ದಿನಾಂಕ: 13-03-2019 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.42/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:12/03/2019ರಂದು ಬಾಗೇಪಲ್ಲಿ ವೃತ್ತದ ಸಿ.ಪಿ.ಐ ಶ್ರೀ ನಯಾಜ್ ಬೇಗ್  ರವರು ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:12/03/2019 ರಂದು ಮದ್ಯಾಹ್ನ 03-00 ಗಂಟೆಗೆ  ಬಾಗೇಪಲ್ಲಿ ವೃತ್ತದ ಸಿ.ಪಿ.ಐ ಶ್ರೀ ನಯಾಜ್ ಬೇಗ್  ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೊಂದಿಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಬಾಗೇಪಲ್ಲಿ ತಾಲ್ಲೂಕು ಜಿಲ್ಲಾಜಿರ್ಲ ಗ್ರಾಮದ ಸರ್ವೆ ನಂ 79 ರ ಸರ್ಕಾರಿ ಜಮೀನಿನ ಬಳಿ ದಾಳಿ ಮಾಡಲಾಗಿ ಕೆಳಕಂಡ ಆರೋಪಿತರು ಹಣವನ್ನು ಪಣವನ್ನಾಗಿ ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದವರ ಮೇಲೆ ದಾಳಿ ಮಾಡಿ ನಗದು ಹಣ 5200/-ರೂ, 52 ಇಸ್ಪೀಟ್ ಎಲೆಗಳನ್ನು ಹಾಗೂ ಒಂದು ಹಳೆಯ ಪ್ಲಾಸ್ಟೀಕ್ ಚೀಲವನ್ನು ಪಂಚನಾಮೆಯೊಂದಿಗೆ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಬಂದು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿ ಪಡೆದು ಠಾಣಾ ಎನ್.ಸಿ.ಆರ್ ನಂ 54/2019 ರಂತೆ ಪ್ರಕರಣ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

2) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.43/2019 ಕಲಂ. 279-337-304(ಎ) ಐ.ಪಿ.ಸಿ:-

     ದಿನಾಂಕ;13.03.2019  ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಶ್ರೀ ಎಲ್.ಅಮರನಾರಾಯಣ ಬಿನ್ ಶ್ರೀರಾಮಪ್ಪ ರವರಿಂದ ಪಡೆದ ಹೇಳಿಕ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 13.03.2019 ರಂದು ಬೆಳಗ್ಗೆ 5-00 ಗಂಟೆಗೆ ನಾನು ಮತ್ತು ನಮ್ಮ ಸಂಬಂಧಿಕರಾದ ಗೊರಂಟ್ಲ ಗ್ರಾಮದ ವಾಸಿಯಾದ ಹರಿನಾಥ್ ಬಿನ್ ಮಸ್ತಾನಪ್ಪ 45 ವರ್ಷ ಬಲಜಿಗರು ತರಕಾರಿ ವ್ಯಾಪಾರ ರವರು ಬಾಗೇಪಲ್ಲಿ APMC ಮಾರ್ಕೆಟ್ಗೆ ಬಂದು ತರಕಾರಿಯನ್ನು ತೆಗೆದುಕೊಂಡು ನನ್ನ ಬಾಬತ್ತು AP-02 TJ-1576 ನೊಂದಣಿ ಸಂಖ್ಯೆಯ ಆಟೋದಲ್ಲಿ ತುಂಬಿಕೊಂಡು ಕೊಡಿಕೊಂಡ ಮತ್ತು ಗೊರಂಟ್ಲಕ್ಕೆ  ಮಾರಾಟಕ್ಕಾಗಿ ಹೋಗಲು ಹರಿನಾಥ್ ರವರು ನನ್ನ ಪಕ್ಕದಲ್ಲಿ ಕುಳಿತುಕೊಂಡಿದ್ದು ನಾನು ಆಟೋವನ್ನು ಚಾಲನೆ ಮಾಡಿಕೊಂಡು ಬಾಗೇಪಲ್ಲಿ ತಾಲ್ಲೂಕು ಆದಿಗಾನಗಳ್ಳಿ ಗ್ರಾಮದ ಕ್ರಾಸ್ ನಿಂದ ಮುಂಭಾಗ SRS ಪೆಟ್ರೋಲ್ ಬಂಕ್ ಸಮೀಪ NH-07 ರಸ್ತೆ ಯಲ್ಲಿ ಬೆಳಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ AP-04, H-2810 ನೊಂದಣಿ ಸಂಖ್ಯೆಯ ಲಾರಿಯನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೆ ರಸ್ತೆಯಲ್ಲಿ ನಿರ್ಲಕ್ಷತೆಯಿಂದ  ನಿಲ್ಲಿಸಿದ್ದು, ತಾನು ಆಟೋವನ್ನು ಚಾಲನೆ ಮಾಡಿಕೊಂಡು ಲಾರಿಯ ಹತ್ತಿರಕ್ಕೆ ಹೋದಾಗ ಆಟೋವನ್ನು ನಿಯಂತ್ರಿಸಿದರೂ ನನ್ನ ನಿಯಂತ್ರಣಕ್ಕೆ ಬಾರದೆ ಲಾರಿಯ ಹಿಂಭಾಗಕ್ಕೆ ಆಟೋವನ್ನು ಡಿಕ್ಕಿ ಹೊಡೆದ ಪರಿಣಾಮ ಆಟೋ ಮುಂಭಾಗ ಸಂಪೂರ್ಣ ಜಖಂಗೊಂಡು ನನ್ನ ಪಕ್ಕದಲ್ಲಿ ಕುಳಿತಿದ್ದ ಹರಿನಾಥ ರವರಿಗೆ ಮುಖದ ಮೇಲೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಸ್ಥಳದಲ್ಲೆ ಮೃತಪಟ್ಟಿದ್ದು, ನನಗೆ ಎಡಕೆನ್ನೆಯ ಮೇಲೆ ರಕ್ತಗಾಯವಾಗಿ ಎರಡೂ ಕೈಗಳಿಗೂ ಮತ್ತು ಸೊಂಟಕ್ಕೆ ಮೂಗೇಟುಗಳಾಗಿದ್ದು, ಸ್ಥಳದಲ್ಲಿದ್ದ ಸರ್ವಜನಿಕರು 108 ಅಂಬ್ಯೂಲೇನ್ಸ್ ನಲ್ಲಿ ನನ್ನನ್ನು ಮತ್ತು ಹರಿನಾಥ ರವರ ಮೃತ ದೇಹವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ನನ್ನನ್ನು ಚಿಕಿತ್ಸೆಗಾಗಿ ದಾಖಲಿಸಿದ್ದು, ಹರಿನಾಥ ರವರ ಮೃತ ದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಿದ್ದು, ಈ ಅಪಘಾತಕ್ಕೆ ಕಾರಣನಾದ  AP-04, H-2810 ನೊಂದಣಿ ಸಂಖ್ಯೆಯ ಲಾರಿಯ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು

3) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.65/2019 ಕಲಂ. 324-504-506 ಐ.ಪಿ.ಸಿ & 3(1)(s),3(1)(r) Scheduled Castes and the Scheduled Tribes (Prevention of Atrocities) Amendment Bill:-

     ದಿನಾಂಕ:12/03/2019 ರಂದು ರಾತ್ರಿ 7-30 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಚೌಡಪ್ಪ ಬಿನ್ ಮುಳಬಾಗಲಪ್ಪ, 62 ವರ್ಷ, ಆದಿ ಕರ್ನಾಟಕ ಟಿ.ಹೊಸಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೇ, ದಿನಾಂಕ:12/03/2019 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ನಮ್ಮ ಗ್ರಾಮದ ಹಾಲು ಡೈರಿಯ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಗ್ರಾಮದ ವಕ್ಕಲಿಗರ ಜನಾಂಗದ ಅನಿಲ್ ಬಿನ್ ರಮೇಶ್ ಎಂಬುವರು ನನ್ನನ್ನು ಕೂಗಿ ಕರೆದಿದ್ದು, ಏನು ಅಂತ ಹತ್ತಿರ ಹೋದರೆ ಏಯ್ ನೀನು ಯಾರಿಗೆ ವೋಟ್ ಹಾಕ್ತಿಯಾ ಎಂದು ಕೇಳಿದನು. ನನ್ನ ವೋಟ್ ನನ್ನ ಹಕ್ಕು ನನಗೆ ಇಷ್ಟ ಬಂದವರಿಗೆ ಹಾಕ್ತೀನಿ ಎಂದು ಹೇಳಿದೆ, ಅದಕ್ಕೆ ಏಯ್ ಬೋಳಿ ನನ್ನ ಮಗನೆ ಮಾದಿಗ ನನ್ನ ಮಗನೇ ನನಗೆ ಎದರು ಹೇಳಿತ್ತೀಯಾ ಎಷ್ಟು ಕೊಬ್ಬೋ ನನ್ನ ಮಾತು ಮೀರಿ ಬೇರೆಯವರಿಗೆ ವೋಟು ಹಾಕ್ತೀಯಾ ಸೂಳೆ ನನ್ನ ಮಕ್ಕಳದು ಜಾಸ್ತಿ ಆಯ್ತು, ನೀನು ಈ ಊರಿನಲ್ಲಿ ಇರಬೇಕೆಂದರೇ ನಾನು ಹೇಳಿದಂತೆ ಕೇಳಬೇಕು, ನೀನು ನನ್ನ ಕಾಲು ಕೆಳಗೆ ನಾಯಿ ತರ ಬಿದ್ದಿರಬೇಕು ಹಾಗು ನಿನ್ನ ವೋಟು ನಾನು ಹೇಳಿದವರಿಗೆ ಹಾಕಬೇಕು ಇಲ್ಲಾಂದರೆ ನಿನ್ನನ್ನು ಸಾಯಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪಕ್ಕದಲ್ಲಿದ್ದ ಟಮೋಟೋ ಕೊಲಿನ ಹೊರೆಯಿಂದ ಒಂದು ದೊಣ್ಣೆಯನ್ನು ತೆಗೆದುಕೊಂಡು ನನ್ನ ಎಡಭಾಗದ ಹಣೆಗೆ ಹೊಟ್ಟೆ, ಬೆನ್ನಿನ ಮೇಲೆ ಹೊಡೆದು ರಕ್ತಗಾಯಗಳನ್ನುಂಟು ಮಾಡಿರುತ್ತಾನೆ.ಅಷ್ಟರಲ್ಲಿ ನಮ್ಮ ಗ್ರಾಮದ ಶೈಲಮ್ಮ ಇತರೆಯವರು ಜಗಳ ಬಿಡಿಸಿರುತ್ತಾರೆ. ಆದ್ದರಿಂದ ಮೇಲ್ಕಂಡ ಅನಿಲ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

4) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.43/2019 ಕಲಂ. 279-337-304(ಎ) ಐ.ಪಿ.ಸಿ:-

     ದಿನಾಂಕ:12/03/2019 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿ ವೆಂಕಟೇಶಪ್ಪ ಬಿನ್ ನಾರೆಪ್ಪ, 38 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ವಾಸ ಮಾಡಿಕೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೇ, ತನಗೆ 19 ವರ್ಷ ವಯಸುಳ್ಳ ವಿನಯ್ ಕುಮಾರ್ ಎಂಬ ಗಂಡು ಮಗನಿದ್ದು, ದಿನಾಂಕ 04/03/2019 ರಂದು ನನ್ನ ಮಗನಾದ ವಿನಯ್ ಕುಮಾರ್ ರವರು ತನ್ನ ಸ್ನೇಹಿತನಾದ ವೇಣು ರವರ ಮನೆಯ ಮೇಲ್ಬಾಗದಲ್ಲಿ ಮಲಗಿದ್ದು, ಅದೇ ದಿನ ರಾತ್ರಿ ಸುಮಾರು 10-30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ವಾಸಿಗಳಾದ ಅಶೋಕ ಈತನ ತಮ್ಮ ಹರೀಶ್ ರವರು ತನ್ನ ಅಣ್ಣನಾದ ನಾರಾಯಣಸ್ವಾಮಿ ರವರ ಜೊತೆಯಲ್ಲಿ ಯಾವುದೋ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ನಾರಾಯಣಸ್ವಾಮಿ ರವರು ತನ್ನ ತಮ್ಮಂದಿರಿಗೆ ಹೊಡೆಯಲು ಬಂದಾಗ ಅವರಿಬ್ಬರು ವೇಣು ರವರ ಮನೆಯ ಮೇಲ್ಬಾಗ ಓಡಿ ಹೋಗಿ ನನ್ನ ಮಗನ ಪಕ್ಕದಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ. ಅದೇ ಸಮಯಕ್ಕೆ ನಾರಾಯಣಸ್ವಾಮಿ ಬಿನ್ ವೆಂಕಟರಾಯಪ್ಪ ರವರು ತನ್ನ ಕೈಯಲ್ಲಿ ದೊಣ್ಣೆಯನ್ನು ಹಿಡಿದುಕೊಂಡು ವೇಣು ರವರ ಮನೆಯ ಮೇಲ್ಭಾಗ ಹತ್ತಿದ್ದು ಆಗ ನನ್ನ ಮಗ ವಿನಯ್ ಕುಮಾರ್ ರವರು ನಾರಾಯಣಸ್ವಾಮಿ ಮತ್ತು ಈತನ ತಮ್ಮಂದಿರ ನಡುವೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಅಡ್ಡ ಹೋಗಿದ್ದಕ್ಕೆ ನಾರಾಯಣಸ್ವಾಮಿ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಮಗನ ಎಡ ಭಾಗದ ಹೊಟ್ಟೆಗೆ ಜೋರಾಗಿ ಹೊಡೆದು ನೋವುಂಟು ಮಾಡಿ, ನನ್ನ ಮಗನನ್ನು ಕುರಿತು ನೀನು ಯಾರೋ ಲೋಫರ್ ನನ್ನ ಮಗನೇ ನಮ್ಮ ಜಗಳದ ಮದ್ಯೆ ಅಡ್ಡ ಬರಲು ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ನಂತರ ನನ್ನ ಮಗ ಮನೆಗೆ ವಾಪಸ್ಸು ಬಂದು ಸುಮ್ಮನೆ ಮಲಗಿ ಬಿಟ್ಟಿರುತ್ತಾನೆ. ನಂತರ ದಿನಾಂಕ 08/03/2019 ರಂದು ನನ್ನ ಮಗ ವಿನಯ್ ಕುಮಾರ್ ರವರು ತನಗೆ ಹೊಟ್ಟೆ ನೋವು ಎಂದು ತಿಳಿಸಿದಾಗ ನಾವು ಆತನನ್ನು ಕರೆದುಕೊಂಡು ಬಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸಿದಾಗ ವೈದ್ಯರು ನನ್ನ ಮಗನ ಹೊಟ್ಟೆಯ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿರುವ ಕಾರಣ ಹೊಟ್ಟೆಯ ಒಳಭಾಗದಲ್ಲಿ ನೋವು ಇದ್ದು, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡೆಸ ಬೇಕೆಂದು ಸೂಚಿಸಿದ್ದರ ಮೇರೆಗೆ ನಾವು ನನ್ನ ಮಗನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿ ಅಲ್ಲಿನ ವೈದ್ಯರು ಆಸ್ಪತ್ರೆಯಲ್ಲಿ ಸ್ಥಳಾವಕಾಶ ಇರುವುದಿಲ್ಲ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರ ಮೇರೆಗೆ ನಾವು ನನ್ನ ಮಗನನ್ನು ಅಲ್ಲಿಂದ ಕೋಲಾರದ ಆರ್.ಕೆ ನರ್ಸಿಂಗ್ ಹೋಂ ಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆ. ನಂತರ ನಾವು ನನ್ನ ಮಗನನ್ನು ವಿಚಾರ ಮಾಡಲಾಗಿ ದಿನಾಂಕ 04/03/2019 ರಂದು ರಾತ್ರಿ ನಡೆದ ವಿಚಾರವನ್ನು ನಮಗೆ ತಿಳಿಸಿರುತ್ತಾನೆ. ನಾವು ನನ್ನ ಮಗನ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡ ನಾರಾಯಣಸ್ವಾಮಿ ಬಿನ್ ವೆಂಕಟರಾಯಪ್ಪ ರವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿರುವುದಾಗಿರುತ್ತೆ.

5) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.19/2019 ಕಲಂ. 15(ಎ)-32(3) ಕರ್ನಾಟಕ ಅಬಕಾರಿ ಕಾಯ್ದೆ:-

     ಈ ದಿನ ದಿನಾಂಕ 12/03/2019 ರಂದು ಸಂಜೆ 4-45 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಮೆಮೋನ ಸಾರಂಶವೇನೆಂದರೆ ತಾನು ಮತ್ತು ಸಿಬ್ಬಂದಿಯವರು ಗಸ್ತಿನಲ್ಲಿದ್ದಾಗ ಠಾಣಾ ವ್ಯಾಪ್ತಿಯ ಟಿ.ವೆಂಕಟಾಪುರ ಗ್ರಾಮದ ವಾಸಿ ಲಕ್ಷ್ಮಿನಾರಾಯಣ ಬಿನ್ ಸುಬ್ಬಣ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಮಾರಾಟ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 16 ಹೈವಾರ್ಡ್ಸ್ ಮದ್ಯದ ಪಾಕೇಟ್ ಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಅಂಗಡಿಯ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಬಂದಿರುವುದಾಗಿರುತ್ತೆ.

6) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.31/2019 ಕಲಂ. 379 ಐ.ಪಿ.ಸಿ:-

     ದಿನಾಂಕ:12/03/2019 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿ ಬಂಗಾಲು ಬಿನ್ ದೇವನ್ ಪುರ, 45 ವರ್ಷ, ಹಕ್ಕಿಪಿಕ್ಕಿ ಜನಾಂಗ,  ವ್ಯಾಪಾರ, ವಾಸ ಹಕ್ಕಿ ಪಿಕ್ಕಿ ಕಾಲೋನಿ, ಹೊಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು 2018 ನೇ ಸಾಲಿನಲ್ಲಿ  ಟಿ.ವಿ.ಎಸ್ ಎಕ್ಸ್ ಎಲ್ ಹೆವಿಡ್ಯೂಟಿ ದ್ವಿಚಕ್ರ ವಾಹನವನ್ನು ತೆಗೆದುಕೊಂಡಿದ್ದು, ಅದರ ನೊಂದಣಿ ಸಂಖ್ಯೆ ಕೆ.ಎ-64 ಆರ್-4709 ಆಗಿರುತ್ತದೆ. ನಾನು ಪ್ರತಿದಿನ ಬೆಳಿಗ್ಗೆ ಸುಮಾರು 8:30 ಗಂಟೆಗೆ ಗೌರಿಬಿದನೂರು ಟೌನ್ ವಿ.ವಿ ಪುರಂ ನಲ್ಲಿರುವ ವಾಸವಿ ವಿದ್ಯಾರ್ಥಿ ನಿಲಯದ ಬಳಿ ನ್ಯೂಟ್ರೀಷನ್ ಹರ್ಬಲ್ ಟ್ಯಾನಿಕ್ ತೆಗೆದುಕೊಳ್ಳಲು ಬರುತ್ತಿದ್ದು ಅದರಂತೆ ದಿನಾಂಕ:05/03/2019 ರಂದು ಬೆಳಿಗ್ಗೆ ಗೌರಿಬಿದನೂರಿಗೆ ಬಂದು ವಿ.ವಿ ಪುರಂ ನಲ್ಲಿರುವ ವಾಸವಿ ವಿದ್ಯಾರ್ಥಿನಿಲಯದ ಬಳಿ ದ್ವಿಚಕ್ರ ವಾಹನವನ್ನು ಬಿಟ್ಟು ಅಂಗಡಿ ಹತ್ತಿರ ಹೋಗಿ ಬರುವಷ್ಟರಲ್ಲಿ  ನಿಲ್ಲಿಸಿ ಹೋಗಿದ್ದ ನನ್ನ ದ್ವಿಚಕ್ರ ವಾಹನ ಸ್ಥಳದಲ್ಲಿ ಇರಲಿಲ್ಲ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡುತ್ತಿದ್ದು, ಪತ್ತೆಯಾಗಿರುವುದಿಲ್ಲ.ಆದ್ದರಿಂದ ತಡವಾಗಿ ದೂರನ್ನು ನೀಡುತ್ತಿದ್ದು, ಕಳುವಾಗಿರುವ ನನ್ನ 25,000/- ರೂ. ಬೆಲೆ ಬಾಳುವ ದ್ವಿಚಕ್ರ ವಾಹನವನ್ನು ಪತ್ತೆಮಾಡಿಕೊಡಬೇಕಾಗಿ ನೀಡಿದ ದೂರಾಗಿರುತ್ತೆ.

7) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.29/2019 ಕಲಂ. 143-147-427-447-506 ರೆ/ವಿ 34 ಐ.ಪಿ.ಸಿ:-

     ದಿನಾಂಕ 13/03/2019 ರಂದು ಪಿರ್ಯಾದಿದಾರರಾದ ಶ್ರೀ ಬಿ.ಆರ್ ನಾರಾಯಣಸ್ವಾಮಿ ಬಿನ್ ರಾಮಚಂದ್ರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಧುರಿನ ಸಾರಾಂಶವೇನೆಂದರೆ ಬುಶೆಟ್ಟುಹಳ್ಳಿ ಗ್ರಾಮಕ್ಕೆ ಅಂಟಿಕೊಂಡಂತೆ ತನ್ನ ಬಾಬತ್ತು 5 ಎಕರೆ ಜಮೀನು ಇದ್ದು, ಸದರಿ ಜಮೀನಿನ ಬೋರುಗಳಲ್ಲಿ ನೀರು ಸಿಗದ ಕಾರಣ ಗ್ರಾಮದ ಉತ್ತರದ ಕಡೆ ತಮ್ಮ ಗದ್ದೆಗಳ ಕಡೆ ಬೋರನ್ನು ಕೊರೆಸಿದ್ದು, ಸದರಿ ಬೋರ್ ನಿಂದ ತಮ್ಮ ಗ್ರಾಮದ ದಕ್ಷಿಣ ಕಡೆ ಇರುವ ತಮ್ಮ ಜಮೀನಿಗೆ ಪೈಪುನಿಂದ ನೀರು ಹರಿಸಿಕೊಂಡು ಬೆಳೆಗಳನ್ನು ತೆಗೆಯುತ್ತಿದ್ದು, ತಮ್ಮ ಗ್ರಾಮದಿಂದ ತಮ್ಮ ತೋಟದ ಕಡೆ ಹೋಗುವ ಸಾರ್ವಜನಿಕ ರಸ್ತೆಗೆ ಗ್ರಾಮದ ಕೆಲವರು ದ್ವೇಷಗಳಿಂದ ಸಿಮೆಂಟ್ ಇಟ್ಟಿಗೆಗಳಿಂದ ಗೋಡೆ ಕಟ್ಟುತ್ತಿದ್ದ ವಿಚಾರದಲ್ಲಿ  ತಾನು ಕೇಳಿದಕ್ಕೆ  ತನ್ನ ಮೇಲೆ ಗ್ರಾಮದ ಕೆಲವರಿಗೆ ದ್ವೇಷವಿದ್ದು, ದಿನಾಂಕ 12/03/2019 ರಂದು ರಾತ್ರಿ ತಾನು ಚಿಕ್ಕಬಳ್ಳಾಪುರಕ್ಕೆ ತನ್ನ ಮೊಮ್ಮಗಳನ್ನು ನೋಡಲು ಹೋಗಿದ್ದು ಈ ದಿನ ಬೆಳಿಗ್ಗೆ ಸುಮಾರು 6.30 ಗಂಟೆಯಲ್ಲಿ ತಮ್ಮ ಹುಡುಗ ತಮ್ಮ ಗದ್ದೆಗಳ ಬಳಿ ಇರುವ ಬೋರ್ವೆಲ್ ಬಳಿ ಹೋಗಿದ್ದು ಬೋರ್ ಗೆ ಅಳವಡಿಸಿದ ಪ್ಯಾನಲ್ ಬೋರ್ಡ ಬಾಕ್ಸ, ಹಾಗೂ ಅದರಲ್ಲಿದ್ದ ಸಂಪೂರ್ಣ ವಿದ್ಯುತ್ ಉಪಕರಣಗಳನ್ನು ಹೊಡೆದು ಜಖಂಗೊಳಿಸಿರುವುದಾಗಿ ತನಗೆ ತಿಳಿಸಿದನು ತಾನು ತಕ್ಷಣ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು.  ಈ ಮೇಲ್ಕಂಡ ಘಟನೆಯ ಬಗ್ಗೆ ತನಗೆ ತಮ್ಮ ಗ್ರಾಮದ 1) ಶಂಕರಪ್ಪ ಬಿನ್ ವೆಂಕಟಕೃಷ್ಣಪ್ಪ, 2) ಗೋಪಾಲರೆಡ್ಡಿ ಬಿನ್ ಲೆಟ್ ಬೈಯಪ್ಪರೆಡ್ಡಿ 3) ರಾಮಕೃಷ್ಣರೆಡ್ಡಿ ಬಿನ್ ಲೇಟ್ ಬೈಯಪ್ಪರೆಡ್ಡಿ, 4) ರಮೇಶ ಬಿನ್ ಲೇಟ್ ನಾರಾಯಣಪ್ಪ 5) ಬಿ.ಎಮ್ ನಾಗರಾಜಪ್ಪ ಬಿನ್  ಲೆಟ್ ಬೈಯಪ್ಪರೆಡ್ಡಿ  ರವರ ಮೇಲೆ ಗುಮಾನಿ ಇರುತ್ತೆ. ಈ ವಿಚಾರದಲ್ಲಿ ಮೇಲ್ಕಂಡ ಶಂಕರಪ್ಪ 9663638145 ನಂಬರಿಂದ ಪೋನ್ ಮಾಡಿ ಈ ಊರಿನಲ್ಲಿ ಉದ್ದಾರ ಆಗುತ್ತಿಯಾ ನೋಡುತ್ತೇನೆಂದು ಬೆದರಿಸುತ್ತಾರೆ. ಮೇಲ್ಕಂಡಂತೆ ಕೃತ್ಯವನ್ನು ಎಸಗಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

8) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.44/2019 ಕಲಂ. 279-304(ಎ) ಐ.ಪಿ.ಸಿ:-

     ದಿನಾಂಕ: 12/03/2019 ರಂದು ರಾತ್ರಿ   ಗಂಟೆಗೆ ಪಿರ್ಯಾದಿದಾರರಾದ ನವೀನ ಬಿನ್ ಗಂಗಾಧರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ತಮ್ಮ ಅತ್ತೆ ಲಕ್ಷ್ಮೀದೇವಮ್ಮ ಕೋಂ ಲೇಟ್ ನರಸಿಂಹಮೂರ್ತಪ್ಪ ರವರಿಗೆ ಇಬ್ಬರು ಮಕ್ಕಳಿದ್ದು ಮೊದಲನೇ ಗಂಗರಾಜು 23 ವರ್ಷ, ಎರಡನೇ ಪವಿತ್ರಾ ರವರಾಗಿರುತ್ತಾರೆ, ತನ್ನ ಭಾಮೈದ ಗಂಗರಾಜು ರವರು ತಾಯಿ ಮತ್ತು ತಂಗಿಯೊಂದಿಗೆ ತಮ್ಮ ಗ್ರಾಮದಲ್ಲಿಯೆ ವಾಸವಾಗಿರುತ್ತಾರೆ. ಗಂಗರಾಜು ರವರು ಗೌರಿಬಿದನೂರಿನ ವಿ.ಎನ್.ಎಸ್  ಹೊಲ್ ಸೆಲ್ ಅಂಗಡಿಗೆಗೆ ಕೆಲಸಕ್ಕೆ ಹೋಗುತ್ತಿದ್ದನು.  ಹಿಗೀರುವಲ್ಲಿ ದಿನಾಂಕ: 03/03/2019 ರಂದು ರಾತ್ರಿ ಸುಮಾರು 8-00 ಗಂಟೆಗೆ ಡಿ ಪಾಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ತಮ್ಮ ಅಣ್ಣ ವಿಶ್ವನಾಥ್ ಬಿನ್ ಲೇಟ್ ನರಸಿಂಹಪ್ಪ ರವರು ತನಗೆ ಪೋನ್ ಮಾಡಿ ಗಂಗರಾಜು ರವರಿಗೆ ಗೌರಿಬಿದನೂರು ಡಿ ಪಾಳ್ಯ ರಸ್ತೆಯಲ್ಲಿ ಹನುಮಕ್ಕ ಪೋಟ್ ಹತ್ತಿರ ಮೂರ್ತಿ ರವರ ಇಟ್ಟಿಗೆ ಪ್ಯಾಕ್ಟರಿಯ ಮುಂಭಾಗ ಅಪಘಾತವಾಗಿರುವುದಾಗಿ ತಿಳಿಸಿದರು, ತಾನು ಸಹ ಕೂಡಲೇ ತಮ್ಮ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಗಂಗರಾಜು ರವರಿಗೆ ತಲೆಯ ಹಿಂಭಾಗ ರಕ್ತ ಗಾಯ, ಎದೆಯ ಬಳಿ ರಕ್ತಗಾಯ, ಕಿವಿ ಮತ್ತು ಬಾಯಿಯಲ್ಲಿ ರಕ್ತ ಬರುತ್ತಿತ್ತು. ವಿಚಾರ ಮಾಡಲಾಗಿ ದಿ: 03/03/2019 ರಂದು ಬೆಳಿಗ್ಗೆ KA-40-Y-6576 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಗಂಗರಾಜು ರವರು ಗೌರಿಬಿದನೂರಿಗೆ ಅಂಗಡಿಗೆ ಕೆಲಸಕ್ಕೆ ಹೋಗಿ ವಾಪಸ್ ಡಿ ಪಾಳ್ಯಕ್ಕೆ  ಮೇಲ್ಕಂಡ ದ್ವಿ ಚಕ್ರ ವಾಹನದಲ್ಲಿ ಗೌರಿಬಿದನೂರು ಡಿ ಪಾಳ್ಯ ರಸ್ತೆಯಲ್ಲಿ ಬರುತ್ತಿರುವಾಗ ಸದರಿ ದಿನದಂದು ರಾತ್ರಿ ಸುಮಾರು 7-30 ಗಂಟೆಯ ಸಮಯದಲ್ಲಿ ಗಂಗರಾಜು ರವರು ದ್ವಿ ಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದು ಹನುಮಕ್ಕ ಪೋಟ್ ಹತ್ತಿರ ಮೂರ್ತಿ ರವರ ಇಟ್ಟಿಗೆ ಪ್ಯಾಕ್ಟರಿಯ ಮುಂಭಾಗ ದ್ವಿ ಚಕ್ರ ವಾಹನದ ಸಮೇತ ಕೆಳಗೆ ಬಿದ್ದು ಹೋಗಿದ್ದರ ಪರಿಣಾಮ ಗಂಗರಾಜು ರವರಿಗೆ ಮೇಲ್ಕಂಡಂತೆ ಗಾಯಗಳಾಗಿದ್ದು ಗಂಗರಾಜು ರವರನ್ನು ತಮ್ಮ ಗ್ರಾಮದ ಹರಿಶ ರವರು ಅವರ ಆಟೋದಲ್ಲಿ ಡಿ ಪಾಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಯಿತು. ಗಂಗರಾಜು ರವರಿಗೆ ಡಿ ಪಾಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ಗಂಗರಾಜು ರವರು ರಸ್ತೆ ಅಪಘಾತದಲ್ಲಿ ಆದ ಗಾಯಗಳ ದೆಶೆಯಿಂದ ಈ ದಿನ ದಿನಾಂಕ: 12/03/2019 ರಂದು ಬೆಳಿಗ್ಗೆ ಸುಮಾರು 10-30 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ಈ ಅಪಘಾತಕ್ಕೆ ಗಂಗರಾಜು ರವರು ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೆ ಕಾರಣವಾಗಿರುತ್ತದೆ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

9) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.40/2019 ಕಲಂ. 279-337-304(ಎ) ಐ.ಪಿ.ಸಿ:-

     ದಿನಾಂಕ:12-03-2019 ರಂದು ರಾತ್ರಿ 7-30 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೋ ವನ್ನು ಪಡೆದುಕೊಂಡು ಅಸ್ಪತ್ರೆಗೆ ಬೇಟಿ  ನೀಡಿ ಗಾಯಾಳು ಪ್ರಶಾಂತ್ ಬಿನ್ ನಾರಾಯಣಸ್ವಾಮಿ ರವರ ಹೇಳಿಕೆಯನ್ನು ಪಡೆದುಕೊಂಡು ವಾಪಸ್ಸು  ರಾತ್ರಿ 8-30 ಗಂಟೆಗೆ ಠಾಣೆಗೆ ಬಂದು ಪ್ರಕರಣದ ದಾಖಲಿಸಿಕೊಂಡ ಹೇಳಿಕೆಯ ಸಾರಾಂಶವೇನೆಂದರೆ, ಪ್ರಶಾಂತ್  ಮತ್ತು ತನ್ನ ಜೊತೆಯಲ್ಲಿ ಕೆಲಸ ಮಾಡುವ ಮೋಹನ್ ರವರುಗಳು  ದಿನಾಂಕ:12/03/2019 ರಂದು ಮದ್ಯಾಹ್ನ  12-30 ಗಂಟೆಯಲ್ಲಿ ಕೋಟಹಳ್ಳಿ ಮತ್ತು ದ್ಯಾವಪ್ಪನಗುಡಿ ಗ್ರಾಮಗಳಿಗೆ ಮೀಟರ್ ರೀಡಿಂಗ್ ಮಾಡಲು ಪ್ರಶಾಂತ್ ರವರ ಬಾಬತ್ತು KA-05 HZ-0650 Honda CB Triger  ದ್ವಿಚಕ್ರವಾಹನದಲ್ಲಿ   ದ್ವಿಚಕ್ರವಾಹನವನ್ನು  ಮೋಹನ್ ಚಾಲನೆ ಮಾಡಿಕೊಂಡು ಹಿಂಬದಿಯಲ್ಲಿ ತಾನು ಕುಳಿತುಕೊಂಡು ಹೋಗಿ  ಕೋಟಹಳ್ಳಿ ಮತ್ತು ದ್ಯಾವಪ್ಪನಗುಡಿ ಗ್ರಾಮಗಳಲ್ಲಿ  ಮೀಟರ್ ರೀಡಿಂಗ್ ಮುಗಿಸಿಕೊಂಡು ವಾಪಸ್ಸು ಶಿಡ್ಲಘಟ್ಟಕ್ಕೆ ಬರುಲು  ಮೋಹನ್ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ತಾನು ಹಿಂಬದಿಯಲ್ಲಿ ಕುಳಿತುಕೊಂಡು ಇದೇ ದಿನ ಸಂಜೆ 4-10 ಗಂಟೆಯಲ್ಲಿ  ದಿಬ್ಬೂರಹಳ್ಳಿ-ಶಿಡ್ಲಘಟ್ಟ ರಸ್ತೆಯ ತಾತಹಳ್ಳಿ ಗೇಟ್  ಸಮೀಪ ರಸ್ತೆಯ  ಎಡಬದಿಯಲ್ಲಿಯೇ  ಬರುತ್ತಿದ್ದಾಗ ಶಿಡ್ಲಘಟ್ಟ ಕಡೆಯಿಂದ KA-40 A-96  ನೊಂದಣಿ ಸಂಖ್ಯೆಯ ಬಿ.ಜಿ.ಎಸ್. ಶಾಲಾ  ಬಸ್ಸಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾವು ಬರುತ್ತಿದ್ದ  ದ್ವಿಚಕ್ರವಾಹನಕ್ಕೆ ಎದುರುಬದಿಯಿಂದ ಡಿಕ್ಕಿಹೊಡೆಸಿದ ಪರಿಣಾಮ ಇಬ್ಬರು ಕೆಳಗಡೆ ಬಿದ್ದುಹೋಗಿ  ತನಗೆ ಬಲಕೈ ಮೊಣಕೈ, ಎರಡೂ  ಮೊಣಕಾಲುಗಳಿಗೆ, ಮತ್ತು ಎಡಕೈ ಅಂಗೈಗೆ ರಕ್ತಗಾಯಗಳಾಗಿದ್ದು,  ಮೋಹನ್ ರವರಿಗೆ ಬಲಕೈ ಭುಜಕ್ಕೆ ಮತ್ತು ಎದೆಯ ಮೇಲೆ ರಕ್ತಗಾಯಗಳಾಗಿರುತ್ತೆ, ಅಪಘಾತವಾದ ವಿಚಾರವನ್ನು ತಾನು ಮೋಹನ್ ರವರ  ಚಿಕ್ಕಪ್ಪನಾದ ರಾಮಕೃಷ್ಣಪ್ಪ ರವರಿಗೆ ದೂರವಾಣಿ  ಕರೆ ಮಾಡಿ ತಿಳಿಸಿದ್ದು ಆಗ ತಕ್ಷಣ ಅಲ್ಲಿಗೆ ಬಂದ ರಾಮಕೃಷ್ಣಪ್ಪ ಮತ್ತು ಆತನ ಸ್ನೇಹಿತ ನಾರಾಯಣರೆಡ್ಡಿ ರವರುಗಳು ಗಾಯಗಳಾಗಿದ್ದ ನಮ್ಮನ್ನು ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಬಂದು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ,  ಅಲ್ಲಿನ ವೈದ್ಯರ ಸಲಹೆಯ ಮೇರಗೆ ಮೋಹನ್ ರವರನ್ನು ಆವರ ಚಿಕ್ಕಪ್ಪ ರಾಮಕೃಷ್ಣಪ್ಪ ರವರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಎಂ.ಎಸ್.ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ, ನಂತರ ವಿಚಾರ ತಿಳಿದುಕೊಳ್ಳಲಾಗಿ ಬೆಂಗಳೂರಿಗೆ ಯಲಿಯೂರು ಸಮೀಪ ಸಂಜೆ ಸುಮಾರು 5-30 ಗಂಟೆಯಲ್ಲಿ ಹೋಗುತ್ತಿದ್ದಾಗ ಮೋಹನ್ ರವರು ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ಮೋಹನ್ ರವರ ಮೃತದೇಹವನ್ನು ವಾಪಸ್ಸು ತಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಟ್ಟಿರುವುದಾಗಿ ತಿಳಿಯಿತು, ತಾನು ಮತ್ತು  ಮೋಹನ್ KA-05 HZ-0650 Honda CB Triger  ದ್ವಿಚಕ್ರವಾಹನದಲ್ಲಿ ದ್ಯಾವಪ್ಪನಗುಡಿ ಕಡೆಯಿಂದ ತಾತಹಳ್ಳಿ ಗೇಟ್ ಸಮೀಪ ಬರುತ್ತಿದ್ದಾಗ   ಎದರುಬದಿಯಿಂದ KA-40 A-96   ಬಿ.ಜಿ.ಎಸ್. ಶಾಲಾ ಬಸ್ಸಿನ ಚಾಲಕ  ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರವಾಹನಕ್ಕೆ  ಡಿಕ್ಕಿಹೊಡೆಸಿ  ತನಗೆ ರಕ್ತಗಾಯಗಳಾಗಲು ಮೋಹನ್ ರವರು ಗಾಯಗಳದೆಸೆಯಿಂದ ಮೃತಪಡಲು ಕಾರಣನಾದ  KA-40 A-96   ಬಸ್ಸಿನ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆಯ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

10) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.23/2019 ಕಲಂ. ಮನುಷ್ಯ ಕಾಣೆ:-

     ದಿನಾಂಕ.12.03.2019 ರಂದು ಮದ್ಯಾಹ್ನ 13.30 ಗಂಟೆಗೆ ಪಿರ್ಯಾದಿ ಲಕ್ಕುಂದಿ ಲಕ್ಷ್ಮಮ್ಮ ಬಸವಾಪಟ್ಟಣ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ತನ್ನ ಗಂಡನಾದ ಚಿಕ್ಕವೆಂಕಟರಾಯಪ್ಪ ಬಿನ್ ದೊಡ್ಡ ವೆಂಕಟರಾಯಪ್ಪ. ವಯಸ್ಸು ಸುಮಾರು 60ವರ್ಷ ರವರು ನಮ್ಮೊಂದಿಗೆ ಕೂಲಿಯಿಂದ ಜೀವನ ಮಾಡಿಕೊಂಡಿರುತ್ತಾರೆ. ನಾವು ಒಂದು ನಾಟಿ ಹಸುವನ್ನು ಸಾಕಿಕೊಂಡಿದ್ದು, ದಿನಾಂಕ;-09/03/2019 ರಂದು ತನ್ನ ಗಂಡ ಹಸುವವಿಗೆ ಮೇವು ಹಾಕಲು ಹೋಗಿದ್ದಾಗ ಹಸು ತನ್ನ ಗಂಡನಿಗೆ ಕೊಂಬುಗಳಿಂದ ಹಾಯ್ದಿದ್ದರಿಂದ ತಲೆಗೆ ಮತ್ತು ಎಡ ಕಣ್ಣಿಗೆ ಗಾಯಗಳಾಗಿದ್ದು,  ಗಾಯಗೊಂಡಿದ್ದ ತನ್ನ ಗಂಡನನ್ನು ಮಕ್ಕಳಾದ ಮುನಿರಾಜು ಮತ್ತು ವೆಂಕಟೇಶ್ ಎಂಬುವರು ಬೆಂಗಳೂರಿನ ವಿಕ್ಟೋರಿಯಾ ಮತ್ತು ಮಿಂಟೋ ಆಸ್ಪತ್ತೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿಕೊಂಡು ವ್ಶೆದ್ಯರ ಸಲಹೆಯಂತೆ ದಿನಾಂಕ;-10/03/2019 ರಂದು ವಾಪಸ್ಸ್ ಕರೆದು ಕೊಂಡು ಬಂದು ಶಿಢ್ಲಘಟ್ಟ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ತಾನು ತನ್ನ ಗಂಡನ ಜೊತೆ ಇದ್ದೆ. ದಿನಾಂಕ;-11/03/2019 ರಂದು ಬೆಳಿಗ್ಗೆ ಸುಮಾರು 08-30 ಗಂಟೆಯಲ್ಲಿ ತನ್ನ ಗಂಡನಿಗೆ ತಲೆ ನೋವು ಜಾಸ್ತಿಯಾಗಿ ಶಿಡ್ಲಘಟ್ಟ ಸಕರ್ಾರಿ ಆಸ್ಪತ್ರೆಯಿಂದ ಹೊರಟು ಹೋಗಲು ಹೋಗುತ್ತಿದ್ದು, ತಾನು ಗಂಡನಿಗೆ ಹೋಗ ಬೇಡ, ಮಕ್ಕಳು ಬರುತ್ತಾರೆ ತೋರಿಸಿಕೊಂಡು ಹೋಗೋಣವೆಂದು ಬುದ್ದಿ ಹೇಳಿದರೂ ತನ್ನ ಗಂಡ ನನ್ನಿಂದ ತಪ್ಪಿಸಿಕೊಂಡು ಎಲ್ಲಿಗೋ ಹೊರಟು ಹೋಗಿರುತ್ತಾನೆ. ಈ ವಿಚಾರ ನನ್ನ ಮಕ್ಕಳಿಗೆ ತಿಳಿಸಿ ಅವರುಗಳು ಬಂದ ನಂತರ ನಾವೆಲ್ಲರೂ ಶಿಢ್ಲಘಟ್ಟ ನಗರದಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ನನ್ನ ಗಂಡ ತಲೆಗೆ ಪೆಟ್ಟಾಗಿದ್ದರಿಂದ ಮಾನಸಿಕ ಸ್ಥಿತಿ ಇಲ್ಲದೆ ಎಲ್ಲಿಯೋ ಹೊರಟು ಹೋಗಿ ಕಾಣೆಯಾಗಿರುತ್ತಾನೆ. ಆದ್ದರಿಂದ ಕಾಣೆಯಾದ ನನ್ನ ಗಂಡ ಚಿಕ್ಕವೆಂಕಟರಾಯಪ್ಪ ರವರನ್ನು ಪತ್ತೆ ಮಾಡಿ ಕೊಡಲು ಈ ದಿನ ತಡವಾಗಿ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

11) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.24/2019 ಕಲಂ. 15(ಎ)-32(3) ಕರ್ನಾಟಕ ಅಬಕಾರಿ ಕಾಯ್ದೆ:-

     ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ. ವಿ.ಅವಿನಾಶ್ ಪಿ.ಎಸ್.ಐ (ಕಾ.ಸು) ಆದ ನಾನು ಘನ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುವುದೇನೆಂದರೆ, ದಿನಾಂಕ:12-03-2019 ರಂದು ಸಂಜೆ 5.15 ಗಂಟೆಯಲ್ಲಿ ನಾನು ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.132 ಪೀರ್ಸಾಬಿ ಮತ್ತು ಜೀಪ್ ಚಾಲಕ ಎ.ಪಿ.ಸಿ. ಮಂಜುನಾಥ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಪೊಲೀಸ್ ವಾಹನದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ರೈಲ್ವೆ ನಿಲ್ದಾಣ ಮುಂಭಾಗ ಶ್ರೀ. ವೆಂಕಟೇಶ್ವರ ಮಿಲ್ಟ್ರೀ ಹೋಟೆಲ್ ಮುಂಭಾಗ ಸಾರ್ವಜನಿಕರ ಸ್ಥಳದಲ್ಲಿ ಯಾರೋ ಸಾರ್ವಜನಿಕರು ಮದ್ಯಪಾನ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು, ಕೂಡಲೇ ನಾವು ಪಂಚಾಯ್ತಿದಾರರಾದ 1] ಮಹಬೂಬ್ ಪಾಷ ಬಿನ್ ಮಹಬೂಬ್ ಸಾಬ್, 35 ವರ್ಷ, ಮುಸ್ಲಿಂ, ನೀರು ಹೊಡೆಯುವ ಕೆಲಸ,. ಅಮೀರ್ ದರ್ಗಾ ಬಳಿ, ಮಹಬೂಬ್ ನಗರ, ಶಿಡ್ಲಘಟ್ಟ ಟೌನ್. 2] ಮುಭಾರಕ್ ಬಿನ್ ನಿಸರ್ ಪಾಷ, 23 ವರ್ಷ, ಮುಸ್ಲಿಂ, ಮಟನ್ ವ್ಯಾಪಾರ, ಇಲಾಹಿನಗರ, ಶಿಡ್ಲಘಟ್ಟ ಟೌನ್ ರವರನ್ನು ಕರೆದುಕೊಂಡು ಸಂಜೆ 5.30 ಗಂಟೆಗೆ ಸದರಿ ಹೋಟೆಲ್ ಮೇಲೆ ದಾಳಿ ಮಾಡಿದಾಗ ಹೋಟೆಲ್ ಮುಂಭಾಗ ಯಾರೋ ಸಾರ್ವಜನಿಕರು ಮದ್ಯಪಾನ ಸೇವನೆ ಮಾಡುತ್ತಿದ್ದು, ಪೊಲೀಸ್ ವಾಹನವನ್ನು ಕಂಡು ಮದ್ಯಪಾನ ಮಾಡುತ್ತಿದ್ದ ಇಬ್ಬರು ಆಸಾಮಿಗಳು ಓಡಿ ಹೋಗಿದ್ದು, ಅಲ್ಲಿ ಹೋಟೆಲ್ ವ್ಯಾಪಾರ ಮಾಡುತ್ತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ ವೆಂಕಟೇಶಪ್ಪ ಬಿನ್ ಲೇಟ್ ಕೆಂಪಣ್ಣ, 60 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಹನುಮಂತಪುರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ ಟೇಬಲ್ ಮೇಲೆ 90 ಎಂ.ಎಲ್ ನ ರಾಜಾ ವಿಸ್ಕಿ ಲೇಬಲ್ ಇರುವ 5 ಮದ್ಯದ ಪಾಕೇಟ್ ಗಳಿದ್ದು,   ಇವುಗಳ ಬೆಲೆ 151-00 ರೂಗಳಾಗಿರುತ್ತೆ. ಅದರ ಪಕ್ಕದಲ್ಲಿ 90 ಎಂ.ಎಲ್ ನ ರಾಜಾ ವಿಸ್ಕಿ ಲೇಬಲ್ ಇರುವ ಎರಡು ಅರ್ದಂಬರ್ದ ಮದ್ಯ ಇರುವ 90 ಎಂ.ಎಲ್.ನ ಮದ್ಯದ ಪಾಕೇಟ್ ಹಾಗೂ ಮದ್ಯಪಾನ ಸೇವನೆ ಮಾಡಿರುವ ಎರಡು ಖಾಲಿ ಪ್ಲಾಸ್ಟೀಕ್ ಪೇಪರ್ ಗ್ಲಾಸ್ ಇರುತ್ತೆ. ಹೋಟೆಲ್ ವ್ಯಾಪಾರಿ ವೆಂಕಟೇಶಪ್ಪ ಸಾರ್ವಜನಿಕರ ಸ್ಥಳದಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಸದರಿ ಹೋಟೆಲ್ ವ್ಯಾಪಾರಿ ವೆಂಕಟೇಶಪ್ಪ ರವರನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ 90 ಎಂ.ಎಲ್ ನ 5 ರಾಜಾ ವಿಸ್ಕಿ ಮದ್ಯದ ಪಾಕೇಟ್ ಗಳು, ಮದ್ಯ ಸೇವನೆ ಮಾಡಿ ಬಿಟ್ಟು ಹೋಗಿರುವ ಅರ್ದಂಬರ್ದ ಮದ್ಯ ಇರುವ ಎರಡು 90 ಎಂ.ಎಲ್.ನ ಮದ್ಯದ ಪಾಕೇಟ್ ಹಾಗೂ ಮದ್ಯಪಾನ ಸೇವನೆ ಮಾಡಿರುವ ಎರಡು ಖಾಲಿ ಪ್ಲಾಸ್ಟೀಕ್ ಪೇಪರ್ ಗ್ಲಾಸ್ ಮುಂದಿನ ಕ್ರಮದ ಬಗ್ಗೆ ಸಂಜೆ 5.45 ರಿಂದ 6.30 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲು ಸಮೇತ ಸಂಜೆ 6.45 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಠಾಣಾ ಮೊ.ಸಂ.24/2019 ಕಲಂ.32(3), 15(ಎ) ಕೆ.ಇ ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲು ಮಾಡಿರುತ್ತೇನೆ.