ದಿನಾಂಕ: 13-04-2019 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 75/2019 ಕಲಂ. ಮನುಷ್ಯ ಕಾಣೆ :-

     ದಿನಾಂಕ:13/04/2019 ರಂದು ಪಿರ್ಯಾದಿದಾರರಾದ ಶ್ರೀ ನಾಗರಾಜ್ ಬಿನ್ ಲೇಟ್ ಗಂಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಮೊದಲನೆ ಮಗನಾದ ಸಂದೀಪ್ ಎನ್. ರವರು ಬಾಗೇಪಲ್ಲಿ ಮತ್ತು ಇತರೆ ಕಡೆಗಳಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದು, ದಿನಾಂಕ:12/04/2019 ರಂದು ಬೆಳಿಗ್ಗೆ 7-00 ಗಂಟೆಗೆಕೆಲಸಕ್ಕೆ ಹೋಗಿ ಬರುವುದಾಗಿ  ಮನೆಯಲ್ಲಿ ತಿಳಿಸಿ ಹೋದವನು ಇದುವರೆವಿಗೂ ಮನೆಗೆ ಬಾರದೆ ಇದ್ದು, ನಾವು ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗದೆ ಇದ್ದು, ಕಾಣೆಯಾಗಿರುವ ತನ್ನ ಮಗನನ್ನು ಪತ್ತೆ ಮಾಡಿಕೊಡಲು ಕೋರಿ ಕೊಟ್ಟ ದೂರು.

2) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 70/2019 ಕಲಂ. 324,506 ಐಪಿಸಿ :-

     ದಿನಾಂಕ; 12-04-2019 ರಂದು ರಾತ್ರಿ 7.30 ಗಂಟೆಗೆ ಪಿರ್ಯಾದಿಯಾದ ಅಶೋಕ.ಎಂ ಬಿನ್ ಮುನಿರಾಜು, 31 ವರ್ಷ, ಗಾಣಿಗರು, ಏರ್ ಪೋರ್ಟ್ ನಲ್ಲಿ ಕೆಲಸ, ವಾಸ; ದಿಬ್ಬೂರು ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ದಿನಾಂಕ; 12-04-2019 ರಂದು ಸಂಜೆ ಸುಮಾರು 4.40 ಗಂಟೆ ಸಮಯದಲ್ಲಿ ನಂದಿನಿ ವೈನ್ಸ್ ನಲ್ಲಿ ಮದ್ಯ ಕುಡಿಯಲು ಹೋಗಿದ್ದು, ಅಲ್ಲಿ MRP ಧರದಲ್ಲಿ ಮಾರಾಟ ಮಾಡಲು ಅಲ್ಲಿಯ ಸಿಬ್ಬಂದಿ ನಿರಾಕರಿಸಿದ್ದು  ಅದನ್ನು ಕೇಳಿದಾಗ ತನ್ನ ಮೇಲೆ ಅಲ್ಲಿರುವ ಬಿಯರ್ ಬಾಟಲಿನಿಂದ ಹೊಡೆದು ತನ್ನ ತಲೆಗೆ ರಕ್ತ ಗಾಯವಾಗಿದ್ದು, ನಂತರ ತಾನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ತನ್ನನ್ನು ಕೊಲೆ ಮಾಡಲು ಹಿಂಜರಿಯುವುದಿಲ್ಲ ಎಂದು ಬೆದರಿಕೆ ಹಾಕಿದ್ದರಿಂದ ಮೇಲ್ಕಂಡ ನಂದಿನಿ ವೈನ್ಸ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ವಿರುದ್ದ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

3) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 44/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ: 13/04/2019 ರಂದು ಮದ್ಯಾಹ್ನ ಪಿ.ಎಸ್.ಐ ರವರಿಗೆ ಠಾಣಾ ವ್ಯಾಪ್ತಿಯ ನಲ್ಲಪ್ಪನಹಳ್ಳಿ ಗ್ರಾಮದ ಬಳಿ ಇರುವ ಪೂತುಲಪ್ಪ ರವರ ಜಮೀನಿನ ಬಳಿ ಯಾರೋ ಆಸಾಮಿಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ, ಇಸ್ಪೀಟ್ ಜೂಜಾಟವಾಡುತ್ತಿದ್ದವರ ಪೈಕಿ ಒಬ್ಬ ಸ್ಥಳದಿಂದ ಓಡಿ ಹೋಗಿದ್ದು, ಉಳಿದ 03 ಜನ ಆರೋಪಿಗಳನ್ನು ವಶಕ್ಕೆ ಪಡೆದು 1450 ರೂ ನಗದು ಹಣ, 52 ಇಸ್ಪೀಟ್ ಎಲೆ ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 3.30 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು, ಮಾಲು ಅಮಾನತ್ತು ಪಂಚನಾಮೆ, 03 ಜನ ಆರೋಪಿಗಳು ಹಾಗೂ ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಸಂಜೆ 5.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೆಮೋ ಸಾರಾಂಶವಾಗಿರುತ್ತೆ.

4) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 119/2019 ಕಲಂ. 78(1),(3) ಕೆ.ಪಿ. ಆಕ್ಟ್ :-

     ದಿನಾಂಕ:12/04/2019 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದಲ್ಲಿ ಅನುಮತಿ ಪಡೆದು ದಾಖಲಿಸಿರುವ ದೂರಿನ ಸಾರಾಂಶವೇನೆಂದರೆ ದಿನಾಂಕ 10/04/2019 ರಂದು ಮಧ್ಯಾಹ್ನ 1-45 ಗಂಟೆಯಲ್ಲಿ  ಶ್ರೀ.ವೆಂಕಟಾಚಲಯ್ಯ, ಎಎಸ್ಐ, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ  ಠಾಣೆಯಲ್ಲಿ ನೀಡಿದ ದೂರನ್ನು ಪಡೆದು ಡಿ.ಎನ್ ನಟರಾಜ ಹೆಚ್,ಸಿ 80 ರವರು ದಾಖಲಿಸಿರುವ ಎನ್,ಸಿ,ಆರ್ 207/2019 ನಮೂದು ಮಾಡಿರುವುದೇನೆಂದರೆ -ದಿನಾಂಕ;10/04/2019 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿ ರುವ ಪ್ರೊಬೇಷನರಿ ಡಿ.ಎಸ್.ಪಿ. ಸಾಹೇಬರಿಗೆ ವಾಟದಹೊಸಹಳ್ಳಿ ಗ್ರಾಮದ ವೆಟರ್ನರಿ ಆಸ್ಪತ್ರೆ ಬಳಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದ ಮೇರೆಗೆ ಶ್ರೀ.ಗೌತಮ್ ಕೆ.ಸಿ. ಪ್ರೊಬೇಷನರಿ ಡಿ.ಎಸ್.ಪಿ., ಶ್ರೀ.ಲಿಯಾಖತ್ ಉಲ್ಲಾ ಪಿಎಸ್ಐ (ಅ.ವಿ) ರವರು,  ನನ್ನನ್ನು ಮತ್ತು ಪೊಲೀಸ್ ಸಿಬ್ಬಂದಿ   ಹಾಗು ಪಂಚರನ್ನು ಕರೆದುಕೊಂಡು, ವಾಟದಹೊಸಹಳ್ಳಿ ಗ್ರಾಮಕ್ಕೆ  ಹೋಗಿ, ಅಲ್ಲಿ  ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಆಸಾಮಿಯು ವೆಟರ್ನರಿ  ಆಸ್ಪತ್ರೆಯ ಪಕ್ಕದ ರಸ್ತೆಯಲ್ಲಿ ಓಡಾಡುವ ಜನರಿಗೆ,  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಅರುಣಾಚಲಂ ಬಿನ್ ಲೇಟ್ ಲಕ್ಷ್ಮಿನರಸಪ್ಪ, 57 ವರ್ಷ, ನಾಯಕ ಜನಾಂಗ, ಆಟೋಚಾಲಕ ವೃತ್ತಿ, ವಾಟದಹೊಸಹಳ್ಳಿ ಗ್ರಾಮ  ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 600/- ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇರುತ್ತೆ.   ಸದರಿ  ಮಟ್ಕಾ ಚೀಟಿ, ಬಾಲ್ ಪಾಯಿಂಟ್ ಪೆನ್ ಮತ್ತು 600/- ರೂ ನಗದು ಹಣವನ್ನು  ಪಂಚರ ಸಮಕ್ಷಮದಲ್ಲಿ ಮಧ್ಯಾಹ್ನ 12-30 ರಿಂದ 1-00 ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ವಾಪಸ್ಸು ಬಂದು  ಮಾಲನ್ನು ವಶಕ್ಕೆ ನೀಡುತ್ತಿದ್ದು ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿದೆ.

5) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 120/2019 ಕಲಂ. 78(1),(3) ಕೆ.ಪಿ. ಆಕ್ಟ್ :-

     ದಿನಾಂಕ:12/04/2019 ರಂದು ಸಂಜೆ 5-00 ಗಂಟೆಯಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದು ದಾಖಲಿಸಿರುವ ದೂರಿನ ಸಾರಾಂಶವೇನೆಂದರೆ ದಿನಾಂಕ 11/04/2019 ರಂದು ಸಂಜೆ 5-00 ಗಂಟೆಯಲ್ಲಿ ಶ್ರೀ.ವೆಂಕಟಾಚಲಯ್ಯ, ಎಎಸ್ಐ, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ   ಠಾಣೆಯಲ್ಲಿ ನೀಡಿದ ದೂರನ್ನು ಪಡೆದು ಡಿ,ಎ ನಟರಾಜ ಹೆಚ್,ಸಿ 80 ರವರು ದಾಖಲಿಸಿರುವ ಎನ್,ಸಿ,ಆರ್ 208/2019 ಸಾರಾಂಶವೇನೆಂದರೆ,  ಇದೇ ದಿನ ಮಧ್ಯಾಹ್ನ 3-00 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಪ್ರೊಬೇಷನರಿ ಡಿ.ಎಸ್.ಪಿ. ಸಾಹೇಬರಿಗೆ ವಾಟದಹೊಸಹಳ್ಳಿ ಗ್ರಾಮದ ಸತ್ಯಮ್ಮ ಗುಡಿಯ ಬಳಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದ ಮೇರೆಗೆ ಶ್ರೀ.ಗೌತಮ್ ಕೆ.ಸಿ. ಪ್ರೊಬೇಷನರಿ ಡಿ.ಎಸ್.ಪಿ., ಶ್ರೀ.ಲಿಯಾಖತ್ ಉಲ್ಲಾ ಪಿಎಸ್ಐ (ಅ.ವಿ) ರವರು,  ನನ್ನನ್ನು ಮತ್ತು ಪೊಲೀಸ್ ಸಿಬ್ಬಂದಿಯನ್ನು ಹಾಗು ಪಂಚರನ್ನು ಕರೆದುಕೊಂಡು, ವಾಟದಹೊಸಹಳ್ಳಿ ಗ್ರಾಮಕ್ಕೆ  ಹೋಗಿ, ಅಲ್ಲಿ  ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ,   ಯೋರೋ ಒಬ್ಬ ಆಸಾಮಿಯು ಸತ್ಯಮ್ಮನ ಗುಡಿಯ ಮುಂದೆ ರಸ್ತೆಯಲ್ಲಿ ಓಡಾಡುವ ಜನರಿಗೆ,  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾವು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಅಶ್ವತ್ಥಪ್ಪ @ ಕೋಡಿ ಬಿನ್ ಲೇಟ್ ಪೆದ್ದನ್ನ,  ನಾಯಕ ಜನಾಂಗ, ವಾಸ ವಾಟದಹೊಸಹಳ್ಳಿ ಗ್ರಾಮ  ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 900/- ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇರುತ್ತೆ.   ಸದರಿ  ಮಟ್ಕಾ ಚೀಟಿ, ಬಾಲ್ ಪಾಯಿಂಟ್ ಪೆನ್ ಮತ್ತು 600/- ರೂ ನಗದು ಹಣವನ್ನು  ಪಂಚರ ಸಮಕ್ಷಮದಲ್ಲಿ ಸಂಜೆ 4-00 ರಿಂದ 4-30 ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಸಂಜೆ 5-00  ಗಂಟೆಗೆ  ಠಾಣೆಗೆ  ವಾಪಸ್ಸು ಬಂದು  ,ಮಾಲನ್ನು ವಶಕ್ಕೆ ನೀಡುತ್ತಿದ್ದು ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

6) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 121/2019 ಕಲಂ. 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 12/04/2019 ರಂದು ಸಾಯಂಕಾಲ 5-30 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಕೆ.ಸಿ.ಗೌತಮ್, ಪ್ರೊಬೇಷನರಿ ಡಿ.ವೈ.ಎಸ್.ಪಿ ಸಾಹೇಬರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:12/04/2019 ರಂದು ಮದ್ಯಾಹ್ನ 3-45 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಎಂ.ಜಾಲಹಳ್ಳಿ ಗ್ರಾಮದಲ್ಲಿರುವ ಕೃಷ್ಣಪ್ಪ ಎಂಬುವವರ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿ ಮೇರೆಗೆ ಠಾಣೆಯ ಅಪರಾಧ ಪಿ.ಎಸ್.ಐ ಲಿಯಾಕತ್ ಉಲ್ಲಾ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-61 ರಲ್ಲಿ ಎಂ.ಜಾಲಹಳ್ಳಿ ಗ್ರಾಮಕ್ಕೆ ಹೋಗಿ, ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಕೃಷ್ಣಪ್ಪರವರ ಚಿಲ್ಲರೆ ಅಂಗಡಿಯ ಮುಂದೆ ಒಬ್ಬ ಆಸಾಮಿ ಪ್ಲಾಸ್ಟಿಕ್ ಕವರನ್ನು ಹಿಡಿದುಕೊಂಡು ನಿಂತಿದ್ದು, ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಅಂಗಡಿಯ ಮುಂದೆ 3 ಜನ ಗಂಡಸರು ಪೇಪರ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು 3 ಜನ ಗಂಡಸರು ಓಡಿ ಹೋಗಿದ್ದು, ಪ್ಲಾಸ್ಟಿಕ್ ಕವರ್ ಹಿಡಿದುಕೊಂಡು ನಿಂತು ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಕೃಷ್ಣಪ್ಪ ಬಿನ್ ಲೇಟ್ ನರಸಿಂಹಪ್ಪ, 50 ವರ್ಷ, ಉಪ್ಪಾರ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಎಂ.ಜಾಲಹಳ್ಳಿ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತ ಹಿಡಿದುಕೊಂಡು ನಿಂತಿದ್ದ ಪ್ಲಾಸ್ಟಿಕ್ ಕವರನ್ನು ಪರಿಶೀಲಿಸಿದಾಗ, ಅದರಲ್ಲಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 15 ಟೆಟ್ರಾ ಪಾಕೆಟ್ ಗಳು ಇದ್ದು, ಒಟ್ಟು 1,350 ಲೀಟರ್ ಆಗಿರುತ್ತೆ. ಇವುಗಳ ಬೆಲೆ 454.8 ರೂ.ಗಳಾಗಿದ್ದು, ಸ್ಥಳದಲ್ಲಿ 03 ಖಾಲಿ ಪೇಪರ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS W HISKY ಯ 03 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಯನ್ನು ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಸಾಯಂಕಾಲ 4-30 ಗಂಟೆಯಿಂದ 5-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 15 ಟೆಟ್ರಾ ಪಾಕೆಟ್ ಗಳು, ಸ್ಥಳದಲ್ಲಿ ಬಿದ್ದಿದ್ದ 03 ಖಾಲಿ ಪೇಪರ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 03 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಕವರನ್ನು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

7) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 122/2019 ಕಲಂ. 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 12/04/2019 ರಂದು ಸಂಜೆ 7-15 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಕೆ.ಸಿ.ಗೌತಮ್, ಪ್ರೊಬೇಷನರಿ ಡಿ.ವೈ.ಎಸ್.ಪಿ ಸಾಹೇಬರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:12/04/2019 ರಂದು ಸಾಯಂಕಾಲ 5-45 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಕುದುರೆಬೇಲ್ಯಾ ಗ್ರಾಮದಲ್ಲಿರುವ ಶಂಕರ್ ಎಂಬುವವರ ಮನೆಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿ ಮೇರೆಗೆ ಠಾಣೆಯ ಅಪರಾಧ ಪಿ.ಎಸ್.ಐ ಲಿಯಾಕತ್ ಉಲ್ಲಾ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-61 ರಲ್ಲಿ ಕುದುರೆಬೇಲ್ಯಾ ಗ್ರಾಮಕ್ಕೆ ಹೋಗಿ, ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಶಂಕರ ರವರ ಮನೆಯ ಮುಂದೆ ಒಬ್ಬ ಆಸಾಮಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ನಿಂತಿದ್ದು, ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಮನೆಯ ಮುಂದೆ 3 ಜನ ಗಂಡಸರು ಪೇಪರ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು 3 ಜನ ಗಂಡಸರು ಓಡಿ ಹೋಗಿದ್ದು, ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ನಿಂತು ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಕೆ.ಜಿ.ಶಂಕರ ಬಿನ್ ಗಂಗಾಧರಪ್ಪ, 23 ವರ್ಷ, ಈಡಿಗ ಜನಾಂಗ, ಕೂಲಿಕೆಲಸ, ಕುದುರೆಬೇಲ್ಯಾ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತ ಹಿಡಿದುಕೊಂಡು ನಿಂತಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 10 ಟೆಟ್ರಾ ಪಾಕೆಟ್ ಗಳು ಇದ್ದು, ಒಟ್ಟು 0.900 ಲೀಟರ್ ಆಗಿರುತ್ತೆ. ಇವುಗಳ ಬೆಲೆ 303.2 ರೂ.ಗಳಾಗಿದ್ದು, ಸ್ಥಳದಲ್ಲಿ 03 ಖಾಲಿ ಪೇಪರ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS W HISKY ಯ 03 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಯನ್ನು ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಸಾಯಂಕಾಲ 6-15 ಗಂಟೆಯಿಂದ 6-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 10 ಟೆಟ್ರಾ ಪಾಕೆಟ್ ಗಳು, ಸ್ಥಳದಲ್ಲಿ ಬಿದ್ದಿದ್ದ 03 ಖಾಲಿ ಪೇಪರ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 03 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಚೀಲವನ್ನು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

8) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 123/2019 ಕಲಂ. 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 12/04/2019 ರಂದು ರಾತ್ರಿ 8-00 ಗಂಟೆಗೆ ಗೌರೀಬಿದನೂರು ವೃತ್ತದ ಪ್ರಭಾರದಲ್ಲಿರುವ ವೈ.ಅಮರನಾರಾಯಣ, ಸಿ.ಪಿ.ಐ ಸಾಹೇಬರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:12/04/2019 ರಂದು ಸಾಯಂಕಾಲ 6-30 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಮರಳೂರು ಗ್ರಾಮದಲ್ಲಿರುವ ಲಕ್ಷ್ಮಪ್ಪ ಎಂಬುವವರ ಪೆಟ್ಟಿಗೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿ ಮೇರೆಗೆ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1222 ರಲ್ಲಿ ಮರಳೂರು ಗ್ರಾಮಕ್ಕೆ ಹೋಗಿ, ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಲಕ್ಷ್ಮಪ್ಪ ರವರ ಪೆಟ್ಟಿಗೆ ಅಂಗಡಿಯ ಮುಂದೆ ಒಬ್ಬ ಆಸಾಮಿ ಪ್ಲಾಸ್ಟಿಕ್ ಕವರನ್ನು  ಹಿಡಿದುಕೊಂಡು ನಿಂತಿದ್ದು, ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಮನೆಯ ಮುಂದೆ 4 ಜನ ಗಂಡಸರು ಪೇಪರ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು 4 ಜನ ಗಂಡಸರು ಮತ್ತು ಪ್ಲಾಸ್ಟಿಕ್ ಕವರನ್ನು ಹಿಡಿದುಕೊಂಡು ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಆಸಾಮಿಯು ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರನ್ನು ಸ್ಥಳದಲ್ಲಿ ಬಿಸಾಡಿ ಓಡಿ ಹೋಗಿದ್ದು, ನಂತರ ಗ್ರಾಮಸ್ಥರಲ್ಲಿ ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಓಡಿ ಹೋದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಲಕ್ಷ್ಮಪ್ಪ ಬಿನ್ ದೊಡ್ಡ ನರಸಪ್ಪ, 60 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಮರಳೂರು ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತ ಹಿಡಿದುಕೊಂಡು ನಿಂತಿದ್ದ ಪ್ಲಾಸ್ಟಿಕ್ ಕವರನ್ನು ಪರಿಶೀಲಿಸಿದಾಗ, ಅದರಲ್ಲಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 10 ಟೆಟ್ರಾ ಪಾಕೆಟ್ ಗಳು ಇದ್ದು, ಒಟ್ಟು 0.900 ಲೀಟರ್ ಆಗಿರುತ್ತೆ. ಇವುಗಳ ಬೆಲೆ 303.2 ರೂ.ಗಳಾಗಿದ್ದು, ಸ್ಥಳದಲ್ಲಿ 04 ಖಾಲಿ ಪೇಪರ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS W HISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇಲ್ಲದೇ ಇರುವುದರಿಂದ ಸ್ಥಳದಿಂದ ಪರಾರಿಯಾಗಿರುತ್ತಾನೆ, ಸ್ಥಳದಲ್ಲಿ ಸಂಜೆ 7-00 ಗಂಟೆಯಿಂದ 7-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 10 ಟೆಟ್ರಾ ಪಾಕೆಟ್ ಗಳು, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪೇಪರ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಕವರನ್ನು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

9) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 124/2019 ಕಲಂ. 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 12/04/2019 ರಂದು ರಾತ್ರಿ 9-00 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಕೆ.ಸಿ.ಗೌತಮ್, ಪ್ರೊಬೇಷನರಿ ಡಿ.ವೈ.ಎಸ್.ಪಿ ಸಾಹೇಬರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:12/04/2019 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಚನ್ನೇನಹಳ್ಳಿ ಗ್ರಾಮದಲ್ಲಿರುವ ಶಿವಕುಮಾರ್ ಎಂಬುವವರ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿ ಮೇರೆಗೆ ಠಾಣೆಯ ಅಪರಾಧ ಪಿ.ಎಸ್.ಐ ಲಿಯಾಕತ್ ಉಲ್ಲಾ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-61 ರಲ್ಲಿ ಚನ್ನೇನಹಳ್ಳಿ ಗ್ರಾಮಕ್ಕೆ ಹೋಗಿ, ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಶಿವಕುಮಾರ್ ರವರ ಪೆಟ್ಟಿಗೆ ಅಂಗಡಿಯ ಮುಂದೆ ಒಬ್ಬ ಆಸಾಮಿ ಪ್ಲಾಸ್ಟಿಕ್ ಕವರನ್ನು ಹಿಡಿದುಕೊಂಡು ನಿಂತಿದ್ದು, ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಮನೆಯ ಮುಂದೆ ಇಬ್ಬರು ಗಂಡಸರು ಪೇಪರ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಇಬ್ಬರು ಗಂಡಸರು ಮತ್ತು ಪ್ಲಾಸ್ಟಿಕ್ ಕವರನ್ನು ಹಿಡಿದುಕೊಂಡು ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಆಸಾಮಿಯು ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರನ್ನು ಸ್ಥಳದಲ್ಲಿ ಬಿಸಾಡಿ ಓಡಿ ಹೋಗಿದ್ದು, ನಂತರ ಗ್ರಾಮಸ್ಥರಲ್ಲಿ ಮದ್ಯದ ಪ್ಯಾಕೇಟ್ ಗಳನ್ನು ಕೊಟ್ಟು ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಓಡಿ ಹೋದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಶಿವಕುಮಾರ್ ಬಿನ್ ಲೇಟ್ ಗಂಗಾಧರಪ್ಪ, 50 ವರ್ಷ, ಲಿಂಗಾಯಿತರು, ಚಿಲ್ಲರೆ ಅಂಗಡಿ ವ್ಯಾಪಾರ, ಚನ್ನೇನಹಳ್ಳಿ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತ ಹಿಡಿದುಕೊಂಡು ನಿಂತಿದ್ದ ಪ್ಲಾಸ್ಟಿಕ್ ಕವರನ್ನು ಪರಿಶೀಲಿಸಿದಾಗ, ಅದರಲ್ಲಿ 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 8 ಟೆಟ್ರಾ ಪಾಕೆಟ್ ಗಳು ಇದ್ದು, ಒಟ್ಟು 1,440 ಲೀಟರ್ ಆಗಿರುತ್ತೆ. ಇವುಗಳ ಬೆಲೆ 593.04 ರೂ.ಗಳಾಗಿದ್ದು, ಸ್ಥಳದಲ್ಲಿ 2 ಖಾಲಿ ಪೇಪರ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 02 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇಲ್ಲದೇ ಇರುವುದರಿಂದ ಸ್ಥಳದಿಂದ ಪರಾರಿಯಾಗಿರುತ್ತಾನೆ, ಸ್ಥಳದಲ್ಲಿ ರಾತ್ರಿ 8-00 ಗಂಟೆಯಿಂದ 8-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 8 ಟೆಟ್ರಾ ಪಾಕೆಟ್ ಗಳು, ಸ್ಥಳದಲ್ಲಿ ಬಿದ್ದಿದ್ದ 02 ಖಾಲಿ ಪೇಪರ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 02 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಕವರನ್ನು ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

10) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 81/2019 ಕಲಂ. 279,337 ಐಪಿಸಿ ಮತ್ತು ಸೆಕ್ಷನ್ 187 ಐಎಂವಿ ಆಕ್ಟ್ :-

     ದಿನಾಂಕ:13-04-2019 ರಂದು ಬೆಳಿಗ್ಗೆ ಘಂಟೆಗೆ ಪಿರ್ಯಾದುದಾರರಾದ ಶ್ರೀ.ಪರಮೇಶ್ವರ ಟಿ.ಪಿ ಬಿನ್ ಪಾಪಿರೆಡ್ಡಿ, 26 ವರ್ಷ, ಒಕ್ಕಲಿಗರು, ಏರ್ ಪೋರ್ಟ್ ನಲ್ಲಿ ಕೆಲಸ, ವಾಸ:       ತೀಲಕುಂಟಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:10-04-2019 ರಂದು ಸ್ವಂತ ಕೆಲಸದ ನಿಮಿತ್ತ ನಾನು ಪೆರೇಸಂದ್ರಕ್ಕೆ ಹೋಗಲು ತನ್ನ ಬಾಬತ್ತು  ಕೆಎ-40-ವಿ-3012 ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ತಮ್ಮ ಗ್ರಾಮದ ತಮ್ಮ ಸಂಬಂಧಿ ದೊಡ್ಡಯರ್ರಪ್ಪ ಬಿನ್ ವೆಂಕಟಪ್ಪ, 75 ವರ್ಷ ರವರು ಜೊತೆಯಲ್ಲಿ ಪೆರೇಸಂದ್ರಕ್ಕೆ ಬರುವುದಾಗಿ ಹೇಳಿದ್ದರಿಂದ ಅವರನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು NH-7 ರಸ್ತೆಯ ಮುಖಾಂತರ ಪೆರೇಸಂದ್ರಕ್ಕೆ ಹೋಗುತ್ತಿದ್ದಾಗ ಸಾದಲಿ ಕ್ರಾಸ್ ಬಳಿ ಮದ್ಯಾಹ್ನ 3-30 ಘಂಟೆಯಲ್ಲಿ ಯಾವುದೋ ಕಂಟೈನರ್ ವಾಹನ ಹಿಂಬದಿಯಿಂದ ಬಂದು tಮ್ಮ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ತಾವುಗಳು ಕೆಳಗಡೆಗೆ ಬಿದ್ದು ಹೋಗಿದ್ದು, ತಮಗೆ ಅಪಘಾತಪಡಿಸಿದ ಕಂಟೈನರ್ ವಾಹನ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು, ಅದರ ನೊಂದಣಿ ಸಂಖ್ಯೆ ತಾನು ನೋಡಿರುವುದಿಲ್ಲವೆಂದೂ, ಅದರ ಪರಿಣಾಮ ತನ್ನ ಬಲಗೈಗೆ ರಕ್ತಗಾಯವಾಗಿದ್ದು, ದೊಡ್ಡಯರ್ರಪ್ಪ ರವರ ಬಲಭಾಗದ ತಲೆಗೆ, ಬಲಭುಜಕ್ಕೆ, ಎರಡೂ ಮೊಣಕಾಲುಗಳಿಗೆ, ಎರಡೂ ಮೊಣಕೈಗಳಿಗೆ ರಕ್ತಗಾಯಗಳಾಗಿರುವುದಾಗಿ, ತನ್ನ ಬಾಬತ್ತು ಕೆಎ-40-ವಿ-3012 ದ್ವಿಚಕ್ರವಾಹನ ನುಜ್ಜುಗುಜ್ಜಾಗಿರುವುದಾಗಿ, ರಸ್ತೆಯಲ್ಲಿ ಹೋಗುತ್ತಿದ್ದ ತಮ್ಮ ಗ್ರಾಮದ ಮಂಜುನಾಥ ರವರು ತಮ್ಮನ್ನು ಉಪಚರಿಸಿ 108 ಆಂಬ್ಯುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲು ಮಾಡಿರುವುದಾಗಿ, ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಡಿಸ್ ಚಾರ್ಜ್ ಮಾಡಿಕೊಂಡು ನಂತರ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ದೊಡ್ಡಯರ್ರಪ್ಪ ರವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ, ಮೇಲ್ಕಂಡ ಯಾವುದೋ (ವಾಹನ ಸಂಖ್ಯೆ ಗೊತ್ತಿಲ್ಲದ) ಕಂಟೈನರ್ ನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ.

11) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 42/2019 ಕಲಂ. 323,324,307,504 ರೆ/ವಿ 34 ಐಪಿಸಿ :-

     ದಿನಾಂಕ 13/04/2019 ರಂದು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಚಿಂತಾಮಣಿ ತಾಲ್ಲೂಕು ಗಡಿಗವಾರಹಳ್ಳಿ ಗ್ರಾಮದ ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ವೆಂಕಟರವಣಪ್ಪ ರವರ ಹೇಳಿಕೆಯನ್ನು ಎ.ಎಸ್.ಐ ಸುಬ್ಬರಾಯಪ್ಪ ರವರು ಪಡದುಕೊಂಡು ಬಂದು ಠಾಣೆಯಲ್ಲಿ ಮಧ್ಯಾಹ್ನ 3-00 ಗಂಟೆಗೆ ಹಾಜರುಪಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿದ್ದು, ಪ್ರಕರಣದ ಸಾರಾಂಶವೇನೆಂದರೆ: ದಿನಾಂಕ 12/04/2019 ರಂದು ಗಾಯಾಳು ಲಕ್ಷ್ಮೀದೇವಮ್ಮ ನೀರು ಹಿಡಿಯುವ ಸಲುವಾಗಿ ಗ್ರಾಮದ ನಲ್ಲಿ ಬಳಿ ಹೋದಾಗ ಅವರ ಸಂಭಂದಿಯಾದ ಸರಸ್ವತಮ್ಮ ಕೋಂ ಸುರೇಶ ರವರು ಹೆಚ್ಚು ನೀರು ಹಿಡಿದಿದ್ದು, ಈ ಬಗ್ಗೆ ಕೇಳಿದ್ದಕ್ಕೆ ಅವಾಚ್ಯವಾಗಿ ಬೈಯ್ದಿದ್ದು, ನಂತರ ಇದೇ ವಿಚಾರವಾಗಿ ರಾತ್ರಿ 8-00 ಗಂಟೆ ಸಮಯದಲ್ಲಿ ಸರಸ್ವತಮ್ಮ ಮನೆಗೆ ಬಂದ ತನ್ನ ಗಂಡ ಸುರೇಶನಿಗೆ ವಿಚಾರ ತಿಳಿಸಿದಾಗ ಅಣ್ಣತಮ್ಮಂದಿರಾದ ಸುರೇಶ ಮತ್ತು ದೇವರಾಜ ರವರು ಲಕ್ಷ್ಮೀದೇವಮ್ಮ ಹಾಗೂ ಆಕೆಯ ಗಂಡ ವೆಂಕಟವಣಪ್ಪ ರವರನ್ನು ಸಾಯಿಸುವ ಉದ್ದೇಶದಿಂದ  ಮನೆಯಿಂದ ಕೊಡಲಿ ತೆಗೆದುಕೊಂಡು ಬಂದು ದೇವರಾಜ ಕೊಡಲಿಯಿಂದ ಲಕ್ಷ್ಮೇದೇವಮ್ಮಳ ಗಂಡ ವೆಂಕಟರವಣಪ್ಪನ ಕತ್ತಿಗೆ ಹೊಡೆಯಲು ಹೋದಾಗ ಆತ ಕೈ ಅಡ್ಡ ಇಡಲಾಗಿ ಎಡಕೈನ ಹೆಬ್ಬೆರಳು ಮತ್ತು ಅಂಗೈ ಸೀಳಿದ ರಕ್ತಗಾಯವಾಗಿದ್ದು, ಮತ್ತೆ ಬೀಸಿದಾಗ ಎಡಕೈ ಮೊಣಕೈ ಮತ್ತು ಎಡಕೈ ಭೂಜದಿಂದ ರೆಟ್ಟೆಯ ಪೂರ್ಣ ಭಾಗ ಕತ್ತರಿಸಿದಂತೆ ರಕ್ತಗಾಯವಾಗಿರುತ್ತದೆ. ಆಗ ಲಕ್ಷ್ಮೀದೇವಮ್ಮ  ಜಗಳ ಬಿಡಿಸಲು ಹೋದಾಗ ಆಕೆಗೆ ದೇವರಾಜ ಕೊಡಲಿಯಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿ ಕತ್ತಿಗೆ ಕೊಡಲಿ ಬೀಸಿದಾಗ ಬಲಕೂ ಅಡ್ಡ ಇಟ್ಟ ಲಕ್ಷ್ಮೀದೇವಮ್ಮಳಿಗೆ  ಬಲಗೈ ಗೆ ರಕ್ತಗಾಯವಾಗಿದ್ದು, ಸುರೇಶ ಇಟ್ಟಿಗೆಗಳಿಂದ ವೆಂಕಟರವಣಪ್ಪ ರವರಿಗೆ ತಲೆಯ ಹಿಂಭಾಗ, ಎದೆಗೆ ಹೊಡೆದು ರಕ್ಗಗಾಯಪಡಿಸಿದ್ದು, ಜಗಳ ಬಿಡಿಸಲು ಬಂದ ನರಸಿಂಹಪ್ಪ ಬಿನ್ ಈರಪ್ಪ ರವರಿಗೆ ಸುರೇಶ ಇಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಗಾಯಗೊಂಡ  ಲಕ್ಷ್ಮೀದೇವಮ್ಮ ಮತ್ತು ವೆಂಕಟರವಣಪ್ಪ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೋಲಾರ್ ಎಸ್.ಎನ್.ಆರ್ ಆಸ್ಪತ್ರಗೆ ದಾಖಲಾಗಿ ಅಲ್ಲಿನ ವೈದ್ಯೆರ ಸಲಹೇ ಮೇರೆಗೆ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಸಾಯಿಸುವ ಉದ್ದೇಶದಿಂದ ಹಲ್ಲೆ ಮಾಡಿದ ಮೇಲ್ಕಂಡ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಹೇಳಿಕೆ ದೂರು.

12) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 29/2019 ಕಲಂ. 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:12/04/2019 ರಂದು ಸಂಜೆ 06-00 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು  ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:12/04/2019 ರಂದು ಮದ್ಯಾಹ್ನ 04-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ತೋಳ್ಳಪಲ್ಲಿ ಗ್ರಾಮದ ಪೆಟ್ಟಿಗೆ ಅಂಗಡಿಯ ಮುಂಬಾಗದ ಖಾಲಿ ಜಾಗದಲ್ಲಿ  ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ತೋಳ್ಳಪಲ್ಲಿ ಗ್ರಾಮದ ಪೆಟ್ಟಿಗೆ ಅಂಗಡಿಯ ಮುಂಬಾಗದ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ ಜೀಪನ್ನು ನೋಡಿ ಪೆಟ್ಟಿಗೆ ಅಂಗಡಿಯ  ಬಳಿ ಖಾಲಿ ಜಾಗದಲ್ಲಿದ್ದ  ಯಾರೋ ಒಬ್ಬರು ಓಡಿ ಹೋಗಿದ್ದು ಪೆಟ್ಟಿಗೆ  ಅಂಗಡಿಯ ಬಳಿ ಖಾಲಿ ಜಾಗದಲ್ಲಿ ಒಬ್ಬ ಆಸಾಮಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ಅಲ್ಲಾ ಬಕಾಷ್ ಬಿನ್ ಲೇಟ್ ಮಹಮದ್ ಹುಸೇನ್ ಸಾಬ್, 68 ವರ್ಷ ಮುಸ್ಲಿಂ ಜನಾಂಗ, ವ್ಯಾಪಾರ ತೋಳ್ಳಪಲ್ಲಿ  ಗ್ರಾಮ  ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ  20  ಹೈ ವಾರ್ಡ್ಸ್ ಚೀರ್ಸ್  ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು 600 ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 01 ಖಾಲಿ ಹೈ ವಾರ್ಡ್ಸ್ ಚೀರ್ಸ್  ವಿಸ್ಕಿ ಟೆಟ್ರಾ ಪಾಕೆಟ್ ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ, ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ 29/2019 ಕಲಂ 15 (ಎ) 32(3) KE ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ,