ದಿನಾಂಕ : 18/04/2019ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 76/2019 ಕಲಂ. 32,34,15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:17/04/2019 ರಂದು ಸಿ.ಪಿ.ಐ ಬಾಗೇಪಲ್ಲಿ ವೃತ್ತ ರವರ ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ:17-04-2019 ರಂದು ರಾತ್ರಿ 7-00 ಗಂಟೆ ಸಮಯದಲ್ಲಿ   ಗಸ್ತಿನಲ್ಲಿದ್ದಾಗ  ಬಾಗೇಪಲ್ಲಿ ತಾಲ್ಲೂಕು  ಚಿಂತಮಾಕಲದಿನ್ನೆ  ಗ್ರಾಮದ ವಾಸಿಯಾದ ಅಂಜಿನಪ್ಪ ಬಿನ್  ರಾಮಚಂದ್ರಪ್ಪ ರವರ  ಬಾಬತ್ತು  ಢಾಭಾ ಬಳಿ ಮುಂಭಾಗ  ಖಾಲಿ ಜಾಗದಲ್ಲಿ ಯಾರೋ ಕೆಲವರು ಕುಳಿತುಕೊಂಡು ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರಗೆ  ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-47 ಚಂದ್ರಶೇಖರ್ ಎಂ.ವಿ ಹಾಗೂ ಚಾಲಕರಾದ ಎ.ಪಿ.ಸಿ110 ನರಸಿಂಹಮೂರ್ತಿ ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40-ಜಿ-1777 ವಾಹನದಲ್ಲಿ ಜೀಪಿನಲ್ಲಿ ಚಿಂತಮಾಕಲದಿನ್ನೆ  ಕ್ರಾಸ್ ಬಳಿ ಹೋಗಿ ಜೀಪ್ ಅನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ನಡೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಕೆಲವರು ಮದ್ಯ ಸೇವನೆ ಮಾಡಲು ಕುಳಿತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಓಡಿಹೊದರು. ಸ್ಥಳದಲ್ಲಿ ಪರಿಶೀಲಸಲಾಗಿ ಮದ್ಯವಿರುವ 90 ಎಂ.ಎಲ್  ಹೈರ್ವಡ್ಸ್  ವೀಸ್ಕೀ  23 ಟೇಟ್ರಾ ಪ್ಯಾಕೇಟ್ ಗಳಿದ್ದು   ಮತ್ತು 180 ಎಂ.ಎಲ್ ಒಲ್ಡ್ ಟವರಿನ್ 19 ಟೇಟ್ರಾ ಪ್ಯಾಕೆಟ್ ಗಳಿದ್ದು ಓಟ್ಟು 5.490 ಎಂ.ಎಲ್ ಲೀಟರ್ ಮದ್ಯ ವಿದ್ದು ಸದರಿ ಮದ್ಯದ ಒಟ್ಟು ಮೌಲ್ಯ  2500/-ರೂಪಾಯಿಗಳಾಗಿರುತ್ತದೆ. ಸ್ಥಳದಲ್ಲಿದ್ದ ಢಾಬಾ ಮಾಲೀಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಅಂಜಿನಪ್ಪ ಬಿನ್ ರಾಮಚಂದ್ರಪ್ಪ 29 ವರ್ಷ  ನಾಯಕರು ವ್ಯಾಪಾರ ಚಿಂತಮಾಕಲದಿನ್ನೆ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು ಸದರಿಯವರಿಗೆ ಮದ್ಯ ಸೇವನೆಯನ್ನು ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದಕ್ಕೆ ಹಾಗೂ ಮದ್ಯ ವನ್ನು ಇಟ್ಟುಕೊಂಡು ಮಾರಾಟ ಮಾಡುವುದಕ್ಕೆ ಪರವಾನಿಗೆ ಇದೇಯೆ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿದ್ದು ಮೇಲ್ಕಂಡ ಮಾಲುಗಳನ್ನು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ರಾತ್ರಿ-9-30 ಗಂಟೆಗೆ  ಠಾಣೆಗೆ ಹಾಜರಾಗಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಇಟ್ಟುಕೊಂಡು  ಕುಡಿಯುವುದಕ್ಕೆ ಸ್ಥಳಾವಕಾಶ ಮಾಡಿಕೊಡುತ್ತಿದ್ದ ಮೇಲ್ಕಂಡ  ವ್ಯಕ್ತಿಯ ವಿರುದ್ದ  ಕಾನೂನು  ರೀತಿಯ  ಕ್ರಮ ಜರುಗಿಸಲು  ಕೋರಿ ನೀಡಿದ ವರದಿ

2) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 69/2019 ಕಲಂ. 171(ಇ) ಐಪಿಸಿ :-

     ದಿನಾಂಕ:18-04-2019  ರಂದು 13-30 ಗಂಟೆಗೆ  ಪಿಸಿ  275 ಬೀರಪ್ಪ ಏವೂರಾ ರವರು  ಠಾಣಾ ಎನ್.ಸಿ.ಆರ್.  ನಂ 70/2019 ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದು ದಿನಾಂಕ 18-04-2019 ರಂದು 11-30 ಗಂಟೆಗೆ  ಪಿರ್ಯಾದಿದಾರರಾದ  ಕೆ.ಪಿ. ಸಂಜೀವಪ್ಪ ಬಿನ್ ಲೇಟ್ ಪೂಜಪ್ಪ, 51 ವರ್ಷ, ಎಫ್.ಎಸ್.ಟಿ.-7 ತಂಡದ ಮುಖ್ಯಸ್ಥರು, 27, 141 (ಎಲ್.ಎ.ಸಿ) ಚಿಕ್ಕಬಳ್ಳಾಪುರ ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳು, ತಾಲ್ಲೂಕು ಪಂಚಾಯ್ತಿ ಚಿಕ್ಕಬಳ್ಳಾಪುರ ರವರು ಲೋಕಸಭಾ ಚುನಾವಣೆಯ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದಲ್ಲಿ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 10-00 ಗಂಟೆಗೆ ಸಹಾಯಕ ಚುನಾವಣಾಧಿಕಾರಿಗಳು ದೂರವಾಣಿ ಮುಖಾಂತರ ನಗರದ 5 ನೇ ವಾರ್ಡ್ , ಪ್ರಶಾಂತನಗರದಲ್ಲಿ ಮಂಜುನಾಥಾಚಾರಿ ರವರ ಕಛೇರಿಯಲ್ಲಿ  ಹಣವನ್ನು ಹಂಚಿಕೆ ಮಾಡುತ್ತಿದ್ದಾರೆಂದು ತಿಳಿಸಿದ್ದರ ಮೇರೆಗೆ ಕಾರ್ಯಪ್ರವೃತ್ತರಾಗಿ ಸದರಿ ಸ್ಥಳವಾದ ವಾರ್ಡ್ ನಂ.-5 ರ ಪ್ರಶಾಂತನಗರದಲ್ಲಿ ಮಂಜುನಾಥಾಚಾರಿರವರ ಕಛೇರಿಗೆ ಭೇಟಿ ನೀಡಿದಾಗ ಅವರುಗಳು ಅಲ್ಲಿಂದ  ಓಡಿಹೋಗಿದ್ದು, ನಮಗೆ ಬಂದಿರುವ ವಿಡಿಯೋ ಚಿತ್ರಿಕರಣದಂತೆ  ವಿಚಾರಣೆಯನ್ನು ಮಾಡಿದಾಗ  ಮಾಜಿ ನಗರಸಭಾ ಸದಸ್ಯರಾದ  ಮಂಜುನಾಥಾಚಾರಿ ಮತ್ತು ಇತರರು  ಕಾಂಗ್ರೇಸ್ ಪಕ್ಷಕ್ಕೆ ಓಟು ಹಾಕುವಂತೆ  ಹಣವನ್ನು ಹಂಚುತ್ತಿದ್ದರು ಎಂದು ಜನರು ತಿಳಿಸಿದ್ದು,  ಮಾಜಿ ನಗರಸಭಾ ಸದಸ್ಯರಾದ  ಮಂಜುನಾಥಾಚಾರಿ ಮತ್ತು ಇತರರು  ಆಸೆ ಅಮಿಷಗಳಿಗೆ ಜನ ಒಳಗಾಗುವಂತೆ ಮಾಡಿ ಹಣವನ್ನು ಹಂಚಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುತ್ತಾರೆ.  ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು  ಕೋರಿದ್ದರ ಮೇರೆಗೆ  ಠಾಣಾ  ಎನ್.ಸಿ.ಆರ್.  ನಂ.70/2019 ರಂತೆ ದಾಖಲಿಸಿದ್ದು, ಪಿರ್ಯಾದಿದಾರರು ನೀಡಿರುವ ದೂರು ಕಲಂ 171(ಇ) ಐ.ಪಿ.ಸಿ. ಪ್ರಕರಣವಾಗಿದ್ದು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದು ಸದರಿ ದೂರನ್ನು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ಘನ ನ್ಯಾಯಾಲಯದಿಂದ  ಪಡೆದುಕೊಂಡು ಪ್ರಕರಣ ದಾಖಲಿಸಿರುವುದು.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 127/2019 ಕಲಂ. 302,201 ಐಪಿಸಿ :-

     ದಿನಾಂಕ: 17/04/2019 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಕಾಟನಕಲ್ಲು ಗ್ರಾಮದ ವಾಸಿ ನರಸಿಂಹಪ್ಪ ಬಿನ್ ಕೂರ್ಲಕದಿರಪ್ಪರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆಗೆ ನಾವು 3 ಜನ ಮಕ್ಕಳಿದ್ದು, 1 ನೇ ಗಂಗಪ್ಪ, 2 ನೇ ರಾಮಪ್ಪ, 3ನೇ ನಾನು ಆಗಿದ್ದು, ನಾನು ಮತ್ತು 1 ನೇ ಗಂಗಪ್ಪ ಕಾಟನಕಲ್ಲು ಗ್ರಾಮದಲ್ಲಿ ವಾಸವಾಗಿರುತ್ತೇವೆ. 2 ನೇ ರಾಮಪ್ಪ, 42 ವರ್ಷ ರವರು ಈಗ್ಗೆ ಸುಮಾರು 10 ವರ್ಷಗಳ ಹಿಂದೆ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಹೆಚ್. ಕಾಲೋನಿ ಗ್ರಾಮದ ಅಶ‍್ವಥಪ್ಪರವರ ಮಗಳು ನರಸಮ್ಮ ಎಂಬುವವರೊಂದಿಗೆ ಮದುವೆ ಯಾಗಿದ್ದು, ಮದುವೆಯಾದ ನಂತರ ರಾಮಪ್ಪ ತನ್ನ ಪತ್ನಿಯ ಊರಾದ ಹೆಚ್.ಕಾಲೋನಿ ಇವರ ಮನೆಯಲ್ಲಿ ವಾಸವಿದ್ದರು. ರಾಮಪ್ಪರವರ ಪತ್ನಿ ನರಸಮ್ಮ, ಅತ್ತೆ ಲಕ್ಷ್ಮಮ್ಮ, ಮಾವ ಅಶ‍್ವಥಪ್ಪ ಹಾಗೂ ಬಾಮೈದ ನವೀನ್ ಕುಮಾರ್ ಸಹಾ ಅದೇ ಮನೆಯಲ್ಲಿ ವಾಸವಾಗಿದ್ದರು. ರಾಮಪ್ಪನಿಗೆ ಈಗ 7 ತಿಂಗಳ ವಯಸ್ಸಿನ ಗಂಡು ಮಗು ಇರುತ್ತೆ. ಇತ್ತೀಚೆಗೆ ರಾಮಪ್ಪನಿಗೂ ಆತನ ಪತ್ನಿ ನರಸಮ್ಮನಿಗೂ ಆಗಾಗ ಗಲಾಟೆ ಆಗುತ್ತಿದ್ದರಿಂದ ನಾವುಗಳು ಹೋಗಿ ಸಮಾದಾನ ಹೇಳಿ ಬರುತ್ತಿದ್ದೆವು. ಆ ಸಂದರ್ಬದಲ್ಲಿ ನವೀನ್ ಕುಮಾರ್ ರಾಮಪ್ಪನ ಮೇಲೆ ಹೆಚ್ಚು ಗಲಾಟೆ ಮಾಡುತ್ತಿದ್ದನು. ಈ ದಿನ ದಿನಾಂಕ: 17/04/2019 ರಂದು ಬೆಳಿಗ್ಗೆ ನಾನು ಕಾಟನಕಲ್ಲು ಗ್ರಾಮದಲ್ಲಿದ್ದಾಗ ನನ್ನ ಅಣ್ಣ ರಾಮಪ್ಪ, ಹೆಚ್. ಕಾಲೋನಿಯಲ್ಲಿ ಮೃತಪಟ್ಟಿರುತ್ತಾನೆಂದು ವಿಚಾರ ತಿಳಿದು ನಾನು ಹೆಚ್.ಕಾಲೋನಿಗೆ ಬಂದು ನೋಡಲಾಗಿ ರಾಮಪ್ಪ ವಾಸವಾಗಿದ್ದ ಮನೆಯಿಂದ ಸ್ವಲ್ಪ ದೂರದಲ್ಲಿ ಬೋರಲಾಗಿ ಬಿದ್ದಿದ್ದು, ಈತನಿಗೆ ತಲೆಯಲ್ಲಿ ತೀವ್ರ ಸ್ವರೂಪದ ರಕ್ತಗಾಯವಾಗಿ ಮೈಮೇಲೆ ಅಲ್ಲಲ್ಲಿ ಗಾಯಗಳಾಗಿ ಮೃತಪಟ್ಟಿದ್ದನು. ವಿಚಾರಿಸಲಾಗಿ ದಿನಾಂಕ: 16/04/2019 ರಂದು ಸಂಜೆ 5-00 ಗಂಟೆ ಸಮಾರಿಗೆ ರಾಮಪ್ಪ ಮದ್ಯಪಾನ ಮಾಡಿಕೊಂಡು ಮನೆಗೆ ಬಂದಾಗ ರಾಮಪ್ಪನಿಗೂ ಆತನ ಪತ್ನಿ ನರಸಮ್ಮಳಿಗೂ ಗಲಾಟೆಗಳಾಗಿದ್ದು, ಈ ಸಂದರ್ಭದಲ್ಲಿ ನವೀನ್ ಕುಮಾರ ಸಹಾ ಅಲ್ಲೇ ಇದ್ದು ಗಲಾಟೆ ನಂತರ ರಾಮಪ್ಪ ಗಲಾಟೆ ಮಾಡಿಕೊಂಡು ಹೊರಗಡೆ ಹೋರಟು ಹೋದಾಗ ನವೀನ್ ಕುಮಾರ್ ಸಹಾ ಹಿಂಬಾಲಿಸಿಕೊಂಡು ಹೋದನೆಂದು ಇತನೇ ದಿನಾಂಕ: 16/04/2019 ರಂದು ರಾತ್ರಿ ಸುಮಾರು 9-00 ಗಂಟೆಯ ನಂತರ ರಾಮಪ್ಪನನ್ನು ಯಾವುದೋ ಆಯುಧದಿಂದ ತಲೆಗೆ ಮತ್ತು ಮೈಮೇಲೆ ಹೊಡೆದು ಕೊಲೆ ಮಾಡಿರುತ್ತಾನೆಂದು ಹಾಗೂ ಸಾಕ್ಷಾಧಾರಗಳನ್ನು ನಾಶ ಮಾಡಲು ಪ್ರಯತ್ನ ಪಟ್ಟಿರುತ್ತಾನೆಂದು ತಿಳಿದು ಬಂದಿರುತ್ತೆ. ಈ ಕೃತ್ಯದಲ್ಲಿ ಇತರರೂ ಸಹಾ ಬಾಗಿ ಯಾಗಿರುಬಹುದೆಂದು ಅನುಮಾನವಿದ್ದು, ಈ ಬಗ್ಗೆ ನಮ್ಮ ಕುಲಸ್ಥರೊಂದಿಗೆ ವಿಚಾರ ಮಾಡಿ ಈಗ ತಡವಾಗಿ ದೂರು ನೀಡುತ್ತಿದ್ದು, ಈ ಕೊಲೆಗೆ ಕಾರಣನಾದ ನವೀನ್ ಕುಮಾರ್ ನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುವುದಾಗಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

4) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 39/2019 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

     ನಂದಿ ಗಿರಿಧಾಮ ಪೊಲೀಸ್ ಠಾಣೆಯ ಸಬ್ಇನ್ಸಪೆಕ್ಟರ್ ಬಿ.ಕೆ ಪಾಟೀಲ್ ಆಧ ನಾನು ಘನ ನ್ಯಾಯಾಲಯದಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ದಿನಾಂಕ:17-04-2019 ರಂದು ಸಂಜೆ 7-15  ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿ ಕೊಂಡೇನಹಳ್ಳಿ ಗ್ರಾಮಗಳ ಕಡೆ ಲೋಕಸಭಾ ಚುನಾವಣೆಯ ಬಂದೋಬಸ್ತಿನ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಎನೆಂದರೆ ತೌಡನಹಳ್ಳಿ ಗ್ರಾಮದ  ಪಿಳ್ಳಪ್ಪ ಬಿನ್ ಲೇಟ್ ಕೆಂಫಣ್ಣ ರವರ ಚಿಲ್ಲರೆ ಅಂಗಡಿಯಲ್ಲಿ ಅಂಗಡಿಯ ಮಾಲೀಕ ಯಾವುದೇ ಲೈಸನ್ಸ್ ಇಲ್ಲದೆ ಅಂಗಡಿಯಲ್ಲಿ ಮದ್ಯದ ಟೆಟ್ರಾ ಪಾಕೇಟುಗಳನ್ನಿಕೊಂಡು ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುತ್ತಾನೆಂದು ಬಂದ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಜೊತೆಯಲ್ಲಿದ್ದ ಸಿಬ್ಬಂದಿಯರವರೊಡನೆ ತೌಡನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿದ್ದ ಇಬ್ಬರನ್ನು ಪಂಚರಾಗಿ ಕರದುಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಪಂಚರಾಗಿ ಸಹಕರಿಸುವಂತೆ ಕೋರಿದೆವು ಅವರು ಬರಲು ಒಪ್ಪಿದರು ಅವರ ಜೊತೆಯಲ್ಲಿ ರಾತ್ರಿ 7:30 ಗಂಟೆಗೆ ಸ್ಥಳಕ್ಕೆ ಹೋಗಿ ಧಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಸದರಿ ಅಂಗಡಿಯನ್ನು ಶೋದನೆ ಮಾಡಲಾಗಿ ಸದರಿ ಅಂಗಡಿಯಲ್ಲಿ ಒಬ್ಬ ಗಂಡಸು ವ್ಯಾಪಾರ ಮಾಡುತ್ತಿದ್ದು ಅವನ ಹೆಸರು ವಿಳಾಸವನ್ನು ಕೇಳಲಾಗಿ  ಪಿಳ್ಳಪ್ಪ ಬಿನ್ ಲೇಟ್ ಕೆಂಪಣ್ಣ, 65 ವರ್ಷ,ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ತೌಡನಹಳ್ಳಿ ಗ್ರಾಮ ಎಂದು ತಿಳಿಸಿದನು. ಅವನ ಅಂಗಡಿಯನ್ನು ಶೋದನೆ ಮಾಡಲಾಗಿ  ಒಂದು ಬಿಳಿ ಪ್ಲಾಸ್ಟಿಕ್ ಚೀಲವೊಂದು ಸಿಕ್ಕಿದ್ದು ಅದನ್ನು ತೆರೆದು ಪರಿಶೀಲಿಸಲಾಗಿ ವಿವಿದ ಕಂಪನಿಯ ಮದ್ಯದ ಟೆಟ್ರಾ ಪಾಕೇಟುಗಳು ಮತ್ತು ಟಿನ್ ಬಿಯರ್ ಗಳಿದ್ದು ಇವುಗಳನ್ನು ಇಟ್ಟುಕೊಂಟು ಮಾರಾಟ ಮಾಡಲು ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಅಂಗಡಿ ಮಾಲಿಕ ತನ್ನ ಬಳಿ ಏನೂ ಇಲ್ಲವೆಂದು ಹೇಳಿದನು. ಸದರಿ ಪ್ಲಾಸ್ಟಿಕ್ ಚೀಲವನ್ನು ತೆರೆದು  ಪರಿಶೀಲಿಸದಾಗ ಅದರಲ್ಲಿ 1)90 ML ಸಾಮರ್ಥ್ಯದ HAYWARDS WHISKY ಯ 49 ಟೆಟ್ರಾ ಪ್ಯಾಕೇಟುಗಳಿದ್ದು ಒಂದು ಪ್ಯಾಕೇಟಿನ ಬೆಲೆ 30.32 ರೂ ಪೈಸೆ ಆಗಿದ್ದು ಇದರ ಬೆಲೆ ಸುಮಾರು 1485.68 ಪೈಸೆ ಆಗಿರುತ್ತದೆ, ಇವುಗಳ ಸಾಮರ್ಥ್ಯ 4 ಲೀಟರ್ 410 ML ಆಗಿರುತ್ತದೆ. 2) 180 ML ಸಾಮರ್ಥ್ಯದ MCDOWELLS  RUM ನ 6 ಟೆಟ್ರಾ ಪ್ಯಾಕೇಟುಗಳಿದ್ದು ಒಂದು ಪ್ಯಾಕೇಟಿನ ಬೆಲೆ 90.21 ಪೈಸೆ ಆಗಿದ್ದು ಇವುಗಳ ಒಟ್ಟು ಬೆಲೆ 541.26 ಪೈಸೆ ಆಗಿರುತ್ತದೆ. 3)90 ML ಸಾಮರ್ಥ್ಯದ OLD TAVERIN  WHISKY 180 ML ಸಾಮರ್ಥ್ಯದ 9 ಟೆಟ್ರಾ ಪ್ಯಾಕೇಟುಗಳಿದ್ದು ಇದರ ಒಂದು ಪ್ಯಾಕೇಟಿನ ಬೆಲೆ 74.13 ಪೈಸೆ ಆಗಿದ್ದು 667.17 ಆಗಿರುತ್ತದೆ, 4) ಕಿಂಗ್ ಪಿಷರ್ ಕಂಪನಿಯ 330 ಎಂ ಎಲ್  ಸಾಮರ್ಥ್ಯದ 7 ಟಿನ್ ಬಿಯರ್ ಪಿಂಟ್ ಗಳಿದ್ದು ಈ ಒಂದು PINT  ಬಿಯರಿನ ಬೆಲೆ 70/- ರುಪಾಯಿ ಆಗಿದ್ದು ಒಟ್ಟು 490/-ರುಪಾಯಿ ಆಗಿರುತ್ತದೆ. ಆರೋಪಿ ಅಂಗಡಿಯ ಬಳಿ 9 ಲೀಟರ್ 420 ML ಲೀಟರಿನಷ್ಟು ಮದ್ಯ ದೊರೆತಿದ್ದು ಇವುಗಳ ಒಟ್ಟು ಮೌಲ್ಯ 3184/- ರುಪಾಯಿ ಆಗಿರುತ್ತದೆ, ಆರೋಫಿಯ ಅಂಗಡಿಯ ಬಳಿ ದೊರೆತ ಮಾಲುಗಳ ಪೈಕಿ ಒಂದೊಂದು ಪ್ಯಾಕೇಟನ್ನು ಮತ್ತು ಟಿನ್ ಬಿಯರನ್ನು ಅಲಾಯಿದೆಯಾಗಿ ತೆಗೆದುಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಒಂದು ಬಿಳಿ ಬಟ್ಟೆಯ ಚೀಲದಲ್ಲಿಟ್ಟು ಅದಕ್ಕೆ ಪಂಚರ ಸಹಿಗಳುಳ್ಳ ಚೀಟಿಯನ್ನು ಅಂಟಿಸಿ  NG ಎಂಬ ಹೆಸರಿನ ಅಕ್ಷರದಿಂದ ಸೀಲು ಮಾಡಿಕೊಂಡು ಪಂಚರ ಸಮಕ್ಷಮ ರಾತ್ರಿ 19-30 ಗಂಟೆಯಿಂದ 20-30 ಗಂಟೆಯವರೆವಿಗೆ ಅಂಗಡಿಯ ಮುಂದಿದ್ದ ವಿದ್ಯುತ್ ದ್ವೀಪದ ಬೆಳಕಿನಲ್ಲಿ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ ವಿವಿದ ಟೆಟ್ರಾ ಪ್ಯಾಕೇಟುಗಳನ್ನು ಹಾಗೂ ಟಿನ್ ಬಿಯರ್ ಗಳನ್ನು ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಚಿಲ್ಲರೆ ಅಂಗಡಿಯ ಮಾಲೀಕ ಪಿಳ್ಳಪ್ಪ ನನ್ನು ವಶಕ್ಕೆ ಪಡೆದುಕೊಂಡು ರಾತ್ರಿ 20-50 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಸ್ವತಃ ಠಾಣಾ ಮೊಸಂ:39-2019 ಕಲಂ:32.34 ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

5) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 79/2019 ಕಲಂ. 379 ಐಪಿಸಿ :-

     ದಿನಾಂಕ:17/04/2019 ರಂದು ಸಂಜೆ 4.30 ಗಂಟೆಗೆ ಪಿರ್ಯಾದಿದಾರರಾದ ಬಾಬಾಜಾನ್ ಬಿನ್ ಅನ್ವರ್ ಸಾಬ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:17/04/20019 ರಂದು ಬೆಳಿಗ್ಗೆ 7.00 ಗಂಟೆ ಸಮಯದಲ್ಲಿ ನಾನು ನಮ್ಮ ಗ್ರಾಮದಿಂದ ಜಂಗಮಕೋಟೆ ಕ್ರಾಸ್ಗೆ ಸೈಕಲ್ನಲ್ಲಿ ಹೋಗಿ ಜಂಗಮಕೋಟೆ ಕ್ರಾಸ್ನಲ್ಲಿ ನನ್ನ ಸೈಕಲ್ನನ್ನು ಬಿಟ್ಟು ಸಿಮೆಂಟ್ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಬಂದು ನೋಡುವಷ್ಟರಲ್ಲಿ ನಾನು ಬೆಳಿಗೆ ನಿಲ್ಲಿಸಿಹೋಗಿದ್ದ ನನ್ನ ಸೈಕಲ್ ಕಾಣದ ಇದ್ದು ಜಂಗಮಕೋಟೆ ಕ್ರಾಸ್ನಲ್ಲಿ ಹುಡುಕಾಡುತ್ತಿದ್ದಾಗ  ನಮ್ಮ ಗ್ರಾಮದ ಬಾಬಜಾನ್ ರವರು ಜಂಗಮಕೋಟೆ ಕ್ರಾಸ್ನಲ್ಲಿ ಗುಜರಿ ಅಂಗಡಿ ಇಟ್ಟಿದ್ದು ಅವರ ಬಳಿ ಹೋಗಿ ವಿಚಾರ ಮಾಡಲಾಗಿ ಬೆಳಿಗ್ಗೆ 10.00 ಗಂಟೆಯದಲ್ಲಿ ಸಮಯದಲ್ಲಿ ಯಾರೋ ಒಬ್ಬ ಅಸಾಮಿ ಬಂದು ಒಂದು ಸೈಕಲ್ನ್ನ 250 ರೂಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು ನಂತರ ಸೈಕಲ್ನ್ನು ನೋಡಲಾಗಿ ಅದು ನಮ್ಮದಾಗಿದ್ದು ಅವರ ಬಳಿಯಿಂದ ಸೈಕಲ್ನ್ನು ಪಡೆದುಕೊಂಡು ಮತೊಮ್ಮೆ ಆ ಅಸಾಮಿ ನಿಮ್ಮ ಗುಜರಿ ಅಂಗಡಿ ಬಳಿ ಬಂದಲ್ಲಿ ನನಗೆ ತಿಳಿಸುವಂತೆ ಹೇಳಿ ನಮ್ಮ ಸೈಕಲ್ನ್ನು ಪಡೆದುಕೊಂಡು ಹೋಗಿರುತ್ತೇನೆ. ನಂತರ ಇದೇ ದಿನ ಸಂಜೆ 4.00 ಗಂಟೆಯಲ್ಲಿ ಗುಜರಿ ಅಂಗಡಿಯವರು ನನಗೆ ಪೋನ್ ಮಾಡಿ ಸೈಕಲ್ ಮಾರಾಟ ಮಾಡಿರುವ ಅಸಾಮಿ ಅಂಗಡಿಯ ಬಳಿ ಮಾರಾಟ ಮಾಡಲು ಒಂದು ಟಿವಿಎಸ್ ಸೂಪರ್ ಎಕ್ಸ್ಲ್ ದ್ವಿ ಚಕ್ರ ವಾಹನವನ್ನು ತಂದಿರುವುದಾಗಿ ತಿಳಿಸಿದ್ದು ಕೂಡಲೇ ಹೋಗಿ ನೋಡಿ ಅಸಾಮಿಯನ್ನು ವಿಚಾರ ಮಾಡಲಾಗಿ ರಾಜೇಶ ಬಿನ್ ನಾಗಪ್ಪ, 25 ವರ್ಷ, ಆದಿಕನರ್ಾಟಕ, ಕೂಲಿ ಕೆಲಸ ಗಂಬೀರನಹಳ್ಳಿ ಗ್ರಾಮ ಎಂದು ತಿಳಿಸಿದ್ದು ದ್ವಿ ಚಕ್ರ ವಾಹನದ ಬಗ್ಗೆ ವಿಚಾರ ಮಾಡಲಾಗಿ ಸದರಿ ಅಸಾಮಿಯು ತೊದಲುತ್ತಾ ತಿಳಿಸಿದ್ದು ನಾನು ಅನುಮಾನಗೊಂಡು ಸದರಿ ಅಸಾಮಿ ಮತ್ತು ದ್ವಿ ಚಕ್ರ ವಾಹನ ಸಮೇತ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಪೊಲೀಸರ ವಶಕ್ಕೆ ನೀಡಿರುತ್ತೇನೆ ಆದ್ದರಿಂದ ಸೈಕಲ್ ಮತ್ತು ನೊಂದಣಿ ಸಂಖ್ಯೆ ಇಲ್ಲದ ಟಿವಿಎಸ್ ಸೂಪರ್ ಎಕ್ಸ್ಲ್ ದ್ವಿ ಚಕ್ರ ವಾಹವನ್ನು ಕಳ್ಳತನ ಮಾಡಿರುವ ರಾಜೇಶ ಬಿನ್ ನಾಗಪ್ಪ ರವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೆಕೆಂದು ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ 79/2019 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.