ದಿನಾಂಕ: 12-04-2019 ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸ್ ಠಾಣೆ ಮೊ.ಸಂ. 04/2019 ಕಲಂ. 420 ಐಪಿಸಿ ಮತ್ತು ಸೆಕ್ಷನ್ 66(ಸಿ),66(ಡಿ) ಐಟಿ ಆಕ್ಟ್ 2000 :-

     ದಿನಾಂಕ:11/4/2019 ರಂದು ಪಿರ್ಯಾದಿ ಶ್ರೀ ಮುನೇಗೌಡ ಬಿನ್ ಚಿಕ್ಕರಾಮಪ್ಪ,ಜಿರಾಯ್ತಿ ಕೆಲಸ, 48 ವರ್ಷ, ವಕ್ಕಲಿಗರು, ಭೋದಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಳೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಚಿಕ್ಕಬಳ್ಳಾಪುರ ನಗರದ ಎಸ್ ಬಿ ಐ  ಬ್ಯಾಂಕ್ ಎ ಪಿ ಎಂ ಸಿ ಯಾರ್ಡ ಶಾಖೆಯಲ್ಲಿ ಉಳಿತಾಯ ಖಾತೆಯ ಸಂಖ್ಯೆ 54052351377 ನ್ನು  ಹೊಂದಿದ್ದು , ಇದರಲ್ಲಿ ನನ್ನ ಹಣ ಖಾಸಿನ ವ್ಯವಹಾರವನ್ನು ಮಾಡುತ್ತಿರುತ್ತೇನೆ. ಸದರಿ ಖಾತೆಗೆ ಎ ಟಿ ಎಂ ಕಾರ್ಡ ನಂಬರ್ 4592000203328352 ನ್ನು ಸಹ ಇತ್ತೀಚಿಗೆ ಹೊಸದಾಗಿ ಮಾಡಿಸಿಕೊಂಡಿದ್ದು. ದಿನಾಂಕ:15/3/2019 ರಂದು ಸುಮಾರು 12-00 ಗಂಟೆಯ ಸಮಯದಲ್ಲಿ ಎಸ್ ಬಿ ಐ ಬ್ಯಾಂಕಿನ  ಎ ಪಿ ಎಂ ಸಿ ಶಾಖೆಯ ಎ ಟಿ ಎಂ ಸೆಂಟರ್ ನಲ್ಲಿ ಹೊಸದಾಗಿ ಬಂದಿದ್ದ  ಎ ಟಿ ಎಂ ಕಾರ್ಡಿಗೆ  ಪಿನ್ ನಂಭರ್ ಪೀಡ್ ಮಾಡಲು ಹೋಗಿದ್ದು, ನನಗೆ ಪಿನ್ ನಂಭರ್ ಹೊಸದಾಗಿ ಪೀಡ್ ಮಾಡಲು ಭಾರದ ಕಾರಣ ನನ್ನ ಪಕ್ಕದಲ್ಲಿ ನಿಂತಿದ್ದ ಒಬ್ಬ  ಅನಾಮದ್ಯೇಯ ವ್ಯಕ್ತಿಗೆ ಎ ಟಿ ಎಂ ಕಾರ್ಡ ಕೊಟ್ಟು ಪಿನ್ ನಂಭರ್ ಮಾಡಿಕೊಡಲು ತಿಳಿಸಿದೆ. ಆ ವ್ಯಕ್ತಿ ಪಿನ್ ನಂಭರ್ ಮಾಡಿಕೊಟ್ಟ ನಂತರ ನಾನು ಹೊಸ ಎ ಟಿ ಎಂ ಕಾರ್ಡನಿಂದ  1000-00 ರೂಗಳನ್ನು ಡ್ರಾ ಮಾಡಿಕೊಂಡೆ. ಆದರೆ ಬ್ಯಾಲೆನ್ಸ್ ಶೀಟ್ ಬರಲಿಲ್ಲ ಆದರೆ ಇನ್ನು ನನ್ನ ಖಾತೆಯಲ್ಲಿ ಹಣ ಇತ್ತು ನಂತರ ನಾನು ಮನೆಗೆ ಹೊರಟು ಹೋದೆ.  ನಂತರ ಈ ದಿನ  ಅಂದರೆ ದಿನಾಂಕ:11-4-2019 ರಂದು ಹಣದ ಅವಶ್ಯಕತೆ ಇದ್ದ ಕಾರಣ ಹಣ ಡ್ರಾ ಮಾಡಲು ಎ ಟಿ ಎಂ ಗೆ ಹೋದಾಗ ನನ್ನ ಖಾತೆಯಲ್ಲಿ ಹಣ ಇರಲಿಲ್ಲ, ಕೂಡಲೆ ಎ ಪಿ ಎಂ ಸಿ ಯಾರ್ಡ ಶಾಖೆಯ ಬ್ಯಾಂಕ್ ನಲ್ಲಿ ವಿಚಾರ ಮಾಡಿದಾಗ ದಿನಾಂಕ:15/3/2019 ರಂದು ತಾನು 1000-00 ರೂಗಳು ಡ್ರಾ ಮಾಡಿದ ಸ್ವಲ್ಪ ಸಮಯದಲ್ಲಿಯೆ 38000-00 ರೂಗಳು ನನ್ನ ಖಾತೆಯಿಂದ ಪುನಃ ಡ್ರಾ ಆಗಿರುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದು.ನಂತರ ಪಾಸ್ ಬುಕ್ ಎಂಟ್ರಿಯನ್ನು ಸಹ ಮಾಡಿಸಿಕೊಟ್ಟು, ನೀವು ಕೂಡಲೆ ಸೈಭರ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲು ತಿಳಿಸಿದರ ಮೇರೆಗೆ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು, ಸದರಿ ನನ್ನ ಬ್ಯಾಂಕ್ ಖಾತೆಯಿಂದ 38000/- ರೂಗಳನ್ನು ಯಾರೋ ದುರಾತ್ಮನು ನನ್ನ ಪಿನ್ ನಂಭರ್ (ಗುಪ್ತ ಸಂಖ್ಯೆ) ಯನ್ನು ಬಳಸಿಕೊಂಡು ಹಣ ಡ್ರಾ ಮಾಡಿಕೊಂಡು ನನಗೆ ಮೋಸ ಮಾಡಿರುತ್ತಾನೆ. ಸದರಿ ನನಗೆ ಮೋಸ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

2) ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸ್ ಠಾಣೆ ಮೊ.ಸಂ. 05/2019 ಕಲಂ. 420 ಐಪಿಸಿ ಮತ್ತು ಸೆಕ್ಷನ್  66(ಸಿ),66(ಬಿ) ಐಟಿ ಆಕ್ಟ್ 2000 :-

     ದಿನಾಂಕ:12/4/2019 ರಂದು ಪಿರ್ಯಾಧಿ  ಶ್ರೀ ಚೇತನ್.ಎಂ.ಎನ್ ಬಿನ್ ಸಿ.ನಾರಾಯಣಸ್ವಾಮಿ, 30 ವರ್ಷ, ಒಕ್ಕಲಿಗ ಜನಾಂಗ, ಮೊಬೈಲ್ ಮೆಕಾನಿಕ್ ಕೆಲಸ, ವಾಸ ಉರಟ ಅಗ್ರಹಾರ ಗ್ರಾಮ, ಕೋಲಾರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಹೆಚ್ ಕ್ರಾಸ್ ನಲ್ಲಿನ ಎಸ್ ಬಿ ಐ ಬ್ಯಾಂಕ್ ಶಾಖೆಯಲ್ಲಿ  ಉಳಿತಾಯ ಖಾತೆಯ ಸಂಖ್ಯೆ:64124105269 ನ್ನು ಹೊಂದಿದ್ದು, ಈ ಖಾತೆಗೆ ಒಂದು ಎ ಟಿ ಎಂ ಕಾರ್ಡ ಸಹ ಮಾಡಿಸಿಕೊಂಡು ಇದರಲ್ಲಿ ನನ್ನ ಹಣ ಕಾಸಿನ ವ್ಯವಹಾರವನ್ನು ಮಾಡುತ್ತಿರುತ್ತೇನೆ. ದಿನಾಂಕ: 15/1/2019 ರಂದು 3420-00 ರೂಗಳ ಕೊಲಾರ ಚಾಮುಂಡೇಶ್ವರಿ ಬಟ್ಟೆ ಅಂಗಡಿಯಲ್ಲಿ ಬಟ್ಟೆಯನ್ನು ಖರೀದಿಸಿರುತ್ತೇನೆ.ಅಂದಿನಿಂದ ಇಂದಿನವರಿಗೆ ನಾನು ಎ ಟಿ ಎಂ ಕಾರ್ಡಿನಿಂದ ಯಾವುದೆ ವ್ಯವಹಾರವನ್ನು ಮಾಡಿರುವುದಿಲ್ಲ. ಈಗಿರುವಲ್ಲಿ ದಿನಾಂಕ:26/3/2019 ರಂದು  ಸದರಿ ನನ್ನ ಖಾತೆಯಿಂದ 20000-00 ರೂಗಳಂತೆ ಮೂರು ಬಾರಿ ಒಟ್ಟು 60000-00 ರೂಗಳು ಎ ಟಿ ಎಂ ಡ್ರಾ ಆಗಿರುವ ಬಗ್ಗೆ ಸಂದೇಶಗಳು ಬಂದಿದ್ದು, ನಂತರ ಸ್ವಲ್ಪ ಸಮಯದಲ್ಲಿ ಒಂದು ಭಾರಿಯ 20000-00 ರೂಗಳು ವಾಪಸ್ಸು ನನ್ನ ಖಾತೆಗೆ ಜಮೆ ಆಗಿರುವ ಬಗ್ಗೆ ಸಂದೇಶ ಬಂದಿರುತ್ತದೆ. ನಾನು ಕೂಡಲೆ  ಎಸ್ ಬಿ ಐ ಬ್ಯಾಂಕ್ ಗೆ ಹೋಗಿ ನಾನು ದೂರನ್ನು ನೀಡಿ ನಂತರ ನನ್ನ ಎ ಟಿ ಎಂ ಕಾರ್ಡನ್ನು ಸಹ ಬ್ಲಾಕ್ ಮಾಡಿಸಿರುತ್ತೇನೆ.ಅವರು 10 ದಿನಗಳ ಕಾಲದಲ್ಲಿ  ನಮ್ಮ ಬ್ಯಾಂಕಿನ ತನಿಖಾ ಟೀಮ್ ನಿಂದ ತನಿಖೆಯನ್ನು ಮಾಡಿಸಿ ನಿಮ್ಮ ಹಣ ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆಂತ ತಿಳಿಸಿರುತ್ತಾರೆ.ನಂತರ ನಾನು ದಿನಾಂಕ:11/4/2019 ರಂದು ಪುನಃ ಬ್ಯಾಂಕಿಗೆ ಹೋಗಿ ಕೇಳಲಾಗಿ ನೀವು ಸೈಭರ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡುವಂತೆ ತಿಳಿಸಿದ್ದು, ಅದರಂತೆ ಈ ದಿನ ದೂರನ್ನು ತಡವಾಗಿ  ನೀಡುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

3) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 67/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ; 11-04-2019 ರಂದು ಸಂಜೆ 6.30 ಗಂಟೆ ಸಮಯದಲ್ಲಿ DCB/CEN ಪೊಲೀಸ್ ಠಾಣೆಯ PI  ರವರು ದಾಳಿ ಪಂಚನಾಮೆ, 4 ಜನ ಆಸಾಮಿಗಳು, ಮತ್ತು ಮಾಲಿನೊಂದಿಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ; 11-04-2019 ರಂದು ತಾನು, ತನ್ನ ಸಿಬ್ಬಂದಿಯೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಗಸ್ತಿನಲ್ಲಿದ್ದಾಗ ಸಂಜೆ 4.30 ಗಂಟೆಯ ಸಮಯದಲ್ಲಿ ಅಂದಾರ್ಲಹಳ್ಳಿ ಗೇಟ್ ಬಳಿ ಇದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಅಲ್ಲೆ ಇದ್ದ ಪಂಚರನ್ನು ಬರಮಾಡಿಕೊಂಡು ಅಂದಾರ್ಲಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜೂಜಾಟದ ಮೇಲೆ ದಾಳಿ ಮಾಡಿ 4 ಜನ ಅಸಾಮಿಗಳನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ್ದ ಒಂದು ಪ್ಲಾಸ್ಟಿಕ್ ಚೀಲ, 52 ಇಸ್ಪೀಟು ಎಲೆಗಳು, 6410/- ರೂ ನಗದು ಹಣವನ್ನು ವಶಕ್ಕೆ ಪಡಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

4) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 68/2019 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ; 11-04-2019 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ಠಾಣೆಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ, ಇಬ್ಬರು ಆಸಾಮಿಗಳು,ಎರಡು ಬ್ಯಾಗುಗಳು,ಮಾಲುಗಳನ್ನು ನೀಡಿದ ವರದಿಯ ಸಾರಾಂಶವೇನೆಂದರೆ ತಾನು, ಠಾಣಾ ಪ್ರಭಾರದಲ್ಲಿರುವಾಗ ಸಂಜೆ 6.30 ಗಂಟೆ ಸಮಯದಲ್ಲಿ ಠಾಣಾ ಸರಹದ್ದಿಗೆ ಸೇರಿದ ಮಾರಗಾನಹಳ್ಳಿ ಗ್ರಾಮದ ಗೇಟ್ ನ ರಾಮಗಾನಪರ್ತಿ ಗ್ರಾಮದ ಕಡೆ ಹೋಗುವ ದಾರಿಯ ಪಕ್ಕದಲ್ಲಿ ಅಶ್ವತ್ಥಪ್ಪ ರವರ ವ್ಯಾಪಾರ ಮಳಿಗೆಯ ಬೂಸ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಟೆಟ್ರಾಪ್ಯಾಕೆಟ್ಗಳನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ  ಮೇರೆಗೆ ತಾನು, ಸಿಬ್ಬಂದಿಯವರಾದ ಸಿಪಿಸಿ 35 ಸರ್ದಾರ್,  ಸಿಪಿಸಿ 203 ಮಂಜುನಾಯ್ಕ್ ಪಿ.ಸಿ-262 ಅಂಬರೀಶ, ಸರ್ಕಾರಿ ಜೀಪ್ ಸಂಖ್ಯೆ ಕೆಎ 03 ಜಿ 507 ರಲ್ಲಿ ಚಾಲಕ ಎ.ಹೆಚ್.ಸಿ 23 ಮಂಜುನಾಥ್  ರವರೊಂದಿಗೆ ಸಂಜೆ 6-45 ಗಂಟೆಗೆ ಠಾಣೆಯಿಂದ ಹೊರಟು 7-15 ಗಂಟೆಗೆ ರೆಡ್ಡಿಗೊಲ್ಲಾವಾರಹಳ್ಳಿ ಗ್ರಾಮದ ಗೇಟ್ ಬಳಿ ಹೋದೆವು. ಗೇಟ್ ಬಳಿ ಇದ್ದ ಪಂಚರನ್ನು ಕರೆದುಕೊಂಡು ಅವರಿಗೆ ಮಾಹಿತಿಯ ಬಗ್ಗೆ ತಿಳಿಸಿ ದಾಳಿ ಪಂಚನಾಮೆಗೆ ಪಂಚರಾಗಿ ಕರೆದುಕೊಂಡು ಸಿಬ್ಬಂದಿಯವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ರಾತ್ರಿ 7-30 ಗಂಟೆಗೆ  ಮೇಲ್ಕಂಡ ಅಂಗಡಿಯ ಬಳಿ ಹೋಗಿ ಜೀಪ್ ನಿಲ್ಲಿಸಿದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಬೂಸ ಅಂಗಡಿ ಮುಂದೆ ನಿಂತಿದ್ದ ಇಬ್ಬರು  ಆಸಾಮಿಗಳು ಅವರುಗಳ ಕೈಯಲ್ಲಿದ್ದ ಬ್ಯಾಗುಗಳನ್ನು ಮೆಟ್ಟಿಲುಗಳ ಬಳಿ ಬಿಸಾಡಿ ಓಡಿ ಹೋಗಲು ಪ್ರಯತ್ನಿದ್ದವರನ್ನು ತಾನು, ಸಿಬ್ಬಂದಿಯವರು ಹಿಡಿದುಕೊಂಡು ಅವರ ಹೆಸರು ವಿಳಾಸದ ಕೇಳಲಾಗಿ ಆಶ್ವಥಪ್ಪ ಬಿನ್ ಲೇಟ್ ನಾರಾಯಣಪ್ಪ 51 ವರ್ಷ, ಚೇತನ್ ಬಿನ್ ಅಶ್ವತ್ಥ ನಾರಾಯಣ, 24 ವರ್ಷ, ವಕ್ಕಲಿಗರು, ಇಬ್ಬರೂ ರೆಡ್ಡಿಗೊಲ್ಲವಾರಹಳ್ಳಿ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದರು. ಪಂಚರ ಸಮಕ್ಷಮದಲ್ಲಿ ಅಶ್ವತ್ಥಪ್ಪ ರವರ ಕೈಯಲ್ಲಿ ಕೆಂಪುಬಣ್ಣದ ಬ್ಯಾಗ್ ಇದ್ದು,ಸದರಿ ಬ್ಯಾಗನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಿ ಎಣಿಕೆ ಮಾಡಲಾಗಿ  1) OLD TAVERN Whisky ಯ 180 ಎಂ.ಎಲ್ ನ 05 ಟೆಟ್ರಾಪಾಕೆಟ್ ಗಳು ಇದರ ಬೆಲೆ 370.65/- ರೂಗಳು, 2) BAGPIPER Deluxe Whishky ಯ 180 ಎಂ.ಎಲ್ ನ 05 ಟೆಟ್ರಾ ಪ್ಯಾಕೆಟ್ ಗಳು ಬೆಲೆ 450.65 ರೂಗಳು ಚೇತನ್ ರವರ ಬಳಿ ಇದ್ದ ಬಿಳಿ ಬಣ್ಣದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ 3) HAYWARDS Cheers whisky  ಯ90 ಎಂ.ಎಲ್ ನ  25 ಪಾಕೆಟ್ ಗಳು.  ಇದರ ಬೆಲೆ 758/- ರೂಗಳಾಗಬಹುದು,ಒಟ್ಟು ಮದ್ಯದ ಟೆಟ್ರಾ ಪ್ಯಾಕೆಟ್ ಗಳ ಬೆಲೆ 1579/-ರೂಗಳು ಮತ್ತು ಒಟ್ಟು ಮದ್ಯ 6.050 ಲೀಟರ್ ( ಆರುಲೀಟರ್ ಐವತ್ತು ಮಿಲಿ ಲೀಟರ್). ಅಗಿರುತ್ತೆ ಆಪಾದಿತರು ಮದ್ಯದ ಟೆಟ್ರಾಪ್ಯಾಕೆಟ್ ಗಳನ್ನು ಮಾರಾಟ ಮಾಡಲು ಪರವಾನಗಿ ಬಗ್ಗೆ ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲ ಎಂದು ತಿಳಿಸಿರುತ್ತಾರೆ.ಮದ್ಯದ ಟೆಟ್ರಾ ಪ್ಯಾಕೆಟ್ ಗಳ ಪೈಕಿ 1) BAGPIPER Whisky ಲೇಬಲ್ ಇರುವ 180 ಎಂ.ಎಲ್ ನ ಒಂದು ಟೆಟ್ರಾ ಪಾಕೆಟ್, 2) OLD TAVERN Whisky ಯ 180 ಎಂ.ಎಲ್ ನ ಒಂದು  ಟೆಟ್ರಾ ಪಾಕೆಟ್, 3) HAYWARDS Cheers Whishky ಯ 90 ಎಂ.ಎಲ್ ನ ಎರಡು  ಟೆಟ್ರಾ ಪಾಕೆಟ್ ಗಳನ್ನು ಪರೀಕ್ಷೆ ಸಲುವಾಗಿ  ಎಫ್ ಎಸ್,ಎಲ್  ಬೆಂಗಳೂರು ರವರಿಗೆ ಕಳುಹಿಸಲು ಸ್ಯಾಂಪಲ್ ಗಾಗಿ ತೆಗೆದು ಪ್ರತೇಕವಾಗಿ  ಬಿಳಿ ಬಟ್ಟೆಯಿಂದ ಸುತ್ತಿ”K” ಎಂಬ ಅಕ್ಷರದಿಂದ  ಸೀಲ್ ಮಾಡಿ ಮೊಹರ್ ಮಾಡಿರುತ್ತೆ.  ಆಪಾದಿತರನ್ನು ಹಾಗೂ ಮದ್ಯದ ಟೆಟ್ರಾ ಪ್ಯಾಕೆಟ್ ಗಳನ್ನು ಮತ್ತು ಸ್ಯಾಂಪಲ್ ಗಾಗಿ ತೆಗೆದಿರುವ ಮದ್ಯದ ಟೆಟ್ರಾ ಪ್ಯಾಕೆಟ್ ಗಳನ್ನು ರಾತ್ರಿ 7.45 ಗಂಟೆಯಿಂದ 8.30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಆಪಾದಿತರನ್ನು ವಶಕ್ಕೆ ತೆಗೆದುಕೊಂಡು ಪಂಚನಾಮೆಯೊಂದಿಗೆ ಹಾಜರುಪಡಿಸಿ ವರದಿಯನ್ನು ನೀಡಿದ್ದು ಕಲಂ 32,34 ಕೆ.ಇ ಅಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ವರದಿಯ ಮೇರೆಗೆ ಈ ಪ್ರ.ವ.ವರದಿ.

5) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 69/2019 ಕಲಂ. 323,332,353,504,506 ರೆ/ವಿ 34 ಐಪಿಸಿ :-

     ದಿನಾಂಕ 12-04-2019 ರಂದು ರಾತ್ರಿ 1-30 ಗಂಟೆಯಲ್ಲಿ ಗಾಯಾಳು ಸರ್ದಾರ್ ಸಿಪಿಸಿ 35 ಗ್ರಾಮಾಂತರ ಪೊಲೀಸ್ ಠಾಣೆ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ತಾನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ: 14/02/2015  ರಿಂದ  ಪೊಲೀಸ್ ಕಾನ್ಸಟೇಬಲ್ ಆಗಿ  ಕರ್ತವ್ಯ ನಿರ್ವಹಿಸುತ್ತಿರುತ್ತೇನೆ.  ದಿನಾಂಕ: 11/04/2019 ರಂದು  ಬೆಳಗ್ಗೆ 07-00 ಗಂಟೆಯಲ್ಲಿ  ಠಾಣಾ ಹಾಜರಾತಿಯಲ್ಲಿ  ನನಗೆ ದಿನಾಂಕ: 18/04/2019 ರಂದು  ನಡೆಯಲಿರುವ ಲೋಕಸಭಾ ಚುನಾವಣೆ ಪ್ರಯುಕ್ತ ಠಾಣಾ ಸರಹದ್ದಿನಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಗುಪ್ತ ಮಾಹಿತಿ ಸಂಗ್ರಹಿಸಲು ಪಿಎಸ್ಐ ರವರು ನೇಮಕ ಮಾಡಿರುತ್ತಾರೆ. ಮೇಲಾಧಿಕಾರಿಗಳು ಸೂಚನೆಯಂತೆ ನಾನು ಠಾಣಾ ಸರಹದ್ದಿನ ಸೇಟ್ ದಿನ್ನೆ. ಇನಮಿಂಚೇನಹಳ್ಳಿ. ಚಂಬಹಳ್ಳಿ. ರಾಮದೇವರಗುಡಿ. ರಾಮಗಾನಪರ್ತಿ.  ಮತ್ತು  ಇತರೆ ಕಡೆ ಮಾಹಿತಿ ಸಂಗ್ರಹಿಸಿಕೊಂಡು ಸಂಜೆ  ರೆಡ್ಡಿಗೊಲ್ಲವಾರಹಳ್ಳಿ ಗೇಟಿನಲ್ಲಿ  ಇದ್ದಾಗ  ಮಾರಗಾನಹಳ್ಳಿ ಗ್ರಾಮದ ಸೇವಾ ರಸ್ತೆಯ ಪಕ್ಕದಲ್ಲಿರುವ ಅಶ್ವಥ್ಥಪ್ಪ ಬಿನ್  ಲೇಟ್ ನಾರಾಯಣಪ್ಪ ಎಂಬುವವರ ಬೂಸಾ ಅಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಮದ್ಯವನ್ನು  ಮಾರಾಟ ಮಾಡುತ್ತಿದ್ದಾರೆಂದು  ಬಾತ್ಮೀದಾರರಿಂದ ನನಗೆ ಖಚಿತ ಮಾಹಿತಿ ದೊರೆತಿದ್ದು ಮಾಹಿತಿಯಂತೆ ನಾನು  ಪಿ.ಎಸ್.ಐ. ರವರಿಗೆ  ವಿಷಯವನ್ನು  ತಿಳಿಸಿರುತ್ತೇನೆ. ಮಾಹಿತಿಯಂತೆ  ಪಿ.ಎಸ್.ಐ. ರವರೊಂದಿಗೆ  ನಾನು, ಮಂಜುನಾಥನಾಯ್ಕ ಸಿಪಿಸಿ 203. ಮತ್ತು ಅಂಬರೀಶ ಸಿಪಿಸಿ 262 ರವರೊಂದಿಗೆ ಸರ್ಕಾರಿ   ವಾಹನ ಕೆ.ಎ.03.ಜಿ.507 ರಲ್ಲಿ ಚಾಲಕ ಮಂಜುನಾಥರವರೊಂದಿಗೆ ಸಂಜೆ 6-45 ಗಂಟೆಯಲ್ಲಿ ಠಾಣೆಯಿಂದ ಹೊರಟು 7-15 ಗಂಟೆಗೆ ರೆಡ್ಡಿಗೊಲ್ಲವಾರಹಳ್ಳಿ ಗೇಟಿನಲ್ಲಿ ಪಿ.ಎಸ್.ಐ. ರವರು ಪಂಚರೊಂದಿಗೆ  ಅಶ್ವಥ್ಥಪ್ಪ ರವರ  ಬೂಸಾ ಅಂಗಡಿಯ ಬಳಿ ದಾಳಿ ಮಾಡಿದ್ದು,  ದಾಳಿ ಮಾಡಿದ್ದ ಸಮಯದಲ್ಲಿ ಅಪಾದಿತರಾದ ಅಶ್ವಥ್ಥಪ್ಪ ಬಿನ್ ಲೇಟ್ ನಾರಾಯಣಪ್ಪ ಮತ್ತು ಆತನ ಮಗ ಚೇತನ್ ಬಿನ್ ಅಶ್ವಥ್ಥಪ್ಪ ಎಂಬುವವರು ಅಂಗಡಿಯ ಮೆಟ್ಟಿಲು ಕೆಳಗಡೆ ಮದ್ಯದ ಪ್ಯಾಕೆಟ್ಗಳು ಇದ್ದ ಬ್ಯಾಗುಗಳನ್ನು ಬಿಸಾಡಿ ಓಡಿ ಹೋಗುತ್ತಿದ್ದವರನ್ನು ಪಿ.ಎಸ್.ಐ ಮತ್ತು  ಸಿಬ್ಬಂದಿಯವರಾದ ನಾವು ಅವರನ್ನು ಹಿಂಬಾಲಿಸಿಕೊಂಡು ಹೋಗಿ ಅಪಾದಿತರಾದ ಅಶ್ವಥ್ಥಪ್ಪ ಬಿನ್ ಲೇಟ್ ನಾರಾಯಣಪ್ಪ 51ವರ್ಷ ವಕ್ಕಲಿಗರು ಮತ್ತು ಚೇತನ್ ಬಿನ್ ಅಶ್ವಥ್ಥಪ್ಪ 24ವರ್ಷ ವಕ್ಕಲಿಗರು ರೆಡ್ಡಿಗೊಲ್ಲವಾರಹಳ್ಳಿ ಗ್ರಾಮ ಮಜರಾ ಬೈಯ್ಯಪ್ಪನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರನ್ನು ವಶಕ್ಕೆ ಪಡೆದುಕೊಂಡೆವು. ನಂತರ  ಪಿ.ಎಸ್.ಐ ರವರು ರಾತ್ರಿ 7-45 ರಿಂದ 8-30 ಗಂಟೆಯವರೆವಿಗೆ ಮಹಜರು ಮೂಲಕ ಆರೋಫಿತರ ವಶದಲ್ಲಿಟ್ಟ ಅಕ್ರಮ ಮದ್ಯದ ಪಾಕೆಟ್ ಗಳನ್ನು ಅಮಾನತ್ತು ಪಡಿಸಿಕೊಂಡರು. ನಂತರ ಆರೋಪಿತರನ್ನು  ನನ್ನ ವಶಕ್ಕೆ ಕೊಟ್ಟಿದ್ದು  ನಾನು ಮತ್ತು ಸಿಬ್ಬಂದಿಯವರು ಅಪಾದಿತರನ್ನು ಜೀಪಿನಲ್ಲಿ ಹತ್ತಿಸಲು ಹೋದಾಗ ರಾತ್ರಿ 8-40 ಗಂಟೆಯಲ್ಲಿ ಅಪಾದಿತರು ಜೀಪಿನಿಂದ ದುಮುಕಿ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ ನಾನು ಅವರನ್ನು ಹಿಂಬಾಲಿಸಿದಾಗ ಇಬ್ಬರು ಆಸಾಮಿಗಳು ನನ್ನನ್ನು ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡು ನನ್ನ ಎಡ ಮುಂಗೈಗೆ ಮತ್ತು ಎಡ ತೊಡೆಗೆ, ಕಾಲುಗಳಿಂದ ಒದ್ದು, ಕೈಗಳಿಂದ ಮೈ ಮೇಲೆ ಹೊಡೆದು ಷರಟನ್ನು ಹರಿದು ಹಾಕಿ ಗಾಯಗೊಳಿಸಿ, ನನ್ನನ್ನು  ಲೋಪರ್ ಪೊಲೀಸ್ ನನ್ನ ಮಗನೇ ಮತ್ತು  ಇತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂತ ಬೆದರಿಕೆ ಹಾಕಿ ತನ್ನ ಸರ್ಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದರು. ಆ ತಕ್ಷಣ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಆಸಾಮಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡು ನಂತರ ಗಾಯಗಳಾಗಿದ್ದ ನನ್ನನ್ನು ಚಾಲಕ ಮಂಜುನಾಥರವರ ಜೊತೆಯಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ನಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದೇನೆ. ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಮೇಲ್ಕಂಡ ಆರೋಪಿತರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 2-10 ಠಾಣೆಗೆ ವಾಪಸ್ಸು ಬಂದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

6) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 65/2019 ಕಲಂ. 379 ಐಪಿಸಿ :-

     ದಿನಾಂಕ: 11.04.2019 ರಂದು ಮದ್ಯಾಹ್ಯ 2-00 ಗಂಟೆಯಲ್ಲಿ  ಪಿರ್ಯಾಧಿಯಾದ ಶ್ರೀ ಮಂಜುನಾಥ ಎಸ್.ಸಿ. ರವರು ಠಾಣೆಗೆ ಹಾಜರಾಗಿ ಕೊಟ್ಟ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು  ಚಿಕ್ಕಬಳ್ಳಾಪುರ ನಗರದ  ಬಿಬಿ ರಸ್ತೆಯ ಜ್ಯೂನಿಯರ್ ಕಾಲೇಜ್ ಬಳಿ ಕಬ್ಬಿನ ಹಾಲಿನ ವ್ಯಾಪಾರವನ್ನು ಮಾಡಿಕೊಂಡಿದ್ದು ತನ್ನ ಸ್ವಂತ ಉಪಯೋಗಕ್ಕಾಗಿ  ನಂ: ಕೆಎ-40-ಇಸಿ-9030 ಬಜಾಜ್ ಪಲ್ಸರ್ ದ್ವಿಚಕ್ರವಾಹನವನ್ನು ಇಟ್ಟುಕೊಂಡಿದ್ದು ಸದರಿ ದ್ವಿಚಕ್ರವಾಹನದಲ್ಲಿ ಪ್ರತಿ ದಿನ ತನ್ನ ಗ್ರಾಮಕ್ಕೆ ಹೋಗಿ ಬರುತ್ತಿದ್ದು  ಅದರಂತೆ ದಿನಾಂಕ: 06.04.2019 ರಂದು ಸಹ ಬೆಳಗ್ಗೆ ದ್ವಿಚಕ್ರವಾಹನದಲ್ಲಿ ಗ್ರಾಮದಿಂದ ಬಂದು ದ್ವಿಚಕ್ರವಾಹನವನ್ನು  ಜ್ಯೂನಿಯರ್ ಕಾಲೇಜ್ ಮೈಧಾನದಲ್ಲಿ ಬಿಟ್ಟು  ವ್ಯಾಪಾರ ಮಾಡಿಕೊಂಡಿದ್ದು ಸಂಜೆ 5-30 ಗಂಟೆಯಲ್ಲಿ ನೋಡಲಾಗಿ ಸ್ತಳದಲ್ಲಿದ್ದ  ವಾಹನ ವ್ಯಾಪಾರ ಮುಗಿಸಿಕೊಂಡು ಸಂಜೆ 6-30 ಗಂಟೆಯಲ್ಲಿ ಬಂದು ನೋಡಲಾಗಿ  ಸದರಿ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ದ್ವಿಚಕ್ರವಾಹನದ ಬೆಲೆ ಸುಮಾರು ರೂ 48,000/- ರೂಗಳಾಗಿದ್ದು  ಪತ್ತೆ ಮಾಡಿ ಅರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ  ಕೆಲಸದ ಒತ್ತಡ ಹಾಗೂ ದ್ವಿಚಕ್ರವಾಹನವನ್ನು  ಹುಡುಕುವ ಸಲುವಾಗಿ  ಈ ದಿನ ತಡವಾಗಿ ದೂರನ್ನು ನೀಡಿರುವುದಾಗಿ ಕೊಟ್ಟ ದೂರಿನ ಮೇರೆಗೆ  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.

7) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 118/2019 ಕಲಂ. 353,504 ರೆ/ವಿ 34 ಐಪಿಸಿ :-

     ದಿನಾಂಕ 11-04-2019 ರಂದು ಮದ್ಯಾಹ್ನ 12-15 ಗಂಟೆಗೆ ಶ್ರೀ ಆರ್.ಜಗದೀಶ್ ರೆಡ್ಡಿ ಪಿ.ಎಸ್.ಐ, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಗೆ ದ್ವಿಚಕ್ರ ವಾಹನಗಳು ಹಾಗೂ ಆರೋಪಿ ಯೊಂದಿಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ 11/04/2019 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ತಾನು ಠಾಣೆಯ ಸಿಬ್ಬಂಧಿಯವರಾದ ಎ.ಎಸ್.ಐ ನರಸಿಂಹಪ್ಪ, ಪಿಸಿ-185 ಶ್ರೀನಿವಾಸ್ ಮೂರ್ತಿ ರವರೊಂದಿಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಬಾಗೇಪಲ್ಲಿ ರಸ್ತೆಯಲ್ಲಿ ಬರುವ ರೈಲ್ವೇ ಬಿಡ್ಜ್ ಬಳಿ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ತಪಾಸಣೆ ಮಾಡಿ ಐ.ಎಂ.ವಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾಗ ಬೆಳಿಗ್ಗೆ 11-40 ಗಂಟೆ ಸಮಯದಲ್ಲಿ ಬಾಗೇಪಲ್ಲಿ ರಸ್ತೆಯ ಕಡೆಯಿಂದ ಕೆಎ-40-ಎಸ್-0186 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನ ಬಂದಿದ್ದು ಸದರಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಅದರ ಸವಾರನಿಗೆ ವಾಹನದ ದಾಖಲಾತಿಗಳನ್ನು ಹಾಜರು ಪಡಿಸುವಂತೆ ಸೂಚಿಸಿದಾಗ ಸದರಿ ದ್ವಿ ಚಕ್ರ ವಾಹನದ ಸವಾರನಾದ ಕೃಷ್ಣಪ್ಪ ಪಾಲೇಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂಬಾತನು ತನ್ನ ದ್ವಿ ಚಕ್ರ ವಾಹನದ ದಾಖಲಾತಿಗಳನ್ನು ಹಾಜರು ಪಡಿಸಿದ್ದು ಸದರಿ ಸವಾರನು ಹೆಲ್ಮೆಟ್ ಧರಿಸದೇ ವಾಹನವನ್ನು ಚಾಲನೆ ಮಾಡಿರುವುದು ಕಂಡು ಬಂದಿದ್ದ ಕಾರಣ ಆತನಿಗೆ ಹೆಲ್ಮೆಟ್ ಧರಿಸದ ಕಾರಣ 100 ರೂಗಳ ದಂಡದ ರಸೀದಿಯನ್ನು ಬರೆದಿದ್ದು, ಅದೇ ಸಮಯಕ್ಕೆ ಬಾಗೇಪಲ್ಲಿ ರಸ್ತೆಯ ಕಡೆಯಿಂದ ಕೆಎ-40-ಕ್ಯೂ-0728 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನ ಬಂದಿದ್ದು ಅದನ್ನು ನಿಲ್ಲಿಸಿ ಅದರ ಸವಾರನಾದ ಪ್ರಸನ್ನ ಕುಮಾರ್ ಬಿನ್ ಚೌಡರೆಡ್ಡಿ ವಾಸ-ಗೌನಿಮರದಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂಬಾತನಿಗೂ ಸಹ ವಾಹನದ ದಾಖಲಾತಿಗಳನ್ನು ಹಾಜರು ಪಡಿಸುವಂತೆ ಸೂಚಿಸಿದಾಗ ಸದರಿ ಆಸಾಮಿಯು ಸಹ ತನ್ನ ದ್ವಿ ಚಕ್ರ ವಾಹನದ ಇನ್ಸುರೇನ್ಸ್ ಅನ್ನು ಹಾಜರು ಪಡಿಸಿರುವುದಿಲ್ಲ. ಆಗ ತಾನು ಸದರಿ ಆಸಾಮಿಗೆ 500 ರೂಗಳ ದಂಡದ ರಸೀದಿಯನ್ನು ಬರೆಯುತ್ತಿದ್ದಾಗ ಸ್ಥಳದಲ್ಲಿದ್ದ ಕೃಷ್ಣಪ್ಪ ಹಾಗು ಪ್ರಸನ್ನ ಕುಮಾರ್ ಇಬ್ಬರು ಸೇರಿ ನಮ್ಮನ್ನು ಕುರಿತು ನೀವು ಯಾವ ಅಧಿಕಾರದ ಮೇಲೆ ದಂಡವನ್ನು ಹಾಕಿದ್ದೀರಾ ನಾವು ದಂಡವನ್ನು ಕಟ್ಟುವುದಿಲ್ಲ ನಿಮ್ಮ ಕೈಯಲ್ಲಿ ಏನಾಗುತ್ತೋ ಮಾಡಿಕೋ ಹೋಗಿ ಎಂದು ಏರು ಧ್ವನಿಯಲ್ಲಿ ಮಾತನಾಡಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು, ಸ್ಥಳದಲ್ಲಿದ್ದ ಎ.ಎಸ್.ಐ ನರಸಿಂಹಪ್ಪ ರವರನ್ನು ಹಿಡಿದು ಎಳೆದಾಡಿ ತಾನು ನಿರ್ವಹಿಸುತ್ತಿದ್ದ ಸರ್ಕಾರಿ ಕೆಲಸವನ್ನು ನಿರ್ವಹಿಸದಂತೆ ಅಡ್ಡಿ ಪಡಿಸಿದಾಗ ಪ್ರಸನ್ನ ಕುಮಾರ್ ರವರನ್ನು ವಶಕ್ಕೆ ಪಡೆಯುವಷ್ಟರಲ್ಲಿ ಕೃಷ್ಣಪ್ಪ ಎಂಬಾತನು ತನ್ನ ದ್ವಿ ಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ. ನಂತರ ಮೇಲ್ಕಂಡ ದ್ವಿ ಚಕ್ರ ವಾಹನಗಳನ್ನು ಸಹ ವಶಕ್ಕೆ ಪಡೆದುಕೊಂಡು ದ್ವಿ ಚಕ್ರ ವಾಹನಗಳು ಹಾಗು ಆರೋಪಿಯಾದ ಪ್ರಸನ್ನ ಕುಮಾರ್ ರವರನ್ನು ಠಾಣೆಗೆ ಕರೆದುಕೊಂಡು ಬಂದು ತಮ್ಮ ಮುಂದೆ ಹಾಜರು ಪಡಿಸಿದ್ದು ಸದರಿ ಆಸಾಮಿಯನ್ನು ಮತ್ತು ದ್ವಿ ಚಕ್ರ ವಾಹನವನ್ನು ತಮ್ಮ ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಸೂಚಿಸಿದೆ.

8) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 119/2019 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:11/04/2019 ರಂದು ಸಂಜೆ 18-30 ಗಂಟೆಗೆ ಮಾನ್ಯ ಚಿಂತಾಮಣಿ ಉಪ-ವಿಭಾಗದ ಡಿ.ಎಸ್.ಪಿ ಸಾಹೇಬರು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಯಲ್ಲಿ ವರದಿ ನೀಡಿದ್ದು ಸಾರಾಂಶವೆನೆಂದರೇ ದಿನಾಂಕ 11/04/2019 ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಚಿಂತಾಮಣಿ ಉಪ-ವಿಭಾಗದ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 4.45 ಗಂಟೆ ಸಮಯದಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ನಲಮಾಚನಹಳ್ಳಿ ಗ್ರಾಮದ ಬಳಿ ಸರ್ಕಾರಿ ಜೀಪ್ ನಲ್ಲಿ ಬರುತ್ತಿದ್ದಾಗ, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕತ್ರಿಗುಪ್ಪೆ ಗ್ರಾಮದ ವಾಸಿಯಾದ ಮಂಜುನಾಥ ಬಿನ್ ವೆಂಕಟೇಶಪ್ಪ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದ ಖಾಲಿ ಜಾಗದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ದೊರೆತಿದ್ದರ ಮೇರೆಗೆ ನಾನು ಸಿಬ್ಬಂದಿಯೊಂದಿಗೆ, ಸಂಜೆ 5.00 ಗಂಟೆ ಸಮಯದಲ್ಲಿ ಜೀಪ್ ನಲ್ಲಿ ಮೇಲ್ಕಂಡ ಮಂಜುನಾಥ ರವರ ಚಿಲ್ಲರೆ ಅಂಗಡಿ ಬಳಿ ಹೋಗಿ ನೋಡಲಾಗಿ, ಸದರಿ ಚಿಲ್ಲರೆ ಅಂಗಡಿಯ ಮುಂದೆ ಖಾಲಿ ಜಾಗದಲ್ಲಿ ಇಬ್ಬರು ಆಸಾಮಿಗಳು ಎರಡು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದು ಪೊಲೀಸ್ ಜೀಪನ್ನು ಕಂಡು ಸದರಿ ಆಸಾಮಿಗಳು ಓಡಿ ಹೋಗಿದ್ದು, ಸದರಿ ಗ್ಲಾಸುಗಳಲ್ಲಿ ಪರಿಶೀಲಿಸಲಾಗಿ, ಅದರಲ್ಲಿ ಮದ್ಯವಿದ್ದು, ಸದರಿ ಗ್ಲಾಸ್ ಗಳ ಪಕ್ಕದಲ್ಲಿ 90 ಎಂ.ಎಲ್ ನ HAYWARDS CHEERS WHISKY ಕಂಪನಿಯ ಎರಡು ಟೆಟ್ರಾ ಪಾಕೆಟ್ ಗಳಿದ್ದು, ಸದರಿ ಟೆಟ್ರಾ ಪಾಕೆಟ್ ಗಳಲ್ಲಿ ಅರ್ದದಷ್ಟು ಮದ್ಯವಿರುತ್ತೆ. ಇದರ ಪಕ್ಕದಲ್ಲಿ ಒಂದು ಲೀಟರ್ ನ ಎರಡು ವಾಟರ್ ಬಾಟಲುಗಳು ಇದ್ದು, ಸದರಿ ಬಾಟಲಿಗಳಲ್ಲಿ ಅರ್ದದಷ್ಟು ನೀರು ಇರುತ್ತೆ. ನಂತರ ಅಂಗಡಿಯಲ್ಲಿದ್ದ ಆಸಾಮಿಯನ್ನು ವಿಚಾರ ಮಾಡಲಾಗಿ ತನ್ನ ಹೆಸರು ಮಂಜುನಾಥ ಬಿನ್ ವೆಂಕಟೇಶಪ್ಪ, 26 ವರ್ಷ, ಬುಡುಗ ಜಂಗಮರು, ಅಂಗಡಿ ವ್ಯಾಪಾರ, ಕತ್ರಿಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ನೀನು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈ ರೀತಿ ಮಾಡಲು ನೀನು ಸರ್ಕಾರದಿಂದ ಯಾವುದಾದರೂ ಅನುಮತಿ ಅಥವಾ ಪರವಾನಿಗೆ ಪಡೆದಿದೆಯೇ ಎಂದು ಕೇಳಲಾಗಿ ತಾನು ಯಾವುದೇ ಪರವಾನಿಗೆ ಪಡೆದಿರುವುದಿಲ್ಲ ತನ್ನ ಚಿಲ್ಲರೆ ಅಂಗಡಿಯಲ್ಲಿ ಸಿಗುವ ಬಜ್ಜಿ, ಬೋಂಡ ಮತ್ತು ಕಡಲೆ ಬೀಜ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಅವರಿಗೆ ಕುಡಿಯಲು ಅನುವು ಮಾಡಿಕೊಟ್ಟಿರುವುದಾಗಿ ತಿಳಿಸಿರುತ್ತಾನೆ. ನಂತರ ಅರ್ದದಷ್ಟು ಮದ್ಯ ಇರುವ ಟೆಟ್ರಾ ಪಾಕೆಟ್ ಗಳು, ಮದ್ಯಪಾನ ಮಾಡಲು ಉಪಯೋಗಿಸಿರುವ ಎರಡು ಪ್ಕಾಸ್ಟಿಕ್ ಲೋಟಗಳು, ಒಂದು ಲೀಟರ್ ನ ಎರಡು ಪ್ಲಾಸ್ಟಿಕ್ ವಾಟರ್ ಬಾಟಲಿಗಳನ್ನು ಪಂಚರ ಸಮಕ್ಷಮ ಸಂಜೆ 5.00 ಗಂಟೆಯಿಂದ 6.00 ಗಂಟೆಯವರೆಗೆ ಮಹಜರ್ ಮುಖಾಂತರ ಅಮಾನತ್ತುಪಡಿಸಿಕೊಂಡು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡುತ್ತಿದ್ದು, ಸದರಿ ಆರೋಪಿಯ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

9) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 120/2019 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

     ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆರ್ .ಜಗದೀಶ್ ರೆಡ್ಡಿ ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ:11-04-2019 ರಂದು ನಾನು ಠಾಣೆಯ ಸಿಬ್ಬಂದಿಯಾದ ಹೆಚ್.ಸಿ-86 ಹರೀಶ್, ಹೆಚ್.ಸಿ-41 ಜಗದೀಶ್, ಹೆಚ್.ಸಿ-249 ಸಂದೀಪ್ ಕುಮಾರ್, ಪಿಸಿ-23 ರೋಷನ್ ಜಮೀರ್ ಹಾಗೂ ಚಾಲಕ ಎಪಿಸಿ-138 ಮುಖೇಶರವರೊಂದಿಗೆ ಕೆಎ-40 ಜಿ-326 ಸರ್ಕಾರಿ ಜೀಪಿನಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ವಿಶೇಷ ಗಸ್ತು ಕರ್ತವ್ಯಕ್ಕೆ ಹೋಗಿ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5-45 ಗಂಟೆಯಲ್ಲಿ ಕತ್ರಿಗುಪ್ಪೆ ಗ್ರಾಮದಲ್ಲಿ ಗಸ್ತು ಮಾಡಿಕೊಂಡು ಅದೇ ಗ್ರಾಮದ ರಾಮಚಂದ್ರ ಎಂಬುವವರ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಂಗಡಿಯ ಮುಂದೆ ಕುಳಿತಿದ್ದ ಯಾರೋ ಇಬ್ಬರು ಆಸಾಮಿಗಳು ಪೊಲೀಸ್ ಜೀಪನ್ನು ನೋಡಿ ಓಡಿ ಹೋಗಿದ್ದು, ಅನುಮಾನಗೊಂಡ ನಾವು ಜೀಪನ್ನು ನಿಲ್ಲಿಸಿ ಅಂಗಡಿಯ ಬಳಿ ಹೋದಾಗ ಸ್ಥಳದಲ್ಲಿ ಮದ್ಯಪಾನ ಮಾಡಿ ಅರ್ಧ ಖಾಲಿ ಮಾಡಿರುವ 180 ಎಂ.ಎಲ್. ನ 2 ಓಲ್ಡ್ ಟಾವೆರ್ನ್ ವಿಸ್ಕಿ ಟೆಟ್ರಾ ಪಾಕೆಟ್ ಗಳು, ಉರಿದಿರುವ ಕಡಲೆ ಬೀಜಗಳು, ಮದ್ಯಪಾನ ಮಾಡಲು ಉಪಯೋಗಿಸಿರುವ ಎರಡು ಖಾಲಿ ಲೋಟಗಳು ಮತ್ತು ಒಂದು ಲೀಟರ್ ನ ಅರ್ಧ ನೀರಿರುವ ಇರುವ ಎರಡು ಬಾಟಲ್ ಗಳು ಇದ್ದು, ಸದರಿ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಇದ್ದು, ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ರಾಮಚಂದ್ರ ಬಿನ್ ಕದಿರಪ್ಪ, 36ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಕತ್ರಿಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಸದರಿ ವ್ಯಕ್ತಿಯು ತನ್ನ ಅಂಗಡಿಯ ಮುಂದೆ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಕಂಡು ಬಂದಿದ್ದು, ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಸ್ಥಳದಲ್ಲಿ ಸಂಜೆ 6-30  ರಿಂದ  7-00 ಗಂಟೆಯವರೆಗೆ ಮಹಜರ್ ಕ್ರಮ ಜರುಗಿಸಿ ಮೇಲ್ಕಂಡ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಮತ್ತು ಮಾಲಿನೊಂದಿಗೆ ಸಂಜೆ 7-20 ಗಂಟೆಗೆ ಠಾಣೆಗೆ ವಾಪಸ್ಸಾಗಿ ಸದರಿ ಆರೋಪಿಯ ವಿರುದ್ಧ ಠಾಣಾ ಮೊ.ಸಂ.120/2019 ಕಲಂ 15(ಎ) ಕೆ.ಇ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿರುತ್ತೆ.

10) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 76/2019 ಕಲಂ. 392 ಐಪಿಸಿ :-

     ದಿನಾಂಕ: 11/04/2019 ರಂದು ಸಂಜೆ 17-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ  ಕೆ.ಪಿ ನಾಗರಾಜ್ ಬಿನ್ ಕೆ.ಎ ಪ್ರಕಾಶ್  34 ವರ್ಷ, ವೈಶ್ಯರು, ಕೋಮರ್ಲ ಪ್ರಕಾಶ್ ಜ್ಯೂಯೆಲರ್ಸ್ ಮಾಲೀಕರು, ವಾಸ ಡೆಕ್ಕನ್ ಆಸ್ಪತ್ರೆ ಮುಂಭಾಗ, ಚಿಂತಾಮಣಿ ನಗರ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,          ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ದಿನಾಂಕ:11/04/2019 ರಂದು ಬೆಳಿಗ್ಗೆ ಸುಮಾರು 06-15 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ನನಗೆ ಪರಿಚಯಸ್ಥರಾದ ಕೃಷ್ಣಮೂತರ್ಿ ಎಂಬುವರು ನನ್ನ ಮೊಬೈಲ್ ನಂಬರ್ ಗೆ ಕರೆ ಮಾಡಿ ನಿಮ್ಮ ತಾಯಿ ಚಂದ್ರಕಲಾ ರವರು ಗುಂಡಪ್ಪ ಬಡಾವಣೆಯ ಬೆಂಗಳೂರು ರಸ್ತೆಯ ಜ್ಯೂಸ್ ಮ್ಯಾಜಿಕ್ ಸೆಂಟರ್ ಮುಂದೆ ರಸ್ತೆಯ ಬದಿ ವಾಯು ವಿಹಾರ ಮಾಡುತ್ತಿರುವಾಗ ಯಾರೋ ಮೂರು ಜನ ಅಪರಿಚಿತ ವ್ಯಕ್ತಿಗಳು ದ್ವಿಚಕ್ರವಾಹನದಲ್ಲಿ ಬಂದು ನಿಮ್ಮ ತಾಯಿಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆ ಬೇಗ ಬನ್ನಿ ಎಂದು ವಿಷಯ ತಿಳಿಸಿದ ತಕ್ಷಣ ನಾನು ಸ್ಥಳಕ್ಕೆ ಹೋದಾಗ ನನ್ನ ತಾಯಿ ಕೆ.ಪಿ ಚಂದ್ರಕಲಾ ಮತ್ತು ನಮ್ಮ ಪಕ್ಕದ ಮನೆ ವಾಸಿ ಬಿ.ಎನ್ ವನಜಾ ರವರುಗಳು ಗಾಬರಿಪಟ್ಟುಕೊಂಡಿದ್ದು ನಾನು ನನ್ನ ತಾಯಿಯನ್ನು ವಿಚಾರಿಸಲಾಗಿ ನನ್ನನ್ನು ಕುರಿತು  ಈ ದಿನ ಬೆಳಿಗ್ಗೆ ನಾನು ಮತ್ತು ಪಕ್ಕದ ಮನೆ ವಾಸಿ ವನಜಾ ರವರು ಎಂದಿನಂತೆ ಬೆಳಿಗ್ಗೆ 05-45 ಗಂಟೆಗೆ ಮನೆಯನ್ನು ಬಿಟ್ಟು ಡೆಕ್ಕನ್ ಆಸ್ಪತ್ರೆ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಮುಂದೆ ಬೆಂಗಳೂರು ರಸ್ತೆಯ ಮಾರ್ಗವಾಗಿ ರಸ್ತೆಯ ಬದಿ ವಾಯು ವಿಹಾರ ಮಾಡುತ್ತಿರುವಾಗ ಬೆಳಿಗ್ಗೆ ಸುಮಾರು 06-00 ಗಂಟೆ ಸಮಯದಲ್ಲಿ ಗುಂಡಪ್ಪ ಬಡಾವಣೆಯ ಜ್ಯೂಸ್ ಮ್ಯಾಜಿಕ್ ಸೆಂಟರ್ ಮುಂದೆ ರಸ್ತೆಯ ಬದಿ ಕನ್ನಂಪಲ್ಲಿ ಕಡೆಗೆ ವಾಯು ವಿಹಾರ ಮಾಡುತ್ತಿರುವಾಗ ಯಾರೋ ಮೂರು ಜನ ಅಪರಿಚಿತ ವ್ಯಕ್ತಿಗಳು ದ್ವಿಚಕ್ರವಾಹನದಲ್ಲಿ ಹಿಂಬದಿಯಿಂದ ಬಂದು ಆ ಪೈಕಿ ದ್ವಿಚಕ್ರವಾಹನದ ಕಡೆಯಲ್ಲಿ ಮೂರನೇಯವನಾಗಿ ಕುಳಿತಿದ್ದ ಸುಮಾರು 25 ರಿಂದ 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯು ನನ್ನ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಅದೇ ದ್ವಿಚಕ್ರವಾಹನದಲ್ಲಿ ಕುಳಿತುಕೊಂಡು ವೇಗವಾಗಿ ದ್ವಿಚಕ್ರವಾಹನದಲ್ಲಿ ಬೆಂಗಳೂರು ಕಡೆಗೆ ಹೋಗುವ ದಿಕ್ಕಿನಲ್ಲಿ ಓಡಿ ಹೋಗಿರುತ್ತಾರೆ ತಕ್ಷಣ ನಾನು ಮತ್ತು ನನ್ನೊಂದಿಗೆ ಇದ್ದ ವನಜಾ ರವರು ಗಾಬರಿಯಿಂದ ಕೂಗಾಡುತ್ತಾ ಅವರನ್ನು ಹಿಂಬಾಲಿಸಿದರು ಸಹ ಸಿಕ್ಕಿರುವುದಿಲ್ಲವೆಂದು ನನ್ನ ತಾಯಿ ನನಗೆ ವಿಚಾರ ತಿಳಿಸಿದರು , ಆನಂತರ ನಾನು ನನ್ನ ತಾಯಿಯನ್ನು ಸಮಾಧಾನ ಪಡಿಸಿ ಅಲ್ಲಿಯೇ ಜ್ಯೂಸ್ ಮ್ಯಾಜಿಕ್ ಸೆಂಟರ್ ನಲ್ಲಿ ಅಳವಡಿಸಿರುವ ಸಿ.ಸಿ ಕ್ಯಾಮರಾವನ್ನು ಪರಿಶೀಲಿಸಲಾಗಿ ಇದರಲ್ಲಿ ದ್ವಿಚಕ್ರವಾಹನದಲ್ಲಿ ಬಂದು ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ವ್ಯಕ್ತಿಗಳ ಸೆರೆಯಾಗಿದ್ದು ಸುಮಾರು 20 ರಿಂದ 25 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗಳಾಗಿದ್ದು ಇರವನ್ನು ನಮ್ಮ ತಾಯಿ ಮತ್ತು ವನಜಾ ರವರು ಗುರುತಿಸಿರುತ್ತಾರೆ, ಆನಂತರ ನಾನು ನನ್ನ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಸಮಾಲೋಚಿಸಿ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದು  ಮೇಲ್ಕಂಡ ನನ್ನ ತಾಯಿಯ ಕುತ್ತಿಗೆಯಲ್ಲಿದ್ದ ಸುಮಾರು 100 ಗ್ರಾಂ ತೂಕದ 2 ಲಕ್ಷ 50 ಸಾವಿರ ಬೆಲೆ ಬಾಳುವ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಮೂರು ಜನ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಲು ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

11) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 78/2019 ಕಲಂ. 78(1),78(3) ಕೆ.ಪಿ. ಆಕ್ಟ್ :-

     ಘನ ನ್ಯಾಯಾಲಯದಿಂದ ಠಾಣಾ ಎನ್,ಸಿ,ಆರ್-98/2019 ಪ್ರಕರಣದಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಅನುಮತಿ ಪಡೆದುಕೊಂಡ ವರದಿಯ ಸಾರಾಂಶವೇನೆಂದರೆ, ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ವಿ,ಎಲ್ ರಮೇಶ ರವರು ನೀಡಿದ ವರದಿಯ ದೂರು ಏನೆಂದರೆ,  ದಿನಾಂಕ:11-04-2019 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ತಾವು ಠಾಣೆಯಲ್ಲಿದ್ದಾಗ, ಠಾಣಾ ಕ್ರೈಂ ವಿಭಾಗದ ಸಿ,ಪಿ,ಸಿ-430 ನರಸಿಂಹಯ್ಯ ರವರು ತನಗೆ ಪೋನ್ ಮಾಡಿ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ನ ಎನ್,ಎಚ್-7 ರಸ್ತೆಯ ಬ್ರಿಡ್ಜ್ ಕೆಳಗೆ ಯಾರೋ ಒಬ್ಬ ಆಸಾಮಿಯು 1 ರೂಗೆ 70 ರೂ ಎಂದು ಮಟ್ಕಾ ಜೂಜಾಟ ಆಡಿಸುತ್ತಿದ್ದು ಸ್ಥಳದಲ್ಲಿ ಕಂಡ ಭಾತ್ಮಿದಾರರು ತನಗೆ ಮಾಹಿತಿ ನೀಡಿದ್ದಾರೆಂದು ತಿಳಿಸಿದರ ಮೇರೆಗೆ, ತಾವು ಠಾಣಾ ಸಿಬ್ಬಂದಿಯಾದ ಸಿ,ಪಿ,ಸಿ-430 ನರಸಿಂಹಯ್ಯ, & ಸಿ,ಪಿ,ಸಿ-85 ಸುನೀಲ್ ಕುಮಾರ್ ರವರನ್ನು ಕರೆದುಕೊಂಡು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಾಚಲಪತಿ ರವರೊಂದಿಗೆ ಮಧ್ಯಾಹ್ನ 3-30 ಗಂಟೆಗೆ ಬೀಚಗಾನಹಳ್ಳಿ ಕ್ರಾಸ್ ಬಳಿಗೆ ಹೋಗಿ, ಪಂಚರನ್ನು ಬರಮಾಡಿಕೊಂಡು ಎನ್,ಎಚ್-7 ರಸ್ತೆಯ ಬ್ರಿಡ್ಜ್ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಅಕ್ರಮವಾಗಿ ಮಟ್ಕಾ ಜೂಜಾಟ ಆಡುತ್ತಿದ್ದವರ ಮೇಲೆ ಪಂಚರ ಸಮಕ್ಷಮ ಧಾಳಿ ಮಾಡಿದಾಗ, ಕೆಲವರು ಓಡಿ ಹೋಗಿದ್ದು ಆ ಪೈಕಿ ಮಟ್ಕಾ ಜೂಜಾಟದ ಚೀಟಿ ಬರೆಯುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1)ಶ್ರೀನಿವಾಸ ಬಿನ್ ಲೇಟ್ ರಾಮಪ್ಪ 42 ವರ್ಷ, ಈಡಿಗ, ಕೂಲಿ, ವಾಸ-ಜೆ,ಪಿ ನಗರ, ಬೀಚಗಾನಹಳ್ಳಿ ಕ್ರಾಸ್, ಗುಡಿಬಂಡೆ ತಾಲೂಕು ಮೊ:9844972461 ಎಂದು ತಿಳಿಸಿದ್ದು, ವಿಚಾರಣೆ ಮಾಡಲಾಗಿ ತಾನು ಸಾರ್ವಜನಿಕರಿಗೆ 1 ರೂಗೆ 70 ರೂ ಬರುತ್ತದೆಂದು ಆಮಿಷವೊಡ್ಡಿ ಮಟ್ಕಾ ಜೂಜಾಟ ಆಡಿಸುತ್ತಿದ್ದು ಮಟ್ಕಾದಲ್ಲಿ ಬಂದ ಹಣವನ್ನು ತನ್ನ ತಮ್ಮನಾದ ಮಂಜುನಾಥ 36 ವರ್ಷ, ರವರಿಗೆ ಕೊಡುತ್ತಿದ್ದು, ತನಗೆ 100 ಕ್ಕೆ 10 ರೂ ಕಮೀಷನ್ ನೀಡುತ್ತಿದ್ದಾನೆಂದು ಹಾಗೂ ಮಂಜುನಾಥ ರವರು ಸದರಿ ಮಟ್ಕಾ ಹಣವನ್ನು ಆಂಜಿನಮ್ಮ ಕೋಂ ನಾಗರಾಜ 40 ವರ್ಷ, ಜಿರಾಯ್ತಿ, ಈಡಿಗ,ವಾಸ ನಾಗಲಕಟ್ಟೆ ಹತ್ತಿರ, ಮಿಟ್ಟೆಮರಿ ಗ್ರಾಮ, ಬಾಗೇಪಲ್ಲಿ ತಾಲೂಕು ಮೊ:8105048606 ರವರಿಗೆ ನೀಡುತ್ತಾ ತಾನು ಸಹ ಆಂಜಿನಮ್ಮ ರವರಿಂದ 100 ಕ್ಕೆ 10 ರೂ ಕಮಿಷನ್ ಹಣ ಪಡೆಯುತ್ತಿರುತ್ತಾರೆಂದು ತಿಳಿಸಿದ್ದು, ಓಡಿ ಹೋದವರ ಬಗ್ಗೆ ಕೇಳಲಾಗಿ, ಅವರು ಮಟ್ಕಾ ಚೀಟಿ ಬರೆಯಸಲು ಬಂದಿದ್ದು ತಾನು ಮಟ್ಕಾ ಚೀಟಿಯಲ್ಲಿ ಸಂಖ್ಯೆಯನ್ನು ಬರೆದುಕೊಟ್ಟು ಕಳುಹಿಸುತ್ತಿದ್ದು, ಮರುದಿನ ಆ ಸಂಖ್ಯೆ ತೋರಿಸಿದಾಗ, ಹಣ ಬಂದಿದ್ದರೆ ತಾನು ಹಣವನ್ನು ನೀಡುತ್ತಿದ್ದು, ಹೆಸರು  &  ವಿಳಾಸ ತನಗೆ ತಿಳಿದಿರುವುದಿಲ್ಲವೆಂದು ತಿಳಿಸಿದ್ದು ಸದರಿ ಆಸಾಮಿಯನ್ನು ಪರಿಶೀಲಿಸಲಾಗಿ, ಸದರಿಯವರು ಮಟ್ಕಾ ಜೂಜಾಟದಲ್ಲಿ ಗಳಿಸಿದ 1620 ಹಣ & ಒಂದು ಬಾಲ್ ಪೆನ್ನು ನಾಲ್ಕು ಮಟ್ಕಾ ಚೀಟಿಗಳಿದ್ದು, ಸದರಿಯವನ್ನು ಪಂಚರ ಸಮಕ್ಷಮ ಮಧ್ಯಾಹ್ನ 3-45 ಗಂಟೆಯಿಂದ ಸಂಜೆ 4-15 ಗಂಟೆಯಲ್ಲಿ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿದ್ದು, ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 4-30 ಗಂಟೆಯಲ್ಲಿ ಹಾಜರುಪಡಿಸಿ ಸದರಿ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿ ನೀಡಿರುವುದು ಆಗಿರುತ್ತೆ.

12) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 79/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:11-04-2019 ರಂದು ಸಂಜೆ 8-15 ಘಂಟೆಗೆ ಗುಡಿಬಂಡೆ  ಪೊಲೀಸ್ ಠಾಣಾ ಎನ್.ಸಿ.ಆರ್ 99/2019 ರಲ್ಲಿ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ದಾಖಲಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:11-04-2019 ರಂದು ಗುಡಿಬಂಡೆ ಪೊಳಿಸ್ ಠಾಣೆಯ ಪಿ.ಎಸ್.ಐ ರವರು ಮದ್ಯಾಹ್ನ ಗಸ್ತಿನಲ್ಲಿದ್ದಲ್ಲಿದ್ದಾಗ ತಮಗೆ ಕರಿಗಾನತಮ್ಮನಹಳ್ಳಿ ಗ್ರಾಮದ ಬಳಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ತಾವು, ಪಿಸಿ-438 ನರಸಿಂಹಮೂರ್ತಿ, ಪಿಸಿ-430 ನರಸಿಂಹಯ್ಯ, ಪಿಸಿ-88 ಎಲ್.ಸಿ.ರಮೇಶ, ಪಿಸಿ-85 ಸುನೀಲ್ ಕುಮಾರ್, ಪಿ.ಜೆ, ರವರೊಂದಿಗೆ KA-40-G-58 ಸರ್ಕಾರಿ ಜೀಪಿನಲ್ಲಿ ಗುಡಿಬಂಡೆ ತಾಲ್ಲೂಕು ಕರಿಗಾನತಮ್ಮನಹಳ್ಳಿ ಗ್ರಾಮದಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಯಾರೋ ಕೆಲವರು ಸೇರಿಕೊಂಡು ಹನುಮಂತರೆಡ್ಡಿ ರವರ ಬಾಬತ್ತು ಜಮೀನಿನಲ್ಲಿ ಮರದ ಕೆಳಗೆ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಮೇಲೆ ದಾಳಿ ಮಾಡುವುದಕ್ಕಾಗಿ ಪಂಚರಾಗಿ ಸಹಕರಿಸಬೇಕೆಂದು ಕೋರಿದಾಗ ಪಂಚರು ಒಪ್ಪಿಕೊಂಡಿದ್ದು, ನಂತರ ತಾವುಗಳು ಮತ್ತು ಪಂಚರು ಅಂದರ್-ಬಾಹರ್ ಜೂಜಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 10 ಜನರು ಸುತ್ತುವರೆದು 100 ರೂ ಅಂದರ್ ಎಂತಲೂ 100 ರೂ ಬಾಹರ್ ಎಂತಲೂ ಹಣವನ್ನು, ಪಣವನ್ನಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರನ್ನು ಪಂಚರ ಸಮಕ್ಷಮ ಸುತ್ತುವರೆದು ದಾಳಿ ಮಾಡಲಾಗಿ 7 ಜನರು ಓಡಿ ಹೋಗಿದ್ದು,ಮ ಮೂರು ಜನರನ್ನು ಹಿಡಿದುಕೊಂಡು ಅವರ ಹೆಸರು & ವಿಳಾಸಗಳನ್ನು ಕೇಳಲಾಗಿ 1) ಚಂದ್ರಶೇಖರ ಬಿನ್ ಹನುಮಂತಪ್ಪ, 28 ವರ್ಷ, ಆದಿಕರ್ನಾಟಕ ಜನಾಂಗ, ಕಾರು ಚಾಲಕ, ಕರಿಗಾನತಮ್ಮನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 2) ಅಮರನಾಥರೆಡ್ಡಿ ಬಿನ್ ಹನುಮಂತರೆಡ್ಡಿ, 28 ವರ್ಷ, ಒಕ್ಕಲಿಗರು, ವ್ಯವಸಾಯ, ಕರಿಗಾನತಮ್ಮನಹಳ್ಳಿ ಗ್ರಾಮ, ಗುಡಿಬಂಡೆ  ತಾಲ್ಲೂಕು 3) ಅಶೋಕ ಬಿನ್ ಸಂಜೀವಪ್ಪ, 28 ವರ್ಷ, ಆದಿಕರ್ನಾಟಕ ಜನಾಂಗ, ಗಾರೆ ಕೆಲಸ, ಕರಿಗಾನತಮ್ಮನಹಳ್ಳಿ ಗ್ರಾಮ, ಗುಡಿಬಂಡೆ  ತಾಲ್ಲೂಕು ಎಂದು ತಿಳಿಸಿದ್ದು, ಓಡಿ ಹೋದವರ ಹೆಸರು & ವಿಳಾಸಗಳನ್ನು ಕೇಳಿ ತಿಳಿಯಲಾಗಿ 1)ನವೀನ್ ಬಿನ್ ಅಶ್ವತ್ಥಪ್ಪ, 22 ವರ್ಷ, ಆದಿಕರ್ನಾಟಕ ಜನಾಂಗ, ಜಿರಾಯ್ತಿ, ಕರಿಗಾನತಮ್ಮನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 2) ಅಶೋಕ ಬಿನ್ ಚಿಕ್ಕಹನುಮಂತಪ್ಪ, 27 ವರ್ಷ, ಆದಿಕರ್ನಾಟಕ ಜನಾಂಗ, ವ್ಯವಸಾಯ, ಕರಿಗಾನತಮ್ಮನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 3) ಅಂಜಿನಪ್ಪ ಬಿನ್ ಚಿಕ್ಕಹನುಮಂತಪ್ಪ, 30 ವರ್ಷ, ಆದಿಕರ್ನಾಟಕ ಜನಾಂಗ, ಜಿರಾಯ್ತಿ, ಕರಿಗಾನತಮ್ಮನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 4) ನವೀನ ಕುಮಾರ್ ಬಿನ್ ನರಸಿಂಹಪ್ಪ,  24 ವರ್ಷ, ಆದಿಕರ್ನಾಟಕ ಜನಾಂಗ, ಆಟೋ ಚಾಲಕ, ಕರಿಗಾನತಮ್ಮನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 5) ನಾಗರಾಜ ಬಿನ್ ಲೇಟ್ ಸುಬ್ಬನ್ನ, 40 ವರ್ಷ, ಒಕ್ಕಲಿಗರು, ಜಿರಾಯ್ತಿ, ಕರಿಗಾನತಮ್ಮನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 6)ಶಿವಪ್ಪ ಬಿನ್ ಚಿಕ್ಕನಾರಾಯಣಪ್ಪ, 32 ವರ್ಷ, ಒಕ್ಕಲಿಗರು, ಕರಿಗಾನತಮ್ಮನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 7) ನರಸಿಂಹಮೂರ್ತಿ ಬಿನ್ ಚಿಕ್ಕಅಶ್ವತ್ಥಪ್ಪ, 30 ವರ್ಷ, ಒಕ್ಕಲಿಗರು, ಜಿರಾಯ್ತಿ,  ಕರಿಗಾನತಮ್ಮನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿರುವುದಾಗಿ, ಸ್ಥಳದಲ್ಲಿ ಪಣವಾಗಿಟ್ಟಿದ್ದ 3,670/- ರೂಪಾಯಿ ನಗದು ಹಣವನ್ನು ಮತ್ತು 52 ಇಸ್ಪೀಟ್ ಎಲೆಗಳನ್ನು ಮದ್ಯಾಹ್ನ 3-00 ಗಂಟೆಯಿಂದ 3-45 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆಯ ಮೂಲಕ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಪಂಚನಾಮೆ ಮತ್ತು ಮಾಲುಗಳೊಂದಿಗೆ ಮೂರು ಜನ ಆರೋಪಿಗಳನ್ನು ಸಂಜೆ 4-15 ಘಂಟೆಯಲ್ಲಿ ಹಾಜರುಪಡಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ.

13) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 80/2019 ಕಲಂ. 32(3), 15(ಎ) ಕರ್ನಾಟಕ ಅಬಕಾರಿ ಕಾಯ್ದೆ:-

     ಗುಡಿಬಂಡೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ವಿ,ಎಲ್ ರಮೇಶ್ ರವರು  ನೀಡಿದ ದೂರು ಏನೆಂದರೆ, ದಿನಾಂಕ:11-04-2019 ರಂದು ಸಂಜೆ 5-00 ಗಂಟೆಯಲ್ಲಿ ತಾವು ಠಾಣೆಯಲ್ಲಿದ್ದಾಗ, ಠಾಣಾ ಕ್ರೈಂ ವಿಭಾಗದ ಸಿ,ಪಿ,ಸಿ-438 ನರಸಿಂಹಮೂರ್ತಿ ರವರು ಪೋನ್ ಮಾಡಿ ಗುಡಿಬಂಡೆ ಪಟ್ಟಣದ ಸಂತೇ ಬೀದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಮಧ್ಯವನ್ನು ಸೇವಿಸಿ ಸ್ಥಳದಲ್ಲಿ ಗಲಾಟೆ ಮಾಡುತ್ತಿರುವುದಾಗಿ ಭಾತ್ಮಿದಾರರು ತನಗೆ ಮಾಹಿತಿ ನೀಡಿದ್ದಾರೆಂದು ತಿಳಿಸಿದ್ದು, ಸದರಿ ಮಾಹಿತಿ ಮೇರೆಗೆ ನಾನು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಾಚಲಪತಿ ರವರೊಂದಿಗೆ ಗುಡಿಬಂಡೆ ಪಟ್ಟಣದ ಮಾರುತಿ ಸರ್ಕಲ್ ಬಳಿ ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ 5-15 ಗಂಟೆಯಲ್ಲಿ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಪಂಚರೊಂದಿಗೆ ತಾವು ಮರೆಯಲ್ಲಿ ನೋಡಲಾಗಿ, ಸಂತೇ ಬೀದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಲೋಟದಲ್ಲಿ ಹಾಕುತ್ತಾ, ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ನಾವುಗಳು ಸದರಿಯವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರಲ್ಲಿ ಒಬ್ಬನು ವಶಕ್ಕೆ ದೊರೆತು ಉಳಿದವರು ಓಡಿ ಹೋದರು. ವಶದಲ್ಲಿದ್ದವನನ್ನು ಹೆಸರು & ವಿಳಾಸ ಕೇಳಲಾಗಿ ವೆಂಕಟೇಶ ಬಿನ್ ದೊಡ್ಡ ವೇಂಕಟೇಶಪ್ಪ 30 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ವಾಸ-ಸೋಮಲಾಪುರ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಲೈಸೆನ್ಸ್ ಇಲ್ಲವೆಂದು ತಿಳಿಸಿದ್ದು, ಸ್ಥಳದಿಂದ ಓಡಿ ಹೋದವರ ಬಗ್ಗೆ ಕೇಳಲಾಗಿ ಅವರ ಹೆಸರು & ವಿಳಾಸ ತನಗೆ ತಿಳಿದಿಲ್ಲವೆಂದು ತಿಳಿಸಿದ್ದು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಓಪನ್ ಮಾಡದೇ ಇರುವಂತಹವು 21 ಟೆಟ್ರಾ ಪಾಕೆಟ್ಗಳು ಇದ್ದು, ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಒಟ್ಟು 4 ಖಾಲಿ ಪಾಕೆಟ್ ಗಳಿದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು 1890 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ 633 ರೂ ಆಗಿದ್ದು, ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 5-15 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ಜರುಗಿಸಿದ ಪಂಚನಾಮೆ ಕಾಲದಲ್ಲಿ  ಅಮಾನತ್ತುಪಡಿಸಿಕೊಂಡು, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-20 ಗಂಟೆಯಲ್ಲಿ ಹಾಜರುಪಡಿಸಿ ಸದರಿ ಆರೋಪಿ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿರುವುದು ಆಗಿರುತ್ತೆ.

14) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 41/2019 ಕಲಂ. 420 ಐಪಿಸಿ :-

     ದಿನಾಂಕ:12-04-2019 ರಂದು ಪಿರ್ಯಾಧಿದಾರರಾದ ಟಿ.ಭಾರ್ಗವೇಂದ್ರ ಬಿನ್ ಶ್ರೀನಿವಾಸಲು, 38 ವರ್ಷ, ಬಲಜಿಗರು, ಜಿರಾಯ್ತಿ ಮತ್ತು ಟ್ರಾಕ್ಟರ್ ವ್ಯಾಪಾರ, ಮುರಗಮಲ್ಲಾ ಗ್ರಾಮ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಮುರುಗಮಲ್ಲಾ ಗ್ರಾಮದ ಸರ್ಕಾರಿ ಕ್ವಾರ್ಟಸ್ ನಲ್ಲಿ ವಾಸವಾಗಿರುವ ಕಾಂತಮ್ಮ ಕೋಂ ರಘುನಾಥ್ ,55 ವರ್ಷ, ರವರು ಜನವರಿ ತಿಂಗಳಲ್ಲಿ ತನಗೆ ಮನೆಗೆ ಕರೆಸಿ ನನ್ನ ಬಳಿ ನೋಟು ಮಾಡುವವರು ಪರಿಚಯ ಇದ್ದಾರೆ. ನೀನು ಅವರನ್ನು ಸಂಪರ್ಕಸಿದರೆ,ನೀನು ಇನ್ನೂ ಶ್ರೀಮಂತನಾಗಬಹುದೆಂದರು. ಅದಕ್ಕೆ ತಾನು ಒಪ್ಪಲಿಲ್ಲ, ಮಾರನೇ ದಿವಸವೇ ಅವರ ಮನೆಗೆ ಕರೆಸಿ ಅವರನ್ನು ಮತ್ತು ತನ್ನನ್ನು ಕರೆಸಿ 500 ರೂ ಮುಖ ಬೆಲೆಯ ಎರಡು ನೋಟುಗಳನ್ನು ಮಾಡಿ ತೋರಿಸಿದರು. ನಂತರ ತನ್ನ ನಂಬರ್ ನ್ನು ಅವರಿಗೆ ಕೊಟ್ಟಿದ್ದರು. ಅವರು ಹಲವಾರು ಬಾರಿ ಅವರು (ಮೊಬೈಲ್ ಸಂಖ್ಯೆ:9014307219 ಮೊದಲ ಬಾರಿ ಜನವರಿ ತಿಂಗಳಲ್ಲಿ 9121352976 ನಿರಂತರ ಕರೆಗಳು ಲಭ್ಯವಿದ್ದ ಮೊಬೈಲ್ ನಂಬರ್,ಹೆಚ್ಚುವರಿಯಾಗಿ ಬಳಕೆ ಮಾಡಿದ ಸಂಖ್ಯೆ:8142554213 ಹಾಗೂ 9703221461 ಇದು ಇನ್ನೊಬ್ಬ ವಂಚಕ ಮೊಬೈಲ್ ಸಂಖ್ಯೆಯಾಗಿದ್ದು) ತನ್ನ ನಂಬರಿಗೆ ಕರೆ ಮಾಡಿ ಇದರ ಬಗ್ಗೆ ಪೀಡಿಸುತ್ತಿದ್ದರು. ಅದಕ್ಕೆ ಸಂಬಂಧಿಸಿದ ಮೊಬೈಲ್ ನಲ್ಲಿ ರೆಕಾರ್ಡ ಸಹಾ ತನ್ನ ಬಳಿ ಇದೆ. ತನಗೆ ಈ ಹಣದ ವಿಚಾರವಾಗಿ ಪದೇ ಪದೇ ಮೊಬೈಲ್ ಕರೆ ಬಂದರು ತಾನು ತನ್ನ ತಲೆಗೆ ಹಾಕಿಕೊಳ್ಳಲಿಲ್ಲ, ಆದರೂ ಅವರು ಏಕಾಏಕಿ ದಿನಾಂಕ:04-04-2019 ರಂದು ಮುರುಗಮಲ್ಲಾ ಗ್ರಾಮಕ್ಕೆ ಬಂದು ಅವರು ತನಗೆ ಪೋನ್ ಮಾಡಿ ನಾವು ಮುರುಗಮಲ್ಲಾದಲ್ಲಿ ಇದ್ದೇವೆಂದು ತಿಳಿಸಿದರು. ತನಗೆ ದಿಕ್ಕು ತೋಚದೆ ಬೇಸರಗೊಂಡು ಅವರನ್ನು ಭೇಟಿ ಮಾಡಿದಾಗ ಅವರ ತಂಡದಲ್ಲಿ ಮೂವರು ವ್ಯಕ್ತಿಗಳು ಇದ್ದರು. ಅವರ ಹೆಸರು ರಮೇಶ್ ರೆಡ್ಡಿ, ಪ್ರಸಾದ್ ಮತ್ತು ಕೇಶವರೆಡ್ಡಿ ಎಂದು ಸದರಿಯವರು ಮೊದಲಿನಿಂದಲೂ ತನ್ನ ಬಳಿ ಮಾತನಾಡುತ್ತಿದ್ದವರಾಗಿದ್ದರು. ನಂತರ ತಾನು ಅವರಿಗೆ ಮುರುಗಮಲ್ಲಾ ಲಾಡ್ಜ್ ಒಂದರಲ್ಲಿ ರೂಮ್ ನ್ನು ಮಾಡಿ, ಅವರ ಬಳಿ ಸ್ವಲ್ಪ ಹೊತ್ತು ಈ ವಿಷಯದ ಬಗ್ಗೆ ತಾನು ಮಾತನಾಡಿದೆನು. ಆ ಸಮಯದಲ್ಲಿ ತನಗೆ ಏನು ಮಾಡಿದರೋ ಏನೋ ತನಗೆ ಗೊತ್ತಾಗದ ರೀತಿಯಲ್ಲಿ ಅವರು ಹೇಳುವ ಎಲ್ಲಾ ಮಾತಿಗೂ ತಾನು ಮರುಳಾಗತೊಡಗಿದೆ. ದಿನಾಂಕ:05-04-2019 ರಂದು ಸಮಯ ಸುಮಾರು 02-30 ಗಂಟೆಗೆ ಮಧ್ಯಾಹ್ನ ತನ್ನ ಮನೆಗೆ ಕರೆದುಕೊಂಡು ಹೋದೆ ತನ್ನಿಂದ 5,50,000 ರೂ (ಐದುಲಕ್ಷ ಐವತ್ತು ಸಾವಿರ) ಪಡೆದು, ಇದರ ದುಪ್ಪಟ್ಟು ನಿನಗೆ ಮಾಡಿಕೊಡುತ್ತೇವೆಂದರು. ಆಗ ಅವರು ತಂದಿರುವಂತಹ ಎಲ್ಲಾ ವಸ್ತುಗಳನ್ನು ತಮ್ಮ ಮನೆಯ ಮಹಡಿ ಮೇಲೆ ಹೋಗಿ ತೋರಿಸಿ, ನೀನು ಆದಷ್ಟು ಬೇಗನೆ ಹಣ ತಂದು ಕೊಟ್ಟರೆ,ದುಪ್ಪಟ್ಟು ಮಾಡಿಕೊಡುವುದಾಗಿ ಆಮಿಷವೊಡ್ಡಿದ್ದರು. ಆಗ ಟ್ರಾಕ್ಟರ್ ಮಾರಿರುವ ಹಣ ಹಾಗೂ ಬ್ಯಾಂಕ್ ಖಾತೆಯಿಂದ ತನ್ನ ಹಾಗೂ ತನ್ನ ಭಾವಮೈದನ ಖಾತೆಯಿಂದ ಹಣ ತಂದು ಕೊಟ್ಟಿದ್ದು ಸರಿಯಷ್ಠೇ ಇದಾದ ನಂತರ ಅವರು ತಾನು ತಂದು ಕೊಟ್ಟ ಹಣವನ್ನೆಲ್ಲ ಪ್ಯಾಕ್ ಮಾಡಿ ಅವರು ತಂದಿರುವಂತಹ ಎಲ್ಲಾ ಸಾಮಾಗ್ರಿಗಳನ್ನು ಉಪಹೋಗಿಸಿ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ನಾವು ಲಾಡ್ಜ್ ಗೆ ಹೋಗಿ ರೆಸ್ಟ್ ತೆಗೆದುಕೊಳ್ಳುತ್ತೇನೆಂದು ಹೇಳಿ ಅವರು ತನ್ನ ಬಳಿ ಇದ್ದಂತಹ ಹಣವನ್ನು ಪ್ಯಾಕ್ ಮಾಡಿ ತನ್ನ ಬಳಿಯೇ ಕೊಟ್ಟಿದ್ದರು. ನಂತರ ಸಮಯ ಸಂಜೆ 07-00 ಗಂಟೆಗೆ ಪ್ರೂಪ್ ಪರಿಶೀಲನೆಗಾಗಿ ಮನೆಗೆ ಹೋದೆವು ನಂತರ ಪ್ಯಾಕ್ ಮಾಡಿದ್ದ ಹಣವನ್ನು ತೆರೆದು ಪರಿಶೀಲನೆ ನಡೆಸಿದರು ನಂತರ ಇದು ಇನ್ನೂ ಮಾದರಿಯಾಗಿಲ್ಲವೆಂದು ತಮಗೆ ನಂಬಿಸಿ,ಒಂದು ಲೋಟ ಬಿಸಿ ನೀರು ತರುವಂತೆ ಹೇಳಿದರು. ತಾನು ನೀರು ತರಲು ಹೋದಾಗ ಇದೇ ರೀತಿ ಪ್ಯಾಕ್ ಮಾಡಿದಂತಹ ಮತ್ತೊಂದು ಪ್ಯಾಕ್ ನ್ನು ಆ ಸ್ಥಳದಲ್ಲಿಟ್ಟು, ನಿಜವಾದ ಹಣ ಪ್ಯಾಕ್ ನ್ನುಪಡೆದುಕೊಂಡಿರುತ್ತಾರೆ. ಆದರೆ ತನ್ನ ಗಮನವನ್ನು ಬೇರೆಡೆ ಸೆಳೆದು ಈ ರೀತಿ ಮಾಡಿರುತ್ತಾರೆ. ನಂತರ ಬಂದು ಇನ್ನು ಬೆಳಗಿನ ಜಾವದವರೆಗೆ ಇರಲಿ ಎಂದು ಲಾಡ್ಜ ಗೆ ಹೋಗಿದ್ದು, ಸ್ವಲ್ಪ ಸಮಯದ ನಂತರ ತಾನು  ಊಟ ವಿಚಾರವಾಗಿ ಮಾತನಾಡಲು ಹೋಗಿ ನೋಡಿದಾಗ ಅವರುಗಳು ಅಲ್ಲಿಂದ ಪರಾರಿಯಾಗಿರುವುದು ಬೆಳಕಿಗೆ ಬಂತು. ತಾನು ಅವರ ಮೊಬೈಲ್ ಕರೆ ಮಾಡಿದಾಗ ಅವರು ತನ್ನ ಕರೆಯನ್ನು ಸ್ವೀಕರಿಸಲಿಲ್ಲ.ನಂತರ ತನಗೆ ಸ್ವಲ್ಪ ಅನುಮಾನ ಬಂದು ಗಾಬರಿಯಿಂದ ತಾನು ಮನಗೆ ತೆರಳಿ ತನ್ನ ಬಳಿ ಇದ್ದಂತಹ ಪ್ಯಾಕ್ ನ್ನು ತೆಗೆದು ನೋಡಿದರೆ ಮೋಸ ಹೋಗಿರುವುದು ತನಗೆ ಗೊತ್ತಾಯಿತು.ತಕ್ಷಣ ಅವರ ಮೊಬೈಲ್ ಗೆ ಮತ್ತೊಮ್ಮೆ ಕರೆ ಮಾಡಿದಾಗಲೂ ಸಹ ಕರೆಯನ್ನು ಸ್ವೀಕರಿಸಲಿಲ್ಲ. ಸದರಿಯವರು ಇರುವ ಬಗ್ಗೆ ಹುಡಕಾಡುತ್ತಿದ್ದರಿಂದ  ಈ ದಿನ ತಡವಾಗಿ ದೂರು ನೀಡುತ್ತಿದ್ದು, ತನಗೆ ಮೋಸಮಾಡಿರುವ ಮೇಲ್ಕಂಡ ವಂಚಕರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾಧು.

15) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 76/2019 ಕಲಂ. 279,337,304(ಎ) ಐಪಿಸಿ :-

     ದಿನಾಂಕ 11/04/2019 ರಂದು ಸಂಜೆ 4-30 ಗಂಟೆಗೆ ಪಿರ್ಯಾಧಿ ಮಂಚೇನಹಳ್ಳಿ ಗ್ರಾಮದ ವಾಸಿಯಾದ ಮೌಲಾನಾ ಬಿನ್ ಅಬ್ದುಲ್ ಸುಭಾನ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ಚಿಕ್ಕಮ್ಮನ ಮಗಳಾದ ಆಲೀಯಾ ಕೌಸರ್ ಬಿನ್ ಶಫಿವುಲ್ಲಾ, 12 ವರ್ಷ ರವರಿಗೆ ಶಾಲೆ ರಜೆ ಇರುವುದರಿಂದ ನಮ್ಮ ಮನೆಗೆ ಬಂದಿದ್ದರು. ಈ ದಿನ ದಿನಾಂಕ: 11/04/2019 ರಂದು ಮದ್ಯಾಹ್ನ ಸುಮಾರು 1-00 ಗಂಟೆಗೆ ಕಂಬತ್ತನಹಳ್ಳಿ ಗ್ರಾಮಕ್ಕೆ ಪ್ರಾರ್ಥನೆ ಮಾಡಿಸುವ ಸಲುವಾಗಿ ನಾನು ಹಾಗೂ ನಮ್ಮ ಚಿಕ್ಕಮ್ಮನ ಮಗಳಾದ ಆಲೀಯಾ ಕೌಸರ್ ರವರು ಕಂಬತ್ತನಹಳ್ಳಿ ಗ್ರಾಮಕ್ಕೆ ನನ್ನ ಬಾಬತ್ತು ಏಂ-40-ಇಅ-2066 ದ್ವಿ ಚಕ್ರ ವಾಹನದಲ್ಲಿ ಹೋಗಿ ಪ್ರಾರ್ಥನೆ ಮುಗಿಸಿಕೊಂಡು ನಂತರ ಮೇಲ್ಕಂಡ ನನ್ನ ಬಾಬತ್ತು ದ್ವಿ ಚಕ್ರ ವಾಹದನಲ್ಲಿ ನನ್ನ ಚಿಕ್ಕಮ್ಮನ ಮಗಳಾದ ಆಲೀಯಾ ಕೌಸರ್ ರವರನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ವಾಪಸ್ ಮನೆಗೆ ಹೋಗಲು ಮಂಚೇನಹಳ್ಳಿ ಗ್ರಾಮಕ್ಕೆ ಬಂದಿದ್ದು ನನ್ನ ತಂಗಿ ಆಲೀಯಾ ಕೌಸರ್ ರವರು ಐಸ್ ಕ್ರೀಂ ಬೇಕೆಂದು ಕೇಳಿದಾಗ ಐಸ್ ಕ್ರೀಂ ತೆಗೆದುಕೊಳ್ಳಲು ಮಂಚೇನಹಳ್ಳಿ ಗೌರಿಬಿದನೂರು ರಸ್ತೆಯಲ್ಲಿ ಮದ್ಯಾಹ್ನ ಸುಮಾರು 2-30 ಗಂಟೆಯ ಸಮಯದಲ್ಲಿ ಮಂಚೇನಹಳ್ಳಿ ಗ್ರಾಮದ ತೊಂಡೆಬಾವಿ ಸರ್ಕಲ್ ಬಳಿ ಹೋಗುತ್ತಿದ್ದಾಗ ಮಧು ಬೇಕರಿಯ ಮುಂಭಾಗ ಚಿಕ್ಕಬಳ್ಳಾಪುರ ಕಡೆಯಿಂದ ಬಂದಂತಹ ಕೆಎ01-ಎಹೆಚ್-7145 ರ  ನೊಂದಣಿ ಸಂಖ್ಯೆಯ ಕ್ಯಾಂಟರ್ನ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದರ ಪರಿಣಾಮ ನಾನು ಮತ್ತು ನನ್ನ ತಂಗಿ ಆಲೀಯಾ ಕೌಸರ್ ರವರು ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು ನಾನು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದರಿಂದ ನನಗೆ ಎಡ ಮೊಣ ಕೈಗೆ, ಎಡ ಕಾಲಿಗೆ ಮತ್ತು ಎಡ ಸೊಂಟದ ಬಳಿ ಮೂಗೇಟುಗಳಾಗಿದ್ದು, ನನ್ನ ತಂಗಿ ಆಲೀಯಾ ಕೌಸರ್ ರವರು ರಸ್ತೆಯಲ್ಲಿ ಬಿದಿದ್ದರಿಂದ ಕ್ಯಾಂಟರ್ ವಾಹನದ ಚಕ್ರ ನನ್ನ ತಂಗಿಯ ತಲೆಯ ಮೇಲೆ ಹರಿದು ನನ್ನ ತಂಗಿಯ ತಲೆಗೆ ರಕ್ತಗಾಯಗಳಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ. ನನಗೆ ಮೂಗೇಟುಗಳಾಗಿದ್ದರಿಂದ ನಾನು ಆಸ್ಪತ್ರೆಯಲ್ಲಿ ಇಲಾಜು ಪಡೆದಿರುವುದಿಲ್ಲ, ಈ ಅಪಘಾತಕ್ಕೆ ಕೆಎ01-ಎಹೆಚ್-7145 ರ   ಕ್ಯಾಂಟರ್ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೆ ಕಾರಣವಾಗಿರುತ್ತದೆ, ಆರೋಪಿಯ ವಿರುದ್ದ ಕ್ರಮ ಜರುಗಿಸಲು ಕೋರಿ ನೀಡಿದ ದೂರಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

16) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 77/2019 ಕಲಂ. . 78(1),(ಎ),(4),(6) ಕೆ.ಪಿ. ಆಕ್ಟ್ :-

     ದಿನಾಂಕ 11/04/2019 ರಂದು ಸಂಜೆ 05-15 ಗಂಟೆಗೆ ಘನ ನ್ಯಾಯಾಲಯ ಕರ್ತವ್ಯದ ಹೆಚ್-ಸಿ 137 ರವರು ಠಾಣೆಗೆ ಹಾಜರಾಗಿ ಪ್ರಕರಣ ದಾಖಲುಮಾಡಿಕೊಳ್ಳಲು ಘನ ನ್ಯಾಯಾಲಯದಲ್ಲಿ ಅನುಮತಿಯನ್ನು ಪಡೆದುದ್ದನ್ನು ತಂದು ಹಾಜರುಪಡಿಸಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ದಿನಾಂಕ 11/04/2019 ರಂದು ಪಿರ್ಯಾದಿದಾರರಾದ ಹೆಚ್.ಸಿ.59 ಶ್ರೀನಿವಾಸಪ್ಪ ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:11/04/2019 ರಂದು ಬೆಳಿಗ್ಗೆ 8-45 ಗಂಟೆಯ ಸಮಯದಲ್ಲಿ ಠಾಣೆಯಲ್ಲಿರುವಾಗ ಅಲ್ಲೀಪುರ ಗ್ರಾಮದ ಸರ್ಕಲ್ ಬಳಿ ಒಬ್ಬ ಅಸಾಮಿ ಸಾರ್ವಜನಿಕವಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 70/- ರೂಪಾಯಿಗಳು ಕೊಡುತ್ತಿರುವುದಾಗಿ ಆಮೀಷ ತೋರಿಸಿ ಮಟ್ಕ ಚೀಟಿ ಬರೆದು ಕೊಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಶ್ರೀ ಚಿಕ್ಕಣ್ಣ ಪಿಸಿ-532 ರವರು ಹಾಗೂ ಪಂಚರೊಂದಿಗೆ ದ್ವಿಚಕ್ರವಾಹನಗಳಲ್ಲಿ ಅಲ್ಲೀಪುರ ಗ್ರಾಮದ ಸರ್ಕಲ್ ಬಳಿ ಹೋಗಿ ದ್ವಿಚಕ್ರವಾಹನಗಳನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸೂಕ್ಷ್ಮವಾಗಿ ಗಮನಿಸಲಾಗಿ ಯಾರೋ ಒಬ್ಬ ಅಸಾಮಿ ಸಾರ್ವಜನಿಕವಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 70/-ರೂಪಾಯಿಗಳು ಕೊಡುತ್ತಿರುವುದಾಗಿ ಆಮೀಷ ತೋರಿಸುತ್ತಾ ಮಟ್ಕ ಚೀಟಿ ಬರೆದುಕೊಡುತ್ತಿದ್ದನು, ಮಟ್ಕಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿ ಮತ್ತು ಪಂಚರೊಂದಿಗೆ ಸದರಿ ಅಸಾಮಿಯ ಮೇಲೆ ದಾಳಿ ಮಾಡಿ ಸದರಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ವೇಣುಗೋಪಾಲ ಬಿನ್ ರಾಮರೆಡ್ಡಿ, 27 ವರ್ಷ, ವಕ್ಕಲಿಗರು, ಕೂಲಿ ಕೆಲಸ ವಾಸ ಅಲ್ಲೀಪುರ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತನನ್ನು ವಿಚಾರಣೆ ಮಾಡಲಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ ನಂಬರ್ ಹೊಡೆದರೆ 70 ರೂಪಾಯಿಗಳು ಕೊಡುತ್ತಿರುವುದಾಗಿ ಆಮೀಷ ತೋರಿಸಿ ಮಟ್ಕಾ ಚೀಟಿ ಬರೆದುಕೊಟ್ಟು ಹಣವನ್ನು ಪಡೆದುಕೊಳ್ಳುತ್ತಿದ್ದೆನು ಎಂದು ತಿಳಿಸಿದನು. ಪಂಚನಾಮೆಯ ಮೂಲಕ ತನ್ನ ಬಳಿ ದೊರೆತ ಮಟ್ಕಾ ಚೀಟಿ ಬರೆದುಕೊಟ್ಟು ಬಂದಂತಹ ನಗದು ಹಣ ರೂ.1350/- ( ಒಂದು ಸಾವಿರದ ಮೂರು ನೂರ ಐವತ್ತು ರೂಪಾಯಿಗಳು ಮಾತ್ರ.) ನೀಲಿ ಬಣ್ಣದ ಒಂದು ಬಾಲ್ ಪೆನ್ನನ್ನು ಬೆಳಿಗ್ಗೆ 9-30 ಗಂಟೆಯಿಂದ ಬೆಳಿಗ್ಗೆ 10-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಮಾಲನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ದೂರು ನೀಡಿತ್ತಿದ್ದು ಸದರಿ ದೂರಿನ ಮೇರೆಗೆ ಠಾಣಾ ಎನ್.ಸಿ. ಆರ್ ನಂಬರ್ 127/2019 ರಂತೆ ಪ್ರಕರಣ ದಾಖಲಾಗಿದ್ದು ನಂತರ ಠಾಣಾ ಮೊ,ಸಂ, 77/2019, ಕಲಂ, 78 ಕ್ಲಾಸ್ (1)(A)(IV)AND (VI) ರಂತೆ ಪ್ರಕರಣವನ್ನು ದಾಖಲುಮಾಡಿಕೊಂಡಿರುತ್ತೆ.

17) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 77/2019 ಕಲಂ. 417,419,420,423,424,466 ಐಪಿಸಿ :-

     ದಿನಾಂಕ:11.04.2019 ರಂದು ಮದ್ಯಾಹ್ನ 3.00 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಪಿಸಿ  90 ರಾಜಕುಮಾರ ರವರು ನ್ಯಾಯಾಲಯದಿಂದ ತಂದು ಹಾಜರುಪಡಿಸಿದ ಪಿಸಿಆರ್ ಸಂಖ್ಯೆ 11/2019 ಅನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಶಿಡ್ಲಘಟ್ಟ ತಾಲ್ಲೂಕು ಹಂಡಿಗನಾಳ ಗ್ರಾಮ ಪಂಚಾಯ್ತಿ ಹನುಮಂತಪುರ ಗ್ರಾಮದ ಹೌಸ್ ಲೀಸ್ಟ್ ಸಂಖ್ಯೆ 108/1 ರಲ್ಲಿ ಪಿರ್ಯಾದಿದಾರರಾದ ದೊಡ್ಡನಾರಾಯಣಪ್ಪ ಬಿನ್ ಲೇಟ್ ಕೈವಾರಾಮಪ್ಪ ಹನುಮಂತಪುರ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು  24/10/1990 ರಲ್ಲಿ ಯರ್ರಪ್ಪ ಬಿನ್ ಕೈವಾರದಪ್ಪ ರವರಿಂದ ರಿಜಿಸ್ಟರ್ ಸೇಲ್ ಡಿಡ್ ಮೂಲಕ ಖರೀದಿ ಮಾಡಿಕೊಂಡಿದ್ದು ಪೂರ್ವ ಪಶ್ವಿಮ 28 ಮತ್ತು ಉತ್ತರ ದಕ್ಷಿಣ 40 ಅಡಿಗಳ ನಿವೇಶನ ಆಗಿದ್ದು ಅದರಲ್ಲಿ ಪೂರ್ವ ಪಶ್ಚಿಮ 15 ಅಡಿ ಮತ್ತು ಉತ್ತರ ದಕ್ಷಿಣ 32 ಅಡಿ ವಿಸ್ತೀರ್ಣದಲ್ಲಿ ರೇಷ್ಮೆ ಪ್ಯಾಕ್ಟರಿ ಮಾಡಿಕೊಂಡಿದ್ದು ಅದರ ದಕ್ಷಿಣಕ್ಕೆ 8 ಅಡಿ ಖಾಲಿ ಜಾಗ ಇದ್ದು ಅದರಲ್ಲಿ ರೇಷ್ಮೆಗೆ ಸಂಬಂದಿಸಿದ ನಿರುಪಯುಕ್ತ ವಸ್ತುಗಳನ್ನು ಹಾಕಿರುತ್ತಾರೆ. ಈಗಿರುವಲ್ಲಿ ಅರೋಪಿಗಳಾದ ನರಸಿಂಹಪ್ಪ@ನರಸಿಂಹಮೂರ್ತಿ ಬಿನ್ ಸುಬ್ಬಣ@ಸುಬ್ಬಣ್ಣ, ಚೆನ್ನಮ್ಮ ಮತ್ತು ವೆಂಕಟಲಕ್ಷ್ಮಮ್ಮ ರವರುಗಳು ಪಿರ್ಯಾದಿದಾರರ ಮೇಲೆ ಸದರಿ ಮೇಲ್ಕಂಡ ನಿವೇಶನದ ವಿಚಾರದಲ್ಲಿ ಓಎಸ್ ನಂ 347/2017 ರಂತೆ ಸಿವಿಎಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಕೇಸು ನಡೆಯುತ್ತಿರುತ್ತೆ. ದಿನಾಂಕ:09/03/2016 ರಂದು ಪಿರ್ಯಾದಿದಾರರು ಹಂಡಿಗನಾಳ ಗ್ರಾಮ ಪಂಚಾಯ್ತಿಯಿಂದ ಸದರಿ ಮೇಲ್ಕಂಡ ನಿವೇಶನದಲ್ಲಿ ಮನೆ ಕಟ್ಟಲು ಪರವಾನಿಗೆಯನ್ನು ಪಡೆದುಕೊಂಡಿರುತ್ತಾರೆ. ಈಗಿರುವಲ್ಲಿ 1 2 ಮತ್ತು 3 ನೇ ಅರೋಪಿಗಳು 4 ಮತ್ತು 5 ಅರೋಪಿಗಳ ಮೂಲಕ ಹಂಡಿಗನಾಳ ಗ್ರಾಮ ಪಂಚಾಯ್ತಿಯಲ್ಲಿ ಸರ್ಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಹೌಸ್ ಲೀಸ್ಟ್ ನಂ 107 ಪೂರ್ವ ಪಶ್ಚಿಮ 22 ಅಡಿ ಉತ್ತರ ದಕ್ಷಿಣ 23 ಅಡಿ ಅನ್ನು ಹೌಸ್ ಲೀಸ್ಟ್ ನಂ 107/1 ಮತ್ತು 107/2 ರಂತೆ ಸರ್ಕಾರಿ ದಾಖೆಲೆಗಳನ್ನು ತಿದ್ದುಪಡಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಎ2 ಮತ್ತು ಎ3 ರವರುಗಳಿಗೆ ಹೆಚ್ಚುವರಿಯಾಗಿ ಖಾತೆಗಳನ್ನು ಪೂರ್ವ ಪಶ್ಚಿಮ 15 ಅಡಿ ಮತ್ತು ಉತ್ತರ ದಕ್ಷಿಣ 30 ಅಡಿ ರೀತಿಯ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ತನ್ನ ನಿವೇಶನದ ಜಾಗಕ್ಕೆ ತೊಂದರೆಪಡಿಸಿ ಮೋಸ ಮಾಡಿದ್ದು ಕಾನೂನು ರೀತಿಯ ಕ್ರಮ ಜರುಗಿಸುವಂತೆ ಇದ್ದ ಸಾರಾಂಶದ ಮೇರೆಗೆ ಠಾಣಾ ಮೊ.ಸಂ 77/2019 ಕಲಂ 417,420,419,423,424,466 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.