ದಿನಾಂಕ : 11/01/2019 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.07/2019 ಕಲಂ. 96(ಎ). 96(ಬಿ) ಕೆ.ಪಿ. ಆಕ್ಟ್:-

     ದಿನಾಂಕ: 10/01/2019 ರಂದು ರಾತ್ರಿ 19.30 ಗಂಟೆಗೆ ಶ್ರೀ.ನವೀನ್ ಪಿ.ಎಂ  ಪಿ.ಎಸ್.ಐ ರವರು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:10-01-2019 ರಂದು ಸಂಜೆ ನಾನು ಮತ್ತು ಜೀಪ್ ಚಾಲಕ ಅಲ್ತಾಪ್ ಫಾಷ ಎ.ಹೆಚ್.ಸಿ-34 ರವರೊಂದಿಗೆ ಸಕರ್ಾರಿ ಜೀಪ್ ಸಂಖ್ಯೆ : ಕೆಎ-40 ಜಿ-537 ರಲ್ಲಿ ಬಾಗೇಪಲ್ಲಿ ಪುರದಲ್ಲಿ ನ್ಯಾಷನಲ್ ಕಾಲೇಜು, ಗೂಳೂರು ರಸ್ತೆ, ಸಾಯಿಬಾಬಾ ದೇವಸ್ಥಾನ, ಮುಂತಾದ ಕಡೆಗಳಲ್ಲಿ ಗಸ್ತು ಮಾಡಿಕೊಂಡು ರಾತ್ರಿ ಸುಮಾರು 19.00 ಗಂಟೆಯ ಸಮಯದಲ್ಲಿ ಗಡಿದಂ (ದೇವರಗುಡಿಪಲ್ಲಿ) ಸಕರ್ಾರಿ ಶಾಲೆಯ ಮುಂಭಾಗ ಬರುತ್ತಿದ್ದಾಗ ಶಾಲಾ ಕಂಪೌಂಡ್ ಗೋಡೆಯ ಬಳಿ ಇದ್ದ ಯಾರೋ ಒಬ್ಬ ಅಸಾಮಿಯು ಜೀಪ್ನಲ್ಲಿ ಬರುತ್ತಿದ್ದ ನಮ್ಮನ್ನು ನೋಡಿ ತನ್ನ ಇರುವಿಕೆಯನ್ನು ಮರೆಮಾಚಿಕೊಳ್ಳಲು ಯತ್ನಿಸಿದಾಗ ನಾವುಗಳು ಸದರಿ ಆಸಾಮಿಯನ್ನು ಹಿಂಬಾಲಿಸಿ ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತೊದಲುತ್ತಾ, ರಾಮಕೃಷ್ಣ ಬಿನ್ ಗಂಗುಲಪ್ಪ 37 ವರ್ಷ, ಗೊಲ್ಲರು, ಚಾಲಕ, ವಾಸ ಗೂಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಆಸಾಮಿಯನ್ನು ಪರಿಶೀಲಿಸಲಾಗಿ ಸದರಿ ಅಸಾಮಿಯ ಕೈಯಲ್ಲಿ ಒಂದು ಕಬ್ಬಿಣದ ರಾಡು ಇದ್ದು, ಸದರಿ ಅಸಾಮಿಯು ಆವೇಳೆ ಹೊತ್ತಿನಲ್ಲಿ ರಾಡುನ್ನು ಹಿಡಿದುಕೊಂಡು ಇರಲು ಸಮಂಜಸವಾದ ಉತ್ತರವನ್ನು ನೀಡದೆ ಇದ್ದುದ್ದರಿಂದ ಸದರಿಯವರು ಯಾವುದೋ ಕೃತ್ಯವನ್ನು ಎಸಗಲು ಬಂದಿರಬಹುದೆಂದು ಅನುಮಾನದ ಮೇರೆಗೆ ಸದರಿ ಅಸಾಮಿಯನ್ನು ವಶಕ್ಕೆ ಪಡೆದು ರಾತ್ರಿ 19.30 ಗಂಟೆಗೆ ಠಾಣೆಗೆ ಕರೆತಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ: 07/2019 ಕಲಂ: 96(ಎ) &(ಬಿ) ಕೆ.ಪಿ. ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

2) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.08/2019 ಕಲಂ. 279-337-304(ಎ) ಐ.ಪಿ.ಸಿ:-

     ದಿನಾಂಕ 11/01/2019 ರಂದು ಪಿರ್ಯಾದಿದಾರರಾದ ನಡಿಪಿಸುಬ್ಬಾರೆಡ್ಡಿ ಬಿನ್ ಲೇಟ್ ಪೆದ್ದಸುಬ್ಬಾರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆಗೆ ನಾವು 3 ಜನ ಗಂಡು ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದ್ದು, ಬೇರೆ ಬೇರೆಯಾಗಿ ಸಂಸಾರವನ್ನು ಮಾಡಿಕೊಂಡಿರುತ್ತೇವೆ. ನಮ್ಮ ಅಣ್ಣ ಪೆದ್ದ ಸುಬ್ಬಾರೆಡ್ಡಿ ರವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಅವರು ಜಿರಾಯ್ತಿಯನ್ನು ಮಾಡಿಕೊಂಡಿದ್ದು, ತಮ್ಮ ಜಮೀನಿನಲ್ಲಿ ಬೆಳೆದಂತಹ ಸೇವಂತಿಗೆ ಹೂವುಗಳನ್ನು ಮಾರಾಟ ಮಾಡುವ ಸಲುವಾಗಿ ನಮ್ಮ ಗ್ರಾಮದಿಂದ ಷೇಕ್ ಬಾಬಾ ಪಕ್ಕುರುದ್ದೀನ್  ಬಿನ್  ಷೇಕ್ ಹುಸೇನ್ ಫೀರಾ, ನಂದಿ ಮಂಡಲಂ ಗ್ರಾಮ, ಪೆಂಡ್ಲಿಮರಿ ಮಂಡಲಂ, ಕಮಲಾಪುರಂ ತಾಲ್ಲೂಕು, ಕಡಪ ಜಿಲ್ಲೆ,  ಆಂಧ್ರಪ್ರದೇಶ ರವರು ಅವರ ಬಾಬತ್ತು ಎಪಿ-03, ಟಿಇ-8159 ನೊಂದಣಿ ಸಂಖ್ಯೆಯ ಕ್ಯಾಂಟರ್ ವಾಹನದಲ್ಲಿ ಹೂವನ್ನು ತುಂಬಿಕೊಂಡು ಹೂವನ್ನು ಮಾರಾಟ ಮಾಡಲು  ತಾವು ಸಹ ವಾಹನದಲ್ಲಿ ಕುಳಿತುಕೊಂಡು ಬೆಂಗಳೂರಿಗೆ ಹೋಗಲು ದಿನಾಂಕ:10/01/2019 ರಂದು ಸಂಜೆ ಸುಮಾರು 6-30 ಗಂಟೆಗೆ  ನಮ್ಮ ಗ್ರಾಮವನ್ನು ಬಿಟ್ಟು  ಮಾರ್ಗ ಮದ್ಯದಲ್ಲಿ ಬರುವ ವಿವಿಧ ಹಳ್ಳಿಗಳಲ್ಲಿ ಸಹ ಹೂವನ್ನು ತುಂಬಿಕೊಂಡು ಹೂವಿನ ಮಾಲೀಕರನ್ನು ವಾಹನದಲ್ಲಿ ಕೂರಿಸಿಕೊಂಡು   ವಾಹನದ ಚಾಲಕ ತನ್ನ ವಾಹನವನ್ನು ಚಾಲನೆ ಮಾಡಿಕೊಂಡು ಎನ್.ಹೆಚ್-07 ರಸ್ತೆಯ ಮಾರ್ಗವಾಗಿ  ರಾತ್ರಿ ಸುಮಾರು 10-30 ಗಂಟೆ ಸಮಯದಲ್ಲಿ ಬಾಗೇಪಲ್ಲಿ ತಾಲ್ಲೂಕು  ಟಿ.ಬಿ ಕ್ರಾಸ್ ಸಮೀಪ ಇರುವ ಮದರಸ  ಶಾಲೆಯ ಬಳಿ ಬರುತ್ತಿದ್ದಾಗ ಬಾಗೇಪಲ್ಲಿ ಕಡೆಯಿಂದ ಸರ್ವೀಸ್ ರಸ್ತೆಯಲ್ಲಿ ಬಂದಂತಹ ಕೆಎ-07,ಎಫ್-1763 ನೊಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ತನ್ನ ಬಸ್ಸನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸರ್ವೀಸ್ ರಸ್ತೆಯಿಂದ ಬೆಂಗಳೂರು ಕಡೆಗೆ ಹೋಗುವ ಎನ್.ಹೆಚ್-07 ರಸ್ತೆಗೆ ಯಾವುದೇ ಸೂಚನೆಗೆಳನ್ನು ನೀಡದೆ ಇದ್ದಕಿದ್ದ ಹಾಗೇ ಬಸ್ಸನ್ನು ರಸ್ತೆಗೆ ತಿರುಗಿಸಿ ಕ್ಯಾಂಟರ್ ವಾಹನಕ್ಕೆ ಅಡ್ಡ ಬಂದಿದ್ದರಿಂದ ನಮ್ಮ ಅಣ್ಣ ಪೆದ್ದಸುಬ್ಬಾರೆಡ್ಡಿ ರವರು ಮತ್ತು ಇತರೆ 9 ಜನರು ಕುಳಿತುಕೊಂಡು ಹೋಗುತ್ತಿದ್ದ ಕ್ಯಾಂಟರ್ನ ಚಾಲಕ ತನ್ನ ವಾಹನವನ್ನು ಎಷ್ಟೇ ನಿಯಂತ್ರಿಸಿದರು ವಾಹನ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ವಾಹನ ಬಸ್ಸಿನ ಹಿಂಭಾಗಕ್ಕೆ  ತಗುಲಿ ರಸ್ತೆಯ ಮೇಲೆ ಉರುಳಿ ಬಿದ್ದ ಪರಿಣಾಮ ಕ್ಯಾಂಟರ್ನ ಮುಂಭಾಗ ಮತ್ತು ಬಲಭಾಗ ಜಖಂಗೊಂಡಿದ್ದು ಬಸ್ಸಿನ ಹಿಂಭಾಗ ಸಹ ಜಖಂಗೊಂಡಿರುತ್ತದೆ. ಕ್ಯಾಂಟರ್ನಲ್ಲಿದ್ದ ನಮ್ಮ ಅಣ್ಣ ಪೆದ್ದ ಸುಬ್ಬಾರೆಡ್ಡಿ ರವರಿಗೆ ಕತ್ತಿನ ಮೇಲೆ ತೀವ್ರತರವಾದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಮತ್ತು  ಕ್ಯಾಂಟರ್ನಲ್ಲಿದ್ದ ಇತರೆ  9 ಜನರಿಗೂ  ಸಹ ರಕ್ತ ಗಾಯಗಳು ಆಗಿದ್ದು, ಸದರಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿ ಮತ್ತು ನಮ್ಮ ಅಣ್ಣನ ಮೃತ ದೇಹವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿರುವುದಾಗಿ ನಮಗೆ ಯಾರೋ ಫೋನ್ ಮಾಡಿ ತಿಳಿಸಿದ್ದು, ನಾವುಗಳು ದಿನಾಂಕ:11/01/2019 ರಂದು ಬೆಳಿಗ್ಗೆ 6-00 ಗಂಟೆಗೆ ಬಂದು ನೋಡಲಾಗಿ ವಿಷಯ ನಿಜವಾಗಿರುತ್ತದೆ. ಅದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆಎ-07,ಎಫ್-1763 ನೊಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ನೀಡಿದ ದೂರು.

3) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.04/2019 ಕಲಂ. 323-324-504 ರೆ/ವಿ 34  ಐ.ಪಿ.ಸಿ:-

     ದಿನಾಂಕ 10/01/2019 ರಂದು ಬೆಳಿಗ್ಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ವೈಧ್ಯರು ರವಾನಿಸಿದ ಮೆಮೊವನ್ನು ಪಡೆದು ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಕವಿತಾ ರವರಿಂದ ಪಡೆದ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ 09/01/2019 ರಂದು ಸಂಜೆ ತಮ್ಮ  ಪಕ್ಕದ ಮನೆಯ ವಾಸಿ ಶ್ರಿಮತಿ ಪ್ರಭಾರವರು ತಮ್ಮ ಮನೆಯ ಬಳಿ ಬಂದು ವಿದ್ಯುತ್ ಕಂಬದಲ್ಲಿದ್ದ ತಂತಿಯನ್ನು ಕೋಲಿನಿಂದ ಹೊಡೆಯುತ್ತಿದ್ದಾಗ ತಾನು ತಂತಿಯನ್ನು ಕೋಲಿನಿಂದ ಹೊಡೆಯ ಬೇಡ ನಮ್ಮ ಮನೆಯ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆಂದು ಹೇಳಿದಾಗ ಪ್ರಭಾರವರು ಅವಾಚ್ಯ ಶಬ್ದಗಳಿಂದ ಬೈದಿದ್ದು ತಾನು ಸುಮ್ಮನಾಗಿ ಸಂಜೆ ಸುಮಾರು 06.00 ಗಂಟೆ ಸಮಯದಲ್ಲಿ ತಾನು ಹೊಲದಲ್ಲಿ ರೇಷ್ಮೆ ಸೊಪ್ಪನ್ನು ಕತ್ತರಿಸುತ್ತಿದ್ದಾಗ, ಪ್ರಭಾ ಮತ್ತು ಅವರ ತಂದೆ ನಾರಾಯಣಪ್ಪ ರವರು ಅಲ್ಲಿಗೆ ಬಂದು ತನ್ನನ್ನು ಕುರಿತು ಸದರಿಯವರು ನಿನ್ನ ದೌರ್ಜನ್ಯ ಜಾಸ್ತಿಯಾಯಿತು ಬೇವರ್ಸಿ ಮುಂಡೆ, ನಿಮ್ಮ ತಾಯಿ ಎಷ್ಟು ಜನರ ಬಳಿ ಹೋಗಿ ಹುಟ್ಟಿಸಿಕೊಂಡಿರುತ್ತಾಳೆ, ಲೈಟು ಕಂಬ ನಿನ್ನ ಅಪ್ಪನದ ಎಂದು ವಿನಾ ಕಾರಣ ಜಗಳ ತೆಗೆದು ನಾರಾಯಣಪ್ಪ ತನ್ನ ಕೂದಲನ್ನು ಹಿಡಿದು ಕೊಂಡು ಕೈಗಳಿಂದ ಗುದ್ದಿದ್ದು ಪ್ರಭಾರವರು ಯಾವುದೋ ದೊಣ್ಣೆಯಿಂದ ತನ್ನ ಎಡಕತ್ತಿಗೆ ಹೊಡೆದು ಕೆಳಕ್ಕೆ ಬೀಳಿಸಿ ಯಾವುದೋ ಹರಿತವಾದ ಆಯುಧದಿಂದ ಕೈಗೆ ರಕ್ತ ಗಾಯ ಪಡಿಸಿದ್ದು, ತಾನು ಕೆಳಕ್ಕೆ ಬಿದ್ದಿದ್ದು, ಈ ಸಮಯದಲ್ಲಿ ತನ್ನ ತಾಳಿ ಮತ್ತು ಬಂಗಾರದ ಗುಂಡುಗಳು ಕಳೆದು ಹೋಗಿರುತ್ತವೆ, ಅಲ್ಲಿಗೆ ಬಂದ ತನ್ನ ತಾಯಿ ಜಗಳ ಬಿಡಿಸಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ತನ್ನ ಮೇಲೆ ವಿನಾಕಾರಣ ಜಗಳ ತೆಗೆದು ಕೈಗಳಿಂದ ಗುದ್ದಿ ಮತ್ತು ದೊಣ್ಣೆಯಿಂದ ಹೊಡೆದು ಬಲಗೈ ರಕ್ತ ಗಾಯಪಡಿಸಿರುವ ಸದರಿ ಪ್ರಭಾ ಮತ್ತು ನಾರಾಯಣಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

4) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.05/2019 ಕಲಂ. 323-324-504 ರೆ/ವಿ 34  ಐ.ಪಿ.ಸಿ:-

     ದಿನಾಂಕ 10/01/2019 ರಂದು ರಾತ್ರಿ 7.30 ಗಂಟೆಗೆ ಪಿರ್ಯಾದಿದಾರರಾದ ಶ್ರಿಮತಿ ಪ್ರಭಾ ಕೋಂ ನಾರಾಯಣಪ್ಪ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಮ್ಮೂರಿನ ನಿವಾಸಿಗಳಾದ ಹರೀಶ್ ಕುಮಾರ್ ಬಿನ್ ಲೇಟ್ ಜಯರಾಮಯ್ಯ, 33 ವರ್ಷ, ವಕ್ಕಲಿಗರು, ಅವರ ಹೆಂಡತಿಯಾದ ಕವಿತಾ 28 ವರ್ಷ, ರವರುಗಳಿಗೆ ಜಮೀನುಗಳ ವಿಚಾರದಲ್ಲಿ ತಕರಾರುಗಳಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಕೇಸುಗಳು ನಡೆಯುತ್ತಿರುತ್ತೆ. ಈ ವೈಷಮ್ಯಗಳಿಂದ ದಿನಾಂಕ; 09-01-2019 ರಂದು ಸಂಜೆ ಸುಮಾರು 6.30 ಗಂಟೆ ಸಮಯದಲ್ಲಿ ತಾನು, ತಮ್ಮ ತಂದೆ ನಾರಾಯಣಪ್ಪ ಬಿನ್ ಲೇಟ್ ವರಲಕ್ಷ್ಮಯ್ಯ, 90 ವರ್ಷ, ರವರು ಜಮೀನಿನಲ್ಲಿರುವ ತೋಟದ ಮನೆ ಬಳಿ ಇರುವಾಗ ಹರೀಶ್ ಕುಮಾರ್, ಅವರ ಹೆಂಡತಿ ಕವಿತಾ, ಅವರ ಅತ್ತೆ  ರಾಜಮ್ಮ ಕೋಂ ರಾಮಾಂಜಿನಪ್ಪ, 55 ವರ್ಷ, ರವರು ಜಮೀನು ವಿಚಾರದಲ್ಲಿ ವಿನಾಕಾರಣ ಜಗಳ ತೆಗೆದು ತನ್ನನ್ನು ಮತ್ತು ತಮ್ಮ ತಂದೆ ನಾರಾಯಣಪ್ಪ ರವರ ಮೇಲೆ ಜಗಳ ತೆಗೆದು ಬಾಯಿಗೆ ಬಂದಂತೆ ಕೆಟ್ಟ ಮಾತುಗಳಿಂದ ಬೈದು ಆ ಪೈಕಿ ಕವಿತಾ ದೊಣ್ಣೆಯಿಂದ ತನ್ನ ಬೆನ್ನಿಗೆ,ಬಲಕೈ, ತೋಳಿಗೆ, ಎಡಕೈಗೆ, ಎಡಭುಜಕ್ಕೆ ಹೊಡೆದು ಗಾಯಪಡಿಸಿದಳು, ರಾಜಮ್ಮ ರವರು ತನ್ನ ಕೂದಲನ್ನು ಹಿಡಿದು ಎಳೆದಾಡಿ ಕಂಬಳಿ ಸೊಪ್ಪಿನ ತೋಟಕ್ಕೆ ತಳ್ಳಿ ಕಾಲಿನಿಂದ ಒದ್ದು, ಕೈಗಳಿಂದ ಹೊಡೆದಳು. ಜಗಳ ಬಿಡಿಸಲು ಬಂದ ತಮ್ಮ ತಂದೆ ನಾರಾಯಣಪ್ಪನಿಗೆ ಹರೀಶ್ ಕುಮಾರ್ ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು, ಮೂಗೇಟುಗಳುಂಟು ಮಾಡಿದನು. ಆಗ ತಮ್ಮೂರಿನ ಕೇಶವರೆಡ್ಡಿ ಬಿನ್ ಮರಿಲಕ್ಷ್ಮಯ್ಯ ರವರು, ಜಗಳ ಬಿಡಿಸಿದರು. ನಂತರ ತಾನು, ರಸ್ತೆಗೆ ಬಂದು ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ.ಗಲಾಟೆ ವಿಚಾರದಲ್ಲಿ ತಮ್ಮೂರಿನ ಹಿರಿಯರು ಮಾತುಕತೆ ಮುಖಾಂತರ ಬಗೆಹರಿಸುತ್ತೇವೆಂದು ಹೇಳಿದರು. ಆದರೆ ಹರೀಶಕುಮಾರ್ ಮತ್ತು ಅವರ ಕಡೆಯವರು ಮಾತುಕತೆಗೆ ಬಾರದ ಕಾರಣ ತಡವಾಗಿ ಬಂದು ದೂರು ನೀಡಿರುತ್ತೇನೆ. ತನ್ನನ್ನು, ತನ್ನ ತಂದೆ ನಾರಾಯಣಪ್ಪ ರವರನ್ನು ಬೈದು ಹೊಡೆದು ಗಲಾಟೆ ಮಾಡಿರುವ ಹರೀಶ್ ಕುಮಾರ್ ಮತ್ತು ಇತರರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

5) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.01/2019 ಕಲಂ. 78(ಸಿ) ಕೆ.ಪಿ. ಆಕ್ಟ್:-

     ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಂದರ ಆದ ನನಗೆ ದಿನಾಂಕ:11/01/2019 ರಂದು  ಬೆಳಿಗ್ಗೆ 9:15  ಗಂಟೆಗೆ ಗೌರಿಬಿದನೂರು ಪುರದ  ರಜಾಕ್ ಸಾಬ್ ಗಲ್ಲಿಯ ಸಾರ್ವಜನಿಕ  ರಸ್ತೆಯಲ್ಲಿ ಯಾರೋ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಬಾತ್ಮೀ ಮೇರೆಗೆ ನಾನು ಪಂಚರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಪಂಚರು ಮತ್ತು ಪೊಲೀಸ್ ಸಿಬ್ಬಂದಿಯಾದ ಮಂಜುನಾಥ ಹೆಚ್.ಸಿ 135, ಶಿವಶಂಕರಪ್ಪ ಸಿ.ಹೆಚ್.ಸಿ 12  ರವರುಗಳೊಂದಿಗೆ ಸರ್ಕಾರಿ ಜೀಪಿನಲ್ಲಿ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಬಿ.ಹೆಚ್ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ 1/- ರೂ.ಗೆ 70/- ರೂ.ಗಳನ್ನು ನೀಡುವುದಾಗಿ ಹಣ ಆಮಿಷವನ್ನು ಒಡ್ಡುತ್ತಿದ್ದು,  ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಸದರಿ ಜೂಜಾಟದ ಮೇಲೆ ಪಂಚರ ಸಮಕ್ಷಮ  ದಾಳಿ ಮಾಡಿ ಆತನನ್ನು ಸುತ್ತುವರಿದು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಕುಮಾರ ಬಿನ್ ಲೇಟ್ ಕೃಷ್ಣಪ್ಪ, 35 ವರ್ಷ ಶೆಟ್ಟಿಬಲಜಿಗರು, ವ್ಯಾಪಾರ, ರಜಾಕ್ ಸಾಬ್ ಗಲ್ಲಿ, ಗೌರಿಬಿದನೂರು ಪುರ ಎಂದು  ತಿಳಿಸಿದ್ದು, ಆತನ  ಬಳಿ ಇದ್ದ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು 460/- ರೂ. ನಗದು ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು 11:00 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಠಾಣಾ ಮೊ.ಸಂ 01/2019 ಕಲಂ 78 ಕ್ಲಾಸ್ 3 ಕೆ.ಪಿ ಆಕ್ಟ್ ರೀತ್ಯ ಸ್ವತಃ ಪ್ರಕರಣವನ್ನು ದಾಖಲಿಸಿರುತ್ತೇನೆ.

6) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.309- 353-506 ಐ.ಪಿ.ಸಿ:-

     ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಸುಂದರ ಆದ ನಾನು 2017 ಮಾರ್ಚ್ ನಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ನಿವೇಧಿಸಿಕೊಳ್ಳುವುದೇನೆಂದರೆ, ಗೌರಿಬಿದನೂರು ಟೌನ್ ನ ವಿವೇಕಾನಂದ ಕಾಲೋನಿ, ವಾಟರ್ ಟ್ಯಾಂಕ್ ಬಳಿ ವಾಸವಾಗಿರುವ ಸುಬ್ಬಮ್ಮ ಕೋಂ ಸಿ ಕೃಷ್ಣಪ್ಪ ರವರ ಮೊದಲನೇ ಮಗನಾಧ ಲೋಕೇಶ್ ಎಂಬುವವರು ಗೌರಿಬಿದನೂರು  ಬೆಸ್ಕಾಂ ಇಲಾಕೆಯಲ್ಲಿ ಮೀಟರ್ ರೀಡರ್ ಆಗಿ ಕೆಲಸ ಮಾಡುತ್ತಿದ್ದವನು ದಿನಾಂಕ:06/02/2016 ರಂದು ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಆ ಸಮಯದಲ್ಲಿ ಮೃತನ ಕಡೆಯವರು ಯಾರೂ ಸಹ ದೂರು ನೀಡದೇ ಹೃಡಯಾಘಾತವೆಂದು ದಫನ್ ಮಾಡಿದ್ದರು. ಆದರೆ ಸುಬ್ಬಮ್ಮ ರವರು ಅವರ ಸೊಸೆಯಾದ ಮೃತ ಲೋಕೇಶ್ ರವರ ಹೆಂಡತಿ ಲಾವಣ್ಯ ಸಿ. ಶೇಖರ್ ರವರು ಮೃತನ ವಿಮೆ ಹಣ ಹಾಗೂ ಅನುಕಂಪದ ಆಧಾರದ ಮೇಲೆ ಸಿಗುವ ಕೆಲಸದ ವಿಚಾರದಲ್ಲಿ ಆಕೆಗೆ ಕೆಲಸ ಸಿಗುತ್ತದೆಂದು ಅದನ್ನು ತನ್ನ ಮತ್ತೊಬ್ಬ ಮಗನಾದ ನಾಗರಾಜ್ ರವರಿಗೆ ಕೆಲಸ ಕೊಡಿಸುವ ನಿರ್ಧಾರ ಮಾಡಿಕೊಂಡು ಸೊಸೆಯ ಮೇಲೆ ಅನುಮಾನ ಪಡುತ್ತಾ ಅವರ ಮತ್ತೊಬ್ಬ ಮಗನಾದ ನಾಗರಾಜ್ ರವರೊಂದಿಗೆ ಹೋಗಿ ಹಿರಿಯ ಅದಿಕಾರಿಗಳಲ್ಲಿ ದೂರನ್ನು ನೀಡುತ್ತಾ ಲೋಕೇಶ್ ರವರಿಗೆ ಲಾವಣ್ಯ ಸಿ ಶೇಖರ್ ರವರು ವಿಷಪ್ರಾಶನ ಮಾಡಿಸಿ ಸಾಯಿಸಿರುತ್ತಾರೆಂದು ಅನುಮಾನ ವ್ಯಕ್ತಪಡಿಸಿ ಅರ್ಜಿಯನ್ನು ನೀಡಿದ್ದು, ಈ ಬಗ್ಗೆ ಸದರಿಯವರಿಗೆ ಮೊದಲೇ ಯಾಕೆ ದೂರು ನೀಡಿರಲಿಲ್ಲವೆಂದು ಮತ್ತೆ ಇಷ್ಟು ದಿನ ಒಂದೂವರೆ ವರ್ಷಗಳ ಕಾಲ ಯಾಕೆ ದೂರು ನೀಡಲಿಲ್ಲವೆಂದು ಠಾಣೆಯಲ್ಲಿ ಎನ್.ಸಿ.ಆರ್ 162/2017 ದಿನಾಂಕ:12/07/2017 ರಂದು ದೂರು ದಾಖಲಿಸಿಕೊಂಡು ಈ ವಿಚಾರದಲ್ಲಿ ಸಾಕ್ಷೀದಾರರನ್ನು ಹಾಗೂ ಎದುರುದಾರರನ್ನೆಲ್ಲಾ ವಿಚಾರ ಮಾಡಿತ್ತು. ಆದರೆ ಮತ್ತೆ – ಮತ್ತೆ ಸದರಿ ಸುಬ್ಬಮ್ಮ ರವರ ಮಗನಾದ ನಾಗರಾಜ್ ರವರು ಠಾಣೆಗೆ ಬಂದು ನನ್ನ ಅಣ್ಣನ ಮರಣ ವಿಚಾರದಲ್ಲಿ ಅನುಮಾನವಿರುದರಿಂದ ಕೇಸನ್ನು ದಾಖಲಿಸಿಕೊಂಡು ತನಿಖೆಯನ್ನು ಮಾಡಬೇಕೆಂದು ಪಟ್ಟು ಹಿಡಿದಿದ್ದರಿಂದ ಹಿರಿಯ ಅದಿಕಾರಿಗಳ ನಿರ್ದೇಶನವನ್ನು ಪಡೆದುಕೊಂಡು ದಿನಾಂಕ:15/09/2017 ರಂದು ಠಾಣಾ ಯು.ಡಿ.ಆರ್. ನಂ:06/2018 ಕಲಂ 174 (ಸಿ) ಸಿ.ಆರ್.ಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಮೃತ ಲೋಕೇಶ್ ರವರ ಮೃತದೇಹವನ್ನು ವೈದ್ಯರ ಸಮ್ಮುಖದಲ್ಲಿ ಹೊರತೆಗೆಯಿಸಿ ಮೃತನ ಅಂಗಾಂಗಗಳನ್ನು ಪರೀಕ್ಷೆಗಾಗಿ ಕಳುಹಿಸಿಕೊಟ್ಟಿರುತ್ತೆ. ಆದರೆ ಮೃತನು ಹೃದಯಾಘಾತದಿಂದ ಮರಣ ಹೊಂದಿರುವುದು ವೈದ್ಯರ ದಾಖಲಾತಿಗಳಿಂದ ಹಾಗೂ ತಜ್ಞ ವೈದ್ಯರ ವರಧಿಯಿಂದ ದೃಡಪಟ್ಟಿರುತ್ತೆ. ನಂತರ ಮೃತನ ಹೆಂಡತಿ ಲಾವಣ್ಯ ಸಿ. ಶೇಖರ್ ರವರಿಗೆ ಅನುಕಂಪದ ಆದಾರದ ಮೇಲೆ ಇಲಾಕೆಯಿಂದ ಕೆಲಸ ಸಿಕ್ಕಿದ್ದು, ಇದರ ವಿಚಾರದಲ್ಲಿ ನಾಗರಾಜ್ ರವರು ಲಾವಣ್ಯ ಸಿ ಶೇಖರ್ ರವರು ದಾಖಲಾತಿಗಳನ್ನು ಸೃಷ್ಟಿ ಮಾಡಿಕೊಂಡು ಕೆಲಸವನ್ನು ಪಡೆದುಕೊಂಡಿರುತ್ತಾಳೆಂದು ಕಾನೂನು ಅಡಿಯಲ್ಲಿ ಕೆಲಸವನ್ನು ಪಡೆದುಕೊಂಡಿರುವುದಿಲ್ಲವೆಂದು ಮತ್ತೆ-ಮತ್ತೆ ದೂರನ್ನು ನೀಡುತ್ತಿದ್ದು, ಈ ಬಗ್ಗೆ ನಾವು ತಾಲ್ಲೂಕು ತಹಸೀಲ್ದಾರ್ ರವರಿಗೂ ಸಹ ಪರಿಶೀಲನೆ ಮಾಡುವುದಕ್ಕಾಗಿ ಪತ್ರ ವ್ಯವಹಾರವನ್ನು ಮಾಡಿರುತ್ತೇನೆ. ಅಲ್ಲದೇ ನಾಗರಾಜ್ ರವರಿಗೆ ಅನುಕಂಪದ ಆಧಾರದ ಮೇಲೆ ಸಿಗುವ ಕೆಲಸಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ವ್ಯವಹರಿಸಿಕೊಳ್ಳುವಂತೆ ತಿಳಿಸಿದ್ದೆನು. ಆದರೂ ಮತ್ತೆ-ಮತ್ತೆ ದೂರುಗಳನ್ನು ನೀಡುವುದು ಮಾಡುತ್ತಿದ್ದನು. ಆದರೂ ಸಹ ದಿನಾಂಕ:11/01/2019 ರಂದು ಬೆಳಿಗ್ಗೆ ಸುಮಾರು 11-15 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ್ಗೆ ನಾಗರಾಜ್ ರವರು ಠಾಣೆಗೆ ಬಂದು ನನಗೆ ನೀವು ನ್ಯಾಯ ಕೊಡಿಸುತ್ತಿಲ್ಲ. ನೀವು ಆರೋಪಿಗಳೊಂದಿಗೆ ಸೇರಿಕೊಂಡು ನಮಗೆ ಅನ್ಯಾಯ ಮಾಡುತ್ತಿರುತ್ತೀರೆಂದು ಏರು ದ್ವನಿಯಲ್ಲಿ ಮಾತನಾಡಿದ್ದು, ನಾನು ಆತನು ಕೇಳಿದ ಪತ್ರಕ್ಕೆ ಸರಿಯಾದ ಸ್ವೀಕೃತಿಯನ್ನು ನೀಡುವಂತೆ ನಮ್ಮ ಸಿಬ್ಬಂದಿಯವರಿಗೆ ತಿಳಿಸಿ ತಾಲ್ಲೂಕು ದಂಡಾಧಿಕಾರಿಗಳು ಕರೆದಿದ್ದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಹೋಗುವುದಕ್ಕೆ ಹೋಗುತ್ತಿದ್ದು, ನನಗೆ ಅಡ್ಡ ಕುಳಿತುಕೊಂಡು ಸಭೆಗೆ ಹೋಗಲು ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ ನ್ಯಾಯ ದೊರಕಿಸಿಕೊಡುವವರೆಗು ಹೋಗುವುದಿಲ್ಲ ಇನ್ನೂ ನಮ್ಮ ಮನೆಯವರನ್ನು ಕರೆದುಕೊಂಡು ಠಾಣೆಯ ಮುಂದೆ ಸಾಯುವುದಾಗಿ ಬೆದರಿಕೆಯನ್ನು ಹಾಕಿ ಠಾಣೆಗೆ ಬಂದಂತಹ ಸಾರ್ವಜನಿಕರೆಲ್ಲಾ ನಿಂತು ನೋಡುವಂತೆ ಅಸಭ್ಯವಾಗಿ ವರ್ತಿಸಿತ್ತಾನೆ. ಇದರಿಂದ ನಾನು ಸಭೆಗೆ ಹೋಗಲು ಸಹ ಸಾಧ್ಯವಾಗದೆ ಇದ್ದು, ಆತನನ್ನು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ತೆಗೆದುಕೊಂಡಿರುತ್ತೇನೆ. ಆದ್ದರಿಂದ ಈತನ ವಿರುದ್ದ ಬೆಳಿಗ್ಗೆ 11-45 ಗಂಟೆಗೆ ಠಾಣಾ ಮೊ.ಸಂ.02/2019 ಕಲಂ, 353, 309, 506 ಐಪಿಸಿ,ಯಂತೆ ಸ್ವತ: ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

 7) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.07/2019 ಕಲಂ.379 ಐ.ಪಿ.ಸಿ:-

     ದಿನಾಂಕ:11.01.2019 ರಂದು ಪಿರ್ಯಾಧಿದಾರರಾದ ಮಂಜುನಾಥ ಬಿನ್ ಲೇಟ್ ಶಿವನಾರಾಯಣರೆಡ್ಡಿ 31 ವರ್ಷ, ವಕ್ಕಲಿಗ, ಜಿರಾಯ್ತಿ, ವಾಸ ಆರ್, ಚೊಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು ರವರು ಠಾಣಾಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಗುಡಿಬಂಡೆ -ಪೆರೇಸಂದ್ರ ಕ್ರಾಸ್ ಮಾರ್ಗದಲ್ಲಿ ಆರ್, ಚೊಕ್ಕನಹಳ್ಳಿ ಗ್ರಾಮದ ಕ್ರಾಸ್ ಬಳಿ ತಮ್ಮ  ಬಾಬತ್ತು 1 ಎಕರೆ 28 ಗುಂಟೆ ಜಮೀನು ತೋಟವಿದ್ದು, ಅದರಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ ಕ್ಯಾರೆಟ್ ಬೆಳೆ ಇಟ್ಟಿದ್ದು,  ಸದರಿ ಜಮೀನಿನಲ್ಲಿ ಕೊಳವೆ ಬಾವಿಯಿಂದ ಸುಮಾರು 10 ಮೀಟರ್ ಅಂತರಕ್ಕೆ ಕೇಬಲ್ ಎಳೆದು ಪ್ಯಾನಲ್ ಬೋರ್ಡಗೆ ಅಳವಡಿಸಿಕೊಂಡು ನೀರು ಓಡಿಸಿಕೊಂಡು ತಮ್ಮ ಜಮೀನಿನಲ್ಲಿಟ್ಟಿರುವ ಬೆಳೆಗೆ ಡ್ರಿಪ್ಸ್ ಪೈಪು ಬಿಟ್ಟಿದ್ದು, ಈ ಹಿಂದೆ ತಮ್ಮ ಜಮೀನಿನಲ್ಲಿದ್ದ ಡ್ರಿಪ್ಸ್ ಪೈಪುಗಳನ್ನು ಮೇಲಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದ ವೆಂಕಟಚಾರಿ & ನರಸಿಂಹರೆಡ್ಡಿ ಹಾಗೂ ರಾಮಕೃಷ್ಣ ರವರು ಕಳುವು ಮಾಡಿ ಎತ್ತಿಕೊಂಡು ಹೋಗುವಾಗ ತಾನು ಹಿಡಿದುಕೊಂಡಿದ್ದು, ಆಗ ತಮ್ಮ ಚಿಕ್ಕಪ್ಪ ಕೊಂಡಪ್ಪರೆಡ್ಡಿ & ತಮ್ಮ ಗ್ರಾಮದ ನರಸಿಂಹಪ್ಪ ರವರು ಮೇಲ್ಕಂಡವರಿಗೆ ಬೈದು ಬುದ್ದಿವಾದ ಹೇಳಿದ್ದು ತಮಗೆ ಯಾವುದೇ ಕೇಸು ಬೇಡವೆಂದು ತಿಳಿಸಿ ಕಳುಹಿಸಿಕೊಟ್ಟಿದ್ದು, ದಿನಾಂಕ:10.01.2019 ರಂದು ರಾತ್ರಿ 10-00 ಗಂಟೆವರೆಗೂ  ತೋಟದಲ್ಲಿ ನೀಡು ಕಟ್ಟಿ ತಾನು ಮನೆಗೆ ಹೋಗಿದ್ದು, ಈ ದಿನ ಬೆಳಿಗ್ಗೆ 3-00 ಗಂಟೆಗೆ ತ್ರೀ ಪೇಸ್ ಕರೆಂಟ್ ಬರುತ್ತದೆಂದು ತಾನು ಸದರಿ ತೋಟಕ್ಕೆ ಹೋದಾಗ,  ತನ್ನ ತೋದಲ್ಲಿ ಕೊಳವೆಬಾವಿಯಿಂದ ಪ್ಯಾನಲ್ ಬೋರ್ಡ್ ಗೆ ಅಳವಡಿಸಿದ  ಕೇಬಲ್ & ಪ್ಯಾನಲ್ ಬೋರ್ಡ್ ಹಾಗೂ ತೋಟದಲ್ಲಿ  ಹಾಕಿದ್ದ  ಸುಮಾರು 30 ಕಟ್ ಡ್ರಿಪ್ಸ್ ಪೈಪುಗಳನ್ನು ಯಾರೋ ಕಳ್ಳರು ಕಳುವು ಮಾಡಿದ್ದು, ಸದರಿ ಕಳ್ಳತನದ ಬಗ್ಗೆ ಮೇಲ್ಕಂಡವರ ಮೇಲೆ ತನಗೆ ಅನುಮಾನವಿರುತ್ತದೆಂದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಲಿಖಿತ ದೂರು ಆಗಿರುತ್ತೆ.

8) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.07/2019 ಕಲಂ.323-353-504-506 ರೆ/ವಿ 34 ಐ.ಪಿ.ಸಿ:-

       ದಿನಾಂಕ 10-01-2019 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿಯಾದ  ಮುನಿರಾಜು ಬಿನ್ ನ್ಯಾತಪ್ಪ ರವರು  ಕೊಂಡೇನಹಳ್ಳಿ ಗ್ರಾಮರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ತಾನು ಈಗ್ಗೆ 13 ವರ್ಷಗಳಿಂದ ನಕ್ಕಲಹಳ್ಳಿ ಗ್ರಾಮದ ವಾಟರ್ ಮೆನ್  ಆಗಿರುತ್ತೇನೆ, ದಿನಾಂಕ 05-01-2019 ರಂದು ನಮ್ಮ ಪಂಚಾಯ್ತಿಯ ಅಭಿವೃದ್ದಿ ಅದಿಕಾರಿಯಾದ ಮಮತ ರವರು ವಾಟರಿನ ಬಿಲ್ಲನ್ನು ಕಟ್ಟುವಂತೆ ಪ್ರತಿ  ಮನೆಗಳಿಗೂ ತಿಳಿಸುವಂತೆ ಹೇಳಿದ್ದರು, ಅದರಂತೆ ನಾನು ಸಂಜೆ 5-30 ಗಂಟೆ ಸಮಯದಲ್ಲಿ ನೀರನ್ನು ಬಿಟ್ಟು ವಾಟರ್ ಸಿಸ್ಟಮ್ ನ ಬಳಿ ಹೋದಾಗ ಅಲ್ಲಿ ನಮ್ಮೂರಿನ ನಾರಾಯಣಮ್ಮ , ಮಂಜುಳ, ಗಂಗರತ್ನ ರತ್ನಮ್ಮ ಇವರುಗಳು ನೀರು ಹಿಡಿಯುತ್ತಿದ್ದು ಅದೇ ಸಮಯಕ್ಕೆ ಶಶಿಕಲಾ ಕೋಂ ವೆಂಕಟೇಶ  ರವರು ನೀರನ್ನು ಹಿಡಿಯಲು ಬಂದಿದ್ದು  ಆ ಸಮಯದಲ್ಲಿ ನಾನು ವಾಟರಿನ ಬಿಲ್ಲನ್ನು ಕಟ್ಟುವಂತೆ  ಆಕೆಗೆ ಹೇಳುತ್ತಿದ್ದಾಗ  ಏಕಾ –ಏಕಿ ನಮ್ಮೂರಿನ   ವೆಂಕಟೇಶ ಬಿನ್ ಚಿಕ್ಕಮುನಿಯಪ್ಪ ರಘು ಬಿನ್ ಚಿಕ್ಕಮುನಿಯಪ್ಪ ರವರುಗಳು ಬಂದು ನೀನು ಯ್ಯಾರೋ ಸೂಳೆ ನನ್ನ ಮಗನೇ ಹಣ ಕಟ್ಟುವಂತೆ ಹೇಳುವುದಕ್ಕೆ ಎಂದು ಅವಾಚ್ಯವಾಗಿ ಬೈದು  ತನ್ನನ್ನು ಇಬ್ಬರೂ ಗಲ್ಲಪಟ್ಟಿಯನ್ನು ಹಿಡಿದು ಗೋಡೆಗೆ ತಳ್ಳಿ  ವೆಂಕಟೇಶ ಕೈಗಳಿಂದ ಮೂತಿಗೆ ಗುದ್ದಿದ್ದು ರಘು ಕಾಲುಗಳಿಂದ ಒದ್ದನು. ಶಶಿಕಲಾ ,ಅವರ ಅತ್ತೆ ನಾರಾಯಣಮ್ಮ  ಬಾಯಿಗೆ ಬಂದ ಹಾಗೆ ನಿಂದಿಸಿ ತನ್ನನ್ನು ಹೊಡೆಯಲು ಪ್ರೇರಿಪಿಸಿದರು. ಆ ಸಮಯದಲ್ಲಿ ತನಗೆ ಬಾಯಲ್ಲಿ ರಕ್ತ ಬಂದಿದ್ದು ತಕ್ಷಣ ತನ್ನ ಹೆಂಡತಿ ಮತ್ತು ಇತರರು ಬಿಡಿಸಿದ್ದು ಅದೇ ದಿನ ಚಿಕ್ಕಬಳ್ಳಾಪುರ ಆಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಾಗಿದ್ದು   ಗ್ರಾಮದ ಹಿರಿಯರು ರಾಜಿ ಮಾಡೋಣವೆಂದು  ತಿಳಿಸಿದ್ದರಿಂದ  ದೂರನ್ನು ಕೊಡುವುದು ಬೇಡವೆಂದು ಸುಮ್ಮನಿದ್ದು   ಹಿರಿಯರು  ರಾಜಿ ಮಾಡದ ಕಾರಣ   ದಿನ ತಡವಾಗಿ ಬಂದು ದೂರನ್ನು  ನೀಡುತ್ತಿದ್ದು  ತನ್ನ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ತನ್ನನ್ನು ಹೀನಾಯವಾಗಿ ಬೈದು ಪ್ರಾಣ ಬೆದರಿಕೆ ಹಾಕಿ  ಹೊಡದಿರುವ 4 ಜನರ ಮೇಲೂ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

9) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.02/2019 ಕಲಂ.87 ಕೆ.ಪಿ. ಆಕ್ಟ್:-

     ದಿನಾಂಕ 10-01-2019 ರಂದು ಸಂಜೆ 4-00 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು  ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 10/01/2019 ರಂದು ಮದ್ಯಾಹ್ನ 2-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಬಿಳ್ಳೂರು ಗ್ರಾಮದ ಬಳಿ ಇರುವ ಆಂಜನೇಯ ಸ್ವಾಮಿ  ಯಾರೋ ದೇವಸ್ಥಾನದ ಪಕ್ಕದ ಹುಣಸೇ ಮರದ ಕೆಳಗೆ ಯಾರೋ ಆಸಾಮಿಗಳು ಹಣವನ್ನು ಪಣವನ್ನಾಗಿಟ್ಟುಕೊಂಡು ಆಕ್ರಮವಾಗಿ ಅಂದರ್ ಬಾಹರ್ ಅದೃಷ್ಟದ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ  ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆಎ-40-ಜಿ-59 ವಾಹನದಲ್ಲಿ  ಬಿಳ್ಳೂರು  ಗ್ರಾಮದ ಬಳಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನದ  ಬಳಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಪಕ್ಕದಲ್ಲಿರುವ ಹುಣಸೇ ಮರದ ಕೆಳಗೆ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಆಕ್ರಮವಾಗಿ ಅದೃಷ್ಟದ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು 4 ದಿಕ್ಕುಗಳು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಹೆಚ್ಚರಿಕೆ ನೀಡಿ ಅವರನ್ನು ಹಿಡಿದುಕೊಂಡು ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1) ರಮೇಶ ಬಿನ್ ವೆಂಕಟರಾಮನ್ನ 43 ವರ್ಷ, ಗೊಲ್ಲರು ಜಿರಾಯ್ತೀ ಉಪ್ಪಾರ್ಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು 2) ನರಸಿಂಹಪ್ಪ ಬಿನ್ ಯಾಮನ್ನ 60 ವರ್ಷ ನಾಯಕರು ಜಿರಾಯ್ತೀ ಉಗ್ರಾಣಂಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು 3) ಈಶ್ವರ ರೆಡ್ಡಿ ಬಿನ್ ಪಾಪಿ ರೆಡ್ಡಿ 58 ವರ್ಷ, ವಕ್ಕಲಿಗರು ಜಿರಾಯ್ತೀ ಕೊತ್ತಪಲ್ಲಿ  ಗ್ರಾಮ ಅಮಡಗೂರು ಮಂಡಲಂ ಕದಿರಿ ತಾಲ್ಲೂಕು ಅನಂತಪುರ ಜಿಲ್ಲೆ,  4) ಉತ್ತನ್ನ ಬಿನ್ ವೆಂಕಟರಾಯಪ್ಪಪ್ಪ 43 ವರ್ಷ ಭೋವಿ ಜನಾಂಗ ಜಿರಾಯ್ತೀ ಜಿ, ಮದ್ದೇಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು, 5) ವೆಂಕಟೇಶ ಬಿನ್ ಗಂಗಾಧರಪ್ಪ 60 ವರ್ಷ, ಜಂಗಮರು ಜಿರಾಯ್ತೀ, ಬಿಳ್ಳೂರು ಗ್ರಾಮ ಬಾಗೇಪಲ್ಲಿ ತಾಲ್ಲೂಕು, 6) ಪಂದುಲ ಆಂಜಿನಪ್ಪ ಬಿನ್ ಕೃಷ್ಣಪ್ಪ 35 ವರ್ಷ ನಾಯಕರು ಜಿರಾಯ್ತೀ ಬಿಳ್ಳೂರು ಗ್ರಾಮ ಬಾಗೇಪಲ್ಲಿ ತಾಲ್ಲೂಕು 7) ಮಲ್ಲಿಕಾರ್ಜುನ  ಬಿನ್ ಮುನಿಯಪ್ಪ 28 ವರ್ಷ ಜಂಗಮರು ವ್ಯಾಪಾರ ಬಿಳ್ಳೂರು ಗ್ರಾಮ ಬಾಗೇಪಲ್ಲಿ ತಾಲ್ಲೂಕು ಸ್ಥಳದಿಂದ ಒಬ್ಬರು  ಓಡಿ ಹೋಗಿದ್ದು ಆತನ ಹೆಸರು ವಿಳಾಸ ತಿಳಿಯಲಾಗಿ 08) ಕೃಷ್ಣಪ್ಪ ಬಿನ್ ನೇಯ್ಗೇ ವೆಂಕಟರಾಮನ್ನ 65 ವರ್ಷ ನೇಯ್ಗೇಯವರು,ಜಿರಾಯ್ತೀ ಬಿಳ್ಳೂರು ಗ್ರಾಮ ಬಾಗೇಪಲ್ಲಿ ತಾಲ್ಲೂಕು, ಎಂದು ತಿಳಿಸಿದರು., ನಂತರ ಸ್ಥಳದಲ್ಲಿದ್ದ ಮೇಲ್ಕಂಡ 01 ರಿಂದ 07 ರವರೆಗಿನ ಆಸಾಮಿಗಳನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ   2410/- ರೂ ನಗದು ಹಣವನ್ನು ಒಂದು ಹಳೆಯ ಪ್ಲಾಸ್ಟಿಕ್ ಚೀಲ, ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿಗಳು ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿ ಮೇರೆಗೆ ಠಾಣಾ ಎನ್.ಸಿ.ಆರ್ 03/2019 ರೀತ್ಯಾ ದಾಖಲಿಸಿಕೊಂಡಿರುತ್ತೆ.         ನಂತರ ಇದು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದಿಂದ  ಸಂಜ್ಞೆಯ ಪ್ರಕರಣವಾಗಿ ದಾಖಲಿಸಲು ಅನುಮತಿಯನ್ನು ಪಡೆದು ಠಾಣಾ ಮೊ. ಸಂ. 02/2019 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.