ದಿನಾಂಕ : 01/04/2020 ರ ಅಪರಾಧ ಪ್ರಕರಣಗಳು

1. ಚೇಳೂರು ಪೊಲೀಸ್ ಠಾಣೆ ಮೊ.ಸಂ. 09/2020 ಕಲಂ.87 ಕೆ.ಪಿ ಆಕ್ಟ್:-
ದಿನಾಂಕ:31/03/2020 ರಂದು ರಾತ್ರಿ 20-15 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಸಿ.ಪಿ.ಸಿ 445 ರಮೇಶ್ ಎಸ್ ವಿ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ಆದೇಶ ಪತ್ರಿಯನ್ನು ತಂದು ಠಾಣೆಯಲ್ಲಿ ಹಾಜರು ಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ:30-03-2020 ರಂದು ರಂದು ಬೆಳಗ್ಗೆ 11:30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಚೇಳೂರು ಠಾಣಾ ವ್ಯಾಪ್ತಿಯ ಇದ್ದಿಲವಾರಪಲ್ಲಿ ಗ್ರಾಮದ ಹೊರವಲಯದಲ್ಲಿರುವ ವಾಟರ್ ಟ್ಯಾಂಕ್ ಬಳಿ ಯಾರೋ ಕೆಲವರು ಅಂದರ್ ಬಾಹರ್ ಇಸ್ಪಿಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಹೆಚ್ ಸಿ 129 ರವಣಪ್ಪ ಬಿವಿ, ಹೆಚ್ ಸಿ 149 ಇನಾಯತ್ , ಸಿಪಿಸಿ 519 ಚಂದ್ರಶೇಖರ್ , ಸಿಪಿಸಿ 07 ವಿದ್ಯಾಧರ್ , ಸಿಪಿಸಿ 09 ನಾರಾಯಣಸ್ವಾಮಿ, ಸಿಪಿಸಿ 113 ಲಿಂಗರಾಜು ಆರ್ ಹಾಗೂ ಸರ್ಕಾರಿ ಜೀಪ್ ಸಂಖ್ಯೆ ಕೆಎ 42 ಜಿ 61 ವಾಹನ ದ ಚಾಲಕನಾಗಿ ಎಪಿಸಿ 98 ಶ್ರೀನಾಥ ರವರುಗಳ ಜೊತೆ ಠಾಣೆಯ ಬಳಿಗೆ ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಜೀಪ್ ಸಂಖ್ಯೆ ಕೆಎ 42 ಜಿ 61 ವಾಹನದಲ್ಲಿ ಇದ್ದಿಲವಾರಪಲ್ಲಿ ಗ್ರಾಮಕ್ಕೆ ಹೋಗುವ ರಸ್ತೆಯ ಬಳಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಅಂದರ್ 100 ಬಾಹರ್ 100 ಎಂದು ಕೂಗುತ್ತಾ ಇಸ್ಪಿಟ್ ಜೂಜಾಟ ಆಡುತ್ತಿದ್ದವರನ್ನು ಪೊಲೀಸರು ಸುತ್ತುವರೆದು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಮಂಜುನಾಥ ಬಿನ್ ವೆಂಕಟರವಣಪ್ಪ, 32 ವರ್ಷ, ಕೊರಚ ಜನಾಂಗ, ಸೆಕ್ಯೂರಿಟಿ ಕೆಲಸ, ಇದ್ದಿಲವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ಫೋ ನಂ:9108696137, 2) ಶ್ರೀನಾಥ ಬಿನ್ ಕೃಷ್ಣಪ್ಪ, 24 ವರ್ಷ, ಭೋವಿ ಜನಾಂಗ, ಚಿಕನ್ ವ್ಯಾಪಾರಿ, ಇದ್ದಿಲವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು . ಫೋನಂ:9538953040, 3) ಶ್ರೀಕಾಂತ್ ಬಿನ್ ವಿಜಯಪ್ಪ, 21 ವರ್ಷ, ಕೊರಚ ಜನಾಂಗ, ವ್ಯಾಪಾರ ವೃತ್ತಿ , ಇದ್ದಿಲವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು . ಫೋನಂ: 9353677399, 4) ಮಂಜುನಾಥ ಬಿನ್ ರಾಮಪ್ಪ, 35 ವರ್ಷ, ಪರಿಶಿಷ್ಟ ಜಾತಿ , ಬೇಕರಿ ಕೆಲಸ, ಇದ್ದಿಲವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು . ಫೋನಂ:8073411849, 5) ಈಶ್ವರ್ ಬಿನ್ ಚಿನ್ನ ಈರಪ್ಪ, 30 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ಇದ್ದಿಲವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು .6) ಸಂತೋಷ್ ಕುಮಾರ್ ಎಸ್ ಬಿನ್ ಶ್ರೀನಿವಾಸಲು ಜಿ, 35 ವರ್ಷ, ಕೊರಚ ಜನಾಂಗ, ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸ, ಇದ್ದಿಲವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು . ಫೋನಂ:9148457878, 7) ಹರೀಶ್ ಬಿನ್ ಶಿವಣ್ಣ, 25 ವರ್ಷ, ಕೊರಚ ಜನಾಂಗ, ಜ್ಯುವೆಲರಿ ಶಾಪ್ ನಲ್ಲಿ ಕೆಲಸ, ಇದ್ದಿಲವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು . ಫೋನಂ:9353468267, 8) ರಾಮರೆಡ್ಡಿ ಬಿನ್ ಲೇಟ್ ಮಾರಪ್ಪ ರೆಡ್ಡಿ, 55 ವರ್ಷ, ವಕ್ಕಲಿಗರು, ಜಿರಾಯ್ತಿ ಕೆಲಸ, ಇದ್ದಿಲವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. 9) ಶಿವಕುಮಾರ್ ಬಿನ್ ಬಾಲಚಂದ್ರ, 31 ವರ್ಷ, ಮರಾಠಿಗರು, ಮಾರ್ಕೆಂಟಿಂಗ್ ಕೆಲಸ, ಇದ್ದಿಲವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ಫೋನಂ : 9916999491 ಎಂದು ತಿಳಿಸಿದ್ದು, ಸದರಿಯವರ ಪಣಕ್ಕಿಟ್ಟಿದ್ದ 4000/- ರೂ ನಗದು ಹಣವನ್ನು 52 ಇಸ್ಪಿಟ್ ಎಲೆಗಳನ್ನು, ಒಂದು ಹಳೆಯ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಪಂಚನಾಮೆಯ ಮುಖಾಂತರ ಅಮಾನತುಪಡಿಸಿಕೊಂಡು, ಜೂಜಾಟದ ದಾಳಿ ಸಮಯದಲ್ಲಿ ಜೂಜಾಟವಾಡುತ್ತಿದ್ದ ಒಬ್ಬ ವ್ಯಕ್ತಿಯು ಓಡಿ ಹೋಗಿದ್ದು ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಂಜುನಾಥ ಬಿನ್ ಜಯರಾಮ , 25 ವರ್ಷ, ಭೋವಿ ಜನಾಂಗ, ಜಿರಾಯ್ತಿ ಕೆಲಸ, ಇದ್ದಿಲವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಎಂದು ತಿಳಿದು ಬಂದಿದ್ದು. ಪಂಚರ ಸಮಕ್ಷಮ ಪಂಚನಾಮೆಯ ಮುಖಾಂತರ ಅಮಾನತುಪಡಿಸಿಕೊಂಡ ಮಾಲು ಮತ್ತು ಆರೋಪಿತರೊಂದಿಗೆ ಮದ್ಯಾಹ್ನ 1:15 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಪಡೆದು ಠಾಣಾ ಎನ್ ಸಿ ಆರ್ 14/2020 ರೀತ್ಯ ಪ್ರಕರಣ ದಾಖಲಿಸಿದ್ದು ನಂತರ ಘನ ನ್ಯಾಯಾಲಯದ ಅನುಮತಿ ಕೋರಿ ಮನವಿಯನ್ನು ಸಲ್ಲಿಸಿಕೊಂಡಿದ್ದು ಈ ದಿನ ಘನ ನ್ಯಾಯಾಲಯ ಪ್ರಕರಣ ದಾಖಲು ಮಾಡಲು ಅನುಮತಿಯನ್ನು ನೀಡಿದ್ದರ ಮೇರೆಗೆ ಠಾಣಾ ಮೊ.ಸಂಖ್ಯೆ:09/2020 ಕಲಂ:87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.
2. ಚೇಳೂರು ಪೊಲೀಸ್ ಠಾಣೆ ಮೊ.ಸಂ. 10/2020 ಕಲಂ.87 ಕೆ.ಪಿ ಆಕ್ಟ್:-
ದಿನಾಂಕ:31/03/2020 ರಂದು ರಾತ್ರಿ 20-30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಸಿ.ಪಿ.ಸಿ 445 ರಮೇಶ್ ರವರ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ಆದೇಶ ಪತ್ರಿಯನ್ನು ತಂದು ಠಾಣೆಯಲ್ಲಿ ಹಾಜರು ಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ:30/03/2020 ರಂದು ಸಂಜೆ 4-00 ಗಂಟೆಗೆ ಪಿ.ಎಸ್.ಐ ರವರು ,ಮಾಲು ಆಸಾಮಿಗಳ, ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೇಂದರೆ, ದಿನಾಂಕ:30/03/2020 ರಂದು ಮಧ್ಯಾಹ್ನ 14-00 ಗಂಟೆಯ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಚೇಳೂರು ಹೋಬಳಿ ಮ್ಯಾಕಲಪಲ್ಲಿ ಗ್ರಾಮದ ಬಳಿ ಹುಣಸೇ ಮರದ ಕೆಳಗೆ ಗಾಲಿ ವೆಂಕಟರವಣ ರವರ ಜಮೀನಿನ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಸಮಾಧಿಯ ಮೇಲೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಸಿ.ಪಿ.ಸಿ-113 ಲಿಂಗರಾಜು, ಸಿ,ಪಿ,ಸಿ 07 ವಿಧ್ಯಾದರ್, ಸಿ.ಪಿ.ಸಿ 519 ಚಂದ್ರ ಶೇಖರ್ , ಸಿ.ಪಿ.ಸಿ 09 ನಾರಾಯಣಸ್ವಾಮಿ , ಸಿ.ಹೆಚ್,ಸಿ 129 ರವಣಪ್ಪ, ಸಿ.ಹೆಚ್,ಸಿ 149 ಇನಾಯಿತ್ ವುಲ್ಲಾ ಮತ್ತು ಎ.ಪಿಸಿ 98 ಶ್ರೀನಾಥ್ ಹಾಗೂ ಹೆಚ್,ಜಿ 551 ದೇವರಾಜ, ಹೆಚ್,ಜಿ 538 ಲಕ್ಮಣ್ ರವರೊಂದಿಗೆ ಮ್ಯಾಕಲಪಲ್ಲಿ ಗ್ರಾಮದ ಬಳಿ ಹೋಗಿ ಸದರಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಜೀಪ್ ಸಂಖ್ಯೆ ಕೆಎ 42 ಜಿ-61 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು ಚೇಳೂರು ಹೋಬಳಿ ಮ್ಯಾಕಲಪಲ್ಲಿ ಗ್ರಾಮದ ಬಳಿ ಹೋಗಿ ಮುಖ್ಯ ರಸ್ತೆಯಲ್ಲಿ ಜೀಫ್ ನ್ನು ನಿಲ್ಲಿಸಿ ಪಂಚರನ್ನು ಬರಮಾಡಿಕೊಂಡು ಲೇಟ್ ಗಾಲಿ ವೆಂಕಟರಾಮಣ್ಣ ರವರ ಜಮೀನಿನ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಸಮಾಧಿಯ ಮೇಲೆ ಹುಣಸೇ ಮರದ ಕೆಳಗೆ ಯಾರೋ ಕೆಲವರು ಅಂದರ್ ಬಾಹರ್ ಜೂಜಾಟ ವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಎಂದು ಹೇಳಿ ನಂತರ ಜೀಫ್ ನ್ನು ಮರೆಯಲ್ಲಿ ನಿಲ್ಲಿಸಿ ಪಂಚರು & ಪೊಲೀಸರು ಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಹುಣಸೇ ಮರದ ಕೆಳಗೆ ಸಮಾಧಿಯ ಮೇಲೆ ಕೆಲವರು ಗುಂಪು ಕಟ್ಟಿಕೊಂಡು ಪ್ಲಾಸ್ಟಿಕ್ ಚೀಲದ ಮೇಲೆ ಇಸ್ಫೇಟ್ ಎಲೆಗಳನ್ನು ಹಾಕಿಕೊಂಡು ಅಂದರ್ 200 ಬಾಹರ್ 200 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು ಸದರಿಯವರನ್ನು ಪೊಲೀಸರು ಸುತ್ತುವರೆದು ಹಿಡಿದು ಕೊಂಡು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 01) ನಾಗಾರ್ಜುನ ಬಿನ್ ಸದಾಶಿವ, 30 ವರ್ಷ, ಬಲಜಿಗರು, ವಾಸ: ಮ್ಯಾಕಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ಬಳಿ 400 ರೂ ಇದ್ದು ಆತನ ಪಕ್ಕದಲ್ಲಿದ್ದ 02) ಗಂಗಾಧರಪ್ಪ ಬಿನ್ ಮಾರಪ್ಪ, 48 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವಾಸ: ಮ್ಯಾಕಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಆತನ ಬಳಿ 500 ರೂ ಇದ್ದು ನಂತರ ಆತನ ಪಕ್ಕದಲ್ಲಿ ವ್ಯೆಕ್ತಿಯ ಹೆಸರು ವಿಳಾಸ ಕೇಳಲಾಗಿ 3) ಈಶ್ವರಪ್ಪ ಬಿನ್ ವೆಂಕಟರವಣಪ್ಪ, 40 ವರ್ಷ, ಬಲಜಿಗರು, ಕೂಲಿ ಕೆಲಸ, ವಾಸ: ಮ್ಯಾಕಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಆತನ ಬಳಿ 700 ರೂ ಇದ್ದು ನಂತರ ಆತನ ಮುಂಭಾಗದಲ್ಲಿದ್ದ ವ್ಯೆಕ್ತಿಯ ಹೆಸರು ವಿಳಾಸ ಕೇಳಾಗಿ 04) ರಾಮಕೃಷ್ಣಪ್ಪ ಬಿನ್ ಲೇಟ್ ಪೆದ್ದನ್ನ, 61 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ: ಮ್ಯಾಕಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಆತನ ಬಳಿ 300 ರೂ ಇದ್ದು 05) ನಾಗರಾಜು ಬಿನ್ ಲೇಟ್ ಯಾಮನ್ನಾ, 45 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವಾಸ: ಮ್ಯಾಕಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ಬಳಿ 400 ರೂ ಇದ್ದು ನಂತರ ರವರ ಪಕ್ಕದಲ್ಲಿ ವ್ಯೆಕ್ತಿಯ ಹೆಸರು ವಿಳಾಸ ಕೇಳಲಾಗಿ 06) ಸುರೇಶ್ ಬಿನ್ ಗಂಗರಾಜು, 38 ವರ್ಷ,ಬೋವಿ ಜನಾಂಗ, ಜಿರಾಯ್ತಿ, ವಾಸ: ಮ್ಯಾಕಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 600 ರೂ ಇದ್ದು ನಂತರ ರವರ ಪಕ್ಕದಲ್ಲಿ ವ್ಯೆಕ್ತಿಯ ಹೆಸರು ವಿಳಾಸ ಕೇಳಲಾಗಿ 07) ವೆಂಕಟರವಣಪ್ಪ ಬಿನ್ ಲೇಟ್ ನಾಗೇಶ್ , 52 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ: ಮ್ಯಾಕಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ಬಳಿ 200 ರೂ ಇದ್ದು ಆತನ ಪಕ್ಕದಲ್ಲಿ 08) ಮಂಜುನಾಥ ಬಿನ್ ಶಿವಪ್ಪ, 28 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ: ಮ್ಯಾಕಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಸ್ವಂತ ಸ್ಥಳ: ಅಗಟಿ ಮಡಕ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ಮುಂದೆ500 ರೂ ಇದ್ದು ಆತನ ಮುಂಭಾಗದಲ್ಲಿ 09) ರಾಜನ್ನ ಬಿನ್ ಲೇಟ್ ಗಾಲಿ ವೆಂಕಟರಮಣ, 52 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ಮ್ಯಾಕಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 800 ರೂ ಇದ್ದು ಆತನ ಪಕ್ಕದಲ್ಲಿ 10) ಪೆದ್ದ ರೆಡ್ಡಪ್ಪ, ಬಿನ್ ಚಿನ್ನ ವೆಂಕಟರವಣ,40 ವರ್ಷ, ಕೂಲಿ ಕೆಲಸ, ವಾಸ: ಮ್ಯಾಕಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ಬಳಿ 500 ರೂ ಇರುತ್ತೆ. ಸದರಿಯವರ ಬಳಿ ಒಟ್ಟು ನಗದು ಹಣ 5000/-(ಐದು ಸಾವಿರ ರೂ) ಮತ್ತು ಒಂದು ಹಳೆಯ ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳಿದ್ದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮುಖಾಂತರ ಅಮಾನತ್ತು ಪಡಿಸಿಕೊಂಡು ಮಾಲು & ಆರೋಪಿತರು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯನ್ನು ಪಡೆದ ಠಾಣಾ ಎನ್.ಸಿ.ಆರ್ ನಂಬರ್ :15/2020 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ಸಲ್ಲಿಸಿಕೊಂಡಿದ್ದು ಈ ದಿನ ಘನನ್ಯಾಯಾಲಯ ಪ್ರಕರಣವನ್ನುದಾಖಲಿಸಿಲು ಅನುಮತಿಯನ್ನು ನೀಡಿದ್ದರ ಮೇರೆಗೆ ಠಾಣಾ ಮೊ.ಸಂಖ್ಯೆ:10/2020 ಕಲಂ:87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.
3. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 20/2020 ಕಲಂ.379 ಐ.ಪಿ.ಸಿ:-
ದಿನಾಂಕ:31/03/2020 ರಂದು ಸಂಜೆ 05-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶಿವ ಶಂಕರ ಜೂನಿಯರ್ ಟೆಲಿಕಾಂ ಅಧಿಕಾರಿ ಬಾಗೇಪಲ್ಲಿ ಉಪ ವಿಭಾಗರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಬಾಗೇಪಲ್ಲಿ ತಾಲ್ಲೂಕು ಆರ್, ನಲ್ಲಗುಟ್ಲಪಲ್ಲಿ ಗ್ರಾಮದ ಬಳಿ ನಿರ್ಮಿಸಿರುವ ಬಿ,ಎಸ್,ಎನ್,ಎಲ್ ಆರ್, ಎಪ್ ಕೇಬಲ್ ವೈರು ಅಂದಾಜು ಬೆಲೆ 22100 ರೂ ಬೆಲೆ ಬಾಳುವುದಾಗಿರುತ್ತೆ, ಯಾರೋ ಕಳ್ಳರು ದಿನಾಂಕ:09-03-2020 ರಂದು ರಾತ್ರಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ವಿಚಾರವನ್ನು ,ಮೇಲಾಧಿಕಾರಿಗಳಿಗೆ ತಿಳಿಸಿ ಕೊರೋನ ದಿಂದ ದೂರು ನೀಡುವುದು ತಡವಾಗಿರುತ್ತೆ ಆದ್ದರಿಂದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ,ಸಂ 20/2020 ಕಲಂ 379 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ,
4. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 80/2020 ಕಲಂ.435 ಐ.ಪಿ.ಸಿ:-
ದಿನಾಂಕ:-31/03/2020 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ರಾಮೇಗೌಡ ಬಿನ್ ಕೃಷ್ಣಪ್ಪ, 32 ವರ್ಷ, ವಕ್ಕಲಿಗರು, ವಾಸ-ದೇವೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೇ ನಂಬರ್ 16 ರಲ್ಲಿ 2 ಎಕರೆ 32 ಗುಂಟೆ ಜಮೀನು ತನ್ನ ತಾತನಾದ ಆರ್.ಸೊಣ್ಣಪ್ಪ ರವರ ಹೆಸರಿನಲ್ಲಿದ್ದು, ಸದರಿ ಜಮೀನಿನಲ್ಲಿ ತನ್ನ ತಂದೆಯವರು ಜಿರಾಯ್ತಿ ಮಾಡಿಕೊಂಡಿರುತ್ತಾರೆ. ಈ ಜಮೀನಿನಲ್ಲಿ ತಾವು ಬೆಳೆಗಳಿಗೆ ನೀರನ್ನು ಹಾಯಿಸಲು ಕೊಳವೆ ಬಾವಿಯನ್ನು ಕೊರೆಯಿಸಿದ್ದು, ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಂಡಿರುತ್ತೇವೆ. ದಿನಾಂಕ 30/03/2020 ರಂದು ತನ್ನ ತಂದೆಯವರು ಕೃಷಿಹೊಂಡದಲ್ಲಿದ್ದ ನೀರನ್ನು ಬೆಳೆಗಳಿಗೆ ಹಾಯಿಸಿದ್ದು, ಕೃಷಿಹೊಂಡದಲ್ಲಿ ಸುಮಾರು 2 ಅಡಿಗಳಷ್ಟು ನೀರು ಇರುತ್ತದೆ. ಈ ದಿನ ದಿನಾಂಕ 31/03/2020 ರಂದು ಬೆಳಿಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ ತನ್ನ ತಂದೆಯವರು ತಮ್ಮ ಜಮೀನಿನ ಬಳಿ ಕೆಲಸ ಮಾಡಿಕೊಂಡು ಮನೆಗೆ ವಾಪಸ್ಸು ಬಂದಿರುತ್ತಾರೆ. ಇದೇ ದಿನ ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ತಾನು ತಮ್ಮ ಜಮೀನಿನ ಬಳಿ ಹೋಗಿ ನೋಡಲಾಗಿ ಕೃಷಿ ಹೊಂಡದಲ್ಲಿದ್ದ ಪೇಪರ್, 3 ಹೆಚ್.ಪಿ ಮೋಟಾರ್ ಮತ್ತು ಕೃಷಿ ಹೊಂಡಾದ ಸುತ್ತಲೂ ಹಾಕಿದ್ದ ಮೆಶ್ ಸುಟ್ಟು ಹೋಗಿರುವುದು ಕಂಡು ಬಂದಿರುತ್ತದೆ. ತಮ್ಮ ಜಮೀನಿನಲ್ಲಿದ್ದ ಕೃಷಿಹೊಂಡಕ್ಕೆ ಯಾರೋ ದುಷ್ಕರ್ಮಿಗಳು ಡಿಸೇಲ್ ಅಥವಾ ಪೆಟ್ರೋಲ್ ಅನ್ನು ಸುರಿದು ಬೆಂಕಿ ಹಚ್ಚಿರುವ ಕಾರಣ ಕೃಷಿ ಹೊಂಡದಲ್ಲಿದ್ದ ಪೇಪರ್, 3 ಹೆಚ್.ಪಿ ಮೋಟಾರ್ ಮತ್ತು ಕೃಷಿ ಹೊಂಡಾದ ಸುತ್ತಲೂ ಹಾಕಿದ್ದ ಮೆಶ್ ಸುಟ್ಟು ಹೋಗಿದ್ದು ಇದರಿಂದ ತಮಗೆ ಸುಮಾರು 60.000-00 ರೂಗಳ ನಷ್ಟವಾಗಿರುತ್ತದೆ. ಆದ ಕಾರಣ ತಮ್ಮ ಜಮೀನಿನಲ್ಲಿನ ಕೃಷಿ ಹೊಂಡಕ್ಕೆ ಬೆಂಕಿ ಇಟ್ಟಂತಹ ಆಸಾಮಿಗಳನ್ನು ಪತ್ತೆ ಮಾಡಿ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.