ದಿನಾಂಕ : 12/01/2019 ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.13/2019 ಕಲಂ. ಮನುಷ್ಯ ಕಾಣೆ:-

     ದಿನಾಂಕ 11-01-2019 ರಂದು 18-15 ಗಂಟೆಗೆ ಪಿರ್ಯಾದಿದಾರರಾದ  ಶ್ರೀಮತಿ ಮೀನಾ ಕೋಂ  ಬಸವರಾಜು ಕೆ. 28 ವರ್ಷ, ಒಕ್ಕಲಿಗರು, ಫ್ಯಾಕ್ಟರಿಯಲ್ಲಿ ಕೆಲಸ,  ವಾಸ ಹಳೇ ಎ.ಇ.ಓ.ರಸ್ತೆ, 18 ನೇ ವಾರ್ಡ್, ಕಂದವಾರಪೇಟೆ, ಚಿಕ್ಕಬಳ್ಳಾಪುರ  ನಗರರವರು ಠಾಣೆಗೆ ಹಾಜರಾಗಿ  ಕಂಪ್ಯೂಟರ್ ಟೈಪ್ ಮಾಡಿರುವ ದೂರಿನ ಸಾರಾಂಶವೇನೆಂಧರೆ ತನ್ನ ಗಂಡನಾದ ಕೆ. ಬಸವರಾಜು ಬಿನ್  ಕೃಷ್ಣಪ್ಪ, 32 ವರ್ಷ, ಒಕ್ಕಲಿಗರು, ಗಾರೆ ಕೆಲಸ, ಬುವರು ದಿನಾಂಕ  07-01-2019 ರಂದು ಬೆಳಿಗ್ಗೆ 06-00 ಗಂಟೆಗೆ ಮನೆಯಿಂದ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ.  ತನ್ನ ಗಂಡ  ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮತ್ತು ಸಂಭಂದಿಕರ ಮನೆಯಲ್ಲಿ  ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ತನ್ನ ಗಂಡನ ಮೊಬೈಲ್ ನಂ. 9108362303 ಗೆ ಕರೆಯನ್ನು  ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತಿದ್ದು  ತನ್ನ ಗಂಡನನ್ನು ಹುಡುಕಾಡುತ್ತಿದ್ದರಿಂದ  ದೂರು ನೀಡಲು ತಡವಾಗಿರುತ್ತೆ. ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಾಗಿರುತ್ತೆ.

2) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.05/2019 ಕಲಂ. 323-324-504-506 ರೆ/ವಿ 34 ಐ.ಪಿ.ಸಿ:-

     ಈ ದಿನ ದಿನಾಂಕ 11/01/2019 ರಂದು ಶಿಡ್ಲಘಟ್ಟದ ಘನ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಕರ್ತವ್ಯದ ಪಿ.ಸಿ 490 ಸೋಮಶೇಖರ್ ರವರು ಘನ ನ್ಯಾಯಾಲಯದಿಂದ ತಂದು ಹಾಜರುಪಡಿಸಿದ ಪಿ.ಸಿ ಆರ್ ನಂ 200/2018 ರ ಸಾರಂಶವೇನೆಂದರೆ ದಿನಾಂಕ 06/09/2018 ರಂದು ಬೈರಪ್ಪ ಬಿನ್ ವೆಂಕಟರಾಯಪ್ಪ ಮತ್ತು ಆತನ ಹೆಂಡತಿ ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ಅವರ ಗ್ರಾಮದ ಕುಡಿಯುವ ನೀರಿನ ಘಟಕದ ಬಳಿ ಹೋಗುತ್ತಿದ್ದಾಗ ಆರೋಪಿಗಳಾದ ಮುನಿಶಾಮಿಗೌಡ ಬಿನ್ ಅಜ್ಜಪ್ಪ, ಪಾರಿಜಾತಮ್ಮ ಕೋಂ ಮುನಿಶಾಮಿಗೌಡ, ಗಜೇಂದ್ರ ಬಿನ್ ಮುನಿಶಾಮಿಗೌಡ, ನಾಗೇಶ ಗೌಡ ಬಿನ್ ಮುನಿಶಾಮಿಗೌಡ, ಮುನಿಯಮ್ಮ ಕೋಂ ಲೇಟ್ ಅಜ್ಜಪ್ಪ ರವರು ಅಕ್ರಮ ಗುಂಪುಕಟ್ಟಿಕೊಂಡು ಬಂದು ಪಿರ್ಯಾದಿದಾರರಾದ ಬೈರಪ್ಪ ಬಿನ್ ವೆಂಕಟರಾಯಪ್ಪ ರವರನ್ನು ಮತ್ತು ಆತನ ಹೆಂಡತಿಯನ್ನು ಜಮೀನಿನ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕಾಲುಗಳಿಂದ ಒದ್ದು ಕೈಗಳಿಂದ, ದೊಣ್ಣೆಯಿಂದ ಹಾಗೂ ಕಲ್ಲುಗಳಿಂದ ಹೊಡೆದು ಗಾಯಗಳನ್ನು ಉಂಟುಮಾಡಿ ಪ್ರಾಣ ಬೆದರಿಕೆಯನ್ನು ಹಾಕಿರಿರುವುದಾಗಿ ಇದ್ದ ಪಿ.ಸಿ.ಆರ್ ನ ಮೇರೆಗೆ ಕೇಸನ್ನು ದಾಖಲಿಸಿರುವುದಾಗಿರುತ್ತೆ.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.07/2019 ಕಲಂ. 379 ಐ.ಪಿ.ಸಿ:-

     ದಿ:11-01-2019 ರಂದು ಮದ್ಯಾಹ್ನ 12:45 ಗಂಟೆಯಲ್ಲಿ ಪಿರ್ಯಾಧಿದಾರರಾದ ವಿಜಯರಂಗ ಬಿನ್ ಕೆಂಪಣ್ಣ, 23 ವರ್ಷ, ಕುರುಬರು, ದ್ರೋಣಕುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ – ದಿ: 26-12-2018 ರಂದು ಸಮಯ ಬೆಳಗ್ಗೆ 9:30 ಗಂಟೆಯಲ್ಲಿ ಪಿರ್ಯಾಧಿದಾರರು ಹೂವಿನ ವ್ಯಾಪಾರ ಮಾಡಲು ತಮ್ಮ ಗ್ರಾಮದಿಂದ ಕೋಟಾಲದಿನ್ನೆ ಹೂವಿನ ಮಂಡಿಗೆ ಬಂದು ತನ್ನ ದ್ವಿಚಕ್ರ ವಾಹನ KA-04-JU-3490, ಚಾಸಿ ನಂ:OMBLHAR184JHK04893 ಇಂಜಿನ್ ನಂ:HA10ACJHK35319 ಅನ್ನು ಅಲ್ಲಿ ನಿಲ್ಲಿಸಿ ಮಂಡಿಯ ಒಳಗೆ ಹೋಗಿ ವ್ಯಾಪಾರ ಮಾಡಿಕೊಂಡು ಅರ್ಧಗಂಟೆ ಬಿಟ್ಟು ಬಂದು ನೋಡಿದಾಗ, ಪಿರ್ಯಾಧಿದಾರರ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅದರ ಕೀಗಳು ಪಿರ್ಯಾಧಿಯ ಬಳಿಯೇ ಇರುತ್ತವೆ.  ಅಂದಿನಿಂದ ಇಲ್ಲಿಯವರೆವಿಗೂ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ, ಆದ್ದರಿಂದ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ತನ್ನ ದ್ವಿಚಕ್ರವಾಹನವನ್ನು ಪತ್ತೆ ಮಾಡಿಕೊಡಲು ಕೊಡಲು ಹಾಗೂ ಕಳ್ಳರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೋರಿ ದೂರು ನೀಡಿರುವುದಾಗರುತ್ತದೆ.

4) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.03/2019 ಕಲಂ. 324-504 ರೆ/ವಿ 34 ಐ.ಪಿ.ಸಿ:-

     ದಿನಾಂಕ:12/01/2019 ರಂದು ಬೆಳಗಿನ ಜಾವ 00-30 ಗಂಟೆಗೆ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ತೆರಳಿ ಗಾಯಾಳು ರವಿಕುಮಾರ್ ಬಿನ್ ನಾರಾಯಣಪ್ಪ, 30 ವರ್ಷ, ಪ.ಜಾತಿ, ಡ್ರೈವರ್ ಕೆಲಸ, ವಾಸ:ಕಡಬೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರಲ್ಲಿ ನಾನು ಮೇಲ್ಕಂಡ ವಿಳಾಸದ ವಾಸಿಯಾಗಿದ್ದು, ಡ್ರೈವರ್ ಕೆಲಸ ಮಾಡಿಕೊಂಡಿರುತ್ತೇನೆ. ಪ್ರತಿ ದಿನದಂತೆ ಈ ದಿನ ಕೆಲಸಕ್ಕೆ ಹೋಗಿ ಸಂಜೆ ಸುಮಾರು 6-00 ಗಂಟೆಗೆ ಮನೆಗೆ ಹೋಗಿ ಬಂದು ಸಿನಿಮಾ ನೋಡಿಕೊಂಡು ರಾತ್ರಿ 10-00 ಗಂಟೆಗೆ ಸಿನಿಮಾದಿಂದ ಮನೆಗೆ ಹೋಗುವಾಗ ನಾನು ಮತ್ತು ನನ್ನ ಮಾವನಾದ ಗಂಗಾಧರಪ್ಪ ರವರು ಧೀಪಕ್ ಬಾರ್ ಬಳಿ ಮದ್ಯಪಾನ ಮಾಡಲು ಹೋಗಿದ್ದೆವು. ನಮ್ಮ ಬಳಿ ಹಣ ಕಡಿಮೆಯಿದ್ದು ಬಾರ್ ಕ್ಯಾಷಿಯರ್ ನನ್ನು ಸಾಲ ನೀಡುವಂತೆ ಕೇಳಿದೆವು. ಅದಕ್ಕೆ ಅವರು ಸಾಲ ನೀಡುವುದಿಲ್ಲವೆಂದು ತಿಳಿಸಿದ್ದು, ನಾವು ನಮ್ಮ ಬಳಿಯಿದ್ದ ಹಣಕ್ಕೆ ಮದ್ಯವನ್ನು ಪಡೆದು ಸೇವಿಸುತ್ತಾ ಈ ಬಾರ್ ನಲ್ಲಿ ಸಾಲ ಕೊಡುವುದಿಲ್ಲ ಇನ್ನು ಮುಂದೆ ಈ ಬಾರ್ ಗೆ ಕುಡಿಯಲು ಬರಬಾರದು ಎಂದು ನಾವುಗಳು ಮಾತನಾಡಿಕೊಳ್ಳುತ್ತಿದ್ದಾಗ ಸುಮಾರು ರಾತ್ರಿ 11-00 ಗಂಟೆಯ ಸಮಯದಲ್ಲಿ ಅಲ್ಲಿಯೇ ಬಾರ್ ನಲ್ಲಿದ್ದ ಶಮೀರ್ ಹಿರೇಬಿದನೂರು ಮತ್ತು ಶೌಕತ್ ಅಜಾದ್ ನಗರ ವಾಸಿ ರವರು ಏಕಾಏಕಿ ಏನೋ ನನ್ನ ಮಗನೇ ಮಾತನಾಡುತ್ತಾ ಗಲಾಟೆ ಮಾಡುತ್ತಿರುವುದು ಎಂದು ನನ್ನ ಮೇಲೆ ಗಲಾಟೆ ತೆಗೆದು ಅವನ ಕೈಯ್ಯಲ್ಲಿದ್ದ ಬಿಯರ್ ಬಾಟೆಲ್ ನಿಂದ ನನ್ನ ಎಡಕೆನ್ನೆಯ ಬಾಗಕ್ಕೆ ಹೊಡೆದು ಗಾಯಪಡಿಸಿರುತ್ತಾನೆ. ಗಲಾಟೆಯನ್ನು ಬಿಡಿಸಲು ಬಂದ ನನ್ನ ಮಾವ ಗಂಗಾಧರಪ್ಪ ರವರಿಗೆ ಶಮೀರ್ ಕೈಯಲ್ಲಿದ್ದ ಬಿಯರ್ ಟಾಟೆಲ್ ಕಿತ್ತುಕೊಂಡು ಶೌಕತ್ ರವರು ತಲೆಗೆ, ಎಡಕಿವಿ ಬಳಿ ಹೊಡೆದಿರುತ್ತಾರೆ. ಇಬ್ಬರು ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಂದ ಓಡಿಹೋಗಿರುತ್ತಾರೆ. ನಂತರ ನಾವು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿರುತ್ತೇವೆ. ನಮಗೆ ಹೊಡೆದಿರುವ ಶಮೀರ್ ಮತ್ತು ಶೌಕತ್ ರವರ ಮೇಲೆ ಕ್ರಮ ಜರುಗಿಸಬೇಕೆಂದು ಕೋರಿದ್ದರ ದೂರಿನ ಸಾರಾಂಶವಾಗಿರುತ್ತೆ

5) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.03/2019 ಕಲಂ. 279-337  ಐ.ಪಿ.ಸಿ:-

     ದಿನಾಂಕ:11/01/2019 ರಂದು ಸಂಜೆ:05-30 ಗಂಟೆಗೆ ಫಿರ್ಯಾದುದಾರರಾದ ರಮೇಶ ಬಿನ್ ರಾಮಚಂದ್ರಪ್ಪ, 40 ವರ್ಷ, ವಕ್ಕಲಿಗರು ಜಿರಾಯ್ತೀ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:09/01/2019 ರಂದು  ನನ್ನ ಅಣ್ಣನಾದ ಗೋವಿಂದ ರವರು ಅವರ ಬಾಬತ್ತು ಎ,ಪಿ-04 ಎ,ಎನ್-7325 ಹೀರೋ ಹೋಂಡಾ ದ್ವಿ ಚಕ್ರ ವಾಹನದಲ್ಲಿ ಪಾತಪಾಳ್ಯ ಗ್ರಾಮದಿಂದ ನಮ್ಮ ಗ್ರಾಮವಾದ ಬೈರೆಗೊಲ್ಲಪಲ್ಲಿ ಗ್ರಾಮಕ್ಕೆ ಬಿಳ್ಳೂರು ಕ್ರಾಸ್ ನಿಂದ ಸ್ವಲ್ಪ ಮುಂಬಾಗದಲ್ಲಿ ರಾತ್ರೀ ಸುಮಾರು 07-30 ಗಂಟೆಯಲ್ಲಿ  ಬರುತ್ತಿದ್ದಾಗ ಚೇಳೂರು ಕಡೆಯಿಂದ ಕೆ,ಎ-13 ಬಿ-2571 ನಂಬರಿನ ಮಹೀಂದ್ರಾ ಬೊಲೆರೊ ವಾಹನದ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಅಣ್ಣನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ನನ್ನ ಅಣ್ಣ ಮತ್ತು ದ್ವಿ ಚಕ್ರವಾಹನ ಕೆಳಗಡೆ ಬಿದ್ದು ವಾಹನ ಜಖಂಗೊಂಡು ನನ್ನ ಅಣ್ಣನ ಎಡಗಡೆಯ ಕೆನ್ನೆಗೆ ರಕ್ತಗಾಯವಾಗಿ ಮೈ ಎಲ್ಲಾ ತರಚಿದ ಗಾಯವಾಗಿರುತ್ತೆ, ಬೊಲೇರೋ ವಾಹನದ ಚಾಲಕನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಇದನ್ನು ಕಂಡ ಬೈರೇಪಲ್ಲಿ ಗ್ರಾಮದ ನಾರಾಯಣಪ್ಪ ಬಿನ್ ಅಂಜಿನಪ್ಪರವರು ನನಗೆ ಕರೆ ಮಾಡಿ ವಿಚಾರ ತಿಳಿಸಿದ್ದು,  ನಾನು ಸ್ಥಳಕ್ಕೆ ಬಂದಿದ್ದು ನಾನು ಮತ್ತು ಬೈರೇಗೊಲ್ಲಪಲ್ಲಿ ಗ್ರಾಮದ ನಾರಾಯಣಪ್ಪ ಬಿನ್ ಆಂಜಿನಪ್ಪ ಗಾಯಗೊಂಡಿದ್ದ ನನ್ನ ಅಣ್ಣ ಗೋವಿಂದರವರನ್ನು ಯಾವುದೋ ಒಂದು ವಾಹನದಲ್ಲಿ ಕರೆದುಕೊಂಡು ಬಂದು ಪಾತಪಾಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ, ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಅಲ್ಲಿನ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಅಲ್ಲಿನ ವೈದ್ಯಾದಿಕಾರಿಗಳ ಸಲಹೆಯ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು ನಮ್ಮ ಅಣ್ಣನಿಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯಪಡಿಸಿರುವ ಮೇಲ್ಕಂಡ ವಾಹನದ ಚಾಲಕ ಮತ್ತು ವಾಹನದ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ದೂರು