ದಿನಾಂಕ: 09-04-2019 ರ ಅಪರಾಧ ಪ್ರಕರಣಗಳು

1)  ಚೇಳೂರು ಪೊಲೀಸ್ ಠಾಣೆ ಮೊ.ಸಂ. 20/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ-09/04/2019 ರಂದು ಬೆಳಿಗ್ಗೆ-10.00 ಗಂಟೆಗೆ ಠಾಣಾ ಪಿ.ಸಿ-113 ಲಿಂಗರಾಜು ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಠಾಣಾಧಿಕಾರಿಗಳ ಆದೇಶದಂತೆ ದಿನಾಂಕ-09-04-2019 ರಂದು ತನಗೆ ಠಾಣಾ ಸರಹದ್ದು ಗ್ರಾಮಗಳಿಗೆ ಭೇಟಿ ನೀಡಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ನೇಮಿಸಿರುತ್ತಾರೆ ಅದರಂತೆ ಸದರಿಯವರು ಪುಲಿಗಲ್, ಇದ್ದಿಲವಾರಪಲ್ಲಿ, ನಲ್ಲಸಾನಂಪಲ್ಲಿ, ಬೆಲ್ಲಾಲಂಪಲ್ಲಿ ಗ್ರಾಮದಲ್ಲಿ ಗಸ್ತು ಮಾಡಿಕೊಂಡು ಬೆಳಿಗ್ಗೆ ಸುಮಾರು-10.00 ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಗ್ರಾಮದಲ್ಲಿ ಗಸ್ತಿನಲ್ಲಿರುವಾಗ ಠಾಣಾ ಸರಹದ್ದು ಮ್ಯಾಕಲಪಲ್ಲಿ ಗ್ರಾಮದಲ್ಲಿ ಅದೇಗ್ರಾಮದ ವಾಸಿಯಾದ  ಶಂಕರಪ್ಪ ಬಿನ್ ಗುರುಮೂರ್ತಿ ರವರ ಅಂಗಡಿ ಮುಂದೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂತ ಬಾತ್ಮೀ ತಿಳಿದು ಬಂದಿರುತ್ತೆ. ಆದ್ದರಿಂದ ಠಾಣೆಗೆ ವಾಪಸ್ಸಾಗಿ  ಮುಂದಿನ ಕ್ರಮ ಜರುಗಿಸಲು ನೀಡಿದ ವರದಿ ಯಾಗಿರುತ್ತೆ.

2)  ಚೇಳೂರು ಪೊಲೀಸ್ ಠಾಣೆ ಮೊ.ಸಂ. 21/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ-09/04/2019 ರಂದು ಬೆಳಿಗ್ಗೆ-10.00 ಗಂಟೆಗೆ ಠಾಣಾ ಹೆಚ್.ಸಿ-129 ರವಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಠಾಣಾಧಿಕಾರಿಗಳ ಆದೇಶದಂತೆ ದಿನಾಂಕ-09-04-2019 ರಂದು ತನಗೆ ಠಾಣಾ ಸರಹದ್ದು ಗ್ರಾಮಗಳಿಗೆ ಭೇಟಿ ನೀಡಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ನೇಮಿಸಿರುತ್ತಾರೆ ಅದರಂತೆ ಸದರಿಯವರು ಊದವಾರಿಪಲ್ಲಿ, ಸಜ್ಜಲವಾರಿಪಲ್ಲಿ,ಬೆಲ್ಲಾಲಂಪಲ್ಲಿ ಗ್ರಾಮದಲ್ಲಿ ಗಸ್ತು ಮಾಡಿಕೊಂಡು  ಮದ್ಯಾಹ್ನ ಸುಮಾರು-1.00 ಗಂಟೆ ಸಮಯದಲ್ಲಿ ಸೀತರೆಡ್ಡಿಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿರುವಾಗ ಠಾಣಾ ಸರಹದ್ದು ಮ್ಯಾಕಲಪಲ್ಲಿ ಗ್ರಾಮದಲ್ಲಿ ಅದೇಗ್ರಾಮದ ವಾಸಿಯಾದ  ರಾಮಕೃಷ್ಣಪ್ಪ ಬಿನ್  ವೆಂಕಟರಾಯಪ್ಪ ಎಂಬುವರುರವರ ಅಂಗಡಿ ಮುಂದೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಬಾತ್ಮೀ ತಿಳಿದು ಬಂದಿರುತ್ತೆ.ಆದ್ದರಿಂದ ಠಾಣೆಗೆ ವಾಪಸ್ಸಾಗಿ  ಮುಂದಿನ ಕ್ರಮ ಜರುಗಿಸಲು ನೀಡಿದ ವರದಿ ಯಾಗಿರುತ್ತೆ.

3) ಸಿ.ಇ.ಎನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ. ಮೊ.ಸಂ. 03/2019. ಕಲಂ. 66(C), 66(D)  INFORMATION TECHNOLOGY  ACT ಮತ್ತು ಕಲಂ: 420 ಐ.ಪಿ.ಸಿ

     ದಿನಾಂಕ:9/4/2019 ರಂದು ಪಿರ್ಯಾಧಿ ಬಿ ಕೃಷ್ಣಪ್ಪ ಬಿನ್ ಕೆ ಟಿ ಬಚ್ಚಪ್ಪ, 54 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ  ಅರಹಳ್ಳಿ ಗ್ರಾಮ, ಹೊಸಕೋಟೆ ತಾಲ್ಲೂಕು ಹಾಲಿ ಹೆಚ್ ಕ್ರಾಸ್ ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು  ಹೆಚ್ ಕ್ರಾಸ್ ನಲ್ಲಿ ಬಾಲಾಜಿ ಎಂಟರ್ ಪ್ರೈಸಸ್  ಸಿಮೆಂಟ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ಹಾಗೂ ನಾನು ನನ್ನ ವ್ಯಾಪಾರದ ವ್ಯವಹಾರಕ್ಕೆ ಪ್ರಗತಿ ಕೃಷ್ಣಾ ಗ್ರಾಮೀಣಾ ಬ್ಯಾಂಕ್  ಹೆಚ್ ಕ್ರಾಸ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು ಸದರಿ ಖಾತೆಗೆ  ಎ ಟಿ ಎಂ ಕಾರ್ಡ ನ್ನು ಸಹ ಹೊಂದಿರುತ್ತೇನೆ. ಈಗಿರುವಲ್ಲಿ ದಿನಾಂಕ:4/4/2019 ರಂದು ತಾನು ಹೊಂದಿದ್ದ ಎ ಟಿ ಎಂ ಕಾರ್ಡ ಅಂಗಡಿಯಲ್ಲಿಯೋ ಅಥವ ಹೊರಗಡೆಯೋ ಎ ಟಿ ಎಂ ಕಾರ್ಡ ಕಳೆದುಹೋಗಿರುತ್ತದೆ.ಈ ಎ ಟಿ ಎಂ ಕಾರ್ಡಿನ ಕವರಿನ ಮೇಲೆ ಗುಪ್ತ ಸಂಖ್ಯೆಯನ್ನು ಸಹ  ಬರೆದಿದ್ದೆ ( ಪಿನ್ ನಂಭರ್)  ಈ ದಿನ ದಿನಾಂಕ:9/4/2019 ರಂದು ವ್ಯವಹಾರದ ಪ್ರಯುಕ್ತ ಬ್ಯಾಂಕಿಗೆ ಹೋಗಿ ಚಕ್ ಮಾಡಲಾಗಿ ತನ್ನ ಪ್ರಗತಿ ಕೃಷ್ಣಾ ಗ್ರಾಮೀಣಾ ಬ್ಯಾಂಕ್  ಖಾತೆ ನಂ 10615100000219 ರಲ್ಲಿ  ದಿನಾಂಕ:4/4/2019 ರಿಂದ 8/4/2019 ರವರಿಗೆ ಒಟ್ಟು 85000/- ರೂಗಳನ್ನು ಸದರಿ ತನ್ನ ಕಳೆದುಹೋಗಿದ್ದ ಎ ಟಿ ಎಂ ಮೂಲಕ  ನನ್ನ ಪಿನ್ ನಂಭರ್ ಬಳಸಿ ತನಗೆ ತಿಳಿಯದೆ ಮತ್ತು ತನ್ನ ಗಮನಕ್ಕೆ ಬಾರದಂತೆ  ಯಾರೋ ದುಷ್ಕರ್ಮಿಗಳು ಮೇಲ್ಕಂಡ ಹಣವನ್ನು ಡ್ರಾ ಮಾಡಿಕೊಂಡು ನನಗೆ ಮೋಸ ಮಾಡಿರುವ ವಿಷಯ ತಿಳಿಯಿತು. ಮತ್ತು ಬ್ಯಾಂಕನಲ್ಲಿ ಸ್ಟೇಟ್ ಮೆಂಟ್ ನ್ನು ಸಹ ನೀಡಿರುತ್ತಾರೆ. ಆದುದರಿಂದ ನನ್ನ ಖಾತೆಯಿಂದ ನನಗೆ ತಿಳಿಯದೆ ನನ್ನ ಪಿನ್ ನಂಬರ್ ಬಳಿಸಿ 85000-00 ರೂಗಳ ಹಣ ಡ್ರಾ ಮಾಡಿರುವ  ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮವನ್ನು ಜರಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ  ಸದರಿ ಎ ಟಿ ಎಂ ಕಾರ್ಡ ನಂ: 6073898278722422 ಆಗಿರುತ್ತದೆ

4)  ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 63/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ; 08-04-2019 ರಂದು ಮದ್ಯಾಹ್ನ 1.00 ಗಂಟೆಗೆ ಡಿಸಿಬಿ/ಸಿಇಎನ್ ಠಾಣೆಯ ಪಿ.ಐ ರವರು ಮಾಲು, ಪಂಚನಾಮೆ, ಆಸಾಮಿಯನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ,ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಆದ ತಾನು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ.ಎ-40-ಜಿ-270 ರಲ್ಲಿ ಜಿಲ್ಲೆಯಲ್ಲಿನ  ಅಕ್ರಮ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಎಸ್.ಗೊಲ್ಲಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಈ ದಿನ ದಿನಾಂಕ; 08-04-2019 ರಂದು ಬೆಳಗ್ಗೆ 10.30 ಗಂಟೆಯಲ್ಲಿ ಇಟ್ಟಪ್ಪನಹಳ್ಳಿ ಗ್ರಾಮದಲ್ಲಿ ಆಂಜಿನಪ್ಪ  ಎಂಬುವರು ಅಕ್ರಮವಾಗಿ ತನ್ನ ಅಂಗಡಿಯ ಮುಂದೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ಬಾತ್ಮಿ ಮೇರೆಗೆ ಗೊಲ್ಲಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಮೇಲ್ಕಂಡಂತೆ ವಿಷಯ ತಿಳಿಸಿ ಪಂಚರೊಂದಿಗೆ ಇಟ್ಟಪ್ಪನಹಳ್ಳಿ ಗ್ರಾಮಕ್ಕೆ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಆಂಜಿನಪ್ಪ ರವರ ಅಂಗಡಿಯ ಕಡೆ ಹೋಗುತ್ತಿದ್ದಾಗ ಮದ್ಯ ಸೇವನೆ ಮಾಡುತ್ತಿದ್ದ  ವ್ಯಕ್ತಿಗಳು ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಒಂದು ಖಾಲಿ 1 ಲೀಟರ್ ನೀರಿನ ಬಾಟಲ್, ಹೈವಾರ್ಡ್ ಚಿಯರ್ಸ್ ವಿಸ್ಕಿಯ 2 ಖಾಲಿ ಟೆಟ್ರಾ ಪ್ಯಾಕೆಟ್ ಗಳು ಮತ್ತು ಅಲ್ಲೇ ಪಕ್ಕದಲ್ಲಿದ್ದ ಮದ್ಯ ತುಂಬಿದ 24 ಟೆಟ್ರಾ ಪ್ಯಾಕೆಟ್ ಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಅವುಗಳ ಬೆಲೆ ಒಟ್ಟು 832/- ರೂಪಾಯಿಗಳಾಗಿರುತ್ತೆ. ಅಕ್ರಮ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಚಿಲ್ಲರೆ ಅಂಗಡಿ ಮಾಲೀಕನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಆಂಜಿನಪ್ಪ ಬಿನ್ ಗೋಪಾಲಪ್ಪ, 65 ವರ್ಷ, ಪ.ಜಾತಿ, ಚಿಲ್ಲರೆ ಅಂಗಡಿ ವ್ಯಾಪಾರ, ಇಟ್ಟಪ್ಪನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ವ್ಯಕ್ತಿಯನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದು ಆಸಾಮಿ ಮತ್ತು ಮಾಲನ್ನು ವಶಕ್ಕೆ ನೀಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ವರದಿಯ ಮೇರೆಗೆ ಈ ಪ್ರ.ವ.ವರದಿ.

5)  ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 64/2019. ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 08-04-2019 ರಂದು ಸಂಜೆ 4-15 ಗಂಟೆ ಸಮಯದಲ್ಲಿ ಪಿ.ಎಸ್.ಐ ರವರಾದ ಶ್ರೀ ಚೇತನ್ ಕುಮಾರ್ ರವರ ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ದಿನಾಂಕ; 08-04-2019 ರಂದು ನಾನು, ಠಾಣಾ ಪ್ರಭಾರದಲ್ಲಿರುವಾಗ  ಮದ್ಯಾಹ್ನ2-00 ಘಂಟೆ ಸಮಯದಲ್ಲಿ ಬಂದ ಮಾಹಿತಿ ಏನೆಂದರೆ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ 3 ನೇ ಗ್ರಾಮ ಗಸ್ತಿಗೆ ಸೇರಿದ ಕಣಜೇನಹಳ್ಳಿ ಗ್ರಾಮ ಸ್ಮಶಾನದಲ್ಲಿರುವ ಆಲದ ಮರದ  ಬಳಿ ಯಾರೋ ಜನರು ಗುಂಪು ಸೇರಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ಮತ್ತು  ಸಿಬ್ಬಂದಿಯವರಾದ, ಹೆಚ್ ಸಿ 141 ಶ್ರೀ ರಮಣಾರೆಡ್ಡಿ ಪಿ.ಸಿ-19 ಮಣಿಕಂಠ  ಪಿ.ಸಿ-35 ಸರ್ದಾರ್,  ಪಿ.ಸಿ-203 ಮಂಜುನಾಯ್ಕ್, ಪಿ.ಸಿ-262 ಅಂಬರೀಶ್,ಪಿ.ಸಿ-271 ನಾಗೇಶ್ ಕುಸಲಾಪುರ್ ಸಿಪಿಸಿ 181 ಪ್ರಸಾದ್, ಪಿ.ಸಿ -260 ಮುತ್ತಪ್ಪನಿಗರಿ ಜೀಪ್ ಸಂಖ್ಯೆ ಕೆಎ,40-ಜಿ-567 ರಲ್ಲಿ ಮತ್ತು ದ್ವಿ-ಚಕ್ರವಾಹನಗಳಲ್ಲಿ ಮದ್ಯಾಹ್ನ 02.20 ಗಂಟೆಗೆ ಠಾಣೆಯಿಂದ ಹೊರಟು ಮದ್ಯಾಹ್ನ:02-45 ಘಂಟೆಗೆ ಕಣಜೇನಹಳ್ಳಿ ಗ್ರಾಮದ ಗೇಟ್ ಬಳಿ ಹೋಗಿ  ಕಣಜೇನಹಳ್ಳಿ ಗ್ರಾಮದ ವಾಸಿಗಳಾದ ಸತೀಶ.ಕೆ.ಅರ್ ಬಿನ್ ರಾಮಯ್ಯ, ಕೆ.ಎಸ್. ಮುನಿರಾಜು ಬಿನ್ ಕೆ.ಎಸ್ ಶ್ರೀನಿವಾಸ್, ಕೆ.ವಿ ಸುನಿಲ್ ಬಿನ್ ವೆಂಕಟರೆಡ್ಡಿ ರವರಗಳಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ. ಪಂಚರು ಮತ್ತು ಸಿಬ್ಬಂದಿಯರೊಂದಿಗೆ  ಸರ್ಕಾರಿ ಜೀಪ್ ಮತ್ತು ದ್ವಿ-ಚಕ್ರವಾಹನಗಳಲ್ಲಿ ಕಣಜೇನಹಳ್ಳಿ ಗ್ರಾಮದ ಸ್ಮಶಾನದ  ಬಳಿಗೆ ಹೋಗಿ ವಾಹನಗಳನ್ನು ಮರೆಯಾಗಿ ನಿಲ್ಲಿಸಿ  ಪಂಚರು ಮತ್ತು ನಾವು ಹೋಗಿ ಮರೆಯಾಗಿ ನಿಂತು ನೋಡಲಾಗಿ ಅಲದ  ಮರದ ಕೆಳಗೆ ಯಾರೋ ಕೆಲವರು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟು ಎಲೆಗಳಿಂದ ಆ ಪೈಕಿ ಒಬ್ಬ ಆಸಾಮಿ ಅಂದರ್ 300 ಎಂತ ಮತ್ತೋಬ್ಬ ಆಸಾಮಿ ಬಾಹರ್ ಗೆ 300 ಎಂತ ಉಳಿದವರು ಸಹ ಅಂದರ್ ಗೆ 200 ಬಾಹರ್ ಗೆ 200 ಎಂತ ಕೂಗುತ್ತ ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್ ಜೂಜಾಟ ಆಡುತ್ತಿರುವುದನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು, ಸಬ್ ಇನ್ಸ್ ಪೆಕ್ಟರ್ ಆದ ನಾನು ಜೂಜಾಟ ಆಡುತ್ತಿದ್ದವರಿಗೆ ಜೂಜಾಟ ಸ್ಥಳದಿಂದ ಯಾರು ಒಡಿಹೋಗಬಾರದು ಯಥಾಸ್ಥಿತಿಯಲ್ಲಿರುವಂತೆ ಸೂಚನೆ ನೀಡುತ್ತಿದ್ದಂತೆ ಜೂಜಾಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದವರನ್ನು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ನಾವು ಹಿಡಿದುಕೊಂಡು ಸ್ಥಳದಲ್ಲಿ ಸಿಕ್ಕ ಆಸಾಮಿಗಳ ಹೆಸರು ವಿಳಾಸ ಕೆಳಲಾಗಿ 1)  ಕೆ.ಎನ್ ಶ್ರೀನಿವಾಸ ಬಿನ್ ಕೆ.ವಿ ನಾರಾಯಣಸ್ವಾಮಿ,  2) ನಾರಾಯಣಸ್ವಾಮಿ ಬಿನ್ ತಿಮ್ಮಯ್ಯ, 39 ವರ್ಷ, 3) ಕೆ.ಟಿ ಮಾರಪ್ಪ ಬಿನ್ ತಿಮ್ಮಪ್ಪ,  4) ಬಾಬಾ ಜಾನ್ ಬಿನ್ ಪಕ್ರುದ್ದೀನ್,, 5) ಪೀರ್ ಬಾಷ ಬಿನ್ ಬಾಷ, ,6) ಪರಮೇಶ್ ಬಿನ್ ರಂಗನಾಥ, 7) ಅಬ್ಬು ಬಿನ್ ನಜೀಜ್ ಅಹ್ಮದ್,8) ಮಂಜುನಾಥ ಬಿನ್ ಕೃಷ್ಣಪ್ಪ ಎಲ್ಲಾರೂ ಕಣಜೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ 8) ವೆಂಕಟೇಶ್ ಬಿನ್ ಸೀನಪ್ಪ  ನಿಮಾಕಲ ಕುಂಟೆ ಚಿಕ್ಕಬಳ್ಳಾಪುರ ನಗರ ಎಂದು ತಿಳಿಸಿದರು. ಜೂಜಾಟದ ಸ್ಥಳದಲ್ಲಿದ್ದ ಒಂದು ನ್ಯೂಸ್ ಪೇಪರ್, 52 ಇಸ್ಪೀಟು ಎಲೆಗಳು ಪಣಕ್ಕಿಟ್ಟದ 8270/- ರೂಗಳನ್ನು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆಸಾಮಿಗಳನ್ನುವಶಕ್ಕೆ ತೆಗೆದುಕೊಂಡು ಮಾಲು, ದಾಳಿ ಪಂಚನಾಮೆಯೊಂದಿಗೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ನೀಡಿದ ವರದಿಯ ಮೇರೆಗೆ ಈ ಪ್ರ.ವ.ವರದಿ.

6) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 26/2019. ಕಲಂ. 279, 337  ಐ.ಪಿ.ಸಿ ಮತ್ತು ಕಲಂ: 185, 187 INDIAN MOTOR VEHICLES ACT, 1988 :-

     ದಿನಾಂಕ:-08/04/2019 ರಂದು ಸಂಜೆ 6:30 ಗಂಟೆಗೆ ಪಿರ್ಯಾಧಿ ಶ್ರೀ.ಜಿ.ವಿ.ಮುನಿರಾಜು ಬಿನ್ ವೆಂಕಟನರಸಿಂಹಯ್ಯ 70 ವರ್ಷ, ಬಲಜಿಗರು, ಭಗತ್ ಸಿಂಗ್ ನಗರ, ವಾರ್ಡ್ ನಂ-03, ಚಿಕ್ಕಬಳ್ಳಾಪುರ ಟೌನ್  ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ ದಿನಾಂಕ:-07/04/2019 ರಂದು ತಾನು ಬೆಳಿಗ್ಗೆ ಸುಮಾರು 10.30 ಗಂಟೆಯ ಸಮಯದಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ಬಳಿ ತಮ್ಮ ಮನೆಯ ಹತ್ತಿರ ನಿಂತಿರಬೇಕಾದರೆ, ಗುಂತಪ್ಪನಹಳ್ಳಿ ಗ್ರಾಮಕ್ಕೆ ಸೇರಿದ ಗೋಪಾಲ ಬಿನ್ ರಾಮಕೃಷ್ಣಪ್ಪ, ವಿನಯ್ ಕುಮಾರ್ ಬಿನ್ ವೆಂಕಟೇಶಪ್ಪ ಎಂಬ ಯುವಕರು ಮಧ್ಯಪಾನ ಮಾಡಿ ಮುಷ್ಟೂರು – ಚಿಕ್ಕಬಳ್ಳಾಪುರ ರಸ್ತೆಯ ತಮ್ಮ ಮನೆಯ ಮುಂಭಾಗದ ರಸ್ತೆಯ ಬಳಿ ಕೆಎ-40-ವಿ-8093 ರ ಹಿರೋ ಹೊಂಡಾ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಂತಿದ್ದ ತನಗೆ ಡಿಕ್ಕಿ ಹೊಡೆಯಿಸಿ ಹೊರಟು ಹೋಗಿದ್ದು, ಸದರಿ ಡಿಕ್ಕಿ ಹೊಡೆಯಿಸಿದ ಪರಿಣಾಮ ತೀವ್ರತರವಾದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿದ್ದು ನಂತರ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಈ ದಿನ ತಡವಾಗಿ ದಿನಾಂಕ:-08/04/2019 ರಂದು ಸದರಿ ಅಪಘಾತ ಪಡಿಸಿದ ಕೆಎ-40-ವಿ-8093 ರ ದ್ವಿಚಕ್ರವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಬೆರಳಚ್ಚು ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

7) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 117/2019. ಕಲಂ. 427, 506, 507 ಐ.ಪಿ.ಸಿ:-

     ದಿನಾಂಕ:08/04/2019 ರಂದು ಸಂಜೆ 5-45 ಗಂಟೆಗೆ ಪಿಸಿ 348 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ್ದು ಸಾರಾಂಶವೆನೆಂದರೇ, ದಿನಾಂಕ 28/03/2019 ರಂದು ಅರ್ಜಿದಾರರಾದ ಸಿ.ಎಂ.ಕುಪೇಂದ್ರಪ್ಪ ಬಿನ್ ಚಿನ್ನಪ್ಪ ಮಡಬಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 27/03/2019 ರಂದು ರಾತ್ರಿ ಸುಮಾರು 10-30 ಗಂಟೆ ಸಮಯದಲ್ಲಿ ತಾನು ಮನೆಯಲ್ಲಿ ಮಲಗಿದ್ದಾಗ ತನ್ನ ಬಾಬತ್ತು ಮೊಬೈಲ್ ನಂ 9141917101 ಕ್ಕೆ ಯಾರೋ ಅನಾಮದೇಯರೊಬ್ಬರು ಕರೆ ಮಾಡಿ ನಿನ್ನನ್ನು ಸಾಯಿಸುತ್ತೇನೆಂದು ಬೆದರಿಕೆ ಹಾಕಿರುತ್ತಾನೆ. ಮಾರನೇ ದಿನ ದಿನಾಂಕ 28/03/2019 ರಂದು ತಾನು ಬೆಳಿಗ್ಗೆ ಕೈವಾರ ಕ್ರಾಸ್ ಬಳಿ ಬಂದಾಗ, ತಮ್ಮ ಗ್ರಾಮದ ವಾಸಿ ತನಗೆ ಪೋನ್ ಮಾಡಿ ತನಗೆ ಸೇರಿದ ಮಾವಿನ ತೋಪು ಮಡಬಹಳ್ಳಿ ಗ್ರಾಮದ ಸರ್ವೆ ನಂ:113, 114 ರ ಜಮೀನಿಗೆ ಮುಳ್ಳು ತಂತಿ ಹಾಕಲು ತರಿಸಿದ್ದ ಕಲ್ಲು ಕೂಚಗಳನ್ನು ಯಾರೋ ಹೊಡೆದು ಹಾಕಿರುವುದಾಗಿ ತಿಳಿಸಿರುತ್ತಾರೆ. ತಕ್ಷಣ ತಾನು ತನ್ನ ಜಮೀನಿಗೆ ಬಂದು ನೋಡಲಾಗಿ ಸುಮಾರು 25 ಸಾವಿರ ರಿಂದ 30 ಸಾವಿರ ರೂಗಳಷ್ಟು ಬೆಲೆ ಬಾಳುವ ಕಲ್ಲು ಕೂಚಗಳನ್ನು ಹೊಡೆದು ಹಾಕಿರುತ್ತಾರೆ. ತನಗೆ ಯಾರ ಮೇಲೂ ಗುಮಾನಿ ಇರುವುದಿಲ್ಲ. ಅನಾಮಧೇಯ ಕರೆಗಳು ತನಗೆ ಈ ಹಿಂದೆ ಕೂಡಾ ಬಂದಿತ್ತು. ಆದ್ದರಿಂದ ತನಗೆ ಪೋನ್ ಕರೆ ಮಾಡಿ ಬೆದರಿಕೆ ಹಾಕಿ, ತನ್ನ ಜಮೀನಿನಲ್ಲಿನ ಕಲ್ಲು ಕೂಚಗಳನ್ನು ಹೊಡೆದು ನಷ್ಟವನ್ನುಂಟು ಮಾಡಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಮೇಲ್ಕಂಡಂತೆ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದು, ಕಲಂ 427, 506, 507 ಐ.ಪಿ.ಸಿ ರೀತ್ಯ ಪ್ರಕರಣ  ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

8) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 117/2019. ಕಲಂ. 87 ಕೆ.ಪಿ.ಆಕ್ಟ್ :-

     ದಿನಾಂಕ: 08/04/2019 ರಂದು ಸಾಯಂಕಾಲ 4-00 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದು ದಾಖಲಿಸಿರುವ ದೂರಿನ ಸಾರಾಂಶವೇನೆಂದರೆ ದಿನಾಂಕ:05/04/2019 ರಂದು ಸಂಜೆ 5-00 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಶ್ರೀ.ಗೌತಮ್, ಕೆ.ಸಿ. ಪ್ರೊಬೇಷನರಿ ಡಿವೈಎಸ್ಪಿ ರವರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದು ಶ್ರೀ.ವೆಂಕಟಾಚಲಯ್ಯ, ಎಎಸ್ಐ, ರವರು ದಾಖಲಿಸಿರುವ ಎನ್.ಸಿ.ಆರ್ 177/2019 ರಲ್ಲಿ ನಮೂದು ಮಾಡಿರುವುದೇನೆಂದರೆ – ಈ ದಿನ ದಿನಾಂಕ;05/04/2019 ರಂದು ಮಧ್ಯಾಹ್ನ 2-30 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ನಗರಗೆರೆ ಗ್ರಾಮದಲ್ಲಿ ಮಲ್ಲೇನಹಳ್ಳಿ ಗ್ರಾಮದ ಬಳಿ ಕೆರೆಯ ಕಾಲುವೆಯಲ್ಲಿ ಯಾರೋ ಅಂದರ್ ಬಾಹರ್ ಜೂಜಾಟವಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತಾನು ಶ್ರೀ.ಲಿಯಾಕತ್ ಉಲ್ಲಾ, ಪಿಎಸ್ಐ, ಅ.ವಿ. ಮತ್ತು ಪೊಲೀಸ್ ಸಿಬ್ಬಂದಿ ಹಾಗು ಪಂಚಾಯ್ತಿದಾರರೊಂದಿಗೆ, ಸರ್ಕಾರಿ ಜೀಪ್ ನಂ. ಕೆ.ಎ.40 ಜಿ. 61 ರಲ್ಲಿ ಮಲ್ಲೇನಹಳ್ಳಿ ಬಳಿ ಇರುವ ಕೆರೆ ಕಾಲುವೆಯಿಂದ ಬಳಿ ಹೋಗಿ, ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಮೇಲೆ ದಾಳಿ ನಡೆಸಿ, 1) ನರಸಿಂಹಮೂರ್ತಿ ಬಿನ್ ಲೇಟ್ ಗಂಗಪ್ಪ, 40 ವರ್ಷ, ಬುಡುಗ ಜಂಗಮ, ಜಿರಾಯ್ತಿ, ಬೆಲ್ಲಾವಳಹಳ್ಳಿ ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು, 2) ವಿಶ್ವನಾಥ ಬಿನ್ ಅಂಜಿನಪ್ಪ, 30 ವರ್ಷ, ಬುಡುಗ ಜಂಗಮ ಜನಾಂಗ, ಜಿರಾಯ್ತಿ, ಬೆಲ್ಲಾವಳಹಳ್ಳಿ ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು 3) ನಾರಾಯಣಸ್ವಾಮಿ ಬಿನ್ ಮಾರುತಿ, 32 ವರ್ಷ, ಬುಡುಗ ಜಂಗಮ ಜನಾಂಗ, ಬೆಲ್ಲಾವಳಹಳ್ಳಿ ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು 4) ರಾಮಸ್ವಾಮಿ ಬಿನ್ ಲೇಟ್ ಆದಿಮೂರ್ತೆಪ್ಪ, 42 ವರ್ಷ, ಬುಡುಗಜಂಗಮ ಜನಾಂಗ, ಬೆಲ್ಲಾವಳಹಳ್ಳಿ ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು 5) ನಾರಾಯಣಸ್ವಾಮಿ ಬಿನ್ ನರಸಿಂಹಪ್ಪ, 32 ವರ್ಷ, ಬುಡುಗ ಜಂಗಮ ಜನಾಂಗ, ಜಿರಾಯ್ತಿ, ಬೆಲ್ಲಾವಳಹಳ್ಳಿ ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು 6) ವರದ ರಾಜು ಲೇಟ್ ತಿಮ್ಮಯ್ಯ, 42 ವರ್ಷ, ವ್ಯಾಪಾರ ಬುಡುಗ ಜಂಗಮ ಜನಾಂಗ, ಬೆಲ್ಲಾವಳಹಳ್ಳಿ ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು ರವರುಗಳನ್ನು ಹಿಡಿದುಕೊಂಡು, ಜೂಜಾಟಕ್ಕೆ ಕಟ್ಟಿದ್ದ 20,470/- ರೂ ನಗದು ಹಣ ಹಾಗು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಮಧ್ಯಾಹ್ನ 3-15 ರಿಂದ 4-00 ಗಂಟಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು, ಠಾಣೆಗೆ ಸಂಜೆ 5-00 ಗಂಟೆಗೆ ವಾಪಸ್ಸು ಬಂದಿದ್ದು, ಆರೋಪಿತರನ್ನು ಹಾಗು ಮಾಲನ್ನು ಮುಂದಿನ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

9) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 118/2019. ಕಲಂ. 87 ಕೆ.ಪಿ.ಆಕ್ಟ್ :-

     ದಿನಾಂಕ: 08/04/2019 ರಂದು ಸಂಜೆ 4.30 ಗಂಟೆಯಲ್ಲಿ  ಘನ ಸಿ ಜೆ ಮತ್ತು ಜೆ ಎಂ ಎಫ್ ಸಿ ಗೌರಿಬಿದನೂರು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ,ದಿನಾಂಕ;07/04/2019 ರಂದು  ರಾತ್ರಿ ಸುಮಾರು 11-30 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಪ್ರೊಬೇಷನರಿ ಡಿ.ಎಸ್.ಪಿ. ಸಾಹೇಬರಾದ ಶ್ರೀ.ಗೌತಮ್ ಕೆ.ಸಿ. ರವರಿಗೆ  ಗಂಗಸಂದ್ರ ಗ್ರಾಮದ ಕೆರೆಯ ಕಾಲುವೆಯಲ್ಲಿ ಯಾರೋ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪ್ರೊಬೇಷನರಿ ,ಡಿ.ಎಸ್.ಪಿ.ಸಾಹೇಬರು, ಶ್ರೀ. ವೈ. ಅಮರನಾರಾಯಣ್, ಸಿಪಿಐ ಗೌರಿಬಿದನೂರು ವೃತ್ತರವರು, ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಹಾಗು  ಪಂಚರೊಂದಿಗೆ,  ಮಾಹಿತಿ ಇದ್ದ ಕೆರೆಯ ರಾಜ ಕಾಲುವೆ ಬಳಿ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ, ಕೆರೆಯ ಕಾಲುವೆಯಲ್ಲಿ ಜನರು ಗುಂಪು ಸೇರಿಕೊಂಡು, ಚಾರ್ಜರ್ ಲೈಟ್ ನ್ನು ಇಟ್ಟು ಕೊಂಡು, ಹಣವನ್ನು ಜೂಜಾಟಕ್ಕೆ ಕಟ್ಟಿ, ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿವುದನ್ನು ಖಚಿತ ಪಡಿಸಿಕೊಂಡು, ಪೊಲೀಸ್ ಅಧಿಕಾರಿ ಹಾಗು ಸಿಬ್ಬಂದಿಯವರುಗಳು  ಜೂಜಾಟವಾಡುತ್ತಿದ್ದ 1) ಜಗಧೀಶ್ ಬಿನ್ ಲೇಟ್ ಗೋವಿಂದಯ್ಯ, 38 ವರ್ಷ, ಹಿಂದೂ ಸಾದರು,  ವ್ಯಾಪಾರ, ವಾಸ ಪ್ರಶಾಂತ ನಗರ, ಗೌರೀಬಿದನೂರು ಟೌನ್. 2) ರಘು ಬಿನ್ ಲೇಟ್ ನರಸಪ್ಪ, 42 ವರ್ಷ,  ಹಿಂದೂ ಸಾದರ ಜನಾಂಗ,  ವಾಸ ಗಂಗಸಂದ್ರ ಗ್ರಾಮ, ಗೌರೀಬಿದನೂರು ತಾಲ್ಲೂಕು. 3) ಪಧ್ಮನಾಭರೆಡ್ಡಿ ಬಿನ್ ಮಲ್ಲಿಕಾರ್ಜುನ ರೆಡ್ಡಿ  ರೆಡ್ಡಿ ಜನಾಂಗ,  30 ವರ್ಷ,  ಹೋಟೆಲ್ ವ್ಯಾಪಾರ,  ವಾಸ ವಿನಾಯಕ ನಗರ,  ಗೌರೀಬಿದನೂರು ಟೌನ್,  4) ಪ್ರಕಾಶ ಬಿನ್ ಲೇಟ್ ರಾಮಯ್ಯ, 55 ವರ್ಷ,  ವೈಶ್ಯರು, ವ್ಯಾಪಾರ,  ವಿನಾಯಕ ನಗರ , ಗೌರೀಬಿದನೂರು ಟೌನ್. 5)  ಶ್ರೀನಿವಾಸರೆಡ್ಡಿ ಬಿನ್ ವೆಂಕಟರೆಡ್ಡಿ  36 ವರ್ಷ,  ವಕ್ಕಲಿಗರು ಜಿರಾಯ್ತಿ,  ವಾಸ ಗುಂಡ್ಲಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು, 6) ಸೋಮಶೇಖರ ಬಿನ್ ಮೈಲಾರಪ್ಪ, 42 ವರ್ಷ, ಬಲಜಿಗರು,  ವ್ಯಾಪಾರ, ವಾಸ ಸುಮಂಗಲಿ ಬಡಾವಣೆ, ಗೌರೀಬಿದನೂರು ಟೌನ್.  7)  ಶ್ರೀನಾಥ ಬಿನ್  ಲಕ್ಷ್ಮಪ್ಪ, 34 ವರ್ಷ,  ಬೆಸ್ತರ ಜನಾಂಗ,  ಜಿರಾಯ್ತಿ,  ವಾಸ ನಾಮಗೊಂಡ್ಲು ಗ್ರಾಮ,  ಗೌರೀಬಿದನೂರು ತಾಲ್ಲೂಕು. 8) ಅಶ್ವತ್ಥನಾರಾಯಣ ಬಿನ್ ತಿಮ್ಮಯ್ಯ, 31 ವರ್ಷ, ಕುರುಬ ಜನಾಂಗ,  ಜಿರಾಯ್ತಿ ವಾಸ  ಮುನೇಶ್ವರ ಬಡಾವಣೆ  ಗೌರೀಬಿದನೂರು  ಟೌನ್.  9) ಲಕ್ಷ್ಮೀಪತಿ ಬಿನ್ ಚಿಕ್ಕರೆಡ್ಡಪ್ಪ, 46 ವರ್ಷ,  ಕುರುಬ ಜನಾಂಗ, ಕುರಿಮೇಕೆ ವ್ಯಾಪಾರ , ಸಿದ್ದೇನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು. 10) ನವೀನ್ ಕುಮಾರ್ ಬಿನ್ ರಂಗಪ್ಪ, 29  ಹಿಂದೂ ಸಾದರು ಜನಾಂಗ ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ ಕಲ್ಲೂಡಿ  ಗ್ರಾಮ, ಗೌರೀಬಿದನೂರು ಟೌನ್.  11) ಪ್ರಸಾದ್ ರೆಡ್ಡಿ ಬಿನ್ ಲೇಟ್ ವೆಂಕಟರಾಮರೆಡ್ಡಿ , 40 ವರ್ಷ,  ರೆಡ್ಡಿ ಜನಾಂಗ,  ಹೂವಿನ ವ್ಯಾಪಾರ  ಕಲ್ಲಿನಾಯಕನಹಳ್ಳಿ, ಗೌರೀಬಿದನೂರು ತಾಲ್ಲೂಕು. 12) ನಾಗರಾಜ ಬಿನ್ ಲೇಟ್ ತಿಮ್ಮಯ್ಯ, 39 ವರ್ಷ,  ಬೋವಿ ಜನಾಂಗ,  ಜಿರಾಯ್ತಿ, ಎಂ. ಜಾಲಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು.  ಇವರನ್ನು ಹಿಡಿದುಕೊಂಡು, ವಿಚಾರಿಸಿ, ಸ್ಥಳದಲ್ಲಿ    ಜೂಜಾಟಕ್ಕೆ ಬಳಸುತ್ತಿದ್ದ 52 ಇಸ್ಪೀಟ್ ಎಲೆಗಳು,  ಜೂಜಾಟ ಪಂದ್ಯಕ್ಕೆ ಕಟ್ಟಿದ್ದ  ನಗದು ಹಣ 1,55,400/- ರೂಗಳನ್ನು    ದಿ:08/04/2019 ರಂದು ಬೆಳಗಿನ ಜಾವ 01-00 ರಿಂದ 02-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು, ಬೆಳಗಿನ ಜಾವ 02-30  ಗಂಟೆಗೆ ಠಾಣೆಗೆ  ಬಂದು ನೀಡಿದ ಮೆಮೋವನ್ನು ಪಡೆದುಕೊಂಡು ಠಾಣಾ ಎನ್ ಸಿ ಆರ್ 187/2019 ರಂತೆ ದಾಖಲು ಮಾಡಿಕೊಂಡು ನಂತರ ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ಪ್ರ.ವ.ವರದಿಗಳನ್ನು  ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೆ.

10) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 57/2019. ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ:08/04/2019 ರಂದು ಸಂಜೆ 6:00 ಗಂಟೆಗೆ  ರವಿಕುಮಾರ್ ಸಿ. ಪಿ.ಎಸ್.ಐ ಗೌರಿಬಿದನೂರು ಪುರ ಪೊಲೀಸ್ ಠಾಣೆ ರವರು ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ:08/04/2019 ರಂದು 16-15 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ ನನಗೆ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ತಾಲ್ಲೂಕು ಗುಂಡಾಪುರ ಗ್ರಾಮದ ಕೆರೆ ಕಡಗೆ ಹೋಗು ಮಣ್ಣಿನ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಅಂದರ್ – ಬಾಹರ್ ಜೂಜಾಟವಾಡುತ್ತಿರುತ್ತಿರುವುದಾಗಿ ಮಾಹಿತಿ ಬಂದಿದ್ದು, ಕೂಡಲೇ ನಾನು ಠಾಣೆಗೆ ಪಂಚರನ್ನು ಕರೆಯಿಸಿಕೊಂಡು ಅವರಿಗೆ ವಿಚಾರವನ್ನು ತಿಳಿಸಿದ್ದು, ಅವರು ಒಪ್ಪಿಕೊಂಡ ನಂತರ ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-135, ಹೆಚ್.ಸಿ-226, ಹೆಚ್.ಸಿ-244, ಹೆಚ್.ಸಿ-45, ಹೆಚ್,ಸಿ-214, ಹೆಚ್.ಸಿ-242, ಪಿಸಿ-455, ಪಿಸಿ-362, ಪಿ.ಸಿ-17, ರವರೊಂದಿಗೆ ಇಲಾಖೆಯಿಂದ ಒದಗಿಸಿರುವ ಸರ್ಕಾರಿ ವಾಹನದಲ್ಲಿ ಬಜಾರ್ ರಸ್ತೆಯ ಮಾರ್ಗವಾಗಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಕೋಟೆಯಲ್ಲಿ ವಾಹನವನ್ನು ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ ಎಲ್ಲರೂ ಕೆಳಕ್ಕೆ ಇಳಿದು ಸ್ವಲ್ಪ ದೂರ ಶಾಲೆಯ ಕಡೆಗೆ ನಡೆದುಕೊಂಡು ಹೋಗಿದ್ದು, ಶಾಲೆಯ ಹಿಂಭಾಗದಲ್ಲಿ ಸೀಮೆಜಾತಿ ಮರದ ಕೆಳಗೆ ಯಾರೋ ಆಸಾಮಿಗಳು 400 ರೂಪಾಯಿಗಳು ಅಂದರ್, ಎಂದು ಮತ್ತೊಬ್ಬ ಆಸಾಮಿಯು 500/- ರೂಪಾಯಿಗಳು ಬಾಹರ್ ಎಂದು ಕೂಗಾಡಿಕೊಂಡು ಜೂಜಾಟ ಆಡುತ್ತಿದ್ದುದ್ದನ್ನು ಖಾತ್ರಿ ಪಡಿಸಿಕೊಂಡು ಪಂಚರ ಸಮ್ಮುಖದಲ್ಲಿ ಎಲ್ಲರೂ ದಾಳಿ ಮಾಡಿ ಯಾರಿಗೂ ಓಡಬಾರದೆಂದು ತಿಳಿಸಿದರೂ ಇಸ್ಪೀಟ್ ಜೂಜಾಟವಾಡುತ್ತಿದ್ದ ಕೆಲವರು ಓಡಿಹೋಗಲು ಪ್ರಯತ್ನಿಸಿದ್ದು, ಸಿಬ್ಬಂದಿಯವರು ಅವರನ್ನು ಬೆನ್ನಟ್ಟಿಕೊಂಡು ಹೋಗಿ ಹಿಡಿದುಕೊಂಡಿರುತ್ತಾರೆ. ಅವರ ಹೆಸರು/ವಿಳಾಸಗಳನ್ನು ಕೇಳಿದಾಗ ಅವರ ಠಾಣೆಯ ಸಿಬ್ಬಂದಿಗಳಾದ ಹೆಚ್.ಸಿ-12 ಶಿವಶಂಕರಪ್ಪ, ಹೆಚ್.ಸಿ-135 ಮಂಜುನಾಥ, ಹೆಚ್.ಸಿ-244 ಗೋಪಾಲ್, ಪಿ.ಸಿ-455 ಅಶ್ವತ್ಥಪ್ಪ, ಪಿ.ಸಿ-102 ಪ್ರತಾಪ್, ಪಿಸಿ-201 ಸುರೇಶ, ಪಿಸಿ-362 ನಾಗೇಶ, ಪಿ.ಸಿ-104 ನರಸಿಂಹಮೂರ್ತಿ, ಹೆಚ್.ಜಿ-374 ಸಿದ್ದೇಶ್  ರವರೊಂದಿಗೆ ಇಲಾಖೆಯಿಂದ ಒದಗಿಸಿರುವ ಸರ್ಕಾರಿ ವಾಹನದಲ್ಲಿ ಮಧುಗಿರಿ ರಸ್ತೆಯ ಮುಖಾಂತರ ಗುಂಡಾಪುರಕ್ಕೆ ಹೋಗಿ ವಾಹನವನ್ನು ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ ಎಲ್ಲರೂ ಕೆರೆ ಕಡೆಯ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ ರಸ್ತೆಯ ಪಕ್ಕದ ಮರದ ನೆರಳಿನಲ್ಲಿ ಯಾರೋ ಆಸಾಮಿಗಳು 400 ರೂಪಾಯಿಗಳು ಅಂದರ್, ಎಂದರೆ ಮತ್ತೊಬ್ಬ ಆಸಾಮಿಯು 500/- ರೂಪಾಯಿಗಳು ಬಾಹರ್ ಎಂದು ಕೂಗಾಡಿಕೊಂಡು ಜೂಜಾಟ ಆಡುತ್ತಿದ್ದುದ್ದನ್ನು ಖಾತ್ರಿ ಪಡಿಸಿಕೊಂಡು ಪಂಚರ ಸಮ್ಮುಖದಲ್ಲಿ ಎಲ್ಲರೂ ದಾಳಿ ಮಾಡಿ ಯಾರಿಗೂ ಓಡಬಾರದೆಂದು ತಿಳಿಸಿದರೂ ಸ್ಥಳದಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದವರು ಓಡಿಹೋಗಲು ಪ್ರಯತ್ನಿಸಿದ್ದು, ಸಿಬ್ಬಂದಿಯವರು ಅವರಲ್ಲಿ ಓಡಲು ಪ್ರಯತ್ನಿಸಿದವನ್ನು ಒಬ್ಬೊಬ್ಬರನ್ನು ಬೆನ್ನಟ್ಟಿಕೊಂಡು ಹೋಗಿ ಹಿಡಿದುಕೊಂಡಿದ್ದು, ಅವರ ಹೆಸರು/ವಿಳಾಸಗಳನ್ನು ಕೇಳಿದಾಗ 1)ಶಾಂತರಾಜು ಬಿನ್ ವೆಂಕಟರವಣಪ್ಪ, 40 ವರ್ಷ, ವ್ಯವಸಾಯ, ಹಿಂದೂ ಸಾದರು, ವಾಸ: ಗುಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು. 2)ಸುರೇಶ್ ಬಿನ್ ಗಂಗಪ್ಪ, 34 ವರ್ಷ, ಈಡಿಗ ಜನಾಂಗ, ಪೈಂಟಿಂಗ್ ಕೆಲಸ, ವಾಸ: ಗುಂಡಾಪುರ ಗ್ರಾಮ, 3)ಅನಂತ್ ಕುಮಾರ್ ಬಿನ್ ಹನುಮಂತಪ್ಪ, 47 ವರ್ಷ, ಹಿಂದೂ ಸಾದರು, ಆಟೋ ಚಾಲಕ, ವಾಸ:ಗುಂಡಾಪುರ ಗ್ರಾಮ, 4)ಕದಿರೆಪ್ಪ ಬಿನ್ ಕದಿರೆಪ್ಪ, 50 ವರ್ಷ, ಪ. ಜಾತಿ, ಕೂಲಿ ಕೆಲಸ, ವಾಸ: ಗುಂಡಾಪುರ ಗ್ರಾಮ, 5)ಮುಕುಂದ ಬಿನ್ ಹನುಮಯ್ಯ, 21 ವರ್ಷ, ಪ.ಜಾತಿ, ಎಲೆಕ್ಟ್ರಿಷಿಯನ್, ವಾಸ: ಗುಂಡಾಪುರ ಗ್ರಾಮ, 6) ಯಲ್ಲಪ್ಪ ಬಿನ್ ನಾರಾಯಣಪ್ಪ, 40 ವರ್ಷ, ಕುರುಬ ಜನಾಂಗ, ದಲ್ಲಾಳಿ ಕೆಲಸ, ವಾಸ: ಗುಂಡಾಪುರ ಗ್ರಾಮ, 7)ಕೃಷ್ಣಪ್ಪ ಬಿನ್ ಗಂಗಯ್ಯ, 42 ವರ್ಷ, ನಾಯಕರ ಜನಾಂಗ, ಕೂಲಿ ಕೆಲಸ, ವಾಸ:ಗುಂಡಾಪುರ ಗ್ರಾಮ, 8)ನರಸಿಂಹಮೂರ್ತಿ ಬಿನ್ ಲಕ್ಷ್ಮೀನರಸಿಂಹಪ್ಪ, 32 ವರ್ಷ, ನಾಯಕರ ಜನಾಂಗ, ಪೈಂಟಿಂಗ್ ಕೆಲಸ, ವಾಸ: ಗುಂಡಾಪುರ ಗ್ರಾಮ, 9) ಬಾಬು ಬಿನ್ ಪಾಪಣ್ಣ, 50 ವರ್ಷ, ನಾಯಕರ ಜನಾಂಗ, ವ್ಯವಸಾಯ, ವಾಸ: ಗುಂಡಾಪುರ ಗ್ರಾಮ, 10)ವೆಂಕಟರಾಯಪ್ಪ ಬಿನ್ ವೆಂಕಟಪ್ಪ, 46 ವರ್ಷ, ಈಡಿಗರ ಜನಾಂಗ, ಫ್ಯಾಕ್ಟರಿಯಲ್ಲಿ ಕೆಲಸ, ವಾಸ: ಗುಂಡಾಪುರ ಗ್ರಾಮ, ಎಂದು ತಿಳಿಸಿದ್ದು, ಅವರಿಗೆ ಇಸ್ಪೀಟ್ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೆ ಪರವಾನಗಿ ಇಲ್ಲದೇ ಇದ್ದು, ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳನ್ನು, ಮತ್ತು ಪಣಕ್ಕೆ ಕಟ್ಟಿದ್ದ ನಗದು ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತೆ. ಹಣವನ್ನು ಎಣಿಕೆ ಮಾಡಲಾಗಿ ಒಟ್ಟು ಹಣ 4950/- ರೂಪಾಯಿಗಳಿರುತ್ತದೆ. ಆರೋಪಿಗಳನ್ನು ಮತ್ತು ಮಾಲನ್ನು ಮುಂದಿನ ತನಿಖೆಯ ಸಲುವಾಗಿ ಪಂಚರ ಸಮ್ಮುಖದಲ್ಲಿ 16-30 ರಿಂದ 17-30 ಗಂಟೆಯವರೆಗೆ ಠಾಣಾ ಲ್ಯಾಪ್ ಟಾಪ್ ನಲ್ಲಿ ಪಂಚನಾಮೆಯನ್ನು ಸಿದ್ದಪಡಿಸಿ ಪೆನ್ ಡ್ರೈವ್ ಮುಖಾಂತರ ಠಾಣೆಗೆ ಕಳುಹಿಸಿಕೊಟ್ಟು ಪ್ರೀಂಟ್ ತೆಗೆಯಿಸಿಕೊಂಡು ನಂತರ ಸ್ಥಳಕ್ಕೆ ಬಂದು ಹಾಜರುಪಡಿಸಿದ್ದು, ನಂತರ ಆರೋಪಿ ಹಾಗೂ ಮಾಲಿನೊಂದಿಗೆ ಸಂಜೆ 18-00 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಎನ್.ಸಿ.ಆರ್ 148/2019 ರಂತೆ ಎನ್.ಸಿ.ಆರ್ ಅನ್ನು ದಾಖಲಿಸಿ ಘನ ನ್ಯಾಯಾಲಯದ  ಅನುಮತಿಯನ್ನು ಪಡೆದು ದಿನಾಂಕ:08/04/2019 ರಂದು ರಾತ್ರಿ 19:45 ಗಂಟೆಗೆ ಪ್ರಕರಣವನ್ನು ದಾಖಲು ಮಾಡಿರುತ್ತೆ.

11) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 58/2019. ಕಲಂ. 78(3) ಕೆ.ಪಿ.ಆಕ್ಟ್:-

     ದಿನಾಂಕ:09/04/2019 ರಂದು ಮದ್ಯಾಹ್ನ 12:30 ಗಂಟೆಗೆ ಸಿ.ರವಿಕುಮಾರ – ಪಿ.ಎಸ್.ಐ ಗೌರಿಬಿದನೂರು ಪುರ ಠಾಣೆ ರವರು ಆರೋಪಿ, ಮಾಲು, ಪಂಚನಾಮೆ ಯೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:09/04/2019 ರಂದು ಬೆಳಿಗ್ಗೆ 11:00 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ ನನಗೆ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ಪುರದ ಮೇದರಬೀದಿಯ ವೆಲ್ ಕಮ್ ಬಾರ್ ಮುಂಬಾಗದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಮಟ್ಕಾ ಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ಕೂಡಲೇ ನಾನು ಠಾಣೆಗೆ ಪಂಚರನ್ನು ಕರೆಯಿಸಿಕೊಂಡು ಅವರಿಗೆ ವಿಚಾರವನ್ನು ತಿಳಿಸಿದ್ದು, ಅವರು ಒಪ್ಪಿಕೊಂಡ ನಂತರ ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ 135 ಮಂಜುನಾಥ, ಹೆಚ್.ಸಿ 242 ಸುಬ್ರಮಣ್ಯ ರವರೊಂದಿಗೆ ಇಲಾಖೆಯಿಂದ ಒದಗಿಸಿರುವ ಸರ್ಕಾರಿ ವಾಹನದಲ್ಲಿ ವೆಲ್ ಕಮ್ ಬಾರ್ ಮುಂಬಾಗದ ಬಿ.ಹೆಚ್ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ನಾವೆಲ್ಲರೂ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಿದಾಗ  ಯಾರೋ ಆಸಾಮಿಯೊಬ್ಬನು 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿರುವುದು ಕಂಡುಬಂದಿದ್ದು,  ನಾವು ಪಂಚರ ಸಮ್ಮುಖದಲ್ಲಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  ತನ್ನ ಹೆಸರು  ನಜೀರ್ ಅಹಮದ್ ಬಿನ್ ಮಹಬೂಬ್ ಸಾಬ್, 60 ವರ್ಷ, ಮುಸ್ಲೀಮರು, ಹಣ್ಣಿನ ವ್ಯಾಪಾರ, ನೆಹರೂಜಿ ಕಾಲೋನಿ, ಗೌರಿಬಿದನೂರು ಪುರ  ಎಂದು ತಿಳಿಸಿದ್ದು, ಅವರಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ತನ್ನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದ್ದು, ಆರೋಪಿಯ ಬಳಿ ಒಂದು ಮಟ್ಕಾಚೀಟಿ ಹಾಗೂ ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 3600/- ರೂಪಾಯಿಗಳು  ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಜಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದ್ದು, ಆಸಾಮಿ ಮತ್ತು ಮಾಲನ್ನು ಬೆಳಿಗ್ಗೆ  11:15 ಗಂಟೆಯಿಂದ 12:15 ಗಂಟೆಯವರೆಗೆ ಬರೆದ ಪಂಚನಾಮೆಯ ಮೂಲಕ ವಶಕ್ಕೆ ಪಡೆದುಕೊಂಡಿದ್ದು,  ಆರೋಪಿ ಹಾಗೂ ಮಾಲಿನೊಂದಿಗೆ ಮದ್ಯಾಹ್ನ 12:30  ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ದೂರಾಗಿರುತ್ತೆ.

12) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 59/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ:09/04/2019 ರಂದು 13-20 ಗಂಟೆಗೆ ಸಿಪಿಐ ಗೌರಿಬಿದನೂರು ವೃತ್ತ ರವರು ಹೆಚ್.ಸಿ-60 ರವರ ಮುಖಾಂತರ ಆರೋಪಿ ಹಾಗೂ ಮಾಲಿನೊಂದಿಗೆ ಪಂಚನಾಮೆ ಹಾಗೂ ವರಧಿಯನ್ನು ಸಲ್ಲಿಸಿಕೊಂಡಿದ್ದರ ಸಾರಾಂಶವೇನೆಂದರೆ, ನಾನು ಈ ದಿನ ದಿನಾಂಕ;09/04/2019 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಕಛೇರಿಯಲ್ಲಿರುವಾಗ್ಗೆ ಗೌರಿಬಿದನೂರು ಟೌನ್ ನ ಅಂಬೇಡ್ಕರ್ ವೃತ್ತ (ಬೆಂಗಳೂರು ಸರ್ಕಲ್) ನಲ್ಲಿ ಯಾರೋ ಆಸಾಮಿಯೊಬ್ಬನು ಸಾರ್ವಜನಿಕವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶ ಮಾಡಿಕೊಟ್ಟು ಮದ್ಯವನ್ನು ಮಾರಾಟ ಮಾಡುತ್ತಿರುತ್ತಾನೆಂದು ಮಾಹಿತಿ ಬಂದಿದ್ದು, ಕೂಡಲೇ ನಾನು ನಮ್ಮ ಕಛೇರಿಯ ಸಿಬ್ಬಂದಿಯಾದ ರಿಜ್ವಾನ್ ರವರ ಮುಖಾಂತರ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಗೌರಿಬಿದನೂರು ಪುರ ಠಾಣೆಯ ಸಿಬ್ಬಂದಿಯವರಿಗೆ ಮಾಹಿತಿಯನ್ನು ನೀಡಿದ್ದು, ಸಿಬ್ಬಂದಿಯವರಾದ ಸಿಪಿಸಿ-17 ಲಕ್ಷ್ಮೀನಾರಾಯಣ, ಗುಪ್ತ ಮಾಹಿತಿಯ ಸಿಬ್ಬಂದಿಯವರನ್ನು ಕರೆದುಕೊಂಡು ಕಛೇರಿಗೆ ಒದಗಿಸಿರುವ ಬೊಲೆರೋ ವಾಹನದಲ್ಲಿ ಮಾಹಿತಿಯಂತೆ ಬೆಂಗಳೂರು ಸರ್ಕಲ್ ಗೆ ಬಂದಿದ್ದು, ಬೆಂಗಳೂರು ವೃತ್ತದ ಮಲಭಾರ್ ಟಿಫನ್ ಸೆಂಟರ್ ಮುಂಭಾಗದಲ್ಲಿ ಯಾರೋ ಒಬ್ಬ ವ್ಯಕ್ತಿಯು ಬ್ಯಾಗ್ ನಲ್ಲಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಮಾರಾಟ ಮಾಡಿಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತದೆ. ಆಸಾಮಿಯನ್ನು ಹಿಡಿದುಕೊಂಡು ಮದ್ಯವನ್ನು ಮಾರಾಟ ಮಾಡುವುದಕ್ಕೆ ನಿನ್ನಲ್ಲಿ ಪರವಾನಗಿ ಇದೇಯೇ ಎಂದು ಕೇಳಿದಾಗ ಆತನು ತನ್ನ ಬಳಿ ಪರವಾನಗಿ ಇಲ್ಲವೆಂದು ತಿಳಿಸಿದ್ದು, ಆಸಾಮಿಯನ್ನು ವಶಕ್ಕೆ ತೆಗೆದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಕೇಳಿದಾಗ ಆತನು ತನ್ನ ಹೆಸರು ಹನುಮಂತರೆಡ್ಡಿ ಎಸ್. ಬಿನ್ ಲೇಟ್ ಸಿದ್ದಾರೆಡ್ಡಿ, 31 ವರ್ಷ, ಒಕ್ಕಲಿಗರು, ಎಸಿಸಿ ಫ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಕೆಲಸ, ವಾಸ:ಜ್ಯೋತಿನಗರ, ತೊಂಡೇಭಾವಿ ಗ್ರಾಮ, ಗೌರಿಬಿದನೂರು ತಾಲ್ಲೂಕು.ಎಂದು ವಿಳಾಸವನ್ನು ತಿಳಿಸಿರುತ್ತಾನೆ. ಸ್ಥಳದಲ್ಲಿ 1)HAYWARDS CHEERS WHISKY ಎಂದು ನಮೂಧಿಸಿರುವ 90 ಎಂ.ಎಲ್. ನ 15 ಟೆಟ್ರಾ ಪಾಕೆಟ್ ಗಳು ಇದ್ದು, ಅವುಗಳಲ್ಲಿ 04 ಖಾಲಿಯಾಗಿದ್ದು, ಸ್ಥಳದಲ್ಲಿ 5 ಪೇಪರ್ ಲೋಟಗಳು ಇದ್ದವು. ಒಂದೊಂದು ಟೆಟ್ರಾ ಪಾಕೆಟ್ ನ ಬೆಲೆ 30.32/- ರೂಪಾಯಿಗಳು ಆಗಿದ್ದು, ಮಾಲಿನ ಒಟ್ಟು ಬೆಲೆ 333.52/- ರೂಪಾಯಿಗಳು ಆಗಿದ್ದು,  ಅವುಗಳೆಲ್ಲವನ್ನು ಪಂಚರ ಸಮ್ಮುಖದಲ್ಲಿ ಮದ್ಯಾಹ್ನ 12-20 ಗಂಟೆಯಿಂದ 13-00 ಗಂಟೆಯವರೆಗೆ ಇಲಾಕೆಯಿಂದ ಒದಗಿಸಿರುವ ಲ್ಯಾಪ್ಟಾಪ್ ನಲ್ಲಿ ಸಿದ್ದಪಡಿಸಿ ಸಿಬ್ಬಂದಿಯವರ ಮುಖಾಂತರ ಪೆನ್ಡ್ರೈವ್ ನಲ್ಲಿ ಹಾಕಿ ಠಾಣೆಗೆ ಕಳುಹಿಸಿಕೊಟ್ಟು ಸಿಬ್ಬಂದಿಯವರು ಮತ್ತೆ ಸ್ಥಳಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಪಂಚನಾಮೆ ಜರುಗಿಸಿ ಅವುಗಳನ್ನು ಮಂದಿನ ಕ್ರಮಕ್ಕಾಗಿ ಮಾಲೀನೊಂದಿಗೆ ಠಾಣೆಗೆ 13-15 ಗಂಟೆಗೆ ಹೆಚ್.ಸಿ-60 ರಿಜ್ವಾನ್ ರವರ ಮುಖಾಂತರ ಠಾಣೆಗೆ ಕಳುಹಿಸಿಕೊಡುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

13) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 68/2019. ಕಲಂ. 87 ಕೆ.ಪಿ.ಆಕ್ಟ್ :-

     ದಿನಾಂಕ: 07/04/2019 ರಂದು ಪಿರ್ಯಾದಿದಾರರು ಮಾಲು ಮತ್ತು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:07/04/2019 ರಂದು ಬೆಳಿಗ್ಗೆ 8-00 ಗಂಟೆಯ ಸಮಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿರುವಾಗ ತನಗೆ ಬಾತ್ಮೀದಾರರಿಂದ ದಿನ್ನೇನಹಳ್ಳಿ ಗ್ರಾಮದ ಅಶ್ವತ್ಥಕಟ್ಟೆಯ ಬಳಿ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು  ಠಾಣೆಯಲ್ಲಿದ್ದ ಸಿಬ್ಬಂಧಿಗಳಾದ ಹೆಚ್.ಸಿ-219, ಶ್ರೀನಿವಾಸಮೂರ್ತಿ, ಹೆಚ್.ಸಿ-137, ಮಂಜುನಾಥ್ , ಪಿ.ಸಿ. 532 ಶ್ರೀ ಚಿಕ್ಕಣ್ಣ, ಪಿ.ಸಿ. 392 ಶ್ರೀ ಬಾಬು ಪಿಸಿ 530 ಮಾದೇಶ್ ರವರೊಂದಿಗೆ ದ್ವಿ ಚಕ್ರವಾಹನಗಳಲ್ಲಿ ಪಂಚರೊಂದಿಗೆ ದಿನ್ನೇನಹಳ್ಳಿ ಗ್ರಾಮದ ಅಶ್ವತ್ಥಕಟ್ಟೆಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ವಾಹಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ ಗೆ 200/- ರೂ. ಬಾಹರ್ ಗೆ 200/-ರೂ.ಗಳು ಎಂದು ಕೂಗುತ್ತಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಅಲ್ಲಿದ್ದವರನ್ನು  ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಜಿ.ಬಾಲಕ್ರಿಷ್ಣ ಬಿನ್ ಲೇಟ್ ಗೋವಿಂದಪ್ಪ, 28 ವರ್ಷ, ಕುರುಬರು, ಜಿರಾಯ್ತಿ ಕೆಲಸ, ವಾಸ ದಿನ್ನೆನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು 2) ಪಿಳ್ಳಪ್ಪ ಬಿನ್ ಲೇಟ್ ಹನುಂತಪ್ಪ, 60 ವರ್ಷ, ನಾಯಕರು, ಜಿರಾಯ್ತಿ ಕೆಲಸ, ವಾಸ ದಿನ್ನೆನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು,  3) ಲಕ್ಷ್ಮೀಪತಿ ಇನ್ ಗಂಗೇಗೌಡ, 28 ವರ್ಷ, ಕುರುಬರು, ಪ್ಯಾಕ್ಟರಿಯಲ್ಲಿ ಕೆಲಸ, ವಾಸ ದಿನ್ನೆನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು, 4) ಹರೀಶ್ ಬಿನ್ ಲಿಂಗಪ್ಪ, 25 ವರ್ಷ, ಅಗಸರು, ಜಿರಾಯ್ತಿ, ದಿನ್ನೆನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು 5) ತಿಪ್ಪಣ್ಣ ಬಿನ್ ಲೇಟ್ ಅಬ್ಬಾಲಪ್ಪ, 45 ವರ್ಷ, ಆದಿಕನರ್ಾಟಕ ಜನಾಂಗ, ಕೂಲಿ ಕೆಲಸ, ವಾಸ ದಿನ್ನೆನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ಹರೀಶ್ ಕುಮಾರ್ ಬಿನ್ ಆವುಲಪ್ಪ, 25 ವರ್ಷ, ಕುರುಬರು, ವಿದ್ಯಾರ್ಥಿ, ವಾಸ ಗುಟ್ಟೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 5580/-(ಐದು ಸಾವಿರದ ಐದು ನೂರ ಎಂಬತ್ತು ರೂಪಾಯಿಗಳು ಮಾತ್ರ.) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು  ಬೆಳಿಗ್ಗೆ 9-00 ಗಂಟೆಯಿಂದ 10-00 ಗಂಟೆಯ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿದ್ದು ಮಾಲನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು ಇವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ 116/2019 ರೀತ್ಯಾ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ದಿ: 09/04/2019 ರಂದು 9-30 ಗಂಟೆಗೆ ಠಾಣಾ ಮೊ.ಸಂ: 68/2019 ಕಲಂ: 87 ಕೆಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

14) ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ. 69/2019. ಕಲಂ. 87 ಕೆ.ಪಿ.ಆಕ್ಟ್ :-

     ದಿನಾಂಕ: 07/04/2019 ರಂದು ಪಿರ್ಯಾದಿದಾರರಾದ ಹೆಚ್.ಸಿ-137, ಮಂಜುನಾಥ್ ರವರು ಮಾಲು ಮತ್ತು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:07/04/2019 ರಂದು ಬೆಳಿಗ್ಗೆ 10-45 ಗಂಟೆಯ ಸಮಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿರುವಾಗ ತನಗೆ ಬಾತ್ಮೀದಾರರಿಂದ ಜರಬಂಡಹಳ್ಳಿ ಗ್ರಾಮದ ಅಶ್ವತ್ಥಕಟ್ಟೆಯ ಬಳಿ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು  ಠಾಣೆಯಲ್ಲಿದ್ದ ಸಿಬ್ಬಂಧಿಗಳಾದ ಹೆಚ್.ಸಿ-219, ಶ್ರೀನಿವಾಸಮೂರ್ತಿ ಹೆಚ್.ಸಿ-59, ಶ್ರೀನಿವಾಸಪ್ಪ, ಪಿ.ಸಿ. 532 ಶ್ರೀ ಚಿಕ್ಕಣ್ಣ, ಪಿ.ಸಿ. 392 ಶ್ರೀ ಬಾಬು ಪಿಸಿ 530 ಮಾದೇಶ್ ರವರೊಂದಿಗೆ ದ್ವಿ ಚಕ್ರವಾಹನಗಳಲ್ಲಿ ಪಂಚರೊಂದಿಗೆ ಜರಬಂಡಹಳ್ಳಿ ಗ್ರಾಮದ ಅಶ್ವತ್ಥಕಟ್ಟೆಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ವಾಹಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ ಗೆ 200/- ರೂ. ಬಾಹರ್ ಗೆ 200/-ರೂ.ಗಳು ಎಂದು ಕೂಗುತ್ತಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ತಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಅಲ್ಲಿದ್ದವರನ್ನು  ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ನರಸಿಂಹಮೂರ್ತಿ ಬಿನ್ ಲೇಟ್ ನರಸಪ್ಪ, 54 ವರ್ಷ, ನಾಯಕರು, ಜಿರಾಯ್ತಿ, ವಾಸ ಜರಬಂಡಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಕಿರಣ್ ಬಿನ್ ರಾಮಾಂಜಿನಪ್ಪ, 27 ವರ್ಷ, ಬೋವಿ ಜನಾಂಗ, ಚಾಲಕ ಕೆಲಸ, ವಾಸ ಜರಬಂಡಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 3) ಕ್ರಿಷ್ಣಪ್ಪ ಬಿನ್ ಜಯಗಂಗಪ್ಪ 65 ವರ್ಷ, ನಾಯಕರು, ಸಿಮೇಹಸು ವ್ಯಾಪಾರ, ವಾಸ ಜರಬಂಡಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 4) ವೆಂಕಟಸ್ವಾಮಿ ಬಿನ್ ಲೇಟ್ ವೆಂಕಟಪ್ಪ , 56 ವರ್ಷ, ಆದಿಕರ್ನಾಟಕ ಜನಾಂಗ, ಜಿರಾಯ್ತಿ, ಜರಬಂಡಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 5) ವೆಂಕಟೇಶ ಬಿನ್ ಲೇಟ್ ಚಿನ್ನಪ್ಪ, 51 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವಾಸ ಗುಟ್ಟೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 4420/-(ನಾಲ್ಕು ಸಾವಿರದ ನಾಲ್ಕು ನೂರ ಇಪ್ಪತ್ತು ರೂಪಾಯಿಗಳು ಮಾತ್ರ.) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು  ಬೆಳಿಗ್ಗೆ 11-30 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿದ್ದು ಮಾಲನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು ಇವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ 117/2019 ರೀತ್ಯಾ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ದಿ: 09/04/2019 ರಂದು ಬೆಳಿಗ್ಗೆ 10-20 ಗಂಟೆಗೆ ಠಾಣಾ ಮೊ.ಸಂ: 69/2019 ಕಲಂ: 87 ಕೆಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

15) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 70/2019. ಕಲಂ. 87 ಕೆ.ಪಿ.ಆಕ್ಟ್ :- :-

     ದಿನಾಂಕ:07/04/2019 ರಂದು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸಮೂರ್ತಿ ಹೆಚ್.ಸಿ 219 ರವರು ಮಾಲು ಮತ್ತು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:07/04/2019 ರಂದು ಮದ್ಯಾಹ್ನ 1-00 ಗಂಟೆಯ ಸಮಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿರುವಾಗ ತನಗೆ ಬಾತ್ಮೀದಾರರಿಂದ ನಾಮಗೊಂಡ್ಲು ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು  ಠಾಣೆಯಲ್ಲಿದ್ದ ಸಿಬ್ಬಂಧಿಗಳಾದ ಹೆಚ್.ಸಿ-59, ಶ್ರೀನಿವಾಸಪ್ಪ, ಹೆಚ್.ಸಿ-137, ಮಂಜುನಾಥ್ , ಪಿ.ಸಿ. 532 ಶ್ರೀ ಚಿಕ್ಕಣ್ಣ, ಪಿ.ಸಿ. 392 ಶ್ರೀ ಬಾಬು ಪಿಸಿ 530 ಮಾದೇಶ್ ರವರೊಂದಿಗೆ ದ್ವಿ ಚಕ್ರವಾಹನಗಳಲ್ಲಿ ಪಂಚರೊಂದಿಗೆ ನಾಮಗೊಂಡ್ಲು ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ವಾಹಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ ಗೆ 200/- ರೂ. ಬಾಹರ್ ಗೆ 200/-ರೂ.ಗಳು ಎಂದು ಕೂಗುತ್ತಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ತಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಅಲ್ಲಿದ್ದವರನ್ನು  ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1)  ವೆಂಕಟರಮಣಸ್ವಾಮಿ ಬಿನ್ ವೆಂಕಟಸ್ವಾಮಿ, 39 ವರ್ಷ, ವಕ್ಕಲಿಗರು, ಜಿರಾಯ್ತಿ, ನಾಮಗೊಂಡ್ಲು ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಹರೀಶ್ ಬಿನ್ ಆಂಜಿನಪ್ಪ, 24 ವರ್ಷ, ಬೋವಿ ಜನಾಂಗ, ರಿಸೆಪ್ಷನ್ ಕೆಲಸ, ವಾಸ ಹಿರೆಬಿದನೂರು ಗ್ರಾಮ, ಗೌರಿಬಿದನೂರು ತಾಲ್ಲೂಕು, 3) ರಾಮ ಬಿನ್ ಬಾಲಪ್ಪ, 28 ವರ್ಷ, ನಾಯಕರು, ಟೈಲ್ಸ್ ಕೆಲಸ, ನಾಮಗೊಂಡ್ಲು ಗ್ರಾಮ, ಗೌರಿಬಿದನೂರು ತಾಲ್ಲೂಕು 4) ಶಬೀರ್ ಬಿನ್ ಅಬ್ದುಲ್ ಸಾಬ್, 35 ವರ್ಷ, ಮುಸ್ಲಿಂ ಜನಾಂಗ, ನಾಮಗೊಂಡ್ಲು ಗ್ರಾಮ, ಗೌರಿಬಿದನೂರು ತಾಲ್ಲೂಕು 5) ಕದಿರಿಪತಿ ಬಿನ್ ಲೇಟ್ ನರಸಿಂಹಯ್ಯ, 50 ವರ್ಷ, ನಾಯಕರು, ಜಿರಾಯ್ತಿ, ನಾಮಗೊಂಡ್ಲು ಗ್ರಾಮ, ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು, ಅವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 6850/-(ಆರು ಸಾವಿರದ ಎಂಟನೂರ ಐವತ್ತು ರೂಪಾಯಿಗಳು ಮಾತ್ರ.) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು  ಮದ್ಯಾಹ್ನ 1-45 ಗಂಟೆಯಿಂದ 2-45 ಗಂಟೆಯ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿದ್ದು ಮಾಲನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು ಇವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ 118/2019 ರೀತ್ಯಾ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ದಿ: 09/04/2019 ರಂದು ಬೆಳಿಗ್ಗೆ 11-00 ಗಂಟೆಗೆ ಠಾಣಾ ಮೊ.ಸಂ: 70/2019 ಕಲಂ: 87 ಕೆಪಿ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

16) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 27/2019. ಕಲಂ. 15(A), 32(3) ಕೆ.ಇ.ಆಕ್ಟ್:-

     ದಿನಾಂಕ:08/04/2019 ರಂದು ಫಿರ್ಯಾದಿದಾರರು ಮದ್ಯಾಹ್ನ 12-15 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:08/04/2019 ರಂದು ಬೆಳಗ್ಗೆ 09-30 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು  ಪೈಪಾಳ್ಯ ಗ್ರಾಮದಲ್ಲಿ ಚಿಲ್ಲರೆ ಅಂಗಡಿಯ ಬಳಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ಪೈಪಾಳ್ಯ ಗ್ರಾಮದ ಚಿಲ್ಲರೆ ಅಂಗಡಿಯ ಬಳಿಗೆ ಹೋಗಲಾಗಿ ನಾವು ಹೋಗಿದ್ದ ಜೀಪನ್ನು ನೋಡಿ ಚಿಲ್ಲರೆ ಅಂಗಡಿಯ ಮುಂಬಾಗದಲ್ಲಿದ್ದ ಯಾರೋ ಒಬ್ಬರು ಓಡಿ ಹೋಗಿದ್ದು ಚಿಲ್ಲರೆ ಅಂಗಡಿಯ ಬಳಿ ಒಬ್ಬ ಆಸಾಮಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ನಂಜುಂಡಪ್ಪ ಬಿನ್ ಲಕ್ಷ್ಮನ್ನ, 60 ವರ್ಷ ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ ಪೈಪಾಳ್ಯ  ಗ್ರಾಮ  ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ 22  ಹೈ ವಾರ್ಡ್ಸ್ ಚೀರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕಟ್ ಗಳು (ಸುಮಾರು  660/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ ನೀರಿನ ಬಾಟಲ್ ಮತ್ತು 02 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 01 ಖಾಲಿ ಹೈ ವಾರ್ಡ್ಸ್ ಚೀರ್ಸ್ ವಿಸ್ಕಿ ಟೆಟ್ರಾ ಪಾಕೆಟ್ ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ, ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ 27/2019 ಕಲಂ 15(ಎ) 32 (3) KE ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

17) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 70/2019. ಕಲಂ. 87 ಕೆ.ಪಿ.ಆಕ್ಟ್ ಮತ್ತು ಕಲಂ: 11(1) PREVENTION OF CRUELTY TO ANIMALS ACT:-

     ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ವಿ ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ: 08-04-2019 ರಂದು ಮದ್ಯಾಹ್ನ 2.45 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ತಾಲ್ಲೂಕು ಹಂಡಿಗನಾಳ ಗ್ರಾಮಕ್ಕೆ ಸೇರಿದ ಸರ್ಕಾರಿ ಕೆರೆಯಲ್ಲಿ ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರಾದ ಸಿಪಿಸಿ-14 ಗೋವಿಂದಪ್ಪ, ಸಿಪಿಸಿ-409 ಜಯಶೇಖರ್, ಸಿಪಿಸಿ-11 ರಾಜ ಎನ್, ಸಿಪಿಸಿ-143 ಶಿವರಾಜಕುಮಾರ್, ಮತ್ತು ಸಿಪಿಸಿ-543 ಸುಧಾಕರ ಮತ್ತು ಪಂಚಾಯ್ತಿದಾರರಾದ 1) ಶ್ರೀ ವೇಣುಗೋಪಾಲ ಬಿನ್ ನಾರಾಯಣಸ್ವಾಮಿ, ಸುಮಾರು 26 ವರ್ಷ, ಬೋವಿ ಜನಾಂಗ ಶಿಡ್ಲಘಟ್ಟ ನಗರಸಭೆಯಲ್ಲಿ ಕೆಲಸ, ವಾರ್ಡ್ ನಂ 2 ಬೋವಿ ಕಾಲೋನಿ, ಶಿಡ್ಲಘಟ್ಟ ಟೌನ್ 2) ಮುನಿರಾಜು ಎಸ್ ಬಿನ್ ಲೇಟ್  ಶಂಕರಪ್ಪ,ಸುಮಾರು 25 ವರ್ಷ, ಬೋವಿಜನಾಂಗ, ಚಾಲಕ ವೃತ್ತಿ, ವಾರ್ಡ್ ನಂ 2 ಬೋವಿ ಕಾಲೋನಿ, ಶಿಡ್ಲಘಟ್ಟ ಟೌನ್ 3) ಹರೀಶ್ ಬಿನ್ ಪಿಳ್ಳಪ್ಪ, ಸುಮಾರು 26 ವರ್ಷ, ನಾಯಕರು, ಜಿರಾಯ್ತಿ, ವಾಸ ಎ ಹುಣಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರುಗಳೊಂದಿಗೆ ನಂ. ಕೆ.ಎ.-40-ಜಿ-357 ಸರ್ಕಾರಿ ಜೀಪು ಮತ್ತು ದ್ವಿಚಕ್ರವಾಹನಗಳಲ್ಲಿ ಶಿಡ್ಲಘಟ್ಟ ತಾಲ್ಲೂಕು ಹಂಡಿಗನಾಳ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿಮಾಡಿದ್ದು ಆ ಪೈಕಿ ಇಬ್ಬರು ಪರಾರಿಯಾಗಿದ್ದು, 3 ಜನ ಅಸಾಮಿಗಳನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1] ಶ್ರೀಧರ್ ಬಿನ್ ಲೇಟ್ ವೆಂಕಟೇಶ, 28 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ವಾಸ: ಭೋವಿ ಕಾಲೋನಿ, 2ನೇ ವಾರ್ಡ್, ಶಿಡ್ಲಘಟ್ಟ ನಗರ 2)ಪಿ. ತ್ರಿಭುಕುಮಾರ್ ಬಿನ್ ಪಾಪಣ್ಣ, 25 ವರ್ಷ, ನಾಯಕರು, ಸಾದಲಿ ಹಾಲಿನ ಸೀಲಿಂಗ್ ಸೆಂಟರ್ ನಲ್ಲಿ ಕೆಲಸ, ವಾಸ: ಎ.ಹುಣಸೇನಹಳ್ಳಿ ಗ್ರಾಮ, ಶಿಡ್ಲಗಟ್ಟ ತಾಲ್ಲೂಕು 3)ನಾರಾಯಣಸ್ವಾಮಿ ಬಿನ್ ಉಗ್ರಪ್ಪ, 41 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಹಿತ್ತಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು, ಸ್ಥಳದಿಂದ ಪರಾರಿಯಾದವರ ಹೆಸರು ವಿಳಾಸವನ್ನು ವಶಕ್ಕೆ ಪಡೆದವರಿಂದ ತಿಳಿಯಲಾಗಿ 4] ಗಣೇಶ್ ಬಿನ್ ಚನ್ನಕೃಷ್ಣಪ್ಪ, ಸುಮಾರು 35 ವರ್ಷ, ಜಿರಾಯ್ತಿ, ನಾಯಕರು, ಎ.ಹುಣಸೇನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಮತ್ತು 5] ಮುನಿಕೃಷ್ಣಪ್ಪ ಬಿನ್ ದಾಸಪ್ಪ, ಸುಮಾರು 35 ವರ್ಷ, ನಾಯಕರು, ಕೂಲಿಕೆಲಸ, ವಾಸ ಎ.ಹುಣಸೇನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ 3 ಜನ ಆಸಾಮಿಗಳನ್ನು ವಶಕ್ಕೆ ಪಡೆದು ಆರೋಪಿಗಳು ಜೂಜಾಟಕ್ಕೆ ತಂದಿದ್ದ ನಾಲ್ಕು ಜೀವಂತ ಕೋಳಿಗಳನ್ನು ಮತ್ತು ಪಣಕ್ಕಾಗಿ ಇಟ್ಟಿದ್ದ 1840-00 ರೂ ನಗದು ಹಣವನ್ನು ಪಂಚಾಯ್ತಿದಾರರ ಸಮಕ್ಷಮ ಮದ್ಯಾಹ್ನ 3.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಮಹಜರ್ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು, 3 ಜನ ಆರೋಪಿಗಳನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಗಳೊಂದಿಗೆ ಸಂಜೆ 4.30 ಗಂಟೆಗೆ ಠಾಣೆಗೆ ವಾಪಸ್ ಬಂದು ಠಾಣಾ ಮೊ.ಸಂ. 70/2019 ಕಲಂ 87 ಕೆ.ಪಿ. ಆಕ್ಟ್ ರೆ/ವಿ 11 Sub 1) Prevention of Animals Cruealty act-1960 ರೀತ್ಯಾ ಕೇಸು ದಾಖಲಿಸಿರುತ್ತೇನೆ.