ದಿನಾಂಕ: 11-04-2019 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ: 73/2019. ಕಲಂ: 323, 324, 504, 506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 11/04/2019 ರಂದು ಬಾಗೇಫಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಮೇಮೊ ಪಡೆದು ಆಸ್ಪತ್ರೆಗೆ ಹೋಗಿ  ಗಾಯಾಳುವಾದ ಶ್ರೀ ಶ್ರೀನಿವಾಸ ಬಿನ್ ದೇವನಾರಾಯಣಪ್ಪ ರವರಿಂದ ಪಡೆದ ಹೇಳಿಕೆಯ ಸಾರಾಂಶವೇನೆಂದರೆ ತಾನು ದಿನಾಂಕ:10/04/2019 ರಂದು ಬೆಳಿಗ್ಗೆ 07-00 ಗಂಟೆಗೆ ತನ್ನ ಅಣ್ಣನ ಮಗಳಿಗೆ ಗಂಡು ನೋಡಲು ಚಿಂತಾಮಣಿ ತಾಲ್ಲೂಕು ಬುರಡಗುಂಟೆ ಗ್ರಾಮಕ್ಕೆ ಹೋಗಿದ್ದು, ಸಂಜೆ 5-45 ಗಂಟೆಗೆ ನಮ್ಮ ಗ್ರಾಮಕ್ಕೆ ವಾಪಾಸ್ ಬಂದಾಗ ತಮ್ಮ ಗ್ರಾಮದ ಗಂಗುಲಪ್ಪ, ರವಣಪ್ಪ, ಮನೋಹರ, ಹನುಮಂತರಾವ್, ವೆಂಕಟರಾಮ, ಗುರ್ರಪ್ಪ ಮತ್ತು ಇತರರು ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಿದ್ದು, ಗ್ರಾಮಪಂಚಾಯ್ತಿ ಸದಸ್ಯೆಯಾದ ಸುನಿತಮ್ಮ ಕೊಂ ಗಂಗುಲಪ್ಪ ರವರು ಸಹ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ತಾನು ಸುನಿತಮ್ಮ ರವರನ್ನು ಕುರಿತು ಹೀಗೆಲ್ಲ ಬೈದಾಡಿಕೊಳ್ಳಬಾರದು ಎಂದು ಹೇಳಿದ್ದಕ್ಕೆ ಅವರು ಏಕಾಏಕಿ ತನ್ನನ್ನು ನಿನ್ಯಾವನೋ ಕೇಳೊದಕ್ಕೆ ಎಂದು ಬೈದಿದ್ದು, ಆಗ ತಾನು ತಮ್ಮ ಮನೆಗೆ ಬಂದಿದ್ದು, ಮತ್ತೆ ರಾತ್ರಿ 8-30 ಗಂಟೆಯ ಸಮಯದಲ್ಲಿ ಇದೇ ವಿಚಾರದಲ್ಲಿ ಮೇಲ್ಕಂಡವರೆಲ್ಲರು ತಮ್ಮ ಮನೆಯ ಬಳಿ ಬಂದು ಏಕಾಏಕಿ ಗಲಾಟೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಮೈಮೇಲೆ ಕೈಗಳಿಂದ ಹೊಡೆದು ನೋವುಂಟು ಮಾಡಿದ್ದು, ಅವರಲ್ಲಿ ಗುರ್ರಪ್ಪ ಬಿನ್ ವೆಂಕಟರಾಮಪ್ಪ ರವರು ಅಲ್ಲೆ ಬಿದ್ದಿದ್ದ ದೊಣ್ಣೆಯಿಂದ ತನ್ನ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಉಳಿದವರು ಕೈಗಳಿಂದ ಮೈಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಮನೋಹರ ಬಿನ್ ಶಂಕರಪ್ಪ ಮತ್ತು ರಮಣ ಬಿನ್ ರಾಮಮೂರ್ತಿ ರವರು ಬಂದು ಗಲಾಟೆಯನ್ನು ಬಿಡಿಸಿದ್ದು, ಎಲ್ಲರೂ ನಿನ್ನನ್ನು ಸಾಯಿಸುವವರೆಗೂ ಬಿಡುವುದಿಲ್ಲೆವಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಗಾಯಗೊಂಡಿದ್ದ ತಾನು ಬಾಬು ಬಿನ್ ಶಂಕರಪ್ಪ ರವರ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದು, ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

2)  ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 21/2019. ಕಲಂ. ಮನುಷ್ಯ ಕಾಣೆ:-

     ದಿನಾಂಕ 10/04/2019 ರಂದು ಪಿರ್ಯಾದಿ ಶ್ರೀನಿವಾಸ ಬಿನ್ ಮಲ್ಲಪ್ಪ ವರು ಠಾಣೆಗೆ ಹಾಜರಾಗಿ ನೀಡಿದ ಟೈಪಿಂಗ್ ದೂರಿನ ಸಾರಾಂಶವೇನೆಂದರೆ, ತಾನು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ತಂದೆ-ತಾಯಿಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ತಾನು ಒಬ್ಬ ಗಂಡು ಮಗನಾಗಿದ್ದು,. ತಮ್ಮ ತಾಯಿ ಸುಮಾರು 14 ವರ್ಷಗಳ ಹಿಂದೆ ಮೃತಪಟ್ಟಿದ್ದು, ಅಂದಿನಿಂದಲೂ ತಮ್ಮ ತಂದೆ ಮಲ್ಲಪ್ಪ ರವರು  ತಮ್ಮೊಂದಿಗೆ ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತಾರೆ. ತಮ್ಮ ತಂದೆಯವರು ದಿನಾಂಕ 23/03/2019 ರಂದು ಬೆಳಗ್ಗೆ ಸುಮಾರು 10.00 ಗಂಟೆಯಲ್ಲಿ ತಮ್ಮ ಜಮೀನಿನ ಬಳಿ ಬಂದು ಬೇಲಿ ಗಿಡಗಳನ್ನು ಹೊಡೆಯುತ್ತಿದ್ದಾಗ ತಾನು ಏಕೆ ನೀನು ಸುಮ್ಮನೆ ಮನೆಯಲ್ಲಿರದೆ ಇಲ್ಲಿಗೆ ಬಂದಿರುವುದು, ನಿನಗೆ ಮೊದಲೇ ವಯಸ್ಸಾಗಿದೆ, ಕಾಲು ಬೇರೆ ಸರಿಯಿಲ್ಲ ಮನೆಗೆ ಬಾ ಎಂದು ಹೇಳಿ ಮನೆಗೆ ವಾಪಸ್ಸು ಕರೆದುಕೊಂಡು ಹೋಗಿ ಮನೆಯಲ್ಲಿ ಬಿಟ್ಟು , ತಮ್ಮ ಜಮೀನಿನ ಬಳಿಗೆ ತಾನು ಹೋಗಿದ್ದು. ನಂತರ ತಾನು ತಮ್ಮ ಜಮೀನಿನಿಂದ ಸಂಜೆ ಸುಮಾರು 6.00 ಗಂಟೆಗೆ ಮನೆಗೆ ಬಂದಾಗ ತಮ್ಮ ತಂದೆಯು ಮನೆಯಲ್ಲಿದೇ ಇದ್ದು, ಮನೆಯಲ್ಲಿದ್ದ ತನ್ನ ಮಗನಾದ ಮನೋಜ್ ಗೌಡ ರನ್ನು ವಿಚಾರ ಮಾಡಲಾಗಿ ತಮ್ಮ ತಂದೆಯವರು ಚಿಂತಾಮಣಿಯಲ್ಲಿರು ತಮ್ಮ ಮಾವನಾದ ನಂಜಪ್ಪರವರ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಮದ್ಯಾಹ್ನ ಸುಮಾರು 2.00 ಗಂಟೆಯಲ್ಲಿ ತಮ್ಮ ಗ್ರಾಮದ ವೈ.ಕುರುಪಲ್ಲಿ ಕ್ರಾಸ್ ನಲ್ಲಿ ರೋಜಾ ಬಸ್ ನ್ನು ಹತ್ತಿ ಹೋಗಿರುವುದಾಗಿ ತಿಳಿದ್ದು, ನಂತರ ರಾತ್ರಿಯಾದರೂ ತಮ್ಮ ತಂದೆಯವರು ಮನೆಗೆ ವಾಪಸ್ಸು ಬಂದಿರುವುದಿಲ್ಲ, ನಂತರ ಚಿಂತಾಮಣಿಯಲ್ಲಿರುವ ತಮ್ಮ ಮಾವನನ್ನು ವಿಚಾರ ಮಾಡಲಾಗಿ ಅಲ್ಲಿಗೆ ಬಂದಿರುವುದಿಲ್ಲವೆಂದು ತಿಳಿಸಿದ್ದು, ನಂತರ ತಾನು ಮತ್ತು ತಮ್ಮ ಮನೆಯವರು, ತಮ್ಮ ಸಂಬಂದಿಕರುಗಳ ಮನೆಯಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿರುವುದಲ್ಲ. ಕಾಣೆಯಾದ ತನ್ನ ತಂದೆ ಮಲ್ಲಪ್ಪ ರವರನ್ನು ಹುಡುಕಾಡಿಕೊಂಡಿದ್ದರಿಂದ ಈ ದಿನ ದಿನಾಂಕ 10/04/2019 ರಂದು ತಡವಾಗಿ ದೂರು ನೀಡುತ್ತಿದ್ದು, ಕಾಣೆಯಾದ ತಮ್ಮ ತಂದೆ ಮಲ್ಲಪ್ಪ ರವರನ್ನು  ಪತ್ತೆ ಮಾಡಿಕೊಡಲು ಕೋರಿರುವುದಾಗಿರುತ್ತೆ.

3) ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ: 22/2019. ಕಲಂ: 323, 324, 504, 506 ರೆ/ವಿ 34 ಐ.ಪಿ.ಸಿ:-:-

     ದಿನಾಂಕ 11/04/2019 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ರಮೇಶ್ ಬಿನ್ ರಾಜಣ್ಣ, 35 ವರ್ಷ, ನಾಯಕರು, ಮುಂಗಾನಹಳ್ಳಿ ಗ್ರಾಮ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೇ, ದಿನಾಂಕ 10/04/2019 ರಂದು ರಾತ್ರಿ ಸುಮಾರು 8-00 ಗಂಟೆಯ ಸಮಯದಲ್ಲಿ ನಾನು ನಮ್ಮ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಂತುಕೊಂಡಿದ್ದಾಗ ನಮ್ಮ ಗ್ರಾಮದ ನರಸಿಂಹಪ್ಪ ಬಿನ್ ಬುಡ್ಡಗಂಗಪ್ಪ ಎಂಬುವವರು ಏಕಾಏಕಿ ಬಂದು ಏನೋ ನನ್ನ ಮಗನೆ ನೀನು ಬಸ್ ನಿಲ್ದಾಣದಲ್ಲಿ ಇರುವುದು ಎಂದು ಜಗಳ ತೆಗೆದು ನಿನ್ನಮ್ಮನ್ನೆ ಕ್ಯಾಯಾ ಎಂದು ಬೈಯುತ್ತಿದ್ದಾಗ ಆತನ ಮಗ ಕಲ್ಯಾಣ್ ರವರು ಬಂದು ಈ ನನ್ನ ಮಗನದು ಜಾಸ್ತಿಯಾಯಿತು ಈ ಲೋಫರ್ ನನ್ನ ಮಗನನ್ನು ಸಾಯಿಸಬೇಕು ಎಂದು ಅಲ್ಲೆ ಬಿದ್ದಿದ್ದ ಒಂದು ಕಲ್ಲಿನಿಂದ ನನ್ನ ಎಡಗಣ್ಣಿನ ಭಾಗಕ್ಕೆ ಹೊಡೆದಾಗ ಆಗ ನನಗೆ ರಕ್ತ ಗಾಯವಾಗಿರುತ್ತದೆ ಇವನನ್ನು ಸಾಯಿಸಬೇಕು ಎಂದು ಜೋರಾಗಿ ಕೂಗಿಕೊಂಡರು ಆಗ ನಾನು ಸುಸ್ತಾಗಿ ಕೆಳಗೆ ಬಿದ್ದು ಹೋದೆನು ಅಷ್ಟರಲ್ಲಿ ನಮ್ಮ ಗ್ರಾಮದ ವೆಂಕಟರಾಯಪ್ಪ ಮತ್ತು ನಾಗರಾಜು ರವರು ಬಂದು ಅವರಿಂದ ನನ್ನನ್ನು ಬಿಡಿಸಿ ಅವರಿಗೆ ಬುದ್ದಿವಾದ ಹೇಳಿ ಕಳುಹಿಸಿದರು ನಂತರ ನಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತೇನೆ ಆದ್ದರಿಂದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

4) ಚೇಳೂರು ಪೊಲೀಸ್ ಠಾಣೆ. ಮೊ.ಸಂ. 24/2019. ಕಲಂ. 15(A),32(3) ಕೆ.ಇ.ಆಕ್ಟ್:-

     ದಿನಾಂಕ-11/04/2019 ರಂದು ಬೆಳಿಗ್ಗೆ-11.00 ಗಂಟೆಗೆ ಠಾಣಾ ಹೆಚ್.ಸಿ-129 ರವಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಠಾಣಾಧಿಕಾರಿಗಳ ಆದೇಶದಂತೆ ದಿನಾಂಕ-11-04-2019 ರಂದು ಠಾಣಾದಿಕಾರಿಯವರು ತನಗೆ ಠಾಣಾ ಸರಹದ್ದು ಗ್ರಾಮಗಳಿಗೆ ಭೇಟಿ ನೀಡಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ನನ್ನನ್ನು ನೇಮಿಸಿದ್ದು ಅದರಂತೆ ತಾನು, ವೆಂಕಟರೆಡ್ಡಿಪಲ್ಲಿ, ಮರವಪಲ್ಲಿ, ಮದ್ದಿರೆರೆಡ್ಡಿಪಲ್ಲಿ ಗ್ರಾಮದಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ ಸುಮಾರು-11.00 ಗಂಟೆ ಸಮಯದಲ್ಲಿ ಆದಿರೆಡ್ಡಿಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿರುವಾಗ ಠಾಣಾ ಸರಹದ್ದು ಚಾಕವೇಲು ಗ್ರಾಮದಲ್ಲಿ ಅದೇಗ್ರಾಮದ ವಾಸಿಯಾದ ರಮೇಶ್ ಬಾಬು ಬಿನ್  ಲೇಟ್ ಅಶ್ವತ್ಥನಾರಾಯಣ ಶೆಟ್ಟಿ ಎಂಬುವರು ತನ್ನ ಬಾಬತ್ತು ಅಂಗಡಿ ಮುಂದೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಬಾತ್ಮೀ ತಿಳಿದು ಬಂದಿರುತ್ತೆ.ಆದ್ದರಿಂದ ಠಾಣೆಗೆ ವಾಪಸ್ಸಾಗಿ  ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯಾಗಿರುತ್ತೆ.

5)  ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 65/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ 10-04-2019 ರಂದು ಪಿರ್ಯಾದಿ  ಶ್ರೀ ಚೇತನ್ ಕುಮಾರ್ ಪಿಎಸ್ ಐ ರವರ ದೂರಿನ ಸಾರಾಂಶವೇನೆಂದರೆ ದಿನಾಂಕ; 10-04-2019 ರಂದು ಸಂಜೆ 6.00 ಗಂಟೆ ಸಮಯದಲ್ಲಿ ಎನ್ ಹೆಚ್ 234 ರಿಂದ ಅಂದಾರ್ಲಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಮೋರಿ ಬಳಿ ಯಾವುದೇ ಪರವಾನಿಗೆ ಅಕ್ರಮವಾಗಿ ಸಾರ್ವಜನಿಕರು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದಾಗಿ ಸಿಪಿಸಿ 35 ಸರ್ದಾರ್, ಸಿಪಿಸಿ 203 ಮಂಜುನಾಯ್ಕ್ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ  ನಾನು, ಸಿಬ್ಬಂದಿಯವರಾದ ಹೆಚ್.ಸಿ-141, ಹೆಚ್ ಸಿ 32 ನಾರಾಯಣಸ್ವಾಮಿ,  ಪಿ,ಸಿ 35 ಸರ್ದಾರ್  ಮತ್ತು  ಪಿ,ಸಿ 203 ಮಂಜುನಾಯ್ಕ್, ಪಿ.ಸಿ-262 ಅಂಬರೀಶ್ ರವರೊಂದಿಗೆ ಕೆಎ 40 ಜಿ 567 ಜೀಪ್ ನಲ್ಲಿ ಎ.ಹೆಚ್.ಸಿ 23 ಮಂಜುನಾಥ್ ರವರೊಂದಿಗೆ  ಸಂಜೆ 6.15 ಗಂಟೆಗೆ ಠಾಣೆಯಿಂದ ಹೊರಟು ಸಂಜೆ 6.30 ಗಂಟೆಗೆ ಪಟ್ರೇನಹಳ್ಳಿ ಗ್ರಾಮದ ಬಳಿ ಇದ್ದ 1) ಚಂದ್ರು ಬಿನ್ ನಾರಾಯಣಪ್ಪ  2) ತ್ಯಾಗರಾಜ ಬಿನ್ ಪಿ ರಾಮಯ್ಯ, 3) ಮನೋಜ್ ಬಿನ್ ಲೇಟ್ ಮುನಿಕೃಷ್ಣಪ್ಪ ರವರುಗಳಿಗೆ ಮಾಹಿತಿ ತಿಳಿಸಿ ದಾಳಿ ಪಂಚನಾಮೆಗೆ ಪಂಚರಾಗಿ ಕರೆದುಕೊಂಡು ಪಂಚರು ನಾವು ಕೆಎ 40 ಜಿ 567 ಜೀಪ್ ವಾಹನವನ್ನು ಮರೆಯಾಗಿ ನಿಲ್ಲಿಸಿ  ಎನ್ ಹೆಚ್ 234 ರಿಂದ ಅಂದಾರ್ಲಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಮೋರಿ ಬಳಿ ಹೋದಾಗ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಮದ್ಯಪಾನ ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋದರು  ಮೋರಿ ಬಳಿ ಇದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ವಿನೋದ್ ಬಿನ್ ಶ್ರೀನಿವಾಸ, 23 ವರ್ಷ, ವಕ್ಕಲಿಗರು, ಕೂಲಿಕೆಲಸ, ವಾಸ ಗುಡಿಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ಎಂದು ತಿಳಿಸಿದನು  ಮದ್ಯಪಾನ  ಮಾಡುತ್ತಿದ್ದ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸ್ಥಳದಲ್ಲಿ ಖಾಲಿ ಟೇಟ್ರಾ ಪಾಕೇಟ್ ಗಳು, ಖಾಲಿ ನೀರಿನ ಭಾಟಲ್ ಗಳು ಮದ್ಯ ತುಂಬಿರುವ ಟೆಟ್ರಾ ಪಾಕೇಟ್ ಗಳು, ಕಡಲೆ ಬೀಜ, ಚೀಪ್ಸ್ ಕವರ್ ಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತೆ ಸ್ಥಳದಲ್ಲಿ ಮದ್ಯಪಾನ ಮಾಡಲು ಉಪಯೋಗಿಸುತ್ತಿದ್ದ 1) HAYWARDS CHEER WHISKY ಎಂದು ಲೇಬಲ್ ಇರುವ 90 ಎಂ,ಎಲ್ ನ  03 ಖಾಲಿ ಟೇಟ್ರಾಪಾಕೇಟ್ ಗಳು,  2) ಒಂದು ಲೀಟರ್ ನ 2 ಖಾಲಿ ನೀರಿನ ಬಾಟಲ್  3) ಮದ್ಯ ಪಾನ ಮಾಡಲು ಉಪಯೋಗಿಸಿರುವ 03 ಪ್ಲಾಸ್ಟಿಕ್  ಲೋಟಗಳು , 4) ಮದ್ಯ ತುಂಬಿರುವ HAYWARDS CHEER WHISKY ಎಂದು ಲೇಬಲ್ ಇರುವ 90 ಎಂ,ಎಲ್ ನ  25 ಟೇಟ್ರಾಪಾಕೇಟ್ ಗಳು, 2.250 ಲೀಟರ್ (ಎರಡು ಲೀಟರ್ ಇನ್ನೂರಐವತ್ತು ಮಿಲಿ ಲೀಟರ್)  ಮದ್ಯ ಇದ್ದು ಇದರ  ಬೆಲೆ 758/-ರೂಗಳು (ಎಳುನೂರ ಐವತ್ತೆಂಟು ರೂಪಾಯಿಗಳು) ಆಗಿರುತ್ತೆ ಸ್ಥಳದಲ್ಲಿ ಸಿಕ್ಕ ಮಾಲು. ಮತ್ತು ವಿನೋದ್ ಬಳಿ ಇದ್ದ 1000 (ಒಂದು ಸಾವಿರ ರೂಪಾಯಿಗಳು) ನಗದು ಹಣವನ್ನು  ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ವಿನೋದ್ ರವರನ್ನು ವಶಕ್ಕೆ ತೆಗೆದುಕೊಂಡು ಮಾಲು, ದಾಳಿ ಪಂಚನಾಮೆ, ಅಪಾದಿತನನ್ನು ಠಾಣೆಗೆ ಹಾಜರುಪಡಿಸಿ  ಮುಂದಿನ ಕ್ರಮ ಕೈಗೊಳ್ಳಲು ನೀಡಿದ ವರದಿಯ ಮೇರೆಗೆ ಈ ಪ್ರ.ವ.ವರದಿ

6) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 64/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ಈ ದಿನ ದಿನಾಂಕ: 10/04/2019 ರಂದು ಮಧ್ಯಾಹ್ನ 3.00 ಗಂಟೆ ಸಮಯದಲ್ಲಿ ಪಿ.ಎಸ್.ಐ ಶ್ರೀ ವರುಣ್ ಕುಮಾರ್ ರವರು ಪ್ರಕರಣದಲ್ಲಿ ಮಾಲು ಮತ್ತು ಆರೋಪಿಯನ್ನು ಹಾಜರು ಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ದಿನೇಶ್ ಹೆಚ್ ಸಿ-48, ಹಾಗೂ ಶ್ರೀ ವಿ. ಮುರಳಿ ಸಿಪಿಸಿ-138 ರವರು ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತ ಚಾಮರಾಜಪೇಟೆ, ರೈಲ್ವೇಸ್ಟೇಷನ್ ಹಾಗೂ ಕೆಳಗಿನ ತೋಟಗಳು ಕಡೆ  ಗಸ್ತು ಮಾಡುತ್ತಿದ್ದಾಗ,  ಮದ್ಯಾಹ್ನ ಸುಮಾರು 2-30 ಗಂಟೆಯ ಸಮಯದಲ್ಲಿ   ಕೆಳಗಿನ ತೋಟಗಳ ಹೆಚ್ ಎಸ್ ಗಾರ್ಡನ್ #463 ರ ಮನೆ  ಬಳಿ ಯಾವುದೇ ಪರವಾನಿಗೆ ಇಲ್ಲದೆ ಮಧ್ಯವನ್ನು ಮಾರಾಟವನ್ನು ಮಾಡಿ ಕುಡಿಯಲು ಅವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ನೋಡಿ ಕುಡಿಯಲು ಬಂದಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ವೇಣುಗೋಪಾಲ್ ಬಿನ್ ಲೇಟ್  ಚೆನ್ನಕೃಷ್ಣಪ್ಪ  44 ವರ್ಷ, ಬಲಜಿಗರು, ಹಸಿರುಸೇನೆ & ಸಮಾಜ ಸೇವಕರು, # 463,  ವಾರ್ಡ್-22 ಕೆಳಗಿನ ತೋಟಗಳು(ಹೆಚ್ ಎಸ್ ಗಾರ್ಡ್ ನ್) ಚಿಕ್ಕಬಳ್ಳಾಪುರ ಎಂದು ತಿಳಿಸಿದ್ದು, ಮಧ್ಯ ಮಾರಾಟ ಮಾಡಲು ಪರವಾನಿಗೆಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಆರೋಪಿ ಮತ್ತು ಸ್ಥಳದಲ್ಲಿದ್ದ ಒಂದು ಪ್ಲಾಸ್ಟಕ್ ಕವರ್ ನಲ್ಲಿದ್ದ ಹೈವಾರ್ಡ್ಸ್ ಕಂಪನಿಯ-30 ಎಂಎಲ್ ನ 12, ವಿಸ್ಕಿ, ಹಾಗೂ ರಾಜಾ ಕಂಪನಿಯ-90 ಎಂಎಲ್ ನ 5, ವಿಸ್ಕಿ, ಮದ್ಯದ ಟೆಟ್ರಾ ಪ್ಯಾಕ್ ಮತ್ತು  ಪ್ಲಾಸ್ಟಿಕ್ ಲೋಟ 2 ಇದ್ದು ಇವುಗಳನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಹೈವಾರ್ಡ್ಸ್ ಕಂಪನಿಯ-30 ಎಂಎಲ್ ನ 12, ವಿಸ್ಕಿ,ಆಗಿದ್ದು ಇದರ ಬೆಲೆ  ಸುಮಾರು 360/- ರೂ, ಮತ್ತು ರಾಜಾ ಕಂಪನಿಯ-90 ಎಂಎಲ್ ನ 5, ವಿಸ್ಕಿ ಇದರ ಬೆಲೆ  ಸುಮಾರು 360/- ರೂ ಆಗಿದ್ದು. ಒಟ್ಟು ಬೆಲೆ ರೂ 660=00 ರೂಗಳಾಗಿದ್ದು ಆಸಾಮಿಯು ಯಾವುದೇ ಪರವಾನಗಿಯಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಿ ಕುಡಿಯಲು ಅವಕಾಶ ಮಾಡಿಕೊಟ್ಟಿರುತ್ತಾನೆ. ಮುಂದಿನ ಕ್ರಮಕ್ಕಾಗಿ ಆಸಾಮಿ, ಮತ್ತು ಮದ್ಯವನ್ನು ಮಧ್ಯಾಹ್ನ 02-45 ಗಂಟೆಗೆ ಠಾಣೆಯಲ್ಲಿ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿ ಅಗತ್ಯ ಕ್ರಮ ಕೈಗೊಂಡು ವರಧಿ ಮಾಡುವ ಬಗ್ಗೆ ತಿಳಿಸಿದ ಮೇರೆಗೆ ಪ್ರಕರಣವನ್ನು ದಾಖಲಿಸಿ, ತನಿಖೆ ಕೈಗೊಂಡಿದೆ.

7) ಚಿಕ್ಕಬಳ್ಳಾಪುರ ಸಂಚಾರೀ ಪೊಲೀಸ್ ಠಾಣೆ ಮೊ.ಸಂ. 27/2019. ಕಲಂ. 279, 337 ಐ.ಪಿಸಿ:-

     ದಿನಾಂಕ:-10/04/2019 ರಂದು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ.ಪರ್ತಿಬನ್ ಬಿನ್ ಮುನಿಸ್ವಾಮಿ 32 ವರ್ಷ, ಪ.ಜಾತಿ, ಮೆಕಾನಿಕ್ ವೃತ್ತಿ, ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ತಾನು ಮಹೇಂದ್ರ ಗ್ರೀನ್ ಲೈನ್ ಆಟೋ ಮೈಲೆನ್ಸ್ ಹೈವೇ ಸರ್ವೀಸ್ ಪ್ರವೈಟ್ ಲಿಮಿಟೆಡ್ ನಲ್ಲಿಕೆಲಸ ಮಾಡಿಕೊಂಡಿದ್ದು ದಿನಾಂಕ:-10/04/2019 ರಂದು ತಾನು ತಮ್ಮ ಕಂಪನಿಯ ಮ್ಯಾನೆಜರ್ ಸತ್ಯಮೂರ್ತಿ ಬಿನ್ ಕುಪ್ಪಸ್ವಾಮಿ ನಂ-615 ನ್ಯೂ ಕಾಲೋನಿ, ನೀಲಮಂಗಲಂ ಗ್ರಾಮ, ಕಲ್ಲಕುರುಚಿ ತಾಲ್ಲೂಕು, ವಿಲ್ಲುಪುರಂ ಜಿಲ್ಲೆ ರವರೊಂದಿಗೆ ಹೊಸ ಬುಲೆರೋ ವಾಹನವನ್ನು ಆರ್.ಟಿ.ಓ ಕಛೇರಿಯಲ್ಲಿ ನೊಂದಣಿ ಮಾಡಿಕೊಂಡು ಬೀಚಗಾನಹಳ್ಳಿ ಕ್ರಾಸ್ ಹೋಗಲು ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಎಚ್-7 ರಸ್ತೆಯ ಹೊನ್ನೇನಹಳ್ಳಿ ಗೇಟ್ ಬಳಿ ಮಧ್ಯಾಹ್ನ 3:30 ಗಂಟೆಯ ಸಮಯದಲ್ಲಿ ವಾಹನವನ್ನು ಯೂ ಟರ್ನ್ ಮಾಡಿಕೊಳ್ಳುತ್ತಿರುವಾಗ ಬಾಗೇಪಲ್ಲಿ ಕಡೆಯಿಂದ ಬಂದ ಕೆಎ-53-ಎ-8563 ರ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ವಾಹನದ ಬಲಭಾಗಕ್ಕೆ ಡಿಕ್ಕಿ ಹೊಡೆಯಿಸಿದ ಪರಿಣಾಮ ರಸ್ತೆಯಲ್ಲಿ ವಾಹನ ಉರುಳಿಕೊಂಡಾಗ ತಾನು ಕೆಳಗೆ ಬಿದ್ದು ತನಗೆ ನಡುವಿಗೆ ಮತ್ತು ಎಡಕಾಲಿಗೆ ಮೂಗೇಟುಗಳಾಗಿದ್ದು ತನಗೆ ಡಿಕ್ಕಿ ಹೊಡೆಯಿಸಿದ ಕಾರಿನ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಗಿರೀಶ್ ಕುಮಾರ್ ಬಿನ್ ಚಿನ್ನಪ್ಪ 22 ವರ್ಷ, ಗಂಗ್ಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು ತನ್ನನ್ನು ಅಲ್ಲಿನ ಸ್ಥಳಿಯರು ಉಪಚರಿಸಿ ರಸ್ತೆಯಲ್ಲಿ ಬಂದ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಅಪಘಾತಕ್ಕೆ ಕಾರಣನಾದ ಕೆಎ-53-ಎ-8563 ರ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆ ದೂರಿನ ಮೇರೆಗೆ ದಿನಾಂಕ:-10/04/2019 .ರಂದು ಸಂಜೆ 5:30 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

8) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 118/2019. ಕಲಂ. 353, 504 ರೆ/ವಿ 34 ಐ.ಪಿಸಿ:-

     ದಿನಾಂಕ 11-04-2019 ರಂದು ಮದ್ಯಾಹ್ನ 12-15 ಗಂಟೆಗೆ ಶ್ರೀ ಆರ್.ಜಗದೀಶ್ ರೆಡ್ಡಿ ಪಿ.ಎಸ್.ಐ, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಗೆ ದ್ವಿಚಕ್ರ ವಾಹನಗಳು ಹಾಗೂ ಆರೋಪಿ ಯೊಂದಿಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ 11/04/2019 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ತಾನು ಠಾಣೆಯ ಸಿಬ್ಬಂಧಿಯವರಾದ ಎ.ಎಸ್.ಐ ನರಸಿಂಹಪ್ಪ, ಪಿಸಿ-185 ಶ್ರೀನಿವಾಸ್ ಮೂರ್ತಿ ರವರೊಂದಿಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಬಾಗೇಪಲ್ಲಿ ರಸ್ತೆಯಲ್ಲಿ ಬರುವ ರೈಲ್ವೇ ಬಿಡ್ಜ್ ಬಳಿ ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ತಪಾಸಣೆ ಮಾಡಿ ಐ.ಎಂ.ವಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾಗ ಬೆಳಿಗ್ಗೆ 11-40 ಗಂಟೆ ಸಮಯದಲ್ಲಿ ಬಾಗೇಪಲ್ಲಿ ರಸ್ತೆಯ ಕಡೆಯಿಂದ ಕೆಎ-40-ಎಸ್-0186 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನ ಬಂದಿದ್ದು ಸದರಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಅದರ ಸವಾರನಿಗೆ ವಾಹನದ ದಾಖಲಾತಿಗಳನ್ನು ಹಾಜರು ಪಡಿಸುವಂತೆ ಸೂಚಿಸಿದಾಗ ಸದರಿ ದ್ವಿ ಚಕ್ರ ವಾಹನದ ಸವಾರನಾದ ಕೃಷ್ಣಪ್ಪ ಪಾಲೇಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂಬಾತನು ತನ್ನ ದ್ವಿ ಚಕ್ರ ವಾಹನದ ದಾಖಲಾತಿಗಳನ್ನು ಹಾಜರು ಪಡಿಸಿದ್ದು ಸದರಿ ಸವಾರನು ಹೆಲ್ಮೆಟ್ ಧರಿಸದೇ ವಾಹನವನ್ನು ಚಾಲನೆ ಮಾಡಿರುವುದು ಕಂಡು ಬಂದಿದ್ದ ಕಾರಣ ಆತನಿಗೆ ಹೆಲ್ಮೆಟ್ ಧರಿಸದ ಕಾರಣ 100 ರೂಗಳ ದಂಡದ ರಸೀದಿಯನ್ನು ಬರೆದಿದ್ದು, ಅದೇ ಸಮಯಕ್ಕೆ ಬಾಗೇಪಲ್ಲಿ ರಸ್ತೆಯ ಕಡೆಯಿಂದ ಕೆಎ-40-ಕ್ಯೂ-0728 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನ ಬಂದಿದ್ದು ಅದನ್ನು ನಿಲ್ಲಿಸಿ ಅದರ ಸವಾರನಾದ ಪ್ರಸನ್ನ ಕುಮಾರ್ ಬಿನ್ ಚೌಡರೆಡ್ಡಿ ವಾಸ-ಗೌನಿಮರದಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂಬಾತನಿಗೂ ಸಹ ವಾಹನದ ದಾಖಲಾತಿಗಳನ್ನು ಹಾಜರು ಪಡಿಸುವಂತೆ ಸೂಚಿಸಿದಾಗ ಸದರಿ ಆಸಾಮಿಯು ಸಹ ತನ್ನ ದ್ವಿ ಚಕ್ರ ವಾಹನದ ಇನ್ಸುರೇನ್ಸ್ ಅನ್ನು ಹಾಜರು ಪಡಿಸಿರುವುದಿಲ್ಲ. ಆಗ ತಾನು ಸದರಿ ಆಸಾಮಿಗೆ 500 ರೂಗಳ ದಂಡದ ರಸೀದಿಯನ್ನು ಬರೆಯುತ್ತಿದ್ದಾಗ ಸ್ಥಳದಲ್ಲಿದ್ದ ಕೃಷ್ಣಪ್ಪ ಹಾಗು ಪ್ರಸನ್ನ ಕುಮಾರ್ ಇಬ್ಬರು ಸೇರಿ ನಮ್ಮನ್ನು ಕುರಿತು ನೀವು ಯಾವ ಅಧಿಕಾರದ ಮೇಲೆ ದಂಡವನ್ನು ಹಾಕಿದ್ದೀರಾ ನಾವು ದಂಡವನ್ನು ಕಟ್ಟುವುದಿಲ್ಲ ನಿಮ್ಮ ಕೈಯಲ್ಲಿ ಏನಾಗುತ್ತೋ ಮಾಡಿಕೋ ಹೋಗಿ ಎಂದು ಏರು ಧ್ವನಿಯಲ್ಲಿ ಮಾತನಾಡಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು, ಸ್ಥಳದಲ್ಲಿದ್ದ ಎ.ಎಸ್.ಐ ನರಸಿಂಹಪ್ಪ ರವರನ್ನು ಹಿಡಿದು ಎಳೆದಾಡಿ ತಾನು ನಿರ್ವಹಿಸುತ್ತಿದ್ದ ಸರ್ಕಾರಿ ಕೆಲಸವನ್ನು ನಿರ್ವಹಿಸದಂತೆ ಅಡ್ಡಿ ಪಡಿಸಿದಾಗ ಪ್ರಸನ್ನ ಕುಮಾರ್ ರವರನ್ನು ವಶಕ್ಕೆ ಪಡೆಯುವಷ್ಟರಲ್ಲಿ ಕೃಷ್ಣಪ್ಪ ಎಂಬಾತನು ತನ್ನ ದ್ವಿ ಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ. ನಂತರ ಮೇಲ್ಕಂಡ ದ್ವಿ ಚಕ್ರ ವಾಹನಗಳನ್ನು ಸಹ ವಶಕ್ಕೆ ಪಡೆದುಕೊಂಡು ದ್ವಿ ಚಕ್ರ ವಾಹನಗಳು ಹಾಗು ಆರೋಪಿಯಾದ ಪ್ರಸನ್ನ ಕುಮಾರ್ ರವರನ್ನು ಠಾಣೆಗೆ ಕರೆದುಕೊಂಡು ಬಂದು ತಮ್ಮ ಮುಂದೆ ಹಾಜರು ಪಡಿಸಿದ್ದು ಸದರಿ ಆಸಾಮಿಯನ್ನು ಮತ್ತು ದ್ವಿಚಕ್ರ ವಾಹನವನ್ನು ತಮ್ಮ ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಸೂಚಿಸಿದೆ.

9) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 41/2019. ಕಲಂ. 15(A), 32(3) ಕೆ.ಇ.ಆಕ್ಟ್:-

ಈ ದಿನ ದಿನಾಂಕ 10/04/2019 ರಂದು ರಾತ್ರಿ 8.20 ಗಂಟೆಗೆ ಚಿಕ್ಕಬಳ್ಳಾಪುರ ಡಿಸಿಬಿ ಸಿಇಎನ್ ಠಾಣೆಯ ಪಿ.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಂಶವೇನೆಂದರೆ, ತಾನು ಗಸ್ತಿನಲ್ಲಿದ್ದಾಗ ಸೊಣಗಾಣಹಳ್ಳಿ ಗ್ರಾಮದ ವಾಸಿ ಆದಿಮೂರ್ತಿ ಬಿನ್ ಲೇಟ್ ಬಡಗಿ ಗಂಗಪ್ಪ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ತಾನು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 02 ಖಾಲಿ ಹೈವಾರ್ಡ್ಸ್ ಚೇರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕೇಟ್ ಗಳು, ಒಂದು ಲೀಟರ್ ಸಾಮರ್ಥ್ಯದ ಒಂದು ನೀರಿನ ಬಾಟೆಲ್, 2 ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಮದ್ಯ ತುಂಬಿರುವ 90 ಎಂ.ಎಲ್ ನ 24 ಹೈವಾರ್ಡ್ಸ್ ಚೇರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಅಂಗಡಿಯ ಮಾಲೀಕ ಆದಿಮೂರ್ತಿ ಬಿನ್ ಲೇಟ್ ಬಡಗಿ ಗಂಗಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯಾಗಿರುತ್ತೆ.

10) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 42/2019. ಕಲಂ. 15(A), 32(3) ಕೆ.ಇ.ಆಕ್ಟ್:-

ಈ ದಿನ ದಿನಾಂಕ 10/04/2019 ರಂದು ರಾತ್ರಿ 8.50 ಗಂಟೆಗೆ ಚಿಕ್ಕಬಳ್ಳಾಪುರ ಡಿಸಿಬಿ ಸಿಇಎನ್ ಠಾಣೆಯ ಪಿ.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಂಶವೇನೆಂದರೆ, ತಾನು ಗಸ್ತಿನಲ್ಲಿದ್ದಾಗ ಸೊಣಗಾಣಹಳ್ಳಿ ಗ್ರಾಮದ ವಾಸಿ ಶ್ರೀಮತಿ ರತ್ನಮ್ಮ ಕೋಂ ಆದಿಮೂರ್ತಿ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ತಾನು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 02 ಖಾಲಿ ಹೈವಾರ್ಡ್ಸ್ ಚೇರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕೇಟ್ ಗಳು, ಒಂದು ಲೀಟರ್ ಸಾಮರ್ಥ್ಯದ ಒಂದು ನೀರಿನ ಬಾಟೆಲ್, 2 ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್ ನ 15 ಹೈವಾರ್ಡ್ಸ್ ಚೇರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕೇಟ್ ಮತ್ತು 90 ಎಂ.ಎಲ್ ನ 3 ತ್ರೀ ಏಸ್ ವಿಸ್ಕಿಯ 07 ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ರಾತ್ರಿ ಅವೇಳೆಯಾದ್ದರಿಂದ ಆರೋಪಿ ಅಂಗಡಿಯ ಮಾಲೀಕಳಾದ ಶ್ರೀಮತಿ ರತ್ನಮ್ಮ ಕೋಂ ಆದಿಮೂರ್ತಿ ರವರನ್ನು ವಶಕ್ಕೆ ಪಡೆಯದೆ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯಾಗಿರುತ್ತೆ.

11) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 77/2019. ಕಲಂ. 279, 337 ಐ.ಪಿ.ಸಿ:-

     ದಿನಾಂಕ:10-04-2019 ರಂದು ಪಿರ್ಯಾಧಿದಾರರಾದ ಶ್ರೀ ನರಸಿಂಹಮೂರ್ತಿ ಬಿನ್ ಲೇಟ್ ನಾರಾಯಣಪ್ಪ 55 ವರ್ಷ, ಗಾರೆ ಕೆಲಸ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:09-04-2019 ರಂದು ಮಧ್ಯಾಹ್ನ ಸುಮಾರು 2-30 ಗಂಟೆಯಲ್ಲಿ ತನ್ನ ಮಗ ಆದಿನಾರಾಯಣ 27 ವರ್ಷ ರವರು ವೀರರಾಹುತನಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಬಿನ್ ವೆಂಕಟರಮಣಪ್ಪ 32 ವರ್ಷ, & ಕೃಷ್ಣ ಬಿನ್ ರಾಮಚಂದ್ರಚಾರಿ 29 ವರ್ಷ ರವರು ಕೆ,ಎ-40 ಇ,ಡಿ-0950 ಹೀರೊ ಸ್ಪ್ಲೆಂಡರ್+ ದ್ವಿ ಚಕ್ರ ವಾಹನದಲ್ಲಿ ಮೂರು ಜನ ಕುಳಿತುಕೊಂಡು ಗುಡಿಬಂಡೆಯಿಂದ ರಸ್ತೆ ಎಡಬದಿ ಹೋಗುವಾಗ, ರೇಣುಮಾಕಲಹಳ್ಳಿ ಕ್ರಾಸ್ ಬಳಿ ನಂಜುಂಡಪ್ಪ ರವರ ದ್ರಾಕ್ಷಿ ತೋಟದ ಬಳಿ ಹೋಗುವಾಗ, ಎದುರುಗಡೆಯಿಂದ ಕೆ,ಎ-01 ಎ,ಡಿ-2386 ನೊಂದಣಿಯ ಪೋರ್ಡ್ ಕಾರಿನ ಚಾಲಕನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಮೇಲ್ಕಂಡ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರ ಪರಿಣಾಮ, ಆದಿನಾರಾಯಣಪ್ಪನಿಗೆ ಬಲಗೈಗೆ & ಬಲಕಾಲಿಗೆ ರಕ್ತಗಾಯಗಳಾಗಿದ್ದು, ರಾಮಕೃಷ್ಣ ರವರಿಗೆ ಬಲತೊಡೆಗೆ ರಕ್ತಗಾಯ ಆಗಿದ್ದು, ಕೃಷ್ಣ ರವರಿಗೆ ಬಲಭುಜಕ್ಕೆ ಮೂಗೇಟು ಆಗಿದ್ದು, ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸಿಕೊಂಡಿದ್ದು, ರಾಮಕೃಷ್ಣ ರವರು ಹೆಚ್ಚಿನ ಚಿಕಿತ್ಸೆಗಾಗಿ ಹಿಂದೂಪುರಕ್ಕೆ ಹೋಗಿದ್ದು, ಕೆಲವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಅಪಘಾತ ಪಡಿಸಿದ ಕೆಎ-01 ಎ,ಡಿ-2386 ಪೋರ್ಡ ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು ಆಗಿರುತ್ತೆ.

12) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 72/2019. ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ:07/04/2019 ರಂದು ಮದ್ಯಾಹ್ನ 3-15 ಗಂಟೆಯ ಸಮಯದಲ್ಲಿ ಹೆಚ್.ಸಿ 59 ರವರು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿರುವಾಗ ತನಗೆ ಬಾತ್ಮೀದಾರರಿಂದ ಇಂದಿರಾನಗರದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆಯಲ್ಲಿ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು  ಠಾಣೆಯಲ್ಲಿದ್ದ ಸಿಬ್ಬಂಧಿಗಳಾದ ಹೆಚ್.ಸಿ-219, ಶ್ರೀನಿವಾಸಮೂತರ್ಿ, ಹೆಚ್.ಸಿ-137, ಮಂಜುನಾಥ್ , ಪಿ.ಸಿ. 532 ಶ್ರೀ ಚಿಕ್ಕಣ್ಣ, ಪಿ.ಸಿ. 392 ಶ್ರೀ ಬಾಬು ಪಿಸಿ 537 ಆನಂದಕುಮಾರ್ ರವರೊಂದಿಗೆ ದ್ವಿ ಚಕ್ರವಾಹನಗಳಲ್ಲಿ ಪಂಚರೊಂದಿಗೆ ಇಂದಿರಾನಗರದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ವಾಹಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ಗೆ 100/- ರೂ. ಬಾಹರ್ಗೆ 100/-ರೂ.ಗಳು ಎಂದು ಕೂಗುತ್ತಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಅಲ್ಲಿದ್ದವರನ್ನು  ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ರಮೇಶ್ ಬಿನ್ ಲೇಟ್ ದೊಡ್ಡರಾಮಯ್ಯ, 55 ವರ್ಷ, ಗೊಲ್ಲರು, ಜಿರಾಯ್ತಿ ಕೆಲಸ, ಇಂದಿರಾನಗರ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿನೂರು ತಾಲ್ಲೂಕು 2) ಗಂಗಾಧರಪ್ಪ ಬಿನ್ ಹನುಮಂತಪ್ಪ, 60 ವರ್ಷ, ಕುಂಬಾರರು, ಕೂಲಿ ಕೆಲಸ, ಇಂದಿರಾನಗರ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿನೂರು ತಾಲ್ಲೂಕು 3) ನಾಗರಾಜ ಬಿನ್ ಲೇಟ್ ಹನುಮಂತಪ್ಪ, 65 ವರ್ಷ, ಕುಂಬಾರರು, ಕೂಲಿ ಕೆಲಸ, ಇಂದಿರಾನಗರ ಗ್ರಾಮ, ತೊಂಡೆಬಾವಿ ಹೋಬಳಿ,  ಗೌರಿಬಿನೂರು ತಾಲ್ಲೂಕು 4) ಆನಂದ್ ಬಿನ್ ಲೇಟ್ ತಿಮ್ಮಯ್ಯ, 43 ವರ್ಷ, ಕುರುಬರು, ಪ್ಯಾಕ್ಟರಿಯಲ್ಲಿ ಕೆಲಸ, ಮುತ್ತಗದಹಳ್ಳಿ ಗ್ರಾಮ, ತೊಂಡೆಬಾವಿ ಹೋಬಳಿ,  ಗೌರಿಬಿದನೂರು ತಾಲ್ಲೂಕು 5) ನರಸಿಂಹಮೂರ್ತಿ ಬಿನ್ ನಲ್ಲಪ್ಪ, 35 ವರ್ಷ, ಗೊಲ್ಲರು, ಪ್ಯಾಕ್ಟರಿಯಲ್ಲಿ ಕೆಲಸ, ಇಂದಿರಾನಗರ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು, 6) ಲಕ್ಷ್ಮೀನಾರಾಯಣಪ್ಪ ಬಿನ್ ಕರಿಯಣ್ಣ, 40 ವರ್ಷ, ನಾಯಕರು, ಹೂವಿನ ವ್ಯಾಪಾರ, ದೊಡ್ಡಮಲ್ಲೆಕೆರೆ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು. 7) ಪ್ರಕಾಶ ಬಿನ್ ಬಾಲಪ್ಪ, 30 ವರ್ಷ, ಆದಿಕನರ್ಾಟಕ ಜನಾಂಗ, ಕೂಲಿ ಕೆಲಸ, ದೊಡ್ಡಮಲ್ಲೆಕೆರೆ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 3600/-( ಮೂರು ಸಾವಿರದ ಆರು ನೂರು ರೂಪಾಯಿಗಳು ಮಾತ್ರ.) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು  ಮದ್ಯಾಹ್ನ 3-45 ಗಂಟೆಯಿಂದ ಸಂಜೆ 4-45 ಗಂಟೆಯ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿದ್ದು ಮಾಲನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು ಇವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ  NCR No 122/2019 ರ ದಂತೆ ದಾಖಲಿಸಿ ಈ ದಿನ ದಿನಾಂಕ 10/04/2019 ರಂದು ಘನ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲು ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೆ.

13) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 73/2019. ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ 07/04/2019 ರಂದು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸಮೂರ್ತಿ ಹೆಚ್.ಸಿ 219  ರವರು ಠಾಣೆಯಲ್ಲಿ ಮಾಲು ಮತ್ತು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:07/04/2019 ರಂದು ಸಂಜೆ 5-15 ಗಂಟೆಯ ಸಮಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿರುವಾಗ ನನಗೆ ಬಾತ್ಮೀದಾರರಿಂದ ಜಿ.ಬೊಮ್ಮಸಂದ್ರ ಬಸ್ ನಿಲ್ದಾಣದ ಬಳಿ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು  ಠಾಣೆಯಲ್ಲಿದ್ದ ಸಿಬ್ಬಂಧಿಗಳಾದ ಹೆಚ್.ಸಿ-59, ಶ್ರೀನಿವಾಸಪ್ಪ, ಹೆಚ್.ಸಿ-137, ಮಂಜುನಾಥ್, ಪಿ.ಸಿ. 532 ಶ್ರೀ ಚಿಕ್ಕಣ್ಣ, ಪಿ.ಸಿ. 392 ಶ್ರೀ ಬಾಬು ಪಿಸಿ 537 ಆನಂದಕುಮಾರ್ ರವರೊಂದಿಗೆ ದ್ವಿ ಚಕ್ರವಾಹನಗಳಲ್ಲಿ ಪಂಚರೊಂದಿಗೆ ಜಿ.ಬೊಮ್ಮಸಂದ್ರ ಬಸ್ ನಿಲ್ದಾಣದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ವಾಹಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ಗೆ 100/- ರೂ. ಬಾಹರ್ಗೆ 100/-ರೂ.ಗಳು ಎಂದು ಕೂಗುತ್ತಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಅಲ್ಲಿದ್ದವರನ್ನು  ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಗಂಗಾಧರಸ್ವಾಮಿ ಬಿನ್ ಮಲ್ಲಿಕಾಜರ್ುನ, 40 ವರ್ಷ, ಲಿಂಗಾಯತರು, ಪೂಜಾರಿ ಕೆಲಸ, ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಭೀಮೇಶ್ ಬಿನ್ ಚಿಕ್ಕಗಂಗಪ್ಪ, 25 ವರ್ಷ, ಪ.ಜಾತಿ ಕೂಲಿ ಕೆಲಸ, ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ನರಸಿಂಹಪ್ಪ ಬಿನ್ ಗಂಗಪ್ಪ, 52 ವರ್ಷ, ನಾಯಕರು, ಜಿರಾಯ್ತಿ, ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು 4) ರವಿ ಬಿನ್ ತಿಮ್ಮೇಗೌಡ, 34 ವರ್ಷ, ಕುರುಬರು, ಜಿರಾಯ್ತಿ, ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 3400/-( ಮೂರು ಸಾವಿರದ ನಾಲ್ಕು ನೂರು ರೂಪಾಯಿಗಳು ಮಾತ್ರ.) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು  ಸಂಜೆ 5-45 ಗಂಟೆಯಿಂದ 6-45 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿದ್ದು ಮಾಲನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು ಇವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ  ಠಾಣಾ NCR No 123/2019 ರಂತೆ ದಾಖಲು ಮಾಡಿಕೊಂಡು ಈ ದಿನ ದಿನಾಂಕ 10/04/2019 ರಂದು ಘನ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲು ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೆ.

14) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 74/2019. ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ:09/04/2019 ರಂದು ಪಿರ್ಯಾದಿದಾರರಾದ ಹೆಚ್.ಸಿ-59, ಶ್ರೀನಿವಾಸಪ್ಪ ರವರು ಮಾಲು ಮತ್ತು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:09/04/2019 ರಂದು ಸಂಜೆ 4-00 ಗಂಟೆಯ ಸಮಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿರುವಾಗ ತನಗೆ ಬಾತ್ಮೀದಾರರಿಂದ ಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆಯ ಪಕ್ಕದಲ್ಲಿ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು  ಠಾಣೆಯಲ್ಲಿದ್ದ ಸಿಬ್ಬಂಧಿಗಳಾದ ಪಿ.ಸಿ. 532 ಶ್ರೀ ಚಿಕ್ಕಣ್ಣ, ಪಿ.ಸಿ. 392 ಶ್ರೀ ಬಾಬು ರವರೊಂದಿಗೆ ದ್ವಿ ಚಕ್ರವಾಹನಗಳಲ್ಲಿ ಪಂಚರೊಂದಿಗೆ ಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ವಾಹಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ಗೆ 200/- ರೂ. ಬಾಹರ್ಗೆ 200/-ರೂ.ಗಳು ಎಂದು ಕೂಗುತ್ತಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಅಲ್ಲಿದ್ದವರನ್ನು  ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಶಿವಕುಮಾರ್ ಬಿನ್ ವೀರಭದ್ರಪ್ಪ, 22 ವರ್ಷ, ಲಿಂಗಾಯ್ತರು, ಕಂಪೆನಿಯಲ್ಲಿ ಕೆಲಸ, ವಾಸ ಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಮಂಜುನಾಥ್ ಬಿನ್ ಸುಬ್ಬರಾಯಪ್ಪ, 26 ವರ್ಷ, ಮಡಿವಾಳ ಜನಾಂಗ, ಗಾರ್ಮೆಂಟ್ಸ್ ನಲ್ಲಿ ಕೆಲಸ, ಬಿಸಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ರವಿಕುಮಾರ್ ಬಿನ್ ಪಿ ಕೃಷ್ಣಪ್ಪ, 50 ವರ್ಷ, ಸಾದರ ಜನಾಂಗ, ಜಿರಾಯ್ತಿ ಕೆಲಸ, ಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 4) ಹರೀಶ ಬಿನ್ ನಾಗರಾಜ್, 25 ವರ್ಷ, ಬಲಜಿಗರು, ಚಾಲಕ ಕೆಲಸ, ಬೀರಮಂಗಲ ಗ್ರಾಮ, ಗೌರಿಬಿದನೂರು ತಾಲ್ಲೂಕು 5) ಲಕ್ಕೇಗೌಡ ಬಿನ್ ದೊಡ್ಡಹನುಮೇಗೌಡ, 45 ವರ್ಷ, ವಕ್ಕಲಿಗರು, ಜಿರಾಯ್ತಿ ಕೆಲಸ, ನಲ್ಲಕದಿರೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ಅವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 4540/-( ನಾಲ್ಕು ಸಾವಿರದ ಐದು ನೂರ ನಲವತ್ತು ರೂಪಾಯಿಗಳು ಮಾತ್ರ.) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು  ಸಂಜೆ 4-30 ಗಂಟೆಯಿಂದ ಸಂಜೆ 5-30 ಗಂಟೆಯ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿದ್ದು ಮಾಲನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು ಇವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ NCR 124/2019 ರಂತೆ ದಾಖಲಿಸಿಕೊಂಡು ಈ ದಿನ ದಿನಾಂಕ: 10/04/2019 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

15) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 75/2019. ಕಲಂ. 279, 304(A) ಐ.ಪಿ.ಸಿ:-

     ದಿನಾಂಕ 11/04/2019 ರಂದು ಸಂಜೆ 4-00 ಗಂಟೆಗೆ ಪಿರ್ಯಾಧಿ ಬಂಡಿರಾಮನಹಳ್ಳಿ ಗ್ರಾಮದ ಶ್ರೀನಿವಾಸರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 11/04/2019 ರಂದು ಮದ್ಯಾಹ್ನ ಸುಮಾರು 3-00 ಗಂಟೆಯ ಸಮಯದಲ್ಲಿ ತಾನು ನಮ್ಮ ಮನೆಯಲ್ಲಿರುವಾಗ ನನ್ನ ತಂದೆ ಗಂಗಾಧರರೆಡ್ಡಿ.ಬಿ.ಪಿ ಬಿನ್ ಲೇಟ್ ಎಂ.ಪಾಪಣ್ಣ 65 ವರ್ಷ ರವರಿಗೆ ಬರ್ಜಾನಕುಂಟೆ ಕ್ರಾಸ್ ಹತ್ತಿರ ಕೆಎಂಎಫ್ ಹಾಲಿ ಕೇಂದ್ರದ ಮುಂಭಾಗ ರಸ್ತೆ ಅಪಘಾತ ಉಂಟಾಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಮೃತ ದೇಹವನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುತ್ತಾರೆಂತ ವಿಷಯ ತಿಳಿಯಿತು. ಆಗ ನಾನು ತಕ್ಷಣ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ನನ್ನ ತಂದೆಗೆ, ತಲೆಗೆ, ಎರಡೂ ಕೈಗಳಿಗೆ, ಎರಡೂ ಕಾಲುಗಳಿಗೆ ರಕ್ತಗಾಯವಾಗಿ ಮೃತಪಟ್ಟಿದ್ದರು. ವಿಚಾರಣೆ ಮಾಡಲಾಗಿ ನನ್ನ ತಂಗಿ ಜ್ಯೋತಿ ಬಿ.ಜಿ. ಕೆಎಂಎಫ್ ಹಾಲಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಇವರನ್ನು ಮಾತನಾಡಿಸಿಕೊಂಡು ಬರಲು ಮದ್ಯಾಹ್ನ ಸುಮಾರು 1-00 ಗಂಟೆಯ ಸಮಯದಲ್ಲಿ ನಮ್ಮ ಮನೆಯಿಂದ ಗೌರೀಬಿದನೂರು ಮಾರ್ಗವಾಗಿ ನಮ್ಮ ಬಾಬತ್ತು ಕೆಎ 40-ಆರ್-0923 ರ ಹೆವಿ ಡ್ಯೂಟಿ ದ್ವಿಚಕ್ರವಾಹನದಲ್ಲಿ ನನ್ನ ತಂದೆ ಹೋಗಿದ್ದು, ಮದ್ಯಾಹ್ನ ಸುಮಾರು 2-45 ಗಂಟೆಯ ಸಮಯದಲ್ಲಿ ನನ್ನ ತಂದೆ ಮೇಲ್ಕಂಡ ಸ್ಥಳದಲ್ಲಿ ಹೋಗುತ್ತಿದ್ದಾಗ ಇವರ ಎದರುಗಡೆಯಿಂದ ಬಂದ ಅಂದರೆ ಬೆಂಗಳೂರು ಕಡೆಯಿಂದ ಬಂದ ಕೆಎ41-ಎ-9143 ರ ಟಿಪ್ಪರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಂದೆ ಚಾಲನೆ ಮಾಡಿಕೊಂಡು ಹೊಗುತ್ತಿದ್ದ ಮೇಲ್ಕಂಡ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ನನ್ನ ತಂದೆಗೆ ಮೇಲ್ಕಂಡಂತೆ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆಂತ ವಿಷಯ ತಿಳಿಯಿತು.ನನ್ನ ತಂದೆಗೆ ರಸ್ತೆ ಅಪಘಾತದಲ್ಲಿ ಉಂಟಾದ ಗಾಯಗಳ ದಸೆಯಿಂದ ಮೃತಪಟ್ಟಿರುತ್ತಾರೆ. ಆದ್ದರಿಂದ ನನ್ನ ತಂದೆಯ ಸಾವಿಗೆ ಕಾರಣನಾದ ಕೆಎ41-ಎ-9143 ರ ಟಿಪ್ಪರ್ ವಾಹನದ ಚಾಲಕನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

16) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 28/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ:10/04/2019 ರಂದು  ಸಂಜೆ 06-00 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು  ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 10/04/2019 ರಂದು ಸಂಜೆ 04-10 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಪಾತಪಾಳ್ಯ- ಚೇಳೂರಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಪಾತಪಾಳ್ಯ ಕೆರೆಯ ಬಳಿ ಇರುವ ನಮಾಜ್ ಕಟ್ಟೆಯ ಬಳಿ ಇರುವ ಮರದ ಕೆಳಗೆ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ  ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ಪಾತಪಾಳ್ಯ- ಚೇಳೂರಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಪಾತಪಾಳ್ಯ ಕೆರೆಯ ಬಳಿ ಇರುವ ನಮಾಜ್ ಕಟ್ಟೆಯ ಬಳಿಗೆ ಹೋಗಲಾಗಿ ನಾವು ಹೋಗಿದ್ದ ಜೀಪನ್ನು ನೋಡಿ ಯಾರೋ ಮರದ ಕೆಳಗೆ ಇದ್ದ  ಇಬ್ಬರು ಓಡಿ ಹೋಗಿದ್ದು ಒಬ್ಬ ಆಸಾಮಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ಶ್ರೀರಾಮ ಬಿನ್ ಗಂಗಪ್ಪ 38 ವರ್ಷ ಧೋಬಿ ಜನಾಂಗ ಕೂಲಿ ಕೆಲಸ ಆಕಲೋಳ್ಳಪಲ್ಲಿ ಗ್ರಾಮ ಅಮಡಗೂರು ಮಂಡಲಂ. ಕದಿರಿ ತಾಲ್ಲೂಕು, ಅನಂತಪುರ ಜಿಲ್ಲೆ ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ 15 ಹೈ ವಾರ್ಡ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು 450 ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 02 ಖಾಲಿ ನೀರಿನ ಬಾಟಲ್ ಮತ್ತು 02 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 90 ಮಿ.ಲೀಟರ್ ನ 02  ಹೈ ವಾರ್ಡ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕೆಟ್ ಗಳು ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯವನ್ನು ಮಾರಾಟ ಮಾಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ, ಸದರಿ ಆಸಾಮಿಯನ್ನು ಮತ್ತು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ-28/2019  ಕಲಂ 15 (ಎ), 32(3) KEA ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

17) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 74/2019. ಕಲಂ. 323, 324, 504, 506 ರೆ/ವಿ 34 ಐ.ಪಿ.ಸಿ:-

     ದಿನಾಂಕ:10-04-2019 ರಂದು ಸಂಜೆ 6-45 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀಮತಿ ರಾಮಲಕ್ಷ್ಮಮ್ಮ  ಕೋಂ ವೆಂಕಟನಾರಾಯಣಪ್ಪ, ಕುಂದಲಗುರ್ಕಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಬಾಬತ್ತು ತಮ್ಮ ಗ್ರಾಮದ ಹೆಚ್.ಎಲ್ ನಂ 178/206 ರಲ್ಲಿ ಪೂರ್ವ-ಪಶ್ಚಿಮ 21 ಅಡಿಗಳು ಉತ್ತರ-ದಕ್ಷಣ: 21 ಅಡಿಗಳ ಖಾಲಿ ನಿವೇಶನ ಇದ್ದು ಸದರಿ ಖಾಲಿಜಾಗದಲ್ಲಿ ತಾವೇ ಸ್ವಾಧೀನಾನುಭವದಲ್ಲಿರುತ್ತೇವೆ, ಸದರಿ ತಮ್ಮ ಖಾಲಿ ನಿವೇಶನದ ಉತ್ತರದ ಕಡೆ ಇರುವ  ತಮ್ಮ ಗ್ರಾಮದ ನರಸಿಂಹಪ್ಪ ರವರು ಅವರ ಜಾಗದಲ್ಲಿ ಮನೆಯನ್ನು ನಿರ್ಮಾಣ ಮಾಡಿದ್ದು ಒಂದುವರೆ ಅಡಿಯಷ್ಟು ಜಾಗ ಮಾತ್ರ ಉಳಿಕೆ ಇರುತ್ತದೆ ಈಗಿರುವಲ್ಲಿ ದಿನಾಂಕ: 07/04/2019 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಅದೇ ಗ್ರಾಮದ ವಾಸಿಯಾದ ನರಸಿಂಹಪ್ಪ ಬಿನ್  ಈರಪ್ಪ ರವರು   ಪಿರ್ಯಾದಿದಾರರ ಖಾಲಿನಿವೇಶನದ ಜಾಗದಲ್ಲಿ ಒಂದುವರೆ ಅಡಿ ಒಳಗಡೆ ಮಣ್ಣು ಹಾಕುತ್ತಿದ್ದನು ಆಗ ತಾನು ತಮ್ಮ ಜಾಗದಲ್ಲಿ ಯಾಕೆ ಮಣ್ಣು ಹಾಕುತ್ತಿದ್ದೀಯಾ ಎಂದು ಕೇಳಿದಾಗ ಸದರಿ ನರಸಿಂಹಪ್ಪ ಬಿನ್ ಈರಪ್ಪ ರವರು ನಾನು ಮಣ್ಣು ಹಾಕುವುದೇ ಇದರಲ್ಲಿ ಮೂರು ಅಡಿ ಜಾಗ ನನಗೆ ಸೇರಿದೆ ಎಂದು ತಿಳಿಸಿದ್ದು. ಆಗ ತಾನು ನಮ್ಮ ಜಾಗದಲ್ಲಿ ಮಣ್ಣು ಹಾಕಬೇಡ ಎಂದು ಕೇಳಿದಾಗ ನರಸಿಂಹಪ್ಪ ಮತ್ತು ಆತನ ಮಕ್ಕಳಾದ 1ನೇ ದೇವರಾಜ, 2ನೇ ಮೂರ್ತಿ ಮತ್ತು 3 ನೇ ಮುನಿರಾಜು ರವರನ್ನು ಸ್ಥಳಕ್ಕೆ ಕರೆಯಸಿಕೊಂಡು 4 ಜನರು ಸೇರಿ ತನ್ನ  ಮೇಲೆ ಗಲಾಟೆ ಮಾಡಿ ಅವಾಚ್ಯಶಬ್ದಗಳಿಂದ ಬೈದು  ಅ ಪೈಕಿ ನರಸಿಂಹಪ್ಪ, ದೇವರಾಜು, ಮುನಿರಾಜು ರವರುಗಳು ಕೈಗಳಿಂದ ತನ್ನ ಮೇಲೆ ಹಲ್ಲೆ ಮಾಡಿರುತ್ತಾರೆ, ನಂತರ ಮೂರ್ತಿ  ಅಲ್ಲಿಯೇ ಇದ್ದ ಕಲ್ಲಿನಿಂದ  ತನ್ನ  ಮೂಗಿಗೆ ಹೊಡೆದು ರಕ್ತಗಾಯವುಂಟುಮಾಡಿರುತ್ತಾನೆ. ಅಕ್ಕಪಕ್ಕದ ಮನೆಯವರು ಗಲಾಟೆಯನ್ನು ಬಿಡಿಸಿ ತನ್ನನ್ನು ರಕ್ಷಿಸಿರುತ್ತಾರೆ, ಅಷ್ಟರಲ್ಲಿ ವಿಚಾರ ತಿಳಿದುಕೊಂಡ ತನ್ನ ಗಂಡ ವೆಂಕಟನಾರಾಯಣಪ್ಪ ಸ್ಥಳಕ್ಕೆ ಬಂದು ಎಕೇ ನನ್ನ ಹೆಂಡತಿಯನ್ನು ಹೊಡೆದಿದ್ದು ಎಂದು ನರಸಿಂಹಪ್ಪ ನನ್ನು ಕೇಳಿದಾಗ ತನ್ನ ಗಂಡನ  ಮೇಲೆ ಸಹ ಗಲಾಟೆ ಮಾಡಿ  ಅವಾಚ್ಯಶಬ್ದಗಳಿಂದ ಬೈದು ನಮ್ಮ ತಂಟೆಗೆ ಬಂದರೆ ನಿಮ್ಮ ಇಬ್ಬರನ್ನು ಜೀವಸಹಿಯ ಉಳಿಸುವುದಿಲ್ಲಾ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ, ಮೂಗಿಗೆ ರಕ್ತಗಾಯವಾಗಿದ್ದ ತನ್ನನ್ನು ತನ್ನ ಗಂಡ  ಯಾವುದೋ ಒಂದು ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾನೆ. ಗ್ರಾಮದಲ್ಲಿ ಹಿರಿಯವರು ರಾಜಿ ಪಂಚಾಯ್ತಿ ಮಾಡಿ ಸಮಸ್ಯೆ ಬಗೆಹರಿಸೋಣ ಎಂದು ತಿಳಿಸಿದ್ದರಿಂದ ಪೊಲೀಸರಿಗೆ ಆಸ್ಪತ್ರೆಯಲ್ಲಿ ತನ್ನ ಹೇಳಿಕೆಯನ್ನು ನೀಡಿರುವುದಿಲ್ಲಾ, ಮೇಲ್ಕಂಡವರು ರಾಜಿ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತನ್ನ ಮತ್ತು ತನ್ನ ಗಂಡನ ಮೇಲೆ ಗಲಾಟೆ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಪ್ರಾಣಬೆದರಿಕೆ ಹಾಕಿ ಹಲ್ಲೆಮಾಡಿದ ತಮ್ಮ ಗ್ರಾಮದ ನರಸಿಂಹಪ್ಪ ಮತ್ತು ಆತನ ಮಕ್ಕಳಾದ 1ನೇ ದೇವರಾಜ, 2ನೇ ಮೂರ್ತಿ ಮತ್ತು 3 ನೇ ಮುನಿರಾಜು ರವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿ ಕೊಟ್ಟ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

18) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 75/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಹರೀಶ್ ವಿ  ಪಿ.ಎಸ್.ಐ ಆದ ನನಗೆ ದಿನಾಂಕ.10/04/2019 ರಂದು ಸಂಜೆ 6-45  ಗಂಟೆಯಲ್ಲಿ  ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ನನಗೆ ಬಸವಾಪಟ್ಟಣ ಗ್ರಾಮದ  ಮಂಡಿಭೈರಪ್ಪ ರವರ ಮನೆಯ ಪಕ್ಕದಲ್ಲಿ  ಗ್ರಾಮದ ಸಿಮೆಂಟ್ ರಸ್ತೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ  ಬಂದ ಖಚಿತ  ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿ.ಪಿ.ಸಿ-27 ಸರ್ವೆಶ್ಣ ಸಿಪಿಸಿ-409 ಜಯಶೇಖರ್ ಮತ್ತು ಕೆಎ.40.ಜಿ.357 ಸರ್ಕಾರಿ ಜೀಪಿನ ಚಾಲಕ ಎ.ಹೆಚ್ ಸಿ-15 ಗೌರಿಶಂಕರ ರವರೊಂದಿಗೆ  ಕೆಎ.40.ಜಿ.357 ಜೀಪಿನಲ್ಲಿ ಸಂಜೆ 7-00 ಗಂಟೆಗೆ ಮಳಮಾಚನಹಳ್ಳಿ ಗೇಟ್ ಬಳಿ ಹೋಗಿ ಸಿ.ಪಿ.ಸಿ-14 ರವರಿಗೆ ಇಬ್ಬರು ಪಂಚಾಯ್ತಿದಾರರನ್ನು ನನ್ನ ಮುಂದೆ ಹಾಜರುಪಡಿಸುವಂತೆ ತಿಳಿಸಿದ್ದು ಅದರಂತೆ ಪಿ.ಸಿ-14 ರವರು ಇಬ್ಬರು ಪಂಚಾಯ್ತಿದಾರರನ್ನು ಹಾಜರುಪಡಿಸಿದ್ದು ಅವರಿಗೆ ದಾಳಿಯ ಬಗ್ಗೆ ಮಾಹಿತಿಯನ್ನು ತಿಳಿಸಿ ಪಂಚಾಯ್ತಿದಾರರನ್ನು ಜೀಪ್ ನಲ್ಲಿ ಹತ್ತಿಸಿಕೊಂಡು ರಾತ್ರಿ 7-30 ಗಂಟೆಗೆ ಬಸವಾಪಟ್ಟಣ ಗ್ರಾಮದ  ಮಂಡಿಭೈರಪ್ಪ ರವರ ಮನೆಯ ಪಕ್ಕದಲ್ಲಿ  ಗ್ರಾಮದ ಸಿಮೆಂಟ್ ರಸ್ತೆಯ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ಗಳನ್ನಿಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನಮ್ಮ ನೋಡಿ ಸದರಿ ಅಸಾಮಿ ಮದ್ಯದ ಟೆಟ್ರಾಪಾಕೇಟ್ ಗಳನ್ನು  ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ, ಕುಡಿಯಲು ಬಂದಿದ್ದ ಕೆಲವು ಸಾರ್ವಜನಿಕರು ಸಹ ಓಡಿಹೋಗಿರುತ್ತಾರೆ, ಸ್ಥಳದಲ್ಲಿ ಮದ್ಯ ಕುಡಿಯಲು ಬಂದಿದ್ದ ವ್ಯಕ್ತಿಯನ್ನು ವಿಚಾರ ಮಾಡಲಾಗಿ ಆತನ ಹೆಸರು ಬ್ಯಾಟರಾಯಪ್ಪ ಬಿನ್ ಲೇಟ್ ಪಾಪಣ್ಣ, ಸುಮಾರು 60 ವರ್ಷ, ನಾಯಕರು, ಕೂಲಿಕೆಲಸ, ಮಳಮಾಚನಹಳ್ಳಿ ಗ್ರಾಮ ಎಂತ ತಿಳಿಸಿದ್ದು ಆತನಿಂದ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿದ್ದ ಅಸಾಮಿಯ  ಹೆಸರು ಮತ್ತು ವಿಳಾಸ ಕೇಳಲಾಗಿ ಆತನ ಹೆಸರು ಪಿಳ್ಳೆಗೌಡ ಬಿನ್ ಮುನಿಯಪ್ಪ, 45 ವರ್ಷ,ನಾಯಕರು, ಜಿರಾಯ್ತಿ, ಬಸವಾಪಟ್ಟಣ ಗ್ರಾಮ ,ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿರುತ್ತಾನೆ.  ಸ್ಥಳದಲ್ಲಿದ್ದ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 1] 90 ಎಂ ಎಲ್ ಸಾಮರ್ಥ್ಯದ RAJA  WHISKY  ನ 7 ಟೆಟ್ರಾಪಾಕೆಟ್ಗಳಿದ್ದು, ಒಂದು ಪಾಕೆಟ್ ಬೆಲೆ ರೂ: 30.32 ಆಗಿದ್ದು, ಒಟ್ಟು 212.24 ರೂಗಳ ಬೆಲೆಯಾಗಿದ್ದು , ಹಾಗೂ ಸ್ಥಳದಲ್ಲಿದ್ದ ಒಂದು ಖಾಲಿ ಪ್ಲಾಸ್ಟಿಕ್ ಲೋಟ, ಒಂದು ಲೀಟರ್ ನ ಬಿಸ್ಲರಿ ನೀರಿನ  ಪ್ಲಾಸ್ಟಿಕ್ ಬಾಟಲ್ ಹಾಗೂ RAJA  WHISKY    ನ 7 ಟೆಟ್ರಾಪಾಕೆಟ್ಗಳು ಎಲ್ಲಾ ಮಾಲುಗಳನ್ನು ರಾತ್ರಿ 7-45 ಗಂಟೆಯಿಂದ ರಾತ್ರಿ 8-45 ಗಂಟೆಯವರೆಗೆ ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲುಗಳ ಸಮೇತ ಮುಂದಿನ ಕ್ರಮಕ್ಕಾಗಿ ರಾತ್ರಿ 9-15 ಗಂಟೆಗೆ ವಾಪಸ್ಸು ಬಂದು ಪರಾರಿಯಾದ ಆರೋಪಿಯ ವಿರುದ್ದ ಠಾಣಾ ಮೊ.ಸಂ.75/2019 ಕಲಂ.15[ಎ],32[3] ಕೆ.ಇ ಆಕ್ಟ್ ರಿತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೇನೆ.

19) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 76/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಹರೀಶ್ ವಿ  ಪಿ.ಎಸ್.ಐ ಆದ ನನಗೆ ದಿನಾಂಕ.11/04/2019 ರಂದು  ಬೆಳಿಗ್ಗೆ 6-45  ಗಂಟೆಯಲ್ಲಿ  ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ನನಗೆ ಬಸವಾಪಟ್ಟಣ ಗ್ರಾಮದ  ವೆಂಕಟೇಶಪ್ಪ  ರವರ ಮನೆಯ ಪಕ್ಕದಲ್ಲಿ ಗ್ರಾಮದ ಸಿಮೆಂಟ್ ರಸ್ತೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ  ಬಂದ ಖಚಿತ  ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿ.ಪಿ.ಸಿ-11 ರಾಜು  ಸಿಪಿಸಿ-409 ಜಯಶೇಖರ್ ಮತ್ತು  ಕೆಎ.40.ಜಿ.357 ಸರ್ಕಾರಿ ಜೀಪಿನ ಚಾಲಕ ಎ.ಹೆಚ್ ಸಿ-15 ಗೌರಿಶಂಕರ ರವರೊಂದಿಗೆ   ಕೆಎ.40.ಜಿ.357 ಜೀಪಿನಲ್ಲಿ ಬೆಳಿಗ್ಗೆ 7-30 ಗಂಟೆಗೆ ಭಕ್ತರಹಳ್ಳಿ ಗ್ರಾಮಕ್ಕೆ ಹೋಗಿ ಸಿ.ಪಿ.ಸಿ-11 ರವರಿಗೆ ಇಬ್ಬರು ಪಂಚಾಯ್ತಿದಾರರನ್ನು ನನ್ನ ಮುಂದೆ ಹಾಜರುಪಡಿಸುವಂತೆ ತಿಳಿಸಿದ್ದು ಅದರಂತೆ ಪಿ.ಸಿ-11 ರವರು ಇಬ್ಬರು ಪಂಚಾಯ್ತಿದಾರರನ್ನು ಹಾಜರುಪಡಿಸಿದ್ದು ಅವರಿಗೆ ದಾಳಿಯ ಬಗ್ಗೆ ಮಾಹಿತಿಯನ್ನು ತಿಳಿಸಿ ಭಕ್ತರಹಳ್ಳಿ  ಗ್ರಾಮದ  ವೆಂಕಟೇಶಪ್ಪ ರವರ ಮನೆಯ ಪಕ್ಕದಲ್ಲಿ  ಗ್ರಾಮದ ಸಿಮೆಂಟ್ ರಸ್ತೆಯ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ಗಳನ್ನಿಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನಮ್ಮ ನೋಡಿ ಓಡಿಹೋಗಲು ಪ್ರಯತ್ನಿಸಿದ್ದು ಸುತ್ತುವರೆದು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡಿದ್ದು  ಕುಡಿಯಲು ಬಂದಿದ್ದ ಸಾರ್ವಜನಿಕರು ಓಡಿಹೋಗಿರುತ್ತಾರೆ. ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿದ್ದ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಆತನ ಹೆಸರು ವೆಂಕಟೇಶಪ್ಪ ಬಿನ್ ಚಿಕ್ಕತಿರುಮಳಪ್ಪ, ಸುಮಾರು 43 ವರ್ಷ, ಪ.ಜಾತಿ(ಎಕೆ), ಜಿರಾಯ್ತಿ, ಭಕ್ತರಹಳ್ಳಿ ಗ್ರಾಮ ,ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿರುತ್ತಾನೆ.  ಸದರಿ ಅಸಾಮಿ ಬಳಿ ಇದ್ದ  ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 1] 90 ಎಂ ಎಲ್ ಸಾಮರ್ಥ್ಯದ RAJA WHISKY  ನ 8 ಟೆಟ್ರಾಪಾಕೆಟ್ಗಳಿದ್ದು, ಒಂದು ಪಾಕೆಟ್ ಬೆಲೆ ರೂ: 30.32 ಆಗಿದ್ದು, ಒಟ್ಟು 242.56 ರೂಗಳ ಬೆಲೆಯಾಗಿದ್ದು ಹಾಗೂ ಸ್ಥಳದಲ್ಲಿದ್ದ ಒಂದು ಖಾಲಿ ಪ್ಲಾಸ್ಟಿಕ್ ಲೋಟ, ಒಂದು ಖಾಲಿ RAJA WHISKY ಟೆಟ್ರಾಪಾಕೆಟ್, ಒಂದು ಲೀಟರ್ ನ ಬಿಸ್ಲರಿ ನೀರಿನ ಪ್ಲಾಸ್ಟಿಕ್ ಬಾಟಲ್ ಮೇಲ್ಕಂಡ ಎಲ್ಲಾ ಮಾಲುಗಳನ್ನು ಬೆಳಿಗ್ಗೆ 7-45 ಗಂಟೆಯಿಂದ ಬೆಳಿಗ್ಗೆ 8-45 ಗಂಟೆಯವರೆಗೆ ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲುಗಳ ಸಮೇತ ಮುಂದಿನ ಕ್ರಮಕ್ಕಾಗಿ ಬೆಳಿಗ್ಗೆ 9-15 ಗಂಟೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ.76/2019 ಕಲಂ.15[ಎ], 32[3] ಕೆ.ಇ ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತೇನೆ.

20) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 46/2019. ಕಲಂ. 427 ಐ.ಪಿ.ಸಿ ಮತ್ತು  3(2) (A) PREVENTION OF DAMAGE TO PUBLIC PROPERTY ACT 1984:-

     ದಿನಾಂಕ: 11-04-2019 ರಂದು ಬೆಳಿಗ್ಗೆ 11.00 ಗಂಟೆಗೆ ಶಿಡ್ಲಘಟ್ಟ ನಗರ ಸಭೆ ಅಯುಕ್ತರು, ನಗರ ಸಭೆ ನೌಕರರಾದ ರಮೇಶ್.ಕೆ.ವಿ ರವರಮೂಲಕ ಕಳುಹಿಸಿರುವ ದೂರನ್ನು ಠಾಣೆಯಲ್ಲಿ ಪಡೆದಿದ್ದರ ಸಾರಾಂಶವೇನಂದರೆ, ಶಿಡ್ಲಘಟ್ಟ ನಗರದ 4ನೇ ವಾರ್ಡು ಈದ್ಗಾ ರಸ್ತೆಯಲ್ಲಿ ನಗರಸಭೆಯಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಕೊಳವೆ ಬಾವಿಯನ್ನು ಹಾಕಿದ್ದು, ಅದಕ್ಕೆ 4, 7 ಮತ್ತು 8ನೇ ವಾರ್ಡ್ ನಲ್ಲಿ ನೀರು ಸರಬರಾಜು ಮಾಡಲು ಪೈಪು ಲೈನ್ ಗೇಟ್ ವಾಲ್ವ್, ಎಲ್ಬು ಇತರ ಸಂಪರ್ಕ ಅಳವಡಿಸಿರುತ್ತೆ. ದಿನಾಂಕ.10.04.2019 ರಂದು ಕಚೇರಿಯ ನೀರಗಂಟಿ ಸಾರ್ವಜನಿಕರಿಗೆ ನೀರು ಬಿಡಲು ಹೋದಾಗ ಪೈಪು ಲೈನ್, ಗೇಟ್ ವಾಲ್ ಇತರ ವಸ್ತುಗಳನ್ನು ಹೊಡೆದು ಹಾಕಿರುವುದು ಕಂಡು ಬಂದಿರುವುದಾಗಿ ಮಾಹಿತಿ ನೀಡಿದ್ದು, ಈ  ಬಗ್ಗೆ ದಿನಾಂಕ: 11.04.2019 ರಂದು ಬೆಳಿಗ್ಗೆ 8:45 ಗಂಟೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿದಾಗ 7ನೇ ವಾರ್ಡಿನ ನಗರ ಸಭೆ ಸ್ಯದಸ್ಯರಾದ ಹೆಚ್.ಎಸ್.ನಯಾಜ್ ರವರು ಕೃತ್ಯವೆಸಗಿರುವುದು ಸಂಶಯ ವ್ಯಕ್ತ ಪಡಿಸಿರುತ್ತಾರೆ. ಆದ್ದರಿಂದ ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ತಪ್ಪಿಸ್ಥರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೇನೆ.