ದಿನಾಂಕ : 29/11/2018ರ ಅಪರಾಧ ಪ್ರಕರಣಗಳು

 1) ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 147/2018 ಕಲಂ. 323,324,504,506 ರೆ/ವಿ 34 ಐಪಿಸಿ :-

       ದಿನಾಂಕ 28/11/2018 ರಂದು  ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀನಿವಾಸ ರವರ ಹೇಳಿಕೆ ಪಡೆದು ಠಾಣೆಗೆ ಸಂಜೆ 6-00 ಗಂಟೆಗೆ ವಾಪಸ್ಸಾಗಿ ಪ್ರಕರಣ ದಾಖಲಿಸಿದ್ದು, ಸದರಿ ಹೇಳಿಕೆ ಸಾರಾಂಶವೇನೆಂದರೆ: ದಿನಾಂಕ 28/11/2018 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಶ್ರೀನಿವಾಸರ ರವರ ಹೆಂಡತಿಯಾದ ವೆಂಕಟರತ್ನಮ್ಮ ರವರು ತಮ್ಮ ಮನೆಯ ಮುಂಭಾಗದಲ್ಲಿ ಕಸ ಗುಡಿಸುತ್ತಿದ್ದಾಗ ಅದೇ ಗ್ರಾಮದ ಗೋಪಾಲರೆಡ್ಡಿ ರವರು ತಮ್ಮ ಜಾಗದಲ್ಲಿ ಕಸ ಹಾಕಿದ್ದಾಳೆಂದು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು, ಶ್ರೀನಿವಾಸರವರು ಯಾಕೆ ತನ್ನ ಹೆಂಡತಿಯನ್ನು ಬೈಯ್ಯುತ್ತಿದ್ದೀಯಾ ಎಂದು ಕೆಳಿದ್ದಕ್ಕೆ ದೊಣ್ಣೆಯಿಂದ ಬಲಭಾಗದ ತೊಡೆಗೆ ಹೊಡೆದು ಮೂಗೇಟುಗಳನ್ನುಂಟುಮಾಡಿದ್ದು, ಆತನ ಹೆಂಡತಿ ಮಂಜಮ್ಮ ರವರು ಶ್ರೀನಿವಾಸ ರವರ ಹೆಂಡತಿ ವೆಂಕಟರತ್ನಮ್ಮ ರವರನ್ನು ಕೈಗಳಿಂದ ಕೆನ್ನೆಗೆ ಹೊಡೆದು ಬೆನ್ನಿಗೆ ಗುದ್ದಿ ಮೂಗೇಟುಗಳನ್ನುಂಟುಮಾಡಿದ್ದು, ಗಲಾಟೆಯನ್ನು ಬಿಡಿಸಲು ಬಂದ ರಾಮಕ್ಕ ಮತ್ತು ಗೀತಾ ರವರಿಗೆ ಗೋಪಾಲರೆಡ್ಡಿ ರವರ ಮಕ್ಕಳಾದ ಸವಿತಾ ಮತ್ತು ಸೌಮ್ಯ ರವರು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಬೆನ್ನಿಗೆ ಗುದ್ದಿ ಕಾಲುಗಳಿಂದ ಒದ್ದು, ಮೂಗೇಟುಗಳನ್ನುಂಟುಮಾಡಿ ಎಲ್ಲರೂ ಸೇರಿ ಪ್ರಾಣ ಸಹಿತ ಬಿಡುವುದಿಲ್ಲಾ ಎಂದು ಪ್ರಾಣಬೆದರಿಕೆ ಹಾಕಿದ್ದು, ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹೇಳಿಕೆ ದೂರು.

2) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 256/2018 ಕಲಂ. 427 ರೆ/ವಿ 34 ಐಪಿಸಿ :-

       ದಿನಾಂಕ 28112018 ರಂದು ಮದ್ಯಾಹ್ನ 12-00 ಗಂಟೆಗೆ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯ ವಾಸಿ ಶೋಬಾ ಎಂ ಕೋಂ ರಾಮಪ್ಪಆರೋಗ್ಯ ನಿರೀಕ್ಷಕರು, ನಗರ ಸಬೆ ಚಿಂತಾಮಣಿ  ರವರು ನೀಡಿದ ದೂರಿನ ಸಾರಾಂಶವೇನೆಂದರೆ,  ನಾನು ಇದೇ ಚಿಂತಾಮಣಿ ನಗರದ ನಗರಸಭೆ ಕಾರ್ಯಾಲಯದಲ್ಲಿ ಸುಮಾರು 8 ತಿಂಗಳಿನಿಂದ ನಗರ ಆರೋಗ್ಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ, ಅಂದಿನಿಂದಲು ನಾನು ಟ್ಯಾಂಕ್ ಬಂಡ್ ರಸ್ತೆ ಪಶ್ಚಿಮ ಬಡಾವಣೆಯ ಕೌನ್ಸಿಲರ್ ಭಾಸ್ಕರ್ ರವರ ಮನೆಯ ಬೀದಿಯಲ್ಲಿರುವ ಕೃಷ್ಣಾರೆಡ್ಡಿ ರವರ ಬಾಬತ್ತು ಮನೆಯಲ್ಲಿ ಬಾಡಿಗೆಗೆ ಕುಟುಂಬ ಸಮೇತ ವಾಸವಾಗಿರುತ್ತೇನೆ, ಸದರಿ ಮನೆಯ ಮುಂದೆ ಕಾಂಪೌಂಡ್ ಒಳಗೆ ನನ್ನ ಬಾಬತ್ತು ಕೆ.ಎ-09 ಪಿ 3103 ಸಂಖ್ಯೆ ಮಾರುತಿ ಸುಜುಕಿ ವ್ಯಾಗನರ್ ಕಾರನ್ನು ನಿಲ್ಲಿಸಿರುತ್ತೇನೆ, ದಿನಾಂಕ: 28/11/2018 ರಂದು ಬೆಳಿಗ್ಗೆ ಸುಮಾರು 10-45 ಗಂಟೆ ಸಮಯದಲ್ಲಿ  ನಾನು ಕಛೇರಿಯಲ್ಲಿದ್ದಾಗ ನಮ್ಮ ಅತ್ತೆ ಪದ್ಮಾವತಿ ರವರು ನನ್ನ ಮೊಬೈಲ್ ನಂಬರ್ ಗೆ ಕರೆ ಮಾಡಿ ನಮ್ಮ ಮನೆಯ ಮುಂದೆ ಕಾಂಪೌಂಡ್ ಒಳಗೆ ನಿಲ್ಲಿಸಿರುವ ಕೆ.ಎ-09 ಪಿ 3103 ಸಂಖ್ಯೆ ಮಾರುತಿ ಸುಜುಕಿ ವ್ಯಾಗನರ್ ಕಾರಿಗೆ ಯಾರೋ ಇಬ್ಬರು ಕಿಡಿಗೇಡಿಗಳು ದ್ವಿಚಕ್ರವಾಹನದಲ್ಲಿಬಂದು ಕಾರಿನ ಹಿಂಭಾಗದ ಗ್ಲಾಸಿಗೆ ಕಲ್ಲಿನಿಂದ ಹೊಡೆದು ಅಲ್ಲಿಂದ ಪರಾರಿಯಾಗಿರುತ್ತಾರೆಂದು ವಿಷಯ ತಿಳಿಸಿದ್ದು ಕೂಡಲೇ ನಾನು ಮನೆಯ ಹತ್ತಿರ ಹೋಗಿ ನೋಡಿರುತ್ತೇನೆ, ವಿಷಯ ನಿಜವಾಗಿದ್ದು ಯಾರೋ ಕಿಡಿಗೇಡಿಗಳು ಕಾರಿನ ಹಿಂಭಾಗದ ಗ್ಲಾಸಿಗೆ ಕಲ್ಲಿನಿಂದ ಹೊಡೆದಿದ್ದು ಹಿಂಭಾಗದ ಗ್ಲಾಸ್ ಜಖಂಗೊಂಡು ದೊಡ್ಡ ಸೈಜಿನ ಕಲ್ಲು ಕಾರಿನ ಒಳಗೆ ಸೀಟಿನ ಮೇಲೆ ಬಿದ್ದಿರುತ್ತೆ, ಇದರಿಂದ ನನಗೆ 10,000/- ರೂ ನಷ್ಟವಾಗಿರುತ್ತೆ. ಆದ್ದರಿಂದ ಮೇಲ್ಕಂಡ ನಮ್ಮ ಬಾಬತ್ತು ಕಾರಿನ ಗ್ಲಾಸನ್ನು ಹೊಡೆದು ಜಖಂ ಗೊಳಿಸಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕ್ರಮ  ಜರುಗಿಸಲು ಕೋರಿ ದೂರು.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 257/2018 ಕಲಂ. 279,304(ಎ) ಐಪಿಸಿ :-

       ದಿ: 28-11-2018 ರಂದು ಬೆಳಗ್ಗೆ 11:00 ಗಂಟೆಗೆ ಪಿರ್ಯಾಧಿದಾರರಾದ ಕೃಷ್ಣಮೂರ್ತಿ ಬಿನ್ ಲೇಟ್ ಗಂಗಾಧರಪ್ಪ, ವಯಸ್ಸು 40 ವರ್ಷ, ಕುರುಬ ಜನಾಂಗ, ಜಿರಾಯ್ತಿ, ಹುದೂತಿ ಗ್ರಾಮ,  ಕಸಬಾ ಹೋಬಳಿ, ಗೌರೀಬಿದನೂರು ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ – ಪಿರ್ಯಾಧಿಯ ತಾಯಿ ಪುಟ್ಟಮ್ಮ ರವರಿಗೆ ಕ್ಯಾನ್ಸರ್ ಖಾಯಿಲೆ ಇದ್ದು ಗೌರೀಬಿದನೂರಿನಲ್ಲಿ ಚಿಕಿತ್ಸೆ ಪಡೆಯತ್ತಿದ್ದು, ಈ ದಿನ ದಿ: 28-11-2018 ರಂದು ಪಿರ್ಯಾಧಿಯು ತಮ್ಮ ಹೆಂಡತಿಯೊಂದಿಗೆ ಕೆಲಸಕ್ಕೆ ಹೋಗಿದ್ದಾಗ, ಪುಟ್ಟಮ್ಮ ರವರು ಗೌರೀಬಿದನೂರಿನಲ್ಲಿ ಚಿಕಿತ್ಸೆ ಪಡೆಯಲು ಪಿರ್ಯಾಧಿಯ ಭಾವಮೈದನಾದ ಹೆಚ್.ನಾಗಸಂದ್ರ ಗ್ರಾಮದ ಧರ್ಮಯ್ಯ ಬಿನ್ ಹನುಮಂತಪ್ಪ ರವರ ಟಿ.ವಿ.ಎಸ್ ಸೂಪರ್ ಎಕ್ಸ್ ಎಲ್ ಸಂಖ್ಯೆ: KA-40-U-4490 ದ್ವಿಚಕ್ರ ವಾಹನದಲ್ಲಿ ಹಿಂದುಗಡೆ ಕುಳಿತುಕೊಂಡು ಬರುತ್ತಿರುವಾಗ, ಬೆಳಗ್ಗೆ 10:00 ಗಂಟೆಯ ಸಮಯದಲ್ಲಿ ಹುದೂತಿ ಗ್ರಾಮದ ಈಡಿಗರ ಗೋಪಾಲಪ್ಪ ರವರ ಮನೆಯ ಮುಂದೆ ರಸ್ತೆಯಲ್ಲಿ ಬರುವಾಗ ಪುಟ್ಟಮ್ಮ ರವರಿಗೆ ತಲೆ ಸುತ್ತಿದಂತಾಗಿ ವಾಹನವನ್ನು ನಿಲ್ಲಿಸುವಂತೆ ಧರ್ಮಯ್ಯನಿಗೆ ಹೇಳಿದ್ದು, ಧರ್ಮಯ್ಯ ವಾಹನವನ್ನು ವೇಗವಾಗಿ ಚಾಲನೆ ಮಾಡುತ್ತಿದ್ದು, ಅದನ್ನು ನಿಲ್ಲಿಸುವಷ್ಟರಲ್ಲಿ ಪುಟ್ಟಮ್ಮ ದ್ವಿಚಕ್ರ ವಾಹನದಿಂದ ಅಂಗಾತವಾಗಿ ಕೆಳಕ್ಕೆ ಬಿದ್ದು ಹೋಗಿದ್ದು, ಧರ್ಮಯ್ಯ ವಾಹನ ನಿಲ್ಲಿಸಿ ಬಂದು ನೋಡಿದಾಗ ಪುಟ್ಟಮ್ಮಳಿಗೆ ಮೂಗಿನಲ್ಲಿ ರಕ್ತಬರುತ್ತಿದ್ದು, ಕೂಡಲೇ ಯಾವುದೋ ಆಟೋದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕಡೆದುಕೊಂಡು ಬಂದು ತೋರಿಸಿದಾಗ, ಪುಟ್ಟಮ್ಮ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.  ಧರ್ಮಯ್ಯ ರವರು ದ್ವಿಚಕ್ರ ವಾಹನವನ್ನು ವೇಗವಾಗಿ ಓಡಿಸಿದ್ದರಿಂದ  ಈ ಅಪಘಾತವಾಗಿರುತ್ತದೆ.  ಮೃತದೇಹವು ಆಸ್ಪತ್ರೆಯ ಶವಾಗಾರದಲ್ಲಿದ್ದು, ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಸಲಿ ದೂರನ್ನು ಲಗತ್ತಿಸಿಕೊಂಡಿರುತ್ತೆ.

4) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 258/20185 ಕಲಂ. 279,304(ಎ) ಐಪಿಸಿ :-

       ದಿ: 28-11-2018 ರಂದು ಸಂಜೆ 4:45 ಗಂಟೆಗೆ ಪಿರ್ಯಾಧಿದಾರರಾದ ಹನುಮಕ್ಕ ಕೋಂ ಸುಬ್ಬರಾಯಪ್ಪ, 32 ವರ್ಷ, ಗೊಲ್ಲರ ಜನಾಂಗ, ಮುದುಗೆರೆ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ – ಪಿರ್ಯಾಧಿಯ ತಾಯಿ ಸುಂಕಮ್ಮ ರವರು ಬಳೆ, ಹರಿಶಿನ-ಕುಂಕುಮ ವ್ಯಾಪಾರ ಮಾಡುತ್ತಿದ್ದು, ಪ್ರತಿದಿನ ಬೆಳಗ್ಗೆ ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು.  ಈ ದಿನ ಬೆಳಗ್ಗೆ :28-11-2018 ರಂದು ಬೆಳಗ್ಗೆ 7:00 ಗಂಟೆಗೆ ವ್ಯಾಪಾರಕ್ಕೆಂದು ಹೋಗಿದ್ದು, ಮದ್ಯಾಹ್ನ 3:30 ಗಂಟೆಯಲ್ಲಿ ಮುದುಗೆರೆ ಗ್ರಾಮದ ಲಕ್ಷ್ಮೀಪತಿ ರವರು ಸುಂಕಮ್ಮಳಿಗೆ ಮುದುಗೆರೆ ಗ್ರಾಮದ ಬಸ್ ನಿಲ್ದಾಣದ ಬಳಿ ಅಪಘಾತವಾಗಿರುವುದಾಗಿ ತಿಳಿಸಿದ್ದು, ಪಿರ್ಯಾಧಿಯು ಬಂದು ನೋಡಲಾಗಿ ಸುಂಕಮ್ಮರವರ ತಲೆಗೆ ತೀರ್ವಸ್ವರೂಪದ ಗಾಯವಾಗಿ ಮೃತಪಟ್ಟಿದ್ದು, ವಿಚಾರಿಸಿದಾಗ, ಮದ್ಯಾಹ್ನ 3:30 ಗಂಟೆಯಲ್ಲಿ ಸುಂಕಮ್ಮ ರವರು ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದಾಗ, ಗೌರೀಬಿದನೂರು ಕಡೆಯಿಂದ ಬಂದ AP-02-W-7659 ಮಾರುತಿ ಕೃಪ ಬಸ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬಸ್ಸನ್ನು ಚಾಲನೆ ಮಾಡಿಕೊಂಡು ಬಂದು ಸುಂಕಮ್ಮರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಸುಂಕಮ್ಮರವರ ತಲೆಗೆ ತೀರ್ವಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿರುತ್ತದೆ.  ಮೃತದೇಹವನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದು, ಅಪಘಾತವನ್ನುಂಟು ಮಾಡಿರುವ AP-02-W-7659 ಬಸ್ ಚಾಲಕನ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ, ಅಪಘಾತಕ್ಕೆ ಕಾರಣನಾದ ಈತನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.