ದಿನಾಂಕ: 11-03-2019 ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ: ಮೊ.ಸಂ: 29/2019 ಕಲಂ: 87 ಕೆ.ಪಿ.ಆಕ್ಟ್ :-

     ದಿನಾಂಕ 10/03/2019 ರಂದು ಮಧ್ಯಾಹ್ನ 03.00 ಗಂಟೆಗೆ ಪಿ ಎಸ್ ಐ ರವರು ಠಾಣೆಯಲ್ಲಿ ಮಾಲು ಪಂಚನಾಮೆ ಹಾಗೂ ಒಬ್ಬ ಆಸಾಮಿಯನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆದ ತನಗೆ ದಿನಾಂಕ; 10-03-2019 ರಂದು ಠಾಣಾ ಪ್ರಭಾರದಲ್ಲಿರುವಾಗ ಮಧ್ಯಾಹ್ನ 12:00 ಘಂಟೆಗೆ ಸಮಯದಲ್ಲಿ ಬಂದ ಮಾಹಿತಿ ಏನೆಂದರೆ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ ಹುನೇಗಲ್ ಗ್ರಾಮದ ಬೆಟ್ಟಹಲಸೂರು ಮಂಜನಾಥರವರ ಬಾಬತ್ತು ಜಮೀನು ಪಕ್ಕದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಬಂದ ಮಾಹಿತಿ ಖಚಿತ ಮೇರೆಗೆ ಚಿಕ್ಕಬಳ್ಳಾಪುರ ಪೊಲೀಸ್ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ ಹೆಚ್.ವಿ ಸುದರ್ಶನ್ ನಾನು, ಸಿಬ್ಬಂದಿಯವರಾದ, ಹೆಚ್.ಸಿ 141, ಶ್ರೀ ರಮಣಾರೆಡ್ಡಿ, ಪಿ.ಸಿ-35 ಸರ್ದಾರ್, ಪಿ.ಸಿ-262 ಅಂಬರೀಶ್, ಪಿ.ಸಿ-203 ಮಂಜುನಾಯ್ಕ್ ಪಿ.ಸಿ-231 ನವೀನಬಾಬು ಪಿ.ಸಿ-118 ಬಾಲಾಜಿ ಜೀಪ್ ಸಂಖ್ಯೆ ಕೆಎ,40-ಜಿ-567,ಕೆ.ಎ-40 ಜಿ-538 ರಲ್ಲಿ ಮಧ್ಯಾಹ್ನ1:00 ಗಂಟೆಗೆ ಠಾಣೆಯಿಂದ ಹೊರಟು ಮಧ್ಯಾಹ್ನ 01:15 ಘಂಟೆಗೆ ಹುನೇಗಲ್ ಗ್ರಾಮದ ಬಳಿ ಹೋದೆವು ಹುನೇಗಲ್ ಬಳಿ ಇದ್ದ ಶಿವಾನಂದ, ಬೈರಾರೆಡ್ಡಿ, ರವಿಕುಮಾರವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ಪಂಚರಾಗಿ ಕರೆದುಕೊಂಡು, ಪಂಚರು ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯರೊಂದಿಗೆ  ಸರ್ಕಾರಿ ಜೀಪ್ ಗಳಲ್ಲಿ ಮದ್ಯಾಹ್ನ 1:30 ಗಂಟೆಗೆ ಮಾವಿನ ತೋಪಿನ ಬಳಿ ಮರೆಯಾಗಿ ಜೀಪಗಳನ್ನು ನಿಲ್ಲಿಸಿ ನಾವು ಮತ್ತು ಪೊಲೀಸರು ಮಾವಿನ ತೋಪಿನ ಬಳಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ ಮಾವಿನ ತೋಪಿನ ಪಕ್ಕದ ಸರ್ಕಾರಿ ಜಾಗದಲ್ಲಿ  ಯಾರೋ ಕೆಲವರು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟು ಎಲೆಗಳಿಂದ ಆ ಪೈಕಿ ಒಬ್ಬ ಆಸಾಮಿ ಅಂದರ್ 200 ಎಂತ ಮತ್ತೋಬ್ಬ ಆಸಾಮಿ ಬಾಹರ್ ಗೆ 200 ಎಂತ ಉಳಿದವರು ಸಹ ಅಂದರ್ ಗೆ 200, ಬಾಹರ್ ಗೆ 200 ಎಂತ ಕೂಗುತ್ತ ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್ ಜೂಜಾಟ ಆಡುತ್ತಿರುವುದನ್ನು ಸುತ್ತುವರೆದು, ನಾನು ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ರವರು ಜೂಜಾಟ ಆಡುತ್ತಿದ್ದವರಿಗೆ  ಜೂಜಾಟ ಸ್ಥಳದಿಂದ ಯಾರು ಒಡಿಹೋಗಬಾರದು ಯಥಾಸ್ಥಿತಿಯಲ್ಲಿರುವಂತೆ  ಸೂಚನೆ ನೀಡುತ್ತಿದ್ದಂತೆ ಜೂಜಾಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಲು ಪೈಕಿ ಒಬ್ಬ ಆಸಾಮಿಯನ್ನು ಪೊಲೀಸರು  ಹಿಡಿದುಕೊಂಡರು ಉಳಿದವರು ಸ್ಥಳದಿಂದ ಪರಾರಿಯಾದರು ಸ್ಥಳದಲ್ಲಿ ಸಿಕ್ಕ ಆಸಾಮಿಯ ಅವರ ಹೆಸರು ವಿಳಾಸ ಕೆಳಲಾಗಿ 1) ಬೈರೇಗೌಡ ಬಿನ್ ಲೇಟ್ ಮುನಿಪಾಪಣ್ಣ 45 ವರ್ಷ ವಕ್ಕಲಿಗರು, ಎಂದು ತಿಳಿಸಿದ್ದು ಸ್ಥಳದಿಂದ ಪರಾರಿಯಾದವರ ಹೆಸರು ವಿಳಾಸ ಕೇಳಲಾಗಿ 2)ಗಂಗಾಧರ ಬಿನ್ ನಾರಾಯಣಪ್ಪ, 28 ವರ್ಷ ಬೋವಿ ಜನಾಂಗ.3) ಶ್ರೀನಿವಾಸ ಬಿನ್ ವೆಂಕಟೇಶಪ್ಪ 40 ವರ್ಷ ಬೋವಿ ಜನಾಂಗ ಜಿರಾಯ್ತಿ ವಾಸ ಎಲ್ಲರೂ ಹುನೇಗಲ್ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ಎಂದು ತಿಳಿಸಿ ಉಳಿದವರು ಹೆಸರು ವಿಳಾಸ ತಿಳಿದು ಬಂದಿಲ್ಲ. ಎಂದು ತಿಳಿಸಿದನು ಜೂಜಾಟ ಸ್ಥಳದಲ್ಲಿದ್ದ, ಒಂದು ನ್ಯೂಸ್ ಪೇಪರ್  ಒಟ್ಟು 52 ಇಸ್ಪಿಟು ಎಲೆಗಳಿರುತ್ತೆ ಸ್ಥಳದಲ್ಲಿ ಪಣಕ್ಕೆ ಹಾಕಿದ್ದ ಒಟ್ಟು 820/- ರೂ ಗಳಿರುತ್ತೆ (ಎಂಟನೂರು ಇಪ್ಪತ್ತು ರೂಪಾಯಿಗಳು) ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿತನನ್ನುಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆದುಕೊಂಡು ಮಾಲು, ದಾಳಿ ಪಂಚನಾಮೆ, ಆರೋಪಿತ ನೊಂದಿಗೆ ಮದ್ಯಾಹ್ನ 3:00 ಗಂಟೆಗೆ ಠಾಣೆಗೆ ಹಾಜರುಪಡಿಸಿ ವರದಿ ನೀಡಿರುತ್ತೇನೆ. ಅದರಂತೆ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

2) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ: ಮೊ.ಸಂ: 30/2019 ಕಲಂ: 87 ಕೆ.ಪಿ.ಆಕ್ಟ್ :-

     ದಿನಾಂಕ 10/03/2019 ರಂದು ಮಧ್ಯಾಹ್ನ 03.15 ಗಂಟೆಗೆ ಪಿ ಎಸ್ ಐ ರವರು ಠಾಣೆಯಲ್ಲಿ ಮಾಲು ಪಂಚನಾಮೆ ಹಾಗೂ ನಾಲ್ಕು ಜನ ಆಸಾಮಿಯನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ; 10-03-2019 ರಂದು ನಾನು ಠಾಣಾ ಪ್ರಭಾರದಲ್ಲಿರುವಾಗ ಮಧ್ಯಾಹ್ನ 12:15 ಘಂಟೆಗೆ ಸಮಯದಲ್ಲಿ ಬಂದ ಮಾಹಿತಿ ಏನೆಂದರೆ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ ಆವಲಗುರ್ಕಿ ಗ್ರಾಮದ ಸ್ಮಶಾನದಲ್ಲಿಯಾರೋ ಸುಮಾರು ಜನರು ಗುಂಪು ಸೇರಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಪೊಲೀಸ್ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ ಹೆಚ್.ವಿ ಸುದರ್ಶನ್ ನಾನು, ಸಿಬ್ಬಂದಿಯವರಾದ, ಹೆಚ್ ಸಿ 141, ಶ್ರೀ ರಮಣಾರೆಡ್ಡಿ, ಪಿ.ಸಿ-35 ಸರ್ದಾರ್, ಪಿ.ಸಿ-262 ಅಂಬರೀಶ್, ಪಿ.ಸಿ-203 ಮಂಜುನಾಯ್ಕ್  ಪಿ.ಸಿ-231 ನವೀನಬಾಬು ಪಿ.ಸಿ-118 ಬಾಲಾಜಿ ಜೀಪ್ ಸಂಖ್ಯೆ ಕೆಎ,40-ಜಿ-567, ಕೆಎ 40 ಜಿ 538 ರಲ್ಲಿ ಮಧ್ಯಾಹ್ನ1:15 ಗಂಟೆಗೆ ಠಾಣೆಯಿಂದ ಹೊರಟು ಮಧ್ಯಾಹ್ನ 01:30 ಘಂಟೆಗೆ ಆವಲಗುರ್ಕಿ ಗ್ರಾಮದ ಗೇಟ್ ಬಳಿ ಹೋದೆವು ಗೇಟ್ ಬಳಿ ಇದ್ದ ಗಂಗಾಧರ, ಶ್ರೀನಿವಾಸ, ನಾಗರಾಜ ರವೆರುಗಳನ್ನು ಪಂಚರಾಗಿ  ಬರಮಾಡಿಕೊಂಡು  ಅವರು ಜೂಜಾಟದ ಮಾಹಿತಿಯನ್ನು ತಿಳಿಸಿ  ಪಂಚರಾಗಿ ಕರೆದುಕೊಂಡು  ಪಂಚರು  ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯರೊಂದಿಗೆ  ಸರ್ಕಾರಿ ಜೀಪ್ ಗಳಲ್ಲಿಹೋಗಿ ಅವಲಗು ರ್ಕಿ ಗ್ರಾಮದ ಬಳಿ ನಿಲ್ಲಿಸಿ ಮದ್ಯಾಹ್ನ 1.45 ಗಂಟೆಗೆ ಹುಣಸೇ ಮರದ ಬಳಿ ನಾವು ಮತ್ತು ಪೊಲೀಸರು ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ ಸ್ವ್ಮಶಾನದಲ್ಲಿ ಯಾರೋ ಕೆಲವರು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟು ಎಲೆಗಳಿಂದ ಆ ಪೈಕಿ ಒಬ್ಬ ಆಸಾಮಿ ಅಂದರ್ 500 ಎಂತ ಮತ್ತೋಬ್ಬ ಆಸಾಮಿ ಬಾಹರ್ ಗೆ 500 ಎಂತ ಉಳಿದವರು ಸಹ ಅಂದರ್ ಗೆ 500, ಬಾಹರ್ ಗೆ 500 ಎಂತ ಕೂಗುತ್ತ ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್ ಜೂಜಾಟ ಆಡುತ್ತಿರುವುದನ್ನು ಪೊಲೀಸರು ಸುತ್ತುವರೆದು, ನಾನು ಮತ್ತು  ಪೊಲೀಸ್ ಇನ್ಸ್ ಪೆಕ್ಟರ್ ರವರು ಜೂಜಾಟ ಆಡುತ್ತಿದ್ದವರಿಗೆ  ಜೂಜಾಟ ಸ್ಥಳದಿಂದ ಯಾರು ಒಡಿಹೋಗ ಬಾರದು ಯಥಾಸ್ಥಿತಿಯಲ್ಲಿರುವಂತೆ ಸೂಚನೆ ನೀಡಿ ಜೂಜಾಟ ಆಡುತ್ತಿದ್ದವರನ್ನು ಸುತ್ತುವರೆದು ಹಿಡಿದುಕೊಂಡು ಅವರ ಹೆಸರು ವಿಳಾಸ ಕೆಳಲಾಗಿ 1) ರಾಜೇಶ ಬಿನ್ ಲೇಟ್ ಅಶ್ವಥಪ್ಪ 33 ವರ್ಷ,ಅಗಸರು ಕಾರ್ ಪೆಂಟರ್ ಕೆಲಸ, 2) ರವಿ ಕುಮಾರ್ ಬಿನ್ ಲೇಟ್ ನಾರಾಯಣಪ್ಪ, 30 ವರ್ಷ, ವಕ್ಕಲಿಗರು, ಜಿರಾಯ್ತಿ, 3) ಗಂಗಾಧರ ಬಿನ್ ನಾರಾಯಣಪ್ಪ, 28 ವರ್ಷ, ಪ.ಜಾತಿ, 4) ಸುಧಾಕರ ಬಿನ್ ಲೇಟ್ ಅಶ್ವಥಪ್ಪ, 32 ವರ್ಷ, ಕಾರ್ ಪೆಂಟರ್ ಕೆಲಸ, ಅಗಸರು, ವಾಸ ಎಲ್ಲರೂ ಅವಲಗುರ್ಕಿ  ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. ಎಂದು ತಿಳಿಸಿರುತ್ತಾರೆ. ಜೂಜಾಟ ಸ್ತಳದಲ್ಲಿ ಇದ್ದ ಒಂದು ಪ್ಲಾಸ್ಟಿಕ್ ಪೆಪರ್  52 ಇಸ್ಪೀಟು ಎಲೆಗಳು, ಪಣಕ್ಕೆ ಇಟ್ಟಿದ್ದ 10,360/- ರೂ ಗಳು (ಹತ್ತು ಸಾವಿರದ ಮೂರು ನೂರ ಅರವತ್ತು ರೂಪಾಯಿಗಳು) ಮೇಲ್ಕಂಡ ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದುಕೊಂಡು ಮಾಲು, ದಾಳಿ ಪಂಚನಾಮೆ, 4 ಜನ ಆಸಾಮಿಗಳೊಂದಿಗೆ ಮದ್ಯಾಹ್ನ 3-15 ಗಂಟೆಗೆ ಠಾಣೆಗೆ ಹಾಜರುಪಡಿಸಿ ವರದಿ ನೀಡಿರುತ್ತೇನೆ. ಅದರಂತೆ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

3) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ: ಮೊ.ಸಂ: 31/2019 ಕಲಂ: 15(A) 32(3) ಕರ್ನಾಟಕ ಅಬಕಾರಿ ಕಾಯ್ದೆ:-

     ದಿನಾಂಕ 10/03/2019 ರಂದು ಸಂಜೆ 05.30 ಗಂಟೆಗೆ ಪಿ ಎಸ್ ಐ ರವರು ಪಂಚನಾಮೆ ಮಾಲು ಮತ್ತು ಆಸಾಮಿಯನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ ಎಸ್ ಐ ರವರು ಸಿಬ್ಬಂದಿಯವರಾದ ಹೆಚ್ ಸಿ 64 ದೇವರಾಜ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-567 ರಲ್ಲಿ ಚಾಲಕ  ಎ ಹೆಚ್ ಸಿ 21 ಮಂಜುನಾಥ ರವರೊಂದಿಗೆ ಇಟ್ಟಪ್ಪನಹಳ್ಳಿ ಕಡೆ ಗಸ್ತು ಮಾಡಿ ಕೊಂಡು 3.00 ಗಂಟೆ ಸಮಯದಲ್ಲಿ ನಲ್ಲಗುಟ್ಟಪಾಳ್ಯ ಗೇಟ್ ಬಳಿ ಬಂಧಾಗ ಎಸ್ ಗೊಲ್ಲಹಳ್ಳಿ ಗ್ರಾಮದ ಮುನಿರಾಜು ರವರ ಅಂಗಡಿ ಬಳಿ ಯಾರೋ ಸಾರ್ವಜನಿಕರು ಮಧ್ಯಪಾನ ಮಾಡಿ ತೊಂದರೆ ನೀಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸದರಿ ಗೇಟ್ ಬಳಿ ಇದ್ದ ಮುನಿರಾಜು, ಗಿರೀಶ, ಗಂಗರಾಜು ಪಂಚಾಯ್ತಿ ದಾರರಾಗಿ ಕರೆದು ಕೊಂಡು 3.45 ಗಂಟೆ ಸಮಯದಲ್ಲಿ ಎಸ್ ಗೊಲ್ಲಹಳ್ಳಿ ಗ್ರಾಮದ ಮುನಿರಾಜು ರವರ   ಅಂಗಡಿ ಬಳಿ ಹೋದಾಗ ಅಲ್ಲಿ ಸ್ಥಳದಲ್ಲಿ ಕೆಲವರು ಮಧ್ಯಪಾನ ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಕೆಲವರು ಓಡಿ ಹೋಗಿದ್ದು ಸ್ಥಳದಲ್ಲಿ ಮಧ್ಯಪಾನ ಮಾಡಲು ಉಪಯೋಗಿಸುತ್ತಿದ್ದ 90 ಎಂ ಎಲ್ ನ ಹೈವಾಡ್ಸ ಚೀರ್ ವಿಸ್ಕಿ 01 ಖಾಲಿ ಟೆಟ್ರಾ ಪಾಕೇಟ್ 180 ಎಂ ಎಲ್ ನ Old tavern whisky 3 ಖಾಲಿ ಟೆಟ್ರಾ ಪಾಕೇಟ್ಗಳು, 90.ಎಂ ಎಲ್ ನ Bagpiper Deluxe whisky 1 ಖಾಲಿ ಟೆಟ್ರಾ ಬಾಟಲ್ ಮಧ್ಯಪಾನ ಮಾಡಲು ಉಪಯೋಗಿಸಿದ 5 ಪ್ಲಾಸ್ಟಿಕ್ ಲೋಟಾಗಳು ಮಧ್ಯ ತುಂಬಿರುವ Haywards sheer whisky 90 ಎಂ ಎಲ್ ನ 03 ಟೆಟ್ರಾ ಪಾಕೇಟ್ ಗಳು 270 ಮಿಲಿ ಲೀಟರ್ ಮಧ್ಯಇದ್ದು ಇದರ ಬೆಲೆ 90.96 ರೂಗಳು ಸ್ಥಳದಲ್ಲಿ ಇದ್ದ ಮೇಲ್ಕಂಡ ವಸ್ತುಗಳನ್ನು ಸಂಜೆ 4.00 ಗಂಟೆಯಿಂದ 4.45 ಗಂಟೆಯವರೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಸ್ಥಳದಲ್ಲಿ ದೊರೆತ ಸ್ಥಳದಲ್ಲಿದ್ದ ಮುನಿರಾಜು ಬಿನ್ ದೊಡ್ಡಮುನಿಯಪ್ಪ, 45 ವರ್ಷ, ವಕ್ಕಲಿಗರು ಚಿಲ್ಲರೆ ಅಂಗಡಿ ವ್ಯಾಪಾರ ಎಸ್ ಗೊಲ್ಲಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕ್ ರವರನ್ನು ವಶಕ್ಕೆ ತೆಗೆದು ಕೊ0ಡು ಮಾಲು ಅಮಾನತ್ತು ಪಂಚನಾಮೆ ಆಸಾಮಿಯನ್ನು ಠಾಣೆಗೆ ಹಾಜರುಪಡಿಸಿ ಮುಂದಿನ ಕ್ರಮದ ಬಗ್ಗೆ ನೀಡಿದ ವರದಿಯ ಮೇರೆಗೆ ಈ ಪ್ರ ವ ವರದಿ.

4) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ: ಮೊ.ಸಂ: 32/2019 ಕಲಂ: 87 ಕೆ.ಪಿ.ಆಕ್ಟ್ :-

     ದಿನಾಂಕ 10/03/2019 ರಂದು ಸಂಜೆ 06.30 ಗಂಟೆಗೆ ಪಿ ಎಸ್ ಐ ರವರು ಮಾಲು ಪಂಚನಾಮೆ ಇಬ್ಬರು ಅಸಾಮಿಗಳನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ; 10-03-2019 ರಂದು ಠಾಣಾ ಪ್ರಭಾರದಲ್ಲಿರುವಾಗ ಮಧ್ಯಾಹ್ನ 3:15 ಘಂಟೆಗೆ ಸಮಯದಲ್ಲಿ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ ಕೌರನಹಳ್ಳಿ ಗ್ರಾಮದ  ಗುರುಮೂರ್ತಿ ರವರ  ಜಮೀನಿನ ಬಳಿ ಇರುವ ನೀಲಿಗಿರಿ ತೋಪಿನಲ್ಲಿ ಯಾಸುಮಾರು ಜನರು ಗುಂಪು ಸೇರಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು, ಸಿಬ್ಬಂದಿಯವರಾದ, ಹೆಚ್ ಸಿ 141, ಶ್ರೀ ರಮಣಾರೆಡ್ಡಿ, ಪಿ.ಸಿ-35 ಸರ್ದಾರ್, ಪಿ.ಸಿ-262 ಅಂಬರೀಶ್, ಪಿ.ಸಿ-203 ಮಂಜುನಾಯ್ಕ್  ಪಿ.ಸಿ-231 ನವೀನಬಾಬು ಪಿ.ಸಿ-118 ಬಾಲಾಜಿ ಜೀಪ್ ಸಂಖ್ಯೆ ಕೆಎ,40-ಜಿ-567, ಕೆಎ 40 ಜಿ 538 ರಲ್ಲಿ ಮಧ್ಯಾಹ್ನ4:15 ಗಂಟೆಗೆ ಠಾಣೆಯಿಂದ ಹೊರಟು ಮಧ್ಯಾಹ್ನ 4:30 ಘಂಟೆಗೆ  ವಡ್ರೇಪಾಳ್ಯ  ಗ್ರಾಮದ ಗೇಟ್ ಬಳಿ   ಹೋದೆವು ಗೇಟ್ ಬಳಿ ಇದ್ದ ನಾಗರಾಜು, ಗುರು ರಾಜ್  ,  ಚಂದ್ರಶೇಖರ್  ಮಾಹಿತಿಯ ಸಾರಾಶಂವನ್ನು ತಿಳಿಸಿ ಪಂಚರಾಗಿ ಕರೆದುಕೊಂಡು ಪಂಚರು ಸಿಬ್ಬಂದಿಯರೊಂದಿಗೆ  ಸರ್ಕಾರಿ ಜೀಪ್  ನಲ್ಲಿ ಮದ್ಯಾಹ್ನ 4.45 ಗಂಟೆಗೆ  ಕೌರನಹಳ್ಳಿ  ಗ್ರಾಮದ ಬಳಿ ಹೋಗಿ ವಾಹನಗಳನ್ನು  ಮರೆಯಾಗಿ ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ   ಹೋಗಿ ಮರೆಯಾಗಿ ನಿಂತು ನೋಡಲಾಗಿ ನೀಲಗಿರಿ ತೋಪಿನಲ್ಲಿ  ಯಾರೋ ಕೆಲವರು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟು ಎಲೆಗಳಿಂದ ಆ ಪೈಕಿ ಒಬ್ಬ ಆಸಾಮಿ ಅಂದರ್ 500 ಎಂತ ಮತ್ತೋಬ್ಬ ಆಸಾಮಿ ಬಾಹರ್ ಗೆ 500 ಎಂತ ಉಳಿದವರು ಸಹ ಅಂದರ್ ಗೆ 500, ಬಾಹರ್ ಗೆ 500 ಎಂತ ಕೂಗುತ್ತ ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್ ಜೂಜಾಟ ಆಡುತ್ತಿ ದ್ದವರನ್ನು ಪೊಲೀಸರು ಸುತ್ತುವರೆದು, ಸಬ್ ಇನ್ಸ್ ಪೆಕ್ಟರ್ ರವರು ಜೂಜಾಟ ಆಡುತ್ತಿದ್ದವರಿಗೆ  ಜೂಜಾಟ ಸ್ಥಳದಿಂದ ಯಾರು ಒಡಿಹೋಗಬಾರದು ಯಥಾಸ್ಥಿತಿಯಲ್ಲಿರುವಂತೆಸೂಚನೆ ನೀಡುತ್ತಾ ಜೂಜಾಟ ಆಡುತ್ತಿದ್ದವರನ್ನು ಪೊಲೀಸರು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಹಿಡಿದುಕೊಳ್ಳು ಹೋದಾಗ  ಓದಿ ಹೋದರು   ಪೋಲೀಸರು  ಹಿಂಬಾಲಿಸಿ  ಇಬ್ಬರುಅಸಾಮಿಗಳನ್ನು ಹಿಡಿದುಕೊಮಡು   ಅವರ ಹೆಸರು ವಿಳಾಸ ಕೆಳಲಾಗಿ 1) ಪ್ರಕಾಶ್ ಬಿನ್ ಚನ್ನಪ್ಪ  28 ವರ್ಷ ಬೋವಿ ಜನಾಂಗ ಬಂಡೆ ಕೆಲಸ  , ವಾಸ , ಕೌರನಹಳ್ಳಿ  ಗ್ರಾಮ  ಕಸಬಾ ಹೋಬಳಿ   ಚಿಕ್ಕಬಳ್ಳಾಫುರ ತಾಲ್ಲೂಕು   ಮತ್ತು ಜಿಲ್ಲೆ  2) ಮೂರ್ತಿ  ಬಿನ್  ಕೃಷ್ಣಪ್ಪ  30 ವರ್ಷ ಪ,ಜಾತಿ   ಕೂಲಿ ಕೆಲಸ ವಾಸ , ಕೌರನಹಳ್ಳಿ  ಗ್ರಾಮ  ಕಸಬಾ ಹೋಬಳಿ   ಚಿಕ್ಕಬಳ್ಳಾಫುರ ತಾಲ್ಲೂಕು   ಮತ್ತು ಜಿಲ್ಲೆ  . ಎಂದು ತಿಳಿಸಿದರು ಓಡಿ ಹೋದವರ ಹೆಸರು  ವಿಳಾಸ ಕೇಳಲಾಗಿ ಅವರುಗಳು ಬೇರೆ ಕಡೆಯಿಂದ ಬಂದಿದ್ದು  ಹೆಸರು ವಿಳಾಸ ತಿಳಿದು ಬಂದಿಲ್ಲ ವೆಂದು ಹೇಳಿದರು  .ಜೂಜಾಟದ  ಸ್ಥಳದಲ್ಲಿದ್ದ   ನ್ಯೂಸ್ ಪೇಪರ್ 52 ಇಸ್ಪಿಟು ಎಲೆಗಳು ಪಣಕ್ಕೆ ಇಟ್ಟಿದ್ದ   2280/- ರೂ ಗಳು  (ಎರಡು ಸಾವಿರದ ಎರಡ ನೂರ ಅರವತ್ತು ರೂಪಾಯಿಗಳು) ಮಹಜರ ಮೂಲಕ ಅಮಾನತ್ತು ಪಡಿಸಿಕೊಂಡು  ಇಬ್ಬರುಅಸಾಮಿಗಳನ್ನು  ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದುಕೊಂಡು ಮಾಲು,  ದಾಳಿ ಪಂಚನಾಮೆ, 2 ಜನ ಆಸಾಮಿಗಳೊಂದಿಗೆ  ಸಂಜೆ 6;30 ಗಂಟೆಗೆ ಗಂಟೆಗೆ ಠಾಣೆಗೆ ಹಾಜರುಪಡಿಸಿ ವರದಿ ನೀಡಿರುತ್ತೇನೆ. ಅದರಂತೆ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ  ಮೇರೆಗೆ ಈ ಪ್ರ ವ ವರದಿ.

5) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ: ಮೊ.ಸಂ: 60/2019 ಕಲಂ: 323, 324, 504, 506 ರೆ/ವಿ 34 ಐ.ಪಿ.ಸಿ :-

     ದಿನಾಂಕ:10/03/2019 ರಂದು ರಾತ್ರಿ 23-45 ಗಂಟೆ ಸಮಯದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೊ ಪಡೆದು ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಮಹದೇವ್ ಬಿನ್ ಲೇಟ್ ವೆಂಕಟರಾಯಪ್ಪ, ನಾಯಕರು ವಾಸ ಟಿ.ಹೊಸೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ದಿನಾಂಕ:11/03/2019 ರಂದು 00-45 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು, ಹೇಳಿಕೆಯ ಸಾರಾಂಶವೆನೆಂದರೇ, ಈಗ್ಗೆ ಮೂರು ದಿನಗಳ ಹಿಂದೆ ನಮ್ಮ ಮಾವ ವೆಂಕಟೇಶಪ್ಪ ಬಿನ್ ರಾಮಪ್ಪ ಸರ್ಕಾರಿ ಗ್ರಾಮ ಪಂಚಾಯ್ತಿ ಕಛೇರಿಯಿಂದ ಅನುಮತಿ ಪಡೆದು ಕೊಂಡು ಕುಡಿಯುವ ನೀರಿನ  ಕೋಳಾಯಿ ಹಾಕಿಸಿಕೊಂಡಿದ್ದರು,  ಸದರಿ ಕೋಳಾಯಿ ಹಾಕಿಸಿಕೋಂಡ ನಂತರ ಪಕ್ಕದ ಮನೆಯವರಾದ ನಮ್ಮ ಜನಾಂಗದ ವೆಂಕಟರವಣಪ್ಪನ ಮಕ್ಕಳಾದ ರಮೇಶ ,ಹರೀಶ ಹಾಗು ನಾರಾಯಣಪ್ಪನ ಮಗನಾದ ಆನಂದ ರವರ ಮನೆಯವರು ವೆಂಕಟೇಶಪ್ಪ ಹಾಕಿಸಿಕೊಂಡಿಡರುವ ನಲ್ಲಿಯಲ್ಲಿ ನೀರು ಜಾಸ್ತಿ ಬರುತ್ತಿದೆ ನಮ್ಮ ಮನೆಗಳಿಗೆ ನೀರು ಬರುತಿಲ್ಲವೆಂದು ಬಾಯಿಮಾತಿನ ಜಗಳ ಮಾಡಿಕೋಂಡಿದ್ದರು ಇದೇ ವಿಚಾರದಲ್ಲಿ ದಿನಾಂಕ 10/03/2019 ರಂದು ಸಂಜೆ 7;30ಗಂಟೆ ಸಮಯದಲ್ಲಿ ಮೇಲ್ಕಂಡ ಎರಡೂ ಮನೆಯವರು ನೀರಿನ ವಿಚಾರದಲ್ಲಿ ಗಲಾಟೆ ಮಾಡಿಕೋಳ್ಳುತ್ತಿದ್ದರು .ಆಗ ನಾನು ನಮ್ಮ ಮಾವ ವೆಂಕಟೇಶಪ್ಪ ರವರ ಪರವಾಗಿ ಹೋಗಿ ಬುದ್ದಿ ಹೇಳಲು ಹೋದಾಗ ಮೇಲ್ಕಂಡ ಹರೀಶ, ರಮೇಶ ಮತ್ತು ಆನಂದ ರವರುಗಳು ನೀನು ಯಾರು ಈ ವಿಚಾರದಲ್ಲಿ ಅಡ್ಡ ಬರುವುದು ಎಂದು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ,ರಮೇಶ ರವರು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ನನ್ನ ತಲೆಯ ಬಲಬಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದ,  ಆನಂದ ಕೋಲಿನಿಂದ ನನ್ನ ಎಡ ಕಾಲಿನ ಹಿಂಭಾಗ ಹೊಡೆದು ಮೂಗೇಟು ಉಂಟು ಮಾಡಿದ್ದು, ನಂತರ ಮೇಲ್ಕಂಡ ಮೂರು ಜನರು ನೀನು ನಮ್ಮ ಮನೆಯವರ ತಂಟೆಗೆ ಬಂದರೆ  ನಿನ್ನನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಆಗ ನಮ್ಮ ಗ್ರಾಮದ ಮಂಜುನಾಥ ಬಿನ್ ವೆಂಕಟರವಣಪ್ಪ ,ಚಂದ್ರ, ಇತರೆ ಯವರು ಜಗಳ ಬಿಡಿಸಿ ಗಾಯಗೊಂಡಿದ್ದ ನನ್ನನ್ನು ಮಂಜುನಾಥ ರವರ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ.

6) ಚಿಂತಾಮಣಿ ನಗರ ಪೊಲೀಸ್ ಠಾಣೆ: ಮೊ.ಸಂ: 50/2019 ಕಲಂ: 78(3) ಕೆ.ಪಿ.ಆಕ್ಟ್ ಮತ್ತು ಕಲಂ: 420 ಐ.ಪಿ.ಸಿ

     ದಿನಾಂಕ:11-03-2019 ರಂದು ಬೆಳಗ್ಗೆ 9-15 ಗಂಟೆಯಲ್ಲಿ  ಮಾಲು, ಆಸಾಮಿ ಮತ್ತು ಪಂಚನಾಮೆಯೊಂದಿಗೆ ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ ದಿನಾಂಕ:11-03-2019 ರಂದು ಬೆಳಗ್ಗೆ 7-45 ಗಂಟೆಯ ಸಮಯದಲ್ಲಿ ಠಾಣೆಯಲ್ಲಿದ್ದಾಗ  ಚೇಳೂರು ರಸ್ತೆಯಲ್ಲಿರುವ ಆಹಾರ ಉಗ್ರಾಣ ಮುಂಭಾಗದಲ್ಲಿರುವ ಟೀ ಅಂಗಡಿಯ ಮಟ್ಕಾ ಚೀಟಿಗಳನ್ನು ಬರೆದು ಜನರಿಗೆ ಮೋಸ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಪಂಚರನ್ನು ಮತ್ತು ಠಾಣೆಯ ಪೊಲೀಸ್ ಸಿಬ್ಬಂದಿಯಾದ ಸಿ,ಹೆಚ್,ಸಿ 126 ಮತ್ತು ಸಿಪಿಸಿ 375,24ರವರನ್ನು  ಠಾಣೆಯ  ಜೀಫ್ ನಂ: ಕೆಎ 40 ಜಿ 356  ವಾಹನ ದಲ್ಲಿ ಪ್ಲವರ್ ವೃತ್ತದ ಮಾರ್ಗವಾಗಿ ಚೇಳೂರು ರಸ್ತೆಯ ಮೂಲಕ ಎ.ಪಿ.ಎಂ.ಸಿ ಮಾರುಕಟ್ಟೆಯ ಮುಂಭಾಗ ಮರೆಯಲ್ಲಿ ಜೀಫ್ನ ನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಆಹಾರ ಉಗ್ರಾಣದ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರಸ್ತೆ ಬದಿಯಲ್ಲಿ ಯಾರೋ ಒಬ್ಬ ಆಸಾಮಿ ಕೈಯಲ್ಲಿ ಪೆನ್ನು ಮಟ್ಕಾ ಚೀಟಿಯನ್ನು ಹಿಡಿದು ಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆಯುವಂತೆ ಪ್ರೇರೆಪಿಸುತ್ತಿಸಿ  ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ  ಹಿಡಿದು  ಹೆಸರು ಮತ್ತು ವಿಳಾಸ ಕೇಳಲಾಗಿ ಶಿವಪ್ಪ ಬಿನ್ ಪೆದ್ದಪ್ಪಯ್ಯ,42 ವರ್ಷ, ವಕ್ಕಲಿಗರು,ಟೀಅಂಗಡಿಯಲ್ಲಿ ಕೆಲಸ , ವಾಸ:ಅನಕಲ್ ಶೆಟ್ಟಿಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲುಕು  ಎಂತ ತಿಳಿಸಿದ್ದು ಆತನನ್ನು ಪಂಚರ ಸಮಕ್ಷಮ ಅಂಗ ಶೋಧನೆ ಮಾಡಲಾಗಿ ನಗದು ಹಣ 290 ರೂ, ಒಂದು ಮಟ್ಕಾ ಚೀಟಿ, ಒಂದು ಪೆನ್ನು, ಇವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಡಿಕೊಂಡು ಠಾಣೆಗೆ ಹಾಜರಾಗಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂಖ್ಯೆ:50/2019 ಕಲಂ:78(3) ಮತ್ತು ಕಲಂ:420 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 7) ಚಿಂತಾಮಣಿ ನಗರ ಪೊಲೀಸ್ ಠಾಣೆ: ಮೊ.ಸಂ: 51/2019 ಕಲಂ: 78(3) ಕೆ.ಪಿ.ಆಕ್ಟ್ ಮತ್ತು ಕಲಂ: 420 ಐ.ಪಿ.ಸಿ

     ದಿನಾಂಕ:11-03-2019 ರಂದು ಬೆಳಗ್ಗೆ 11-00 ಗಂಟೆ  ಮಾಲು. ಆಸಾಮಿ ಮತ್ತು ಪಂಚನಾಮೆಯೊಂದಿಗೆ ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ. ತಾನೂ ಬೆಳಗ್ಗೆ 9-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಚೇಳೂರು ರಸ್ತೆಯಲ್ಲಿರುವ ವಿಸ್ಮಯ ಬಾರ್ ಮುಂಭಾಗದ ಸಾರ್ವಜನಿಕ ರಸ್ತೆಯ ಬದಿಯಲ್ಲಿ  ಮಟ್ಕಾ ಚೀಟಿಗಳನ್ನು ಬರೆದು ಜನರಿಗೆ ಮೋಸ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಪಂಚರನ್ನು ಮತ್ತು ಠಾಣೆಯ ಪೊಲೀಸ್ ಸಿಬ್ಬಂದಿಯಾದ ಸಿ.ಪಿ.ಸಿ 375, 24, 544 ರವರನ್ನು  ಠಾಣೆಯ  ಜೀಫ್ ನಂ: ಕೆಎ 40 ಜಿ 356  ವಾಹನ ದಲ್ಲಿ ಪ್ಲವರ್ ವೃತ್ತದ ಮಾರ್ಗವಾಗಿ ಚೇಳೂರು ರಸ್ತೆಯಲ್ಲಿ  ಮರೆಯಲ್ಲಿ ಜೀಫ್ನ ನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ವಿಸ್ಮಯ ಬಾರ್  ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರಸ್ತೆ ಬದಿಯಲ್ಲಿ ಯಾರೋ ಒಬ್ಬ ಆಸಾಮಿ ಕೈಯಲ್ಲಿ ಪೆನ್ನು ಮಟ್ಕಾ ಚೀಟಿಯನ್ನು ಹಿಡಿದು ಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆಯುವಂತೆ ಪ್ರೇರೆಪಿಸುತ್ತಿಸಿ  ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ  ಹಿಡಿದು  ಹೆಸರು ಮತ್ತು ವಿಳಾಸ ಕೇಳಲಾಗಿ ಬಾಬು ಬಿನ್ ಲೇಟ್ ದಸ್ತಗಿರ್ ಸಾಬ್ , 45 ವರ್ಷ,ಮುಸ್ಲಿಂ ಜನಾಂಗ, ವಿಸ್ಮಯಬಾರ್ ನಲ್ಲಿ ಸಪ್ಲೆಯರ್ ಕೆಲಸ ವಾಸ: ಟಿಪ್ಪು ನಗರ, ಚಿಂತಾಮಣಿ ನಗರ ಎಂತ ತಿಳಿಸಿದ್ದು ಆತನನ್ನು ಪಂಚರ ಸಮಕ್ಷಮ ಅಂಗ ಶೋಧನೆ ಮಾಡಲಾಗಿ ನಗದು ಹಣ 5265 ರೂ, ಒಂದು ಮಟ್ಕಾ ಚೀಟಿ, ಒಂದು ಪೆನ್ನು, ಇವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:51/2019 ಕಲಂ:78(3) ಮತ್ತು ಕಲಂ:420 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

8) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ: ಮೊ.ಸಂ: 66/2019 ಕಲಂ: 324 ರೆ/ವಿ 34 ಐ.ಪಿ.ಸಿ

     ದಿನಾಂಕ:10/03/2019 ರಂದು ಬೆಳಗಿನ ಜಾವ 00-30 ಗಂಟೆಯಲ್ಲಿ  ಗೌರೀಬಿದನೂರು ತಾಲ್ಲೂಕು, ಕಸಬಾ ಹೋಬಳಿ, ಚಿಕ್ಕಕುರುಗೋಡು ಗ್ರಾಮದ ವಾಸಿಯಾದ  ಶ್ರೀ.ಶಿವಕುಮಾರ ಬಿನ್ ಮುತ್ತಪ್ಪ  ವಯಸ್ಸು 24 ವರ್ಷ,  ಪರಿಶಿಷ್ಟಜಾತಿ  ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ದಿನಾಂಕ:09/03/2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ  ಪಿರ್ಯಾದಿ  ಮತ್ತು ಈತನ ತಮ್ಮ ರಾಜು ರವರು  ನೆನ್ನೆ  ಆಗಿದ್ದ  ವಿನಾಕಾರಣ ಜಗಳದ ವಿಚಾರವಾಗಿ ಕೇಳು  ಅಂಬರೀಶ್  ಬಿನ್ ಸುಬ್ಬರಾಯಪ್ಪ ನನ್ನು ಕೇಳಲು ಅವರ ಮನೆಗೆ ಹೋದಾಗ,  ಆಗ ಅಲ್ಲಿದ್ದ ಅಂಬರೀಶನ ತಮ್ಮ  ರಾಜಶೇಖರ ಇತರೇ ಇಬ್ಬರು ಕುಳಿತಿದ್ದರು.  ಏಕೆ ನನ್ನ ತಮ್ಮನನ್ನು ನಿನ್ನೆಯ ದಿವಸ  ಹೊಡೆದಿದ್ದು  ಎಂದು ಕೇಳಿದ್ದಕ್ಕೆ  ಅಂಬರೀಶ ಏಕಾಏಕಿ ಕಬ್ಬಿಣದ ರಾಡನ್ನು ತೆಗೆದುಕೊಂಡು  ನನ್ನ ಮೇಲೆ ಹಲ್ಲೆ ಮಾಡಿ ತಲೆಯ ಹಿಂಭಾಗಕ್ಕೆ  ಹೊಡೆದಾಗ,  ಆಗ ಅಯತಪ್ಪಿ ಅಂಬರೀಶ ಮನೆಯ ಮೇಲಿಂದ ಕೆಳಗೆ ಬಿದ್ದಾಗ  ರಾಜಶೇಖರ ದೊಣ್ಣೆಯಿಂದ  ಹಣೆಗೆ ಹೊಡೆದು  ಊತ ಗಾಯ ಮಾಡಿರುತ್ಥಾನೆ. ಹಾಗು ತನ್ನ ತಮ್ಮನಿಗೆ  ಬಲೈಗೆ ದೊಣ್ಣೆಯಿಂದ ಹೊಡೆದಿರುತ್ತಾನೆ.  ಇದನ್ನು ಕಂಡು  ಶಶಿಕುಮಾರ್ ಬಿನ್ ವೆಂಕಟೇಶಪ್ಪ ಹಾಗು ಕುಮಾರ್ ಬಿನ್ ನರಸಿಂಹಪ್ಪ ರವರು ತನ್ನನ್ನು ಉಪಚರಿಸಿರುತ್ತಾರೆಂದು ಆರೋಪಿಗಳ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಕೋರಿರುವುದಾಗಿ.

9) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ: ಮೊ.ಸಂ: 67/2019 ಕಲಂ: 143, 147, 323, 324, 427, 504 ರೆ/ವಿ 149  ಐ.ಪಿ.ಸಿ

     ದಿನಾಂಕ:10/03/2019 ರಂದು ಬೆಳಗಿನ ಜಾವ 00-45 ಗಂಟೆಯಲ್ಲಿ  ಗೌರೀಬಿದನೂರು ಸರ್ಕಾರಿ ಅಸ್ಪತ್ರೆಯಿಂದ ಬಂದ ಮೆಮೂವನ್ನು ಪಡೆದು ಅಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಅಂಬರೀಶ ಬಿನ್ ಲೇಟ್ ಸುಬ್ಬರಾಯಪ್ಪ 28 ವರ್ಷ, ಚಿಕ್ಕಕುರುಗೋಡು  ರವರಿಂದ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶ ದಿನಾಂಕ 09/03/2019 ರಂದು ರಾತ್ರಿ 9 ಗಂಟೆ ಸಮಯದಲ್ಲಿ ಪಿರ್ಯಾಧಿ ಮತ್ತು ತಮ್ಮಂದಿರಾದ ನಾಗರಾಜ, ಪುನೀತ್, ರಾಮಚರಣ್, ರಾಘವೇಂದ್ರ ರವರು ಮನೆಯ ಮೇಲ್ಛಾವಣಿ ಮೇಲೆ ಕುಳಿತುಕೊಂಡು ಮಾತನಾಡುಕೊಳ್ಳುತ್ತಿದ್ದಾಗ ಇದೇ ಗ್ರಾಮದವರಾದ ಗೋವಿಂದ, ಕುಮಾರ, ರಾಜ, ಗೋಪಿ, ಶಶಿಕುಮಾರ್  ರವರು ಮನೆ ಬಳಿ ಬಂದು ವಿನಾಕಾರಣ  ಅವಾಚ್ಯ ಶಬ್ದಗಳಿಂದ ಪಿರ್ಯಾಧಿ ತಾಯಿ ಪದ್ಮ ,ತಂಗಿ ಜ್ಯೋತಿ, ರವರನ್ನು  ಬೈದಾಡುತ್ತಿದ್ದು, ತಮ್ಮ ರಾಜನನ್ನು ಹೊಡೆದು ಮನೆ ಮೇಲೆ ಬಂದು ವಿನಾಕಾರಣ ಪಿರ್ಯಾಧಿಯನ್ನು ಕೈಗಳಿಂದ ಹೊಡೆದು ಕೆಳಗೆ ತಳ್ಳಿ ಕೆಳಗೆ ಬಂದು ಕಿರಿಚಾಡುತ್ತಿದ್ದ ಪಿರ್ಯಾಧಿಯನ್ನು ಎಲ್ಲಾರು ಕೈಗಳಿಂದ ಹೊಡೆದು ಕಟ್ಟಿಗೆಯಿಂದ ಹೊಡೆದು, ಮನೆಯ ಕಿಟಿಕಿ ಗಾಜುಗಳನ್ನು ಹೊಡೆದು ಬಾಗಿಲನ್ನು ಕಟ್ಟಿಗೆಯಿಂದ ಹೊಡೆದು ಪಾಪಕ್ಕನ ಮನೆಯಲ್ಲಿ ಇದ್ದ ಪಿರ್ಯಾಧಿ ತಮ್ಮ ರಾಜನನ್ನು ಮತ್ತೊಂಮ್ಮೆ ಹೊಡೆದಿರುತ್ತಾರೆ, ನಂತರ ನಾಗರಾಜ ರವರು ಉಪಚರಿಸಿ ಅಂಬುಲೆನ್ಸ್ ಕರಿಸಿ ಚಿಕಿತ್ಸೆಗಾಗಿ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದು ಆರೋಪಿಗಳ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಕೋರಿರುವುದಾಗಿರುತ್ತೆ,.

10) ಗೌರಿಬಿದನೂರು ಪುರ ಪೊಲೀಸ್ ಠಾಣೆ: ಮೊ.ಸಂ: 68/2019 ಕಲಂ: 323, 324 ರೆ/ವಿ 34  ಐ.ಪಿ.ಸಿ

     ದಿನಾಂಕ:10/03/2019 ರಂದು 19:30 ಗಂಟೆಗೆ ಪಿರ್ಯಾದಿದಾರರಾದ ಬಾಬಾಜಾನ್ ಬಿನ್ ಲೇಟ್ ಆಜೀಮುಲ್ಲಾ, 28 ವರ್ಷ, ಮುಸ್ಲೀಮರು, ಹಣ್ಣುಗಳ ವ್ಯಾಪಾರ, ಟಿಪ್ಪುನಗರ, ಗೌರಿಬಿದನೂರು ಪುರ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ:09/03/2019 ರಂದು ರಾತ್ರಿ ನಾನು ನಮ್ಮ ಕುಟುಂಬಸ್ಥರೊಂದಿಗೆ ಉರುಸ್ ನೋಡಲು ಹೋಗಿದ್ದಾಗ ಹೀರೆಬಿದನೂರು ದರ್ಗಾದ ಬಳಿ ಇರುವ ಅಜಮತ್ ಬಿನ್ ಛೋಟು ರವರು ವಿನಾಕಾರಣ ನನ್ನ ಮೇಲೆ ಜಗಳ ಮಾಡಿದಾಗ ಅವನಿಗೆ ಬುದ್ದಿ ಹೇಳಿದರೂ ಕೇಳದೆ ಇದ್ದಾಗ ಅವನಿಗೆ ತಡೆದು ನನ್ನ ತಂಟೆಗೆ ಬರದಂತೆ ಕಳುಹಿಸಿಕೊಟ್ಟಿರುತ್ತೇನೆ.  ನಂತರ ನಾವು ಉರುಸ್ ಮುಗಿಸಿಕೊಂಡು ಮನೆಗೆ ಹೋಗಿದ್ದು ರಾತ್ರಿ ಸುಮಾರು 12:00 ಗಂಟೆಯಲ್ಲಿ ಅಜಮತ್ ಬಿನ್ ಛೋಟು @ ಮಹಮದ್ ಜಾಕೀರ್  ಮತ್ತು ಅವರ ತಂದೆಯಾದ ಛೋಟು @ ಮಹಮದ್ ಜಾಕೀರ್ ರವರುಗಳು ನಮ್ಮ ಮನೆಯ ಬಳಿ ಬಂದು ಉರುಸ್ ನಲ್ಲಿ ನಡೆದ ಜಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನನಗೆ ಕೈಗಳಿಂದ ಹಾಗೂ ಕಟ್ಟಿಗೆಯಿಂದ ಹೊಡೆದು ನನ್ನ ಎದೆಗೆ, ತಲೆಗೆ ಬೆನ್ನಿಗೆ ಹೊಡೆದು ಮೂಗೇಟು ಉಂಟುಮಾಡಿರುತ್ತಾರೆ. ಆಗ ಮನೆಯಲ್ಲಿದ್ದ ನನ್ನ ಹೆಂಡತಿ ಸಮೀನಾ ಮತ್ತು ನಮ್ಮ ಅತ್ತೆ ಮಮ್ತಾಜ್ ರವರು ಜೋರಾಗಿ ಕೂಗಿಕೊಂಡು ಜಗಳ ಬಿಡಿಸಿರುತ್ತಾರೆ. ನನಗೆ ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಮೂಗೇಟು ಉಂಟು ಮಾಡಿರುವ ಅಜಮತ್ ಬಿನ್ ಛೋಟು @ ಮಹಮದ್ ಜಾಕೀರ್ ಹಾಗೂ ಅವರ ತಂದೆಯಾದ ಛೋಟು @ ಮಹಮದ್ ಜಾಕೀರ್ ರವರುಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ನೀಡಿದ ದೂರಾಗಿರುತ್ತೆ.

11) ಮಂಚೇನಹಳ್ಳಿ ಪೊಲೀಸ್ ಠಾಣೆ: ಮೊ.ಸಂ: 43/2019 ಕಲಂ: 457, 380 ಐ.ಪಿ.ಸಿ

     ದಿನಾಂಕ 11/03/2019 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾಧಿ ಭಾಸ್ಕರ್ ಬೇವನಹಳ್ಳಿ ಗ್ರಾಮದ ಅಂಚೆ ಕಚೇರಿಯ ಮಾಸ್ಟರ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 6 ವರ್ಷಗಳಿಂದ ಗೌರೀಬಿದನೂರು ತಾಲ್ಲೂಕಿನ ಬೇವನಹಳ್ಳಿ  ಗ್ರಾಮದ ಶಾಖಾ ಅಂಚೆ ಕಚೇರಿಯಲ್ಲಿ ಅಂಚೆ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದು, ನಾನು ಬೇವಿನಹಳ್ಳಿಯಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ಸದರಿ ಅಂಚೆ ಕಛೇರಿಯು ಬೇವಿಹಳ್ಳಿ ಗ್ರಾಮದ ಕೃಷ್ಣಪ್ಪ ಬಿನ್ ಲೇಟ್ ಮುದ್ದುಗಂಗಪ್ಪ ರವರ ಮನೆಯಲ್ಲಿ ಬಾಡಿಗೆಗೆ ತೆಗೆದುಕೊಂಡಿರುತ್ತೆ. ದಿನಾಂಕ 09/03/2019 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯ ಸಮಯದಲ್ಲಿ ನಾನು ತೊಂಡೇಬಾವಿ ಉಪ ಅಂಚೆ ಕಛೇರಿಯಲ್ಲಿ 80000/-(ಎಂಬತ್ತು ಸಾವಿರ) ರೂಗಳನ್ನು ಉಳಿತಾಯ ಖಾತೆಯ ಹಣ ವಾಪಸಾತಿಗೂ ಮತ್ತು ಆವತರ್ಿಕ ಠೇವಣಿಗೆಂದು ತೆಗೆದುಕೊಂಡು ಬಂದು 37950/-(ಮುವತ್ತು ಏಳುಸಾವಿರ ಒಂಬೈನೂರ ಐವತ್ತು) ರೂಗಳನ್ನು ಗ್ರಾಹಕರಿಗೆ ನೀಡಿರುತ್ತೇನೆ. ಉಳಿಕೆ 47403/-(ನಲವತ್ತು ಏಳುಸಾವಿ ನಾಲ್ಕು ನೂರ ಮೂರು) ರೂ ಗಳನ್ನು ಟೇಬಲ್ ನ ಡ್ರಾನಲ್ಲಿ ಇಟ್ಟು ಆ ದಿನ ಮದ್ಯಾಹ್ನ  2-30 ಗಂಟೆಗೆ ಕಚೇರಿಯ ಬಾಗಿಲುಗೆ ಬೀಗ ಹಾಕಿ ಮನೆಗೆ ವಾಪಸ್ಸು ಹೋದೆನು. ದಿನಾಂಕ 10/03/2019 ರಂದು ಬೆಳಿಗ್ಗೆ ಸುಮಾರು 6-00 ಗಂಟೆಯ ಸಮಯದಲ್ಲಿ ನಾನು ನಮ್ಮ ಗ್ರಾಮವಾದ ಹೊಗಳಗೆರೆ ಗ್ರಾಮಕ್ಕೆ ಬೇವನಹಳ್ಳಿ ಗ್ರಾಮದಿಂದ ಹೋಗುವಾಗ ಅಂಚೆ ಕಛೇರಿಯನ್ನು ನೋಡಿಕೊಂಡು ಹೋಗಿದ್ದು, ಬಾಗಿಲುಗೆ ಬೀಗ ಹಾಕಿತ್ತು. ಪುನಃ ವಾಪಸ್ಸು ನಮ್ಮ ಗ್ರಾಮದಿಂದ ರಾತ್ರಿ 8-00 ಗಂಟೆಗೆ ವಾಪಸ್ಸು ಬೇವಿಹಳ್ಳಿ ಗ್ರಾಮಕ್ಕೆ ನಾನು ಬಂದೆನು ಆಗ ಅಂಚೆ ಕಛೇರಿಯನ್ನು ನೋಡಿಕೊಂಡು ಹೋಗಿದ್ದು, ಬಾಗಿಲುಗೆ ಬೀಗ ಹಾಕಿತ್ತು. ಹೀಗಿರುವಲ್ಲಿ ಈ ದಿನ ದಿನಾಂಕ 11/03/2019 ರಂದು ಬೆಳಿಗ್ಗೆ ಸುಮಾರು 5-30 ಗಂಟೆಯ ಸಮಯದಲ್ಲಿ ಅಂಚೆ ಕಛೇರಿಯ ಪಕ್ಕದ ಮನೆವಾಸಿ ನಾಗಮ್ಮ ಕೊಂ ನಾಗರಾಜು ರವರು ನಾನು ವಾಸ ಮಾಡುವ ಮನೆಯ ಹತ್ತಿರ ಬಂದು ಪೋಸ್ಟ್ ಆಫೀಸ್ ನ ಬಾಗಿಲು ತೆರೆದಿರುತ್ತೆ ಎಂತ ವಿಷಯ ತಿಳಿಸಿದಳು. ಆಗ ನಾನು ತಕ್ಷಣ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ಕಛೇರಿಯೊಳಗೆ ಸಾರ್ವಜನಿಕರೊಂದಿಗೆ ಹೋಗಿ ಹಣ ಇಟ್ಟಿದ್ದ ಡ್ರಾ ಚೆಕ್ ಮಾಡಲಾಗಿ ಡ್ರಾನಲ್ಲಿದ್ದ 47403/-(ನಲವತ್ತು ಏಳುಸಾವಿ ನಾಲ್ಕು ನೂರ ಮೂರು) ರೂ ಗಳು ಇರಲಿಲ್ಲ. ದಿನಾಂಕ 10/03/2019 ರಂದು ರಾತ್ರಿ 8-00 ಗಂಟೆಯಿಂದ ಬೆಳಿಗ್ಗೆ 5-30 ಗಂಟೆಯ ಮಧ್ಯ ಯಾರೋ ಕಳ್ಳರು ಬಾಗಿಲುನ ಚಿಲಕವನ್ನು ಯಾವುದೋ ಆಯುಧದಿಂದ ಮೀಟಿ ಬಾಗಿಲನ್ನು  ಓಪನ್ ಮಾಡಿ ಒಳಗೆ ಪ್ರವೇಶ ಮಾಡಿ ಡ್ರಾನಲ್ಲಿದ್ದ 47403/-(ನಲವತ್ತು ಏಳುಸಾವಿ ನಾಲ್ಕು ನೂರ ಮೂರು) ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಸದರಿ ಕಳ್ಳರನ್ನು ಪತ್ತೆ ಮಾಡಿ ಹಣವನ್ನು ವಾಪಸ್ಸು ಕೊಡಿಸಿ ಅವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

12) ನಂದಿಗಿರಿಧಾಮ ಪೊಲೀಸ್ ಠಾಣೆ: 18/2019 ಕಲಂ: 323, 324, 504, 506 ಐ.ಪಿ.ಸಿ

     ದಿನಾಂಕ 11-03-2019 ರಂದು  ಮುಂಜಾನೆ 00-30 ಗಂಟೆಗೆ  ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳು ಅನಿಲ್ ಕುಮಾರ್ ಬಿನ್ ಲೇಟ್ ರಾಮಕೃಷ್ಣಪ್ಪ ರವರ ಹೇಳಿಕೆಯನ್ನು ಎಎಸ್ಐ ರಾಮಾಚಾರಿಯವರು ಜಿಲ್ಲಾಸ್ಪತ್ರೆಯ ವೈದ್ಯರಾದ ಕೆಆರ್ ಅನಂತ್  ಸಮಕ್ಷಮ  ಪಡೆದುಕೊಂಡು ಬಂದು  ಠಾಣಾದಿಕಾರಿಯಾದ ನನ್ನ ಮುಂದೆ  ಹಾಜರ್ಪಡಿಸಿದ್ದರ  ಸಾರಾಂಶವೇನೆಂದರೆ  ಪಿರ್ಯಾದಿಗೂ ಮತ್ತು ಆರೋಫಿ ಸುರೇಶ ರವರಿಗೂ 2 ವರ್ಷಗಳ ಹಿಂದೆ  ಪಿರ್ಯಾದಿಯ ಬೀಗದ ಕೈಯನ್ನು ಆರೋಫಿಯು ಕಿತ್ತು ಬಿಸಾಡಿದ್ದರ ವಿಚಾರದಲ್ಲಿ  ವೈಮನಸ್ಸು ಇದ್ದು ಹೆಚ್ಚಾಗಿ ಮಾತನಾಡುತ್ತಿರಲಿಲ್ಲಾ, ಇತ್ತಿಚೆಗೆ 2 ತಿಂಗಳಿಂದ ಪುನಃ ಆರೋಪಿಯು ಪಿರ್ಯಾದಿ ಸ್ನೇಹವನ್ನು ಬೆಳಸಿ ಇಬ್ಬರೂ ಮಾತನಾಡುತ್ತಿದ್ದು , ದಿನಾಂಕ 10-03-2019 ರಂದು ರಾತ್ರಿ ಸುಮಾರು 8-45 ಗಂಟೆಯ ಸಮಯದಲ್ಲಿ  ತನ್ನ ರಾಯಲ್ ಎನ್ ಪೀಲ್ಡ್ ಬೈಕಿನಲ್ಲಿ ಇಬ್ಬರೂ  ಜಡಲತಿಮ್ಮನಹಳ್ಳಿ ಗ್ರಾಮದ ಗೇಟಿಗೆ ಹೋಗಿ ಅಲ್ಲಿ ಬೀಡಾವನ್ನುಹಾಕಿಕೊಂಡಿದ್ದು, ಸುರೇಶನು ಬೀಡಾ ಜಿಗಿದ ನಂತರ ಹಳೆ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು  ನನ್ನ ಮೇಲೆ ಎಕಾ-ಏಕಿ ಎನೋ ಲೇ ನಿನ್ನಮ್ಮನ್ನೆಕೇಯಾ ನಿನ್ನದು ಜಾಸ್ತಿಯಾಯಿತು. ಈಗ ಒಂಟಿಯಾಗಿ ಸಿಕ್ಕಿದ್ದೀಯಾ  ಎಂದು ಕಲ್ಲಿನಿಂದ ತನ್ನ ಮೂಗಿಗೆ ಗುದ್ದಿ ಹಣೆಗೆ ಹೊಡೆದನು, ಆ ಸಮಯದಲ್ಲಿ ತಾನು ಗಾಬರಿಯಾಗಿ  ಯಾಕೋ ಈ  ರೀತಿ  ಮಾಡುತ್ತೀಯಾ ಎಂದು ಕೇಳುತ್ತಿದ್ದಂತೆ ಕಾಲಿನಿಂದ  ಬೆನ್ನಿಗೆ ಒದ್ದನು ಆ ಸಮಯದಲ್ಲಿ ತಾನು ಕೆಳಗೆ ಬಿದ್ದು ಹೋಗಿದ್ದು ನಿನ್ನಮ್ಮನ್ನ ನಿನ್ನ ಈವತ್ತು  ಬಿಡುವುದಿಲ್ಲಾ ಮುಗಿಸಿಬಿಡುತ್ತೇನೆ ಎಂದು ನನ್ನ ಮೇಲೆ ಬಿದ್ದನು, ಆಗ ಅಲ್ಲಿಯೇ ಹತ್ತಿರದಲ್ಲಿದ್ದ  ಕಾಮಗಾನಹಳ್ಳಿಯ ಮನು ಮತ್ತು ಬಾಪೂಜಿನಗರದ ವಿನಯ್  ರವರು ಬಂದು ಸುರೇಶನಿಗೆ ಬುದ್ದಿ ಹೇಳಿ ಜಗಳ ಬಿಡಿಸಿದರು. ಇನ್ನು 1 ತಿಂಗಳೊಳಗೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲಾವೆಂದು ಬೆದರಿಕೆ  ಹಾಕಿದನು, ಮನು ಮತ್ತು ವಿನಯ್ ರವರು ತನ್ನನ್ನು ಉಪಚರಿಸಿ ಅವರ  ಗಾಡಿಯಲ್ಲಿಯೇ ತನ್ನನ್ನು ಚಿಕತ್ಸೆಗಾಗಿ ಸರ್ಕಾರಿ ಆಸ್ಪತ್ರಗೆ ಕರೆತಂದು ದಾಖಲಿಸಿದರು, ಸದರಿ ಗಲಾಟೆಯು ರಾತ್ರಿ 8-50 ರಿಂದ 9-10 ಗಂಟೆಯವರೆವಿಗೆ ನಡೆದಿದ್ದು ತನ್ನನ್ನು  ಕಲ್ಲಿನಿಂದ ಹೊಡೆದು ಅವಾಚ್ಯವಾಗಿ ನಿಂದಿಸಿ ಕಾಲಿನಿಂದ ಒದ್ದು ಪ್ರಾಣ ಬೆದರಿಕೆಯನ್ನು ಹಾಕಿರುವ ಸುರೇಶನ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರವವರದಿ.

13) ಪಾತಪಾಳ್ಯ ಪೊಲೀಸ್ ಠಾಣೆ:  ಮೊ.ಸಂ: 10/2019 ಕಲಂ: 15(A) 32(3) ಕರ್ನಾಟಕ ಅಬಕಾರಿ ಕಾಯ್ದೆ.

     ದಿನಾಂಕ: 11/03/2019 ರಂದು ಸಂಜೆ 03-30 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು  ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 11/03/2019 ರಂದು ಮದ್ಯಾಹ್ನ 01-30 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಕಲ್ಲಿಪಲ್ಲಿ ಗ್ರಾಮದಲ್ಲಿ  ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ  ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ಹೋಗಿ ಕಲ್ಲಿಪಲ್ಲ್ಲಿ ಗ್ರಾಮದ ನಾರಾಯಣಪ್ಪ ಬಿನ್ ಲೇಟ್ ನಾಗಪ್ಪರವರ ಮನೆಯ ಬಳಿ ಹೋಗಲಾಗಿ ನಾವು ಹೋಗಿದ್ದ ಜೀಪನ್ನು ನೋಡಿ ಮನೆಯ ಬಳಿ ಇದ್ದ  ಯಾರೋ ಇಬ್ಬರು ಮೂವರು ಓಡಿ ಹೋಗಿದ್ದು ಮನೆಯ ಬಳಿ ಒಬ್ಬ ಆಸಾಮಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ನಾರಾಯಣಪ್ಪ ಬಿನ್ ಲೇಟ್ ನಾಗಪ್ಪ 60 ವರ್ಷ ಆದಿ ಕರ್ನಾಟಕ ಕೂಲಿ ಕಲಸ ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ 22 ಐ ವಾರ್ಡ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು ಮತ್ತು 02 ನೀರಿನ ಬಾಟಲ್ ಮತ್ತು ಎರಡು ಪ್ಲಾಸ್ಟಿಕ್ ಖಾಲಿ ಗ್ಲಾಸ್ ಗಳು ಮತ್ತು ಉಪಯೋಗಿಸಿರುವ 02 ಮದ್ಯದ ಖಾಲಿ ಟೆಟ್ರಾ ಪಾಕೆಟ್ಗಳು ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯವನ್ನು ಮಾರಾಟ ಮಾಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ, ಸದರಿ ಆಸಾಮಿಯನ್ನು ಮತ್ತು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ 10/2019 ಕಲಂ 32(3) 15 (ಎ) KEA ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ.