ದಿನಾಂಕ : 28/11/2018ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 327/2018 ಕಲಂ. 406,419,420,423 ಐಪಿಸಿ :-

     ದಿನಾಂಕ:27/11/2018 ರಂದು ನ್ಯಾಯಾಲಯ ಹೆಚ್.ಸಿ.223 ಶ್ರೀ ವಿಶ್ವನಾಥ ರವರು ತಮದು ಹಾಜರುಪಡಿಸಿದ ಸಾದರ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರು ದಿನಾಂಕ:13/04/1959 ರಂದು ಹೊನ್ನಂಪಲ್ಲಿ ಗ್ರಾಮದ ನಂಜಾರೆಡ್ಡಿ ಬಿನ್ ಕೊತ್ತೋಳ್ಳು ಕೊಂಡಾರೆಡ್ಡಿ ಎಂಬುವರಿಂದ ಸರ್ವೆ ನಂ 63 ರಲ್ಲಿ 3-08 ಗುಂಟೆ ಜಮೀನು ತಮ್ಮ ತಂದೆಯಾದ ಲೇಟ್ ಗಂಗಪ್ಪ @ ನಕ್ಕಲ ಗಂಗಪ್ಪ ಮತ್ತು ಚಿಕ್ಕಪ್ಪರವರಾದ ನರಸಿಂಹಪ್ಪ ರವರಿಗೆ ಜಮೀನು ಕ್ರಯ ಮಾಡಿಕೊಟ್ಟಿರುತ್ತಾರೆ. ಸದರಿಯವರು 1959 ರಿಂದ ಸ್ವಾಧಿನನುಭವದಲ್ಲಿದ್ದು, ಸದರಿ ಜಮೀನನ್ನು ದಿನಾಂಕ:05/08/2017 ರಂದು ಆರೋಪಿಗಳು 1 ರಿಂದ 11 ರವರೆಗೆ ಲೇಟ್ ನಂಜುಂಡಪ್ಪ ರವರ ವಾರಸುದಾರರು ನಾವೇ ಎಂದು ಸುಳ್ಳು ಹೇಳಿ ಸುಳ್ಳು ವಿಳಾಸ ಕೊಟ್ಟು ಒಬ್ಬರು ಇನ್ನೊಬ್ಬರಂತೆ ಹೇಳಿ ಆರೋಪಿ 12 ರವರಿಗೆ ಸುಳ್ಳು ಮಾಹಿತಿ ಕೊಟ್ಟು ಪಿರ್ಯಾದಿದಾರರ ಕುಟುಂಬಕ್ಕೆ ಮೋಸ ಮಾಡಿ ಹಾಗೂ ವಂಚನೆ ಮಾಡಿ ಆರೋಪಿ 12 ರವರಿಗೆ ಮಾರಾಟ ಮಾಡಿರುತ್ತಾರೆ ಹಾಗೂ ಆರೋಪಿ 14 ಮತ್ತು 15 ರವರು ಸಾಕ್ಷಿದಾರರಾಗಿದ್ದು,  ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ಸಾದರ ದೂರು

2) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 328/2018 ಕಲಂ.279,337,304(ಎ) ಐಪಿಸಿ :-

     ದಿನಾಂಕ:28/11/2018 ರಂದು ಪಿರ್ಯಾದಿದಾರರಾದ ಶ್ರೀಮತಿ ವಸುಂದರ ಕೊಂ ಪಿ.ನರಹರಿರಾವ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಯಜಮಾನರಾದ ಪಿ. ನರಹರಿ ಬಿನ್ ಲೇಟ್ ಪದ್ಮನಾಭರಾವ್, 57ವರ್ಷ, ರವರು ಗುಡಿಬಂಡೆಯ ಬಿ.ಇ.ಒ. ಕಛೇರಿಯಲ್ಲಿ ಕಛೇರಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿ ದಿನ ಬಾಗೇಪಲ್ಲಿಯಿಂದ ಗುಡಿಬಂಡೆಗೆ ಹೋಗಿ ಬರುತ್ತಿದ್ದು, ಅದರಂತೆ ಈ ದಿನ  ದಿನಾಂಕ:28.11.2018 ರಂದು ಬೆಳಿಗ್ಗೆ ಸುಮಾರು 9-30 ಗಂಟೆಗೆ  ನಮ್ಮ ಯಜಮಾನರ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುವ ರಘು ಹೆಚ್.ಎನ್. ಬಿನ್ ಲೇಟ್ ನರಸಿಂಹಯ್ಯ, 42ವರ್ಷ, ಹೊಸಹುಡ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು    ರವರ ಜೊತೆಯಲ್ಲಿ ಅವರ ಬಾಬತ್ತು, ಕೆಎ-51, ಎಲ್-1157 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ  ಬಾಗೇಪಲ್ಲಿಯಿಂದ  ಗುಡಿಬಂಡೆ ತಾಲ್ಲೂಕು ಸೋಮೇನಹಳ್ಳಿ ಶಾಲೆಗೆ ಪರಿಶೀಲನೆಗಾಗಿ  ಹೋಗುವುದಕ್ಕಾಗಿ  ದ್ವಿಚಕ್ರ ವಾಹನವನ್ನು  ರಘು  ರವರು ಚಾಲನೆ ಮಾಡಿಕೊಂಡು ನಮ್ಮ ಯಜಮಾನರನ್ನು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕೂರಿಸಿಕೊಂಡು ಬಾಗೇಪಲ್ಲಿ ತಾಲ್ಲೂಕು ಎನ್.ಹೆಚ್-07 ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯ ಮುಂಭಾಗ  ಬೆಳಿಗ್ಗೆ ಸುಮಾರು 10-00 ಸಮಯದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ Wrong Route ನಲ್ಲಿ ಬಂದಂತಹ ನೊಂದಣಿ ಸಂಖ್ಯೆ ಕೆಎ-40, ಟಿಎ-5425 ಇಂಜಿನ್ ಮತ್ತು ಕೆಎ-40, ಟಿ-6965 ಟ್ರಾಲಿಯ ಟ್ರಾಕ್ಟರ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಘು ಹೆಚ್.ಎನ್ ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿದ ಪರಿಣಾಮ ರಘು ಮತ್ತು ನಮ್ಮ ಯಜಮಾನರು ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು, ಸದರಿ ಟ್ರಾಕ್ಟರ್ನ ಚಕ್ರ ನಮ್ಮ ಯಜಮಾನರ ಎದೆಯ ಮೇಲೆ ಹತ್ತಿದ್ದರ ಪರಿಣಾಮ ತೀವ್ರ ಸ್ವರೂಪದ ರಕ್ತ ಗಾಯಗಳಾಗಿದ್ದು, ರಘು ರವರಿಗೆ ಬಲಗೈಗೆ, ಹಣೆಗೆ ಮತ್ತು ಬಲಕಾಲಿಗೆ ರಕ್ತಗಾಯಗಳಾಗಿದ್ದು. ಸ್ಥಳದಲಿದ್ದ್ಲ ಬಾಗೇಪಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯವರು  ಉಪಚರಿಸಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮದ್ಯದಲ್ಲಿ ನಮ್ಮ ಯಜಮಾನರು ಮೃತಪಟ್ಟಿದ್ದು, ರಘು ಹೆಚ್.ಎನ್ ರವರಿಗೆ  ಬಾಗೇಪಲ್ಲಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಬಗ್ಗೆ ವಿಚಾರವನ್ನು  ನಮ್ಮ ಸಂಬಂಧಿಕರಾದ  ನಾಗರಾಜ್ ರಾವ್.ಪಿ.ಎಲ್ ಬಿನ್ ಲೇಟ್ ಎಸ್.ಸಿ.ಲಕ್ಷ್ಮೀನರಸಪ್ಪ ರವರು ನನಗೆ ಫೋನ್ ಮಾಡಿ ತಿಳಿಸಿದ್ದು ನಾನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ  ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ನಮ್ಮ ಯಜಮಾನರ ಮೃತ ದೇಹವು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿದ್ದು, ಈ ಅಪಘಾತಕ್ಕೆ ಕಾರಣನಾದ ನೊಂದಣಿ ಸಂಖ್ಯೆ ಕೆಎ-40, ಟಿಎ-5425 ಇಂಜಿನ್ ಮತ್ತು ಕೆಎ-40, ಟಿ-6965 ಟ್ರಾಲಿಯ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

3) ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 146/2018 ಕಲಂ. 143,147,148,323,324,504,506 ರೆ/ವಿ 149 ಐಪಿಸಿ :-

     ದಿನಾಂಕ 28/11/2018 ರಂದು ಗಾಯಾಳು ಗೋಪಾಲರೆಡ್ಡಿ ಬಿನ್ ಲೇಟ್ ನಾರೆಪ್ಪ, ನಿಮ್ಮಕಾಯಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿ ಹೇಳಿಕೆಯ ಸಾರಾಂಶವೇನೆಂದರೇ, ತನಗೆ ಮೂವರು ಹೆಣ್ಣು ಮಕ್ಕಳಿದ್ದು ಇಬ್ಬರಿಗೆ ಮದುವೆಯಾಗಿದ್ದು ಮೂರನೆ ಮಗಳಾದ ಸೌಮ್ಯ ರವರೊಂದಿಗೆ ಗ್ರಾಮದಲ್ಲಿ ವಾಸವಾಗಿರುತ್ತೇನೆ. ನಾನು ಮತ್ತು ನಮ್ಮ ಅಣ್ಣ ಕೃಷ್ಣಾರೆಡ್ಡಿ ಯವರು ಅವಿಭಕ್ತ ಕುಟುಂಬದಲ್ಲಿದ್ದಾಗ ಮುದ್ದಲಹಳ್ಳಿ ಗ್ರಾಮದ ಶಿವಾರೆಡ್ಡಿ ರವರಿಂದ 30 ಗುಂಟೆ ಜಮೀನನ್ನು ಖರೀದಿ ಮಾಡಿದ್ದು 20 ವರ್ಷಗಳ ಹಿಂದೆ ಆ ಜಮೀನನ್ನು ನಾವು ಅಣ್ಣ ತಮ್ಮಂದಿರು ವಿಭಾಗಗಳು ಮಾಡಿಕೊಂಡಿರುತ್ತೇವೆ. ನನ್ನ ಭಾಗಕ್ಕೆ ಬಂದಿರುವ 15 ಗುಂಟೆ ಜಮೀನನ್ನು ಮಾರಿಕೊಳ್ಳಲು ತೀರ್ಮಾನಿಸಿದ್ದು ಸುಮಾರು ಒಂದು ವಾರದಿಂದ ವ್ಯಾಪರಸ್ಥರಿಗೆ ನೋಡಿಸಿರುತ್ತೇನೆ. ಈಗಿರುವಲ್ಲಿ ದಿನಾಂಕ 28/11/2018 ರಂದು ಬೆಳಗ್ಗೆ 06-00 ಗಂಟೆಯ ಸಮಯದಲ್ಲಿ ನಮ್ಮ ಅಣ್ಣನ ಅಳಿಯ ಶ್ರೀನಿವಾಸ, ನಮ್ಮ ಅಣ್ಣನ ಮಗ ನಾರಾಯಣಸ್ವಾಮಿ, ನಮ್ಮ ಅಣ್ಣ ಕೃಷ್ಣಾರೆಡ್ಡಿ, ಅವರ ಹೆಂಡತಿಯಾದ ರಾಮಕ್ಕ, ನಮ್ಮ ಅಣ್ಣನ ಮಕ್ಕಳಾದ ವೆಂಕಟರತ್ನ ಮತ್ತು ಗೀತಾ, ನಮ್ಮ ಚಿಕ್ಕಪ್ಪನ ಮಗಳಾದ ಲಕ್ಷ್ಮಿದೇವಮ್ಮ ಕೋಂ ವೇಣುಗೋಪಾಲ ರವರು ಗುಂಪಿ ಕಟ್ಟಿಕೊಂಡು ನಮ್ಮ ಮನೆಯ ಬಳಿ ಬಂದು ನನ್ನನ್ನು ಉದ್ದೇಶಿಸಿ ನೀನ್ಯಾರೋ ಜಮೀನು ನಿನಗೇನು ಸಂಬಂದ ಇದೆ ಎಂದು ಬೈಯುತ್ತಿದ್ದಾಗ ನಾನು ಹೊರಗೆ ಬಂದು ಏಕೆ ನನ್ನನ್ನು ಬೈಯುತ್ತಿರುವುದು ಎಂದು ಕೇಳಿದಾಗ ಶ್ರೀನಿವಾಸ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಎಡಭುಜಕ್ಕೆ, ನಾರಾಯಣಸ್ವಾಮಿ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಎಡಕಾಲಿನ ಮೊಣಕಾಲಿಗೆ ಹೊಡೆದು ಮೂಗೇಟುಗಳನ್ನು ಉಂಟು ಮಾಡಿದರು.ಕೃಷ್ಣಾರೆಡ್ಡಿ ಕೈಯಿಂದ ನನ್ನ ಮುಖಕ್ಕೆ ಗುದ್ದಿ, ಕಾಲಿನಿಂದ ಹೊಟ್ಟೆಗೆ ಒದ್ದು ಮೂಗೇಟು ಉಂಟು ಮಾಡಿದರು ನಂತರ ನನ್ನ ಮಗಳಾದ ಸೌಮ್ಯ ರವರು ಅಡ್ಡಬಂದಾಗ ಶ್ರೀನಿವಾಸ್ ರವರು ಕನ್ನೆಗೆ ಹೊಡೆದಿರುತ್ತಾರೆ. ನಂತರ ನಮ್ಮ ಅಣ್ಣನ ಹೆಂಡತಿಯಾದ ರಾಮಕ್ಕ, ನಮ್ಮ ಅಣ್ಣನ ಮಕ್ಕಳಾದ ವೆಂಕಟರತ್ನ ಮತ್ತು ಗೀತಾ, ನಮ್ಮ ಚಿಕ್ಕಪ್ಪನ ಮಗಳಾದ ಲಕ್ಷ್ಮಿದೇವಮ್ಮ ಕೋಂ ವೇಣುಗೋಪಾಲ ರವರು ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಅಷ್ಟರಲ್ಲಿ ಕಾಂತಮ್ಮ, ಅಶ್ವತಮ್ಮ ರವರು ಅಡ್ಡ ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ನೋವು ಜಾಸ್ತಿಯಾದ್ದರಿಂದ ಚಿಕಿತ್ಸೆಗಾಗಿ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಮೇಲ್ಕಂಡವರ ಮೇಲೆ ಕಾನೂ ಕ್ರಮ ಜರುಗಿಸಲು ಕೋರಿ.

4) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 273/2018 ಕಲಂ. 379 ಐಪಿಸಿ :-

     ದಿನಾಂಕ 27/11/2018 ರಂದು ಸಂಜೆ 04.30 ಗಂಟೆಗೆ ಪಿರ್ಯಾದಿದಾರರಾದ ಡಾ ಪ್ರಕಾಶ್ ಎಂ ಅಂಕಿತಾಧಿಕಾರಿಗಳು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿರಿಗಳ ಕಛೇರಿಯಲ್ಲಿ, 1) ಚಿಂತನ ಮಿಲ್ಕ್ ಅಂಡ್ ಐಸ್ ಪಾರ್ಲರ್, ಶ್ರೀನಿವಾಸ ಬಿನ್ ವೆಂಕಟರವಣಪ್ಪ, ರೈಲ್ವೆ ಸ್ಟೇಷನ್ ರಸ್ತೆ, ಹಳೇ ಎಸ್ ಬಿ ಎಂ ಬಿಲ್ಡಿಂಗ್, ಗೌರಿಬಿದನೂರು ಪಟ್ಟಣ 2) ರಾಮ್ ದೇವ್ ಸೂಪರ್ ಮಾರ್ಕೇಟ್, ಮಂಚೇನಹಳ್ಳಿ, ಗೌರಿಬಿದನೂರು ತಾಲ್ಲೂಕು 3) ಶ್ರೀ ಗೌತಮಿ ಇಂಡಸ್ಟ್ರೀಸ್, ನಂ- 590 ಗಂಗಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು, ರವರುಗಳು ಪರವಾನಗಿ ಕೋರಿ ಅರ್ಜಿಯನ್ನು ಸಲ್ಲಿಸಿಕೊಂಡಿದ್ದರು, ಸದರಿ 3 ಅರ್ಜಿಗಳನ್ನು ತಾವು ತಮ್ಮ ಕಛೇರಿಯ ಕಡತದಲ್ಲಿ ಅಳವಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಕಛೇರಿಯಲ್ಲಿಟ್ಟು ಕೊಂಡಿದ್ದೆವು, ದಿನಾಂಕ 14/11/2018 ರಂದು ಬೆಳಿಗ್ಗೆ ಸುಮಾರು 11 ಗಂಟೆಯಲ್ಲಿ ಕಛೇರಿಯ ಸಿಬ್ಬಂದಿಯವರು ಕಛೇರಿ ಕರ್ತವ್ಯದಲ್ಲಿ ನಿರತರಾಗಿದ್ದಾಗ ಮೇಲ್ಕಂಡ ಪರವಾನಗಿಗಳನ್ನು ನಿರ್ವಹಿಸುತ್ತಿದ್ದ ಕಡತವು ನಾಪತ್ತೆಯಾಗಿರುತ್ತದೆ ಈ ಬಗ್ಗೆ ಕಛೇರಿಯಲ್ಲಿ ಹುಡುಕಿಸಲಾಗಿ ಸಿಕ್ಕಿರುವುದಿಲ್ಲ, ನಂತರ ಕಛೇರಿಯ ಆವರಣದಲ್ಲಿ ಅಳವಡಿಸಿದ್ದ ಸಿ ಸಿ ಕ್ಯಾಮರಾ ಪೊಟೋಗಳನ್ನು ಪರಿಶೀಲಿಸಲಾಗಿ ಒಬ್ಬ ಆಸಾಮಿಯು ಕಛೇರಿಗೆ 2-3 ಬಾರಿ ಭೇಟಿ ನೀಡಿ ಕಛೇರಿಯಲ್ಲಿರುವ ಸಿಬ್ಬಂದಿಯವರು ಅವರ ಕರ್ತವ್ಯಗಳಲ್ಲಿ ಮಗ್ನರಾಗಿರುವುದನ್ನು ಗಮನಿಸಿ ಕಛೇರಿಯ ಟೇಬಲ್ ಮೇಲೆ ಇಟ್ಟದ್ದ ಕಡತವನ್ನು ಕಳ್ಳತನದಿಂದ ತೆಗೆದುಕೊಂಡು ಹೋಗಿರುವುದು ಕಂಡು ಬಂದಿರುತ್ತೆ, ಈ ವಿಚಾರವನ್ನು ತಾನು ಮೇಲಾಧಿಕಾರಿಗಳಿಗೆ ತಿಳಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು ,ಈ ಮೇಲ್ಕಂಡಂತೆ ಕಡತವನ್ನು ಕಳ್ಳತನ ಮಾಡಿರುವ ಆಸಾಮಿಯನ್ನು ಪತ್ತೆ ಮಾಡಿ ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ.ವರದಿ.

5) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 274/2018 ಕಲಂ. 279,337,338,304(ಎ) ಐಪಿಸಿ ಮತ್ತು ಕಲಂ. 134 ಐಎಂವಿ ಆಕ್ಟ್:-

     ದಿನಾಂಕ 27/11/2018 ರಂದು ಸಂಜೆ 04.35 ಗಂಟೆಗೆ ಪಿರ್ಯಾದಿದಾರರಾದ ಪೈಯಾಜ್ ಖಾನ್ ಪಿ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಮ್ಮ ಸಂಬಂದಿಕರಾದ ಕದರಿ ವಾಸಿ ಪಠಾಣ್ ಅಬ್ದುಲ್ ರಪೀಕ್ ಖಾನ್ ಬಿನ್ ಲೇಟ್ ಪಠಾಣ್ ದಸ್ತಗಿರಿ ಖಾನ್ ರವರಿಗೆ ಚಿಕ್ಕಬಳ್ಳಾಫುರ ಬಳಿ  ಅಪಘಾತವಾಗಿ ಮೃತಪಟ್ಟಿರುವ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಮಾಹಿತಿ ತಿಳಿದು ತಾನು ಚಿಕ್ಕಬಳ್ಳಾಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಬಂದು ನೋಡಲಾಗಿ ಪಠಾಣ್ ಅಬ್ದುಲ್ ರಪೀಕ್ ಖಾನ್ ರವರ ಮೃತಪಟ್ಟಿರುತ್ತಾರೆ, ಪಠಾಣ್ ಅಬ್ದುಲ್ ರಪೀಕ್ ಖಾನ್ ರವರು  ಕದರಿಗೆ ಹೋಗಿ ಬರಲು  ತನ್ನ ಸ್ನೇಹಿತನಾದ ವಿ,ಲಕ್ಷ್ಮಣ್ ರವರೊಂದಿಗೆ ಅವರ ಬಾಬತ್ತು ಕೆಎ-02 ಹೆಚ್ ಝಡ್-8070 ಹೊಂಡಾ ಯೂನಿಖಾನ್ ದ್ವಿ-ಚಕ್ರವಾಹನದಲ್ಲಿ  ದಿನಾಂಕ 27/11/2018 ರಂದು ಬೆಳಗ್ಗೆ  ಸುಮಾರು  9;00 ಗಂಟೆಗೆ ಬೆಂಗಳೂರಿನ ಕೆ,ಆರ್ ಪುರಂ ನಿಂದ ಹೊರಟು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-7 ಟಾರು ರಸ್ತೆಯಲ್ಲಿ ಬೆಳಗ್ಗೆ ಸುಮಾರು 11;45 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಫುರ ತಾಲ್ಲೂಕು ಮರಸನಹಳ್ಳಿ ಗ್ರಾಮದ ಸಮೀಪ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದ ಮುಂದೆ ಹೋಗುತ್ತಿದ್ದಾಗ ಅದೇ ವೇಳೆಗೆ ಬೆಂಗಳೂರ ಕಡೆಯಿಂದ ಬಾಗೇಪಲ್ಲಿ ಕಡೆಗೆ ಡಸ್ಟರ್ ಕಾರ್ ನಂ; ಕೆಎ-04-ಎಂ,ಎಲ್-8400 ಅನ್ನು ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ಮುಂದೆ ವಿ,ಲಕ್ಷ್ಮಣ್ ರವರು ಸವಾರಿ ಮಾಡಿಕೊಂಡುಹೋಗುತಿದ್ದ ಕೆಎ-02-ಹೆಚ್,ಝಡ್-8070 ಹೊಂಡಾ ಯೂನಿಖಾನ್, ದ್ವಿ-ಚಕ್ರವಾಹನದ ಹಿಂಬದಿಗೆ ಡಿಕ್ಕಿ ಹೊಡೆಯಿಸಿ ಅಪಘಾತ  ಮಾಡಿದ್ದು, ಈ  ಅಪಘಾತದಿಂದ  ಕಾರು ದೇವಸ್ಥಾನದ ಬಳಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿಸಿ, ಬಸವರಾಜು ರವರ ಮನೆಯ ಮುಂದೆ ಜಮೀನಿನ ಕಡೆಗೆ ಹೋಗುತ್ತಿದ್ದ ಒಬ್ಬ ಹೆಂಗಸಿಗೆ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿ ಟಾರು ರಸ್ತೆಯಲ್ಲಿ  ಕಾರನ್ನು ನಿಲ್ಲಿಸಿ ಕಾರಿನ ಚಾಲಕನು ಪರಾರಿಯಾಗಿರುತ್ತಾನೆ. ಇದರಿಂದ ಕಾರು ಮತ್ತು ದ್ವಿ-ಚಕ್ರವಾಹನ ಜಖಂ ಆಗಿರುತ್ತೆಂದು, ದ್ವಿ-ಚಕ್ರವಾಹನ ಹಿಂಬದಿಯಲ್ಲಿ ಕುಳಿತಿದ್ದ ಪಠಾಣ್ಅಬ್ದುಲ್ ರಪೀಕ್ ರವರಿಗೆ ತಲೆಗೆ ಕೈಕಾಲುಗಳಿಗೆ ಮತ್ತು ಇತರೆ ಕಡೆಗೆ ಬಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ದ್ವಿ-ಚಕ್ರವಾಹನ ಚಾಲನೆ ಮಾಡುತ್ತಿದ್ದ ವಿ,ಲಕ್ಷ್ಮಣ್ ರವರಿಗೆ ತಲೆಗೆ ಎಡಕಾಲಿಗೆ ರಕ್ತಗಾಯವಾಗಿ ಅಪಘಾತದಲ್ಲಿ ಗಾಯಗಳಾಗಿರುವ  ನಾಗಮಣಿ ಕೊಂ ನರಸಿಂಹಮೂರ್ತಿ ಮರಸನಹಳ್ಳಿ ಗ್ರಾಮದ ವಾಸಿಯಾಗಿದ್ದು ಆಕೆಗೆ ಒಂದು ಕಾಲು ತುಂಡಾಗಿ ಪಕ್ಕಕ್ಕೆ ಬಿದ್ದು ಹೋಗಿರುತ್ತೆ, ಮತ್ತೊಂದು ಕಾಲಿಗೆ ಮತ್ತು ಮುಖಕ್ಕೆ ಇತರ ಕಡೆಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಮತ್ತು ಮೃತ ದೇಹವನ್ನು ಅಂಬುಲೆನ್ಸ್ ವಾಹನಗಳಲ್ಲಿ ಚಿಕ್ಕಬಳ್ಳಾಫುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುತ್ತಾರೆ. ಗಾಯಳುಗಳಾದ ನಾಗಮಣಿ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಹೋಗಿರುತ್ತಾರೆ, ಈ ಅಪಘಾತಕ್ಕೆ  ಸದರಿ ಕೆಎ-04,ಎಂ,ಎಲ್ 8400 ಕಾರಿನ ಚಾಲಕನು  ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ  ಮಾಡಿರುವುದೇ ಕಾರಣವಾಗಿರುತ್ತೆ ಅಪಘಾತ ಮಾಡಿದ ಕಾರಿನ ಚಾಲಕನ ಹೆಸರು ವಿಳಾಸ ತಿಳಿದು ಬಂದಿಲ್ಲ ಸದರಿ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

6) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 482/2018 ಕಲಂ. 279 ಐಪಿಸಿ :-

     ದಿನಾಂಕ 27-11-2018 ರಂದು ರಾತ್ರಿ 9-15 ಗಂಟೆಗೆ ಶ್ರೀನಾಥ ಬಿನ್ ಸುಬ್ಬರೆಡ್ಡಿ 29 ವರ್ಷ, ಗೊಲ್ಲರು, ಸಿದ್ದೇಪಲ್ಲಿ ಗ್ರಾಮ ಚಿಂತಾಮಣಿ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಇದೇ ಚಿಂತಾಮಣಿ ನಗರದ ಮಾಳಪಲ್ಲಿ  ವಾಸಿ ಕರ್ನಾಟಕ ಸರ್ಕಾರದ ಮಾಜಿ ಗೃಹ ಸಚಿವರಾದ  ಶ್ರೀ ಚೌಡರೆಡ್ಡಿ ರವರ ಕಾರಿನ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ 26-11-2018 ರಂದು ಸಂಜೆ 6-00 ಗಂಟೆ ಸಮಯದಲ್ಲಿ ತಾನು ಮೇಲ್ಕಂಡ ಚೌಡರೆಡ್ಡಿ ಮತ್ತು ಅವರ ಹೆಂಡತಿಯಾದ ಶಾಂತಮ್ಮ ರವರನ್ನು ಬೆಂಗಳೂರಿಗೆ ಸ್ವಂತ ಕೆಲಸದ ನಿಮಿತ್ತ ಅವರ ಬಾಬತ್ತು ನೊಂದಣಿ ಸಂಖ್ಯೆ ಕೆಎ 52 ಎಂ 2727 ಕಾರಿನಲ್ಲಿ ತಾನು ಚಾಲಕನಾಗಿ ಕರೆದುಕೊಂಡು ಹೋಗಿರುತ್ತೇನೆ. ನಂತರ ಈ ದಿನ ದಿನಾಂಕ 27-11-2018 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಮೇಲ್ಕಂಡ ಕಾರಿನಲ್ಲಿ ನಾವು ಬೆಂಗಳೂರು ಬಿಟ್ಟು ಚಿಂತಾಮಣಿಗೆ ಬರುವ ಸಲುವಾಗಿ ಶಿಡ್ಲಘಟ್ಟ ಮಾರ್ಗವಾಗಿ ಇದೇ ಚಿಂತಾಮಣಿ ತಾಲ್ಲುಕು ತಿನಕಲ್ಲು ಗ್ರಾಮದ ಬಳಿ ರಾತ್ರಿ 8-00 ಗಂಟೆ ಸಮಯದಲ್ಲಿ ಬಂದಾಗ ತಾನು ರಸ್ತೆಯಲ್ಲಿ ರಸ್ತೆ ಹುಬ್ಬು ಇದ್ದರಿಂದ ತನ್ನ ಕಾರನ್ನು ನಿಧಾನ ಮಾಡಿದ್ದು ಆಗ ತಮ್ಮ ಹಿಂಬದಿಯಿಂದ ಬಂದ ಕೆಎ 41 ಜಡ್ 8314 ಐ20 ಕಾರಿನ  ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ನಮ್ಮ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಆಗ ತಮ್ಮ ಕಾರಿನ ಹಿಂಭಾಗದ ಡಿಕ್ಕಿ, ಇಂಡಿಕೇಟರ್, ಬಂಪರ್ ಹಾಗೂ ಇತರೆ ಭಾಗಗಳು ಜಖಂಗೊಂಡಿರುತ್ತವೆ. ಕಾರಿನಲ್ಲಿದ್ದ ನಮಗ್ಯಾರಿಗೂ ಗಾಯಗಳಾಗಿರುವುದಿಲ್ಲ. ಆದ್ದರಿಂದ ತಮ್ಮ ಕಾರಿಗೆ ಡಿಕ್ಕಿ ಹೊಡೆಸಿ ಅಪಘಾತಕ್ಕೆ ಕಾರಣನಾದ  ಮೇಲ್ಕಂಡ  ಕೆಎ 41 ಜಡ್ 8314 ಐ20 ಕಾರಿನ  ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

7) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 237/2018 ಕಲಂ. 323,324,504,506 ರೆ/ವಿ 34 ಐಪಿಸಿ :-

     ದಿನಾಂಕ: 27/11/2018 ರಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ.ಚನ್ನಮ್ಮ ಕೋಂ ನರಸಿಂಹಯ್ಯ, 50ವರ್ಷ, ಗೊಲ್ಲರು, ಗೃಹಿಣಿ, ಅಜ್ಜಕದಿರೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಠಾಣಾ ಸಿ.ಹೆಚ್.ಸಿ-39 ರವರು ಪಡೆದು ಮದ್ಯಾಹ್ನ 3.00 ಗಂಟೆಗೆ ಠಾಣೆಗೆ ಬಂದು ಹಾಜರು ಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 25/11/2018 ರಂದು ತಮ್ಮ ಮನೆಯ ಗೇಟ್ ಮುಂದೆ ತಾವು ಓಡಾಡದ ಹಾಗೆ ಸೌದೆಯನ್ನು ನಮ್ಮ ಪಕ್ಕದ ಮನೆಯವರಾದ ದೇವರಾಜ ಬಿನ್ ಮಲ್ಲಪ್ಪ ರವರು ಹಾಕಿದ್ದು ತಾನು ಸಂಜೆ ಸುಮಾರು 7-00 ಗಂಟೆಯಲ್ಲಿ ತಮ್ಮ ಗೇಟ್ ಬಾಗಿಲ ಬಳಿ ಹಾಕಿದ್ದ ಸೌದೆಯನ್ನು ಎತ್ತಿ ಪಕ್ಕಕ್ಕೆ ಹಾಕುತ್ತಿದ್ದಾಗ ದೇವರಾಜ ಮತ್ತು ಆತನ ಹೆಂಡತಿ ನಾಗವೇಣಿ ರವರು ಬಂದು ಕೆಟ್ಟದಾಗಿ ತನ್ನನ್ನು ಬೈಯ್ಯುತ್ತಾ ಏನೇ ಲೋಪರ್ ಮುಂಡೆ ಸೌದೆಯನ್ನು ಏಕೆ ಎತ್ತಿ ಹಾಕುತ್ತಿದೀಯ ನಮ್ಮ ಜಾಗದಲ್ಲಿ ನಾವು ಹಾಕಿಕೊಂಡರೆ ನಿನಗೇನು ಎಂದು ಬೈದಿರುತ್ತಾರೆ ಆಗ ತಾನು ನಿಮ್ಮ ಜಾಗದಲ್ಲಿ ಹಾಕಿಕೊಳ್ಳಿ ನಮ್ಮ ಮನೆಯ ಗೇಟ್ ಗೆ ಅಡ್ಡ ಹಾಕಿ ನಾವು ಓಡಾಡದ ಹಾಗೆ ಮಾಡಿದೀರಲ್ಲಾ ಎಂದು ಹೇಳಿದ್ದಕ್ಕೆ ಹಳೆಯ ದ್ವೇಷದಿಂದ ದೇವರಾಜ ಯಾವುದೇ ನಿಮ್ಮ ಗೇಟ್ ಎಂದು ಅಲ್ಲಿದ್ದ ಸೌದೆಯಲ್ಲಿ ಒಂದು ದೊಣ್ಣೆಯನ್ನು ತೆಗೆದುಕೊಂಡು ತನ್ನ ಎರಡೂ ಕಾಲಿನ ತೊಡೆಗಳಿಗೆ ಕೈಗಳಿಗೆ ಮತ್ತು ಬೆನ್ನಿಗೆ ಹೊಡೆದು ನೋವುಂಟುಮಾಡಿರುತ್ತಾನೆ ನಂತರ ಅವನ ಹೆಂಡತಿ ನಾಗವೇಣಿ ಕೈಗಳಿಂದ ತನ್ನ ಮೈ ಮೇಲೆಲ್ಲಾ ಗುದ್ದಿ ನೋವುಂಟು ಮಾಡಿರುತ್ತಾಳೆ ನಂತರ ಇಬ್ಬರು ಸೇರಿಕೊಂಡು ನಮ್ಮ ಸೌದೆ ವಿಚಾರಕ್ಕೆ ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನು ಹಾಕಿರುವುದಾಗಿ ನೀಡಿರುವ ಹೇಳಿಕೆಯ ದೂರಾಗಿರುತ್ತೆ.

8) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 268/2018 ಕಲಂ. 379 ಐಪಿಸಿ :-

     ದಿನಾಂಕ:28-11-2018 ರಂದು ಮದ್ಯಾನ್ಹ:2-15 ಗಂಟೆಯಲ್ಲಿ ಪಿರ್ಯಾದಿದಾರರಾದ ಬೀಸಪ್ಪ ಬಿನ್ ಲೇಟ್ ಚಿಕ್ಕಚಿನ್ನಪ್ಪ 55 ವರ್ಷ ಪಟ್ರಾ ಜನಾಂಗ ಜಿರಾಯ್ತಿ ವಾಸ ಯರ್ರಲಕ್ಕೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರು ನೀಡಿದ ದೂರಿನ ಸಾರಂಶವೇನೆಂದರೆ: ತನ್ನ ಬಾಬ್ತು 1) ಕಪ್ಪು ಬಣ್ಣದ 01 ಸೀಮೇ ಹಸು 2) ಬಿಳಿ ಬಣ್ಣದ 01 ನಾಟಿ ಹಸು 3) ಬಿಳಿ ಬಣ್ಣದ 01 ನಾಟಿ ಹಸು 4) ಕಪ್ಪು ಬಣ್ಣದ 01 ಎತ್ತು 5) ಕಪ್ಪು ಮತ್ತು ಬಿಳಿ ಬಣ್ಣದ ಮಿಶ್ರಿತ 01 ಎತ್ತು 6) ಬಿಳಿ ಬಣ್ಣದ 01 ನಾಟಿ ಹೆಣ್ಣು ಕರು 7) ಬಿಳಿ  ಬಣ್ಣದ 01 ನಾಟಿ ಹೆಣ್ಣು ಕರು 8) 01 ಬಿಳಿ ಬಣ್ಣದ ಸೀಮೇ ಗಂಡು ಕರು 9) 01 ಕಪ್ಪು ಬಣ್ಣದ ಸೀಮೇ ಗಂಡು ಕರು   ಇದ್ದು  ತಾನು ಮೇಲ್ಕಂಡ ಹಸುಗಳನ್ನು ಮತ್ತು ಎತ್ತುಗಳನ್ನು ಹಾಗೂ ಕರುಗಳನ್ನು ತಮ್ಮ ಮನೆಯ ಮುಂದಿನ ಹಸುಗಳನ್ನು ಕಟ್ಟುವ ಧನಗಳ ಕೊಟ್ಟಿಗೆಯಲ್ಲಿ  ಕಟ್ಟುತ್ತಿದ್ದು  ಹೀಗಿರುವಾಗ ದಿನಾಂಕ:27-11-2018 ರಂದು ರಾತ್ರಿ ತಾನು ಊಟ ಮಾಡಿ ಮನೆಯ ಹೊರಗಡೆ ಮಲಗಿದ್ದುಕೊಂಡಿದ್ದು ರಾತ್ರಿ 10-00 ಗಂಟೆಯಲ್ಲಿ  ಚಳಿ ಜಾಸ್ತಿಯಾಗಿದ್ದರಿಂದ ತಾನು ಮನೆಯ ಒಳಗಡೆ ಹೋಗಿ ಮಲಗಿಕೊಂಡಿದ್ದು ದಿನಾಂಕ:28-11-2018 ರಂದು ಬೆಳಗಿನ ಜಾವ ಸುಮಾರು 1-00 ಗಂಟೆಯಲ್ಲಿ ತಾನು ಹಸುಗಳನ್ನು ನೋಡಲು ಎದ್ದು ತಮ್ಮ ಮನೆಯ ಬಾಗಿಲನ್ನು ತೆಗೆಯಲು ಹೋದಾಗ ತಮ್ಮ ಮನೆಯ ಬಾಗಿಲನ್ನು ಹೊರಗಡೆಯಿಂದ ಯಾರೋ ಚೀಲಕವನ್ನು  ಹಾಕಿದ್ದು ತಾನು ಬಾಗಿಲನ್ನು  ಜೋರಾಗಿ ಎಳೆದು ಹೊರ  ಹೋಗಿ ನೋಡಲಾಗಿ ಹಸುಗಳ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಲ್ಕಂಡ ತನ್ನ ಬಾಬ್ತು 1) ಕಪ್ಪು ಬಣ್ಣದ 01 ಸೀಮೇ ಹಸು 02) ಬಿಳಿ ಬಣ್ಣದ 01 ನಾಟಿ ಹಸು 03) ಬಿಳಿ ಬಣ್ಣದ 01 ನಾಟಿ ಹಸು 04) ಕಪ್ಪು ಬಣ್ಣದ 01 ಎತ್ತು  05) ಕಪ್ಪು ಮತ್ತು ಬಿಳಿ ಬಣ್ಣದ ಮಿಶ್ರಿತ 01 ಎತ್ತು ನ್ನು ಯಾರೋ ಕಳ್ಳರು ದಿನಾಂಕ:27-11-2018 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ:28-11-2018 ರಂದು ಬೆಳಗಿನ ಜಾವ ಸುಮಾರು 1-00 ಗಂಟೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು ಆದ್ದರಿಂದ ತಾವುಗಳು ಕಳ್ಳತನವಾಗಿರವ ಸುಮಾರು 75000/- ರಿಂದ 80000/- ರೂಪಾಯಿಗಳು ಬೆಲೆ ತನ್ನ ಬಾಬ್ತು ಬಾಳುವ ಮೇಲ್ಕಂಡ ಹಸುಗಳನ್ನು ಮತ್ತು ಎತ್ತುಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರವ ಕಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

9) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 193/2018 ಕಲಂ. 323,324,504,506 ರೆ/ವಿ 34 ಐಪಿಸಿ :-

     ದಿನಾಂಕ 28-11-2018 ರಂದು ಬೆಳಗ್ಗೆ 9-00 ಗಂಟೆಗೆ  ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳು  ಕೆಎಂ ಸುರೇಶ್ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಮ್ಮ ಸಂಭಂದಿಕರಾದ ನಾರಾಯಣಸ್ವಾಮಿ ರವರು  ಈ ಹಿಂದೆ ಸರ್ವೆ ನಂ 4/10 ರಲ್ಲಿನ  3 ಗುಂಟೆ ಜಮೀನಿನಲ್ಲಿ  ಮನೆಯ ಕಾಂಪೌಂಡನ್ನು ಕಟ್ಟಿದ್ದು  ದಿನಾಂಕ 25-11-2018 ರಂದು ರಾತ್ರಿ 9-50 ಗಂಟೆ ಸಮಯದಲ್ಲಿ  1)ನಾರಾಯಣಸ್ವಾಮಿ 2) ಪುಷ್ಪಮ್ಮ 3) ವರುಣ್ 4) ಮನೋಜ್ ಎಂಬುವರು ನಮಗೆ ಸೇರಿದ  ಜಾಗದಲ್ಲಿ ನಿರ್ಮಿಸಿದ್ದ ಕಾಂಪೌಂಡಿಗೆ  ಕಬ್ಬಿಣದ ಶೀಟುಗಳನ್ನು  ಹಾಕುತ್ತಿದ್ದಾಗ ಅದನ್ನು ಗಮನಿಸಿದ ನಾನು  ಏಕೆ ನಮ್ಮ ಜಮೀನಿನಲ್ಲಿ ಕಬ್ಬಿಣದ  ಶೀಟುಗಳನ್ನು ಹಾಕುತ್ತಿರುವುದು ಎಂದು ಕೇಳಿದ್ದಕ್ಕೆ  ಮೇಲ್ಕಂಡ ಎಲ್ಲರೂ  ಅವಾಚ್ಯ ಶಬ್ದಗಳಿಂದ ಬೈದು  ಆಪೈಕಿ ನಾರಾಯಣಸ್ವಾಮಿ ರವರು  ಮಚ್ಚಿನಿಂದ ನನ್ನನ್ನು ಹೊಡೆದಿದ್ದು  ಕಿವಿಯ ಬಳಿ ಹೊಡೆದಿದ್ದು  ಆ ಸಮಯದಲ್ಲಿ ನಾನು ಪಕ್ಕಕ್ಕೆ ತಳ್ಳಿದ್ದು  ವರುಣ್ ಎಂಬುವನು ಕಬ್ಬಿಣದ ರಾಡಿನಿಂದ ನನ್ನ ಬಲಕಿವಿಯ ಪಕ್ಕಕ್ಕೆ ಹೊಡೆದು ಗಾಯಗೊಳಿದಿ ಅದೇ ರಾಡಿನಿಂದ ಬಲಬಾಗದ  ಭುಜಕ್ಕೆ  ಹೊಡೆದು ಮೂಗೇಟನ್ನುಂಟು ಮಾಡಿದ ಮನೋಜನು ವರುಣ್ ಕೈಯಿಂದ ರಾಢನ್ನು ಕಿತ್ತುಕೊಂಡು ನನ್ನ ಬೆನ್ನಿನ ಮೇಲೆ ಹೊಡೆದು ಮೂಗೇಟನ್ನುಂಟು ಮಾಡಿದನು ಪುಷ್ಪಮ್ಮ ರವರು  ಕೈಗಳಿಂದ ಹೊಡೆದು ನಂತರ ೆಲ್ಲರೂ ಸೇರಿಕೊಂಡು ನೀನು ಈ ವಿಚಾಋದಲ್ಲಿ ಪೊಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದ್ದೇ ಆದಲ್ಲಿ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲಾವೆಂದು ಬೆದರಿಕೆಯನ್ನು ಹಾಕಿರುತ್ತಾರೆಂದು ಇವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆ ದೂರನ್ನು ವೈದ್ಯರ ಸಮಕ್ಷಮ  ಪಡೆದುಕೊಂಡು ಠಾಣೆಗೆ 9-45 ಗಂಟೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

10) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 314/2018 ಕಲಂ. 324 ರೆ/ವಿ ಐಪಿಸಿ :-

     ದಿನಾಂಕ:27.11.2018 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರಾದ ಮುರಳೀಧರ ಬಿನ್ ಆಂಜಿನಪ್ಪ, 31 ವರ್ಷ, ವಕ್ಕಲಿಗರು, ಕೆಂಪನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು  ರವರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನ್ನ ತಮ್ಮನಾದ ಶಶಿಕುಮಾರ್ ರವರು ಶಿಡ್ಲಘಟ್ಟ ವಿದಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ.ರಾಜಣ್ಣ ರವರ ವಾಹನ ಚಾಲಕರಾಗಿದ್ದು, ಪ್ರತಿದಿನ ತಮ್ಮ ಗ್ರಾಮದಿಂದ ಬೆಳಿಗ್ಗೆ ಬಂದು ರಾತ್ರಿ ವಾಪಸ್ಸು ಮನೆಗೆ ಬರುತ್ತಿದ್ದರು. ಅದರಂತೆ ದಿನಾಂಕ:17.11.2018 ರಂದು ಸಂಜೆ ಸುಮಾರು 6-30 ಗಂಟೆಯಲ್ಲಿ ಶಿಡ್ಲಘಟ್ಟದಿಂದ ತಮ್ಮ ಗ್ರಾಮಕ್ಕೆ ನಂಬರ್ KA.40.E.9205 ನಂಬರಿನ ಸ್ಪೆಂಡರ್ ದ್ವಿಚಕ್ರವಾಹನದಲ್ಲಿ ಅರಣ್ಯ ಇಲಾಖೆಯ  ಕಛೇರಿಯ ಗೇಟ್ ಬಳಿ ಬರುತ್ತಿದ್ದಾಗ ಯಾರೋ ಅಪರಿಚಿತ 3 ಜನ ವ್ಯಕ್ತಿಗಳು ಪಲ್ಸರ್ ವಾಹನದಲ್ಲಿ ಬಂದು ಯಾವುದೋ ರಾಡಿನಲ್ಲಿ ಬಲಕೈಗೆ ಹೊಡೆದಿದ್ದು, ಕೈ ಮೂಳೆ ಮುರಿದು ಗಾಯವಾಗಿರುತ್ತೆ. ನಂತರ ಅಬ್ಲೂಡು ಗ್ರಾಮದ ನವೀನ್ ಕುಮಾರ್ ಬಿನ್ ಬಂಡೆಪ್ಪ ರವರು ತನಗೆ ಪೋನ್ ಮಾಡಿ ವಿಚಾರ ತಿಳಿಸಿದ್ದು, ತಾನು ತಮ್ಮ ತಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ R.M.V ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತೇನೆ. ತನ್ನ ತಮ್ಮನಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ದೂರು ನೀಡಿದ್ದು, ತನ್ನ ತಮ್ಮನ ಮೇಲೆ ಹಲ್ಲೆ ಮಾಡಿರುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆಮಾಡಿ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ.314/2018 ಕಲಂ 324 ರೆ/ವಿ 34 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿರುತ್ತೇನೆ.

 11) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 315/2018 ಕಲಂ.323,341,504,506 ರೆ/ವಿ 34 ಐಪಿಸಿ :-

     ದಿನಾಂಕ:27.11.2018 ರಂದು ಸಂಜೆ 5-30 ಗಂಟೆಯಲ್ಲಿ ಪಿರ್ಯಾದಿದಾರರಾದ  ಮಂಜುನಾಥ ವಿ ಬಿನ್ ವೆಂಕಟರಾಮಯ್ಯ, ಸುಮಾರು 40 ವರ್ಷ, ಬಲಜಿಗರು, ಜಿರಾಯ್ತಿ, ವಾಸ ವಿಜಯಪುರ ಗ್ರಾಮ  ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ,  ತಾನು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೆನೆ. ತಮ್ಮ ತಂದೆ ವೆಂಕಟರಾಮಯ್ಯ ಇವರಿಗೆ ನಾವು ಇಬ್ಬರು ಮಕ್ಕಳು 1 ನೇ ನಾನು 2 ನೇ  ನನ್ನ ತಮ್ಮ  ಶ್ರೀಧರ್ ಕುಮಾರ್ ರವರಾಗಿರುತ್ತಾರೆ ತಮ್ಮ ಬಾಬತ್ತು  ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ ಅಂಕತಟ್ಟಿ ಗ್ರಾಮದ ಸರ್ವೇ ನಂ 76/2 ರಲ್ಲಿ ಒಟ್ಟು 4 ಎಕರೆ 32 ಗುಂಟೆ ಜಮೀನು ಇದ್ದು ಸದರಿ ಜಮೀನು ತನ್ನ ತಂದೆ ವೆಂಕಟರಾಮಯ್ಯ ಮತ್ತು ಚಿಕ್ಕಪ್ಪ ವಿ ಲಕ್ಷ್ಮೀನಾರಾಯಣ ರವರುಗಳ ಹೆಸರಿನಲ್ಲಿ ಜಂಟಿ ಖಾತೆಯಾಗಿರುತ್ತೆ ಅ ಪೈಕಿ  ತನ್ನ ತಂದೆ ಭಾಗಕ್ಕೆ 3 ಎಕರೆ 22 ಗುಂಟೆ ಮತ್ತು ತನ್ನ ಚಿಕ್ಕಪ್ಪನ ಭಾಗಕ್ಕೆ 1 ಎಕರೆ 10 ಗುಂಟೆ ಬಂದಿರುತ್ತೆ  ತಮ್ಮ ಭಾಗಕ್ಕೆ ಬಂದಿರುವ 3 ಎಕರೆ 22 ಗುಂಟೆ ಜಮೀನಿನಲ್ಲಿ ನಾವು ನೀಲಗಿರಿ ತೋಪನ್ನು ಬೆಳೆಸಿಕೊಂಡಿರುತ್ತೇವೆ, ಸದರಿ ನೀಲಗಿರಿ ತೋಪನ್ನು  ನಾವು ಮಾರಾಟ ಮಾಡಿರುತ್ತೇವೆ ಈಗಿರುವಲ್ಲಿ  ದಿನಾಂಕ:24/11/2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ತಮ್ಮ ನೀಲಗಿರಿ ತೋಪನ್ನ ಕಟಾವು ಮಾಡುತ್ತಿದ್ದಾಗ  ತಾನು ನಮ್ಮ ಜಮೀನಿನ ಬಳಿ ಇದ್ದೆ ಅದೇ ಸಮಯಕ್ಕೆ ತಮ್ಮ ಚಿಕ್ಕಪ್ಪರವರಾದ ವಿ ವೆಂಕಟೇಶಪ್ಪ ಬಿನ್ ಲೇಟ್ ವೆಂಕಟಪ್ಪ, ವಿ.ಲಕ್ಷ್ಮೀನಾರಾಯಣ ಬಿನ್ ಲೇಟ್ ವೆಂಕಟಪ್ಪ,  ತಮ್ಮ ಚಿಕ್ಕಪ್ಪ ವೆಂಕಟೆಶಪ್ಪ ರವರ ಮಗನಾದ ವಿ ಶಿವಕುಮಾರ್  ಮೂರು ಜನರು ಬಂದು  ತನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ಸದರಿ ತೋಪನ್ನು ಕಟಾವು ಮಾಡಿಸಬೇಡ ಸರ್ವೇ ಮಾಡಿದ ನಂತರ ಕಟಾವು ಮಾಡಿಕೋ ಎಂದು ಹೇಳಿ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಅಪೈಕಿ ವೆಂಕಟೇಶಪ್ಪ ಮತ್ತು ಲಕ್ಷ್ಮೀನಾರಾಯಣ ರವರು ಕೈಗಳಿಂದ ತನ್ನ ಬಲಕೈಗೆ, ಬೆನ್ನಿಗೆ ಮತ್ತು ಮುಖಕ್ಕೆ ಗುದ್ದಿ ಮೂಗೇಟು ವುಂಟುಮಾಡಿರುತ್ತಾರೆ, ಮತ್ತೆ ತೋಪನ್ನು ಕಟಾವುಮಾಡಿಸಿದರೇ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲಾವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ, ಗಲಾಟೆಯನ್ನು ತಮ್ಮ  ಗ್ರಾಮದ ಮಂಜುನಾಥ ಬಿನ್ ಮುನಿಶ್ಯಾಮಪ್ಪ  ಮತ್ತು ಮಹೇಶ ಬಿನ್ ಮಾಚರೆಡ್ಡಿ ರವರು ಬಿಡಿಸಿರುತ್ತಾರೆ, ನಂತರ ತಾನು ಚಿಕಿತ್ಸೆಗಾಗಿ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತೇನೆ. ಗ್ರಾಮದಲ್ಲಿ ಹಿರಿಯರು ಮಾತುಕತೆ ಮಾಡಿ ರಾಜಿ ಮಾಡುವುದಾಗಿ ತಿಳಿಸಿರುತ್ತಾರೆ  ಮೇಲ್ಕಂಡವರು ರಾಜಿ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿದ್ದು  ತನ್ನ ಮೇಲೆ ವಿನಾಕಾರಣ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿ ಹಲ್ಲೆ ಮಾಡಿದ ವಿ.ವೆಂಕಟೇಶಪ್ಪ, ವಿ.ಲಕ್ಷ್ಮೀನಾರಾಯಣ ಮತ್ತು ಶಿವಕುಮಾರ್ ರವರುಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾಮೊ.ಸಂ. 315/2018 ಕಲಂ 323,341,504,506 ರೆ/ವಿ 34 ಐ.ಪಿ.ಸಿ. ರೀತ್ಯಾ ಕೇಸು ದಾಖಲಿಸಿರುತ್ತೇನೆ.

12) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 316/2018 ಕಲಂ. 323,341,504,506 ರೆ/ವಿ 34 ಐಪಿಸಿ :-

     ದಿನಾಂಕ:28.11.2018 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಎಸ್.ಗಾಯಿತ್ರಿ ಕೋಂ ವಿ.ಲಕ್ಷ್ಮೀನಾರಾಯಣ, 40 ವರ್ಷ, ಬಲಜಿಗರು, ಜಿರಾಯ್ತಿ, ವಾಸ  ವಿಜಯಪುರ ಗ್ರಾಮ ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಬಾಬತ್ತು  ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ ಅಂಕತಟ್ಟಿ ಗ್ರಾಮದ ಸರ್ವೇ ನಂ 76/2 ರಲ್ಲಿ ಒಟ್ಟು 4 ಎಕರೆ 32 ಗುಂಟೆ ಜಮೀನು ಇದ್ದು, ಸದರಿ ಜಮೀನು ನನ್ನ ಗಂಡ ವಿ.ಲಕ್ಷ್ಮೀನಾರಾಯಣ ಮತ್ತು ಅವರ ಅಣ್ಣ ವೆಂಕಟರಾಮಯ್ಯ ಮತ್ತು ಅವರ ಮತ್ತೊಬ್ಬ ಅಣ್ಣ ವೆಂಕಟೇಶಪ್ಪ ರವರುಗಳ ಹೆಸರಿನಲ್ಲಿ ಜಂಟಿ ಖಾತೆಯಾಗಿರುತ್ತೆ. ಅ ಪೈಕಿ  ನಮ್ಮ  ಭಾಗಕ್ಕೆ 1 ಎಕರೆ 10 4/1 ಗುಂಟೆಬಂದಿರುತ್ತೆ  ತಮ್ಮ ಭಾಗಕ್ಕೆ ಬಂದಿರುವ 1 ಎಕರೆ 10 4/1 ಗುಂಟೆ ಜಮೀನಿನಲ್ಲಿ ತಾವು ನೀಲಗಿರಿ ತೋಪನ್ನು ಬೆಳೆಸಿಕೊಂಡಿರುತ್ತೇವೆ, ದಿನಾಂಕ:24/11/2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಸದರಿ ನೀಲಗಿರಿ ತೋಪನ್ನು  ತನ್ನ ಗಂಡ ರವರ ಅಣ್ಣ ವೆಂಕಟರಾಮಯ್ಯ ಮತ್ತು ಆತನ ಮಕ್ಕಳಾದ ಮಂಜುನಾಥ ಮತ್ತು ಶ್ರೀಧರ್ ಕುಮಾರ್ ರವರುಗಳು ಕಟಾವು ಮಾಡಲು ಬಂದಿದ್ದು,  ತಾನು ಮತ್ತು ತನ್ನ ಗಂಡ ವಿ.ಲಕ್ಷ್ಮೀನಾರಾಯಣ ರವರು ಸದರಿ ಜಮೀನು ಅಳತೆ ಆಗಬೇಕಿದೆ ಅಳತೆ ಆದ ನಂತರ ಕಟಾವು ಮಾಡುವಂತೆ ಹೇಳಿದಾಗ ಮೂರು ಜನರು ತಮ್ಮ ಮೇಲೆ ಗಲಾಟೆ ಮಾಡಿ ತಮ್ಮನ್ನು ಅಡ್ಡಗಟ್ಟಿ ನಿಲ್ಲಿಸಿ ತನ್ನ ಗಂಡನನ್ನು ಬೋಳಿ ಮಗನೇ, ಅಲಕಾ ನ್ನ ಮಗನೇ ಇತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ತೋಪನ್ನು ಕಟಾವುಮಾಡಲು ಅಡ್ಡಿಪಡಿಸಿದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ, ಗಲಾಟೆಯನ್ನು ಚನ್ನಪ್ಪ ಬಿನ್ ಮಹದೇವಪ್ಪ ಇಟ್ಟಿಗೆ ಪ್ಯಾಕ್ಟರಿ ಕೊಮ್ಮಸಂದ್ರ ದೇವನಹಳ್ಳಿ ತಾಲ್ಲೂಕು ಮತ್ತು ಭಾಷಾ ಬಿನ್ ಮದರ್ ಸಾಬ್, ವಿಜಯಪುರ ರವರು ನೋಡಿರುತ್ತಾರೆ. ಗ್ರಾಮದಲ್ಲಿ ಹಿರಿಯರು ಮಾತುಕತೆ ಮಾಡಿ ರಾಜಿ ಮಾಡುವುದಾಗಿ ತಿಳಿಸಿದ್ದು, ಮೇಲ್ಕಂಡವರು ರಾಜಿ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿದ್ದು  ವೆಂಕಟರಾಮಯ್ಯ ಮತ್ತು ಆತನ ಮಕ್ಕಳಾದ ಮಂಜುನಾಥ ಮತ್ತು ಶ್ರೀಧರ್ ಕುಮಾರ್ ರವರುಗಳ ಮೇಲೆ  ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಇದ್ದ ಸಾರಾಂಶದ ಮೇರೆಗೆ ಠಾಣಾ ಮೊ.ಸಂ. 316/2018 ಕಲಂ 323,341,504,506 ರೆ/ವಿ 34 ಐ.ಪಿ.ಸಿ. ರೀತ್ಯಾ ಕೇಸು ದಾಖಲಿಸಿರುತ್ತೆ.