ದಿನಾಂಕ : 10/01/2019 ರ ಅಪರಾಧ ಪ್ರಕರಣಗಳು

1) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.10/2019 ಕಲಂ. 279-337 ಐ.ಪಿ.ಸಿ:-

     ದಿನಾಂಕ: 10/01/2019 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರಾದ ಚಂದ್ರ ಬಿನ್ ಅಶ್ವಥನಾರಾಯಣಗೌಡ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 2 ತಿಂಗಳಿನಿಂದ ಕೋಲಾರ ತಾಲ್ಲೂಕು ಆಲೇರಿ ಗ್ರಾಮದ ಬಳಿ ಇರುವ ಮೀರಾ ಎನ್ವಿರೋಟೆಕ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ. ಸದರಿ ಕಂಪನಿಯವರು ಬೆಂಗಳೂರು ನಗರದ ಹಲವು ಆಸ್ಪತ್ರೆಗಳಲ್ಲಿ ಮೆಡಿಕಲ್ ವೇಸ್ಟೇಜ್ ನ್ನು ವಾಹನಗಳಿಗೆ ತುಂಬಿಕೊಂಡು ಬಂದು ಆಲೇರಿ ಬಳಿ ಇರುವ ಮೇಲ್ಕಂಡ ಪ್ಯಾಕ್ಟರಿಯಲ್ಲಿ ವಿಲೇವಾರಿ ಮಾಡುತ್ತಿರುತ್ತಾರೆ. ಸದರಿ ಮೆಡಿಕಲ್ ವೇಸ್ಟೇಜ್ನ್ನು ಸಾಗಾಣಿಕೆ ಮಾಡಿಕೊಂಡು ಬರಲು ಕಂಪನಿಯವರು ಕೆಎ-53 ಸಿ-3099 ನೋಂದಣಿ ಸಂಖ್ಯೆಯ ಟಾಟಾ ಸೂಪರ್ ಏಸ್ ಮಿಂಟ್ ವಾಹನವನ್ನು ಒದಗಿಸಿರುತ್ತಾರೆ. ಸದರಿ ವಾಹನಕ್ಕೆ ತಾನು ಕ್ಲೀನರ್ ಆಗಿದ್ದು, ಎಂದಿನಂತೆ ದಿನಾಂಕ 08/01/2019 ರಂದು ತಮ್ಮ ಕಂಪನಿಯವರು ವೇಸ್ಟೇಜ್ನ್ನು ಸಾಗಿಸಿಕೊಂಡು ಬರಲು ಮೇಲ್ಕಂಡ ವಾಹನವನ್ನು ನೀಡಿದ್ದು, ಸದರಿ ವಾಹನಕ್ಕೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಚಿಲ್ಲಾರ್ಲಪಲ್ಲಿ ಗ್ರಾಮದ ಶ್ರೀರಾಮ ಬಿನ್ ವೆಂಕಟರಮಣ ರವರು ಚಾಲಕರಾಗಿರುತ್ತಾರೆ. ತಾವು ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಮೆಡಿಕಲ್ ವೇಸ್ಟೇಜ್ನ್ನು ವಾಹನಕ್ಕೆ ತುಂಬಿ ಸದರಿ ವೇಸ್ಟೇಜ್ನ್ನು ಆಲೇರಿ ಬಳಿ ಇರುವ ಪ್ಯಾಕ್ಟರಿಗೆ ಸಾಗಿಸಿಕೊಂಡು ಬಂದು ಅನ್ಲೋಡಿ ಮಾಡಿ ಪುನಃ ಬೆಂಗಳೂರಿಗೆ ಹೋಗುತ್ತಿದ್ದಾಗ ಚಿಂತಾಮಣಿ ನಗರದಲ್ಲಿ ತಮ್ಮ ವಾಹನದ ಚಾಲಕನ ಸ್ನೇಹಿತನಾದ ನರಸಿಂಹ ಎಂಬುವನು ವಾಹನದಲ್ಲಿ ಹತ್ತಿಕೊಂಡಿದ್ದು, ತಾವು ಬೆಂಗಳೂರಿಗೆ ಹೋಗಲು ರಾತ್ರಿ 9.30 ಗಂಟೆ ಸಮಯದಲ್ಲಿ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯ ಕೊಂಗನಹಳ್ಳಿ ಗೇಟ್ ನಲ್ಲಿ ಚಾಲಕ ಶ್ರೀರಾಮ ರವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿದ್ದ ಮೋರಿಗೆ ಡಿಕ್ಕಿ ಹೊಡೆಸಿ ನಂತರ ಗೇಟ್ನಲ್ಲಿರುವ ಒಂದು ಮನೆಯ ಮುಂದೆ ನಿಲ್ಲಿಸಿದ್ದ ಕೆಎ-40 ಇಎ-7098 ನೋಂದಣಿ ಸಂಖ್ಯೆಯ ಟಿವಿಎಸ್ ಎಕ್ಸ್ಎಲ್ ಸೂಪರ್ ಹೆವಿಡ್ಯೂಟಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರ ವಾಹನ ಜಖಂ ಆಗಿ ವಾಹನದಲ್ಲಿ ಕುಳಿತಿದ್ದ ತನ್ನ ಎಡಮೊಣಕೈಗೆ, ಗಡ್ಡಕ್ಕೆ ರಕ್ತಗಾಯವಾಗಿ ತಲೆಯ ಹಿಂಭಾಗದಲ್ಲಿ ಗಾಯವಾಗಿರುತ್ತೆ. ನರಸಿಂಹ ರವರ ಮುಖಕ್ಕೆ, ಎಡಕಾಲಿಗೆ ಮತ್ತು ತಲೆಗೆ ಗಾಯವಾಗಿರುತ್ತೆ. ಚಾಲಕನಿಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಗಿರುತ್ತೆ. ನಂತರ ದಾರಿಹೋಕರು ತನ್ನನ್ನು ಮತ್ತು ನರಸಿಂಹರವರನ್ನು ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ನರಸಿಂಹ ರವರಿಗೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿರುತ್ತಾರೆ. ಸದರಿ ಅಪಘಾತದ ವಿಚಾರದಲ್ಲಿ ಕಂಪನಿಯವರು ನ್ಯಾಯಪಂಚಾಯ್ತಿ ಮಾಡಿ ರಾಜಿ ಮಾಡಿಕೊಳ್ಳೋಣವೆಂದು ತಿಳಿಸಿದ್ದು, ಇದುವರೆಗೆ ಅವರು ನ್ಯಾಯಪಂಚಾಯ್ತಿಗೆ ಬಾರದೆ ಇರುವುದರಿಂದ ಈ ದಿನ ದಿನಾಂಕ 10/01/2019 ರಂದು ತಡವಾಗಿ ದೂರನ್ನು ನೀಡುತ್ತಿದ್ದು, ಅಪಘಾತಕ್ಕೆ ಕಾರಣನಾದ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರು.

2) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.06/2019 ಕಲಂ. 87 ಕೆ.ಪಿ. ಆಕ್ಟ್:-

     ದಿ: 09-01-2019 ರಂದು ರಾತ್ರಿ 9:45 ಗಂಟೆಯಲ್ಲಿ ಪಿ.ಐ, ಡಿ.ಸಿ.ಬಿ, ಸಿ.ಇ.ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ದಿ: 09-01-2019 ರಂದು ಗೌರೀಬಿದನೂರು ತಾಲ್ಲೂಕಿನಲ್ಲಿ ಸಿಬ್ಬಂಧಿಯೊಂದಿಗೆ ಮಾಹಿತಿ ಸಂಗ್ರಹಣಿ ಕರ್ತವ್ಯದಲ್ಲಿದ್ದಾಗ,  ಈ ದಿನ ಸಂಜೆ 6:30 ಗಂಟೆಗೆ ಬಾತ್ಮಿದಾರರಿಂದ ಉಚ್ಚೋದನಹಳ್ಳಿ ಗ್ರಾಮದ ಕೆರೆ ಅಂಗಳದಲ್ಲಿ ಯಾರೋ ಕೆಲವರು ಅಕ್ರಮ ಅಂದರ್ ಬಾಹರ್ ಇಸ್ಫೀಟು ಜೂಜಾಟವಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಪಂಚರೊಂದಿಗೆ ಉಚ್ಚೋದನಹಳ್ಳಿ ಕೆರೆ ಅಂಗಳದಲ್ಲಿ ಅಕ್ರಮ ಅಂದರ್ ಬಾಹರ್ ಇಸ್ಫೀಟು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು, ಸದರಿ ಜೂಜಾಟದಲ್ಲಿ ಸೆರೆ ಸಿಕ್ಕ ಮೂರು ಜನ ಆರೋಪಿಗಳನ್ನು, ಪಣಕ್ಕಿಟ್ಟಿದ್ದ ರೂ 9040/- ಹಣ ಮತ್ತು 52 ಇಸ್ಫೀಟು ಎಲೆ, ಒಂದು ಮೇಣದ ಬತ್ತಿ ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು ವಶಕ್ಕೆ ಪಡೆದು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಸದರಿ ಜೂಜಾಟದ ಆರೋಪಿಗಳು ಮತ್ತು ಮಾಲುಗಳನ್ನು ನಿಮ್ಮ  ವಶಕ್ಕೆ ನೀಡುತ್ತಿದ್ದು ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದೆ ಎಂದ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

3) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.06/2019 ಕಲಂ. 379 ಐ.ಪಿ.ಸಿ & 41(ಡಿ), 102 ಸಿ.ಆರ್.ಪಿ.ಸಿ:-

     ದಿನಾಂಕ:10.01.2019 ರಂದು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹಯ್ಯ ಸಿ,ಪಿ,ಸಿ-430 ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:09.01.2019 ರಂದು ರಾತ್ರಿ ಪಾಳಿಗೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಲು ತನ್ನನ್ನು ಮತ್ತು ಠಾಣಾ ಸಿ,ಪಿ,ಸಿ-438 ಶ್ರೀನರಸಿಂಹಮೂರ್ತಿ ರವರನ್ನು ಠಾಣಾಧಿಕಾರಿಗಳು ವಿಶೇಷ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ಆ ದಿನ ರಾತ್ರಿ ಮಂಡಿಕಲ್, ಎಲ್ಲೋಡು, ಚೆಂಡೂರು, ಮಿಂಚಿನಹಳ್ಳಿ ಗ್ರಾಮ, ಭೋಗೇನಹಳ್ಳಿ, ಸೊಮೇನಹಳ್ಳಿ ಗ್ರಾಮ, ಕಡೆಗಳಲ್ಲಿ ಗಸ್ತು ಮಾಡಿಕೊಂಡು ದಿನಾಂಕ:10.01.2019 ರಂದು ಬೆಳಿಗ್ಗೆ 5-00 ಗಂಟೆಯಲ್ಲಿ ಬೀಚಗಾನಹಳ್ಳಿ ಕ್ರಾಸ್ ಬಳಿ ಗಸ್ತು ಮಾಡಿಕೊಂಡು ಬಂದಾಗ, ಎನ್,ಎಚ್-7 ರಸ್ತೆಯ ಬ್ರಿಡ್ಜ್ ಕೆಳಗೆ ಯಾರೋ ಒಬ್ಬ ಆಸಾಮಿಯು ಒಂದು ಗ್ಯಾಸ್ ಸಿಲಿಂಡರನ್ನು ಹೊತ್ತುಕೊಂಡು ಹೋಗುತ್ತಿದ್ದು, ಯಾವುದೋ ಅಪರಾಧ ಎಸಗಿರಬುದೆಂಬ ಸಂಶಯದ ಮೇರೆಗೆ ಸದರಿ ಆಸಾಮಿಯನ್ನು ತಡೆದು ನೋಡಲಾಗಿ, ತಲೆಗೆ ಮಪ್ಲರ್ ಬಟ್ಟೆ ಕಟ್ಟಿಕೊಂಡಿದ್ದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ, ಅನೀಲ್ ಕುಮಾರ್ ಬಿನ್ ಲಕ್ಷ್ಮಯ್ಯ 19 ವರ್ಷ, ಭೋವಿ ಜನಾಂಗ, ಲಾರಿ ಕ್ಲೀನರ್, ವಾಸ ರಾಮಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸಿ ಸಮವಸ್ರ್ತದಲ್ಲಿದ್ದ ತಮ್ಮನ್ನು ನೋಡಿ ಸಿಲಿಂಡರ್ ಬಿಟ್ಟು ಓಡಲು ಪ್ರಯತ್ನಿಸಿದ್ದು, ತಾನು ಮತ್ತು ನರಸಿಂಹಮೂರ್ತಿ ರವರು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಸದರಿ ಆಸಾಮಿಯು ಎಲ್ಲಿಯೋ ಸದರಿ ಗ್ಯಾಸ್ ಸಿಲಿಂಡರ್ ಅನ್ನು ಕಳುವು ಮಾಡಿರುತ್ತಾನೆಂಬ ಸಂಶಯವಿದ್ದು, ಸದರಿ ಆಸಾಮಿ ಅನೀಲ್ ಕುಮಾರ್ ರವರನ್ನು & ಸಿಲಿಂಡರ್ ಅನ್ನು ಠಾಣೆಯಲ್ಲಿ  ಬೆಳಿಗ್ಗೆ 5-30 ಗಂಟೆಯಲ್ಲಿ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ದೂರು ಆಗಿರುತ್ತೆ.

4) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.04/2019 ಕಲಂ. ಮನುಷ್ಯ ಕಾಣೆ:-

     ದಿನಾಂಕ:10-01-2019 ರಂದು ಬೆಳಗ್ಗೆ 10-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಹಸೀನಾ ಕೋಂ ಬಾಬಾಜಾನ್ , ಚಿಲಕಲನೇರ್ಪು ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:01-01-2019 ರಂದು ಸಂಜೆ 06-00 ಗಂಟೆಯ ಸಮಯದಲ್ಲಿ ಸಂಸಾರದ ವಿಚಾರದಲ್ಲಿ ತಮ್ಮ ಮಧ್ಯೆ  ಜಗಳ ನಡೆದಾಗ  ತಮ್ಮ ಸಂಬಂಧಿಕರು ಸಮಾಧಾನ ಪಡಿಸಿದ್ದರು. ದಿನಾಂಕ:02-01-2019 ರಂದು ಬೆಳಗ್ಗೆ 06-00 ಗಂಟೆ ಸಮಯದಲ್ಲಿ ತನ್ನ ಗಂಡ ಜಾಬೀರ್ @ ಬಾಬಾಜಾನ್ ಆಂದ್ರಪ್ರದೇಶದ ಪಿ.ಟಿ.ಎಂ ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಸಂಜೆಯಾದರೂ ಮನೆಗ ಬರಲಿಲ್ಲ. ತಾನು ತನ್ನ ಗಂಡನ ಮೊಬೈಲ್ ಸಂಖ್ಯೆ: 9008066732 ಗೆ ಕರೆ ಮಾಡಲಾಗಿ ಸ್ವೀಚ್ಚ್ ಆಫ್ ಆಗಿರುತ್ತೆ. ನಂತರ ತಾನು ತನ್ನ ಗಂಡನ  ಬಗ್ಗೆ  ತಮ್ಮ ಸಂಬಂಧಿಕರ ಮನೆಗಳಲ್ಲಿ ಹಾಗೂ ನೆಂಟರಿಷ್ಟರ ಮನೆಗಳಲ್ಲಿ ವಿಚಾರಣೆ ಮಾಡಲಾಗಿ ಪತ್ತೆಯಾಗಿರುವುದಿಲ್ಲ. ತನ್ನ ಗಂಡ ಮನೆಯಲ್ಲಿ ಕುರಿ ಮಾರಿ ಇಟ್ಟಿದ್ದ 50,000/- ರೂಗಳನ್ನು ತನಗೆ ಗೊತ್ತಿಲ್ಲದೆ ತೆಗೆದುಕೊಂಡು ಹೋಗಿದ್ದು, ಗ್ರಾಮದಲ್ಲಿ ವಿಚಾರ ಮಾಡಲಾಗಿ ತಮ್ಮ ಗ್ರಾಮದ ನಾಯಕ ಜನಾಂಗದ ಅರುಣ ಎಂಬುವವರು ಸಹ ಅಂದಿನಿಂದ ನಾಪತ್ತೆಯಾಗಿದ್ದು, ತನ್ನ ಗಂಡ ಅರುಣ ರವರನ್ನು ಕರೆದುಕೊಂಡು ಹೋಗಿರಬಹುದೆಂದು ಅನುಮಾನವಿರುತ್ತದೆ.  ಆದುದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಕಾಣೆಯಾದ ತನ್ನ ಗಂಡನಾದ ಜಾಬೀರ್ @ ಬಾಬಾಜಾನ್ ರವರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿರುವ ಪಿರ್ಯಾಧು.

5) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.04/2019 ಕಲಂ. 279-337 ಐ.ಪಿ.ಸಿ:-

     ದಿನಾಂಕ 09/01/2019 ರಂದು ಮಧ್ಯಾಹ್ನ 02-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 06/01/2019 ರಂದು ಬೆಳಗ್ಗೆ ಪಿರ್ಯಾದಿ ತಂದೆ ನರಸಿಂಹಪ್ಪ ರವರು ಅವರ ಸೊಸೆಯಾದ ಗೌತಮಿ ರವರನ್ನು ನೋಡಿಕೊಂಡು ಬರಲು ಗುಡಿಬಂಡೆ ತಾಲ್ಲೂಕ್, ನಿಶ್ಚನಬಂಡಹಳ್ಳಿ ಗ್ರಾಮಕ್ಕೆ ಹೋಗಿ ಅವರ ಸೊಸೆಯನ್ನು ನೋಡಿಕೊಂಡು ದ್ವಿಚಕ್ರ ವಾಹನದಲ್ಲಿ ಪಿರ್ಯಾದಿ ಮತ್ತು ಅವರ ತಂದೆ ಇಬ್ಬರು ರಾತ್ರಿ ಸುಮಾರು 08-45 ಗಂಟೆಗೆ ಡಿ.ಪಾಳ್ಯ ಗ್ರಾಮಕ್ಕೆ ಬಂದು ಪಿರ್ಯಾದಿ ದ್ವಿಚಕ್ರ ವಾಹನದಿಂದ ಇಳಿದುಕೊಂಡು ಪಿರ್ಯಾದಿ ತಂದೆ ಮನೆಯ ಬಳಿ ಹೋಗಲು ಸದರಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಾತ್ರಿ ಸುಮಾರು 08-50 ಗಂಟೆಗೆ ವೆಂಕಟರವಣಸ್ವಾಮಿ ದೇವಸ್ಥನದ ಬಳಿ, ನಾಡಕಛೇರಿ ರಸ್ತೆಯಲ್ಲಿ ಬಸ್ಸು ನಿಲ್ದಾಣದ ಕಡೆಯಿಂದ ಬಂದ ನೊಂದಣಿ ಸಂಖ್ಯೆಯಿಲ್ಲದ ರಾಯಲ್ ಎನ್ ಫೀಲ್ಡ್ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಪಿರ್ಯಾದಿದಾರರ ತಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರ ವಾಹನ ಜಕಂಗೊಂಡು ಪಿರ್ಯಾದಿ ತಂದೆ ಕೆಳಕ್ಕೆ ಬಿದ್ದಿದ್ದು ಪಿರ್ಯಾದಿದಾರರು ಹೋಗಿ ಉಪಚರಿಸಿ ನೋಡಲಾಗಿ ಬಲಕಾಲಿಗೆ ರಕ್ತಗಾಯ ಹೊಟ್ಟೆಗೆ ಹಾಗೂ ಎರಡು ಕೈಗಳಿಗೆ ಮೂಗೇಟುಗಳಾಗಿದ್ದು ಗಾಯಗಗೊಂಡಿದ್ದ ನರಸಿಂಹಪ್ಪನನ್ನು ಪಿರ್ಯಾದಿದಾರರು ಯಾವುದೋ ಒಂದು ಆಟೋದಲ್ಲಿ ಡಿ.ಪಾಳ್ಯ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಪಡಿಸಿ, ನಂತರ ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಬಸವನಗುಡಿಯ ಮೆಡಿಕಲ್ ಸೆಂಟರ್ ಆಸ್ವತ್ರೆಯಲ್ಲಿ ಚಿಕಿತ್ಸೆಕೊಡಿಸಿ ನಂತರ ಬೆಂಗಳೂರು ವಿಕ್ಟೋರಿಯಾ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಪಡಿಸಿರುತ್ತಾರೆ, ನರಸಿಂಹಪ್ಪ ರವರಿಗೆ ಪಿರ್ಯಾದಿದಾರರು ಚಿಕಿತ್ಸೆಕೊಡಿಸುತ್ತಿದ್ದರಿಂದ  ಈ ದಿನ ತಡವಾಗಿ ನೊಂದಣಿ ಸಂಖ್ಯೆಯಿಲ್ಲದ ರಾಯಲ್ ಎನ್ ಫೀಲ್ಡ್ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ,ವ,ವರದಿ.