ದಿನಾಂಕ : 27/11/2018ರ ಅಪರಾಧ ಪ್ರಕರಣಗಳು

1) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 254/2018 ಕಲಂ. 78(3) ಕೆ.ಪಿ. ಆಕ್ಟ್ ಮತ್ತು 420 ಐಪಿಸಿ :-

     ದಿನಾಂಕ: 27/11/2018 ರಂದು ಬೆಳಗ್ಗೆ 10-30 ಗಂಟೆಗೆ ಗಜಾನನ ವೃತ್ತದ ಬಳಿ  ರೈತ ಸಂಘದ ಪಾದಯಾತ್ರೆಯ ಬಂದೋಬಸ್ತ್ ಕರ್ತವ್ಯದಲ್ಲಿದಾಗ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪೊಲೀಸ್  ಇನ್ಸ್ ಪೆಕ್ಟರ್ ರವರಾದ ಶ್ರೀ ನಾರಾಯಣಸ್ವಾಮಿ ಜಿ.ಸಿ   ರವರಿಗೆ ಚಿಂತಾಮಣಿ ನಗರದ ಎಂ.ಜಿ ರಸ್ತೆಯ ಟ್ಯಾಂಕ್ ಬಂಡ್ ರೋಡ್ ಗೆ ಹೋಗುವ ತಿರುವಿನ ರಸ್ತೆಯ ಬದಿಯಲ್ಲಿ  ಯಾರೋ ಒಬ್ಬ ಆಸಾಮಿ ಜನರನ್ನು ಗುಂಪು ಸೇರಿಸಿಕೊಂಡು ಮಟ್ಕಾ ಚೀಟಿ ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಆತನ ಮೇಲೆ ದಾಳಿ ಮಾಡಲು ಮತ್ತು ಸಿಬ್ಬಂದಿಯಾದ  ಹೆಚ್.ಸಿ 124 ನರಸಿಂಹ ಮೂರ್ತಿ ರವರೊಂದಿಗೆ ಠಾಣೆಯ  ಜೀಫ್ ನಂ: ಕೆಎ 40 ಜಿ 356   ವಾಹನದಲ್ಲಿ ಗಜಾನನ ವೃತ್ತದಲ್ಲಿ ಷಪೀ  ಮತ್ತು ಬಾಬು ರವರನ್ನು ಪಂಚರನ್ನು ಬರಮಾಡಿಕೊಂಡು ಸ್ವಲ್ಪ ಮುಂದಕ್ಕೆ  ಹೋಗಿ ಮೆರೆಯಲ್ಲಿ ಜೀಫನ್ನ ಮರೆಯಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಟ್ಯಾಂಕ್ ಬಂಡ್ ರಸ್ತೆಯ ಕಡೆ ಹೋಗುವ ತಿರುವಿನ ಬಳಿ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು  ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಕೈಯಲ್ಲಿ ಪೆನ್ನು ಹಾಗೂ ಪೇಪರ್ ನ್ನು  ಹಿಡಿದು ಕೊಂಡು  ಮಟ್ಕಾ ನಂಬರ್ ಗಳನ್ನು ಬರೆದುಕೊಂಡು 1 ರೂಗೆ 80 ರೂ ಕೊಡುವುದಾಗಿ ಜನರಿಗೆ ಮಟ್ಕಾ ಹಣ ಕಟ್ಟುವಂತೆ ಪ್ರೇರೆಪಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದನನ್ನು  ಹಿಡಿದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ರಾಜೇಂದ್ರ @ ರಾಜು ಬಿನ್ ಮಾರ್ಕೋಂಡಪ್ಪ, 25 ವರ್ಷ, ಎಸ್.ಸಿ ಜನಾಂಗ, ಡ್ರೈವರ್ ಕೆಲಸ ವಾಸ: 31 ನೇ ವಾರ್ಡ್, ತಿಮ್ಮಸಂದ್ರ, ಚಿಂತಾಮಣಿ  ನಗರ  ಎಂತ ತಿಳಿಸಿದ್ದು ಆತನನ್ನು ಪಂಚರ ಸಮಕ್ಷಮ ಅಂಗ ಶೋಧನೆ ಮಾಡಲಾಗಿ ನಗದು ಹಣ 880 ರೂ, ಒಂದು ಮಟ್ಕಾ ಚೀಟಿ, ಒಂದು ಪೆನ್ನು ,ಒಂದು ಒಪ್ಪೋ ಮೊಬೈಲ್ ಇದ್ದು ಹಣದ ಬಗ್ಗೆ ಕೇಳಲಾಗಿ ಈ ದಿನ ಮಟ್ಕಾ ಚೀಟಿ ಬರೆದು ಸಾರ್ವಜನಿಕರಿಗೆಮೋಸ ಮಾಡಿ ಸಂಗ್ರಹಿಸಿರುವ ಹಣವೆಂದು ಹಾಗೂ ಸದರಿ ಹಣವನ್ನು ಸಂಜೆ ನಮ್ಮ ಗ್ರಾಮದ ವಾಸಿಯಾದ ನಾಗೇಶ್ ಎಂಬುವವರಿಗೆ ನೀಡಿ ಅವರಿಂದ ಕಮೀಷನ್ ಪಡೆಯುತ್ತಿರುತೇನೆಂದು ತಿಳಿಸಿದ್ದು ಪೊಲೀಸರು ಸದರಿ ಆಸಾಮಿ  ಹಾಗೂ ಮಾಲನ್ನು  ಪಂಚನಾಮೆಯ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತುಪಡಿಸಿಕೊಂಡು ಮಧ್ಯಾಹ್ನ12-00 ಗಂಟೆಗೆ ಠಾಣೆಗೆ  ವಾಪಸ್ಸಾಗಿ ಠಾಣಾಧಿಕಾರಿಗಳಿಗೆ ನೀಡಿದ  ಪಂಚನಾಮೆಯಂತೆ ಠಾಣೆಯ ಮೊ.ಸಂಖ್ಯೆ: 254/2018  ಕಲಂ: 78 ಕ್ಲಾಸ್ (3) ಕೆ.ಪಿ ಆಕ್ಟ್ ಮತ್ತು 420 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

2) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 236/2018 ಕಲಂ.143,147,323,324,504,506 ರೆ/ವಿ 149 ಐಪಿಸಿ :-

     ದಿನಾಂಕ: 26/11/2018 ರಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ನಾಗವೇಣಿ ಕೋಂ ದೇವರಾಜ್, 26 ವರ್ಷ, ಗೊಲ್ಲರು, ಜಿರಾಯ್ತಿ, ಅಜ್ಜಕದಿರೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಠಾಣಾ ಸಿ.ಹೆಚ್.ಸಿ-39 ರವರು ಪಡೆದು ಮದ್ಯಾಹ್ನ 2.00 ಗಂಟೆಗೆ ಠಾಣೆಗೆ ಬಂದು ಹಾಜರು ಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ: 25/11/2018 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ಗಾಯಾಳು ಶ್ರೀಮತಿ ನಾಗವೇಣಿ ರವರು ತಮ್ಮ ಮನೆಯಲ್ಲಿದ್ದಾಗ  ತಮ್ಮ ಗ್ರಾಮದ ನರಸಿಂಹಪ್ಪ, ಮಂಜುನಾಥ, ಶೇಖರ, ಚನ್ನಮ್ಮ ಹಾಗೂ ಶಶಿಕಲಾ ರವರು ಬಂದು ನಾಗವೇಣಿ ರವರ ಮನೆಯ ಮುಂದೆ ಅವರ ಜಾಗದಲ್ಲಿ ಕಾಂಪೌಂಡ್ ಗಾಗಿ ಕಲ್ಲುಗಳನ್ನು ಎತ್ತುತ್ತಿದ್ದಾಗ ನಾಗವೇಣಿ ರವರು ಬಂದು ಏಕೇ ನಮ್ಮ ಜಾಗದಲ್ಲಿ ಕಲ್ಲುಗಳನ್ನು ಎತ್ತುತ್ತಿರುವುದು, ನಮ್ಮ ಗಂಡ ಊರಿನ ಒಳಗೆ ಹೋಗಿದ್ದು ಬಂದ ನಂತರ ಅವರನ್ನು ಕೇಳಿ ಎತ್ತಿ ಎಂದು ಹೇಳಿದ್ದಕ್ಕೆ ಮೇಲ್ಕಂಡವರು ಅವನನ್ನು ಏನು ಕೇಳುವುದು ಎಂದು ಕೆಟ್ಟದಾಗಿ ಬೈದು, ಹೊಡೆಯಲು ಬಂದಿರುತ್ತಾರೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ನಾಗವೇಣಿ ರವರ ಗಂಡ ದೇವರಾಜ್ ಮೇಲ್ಕಂಡವರನ್ನು ಕುರಿತು ಏಕೆ ನನ್ನ ಹೆಂಡತಿಯ ಮೇಲೆ ಗಲಾಟೆ ಮಾಡುತ್ತಿದ್ದೀರಿ, ನಮ್ಮ ಜಾಗದಲ್ಲಿ ಕಲ್ಲುಗಳನ್ನು ಎತ್ತಿ ನಮ್ಮ ಮೇಲೆಯೇ ಗಲಾಟೆ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಮೇಲ್ಕಂಡವರು ದೇವರಾಜ್ ರನ್ನು ಹಾಗೂ ಜಗಳ ಬಿಡಸಲು ಬಂದ ನಾಗವೇಣಿ ರವರನ್ನು ಹೊಡೆದು ಈ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

3) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 234/2018 ಕಲಂ. 420,336 ಐಪಿಸಿ ಮತ್ತು ಸೆಕ್ಷನ್ 19 KARNATAKA PRIVATE MEDICAL ESTABLISHMENT ACT, 2007 :-

     ದಿನಾಂಕ:27/11/2018 ರಂದು 14:30 ಗಂಟೆಗೆ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ  ಡಾ.ರತ್ನಮ್ಮ ಓ ರವರು ಕೃತ್ಯ ನಡೆದ ಸ್ಥಳದಲ್ಲಿ ನೀಡಿದ ದೂರು, ಮಹಜರ್ ಮತ್ತು ಮಾಲುಗಳನ್ನು ಸ್ವೀಕರಿಸಿಕೊಂಡಿದ್ದರ ಸಾರಾಂಶವೇನೆಂದರೆ,ನಾನು ಗೌರಿಬಿದನೂರು ತಾಲ್ಲೂಕು ಆರೋಗ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನಾನು ಆಗಾಗ ಗೌರಿಬಿದನೂರು ತಾಲ್ಲೂಕಿನಲ್ಲಿರುವ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳನ್ನು ಕೆ.ಪಿ.ಎಂ.ಇ. ಕಾಯ್ದೆಗಳ ಅಡಿಯಲ್ಲಿ ಆಗಾಗ ತಪಾಸಣೆ ಮಾಡುತ್ತಿರುತ್ತೇನೆ. ನಮ್ಮ ಆಸ್ಪತ್ರೆಯ ಮುಂಭಾಗದಲ್ಲಿಯೂ ಹಲವು ಡಯೋಗ್ನೋಸ್ಟಿಕ್  ಕೇಂದ್ರಗಳು ಇದ್ದು, ಆಗಾಗ ತಪಾಸಣೆ ಮಾಡುತ್ತಿರುತ್ತೇನೆ. ಇತ್ತೀಚೆಗೆ ಸುಮಾರು ಎರಡು ತಿಂಗಳ ಹಿಂದೆ ಎಸ್.ಕೆ. ಡಯೋಗ್ನೋಸ್ಟಿಕ್ ಸೆಂಟರ್ ನ್ನು ಭೇಟಿ ಮಾಡಿ ತಪಾಸಣೆ ನಡೆಸಿದ್ದು, ಅಲ್ಲಿ ಯಾವುದೇ ಕ್ಲಿನಿಕ್ ಇರಲಿಲ್ಲ. ನಮ್ಮ ಮೇಲಾಧಿಕಾರಿಗಳಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಿಂದ ಬಂದ ಈ-ಮೇಲ್ ಸಂದೇಶ ಹಾಗೂ ಮೌಖಿಕ ಆದೇಶದ ಮೇರೆಗೆ ದಿನಾಂಕ:27/11/2018 ರಂದು ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಯ ಮುಂಬಾಗದಲ್ಲಿದ್ದ ಎಸ್.ಕೆ. ಡಯೋಗ್ನೋಸ್ಟಿಕ್ ಸೆಂಟರ್ ಬಳಿಗೆ ಹೋಗಿ ನೋಡಲಾಗಿ ಮಂಚೇನಹಳ್ಳಿ ಕ್ಲಿನಿಕ್ ಎಂದು ಹೊಸದಾಗಿ ಬೋರ್ಡ್ ಹಾಕಿಕೊಂಡಿರುವುದು ಕಂಡುಬಂದಿರುತ್ತೆ. ಕೂಡಲೇ ನಾನು ನಗರ ಸಭೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರಿಗೆ ಮಾಹಿತಿಯನ್ನು ನೀಡಿ ಎಲ್ಲರು ಬಂದ ನಂತರ ತಂಡವಾಗಿ ಸದರಿ ಮಂಚೇನಹಳ್ಳಿ ಕ್ಲಿನಿಕ್ ಗೆ ಹೋದಾಗ ಕ್ಲಿನಿಕ್ ನಡೆಸಲು ಯಾವುದೇ ಅನುಮತಿ ಪತ್ರ ಇಲ್ಲದೇ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಿರುವುದು ಕಂಡು ಬಂದಿದ್ದು, ಇದು ಎಸ್. ಕೆ. ಲ್ಯಾಬ್ ಗೆ ಹೊಂದಿಕೊಂಡಂತೆ ಇರುವ ಕೊಠಡಿಯಲ್ಲಿ ಕಂಡು ಬಂದಿರುತ್ತೆ. ಸ್ಥಳದಲ್ಲಿ ಪಂಚನಾಮೆಯನ್ನು ಜರುಗಿಸಿ ಸ್ಥಳದಲ್ಲಿ ಸಿಕ್ಕಂತಹ ಔಷದಿಗಳು, ಮತ್ತು ಇತರೆ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಕ್ಲಿನಿಕ್ ಅನ್ನು ಮುಚ್ಚಿಸಿರುತ್ತೇನೆ. ಸದರಿ ಕ್ಲಿನಿಕ್ ನ್ನು ನಡೆಸುತ್ತಿರುವವರ ಬಗ್ಗೆ ವಿಚಾರಿಸಿದಾಗ ಎಸ್.ಕೆ. ಡಯೋಗ್ನೊಸ್ಟಿಕ್ ಸೆಂಟರ್ ನಲ್ಲಿದ್ದ ವ್ಯಕ್ತಿ ಇಮ್ರಾನ್ ಖಾನ್ ರವರು ಕ್ಲಿನಿಕ್ ನ್ನು ನಡೆಸುತ್ತಿರುವುದು ಇರ್ಫಾನ್ ಖಾನ್ ಮತ್ತು ರಿಜ್ವಾನ್ ಖಾನ್ ಎಂದು ತಿಳಿಸಿರುತ್ತಾರೆ. ಇವರು ಕಾನೂನಿನ ಅಡಿಯಲ್ಲಿ ಯಾವುದೇ ಅನುಮತಿಯನ್ನು ಪಡೆದಯದೇಯೇ ಕ್ಲಿನಿಕ್ ನಡೆಸುತ್ತಿರುವುದು ಕಾನೂನು ಬಾಹಿರ ವಾಗಿರುತ್ತದೆ. ಆದ್ದರಿಂದ ಇವರ ವಿರುದ್ದ ಕಾನೂನು ಅಡಿಯಲ್ಲಿ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಠಾಣೆಗೆ 14:40 ಗಂಟೆಗೆ ವಾಪಸ್ಸಾಗಿ ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

4) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 192/2018 ಕಲಂ. 279 ಐಪಿಸಿ :-

ದಿನಾಂಕ 26-11-2018 ರಂದು ಸಂಜೆ  16-00  ಗಂಟೆಗ ಪಿರ್ಯಾದುದಾರರಾದ  ಶ್ರೀಮತಿ R ವಾಣಿ ಕೊಂ ಬಾರ್ಗವ್ ದಾಸ್  ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ಇದೇ ದಿನ  ತನ್ನ ಗಂಡನ ಹೆಸರಿನಲ್ಲಿದ್ದ  KA-40-M-2164 ನೊಂದಣಿಯ ಕಾರಿನಲ್ಲಿ  ಬೆಂಗಳೂರು ನಗರಕ್ಕೆ ಹೋಗಲು ನಾನೇ ಅದರ ಚಾಲಕಳಾಗಿ  ಕಾರಿನಲ್ಲಿ  ತನ್ನ ಗಂಡ ಬಾರ್ಗವದಾಸ್  ಮಗಳಾಧ ಸುಚಿತ್ರ ಹಾಗೂ ನಾದಿನಿ ಮಗಳಾಧ  ನಿಶ್ಕಳ ರವರೊಂದಿಗೆ  ಚಿಕ್ಕಬಳ್ಳಾಪುರವನ್ನು ಬಿಟ್ಟು ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ ನಾಗಾರ್ಜುನ ಕಾಲೇಜಿನ ಬಳಿ ಇರುವ  ಬ್ರಿಡ್ಜ್ ಸಮೀಪ ರಸ್ತೆಯ ಬಲಬಾಗದಲ್ಲಿ ಹೋಗುತ್ತಿದ್ದಾಗ  ತನ್ನ ಕಾರಿನ ಪಕ್ಕದಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದ KA-04-AA-0542 ನೊಂದಣಿಯ ಟಿಪ್ಪರ್ನ  ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗಗರೂಕತೆತಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆಯಿಸಿದ್ದು  ಆ ಸಮಯದಲ್ಲಿ ತನ್ನ ಕಾರು ಡಿವೈಡರಿನ ಮೇಲೆ ಹತ್ತಿದ್ದು  ಹತ್ತಿದ ನಂತರ  ಟಿಪ್ಪರಿನ ಚಾಲಕ ಅದೇ ವೇಗದಲ್ಲಿ  ಡಿವೈಡರಿನ ಮೇಲೆ ಹತ್ತಿಸಿ  ತನ್ನ ಕಾರಿನ ಬಲಬಾಗಕ್ಕೆ  ಡಿಕ್ಕಿಹೊಡೆಯಿಸಿ ತಳ್ಳಿಕೊಂಡು ಹೋಗಿದ್ದು  ಈ ಒಂದು ಅಪಘಾತದಿಂದ ಕಾರಿನಲ್ಲಿದ್ದ ನಮಗ್ಯಾರಿಗೂ ಗಾಯಗಳು ಆಗದೇ ಇದ್ದು  ಕಾರು ಸಂಪೂರ್ಣ ಜಖಂಗೊಂಡಿರುತ್ತದೆ, ಅಪಘಾತ ಪಡಿಸಿದ  ಟಿಪ್ಪರಿನ  ಮುಂದಿನ ಬಲಬಾಗವೂ ಸಹಃ ಜಖಂಗೊಂಡಿರುತ್ತದೆ. ಅಪಘಾತ ಪಡಿಸಿದ ಟಿಪ್ಪರಿನ ಚಾಲಕನ ಹೆಸರು ವಿಳಾಸ ತಿಳಿಯದೇ ಇದ್ದು  ನಮಗೆ ಅಪಘಾತ ಪಡಿಸಿದ ಟಿಪ್ಪರ್ KA-04-AA-0542   ಹಾಗೂ ಅದರ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮವನ್ನು  ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.