ್ ಶಿರಶ್ಯಾಡ್ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸಕರ್ಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 5-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು  ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಶ್ರೀನಿವಾಸರೆಡ್ಡಿ ಬಿನ್ ವೆಂಕಟರಾಮರೆಡ್ಡಿ, 40 ವರ್ಷ, ಒಕ್ಕಲಿಗರು, ಜಿರಾಯ್ತಿ, ಕುಂಟಚಿಕ್ಕನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಕೃಷ್ಣಕುಮಾರ್ ಬಿನ್ ಕದಿರಪ್ಪ, 36 ವರ್ಷ, ಆದಿಕರ್ನಾಟಕ, ಜನಾಂಗ, ಕೂಲಿ ಕೆಲಸ, ರೆಡ್ಡಿದ್ಯಾವರಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ವೆಂಕಟರಾಮರೆಡ್ಡಿ ಬಿನ್ ರಾಮಕೃಷ್ಣರೆಡ್ಡಿ, 45 ವರ್ಷ, ಒಕ್ಕಲಿಗರು, ಜಿರಾಯ್ತಿ, ಕುಂಟಚಿಕ್ಕನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 4) ವೆಂಕಟೇಶಪ್ಪ ಬಿನ್ ಲೇಟ್ ಸುಬ್ಬರಾಯಪ್ಪ, 45 ವರ್ಷ, ಅಗಸರು, ಕೂಲಿ ಕೆಲಸ, ವಾಸ ಕುಂಟಚಿಕ್ಕನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 5) ಪ್ರಕಾಶ್ ಬಿನ್ ಲೇಟ್ ಲಿಂಗಪ್ಪ, 55 ವರ್ಷ, ಲಿಂಗಾಯತರು, ಕೂಲಿ ಕೆಲಸ, ಮಿಂಡೇನಹಳ್ಳಿ  ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ಜಗಧೀಶ್ ಬಿನ್ ಲೇಟ್ ಮಾರ್ಕಂಡಯ್ಯ, 30 ವರ್ಷ, ಲಿಂಗಾಯತರು, ವ್ಯವಸಾಯ ಮಿಂಡೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು. 7) ಉಗ್ರಪ್ಪ ಬಿನ್ ಲೇಟ್ ನಂಜುಂಡಪ್ಪ, 65 ವರ್ಷ, ಲಿಂಗಾಯತ ಜನಾಂಗ, ವ್ಯವಸಾಯ, ಮಿಂಡೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆರೋಪಿತರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 5200/- (ಐದು ಸಾವಿರದ ಇನ್ನೂರು ರೂಪಾಯಿಗಳು ಮಾತ್ರ.)  ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು ಸಂಜೆ 5-45 ಗಂಟೆಯಿಂದ ಸಂಜೆ 6-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಠಾಣಾ ಎನ್.ಸಿ.ಆರ್ 311/2020 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.