ದಿನಾಂಕ : 16/04/2019ರ ಅಪರಾಧ ಪ್ರಕರಣಗಳು

 1. ಬಟ್ಲಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 24/2019. ಕಲಂ: 323, 324, 504, 506 ರೆ/ವಿ 34 ಐಪಿಸಿ:-

          ದಿನಾಂಕ:15/04/2019 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಸುಧಾಕರಾರೆಡ್ಡಿ ಬಿನ್ ಲೇಟ್ ಶ್ರಿರಾಮರೆಡ್ಡಿ, ತುಮ್ಮಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕುರವರು ನೀಡಿದ ಹೇಳಿಕೆ ಸಾರಾಂಶವೆನೇಂದರೇ, ನಮಗೆ ಮತ್ತು ನಮ್ಮ ಗ್ರಾಮದ ಸುಬ್ಬಾರೆಡ್ಡಿಯವರಿಗೆ ಈಗ್ಗೆ 07 ವರ್ಷಗಳಿಂದ ಜಮೀನು ವಿವಾದಗಳಿದ್ದು  ದಿನಾಂಕ 15/04/2019 ರಂದು ಮದ್ಯಾನ್ಹ ಸುಮಾರು 2-40 ಗಂಟೆ ಸಮಯದಲ್ಲಿ ಗ್ರಾಮದ ಕೋದಂಡರಾಮಸ್ವಾಮಿ ದೇವಾಲಯದ ಬಳಿ ಕುಳಿತುಕೊಂಡಿದ್ದಾಗ ಏಕಾಏಕಿ ಸುಬ್ಬರೆಡ್ಡಿ ಮತ್ತು ಶಂಕರರೆಡ್ಡಿ ರವರು ಜಮೀನು ವಿಚಾರದಲ್ಲಿ ಸೆಕ್ರರೇಟರಿಗೆ ಬೈಯುತ್ತಿಯಾ ಅಂತಾ ಹೇಳಿ ಲೋಫರ್ ನನ್ನ ಮಗನೆ ಎಂದು ಸುಬ್ಬರೆಡ್ಡಿ ಕೆನ್ನೆಗೆ ಹೊಡೆದನು ನಾನು ಏಕೆ ಹೊಡೆಯುತ್ತಿರುವುದು ಎಂದು ಕೇಳಿದ್ದಕ್ಕೆ ಶಂಕರರೆಡ್ಡಿಯವರು ಕಾಲುಗಳಿಂದ ಒದ್ದು ಎಳೆದಾಡಿದರು ಅಷ್ಟರಲ್ಲಿ ಸುಬ್ಬರೆಡ್ಡಿ ಮಗ ಶ್ರೀನಾಥ್ ರವರರು ದೊಣ್ಣೆಯಿಂದ ಬೆನ್ನಿಗೆ ಹೊಡೆದು ಮೂಗೇಟು ಉಂಟು ಮಾಡಿದ ಸುಬ್ಬರೆಡ್ಡಿರವರ ಇನ್ನೋಬ್ಬ ಮಗ ಶ್ರೀಕಾಂತ್  ರವರು ಬಂದು ಕಲ್ಲಿನಿಂದ ನನ್ನ ಮೈಕೈ ಹೊಡೆದು ಮೂಗೇಟು ಉಂಟು ಮಾಡಿ ಪ್ರಾಣ ಬೆದರಿಕೆಯನ್ನು ಉಂಟು ಮಾಡಿರುತ್ತಾರೆ  ಆದ್ದರಿಂದ ಸೂಕ್ತ ಕ್ರಮ ಜರುಗಿಸಲು ಕೋರಿ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 25/2019. ಕಲಂ: 323, 324, 504, 506 ರೆ/ವಿ 34 ಐಪಿಸಿ:-

          ದಿನಾಂಕ 15/04/2019 ರಂದು ಸುಬ್ಬರೆಡ್ಡಿ  ಬಿನ್ ಲೇಟ್ ಅಶ್ವಥನಾರಾಯಣರೆಡ್ಡಿ  58 ವರ್ಷ, ತುಮ್ಮಲಹಳ್ಳಿ, ಗ್ರಾಮ, .ಜಿರಾಯ್ತಿ,  ನಾನು ಮೆಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೆನೆ ,ನಮಗೂ ನಮ್ಮ ಗ್ರಾಮದ ವೆಂಕಟರಾಮರೆಡ್ಡಿ ರವರಿಗೂ ಸುಮಾರು ವರ್ಷಗಳಿಂದ ಜಮಿನು ವಿವಾದವಿದ್ದು ಈ ಬಗ್ಗೆ ಅನೇಕ ಸಾರಿ ನ್ಯಾಯ ಪಂಚಾಯ್ತಿ ಗಲಾಟೆಗಳು ಆಗಿರುತ್ತವೆ ಸದರಿ ಜಮೀನು ವಿಚಾರದಲ್ಲಿ ರೆವಿನ್ಯು ಸೆಕ್ರೆಟರಿಗೆ ಬೆದರಿಕೆ ಹಾಕಿರುತ್ತಾರೆಂತ ನಮಗೆ ತಿಳಿಯಿತು ದಿನಾಂಕ 15/04/2019 ರಮದು ಮದ್ಯಾಹ್ನ ಸುಮಾರು 2:40 ಗಂಟೆ  ಸಮಯದಲ್ಲಿ ಸದರಿ ಸುದಾಕರರೆಡ್ಡಿ ಬಿನ್ ಲೇಟ್ ಶ್ರೀರಾಮರೆಡ್ಡಿ ರವರು ನಮ್ಮ ಗ್ರಾಮದ ಶ್ರೀಕೋದಂಡರಾಮಸ್ವಾಮಿ ದೇವಾಲಯದ ಬಳಿ ಕುಳಿತು ಕೊಂಡಿದ್ದಾಗ  ನಾನು ಎಕಪ್ಪ ನೀನು ಸೆಕ್ರೆಟರಿಗೆ ಬೈದಿಯಂತ್ತೆ ಎಂತ ಕೇಳದ್ದಕ್ಕೆ ಸುದಾಕರರೆಡ್ಡಿರವರು ಏಕಾಏಕಿ ಎನೋ ನನ್ನ ಮಗನೆ ನಿನು ಯಾರು ಅದನ್ನು ಕೆಳುದಕ್ಕೆ ಎಂತ ಹೇಳಿ ನನಗೆ ಕೆಳೆಗೆ ಬಿದ್ದ ದೋಣ್ನೆ ಯಿಂದ  ಎಡಕ್ಕೆ ಬಲಕ್ಕೆ ಮತ್ತು ಬೆನ್ನಿಗೆ ಹೊಡೆದನು ,ಅಷ್ಟರಲ್ಲಿ  ವೆಂಕಟರಾಮರೆಡ್ಡಿ ಬಿನ್ ವೆಂಕಟರೆಡ್ಡಿ ರವರು ಬಂದು ನನ್ನ ತುಟಿಗಳಿಂದ ಹೊಡೆದನು ನಾರಾಯಣಸ್ವಾಮಿ ಬಿನ್ ಈರನಾರಾಯಣರೆಡ್ಡಿ ರವರು ಕಾಲುಗಳಿಂದ ಒಂದ್ದರು ನನ್ನನ್ನು ಕಾಪಾಡಲು ಬಂದ ನನ್ನ ಚಿಕ್ಕಪ್ಪನ ಮಗ ಶಂಕರರೆಡ್ಡಿ ರವರಿಗೆ ಶಶಾಂಕ ಬಿನ್ ಸುದಾಕರೆಡ್ಡಿ ರವರು ಬೆನ್ನಿಗೆ ಮತ್ತು ಕಾಲಿಗೆ  ಹೊಡೆದನು ಕಲ್ಲಿಂದ ಮೂಗಿಗೆ ಹೊಡೆದನು ನಾವಿಬ್ಬರು ಕೆಳಕ್ಕೆ ಬಿದ್ದು ಹೊಡೆದನು ಅಷ್ಟರಲ್ಲಿ ನಮ್ಮ ಗ್ರಾಮದ ಗಣೇಶ ಬಿನ್ ರಂಗಾರೆಡ್ಡಿ .ನಾಗರಜ ಬಿನ್ ಬುಡ್ಡಪ್ಪ ರವರು ಬಿಡಿಸಿದರು ನಂತರ ಆಸ್ಪತ್ರೆಗೆ ದಾಖಲಾಗಿದ್ದು  ಕಾನೂನು ಕ್ರಮ ಜರುಗಿಸಲು ಕೋರಿ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 26/2019. ಕಲಂ: 341, 323, 324, 506 ರೆ/ವಿ 34 ಐಪಿಸಿ ಮತ್ತು ಕಲಂ: 3(1)(r), 3(1)(s) The SC & ST (Prevention of Atrocities) Amendment Act 2015:-

          ದಿನಾಂಕ 16/04/2019 ರಂದು ಗಾಯಾಳು ಕುಮಾರ್ ಎನ್ ಬಿನ್ ನಾರಾಯಣಪ್ಪ, ಇರಗಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೇ, ನಾನು ಈಗ್ಗೆ ಒಂದು ವರ್ಷದ ಹಿಂದೆ ಇರಗಂಪಲ್ಲಿ ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಆ ಸಮಯದಲ್ಲಿ ಮ್ಯಾಕಪೋತಲಹಳ್ಳಿ ಗ್ರಾಮದ ಗಂಗಿರೆಡ್ಡಿ @ ದುಬಾಯ್ ರವರು ನನಗೆ ಪರಿಚಯವಿದ್ದು 02-03 ಸಾರಿ ಸಾಲವಾಗಿ ಡಿಸೇಲ್ ಅನ್ನು ಹಾಕಿಸಿಕೊಂಡು ಹೋಗಿದ್ದು ಅದರ ಮೊತ್ತ 10,600 ರೂಗಳಾಗಿರುತ್ತೆ. ನಂತರ ಆತನು ಹೊರದೇಶಕ್ಕೆ ಹೊರಟುಹೋದನು ನಂತರ ನಾನು ಪೆಟ್ರೋಲ್ ಬಂಕ್ ನಲ್ಲಿ ಕೆಲಸವನ್ನು ಬಿಟ್ಟು ಚಿಂತಾಮಣಿಯಲ್ಲಿ ಟಮೋಟ ಮಾರ್ಕೆಟ್ ಗೆ ಕೆಲಸಕ್ಕೆ ಸೇರಿಕೊಂಡೆನು. ದಿನಾಂಕ 15/04/2019 ರಂದು ಗಂಗಿರೆಡ್ಡಿಯವರು ತಮ್ಮ ಗ್ರಾಮಕ್ಕೆ ಬಂದಿದ್ದಾರೆಂತ ತಿಳಿಯಿತು ನಾನು ಅವರಿಗೆ ಸಾಲದ ಹಣವನ್ನು ಕೇಳೋಣವೆಂತ ಸಾಯಂಕಾಲ 4-30 ಗಂಟೆಗೆ ಇರಗಂಪಲ್ಲಿ ಗ್ರಾಮದಲ್ಲಿ ನನ್ನ ಸ್ನೇಹಿತ ರುಚಿತ್ ರವರನ್ನು ಕರೆದುಕೊಂಡು ನಮ್ಮ ಸಂಬಂದಿಕರ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಮ್ಯಾಕಪೋತಲಹಳ್ಳಿ ಗ್ರಾಮಕ್ಕೆ ಹೋಗಿ ಗಂಗಿರೆಡ್ಡಿರವರನ್ನು ಸಾಲದ ಹಣವನ್ನು ಕೇಳಿದೆನು ಆಗ ಗಂಗಿರೆಡ್ಡಿ ನನ್ನ ಬಳಿ ಹಣ ಇಲ್ಲ ಇರಗಂಪಲ್ಲಿ ಗ್ರಾಮದಲ್ಲಿ ನಿನಗೆ ಹಣವನ್ನು ಕೊಡಿಸುತ್ತೇನೆ ಎಂತ ಹೇಳಿ ನಮ್ಮ ದ್ವಿಚಕ್ರ ವಾಹನವನ್ನು ಹತ್ತಿದನು ಸದರಿ ಗ್ರಾಮವನ್ನು ಬಿಟ್ಟು ಸ್ವಲ್ಪ ಮುಂದೆ ಬರುವಷ್ಟರಲ್ಲಿ ಗಂಗಿರೆಡ್ಡಿರವರ ಅಣ್ಣ ಬೈರೆಡ್ಡಿ ರವರು ದ್ವಿಚಕ್ರ ವಾಹನವನ್ನು ನಿಲ್ಲಿಸಿದರು ನಾವು ನಿಲ್ಲಿಸಿದ ತಕ್ಷಣ ಹಿಂದೆ ಕುಳಿತಿದ್ದ ಗಂಗಿರೆಡ್ಡಿ ತನ್ನ ಜೋಬಿನಲ್ಲಿದ್ದ ಚಾಕುವನ್ನು ತೆಗೆದು ನನ್ನ ಬೆನ್ನಿನ ಎಡಬಾಗಕ್ಕೆ ಚಾಕುವಿನಿಂದ ತಿವಿದನು ನಾನು ಗಾಡಿಯಿಂದ ಕೆಳಕ್ಕೆ ಬಿದ್ದೆನು ನಂತರ ನಂತರ ಬೈರೆಡ್ಡಿ ಸಹ ನನ್ನನ್ನು ಹೊಡೆದನು ನಂತರ ಚಾಕುವಿನಿಂದ ಗಂಗಿರೆಡ್ಡಿ ಎದೆಯ ಭಾಗಕ್ಕೆ ತವಿದನು ನನ್ನನ್ನು ಬಿಡಿಸಲು ಬಂದ ರುಚಿತ್ ನನ್ನು ಬೈರೆಡ್ಡಿ ಕೈಗಳಿಂದ ಹೊಡೆದರು ನಂತರ ಗಂಗಿರೆಡ್ಡಿ ಈ ಮಾದಿಗ ನನ್ನ ಮಗನಿಗೆ ಹಣ ಕೊಡಬೇಕಂತೆ ಇವನ ಜ್ಯಾತೀನೆ ಕ್ಯಾಯಾ ಇವನನ್ನು ಪ್ರಾಣಸಹಿತ ಬಿಡಬಾರದು ಎಂದು ಕೂಗಾಡಿದನು ನಂತರ ಅವರು ಹೊರಟು ಹೋದರು ನಂತರ ರುಚಿತ್ ರವರು ನನ್ನನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಟ್ಲಹಳ್ಳಿ ಆಸ್ಪತ್ರೆಗೆ ದಾಖಲಿಸಿ ನಂತರ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತೇನೆ ಈ ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ. ಮೊ.ಸಂ: 28/2019. ಕಲಂ: 279, 338 ಐಪಿಸಿ ಮತ್ತು ಕಲಂ: 134 INDIAN MOTOR VEHICLES ACT-1988:-

          ದಿನಾಂಕ:-15/04/2019 ರಂದು ಸಂಜೆ 5:00 ಗಂಟೆಗೆ ಪಿರ್ಯಾಧಿ ಶ್ರೀ.ಆಯುಬ್ ಬಿನ್  ಷಪಿ ಆಹ್ಮದ್ 33 ವರ್ಷ, ವ್ಯಾಪಾರ, ನಂ-09, 7ನೇ ಕ್ರಾಸ್ ರಶಾದ್ ನಗರ, ಅರಬಿಕ್ ಕಾಲೇಜು ಅಂಚೆ ಬೆಂಗಳೂರು-45 ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ ದಿನಾಂಕ:-12/04/2019 ರಂದು ತಾನು ಮತ್ತು ತಮ್ಮ ಸಂಬಂಧಿಕರು ಪೆನುಗೊಂಡ ದರ್ಗಾಕ್ಕೆ ಹೋಗಲು ಕಾರಿನಲ್ಲಿ ಹೋಗುತ್ತಿರುವಾಗ ತಮ್ಮ ಮುಂದೆ ಕೆಎ-01-ಹೆಚ್.ಎಸ್-8774 ರ ಆಕ್ಸಿಸ್ ದ್ವಿ ಚಕ್ರವಾಹನದಲ್ಲಿ ತಮ್ಮ ತಂಗಿ ಶ್ರೀಮತಿ ಷಾನಾಜ್ ಕೋಂ ಮಹಮದ್ ಆಯುಬ್ 30 ವರ್ಷ, ನಂ 13/2 ಬಿಲಾಲ್ ನಗರ ಕೆ.ಜಿ.ಹಳ್ಳಿ ಬೆಂಗಳೂರು ಮತ್ತು ಅಣ್ಣ ಯುಸೆಪ್ ಬಿನ್ ಷಪಿ ಆಹ್ಮದ್ 35 ವರ್ಷ, ಆಟೋ ಚಾಲಕ ಅರಬಿಕ್ ಕಾಲೇಜು ನಾಗವಾರ ಮುಖ್ಯ ರಸ್ತೆ ಬೆಂಗಳೂರು-45 ರವರು ಹೋಗುತ್ತಿದ್ದು, ಚಿಕ್ಕಬಳ್ಳಾಪುರದ ಬೆಂಗಳೂರು-ಬಾಗೇಪಲ್ಲಿ ಎನ್.ಹೆಚ್-7 ಬೈಪಾಸ್ ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಂಜೆ 7-00 ಗಂಟೆಯ ಸಮಯದಲ್ಲಿ ವಿರುದ್ದ ದಿಕ್ಕಿನಲ್ಲಿ ಬಂದ ಟ್ರಾಕ್ಟರ್ ನಂ-ಕೆಎ-40-ಟಿಎ-253 ಮತ್ತು ಟ್ರಾಲಿ ನಂ-ಕೆಎ-40-ಟಿಎ-254 ರ ಟ್ರಾಕ್ಟರ್ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿದ್ದು, ಕಾರಿನಲ್ಲಿದ್ದ ತಾನು ತಕ್ಷಣ ಹೋಗಿ ನೋಡಲಾಗಿ ದ್ವಿ ಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಶ್ರೀಮತಿ ಷಾನಾಜ್ ರವರಿಗೆ ಮೂಗೇಟುಗಳಾಗಿದ್ದು. ಹಿಂದೆ ಕುಳಿತ್ತಿದ್ದ ಯುಸೆಪ್ ರವರಿಗೆ ಬೆನ್ನಿಗೆ, ನಡುವಿಗೆ ಮತ್ತು ಎಡಕೈಗೆ ತೀವ್ರಗಾಯಗಳಾಗಿ ಚರ್ಮ ಸುಲಿದು ಮೂಳೆ ಕಾಣಿಸುತ್ತಿದ್ದು, ಅಲ್ಲಿನ ಸ್ಥಳೀಯರ ಸಹಾಯದಿಂದ ಅಲ್ಲಿಗೆ ಬಂದ ಯಾವುದೋ ಕಾರಿನಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಗಾಯಾಳುವನ್ನು ನೋಡಿಕೊಳ್ಳೂವವರು ಯಾರೂ ಇಲ್ಲದೇ ಇರುವ ಕಾರಣ ಈ ದಿನ ದಿನಾಂಕ:15-04-2019 ರಂದು ಅಪಘಾತಕ್ಕೆ ಕಾರಣನಾದ ಟ್ರಾಕ್ಟರ್ ನಂ-ಕೆಎ-40-ಟಿಎ-253 ಮತ್ತು ಟ್ರಾಲಿ ನಂ-ಕೆಎ-40-ಟಿಎ-254 ರ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಬೆರಳಚ್ಚು ದೂರಿನ ಮೇರೆಗೆ ದಿನಾಂಕ:-15/04/2019 ರಂದು ಸಂಜೆ 5:00 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ. ಮೊ.ಸಂ: 29/2019. ಕಲಂ: 279, 336 ಐಪಿಸಿ:-

          ದಿನಾಂಕ:-16/04/2019 ರಂದು ಮಧ್ಯಾಹ್ನ 1:00 ಗಂಟೆಗೆ ಪಿರ್ಯಾಧಿ ಶ್ರೀ.ಚೇತನ್ ಎಸ್ ಬಿನ್ ಶಂಕರ ಲಿಂಗೇಗೌಡ 28 ವರ್ಷ, ವಕ್ಕಲಿಗರು, ಕೆಎ-43-8930 ರ ಟಿಪ್ಪರ್ ಲಾರಿ ಮಾಲೀಕ, ನಂ-220, ಚಿಕ್ಕಜಾಲ ಹೋಬಳಿ, ಬೆಂಗಳೂರು ಉತ್ತರ ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ ತನ್ನ ಕೆ.ಎ-43-8930 ರ ಟಿಪ್ಪರ್ ಲಾರಿಗೆ ಚಾಲಕನಾಗಿ ಎಂ. ರಮೇಶ್ ಬಿನ್ ಮಂಜುನಾಥ 28 ವರ್ಷ, ಬೋವಿ ಜನಾಂಗ, ಕಾಡಗಾನಹಳ್ಳಿ, ವಿದ್ಯಾನಗರ ಕ್ರಾಸ್, ಬೆಟ್ಟಹಲಸೂರು ಅಂಚೆ ಜಾಲಹೋಬಳಿ ಬೆಂಗಳೂರು ಉತ್ತರ-562157 ರವರನ್ನು ನೇಮಕ ಮಾಡಿಕೊಂಡಿದ್ದು. ದಿನಾಂಕ:-15-04-2019 ರಂದು ಬೆಂಗಳೂರಿನಿಂದ ಪೆರೇಸಂದ್ರದಲ್ಲಿ ಜಲ್ಲಿಯನ್ನು ತುಂಬಿಕೊಂಡು ಬರಲು ಕಳುಹಿಸಿಕೊಟ್ಟಿದ್ದು. ಅದರಂತೆ ಬೆಂಗಳೂರಿನಿಂದ ಪರೆಸಂದ್ರಕ್ಕೆ ಬರಲು ಬೆಂಗಳೂರು – ಬಾಗೇಪಲ್ಲಿ ಎನ್.ಹೆಚ್-7 ಬೈಪಾಸ್ ರಸ್ತೆಯ ಅಗಲಗುರ್ಕಿ ಪ್ಲೇ ಓವರ್ ಮೇಲೆ ಬರುತ್ತಿದ್ದಾಗ ರಾತ್ರಿ 10-00 ಗಂಟೆಯ ಸಮಯದಲ್ಲಿ ಮುಂದೆ ಹೋಗುತ್ತಿದ್ದ ವಾಹನ ಅಡ್ಡಬಂದಾಗ ವಾಹನವನ್ನು ಎಡಬಾಗಕ್ಕೆ ತಿರುಗಿಸಿದಾಗ ಟಿಪ್ಪರ್ ಲಾರಿ ಪ್ಲೇಓವರ್ ನಿಂದ ಕೆಳಗೆ ಬಿದ್ದು. ಲಾರಿ ಜಕಂಗೊಂಡಿದ್ದು. ತನಗೆ ಯಾವುದೇ ಗಾಯಗಳಾಗಿರುವುದಿಲ್ಲವೆಂತ ಲಾರಿ ಚಾಲಕ ತನಗೆ ಪೋನ್ ಮೂಲಕ ತಿಳಿಸಿದ್ದು. ತಾನು ತಕ್ಷಣ ಅಪಘಾತ ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು. ಟಿಪ್ಪರ್ ಲಾರಿಯನ್ನು ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಪ್ಲೇ ಓವರ್ ನಿಂದ ಉರುಳಿಸಿದ್ದು. ಲಾರಿಯನ್ನು ನೋಡಲಾಗಿ ಟಿಪ್ಪರ್ ಲಾರಿ ಮುಂದಿನ ಕ್ಯಾಬಿನ್ ಗ್ಲಾಸ್ ಸಮೇತ ಇಂಜಿನ್ ಛಾಸಿ ಸಮೇತ ಚಕ್ರಗಳು ಬಾಡಿ ಲಾರಿ ಸಮೇತ ಜಕಂಗೊಂಡಿದ್ದು.

   ತಾನು ಟಿಪ್ಪರ್ ಲಾರಿ ಇನ್ಸುರೆನ್ಸ್ ರವರನ್ನು ಬೇಟಿ ಮಾಡಿ ಈ ದಿನ ದಿನಾಂಕ: 16-04-2019 ರಂದು ತಡವಾಗಿ ಅಪಘಾತಕ್ಕೆ ಕಾರಣನಾದ ಟಿಪ್ಪರ್ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಬೆರಳಚ್ಚು ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 126/2019. ಕಲಂ: 279, 337 ಐಪಿಸಿ:-

ದಿನಾಂಕ:15/04/219 ರಂದು ಸಂಜೆ 18:15 ಗಂಟೆಗೆ ಪಿರ್ಯಾದಿ ಸಿ ಊರ್ಮೀಳಾ ಬಿನ್ ಸಿ ಪುಲ್ಲಾರೆಡ್ಡಿ, 30 ವರ್ಷ, ರೆಡ್ಡಿ ಜನಾಂಗ, ಭುವನೇಶ್ವರಿ ನಗರ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ.ತಾನು ಬೆಂಗಳೂರಿನ ಹಲಸೂರಿನಲ್ಲಿರುವ ಲಿ ಅಂಡ್ ಪಂಗ್ ಖಾಸಗೀ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಮೇಲ್ಕಂಡ ವಿಳಾಸದಲ್ಲಿ ತನ್ನ ಸಂಸಾರದ ಸಮೇತವಾಗಿ ವಾಸವಾಗಿರುತ್ತೇನೆ. ತಮ್ಮ ಸ್ವಂತ ಗ್ರಾಮ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ಕೊಸವಾರಿಪಲ್ಲಿಯ ಗುಮ್ಮಡಕಾಯಿವಾರಪಲ್ಲಿ ಗ್ರಾಮವಾಗಿರುತ್ತದೆ. ದಿನಾಂಕ 02/04/2019 ರಂದು ತನ್ನ ತಂದೆಯವರಾದ ಸಿ.ಪುಲ್ಲಾರೆಡ್ಡಿ ಹಾಗು ತನ್ನ ತಾಯಿಯವರಾದ ವನಜಾ ರವರು ಉಗಾದಿ ಹಬ್ಬಕ್ಕೇಂದು ತಮ್ಮ ಬಾಬತ್ತು ಕೆಎ-04-ಹೆಚ್.ಕೆ-1034 ಟಿವಿಎಸ್ ಸ್ಟಾರ್ ಸಿಟಿ ದ್ವಿ ಚಕ್ರ ವಾಹನದಲ್ಲಿ ಬೆಂಗಳೂರಿನಿಂದ ತಮ್ಮ ಸ್ವಂತ ಗ್ರಾಮಕ್ಕೆ ಹೋಗಿದ್ದು, ನಂತರ ದಿನಾಂಕ 13/04/2019 ರಂದು ತಾನು ಬಸ್ಸಿನಲ್ಲಿ ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಹೋಗಿರುತ್ತೇನೆ. ನಂತರ ದಿನಾಂಕ 14/04/2019 ರಂದು ಬೆಳಿಗ್ಗೆ ತಾನು ಮತ್ತು ತನ್ನ ತಾಯಿಯವರಾದ ವನಜಾ ರವರು ಬಸ್ಸಿನಲ್ಲಿ ತಮ್ಮ ಗ್ರಾಮದಿಂದ ಬೆಂಗಳೂರಿಗೆ ಹೊರಟಿದ್ದು, ತನ್ನ ತಂದೆಯವರಾದ ಸಿ.ಪುಲ್ಲಾರೆಡ್ಡಿ ಒಬ್ಬರೇ ತಮ್ಮ ಬಾಬತ್ತು ಕೆಎ-04-ಹೆಚ್.ಕೆ-1034 ಟಿವಿಎಸ್ ಸ್ಟಾರ್ ಸಿಟಿ ದ್ವಿ ಚಕ್ರ ವಾಹನದಲ್ಲಿ ತಮ್ಮ ಗ್ರಾಮದಿಂದ ಬಂದಿರುತ್ತೇವೆ. ದಿನಾಂಕ 14/04/2019 ರಂದು ಮದ್ಯಾಹ್ನ ಸುಮಾರು 3-45 ಗಂಟೆ ಸಮಯದಲ್ಲಿ ಯಾರೋ ತನ್ನ ತಂದೆಯವರ ಮೊಬೈಲ್ ನಿಂದ ನನ್ನ ತಂಗಿಯಾದ ಭವ್ಯ ರವರಿಗೆ ಪೋನ್ ಮಾಡಿ ನನ್ನ ತಂದೆಯವರಿಗೆ ಕೈವಾರ ಕ್ರಾಸ್ ಬಳಿ ಅಕ್ಸಿಡೆಂಟ್ ಆಗಿದೇ ಎಂದು ತಿಳಿಸಿದ್ದು ನಂತರ ನನ್ನ ತಂಗಿ ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದು, ಕೂಡಲೇ ನಾನು ನನ್ನ ತಂದೆಯವರ ಮೊಬೈಲ್ ನಂಬರ್ ಗೆ ಪೋನ್ ಮಾಡಿದಾಗ ಯಾರೋ ಸಾರ್ವಜನಿಕರು ನನ್ನ ತಂದೆಯವರ ಪೋನ್ ಅನ್ನು ತೆಗೆದು ದಿನಾಂಕ 14/04/2019 ರಂದು ಮದ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ನನ್ನ ತಂದೆಯವರು ಮದನಪಲ್ಲಿ ರಸ್ತೆಯ ಕಡೆಯಿಂದ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಕೈವಾರ ಕ್ರಾಸ್ ನಲ್ಲಿರುವ ಪೆಟ್ರೋಲ್ ಬಂಕ್ ನ ಮುಂಭಾಗದ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಈ ಸಮಯದಲ್ಲಿ ಹಿಂಬದಿಯಿಂದ ಬಂದ ಕೆಎ-03-ಎಂಎಲ್-2749 ನೊಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಂದೆಯವರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ನನ್ನ ತಂದೆಯ ತಲೆಗೆ, ಬಲ ಕೈಗೆ, ಬಲ ಕಾಲಿನ ಪಾದಕ್ಕೆ. ರಕ್ತಗಾಯವಾಗಿದ್ದು ತಾನು ಮತ್ತು ಇತರರು ಸೇರಿ ಗಾಯಾಳುವನ್ನು ಉಪಚರಿಸಿ ಆಂಬುಲನ್ಸ್ ನಲ್ಲಿ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ನಂತರ ನಾವು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿರುತ್ತದೆ. ನನ್ನ ತಂದೆಯವರು ಇನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ನಾನು ಅವರ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ನನ್ನ ತಂದೆಯವರಿಗೆ ಅಪಘಾತವನ್ನುಂಟು ಮಾಡಿದ ಮೇಲ್ಕಂಡ ಕೆಎ-03-ಎಂಎಲ್-2749 ನೊಂದಣಿ ಸಂಖ್ಯೆಯ ಕಾರಿನ ಚಾಲಕನ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ. ಮೊ.ಸಂ: 77/2019. ಕಲಂ: 341, 323, 504, 506 ರೆ/ವಿ 34 ಐಪಿಸಿ ಮತ್ತು ಕಲಂ: 3(1)(r), 3(1)(s) The SC & ST (Prevention of Atrocities) Amendment Act 2015:-

ದಿನಾಂಕ:15/04/2019 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಸಂಪಂಗಿ ಬಿನ್ ಯರ್ರಪ್ಪ, 28 ವರ್ಷ, ಆದಿ ದ್ರಾವಿಡ ಜನಾಂಗ, ಬಿ,ಎಂ.ಟಿ.ಸಿ ಯಲ್ಲಿ ನಿರ್ವಾಹಕ ಕೆಲಸ ವಾಸ:ಚೌಡದೇನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ವರದಿಯ ಸಾರಾಂಶವೆನೇಂದರೆ, ನಾನು ಬೆಂಗಳೂರಿನ ಯಲಹಂಕ ಡಿಪೋವಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ.ದಿನಾಂಕ:13/04/2019ರಂದು ಸಂಜೆ ಕೆಲಸ ಮುಗಿಸಿಕೊಂಡು ಬೆಂಗಳೂರಿಂದ ನಮ್ಮ ಸ್ವಂತ ಊರಿಗೆ ಬಂದಿರುತ್ತೇನೆ.ದಿನಾಂಕ:14/04/2019 ರಂದು ನನ್ನ ತಮ್ಮನಾದ ನರಸಿಂಹ ಮತ್ತು ವೆಂಕಟರೆಡ್ಡಿ ಇತತರಿಗೆ  ಊರಿನಲ್ಲಿ ನೀರಿನ ವಿಚಾರವಾಗಿ ಗಲಾಟೆಗಳಾಗಿದ್ದು  ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ  ಪ್ರಕರಣಗಳು ದಾಖಲಾಗಿರುತ್ತವೆ.ನಮ್ಮ ತಮ್ಮಂದಿರಾದ ನರಸಿಂಹಪ್ಪ ಮತ್ತು ಮಂಜುನಾಥ ರವರುಗಳನ್ನು ಚಿಕಿತ್ಸೆಗಾಗಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತಿರುತ್ತೇನೆ. ದಿನಾಂಕ:14/04/2019 ರಂದು ಬೆಳಗ್ಗೆ 10-05 ಗಂಟೆಯ ಸಮಯದಲ್ಲಿ ನಾನು ಸರ್ಕಾರಿ ಆಸ್ಪತ್ರೆ ಮುಂಭಾಗದ ಮೆಡಿಕಲ್ ಶಾಫ್ ನಲ್ಲಿ ಔಷದಿಯನ್ನು ತೆಗೆದುಕೊಂಡು ಆಸ್ಪತ್ರೆಯ ಮುಖ್ಯದ್ವಾರದ ಬಳಿ ಬಂದಾಗ ನಮ್ಮ ಗ್ರಾಮದ ವಾಸಿಗಳಾದ  (1)ವೆಂಕಟರೆಡ್ಡಿ ಬಿನ್ ಮುನಿಸ್ವಾಮಿ, 42 ವರ್ಷ, ವಕ್ಕಲಿಗರು,(2)ರಾಮಚಂದ್ರಪ್ಪ ಬಿನ್ ನಾರೆಪ್ಪ, 50 ವರ್ಷ, ಆದಿ ದ್ರಾವಿಡ ಜನಾಂಗ (3) ಅಭಿಲಾಷ್ ಬಿನ್ ರಾಮಚಂದ್ರಪ್ಪ.24ವರ್ಷ, ಆದಿ ದ್ರಾವಿಡ ಜನಾಂಗ ರವರು ಗುಂಪು ಸೇರಿಕೊಂಡು ಬಂದು ಆಸ್ಪತ್ರೆಯ ಒಳಗೆ ಹೋಗದಂತೆ ಅಡ್ಡಗಟ್ಟಿ ತಡೆದು  ಎಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ನೀನು ಊರು ಕಡೆ ಬಂದರೆ ಪ್ರಾಣ ಸಹಿತ ಬಿಡುವುದಿಲ್ಲಾವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆ ಪೈಕಿ ವೆಂಕಟರೆಡ್ಡಿ ರವರು “ನಿಯಮ್ಮ ಜಾತಿನೇ ಕೇಯಾ ಮಾಲ ನಾ ಕೊಡಕ” ಎಂದು ಜಾತಿ ನಿಂದನೆ ಮಾಡಿರುತ್ತಾರೆ. ನಂತರ ನಾನು ಅವರಿಂದ ಬಿಡಿಸಿಕೊಂಡು ಆಸ್ಪತ್ರೆಯ ಒಳಗೆ  ಹೋಗುತ್ತಿದ್ದಾಗ ವೆಂಕಟರೆಡ್ಡಿ ರವರು ಕಾಲಿನಿಂದ ಹೊಟ್ಟೆಗೆ ಹೊದ್ದು ಮೂಗೇಟನ್ನುಂಟು ಮಾಡಿರುತ್ತಾರೆ.ಅಷ್ಟರಲ್ಲಿ ಅಲ್ಲಿಯೇ ಇದ್ದ  ನಮ್ಮ ಗ್ರಾಮದ ವಾಸಿಯಾದ ರಮೇಶ್ ಬಿನ್ ಬೈರೆಡ್ಡಿರವರು ಬಂದು ಜಗಳವನ್ನು ಬಿಡಿಸಿ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡಂತೆ ನನ್ನನ್ನು ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿ ಕಾಲಿನಿಂದ ಹೊದ್ದು ಮೂಗೇಟನ್ನುಂಟು ಮಾಡಿರುವ ಹಾಗೂ ನಮ್ಮ ಗ್ರಾಮದಲ್ಲಿ ನಡೆದ ಗಲಾಟೆಗಳನ್ನು ಮನಸ್ಸಿನಲ್ಲಿಟ್ಟುಕೊಂಡುನನ್ನ ಮೇಲೆ ಗಲಾಟೆ ಮಾಡಿರುವ  ಮೇಲ್ಕಂಡವರ ವಿರುದ್ದ ಕಾನೂನಿನ ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ. ಮೊ.ಸಂ: 78/2019. ಕಲಂ: 78(III) KARNATAKA POLICE ACT, 1963 ಮತ್ತು ಕಲಂ 34 ಐಪಿಸಿ :-

          ದಿನಾಂಕ:16-04-2019 ರಂದು ಬೆಳಗ್ಗೆ12-00 ಗಂಟೆಗೆ ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ, ತಾನೂ ಬೆಳಗ್ಗೆ 10-30 ಗಂಟೆಯಲ್ಲಿ ನಗರದಲ್ಲಿ ಗಸ್ತು ಮಾಡುತ್ತಾ ಕೋಲಾರ ಸರ್ಕಲ್ ಬಳಿ ಬಂದಿದ್ದಾಗ ಟಿಪ್ಪು ನಗರಕ್ಕೆ ಹೋಗುವ ರಸ್ತೆಯ ತಿರುವುನರುವ ಅರಳಿ ಮರದ ಬಳಿ  ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅಲ್ಲಿಂದಲೇ ಪಂಚರನ್ನು ಕರೆದುಕೊಂಡು ಮತ್ತು ಅವರ ಜೊತೆಯಲ್ಲಿದ್ದ ಪೊಲೀಸ್ ಸಿಬ್ಬಂದಿಯಾದ ಸಿ.ಹೆಚ್.ಸಿ 124 ನರಸಿಂಹಮೂರ್ತಿ ಮತ್ತು ಸಿ.ಹೆಚ್.ಸಿ 126 ನಾಗಭೂಷಣ್ ರವರನ್ನು ಜೀಫ್ ಸಂಖ್ಯೆ:ಕೆಎ-40-ಜಿ-356 ವಾಹನದಲ್ಲಿ ಕೋಲಾರದ ಕ್ರಾಸ್ ನಿಂದ  ಟಿಪ್ಪು ನಗರಕ್ಕೆ  ಹೋಗುವ ರಸ್ತೆಯ ತಿರುವಿಗೆ ಹೋಗಿ ಮರೆಯಲ್ಲಿ ಜೀಫ್ ನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಸ್ವಲ್ಪ ದೂರ ಹೋಗಿಮರೆಯ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳವಾದ ಅರಳಿ ಮರದ ಕೆಳಗೆ ನಿಂತುಕೊಂಡು ಜನರನ್ನು ಗುಂಪು ಸೇರಿಕೊಂಡು ಕೈಯಲ್ಲಿ ಒಂದು ಪೆನ್ನು ಪೇಪರ್ ನ್ನು ಹಿಡಿದು ಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಹಣ ಕಟ್ಟುವಂತೆ  ಪ್ರೇರೆಪಿಸಿ ಮಟ್ಕಾ ಚೀಟಿಗಳನ್ನು ಬರೆಯುತ್ತಿದ್ದನು ಪೋಲೀಸರು ಸುತ್ತುವರೆದು ಧಾಳಿ ಮಾಡುವಷ್ಟರಲ್ಲಿ ಅಲ್ಲಿ ನೆರೆದಿದ್ದ ಜನರೆಲ್ಲಾ ಓಡಿ ಹೋಗಿದ್ದು ಮಟ್ಕಾ ಸಂಖ್ಯೆ ಬರೆಯುತ್ತಿದ್ದಾ ವ್ಯೆಕ್ತಿಯ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ರಮೇಶ್ ಬಿನ್ ಶ್ರಿನಿವಾಸ, 29 ವರ್ಷ, ಎಸ್.ಟಿ ಜನಾಂಗ, ಗಾರೆ ಕೆಲಸ , ವಾಸ: ವಿನಾಯಕ ನಗರ, ಚಿಂತಾಮಣಿ ನಗರ ಎಂದು ತಿಳಿಸಿದ್ದು ಆತನನ್ನು ಅಂಗ ಶೋಧನೆ ಮಾಡಲಾಗಿ ನಗದು ಹಣ 840-00ರೂ ಇದ್ದು ಒಂದು ಮಟ್ಕಾ ಚೀಟಿ, ಒಂದು ಪೆನ್ನು ಇದ್ದು ಸದರಿ ಹಣದ ಬಗ್ಗೆ ಕೇಳಲಾಗಿ ಇದು ಮಟ್ಕಾ ಚೀಟಿಗಳನ್ನು ಬರೆದು ಸಂಪಾದಿಸಿರುವ ಹಣವೆಂತಲೂ ತಾನೂ ಪ್ರತಿ ದಿನ ಸಂಜೆಯ ವರೆಗೂ ಮಟ್ಕಾ ಚೀಟಿಗಳನ್ನು ಬರೆದು ಗಳಿಸಿದ  ಹಣವನ್ನು ಇದೇ ಚಿಂತಾಮಣಿ , ತಿಮ್ಮಸಂದ್ರ ವಾಸಿಯಾದ ನಾಗೇಶ್ ರವರಿಗೆ ನೀಡಿ ಅವರಂದ ಸಂಜೆ ಕಮೀಷನ್ ಹಣವನ್ನು ಪಡೆಯುವುದಾಗಿ ನುಡಿದಿರುತ್ತಾನೆ. ನಂತರ ಪೋಲೀಸರು ಪಂಚನಾಮೆಯ ಮೂಲಕ ಹಣ,ಪೆನ್ನು,ಮಟ್ಕಾ ಚೀಟಿಯನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದುಕೊಂಡು ಆಸಾಮಿಯೊಂದಿಗೆ  ಠಾಣೆಗೆ ವಾಪಸ್ಸಾಗಿ ಠಾಣಾಧಿಕಾರಗಿಳಿಗೆ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:78/2019 ಕಲಂ:78(3) ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ. ಮೊ.ಸಂ: 60/2019. ಕಲಂ: 504, 324 ಐಪಿಸಿ:-

          ದಿನಾಂಕ:16/04/2019 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ನಾರಾಯಣಪ್ಪ ಬಿನ್ ಲೇಟ್ ನರಸಿಂಹಪ್ಪ, 50 ವರ್ಷ, ದೊಂಬರ ಜನಾಂಗ, ಕೂಲಿ ಕೆಲಸ, ವಾಸ: ಆನಂದಪುರ ಗ್ರಾಮ, ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಗಾರೆ ಕೆಲಸದಿಂದ ಜೀವನ ಮಾಡುತ್ತಿರುತ್ತೇನೆ. ದಿನಾಂಕ:11/04/2019 ರಂದು ನಾನು ಬೆಳಿಗ್ಗೆಯಿಂದ ಮನೆಯಲ್ಲಿಯೇ ಇದ್ದೆ. ಸಂಜೆ ಸುಮಾರು 6-00 ಗಂಟೆಯ ಸಮಯದಲ್ಲಿ ನಾನು ಮನೆಯ ಬಳಿಯಿದ್ದಾಗ ನಮ್ಮ ಚಿಕ್ಕಪ್ಪನ ಮಗನಾದ ನರಸಪ್ಪ ಬಿನ್ ಗಂಗಪ್ಪ ಎಂಬುವವನು ಯಾರೋ ನಮ್ಮ ಜನಾಂಗದವರು ಮೃತಪಟ್ಟಿದ್ದ ವಿಚಾರದಲ್ಲಿ ನಾವು ಹೋಗಿಲ್ಲವೆಂದು ಬೈದುಕೊಳ್ಳುತ್ತಿದ್ದು, ಅದಕ್ಕೆ ನಾನು ಯಾಕೋ ನೀನು ಬೈದುಕೊಳ್ಳುತ್ತಿರುವುದು ನನಗೆ ಗೊತ್ತಿಲ್ಲವೆಂದು ಹೇಳಿದರೆ, ಸೂಳೆ ನನ್ನ ಮಗನೇ ಯಾಕೋ ನೀನು ಬಂದಿಲ್ಲವೆಂದು, ಯಾವನೂ ಬರಲಿಲ್ಲ ಏನಕ್ಕೆ ಇರುವುದು ನಿನ್ನಮ್ಮನ್ ಎಂದು ಇನ್ನೂ ಬಾಯಿಗೆ ಬಂದಂತೆ ಬೈದು ಅಲ್ಲಿಯೇ ಇದ್ದ ದೊಣ್ಣೆಯಿಂದ ನನ್ನ ತಲೆಗೆ ಹೊಡೆದನು. ನನ್ನ ತಲೆಗೆ ರಕ್ತಗಾಯವಾಗಿ ನಾನು ಕಿರುಚಿಕೊಂಡು ಕೆಳಕ್ಕೆ ಬಿದ್ದಾಗ ನನ್ನ ಹೆಂಡತಿ ಲಕ್ಷ್ಮೀನರಸಮ್ಮ ಹಾಗೂ ನಮ್ಮ ಅಕ್ಕ-ಪಕ್ಕದ ಮನೆಯವರು ಬಂದು ಜಗಳ ಬಿಡಿಸಿ ನನಗೆ ಉಪಚರಿಸಿದ್ದು, ನಂತರ ನಾನು ನನ್ನ ಹೆಂಡತಿಯೊಂದಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತೇನೆ.  ಈಗ ದೂರನ್ನು ತಡವಾಗಿ ಕೊಡುತ್ತಿದ್ದು, ತಾವುಗಳು ನರಸಪ್ಪ ರವರನ್ನು ಕರೆಯಿಸಿ ನಮ್ಮ ತಂಟೆಗೆ ಬರದಂತೆ ಬಂದೋಬಸ್ತ್ ಮಾಡಿ ಆತನ ವಿರುದ್ದ ಕ್ರಮ ಜರುಗಿಸಬೇಕೆಂದು ಕೋರಿದ್ದರ ದೂರಿನ ಸಾರಾಂಶವಾಗಿರುತ್ತದೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 44/2019. ಕಲಂ: 15(A),32(3) ಕೆ.ಇ.ಆಕ್ಟ್:-

          ದಿನಾಂಕ 16/04/2019 ರಂದು ಮಧ್ಯಾಹ್ನ 2-15 ಗಂಟೆಗೆ ಪಿರ್ಯಾದಿಯಾದ ಚಿಕ್ಕಬಳ್ಳಾಪುರ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್  ಆರ್.ನಾರಾಯಣಸ್ವಾಮಿರವರು ಠಾಣೆಗೆ ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂಧರೆ:  ತಾನು ಮತ್ತು ಸಿಬ್ಬಂದಿಯಾದ ಸಿಪಿಸಿ-365 ಮಲ್ಲಿಕಾರ್ಜನ ರವರು ಅಕ್ರಮ ಚಟುವಟಿಕೆಗಳ ಪತ್ತೆ ಬಗ್ಗೆ ಚಿಕ್ಕಬಳ್ಳಾಪುರ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಿ. ಚಿನ್ನಪ್ಪ ರವರಿಂದ ನೇಮಕಗೊಂಡು  ಕರ್ತವ್ಯದಲ್ಲಿದ್ದಾಗ, ದಿನಾಂಕ;- 16-04-2019 ರಂದು ಬೆಳಗ್ಗೆ 11-00 ಗಂಟೆಗೆ ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮುರುಗಮಲ್ಲಾ ಗ್ರಾಮದ ಹಸೀನಾ ಕೋಂ ಲೇಟ್ ಹೈದರ್ ಸಾಬ್ ರವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಲೈಸನ್ಸ್ ಇಲ್ಲದೆ ಮಧ್ಯಪಾನವನ್ನು ಇಟ್ಟುಕೊಂಡು ಸಾರ್ವಜನಿಕರ ರಸ್ತೆಯಲ್ಲಿ ಮಧ್ಯಪಾನವನ್ನು ಮಾಡಲು ಅವಕಾಶ ಮಾಡಿಕೊಟ್ಟು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಮ.ಹೆಚ್.ಸಿ-251 ಸಾವಿತ್ರಮ್ಮ ರವರನ್ನು ಬರಮಾಡಿಕೊಂಡು ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-365 ಮಲ್ಲಿಕಾರ್ಜುನ ರವರೊಂದಿಗೆ ದಾಳಿಮಾಡಲು ಮುರುಗಮಲ್ಲಾ  ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ಮಹಿಳೆ ಮನೆಯ  ಮುಂಭಾಗದಲ್ಲಿ ಸಾರ್ವಜನಿಕರ ಓಡಾಡುವ ಸ್ಥಳದಲ್ಲಿ ಮಧ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ತಾನು ಮತ್ತು ಸಿಬ್ಬಂದಿ ಸುತ್ತುವರದು ಹೆಸರು ಮತ್ತು ವಿಳಾಸ ವಿಚಾರಸಲಾಗಿ ನನ್ನ ಹೆಸರು ಹಸೀನಾ ಕೋಂ ಲೇಟ್ ಹೈದರ್ ಸಾಭ್, 55 ವರ್ಷ, ಮುಸ್ಲೀಂ ಜನಾಂಗ, ಕೂಲಿ ಕೆಲಸ, ಮುರುಗಮಲ್ಲಾ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದಳು. ಅವರ ಬಳಿ ಇದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 1) HAYWARDS CHEERS WHISKY 90 ML TETRA POCKET’S 19*30.32= 576.08  2) HAYWARDS CHEERS WHISKY 180 ML 3  TETRA POCKET’S 3*60.64 = 181.92  ಆಗಿರುತ್ತದೆ.  ಒಟ್ಟು 2.250 ಎಂ.ಎಲ್  ಮದ್ಯ ಇದ್ದು, ಅದರ ಅಂದಾಜು ಮೌಲ್ಯ 758 /- ರೂ ಆಗಿರುತ್ತೆ. ಪಂಚಾಯ್ತಿದಾರರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಮಧ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಸಾರ್ವಜನಿಕವಾಗಿ ಅವಕಾಶ ಮಾಡಿಕೊಟ್ಟಿರುವ ಬಗ್ಗೆ  ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಮಧ್ಯದ ಮಾರಾಟದ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ.ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ  ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿತಳನ್ನು ವಶಕ್ಕೆ ಪಡೆದುಕೊಂಡಿರುತ್ತೆ, ವಶಪಡಿಸಿಕೊಂಡ ಮಾಲುಗಳನ್ನು ಮತ್ತು ಆರೋಪಿತಳನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಆರೋಪಿತಳ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ವರದಿ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 78/2019. ಕಲಂ: 323, 324, 307, 342, 504, 506, ರೆ/ವಿ 34 ಐಪಿಸಿ:-

          ದಿನಾಂಕ:16.04.2019 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಗೋವರ್ದನ್ ಬಿನ್ ಕೊಂಡಪ್ಪ,  ಸುಮಾರು 30 ವರ್ಷ, ಪ.ಜಾತಿ (ಎಡಿ),  ಕೂಲಿಕೆಲಸ, ವಾಸ ಚಿಲೇನಹಳ್ಳಿ ಗ್ರಾಮದ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು  ತಾಲ್ಲೂಕು. ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಮಶವೇನೆಂದರೆ,  ಈಗ್ಗೆ 5 ವರ್ಷದ ಹಿಂದೆ ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದ ಲಲೀತಾ ಕೋಂ ನಾರಾಯಣಸ್ವಾಮಿ ರವರು ಪರಿಚಯವಾಗಿರುತ್ತಾಳೆ.  ನಾನು ಸ್ವಲ್ಪ ಸಲುಗೆಯಿಂದ ಮಾತನಾಡಿರುತ್ತೇನೆ. ನನ್ನ ಪೋನ್ ನಂಬರ್ ತೆಗೆದುಕೊಂಡು ಹೋಗಿದ್ದಳು ಅಗಾಗ ಪೋನ್ ಮಾಡುತ್ತಿದ್ದಳು. ಪೋನ್ನಲ್ಲಿ  ನನ್ನ ಗಂಡನಿಗೆ ವಯಸ್ಸಾಗಿದೆ ನೀನು ನನ್ನ ಜೊತೆ ಸಂಸಾರ ಮಾಡಬೇಕು ಎಂದು ಹೇಳುತ್ತಿದ್ದಳು ಇಲ್ಲಾ ನನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ, ನನಗೆ ತೊಂದರೆ ಕೊಡಬೇಡ ಎಂದು ತಿಳಿಸುತ್ತಿದ್ದೆ, ಆದರೂ ಸಹ ಇಲ್ಲಾ ನೀನು ಬರಲಿಲ್ಲಾ ಎಂದರೆ ನಿನ್ನಮೇಲೆ ನನಗೆ ತೊಂದೆ ಕೊಡುತ್ತಿರುವುದಾಗಿ ಪೊಲೀಸ್ ದೂರು ಕೊಡುವುದಾಗಿ ಬೆದರಿಸಿರುತ್ತಾಳೆ ಆಗ ನಾನು ಒಂದುಸಾರಿ ಮೇಲೂರು ಗ್ರಾಮಕ್ಕೆ ಬಂದು ಲಲೀತಾಳನ್ನು ಮಾತನಾಡಿಕೊಂಡಿಹೋಗಿರುತ್ತೇನೆ, ಪುನಃ ಪುನಃ ಪೋನ್ ಮಾಡಿ ಬರುವಂತೆ ತಿಳಿಸುತ್ತಿದ್ದಳು ಆಗ ನಾನು ಹೋಗುತ್ತಿರಲಿಲ್ಲಾ ನಂತರ ನನ್ನ ಮತ್ತು ನನ್ನ ಕುಟುಂಬದವರಮೇಲೆ ಮಂಚೇನಹಳ್ಳಿ , ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ ಪೊಲೀಸ್ ಠಾಣೆಗಳನ್ನು ದೂರು ಕೇಸು ದಾಖಲಿಸಿರುತ್ತಾಳೆ ಸದರಿ ಕೇಸುಗಳಿಗೆ ನಾನು ನ್ಯಾಯಾಲಯಗಳಿಗೆ ಹೋಗಿ ಬರುತ್ತಿರುತ್ತೇನೆ, ಈಗಿರುವಲ್ಲಿ  ಈಗ್ಗೆ ಒಂದುವಾರದ ಹಿಂದೆ ಲಲೀತಾ ರವರ ಗಂಡ ಮೇಲೂರು ಗ್ರಾಮದ ನಾರಾಯಣಸ್ವಾಮಿ ರವರು ನನಗೆ ದೂರವಾಣಿ ಕರೆ ಮಾಡಿ ಲಲೀತಾ ನಿನ್ನ ಮೇಲೆ ಹಾಕಿರುವಕೇಸುಗಳನ್ನು ನ್ಯಾಯಾಲಯದಲ್ಲಿ ರಾಜಿ ಮಾಡಿಸುತ್ತೇನೆ ಒಂದು ದಿನ ನೀನು ಮೇಲೂರು ಗ್ರಾಮಕ್ಕೆ ಬಾ ಎಂದು ಕರೆದಿರುತ್ತಾನೆ ಆಗ ನನಗೆ ಕೆಲಸಗಳಿವೆ ಬಿಡುವುಮಾಡಿಕೊಂಡು ಬರುತ್ತೇನೆಂದು ಹೇಳಿದ್ದೆ, ಈಗಿರುವಲ್ಲಿ ಮೇಲೂರು ಗ್ರಾಮದ ಲಲೀತಾ ನನ್ನ ಮತ್ತು ನನ್ನ ಕುಟುಂಬದವರ ಮೇಲೆ ಹಾಕಿರುವ ಕೇಸುಗಳನ್ನು  ನ್ಯಾಯಾಲಯದಲ್ಲಿ ರಾಜಿ ಮಾಡುವ ವಿಚಾರವನ್ನು ನಾರಾಯಣಸ್ವಾಮಿ ರವರ ಬಳಿ ಮಾತನಾಡಲು ದಿನಾಂಕ:12/04/2019 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ಬಸ್ಸಿನಲ್ಲಿ ಮೇಲೂರು ಗ್ರಾಮದ ಬಸ್ ನಿಲ್ದಾಣದ ಬಳಿ ಹೋದಾಗ ಮೇಲೂರು ಗ್ರಾಮದ ನಾರಾಯಣಸ್ವಾಮಿ ರವರು ನನ್ನನ್ನು ಕರೆದುಕೊಂಡು ಮೇಲೂರು ಗ್ರಾಮದ ಸರ್ಕಾರಿ ಶಾಲೆಯ ಬಳಿಯಿರುವ ಲಲಿತಮ್ಮ ರವರು ವಾಸವಾಗಿರುವ ನಾರಾಯಣಸ್ವಾಮಿ ರವರ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಲಲೀತಮ್ಮ ಮತ್ತು ನಾರಾಯಣಸ್ವಾಮಿ ರವರ ತಮ್ಮನ ಮಗ ಚಿನ್ನಿ ಎಂಬುವರು ಇದ್ದರು.  ಲಲೀತಮ್ಮ ರವರು ನನ್ನ ಮೇಲೆ ಗಲಾಟೆ ಮಾಡಿ ನೀನು ನನಗೆ ಅಗಾಗ ಹಣವನ್ನು ಕೊಟ್ಟರೆ ನಿನ್ನ ಮತ್ತು ನಿಮ್ಮ ಕುಟುಂಬದ ಮೇಲೆ ಇರುವ ಕೇಸುಗಳನ್ನು ನ್ಯಾಯಾಲಯದಲ್ಲಿ ರಾಜಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದು ಆಗ ನಾನು ಕೂಲಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ ಅಗಾಗ ನಿನಗೆ ಹಣ  ಕೊಡಲು ಆಗುವುದಿಲ್ಲಾ ಎಂದು ಹೇಳಿದಾಗ ಲಲೀತಾ ಏಕಾ ಏಕಿ ನನ್ನ ಗಲ್ಲಾಪಟ್ಟಿಯನ್ನು ಹಿಡಿದುಕೊಂಡು ಅವಾಚ್ಯಶಬ್ದಗಳಿಂದ ಬೈದು  ನನ್ನ ಕೆನ್ನೆಗೆ ಕೈಹಿಂದ ಹೊಡೆದಿರುತ್ತಾಳೆ. ಆಗ  ನಾರಾಯಣಸ್ವಾಮಿ ಅಲ್ಲಿಯೇ ಇದ್ದ ದೊಣ್ಣೆಯಿಂದ ನನ್ನ ಬೆನ್ನಿಗೆ ಕೈ ಭುಜಗಳಿಗೆ ಹೊಡೆದು ನೋವಿನ ಗಾಯವುಂಟುಮಾಡಿರುತ್ತಾನೆ, ಮತ್ತು ಅಲ್ಲಿಯೇ ಇದ್ದ ಚಿನ್ನಿ ಅಲ್ಲಿಯೇ ಇದ್ದ ಕಲ್ಲಿನಿಂದ ನನ್ನ ಎಡಕಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತಗಾಯವುಂಟು ಮಾಡಿರುತ್ತಾನೆ , ಮೂರು ಜನರು ನನ್ನನ್ನು ಕೈಗಳಿಂದ ಹೊಡೆದು ಕಾಲುಗಳಿಂದ ಹೊದ್ದಿರುತ್ತಾರೆ. ಮೂರು ಜನರು ನನ್ನನ್ನು ಅದೇ ಮನೆಯ ಬಾತ್ ರೂಮಿನಲ್ಲಿ ರಾತ್ರಿ 8-00 ಗಂಟೆಯವರೆಗೂ ಅಕ್ರಮ ಬಂದನದಲ್ಲಿಟ್ಟಿದ್ದರು. ನಂತರ ಮೂರು ಜನ ನನ್ನನ್ನು ಈ ಗಲಾಟೆ ಬಗ್ಗೆ ನೀನು ಯಾವುದೇ ಪೊಲೀಸ್ ಠಾಣೆಯಲ್ಲಿ ನಮ್ಮ ಮೇಲೆ ದೂರು ಕೊಟ್ಟರೇ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲಾ ಎಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಅದೇ ದಿನ ರಾತ್ರಿ 8-00 ಗಂಟೆಯಲ್ಲಿ ನಾರಾಯಣಸ್ವಾಮಿ, ಲಲಿತಮ್ಮ ಮತ್ತು ಚಿನ್ನಿ ರವರು ನನ್ನನ್ನು ಸಾಯಿಸುವ ಉದ್ದೇಶದಿಂದ ನನ್ನ ಕುತ್ತಿಗೆಗೆ ಹಗ್ಗದಲ್ಲಿ ಹಾಕಿ ಎಳೆದರು. ನಂತರ ನಾನು ಅವರಿಂದ ತಪ್ಪಿಸಿಕೊಂಡು ಯಾವುದೋ ಒಂದು ವಾಹನದಲ್ಲಿ ಚಿಕ್ಕಬಳ್ಳಾಪುರಕ್ಕೆ ಹೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ನನಗೆ ಆದ ಗಾಯಗಳಿಂದ ಗಾಬರಿಯಲ್ಲಿ ಪೊಲೀಸರು  ದೂರು ಪಡೆದುಕೊಳ್ಳಲು ಚಿಕ್ಕಬಳ್ಳಾಪುರ ಸರ್ಕಾರಿ  ಆಸ್ಪತ್ರೆಗೆ ಬಂದಾಗ ಈ ಬಗ್ಗೆ ಯಾವುದೇ ಕೇಸು ವಗೈರೆ ಬೇಡ ಎಂದು ಹೇಳಿಕೆ ನೀಡಿರುತ್ತೇನೆ. ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ನನ್ನ ಮೇಲೆ ಗಲಾಟೆ ಮಾಡಿ, ಕೈಗಳಿಂದ ಹೊಡೆದು, ದೊಣ್ಣೆ ಮತ್ತು ಕಲ್ಲಿನಿಂದ ಹಲ್ಲೆ ಮಾಡಿ, ಅಕ್ರಮ ಬಂದನದಲ್ಲಿಟ್ಟು, ಅವಾಚ್ಯ ಶಭ್ದಗಳಿಂದ ಬೈದು, ಕೊಲೆಬೆದರಿಕೆ ಹಾಕಿ, ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆಗೆ ಹಗ್ಗ ಹಾಕಿ ಎಳೆದಿರುವ ಮೇಲ್ಕಂಡವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಇದ್ದ ಸಾರಾಂಶದ ಮೇರೆಗೆ ಠಾಣಾ ಮೊ.ಸಂ.78/2019 ಕಲಂ 323,324,342,504,506,307 ರೆ/ವಿ 34 ಐ.ಪಿ.ಸಿ. ರೀತ್ಯಾ ಕೇಸು ದಾಖಲಿಸಿರುತ್ತೇನೆ.