ದಿನಾಂಕ : 30/11/2018ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.329/2018 ಕಲಂ. 87 ಕೆ.ಪಿ. ಆಕ್ಟ್:-

     ದಿನಾಂಕ:29/11/2018 ರಂದು ಪಿ.ಎಸ್.ಐ ಶ್ರೀ ನವೀನ್ ಪಿ.ಎಂ. ರವರು  ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ :29.11.2018 ರಂದು ರಾತ್ರಿ ಸುಮಾರು 09-30 ಗಂಟೆಗೆ  ಪಿ.ಎಸ್.ಐ ಶ್ರೀ ನವೀನ್ ಪಿ.ಎಂ. ರವರಿಗೆ  ಬಂದ ಖಚಿತ ವರ್ತಮಾನದ ಮೇರೆಗೆ ಪಿ.ಎಸ್.ಐ ರವರು ಮತ್ತು ಸಿಬ್ಬಂದಿಯವರು  ಹಾಗೂ ಪಂಚರೊಂದಿಗೆ ಕೆಎ-40 ಜಿ-537 ಜೀಪಿನಲ್ಲಿ ಹೋಗಿ  ಬಾಗೇಪಲ್ಲಿ ಪುರದ 6ನೇ ವಾರ್ಡ್ ನಲ್ಲಿರುವ ಯಂಗ್ ಇಂಡಿಯಾ ಶಾಲೆಯ ಪಕ್ಕದಲ್ಲಿರುವ ಖಾಲಿ ಜಾಗದ ಬಳಿ ಹೋಗಿ ಮೇಲ್ಕಂಡ ಆರೋಪಿತರು ಹಣವನ್ನು ಪಣವನ್ನಾಗಿ ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ದಾಳಿ ಮಾಡಿ ನಗದು ಹಣ 9450/-ರೂ, 52 ಇಸ್ಪೀಟ್ ಎಲೆಗಳನ್ನು, ವಿವಿಧ ಕಂಪನಿಯ 3 ಮೊಬೈಲ್ ಗಳನ್ನು ಹಾಗೂ ಒಂದು ಹಳೇ ಪ್ಲಾಸ್ಟೀಕ್ ಪೇಪರ್ ಅನ್ನು ಪಂಚನಾಮೆಯೊಂದಿಗೆ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ನೀಡಿದ ವರದಿಯನ್ನು ಪಡೆದು ಠಾಣಾ ಎನ್.ಸಿ.ಆರ್ ನಂ326/2018 ರಂತೆ  ಪ್ರಕರಣ ದಾಖಲು ಮಾಡಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣಾ ಮೊ.ಸಂ.329/2018 ಕಲಂ 87 ಕೆ.ಪಿ.ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

2) ಚಿಕ್ಕಬಳ್ಳಾಪುರ ನಗರ  ಪೊಲೀಸ್ ಠಾಣೆ ಮೊ.ಸಂ.198/2018 ಕಲಂ.420 ಐ.ಪಿ.ಸಿ:-

     ದಿನಾಂಕ: 30/11/2018 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಜಯರಾಮಯ್ಯ ಬಿನ್ ಲೇಟ್ ಹನುಮಪ್ಪ, 65 ವರ್ಷ, ಒಕ್ಕಲಿಗರು, ಜಿರಾಯ್ತಿ, ಕೊಳವನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ ನನ್ನ ಮಗ ಮೂರ್ತಿಕುಮಾರ್ ಎಂಬುವವನು ಚಿಕ್ಕಬಳ್ಳಾಪುರ ನಗರದ ಎಂ.ಜಿ. ರಸ್ತೆ, ಎ.ಪಿ.ಎಂ.ಸಿ ಮಾರುಕಟ್ಟೆ ಬಳಿ ಮೆಡಿಕಲ್ ಶಾಪ್ ನ್ನು ಇಟ್ಟುಕೊಂಡಿರುತ್ತಾನೆ. ತನ್ನ  ವ್ಯಾಪಾರಕ್ಕೆ  ಹಣದ ಅಗತ್ಯತೆ ಇದ್ದರಿಂದ ತಂದು ಕೊಡಲು  ಹೇಳಿದ್ದನು ಅದರಂತೆ ನಾನು ಮತ್ತು ನನ್ನ ಹೆಂಡತಿಯಾದ ಶ್ರೀಮತಿ ರತ್ನಮ್ಮ ರವರು ಈ ದಿನ  ದಿನಾಂಕ: 29.11.2018 ರಂದು ಮದ್ಯಾಹ್ನ  ಮನೆಯಲ್ಲಿದ್ದ  ರೂ. 1,70,000/- ರೂಗಳನ್ನು  ತೆಗದುಕೊಂಡು ನಮ್ಮ ಬಜಾಜ್ ಡಿಸ್ಕವರಿ ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರ ನಗರಕ್ಕೆ ಬಂದು ಮಧ್ಯಾಹ್ನ 3-30 ಗಂಟೆಯಲ್ಲಿ ಕೆನರಾ ಬ್ಯಾಂಕ್ ನಲ್ಲಿ 1,80,000/- ರೂಗಳನ್ನು ಡ್ರಾ ಮಾಡಿಕೊಂಡು  ಒಟ್ಟು 3,50,000/- ರೂಗಳನ್ನು ದ್ವಿಚಕ್ರವಾಹನದ ಪೆಟ್ರೋಲ್ ಟ್ಯಾಂಕ್ ಕವರ್ ನಲ್ಲಿಟ್ಟುಕೊಂಡಿದ್ದು ಆಗ ನನಗೂ ಮತ್ತು ನನ್ನ ಹೆಂಡತಿಗೆ ಮೈ ಎಲ್ಲಾ ಕೆರತ ಪ್ರಾರಂಭವಾಗಿದ್ದು ಅದರೂ ಇಬ್ಬರೂ ದ್ವಿಚಕ್ರವಾಹನದಲ್ಲಿ  ನನ್ನ ಮಗನ ಮೆಡಿಕಲ್ ಶಾಪ್ ಗೆ ಬಂದೆವು ಮೈ ಕೆರತದ ಬಗ್ಗೆ ಮಗನಿಗೆ ಹೇಳಿದ್ದರಿಂದ ಅವನು ಇಬ್ಬರಿಗೂ ಮಾತ್ರ ಕೊಟ್ಟಿದ್ದು ಇಬ್ಬರು ಅಲ್ಲೆ ತಿಂದೆವು, ಆಗ ನನ್ನ ಮಗ ಹಣವನ್ನು ಮನೆಯಲ್ಲಿ ಕೊಡುವಂತೆ ತಿಳಿಸಿದ್ದರಿಂದ ಇಬ್ಬರೂ ಹಣದೊಂದಿಗೆ ಹತ್ತಿರದಲ್ಲೆ ಇದ್ದ ಮಗನ ಮನೆಗೆ ಹೋಗಲು ದ್ವಿಚಕ್ರವಾಹನದ ಹತ್ತಿರ ಬಂದು  ಹಣವನ್ನು  ಟ್ಯಾಂಕ್ ಕವರ್ ನಲ್ಲಿಟ್ಟು ಜಿಪ್ ಹಾಕುತ್ತಿದ್ದಂತೆ ಸಂಜೆ ಸುಮಾರು 4-15 ರಿಂದ 4-30 ಗಂಟೆಯಲ್ಲಿ ಸುಮಾರು 60-65 ವರ್ಷದ ಒಬ್ಬ ವ್ಯಕ್ತಿ ಬಂದು ಕೆಳಗೆ ಹಣ ಬಿದ್ದಿರುವುದಾಗಿ ಹೇಳಿದ ನಾನು  ಕೆಳಗೆ ನೋಡಲಾಗಿ 10-20 ರೂಗಳ ನೋಟುಗಳು ಬಿದ್ದಿದ್ದು ನಾನು ದ್ವಿಚಕ್ರವಾಹನದಿಂದ ಇಳಿದು ಹಣವನ್ನು ತೆಗೆದುಕೊಳ್ಳುತ್ತಿದ್ದಾಗ ನನ್ನ ಹೆಂಡತಿ ಸಹ ನನ್ನನ್ನು ನೋಡುತ್ತಿದ್ದಳು, ನಾನು ಹಣವನ್ನು ತೆಗೆದುಕೊಂಡು ದ್ವಿಚಕ್ರವಾಹನದ ಮೇಲೆ ಕುಳಿತುಕೊಂಡಾಗ ದ್ವಿಚಕ್ರವಾಹನದ ಹಿಂದಿನ ಚಕ್ರ ಪಂಕ್ಚರ್ ಅಗಿತ್ತು ಏನಾಗಿದೆ ಎಂದು ಚಕ್ರ  ಪರಿಶೀಲನೆ ಮಾಡಿ ಪೆಟ್ರೋಲ್ ಟ್ಯಾಂಕ್ ನಲ್ಲಿಟ್ಟಿದ್ದ  ಹಣವನ್ನು ಗಮನಿಸಿದಾಗ ಅದರಲ್ಲಿಟ್ಟಿದ್ದ ಹಣ ಇರಲಿಲ್ಲ ಹುಡುಕಾಡಲಾಗಿ ಪತ್ತೆಯಾಗಲಿಲ್ಲ ಅಕ್ಕಪಕ್ಕದಲ್ಲಿದ್ದವರಿಗೆ ಮತ್ತು ನನ್ನ ಮಗನಿಗೆ ವಿಚಾರವನ್ನು  ಹೇಳಿದೆ  ಅವರು ಸಹ ಹುಡುಕಾಡಿದ್ದು  ಪತ್ತೆಯಾಗಿರುವುದಿಲ್ಲ. ಯಾರೋ ದುಶ್ಕರ್ಮಿಗಳು ನನಗೆ ಮತ್ತು ನನ್ನ ಹೆಂಡತಿಗೆ ಗೊತ್ತಾಗದಂತೆ ಕೆರತ ಬರುವ ದ್ರಾವಕ ಸಿಂಪಡಿಸಿ, ದ್ವಿಚಕ್ರವಾಹನ ಟೈರ್ ಪಂಕ್ಚರ್ ಮಾಡಿ, ಚಿಲ್ಲರೆ ಹಣವನ್ನು ಚೆಲ್ಲಿ ಗಮನವನ್ನು ಬೇರೆಡೆ ಸೆಳೆದು ಮೋಸ ಮಾಡಿ ನನ್ನ ಬಳಿ ಇದ್ದ 3,50,000/-(ಮೂರು ಲಕ್ಷದ ಐವತ್ತು ಸಾವಿರ) ರೂಗಳನ್ನು  ಮೋಸದಿಂದ  ತೆಗೆದುಕೊಂಡು ಹೋಗಿರುತ್ತಾರೆ. ಸದರಿ ಮೋಸಗಾರರನ್ನು ಮತ್ತು ನನ್ನ ಹಣವನ್ನು ಪತ್ತೆಮಾಡಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ  ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

3) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.483/2018 ಕಲಂ.323-353-448-504-506 ಐ.ಪಿ.ಸಿ:-

     ದಿನಾಂಕ 29-11-2018 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶ್ರೀಮತಿ ಪ್ರಭಾವತಿ ಕೊಂ ಶ್ರೀನಿವಾಸಪ್ಪ 50 ವರ್ಷ, ಬಲಜಿಗರು, ಅಂಗನವಾಡಿ ಕಾರ್ಯಕರ್ತೆ, ಕೆಜಿಎನ್ ಬಡಾವಣೆ, ಚಿಂತಾಮಣಿ ನಗರ ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಮದ್ಯಾಹ್ನ 12-15  ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ತಾನು ಈಗ್ಗೆ 10 ವರ್ಷಗಳಿಮದ ಇದೇ ಚಿಂತಾಮಣಿ ತಾಲ್ಲೂಕು ಮಿನಿಕಂಬಾಲಹಳ್ಳಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿರುತ್ತೇನೆ.  ಈಗ್ಗೆ 6 ತಿಂಗಳ ಮುಂಚೆ ಸರ್ಕಾರದಿಂದ 11 ರಿಂದ 18 ವರ್ಷ ವಯಸ್ಸಿನ ಎಲ್ಲಾ ಹೆಣ್ಣು ಮಕ್ಕಳಿಗೂ ಸಬಲ ಕಿಟ್ ಕೊಡುತ್ತಿದ್ದು ಈಗ 11 ರಿಂದ 14 ವಯಸ್ಸಿನ ಶಾಲೆ ಬಿಟ್ಟ ಮಕ್ಕಳಿಗೆ ಮಾತ್ರ ಸಬಲ ಕಿಟ್ ವಿತರಣೆ ಮಾಡುವಂತೆ ಆದೇಶವಿದ್ದು ಹೀಗಿರುವಾಗ ದಿನಾಂಕ 28-11-2018 ರಂದು ಬೆಳಗ್ಗೆ 11-30 ಗಂಟೆ ಸಮಯದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಿನಿಕಂಬಾಲಹಳ್ಳಿ ಗ್ರಾಮದ ವಾಸಿಯಾದ ನರಸಿಂಹಪ್ಪ ಮತ್ತು ಆತನ ತಮ್ಮನಾದ ಶಿವ ರವರು ಅಂಗನವಾಡಿ ಕೇಂದ್ರದ ಒಳಗೆ ಅಕ್ರಮ ಪ್ರವೇಶ ಮಾಡಿ ಏಕಾಏಕಿ ತನ್ನನ್ನು ಕುರಿತು ಏಕೆ ನಮ್ಮ ಮಕ್ಕಳಿಗೆ ಸಬಲ ಕಿಟ್ ಅನ್ನು ಕೊಡುತ್ತಿಲ್ಲ ಎಂದಾಗ ತಾನು ನಿಮ್ಮ ಮಗಳು ಶಾಲೆಗೆ ಹೋಗುತ್ತಿದ್ದಾಳೆ ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಸಬಲ ಕಿಟ್ ಕೊಡುವುದಿಲ್ಲ ಎಂದು ಹೇಳುತ್ತಿದ್ದಂತೆ ನರಸಿಂಹಪ್ಪ ಮತ್ತು ಶಿವ ರವರು ಕೈಗಳಿಂದ  ಮೈಮೇಲೆ ಹೊಡೆದು ನೋವುಂಟು ಮಾಡಿ ತಾನು ನಿರ್ವಹಿಸುತ್ತಿದ್ದ ಸರ್ಕಾರಿ ಕೆಲಸವನ್ನು ನಿರ್ವಹಿಸದಂತೆ ತಡೆದು ಇಬ್ಬರೂ ತನ್ನನ್ನು ಕುರಿತು ಇನ್ನು ಮುಂದೆ ನೀನು ಈ ಅಂಗನವಾಡಿಯಲ್ಲಿ ಕರ್ತವ್ಯ ನಿರ್ವಹಿಸದಂತೆ ಎತಂಗಡಿ ಮಾಡಿಸುತ್ತೇವೆ ಇಲ್ಲವಾದರೆ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿ ಜಗಳ ಮಾಡುತ್ತಿದ್ದಾಗ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿದ್ದ ಅಡುಗೆ ಸಹಾಯಕಿ ರೆಡ್ಡಮ್ಮ ಅಡ್ಡ ಬಂದು ಜಗಳ ಬಿಡಿಸಿರುತ್ತಾರೆ. ನಿನ್ನೆ ದಿನ ತಾನು ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲದ ಕಾರಣ ಈ ದಿನ ಹೇಳಿಕೆಯನ್ನು ನೀಡುತ್ತಿದ್ದು  ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

4) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.484/2018 ಕಲಂ.ಮನುಷ್ಯ ಕಾಣೆ:-

     ದಿನಾಂಕ 29-11-2018 ರಂದು ಸಂಜೆ 5-00 ಗಂಟೆಗೆ ಶ್ರೀಮತಿ ನಾರಾಯಣಮ್ಮ ಕೋಂ ನಲ್ಲಮುನಿಯಪ್ಪಗಾರಿ ಮುನಿಶಾಮಿ, 55 ವರ್ಷ, ಪ ಜಾತಿ, ಕೂಲಿ ಕೆಲಸ, ವಾಸ-ಚೌಡದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತನಗೆ ಇಬ್ಬರು ಗಂಡು ಮತ್ತು ಮೂರು ಜನ ಹೆಣ್ಣು ಮಕ್ಕಳಿದ್ದು ನನ್ನ 2 ನೇ ಮಗನಾದ ಗಣೇಶ್ ರವರಿಗೆ ಚಿಂತಾಮಣಿ ತಾಲ್ಲೂಕು ನಂದಿಗಾನಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಬಾರ್ಲಹಳ್ಳಿ ಗ್ರಾಮದ ವಾಸಿಯಾದ ನರಸಿಂಹಪ್ಪ ರವರ ಮಗನಾದ ಚೈತ್ರಾ ಎಂಬುವರಿಗೆ ಮದುವೆ ಮಾಡಿಕೊಳ್ಳಲು ನಿಶ್ಚಿತಾರ್ಥ ಮಾಡಿಕೊಂಡು ದಿನಾಂಕ 29/11/2018 ರಂದು ಶಿಂಗರೇಪಲ್ಲಿ (ಕೋಟಗಲ್) ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಮದುವೆ ಮಾಡಲು ದಿನಾಂಕವನ್ನು ನಿಶ್ಚಯ ಮಾಡಿಕೊಂಡು ಅದರಂತೆ ದಿನಾಂಕ 28/11/2018 ರಂದು ತಾವು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಬಂದು ಮದುವೆ ತಯಾರಿಸಿಕೊಂಡು ಅದೇ ದಿನ ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ತಾವೆಲ್ಲರೂ ಮದುವೆ ಕಾರ್ಯಗಳಲ್ಲಿ ತೊಡಗಿದ್ದ ಸಮಯದಲ್ಲಿ ತನ್ನ ಮಗನಾದ ಗಣೇಶ್ ರವರು ಹೊರಗಡೆ ಓಡಾಡಿಕೊಂಡಿದ್ದವನು ಮತ್ತೆ ಕಾಣಿಸಲೇ ಇಲ್ಲ. ತಾವು ಎಷ್ಟು ಹೊತ್ತು ಕಾಯುತ್ತಿದ್ದರು ಸಹ ತನ್ನ ಮಗ ವಾಪಸ್ಸು ಬಂದಿರುವುದಿಲ್ಲ. ತನ್ನ ಮಗ ಎಲ್ಲಿಗೋ ಹೊರಟು ಹೋಗಿರುತ್ತಾನೆ. ತನ್ನ ಮಗ ಬಳಸುತ್ತಿದ್ದ ಮೊಬೈಲ್ ನಂ-9901252334 ಮತ್ತು 8197523292 ಗೆ ಕರೆ ಮಾಡಿದರೆ ಅವು ಸ್ವಿಟ್ಜ್ ಆಫು ಬರುತ್ತಿರುತ್ತದೆ. ತಾವು ತನ್ನ ಮಗನನ್ನು ಇದುವರೆವಿಗೂ ಹುಡುಕಾಡಿಕೊಂಡಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಕಾಣೆಯಾಗಿರುವ ತನ್ನ ಮಗ ಗಣೇಶ್ ರವರನ್ನು ಹುಡುಕಿ ಕೊಡ ಬೇಕಾಗಿ ಕೋರುತ್ತೇನೆ.

5) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.485/2018 ಕಲಂ.279-337-338 ಐ.ಪಿ.ಸಿ:-

     ದಿನಾಂಕ 29-11-2018 ರಂದು ಚಿಂತಾಮಣಿಯ ರಾಧಾಕೃಷ್ಣ ಆಸ್ವತ್ರೆಯಲ್ಲಿ ಗಾಯಾಳು ಶ್ರೀನಾಥ ಬಿನ್ ಸುಬ್ಬಯ್ಯ, 29 ವರ್ಷ, ಗೊಲ್ಲರು, ಚಾಲಕ, ವೆಂಕಟರಾಯನಕೋಟೆ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ರಾತ್ರಿ 9-15 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ 28-11-2018 ರಂದು ಕೈವಾರ ಗ್ರಾಮದಲ್ಲಿ ತನ್ನ ಸ್ನೇಹಿತನ ಮದುವೆ ಕಾರ್ಯಕ್ರಮ ಇದ್ದರಿಂದ  ಮದುವೆ ಹೋಗುವ ಸಲುವಾಗಿ ದಿನಾಂಕ 28-11-2018 ರಂದು ರಾತ್ರಿ  ಸುಮಾರು 8-00 ಗಂಟೆ ಸಮಯದಲ್ಲಿ ತನ್ನ ಸ್ನೇಹಿತ ಅಶೋಕ್ ರವರು ತನ್ನ ಬಾಬತ್ತು ಕೆಎ 40 ಕ್ಯೂ 4810 ಹಿರೋ ಹೊಂಡಾ ಸಿಡಿ ಡಿಲೆಕ್ಸ್ ದ್ವಿಚಕ್ರ ವಾಹನದಲ್ಲಿ ತಾನು ಹಿಂಬದಿಯಲ್ಲಿ ಕುಳಿತುಕೊಂಡು ಮತ್ತು ತನ್ನ ಸ್ನೇಹಿತ ಅಶೋಕ ರವರು ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ಬೆಂಗಳೂರು ರಸ್ತೆಯಲ್ಲಿರುವ ಆರ್ ಕೆ ಕಾಲೇಜಿನ ಮುಂಭಾಗದ ರಸ್ತೆಯ ಎಡ ಬಾಗದಲ್ಲಿ ಕೈವಾರ ಕಡೆ ಹೋಗುತ್ತಿದ್ದಾಗ ತಮ್ಮ ಹಿಂಬದಿಯಿಂದ ಅಂದರೆ ಚಿಂತಾಮಣಿ ಕಡೆಯಿಂದ ಬಂದ ಕೆಎ 41- 9258 ಸ್ವಿಪ್ಟ್ ಡಿಜೈರ್ ಕಾರ್ ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ತಮ್ಮ ಹಿಂಬದಿಯಿಂದ ಬಂದು ತಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ್ದು ತಾನು ಮತ್ತು ಆಶೋಕ ರವರು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು, ತನ್ನ ಬಲ ಮೊಣ ಕಾಲಿನ ಕೆಳಭಾಗದಲ್ಲಿ ಭಾರಿ ರಕ್ತಗಾಯವಾಗಿ, ತಲೆಗೆ, ಎರಡೂ ಕೈಗಳಿಗೆ, ಎಡ ಮೊಣಕಾಲಿಗೆ ತರಚಿದ  ಗಾಯವಾಗಿದ್ದು ತನ್ನ ಸ್ನೇಹಿತ ಅಶೋಕ ರವರಿಗೆ ತಲೆಗೆ, ಕೈ- ಕಾಲುಗಳಿಗೆ ತರಚಿದ ಗಾಯವಾಗಿರುತ್ತೆ. ನಂತರ ದಾರಿಹೊಕರು ತಮ್ಮನ್ನು ಉಪಚರಿಸಿ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಆದ್ದ್ರಿಂದ ಮೇಲ್ಕಂಡ ಕೆಎ 41- 9258 ಸ್ವಿಪ್ಟ್ ಡಿಜೈರ್ ಕಾರ್ ನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ.

6) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.257/2018 ಕಲಂ.379-411 ಐ.ಪಿ.ಸಿ:-

     ತಮ್ಮ ಸನ್ನಿಧಾನದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ದಿನಾಂಕ: 29/11/2018 ರಂದು ಬೆಳಿಗ್ಗೆ 09-00 ಪಿ.ಐ ಸಾಹೇಬರು, ನನಗೆ ಮತ್ತು ಹೆಚ್.ಸಿ-126 ರವರಿಗೆ ಹಗಲು ಗಸ್ತಿಗೆ ನೇಮಿಸಿದ್ದು ಅದರಂತೆ ನಾವು ಈ ದಿನ ಠಾಣೆಯನ್ನು ಬಿಟ್ಟು ಚಿಂತಾಮಣಿ ನಗರದ ಡಬಲ್ ರಸ್ತೆ, ಎನ್.ಆರ್ ಬಡಾವಣೆ, ಪ್ರೇಮ್ ನಗರ, ಸೊಣ್ಣಶೆಟ್ಟಿಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು  ಮದ್ಯಾಹ್ನ 02-00 ಗಂಟೆ ಸಮಯದಲ್ಲಿ ನಗರದ ಮಾಳಪಲ್ಲಿಯಿಂದ ಕೋಲಾರದ ರಸ್ತೆ ಕಡೆ ಹೋಗುವ ರಸ್ತೆಯಲ್ಲಿ ಗಸ್ತು ಮಾಡುತ್ತಿರುವಾಗ  ಸೊಣ್ಣಶೆಟ್ಟಿಹಳ್ಳಿ ಸಕರ್ಾರಿ ಪ್ರೌಡಶಾಲೆಯ ಬಳಿ ಯಾರೋ ಒಬ್ಬ ಅಸಾಮಿ ಹೊಂಡಾ ಕಂಪನಿಯ ಡಿಯೋ ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ತನ್ನ ವಾಹನವನ್ನು ಹಿಂದಕ್ಕೆ ತಿರುಗಿಸಿಕೊಂಡು ವಾಪಸ್ಸು ಹೋಗುತ್ತಿದ್ದವನ ಮೇಲೆ ಅನುಮಾನ ಬಂದು ಸದರಿ ಆಸಾಮಿಯನ್ನು ಹಿಂಬಾಲಿಸಿ ಹಿಡಿದು  ಹೆಸರು ವಿಳಾಸವನ್ನು ತಿಳಿಯಲಾಗಿ ನಿಜಾಂ ಬಿನ್ ಶೇಕ್ ಅಮೀರ್ 22 ವರ್ಷ ಮುಸ್ಲಿಮರು, ವೆಲ್ಡಿಂಗ್ ಕೆಲಸ, ವಾಸ ನೆಕ್ಕುಂದಿ ಪೇಟೆ ಕಿದ್ವಾಯಿ ನಗರ, ಚಿಂತಾಮಣಿ ನಗರ ರವರು ಎಂಬುದಾಗಿ ತಿಳಿಸಿದ್ದು ಸದರಿಯವರನ್ನು ದ್ವಿಚಕ್ರವಾಹನದ ಬಗ್ಗೆ ವಿಚಾರ ಮಾಡಲಾಗಿ ಸದರಿ ದ್ವಿಚಕ್ರವಾಹನವನ್ನು ಈಗ್ಗೆ ಸುಮಾರು 15 ದಿನಗಳ ಹಿಂದೆ ನನ್ನ ಸ್ನೇಹಿತ ಅರ್ಪತ್ ಬಿನ್ ಮುಜಾಮಿಲ್ 20 ವರ್ಷ ಮಸೀದಿ ಹತ್ತಿರ, ಗೋವಿಂದಪುರ ಬೆಂಗಳೂರು ರವರು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ನನಗೆ ಮಾರಾಟ ಮಾಡಿ ಹಣ ಕೊಡುವಂತೆ ನಾನು ಈ ದಿನ ಶ್ರೀನಿವಾಸಪುರದಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ, ಆತನು ಚಲಾಯಿಸುತಿದ್ದ ದ್ವಿಚಕ್ರವಾಹನವನ್ನು ಪರಿಶೀಲಿಸಲಾಗಿ ಇದರ ನೊಂದಣಿ ಸಂಖ್ಯೆ ಕೆ.ಎ-17 ಎಸ್ 8269 ಸಂಖ್ಯೆಯ ಹೊಂಡಾ ಕಂಪನಿಯ ಡಿಯೋ ವಾಹನವಾಗಿದ್ದು ಇದರ ಬೆಲೆ ಸುಮಾರು 30.000/- ರೂಗಳಾಗಿರುತ್ತೆ. ಸದರಿ ಅಸಾಮಿಯನ್ನು ಮತ್ತು ದ್ವಿ ಚಕ್ರವಾಹನವನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ಮದ್ಯಾಹ್ನ 02-30 ಗಂಟೆಗೆ ಕರೆದುಕೊಂಡು ಬಂದು ಎಸ್.ಹೆಚ್.ಓ ರವರ ಮುಂದೆ ಹಾಜರ್ಪಡಿಸಿ ವರದಿಯನ್ನು ನೀಡಿರುತ್ತೇನೆ.

7) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.258/2018 ಕಲಂ.448 ರೆ/ವಿ 34 ಐ.ಪಿ.ಸಿ:-

     ದಿನಾಂಕ 29/11/2018 ರಂದು ಸಂಜೆ 6-00 ಗಂಟೆಗೆ ಚಿಂತಾಮಣಿ ತಾಲ್ಲೂಕು  ಸಮಾಜ ಕಲ್ಯಾಣ  ಇಲಾಖೆಯ ಸಹಾಯಕ ನಿರ್ಧೇಶಕರಾದ  ಎಸ್ ನಾರಾಯಣಸ್ವಾಮಿ ರವರು ತಮ್ಮ ಕಛೇರಿಯ  ಎಸ್.ಡಿ.ಎ  ರವರಾದ ಎಂ. ಕೃಷ್ಣಪ್ಪ ರವರೊಂದಿಗೆ ಕಳುಹಿಸಿಕೊಟ್ಟ ದೂರಿನ ಸಾರಾಂಶವೇನೆಂದರೆ, ಸರ್ಕಾರಿ ಸುತ್ತೋಲೆ ಸಂಖ್ಯೆ : ಸಕಇ 62  ಪಕಸೇ 216 ದಿನಾಂಕ 10/11/2016 ರಂತೆ ಇಲಾಝೆ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ವಿಧ್ಯಾರ್ಥಿಗಳನ್ನು ಹೊರತುಪಡಿಸಿ ಇತರರಿಗೆ ವಿದ್ಯಾರ್ಥಿ ನಿಲಗಳಿಗೆ ಪ್ರವೇಶವಿರುವುದಿಲ್ಲ. ಒಂದು ವೇಳೆ ಪಾಲಕರು ಮತ್ತು ಇತರರು ಪ್ರವೇಶಿಸಬೇಕಾದಲ್ಲಿ ಉಪ ನಿರ್ಧೇಶಕರ ವೃಂದದ ಅಧಿಕಾರಿ ಅಥವಾ ಅವರಿಗಿಂತ ಮೇಲ್ಪಟ್ಟ ವೃಂದದ ಅಧಿಕಾರಿಗಳು ಸಮಾಜ ಕಲ್ಯಾಣ  ಇಲಾಖೆ ಇವರುಗಳಿಂದ ಅನುಮತಿ ಪಡೆಯತಕ್ಕದ್ದು  ಎಂದು ನಿರ್ಧೇಶನ ನೀಡಲಾಗಿರುತ್ತೆ. ಆದರೆ ದಿನಾಂಕ 17/11/2018 ರಂದು ಚಿಂತಾಮಣಿ ತಾಲ್ಲೂಕು ಕೇಂದ್ರದಲ್ಲಿ ಇರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಮೆಟ್ರಿಕ್ ನಂತರದ ಪದವಿ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮತ್ತು ಮೆಟ್ರಿಕ್ ನಂತರದ ಪದವಿ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಶ್ರೀಮತಿ ನಿರ್ಮಲ ಮುನಿರಾಜು ಉಪಾಧ್ಯಕ್ಷರು ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ  ಅವರ ಅಪ್ತ  ಸಹಾಯಕರಾದ ಶ್ರೀ ದೇವರಾಜ್ ಮತ್ತು ಎ. ಬಿ.ವಿ.ಪಿ ಸಂಘಟನೆಯ ಮುಖಂಡರಾದ ಶ್ರೀ ಮಂಜುನಾಥರೆಡ್ಡಿ ರವರುಗಳು ರಾತ್ರಿ ಸುಮಾರು 7-30 ರಿಂದ 9-30 ಗಂಟೆಯ ಸಮಯದಲ್ಲಿ ವಿದ್ಯಾರ್ಥಿ ನಿಲಯಕ್ಕೆ ಅನಧೀಕೃತವಾಗಿ ಅತಿಕ್ರಮಣ ಮಾಡಿರುವುದು ಸಿಸಿಟಿವಿ  ಪೂಟೇಜ್ ನಿಂದ ಕಂಡು ಬಂದಿದ್ದು  ಇವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು . ಇದುವರೆಗೂ ಕಛೇರಿಯಲ್ಲಿ ವಿಚಾರಿಸಿ ತಡವಾಗಿ ದೂರು ನೀಡಿರುತ್ತೇನೆ.

8) ಗುಡಿಬಂಡೆ  ಪೊಲೀಸ್ ಠಾಣೆ ಮೊ.ಸಂ.269/2018 ಕಲಂ.279-337-304(ಎ) ಐ.ಪಿ.ಸಿ:-

     ದಿನಾಂಕ:30-11-2018 ರಂದು ಬೆಳಿಗ್ಗೆ 08-15 ಘಂಟೆಯಲ್ಲಿ ಪಿರ್ಯಾದುದಾರರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದು ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:30-11-2018 ರಂದು ಬೆಳಗಿನ ಜಾವ ಸುಮಾರು 02-00 ಘಂಟೆಯಲ್ಲಿ ತಮ್ಮ ಅಕ್ಕ ಆದಿಲಕ್ಷ್ಮಮ್ಮ ರವರು ತನಗೆ ಫೋನ್ ಮಾಡಿ ತಮ್ಮ ಭಾವ ಸಿ.ಆಂಜನೇಯಲು ರವರಿಗೆ ಗುಡಿಬಂಡೆ ತಾಲ್ಲೂಕು ಷಾ-ಷೀಬ್ ಇಂಜಿನಿಯರಿಂಗ್ ಕಾಲೇಜು ಬಳಿ NH-7 ರಸ್ತೆಯಲ್ಲಿ ಅಪಘಾತವಾಗಿ ಮೃತಪಟ್ಟಿರುವುದಾಗಿ ತಮ್ಮ ಭಾವನ ಜೊತೆಯಲ್ಲಿ ಹೋಗಿದ್ದ ಶ್ರೀನಿವಾಸುಲು ರವರು ಫೋನ್ ಮಾಡಿ ತಿಳಿಸಿರುವುದಾಗಿ ತನಗೆ ತಿಳಿಸಿದ್ದು, ಆಗ ತಾನು & ನಮ್ಮ ಸಂಬಂಧಿ ಬಿ.ರಾಮಚಂದ್ರ ರವರು ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನಂತರ ಶ್ರೀನಿವಾಸುಲು ರವರನ್ನು ಅಪಘಾತದ ಬಗ್ಗೆ ವಿಚಾರ ಕೇಳಿ ತಿಳಿಯಲಾಗಿ, ದಿನಾಂಕ:29-11-2018 ರಂದು ರಾತ್ರಿ ಗಂಗನ್ನಗಾರಿಪಲ್ಲಿ ಗ್ರಾಮದ ವಾಸಿಗಳಾದ ಸಿ.ಆಂಜನೇಯಲು, ಶ್ರೀನಿವಾಸುಲು, ಜಯಸಿಂಹ, ಉದಯ್ ಕುಮಾರ್, ಶೇಷಾದ್ರಿ, ಶಂಕರಯ್ಯ, ಗಂಗುಲಪ್ಪ ರವರು ತಮ್ಮ ತಮ್ಮ ಬಾಬತ್ತು ಚಾಮಂತಿಗೆ ಹೂವುಗಳನ್ನು ಚಿಕ್ಕಬಳ್ಳಾಪುರ ಟೌನ್ ನಲ್ಲಿರುವ ಹೂವುಗಳ ಮಾರ್ಕೆಟ್ ಗೆ ಬರಲು ಕದಿರಿ ಯಿಂದ ಚಿಕ್ಕಬಳ್ಳಾಪುರದ ಕಡೆ ಬರುವ ಮೈನ್ ರೋಡ್ ನಲ್ಲಿರುವ ಅಗ್ರಿಕಲ್ಚರ್ ಆಫೀಸ್ ಬಳಿ ಇದ್ದಾಗ ಬೆಂಗಳೂರು ಕಡೆಗೆ ಬರುತ್ತಿದ್ದ AP-04-TW-5475 ಲಾರಿಯಲ್ಲಿ ಎಲ್ಲಾರೂ ಕ್ಯಾಬಿನ್ ನಲ್ಲಿ ಹತ್ತಿಕೊಂಡು ಹೂವುಗಳನ್ನು ಲಾರಿಯ ಮೇಲೆ ಹಾಕಿಕೊಂಡು ರಾತ್ರಿ ಸುಮಾರು 11-30 ಘಂಟೆಯಲ್ಲಿ ಕದಿರಿ ಟೌನ್ ಬಿಟ್ಟು ಗೋರೆಂಟ್ಲಾ, ಕೊಡಿಕೊಂಡ ಮಾರ್ಗವಾಗಿ NH-7 ರಸ್ತೆಯಲ್ಲಿ ಬರುತ್ತಿದ್ದಾಗ, ರಾತ್ರಿ ಸುಮಾರು 01-30 ಘಂಟೆಯಲ್ಲಿ ಗುಡಿಬಂಡೆ ತಾಲ್ಲೂಕು ಷಾ-ಷಿಬ್ ಕಾಲೇಜು ಮುಂಭಾಗದ NH-7 ರಸ್ತೆಯಲ್ಲಿ WB-11-B-7145 ಈಚರ್  ಕಂಟೈನರ್ ನ್ನು ಅದರ ಚಾಲಕ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ರಸ್ತೆಯ ಡಿವೈಡರ್ ಪಕ್ಕದಲ್ಲಿ ನಿಲ್ಲಿಸಿದ ಪರಿಣಾಮ ತಾವು ಹೋಗುತ್ತಿದ್ದ AP-04-TW-5475 ಲಾರಿ ರಸ್ತೆಯಲ್ಲಿ ನಿಲ್ಲಿಸಿದ್ದ WB-11-B-7145 ಈಚರ್  ಕಂಟೈನರ್ ಹಿಂಬಾಗಕ್ಕೆ ಡಿಕ್ಕಿ ಹೊಡೆದು ಅಪಘಾತದ ಪರಿಣಾಮ ಲಾರಿಯಲ್ಲಿದ್ದ ಡೋರ್ ಪಕ್ಕದಲ್ಲಿ ಕುಳಿತಿದ್ದ ಸಿ.ಆಂಜನೇಯಲು ಲಾರಿಯಿಂದ ಕೆಳಗಡೆಗೆ ಬಿದ್ದಿದ್ದು, ಅದೇ ರಸ್ತೆಯಲ್ಲಿ ಬರುತ್ತಿದ್ದ KA-40-F-1316 ನೊಂದಣಿ ಸಂಖ್ಯೆಯ KSRTC ಬಸ್ಸನ್ನು ಅದರ ಚಾಲಕ ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸಿ.ಆಂಜನೇಯಲು ರವರ ಮೈಮೇಲೆ ಹತ್ತಿಸಿಕೊಂಡು ಹೋದ ಪರಿಣಾಮ ಸಿ.ಆಂಜನೇಯುಲು ರವರಿಗೆ ಭಾರಿ ಪ್ರಮಾಣದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ, ಲಾರಿ ಕ್ಯಾಬಿನ್ ನಲ್ಲಿ ಕುಳಿತಿದ್ದ ಗಂಗುಲಪ್ಪ ರವರ ಎಡಗಾಲಿಗೆ, ಶಂಕರಯ್ಯ ಎಡಗಾಲು, ಶೇಷಾದ್ರ್ರಿರವರ ಬಲಗಾಲಿನ ಹೆಬ್ಬೆರಳಿಗೆ, ಉದಯ್ ಕುಮಾರ್ ರವರ ಬಲಗಾಲು, ಜಯಸಿಂಹ ರವರ ಬಲಗಾಲಿಗೆ ರಕ್ತಗಾಯಗಳಾಗಿ ಶ್ರೀನಿವಾಸುಲು ರವರಿಗೆ ಯಾವುದೇ ರೀತಿಯ ಗಾಯಗಳಾಗಲಿಲ್ಲವೆಂದು ತಿಳಿಸಿರುವುದಾಗಿ, ಈ ಅಪಘಾತಕ್ಕೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ರಸ್ತೆಯ ಡಿವೈಡರ್ ಪಕ್ಕದಲ್ಲಿ ನಿಲ್ಲಿಸಿದ್ದ WB-11-B-7145 ಈಚರ್  ಕಂಟೈನರ್ ಚಾಲಕ ಹಾಗೂ ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿ ಸಿ.ಆಂಜನೇಯಲು ರವರ ಮೈಮೇಲೆ ಹತ್ತಿಸಿದ KA-40-F-1316 KSRTC ಬಸ್ಸು ಚಾಲಕ ರವರು ಕಾರಣರಾಗಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದು.

9) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.317/2018 ಕಲಂ.120(ಬಿ)-323-327-379-414-430-447-506 ರೆ/ವಿ 34 ಐ.ಪಿ.ಸಿ:-

     ದಿನಾಂಕ:29.11.2018 ರಂದು ಬೆಳಿಗ್ಗೆ 11-00 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪಿ.ಸಿ.90 ರಾಜಕುಮಾರ ರವರು ಠಾಣೆಯಲ್ಲಿ ಹಾಜರುಪಡಿಸಿದ ಪಿ.ಸಿ.ಆರ್ ನಂಬರ್ 184/2018 ನ್ನು ಪಡೆದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ,   ಆರೋಪಿಗಳಾದ ಜೆ ವೆಂಕಟಾಪುರ ಗ್ರಾಮದ ವಾಸಿಗಳಾದ 1) ಲಕ್ಷ್ಮೀನಾರಾಯಣಪ್ಪ ಎಂ ಬಿನ್ ಲೇಟ್ ಮುನಿಸುಬ್ಬಣ್ಣ, 2) ಮಂಜುನಾಥ @ ಮಂಜು ಬಿನ್ ಲೇಟ್ ಮುನಿಸುಬ್ಬಣ್ಣ ರವರುಗಳು  ಶಿಡ್ಲಘಟ್ಟ ತಾಲ್ಲೂಕು ಜೆ ವೆಂಕಟಾಪುರ ದಿನಾಂಕ:10.08.2018 ರಂದು ಶಿಡ್ಲಘಟ್ಟ ತಾಲ್ಲೂಕು ಜೆ.ವೆಂಕಟಾಪುರ ಗ್ರಾಮದ ಸರ್ವೇ ನಂಬರ್    73/1A2 ರಲ್ಲಿ 2 ಗುಂಟೆ,  ಸರ್ವೇ ನಂಬರ್ 73/1B, ರಲ್ಲಿ 13 ಗುಂಟೆ ಮತ್ತು ಸರ್ವೇ ನಂಬರ್ 73/1C  ರಲ್ಲಿ 11 ಗುಂಟೆ ಒಟ್ಟು 26 ಗುಂಟೆ ಜಮೀನನ್ನು ಪಿರ್ಯಾದಿದಾರರಾದ ಪ್ರಸನ್ನ ಬಿನ್ ಲೇಟ್ ಆಂಜಿನಪ್ಪ,  ಜೆ ವೆಂಕಟಾಪುರ ಗ್ರಾಮ ರವರಿಗೆ 2,90,000 ರೂಗಳಿಗೆ ಕರಾರು ಮಾಡಿಕೊಟ್ಟು ಜಮೀನು ಸ್ವಾಧೀನ ಬಿಟ್ಟುಕೊಟ್ಟಿರುತ್ತಾರೆ. ಈ ವಿಚಾರದಲ್ಲಿ ಪಿರ್ಯಾದಿದಾರರು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯ ಪಿರ್ಯಾದಿದಾರರ ಪರವಾಗಿ ಮಧ್ಯಂತರ ಆದೇಶ ನೀಡಿರುತ್ತೆ. ಈಗಿರುವಾಗ ಆರೋಪಿಗಳಿಬ್ಬರೂ ದಿನಾಂಕ:29.09.2018 ರಂದು ಸಂಜೆ 4-00 ಗಂಟೆಯಲ್ಲಿ ಪಿರ್ಯಾದಿದಾರರ ಮೇಲ್ಕಂಡ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಸಂಚು ರೂಪಿಸಿ ಪಿರ್ಯಾದಿದಾರರು ನೀರಾವರಿಗಾಗಿ ಅಳವಡಿಸಿರುವ ಸಾಮಗ್ರಿಗಳಾದ 30 ಲೆಂತ್ ಕಬ್ಬಿಣದ ಪೈಪುಗಳು, ಎರಡು ಮೋಟರು, 2 ಪಂಪುಗಳು  ಮತ್ತು ಕೇಬಲ್ ನ್ನು ಕತ್ತರಿಸಿಕೊಂಡು ಕಳವು ಮಾಡಿಕೊಂಡು ಹೋಗಿ ಸದರಿ ಮಾಲನ್ನು ಬಚ್ಚಿಟ್ಟಿದ್ದು, ಪಿರ್ಯಾದಿದಾರರಿಗೆ ವಿಚಾರ ತಿಳಿದು ಆರೋಪಿಗಳನ್ನು ಕೇಳಲಾಗಿ ಆರೋಪಿಗಳಿಬ್ಬರೂ ಪಿರ್ಯಾದಿದಾರರನ್ನು ಕೈಗಳಿಂದ ಹೊಡೆದು ತೀವ್ರತರವಾಗಿ ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿದ್ದು, ಆರೋಪಿಗಳ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಇದ್ದ ಸಾರಾಂಶದ ಮೇರೆಗೆ ಠಾಣಾ ಮೊ.ಸಂ. 317/2018ಕಲಂ 447,120ಬಿ,379,430,414,323,327,506 ರೆ/ವಿ 34 ಐ.ಪಿ.ಸಿ. ರೀತ್ಯಾ ಕೇಸು ದಾಖಲಿಸಿರುತ್ತೇನೆ.

10) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.318/2018 ಕಲಂ.279-337 ಐ.ಪಿ.ಸಿ:-

     ದಿನಾಂಕ:29/11/2018 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾಧಿ ಸುಬಾಷ್ ಬಿ.ಕೆ ಬಿನ್ ಕೆಂಪಣ್ಣ ಎಂ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಬೆಂಗಳೂರಿನ ರೇವಾ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರೊಫೇಸರ್ ಆಗಿ ಕೆಲಸ ಮಾಡಿಕೊಂಡು ಯೂನಿವರ್ಸಿಟಿಯ ಹಾಸ್ಟೇಲ್ ನಲ್ಲಿ ವಾಸವಾಗಿದ್ದು ರಜಾ ದಿನಗಳಲ್ಲಿ ಮನೆಗೆ ಬಂದು ಹೋಗುತ್ತಿರುತ್ತೇನೆ. ದಿನಾಂಕ:24/11/2018 ರಿಂದ 26/11/2018 ರವರಿಗೆ ರಜೆ ಇದ್ದು ಮನೆಗೆ ಬಂದು ಪುನಃ ವಾಪಸು ಹೋಗಲು ದಿನಾಂಕ:26/11/2018 ರಂದು ರಾತ್ರಿ 8.45 ಗಂಟೆಯಲ್ಲಿ ನನ್ನ ಬಾಬತ್ತು KA-40-X-4318 ಟಿವಿಎಸ್ ಅಪ್ಪಾಚ್ಚಿ ದ್ವಿ ಚಕ್ರ ವಾಹನದಲ್ಲಿ ಮಳ್ಳೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ  ಬಂದ KA-50-J-4920 ಹಿರೋ ಹೊಂಡಾ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನದ ಸವಾರ ತನ್ನ ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಡಿಕ್ಕಿಪಡಿಸಿದ ಪರಿಣಾಮ ದ್ವಿ  ಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿ ದ್ವಿ ಚಕ್ರ ವಾಹನ ಜಖಂಗೊಂಡು ನನ್ನ ಬಲಕಣ್ಣಿನ ರೆಪ್ಪೆಯ ಮೇಲೆ, ಕಣ್ಣಿನ ಕೊನೆಯಲ್ಲಿ, ಮೊಳಕಾಲಿನ ಮಂಡಿಯ ಮೇಲೆ, ಮೊಣಕಾಲಿನ ಕೆಳಗಡೆ ರಕ್ತಗಾಯವಾಗಿದ್ದು ಹರೀಶ್ ಮತ್ತು ನಮ್ಮ ತಂದೆಯ ಸ್ನೇಹಿತರು ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪಘಾತವನ್ನುಂಟು ಮಾಡಿದ KA-50-J-4920 ಹಿರೋ ಹೊಂಡಾ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನಾನು ಚಿಕಿತ್ಸೆ ಪಡೆದುಕೊಂಡು ಈ ದಿನ ತಡವಾಗಿ ಬಂದು ದೂರು ನೀಡಿದ್ದು ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ 218/2018 ಕಲಂ 279 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.