ದಿನಾಂಕ: 12-03-2019 ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 33/2019 ಕಲಂ. 7,13(1) PREVENTION OF CORRUPTION ACT :-

     ದಿನಾಂಕ 12-03-2019 ರಂದು ಮದ್ಯಾಹ್ನ 2-30 ಗಂಟೆಗೆ ಗೃಹ ರಕ್ಷಕ ದಳದ ಸಿಬ್ಬಂದಿಯಾದ ಹೆಚ್ ಜಿ 51 ಅನಂದ ಎಂಬುವರು ಠಾಣೆಗೆ ಹಾಜರಾಗಿ  ಟೈಪ್ ಮಾಡಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಎರಡು ವರ್ಷಗಳಿಂದ ಗೃಹ ರಕ್ಷಕ ನಾಗಿ ಕೆಲಸ ಮಾಡಿಕೊಂಡಿದ್ದು. ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಕಛೇರಿಯ ನಿಸ್ತಂತು ಘಟಕ,  ಬಂಧಿಖಾನೆ, ನಂದಿ ಗಿರಿಧಾಮ ಠಾಣೆಗೆ ಕರ್ತವ್ಯಕ್ಕಾಗಿ ನೇಮಕ ಮಾಡಿದ್ದರು.  ಕರ್ತವ್ಯಕ್ಕೆ ನೇಮಕ ಮಾಡಲು ಡೆಪ್ಯೂಟಿ ಕಮಾಂಡೆಂಟ್ರಾದ ಎನ್.ವೆಂಕಟೇಶ ರವರು ಪ್ರತಿ ತಿಂಗಳಿಗೆ 2 ಸಾವಿರ ರೂಗಳಂತೆ ಹಣ ನೀಡಬೇಕೆಂದು ಬೇಡಿಕೆ ಇಟ್ಟು ಲಂಚದ ಹಣ ಪಡೆಯುತ್ತಿದ್ದನು. ತಾನು ಹಣ ನೀಡದೇ ಇದ್ದುದ್ದಕ್ಕಾಗಿ ಶಿಡ್ಲಘಟ್ಟ ಯೂನಿಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯವರಿಗೆ ಬಂಧಿಖಾನೆಗೆ ನೇಮಕ ಮಾಡಿರುತ್ತಾರೆ. ಅವನು ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುತ್ತಿರುವುದರಿಂದ ಸುಮಾರು 6 ತಿಂಗಳಿಂದ ಬಂಧಿಖಾನೆಯಲ್ಲಿಯೇ ಕರ್ತವ್ಯ ನಿರ್ವಹಿಸಿದ್ದು. ನನ್ನೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯವರಾದ ಗಂಗಾಧರ, ನಾರಾಯಣಸ್ವಾಮಿ.ವಿ,  ಅಶೋಕ ಶ್ರೀಮತಿ ಶೀಲಾ, ಶ್ರೀಮತಿ ಕೃಷ್ಣವೇಣಿ ರವರಿಂದ 10 ಸಾವಿರ ರೂಪಾಯಿ ಒಟ್ಟಾಗಿ ಕೊಟ್ಟಿದ್ದರಿಂದ  ಕರ್ತವ್ಯಕ್ಕೆ ನೇಮಿಸಿರುತ್ತಾರೆ. ಹೀಗೆ ಹಣ ನೀಡಿದರೆ ಮಾತ್ರ ಕರ್ತವ್ಯಕ್ಕೆ ನೇಮಕ ಮಾಡುವುದು ಇಲ್ಲದಿದ್ದರೆ ಕೆಲಸಕ್ಕೆ ತೆಗೆದುಕೊಳ್ಳದೇ ದುಡ್ಡು ಕೊಡುವವರನ್ನು ಮಾತ್ರ ಕೆಲಸದಲ್ಲಿ ಮುಂದುವರಿಸುವುದು ಮಾಡುತ್ತಿದ್ದು ತಾನು ಹಣ ನೀಡದಿದ್ದರಿಂದ ಪೇರೆಡ್ ಹಾಜರಾದ ಬಗ್ಗೆ ಹಾಜರಾತಿಯನ್ನು ನೀಡಿರುವುದಿಲ್ಲ. ಹಾಲಿ ಚಿಕ್ಕಬಳ್ಳಾಪುರ ಘಟಕದ ನಾಗಭೂಷಣ ರವರನ್ನು ತಾನು ಯಾಕೆ ಪೇರೆಡ್ ಗೆ ಹಾಜರಾಗಬಾರದು ಎಂದು ಕೇಳಿದ್ದಕ್ಕೆ ನೀವು ಡೆಪ್ಯೂಟಿ ಕಮಾಂಡೆಂಟ್ನ್ನು ನೋಡಿಕೊಂಡು ಬನ್ನಿ ಎಂದು ತಿಳಿಸಿದ್ದು ಇದರಿಂದ ತಾನು ಮತ್ತು ತೊಂದರೆಗೊಳಗಾದ ನಮ್ಮ ಗೃಹ ರಕ್ಷಕ ಸಿಬ್ಬಂದಿಯವರು ಹಲವಾರು ಬಾರಿ ಮೇಲಾಧಿಕಾರಿಗಳಿಗೆ ಅರ್ಜಿಗಳನ್ನು ಸಹ ಸಲ್ಲಿಸಿಕೊಂಡಿದ್ದು  ಆದರೂ ಸಹ ಡೆಪ್ಯೂಟಿ ಕಮಾಂಡೆಂಟ್ ರವರ ವಿರುದ್ದ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಇವರು ಯಾರ ಮಾತನ್ನು ಲೆಕ್ಕಿಸದೇ ಹಣಕ್ಕಾಗಿ ಸಿಬ್ಬಂದಿಯವರಿಗೆ ಪೀಡಿಸುತ್ತಾ ಹಣ ಪಡೆದು ಕರ್ತವ್ಯಗಳಿಗೆ ನೇಮಕ ಮಾಡುತ್ತಿದ್ದು,  ಮಹಿಳಾ ಗೃಹ ರಕ್ಷಕ ಸಿಬ್ಬಂದಿಯವರುಗಳಾದ ಶ್ರೀಮತಿ ಶೀಲಾ, ಶ್ರೀಮತಿ ಕೃಷ್ಣವೇಣಿ, ಶ್ರೀಮತಿ ಸುಮಿತ್ರಮ್ಮ, ಶ್ರೀಮತಿ ಕಾಮಾಕ್ಷಮ್ಮ ಹಾಗೂ ನಾರಾಯಣಸ್ವಾಮಿ ಪ್ರಭಾರ ಘಟಕಾಧಿಕಾರಿ ರವರಿಗೂ ಸಹ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳವನ್ನು ನೀಡುತ್ತಿದ್ದ ಬಗ್ಗೆ ದೂರುಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದು ಡೆಪ್ಯೂಟಿ ಕಮಾಂಡೆಂನಂಟ್ ಬೇಖಾದ ಸ್ಥಳಕ್ಕೆ ಕರ್ತವ್ಯಕ್ಕೆ ನಿಯೋಜನೆ ಮಾಡಲು ಗೃಹ ರಕ್ಷಕ ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸಿದ ಸಂಬಂಳ ಮಾಡಿಕೊಡುವ ಮುನ್ನ ಸಿಬ್ಬಂದಿಗಳಿದ್ದ ಕಛೇರಿಯಲ್ಲಿ ಹಲವಾರು ಬಾರಿ ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿ ತನ್ನ ಜೋತೆಯಲ್ಲಿ ಇದ್ದ ಸಿಬ್ಬಂದಿ ತಿಳಿಸಿರುತ್ತಾರೆ ಇವರು ಗೃಹ ರಕ್ಷಕ ಸಿಬ್ಬಂದಿಯವರಿಂದ ಒತ್ತಾಯ ಪೂರ್ವಕವಾಗಿ ಹಣ ಪಡೆದು ಕರ್ತವ್ಯಕ್ಕೆ ನೇಮಕ ಮಾಡಿ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಡೆಪ್ಯೂಟಿ ಕಂಮಾಂಡೆಂಟ್ ವೆಂಕಟೇಶ. ವಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಫ್ರ.ವ.ವರದಿ.

2) ಚಿಕ್ಕಬಳ್ಳಾಪುರ ಪುರ ಪೊಲೀಸ್ ಠಾಣೆ ಮೊ.ಸಂ. 42/2019 ಕಲಂ. ಮನುಷ್ಯ ಕಾಣೆ:-

     ದಿನಾಂಕ: 12/03/2019 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ರಾಧಕೃಷ್ಣ ಬಿನ್ ಎಸ್.ಕೆ.ನಾಗರಾಜು 33 ವರ್ಷವೈಶ್ಯರು, ಮೆಡಿಕಲ್ಸ್ ಅಂಗಡಿ, ವಾಸ ಅಪ್ಯಲ್ ಡೈಯಾಗ್ನೋಸ್ಟಿಕ್ ಸೆಂಟರ್ ಎದುರು ಸಿ.ಎಸ್.ಐ ಆಸ್ಪತ್ರೆ ರಸ್ತೆ, ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾನು ಮತ್ತು ಅನಿಲ್ ಕುಮಾರ್ ಇಬ್ಬರು ಮಕ್ಕಳಿದ್ದು ನಾನು 15 ವರ್ಷಗಳ ಹಿಂದೆ ಚಿಕ್ಕಬಳಾಳಪುರ ನಗರ ಬಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮುಂದೆ ಬಾಲಾಜಿ ಮೆಡಿಕಲ್ಸ್ ಇಟ್ಟುಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮ್ಮ ತಂದೆ ತಾಯಿ ರವರು ಯರ್ರಗುಂಟ ಗ್ರಾಮ, ಕುಂದುರ್ಪಿ ಮಂಡಳಂ, ಕಲ್ಯಾಣ ದುರ್ಗ ತಾಲ್ಲೂಕು, ಆನಂತಪುರ ಜಿಲ್ಲೆಯಲ್ಲಿ ವಾಸವಾಗಿರುತ್ತಾರೆ. ನನ್ನ ತಮ್ಮನಾದ ಅನಿಲ್ ಕುಮಾರ್ ಬಿನ್ ಎಸ್.ಕೆ.ನಾಗರಾಜು ರವರು ಈಗ್ಗೆ 1 ವರ್ಷದ ಹಿಂದೆ ಚಿಕ್ಕಬಳ್ಳಾಪುರ ನಗರಕ್ಕೆ ಬಂದು ನನ್ನ ಜೋತೆಯಲ್ಲಿಯೇ ವಾಸವಾಗಿದ್ದು, ಇವರು ಚಿಕ್ಕಬಳ್ಳಾಪುರ ನಗರ ಜಿಲ್ಲಾ ಸರ್ಕಾರಿ ಎದುರುಗಡೆ ಎಸ್.ಎಸ್.ವಿ ಮೆಡಿಕಲ್ & ಜನರಲ್ಸ್ ಸ್ಟೋರ್ ನ್ನು ಇಟ್ಟುಕೊಟ್ಟಿದ್ದು, ನೋಡಿಕೊಂಡು ಹೋಗತ್ತಿದ್ದರು. ದಿನಾಂಕ: 07/03/2019 ರಂದು ಸಂಜೆ 4-00 ಗಂಟೆಗೆ ಅಂಗಡಿಗೆ ಹೋಗುತ್ತೇನೆಂದು ಮನೆಯಲ್ಲಿ ತಿಳಿಸಿ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ. ನಾವು ಅವನ ಸ್ನೇಹಿತರನ್ನು, ಸಂಬಂದಿಕರ ಮನೆಯಲ್ಲಿ, ಎಲ್ಲಾ ಕಡೆ ಹುಡುಕಾಡಿದ್ದು ಇದುವೆರೆಗೆ ಪತ್ತೆಯಾಗಿರುವುದಿಲ್ಲ.ಆದ್ದರಿಂದ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು, ಕಾಣೆಯಾಗಿರುವ ನನ್ನ ತಮ್ಮನಾದ ಅನಿಲ್ ಕುಮಾರ್ ರವರನ್ನು ಹುಡುಕಿಕೊಡಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

3) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 61/2019 ಕಲಂ. 87 ಕೆ.ಪಿ. ಆಕ್ಟ್:-

     ದಿನಾಂಕ 11-03-2019 ರಂದು ಸಂಜೆ 6-45 ಗಂಟೆಗೆ ಶ್ರೀ ಶ್ರೀನಿವಾಸ್ ಕೆ, ಸಿಪಿಐ, ಚಿಂತಾಮಣಿ ಗ್ರಾಮಾಂತರ ವೃತ್ತ ರವರು ಠಾಣೆಗೆ ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ 11/03/2019 ರಂದು ಸಂಜೆ 4-15 ಗಂಟೆ ಸಮಯದಲ್ಲಿ ತಾನು ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಬಂದಾರ್ಲಹಳ್ಳಿ ಗ್ರಾಮ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಅಕ್ರಮವಾಗಿ ಕೋಳಿ ಪಂದ್ಯವನ್ನಾಡುತ್ತಿರುವುದಾಗಿ ಖಚಿತ ಬಾತ್ಮೀ ಬಂದಿದ್ದು, ಅದರಂತೆ ತಾನು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂಧಿ ಹಾಗು ಪಂಚಾಯ್ತಿದಾರರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಮೇಲ್ಕಂಡ ಬಂದಾರ್ಲಹಳ್ಳಿ ಗ್ರಾಮದ ಸರ್ಕಾರಿ ಕೆರೆಯ ಬಳಿ ಹೋಗಿ ಅಕ್ರಮವಾಗಿ ಸರ್ಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಕೋಳಿ ಪಂದ್ಯವನ್ನಾಡುತ್ತಿದ್ದ ಆಸಾಮಿಗಳ ಮೇಲೆ ದಾಳಿ ಮಾಡಲಾಗಿ ವಿಜಯ್ ಕುಮಾರ್ ಬಿನ್ ವೆಂಕಟೇಶಪ್ಪ, ಪ ಜಾತಿ, ವಾಸ-ಕನ್ನಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು, 2) ಬಿಟ್ಟಿಗಾನಹಳ್ಳಿ ಗ್ರಾಮದ ವಾಸಿ ಚಿನ್ನಪ್ಪಯ್ಯ, 3) ಬಿಟ್ಟಿಗಾನಹಳ್ಳಿ ಗ್ರಾಮದ ವಾಸಿ ಚಂದ್ರ, 4) ಮಂಗಾಳಪಲ್ಲಿ ಗ್ರಾಮದ ವಾಸಿ ನಾರಾಯಣಸ್ವಾಮಿ, 5) ಟಿ.ಹೊಸೂರು ಗ್ರಾಮದ ವಾಸಿ ಗೋಪಾಲ್ ಎಂಬ 5 ಜನ ಆಸಾಮಿಗಳು ಓಡಿ ಹೋಗಿದ್ದು ಸ್ಥಳದಲ್ಲಿ 1) ರಾಮಪ್ಪ ಬಿನ್ ಲೇಟ್ ಬೊಮ್ಮಪ್ಪ, 45 ವರ್ಷ, ಗೊಲ್ಲರು, ಜಿರಾಯ್ತಿ, ವಾಸ-ಬಂದಾರ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 2) ರೆಡ್ಡಪ್ಪ ಬಿನ್ ಗೋಪಾಲಪ್ಪ, 56 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ರಾಚಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು, 3) ದೊಡ್ಡವೀರಭದ್ರೇಗೌಡ ಬಿನ್ ಹುಲ್ಲಪ್ಪ, 68 ವರ್ಷ, ವಕ್ಕಲಿಗರು, ವಾಸ-ತೆರ್ನಹಳ್ಳಿ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ ರವರನ್ನು ವಶಕ್ಕೆ ಪಡೆದುಕೊಂಡು, ಕೋಳಿ ಪಂದ್ಯಕ್ಕೆ ಪಣವಾಗಿಟ್ಟಿದ್ದ 1200 ರೂ ನಗದು ಹಣವನ್ನು, 2 ಕೋಳಿ ಹುಂಜಗಳನ್ನು ಹಾಗು ಆರೋಪಿಗಳು ಕೋಳಿ ಪಂದ್ಯವನ್ನಾಡಲು ಬಂದಿದ್ದ 2 ದ್ವಿ ಚಕ್ರ ವಾಹನಗಳನ್ನು ಸಂಜೆ 5-15 ಗಂಟೆಯಿಂದ ಸಂಜೆ 6-15 ಗಂಟೆಯವರೆಗೆ ದಾಳಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಸಂಜೆ 6-45 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮೇಲ್ಕಂಡ ಮಾಲುಗಳನ್ನು, ಅಸಲು ಪಂಚನಾಮೆಯನ್ನು ಹಾಗು 3 ಜನ ಆಸಾಮಿಗಳನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಅಕ್ರಮವಾಗಿ ಕೋಳಿ ಪಂದ್ಯವನ್ನಾಡುತ್ತಿದ್ದ 8 ಜನ ಆಸಾಮಿಗಳ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.

4) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 63/2019 ಕಲಂ. 323-324-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ:12/03/2019 ರಂದು ಮದ್ಯಾಹ್ನ 2-00 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಲಕ್ಷ್ಮಿದೇವಮ್ಮ ಕೋಂ ಈರಪ್ಪ, 38 ವರ್ಷ, ಪ.ಜಾತಿ, ವಾಸ ನಲ್ಲರಾಳ್ಳಹಳ್ಳಿ ಕ್ರಾಸ್ ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೇ, ನಮ್ಮ ಮನೆಯ ಪಕ್ಕದಲ್ಲಿ ನಲ್ಲರಾಳ್ಳಹಳ್ಳಿ ಗ್ರಾಮದ ಅಪ್ಪಿರೆಡ್ಡಿ ರವರ ಜಮೀನು ಇದ್ದು ಸದರಿ ಜಮೀನಿನ ಪೈಕಿ ಒಂದು ಗುಂಟೆ ಜಮೀನು ಅಪ್ಪಿರೆಡ್ಡಿ ರವರು ದಾನವಾಗಿ ನೀಡಿರುತ್ತಾರೆ. ಸದರಿ ಜಮೀನಿಗೆ ಸಂಬಂಧಿಸಿದಂತೆ ದಾಖಲೆಗಳು ಇರುವುದಿಲ್ಲ. ತಾನು 30 ವರ್ಷದಿಂದ ಅನುಭವದಲ್ಲಿದ್ದು,ಮೇಲ್ಕಂಡ ಜಮೀನಿನ ವಿಚಾರದಲ್ಲಿ ನನಗೂ ಮತ್ತು ಬೋಡನಮರಿ ಗ್ರಾಮದ ಸೀನಪ್ಪ ರವರಿಗೂ ತಕರಾರಿದ್ದು ಮಿಂಡಗಲ್ ಪಂಚಾಯ್ತಿ ಕಛೇರಿಯಲ್ಲಿ ದಾಖಲಾತಿಗಳನ್ನು ನೀಡಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದು, ಈ ಸಂಬಂಧ 20 ದಿನಗಳ ಹಿಂದೆ ನಮ್ಮ ಗ್ರಾಮದಲ್ಲಿ ಹಿರಿಯರು ಸೇರಿ ನ್ಯಾಯ ಪಂಚಾಯ್ತಿ ಮಾಡಿದ್ದು, ಪಂಚಾಯ್ತಿಯಲ್ಲಿ ಯಾವುದೇ ತೀರ್ಮಾನವಾಗಿರುವುದಿಲ್ಲ. ಹೀಗಿರುವಾಗ ಸೀನಪ್ಪರವರು ಗುಟ್ಟೂರು ಗ್ರಾಮದ ಮಂಜುಳಮ್ಮ ರವರಿಗೆ ಜಮೀನು ಮಾರಾಟ ಮಾಡಿರುವ ವಿಚಾರ ಗೊತ್ತಾಗಿರುತ್ತೆ. ದಿನಾಂಕ:11/03/2019 ರಂದು ಸಂಜೆ 6-45 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಗಂಡ ಈರಪ್ಪ ರವರು ನಮ್ಮ ಮನೆಯ ಬಳಿ ಇದ್ದಾಗ ಮೇಲ್ಕಂಡ ಮಂಜುಳಮ್ಮ ಆಕೆಯ ತಂದೆ ಚಿನ್ನಕದಿರಪ್ಪ, ಕಲ್ಯಾಣಪ್ಪ ಬಿನ್ ವೆಂಕಟರಾಯಪ್ಪ ಎಂಬುವರು ಸಮಾನ ಉದ್ದೇಶದಿಂದ ಬಂದು ನಮ್ಮನ್ನು ಕುರಿತು ಈ ಜಮೀನು ನಾವು ಖರೀದಿಸಿರುತ್ತೇವೆ. ನೀವು ಇನ್ನು ಮುಂದೆ ಈ ಜಮೀನಿನ ತಂಟೆಗೆ ಬರಬಾರದೆಂದಾಗ ನಾವು ಈ ಜಮೀನಿನಲ್ಲಿ ಸುಮಾರು ವರ್ಷಗಳಿಂದ ಅನುಭವದಲ್ಲಿದ್ದೇವೆಂದು ಅಪ್ಪಿರೆಡ್ಡಿ ರವರು ನಮಗೆ ದಾನ ಮಾಡಿರುತ್ತಾರೆಂದು ಹೇಳಿದಾಗ ಮೇಲ್ಕಂಡವರು ನಮ್ಮ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ಚಿನ್ನಕದಿರಪ್ಪ ರವರು ಕಲ್ಲಿನಿಂದ ನನ್ನ ಎಡಕೈಗೆ ಹೊಡೆದು ರಕ್ತಗಾಯಪಡಿಸಿದ್ದು, ಅಲ್ಲಿ ಇದ್ದ ನನ್ನ ಗಂಡ ಈರಪ್ಪ ಮತ್ತು ಇತರರು ಸ್ಥಳಕ್ಕೆ ಬರುವಷ್ಟರಲ್ಲಿ ಮಂಜುಳಮ್ಮ ಮತ್ತು ಕಲ್ಯಾಣ್ ರವರು ಕೈಗಳಿಂದ ನನ್ನ ಮೈಮೇಲೆ ಹೊಡೆದು ನೋವುಂಟು ಮಾಡಿದ್ದು, ಅಷ್ಟರಲ್ಲಿ ನಮ್ಮ ಗ್ರಾಮದ ಮುನಿರಾಜು ಅಡ್ಡ ಬಂದು ಜಗಳ ಬಿಡಿಸಿದಾಗ ಅವರು ನಮ್ಮನ್ನು ಕುರಿತು ನಿಮ್ಮನ್ನು ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ.,

5) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 64/2019 ಕಲಂ. 323-324-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ:12/03/2019 ರಂದು ಮದ್ಯಾಹ್ನ 2-30 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಚಿನ್ನಕದಿರಪ್ಪ ಬಿನ್ ವೆಂಕಟರಾಯಪ್ಪ, ಪ.ಜಾತಿ ವಾಸ ಗುಟ್ಟೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೇ, ನನ್ನ ಮಗಳಾದ ಮಂಜುಳಮ್ಮ ರವರನ್ನು ಶೆಟ್ಟಿಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ ರವರಿಗೆ ಕೊಟ್ಟು ಮದುವೆ ಮಾಡಿದ್ದು, ಅವರು ಈಗ್ಗೆ ಸುಮಾರು 10 ವರ್ಷಗಳಿಂದ ನಲ್ಲರಾಳ್ಳಕ್ರಾಸ್ ನಲ್ಲಿ ವಾಸವಿರುತ್ತಾರೆ. ಈಗ್ಗೆ 5-6 ವರ್ಷಗಳ ಹಿಂದೆ ಬೋಡನಮರಿ ಗ್ರಾಮದ ಸೀನಪ್ಪ ಎಂಬುವರಿಗೆ ಸೇರಿದ ಜಮೀನಿನ ಪೈಕಿ 2 ಗುಂಟೆ ಜಮೀನನ್ನು ನನ್ನ ಮಗಳು ಖರೀದಿಸಿದ್ದು ಖಾತೆ ಸಹ ಆಗಿರುತ್ತೆ. ಸದರಿ ಗ್ರಾಮದ ಈರಪ್ಪ ಎಂಬುವರಿಗೆ ನಲ್ಲರಾಳ್ಳಪಲ್ಲಿ ಗ್ರಾಮದ ಅಪ್ಪಿರೆಡ್ಡಿ ರವರು ಸುಮಾರು ಒಂದು ಗುಂಟೆ ಜಮೀನನ್ನು ದಾನವಾಗಿ ನೀಡಿದ್ದು, ಇದಕ್ಕೆ ಯಾವುದೇ ದಾಖಲೆ ಇರುವುದಿಲ್ಲ. ಈರಪ್ಪ ರವರು ನಾವು ಖರೀದಿಸಿರುವ ಜಮೀನು ನಮಗೆ ಸೇರಿರುವುದಾಗಿ ನಮ್ಮ ಮೇಲೆ ತಕರಾರು ಮಾಡಿದ್ದು ಈ ಬಗ್ಗೆ ಗ್ರಾಮದಲ್ಲಿ ಪಂಚಾಯ್ತಿ ಮಾಡಿದ್ದು ಯಾವುದೇ ತೀರ್ಮಾನ ಆಗಿರುವುದಿಲ್ಲ.  ದಿನಾಂಕ:11/03/2019 ರಂದು ಸಂಜೆ 6-45 ಗಂಟೆ ಸಮಯದಲ್ಲಿ ನಾನು ನನ್ನ ಮಗಳಾದ ಮಂಜುಳಮ್ಮ ರವರು ನಮಗೆ ಸೇರಿದ ಜಮೀನಿನಲ್ಲಿ ಗಿಡಗಳನ್ನು ಕೀಳುತ್ತಿದ್ದಾಗ ಈರಪ್ಪ ಆತನ ಹೆಂಡತಿ ಲಕ್ಷ್ಮಿದೇವಮ್ಮ ಮತ್ತು ಮಗಳಾ ವಾಣಿ ರವರುಗಳು ಬಂದು ಈ ಜಾಗ ನಮಗೆ ಸೇರಿದ್ದು, ಎಂದು ನಮ್ಮ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ಈರಪ್ಪ ದೊಣ್ಣೆಯಿಂದ ನನ್ನ ಕಾಲುಗಳಿಗೆ ಹೊಡೆದು ನೋವುಂಟು ಮಾಡಿದ್ದು ಲಕ್ಷ್ಮಿದೇವಮ್ಮ ಮತ್ತು ವಾಣಿ ಕೈಗಳಿಂದ ನನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಈರಪ್ಪ ನನ್ನನ್ನು ಕುರಿತು ಈ ಜಾಗಕ್ಕೆ ಬಂದರೆ ಮುಗಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

6) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 52/2019 ಕಲಂ. 78(ಸಿ) ಕೆ.ಪಿ. ಆಕ್ಟ್:-

     ದಿನಾಂಕ:11-3-2019 ರಂದು ಡಿ.ಸಿ.ಬಿ ಮತ್ತು ಸಿ.ಇ.ಎನ್ ರವರು ಠಾಣೆಗೆ ಎ.ಎಸ್.ಐ  ನಾರಾಯಣಸ್ವಾಮಿ ಆರ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ  ದಿನಾಂಕ:06/01/2018 ರಂದು  ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿ.ಬಿ ವಿಭಾಗದ ಮತ್ತು ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ  ವಿ.ಚಿನ್ನಪ್ಪ ರವರ ಆದೇಶದ ಮೇರೆಗೆ  ಅದೇ ವಿಭಾಗದಲ್ಲಿ ಕಾರ್ಯನಿರ್ವಸುತ್ತಿರುವ ಎ.ಎಸ್.ಐ ಶ್ರೀ ನಾರಾಯಣಸ್ವಾಮಿ ರವರಿಗೆ  ಮಧ್ಯಾಹ್ನ 1-00 ಗಂಟೆಗೆ ಚಿಂತಾಮಣಿ ನಗರದ ಬೆಂಗಳೂರು ವೃತ್ತದ ಬಳಿ ಇರುವ  ಆಟೋ ನಿಲ್ದಾಣದ ಬಳಿ ಯಾರೋ ಒಬ್ಬ ಆಸಾಮಿಯ ಅಕ್ರಮ ಮಟ್ಕಾ ಅಂಕಿಗಳನ್ನು  ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಆಸಾಮಿಯ ಮೇಲೆ ದಾಳಿ ಮಾಡಲು ಪಂಚರಾಗಿ ಕೆ.ಎಂ ಮುನಿ ರಾಜು ಬಿನ್ ಮುನಿಯಪ್ಪ ಮತ್ತು ನರೇಂದ್ರ ಕುಮಾರ್ ಬಿನ್ ವೆಂಕಟರವಣ ರವರುಗಳನ್ನು ಹಾಗೂ ಸಿಬ್ಬಂದಿಯವರಾದ ಸಿ.ಹೆಚ್.ಸಿ 198 ಮಂಜುನಾಥ ಸಿ.ಪಿ.ಸಿ 365 ಮಲ್ಲಿಕಾರ್ಜುನ ರವರುಗಳನ್ನು ಬರ ಮಾಡಿಕೊಂಡು ಬೆಂಗಳೂರು ವೃತ್ತದಲ್ಲಿ ಜೀಫ್ ನ್ನು ನಿಲ್ಲಿಸಿ ಕಾಲು ನಡೆಗೆಯ ಮೂಲಕ ಅಲ್ಲಿಗೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಒಂದು ರೂಪಾಯಿಗೆ 80-00 ರೂಗಳು ಕೊಡುತ್ತೇನೆಂತ ಕೈಯಲ್ಲಿ ಪೆನ್ನು ಮತ್ತು ಹಾಳೆಯನ್ನು ಹಿಡಿದು ಕೊಂಡು ಹಣವನ್ನು ಕಟ್ಟುವಂತೆ  ಜನರಿಗೆ ಪ್ರೇರಿಪಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸುತ್ತು ವರೆದು ಆತನನ್ನು ಹಿಡಿದ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಮೋಹನ್ ಕೃಷ್ಣ ಬಿನ್ ನಾಗರಾಜು, 30 ವರ್ಷ, ನಾಯಕರು, ವಾಸ: ನಾರಸಿಂಹ ಪೇಟೆ , ಚಿಂತಾಮಣಿ ನಗರ ಎಂತ ತಿಳಿಸಿದ್ದು ಮಟ್ಕಾ ಚೀಟಿಗಳನ್ನು ಬರೆದು ಜನರಿಂದ ಸಂಗ್ರಹಿಸಿದ ಹಣವನ್ನು ಇದೇ ಚಿಂತಾಮಣಿ ನಗರದ  ಮೆಹಬೂಬ ನಗರದ ವಾಸಿಯಾದ ಮಸ್ತಾನ್ ರವರಿಗೆ ನೀಡುತ್ತಿರುವುದಾಗಿ ಕಮೀಷನ್ ಹಣವನ್ನು ಪಡೆದುಕೊಳ್ಳುತ್ತಿರುತ್ತೇನೆಂತ ತಿಳಿಸಿರುತ್ತಾನೆ. ನಂತರ  ಸದರಿ ಆಸಾಮಿಯನ್ನು ನಮ್ಮಗಳ ಸಮಕ್ಷಮ  ಅಂಗ ಶೋದನೆ ಮಾಡಲಾಗಿ ಆತನ ಕೈಯಲ್ಲಿ ಎರಡು ಮಟ್ಕಾ ಚೀಟಿ ಮತ್ತು ಒಂದು ಪೆನ್ನು ಹಾಗೂ 6240-00 ರೂಗಳು ಇರುತ್ತೆ. ಮೇಲ್ಕಂಡ ಆಸಾಮಿ, ಎರಡು ಮಟ್ಕಾ ಚೀಟಿಗಳು, ಒಂದು ಪೆನ್ನು ಹಾಗೂ ಒಟ್ಟು 6240-00 ರೂಗಳುನ್ನು ಪೊಲೀಸರು  ವಶಕ್ಕೆ ಪಡೆದುಕೊಂಡು ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ಬಂದು ಮುಂದಿನ ತನಿಖೆಯ ಸಲುವಾಗಿ ಮಾಲು ಮತ್ತು ಆರೋಪಿಯನ್ನು ಹಾಜರು ಪಡಿಸಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂಖ್ಯೆ:52/2019 ಕಲಂ:78(3) ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

7) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 68/2019 ಕಲಂ. 153(ಎ) ಐ.ಪಿ.ಸಿ:-

     ಲಿಯಾಕತ್ ಉಲ್ಲಾ, ಪಿ.ಎಸ್.ಐ [ಎಲ್ & ಓ], ಗ್ರಾಮಾಂತರ ಪೊಲೀಸ್ ಠಾಣೆ ರವರು  ಘನ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುತ್ತಿರುವುದೇನೆಂದರೆ,  ದಿನಾಂಕ: 14/02/2019 ರಂದು ಜಮ್ಮುಕಾಶ್ಮೀರದ ಪುಲ್ವಾಮಾ ನಗರದಲ್ಲಿ ಸಿ.ಆರ್.ಪಿ.ಎಪ್ ಯೋಧರ ಮೇಲೆ ಉಗ್ರರು ನಡೆಸಿದ ದಾಳಿ ಹಿನ್ನಲೆಯಲ್ಲಿ ಮುದುಗೆರೆ ಗ್ರಾಮದ ಶ್ರೀ ಲಕ್ಷ್ಮೀ ಚನ್ನಕೇಶವ ದೇವಸ್ಥಾನದ ಬಳಿ ಅದೇ ಗ್ರಾಮದ ಮಹಬೂಬ್ ಮಕ್ತಿಯಾರ್ ಬಿನ್ ರಹೀಂಸಾಬ್, ರೋಹಿತ್ ಬಿನ್ ನವಾಬ್ ಜಾನ್, ಪೀರ್ ಬಾಷ ಬಿನ್ ಅನ್ವರ್ ಸಾಬ್ ಮತ್ತು ಮಹಮ್ಮದ್ ಸಾಬೀರ್ ಬಿನ್ ಜಿಯಾವುರ್ ರವರುಗಳು ದಿನಾಂಕ: 14/02/2019 ರಂದು ಕೇಕ್ ಕತ್ತರಿಸಿ ಸಂಭ್ರಮಿಸಿ, ದೇಶದ್ರೋಹದ ಕೆಲಸ ಮಾಡಿರುತ್ತಾರೆ ಎಂದು ಅದೇ ಗ್ರಾಮದ ವಾಸಿ ಮೆಹಬೂಬ್ ಬಿನ್ ಅಲ್ಲಾಬಕಾಶ್ ಎಂಬುವವನು ಗ್ರಾಮದಲ್ಲೆಡೆ ಸಾರ್ವಜನಿಕರ ಬಳಿ ಹೇಳಿದ್ದರಿಂದ ನೆನ್ನೆ ದಿನ ದಿನಾಂಕ:11/03/2019 ರಂದು ರಾತ್ರಿ ಮುದುಗೆರೆ ಗ್ರಾಮದಲ್ಲಿ ಸುಮಾರು 300 ಜನ ಸೇರಿರುವ ವಿಚಾರ ತಿಳಿದು ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-166 ಸಂಪಂಗಿರಾಮಯ್ಯ, ಪಿ.ಸಿ-379 ಮಂಜುನಾಥ, ಪಿ.ಸಿ-393 ನಂದ್ ಕುಮಾರ್, ಪಿ.ಸಿ-518 ಆನಂದ್ ರವರುಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಮೇಲ್ಕಂಡ ಮಹಬೂಬ್ ಮಕ್ತಿಯಾರ್ ಬಿನ್ ರಹೀಂಸಾಬ್, ರೋಹಿತ್ ಬಿನ್ ನವಾಬ್ ಜಾನ್, ಪೀರ್ ಬಾಷ ಬಿನ್ ಅನ್ವರ್ ಸಾಬ್ ಮತ್ತು ಮಹಮ್ಮದ್ ಸಾಬೀರ್ ಬಿನ್ ಜಿಯಾವುರ್ ರವರುಗಳನ್ನು ವಿಚಾರ ಮಾಡಲಾಗಿ ಮೆಹಬೂಬ್ ಬಿನ್ ಅಲ್ಲಾಬಕಾಶ್ ಎಂಬುವವನು ತಾನು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಹೆಂಗಸೊಂದಿಗೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದು, ಈ ವಿಚಾರದಲ್ಲಿ ಹೆಂಗಸಿನ ಮನೆಯವರು ಜಗಳಕ್ಕೆ ಬಂದಾಗ ತನಗೆ ಸಹಾಯ ಮಾಡುವಂತೆ ಮಹಬೂಬ್ ಮಕ್ತಿಯಾರ್ ಬಿನ್ ರಹೀಂ ಸಾಬ್, ರೋಹಿತ್ ಬಿನ್ ನವಾಬ್ ಜಾನ್, ಪೀರ್ ಬಾಷ ಬಿನ್ ಅನ್ವರ್ ಸಾಬ್ ಮತ್ತು ಮಹಮ್ಮದ್ ಸಾಬೀರ್ ಬಿನ್ ಜಿಯಾವುರ್ ರವರುಗಳನ್ನು ಕೇಳಿದ್ದು, ಅವರುಗಳು ಒಪ್ಪದಿದ್ದಕ್ಕೆ ಹಾಗೂ ಗ್ರಾಮದಲ್ಲಿ ಈತನ ಮುಂದೆ ಇವರುಗಳು ಬೈಕ್ ವ್ಹೀಲಿಂಗ್ ಮಾಡಿಕೊಂಡು ಓಡಾಡುತ್ತಿದ್ದರಿಂದ ಹಾಗೂ ತಾನು ಮಾಡುತ್ತಿದ್ದ ಯಾವುದೇ ಕೆಲಸಗಳಿಗೂ ಈ ಮೇಲ್ಕಂಡ ನಾಲ್ಕೂ ಜನರೂ ಸಹಕರಿಸದೇ ಇದ್ದುದರಿಂದ ಮೇಲ್ಕಂಡಂತೆ ಅಂದರೆ ದಿನಾಂಕ: 14/02/2019 ರಂದು ಜಮ್ಮುಕಾಶ್ಮೀರದ ಪುಲ್ವಾಮಾ ನಗರದಲ್ಲಿ ಸಿ.ಆರ್.ಪಿ.ಎಪ್ ಯೋಧರ ಮೇಲೆ ಉಗ್ರರು ನಡೆಸಿದ ದಾಳಿ ಹಿನ್ನಲೆಯಲ್ಲಿ ಗ್ರಾಮದ ಶ್ರೀ ಲಕ್ಷ್ಮೀ ಚನ್ನಕೇಶವ ದೇವಸ್ಥಾನದ ಬಳಿ ದಿನಾಂಕ: 14/02/2019 ರಂದು ಕೇಕ್ ಕತ್ತರಿಸಿ ಸಂಭ್ರಮಿಸಿರುತ್ತಾರೆ ಎಂದು ಗ್ರಾಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುತ್ತಾನೆ ಎಂದು ತಿಳಿದು ಬಂದಿದ್ದು, ಸದರಿ ಮೆಹಬೂಬ್ ಗೌರಿಬಿದನೂರು ಟೌನ್ ನಲ್ಲಿರುವ ಮಾಹಿತಿ ಮೇರೆಗೆ ಈ ದಿನ ದಿನಾಂಕ: 12/03/2019 ರಂದು ಬೆಳಿಗ್ಗೆ 9-00 ಗಂಟೆಗೆ ಗೌರಿಬಿದನೂರು ಟೌನ್ ಗಾಂಧಿವೃತ್ತದಲ್ಲಿ ಮೆಹಬೂಬ್ ಬಿನ್ ಅಲ್ಲಾಬಕಾಶ್ ನನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿ ಈತ ತನಗೆ ಮೇಲ್ಕಂಡ ನಾಲ್ಕು ಜನರು ತನ್ನ ಯಾವುದೇ ಕೆಲಸಗಳಿಗೆ ಸಹಕರಿಸದೇ ಇದ್ದುದರಿಂದ ಈ ರೀತಿ ಅವರುಗಳ ಮೇಲೆ ಸುಳ್ಳು ಆರೋಪಗಳು ಮಾಡಿದರೆ ಅವರಿಗೆ ತೊಂದರೆ ಮಾಡಬೇಕೆಂದು ಉದ್ದೇಶಿಸಿ ಸುಳ್ಳು ಸುದ್ದಿ ಹಬ್ಬಿಸಿರುತ್ತೇನೆಂದು ತಪ್ಪೊಪ್ಪಿಕೊಂಡಿರುತ್ತಾನೆ. ಹಾಗೂ ಗ್ರಾಮದಲ್ಲಿ ಕೂಡಾ ವಿಚಾರ ಮಾಡಲಾಗಿ ಸದರಿ ಆರೋಪಿ ವಿನಾಕಾರಣ ಸುಳ್ಳು ಆರೋಪಗಳನ್ನು ಹೊರಿಸಿ ಎರಡು ಕೋಮುಗಳ ಮದ್ಯೆ ಸೌಹಾರ್ದತೆಗೆ ದಕ್ಕೆ ಉಂಟು ಮಾಡಿರುತ್ತಾನೆಂದು ತಿಳಿದುಬಂದಿದ್ದರ ಮೇರೆಗೆ ಸದರಿ ಆರೋಪಿ ಮೆಹಬೂಬ್ ಬಿನ್ ಅಲ್ಲಾಬಕಾಶ್ ನನ್ನು ಠಾಣೆಗೆ ಕರೆದುಕೊಂಡು ಬಂದು ಬೆಳಿಗ್ಗೆ 10-00 ಗಂಟೆಗೆ ಈತನ ವಿರುದ್ದ ಸ್ವತಃ ಠಾಣೆಯ ಮೊ.ಸಂ. 68/2019 ಕಲಂ: 153[ಎ] ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುವುದಾಗಿರುತ್ತೆ.

8) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 30/2019 ಕಲಂ. 78(ಸಿ) ಕೆ.ಪಿ.ಆಕ್ಟ್:-

     ದಿನಾಂಕ:12/03/2019 ರಂದು ಮದ್ಯಾಹ್ನ 12:45 ಗಂಟೆಗೆ ಪಿ.ಎಸ್.ಐ ಶ್ರೀ.ಸಿ ರವಿಕುಮಾರ್ ಸಾಹೇಬರು ಆರೋಪಿಯೊಂದಿಗೆ ಮಾಲು, ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ, ನನಗೆ ದಿನಾಂಕ:12/03/2019 ರಂದು  ಬೆಳಿಗ್ಗೆ 11:15  ಗಂಟೆಗೆ ಗೌರಿಬಿದನೂರು ಪುರದ  ವಿಷ್ಣು ಹಾರ್ಡ್ ವೇರ್ ಅಂಗಡಿಯ ಮುಂಬಾಗದ ರಸ್ತೆಯಲ್ಲಿ ಯಾರೋ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಬಾತ್ಮೀ ಮೇರೆಗೆ ನಾನು ಪಂಚರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಪಂಚರು ಮತ್ತು ಪೊಲೀಸ್ ಸಿಬ್ಬಂದಿಯಾದ ಮುರಳಿ ಎ.ಎಸ್.ಐ ಮತ್ತು ಕೃಷ್ಣ ಹಾಗೂ ಇತರರೊಂದಿಗೆ ಸರ್ಕಾರಿ ಜೀಪಿನಲ್ಲಿ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ  ಬಿ.ಹೆಚ್ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ಮರೆಯಲ್ಲಿ ವಿಜಯ ಬ್ಯಾಂಕ್ ಬಳಿ ನಿಂತು ನೋಡುತ್ತಿರಲಾರಿ ವಿಷ್ಟು ಹಾರ್ಡ್ ವೇರ್ ಅಂಗಡಿಯ ಮುಂಬಾಗದ ಬಿ.ಹೆಚ್  ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ 1/- ರೂ.ಗೆ 70/- ರೂ.ಗಳನ್ನು ನೀಡುವುದಾಗಿ ಹಣದ ಆಮಿಷವನ್ನು ಒಡ್ಡುತ್ತಿದ್ದು,  ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಸದರಿ ಜೂಜಾಟದ ಮೇಲೆ ಪಂಚರ ಸಮಕ್ಷಮ  ದಾಳಿ ಮಾಡಿ ಆತನನ್ನು ಸುತ್ತುವರಿದು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಗಂಗರಾಜು ಬಿನ್ ನಾಗರಾಜಪ್ಪ, 28 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿಕೆಲಸ, ನೆಹರೂಜಿ ಕಾಲೋನಿ, ಗೌರಿಬಿದನೂರು ಪುರ  ಎಂದು  ತಿಳಿಸಿದ್ದು, ಆತನ  ಬಳಿ ಇದ್ದ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು 470/- ರೂ. ನಗದು ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯ ದೂರಾಗಿರುತ್ತೆ.

9) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ. 39/2019 ಕಲಂ. 87  ಕೆ.ಪಿ.ಆಕ್ಟ್:-

     ದಿನಾಂಕ: 11-03-2019 ರಂದು ಸಂಜೆ 5-30  ಗಂಟೆಗೆ ಪಿರ್ಯಾದಿದಾರರಾದ ಶ್ರೀ. ವಿ ಚಿನ್ನಪ್ಪ , ಪಿ ಐ, ಡಿಸಿಬಿ –ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಎ-1 ರಿಂದ ಎ- 6 ರವರೆಗಿನ  ಆರೋಪಿಗಳು ಮತ್ತು  ಸ್ಥಳದಲ್ಲಿ ವಶಕ್ಕೆ ಪಡೆದಿದ್ದ ಒಂದು ನ್ಯೂಸ್ ಪೇಪರ್ , 52 ಇಸ್ಪೀಟ್ ಎಲೆಗಳು, ನಗದು ಹಣ 20100-00 ರೂನಗದು ಹಣವನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 11-03-2019 ರಂದು ಸಿಬ್ಬಂದಿಯೊಂದಿಗೆ  ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗಸ್ತಿನಲ್ಲಿದ್ದಾಗ ಮದ್ಯಾಹ್ನ 3-00 ಗಂಟೆಗೆ ಬಂದ ಖಚಿತ ಮಾಹಿತಿ ಮೇರಗೆ ಕುತ್ತಾಂಡಹಳ್ಳಿ ಗ್ರಾಮದ ಪಶ್ಚಿಮಕ್ಕೆ ಸುಮಾರು ಒಂದುವರೆ  ಕಿ,ಮೀ ದೂರದಲ್ಲಿ ಸರ್ಕಾರಿ  ಅರಣ್ಯ ಪ್ರದೇಶ ಒಂದು ಹೊಂಗೆ ಮರದ ಕೆಳಗೆ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿಯಲ್ಲಿ 6 ಜನ ಆರೋಪಿತರು ಸಿಕ್ಕಿಬಿದ್ದಿದ್ದು ಒಬ್ಬ ಅಸಾಮಿ ಸ್ಥಳದಿಂದ ಪರಾರಿಯಾಗಿರುತ್ತಾನೆ( ಆರೋಪಿಗಳ ಹೆಸರು ಮತ್ತು ವಿಳಾಸ ವಿವರವಾಗಿ ಪಂಚನಾಮೆಯಲ್ಲಿ ನಮೂದಿಸಿರುತ್ತೆ) ನಂತರ ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟು ಎಲೆಗಳು, ಒಂದು ನ್ಯೂಸ್ ಪೇಪರ್ ಹಾಗೂ ಜೂಜಾಟಕ್ಕೆ ಬಳಸಿದ್ದ  ಒಟ್ಟು 20100-00 (ಇಪ್ಪತ್ತು ಸಾವಿರದ ನೂರು) ರೂಗಳನ್ನು  ಕೇಸಿನ ಮುಂದಿನ ಕ್ರಮಕ್ಕಾಗಿ  ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ, ಸ್ಥಳದಲ್ಲಿ ಸಿಕ್ಕಿಬಿದ್ದ 6 ಜನ  ಆರೋಪಿತರನ್ನು ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಸಿಕ್ಕಿಬಿದ್ದವರ ಮೇಲೆ  ಮತ್ತು ಸ್ಥಳದಿಂದ ಓಡಿ ಹೋದವನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

10) ಶಿಡ್ಲಘಟ್ಟ ಪುರ  ಪೊಲೀಸ್ ಠಾಣೆ ಮೊ.ಸಂ. 22/2019 ಕಲಂ. 87  ಕೆ.ಪಿ.ಆಕ್ಟ್:-

     ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಅವಿನಾಶ್ ಪಿ.ಎಸ್.ಐ. (ಕಾ & ಸು) ಆದ ನಾನು ಘನ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುವುದೇನೆಂದರೆ, ದಿನಾಂಕ:11-03-2019 ರಂದು ಸಂಜೆ 4-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಶಿಡ್ಲಘಟ್ಟ ವೃತ್ತ ನಿರೀಕ್ಷಕರಾದ ಶ್ರೀ ಆನಂದ್ಕುಮಾರ್ ರವರು ನನಗೆ ಪೋನ್ ಮಾಡಿ ಶಿಡ್ಲಘಟ್ಟ ಇಲಾಹಿ ನಗರದಲ್ಲಿರುವ ಸಾಮಿಲ್ ಬಳಿ ಯಾರೋ ಕೆಲವರು ಗುಂಪು ಸೇರಿಕೊಂಡು ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ನೀಡಿದ್ದು ನೀವು ಸಿಬ್ಬಂದಿಯವರುಗಳನ್ನು ಕರೆದುಕೊಂಡು ದಿಬ್ಬೂರಹಳ್ಳಿ ರಸ್ತೆಯ ಚರ್ಚ ಬಳಿ ಬರುವಂತೆ ತಿಳಿಸಿದರು. ಅದರಂತೆ ನಾನು ಸಿಬ್ಬಂದಿಯವರಾದ ಹೆಚ್.ಸಿ.132 ಪೀರ್ಸಾಬ್, ಹೆಚ್.ಸಿ.115 ವೆಂಕಟರವಣಪ್ಪ ಮತ್ತು ಪಿಸಿ 134 ಧನಂಜಯ್ ಕುಮಾರ್, ಪಿಸಿ 540 ಶಿವಕುಮಾರ್, ಪಿ.ಸಿ126 ವೆಂಕಟೇಶ, ಪಿ.ಸಿ.458 ರಾಜೇಶ ಮತ್ತು  ರಾಜಪ್ಪ ರವರುಗಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಚಚರ್್ ಬಳಿ ಹೋದೆವು. ಅಲ್ಲಿ ವೃತ್ತ ನಿರೀಕ್ಷಕರ ಜೊತೆಯಲ್ಲಿ ಪಂಚಾಯ್ತಿದಾರರಾದ 1) ಜಬೀವುಲ್ಲಾ ಬಿನ್ ಅಹಮದ್ ಜಾನ್, 30 ವರ್ಷ, ಮುಸ್ಲಿಂ ರೇಷ್ಮೆ ಕೆಲಸ, ಮೆಹಬೂನ್ ನಗರ, ಶಿಡ್ಲಘಟ್ಟ ಪುರ. 2) ಮನ್ಸೂರ್ ಬಿನ್ ಅತಾವುಲ್ಲಾ, 22 ವರ್ಷ, ರೇಷ್ಮೆ ಕೆಲಸ, ಪಿಲೇಚರ್ ಕ್ವಾಟ್ರಸ್, ಶಿಡ್ಲಘಟ್ಟ ರವರುಗಳು ಸಹ ಇದ್ದರು. ನಂತರ ವೃತ್ತ ನಿರೀಕ್ಷಕರು ನಮ್ಮಗಳನ್ನು ಸಂಜೆ 4-30 ಗಂಟೆಗೆ ಸಾಮಿಲ್ ಬಳಿ ಕರೆದುಕೊಂಡು ಹೋಗಿದ್ದು, ನಾವುಗಳು ಮರೆಯಲ್ಲಿ ನೋಡಲಾಗಿ ಯಾರೋ ಜನರು ಸದರ್ಾರ ಸಾಮಿಲ್ ಹಿಂಭಾಗದಲ್ಲಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಅಸಾಮಿ 300/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 500/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಅವರುಗಳ ಮೇಲೆ ದಾಳೆ ಮಾಡಲು ಹೋದಾಗ ಅವರುಗಳನ್ನು ನಮ್ಮಗಳನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ 04 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1) ಷಬ್ಬೀರ್ ಪಾಷ ಬಿನ್ ರಹಮತ್ತುಲ್ಲಾ, 28 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಮಹಬೂಬ್ ನಗರ, ಶಿಡ್ಲಘಟ್ಟ 2) ಗೌಸ್ಪಾಷ ಬಿನ್ ಲೇಟ್ ಪ್ಯಾರಾಸಾಬ್, 21 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ಪಿಲೇಚರ್ ಕ್ವಾಟ್ರಸ್, ಶಿಡ್ಲಘಟ್ಟ. 3) ಸಾಧಿಕ್ ಪಾಷ ಬಿನ್ ಮುನಾವರ್ ಪಾಷ, 25 ವರ್ಷ, ಮುಸ್ಲಿಂ, ರೇಷ್ಮೆ ಕೆಲಸ, ನಲ್ಲಿಮರದಹಳ್ಳಿ, ಶಿಡ್ಲಘಟ್ಟ 4) ಲಿಯಾಕತ್ ಬಿನ್ ಲೇಟ್ ಅಬ್ದುಲ್ ಅಕೀಂ, 25 ವರ್ಷ, ರೇಷ್ಮೆ ಕೆಲಸ, ರಾಜೀವ್ ಗಾಂಧಿ, ಶಿಡ್ಲಘಟ್ಟ ಎಂದು ತಿಳಿಸಿದ್ದು ಓಡಿ ಹೋದ ಮತ್ತೊಬ್ಬ ವ್ಯಕ್ತಿ 5)ನಾಸೀರ್ ಮೆಹಬೂಬ್ ನಗರ ಎಂದು ತಿಳಿದುಬಂದಿರುತ್ತೆ. ಇವರುಗಳು ಜೂಜಾಟಕ್ಕೆ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 7200-00 ರೂ ನಗದು ಹಣ  ಹಾಗೂ  ಜೂಜಾಟಕ್ಕೆ ಬಳಸಿ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ 52 ಇಸ್ಟೀಟ್ ಎಲೆಗಳು ಸಿಕ್ಕಿದ್ದು ಸ್ಥಳದಲ್ಲಿ ಸಂಜೆ 5-00 ಗಂಟೆಯಿಂದ 5-45 ಗಂಟೆ ವರೆಗೆ ಪಂಚನಾಮೆ ಜರುಗಿಸಿ ಅಮಾನತ್ತು ಪಡಿಸಿಕೊಂಡು. ನಂತರ ಸ್ಥಳದಲ್ಲಿಯೇ ವೃತ್ತ ನಿರೀಕ್ಷಕರು 04 ಜನ ಆರೋಪಿಗಳು, 52 ಇಸ್ಪೀಟು ಎಲೆಗಳು ಮತ್ತು 7200-00 ನಗದನ್ನು ಮುಂದಿನ ಕ್ರಮಕ್ಕಾಗಿ ನೀಡಿದ್ದನ್ನು ಸ್ವೀಕರಿಸಿ ಠಾಣೆಗೆ ಸಂಜೆ 6-10 ಗಂಟೆಗೆ ವಾಪಸ್ಸು ಬಂದು ಠಾಣಾ ಮೊ.ಸಂ.22/2019 ಕಲಂ.87 ಕೆ.ಪಿ. ಆಕ್ಟ್ ರೀತ್ಯ ಸ್ವತಃ ಕೇಸು ದಾಖಲಿಸಿರುತ್ತೇನೆ.