ದಿನಾಂಕ : 11/02/2019ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 15/2019 ಕಲಂ. 279,304(ಎ) ಐಪಿಸಿ ರೆ/ವಿ 134 ಐಎಂವಿ ಆಕ್ಟ್:-

     ದಿನಾಂಕ:-11/02/2019 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾಧಿ ಶ್ರೀ.ಕೃಷ್ಣಪ್ಪ ಬಿನ್ ದೊಡ್ಡನರಸಿಂಹಪ್ಪ 50 ವರ್ಷ, ಪ.ಜಾತಿ, ಕೂಲಿ ಕೆಲಸ, ಚನ್ನಹಳ್ಳಿ ಗ್ರಾಮ, ಕಸಭಾ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:-09/01/2019 ರಂದು ತನ್ನ ಮಗ ಶ್ರೀ.ಅನೀಲ್ ಕುಮಾರ್ ಬಿನ್ ಕೃಷ್ಣಪ್ಪ 22 ವರ್ಷ, ಗಾರ್ಮೆಂಟ್ಸ್ ಕೆಲಸಕ್ಕೆ ರಾತ್ರಿ 8:30 ಗಂಟೆಗೆ ತಮ್ಮ ಮನೆಯಿಂದ ಚಿಕ್ಕಬಳ್ಳಾಪುರದ ತಮ್ಮನಾಯಕನಹಳ್ಳಿ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೋಗಿ ಬರುವುದಾಗಿ ತಿಳಿಸಿ ಬಂದಿದ್ದು, ದಿನಾಂಕ:-10/02/2019 ರಂದು ತಮ್ಮ ಭಾಮೈದ ಮನೋಹರ್ ರವರು ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಹೆಚ್-7 ಬೈಪಾಸ್ ರಸ್ತೆಯ ಅಗಲಗುರ್ಕಿ ಯು.ಜಿ.ಡಿ ಮುಂದಿನ ರಸ್ತೆಯಲ್ಲಿದ್ದಾಗ ಅನೀಲ್ ಕುಮಾರ್ ರವರು ತನ್ನ ಕೆ.ಎ-07-ಎಲ್-6044 ರ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವಾಗ ಸಂಜೆ ಸುಮಾರು 6:00 ಗಂಟೆಯ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬರುತ್ತಿದ್ದ ಎಪಿ-02-ಬಿ.ಆರ್-2738 ರ ಟಾಟಾ ಸುಮೋ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅನೀಲ್ ಕುಮಾರ್ ರವರು ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದಾಗ ದ್ವಿಚಕ್ರವಾಹನ ಸಮೇತ ರಸ್ತೆಯಲ್ಲಿ ಬಿದ್ದಾಗ ಅನೀಲ್ ಕುಮಾರ್ ರವರಿಗೆ ತಲೆಗೆ ಮತ್ತು ಕೈ ಕಾಲುಗಳಿಗೆ ಹೆಚ್ಚಿನ ಗಾಯಗಳಾಗಿದ್ದು ಅಲ್ಲಿನ ಸ್ಥಳಿಯರ ಸಹಾಯದಿಂದ ಅಲ್ಲಿಯೇ ಇದ್ದ ಮನೋಹರ್ ರವರು ಉಪಚರಿಸಿ ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿರುವುದಾಗಿ ದೂರವಾಣಿ ಮೂಲಕ ತಿಳಿಸಿದ್ದು, ತಾನು ತಮ್ಮ ಸಂಬಂಧಿಕರಿಗೆ ವಿಷಯವನ್ನು ತಿಳಿಸಿ ತಮ್ಮ ಸಂಬಂಧಿ ಮನೋಹರ ರವರು ತನ್ನ ಮಗನನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಂತರ ವೈಧ್ಯರ ಸಲಹೆ ಮೇರೆಗೆ ಆತನ ಸ್ನೇಹಿತನೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದು, ಆಂಬ್ಯೂಲೆನ್ಸ್ ವಾಹನದಲ್ಲಿ ದೇವನಹಳ್ಳಿ ಹೋಗುವಷ್ಟರಲ್ಲಿ ಅನೀಲ್ ಕುಮಾರ್ ರವರು ತುಂಬಾ ಸುಸ್ತಿದ್ದರಿಂದ ಹತ್ತಿರದ ದೇವನಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆ ವೈಧ್ಯಾಧಿಕಾರಿಗಳು ಮೃತ ಪಟ್ಟಿರುವುದಾಗಿ ತಿಳಿಸಿದ್ದರಿಂದ ಮತ್ತೆ ವಾಪಸ್ಸು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯ ವೈಧ್ಯಾಧಿಕಾರಿಗಳು ಅಪಾಘಾತದಲ್ಲಿ ಆದ ತೀವ್ರಗಾಯಗಳಿಂದ ದಿನಾಂಕ:-10/02/2019 ರಂದು ರಾತ್ರಿ 9-50 ಗಂಟೆಗೆ ಮೃತ ಪಟ್ಟಿರುವುದಾಗಿ ವೈಧ್ಯಾಧಿಕಾರಿಗಳು ತಿಳಿಸಿದ್ದು, ಅಪಘಾತ ಪಡಿಸಿದ ಎಪಿ-02-ಬಿ.ಆರ್-2738 ರ ಟಾಟಾ ಸುಮೋ ವಾಹನ ಚಾಲಕ ಅಪಘಾತ ಪಡಿಸಿ ವಾಹನವನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದು, ತನ್ನ ಮಗನ ಸಾವಿಗೆ ಕಾರಣರಾದ ಸದರಿ ಎಪಿ-02-ಬಿ.ಆರ್-2738 ರ ಟಾಟಾ ಸುಮೋ ವಾಹನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಲಿಖಿತ ದೂರಿನ ಮೇರೆಗೆ ದಿನಾಂಕ:-11/02/2018 ರಂದು ಬೆಳಿಗ್ಗೆ 09:00 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

2) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 20/2019 ಕಲಂ. 96(ಬಿ) ಕೆ.ಪಿ. ಅಕ್ಟ್ :-

     ದಿನಾಂಕ: 10/02/2019 ರಂದು  ಸಂಜೆ 05-00  ಗಂಟೆಯ ಸಮಯದಲ್ಲಿ ಠಾಣಾಧಿಕಾರಿಗಳು ಶ್ರೀ ವೆಂಕಟರವಣ ಸಿಪಿಸಿ-544 ಆದ ನನಗೆ ಸಂಜೆ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ನಾವುಗಳು ರಾತ್ರಿ ಗಸ್ತು ಕರ್ತವ್ಯವನ್ನು ಪ್ರಾರಂಬಿಸಿ ಬೆಂಗಳೂರು ವೃತ್ತ, ಎನ್ ಆರ್ ಬಡಾವಣೆ, ಪ್ರೆಮ ನಗರ ರಸ್ತೆ,  ಸೊಣ್ಣಶೆಟ್ಟಿಹಳ್ಳಿ, ಮಾಳಪಲ್ಲಿ, ಕಡೆ ಗಸ್ತುಮಾಡಿಕೊಂಡು ದಿನಾಂಕ:10/02/2019 ರಂದು ರಾತ್ರಿ ಸುಮಾರು 07-30 ಗಂಟೆ ಸಮಯದಲ್ಲಿ ಸೊಣ್ಣಶೆಟ್ಟಿಹಳ್ಳಿಯ ವಾಣಿ ಸ್ಕೂಲ್ ಬಳಿ ಗಸ್ತುಮಾಡುತ್ತಿರುವಾಗ ಯಾರೋ ಒಬ್ಬ ಆಸಾಮಿಯು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ವಾಣಿ ಶಾಲೆಯ ಪಕ್ಕದಲ್ಲಿರುವ ಕಾಂಪೌಂಡ್ ಗೋಡೆಯ ಬಳಿ ತನ್ನ ಇರುವಿಕೆಯನ್ನು ಮರೆಮಾಚಿಕೊಳ್ಳುತ್ತಾ ಅವಿತುಕೊಳ್ಳಲು ಪ್ರಯತ್ನಿಸಿದ್ದು, ಆತನ ಬಳಿ ಹೋಗುವಷ್ಠರಲ್ಲಿ ನಮ್ಮನ್ನು ಕಂಡು ಅಲ್ಲಿಂದ ಓಡಿ ಹೋಗಲು ಯತ್ನಿಸಿದವನನ್ನು ನಾವುಗಳು ಹಿಂಬಾಲಿಸಿ ಹಿಡಿದು ಹೆಸರು ವಿಳಾಸ ಕೇಳಲಾಗಿ ಸುನೀಲ್ ಬಿನ್ ಸತ್ಯ ನಾರಾಯಣ 28 ವರ್ಷ, ಎಸ್.ಸಿ ಜನಾಂಗ, ಗಾರೆಕೆಲಸ, ವಾಸ ಅಂಬೇಡ್ಕರ್ ಕಾಲೋನಿ, ಚಿಂತಾಮಣಿ ನಗರ,  ಎಂತ ತಿಳಿಸಿದ್ದು, ಆತನನ್ನು ಓಡಿ ಹೋಗಲು ಪ್ರಯತ್ನಿಸಿದ ಬಗ್ಗೆ ಕೇಳಲಾಗಿ ಆಸಾಮಿಯು ಸಮಂಜಸವಾದ ಉತ್ತರ ನೀಡದೆ ಇದ್ದು,  ಆತನ ಕೈಯಲ್ಲಿದ್ದ  ಕಬ್ಬಿಣದ ರಾಡ್ ಬಗ್ಗೆ ವಿಚಾರಿಸಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಈತನು  ಅವೇಳೆಯಲ್ಲಿ ಯಾವುದೋ ಸಂಜ್ಞೆಯ ಅಪರಾಧ ಮಾಡಲು ಬಂದಿರಬಹುದೆಂದು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಆಸಾಮಿಯನ್ನು ರಾತ್ರಿ ಸುಮಾರು 07-45  ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಠಾಣಾಧಿಕಾರಿಗಳ ರವರ ಮುಂದೆ ಹಾಜರುಪಡಿಸಿ  ನೀಡಿದ ವರದಿಯಂತೆ ಠಾಣಾ ಮೊ.ಸಂಖ್ಯೆ: 20/2019 ಕಲಂ: 96 (ಬಿ) ರಿತ್ಯಾ ಪ್ರಕರಣ ದಾಖಲಿಸಿರುತ್ತೆ.

3) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 21/2019 ಕಲಂ. 21/2019 ಕಲಂ. 324,504,506 ರೆ/ವಿ 34 ಐಪಿಸಿ :-

     ದಿನಾಂಕ: 10/02/2019 ರಂದು ಚಿಂತಾಮಣಿ  ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಗಾಯಾಳು ಸುಬ್ರಮಣಿ ಬಿನ್ ನರಸಿಂಹಪ್ಪ 25 ವರ್ಷ,  ಎಸ್ ಸಿ ಜನಾಂಗ,  ಗಾರೆ ಕೆಲಸ  ವಾಸ: ಶಾಂತಿ ನಗರ. ಚಿಂತಾಮಣಿ ನಗರ ರವರ  ಹೇಳಿಕೆ ಪಡೆದಿದ್ದರ ಸಾರಾಂಶವೇನೆಂದರೆ,  ದಿನಾಂಕ: 10/02/2019 ರಂದು ರಾತ್ರಿ 7-15 ಗಂಟೆ ಸಮಯದಲ್ಲಿ   ನಾನು ನನ್ನ ಅಣ್ಣನಾದ  ಅನಿಲ್ ರವರು ನಮ್ಮ ಮನೆಯ ಬಳಿ ಕುಳಿತುಕೊಂಡಿದ್ದಾಗ  ನಮ್ಮ  ಏರಿಯಾದ ವಾಸಿಗಳಾದ  ಮಂಜುನಾಥ ಬಿನ್ ಗೋವಿಂದಪ್ಪ,  ರಾಜೇಶ್ವರಿ ಕೋಂ ಲೇಟ್ ಶಂಕರಪ್ಪ,  ಪ್ರಶಾಂತ್  ಬಿನ್ ಶಂಕರಪ್ಪ, ರವರುಗಳು  ನಮ್ಮ ಮನೆಯ ಬಳಿ ಬಂದು   ನೀವು ಇಸ್ಟೀಟು ಆಟದ ಬಗ್ಗೆ ಮಾಹಿತಿ ನೀಡಿ ನಮ್ಮ ಮೇಲೆ ದಾಳಿ ಮಾಡಿಸಿದ್ದೀರಿ  ಎಂದು ಜಗಳ ತೆಗೆದು ನಮ್ಮನ್ನು ಕುರಿತು ಬೇವರ್ಸಿ ನನ್ನ ಮಕ್ಕಳೆ ಎಂಬಿತ್ಯಾದಿ ಕೆಟ್ಟ ಮಾತುಗಳಿಂದ ಬೈದರು,  ನಾನು ಈ ರೀತಿ ನಾವೇನು ಮಾಹಿತಿ ನೀಡಿಲ್ಲ ಎನ್ನುವಷ್ಟರಲ್ಲಿ  ಮಂಜುನಾಥನು ತನ್ನ ಕೈಯಲ್ಲಿದ್ದ ರಾಡಿನಿಂದೆ ನನ್ನ ಹಣೆಗೆ ಮೂಗಿಗೆ,  ಬಲ ಮೊಣಕೈಗೆ  ಸೊಂಟದ ಬಳಿ ಹೊಡೆದು  ರಕ್ತ ಗಾಯ ಮಾಡಿರುತ್ತಾನೆ. ಬಿಡಿಸಲು ಬಂದ ನನ್ನ ಅಣ್ಣನಾದ  ಅನಿಲ್ ರವರನ್ನು  ಪ್ರಶಾಂತ್ ರವರು  ದೊಣ್ಣೆಯಿಂದ   ಬಲಕಾಲಿನ ಪಾದಕ್ಕೆ, ಕಿವಿಗೆ, ಹಾಗೂ ತುಟಿಯ ಬಳಿ ಹೊಡೆದು  ಗಾಯಮಾಡಿರುತ್ತಾನೆ.  ನಮ್ಮ ಅಕ್ಕನಾದ  ನರಸಮ್ಮ ರವರು ಯಾಕೆ ನನ್ನ ತಮ್ಮಂದಿರನ್ನು  ಹೊಡೆಯುತ್ತಿದ್ದೀರ  ಎಂದು ಕೇಳಿದಕ್ಕೆ ರಾಜೇಶ್ವರಿ  ಕಲ್ಲಿನಿಂದ ಆಕೆಯ  ಎಡಗಣ್ಣು ಉಬ್ಬಿಗೆ ಹೊಡೆದು ಊತಗಾಯಮಾಡಿರುತ್ತಾರೆ. ನಂತರ  ಮೇಲ್ಕಂಡವರೆಲ್ಲರೂ ನಮ್ಮ  ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು  ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ನಮ್ಮ ಏರಿಯಾದ  ಮೇಸ್ತ್ರಿ ನಾರಾಯಣಸ್ವಾಮಿ,  ಸುಬ್ರಮಣಿ ರವರು  ಜಗಳ ಬಿಡಿಸಿರುತ್ತಾರೆ. ನಮ್ಮ  ಅಣ್ಣನಾದ  ಶಂಕರ ರವರು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂದು ನೀಡಿದ ದೂರಾಗಿರುತ್ತೆ.

4) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 22/2019 ಕಲಂ. 324,504,506 ರೆ/ವಿ 34 ಐಪಿಸಿ :-

     ದಿನಾಂಕ: 10/02/2019 ರಂದು  ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಗಾಯಾಳು ಮಂಜುನಾಥ ಬಿನ್ ಗೋವಿಂದಪ್ಪ 32 ವರ್ಷ,  ಎಸ್ ಸಿ ಜನಾಂಗ, ಗಾರೆ ಕೆಲಸ,  ವಾಸ: ಶಾಂತಿ ನಗರ ಚಿಂತಾಮಣಿ ನಗರ ರವರ ಹೇಳಿಕೆ ಪಡೆದಿದ್ದರ ಸಾರಾಂಶವೇನೆಂದರೆ,  ಈ ದಿನ ದಿನಾಂಕ: 10/02/2019 ರಂದು  ನಮ್ಮ ಅಕ್ಕ ರಾಜೇಶ್ವರಿ ರವರ  ಗಂಡನ ತಿಥಿ ಇದ್ದು, ನಾವು ನಮ್ಮ ಮನೆಯ ಮುಂದೆ   ಸದರಿ ಕಾರ್ಯಕ್ಕೆ  ಅಡುಗೆಯನ್ನು ಮಾಡುತ್ತಿದ್ದೆವು  ದಿನಾಂಕ:0/02/2018 ರಂದು  ರಾತ್ರಿ 8-00 ಗಂಟೆಯ ಸಮಯದಲ್ಲಿ ನಮ್ಮ ಏರಿಯಾದ ವಾಸಿಗಳಾದ ಸುಬ್ರಮಣಿ @ ಚಿಕ್ಕ ಸುಬ್ರಮಣಿ,  ವಿನಯ, ಶಿವ, ಅಣ್ಣಿ ರವರ  ನಮ್ಮ ಮನೆಯ ಬಳಿ ಬಂದು ನೀವು ಯಾಕೆ  ರಸ್ತೆಗೆ ಅಡ್ಡವಾಗಿ ಒಲೆಗಳನ್ನು ಇಟ್ಟಿದ್ದೀರ ಎಂದು ನಮ್ಮ ಮೇಲೆ ನನ್ನ ಹೆಂಡತಿಯಾದ  ಗೀತಾ ರವರ ಮೇಲೆ  ಗಲಾಟೆ ತೆಗೆದು  ಬೇವರ್ಸಿ ನನ್ನ ಮಗನೆ, ಲೋಪರ್ ಮುಂಡೆ ಎಂಬಿತ್ಯಾದಿ ಕೆಟ್ಟ ಮಾತುಗಳಿಂದ ಬೈದರು,  ಆ ಪೈಕಿ  ಸುಬ್ರಮಣಿ  @ ಚಿಕ್ಕಸುಬ್ರಮಣಿ ರವರು  ಚಾಕುವಿನಿಂದ ನನ್ನ ಬಲ ಭಾಗದ ಕೆನ್ನೆಗೆ ಹಾಕಿ ರಕ್ತಗಾಯ ಮಾಡಿರುತ್ತಾನೆ, ವಿನಯ, ಶಿವ, ರವರುಗಳು  ಕಲ್ಲುಗಳಿಂದ ನನ್ನ ಬೆನ್ನಿಗೆ  ಹೊಡೆದು ತರಚಿದ ಗಾಯ ಮಾಡಿರುತ್ತಾರೆ. ನಂತರ, ಸುಬ್ರಮಣಿ  @ ಚಿಕ್ಕಸುಬ್ರಮಣಿ ಮತ್ತು ಅಣ್ಣಿ ರವರು ಕಲ್ಲುಗಳಿಂದ ನನ್ನ ಹೆಂಡತಿಯ  ಬಲ ಮೊಣಕೈಗೆ ಹಾಕಿ  ಊತಗಾಯಮಾಡಿರುತ್ತಾರೆ. ನಂತರ ಮೇಲ್ಕಂಡವರೆಲ್ಲರೂ,  ನೀವು ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.ನಮ್ಮ ಏರಿಯಾದ  ರಮೇಶ್, ನಾಗರಾಜ ರವರು ಜಗಳ ಬಿಡಿಸಿ  ಚಿಕಿತ್ಸೆಗಾಗಿ  ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ  ದಾಖಲು ಮಾಡಿರುತ್ತಾರೆ. ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂದು ನೀಡಿದ ದೂರಾಗಿರುತ್ತೆ.

5) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ 23/2019 ಕಲಂ. 379 ಐಪಿಸಿ :-

     ದಿನಾಂಕ:11/02/2019 ರಂದು ಪಿರ್ಯದಿದಾರರಾದ ಶ್ರೀ ಚಂದ್ರಪ್ಪ ಬಿನ್ ಶಿವರುದ್ರಪ್ಪ ಗಾಣಿಗಿ, 56ವರ್ಷ, ಗಾಣಿಗರು, ಬೆಮಲ್ ಸೆಕ್ಯೂರಿ ಕೆಲಸ, ವಾಸ: 2 ಟೈಪ್ 423 ಬೆಮಲ್ ನಗರ, ಕೆ,ಜಿ ಎಫ್ ಮೊ ನಂ: 8277380410 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ,. ನನ್ನ ಮಗ ಸಂಜಿವ್ ಕುಮಾರ್ ರವರು ಚಿಂತಾಮಣಿ ನಗರದ ಗೋಲ್ಡ್ ಪಾರ್ಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಚಿಂತಾಮಣಿ ನಗರದ ಮಾಳಪಲ್ಲಿಯಲ್ಲಿ ವಾರ್ಡ್  ನಂ 08 ಮಾಳಪಲ್ಲಿ ರಸ್ತೆ, ಯಲ್ಲಿ ಗೋಪಾಲರೆ್ಡಿರವರ ಮನೆಯಲ್ಲಿ ಬಾಡಿಗೆಗ ವಾಸವಿದ್ದು, ನನ್ನ ಮಗ ಕೆಲಸ ಕಾರ್ಯಗಳಿಗೆ ನನ್ನ ಬಾಬತ್ತು ಕೆಎ-08 ಎಲ್ 3881 ನೊಂದಣಿ ಸಂಖ್ಯೆಯ ಇಂಜಿನ್ ನಂಬರ್ HA10EVFHL29311 ಚಾಸೀಸಿ ನಂಬರ್ MBLHA108TFHL00487 ವುಳ್ಳ ಕಪ್ಪು ಮತ್ತು ನೀಲಿ ಬಣ್ಣದ ಸುಮಾರು 10.000/- ರೂಗಳ ಬೆಲೆ ಬಾಳುವ ದ್ವಿಚಕ್ರವಾಹನವನ್ನು ಬಳಸುತ್ತಿದ್ದನು. ದಿನಾಂಕ: 29/08/2018 ರಂದು ರಾತ್ರಿ  ನನ್ನ ಮಗ ಸಂಜಿವ್ ಕುಮಾರ್ ರವರು ಮೇಲ್ಕಂಡ ದ್ವಿಚಕ್ರವಾಹನದಲ್ಲಿ ಎಂದಿನಂತೆ ಕೆಲಸದಿಂದ ಮನೆಗೆ ಬಂದು ದ್ವಿಚಕ್ರವಾಹನವನ್ನು ಮನೆಯ ಕಾಂಪೌಂಡ್ ನೊಳಗೆ ನಿಲ್ಲಿಸಿ ಬೀಗವನ್ನು ಹಾಕಿ  ರಾತ್ರಿ 09-00 ಗಂಟೆಯ ಸಮಯದಲ್ಲಿ ಊಟ ಮಾಡಿ ಮಲಗಿ ಕೊಂಡು ಮರು ದಿನ ಬೆಳಿಗ್ಗೆ 30/08/2018 ರಂದು ಬೆಳಿಗ್ಗೆ 6-00 ಗಂಟೆಯಲ್ಲಿ ಬಂದು ನೋಡಲಾಗಿ ದ್ವಿಚಕ್ರವಾಹನ ಕಾಣಿಸದೇ ಇದ್ದು ಹುಡುಕಾಡಲಾಗಿ ಪತ್ತೇಯಾಗಿರುವುದಿಲ್ಲ. ಈ ವಿಚಾರವನ್ನು ನನ್ನ ಮಗ ನನಗೆ ಪೊನ್ ಲ್ಲಿ ತಿಳಿಸಿದ್ದು ನಾವು ಇದುವರೆವಿಗೂ ಎಲ್ಲಾ ಕಡೆ ಹುಡಕಾಡಲಾಗಿ ದ್ವಿಚಕ್ರವಾಹ ಪತ್ತೇಯಾಗಿರುವುದಿಲ್ಲ. ಆದ್ದರಿಂದ ನನ್ನ ಬಾಬತ್ತು ಕೆಎ-08 ಎಲ್ 3881 ನೊಂದಣಿ ಸಂಖ್ಯೆಯ ಇಂಜಿನ್ ನಂಬರ್ HA10EVFHL29311 ಚಾಸೀಸಿ ನಂಬರ್ MBLHA108TFHL00487 ವುಳ್ಳ ಕಪ್ಪು ಮತ್ತು ನೀಲಿ ಬಣ್ಣದ ಸುಮಾರು 10.000/- ರೂಗಳ ಬೆಲೆ ಬಾಳುವ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿದ ಕಳ್ಳರನ್ನು ಮತ್ತು ದ್ವಿಚಕ್ರವಾಹನವನ್ನು ಪತ್ತೇಮಾಡಿಕೊಡಬೇಕಾಗಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

6) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 37/2019 ಕಲಂ. 15(ಎ), 32(3), ಅಬಕಾರಿ ಕಾಯ್ದೆ :-

     ದಿನಾಂಕ:10/02/2019 ರಂದು ಸಾಯಂಕಾಲ 4-00 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಚೌಳೂರು ಗೇಟ್ ಮತ್ತು ಕುಡುಮಲಕುಂಟೆ ಯಲ್ಲಿರುವ ಪೆಟ್ಟಿಗೆ ಅಂಗಡಿಗಳ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಮೇರೆಗೆ ಸಿ.ಪಿ.ಐ ಸಾಹೇಬರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-281 ರಲ್ಲಿ ಚೌಳೂರು ಗೇಟ್ ಬಳಿ ಹೋಗಿ, ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಚೌಳೂರು ಗೇಟ್ ನಲ್ಲಿರುವ ಒಂದು ಅಂಗಡಿಯ ಮುಂದೆ ಒಬ್ಬ ಮಹಿಳೆ ಚೀಲವನ್ನು ಹಿಡಿದುಕೊಂಡು ನಿಂತಿದ್ದು, ಮತ್ತೊಬ್ಬ ಮಹಿಳೆ ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಅಂಗಡಿಯ ಮುಂದೆ 3 ಜನ ಗಂಡಸರು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು 3 ಜನ ಗಂಡಸರು ಓಡಿಹೋಗಿದ್ದು, ಚೀಲ ಹಿಡಿದುಕೊಂಡು ನಿಂತಿದ್ದ ಹಾಗೂ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದ ಮಹಿಳೆಯರ ಹೆಸರು ವಿಳಾಸ ಕೇಳಲಾಗಿ ಸದರಿ ಮಹಿಳೆಯರು ತನ್ನ ಹೆಸರು 1] ಶ್ರೀಮತಿ ರಜಿಯಾ ಕೋಂ ಲೇಟ್ ಷಪೀ, 48 ವರ್ಷ, ಮುಸ್ಲೀಂ ಜನಾಂಗ, ಚೌಳೂರು ಗೇಟ್, ಗೌರಿಬಿದನೂರು ತಾಲ್ಲೂಕು ಮತ್ತು 2] ಶ್ರೀಮತಿ ಉಮಾದೇವಿ ಕೋಂ ರಾಜಪ್ಪ, 38 ವರ್ಷ, ನಾಯಕ ಜನಾಂಗ, ಚೌಳೂರು ಗೇಟ್ ವಾಲ್ಮೀಕಿ ಬಡಾವಣೆ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಇವರ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 10 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಬೆಲೆ 741.30 ರೂ.ಗಳಾಗಿದ್ದು, ಸ್ಥಳದಲ್ಲಿ 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 03 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಮಹಿಳೆಯರಿಗೆ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯಾ ಎಂದು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಸ್ಥಳದಲ್ಲಿ ಸಾಯಂಕಾಲ 4-30 ಗಂಟೆಯಿಂದ 5-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಆರೋಪಿಗಳನ್ನು ಹಾಗು 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 10 ಟೆಟ್ರಾ ಪಾಕೆಟ್ ಗಳು, ಸ್ಥಳದಲ್ಲಿ ಬಿದ್ದಿದ್ದ 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 03 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಪ್ಲಾಸ್ಟಿಕ್ ಚೀಲವನ್ನು ವಶಪಡಿಸಿಕೊಂಡು, ರಾತ್ರಿ 8-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು, ಠಾಣೆಯಲ್ಲಿ ಸ್ವತಃ ಮೊ.ಸಂ. 37/2019 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಸ್ವತಃ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

7) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 38/2019 ಕಲಂ. 15(ಎ), 32(3), ಅಬಕಾರಿ ಕಾಯ್ದೆ :-

     ದಿನಾಂಕ:10/02/2019 ರಂದು ಸಾಯಂಕಾಲ 4-00 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಚೌಳೂರು ಗೇಟ್ ಮತ್ತು ಕುಡುಮಲಕುಂಟೆ ಯಲ್ಲಿರುವ ಪೆಟ್ಟಿಗೆ ಅಂಗಡಿಗಳ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಮೇರೆಗೆ ಸಿ.ಪಿ.ಐ ಸಾಹೇಬರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-281 ರಲ್ಲಿ ಕುಡುಮಲಕುಂಟೆ ಗ್ರಾಮಕ್ಕೆ ಹೋಗಿ, ಅಲ್ಲಿ ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಕುಡುಮಲಕುಂಟೆಯಲ್ಲಿರುವ  ರಾಮಕೃಷ್ಣಪ್ಪ ಎಂಬುವವರ  ಅಂಗಡಿಯ ಮುಂದೆ ಒಬ್ಬ ವ್ಯಕ್ತಿ ಚೀಲವನ್ನು ಹಿಡಿದುಕೊಂಡು ನಿಂತಿದ್ದು, ಮತ್ತೊಬ್ಬ  ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಅಂಗಡಿಯ ಮುಂದೆ 4 ಜನ ಗಂಡಸರು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು 4 ಜನ ಗಂಡಸರು ಓಡಿಹೋಗಿದ್ದು, ಚೀಲ ಹಿಡಿದುಕೊಂಡು ನಿಂತಿದ್ದ ಹಾಗೂ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದ ವ್ಯಕ್ತಿಗಳ ಹೆಸರು ವಿಳಾಸ ಕೇಳಲಾಗಿ ಸದರಿಯವರು  ತನ್ನ ಹೆಸರು 1] ರಾಮಕೃಷ್ಣಪ್ಪ ಬಿನ್ ಲೇಟ್ ವೆಂಕಟಶ್ಯಾಮಪ್ಪ, 58 ವರ್ಷ ವಯಸ್ಸು, ಬಲಜಿಗರ ಜನಾಂಗ, ವಾಸ ಕುಡುಮಲಕುಂಟೆ  ಮತ್ತು 2] ನಾಗರಾಜ ಬಿನ್ ಲೇಟ್ ನ್ಯಾತಪ್ಪ, 33 ವರ್ಷ, ಪರಿಶಿಷ್ಟಜಾತಿ,  ವಾಸ  ಕುಡುಮಲಕುಂಟೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಇವರ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ 90  ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಬೆಲೆ 636.72 ರೂ.ಗಳಾಗಿದ್ದು, ಸ್ಥಳದಲ್ಲಿ 04  ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 05  ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿಯವರಿಗೆ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯಾ ಎಂದು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಸ್ಥಳದಲ್ಲಿ ಸಾಯಂಕಾಲ 5-15  ಗಂಟೆಯಿಂದ 5-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಆರೋಪಿಗಳನ್ನು ಹಾಗು 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  5 ಖಾಲಿ  ಟೆಟ್ರಾ ಪಾಕೆಟ್ ಗಳನ್ನು ಪ್ಲಾಸ್ಟಿಕ್ ಚೀಲವನ್ನು ವಶಪಡಿಸಿಕೊಂಡು, ಠಾಣೆಗೆ ವಾಪಸ್ಸು ಬಂದು, ರಾತ್ರಿ 8-15 ಗಂಟೆಗೆ ಠಾಣೆಯಲ್ಲಿ ಸ್ವತಃ ಮೊ.ಸಂ. 38/2019 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಸ್ವತಃ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

8) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 39/2019 ಕಲಂ. 15(ಎ), 32(3), ಅಬಕಾರಿ ಕಾಯ್ದೆ :-

     ದಿನಾಂಕ:10/02/2019 ರಂದು ಸಾಯಂಕಾಲ 4-00 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಚೌಳೂರು ಗೇಟ್ ಮತ್ತು ಕುಡುಮಲಕುಂಟೆ ಯಲ್ಲಿರುವ ಪೆಟ್ಟಿಗೆ ಅಂಗಡಿಗಳ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಮೇರೆಗೆ ಸಿ.ಪಿ.ಐ ಸಾಹೇಬರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-281 ರಲ್ಲಿ ಕುಡುಮಲಕುಂಟೆ ಗ್ರಾಮಕ್ಕೆ ಹೋಗಿ ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಕಾಲೋನಿಗೆ ಹೋಗುವ ದಾರಿಯಲ್ಲಿರುವ ಒಂದು ಅಂಗಡಿಯ ಮುಂದೆ ಒಬ್ಬ ಆಸಾಮಿ ಚೀಲವನ್ನು ಹಿಡಿದುಕೊಂಡು ನಿಂತಿದ್ದು, ಮತ್ತೊಬ್ಬ ಆಸಾಮಿ ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಅಂಗಡಿಯ ಮುಂದೆ 5 ಜನ ಗಂಡಸರು ಪ್ಲಾಸ್ಟಿಕ್ ‍ಗ್ಲಾಸ್ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು 5 ಜನ ಗಂಡಸರು ಓಡಿಹೋಗಿದ್ದು, ಚೀಲ ಹಿಡಿದುಕೊಂಡು ನಿಂತಿದ್ದ ಹಾಗೂ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ ಸದರಿ ಆಸಾಮಿಗಳು ತನ್ನ ಹೆಸರು 1] ನಾರಾಯಣಸ್ವಾಮಿ ಬಿನ್ ಮಲ್ಲಪ್ಪ, 22 ವರ್ಷ, ಪರಿಶಿಷ್ಟ ಜಾತಿ, ಕುಡುಮಲಕುಂಟೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಮತ್ತು 2] ಆದಿನಾರಾಯಣಪ್ಪ ಬಿನ್ ಲೇಟ್ ನಾರಾಯಣಪ್ಪ, 42 ವರ್ಷ, ನಾಯಕರು, ಕುಡುಮಲಕುಂಟೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಇವರ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 22 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಬೆಲೆ 667.04 ರೂ.ಗಳಾಗಿದ್ದು, ಸ್ಥಳದಲ್ಲಿ 05 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 05 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಗಳಿಗೆ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯಾ ಎಂದು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಸ್ಥಳದಲ್ಲಿ ಸಾಯಂಕಾಲ 6-00 ಗಂಟೆಯಿಂದ 6-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಆರೋಪಿಗಳನ್ನು ಹಾಗು 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 22 ಟೆಟ್ರಾ ಪಾಕೆಟ್ ಗಳು, ಸ್ಥಳದಲ್ಲಿ ಬಿದ್ದಿದ್ದ 05 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 05 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಪ್ಲಾಸ್ಟಿಕ್ ಚೀಲವನ್ನು ವಶಪಡಿಸಿಕೊಂಡು, ಠಾಣೆಗೆ ವಾಪಸ್ಸು ಬಂದು, ರಾತ್ರಿ 8-30 ಗಂಟೆಗೆ ಠಾಣೆಯಲ್ಲಿ ಸ್ವತಃ ಮೊ.ಸಂ. 39/2019 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಸ್ವತಃ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

9) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 40/2019 ಕಲಂ. 15(ಎ), 32(3), ಅಬಕಾರಿ ಕಾಯ್ದೆ :-

     ದಿನಾಂಕ:10/02/2019 ರಂದು ಸಾಯಂಕಾಲ 4-00 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಚೌಳೂರು ಗೇಟ್ ಮತ್ತು ಕುಡುಮಲಕುಂಟೆ ಯಲ್ಲಿರುವ ಪೆಟ್ಟಿಗೆ ಅಂಗಡಿಗಳ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಮೇರೆಗೆ ಸಿ.ಪಿ.ಐ ಸಾಹೇಬರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-281 ರಲ್ಲಿ ಕುಡುಮಲಕುಂಟೆ ಗ್ರಾಮಕ್ಕೆ ಹೋಗಿ ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಬಸ್ ನಿಲ್ದಾಣದ ಬಳಿ ಒಂದು ಅಂಗಡಿಯ ಮುಂದೆ ಒಬ್ಬ ಆಸಾಮಿ ಚೀಲವನ್ನು ಹಿಡಿದುಕೊಂಡು ನಿಂತಿದ್ದು, ಮತ್ತೊಬ್ಬ ಆಸಾಮಿ ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಅಂಗಡಿಯ ಮುಂದೆ 7 ಜನ ಗಂಡಸರು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು 7 ಜನ ಗಂಡಸರು ಓಡಿಹೋಗಿದ್ದು, ಚೀಲ ಹಿಡಿದುಕೊಂಡು ನಿಂತಿದ್ದ ಹಾಗೂ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ ಸದರಿ ಆಸಾಮಿಗಳು ತನ್ನ ಹೆಸರು 1] ನರಸಿಂಹಪ್ಪ ಬಿನ್ ಲೇಟ್ ನಂಜಪ್ಪ, 54 ವರ್ಷ, ಪರಿಶಿಷ್ಟ ಜಾತಿ[ಎ.ಕೆ], ಕುಡುಮಲಕುಂಟೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಮತ್ತು 2] ಚಿನ್ನಪ್ಪ ಬಿನ್ ಲೇಟ್ ಅಂಜಿನಪ್ಪ, 55 ವರ್ಷ, ಪರಿಶಿಷ್ಟ ಜಾತಿ[ಎ.ಕೆ], ಕುಡುಮಲಕುಂಟೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಇವರ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 26 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಬೆಲೆ 788.32 ರೂ.ಗಳಾಗಿದ್ದು, ಸ್ಥಳದಲ್ಲಿ 07 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 07 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಗಳಿಗೆ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯಾ ಎಂದು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಸ್ಥಳದಲ್ಲಿ ಸಾಯಂಕಾಲ 6-45 ಗಂಟೆಯಿಂದ 7-15 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಆರೋಪಿಗಳನ್ನು ಹಾಗು 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 26 ಟೆಟ್ರಾ ಪಾಕೆಟ್ ಗಳು, ಸ್ಥಳದಲ್ಲಿ ಬಿದ್ದಿದ್ದ 07 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 07 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಪ್ಲಾಸ್ಟಿಕ್ ಚೀಲವನ್ನು ವಶಪಡಿಸಿಕೊಂಡು, ಠಾಣೆಗೆ ವಾಪಸ್ಸು ಬಂದು, ರಾತ್ರಿ 8-45 ಗಂಟೆಗೆ ಠಾಣೆಯಲ್ಲಿ ಸ್ವತಃ ಮೊ.ಸಂ. 40/2019 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಸ್ವತಃ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

10) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 20/2019 ಕಲಂ. 279,337 ಐಪಿಸಿ :-

     ದಿನಾಂಕ: 09/02/2019 ರಂದು ಪಿರ್ಯಾದಿದಾರರಾದ ಶ್ರೀ ಸೋಮನಾಥ್ ಬಿನ್ ಈರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 09/02/2019 ರಂದು ಗೌರಿಬಿದನೂರು ವಾಸಿಯಾದ ಮಂಜಣ್ಣ ಎಂಬುವರು ತಮ್ಮ ಮನೆಯ ಸಾಮಾನುಗಳನ್ನು ಬೆಂಗಳೂರಿಗೆ ಶಿಪ್ಟ್ ಮಾಡಲು ತಮ್ಮ ಚಿಕ್ಕಪ್ಪನ ಮಗನಾದ ರಾಜೇಂದ್ರ ಬಿನ್ ಯಮನಪ್ಪ ರವರ ಬಾಬತ್ತು ಕೆ.ಎ-53-ಡಿ-6842 ವಾಹನವನ್ನು ಬಾಡಿಗೆಗೆ ಮಾತನಾಡಿಕೊಂಡಿದ್ದರು. ಗೌರಿಬಿದನೂರಿನಿಂದ ಮಂಜಣ್ಣ ರವರ ಮನೆಯ ಸಾಮಾನುಗಳನ್ನು ಸದರಿ ವಾಹನದಲ್ಲಿ ತುಂಬಿಸಿಕೊಂಡು ತಾನು, ಮಂಜಣ್ಣ ಹಾಗೂ ಅವರ ಹೆಂಡತಿ ಶೋಭಾ ರವರು ಹಾಗೂ ಮೇಲ್ಕಂಡ ವಾಹನವನ್ನು ರಾಜೇಂದ್ರ ರವರು ಚಾಲನೆ ಮಾಡಿಕೊಂಡು ಗೌರಿಬಿದನೂರಿನಿಂದ ಬೆಂಗಳೂರಿಗೆ ಎಸ್.ಎಚ್-9 ರಸ್ತೆಯಲ್ಲಿ ಹೋಗುತ್ತಿದ್ದಾಗ ಪೋತೆನಹಳ್ಳಿ ಗ್ರಾಮದ ಬಳಿ ಮದ್ಯಾಹ್ನ ಸುಮಾರು 12-30 ಗಂಟೆಯ ಸಮಯದಲ್ಲಿ ಎದುರುಗಡೆಯಿಂದ ಬಂದಂತಹ ಎ.ಪಿ-02-ಟಿ.ಎ-5612 ನೊಂದಣಿ ಸಂಖ್ಯೆಯ ವಾಹನದ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾವು ಹೋಗುತ್ತಿದ್ದ ವಾಹನದ ಬಲ ಭಾಗಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ್ದರ ಪರಿಣಾಮ ವಾಹನ ಜಖಂಗೊಂಡು ತನಗೆ ತಲೆಗೆ ಹಾಗೂ ಬಲಕಾಲಿಗೆ ರಕ್ತಗಾಯವಾಗಿದ್ದು ಎಡ ಕೈಗೆ ಮೂಗೇಟು ಉಂಟಾಗಿರುತ್ತದೆ. ತಮ್ಮ ವಾಹನವನ್ನು ಚಾಲನೆ ಮಾಡುತ್ತಿದ್ದ ರಾಜೇಂದ್ರ ರವರಿಗೆ ಎರಡು ಕೈ ಮತ್ತು ಕಾಲುಗಳಿಗೆ ಹಾಗೂ ಮುಖದ ಮೇಲೆ ರಕ್ತಗಾಯಗಳಾಗಿರುತ್ತದೆ,  ಹಾಗೂ ತಮ್ಮ ವಾಹನದಲ್ಲಿದ್ದ ಮಂಜಣ್ಣ ರವರಿಗೆ ಎಡ ಕೈಗೆ ಮುರಿತದ ಗಾಯವಾಗಿರುತ್ತದೆ, ಮತ್ತು ಮಂಜಣ್ಣ ರವರ ಹೆಂಡತಿ ಶೋಭಾ ರವರಿಗೆ ಹೊಟ್ಟೆಯ ಬಳಿ ರಕ್ತಗಾಯವಾಗಿರುತ್ತದೆ, ಅಲ್ಲಿದ್ದ ಸಾರ್ವಜನಿಕರು ಗಾಯಗೊಂಡಿದ್ದ ತಮ್ಮಗಳನ್ನು 108 ಅಂಬುಲೆನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದರು ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಾನು ಮತ್ತು ರಾಜೇಂದ್ರ ರವರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇವೆ. ಮಂಜಣ್ಣ ಹಾಗೂ ಶೋಭಾ ರವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ನಾನು ಚಿಕಿತ್ಸೆ ಪಡೆದುಕೊಂಡು ಈ ದಿನ ತಡವಾಗಿ ದೂರು ನೀಡುತ್ತಿದ್ದು, ಈ ಅಪಘಾತಕ್ಕೆ ಎ.ಪಿ-02-ಟಿ.ಎ-5612 ನೊಂದಣಿ ಸಂಖ್ಯೆಯ ವಾಹನದ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೆ ಕಾರಣವಾಗಿರುತ್ತದೆ. ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ದೂರು ನೀಡಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

11) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 21/2019 ಕಲಂ. 279,337 ಐಪಿಸಿ :-

     ದಿನಾಂಕ:-11-02-2019 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಬಾಬಾ ಫಕೃದ್ದಿನ್ ಬಿನ್ ಲೇಟ್ ಅಬ್ದುಲ್ ರಹೀಮ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ.ನಮ್ಮ ಚಿಕ್ಕಪ್ಪನ ಮಗನಾದ ಮಹಮದ್ ಪೀರ್ ದೋಸ್ ಬಿನ್ ಲೇಟ್ ಅಬ್ದುಲ್ ಸಾಬ್ ರವರು ದಿನಾಂಕ:-06-02-2018 ರಮದು ಬೆಳಿಗ್ಗೆ 09-00 ಗಂಟೆಗೆ ಹಿರೇಬಿದನೂರು ಕಡೆಯಿಂದ ತನ್ನ ಊರಾದ ಪೊತೇನಹಳ್ಳಿಗೆ ತನ್ನ ಬಾಬತ್ತು KA-02/EC-7172 ಹೀರೋ ಹೋಂಡಾ ಪ್ಯಾಷನ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬೆಂಗಳೂರು ಹಿಂದೂಪುರ ರಸ್ತೆಯಲ್ಲಿ ಬರ್ಜಾನುಕುಂಟೆ ಕ್ರಾಸ್ ಬಳಿ ಬರುತ್ತಿರುವಾಗ ಬೆಂಗಳುರು ಕಡೆಯಿಂದ ಬಂದ KA-50/8196 ಟ್ರ್ಯಾಕ್ಟರ್ ನ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ KA-02/EC-7172 ಹೀರೋ ಹೋಂಡಾ ಪ್ಯಾಷನ್ ಪ್ಲಸ್ ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ಮಹಮದ್ ಪೀರ್ ದೋಸ್ ರವರ ಬಲಗಾಲಿಗೆ ಮುರಿತದ ಗಾಯವಾಗಿದ್ದು.ಎಂದು ಯಾರೋ ನನಗೆ ಮೊಬೈಲ್ ಗೆ ಕರೆ ಮಾಡಿ ತಿಳಿಸಿರುತ್ತಾರೆ.ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು.ತಕ್ಷಣ ಯಾವುದೋ ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆಗಾಗಿ ಹಿಂದೂಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು. ಗ್ರಾಮದಲ್ಲಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಇದುವರೆವಿಗೂ ಯಾರು ಬಾರದ ಕಾರಣ ಈದಿನ ದಿನಾಂಕ:-11-02-2019 ರಂದು ತಡವಾಗಿ ಠಾಣೆಗೆ ಬಂದು ಟ್ರ್ಯಾಕ್ಟರ್ ಮತ್ತು ಚಾಲಕನ ವಿರುದ್ದು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.