ದಿನಾಂಕ : 10/03/2019ರ ಅಪರಾಧ ಪ್ರಕರಣಗಳು

1) ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 10/2019 ಕಲಂ. 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ 09/03/2019 ರಂದು ಪಿರ್ಯಾದಿ ಹೆಚ್,ಸಿ-107 ಮುಸ್ತಾಫಾ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 09/03/2019 ರಂದು ಸಂಜೆ 4.00 ಗಂಟೆಯಲ್ಲಿ ತಾನು ಮತ್ತು ಪಿ.ಸಿ -382 ರವರು ಗ್ರಾಮ ಗಸ್ತು ಯರದರಯ್ಯಗಾರಹಳ್ಳಿ, ಯಗವಕೋಟೆ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ ದಿನ್ನಮಿಂದಹಳ್ಳಿ ಗ್ರಾಮದ ಶಂಕರರೆಡ್ಡಿರವರ ಅಂಗಡಿಯ ಬಳಿ ಯಾರೋ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದು ತಾವು ದಿನ್ನಮಿಂದಹಳ್ಳಿ ಗ್ರಾಮಕ್ಕೆ ಸಂಜೆ 6.00 ಗಮಟೆಯಲ್ಲಿ ಬೇಟಿ ಮಾಡಿ ಪಂಚಾಯ್ತಿದಾರರನ್ನು ಬರ ಮಾಡಿಕೊಂಡು ವಿಚಾರ ತಿಳಿಸಿ ಶಂಕರರೆಡ್ಡಿರವರ ಅಂಗಡಿಯ ಬಳಿ ದಾಳಿ ಮಾಡಲು ಸಹಕರಿಸಲು ಕೋರಿ ಅವರು ಒಪ್ಪಿದ ನಂತರ ತಾವೆಲ್ಲರೂ ಹೋಗಿ ನೊಡಲಾಗಿ ಯಾರೋ ಕೆಲವರು ಮದ್ಯಪಾನ ಮಾಡಲು ಶಂಕರರೆಡ್ಡಿರವರ ಅಂಗಡಿಯ ಮುಂಭಾಗ ಕುಳಿತುಕೊಂಡಿದ್ದು ಸನವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಓಡಿ ಹೋಗಿದ್ದು ನಂತರ ಅಂಗಡಿಯಲ್ಲಿದ್ದ ಆಸಾಮಿಯನ್ನು ಕರೆದು ಕುಡಿಯಲು ಏಕೆ ಅನುಮತಿ ನೀಡಿರುವುದಾಗಿ ಕೇಳಲಾಗಿ ತನಗೆ  ಯಾರೋ ಕರಲವರು ಬಂದು ಮದ್ಯವನ್ನು ಕುಡಿಯಲು ಅವಕಾಶ ಕೇಳಲಾಗಿ ನಾನು ನಮ್ಮ ಅಂಗಡಿಯ ಬಳಿ ಕುಳಿತುಕೊಳ್ಳಲು ತಿಳಿಸಿದ್ದು ಅವರು ಬಗ್ಗೆ ಕೇಳಲಾಗಿ ತನಗೆ ತಿಳಿದಿರುವುದಿಲ್ಲವೆಂದು ತಿಳಿಸಿದ್ದು ನಂತರ ಆಸಾಮಿಯ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಶಂಕರರೆಡ್ಡಿ ಬಿನ್ ಲೇಟ್ ರಾಮಚಂದ್ರಾರೆಡ್ಡಿ, 40 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ದಿನ್ನಮಿಂದಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಅವರನ್ನು ಎಲ್ಲಿಯೂ ಹೋಗದಂತೆ ಸೂಚಿಸಿ ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ 1) HAYWARDS CHEERS WHISKY 90 ML ನ 10 ಪಾಕೆಟ್ ಗಳು, 2) BAGPIPER WHISKY 180 ML ನ 2 ಪಾಕೆಟ್ ಗಳು, 3) OLD TAVERN WHISKY 180 ML ನ 2 ಪಾಕೆಟ್ಗಳು, 4) 10 PLASTIC WATER POCKETS, 5) 10 PLASTIC GLASS ಗಳಿದ್ದು ಸದರಿ ಮಾಲುಗಳನ್ನು ಪಂಚರ ಸಮಕ್ಷಮ ಪಮಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿದ್ದು ಆರೋಪಿಯೊಂದಿಗೆ ಮಾಲುಗಳನ್ನು ಮತ್ತು ಪಂಚನಾಮೆಯನ್ನು ಠಾಣೆಗೆ ಹಾಜರು ಮಾಡಿ ಮುಂದಿನ ಕ್ರಮಕ್ಕಾಗಿ ಕೋರಿರುವುದಾಗಿರುತ್ತೆ.

2) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 28/2019 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ 09/03/2019 ರಂದು ರಾತ್ರಿ 07.45 ಗಂಟೆಗೆ ಪಿ ಎಸ್ ಐ ರವರು ಪಂಚನಾಮೆ ಮಾಲು ಮತ್ತು ಅಸಾಮಿಯನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಕರ್ತವ್ಯ ನಿರ್ವ ಹಿಸುತ್ತಿರುವ ಹೆಚ್ ಸಿ 141 ರಮಣಾರೆಡ್ಡಿ ಮತ್ತು ಪಿಸಿ 262 ಅಂಬರೀಷ ರವರು 9 ನೇ ಗ್ರಾಮ ಗಸ್ತಿನಲ್ಲಿ ಇರುವಾಗ ಮಾಹಿತಿ ಸಂಗ್ರಹಿಸಿಕೊಂಡು ಸಂಜೆ 5-00 ಗಂಟೆಗೆ ರಾಮಗಾನಪರ್ತಿ ಗ್ರಾಮದ ಕಡೆ ಹೋಗು ದಾರಿಯ ಪಕ್ಕದಲ್ಲಿ ಇರುವ ವ್ಯಾಪಾರ ಮಳಿಗೆಯಲ್ಲಿರುವ ಬೂಸ ಅಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲುಗಳನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಸಿಪಿಸಿ 35 ಸರ್ದಾರ್, ಸಿಪಿಸಿ 118 ಬಾಲಾಜಿ, ಸಿಪಿಸಿ 203 ಮಂಜುನಾಯ್ಕ್ ಸರ್ಕಾರಿ ಜಿಪ್ ಸಂಖ್ಯೆ ಕೆಎ 40 ಜಿ 567 ರಲ್ಲಿ ಚಾಲಕ ಎ.ಹೆಚ್.ಸಿ 23 ಮಂಜುನಾಥ್  ರವರೊಂದಿಗೆ ಸಂಜೆ 5-15 ಗಂಟೆಗೆ ಠಾಣೆಯಿಂದ ಹೊರಟು 5-30 ಗಂಟೆಗೆ ರೆಡ್ಡಿಗೊಲ್ಲಾವಾರಹಳ್ಳಿ ಗ್ರಾಮದ ಗೇಟ್ ಗೆ ಹೋಗಿ ಇದ್ದ ಬಾಲಕೃಷ್ಣ, ಜಿ.ಪಿ ಕೃಷ್ಣಪ್ಪ, ಗಜೇಂದ್ರ  ರವರುಗಳನ್ನು ಪಂಚರಾಗಿ ಬರಮಾಡಿಕೊಂಡು ಅವರಿಗೆ ಸಂಜೆ 5-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ NH 07 ಸರ್ವಿಸ್ ರಸ್ತೆಯ ರಾಮಗಾನಪರ್ತಿ ದಾರಿಯ ಪಕ್ಕದಲ್ಲಿ ಇರುವ ಅಶ್ವಥಪ್ಪ ರವರ ಬಾಬತ್ತು ಬೂಸ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ತಿಳಿಸಿ ಪಂಚರಾಗಿ ಕರೆದುಕೊಂಡು   ಪಂಚರು ಮತ್ತು  ಸಿಬ್ಬಂದಿಯವರೊಂದಿಗೆ ಸರ್ಕಾರಿ ಜಿಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 5-45 ಗಂಟೆಗೆ  ಮೇಲ್ಕಂಡ ಅಂಗಡಿಯ ಬಳಿ ಹೋದೆವು ಜಿಪ್ ನಿಲ್ಲಿಸಿದಾಗ ಅಂಗಡಿಯಲ್ಲಿ ಇಬ್ಬರು  ಆಸಾಮಿಗಳಿದ್ದು ಅಪೈಕಿ ಜಿಪು ಮತ್ತು ಸಮವಸ್ತ್ರದಲ್ಲಿ ಇದ್ದ ಪೊಲೀಸರನ್ನು ಕಂಡ ಸ್ಥಳದಿಂದ ಪರಾರಿಯಾದನು  ಅಂಗಡಿಯಲ್ಲಿ ಇದ್ದ ಅಸಾಮಿಯನ್ನು ಪೊಲೀಸರು ಹಿಡಿದುಕೊಂಡು ಅತನ ಹೆಸರು ವಿಳಾಸದ ಕೇಳಲಾಗಿ ಎಸ್.ಎಸ್. ಬಾಸ್ಕರ್ ಬಿನ್ ಸೊಣ್ಣಪ್ಪ, 32 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ ಮಾರಗಾನಹಳ್ಳಿ ಗ್ರಾಮ ಕಸಬ ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ,ಮತ್ತು ಜಿಲ್ಲೆ ಮೊಬೈಲ್ ನಂ 9964347438 ಎಂತ ತಿಳಿಸಿದ್ದು ಓಡಿ ಹೊದ ಅಸಾಮಿಯ ಹೆಸರು ವಿಳಾಸ ಕೇಳಲಾಗಿ ಆಶ್ವಥಪ್ಪ ಬಿನ್ ಲೇಟ್ ನಾರಾಯಣಪ್ಪ 51 ವರ್ಷ ವಕ್ಕಲಿಗರು, ಅಂಗಡಿ ಮಾಲಿಕರು ವಾಸ ಮಾರಗಾನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ಮೊಬೈಲ್ ನಂ 9141130150 ಪಂಚರ ಸಮಕ್ಷಮದಲ್ಲಿ ಬೂಸ ಅಂಗಡಿಯಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಬಾಟಲಿಗಳನ್ನು ಶೇಖರಿಸಿದ್ದ ಮದ್ಯ ಬಾಟಲುಗಳನ್ನು ಪರಿಶೀಲಿಸಲಾಗಿ. 1) KINGFISHER STRONG ಎಂದು  ಲೇಬಲ್ ಇರುವ 650 ಎಂ ಎಲ್, ನ 5 ಬಿಯರ್ ಬಾಟೆಲ್ ಗಳು ಇದ್ದು ಇವುಗಳ ಮೇಲೆ ಕಿಂಗ್ ಫಿಶರ್ ಸ್ಟ್ರಾಂಗ್ ಇರುತ್ತೆ ಬೆಲೆ 650/- ರೂಗಳು,  2) KINGFISHER STRONG  ಎಂದು ಲೇಬಲ್ ಇರುವ 500 ಎಂ ಎಲ್, ನ 4 ಬಿಯರ್ ಬಾಟೆಲ್ ಗಳು ಇದ್ದು ಇವುಗಳ ಮೇಲೆ ಕಿಂಗ್ ಫಿಶರ್ ಸ್ಟ್ರಾಂಗ್ ಎಂದು ಇರುತ್ತೆ ಇದರ ಬೆಲೆ 420/- ರೂಗಳು  3) KINGFISHER STRONG  ಎಂದು  ಲೇಬಲ್ ಇರುವ 330 ಎಂ ಎಲ್, ನ 13 ಬಿಯರ್ ಬಾಟೆಲ್ ಗಳು ಇದ್ದು ಇವುಗಳ ಮೇಲೆ ಕಿಂಗ್ ಫಿಶರ್ ಸ್ಟ್ರಾಂಗ್ ಎಂದು ಇರುತ್ತೆ  ಇದರ ಬೆಲೆ 910/- ರೂಗಳು,  4) MC DOWELLS No 1 Reserve whisky ಎಂದು ಲೇಬಲ್ ಇರುವ 180 ಎಂ.ಎಲ್ ನ 4 ಬಾಟಲ್ ಗಳು ಇರುತ್ತೆ, ಇದರ ಬೆಲೆ 811/- ರೂಗಳು,   5) BAGPIPER Whisky ಲೇಬಲ್ ಇರುವ 180 ಎಂ.ಎಲ್ ನ ಟೆಟ್ರಾ ಪಾಕೆಟ್ ಗಳನ್ನು ಎಣಿಕೆ ಮಾಡಲಾಗಿ 14 ಪಾಕೆಟ್ ಗಳು ಇರುತ್ತೆ  ಇದರ ಬೆಲೆ 1262/- ರೂಗಳು, 6) OLD TAVERN Whisky ಲೇಬಲ್ ಇರುವ 180 ಎಂ.ಎಲ್ ನ ಟೆಟ್ರಾ ಪಾಕೆಟ್ ಗಳನ್ನು ಎಣಿಕೆ ಮಾಡಲಾಗಿ  20 ಪಾಕೆಟ್ ಗಳು ಇರುತ್ತೆ. ಇದರ ಬೆಲೆ 1482 ರೂಗಳು,   7) HAYWARDS Cheers whisky  ಲೇಬಲ್ ಇರುವ 90 ಎಂ.ಎಲ್ ನ  ಟೆಟ್ರಾ ಪಾಕೆಟ್ ಗಳನ್ನು ಎಣಿಕೆ ಮಾಡಲಾಗಿ  52 ಪಾಕೆಟ್ ಗಳು ಇರುತ್ತೆ.  ಇದರ ಬೆಲೆ 1576/- ರೂಗಳು,  ಒಟ್ಟು ಮದ್ಯದ ಬಾಟೆಲ್ ಗಳ ಬೆಲೆ 7532.68/- ರೂಗಳು ಮತ್ತು ಒಟ್ಟು ಮದ್ಯ 21.240 ಲೀಟರ್ ( ಇಪ್ಪತ್ತೊಂದು ಲೀಟರ್ ಇನ್ನೂರ ನಲವತ್ತು ಎಂ.ಎಲ್ ) . ಅಗಿರುತ್ತೆ ಆಪಾದಿತನು ಮದ್ಯದ ಬಾಟೆಲ್ ಗಳನ್ನು ಮಾರಾಟ ಮಾಡಲು ಪರವಾನಗಿ ಬಗ್ಗೆ ಕೇಳಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲ ಎಂದು ತಿಳಿಸಿರುತ್ತಾನೆ.ಕ್ರಮ ಸಂಖ್ಯೆ 01 ರಿಂದ 4 ರಲ್ಲಿ ಒಂದೊಂದು ಬಾಟಲ್, ಕ್ರಮ ಸಂಖ್ಯೆ5 ಮತ್ತು 6 ರಲ್ಲಿ ತಲಾ ಒಂದೊಂದು ಟೆಟ್ರಾ ಪಾಕೇಟ್, ಕ್ರಮ ಸಂಖ್ಯೆ 07 ರಲ್ಲಿ 90 ಎಂ.ಎಲ್ ನ ಎರಡು ಟೆಟ್ರಾ ಪಾಕೆಟ್ ಗಳನ್ನು ಸ್ಯಾಂಪಲ್ ಗಾಗಿ ತೆಗೆದು ಎಲ್ಲವನ್ನು ಪ್ರತೇಕವಾಗಿ  ಬಿಳಿ ಬಟ್ಟೆಯಿಂದ ಸುತ್ತಿ”ಹೆಚ್” ಎಂಬ ಅಕ್ಷರದಿಂದ  ಸೀಲ್ ಮಾಡಿ ಮೊಹರ್ ಮಾಡಿರುತ್ತೆ. ಸ್ಯಾಂಪಲ್ ಗಾಗಿ ತೆಗೆದಿರುವ ಮದ್ಯದ ಬಾಟಲ್ ಗಳು ಪ್ಲಾಸ್ಟಿಕ್ ಚೀಲ ಅಮಾನತ್ತು ಪಡಿಸಿಕೊಂಡು ಅಸಾಮಿಯನ್ನು ವಶಕ್ಕೆ ತೆಗೆದುಕೊಂಡರು ಪಂಚನಾಮೆಯೊಂದಿಗೆ ಹಾಜರುಪಡಿಸಿ ವರದಿಯನ್ನು ನೀಡಿದ್ದು ಕಲಂ 32,34 ಕೆ.ಇ ಅಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

3) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 59/2019 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

     ಘನ ನ್ಯಾಯಾಲಯದಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆರ್.ಜಗದೀಶ್ ರೆಡ್ಡಿ ಆದ ನಾನು ನಿವೇಧಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ 09/03/2019 ರಂದು ಸಂಜೆ ಸುಮಾರು 7-45 ಗಂಟೆ ಸಮಯದಲ್ಲಿ ನಾನು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಲ್ಲಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಕಲ್ಲಹಳ್ಳಿ ಗ್ರಾಮದ ವಾಸಿ ವೇಣುಗೋಪಾಲ್ ರೆಡ್ಡಿ ಬಿನ್ ಆಂಜಪ್ಪ ಎಂಬಾತನು ತನ್ನ ವಾಸದ ಮನೆಯ ಮುಂಭಾಗದಲ್ಲಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಿಕೊಂಡು ಅದರ ಮೇಲೆ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದರಂತೆ ನಾನು ಸ್ಥಳಕ್ಕೆ ಪಂಚಾಯ್ತಿದಾರನ್ನು ಬರ ಮಾಡಿಕೊಂಡು ಅವರಿಗೆ ವಿಷಯವನ್ನು ತಿಳಿಸಿ ನಂತರ ಸರ್ಕಾರಿ ಜೀಪ್ ನಂಬರ್ ಕೆಎ-40-ಜಿ-326 ರಲ್ಲಿ ಜೀಪ್ ಚಾಲಕನೊಂದಿಗೆ ಮೇಲ್ಕಂಡ ವೇಣುಗೋಪಾಲ್ ರೆಡ್ಡಿ ರವರ ಮನೆಯ ಬಳಿ ಹೋಗಲಾಗಿ ದ್ವಿ ಚಕ್ರ ವಾಹನದ ಬಳಿ ನಿಂತಿದ್ದ ಒಬ್ಬ ಆಸಾಮಿಯು ಪೊಲೀಸ್ ಜೀಪ್ ಅನ್ನು ಕಂಡು ಓಡಿ ಹೋಗಲು ಯತ್ನಿಸಿದ್ದು ನಂತರ ನಾನು ಸದರಿ ಆಸಾಮಿಯನ್ನು ಓಡಿ ಹೋಗದಂತೆ ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ವೇಣುಗೋಪಾಲ್ ರೆಡ್ಡಿ ಬಿನ್ ಆಂಜಪ್ಪ, 35 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಕಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ನಂತರ ಸದರಿ ಆಸಾಮಿಯ ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿ ಚಕ್ರ ವಾಹನವನ್ನು ಪರಿಶೀಲಿಸಲಾಗಿ ಅದರ ಮೇಲೆ ಕೆಎ-04-ಎಕ್ಸ್-9126 ಎಂತ ನೊಂದಣಿ ಸಂಖ್ಯೆ ಇದ್ದು, ಸದರಿ ದ್ವಿ ಚಕ್ರ ವಾಹನದ ಮೇಲೆ ಒಂದು ರೆಟ್ಟಿನ ಬಾಕ್ಸ್ ಇದ್ದು ಅದನ್ನು ತೆರೆದು ನೋಡಲಾಗಿ ಅದರಲ್ಲಿ 1) HAYWARDS CHEERS WHISKY-90 M L ಸಾಮರ್ಥದ 49 ಟೆಟ್ರಾ  ಪಾಕೇಟ್ ಗಳು, 2) OLD TAVERN WHISKY -180 M L  ಸಾಮರ್ಥದ 6 ಟೆಟ್ರಾ  ಪಾಕೇಟ್ ಗಳಿದ್ದು, ಇದನ್ನು ಮಾರಾಟ ಮಾಡಲು ಸದರಿ ಆಸಾಮಿಗೆ ಸರ್ಕಾರದಿಂದ ಯಾವುದಾದರೂ ಪರವಾನಿಗೆ ಪಡೆದಿದ್ದೀಯಾ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮದ್ಯದ ಟೆಟ್ರಾ ಪಾಕೇಟ್ ಗಳ ಒಟ್ಟು ಬೆಲೆ 1930-00 ರೂ ಬೆಲೆ ಬಾಳುವುದ್ದಾಗಿದ್ದು, ಇದು ಒಟ್ಟು 5.490 ಲೀಟರ್ ಗಳಿಷ್ಟಿದ್ದು, ಮೇಲ್ಕಂಡ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ರಾತ್ರಿ 8-00 ಗಂಟೆಯಿಂದ 9-00 ಗಂಟೆಯವರೆಗೆ ದಾಳಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ರಾತ್ರಿ 9-15 ಗಂಟೆಗೆ ಠಾಣೆಗೆ ವಾಪಸ್ಸಾಗಿ ಆರೋಪಿಯ ವಿರುದ್ದ ಠಾಣಾ ಮೊಸಂ-59/2019 ಕಲಂ 32.34 ಕೆ.ಇ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

4) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 49/2019 ಕಲಂ. ಮನುಷ್ಯ ಕಾಣೆ :-

     ದಿನಾಂಕ: 09/03/2019 ರಂದು ಪಿರ್ಯಾದಿದಾರರಾದ ಮುರಳಿ ಬಿನ್ ವೆಂಕಟೇಶ್, 30 ವರ್ಷ, ವಕ್ಕಲಿಗರು, ವ್ಯವಸಾಯ ವಾಸ: ಮಾಳಪಲ್ಲಿ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾವು ಇಬ್ಬರು ಗಂಡು ಮಕ್ಕಳಿದ್ದು,  ಮೊದಲನೇಯವನು ನಾನು ಎರಡನೇಯವನು ನನ್ನ ತಮ್ಮ  ಮೋಹನ್ ಎಂ.ವಿ 28 ವರ್ಷ, ರವರಾಗಿರುತ್ತಾರೆ. ನನ್ನ ತಮ್ಮ ನಾನು ನಮ್ಮ ತಂದೆ ತಾಯಿ ಒಂದೇ ಕುಟುಂಬದಲ್ಲಿ ವಾಸವಾಗಿರುತ್ತೇವೆ. ನನ್ನ ತಮ್ಮ ಮೋಹನ್ ಎಂ.ವಿ  ಬಿ ಎಸ್ ಸ್ಸಿ ವ್ಯಾಸಂಗ ಮಾಡಿದ್ದು, ಬೆಂಗಳೂರಿನ  ಮಾಗಡಿಯಲಿನ್ಲ ಯಾವುದೋ  ಪಾಕ್ಟರಿಯಲ್ಲಿ ಕೆಲಸಕ್ಕಾಗಿ ಹೋಗಿ ಬರುತ್ತಿರುತ್ತಾನೆ. ಅವನು ಯಾವ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾನೋ ನಮಗೆ  ತಿಳಿಸಿರಲಿಲ್ಲ.  ಈಗ್ಗೆ ಒಂದು ತಿಂಗಳ ಹಿಂದೆ ದಿನಾಂಕ:28/01/2019 ರಂದು ಬೆಳಿಗ್ಗೆ ಕೆಲಸದಿಂದ ಮನೆಗೆ ಬಂದಿದ್ದು  ನಂತರ ರಾತ್ರಿ 8-00 ಗಂಟೆಯಲ್ಲಿ ನನಗೆ  ಪ್ಯಾಕ್ಟರಿಯಲ್ಲಿ ಕೆಲಸವಿದೆ, ಹೋಗುತ್ತೇನೆಂದು ನಮಗೆ ಹೇಳಿ ಬೆಂಗಳೂರಿಗೆ ಹೋಗಿರುತ್ತೇನೆ. ಅಂದಿನಿಂದ  ಆತನ ನಂಬರ್ 8310425827, 8971743599  ಗಳಿಗೆ ಕರೆ ಮಾಡಿದರೆ ಸ್ವಿಚ್ ಆಪ್ ಬರುತ್ತಿರುತ್ತೆ.  ಸ್ವಿಚ್ ಆನ್ ಆದಾಗ ಬೇರೆಯವರ್ಯಾರೋ ಮಾತನಾಡುತ್ತಾರೆ, ನಾವು ಇಷ್ಟು ದಿನ ಬೆಂಗಳೂರಿನಲ್ಲಿ   ನಮ್ಮ ನೆಂಟರ  ಮನೆಗಳಲ್ಲಿ  ಸ್ನೇಹಿತರ ಮನೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಆದ್ದರಿಂದ  ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತ್ತೇವೆ.  ಆದ್ದರಿಂದ  ಕಾಣೆಯಾಗಿರುವ ನನ್ನ ತಮ್ಮನನ್ನು ಪತ್ತೆಮಾಡಿಕೊಡಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

5) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 63/2019 ಕಲಂ. 78(1),(3),(4) ಕೆ.ಪಿ. ಆಕ್ಟ್ :-

     ದಿನಾಂಕ 08/03/2019 ರಂದು ಸಂಜೆ 6 ;15 ಗಂಟೆ ಗೌರೀಬಿದನೂರು  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಪೊಲೀಸ್ ಉಪ ನಿರೀಕ್ಷಕರಾದ ಶ್ರೀ  ಲಿಯಾಕತ್ ಉಲ್ಲಾ ರವರು  ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ;08/03/2019 ರಂದು ಮಧ್ಯಾಹ್ನ 2-30 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು,  ನಗರಗೆರೆ ಗ್ರಾಮದಲ್ಲಿ  ಮಟ್ಟಾವಲಹಳ್ಳಿ ಕ್ರಾಸ್ ನಲ್ಲಿ   ಯಾರೋ  ಸಾರ್ವಜನಿಕರಿಂದ  ಹಣವನ್ನು ಪಡೆದುಕೊಂಡು, ಮಟ್ಕಾ ಜೂಜಾಟವಾಡುತ್ತಿರುವುದಾಗಿ ನಗರಗೆರೆ ಸಹಾಯವಾಣಿ ಕೇಂದ್ರದ ಸಿಬ್ಬಂದಿಯವರು  ನೀಡಿದ  ಮಾಹಿತಿ ಮೇರೆಗೆ  ಪಂಚಾಯ್ತಿದಾರರನ್ನು ಕರೆದುಕೊಂಡು  ಪೊಲೀಸ್ ಸಿಬ್ಬಂದಿಯೊಂದಿಗೆ  ನಗರಗೆರೆ ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಕರೆದುಕೊಂಡು, ನಗರಗೆರೆ ಗ್ರಾಮದ ಮಟ್ಟಾವಲಹಳ್ಳಿ ಕ್ರಾಸ್ ಗೆ  ಬಂದು ಮರೆಯಲ್ಲಿ ನಿಂತು ನೋಡಲಾಗಿ,  ಯಾರೋ ಒಬ್ಬ ಆಸಾಮಿಯು  ಮಟ್ಟಾವಲಹಳ್ಳಿ ಕ್ರಾಸ್ ನಲ್ಲಿ ನಿಂತುಕೊಂಡು  ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಸಿಬ್ಬಂದಿಯವರು  ಆತನನ್ನು ಸುತ್ತುವರೆದು ಹಿಡಿದುಕೊಂಡು  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಅನೀಫ್ ಬಿನ್  ಇಬ್ರಾಹಿಂ  ವಯಸ್ಸು 52 ವರ್ಷ, ಮುಸ್ಲಿಂ ಜನಾಂಗ,  ವಾಸ ನಗರೆಗೆರೆ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 640/- ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇರುತ್ತೆ.   ಸದರಿ ಆಸಾಮಿಯನ್ನು ಹಾಗು ಮಟ್ಕಾ ಚೀಟಿ, ಬಾಲ್ ಪಾಯಿಂಟ್ ಪೆನ್ ಮತ್ತು 640/- ರೂ ನಗದು ಹಣವನ್ನು  ಪಂಚರ ಸಮಕ್ಷಮದಲ್ಲಿ ಮಧ್ಯಾಹ್ನ 3-15 ರಿಂದ 4-00 ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ವಶಕ್ಕೆ ತೆಗೆದುಕೊಂಡು ಠಾಣೆಗೆ  ಸಂಜೆ 6-15 ಗಂಟೆಗೆ ವಾಪಸ್ಸು ಬಂದಿದ್ದು,  ಈ ಕೃತ್ಯವ್ಯ ಅಸಂಜ್ಞೇಯ  ಪ್ರಕರಣವಾಗಿರುವುದರಿಂದ ಮೇಲ್ಕಂಡ ಆಸಾಮಿಯ ವಿರುದ್ಧ ಠಾಣಾ ಎನ್.ಸಿ.ಆರ್. ನಂ. 97/2019 ರೀತ್ಯಾ  ಪ್ರಕರಣ ದಾಖಲಿಸಿಕೊಂಡಿರುತ್ತೆ.  ನಂತರ ದಿನಾಂಕ 09/03/2019 ರಂದು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು  ಮೇಲ್ಕಂಡ ಆಸಾಮಿಯ ವಿರುದ್ಧ ಮೊ ಸಂ 63/2019 ಕಲಂ: 78 ಕ್ಲಾಸ್ (1),(4) & (6) ಕೆ.ಪಿ.ಆಕ್ಟ್ ಅಡಿಯಲ್ಲಿ  ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

6) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 64/2019 ಕಲಂ. 78(1),(3),(4) ಕೆ.ಪಿ. ಆಕ್ಟ್ :-

     ದಿನಾಂಕ 08/03/2019 ರಂದು ಸಂಜೆ 6;15 ಗಂಟೆ ಗೌರೀಬಿದನೂರು  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಪೊಲೀಸ್ ಉಪ ನಿರೀಕ್ಷಕರಾದ ಶ್ರೀ  ಲಿಯಾಕತ್ ಉಲ್ಲಾ ರವರು  ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ;08/03/2019 ರಂದು ಮಧ್ಯಾಹ್ನ 2-30 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು,  ನಗರಗೆರೆ ಗ್ರಾಮದಲ್ಲಿ  ಕೋಡೀರ್ಲಪ್ಪ ದೇವಸ್ಥಾನದ ಮುಂದೆ ರಸ್ತೆಯಲ್ಲಿ ಯಾರೋ  ಸಾರ್ವಜನಿಕರಿಂದ  ಹಣವನ್ನು ಪಡೆದುಕೊಂಡು, ಮಟ್ಕಾ ಜೂಜಾಟವಾಡುತ್ತಿರುವುದಾಗಿ ನಗರಗೆರೆ ಸಹಾಯವಾಣಿ ಕೇಂದ್ರದ ಸಿಬ್ಬಂದಿಯವರು  ನೀಡಿದ  ಮಾಹಿತಿ ಮೇರೆಗೆ  ಪಂಚಾಯ್ತಿದಾರರನ್ನು ಕರೆದುಕೊಂಡು  ಪೊಲೀಸ್ ಸಿಬ್ಬಂದಿಯೊಂದಿಗೆ  ನಗರಗೆರೆ ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಕರೆದುಕೊಂಡು, ನಗರಗೆರೆ ಗ್ರಾಮದ  ಕೋಡೀರ್ಲಪ್ಪ ದೇವಸ್ಥಾನದ ಬಳಿ  ಬಂದು ಮರೆಯಲ್ಲಿ ನಿಂತು ನೋಡಲಾಗಿ,  ಯಾರೋ ಒಬ್ಬ ಆಸಾಮಿಯು  ಕೋಡೀರ್ಲಪ್ಪ ದೇವಸ್ಥಾನದ ಮುಂದೆ ರಸ್ತೆಯಲ್ಲಿ  ನಿಂತುಕೊಂಡು  ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಸಿಬ್ಬಂದಿಯವರು  ಆತನನ್ನು ಸುತ್ತುವರೆದು ಹಿಡಿದುಕೊಂಡು  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಗಂಗಾಧರಪ್ಪ ಬಿನ್ ಲೇಟ್ ಕೋಡೀರ್ಲಪ್ಪ, 56 ವರ್ಷ,  ನಾಯಕ ಜನಾಂಗ, ನಗರಗೆರೆ ಗ್ರಾಮ,  ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 770/- ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇರುತ್ತೆ.   ಸದರಿ ಆಸಾಮಿಯನ್ನು ಹಾಗು  ಮಟ್ಕಾ ಚೀಟಿ, ಬಾಲ್ ಪಾಯಿಂಟ್ ಪೆನ್ ಮತ್ತು 770/- ರೂ ನಗದು ಹಣವನ್ನು  ಪಂಚರ ಸಮಕ್ಷಮದಲ್ಲಿ ಸಂಜೆ 4-30 ರಿಂದ 5-15 ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ವಶಕ್ಕೆ ತೆಗೆದುಕೊಂಡು ಠಾಣೆಗೆ  ವಾಪಸ್ಸು ಬಂದು  ಸಂಜೆ 6-45 ಗಂಟೆಗೆ ಈ ಕೃತ್ಯವ್ಯ ಅಸಂಜ್ಞೇಯ  ಪ್ರಕರಣವಾಗಿರುವುದರಿಂದ ಮೇಲ್ಕಂಡ ಆಸಾಮಿಯ ವಿರುದ್ಧ ಠಾಣಾ ಎನ್.ಸಿ.ಆರ್. ನಂ. 98/2019 ರೀತ್ಯಾ  ಪ್ರಕರಣ ದಾಖಲಿಸಿಕೊಂಡಿರುತ್ತೆ. ನಂತರ  ದಿನಾಂಕ 09/03/2019 ರಂದು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು  ಮೇಲ್ಕಂಡ ಆಸಾಮಿಯ ವಿರುದ್ಧ ಮೊ ಸಂ 64/2019 ಕಲಂ: 78 ಕ್ಲಾಸ್ (1) (4) & (6) ಕೆ.ಪಿ.ಆಕ್ಟ್  ಅಡಿಯಲ್ಲಿ  ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

7) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 65/2019 ಕಲಂ. 323,324,504,506 ರೆ/ವಿ 34 ಐಪಿಸಿ :-

     ದಿ: 09-03-2019 ರಂದು ರಾತ್ರಿ 09:50 ಗಂಟೆಯಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ  ಮೆಮೂ ಪಡೆದು  ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ನಾರಾಯಣಪ್ಪ ಬಿನ್ ಲೇಟ್ ವೆಂಕಟಪ್ಪ 32 ವರ್ಷ, ಬೋವಿ ಜನಾಂಗ, ದೊಡ್ಡಬಳ್ಳಾಪುರ ಅಪೋಲೋ ಮೆಡಿಸಿನ್ ಪ್ಯಾಕ್ಟರಿಯಲ್ಲಿ ಕೆಲಸ, ಎಂ ಜಾಲಹಳ್ಳಿ ಗ್ರಾಮ  ಗೌರೀಬಿದನೂರು ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶ – ಪಿರ್ಯಾಧಿ ಮತ್ತು ತನ್ನ ಗ್ರಾಮದ ನಾಗೇಶ ಬಿನ್ ಗಂಗೋಜಪ್ಪ ರವರುಗಳು  ಪ್ರತಿ ದಿನ ಪಿಯಾಧಿ ಬಾಬತ್ತು ಕೆ ಎ 04 ಕ್ಯೊ 6995 ಸ್ಲಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗಿ ವಾಪಸ್ಸು ಬರುತ್ತಿದ್ದು ದಿ: 09-03-2019 ರಂದು ರಾತ್ರಿ ಸುಮಾರು 9:15 ಗಂಟೆಯಲ್ಲಿ ಎಂದಿನಂತೆ ರಾತ್ರಿ ಸುಮಾರು 9;15 ಗಂಟೆಯಲ್ಲಿ ದ್ವಿ ಚಕ್ರ ವಾಹನದಲ್ಲಿ ಗೌರಿಬಿದನೂರು ತಾಲ್ಲೂಕು, ಇಡಗೂರು ರಸ್ತೆಯಿಂದ ಪಿರ್ಯಾಧಿ ಗ್ರಾಮಕ್ಕೆ ಹೋಗುವ ಪ್ರಕಾಶ್ ರೆಡ್ಡಿ ಬಾಬತ್ತು ಜಮೀನಿನ ಬಳಿ ಇರುವ ರಸ್ತೆಯ ಬಳಿ ದ್ವಿ ಚಕ್ರ ವಾಹನವನ್ನು ಚಾಲನೆ ಆಡಿಕೋಂಡು ಹೋಗುತ್ತಿದ್ದಾಗ ನಮ್ಮ ಎದುರು ಗಡೆಯಿಂದ ಒಂದು ಕಪ್ಪು ಬಣ್ಣದ ಪಲ್ಸರ್ ದ್ವಿಚಕ್ರ ವಾಹನ ಬರುತ್ತಿದ್ದು ಪಿರ್ಯಾಧಿ ಬಾಬತ್ತು ದ್ವಿಚಕ್ರ ವಾಹನವನ್ನು ನಿಲ್ಲಿಸಿದಾಗ ಪಲ್ಸರ್ ದ್ವಿಚಕ್ರ ವಾಹನದಲ್ಲಿದ್ದ ಮೂವರು ಅಸಾಮಿಗಳು ದ್ವಿ ಚಕ್ರ ವಾಹನ ನಿಲ್ಲಿಸಿ ಪಿರ್ಯಾಧಿ ಬಳಿ ಬಂದು ಪೆಟ್ರೋಲ್ ಕೊಡು ಅಂತ ಕೇಳಿದ್ದು ಬಾಟಲ್ ಇಲ್ಲ ಹೇಗೆ ಕೊಡುವುದು ಎಂತ ಹೇಳಿದ ಕೂಡಲೇ ಒಬ್ಬ ಅಸಾಮಿಯು ಆತನ ಕೈಯಲ್ಲಿದ್ದ ಬೀರ್ ಬಾಟಲ್ ನಿಂದ ಪಿರ್ಯಾಧಿ ತಲೆಯ ಹಿಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದ್ದು, ಜಗಳ ಬಿಡಿಸಲು ಬಂದ  ನಾಗೇಶ ರವರಿಗೆ ಉಳಿದ ಇಬ್ಬರು ಕೈಗಳಿಂದ ಗುದ್ದಿ ನಮ್ಮ ಮಕ್ಕಳಾ ನಾವು ಪೆಟ್ರೋಲ್ ಕೇಳಿದರೆ ಪೆಟ್ರೋಲ್ ಗೆ ಬಾಟಲಿ ಇಲ್ಲ ಅಂತ ಹೇಳುತ್ತೀರಾ ನಿಮಗೊಂದು ಗತಿ ಕಾಣಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದ್ದು, ಇಬ್ಬರು ಜೋರಾಗಿ ಕಿರುಚಿಕೊಂಡಾಗ ರಸ್ತೆಯಲ್ಲಿ ಪಿರ್ಯಾಧಿ ಗ್ರಾಮದವರು ಬರುವುದನ್ನು ನೋಡಿ ಮೂರು ಜನ ಕಪ್ಪು ಬಣ್ಣದ ಪಲ್ಸರ್ ನಲ್ಲಿ ಹೊರಟು ಹೋಗಿದ್ದು, ನಂತರ ಗೌರಿಬಿದನೂರು ಸರ್ಕಾರಿ ಅಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿರುವುದಾಗಿ ತಳಿಸಿದ್ದು ಸದರಿ ಅಸಾಮಿಗಳು ಸುಮಾರು 30 ರಿಂದ 35 ವರ್ಷ ವಯಸ್ಸುಲ್ಲವರಾಗಿರುತ್ತಾರೆ, ಎಂದು ತಿಳಿಸಿ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

8) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 27/2019 ಕಲಂ. 15(ಎ), 32(2) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:09/03/2019 ರಂದು ಸಂಜೆ 6:55 ಗಂಟೆಗೆ ಗೌರಿಬಿದನೂರು ಪುರ ಠಾಣೆಯ ಪಿ.ಎಸ್.ಐ ಸಿ ರವಿಕುಮಾರ್ ರವರು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಯಲ್ಲಿ ಹಾಜರುಪಡಿಸಿದ ಪಂಚನಾಮೆ ಮತ್ತು ವರದಿಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ:09/03/2019 ರಂದು ಸಂಜೆ ಸುಮಾರು 5-45 ಗಂಟೆಯ ಸಮಯದಲ್ಲಿ ಗೌರಿಬಿದನೂರು ಪುರದ ಬಿ-ಹೆಚ್ ರಸ್ತೆಯ ಸಂಗೋಳ್ಳಿ ರಾಯಣ್ಣ ಪ್ರತಿಮೆಯ ಮುಂಭಾಗದ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯೊಬ್ಬನು ರಸ್ತೆಯಲ್ಲಿಯೇ ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿದ್ದು, ಸ್ಥಳದಲ್ಲಿ ಕಪ್ಪು ಕವರ್ ನಲ್ಲಿ ಮದ್ಯದ ಸಾಚೆಟ್ ಪಾಕೆಟ್ ಗಳನ್ನು ಹಾಕಿಕೊಂಡು ಮಾರಾಟ ಮಾಡುತ್ತಿದ್ದ ಆಸಾಮಿಯಾದ ಗಂಗರಾಜು ಬಿನ್ ಲಿಂಗಪ್ಪ, 37 ವರ್ಷ, ಪ. ಜಾತಿ, ಜಿರಾಯ್ತಿ, ವಾಸ; ಚಿಕ್ಕಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು. ರವರನ್ನು ವಶಕ್ಕೆ ತೆಗೆದುಕೊಂಡಿದ್ದು, ಸ್ಥಳದಲ್ಲಿ ಆತನ ಬಳಿಯಿದ್ದ HAYWARDS CHEERS WHISKY ಕಂಪನಿಯ 90 ಎಂ.ಎಲ್. ನ 15 ಸಾಚೆಟ್ ಪಾಕೆಟ್ ಗಳಲ್ಲಿ ಒಂದು ಪಾಕೆಟ್ ಮಾರಾಟ ಮಾಡಿ ಖಾಲಿಯಾಗಿದ್ದು, ಸ್ಥಳದಲ್ಲಿ ಬಿದ್ದಿರುತ್ತೆ. ಇವುಗಳನ್ನು ಹಾಗೂ ಸ್ಥಳದಲ್ಲಿ ಮದ್ಯವನ್ನು ಕುಡಿಯುವುದಕ್ಕೆ ಅವಕಾಶ ಮಾಡಿಕೊಡಲು ಉಪಯೋಗಿಸಿದ್ದ 5 ಪೇಪರ್ ಲೋಟಗಳನ್ನು ಪಂಚನಾಮೆಯ ಮುಖಾಂತರ ಸಂಜೆ 6-00 ಗಂಟೆಯಿಂದ 6-45 ಗಂಟೆಯವರೆಗೆ ವಶಕ್ಕೆ ತೆಗೆದುಕೊಂಡಿರುತ್ತೆ. ಆರೋಪಿಯನ್ನು ಹಾಗೂ ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯದ ಪಾಕೆಟ್ ಗಳನ್ನು ಮಾರಾಟ ಮಾಡಿ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಆಸಾಮಿಯ ವಿರುದ್ದ ನೀವುಗಳು ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ನೀಡಿದ ದೂರಾಗಿರುತ್ತೆ.

9) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 28/2019 ಕಲಂ. 427,447 ರೆ/ವಿ 34 ಐಪಿಸಿ :-

     ದಿನಾಂಕ:09/03/2019 ರಂದು ರಾತ್ರಿ 8:40 ಗಂಟೆಗೆ ಪಿರ್ಯಾದಿ ರಮೇಶ್ ಎಂ.ಎನ್ ಬಿನ್ ಲೇಟ್ ಎಂ.ಎಸ್ ನಾರಾಯಣಪ್ಪ, 39 ವರ್ಷ, ನಾಯಕ ಜನಾಂಗ, ಶಿಕ್ಷಕ ವೃತ್ತಿ, ಮಾದವನಗರ, ಗೌರಿಬಿದನೂರು ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ಗ್ರಾಮದಲ್ಲಿ ನಮ್ಮ ತಂದೆಯವರ ಹೆಸರಿನಲ್ಲಿ ಸರ್ವೇ ನಂ:32/2 ರಲ್ಲಿ 23 ಗುಂಟೆ ಜಮೀನು ಇದ್ದು ಸದರಿ ಜಮೀನಿನಲ್ಲಿ ನಮ್ಮ ತಂದೆಯವರು ಮನೆಯನ್ನು ಕಟ್ಟಿದ್ದು, ಅದೇ ಮನೆಯಲ್ಲಿಯೇ ನಾವುಗಳು ಬೇರೆ-ಬೇರೆಯಾಗಿ ವಾಸವಾಗಿರುತ್ತೇವೆ. ಇನ್ನೂ ಜಮೀನುಗಳು ಬಾಗಗಳು ಮಾಡಿಕೊಂಡಿರುವುದಿಲ್ಲ.ನಾವು ಒಟ್ಟು ಮೂರು ಜನ ಅಣ್ಣ ತಮ್ಮಂದಿರು ಆಗಿದ್ದು, ನಮ್ಮ ತಂದೆಯವರು ಕಟ್ಟಿದ್ದ ಮನೆಯ ಮೇಲ್ಭಾಗದಲ್ಲಿ ಒಂದು ಕೊಠಡಿಯನ್ನು ನಿರ್ಮಿಸಿದ್ದು, ನಮ್ಮ ತಂದೆಯವರು ಕೊನೇಗಾಲದಲ್ಲಿ ಅದೇ ಮನೆಯಲ್ಲಿ ವಾಸವಾಗಿದ್ದರು. ಅವರು ಆ ಸಮಯದಲ್ಲಿ ಜಮೀನುಗಳಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಮತ್ತು ಇತರೇ ವಸ್ತುಗಳನ್ನು ಇಟ್ಟುಕೊಂಡಿದ್ದರು. ನಮ್ಮ ತಂದೆಯವರು ಈಗ್ಗೆ ಸುಮಾರು ಐದು ತಿಂಗಳ ಹಿಂದೆ ಮೃತಪಟ್ಟಿರುತ್ತಾರೆ. ಅಂದಿನಿಂದ ನಮ್ಮ ತಂದೆಯವರು ವಾಸವಾಗಿದ್ದ ಕೊಠಡಿಗೆ ಬೀಗ ಹಾಕಿದ್ದೆವು. ಹೀಗಿರುವಾಗ ದಿನಾಂಕ:09/03/2019 ರಂದು ಸಂಜೆ 6-45 ಗಂಟೆಯ ಸಮಯದಲ್ಲಿ ನನ್ನ ಅಣ್ಣ ಶ್ರೀಧರ್ ಹಾಗೂ ಸತೀಶ್ ರವರು ಸಾಕ್ಷೀಗಾಗಿ ನಮ್ಮ ಗ್ರಾಮದ ಅಂಜಿನಪ್ಪ ಮತ್ತು ಅಶ್ವತ್ಥಪ್ಪ ರವರನ್ನು ಕರೆದುಕೊಂಡು ಬಂದು ಕೊಠಡಿಯ ಬಾಗಿಲನ್ನು ಹೊಡೆದು ನಮ್ಮ ತಂದೆಯವರು ವಾಸವಾಗಿದ್ದ ಕೊಠಡಿಗೆ ಅತಿಕ್ರಮ ಪ್ರವೇಶ ಮಾಡಿ ಕಾಗದ ಪತ್ರಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ತಾವುಗಳು ಈ ಬಗ್ಗೆ ಅವರ ಮೇಲೆ ಕಾನೂನು ಅಡಿಯಲ್ಲಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

10) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 42/2019 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 09/03/2019 ರಂದು ರಾತ್ರಿ 19-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಆರೋಪಿ ಮಾಲು ಹಾಗೂ ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ಈ ದಿನ ದಿನಾಂಕ 09/03/2019 ರಂದು ತಾನು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ತಾನು ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ  ಯಲ್ಲಿ ಎಸ್.ಎಚ್.ಓ ಪ್ರಭಾರದಲ್ಲಿದ್ದಾಗ ತನಗೆ ಬಂದ ಮಾಹಿತಿ ಏನೆಂದರೆ ಗೌರೀಬಿದನೂರು ತಾಲ್ಲೂಕು ನಾಮಗೊಂಡ್ಲು ಗ್ರಾಮದ ಜನತಾ ಕಾಲೋನಿಯಲ್ಲಿ ವಾಸವಾಗಿರುವ ಮುಸ್ತಾಫ್ ಎಂಬುವರ ಮನೆಯಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿರುತ್ತಾನೆಂತ ಬಂದ ಮಾಹಿತಿಯನ್ನು ಅನುಸರಿಸಿ ಸಿಬ್ಬಂದಿಯವರಾದ ಎ.ಎಸ್.ಐ. ನಾರಾಯಣಸ್ವಾಮಿ, ಎ.ಎಸ್.ಐ ಪಾಪಣ್ಣ, ಹೆಚ್.ಸಿ. 175 ಮುರಳಿಧರ, ಹೆಚ್.ಸಿ. 71 ಸುಬ್ರಮಣಿ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ40-ಜಿ-270 ರ ವಾಹನದ ಚಾಲಕ ಎಪಿಸಿ 138 ಮಹಬೂಬ್ ಭಾಷ ರವರೊಂದಿಗೆ ಮದ್ಯಾಹ್ನ 3-15 ಗಂಟೆಗೆ ಚಿಕ್ಕಬಳ್ಳಾಪುರ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ  ಬಿಟ್ಟು ಸಂಜೆ 4-00 ಗಂಟಗೆ  ನಾಮಗೊಂಡ್ಲು ಗ್ರಾಮಕ್ಕೆ ಬಂದು ಮಾಹಿತಿಯನ್ನು ಮತ್ತೊಮ್ಮೆ ಖಚಿತ ಪಡಿಸಿಕೊಂಡು ದಾಳಿಗೆ ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿ ವಿಚಾರವನ್ನು ತಿಳಿಸಿ  ನಾವು ಮತ್ತು ಪಂಚರು ಗ್ರಾಮದಲ್ಲಿರುವ ಜನತಾ ಕಾಲೋನಿಯಲ್ಲಿ ವಾಸವಾಗಿರುವ ಮುಸ್ತಾಫ್ ರವರ ಮನೆಯ ಬಳಿ ಹೋಗಿ ನೋಡಲಾಗಿ ಮನೆಯ ಮುಂಭಾಗಿಲು ಉತ್ತರ ದಿಕ್ಕಿಗೆ ಇದ್ದು ಆರ್.ಸಿ.ಸಿ ಮನೆಯಾಗಿರುತ್ತೆ. ಮನೆಯ ಪಶ್ಚಿಮದ ಕಡೆ ಒಂದು ಕೊಠಡಿದ್ದು, ಮನೆಯಲ್ಲಿ ಹಾಜರಿದ್ದ ಮುಸ್ತಾಫ್ ರವರನ್ನು ಕುರಿತು ನೀವು ಮನೆಯಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಣೆ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುತ್ತಾರೆಂತ ಮಾಹಿತಿ ಇದ್ದು, ಮನೆಯಲ್ಲಿ ದಾಸ್ತಾನ್ ಮಾಡಿರುವ ಮದ್ಯವನ್ನು ತೋರಿಸುವಂತೆ ಪಂಚರ ಸಮಕ್ಷಮ ಕೇಳಲಾಗಿ ಆತನು ಮನೆಯ ಒಳಗಡೆಯ ಕೊಠಡಿಗೆ ಹೋಗಿ ಅಲ್ಲಿ ದಾಸ್ತಾನು ಮಾಡಿದ್ದ 1) ಬ್ಯಾಗ್ ಪೈಪರ್ ವಿಸ್ಕಿಯ 180 ಎಂ ಎಲ್ ನ ಒಂದು ಬಾಕ್ಸ್ ಇದರಲ್ಲಿ 48 ಟೆಟ್ರಾ ಪ್ಯಾಕೇಟ್ ಗಳಿರುತ್ತೆ.2) 8 ಪಿಎಂ ವಿಸ್ಕಿಯ 180 ಎಂ .ಎಲ್, ನ 32 ಟೆಟ್ರಾ ಪ್ಯಾಕೇಟ್ಗಳಿರುತ್ತೆ. 3) ಓಟಿ ವಿಸ್ಕಿಯ 180 ಎಂ.ಎಲ್ ನ 20 ಟೆಟ್ರಾ ಪ್ಯಾಕೇಟ್ ಗಳಿರುತ್ತೆ. 4) ಎಂಸಿ ವಿಸ್ಕಿಯ 180 ಎಂಎಲ್. ನ 3 ಬಾಟಲ್ ಗಳು ಇರುತ್ತೆ. 5) ಕೆ.ಎಫ್. ಸ್ಟ್ರಾಂಗ್ 500 ಎಂ.ಎಲ್. ನ ಟಿನ್ ಬೀಯರ್ 6) ಹೈವಾರ್ಡ್ಸ್ ಚೀಯರ್ಸ ವಿಸ್ಕಿಯ 90 ಎಂ.ಎಲ್. ನ 8 ಬಾಕ್ಸ್ ಗಳು ಒಂದೊಂದು ಬಾಕ್ಸ್ ನಲ್ಲಿ 96 ಟೆಟ್ರಾ ಪ್ಯಾಕೇಟ್ ಗಳಿರುತ್ತೆ. ಮತ್ತು ಇದೇ ಮಾದರಿಯ 23 ಟೆಟ್ರಾ ಪ್ಯಾಕೇಟ್ ಗಳಿರುತ್ತೆ. ಸದರಿ ಮೇಲ್ಕಂಡ ಮದ್ಯವನ್ನು ಹಾಜರುಪಡಿಸಿರುತ್ತಾನೆ. ಇವುಗಳ ಒಟ್ಟು ಅಂದಾಜು ಮೊತ್ತ 33809/- ರೂಗಳ ಬೆಲೆ ಬಾಳುವಂತ ಮದ್ಯವಾಗಿರುತ್ತೆ. ಮತ್ತು ವ್ಯಾಪಾರದಿಂದ ಸಂಗ್ರಹಿಸಿದ್ದ ನಗದು ಹಣ 8040/- (ಎಂಟು ಸಾವಿರದ ನಲವತ್ತು ) ರೂಗಳಿರುತ್ತೆ ನಂತರ ಆರೋಪಿಯನ್ನು ಹೆಸರು ವಿಳಾಸ ಕೇಳಲಾಗಿ ಮುಸ್ತಾಪ ಬಿನ್ ಲೇಟ್ ಅನ್ವರ್ ಸಾಬ್  40 ವರ್ಷ, ಮುಸ್ಲಿಂ ಜನಾಂಗ, ವ್ಯವಸಾಯ ಮತ್ತು ಅಕ್ರಮ ಮಧ್ಯ ಮಾರಾಟ, ವಾಸ ನಾಮಗೊಂಡ್ಲು ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಸದರಿ ಆರೋಪಿಯನ್ನು ಮತ್ತು ಮೇಲ್ಕಂಡ ಮಾಲುಗಳನ್ನು ದಾಳಿಯ ಕಾಲದಲ್ಲಿ ಪಂಚರ ಸಮಕ್ಷಮ 4-15 ರಿಂದ 5-15 ಗಂಟೆಯವರೆಗೆ ಪಂಚನಾಮೆಯ ಕ್ರಮಗಳನ್ನು ಜರುಗಿಸಿ ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡ ಸುಮಾರು 89 ಲೀಟರ್ ಮಧ್ಯ, ಮಾರಾಟ ಮಾಡಿ ಸಂಪಾದನೆ ಮಾಡಿದ್ದ ನಗದು ಹಣ, ಆರೋಪಿ ಹಾಗೂ ಪಂಚನಾಮೆಯನ್ನು ಈ ದೂರಿನೊಂದಿಗೆ ಮುಂದಿನ ಕ್ರಮದ ಬಗ್ಗೆ ಮಂಚೇನಹಳ್ಳಿ ಠಾಣಾ ಎಸ್.ಎಚ್.ಓ ರವರಿಗೆ ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

11) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 16/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:09/03/2019 ರಂದು ಸಂಜೆ 3:45 ಗಂಟೆಗೆ ಪಿ.ಎಸ್.ಐ (ಕಾ.ಸು) ರವರು 4 ಜನ ಆರೋಪಿಗಳನ್ನು, ಮಾಲುಗಳನ್ನು ಮತ್ತು ಅಸಲು ದಾಳಿ ಮಹಜರ್ ಹಾಜರ್ಪಡಿಸಿ ನೀಡಿದ ಮೇಮೋವನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ದಿನಾಂಕ:09/03/2019 ರಂದು ಮದ್ಯಾಹ್ನ 1:00 ಗಂಟೆ ಸಮಯದಲ್ಲಿ ಪಿಎಸ್.ಐ ಸಾಹೇಬರಿಗೆ ಬಂದ ಖಚಿತ ಮಾಹಿತಿ ಏನೆಂದರೆ ಯಾರೋ ಆಸಾಮಿಗಳು ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿಯ ತುಮಕಲಹಳ್ಳಿ ಗ್ರಾಮದ ಸಮೀಪವಿರುವ ಎಸ್.ಜೆ.ಸಿ.ಐ.ಟಿ ಕಾಲೇಜಿನ ಪಕ್ಕದ ಹಳ್ಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ದಾಳಿ ನಡೆಸಲು ಚಿಕ್ಕಬಳ್ಳಾಪುರ ಘನ 2ನೇ ಅಡಿಷಿನಲ್ ಸಿ.ಜೆ & ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಅನುಮತಿ ಪಡೆದು ಪಿ.ಎಸ್.ಐ ಸಾಹೇಬರು ಮತ್ತು ಪಂಚರು ಹಾಗೂ ಪೊಲೀಸ್ ಸಿಬ್ಬಂದಿಗಳಾದ ಎ.ಎಸ್,ಐ ಶಿವಣ್ಣ, ಹೆಚ್.ಸಿ-234 ಶೇಖರ್, ಹೆಚ್.ಸಿ-230 ಕೆ.ಪಿ ನಾಗರಾಜ್, ಪಿಸಿ-240 ಮಧುಸೂಧನ್, ಪಿಸಿ-06 ರಾಮಕೃಷ್ಣ, ರವರುಗಳೊಂದಿಗೆ ಮದ್ಯಾಹ್ನ 2:00 ಗಂಟೆಗೆ ಎಸ್.ಜೆ.ಸಿ.ಐ.ಟಿ ಕಾಲೇಜಿನ ಪಕ್ಕದ ಬಳಿಗೆ ಹೊಗಿ ಮರೆಯಲ್ಲಿ ನಿಂತು ನೊಡಲಾಗಿ  ಅಂದರ್ಗೆ 500/-ರೂ ಗಳೆಂದು, ಬಾಹರ್ 500/- ರೂ ಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದರವರ ಮೇಲೆ ದಾಳಿಮಾಡಿದಾಗ ಸ್ಥಳದಲ್ಲಿ ಹಣ, ಮತ್ತು  ಇಸ್ಪೀಟ್ ಎಳೆಗಳನ್ನು ಬಿಟ್ಟು ಓಡಿ ಪರಾರಿಯಾಗಲು ಪ್ರಯತ್ನಿಸಿದ 4 ಜನರನ್ನು ಹಿಡಿದು, ವಶಕ್ಕೆ ಪಡೆದುಕೊಂಡವರ ಹೆಸರು ವಿಳಾಸ ಕೇಳಲಾಗಿ 1) ವಿನೋದ್ ಕುಮಾರ್ @420 ಬಿನ್ ಲೇಟ್ ವೆಂಕಟೇಶಪ್ಪ,,26 ವರ್ಷ,ಪ.ಜಾತಿ (ಎ.ಡಿ) ಆಟೋಚಾಲಕ,ಅಗಲಗುರ್ಕಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು 2)ಜಬೀವುಲ್ಲಾ @ ಜಬೀ ಬಿನ್ ರಹಮತ್ತುಲ್ಲಾ,28 ವರ್ಷ,ಆಟೋಚಾಲಕ ವೃತ್ತಿ,ನಂ-360 9ನೇ ಬೀದಿ, 9ನೇ ಕ್ರಾಸ್, ಯಲಹಂಕ ಟೌನ್ -64 3) ಆದಿನಾರಾಯಣ @ ಆಚಾರಿ ಬಿನ್ ಬಿನ್ ಗಂಗಾಧರಾಚಾರಿ, 26 ವರ್ಷ, ಅಕ್ಕಸಾಲಿಗ, ಆಟೋ ಚಾಲಕ, ಗಂಗೋತ್ರಿ ವಾಟರ್ ಫಿಲ್ಟರ್ ಬಳಿ ಪ್ರಶಾಂತ ನಗರ, ಚಿಕ್ಕಬಳ್ಳಾಪುರ, ಸ್ವಂತ ಸ್ಥಳ ನಲ್ಲಕದಿರೇನಹಳ್ಳಿ ಗ್ರಾಮ. 4) ಶ್ರೀಧರ್.ಎಂ ಬಿನ್ ಎಸ್. ಮಂಜುನಾಥ, 30 ವರ್ಷ, ಬಲಜಿಗರು, ಮೆಕಾನಿಕ್, ಅಗಲಗುರ್ಕಿ ಗೇಟ್, ಕಂದವಾರ ಬಾಗಿಲು. ಎಂದು ತಿಳಿಸಿದರು ಇವರುಗಳ ಮೇಲೆ ದಾಳಿ ಮಾಡಿದಾಗ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಪ್ಲಾಸ್ಟಿಕ್ ಪೇಪರ್ ಮೇಲೆ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 1,850 ನಗದು ಹಣವನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 2-00 ಗಂಟೆಯಿಂದ 3-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು  ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಮದ್ಯಾಹ್ನ 3-30 ಗಂಟೆಗೆ ಠಾಣೆಗೆ ಬಂದಿರುತ್ತೆ. ಈ ಬಗ್ಗೆ  ಕಾನೂನು ಕ್ರಮ  ಜರುಗಿಸಲು ಸೂಚಿಸಿದ್ದನ್ನು ಪಡೆದು ಪರಿಶೀಲಿಸಿ ಸಂಜೆ:03:45 ಗಂಟೆಗೆ ಠಾಣಾ ಮೊ.ಸಂ:16/2019 ಕಲಂ:87ಕೆ.ಪಿ ಆಕ್ಟ್ ರೀತಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

12) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 17/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:09/03/2019 ರಂದು ರಾತ್ರಿ 7:00 ಗಂಟೆಗೆ ಪಿ.ಎಸ್.ಐ (ಕಾ.ಸು) ರವರು ಒಬ್ಬರು ಆರೋಪಿಗಳನ್ನು, ಮಾಲುಗಳನ್ನು ಮತ್ತು ಅಸಲು ದಾಳಿ ಮಹಜರ್ ಹಾಜರ್ಪಡಿಸಿ ನೀಡಿದ ಮೇಮೋವನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ  ದಿನಾಂಕ:09/03/2019  ರಂದು ಸಂಜೆ 4:00 ಗಂಟೆ ಸಮಯದಲ್ಲಿ ಯಾರೋ ಆಸಾಮಿಗಳು ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿಯ ಕಣಿವೆನಾರಾಯಣಪುರ ಗ್ರಾಮದ ತ್ರಿಬಲ್ ಎಸ್ ಕ್ರಶರ್ಸ್ ಸಮೀಪ ಇರುವ ಕೆ.ವಿ ಮೂರ್ತಿ ರವರ ಜಮೀನಿನಲ್ಲಿನ ಹಳಸಿನ ಮರದ ಕೆಳಗೆ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ನನಗೆ ಬಂದ ಬಾತ್ಮಿ ಮೇರೆಗೆ ನಾನು ದಾಳಿ ನಡೆಸಲು ಚಿಕ್ಕಬಳ್ಳಾಪುರ ಘನ 2ನೇ ಅಡಿಷಿನಲ್ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಅನುಮತಿ ಪಡೆದು ನಾನು ಮತ್ತು ಪಂಚರು ಹಾಗೂ ಪೊಲೀಸ್ ಸಿಬ್ಬಂದಿಗಳಾದ ಹೆಚ್.ಸಿ-234 ಶೇಖರ್, ಹೆಚ್.ಸಿ-230 ಕೆ.ಪಿ ನಾಗರಾಜ್, ಹೆಚ್.ಸಿ-206 ಮಂಜುನಾಥ, ಹೆಚ್.ಸಿ-94 ಪ್ರಕಾಶ್, ಪಿಸಿ-517 ಅಂಬರೀಷ, ಪಿಸಿ-06 ರಾಮಕೃಷ್ಣ, ರವರುಗಳೊಂದಿಗೆ ಸಂಜೆ 5:00 ಗಂಟೆಗೆ ತ್ರಿಬಲ್ ಎಸ್ ಕ್ರಶರ್ಸ್ನ ಬಳಿಗೆ ಹೊಗಿ ಮರೆಯಲ್ಲಿ ನಿಂತು ನೊಡಲಾಗಿ ಅಂದರ್ಗೆ 500/-ರೂ ಗಳೆಂದು, ಬಾಹರ್ 500/- ರೂ ಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದು ಕಂಡು ಬಂದಿದ್ದು ಅವರ ಮೇಲೆ ದಾಳಿ ಮಾಡಿದಾಗ ಸ್ಥಳದಲ್ಲಿ ಹಣ, ಮತ್ತು ಇಸ್ಪೀಟ್ ಎಳೆಗಳನ್ನು ಬಿಟ್ಟು ಸುಮಾರು ಜನರು ಓಡಿ ಪರಾರಿಯಾಗಲು ಪ್ರಯತ್ನಿಸಿದ ಆ ಪೈಕಿ ಒಬ್ಬ ಅಸಾಮಿಯನ್ನು ಹಿಡಿದು, ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ 1) ರವಿ ಕುಮಾರ್ ಬಿನ್ ನಾರಾಯಣಸ್ವಾಮಿ, 33 ವರ್ಷ, ಒಕ್ಕಲಿಗರು, ಟ್ರಾಕ್ಟರ್ ಡ್ರೈವರ್, ವಾಸ: ಕಣಿವೆ ನಾರಾಯಣಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು ಈ ಸ್ಥಳದಿಂದ ಓಡಿ ಹೋದ ಅಸಾಮಿಗಳ ಬಗ್ಗೆ ವಶಕ್ಕೆ ಪಡೆದುಕೊಂಡ ಅಸಾಮಿಯನ್ನು ಕೇಳಲಾಗಿ 1) ರಾಜ ಬಿನ್ ಮುನಿರಾಮಪ್ಪ, 25 ವರ್ಷ, ನಾಯಕರು, ಟ್ರಾಕ್ಟರ್ ಚಾಲಕ, ವಾಸ: ಕಣಿವೆ ನಾರಾಯಣಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 2) ಶ್ರೀನಿವಾಸ ಬಿನ್ ಲಕ್ಷ್ಮಯ್ಯ, 30 ವರ್ಷ, ನಾಯಕರು, ಟ್ರಾಕ್ಟರ್ ಚಾಲಕ, ಕಣಿವೆ ನಾರಾಯಣಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 3) ನರಸಿಂಹಮೂರ್ತಿ ಬಿನ್ ಗಾರ್ಡ ಮುನಿಯಪ್ಪ, 32 ವರ್ಷ, ನಾಯಕರು, ಕಣಿವೆ ನಾರಾಯಣಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4) ಶ್ರೀಧರ್ ಬಿನ್ ಅಶ್ವಥ್ಥಪ್ಪ, 30 ವರ್ಷ, ಒಕ್ಕಲಿಗರು, ಟ್ರಾಕ್ಟರ್ ಚಾಲಕ, ವಾಸ: ಕಣಿವೆ ನಾರಾಯಣಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 5) ವೆಂಕಟೇಶ್ ಬಿನ್ ಮುನಿನಾರಾಯಣಪ್ಪ, 30 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಕಣಿವೆ ನಾರಾಯಣಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 6) ಅಂಜನಿ ಬಿನ್ ಪೆದ್ದಣ್ಣ, 30 ವರ್ಷ, ನಾಯಕರು,  ಕುರಿ ವ್ಯಾಪಾರ ವೃತ್ತಿ, ವಾಸ: ಕಣಿವೆ ನಾರಾಯಣಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 7) ತಿಮ್ಮಪ್ಪ ಬಿನ್ ಚಿನ್ನಪ್ಪ, 33 ವರ್ಷ, ನಾಯಕರು, ಜಿರಾಯ್ತಿ, ವಾಸ: ಕಣಿವೆ ನಾರಾಯಣಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರುಗಳು ಸಹ ಅಂದರ್- ಬಾಹರ್ ಇಸ್ಪೀಟ್ ಜೂಜಾಟವಾಡಲು ಬಂದಿದ್ದು ದಾಳಿ ಮಾಡುವ ಸಮಯದಲ್ಲಿ ಅಂದರ್-ಬಾಹರ್ ಜೂಜಾಟದ ಸ್ಥಳದಿಂದ ಓಡಿ ಹೋಗಿರುತ್ತಾರೆಂದು ತಿಳಿಸಿದ, ಈ ಅಸಾಮಿಗಳು ಅಂದರ್-ಬಾಹರ್ ಜೂಜಾಟವಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದ ಮೇಲೆ ಇಸ್ಫೀಟ್ ಎಲೆಗಳುಗಳು, ಹಣವು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಪಂಚರ ಸಮಕ್ಷಮ ಇಸ್ಪೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳು ಇರುತ್ತವೆ, ಸದರಿ ಹಣವನ್ನು ಎಣಿಕೆ ಮಾಡಲಾಗಿ 1,200/- ರೂ ನಗದು ಹಣ ಇರುತ್ತೆ. ಸದರಿ 52 ಇಸ್ಪೀಟ್ ಎಲೆಗಳನ್ನು, 1,200/- ರೂ ನಗದು ಹಣವನ್ನು ಹಾಗೂ ಪ್ಲಾಸ್ಟಿಕ್ ಚೀಲವನ್ನು ಸಂಜೆ 5:10 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಸಂಜೆ 6:40 ಗಂಟೆಗೆ ಠಾಣೆಗೆ ಬಂದಿರುತ್ತೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

13) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 38/2019 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:10.03.2019 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣೆಯ ಹೆಚ್.ಸಿ. 18 ವೆಂಕಟೆಶಪ್ಪ ರವರು ಮಾಲು ಮತ್ತು ಒಬ್ಬ ಆಸಾಮಿಯನ್ನು ಹಾಜರುಪಡಿಸಿ ನೀಡಿದ ವರಧಿಯ ಸಾರಾಂಶವೇನೆಂದರೆ, ಠಾಣಾಧಿಕಾರಿಗಳು ದಿನಾಂಕ:09.03.2019 ರಂದು ರಾತ್ರಿ ಹೆಚ್.ಕ್ರಾಸ್ ಸಂಚಾರಿ ಕರ್ತವ್ಯಕ್ಕೆ ನೇಮಿಸಿದ್ದು,  ಅದರಂತೆ ಕರ್ತವ್ಯ ಮುಗಿಸಿಕೊಂಡು ದಿನಾಂಕ:10.02.2019 ರಂದು ವಾರದ ಬ್ರೀಪಿಂಗ್ ಕ್ಲಾಸ್ ಗೆ ಠಾಣೆಗೆ ಬರಲು ಬೆಳಿಗ್ಗೆ ಸುಮಾರು 9-30 ಗಂಟೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಆನೂರು ಗೇಟಿನಲ್ಲಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಒಬ್ಬ ಆಸಾಮಿ ಬಿಳಿ ಬಣ್ಣದ ಹ್ಯಾಂಡ್ ಕವರಿನಲ್ಲಿ ಏನನ್ನೋ ಹಿಡಿದುಕೊಂಡು ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಓಡುತ್ತಿದ್ದವನನ್ನು ಹಿಂಬಾಲಿಸಿ ಹಿಡಿದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಗುರ್ರಪ್ಪ ಬಿನ್ ಲೇಟ್ ತಿರುಮಳಪ್ಪ, 70 ವರ್ಷ, ಆದಿ ಕರ್ನಾಟಕ (ಎಸ್.ಸಿ) ವಾಸ ತುಮ್ಮನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಆತನ ಕೈಯಲ್ಲಿದ್ದ ಬಿಳಿ ಬಣ್ಣದ ಹ್ಯಾಂಡ್ ಕವರಿನಲ್ಲಿದ್ದ ಮಾಲನ್ನು ಪರಿಶೀಲಸಲಾಗಿ ಓಲ್ಡ್ ಟವರೆನ್ ವಿಸ್ಕಿ 180 ಎಂ.ಎಲ್. ನ 25 ಟೆಟ್ರಾ ಪಾಕೇಟ್ಗಳು ಇದ್ದು ಒಂದರ ಬೆಲೆ 74ರೂ 13 ಪೈಸೆ ಆಗಿದ್ದು, ಇವುಗಳ ಒಟ್ಟು ಬೆಲೆ 1853 ರೂ.25 ಪೈಸೆ ಆಗಿರುತ್ತೆ.  ಸದರಿ ಆಸಾಮಿಯನ್ನು ಮಧ್ಯಮಾರಾಟ ಮತ್ತು ಸಾಗಾಟ ಮಾಡಲು ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ.  ಸದರಿ ಮದ್ಯ ಪಾಕೇಟ್ ಗಳನ್ನು ಗುರ್ರಪ್ಪ ಬಿನ್ ಲೇಟ್ ತಿರುಮಳಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮಾರಾಟ ಮತ್ತು ಸಾಗಾಟ ಮಾಡುವುದಾಗಿ ಕಂಡು ಬಂದಿದರಿಂದ ಮದ್ಯದ ಪಾಕೇಟ್ ಗಳನ್ನು ಮತ್ತು ಸದರಿ ಆಸಾಮಿಯನ್ನು ವಶಕ್ಕೆ ಪಡೆದು ತಂದು ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರುಪಡಿಸಿ ನೀಡಿದ ವರಧಿಯ ಮೇರೆಗೆ ಠಾಣಾ ಮೊ.ಸಂ.38/2019 ಕಲಂ 32,34 ಕೆ.ಇ.ಆಕ್ಟ್ ರೀತ್ಯಾ ಕೇಸು ದಾಖಲಿಸಿರುತ್ತೇನೆ.

14) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 21/2019 ಕಲಂ. 87 ಕೆ.ಪಿ. ಆಕ್ಟ್ :-

     ಘನ ನ್ಯಾಯಾಲಯದಲ್ಲಿ ಪಿ.ಎಸ್.ಐ ಅವಿನಾಶ್, ಶಿಡ್ಲಘಟ್ಟ ನಗರ ಠಾಣೆ ಆದ ನಿವೇದಿಸಿಕೊಳ್ಳುವುದೇನೆಂದರೆ, ದಿನಾಂಕ:10-03-2019 ರಂದು ಮದ್ಯಾಹ್ನ ಸುಮಾರು 12-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಬಾತ್ಮೀದಾರರು ತನಗೆ ಪೋನ್ ಮುಖಾಂತರ ಮಾರುತಿ ನಗರದ ವಿಜಡಮ್ ಶಾಲೆಯ ಹಿಂಭಾಗ ಯಾರೋ ಕೆಲವರು ಗುಂಪು ಸೇರಿಕೊಂಡು ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ನೀಡಿದ್ದು, ಸದರಿಯವರ ಮೇಲೆ ದಾಳಿ ಮಾಡಲು  ಪಂಚಾಯ್ತಿದಾರರಾದ 1) ಮೌಲಾ ಬಿನ್ ಮಹಬೂಬ್ ಸಾಬ್,43 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ರಹಮತ್ನಗರ, ಶಿಡ್ಲಘಟ್ಟ 2) ಸಾಧಿಕ್ ಬಿನ್ ಮಸ್ತಾನ್ಸಾಬಿ, 25 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ರಹಮತ್ನಗರ, ಶಿಡ್ಲಘಟ್ಟ ರವರುಗಳನ್ನು ಬರಮಾಡಿಕೊಂಡು   ದಾಳಿ ಸಮಯದಲ್ಲಿ ಪಂಚರಾಗಿ ಸಹಕರಿಸಲು ತಿಳಿಸಿ ಇವರು ಮತ್ತು ಸಿಬ್ಬಂದಿಯವರಾದ ಪಿಸಿ 134 ಧನಂಜಯ್ ಕುಮಾರ್, ಪಿಸಿ 540 ಶಿವಕುಮಾರ್, ಪಿ.ಸಿ126 ವೆಂಕಟೇಶ, ಪಿ.ಸಿ.548 ರಾಜೇಶ ಮತ್ತು ಪಿ.ಸಿ.131 ರಾಜಪ್ಪ ರವರುಗಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನೋಡಲಾಗಿ ಯಾರೋ ಜನರು ವಿಜಡಮ್ ಶಾಲೆಯ ಹಿಂಭಾಗದಲ್ಲಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಅಸಾಮಿ 100/-ರೂ ಅಂದರ್  ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 200/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಅವರುಗಳ ಮೇಲೆ ದಾಳೆ ಮಾಡಲು ಹೋದಾಗ ಅವರುಗಳನ್ನು ನಮ್ಮಗಳನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ 05 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1) ಸಾದಿಕ್ಪಾಷ ಬಿನ್ ಸದರ್ಾರ್, 30 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ ವಾಸ 2ನೇ ಕಾಮರ್ಿಕನಗರ, ಶಿಡ್ಲಘಟ್ಟ 2) ಮಹಮದ್ ರಫೀಕ್ ಬಿನ್ ಖಾಸಿಂಸಾಬ್, 30 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ ವಾಸ 2ನೇ ಕಾಮರ್ಿಕನಗರ, ಶಿಡ್ಲಘಟ್ಟ 3)ಬಾಬಾ ಬಿನ್ ಹುಸೇನ್ಸಾಬ್,31 ವರ್ಷ, ಮುಸ್ಲಿಂ, ರೇಷ್ಮೆ ಕೆಲಸ ವಾಸ:ರಹಮತ್ನಗರ, ಶಿಡ್ಲಘಟ್ಟ 4) ರೋಷನ್ ಬಿನ್ ಹುಸ್ಮಾನ್ ಬೇಗ್, 22 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ ವಾಸ:ರಹಮತ್ ನಗರ,ಶಿಡ್ಲಘಟ್ಟ ಮತ್ತು 5) ಬಾಬಾಜಾನ್ ಬಿನ್ ಮಹಮದ್ ಪ್ಯಾರೇಜಾನ್, 36 ವರ್ಷ, ರೇಷ್ಮೆ ಕೆಲಸ ವಾಸ:ರಹಮತ್ ನಗರ, ಶಿಡ್ಲಘಟ್ಟ ಎಂದು ತಿಳಿಸಿದ್ದು ಇವರುಗಳು ಜೂಜಾಟಕ್ಕೆ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 3600-00 ರೂ ನಗದು ಹಣ  ಹಾಗೂ  ಜೂಜಾಟಕ್ಕೆ ಬಳಸಿ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ 52 ಇಸ್ಟೀಟ್ ಎಲೆಗಳು ಸಿಕ್ಕಿದ್ದು ಇವುಗಳನ್ನು ಮದ್ಯಾಹ್ನ 1-00 ರಿಂದ 1-30 ಗಂಟೆ ವರೆಗೆ ಅಮಾನತ್ತು ಪಡಿಸಿಕೊಂಡು ಠಾಣೆಗೆ 1-45 ಗಂಟೆಗೆ ವಾಪಸ್ಸು  ಬಂದು  ಸ್ವತಃ ಕೇಸು ದಾಖಲಿಸಿರುತ್ತೇನೆ.