ದಿನಾಂಕ : 10/02/2019ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ  ಪೊಲೀಸ್ ಠಾಣೆ ಮೊ.ಸಂ.23/2019 ಕಲಂ: 279-304(ಎ)  ಐ.ಪಿ.ಸಿ:-

     ದಿನಾಂಕ:09/02/2019 ರಂದು ಪಿರ್ಯಾದಿದಾರರಾದ ಶ್ರೀ ಕುಮಾರ್ ಬಿನ್ ಲೇಟ್ ಚನ್ನರಾಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಅಣ್ಣನಾದ ರಾಜಪ್ಪ ಬಿನ್ ಲೇಟ್ ಚನ್ನರಾಯಪ್ಪ, 48ವರ್ಷ, ನೇಯ್ಗೇ ಜನಾಂಗ, ಕಾರು ಚಾಲಕ ಕೊತ್ತೂರು ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಬೆಂಗಳೂರಿನಲ್ಲಿ ಕಾರು ಚಾಲನೆ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ದಿನಾಂಕ:09/02/2019 ರಂದು ಮದ್ಯಾಹ್ನ ಸುಮಾರು 03-15 ಗಂಟೆಗೆ ನಮ್ಮ ಗ್ರಾಮಕ್ಕೆ ಬರಲು ನನ್ನ ಅಣ್ಣನ ಬಾಬತ್ತು ಕೆ.ಎ-07, ಕ್ಯೂ-3497 ನೊಂದಣಿ ಸಂಖ್ಯೆಯ ಹಿರೋಹೋಂಡಾ ಸ್ಲ್ಪೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ-ಗೂಳೂರು ರಸ್ತೆಯಲ್ಲಿರುವ ನಲ್ಲಪ್ಪರೆಡ್ಡಿಪಲ್ಲಿ ಕೆರೆಯ ಬಳಿ ತಿರುವಿನಲ್ಲಿ ರಸ್ತೆಯ ಎಡಭಾಗದಲ್ಲಿ ತನ್ನ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ನಮ್ಮ ಗ್ರಾಮಕ್ಕೆ ಬರುತ್ತಿರುವಾಗ ಎದುರುಗಡೆ ಗೂಳೂರು ಕಡೆಯಿಂದ ಬಂದ ಕೆ.ಎ-05, ಎ.ಡಿ-6926 ನೊಂದಣಿ ಸಂಖ್ಯೆಯ ಟಾಟಾ ಇಂಡಿಕಾ ಕಾರ್ ಚಾಲಕ ತನ್ನ ಕಾರನ್ನು  ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಅಣ್ಣನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರ ವಾಹನ ಮತ್ತು ಕಾರು ಜಖಂಗೊಂಡು ನನ್ನ ಅಣ್ಣ ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು, ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುವ ವಿಚಾರವನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ನನ್ನ ಅಣ್ಣನ ಮೊಬೈಲ್ ನಿಂದ ನನಗೆ ಕರೆ ಮಾಡಿ ತಿಳಿಸಿದ್ದು, ನಾನು ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನನ್ನ ಅಣ್ಣನ ಮೃತ ದೇಹವನ್ನು 108 ಅಂಬ್ಯೂಲೇನ್ಸ್ ನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದು, ಈ ಅಪಘಾತಕ್ಕೆ ಕಾರಣನಾದ ಕೆ.ಎ-05, ಎ.ಡಿ-6926 ನೊಂದಣಿ ಸಂಖ್ಯೆಯ ಟಾಟಾ ಇಂಡಿಕಾ ಕಾರ್ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

2) ಚಿಕ್ಕಬಳ್ಳಾಪುರ ಸಂಚಾರಿ   ಪೊಲೀಸ್ ಠಾಣೆ ಮೊ.ಸಂ.14/2019 ಕಲಂ: 279-304(ಎ)  ಐ.ಪಿ.ಸಿ:-

     ದಿನಾಂಕ:-10/02/2019 ರಂದು ಬೆಳಿಗ್ಗೆ 08:00 ಗಂಟೆಗೆ ಪಿರ್ಯಾದಿ ಶ್ರೀ.ಮೂರ್ತಿ ಕೆ.ಎಂ ಬಿನ್ ಮುನಿಯಪ್ಪ 35 ವರ್ಷ, ಪ.ಜಾತಿ, ಕೂಲಿ ಕೆಲಸ, ಕಣಿತಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ಟೈಪ್ ಮಾಡಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-30/01/2019 ರಂದು ಪಿರ್ಯಾದಿ ಭಾವಮೈದ ಶ್ರೀ.ವೆಂಕಟೇಶ ಬಿನ್ ಲೇಟ್ ಸಲ್ಲಪ್ಪ 30 ವರ್ಷ, ಪ.ಜಾತಿ, ಗಾರೆ ಕೆಲಸ, ಕಣಿತಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಗಾರೆ ಕೆಲಸಕ್ಕೆ ಚಿಕ್ಕಬಳ್ಳಾಪುರ ನಗರಕ್ಕೆ ಬಂದು ಕೆಲಸವನ್ನು ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗಲು ತನ್ನ ಹೊಸ ನೊಂದಣಿ ಸಂಖ್ಯೆ ಇಲ್ಲದ ಬಜಾಜ್ ಸಿಟಿ 100 ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಎಚ್-7 ಬಿ.ಬಿ ರಸ್ತೆಯ ಈಸರ್ ಪೆಟ್ರೋಲ್ ಬಂಕ್ ಮುಂಭಾಗದ ರಸ್ತೆಯಲ್ಲಿ ರಾತ್ರಿ 8:00 ಗಂಟೆಯ ಸಮಯದಲ್ಲಿ ಹೋಗುತ್ತಿರುವಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದಿದ್ದು ಬಿದ್ದ ಪರಿಣಾಮ ತಲೆಗೆ, ಕೈ-ಕಾಲುಗಳಿಗೆ ಗಾಯಗಳಾಗಿದ್ದು ಅಲ್ಲಿನ ಸ್ಥಳೀಯರು ಉಪಚರಿಸಿ ಅಲ್ಲಿಗೆ ಬಂದ ಗಾಯಾಳುವಿನ ಮಾವ ಪ್ರಕಾಶ್ ಬಿನ್ ಸಿದ್ದಪ್ಪ 36 ವರ್ಷ, ಅಗಲಗುರ್ಕಿ ರವರು ರಸ್ತೆಯಲ್ಲಿ ಬಂದ ಯಾವುದೇ ಆಟೋದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ನಂತರ ವೈಧ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದ್ದು ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:-10/02/2019 ರಂದು ರಾತ್ರಿ 12:10 ಗಂಟೆಯ ಸಮಯದಲ್ಲಿ ಮೃತಪಟ್ಟಿದ್ದು ಸದರಿ ಅಪಘಾತಕ್ಕೆ ಸದರಿ ದ್ವಿಚಕ್ರವಾಹನ ಸವಾರ ವೆಂಕಟೇಶ್ ರವರೇ ಕಾರಣರಾಗಿರುತ್ತಾರೆ. ಸದರಿ ದ್ವಿಚಕ್ರವಾಹನ ಮೇಲೆ ಈ ದಿನ ತಡವಾಗಿ ಬಂದು ದಿನಾಂಕ:-10/02/2018 ರಂದು ಬೆಳಿಗ್ಗೆ 08:00 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

3) ಚಿಂತಾಮಣಿ ಗ್ರಾಮಾಂತರ   ಪೊಲೀಸ್ ಠಾಣೆ ಮೊ.ಸಂ.26/2019 ಕಲಂ: 324-504-506  ಐ.ಪಿ.ಸಿ:-

     ದಿನಾಂಕ:09/02/2019 ರಂದು ಸಂಜೆ 6-30 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ  ಗಾಯಾಳು ಮಂಜುನಾಥ ಬಿನ್ ಚಿಕ್ಕ ನಾರಾಯಣಪ್ಪ, 34 ವರ್ಷ, ನಾಯಕರು, ಪಾಲೇಪಲ್ಲಿ ಗ್ರಾಮ ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ತಮ್ಮ ತಂದೆಗೆ 3 ಜನ ಗಂಡು ಮಕ್ಕಳಿದ್ದು 1ನೇ ಮುನಿರಾಜು, 2ನೇ ಕೃಷ್ಣಮೂರ್ತಿ, 3ನೇ ತಾನು ಆಗಿದ್ದು ತಾವು 3 ಜನರು ಬೇರೆ ಬೇರೆಯಾಗಿ ವಾಸವಾಗಿದ್ದು ತಮ್ಮ ಪಿತ್ರಾರ್ಜಿತವಾದ ಆಸ್ತಿಯಲ್ಲಿ ತಮ್ಮ ತಂದೆಗೆ 3 ಎಕರೆ ಜಮೀನು ಭಾಗವಾಗಿ ಬಂದಿದ್ದು ಈ 3 ಎಕರೆ ಜಮೀನನ್ನು ತಾವು 3 ಜನ  ಅಣ್ಣ-ತಮ್ಮಂದಿರು ತಲಾ 1 ಎಕರೆಯಾಗಿ ವಿಭಾಗ ಮಾಡಿಕೊಂಡು ಜಿರಾಯ್ತಿ ಮಾಡಿಕೊಂಡಿರುತ್ತೇವೆ ಈ 3 ಎಕರೆಗೂ ಸೇರಿ ಒಂದೇ ಒಂದು ಕೊಳವೆ ಬಾವಿಯಿದ್ದು ತಾವು 3 ಜನ ಅಣ್ಣ-ತಮ್ಮಂದಿರು ಸರದಿ ಪ್ರಕಾರ ಒಂದೊಂದು ದಿನ ಬೆಳೆಗಳಿಗೆ ನೀರನ್ನು ಹಾಯಿಸಿಕೊಳ್ಳುತ್ತಿರುತ್ತೇವೆ ಈ ದಿನ ದಿನಾಂಕ:09/02/2019 ರಂದು ನೀರು ಹಾಯಿಸಿಕೊಳ್ಳುವ ಸರದಿ ನನ್ನದ್ದಾಗಿದ್ದು ಅದರಂತೆ ತಾನು ಈ ದಿನ ಬೆಳಿಗ್ಗೆ 9:00 ಗಂಟೆ ಸಮಯದಲ್ಲಿ ತಾನು ತಮ್ಮ ಜಮೀನಿನ ಬಳಿ ಹೋದಾಗ ತನ್ನ ಅಣ್ಣನಾದ ಕೃಷ್ಣಮೂರ್ತಿ ರವರು ಕೊಳವೆ ಬಾವಿ ನೀರು ತನ್ನ ಜಮೀನಿಗೆ ಹಾಯಿಸಿಕೊಳ್ಳುತ್ತಿದ್ದನು. ಆಗ ತಾನು ತನ್ನ ಅಣ್ಣನಿಗೆ ತನ್ನ ಸರದಿ ಇರುವಾಗ ನೀನು ಯಾಕೇ ನೀರು ಹಾಯಿಸಿಕೊಳ್ಳುತ್ತಿದ್ದಿಯಾ  ಎಂದು ಪ್ಯೂಸ್ಗಳನ್ನು ಕಿತ್ತು ಹಾಕಿದಾಗ ತನ್ನ ಅಣ್ಣ ಕೃಷ್ಣಮೂರ್ತಿ ರವರು ಜಮೀನಿನಲ್ಲಿ ಬಿದ್ದಿದ ದೊಣ್ಣೆಯನ್ನು ಎತ್ತಿಕೊಂಡು ಏಕಾಏಕಿ ತನ್ನ ಬಳಿ ಬಂದು ತನ್ನ ತಲೆಗೆ ಹಾಗೂ ತನ್ನ ಬಲಕೈ ಮುಷ್ಟಿಗೆ ಹೊಡೆದು ರಕ್ತ ಗಾತ ಪಡಿಸಿ ಕೆಟ್ಟ ಮಾತುಗಳಿಂದ ತನಗೆ ಬೈದಾಡಿಕೊಂಡು ನಿಂತಿದ್ದಾಗ ತಾನು ಜೋರಾಗಿ ಕೂಗಿಕೊಂಡು ಕೆಳಗೆ ಬಿದ್ದು ಹೋದಾಗ ಇದನ್ನು ಕಂಡ ತಮ್ಮ ಪಕ್ಕದ ಜಮೀನಿನವರಾದ ನಾರಾಯಣಸ್ವಾಮಿ ಬಿನ್ ರಾಮಣ್ಣ, ತಿಮ್ಮಣ್ಣ ಬಿನ್ ಚಿಕ್ಕ ನರಸಪ್ಪ ರವರು ಸ್ಥಳಕ್ಕೆ ಬಂದು ತನ್ನ ಅಣ್ಣನ ಕೈಯಲ್ಲಿದ್ದ ದೊಣ್ಣೆಯನ್ನು ಕಿತ್ತುಕೊಂಡು ಜಗಳವನ್ನು ಬಿಡಿಸಿದಾಗ ತನ್ನ ಅಣ್ಣ ತನ್ನನ್ನು ಕುರಿತು ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾನೆ ನಂತರ ವಿಷಯ ತಿಳಿದು ಜಮೀನಿನ ಬಳಿ ತನ್ನ ಹೆಂಡತಿ ಶಾರದಮ್ಮ ರವರು ಗಾಯಾಳುವಾದ ತನ್ನನ್ನು ಯಾವುದೋ ಒಂದು ಆಟೋದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾಳೆ ಆದ ಕಾರಣ ಮೇಲ್ಕಂಡ ತನ್ನ ಅಣ್ಣನಾದ ಕೃಷ್ಣಮೂರ್ತಿರವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರುತ್ತಾನೆ.

4) ಚಿಂತಾಮಣಿ ನಗರ   ಪೊಲೀಸ್ ಠಾಣೆ ಮೊ.ಸಂ.18/2019 ಕಲಂ: 87 ಕೆ.ಪಿ. ಆಕ್ಟ್:-

     ದಿನಾಂಕ: 09/02/2019 ರಂದು  ರಂದು 6-00 ಗಂಟೆಗೆ  ಪೊಲೀಸ್ ಠಾಣೆಯ ಪೊಲೀಸ್ ಸಹಾಯಕ ಸಬ್ ಇನ್ಸ ಪೆಕ್ಟರ್ ಸುಬ್ರಮಣಿ,ವಿ  ರವರು ಮಾಲು ಪಂಚನಾಮೆ ಹಾಗೂ ಆಸಾಮಿಗಳೊಂದಿಗೆ ಠಾಣೇಗೆ ಹಾಜರಾಗಿನೀಡಿದ ದೂರಿನ ಸಾರಾಂಶವೆನೇಂದರೆ  ತನಗೆ ಸಂಜೆ 4-30 ಗಂಟೆಗೆ  ಚಿಂತಾಮಣಿ ನಗರದ ಶಾಂತಿ ನಗರದ ಕೋನಪ್ಪ ರವರ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿರುವ ಅಂದರ್ ಬಾಹರ್ ಜೂಜಾಟ ಬಂದ ಖಚಿತ ಮಾಹಿತಿಯಂತೆ  ದಾಳಿ ಮಾಡಲು  ಪಂಚರನ್ನು ಹಾಗೂ ಸಿಬ್ಬಂದಿ ಯವರಾದ  ಹೆಚ್,ಸಿ 124,126,  ಹಾಗೂ ಪಿ.ಸಿ 544,24,78 ರವರೊಂದಿಗೆ ಠಾಣೆಯ  ಜೀಫ್ ನಂ: ಕೆಎ 07 ಜಿ 158 ವಾಹನದಲ್ಲಿ ಗಜಾನನ ವೃತ್ತದ ಮಾರ್ಗವಾಗಿ ಎನ್,ಎನ್,ಟಿ ರಸ್ತೆಯ ಮೂಲಕ ಶಾಂತಿ ನಗರದ ಕೋನಪ್ಪ ರವರ ಮನೆಯ ಮುಂದೆ ಜೀಫನ್ನ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಮನೆಯ ಹಿಂಭಾಗದಖಾಲಿ ಜಾಗದಲ್ಲಿ ಯಾರೋ ಕೆಲವು ವ್ಯೆಕ್ತಿಗಳು ಗುಂಪು ಸೇರಿಕೊಂಡು  ಕುಳಿತುಕೊಂಡು ಇಸ್ಪೇಟ್ ಎಲೆಗಳನ್ನು ನ್ಯೂಸ್ ಪೇಪರ್  ಮೇಲೆ ಹಾಕಿಕೊಂಡು ಅಂದರ್ ಕಡೆ 100ರೂ ಬಾಹರ್ ಕಡೆ 100 ರೂ ಎಂದು ಕೂಗುತ್ತಾ ಜೂಜಾಟ ವಾಡುತ್ತಿದ್ದವರನ್ನು  ಪೊಲೀಸ್ ಸಿಬ್ಬಂದಿಯವರು ದಾಳಿ ಮಾಡಿ ಹಿಡಿದು  ಹೆಸರು  ವಿಳಾಸ ವಿಚಾರಿಸಲಾಗಿ  01) ಧರ್ಮ ಬಿನ್ ಸರ್ವಣ, 37 ವರ್ಷ, ಎಸ್.ಸಿ ಜನಾಂಗ, ಕೂಲಿಕೆಲಸ ವಾಸ:ಶಾಂತಿ ನಗರ, ಚಿಂತಾಮಣಿ ನಗರ, 02) ) ಕುಮಾರ್ ಬಿನ್ ಮುನಿಸ್ವಾಮಿ, 25 ವರ್ಷ, ಎಸ್.ಸಿ ಜನಾಂಗ, ಕೂಲಿಕೆಲಸ ವಾಸ:ಶಾಂತಿ ನಗರ, ಚಿಂತಾಮಣಿ ನಗರ,03) ) ಪಿಚ್ಚ ಬಿನ್ ಚಕ್ರಪಾಣಿ , 59 ವರ್ಷ, ಎಸ್.ಸಿ ಜನಾಂಗ, ಕೂಲಿಕೆಲಸ ವಾಸ:ಶಾಂತಿ ನಗರ, ಚಿಂತಾಮಣಿ ನಗರ,04) ) ರಮೇಶ್ ಬಿನ್ ನರಸಿಂಹಪ್ಪ , 29 ವರ್ಷ, ಎಸ್.ಸಿ ಜನಾಂಗ, ಗಾರೆ ಕೆಲಸ ವಾಸ:ಶಾಂತಿ ನಗರ, ಚಿಂತಾಮಣಿ ನಗರ,05) ) ಶಂಕರ ಬಿನ್ ನಾರಾಯಣಪ್ಪ, 29 ವರ್ಷ, ಎಸ್.ಸಿ ಜನಾಂಗ, ಕೂಲಿಕೆಲಸ ವಾಸ:ಶಾಂತಿ ನಗರ, ಚಿಂತಾಮಣಿ ನಗರ, 06) ದಾದಾಪೀರ್ ಬಿನ್ ನಿಸಾರ್ , 29 ವರ್ಷ, ಮೆಕಾನಿಕ್ ಕೆಲಸ ವಾಸ:ಶಾಂತಿ ನಗರ ಚಿಂತಾಮಣಿ ನಗರ, ಎಂದು ತಿಳಿದು ಬಂದಿತು. ಅವರು ಜೂಜಾಟಕ್ಕೆ ಇಟ್ಟಿದ್ದ 1190-00ರೂ  ನಗದು ಹಣ , 52 ಇಸ್ಪೇಟ್ ಎಲೆ,ಒಂದು ನ್ಯೂಸ್ ಪೇಪರ್ ನ್ನು ಅಮಾನತ್ತು ಪಡಿಸಿಕೊಂಡು ಪಂಚನಾಮೆ ಹಾಗೂ ಆರೋಪಿಗಳೊಂದಿಗೆ ಠಾಣೆಗೆ ಸಂಜೆ 6-00 ಗಂಟೆಗೆ ವಾಪಸ್ಸಾಗಿ ಠಾಣಾಧಿಕಾರಿಗಳಿಗೆ ನೀಡಿದ  ಪಂಚನಾಮೆಯಂತೆ ಠಾಣೆಯ ಮೊ.ಸಂಖ್ಯೆ:18/2019  ಕಲಂ: 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

5) ಚಿಂತಾಮಣಿ ನಗರ   ಪೊಲೀಸ್ ಠಾಣೆ ಮೊ.ಸಂ.19/2019 ಕಲಂ: 307-324-504-506(ಬಿ) ಐ.ಪಿ.ಸಿ:-

     ದಿನಾಂಕ:09/02/2019 ರಂದು ರಾತ್ರಿ 11-30  ಗಂಟೆಗೆ  ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋಪಡೆದು ಗಾಯಾಳುವಾದ ಸೈಯದ್  ಆಸೀಪ್ ಬಿನ್  ಸೈಯದ್  ರಫೀಕ್  25 ವರ್ಷ,  ಮುಸ್ಲಿಂ ಜನಾಂಗ,  ವ್ಯಾಪಾರ, ವಾಸ: ಟಿಪ್ಪು ನಗರ ರವರ ಹೇಳಿಕೆ ಪಡೆದಿದ್ದರ ಸಾರಾಂಶವೇನೆಂದರೆ  ನಮ್ಮ ತಂದೆ  ತಾಯಿಗೆ ನಾವು ಇಬ್ಬರು ಮಕ್ಕಳು, ಒಂದನೇ  ನಾನು 2 ನೇ ಯವರನು  ಮುನ್ಸೀಪ್ ರವರಾಗಿರುತ್ತಾರೆ.   ದಿನಾಂಕ: 09/02/2019 ರಂದು ರಾತ್ರಿ  8-00 ಗಂಟೆ ಸಮಯದಲ್ಲಿ ನಮ್ಮ ಏರಿಯಾದ  ಮಸೀದಿ ಬಳಿಯ ಕಬಾಬ್ ಅಂಗಡಿಯ ಬಳಿ ನನ್ನ ತಮ್ಮ ಬೀಡಿ ಸೇದುತ್ತಿದ್ದಾಗ ನಮ್ಮ ಏರಿಯಾದ ವಾಸಿ ಚಾಂದ್ ಪೀರ್ ರವರ ಮಗನಾದ ಜುಬೇರ್ 28 ವರ್ಷ, ರವರು ನನ್ನ ಮುಂದೇಯೇ ಬೀಡಿ ಸೇದುತ್ತೀಯ ಎಂದು ನನ್ನ ಮೇಲೆ ಗಲಾಟೆ ಮಾಡಿದ ಎಂದು ತಿಳಿಸಿದ ನಂತರ ಇದೇ  ದಿನ ರಾತ್ರಿ 9-00 ಗಂಟೆಯ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ನಮ್ಮ ಮನೆಯ ಆಚೆ ಗಲಾಟೆ ಕೇಳಿಸಿತು.  ನಾನು ಮನೆಯಿಂದ ಆಚೆ ಬಂದು ನೋಡಲಾಗಿ  ಮೇಲ್ಕಂಡ ಜುಬೇರ್ ನನ್ನ ತಮ್ಮನನ್ನು ಬೇವರ್ಸಿ ನನ್ನ ಮಗನೇ ಆಗಲೇ ಕಬಾಬ್ ಅಂಗಡಿಯ ಬಳಿ  ನನ್ನ ಮುಂದೆಯೇ ಬೀಡಿ ಸೇದುತ್ತಿಯ, ನಮ್ಮ ಏರಿಯಾದಲ್ಲಿ ನಾನೇ ಸುಪ್ರೀಂ ನನ್ನ ಮುಂದೆಯೇ ಗಾಂಚಲಿನ ಎಂದು ಆತನ ಕೈಯಲ್ಲಿದ್ದ ಚಾಕುವನ್ನು ತೋರಿಸಿ  ಬೆದರಿಕೆ ಹಾಕಿದ. ಅಲ್ಲೆ ಇದ್ದ ನಾನು  ಏ ಯಾಕಪ್ಪ  ನನ್ನ ತಮ್ಮನ ಮೇಲೆ  ಗಲಾಟೆ ಮಾಡುತ್ತೀಯ ಎನ್ನು ವಷ್ಟರಲ್ಲಿ  ಏ ನನ್ನ ಮಗನೇ ನಿನ್ನ ತಮ್ಮನಿಗೆ  ಸಪೋರ್ಟ್  ಮಾಡುತ್ತೀಯ ಎಂದು ನನ್ನನ್ನು ಸಾಯಿಸುವ ಉದ್ದೇಶದಿಂದ  ಆತನ ಕೈಯಲ್ಲಿದ್ದ ಚಾಕುವಿನಿಂದ  ನನ್ನ ಎಡಬಾಗದ ಕುತ್ತಿಗೆಗೆ  ಹಾಕಿ ಬಲ ಬಾಗದ ಎದೆಯಬಾಗದ ವರೆವಿಗೂ ಕೊಯ್ದ  ಮತ್ತೆ ನನ್ನ ಕುತ್ತಿಗೆಯ ಎಡ ಬಾಗಕ್ಕೆ ಕೊಯ್ದು  ರಕ್ತಗಾಯಮಾಡಿರುತ್ತಾನೆ.  ಆತನಿಂದ ಬಿಡಿಸಲು ಬಂದ ನನ್ನ ತಾಯಿ ನುಸರತ್ ರವರಿಗೆ  ಕೈಯಿಂದ ಬಲಬಾಗದ ಭುಜಕ್ಕೆ ಗುದ್ದಿ  ಮೂಗೇಟುಂಟುಮಾಡಿರುತ್ತಾನೆ. ಅಷ್ಟರಲ್ಲಿ ಅಲ್ಲೆ ಇದ್ದ ನಮ್ಮ ಏರಿಯಾದ ವಾಸಿಗಳಾದ ಜಮೀರ್,  ಆಸೀಪ್ ರವರು ಆತನಿಂದ ಬಿಡಿಸಿರುತ್ತಾರೆ. ಜುಬೇರ್ ಚಾಕುವನ್ನು ಅಲ್ಲಿಯೇ ಬಿಸಾಕಿ ಹೊರಟು ಹೋಗಿರುತ್ತಾನೆ. ನಂತರ ಚಿಕಿತ್ಸೆಗಾಗಿ  ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ  ದಾಖಲುಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡ ಜುಬೇರ್ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

6) ಗುಡಿಬಂಡೆ  ಪೊಲೀಸ್ ಠಾಣೆ ಮೊ.ಸಂ.20/2019 ಕಲಂ: 78(ಸಿ)  ಕೆ.ಪಿ. ಆಕ್ಟ್:-

     ದಿನಾಂಕ:09-02-2019 ರಂದು 19-00 ಘಂಟೆಗೆ ಘನ ನ್ಯಾಯಾಲಯದಿಂದ ಅನುಮತಿ ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ:09/02/2019 ರಂದು ಮದ್ಯಾನ್ಹ:3-30 ಘಂಟೆಗೆ ಪಿರ್ಯಾದುದಾರರಾದ ಶ್ರೀ.ನಾರಾಯಣಸ್ವಾಮಿ, CHC-68  ರವರು ಮಾಲು & ಆರೋಪಿತರ ಸಮೇತ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:09-02-2019 ರಂದು ತಾನು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ತನಗೆ ಗುಡಿಬಂಡೆ ಪೊಲೀಸ್ ಠಾಣಾ ಸರಹದ್ದಿನ ಚೌಟಕುಂಟಹಳ್ಳಿ ಗ್ರಾಮದ ಶ್ರೀ.ಮುತ್ಯಾಲಮ್ಮ ದೇವಸ್ಥಾನದ ಬಳಿ ಕೆಲವು ವ್ಯಕ್ತಿಗಳು ಮಟ್ಕಾ ಚೀಟಿಗಳನ್ನು ಬರೆದು ಹಣವನ್ನು ಸಂಗ್ರಹಣೆ ಮಾಡುತ್ತಿದ್ದಾರೆಂದು ಬಂದ ಖಚಿತ ಭಾತ್ಮೀಯ ಮೇರೆಗೆ ವಿಚಾರವನ್ನು ತುರ್ತು ಕೆಲಸದ ಮೇಲೆ ಬಾಗೇಪಲ್ಲಿಗೆ ಹೋಗಿದ್ದ ಮಾನ್ಯ DYSP ಸಾಹೇಬರಿಗೆ  ವಿಚಾರ  ತಿಳಿಸಿದ್ದು, DYSP ಸಾಹೇಬರು  ದಾಳಿ ಮಾಡಲ ಸೂಚಿಸಿದ್ದು, ಅದರಂತೆ ಪಿರ್ಯಾದುದಾರರು SDPO ಕಚೇರಿಯ ಸಿಬ್ಬಂದಿಯಾದ ಪಿಸಿ-339, ಪಿಸಿ-355 ಮತ್ತು ಎ.ಹೆಚ್.ಸಿ-18  ರವರೊಂದಿಗೆ ಬೆಳಿಗ್ಗೆ 11-00 ಘಂಟೆಗೆ ಕಚೇರಿಯಿಂದ ಹೊರಟು ಗುಡಿಬಂಡೆ ಪೊಲೀಸ್ ಠಾಣಾ ಸರಹದ್ದಿನ ಚೌಟಕುಂಟಹಳ್ಳಿ ಗ್ರಾಮದ ಶ್ರೀ.ಮುತ್ಯಾಲಮ್ಮ ದೇವಾಲಯ ಸಮೀಪ ಇರುವ ಒಂದು ಮನೆಯ ಬಳಿಗೆ ಮದ್ಯಾಹ್ನ ಸುಮಾರು 1-00 ಘಂಟೆಗೆ ಹೋಗಿ ಮರೆಯಲ್ಲಿ ನಿಂತು ವಾಚ್ ಮಾಡುತ್ತಿದ್ದಾಗ ಮದ್ಯಾಹ್ನ ಸುಮಾರು 1-15 ಘಂಟೆಯಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಇಬ್ಬರು ಆಸಾಮಿಗಳು ಕುಳಿತುಕೊಂಡು ಮಟ್ಕಾ ಚಿಟಿಗಳನ್ನು ಬರೆಯುತ್ತಿದ್ದು, ಇನ್ನು ಕೆಲವರು ನಿಂತು 1 ರೂಗೆ 70 ರೂ ಕೊಡುವುದಾಗಿ ತಿಳಿಸಿ ಅವರಿಗೆ ಪುಸಲಾಯಿಸಿ ಹಣದ ಆಮಿಷವನ್ನು ತೋರಿಸುತ್ತಿದ್ದು, ಕೂಡಲೇ ಅವರನ್ನು ಸುತ್ತಿವರೆದು ಆ ಪೈಕಿ ಮಟ್ಕಾ ಚೀಟಿಗಳನ್ನು ಬರೆಯುತ್ತಿದ್ದ 4 ಜನ ಆಸಾಮಿಗಳನ್ನು ಹಿಡಿದುಕೊಂಡು, ಹೆಸರು & ವಿಳಾಸ ಕೇಳಿ ತಿಳಿಯಲಾಗಿ, 1)ಅಶ್ವತ್ಥಪ್ಪ  @ ಕೋಡಿ ಬಿನ್ ಲೇಟ್ ಪೆದ್ದನ್ನ, 40 ವರ್ಷ, ಕೋಳಿ ವ್ಯಾಪಾರ, ನಾಯಕರು, ವಾಟದ ಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆತನ ಬಳಿಯಿದ್ದ 1 ಕಾರ್ಬನ್ K9 ಕೀಪ್ಯಾಡ್ ಸೆಟ್ ಮೊಬೈಲ್ ಹಾಗೂ ಆತನ ಬಳಿಯಿದ್ದ 2270/- ರೂ ನಗದನ್ನು ವಶಕ್ಕೆ ಪಡೆದುಕೊಂಡಿರುವುದಾಗಿ 2)ಮಹೇಶ್ ಬಿನ್ ನಾರಾಯಣಪ್ಪ , 27 ವರ್ಷ, ಬಲಜಿಗರು, ಕಾರು ಚಾಲಕ, ಸತ್ಯಸಾಯಿ ನಗರ, ಬಾಗೇಪಲ್ಲಿ ಟೌನ್  9014664258 ಎಂದು ತಿಳಿಸಿದ್ದು, ಆತನ ಬಳಿಯಿದ್ದ 1 ಕಾರ್ಬನ್ K9 ಕೀಪ್ಯಾಡ್ ಸೆಟ್ ಮೊಬೈಲ್, 1 ಬಾಲ್ ಪೆನ್, 1 ಮಟ್ಕಾ ಚೀಟಿ,1 ಮಟ್ಕಾ ಚೀಟಿ ಬರೆಯುವ ಪುಸ್ತಕ ಇದ್ದು, ಆತನ ಬಳಿ 1980/- ರೂಗಳು, 1 VIVO ಮೊಬೈಲ್ ಸೆಟ್ ನ್ನು ವಶಕ್ಕೆ ಪಡೆದುಕೊಂಡಿರುವುದಾಗಿ 3) ನರೇಶ ಬಿನ್ ನರಸಿಂಹಪ್ಪ, 35 ವರ್ಷ, ಆದಿಕರ್ನಾಟಕ ಜನಾಂಗ, ವಾಟದ ಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 9148734653 ಎಂದು ತಿಳಿಸಿದ್ದು, ಆತನ ಬಳಿಯಿದ್ದ 1 ಪೆನ್ನು, 1 ಮಟ್ಕಾ ಚೀಟಿ, 1 ಕಾರ್ಬನ್ K9 ಕೀಪ್ಯಾಡ್ ಸೆಟ್ ಮೊಬೈಲ್ ಹಾಗೂ ಆತನ ಬಳಿಯಿದ್ದ 720/- ರೂ ನಗದನ್ನು ವಶಕ್ಕೆ ಪಡೆದುಕೊಂಡಿರುವುದಾಗಿ 4) ಮೂರ್ತಿ ಬಿನ್ ನಾಗಪ್ಪ, 28 ವರ್ಷ, ಉಪ್ಪಾರರು, ಕುಡುಮಲಕುಂಟೆ ಗ್ರಾಮ, ಗೌರಿಬಿದನೂರು ತಾಲ್ಲೂಕು 9490495213 ಎಂದು ತಿಳಿಸಿದ್ದು, ಆತನ ಬಳಿಯಿದ್ದ 1 ಪೆನ್ನು, 1 ಮಟ್ಕಾ ಚೀಟಿ, 1 ಕಾರ್ಬನ್ K9 ಕೀಪ್ಯಾಡ್ ಸೆಟ್ ಮೊಬೈಲ್ ಹಾಗೂ ಆತನ ಬಳಿಯಿದ್ದ 160/- ರೂ ನಗದನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಮೇಲ್ಕಂಡ 4 ಜನ ಆಸಾಮಿಗಳನ್ನು ಮತ್ತು ಅವರ ಬಳಿಯಿದ್ದ 5 ಮೊಬೈಲ್ ಮತ್ತು ಒಟ್ಟು 5130 ರೂ ಹಣವನ್ನು ವಶಕ್ಕೆ ಪಡೆದಿದ್ದು, ಉಳಿದವರು ಓಡಿ ಹೋಗಿದ್ದು,  ಮೂಂದಿನ ಕಾನೂನು ಕ್ರಮ ಜರುಗಿಸಲು ಕೋರಿ.ನೀಡಿದ ವರದಿಯನ್ನು ಸ್ವೀಕರಿಸಿ ಠಾಣಾ ಎನ್.ಸಿ.ಆರ್.ನಂ:36/2019 ರಂತೆ ದಾಖಲಿಸಿಕೊಂಡು ಪ್ರಕರಣವನ್ನು ದಾಖಲಿಸಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು  ಈ ದಿನ ದಿನಾಂಕ:09/02/2019 ರಂದು 19-00 ಘಂಟೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

7) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.18/2019 ಕಲಂ: 323-324-504 ರೆ/ವಿ 34 ಐ.ಪಿ.ಸಿ:-

     ದಿನಾಂಕ: 09-02-2019 ರಂದು ಮದ್ಯಾಹ್ನ 1.50 ಗಂಟೆಗೆ ಫಿರ್ಯಾದಿದಾರರಾದ ಮುನಿಶಾಮಪ್ಪ ಬಿನ್ ಲೇಟ್ ದೊಡ್ಡನಂಜಪ್ಪ,     ಚಿಂತಡಪಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ಪಕ್ಕದ ಖಾಲಿ ಸೈಟ್ ನಂ. 41 ರ ಖಾಲಿ ಜಾಗದಲ್ಲಿ ಮುನಿರಾಜಪ್ಪ ರವರು ತಿಪ್ಪೆಯನ್ನು ಹಾಕಿಕೊಂಡಿದ್ದು, ನಾವು ಅವರ ಬಾಬತ್ತು ಖಾಲಿ ಜಮೀನಿನಲ್ಲಿ ರೇಷ್ಮೆ ಕಡ್ಡಿ ಮತ್ತು ತಿಪ್ಪೆಯನ್ನು ಹಾಕಿಕೊಂಡಿರುತ್ತೇವೆ. ಈ ವಿಚಾರದಲ್ಲಿ ನಾವು ನಮ್ಮ ಜಾಗದಲ್ಲಿ ನೀವು ಹಾಕಿರುವ ತಿಪ್ಪೆಯನ್ನು ಖಾಲಿ ಮಾಡಿದ ನಂತರ ನಾನು ನಿಮ್ಮ ಜಾಗದಲ್ಲಿ ಹಾಕಿರುವ ತಿಪ್ಪೆಯನ್ನು ಖಾಲಿ ಮಾಡುವುದಾಗಿ ಹೇಳಿದ್ದು ಈ ವಿಚಾರದಲ್ಲಿ ದಿನಾಂಕ: 08-02-2019 ರಂದು ಬೆಳಿಗ್ಗೆ 8.30 ಗಂಟೆ ಸಮಯದಲ್ಲಿ ಮುನಿರಾಜಪ್ಪ ಬಿನ್ ಮುನಿವೆಂಕಟಪ್ಪ, ರೇಣುಕಮ್ಮ ಕೋಂ ಮುನಿರಾಜು, ಚೇತನ್ ಬಿನ್ ಮುನಿರಾಜಪ್ಪ ಮತ್ತು ವೆಂಕಟೇಶಪ್ಪ ಬಿನ್ ಮುನಿವೆಂಕಟಪ್ಪ ರವರುಗಳು ಒಟ್ಟಿಗೆ ಸೇರಿಕೊಂಡು ನಾವುಗಳು ಅವರ ಖಾಲಿ ನಿವೇಶನದಲ್ಲಿ ಹಾಕಿದ್ದ ತಿಪ್ಪೆಯನ್ನು ಖಾಲಿ ಮಾಡುತ್ತಿದ್ದು ಅದಕ್ಕೆ ನನ್ನ ಮಗ ನಂಜೇಗೌಡ ಮತ್ತು ಆತನ ಹೆಂಡತಿ ಅನಿತ ರವರುಗಳು ಹೋಗಿ ಮೊದಲು ನೀವು ನಮ್ಮ ಜಾಗದಲ್ಲಿ ಹಾಕಿರುವ ತಿಪ್ಪೆಯನ್ನು ಖಾಲಿ ಮಾಡಿ ನಂತರ ನಾವೇ ನಿಮ್ಮ ಜಾಗದಲ್ಲಿ ಹಾಕಿರುವ ತಿಪ್ಪೆಯನ್ನು ಖಾಲಿ ಮಾಡುತ್ತೇವೆ ಎಂದು ಹೇಳುವಷ್ಟರಲ್ಲಿ ಮೇಲ್ಕಂಡ ನಾಲ್ಕು ಜನ ನನ್ನ ಮಗ ಮತ್ತು ಸೊಸೆಯನ್ನು ನಮ್ಮ ಜಮೀನಿನಲ್ಲಿ ನಾವು ಖಾಲಿ ಮಾಡಿಕೊಳ್ಳುತ್ತೇವೆ ಕೇಳುವುದಕ್ಕೆ ನೀವು ಯಾರು ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದಿದ್ದು, ಆ ಪೈಕಿ ಮುನಿರಾಜಪ್ಪ ರವರು ಯಾವುದೋ ದೊಣ್ಣೆಯಿಂದ ನನ್ನ ಸೊಸೆ ಅನಿತಾ ರವರಿಗೆ ಸೊಂಟಕ್ಕೆ ಹೊಡೆದು ಗಾಯಪಡಿಸಿರುತ್ತಾರೆ, ನಂತರ ನನ್ನ ಮಗ ನಂಜೇಗೌಡ ರವರಿಗೂ ಸಹ ಕಾಲಿನ ಬೆರಳಿಗೆ ಹೊಡೆದು ಗಾಯಪಡಿಸಿದ್ದು ಗಲಾಟೆ ಬಿಡಿಸಲು ಹೋದ ನನ್ನ ಹೆಂಡತಿ ಆಂಜನಮ್ಮ, ನನ್ನ ಸೊಸೆಯಾದ ಮಲ್ಲಿಕಾ ಕೋಂ ರಾಜಣ್ಣ ರವರಿಗೂ ಸಹ ಮೇಲ್ಕಂಡವರು ಕೈಗಳಿಂದ ಹೊಡೆದಿರುತ್ತಾರೆ. ಆಗ ಅಲ್ಲಿಯೇ ಇದ್ದ ನಮ್ಮ ಗ್ರಾಮದ ಮುನಿಯಪ್ಪ ಬಿನ್ ಚಿಕ್ಕನಾರಾಯಣಪ್ಪ ಮತ್ತು ಕೃಷ್ಣಪ್ಪ ಬಿನ್ ನರಸಿಂಹಯ್ಯ ರವರು ಗಲಾಟೆ ಬಿಡಿಸಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಪಡಿಸಿದ್ದು ಈ ಬಗ್ಗೆ ನಮ್ಮ ಗ್ರಾಮದಲ್ಲಿ ಪಂಚಾಯ್ತಿ ಮಾಡುವುದಾಗಿ ಹೇಳಿದ್ದು ಇದುವರೆಗೂ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.