ದಿನಾಂಕ: 14-03-2019 ರ ಅಪರಾಧ ಪ್ರಕರಣಗಳು

1) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.67/2019 ಕಲಂ. 332-341-353-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ 13-03-2019 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಕೆ ಎನ್. ರಾಜಣ್ಣ ಬಿನ್ ನರಸಪ್ಪ, 42 ವರ್ಷ, ಕೆ.ಎಸ್,ಆರ್.ಟಿ.ಸಿ ಬಸ್ ನಿರ್ವಾಹಕ, ಬಿಲ್ಲೆ ಸಂಖ್ಯೆ 3180, ಚಿಂತಾಮಣಿ ಘಟಕ ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 7-30 ಗಂಟೆಗೆ ವಾಪಸ್ಸು ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ  ಈ ದಿನ ದಿನಾಂಕ 13-03-2019 ರಂದು ಬಸ್ ಸಂಖ್ಯೆ ಕೆಎ 40 ಎಫ್ 989 ಕ್ಕೆ ತನ್ನನ್ನು ನಿರ್ವಾಹಕನಾಗಿ ಮತ್ತು ಸಿದ್ದನ್ನ ಹಂದ್ರಾಲ್ ಬಿಲ್ಲೆ ಸಂಖ್ಯೆ 5086 ರವರನ್ನು ಚಾಲಕನಾಗಿ ಮಾರ್ಗಸಂಖ್ಯೆ 51 ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾವು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಬೀಚಗೊಂಡಹಳ್ಳಿ ಟೋಲ್ ಬಳಿ ಬಂದಾಗ ಕಾರ್ ಸಂಖ್ಯೆ ಕೆಎ 53 ಎಂಇ 0414 ನೊಂದಣಿ ಸಂಖ್ಯೆಯ ಮಾರುತಿ ಎರ್ಟಿಗಾ ಕಾರನ್ನು ಅದರ ಚಾಲಕ ಟೋಲ್ ಬಳೀ ನಿಲ್ಲಿಸುವ ವಿಚಾರವಾಗಿ ತಮ್ಮ ಚಾಲಕನ್ನು ಕುರಿತು ಅವಾಶ್ಚ ಶಬ್ದಗಳಿಂದ ಬೈದು ನೀನು ಕೈವಾರ ಕ್ರಾಸ್ ಗೆ ಬಾ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೋಗಿರುತ್ತಾನೆ. ನಂತರ ತಾವು ಮದ್ಯಾಹ್ನ 3-15 ಗಂಟೆ ಸಮಯದಲ್ಲಿ ಕೈವಾರ ಕ್ರಾಸ್ ಗೆ ಬಸ್ ಬಂದಾಗ ಮೇಲ್ಕಂಡ ಕಾರಿನ ಚಾಲಕ ಹಾಗೂ ಇತರೆ 3 ಜನರು ತನ್ನ ಕಾರ್ ಅನ್ನು ತಮ್ಮ ಬಸ್ ಗೆ ಅಡ್ಡಲಾಗಿ ನಿಲ್ಲಿಸಿ ಆ ಪೈಕಿ ಒಬ್ಬ ತಮ್ಮ ಬಸ್ ನ ಚಾಲಕ ಸಿದ್ದನ್ನ ಹಂದ್ರಾಲ್ ರವರನ್ನು ಸೀಟ್ ನಿಂದ ಎಳೆದಾಡಿ  ಚಾಲಕನ ಮುಖ ಮತ್ತು ಮೈ ಕೈಗೆ ಹೊಡೆದು ನೋವುಂಟು ಮಾಡಿದ್ದು ಅಷ್ಟರಲ್ಲಿ ತಾನು ಏಕೆ ತಮ್ಮ ಚಾಲಕನನ್ನು ಹೊಡೆಯುತ್ತಿರುವುದು ಎಂದು ಕೇಳಿದ್ದಕ್ಕೆ ಮೇಲ್ಕಂಡ ನಾಲ್ಕು ಜನರು ತನ್ನ ಮುಖ ಮತ್ತು ಮೈ ಕೈಗೆ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ಅಲ್ಲಿದ್ದ ಸಾರ್ವಜನಿಕರು ಜಗಳ ಬಿಡಿಸಿರುತ್ತಾರೆ.ಅವರು ಅಲ್ಲಿಂದ ಹೋಗುವಾಗ ನೀವು ಈ ರೂಟ್ ನಲ್ಲಿ ಹೇಗೆ ಓಡಾಡುತ್ತಿರೋ ನೋಡೋಣ, ನಿಮ್ಮನ್ನು ಮುಗಿಸುವವರರೆಗೂ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ತಮ್ಮ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ತಮ್ಮ ಮೇಲೆ ಹಲ್ಲೆ ಮಾಡಿದ ಮೇಲ್ಕಂಡ ನಾಲ್ಕೂ ಜನರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

2) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.20/2019 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ:-

     ಈ ದಿನ ದಿನಾಂಕ 13/03/2019 ರಂದು ಸಂಜೆ 4-45 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಮೆಮೋನ ಸಾರಂಶವೇನೆಂದರೆ ತಾನು ಮತ್ತು ಸಿಬ್ಬಂದಿಯವರು ಗಸ್ತಿನಲ್ಲಿದ್ದಾಗ ಠಾಣಾ ವ್ಯಾಪ್ತಿಯ ಟಿ.ವೆಂಕಟಾಪುರ ಗ್ರಾಮದ ವಾಸಿ ಗಂಗರಾಜು ಬಿನ್ ಅಶ್ವಥಪ್ಪ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಮಾರಾಟಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 13 ಹೈವಾರ್ಡ್ಸ್ ಮದ್ಯದ ಪಾಕೇಟ್ ಗಳನ್ನು ಮತ್ತು ಓಪನ್ ಮಾಡಿರುವ 2 ಟೆಟ್ರಾ ಪ್ಯಾಕೇಟ್ ಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಅಂಗಡಿಯ ಮಾಲೀಕ ಗಂಗರಾಜು ಬಿನ್ ಅಶ್ವಥಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಬಂದಿರುವುದಾಗಿರುತ್ತೆ.

3) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.21/2019 ಕಲಂ. 379 ಐ.ಪಿ.ಸಿ:-

     ಈ ದಿನ ದಿನಾಂಕ 13/03/2019 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರಾದ ಎನ್.ರಾಮಚಂದ್ರಪ್ಪ ಬಿನ್ ನರಸಿಂಹಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತನ್ನ ಬಾಬತ್ತು ನಂ ಕೆಎ 40 ಇಬಿ 7801 ದ್ವಿಚಕ್ರ ವಾಹನದಲ್ಲಿ ದಿನಾಂಕ 10/03/2019 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ತಮ್ಮ ತೋಟದ ಬಳಿಗೆ ಹೋಗಲು ಹೋಗಿ ತನ್ನ ಬಾಬತ್ತು ದ್ವಿಚಕ್ರ ವಾಹನವನ್ನು ಟಿ.ಪೆದ್ದನಹಳ್ಳಿ ಕ್ರಾಸ್ ನಲ್ಲಿ ಮರದ ಕೆಳಗೆ ನಿಲ್ಲಿಸಿ ತೋಟದ ಒಳಗೆ ಹೋಗಿ ನೀರಿನ ಗೇಟ್ ವಾಲ್ ನ್ನು ತಿರುವಿಸಿ ವಾಪಸ್ ಬಂದು ನೋಡುವಷ್ಟರಲ್ಲಿ ಮರದ ಕೆಳಗೆ ನಿಲ್ಲಿಸಿದ್ದ ತನ್ನ ಬಾಬತ್ತು ದ್ವಿಚಕ್ರ ವಾಹನ ನಂ ಕೆಎ 40 ಇಬಿ 7801 ಆಕ್ಟಿವಾ 4 ಜಿ ಸ್ಕೂಟಿ ದ್ವಿಚಕ್ರ ವಾಹನವನ್ನು ಯಾರೋ ಕಳವುಮಾಡಿಕೊಂಡು ಹೋಗಿದ್ದು ಕಳುವಾಗಿರುವ ತನ್ನ ದ್ವಿಚಕ್ರ ವಾಹನವನ್ನು ಪತ್ತೆಮಾಡಿ ಕೊಡಬೇಕಾಗಿ ಕೋರಿ ನೀಡಿರುವ ದೂರಾಗಿರುತ್ತೆ.

4) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.30/2019 ಕಲಂ. 171(ಐ) ಐ.ಪಿ.ಸಿ & 127A REPRESENTATION OF PEOPLE ACT:-

     ದಿನಾಂಕ:13-03-2019 ರಂದು  ಮದ್ಯಾಹ್ನ 12-15 ಘಂಟೆಯಲ್ಲಿ ಠಾಣಾ NCR.NO.65/2019  ಪ್ರಕರಣದಲ್ಲಿ  ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:13-03-2019 ರಂದು ಬೆಳಿಗ್ಗೆ ಘಂಟೆಗೆ ಪಿರ್ಯಾದುದಾರರಾದ ಶ್ರೀ.ಕೆ.ಎಂ.ಜಯರಾಮರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಗುಡಿಬಂಡೆ ತಾಲ್ಲೂಕು. ಹಾಗೂ ಎಂ.ಸಿ.ಸಿ ಫ್ಲೈಯಿಂಗ್ ಸ್ಕ್ವಾಡ್ ಲೀಡರ್, ಲೋಕಸಭಾ ಚುನಾವಣೆ-2019, ನಂ:140, ಬಾಗೇಪಲ್ಲಿ. ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ಲೋಕಸಭಾ ಚುನಾವಣೆ-2019 ರ ಹಿನ್ನೆಲೆಯಲ್ಲಿ ಮಾನ್ಯ ಚುನಾವಣಾಧಿಕಾರಿಗಳು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರರವರು ತನ್ನನ್ನು ಎಂ.ಸಿ.ಸಿ ಫ್ಲೈಯಿಂಗ್ ಸ್ಕ್ವಾಡ್ ಲೀಡರ್, ನಂ:140, ಬಾಗೇಪಲ್ಲಿ ಕ್ಕೆ ನಿಯೋಜನೆ ಮಾಡಿದ್ದು, ಮಾನ್ಯರ ನೇಮಕದಂತೆ ನಾನು ದಿನಾಂಕ:13-03-2019 ರಂದು ತಮ್ಮ ತಂಡದ ಸದಸ್ಯರಾದ 1)ಶ್ರೀನಿವಾಸಮೂರ್ತಿ, ಪಿ.ಡಿ.ಓ., ಹಂಪಸಂದ್ರ ಗ್ರಾಮ ಪಂಚಾಯ್ತಿ, ಗುಡಿಬಂಡೆ ತಾಲ್ಲೂಕು 2)ಎ.ಎಲ್.ನರಸಿಂಹಮೂರ್ತಿ, ಎಸ್.ಡಿ.ಎ.ಎ., ಘಂಟಂವಾರಿಪಲ್ಲಿ ಗ್ರಾಮ ಪಂಚಾಯ್ತಿ, ಬಾಗೇಪಲ್ಲಿ ತಾಲ್ಲೂಕು, 3)ಮುನಿರಾಜು, ಗ್ರಾಮಲೆಕ್ಕಿಗರು, ಎಲ್ಲೋಡು ಕಂದಾಯ ವೃತ್ತ, ಗುಡಿಬಂಡೆ ತಾಲ್ಲೂಕು 4)ಡಿ.ಎನ್.ರವಿ, ಸಿಪಿಸಿ-92, ಗುಡಿಬಂಡೆ ಪೊಲೀಸ್ ಠಾಣೆ ರವರು ಕರ್ತವ್ಯ ನಿರ್ವಹಿಸುತ್ತಿದ್ದಾಗ, ಗುಡಿಬಂಡೆ ತಾಲ್ಲೂಕು ವೀರಾಪುರ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಪರಸಪ್ಪ ರಾಥೋಡ್, ಸಿಪಿಸಿ-188, ಗುಡಿಬಂಡೆ ಪೊಲೀಸ್ ಠಾಣೆ ರವರು ತಮಗೆ ಫೋನ್ ಮಾಡಿ ಕೆಎ-40-ಎಂ-1299 ಇನ್ನೋವಾ ಕಾರಿನಲ್ಲಿ ಬೆಳಿಗ್ಗೆ 09-30 ಘಂಟೆಯಲ್ಲಿ ಕರಪತ್ರಗಳು, ಖಂಡ್ವಾ, ಬಾವುಟಗಳನ್ನು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿರುವ ಕಾರನ್ನು ಅವರ ತಂಡದ 1)ತಿಪ್ಪಾರೆಡ್ಡಿ, ಮುಖ್ಯಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಉಲ್ಲೋಡು, 2)ಅರ್ಚನ, ಪಿಡಿಓ, ಉಲ್ಲೋಡು ಗ್ರಾಮ ಪಂಚಾಯ್ತಿ ರವರು ಹಿಡಿದುಕೊಂಡಿರುವುದಾಗಿ ತಮಗೆ ತಿಳಿಸಿದ್ದು, ತಾವು ತಮ್ಮ ತಂಡದ ಸದಸ್ಯರೊಂದಿಗೆ ವೀರಾಪುರ ಚೆಕ್ ಪೋಸ್ಟ್ ಬಳಿಗೆ  ಹೋಗಿ  ನೋಡಲಾಗಿ  ಕೆಎ-40-ಎಂ-1299  ಇನ್ನೋವಾ  ಕಾರಿನಲ್ಲಿ  ಸುಮಾರು  1000  ಕರಪತ್ರಗಳಿದ್ದು, ಅವುಗಳಲ್ಲಿ ಬಿ.ಜೆ.ಪಿ ಪಕ್ಷದ ಸಾಧನೆಗಳ ಬಗ್ಗೆ ಮಾಹಿತಿಗಳು ಇರುವುದಾಗಿ, 8 ಖಂಡ್ವಾಗಳು ಇರುವುದಾಗಿ, ಅವುಗಳಲ್ಲಿ ಬಿ.ಜೆ.ಪಿ ಪಕ್ಷದ ಚಿಹ್ನೆ ಇರುವುದಾಗಿ, 8 ಬಾವುಟಗಳು ಇದ್ದು ಅವುಗಳಲ್ಲಿಯೂ ಸಹ ಬಿ.ಜೆ.ಪಿ ಚಿಹ್ನೆ ಇರುವುದಾಗಿ, ಸದರಿ ಕಾರಿನ ಚಾಲಕನ ಹೆಸರು & ವಿಳಾಸ ತಿಳಿಯಲಾಗಿ ಅನಿಲ್ ಕುಮಾರ್ ಬಿನ್ ಸುಬ್ಬನ್ನ, 29 ವರ್ಷ, ನಾಯಕರು, ಚಾಲಕ, ವಾಸ: ಉಚ್ಚೊದನಹಳ್ಳಿ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿರುವುದಾಗಿ, ಮೇಲ್ಕಂಡ ಕರಪತ್ರಗಳಲ್ಲಿ ಯಾರು ಮುದ್ರಕರ ಹೆಸರು, ಪ್ರತಿಗಳ ಸಂಖ್ಯೆ ಇರುವುದಿಲ್ಲವೆಂದು, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದಾಗಿ ಸದರಿ ಕೆಎ-40-ಎಂ-1299 ಇನ್ನೋವಾ ಕಾರು, ಸುಮಾರು 1000 ಕರಪತ್ರಗಳು, 8 ಖಂಡ್ವಾಗಳು, 8 ಬಾವುಟಗಳನ್ನು ವಶಕ್ಕೆ ಪಡೆದುಕೊಂಡು, ಚಾಲಕನನ್ನು ತಮ್ಮ ತಂಡದಲ್ಲಿದ್ದ ಪೊಲೀಸರ ಸಹಾಯದಿಂದ ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಕೋರಿ.

5) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.31/2019 ಕಲಂ. 78(ಸಿ) ಕೆ.ಪಿ ಆಕ್ಟ್:-

     ದಿನಾಂಕ:13-03-2019 ರಂದು ಸಂಜೆ 4-30  ಘಂಟೆಯಲ್ಲಿ ಠಾಣಾ NCR.NO.66/2019  ಪ್ರಕರಣದಲ್ಲಿ  ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:13-03-2019 ರಂದು ಸಂಜೆ 3-45  ಘಂಟೆಯಲ್ಲಿ ಮಾನ್ಯ ಪಿ.ಐ., ಗುಡಿಬಂಡೆ ಪೊಲೀಸ್ ಠಾಣೆ ರವರು ಠಾಣೆಯಲ್ಲಿ ನೀಡಿದ ಅಸಲು ಪಂಚನಾಮೆ, ಮಾಲುಗಳನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ದಾಖಲಿಸಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ:13-03-2019 ರಂದು ಮದ್ಯಾಹ್ನ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರಾದ HC-221 ಮಾರುತಿ.ಕೆ,  HC-250 ಶ್ರೀನಾಥ, ಪಿಸಿ-88 ರಮೇಶ ರವರೊಂದಿಗೆ  KA-40-G-1888 ಸರ್ಕಾರಿ ಜೀಪಿನಲ್ಲಿ ಗುಡಿಬಂಡೆ ತಾಲ್ಲೂಕು ಮುದ್ದರೆಡ್ಡಿಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ಮುದ್ದರೆಡ್ಡಿಹಳ್ಳಿ ಗ್ರಾಮದ ಅರಳೀಕಟ್ಟೆಯ ಬಳಿ ಯಾರೋ ಮಟ್ಕಾ ಜೂಜಾಟವಾಡುತ್ತಿರುವವರ ಮೇಲೆ ದಾಳಿ ಮಾಡುವುದಕ್ಕಾಗಿ ಪಂಚರಾಗಿ ಸಹಕರಿಸಬೇಕೆಂದು ಕೋರಿದಾಗ ಪಂಚರು ಒಪ್ಪಿಕೊಂಡಿದ್ದು, ನಂತರ ತಾವುಗಳು ಮತ್ತು ಪಂಚರು ಮಟ್ಕಾ ಜೂಜಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿಯು 1 ರೂ ಗೆ 70 ರೂಗಳನ್ನು ನೀಡುವುದಾಗಿ ಸಾರ್ವಜನಿಕರಿಗೆ ಹಣ ಆಮಿಷವೊಡ್ಡಿ ಮಟ್ಕಾ ಜೂಜಾಟವಾಡಲು ಪ್ರೇರೇಪಿಸುತ್ತಿದ್ದವನನ್ನು ಪಂಚರ ಸಮಕ್ಷಮ ಸುತ್ತುವರೆದು ದಾಳಿ ಮಾಡಿ ಸದರಿ ಆಸಾಮಿಯನ್ನು ಹಿಡಿದುಕೊಂಡು ಹೆಸರು & ವಿಳಾಸ ಕೇಳಲಾಗಿ ಕೃಷ್ಣಪ್ಪ ಬಿನ್ ಲೇಟ್ ಯರ್ರಪ್ಪ, 49 ವರ್ಷ, ಆದಿಕರ್ನಾಟಕ ಜನಾಂಗ, ವ್ಯವಸಾಯ, ವಾಸ: ಮುದ್ದರೆಡ್ಡಿಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು  ಎಂದು ತಿಳಿಸಿದ್ದು, ಎಂದು ತಿಳಿಸಿದ್ದು, ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಅಂಗಶೋಧನೆ ಮಾಡಲಾಗಿ ಆತನ ಬಳಿ ಒಂದು ಮಟ್ಕಾ ಚೀಟಿ, 330/- ರೂಗಳು ನಗದು ಹಣ, ಒಂದು ಬಾಲ್ ಪೆನ್ಗಳನ್ನು ಮದ್ಯಾಹ್ನ 2-30 ಗಂಟೆಯಿಂದ 3-15 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆಯ ಮೂಲಕ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಪಂಚನಾಮೆ ಮತ್ತು ಮಾಲಿನೊಂದಿಗೆ ಆರೋಪಿಗಳನ್ನು ಹಾಜರುಪಡಿಸಿ ಈ ಬಗ್ಗೆ ಮುಂದಿನ ಕ್ರಮದ ಬಗ್ಗೆ  ಹಾಜರುಪಡಿಸಿದ್ದರ ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಅಂಗಶೋಧನೆ ಮಾಡಲಾಗಿ ಆತನ ಬಳಿ ಒಂದು ಮಟ್ಕಾ ಚೀಟಿ, 330/- ರೂಗಳು ನಗದು ಹಣ, ಒಂದು ಬಾಲ್ ಪೆನ್ಗಳನ್ನು ಮದ್ಯಾಹ್ನ 2-30 ಗಂಟೆಯಿಂದ 3-15 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆಯ ಮೂಲಕ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಪಂಚನಾಮೆ ಮತ್ತು ಮಾಲಿನೊಂದಿಗೆ ಆರೋಪಿಗಳನ್ನು ಹಾಜರುಪಡಿಸಿ ಈ ಬಗ್ಗೆ ಮುಂದಿನ ಕ್ರಮದ ಬಗ್ಗೆ ಹಾಜರುಪಡಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತದೆ.

6) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.32/2019 ಕಲಂ. 32-34 ಕರ್ನಾಟಕ ಅಬಕಾರಿ ಕಾಯ್ದೆ:-

     ದಿನಾಂಕ:13-03-2019 ರಂದು ಸಂಜೆ 6-45 ಘಂಟೆಗೆ ಪಿರ್ಯಾದುದಾರರಾದ ಶ್ರೀ.ವಿ.ಎಲ್.ರಮೇಶ್, ಪೊಲೀಸ್ ಇನ್ಸ್ಪೆಕ್ಟರ್, ಗುಡಿಬಂಡೆ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:13-03-2018 ರಂದು ಸಂಜೆ 5-30 ಗಂಟೆಯಲ್ಲಿ ತಾವು ಠಾಣೆಯಲ್ಲಿದ್ದಾಗ ಗುಡಿಬಂಡೆ ಪಟ್ಟಣದ ಎಸ್.ಬಿ.ಎಂ ಸರ್ಕಲ್ ನಲ್ಲಿ ಯಾರೋ ಒಬ್ಬ ಆಸಾಮಿಯು ಅಕ್ರಮವಾಗಿ ಮಧ್ಯವನ್ನು ಸಾಗಾಣಿಕೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ತಾವು ಸಿಬ್ಬಂದಿಯವರಾದ ಆನಂದ್, ಹೆಚ್.ಸಿ-102,  ರಮೇಶ್, ಪಿ.ಸಿ-88, ರವರೊಂದಿಗೆ ಕೆಎ-40-ಜಿ-1888 ಸರ್ಕಾರಿ ಜೀಪಿನಲ್ಲಿ ಗುಡಿಬಂಡೆ ಪಟ್ಟಣದ ಎಸ್.ಬಿ.ಎಂ ವೃತ್ತದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ತಾವುಗಳು ಮರೆಯಲ್ಲಿ ನಿಂತು ನೋಡಲಾಗಿ, ಯರೋ ಒಬ್ಬ ಆಸಾಮಿಯು ಬ್ಯಾಗಿನಲ್ಲಿ ಮಧ್ಯವನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದು ಕಂಡು ಬಂದಿದ್ದು, ಸದರಿ ಆಸಾಮಿಯನ್ನು ನಿಲ್ಲಿಸಿ ಹೆಸರು & ವಿಳಾಸ ಕೇಳಲಾಗಿ ವೆಂಕಟೇಶ ಬಿನ್ ಆದಿನಾರಾಯಣಪ್ಪ, 28 ವರ್ಷ, ಆದಿದ್ರಾವಿಡ ಜನಾಂಗ, ವ್ಯವಸಾಯ, ವಾಸ: ಕೊಂಡರೆಡ್ಡಿಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಮೊಬೈಲ್:9740973822 ಎಂತ ತಿಳಿಸಿದ್ದು, ಸದರಿ ಆಸಾಮಿಯು ಎತ್ತಿಕೊಂಡು ಹೋಗುತ್ತಿದ್ದ ಬ್ಯಾಗ್ ನ್ನು ಚೆಕ್ ಮಾಡಲಾಗಿ 180 ಎಂ.ಎಲ್.ಸಾಮರ್ಥ್ಯ ದ ಓಲ್ಡ್ ಟ್ರಾವೆನ್ ಕಂಪನಿಯ 12 ವಿಸ್ಕಿ ಟೆಟ್ರಾ ಪ್ಯಾಕೇಟ್ ಗಳು (2 ಲೀಟರ್ 160 ಎಂ.ಎಲ್) ಇದ್ದು, 90 ಎಂ.ಎಲ್. ಸಾಮರ್ಥ್ಯ       ದ ಹೈವಾರ್ಡ್ಸ್ ಕಂಪನಿಯ 48 ವಿಸ್ಕಿ ಟೆಟ್ರಾ ಪ್ಯಾಕೇಟ್ (4 ಲೀಟರ್ 320 ಎಂ.ಎಲ್) ಗಳು ಇದ್ದು,  ಒಟ್ಟು 6 ಲೀಟರ್  480 ಎಂ.ಎಲ್ ಮಧ್ಯವಿದ್ದು, ಅವರಗಳ ಬೆಲೆ 2,328/- ರೂಗಳು ಆಗಿದ್ದು, ಸದರಿ ಆಸಾಮಿಯನ್ನು ತನ್ನ ಬಳಿ ಮಧ್ಯವನ್ನು ಸಾಗಾಣಿಕೆ ಮಾಡಲು ಲೈಸನ್ಸ್ ಬಗ್ಗೆ ವಿಚಾರ ಮಾಡಲಾಗಿ ತನ್ನ ಬಳಿ ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದೂ, ತಿಳಿಸಿರುವುದಾಗಿ, ಸದರಿ ಮಧ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಹಾಗೂ ಮೇಲ್ಕಂಡ ವೆಂಕಟೇಶ ಬಿನ್ ಆದಿನಾರಾಯಣಪ್ಪ ರವರನ್ನು ಸಂಜೆ 6-45 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಮುಂದಿನ ಕ್ರಮ ಕೈಗೊಳ್ಳಲು ಕೋರಿ.

7) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.33/2019 ಕಲಂ. 324-504 ಐ.ಪಿ.ಸಿ:-

     ದಿನಾಂಕ:13/03/2019 ರಂದು ಸಂಜೆ:7-30 ಘಂಟೆಯಲ್ಲಿ ಪಿರ್ಯಾದಿದಾರರಾದ ಗಂಗಪ್ಪ ಬಿನ್ ತಿಮ್ಮಯ್ಯ 70 ವರ್ಷ ಬೋವಿ ಜನಾಂಗ ಕೂಲಿ ಕೆಲಸ ವಾಸ ಚಿಕ್ಕನಾರೇಪ್ಪನಹಳ್ಳಿ  ಗ್ರಾಮ ಮಂಡಿಕಲ್ಲು ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ:ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ತನ್ನ ಮೊಮ್ಮಕ್ಕಳಾದ ವರುಣ್ ಮತ್ತು ಪ್ರಾಣೇಶ್ ಕುಮಾರ ರವರ ಜನ್ಮ ದಿನಾಂಕ ಪ್ರಮಾಣ ಪತ್ರ ಪಡೆಯಲು ತಮ್ಮ ಗ್ರಾಮದ ಆಶಾ ಕಾರ್ಯಕರ್ತೆಯಾದ ಸರೋಜಮ್ಮ ಕೋಂ ಗಂಗರಾಜು ಬೋವಿ ಜನಾಂಗ ರವರಿಗೆ 500/-ರೂಪಾಯಿ ಕೊಟ್ಟಿದ್ದು ತಾನು ಸುಮಾರು ಸಾರಿ ಕೇಳಿದ್ದು ದಿನಾಂಕ: 12/03/2019 ರಂದು ಸಂಜೆ:6-00 ಘಂಟೆಯಲ್ಲಿ ಸರೋಜಮ್ಮರವರ ಗಂಡನಾದ ಗಂಗರಾಜು ತನ್ನನ್ನು ಕುರಿತು ನೀನು ಕುಡಿದು ನನ್ನ ಹೆಂಡತಿಯ ಮೇಲೆ ಗಲಾಟೆ ಹೋಗಿದ್ದಿಯಾ ಎಂದು ತನ್ನನ್ನು ಕುರಿತು ಲೋಪರ್ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ತನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿ ಹಾಗೂ ತನ್ನ ಬಲ ಕೈ ಗೆ ಮತ್ತು ಬಲಗಾಲಿಗೆ ಹೊಡೆದಿದ್ದು ನಂತರ ಗಾಯಗೊಂಡಿದ್ದ ತನ್ನನ್ನು ಪರಿಚಯಸ್ಥರು ಚಿಕತ್ಸೆಗಾಗಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಸಿದ್ದು ತನ್ನ ಮೇಲೆ ಹಲ್ಲೆ ಮಾಡಿರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಆಗಿರುತ್ತೆ.

8) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.25/2019 ಕಲಂ. 78 (A)(vi),87 ಕೆ.ಪಿ. ಆಕ್ಟ್:-

     ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಅವಿನಾಶ್ ಪಿ.ಎಸ್.ಐ. (ಕಾ & ಸು) ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಈ ದಿನ ದಿನಾಂಕ:13-03-2019 ರಂದು ಸಂಜೆ 5-00 ಗಂಟೆ ಸಮಯದಲ್ಲಿ ನಾನು ಪಿ.ಸಿ.129 ರಾಮಚಂದ್ರ, ಪಿ.ಸಿ.134 ಧನಂಜಯ್ ರವರೊಂದಿಗೆ ಶಿಡ್ಲಘಟ್ಟ ನಗರ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಶಿಡ್ಲಘಟ್ಟ ನಗರದ ಅಜಾದ್ ನಗರದಲ್ಲಿ ಸಾಸೀರ್ ರವರ ಮಟನ್ ಅಂಗಡಿ ಪಕ್ಕದಲ್ಲಿ ಯಾರೋ ಕೆಲವು ಜನ ಆಸಾಮಿಗಳು ಸೇರಿಕೊಂಡು ಈ ದಿನ ಡೆಲ್ಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಪಿರೋಜ್ ಕೋಟ್ಲ ಪೈನಲ್ ಕ್ರಿಕೆಟ್ ಆಟ ನಡೆಯುತ್ತಿರುವ ಕ್ರಿಕೆಟ್ ಪಂದ್ಯಕ್ಕೆ ಸಂಬಂದಪಟ್ಟಂತೆ ಎರಡು ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಒಬ್ಬರಿಗೊಬ್ಬರು ಬೆಟ್ಟಿಂಗ್ ಹಣವನ್ನು ಪಣವಾಗಿ ಕಟ್ಟಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಬಂದಿದ್ದು, ಸದರಿ ಸ್ಥಳದ ಮೇಲೆ ದಾಳಿ ಮಾಡಿ ಕ್ರಮ ಜರುಗಿಸಲು ಪಂಚರುಗಳಾದ 1] ಖಾದರ್.ಎಸ್ ಬಿನ್ ಉಸ್ಮಾನ್ ಸಾಬಿ,   ರಹಮತ್ ನಗರ, ಶಿಡ್ಲಘಟ್ಟ ಟೌನ್ 2] ಇನಾಯತುಲ್ಲಾ ಬಿನ್ ಸಿ.ಎಂ.ಬಾಬು, ಗಾಂದೀನಗರ, ಶಿಡ್ಲಘಟ್ಟ ಟೌನ್ ರವರನ್ನು ಪಂಚರಾಗಿ ಸಹಕರಿಸಲು ಕರೆದುಕೊಂಡು ಮತ್ತು ಸಿಬ್ಬಂದಿಯವರೊಂದಿಗೆ ಸಂಜೆ 5.30 ಗಂಟೆಗೆ ನಾಸೀರ್ ರವರ ಅಂಗಡಿ ಪಕ್ಕದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅಡುತ್ತಿದ್ದವರ ಮೇಲೆ ದಾಳಿ ಮಾಡಿದಾಗ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ 4 ಜನರ ಪೈಕಿ 3 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1] ಸಾಬೀರ್ ಪಾಷ ಬಿನ್ ವಜೀರ್ ಜಾನ್,   ಅಜಾದ್ ನಗರ, ಶಿಡ್ಲಘಟ್ಟ ಟೌನ್ ಇವರ ಬಳಿ 5700 ನಗದು ಹಣ ಮತ್ತು ವಿವೋ ವಿ5 ಕಂಪನಿಯ ಮೊಬೈಲ್ ಪೋನ್ (ನಂ.9036942314) ಇರುತ್ತೆ. 2] ಸಮೀವುಲ್ಲಾ ಬಿನ್ ಬಾಬು,   ರಹಮತ್ ನಗರ, ಶಿಡ್ಲಘಟ್ಟ ಟೌನ್, ಇವರ ಬಳಿ 800/-ನಗದು ಹಣ ಇರುತ್ತೆ. 3] ಅನ್ಸರ್ ಪಾಷ @ ಕೀಡಾ ಅನ್ಸರ್ ಬಿನ್ ಸಾಬ್ ಜಾನ್ ಸಾಬ್,   ಇಲಾಹಿನಗರ, ಶಿಡ್ಲಘಟ್ಟ ಟೌನ್ ಇವರ ಬಳಿ, 1200/-ರೂ ನಗದು ಮತ್ತೊಬ್ಬ ಓಡಿ ಹೋಗಿದ್ದು ಅವರ ಹೆಸರು ವಿಳಾಸ ಕೇಳಲಾಗಿ 4] ಇಸ್ಮಾಯಿಲ್, ಅನ್ಸಾರಿ ಮೋಹಲ್ಲಾ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ   ಮೇಲ್ಕಂಡ ಆಸಾಮಿಗಳಿಗೆ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ಬಗ್ಗೆ ವಿಚಾರ ಮಾಡಲಾಗಿ ಸದರಿ ಆಸಾಮಿಗಳು ಈ ದಿನ ದೆಹಲಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಪೈನಲ್ ಕ್ರಿಕೆಟ್ ಪಂದ್ಯಕ್ಕೆ ಸಂಬಂದ ಪಟ್ಟಂತೆ ಸಾಬೀರ್ ಪಾಷ ಮತ್ತು ಓಡಿ ಹೋದ ಇಸ್ಮಾಯಿಲ್ ರವರ ಮೊಬೈಲ್ ಪೋನ್ ಗಳಲ್ಲಿ ಕ್ರಿಕೆಟ್ ಸ್ಕೋರ್ ನೋಡುತ್ತಾ ಯಾವ ತಂಡ ಗೆಲ್ಲುತ್ತದೆ ಯಾವ ತಂಡ ಸೋಲುತ್ತದೆ ಎಂದು ಹೇಳುತ್ತಾ ಒಬ್ಬರಿಗೊಬ್ಬರು ಹಣವನ್ನು ಪಣವಾಗಿ ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಠದ ಜೂಜಾಟ ಆಡುತ್ತಿರುವುದಾಗಿ ತಿಳಿಸಿರುತ್ತಾರೆ. ಇವರುಗಳ ಬಳಿ ಪಣಕ್ಕೆ ಕಟ್ಟಲು ತಂದಿದ್ದ ಒಟ್ಟು 7700/-ರೂ ನಗದು ಹಣ, ಸಾಬೀರ್ ಪಾಷ ರವರ ಬಳಿ ಇದ್ದ ಒಂದು ವಿವೋ ಕಂಪನಿಯ ಮೊಬೈಲ್ ಪೋನ್ ಸಂಜೆ 5.45 ರಿಂದ 6.15 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿಗಳು ಮತ್ತು ಅಮಾನತ್ತು ಪಡಿಸಿದ ಮಾಲುಗಳ ಸಮೇತ ಠಾಣೆಗೆ ವಾಪಸ್ಸು ಬಂದು ಸಂಜೆ 6.45 ಗಂಟೆಗೆ ಠಾಣಾ ಮೊ.ಸಂ.25/2019 ಕಲಂ.78(ಎ) ಕ್ಲಾಸ್(6), 87 ಕೆ.ಪಿ. ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತೆ.

9) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.26/2019 ಕಲಂ. 420-465-468-469-471 ರೆ/ವಿ 34 ಐ.ಪಿ.ಸಿ:-

     ದಿನಾಂಕ:14-03-2019 ರಂದು ಮದ್ಯಾಹ್ನ 1.15 ಗಂಟೆಗೆ ಶಿಡ್ಲಘಟ್ಟ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಿಂದ ಟಪಾಲ್ ಮೂಲಕ ಪಡೆದಿದ್ದರ ಮಾನ್ಯ ತಹಸಿಲ್ದಾರ್ ರವರು ಕಳುಹಿಸಿಕೊಟ್ಟಿರುವ ತಹಸಿಲ್ದಾರ್ ರವರ ಕಾರ್ಯಾಲಯ ಶಿಡ್ಲಘಟ್ಟ ತಾಲ್ಲೂಕು ರವರ ಕಚೇರಿ ನಂ.ಆರ್.ಆರ.ಟಿ/ಸಿ.ಆರ್/6/2018-19 ದಿನಾಂಕ. 02.03.2019 ರ ದೂರನ್ನು ಪಡೆದಿದ್ದರ ಸಾರಾಂಶವೇನಂದರೆ, ಶಿಡ್ಲಘಟ್ಟ ತಾಲ್ಲೂಕು ಬಶೆಟ್ಟಹಳ್ಳಿ ಹೋಬಳಿ ಮುದ್ದಣ್ಣನದಿನ್ನೆ ಗ್ರಾಮದ ಸ,ನಂ.67/1 ರ 2-33 ಗುಂಟೆ ಜಮೀನಿನ ಪೈಕಿ 1-00 ಎಕರೆ ಜಮೀನನ್ನು ಕ್ರಯ ಪತ್ರದಂತೆ ಖಾತೆ ಬದಲಾವಣೆ ಕೋರಿ ಭಾಗ್ಯಮ್ಮ ಕೊಂ ವೆಂಕಟೇಶಪ್ಪ, ಧನಮಿಟ್ಟನಹಳ್ಳಿ ಗ್ರಾಮರವರು ಮನವಿ ಸಲ್ಲಿಸಿರುತ್ತಾರೆ. ಅದರಂತೆ ಬಶೆಟ್ಟಹಳ್ಳಿ ಹೋಬಳಿ ಮದ್ದಣ್ಣನದಿನ್ನೆ ಗ್ರಾಮದ ಸ.ನಂ.67/1 ರ 2-33 ಗುಂಟೆ ಜಮೀನ ಪೈಕಿ 1-00 ಎಕರೆ ಜಮೀನನ್ನು ಖರೀದಿಸಲು ವ್ಯವಸಾಯಗಾರರೆಂಬುದಕ್ಕೆ ಸಲ್ಲಿಸಬೇಕಾದ ಪಹಣಿಯಲ್ಲಿ ಅನದೀಕೃತವಾಗಿ ಅರ್ಜಿದಾರರಾದ ಭಾಗ್ಯಮ್ಮ ಕೊಂ ವೆಂಕಟೇಶಪ್ಪ ಎಂಬುದಾಗಿ ನಮೂದು ಮಾಡಿ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯ ಮಾಡಿರುತ್ತಾರೆ. ಆದ್ದರಿಂದ ಇವರ ವಿರುದ್ದ ಕ್ರಮಕೈಗೊಳ್ಳುವಂತೆ ರಾಜಸ್ವ ನಿರೀಕ್ಷಕರು ವರದಿ ನೀಡಿರುತ್ತಾರೆ. ಸಾಗುವಳಿ ಚೀಟಿಯಂತೆ ಖಾತೆ ಬದಲಾವಣೆ ಕೋರಿ ಕೆ.ಮುರಳಿ ಬಿನ್ ಕೆಂಪೇಗೌಡ ರವರು ಮನವಿ ಸಲ್ಲಿಸಿರುತ್ತಾರೆ. ಸದರಿ ಸ.ನಂ.67/1 ರ 2-33 ಎಕರೆ ಜಮೀನಿನ ದಾಖಲೆಗಳ ನೈಜತೆಯನ್ನು ಪರಿಶೀಲಿಸಲಾಗಿ ಅರ್ಜಿದಾರ ಭಾಗ್ಯಮ್ಮ ಮತ್ತು ಜಿಲ್ಲಾ ಪತ್ರ ಬರಹಗಾರರಾದ ಡಿ.ವೇಣುಗೋಪಾಲ್ ರವರು ಅಕ್ರಮ ದಾಖಲೆಗಳನ್ನು ಸೃಷ್ಠಿಸಿ ಖಾತೆ ಬದಲಾವಣೆಗೆ ಯತ್ನಿಸಿರುವುದು ಕಂಡು ಬಂದಿದ್ದು, ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲು ಸಲ್ಲಿಸಿಕೊಂಡಿರುವ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.