ದಿನಾಂಕ: 10-04-2019 ರ ಅಪರಾಧ ಪ್ರಕರಣಗಳು

1) ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ: 20/2019. ಕಲಂ: 504, 506 ಐ.ಪಿ.ಸಿ:-

     ದಿನಾಂಕ 08/04/2019ರಂದು ಚಿಂತಾಮಣಿ ತಾಲ್ಲೂಕು ನಿಮ್ಮಕಾಯಲಹಳ್ಳಿ ಗ್ರಾಮದ ವಾಸಿ ರಹಮಾನ್ ಕಲಂದರ್ ಪಾಷಾ ಬಿನ್ ಶೇಕ್ ಶಹಬುದ್ದೀನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ 07/04/2019 ರಂದು ರಾತ್ರಿ ಸುಮಾರು 7.30 ಗಂಟೆಯ ಸಮಯದಲ್ಲಿ ತಮ್ಮ ಚಿಕ್ಕಪ್ಪನ ಮಕ್ಕಳಾದ ಸುಲ್ತಾನ್ ಪಾಷಾ ಮತ್ತು ಇವರ ತಮ್ಮನಾದ ಶೇಕ್ ದಾದಾಪೀರ್ ರವರುಗಳು ತಮ್ಮ ಮನೆಗೆ  ಬಂದು ಪಿರಾನಿ ಮಾ ದರ್ಗಾ ದ ಅಧಿಕಾರವನ್ನು ತಮಗೆ ಕೊಡಬೇಕೆಂದು ತಮ್ಮ ತಂದೆಗೆ ಒತ್ತಾಯಿಸಿದರು, ಆಗ ತಮ್ಮ ತಾತ ಶೇಕ್ ಮಹಬೂಬ್ ಸಾಬ್ ರವರು ಹಿಂದಿನಿಂದಲೂ ಮಾಡಿರುವ ವಿಭಾಗಗಳ ಪ್ರಕಾರ ಸರದಿಯಂತೆ ಎಲ್ಲರೂ ಅಧಿಕಾರವನ್ನು ಹಂಚಿಕೊಳ್ಳಲು ಹೇಳಿ ತಿಳಿಸಿರುತ್ತಾರೆ. ಆಗ ಸದರಿಯವರು ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ಅದೇ ದಿನ ರಾತ್ರಿ ಸುಮಾರು 2.18 ಗಂಟೆಯ ಸಮಯದಲ್ಲಿ ತನ್ನ ಮೊಬೈಲ್ ಸಂಖ್ಯೆ 9632290784 ಗೆ 9449958704 ನಂಬರಿನಿಂದ ಸುಲ್ತಾನ್ ಪಾಷಾ ರವರು ಕರೆ ಮಾಡಿ ದರ್ಗಾದ ಎಲ್ಲಾ  ಅಧಿಕಾರವನ್ನು ತಮಗೆ ಬಿಟ್ಟುಕೊಡಲು ಹೇಳಿದ್ದು, ಇಲ್ಲವಾದಲ್ಲಿ ಪೆಟ್ರೋಲ್ ಹಾಕಿ ನಿಮ್ಮ ಹಾಗೂ ನಿಮ್ಮ ಕುಟುಂಭದವರನ್ನು ಸುಟ್ಟು ಹಾಕುವೆನೆಂದು ಅವಾಚ್ಚ ಶಬ್ದಗಳಿಂದ ಬೈದು,  ಪ್ರಾಣ ಬೆದರಿಕೆ ಹಾಕಿರುತ್ತಾರೆ ಆದ್ದರಿಂದ ಸದರೀಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರಿಗೆ ದಿನಾಂಕ 08/04/2019 ರಂದು ಠಾಣಾ NCR NO 70/2019 ರಂತೆ ದಾಖಲಿಸಿಕೊಂಡಿದ್ದು, ನಂತರ ದಿನಾಂಕ 10/04/2019 ರಂದು ಘನ ನ್ಯಾಯಾಲಯದ ಅನುಮತಿಯ ಮೇರಿಗೆ ಠಾಣಾ ಮೊ.ಸಂ 20/2019 ಕಲಂ 504,506 IPC ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುವುದಾಗಿರುತ್ತೆ.

2)  ಚೇಳೂರು ಪೊಲೀಸ್ ಠಾಣೆ ಮೊ.ಸಂ. 22/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ-09/04/2019 ರಂದು ಮದ್ಯಾಹ್ನ 4:.00 ಗಂಟೆಗೆ ಠಾಣಾ ಪಿ.ಸಿ-141 ಸಂತೋಷ್ ಕುಮಾರ್  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಠಾಣಾಧಿಕಾರಿಗಳ ಆದೇಶದಂತೆ ದಿನಾಂಕ-09-04-2019 ರಂದು ಠಾಣಾದಿಕಾರಿಯವರು ನನಗೆ ಚೇಳೂರು ಠಾಣಾ  ವ್ಯಾಪ್ತಿಯ ಗ್ರಾಮಗಳಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ನನ್ನನ್ನು ನೇಮಿಸಿದ್ದು ಅದರಂತೆ ನಾನು ನಿಮ್ಮಕಾಯಲಪಲ್ಲಿ, ದೊರವಾರಪಲ್ಲಿ, ಹೊಸಹುಡ್ಯ, ಗೆರಿಗೆರೆಡ್ಡಿಪಾಳ್ಯ ಗ್ರಾಮಗಳಲ್ಲಿ  ಗಸ್ತು ಮಾಡಿಕೊಂಡು  ಸುಮಾರು 04 :00 ಗಂಟೆ ಸಮಯದಲ್ಲಿ ಶೇರ್ ಖಾನ್ ಕೋಟೆ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಠಾಣಾ ಸರಹದ್ದು ಚೇಳೂರು  ಗ್ರಾಮದಲ್ಲಿ  ಅದೇಗ್ರಾಮದ ವಾಸಿಯಾದ  ರವಿಕುಮಾರ್ ಬಿನ್ ರಾಮಚಂದ್ರ ಎಂಬುವರು ತನ್ನ ಮನೆಯ ಮುಂದೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಬಾತ್ಮೀ ತಿಳಿದು ಬಂದಿರುತ್ತೆ. ಆದ್ದರಿಂದ ಠಾಣೆಗೆ ವಾಪಸ್ಸಾಗಿ  ಮುಂದಿನ ಕ್ರಮ ಜರುಗಿಸಲು ನೀಡಿದ ವರದಿ ಯಾಗಿರುತ್ತೆ.

3)  ಚೇಳೂರು ಪೊಲೀಸ್ ಠಾಣೆ ಮೊ.ಸಂ. 23/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ-10/04/2019 ರಂದು ಬೆಳಿಗ್ಗೆ 10:00 ಗಂಟೆಗೆ ಠಾಣಾ ಪಿ.ಸಿ-141 ಸಂತೋಷ್ ಕುಮಾರ್  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಠಾಣಾಧಿಕಾರಿಗಳ ಆದೇಶದಂತೆ ದಿನಾಂಕ-10-04-2019 ರಂದು ಠಾಣಾದಿಕಾರಿಯವರು ನನಗೆ ಚೇಳೂರು ಠಾಣಾ  ವ್ಯಾಪ್ತಿಯ ಗ್ರಾಮಗಳಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ನನ್ನನ್ನು ನೇಮಿಸಿದ್ದು ಅದರಂತೆ ನಾನು,ಹೊಸಹುಡ್ಯ,ಬೈರಪ್ಪನಪಲ್ಲಿ  ನಿಮ್ಮಕಾಯಲಪಲ್ಲಿ ಗೆರಿಗೆರೆಡ್ಡಿಪಾಳ್ಯ ಗ್ರಾಮಗಳಲ್ಲಿ  ಗಸ್ತು ಮಾಡಿಕೊಂಡು  ಸುಮಾರು 10:00 ಗಂಟೆ ಸಮಯದಲ್ಲಿ ಶೇರ್ ಖಾನ್ ಕೋಟೆ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಠಾಣಾ ಸರಹದ್ದು ಚೇಳೂರು ಗ್ರಾಮದಲ್ಲಿ ವಾಸಿಯಾದ ಶಿವ ಬಿನ್ ರೆಡ್ಡಿ ಎಂಬುವರು ತನ್ನ ಹೋಟೆಲ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಬಾತ್ಮೀ ತಿಳಿದು ಬಂದಿರುತ್ತೆ. ಆದ್ದರಿಂದ ಠಾಣೆಗೆ ವಾಪಸ್ಸಾಗಿ  ಮುಂದಿನ ಕ್ರಮ ಜರುಗಿಸಲು ನೀಡಿದ ವರದಿ ಯಾಗಿರುತ್ತೆ.

4) ನಂದಿಗಿರಿಧಾಮ ಪೊಲೀಸ್ ಠಾಣೆ. ಮೊ.ಸಂ. 37/2019. ಕಲಂ. 279, 337 ಐ.ಪಿ.ಸಿ:-

     ದಿನಾಂಕ:08-04-2019 ರಂದು ಸಂಜೆ ತನ್ನ ಬಾಬತ್ತು ಹೊಸ ಪಲ್ಸರ್ ದ್ವಿಚಕ್ರ ವಾಹನ ಬೆಂಗಳೂರು ನಗರದಿಂದ ತಮ್ಮ ಅಕ್ಕ ದೊಡ್ಡಮರಳಿ ಗ್ರಾಮದಲ್ಲಿದ್ದು ಅವರನ್ನು ನೋಡಲು ಹೊಸ ಪಲ್ಸರ್ ವಾಹನದಲ್ಲಿ ಬಂದು ನಮ್ಮ ಅಕ್ಕ ಸುನಿತ ಅವರನ್ನು ನೋಡಿಕೊಂಡು ಮತ್ತೆ ಬೆಂಗಳೂರು ನಗರಕ್ಕೆ ಹೊಸ ಪಲ್ಸರ್ ದ್ವಿಚಕ್ರ ವಾಹನ ತಾನು ಚಾಲನೆ ಮಾಡಿಕೊಂಡು ದೊಡ್ಡಮರಳಿ ಗ್ರಾಮದಲ್ಲಿ ಬಿಟ್ಟು ಹೊಸದಾಗಿ ಪೆಟ್ರೋಲ್ ಬಂಕ್  ಕಟ್ಟಡ ಆಗುತ್ತಿರುವ ಕೋಲಾರ ಮತ್ತು ನಂದಿಕ್ರಾಸ್ ಕಡೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂಜೆ 7-00 ಗಂಟೆಯಲ್ಲಿ ನಂದಿಕ್ರಾಸ್ ಕಡೆಯಿಂದ TN-52-B-3501 ಕಂಟೈನರ್ ಲಾರಿಯನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನ ಮುಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಾನು ದ್ವಿಚಕ್ರ ವಾಹನ ಸಮೇತ ರಸ್ತೆಯಲ್ಲಿ ಬಿದ್ದು ತನಗೆ ಬಲಕಾಲು ಮೊಣಕಾಲಿನ ಕೆಳಭಾಗ ಮುರಿತದ ಗಾಯವಾಗಿರುತ್ತೆ ಮತ್ತು ಎಡಕೈ ಭುಜದ ಮೇಲೆ ಮುಂಗೈ ಮೇಲೆ ತರಚಿದ ಗಾಯಗಳು ಆಗಿರುತ್ತೆ. ಆಗ ಅಲ್ಲೆ ಇದ್ದ ಸಾರ್ವಜನಿಕರು ನಮ್ಮ ಅಕ್ಕ ಸುನಿತ ಮತ್ತು ಭಾವ ಸಂಜಯ್ ರವರಿಗೆ ತಿಳಿಸಿದರು ಅವರು ಬಂದು ತನ್ನನ್ನು ಉಪಚರಿಸಿ ಚಿಕ್ಕಬಳ್ಳಾಪುರ ನಗರದಿಂದ ಬಂದ 108 ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ  ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆಗಾಗಿ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಗರಕ್ಕೆ ಕಳುಹಿಸಿರುತ್ತೆ. ತನಗೆ ಅಪಘಾತಪಡಿಸಿದ TN-52-B-3501 ಕಂಟೈನರ್ ಲಾರಿ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ತನಗೆ ಅಪಘಾತಪಡಿಸಿದ ಕಂಟೈನರ್ ಲಾರಿ ಮತ್ತು ಅದರ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

5)  ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 71/2019. ಕಲಂ. 427, 504, 506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 08-04-2019 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ಬಿ.ಜಿ ಅಶ್ವತ್ಥಪ್ಪ ಬಿನ್ ಚಿಕ್ಕಗೋಪಾಲಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ತನ್ನ ಬಾಬತ್ತು ಶಿಡ್ಲಘಟ್ಟ ತಾಲ್ಲೂಕು ಬಚ್ಚಹಳ್ಳಿ ಗ್ರಾಮದ ಸರ್ವೆ ನಂ 7/2 ರಲ್ಲಿ 2 ಎಕರೆ 26 ಗುಂಟೆ ಜಮೀನು ಅದರಲ್ಲಿ 0-03 ಖಾರಾಬ್ ಜಮೀನಿಗೆ ತಾನು ಸಂಪೂರ್ಣ ಮಾಲೀಕನಾಗಿದ್ದು ಸದರಿ ಜಮೀನಿನಲ್ಲಿ ನೀಲಗಿರಿ ಮರಗಳನ್ನು ಬೆಳೆಸಿಕೊಂಡಿದ್ದು ಸದರಿ ಜಮೀನಿನ ಕಂದಾಯ ದಾಖಲೆಗಳು ತನ್ನ ಹೆಸರಿನಲ್ಲಿಯೇ ಇರುತ್ತದೆ, ಈಗಿರುವಲ್ಲಿ ದಿನಾಂಕ: 22-03-2019 ರಂದು ರಾತ್ರಿ ತನ್ನ ಗ್ರಾಮದ ವಾಸಿಗಳಾದ 1) ಬಿ.ಸಿ ಸುಬ್ಬಣ್ಣ ಬಿನ್ ಚಿಕ್ಕಪಾಪಣ್ಣನ, 2) ಬಿ.ಪಿ. ಸುಬ್ಬಣ್ಣ ಬಿನ್ ಪಿಳ್ಳಪ್ಪ, 3) ಲಕ್ಷ್ಮಣ ಬಿನ್ ತಿಮ್ಮಯ್ಯ, 4) ಮಂಜುನಾಥ ಬಿನ್ ಚಂಗಲರಾವ್ ಮತ್ತು 5) ಮಂಜುನಾಥ ಬಿನ್ ತಿಮ್ಮಯ್ಯ ರವರುಗಳು ತಮ್ಮ ಕುಟುಂಬದ ಹಳೇ ದ್ವೇಷ ತೀರಿಸಿಕೊಳ್ಳುವ ಸಲುವಾಗಿ ರಾತ್ರಿ ವೇಳೆಯಲ್ಲಿ ತಾನು ಮತ್ತು ತನ್ನ ಕುಟುಂಬ ಸ್ಥಳದಲ್ಲಿ ಇಲ್ಲದೇ ಇರುವ ಸಮಯ ನೋಡಿಕೊಂಡು ಮೇಲ್ಕಂಡ ತನ್ನ ಮಾಲೀಕತ್ವದ ಜಮೀನಿನಲ್ಲಿ ತಾನು ಬೆಳೆಸಿರುವ ನೀಲಗಿರಿ ಮರಗಳನ್ನು ಕಟಾವು ಮಾಡಿ ನಾಶಪಡಿಸಿರುತ್ತಾರೆ. ಈ ದಿನ ಸದರಿ ವಿಷಯವನ್ನು ತಿಳಿದು ತಾನು ಮೇಲ್ಕಂಡವರನ್ನು ಬೇಟಿಯಾಗಿ ವಿಷಯವನ್ನು ಕೇಳಿದಾಗ ಮೇಲ್ಕಂಡವರು ತನ್ನನ್ನು ಅವಾಚ್ಯಶಬ್ದಗಳಿಂದ ಬೈದು ಸದರಿ ವಿಷಯದ ಬಗ್ಗೆ ನಮ್ಮ ಮನೆಗಳ ಹತ್ತಿರ ಬಂದರೆ ನಿನ್ನನ್ನು ಸಾಯಿಸಿ ಮೇಲ್ಕಂಡ ಜಮೀನಿನಲ್ಲಿ ಸಮಾದಿ ಮಾಡುತ್ತೇವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಈ ಸಮಯದಲ್ಲಿ ತಮ್ಮ ಗ್ರಾಮದ ವಾಸಿಗಳಾದ ದ್ಯಾವಣ್ಣ ಬಿನ್ ಚಿಕ್ಕಗೋಪಾಲಪ್ಪ, ರಾಜಕುಮಾರ್ ಬಿನ್ ಚಿಕ್ಕಗೋಪಾಲಪ್ಪ ಮತ್ತು ಇತರೆಯವರುಗಳು ಗಲಾಟೆಯನ್ನು ಬಿಡಿಸಿರುತ್ತಾರೆಂದು ಮೇಲ್ಕಂಡವರು ಕಾನೂನು ಬಾಹಿರ ಕೃತ್ಯದಿಂದ ತನಗೆ ಸುಮಾರು ರೂ 2,00,000-00 (ಎರಡು ಲಕ್ಷ) ನಷ್ಠವುಂಟಾಗುವ ಸಂಭವ ಇರುತ್ತದೆಂದು ಮೇಲ್ಕಂಡ ವ್ಯಕ್ತಿಗಳ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಿ ರಕ್ಷಣೆ ಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರಗೆ ಠಾಣಾ ಎನ್.ಸಿ.ಆರ್ ನಂ 36/2019 ರಂತೆ ನೊಂದಾಯಿಸಿಕೊಂಡಿರುತ್ತೆ. ಮೇಲ್ಕಂಡ ಉಲ್ಲೇಖದ ರೀತ್ಯಾ ದಾಖಲಾಗಿರುವ ಠಾಣಾ ಎನ್.ಸಿ.ಆರ್ 36/2019 ರ  ಮೇಲೆ ಕಲಂ: 427,504,506 ರೆ/ವಿ 34 ಐಪಿಸಿ ರೀತ್ಯಾ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ಕೋರಿ ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಂಡು ಘನನ್ಯಾಯಾಲಯದ ಅನುಮತಿಯ ಮೇರಗೆ ದಿನಾಂಕ: 09/04/2019 ರಂದು ಮದ್ಯಾಹ್ನ 02-30 ಗಂಟೆಗೆ  ಪ್ರಕರಣ ದಾಖಲಿಸಿಕೊಂಡಿರುತ್ತೆ.

6) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 72/2019. ಕಲಂ. 78(A)(vi), 87 ಕೆ.ಪಿ ಆಕ್ಟ್:-

     ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಹರೀಶ್ ವಿ  ಪಿ.ಎಸ್.ಐ ಆದ ನನಗೆ ದಿನಾಂಕ: 09-04-2019 ರಂದು ರಾತ್ರಿ 8-00 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಚೀಮಂಗಲ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಮುಂಭಾಗದ ಆವರಣದಲ್ಲಿ ಕೆಲವು ಜನ ಆಸಾಮಿಗಳು ಈ ದಿವಸ ನಡೆಯತ್ತಿರುವ ಐಪಿಎಲ್ ಟಿ-20 ಎಂಬ ಸರಣಿಯ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಚನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯುತ್ತಿರುವ ಐ.ಪಿ.ಎಲ್ ಟಿ-20 ಕ್ರಿಕೆಟ್ ಪಂದ್ಯಕ್ಕೆ ಸಂಭಂದಪಟ್ಟಂತೆ ಸದರಿ ತಂಡಗಳ ಗೆಲುವು ಮತ್ತು ಸೋಲಿನ ಬಗ್ಗೆ ಒಬ್ಬರಿಗೊಬ್ಬರು ಹಣವನ್ನು ಪಣವಾಗಿ ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಜೂಜಾಟ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂಧಿಯಾದ ಸಿಪಿಸಿ-14 ಗೋವಿಂದಪ್ಪ, ಸಿಪಿಸಿ-11 ರಾಜ ಎನ್, ಸಿಪಿಸಿ-409 ಜಯಶೇಖರ್, ಸಿಪಿಸಿ-444 ನಾರಾಯಣಸ್ವಾಮಿ ಮತ್ತು ಸಿಪಿಸಿ-548 ಕೃಷ್ಣಪ್ಪ ರವರೊಂದಿಗೆ ಕೆಎ-40-ಜಿ-357 ಜೀಪಿನಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಜೆ 8.15 ಗಂಟೆಗೆ ಚೀಮಂಗಲ ಗ್ರಾಮಕ್ಕೆ ಹೋಗಿ ಸಿಪಿಸಿ-14 ಗೋವಿಂದಪ್ಪ ರವರಿಗೆ ಇಬ್ಬರು ಪಂಚಾಯ್ತಿದಾರರನ್ನು ಹಾಜರುಪಡಿಸುವಂತೆ ತಿಳಿಸಿದ್ದು ಅದರಂತೆ ಸಿಪಿಸಿ-14 ಗೋವಿಂದಪ್ಪ ರವರು ಮೂರು ಜನ ಪಂಚಾಯ್ತಿದಾರರನ್ನು ಹಾಜರುಪಡಿಸಿದ್ದು ಅವರಿಗೆ ದಾಳಿಯ ಬಗ್ಗೆ ಮಾಹಿತಿಯನ್ನು ತಿಳಿಸಿ ನಂತರ ನಾವು ಮತ್ತು ಪೊಲೀಸರು ರಾತ್ರಿ 8-30 ಗಂಟೆಗೆ ಚೀಮಂಗಲ ಗ್ರಾಮದ ಕೆನರಾ ಬ್ಯಾಂಕ್ ಬಳಿ ಮರೆಯಲ್ಲಿ ನಿಂತು ಗಮನಿಸಲಾಗಿ ಕೆನರಾ ಬ್ಯಾಂಕ್ ಆವರಣದಲ್ಲಿ ಸುಮಾರು 10-12 ಜನ ಆಸಾಮಿಗಳು ಮೊಬೈಲ್ ಪೋನ್ ಗಳಲ್ಲಿ ಕ್ರಿಕೆಟ್ ಸ್ಕೋರ್ ನೋಡುತ್ತಾ ಹಣವನ್ನು ಬೆಟ್ಟಿಂಗ್ ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಜೂಜಾಟ ಆಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 6 ಜನ ಆಸಾಮಿಗಳನ್ನು ಹಿಡಿದು ಹೆಸರು ವಿಳಾಸವನ್ನು ಕೇಳಲಾಗಿ 1) ರಮೇಶ್ ಬಿನ್ ಚನ್ನಪ್ಪ, 36 ವರ್ಷ, ವಕ್ಕಲಿಗರು, ಜಿರಾಯ್ತಿ, ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು 2) ಶಶಿಕುಮಾರ್ ಬಿನ್ ಸೋಮಶೇಖರ್, 23 ವರ್ಷ, ಲಿಂಗಾಯಿತರು, ಜಿರಾಯ್ತಿ, ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು 3) ಶಂಕರ್ ಬಿನ್ ನಾರಾಯಣಸ್ವಾಮಿ, 31 ವರ್ಷ, ವಕ್ಕಲಿಗರು, ಜಿರಾಯ್ತಿ, ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು 4) ಮಂಜುನಾಥ ಬಿನ್ ರಾಮಾಂಜಿನಪ್ಪ, 32 ವರ್ಷ, ವಕ್ಕಲಿಗರು, ಜಿರಾಯ್ತಿ, ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು 5) ರಮೇಶ್ ಬಿನ್ ಮರಿಯಪ್ಪ, 45 ವರ್ಷ, ಲಿಂಗಾಯಿತರು, ಜಿರಾಯ್ತಿ, ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು ಅಶೋಕ ಬಿನ್ ವೆಂಕಟೇಶಪ್ಪ, 33 ವರ್ಷ, ವಕ್ಕಲಿಗರು, ಟೈಲರ್ ಕೆಲಸ, ವಾಸ: ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂಬುದಾಗಿ ಹಾಗೂ ಪರಾರಿಯಾದ ಆಸಾಮಿಗಳ ಹೆಸರು ವಿಳಾಸವನ್ನು ವಶಕ್ಕೆ ಪಡೆದವರಿಂದ ತಿಳಿಯಲಾಗಿ 7) ಮೂರ್ತಿ @ ಎಸ್.ಟಿ.ಡಿ. ಮೂರ್ತಿ ಬಿನ್ ಸದಾಶಿವ, ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 8) ಚಂದ್ರ, ಕೆ.ಜಿ. ಪುರ, 9) ಲಕ್ಷ್ಮಿಪತಿ, ಚೀಮಂಗಲ ಗ್ರಾಮ, 10) ನಾಗೇಂದ್ರ, ಯಣ್ಣೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 11) ಹನುಮಂತು ಬಿನ್ ಕೃಷ್ಣಪ್ಪ, ವಕ್ಕಲಿಗರು, ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು 12) ಸುಬ್ಬು ಬಿನ್ ದೇವರಾಜ, ವಕ್ಕಲಿಗರು, ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು ಮೇಲ್ಕಂಡ ಆಸಾಮಿಗಳಿಗೆ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ಬಗ್ಗೆ ವಿಚಾರಿಸಲಾಗಿ ಸದರಿ ಆಸಾಮಿಗಳು ಈ ದಿನ ನಡೆಯುತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಚನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯುತ್ತಿರುವ ಐಪಿಎಲ್ ಟಿ-20 ಪಂದ್ಯಕ್ಕೆ ಸಂಬಂಧಪಟ್ಟಂತೆ ಮೊಬೈಲ್ ಪೋನ್ ನಲ್ಲಿ ಕ್ರಿಕೆಟ್ ಸ್ಕೋರ್ ನೋಡುತ್ತಾ ಯಾವ ತಂಡ ಗೆಲ್ಲುತ್ತದೆ, ಯಾವ ತಂಡ ಸೋಲುತ್ತದೆ ಮತ್ತು ತಂಡದ ಮೊತ್ತ ಸಮ ಸಂಖ್ಯೆಯಿಂದ ಕೂಡಿರುತ್ತೆ, ಬೆಸ ಸಂಖ್ಯೆಯಿಂದ ಕೂಡಿರುತ್ತೆ ಎಂದು ಹೇಳುತ್ತಾ ಒಬ್ಬರಿಗೊಬ್ಬರು ಹಣವನ್ನು ಪಣವಾಗಿ ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಜೂಜಾಟ ಆಡುತ್ತಿದ್ದುದ್ದಾಗಿ ತಿಳಿಸಿದ್ದು ಪಂಚಾಯ್ತಿದಾರರ ಸಮಕ್ಷಮ ರಾತ್ರಿ 8-30 ಗಂಟೆಯಿಂದ 9-30  ಗಂಟೆಯವರೆಗೆ ಮಹಜರ್ ಮೂಲಕ ಮೇಲ್ಕಂಡ ಆಸಾಮಿಗಳ ಬಳಿಯಿದ್ದ 2,940-00 ರೂ ಹಣ ಮತ್ತು 3 ಮೊಬೈಲ್ ಪೋನುಗಳನ್ನು ಅಮಾನತ್ತು ಪಡಿಸಿಕೊಂಡು 6 ಜನ ಆರೋಪಿಗಳು ಮತ್ತು ಮಾಲು ಸಮೇತ ಮುಂದಿನ ಕ್ರಮಕ್ಕಾಗಿ ರಾತ್ರಿ 10.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಗಳ ವಿರುದ್ದ ಠಾಣಾ ಮೊ.ಸಂ. 72/2019 ಕಲಂ 78 A (6), 87 KP ACT  ರಿತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೇನೆ.