ದಿನಾಂಕ : 09/03/2019ರ ಅಪರಾಧ ಪ್ರಕರಣಗಳು

1) ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 08/2019 ಕಲಂ. ಮನುಷ್ಯ ಕಾಣೆ :-

     ದಿನಾಂಕ 09/03/2019 ರಂದು ಪಿರ್ಯಾದಿ ಎಂ.ವಿ ವೆಂಕಟರವಣಪ್ಪರವರು ಠಾಣೆಗೆ ಹಾಜರಾಗಿ ನೀಡಿದ ಟೈಪಿಂಗ್ ದೂರಿನ ಸಾರಾಂಶವೇನೆಂದರೆ ತಾನು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ತಮಗೆ ಇಬ್ಬರು ಗಂಡು ಮಕ್ಕಳಿದ್ದು 1 ನೇ ಸುಮಾರು 27 ವರ್ಷದ  ವಿಕ್ರಮ್ ಮತ್ತು 2 ನೇ ಸುಮಾರು 24 ವರ್ಷದ ವಿನೋದ್ ಎಂಬುವರಿದ್ದು, ತನ್ನ ದೊಡ್ಡ ಮಗ ವಿಕ್ರಮ್ ಎಂಬುವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತಾರೆ. ತನ್ನ ಚಿಕ್ಕ ಮಗ ವಿನೋದ್ ರವರು ನಮ್ಮ ಗ್ರಾಮದಲ್ಲಿಯೇ ಜಿರಾಯ್ತಿಯಿಂದ ತಮ್ಮ ಮನೆಯಲ್ಲಿಯೇ ತಮ್ಮೊಂದಿಗೆ ವಾಸವಾಗಿದ್ದು ದಿನಾಂಕ 06/03/2019 ರಂದು ಬೆಳಗ್ಗೆ ಸುಮಾರು 8.30 ಗಂಟೆಯ ಸಮಯದಲ್ಲಿ ತಾನು ತಮ್ಮ ಗ್ರಾಮದಲ್ಲಿ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದು, ತನ್ನ ಮಗ ವಿನೋದ್ ಚಿಂತಾಮಣಿಯಲ್ಲಿ ಯಜಮಾನ ಚಲನ ಚಿತ್ರವನ್ನು ನೋಡಿಕೊಂಡು ಬರಲು ತಮ್ಮ ಹೆಂಡತಿ ಸರೋಜಮ್ಮರವರ ಬಳಿ 200/-ರೂಗಳನ್ನು ಪಡೆದುಕೊಂಡು ತಮ್ಮ ಗ್ರಾಮದ ಬಸ್ ನಿಲ್ದಾಣದಲ್ಲಿ ಸಲಾಮತ್ ಬಸ್ಸನ್ನು ಹತ್ತಿ ಹೋಗಿದ್ದು ಸಂಜೆಯಾದರೂ ಮನೆಗೆ ವಾಪಸ್ಸು ಬಂದಿರುವುದಿಲ್ಲ.   ತನ್ನ ಮಗನ ಬಳಿ ಇದ್ದ ಮೊಬೈಲ್ ಸಂಖ್ಯೆ 7892386779, 9482408330 ಸಂಖ್ಯೆಗೆ ಕರೆ ಮಾಡಿದರೂ ಸ್ವಿಚ್ ಆಫ್ ಮಾಡಿಕೊಂಡಿರುತ್ತಾನೆ. ತಾನು ಮತ್ತು ತಮ್ಮ ಮನೆಯವರು ತನ್ನ ಮಗನ ಸ್ನೇಹಿತರು,ತಮ್ಮ ಸಂಬಂದಿಕರುಗಳ ಮನೆಯಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿರುವುದಲ್ಲ. ಕಾಣೆಯಾದ ತನ್ನ ಮಗನನ್ನು ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಕಾಣೆಯಾದ ತನ್ನ ಮಗ ವಿನೋದ್ರವರನ್ನು  ಪತ್ತೆ ಮಾಡಿಕೊಡಲು ಕೋರಿರುವುದಾಗಿರುತ್ತೆ.

2) ಚೇಳೂರು ಪೊಲೀಸ್ ಠಾಣೆ ಮೊ.ಸಂ. 11/2019 ಕಲಂ. 15(ಎ),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ-08/03/2019 ರಂದು ಮದ್ಯಾಹ್ನ-3.30 ಗಂಟೆಗೆ ಠಾಣಾ ಹೆಚ್,ಸಿ-129 ರವಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ. ದಿನಾಂಕ-08-03-2019  ರಂದು ಠಾಣಾಧಿಕಾರಿಯವರು ನನಗೆ ಠಾಣಾ ಸರಹದ್ದು ಗ್ರಾಮಗಳಿಗೆ ಬೇಟಿ ನೀಡಿ ಗುಪ್ತ ಮಾಹಿತಿ ಸಂಗ್ರಹಿಸುವ ಕರ್ವವ್ಯಕ್ಕೆ ನೇಮಿಸಿದ್ದು ,ಅದರಂತೆ ನಾನು ಸಜ್ಜಲವಾರಪಲ್ಲಿ ,ಊದವಾರಪಲ್ಲಿ ಸೀತರೆಡ್ಡಿಪಲ್ಲಿ  ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ನಂತರ ವಡ್ಡಿವಾಂಡ್ಲಪಲ್ಲಿ ಗ್ರಾಮದಲ್ಲಿ ಮದ್ಯಾಹ್ನ ಸುಮಾರು 3.30 ಗಂಟೆಯಲ್ಲಿ ಗಸ್ತಿನಲ್ಲಿರುವಗ್ಗೆ  ಠಾಣಾಸರಹದ್ದು ಕೊತ್ತೂರು ಗ್ರಾಮ (ವಡ್ಡಿವಾಂಡ್ಲಪಲ್ಲಿ ಮಜರ) ದಲ್ಲಿ ಅದೇ ಗ್ರಾಮದ ವಾಸಿಯಾದ ಪ್ರವೀಣ್ ಬಿನ್ ಹರಿನಾಥ್ ಎಂಬುವರು, ಆತನ ಬಾಬ್ತು ಚಿಕ್ಕ ಹೋಟೆಲ್  ಪಕ್ಕದಲ್ಲಿರುವ  ಖಾಲಿ ಜಾಗದಲ್ಲಿ   ಯಾವುದೇ ಪರವಾನಿಗೆ ಇಲ್ಲದೆ  ಅಕ್ರಮವಾಗಿ ಸಾರ್ವಜನಿಕರಿಗೆ  ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ ಬಾತ್ಮೀ ತಿಳಿದು  ಬಂದಿರುತ್ತೆ .ಆದ್ದರಿಂದ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ಈ ನನ್ನ ವರದಿಯನ್ನು ನಿವೇದಿಸಿಕೊಂಡಿರುತ್ತೇನೆಂತ ನೀಡಿದ ವರದಿಯಾಗಿರುತ್ತೆ.

3) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 27/2019 ಕಲಂ. 323,324,504,506 ರೆ/ವಿ 34 ಐಪಿಸಿ :-

     ದಿನಾಂಕ 09/03/2019 ರಂದು ಬೆಳಿಗ್ಗೆ ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಯ ವೈಧ್ಯರು ರವಾನಿಸಿದ ಮೆಮೋವನ್ನು ಪಡೆದು ಆಸ್ಪತ್ರೆಯಲ್ಲಿ ಗಾಯಾಳು ಸುರೇಶಬಾಬು ರವರಿಂದ ಹೇಳಿಕೆಯನ್ನು ಪಡೆದು ಬೆಳಿಗ್ಗೆ 11.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ದಾಖಲಿಸಿದ ದೂರಿನ ಸಾರಾಂಶವೇನೆಂದರೆ ತಮ್ಮೂರಿನ ನಾರಾಯಣಸ್ವಾಮಿ ಬಿನ್ ದೊಡ್ಡವೆಂಕಟರಾಯಪ್ಪ ಮತ್ತು ಭಾನುಪ್ರಸಾಧ ರವರು ಜಮೀನಿನ ವಿಚಾರದಲ್ಲಿ ಹೊಡೆದಾಡಿಕೊಂಡಿದ್ದು ಭಾನು ಪ್ರಸಾಧ್ ಮೇಲೆ ನಾರಾಯಣಸ್ವಾಮಿ ರವರು ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ ಈ ಪ್ರಕರಣದಲ್ಲಿ ತಾನು ಸಾಕ್ಷಿದಾರನಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಸಮಯದಲ್ಲಿ ನಾರಾಯಸ್ವಾಮಿರವರು ನನ್ನ ಪರವಾಗಿ ಸಾಕ್ಷಿ ಹೇಳುವಂತೆ ಒತ್ತಾಯ ಮಾಡಿದ್ದು ತಾನು ಅತನಿಗೆ ಈ ಕೇಸಿನ ಬಗ್ಗೆ ತನಗೆ ಏನು ಗೊತ್ತಿದೆಯೋ ಅದನ್ನು ಹೇಳುತ್ತೇನೆಂದು ಹೇಳುತ್ತಿದ್ದು ನ್ಯಾಯಾಲಯದಲ್ಲಿ ನಾರಾಯಣಸ್ವಾಮಿ ಪರವಾಗಿ ಸಾಕ್ಷಿ ಹೇಳಿರುವುದಿಲ್ಲ ಆದ್ದರಿಂದ ನಾರಾಯಣಸ್ವಾಮಿ ರವರು ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಹೇಳಿಕೊಂಡು ಓಡಾಡುತ್ತಿದ್ದು, ದಿನಾಂಕ 09/03/2019 ರಂದು ಬೆಳಿಗ್ಗೆ ಸುಮಾರು 08.00 ಗಂಟೆ ಸಮಯದಲ್ಲಿ ತನ್ನ ಹೆಂಡತಿ ಶ್ರೀಮತಿ ನಳಿನಿ ನೀರಿನ ಟ್ಯಾಂಕ್ ಬಳಿ ನೀರು ಹಿಡಿಯುತ್ತಿದ್ದಾಗ ತನ್ನ ಹೆಂಡತಿಯನ್ನು ಕುರಿತು ನಾರಾಣಸ್ವಾಮಿ 55 ವರ್ಷ, ಬಲಜಿಗರು, ಮತ್ತು ಅತನ ತಮ್ಮ ಮುನಿರಾಜು ಬಿನ್ ದೊಡ್ಡವೆಂಕಟರಾಯಪ್ಪ, 45 ವರ್ಷ, ಬಲಜಿಗರು, ಇವರು ಸಾರ್ವಜನಿಕವಾಗಿ ಕೆಟ್ಟಮಾತುಗಳಿಂದ ಬೈಯುತ್ತಿದ್ದು ಅದನ್ನು ಕೇಳಿಸಿಕೊಂಡ ತಾನು ಸದರಿಯವರನ್ನು ಏಕೆ ತನ್ನ ಹೆಂಡತಿಯನ್ನು ಬೈಯುತ್ತಿರುವುದೆಂದು ಕೇಳಲಾಗಿ ನಾರಾಯಣಸ್ವಾಮಿ ರವರು ಮುಂಭಾಗದಿಂದ ತನ್ನನ್ನು ಬಿಗಿಯಾಗಿ ಹಿಡಿದು ಕೊಂಡನು ಮುನಿರಾಜುರವರು ಪಕ್ಕದಲ್ಲಿದ್ದ ಇಟ್ಟಿಗೆ ತೆಗೆದುಕೊಂಡು ತನ್ನ ಬಲ ಭುಜಕ್ಕೆ ಬಲವಾಗಿ ಹೊಡೆದನು ತಾನು ಜೋರಾಗಿ ಕಿರುಚಿಕೊಂಡಾಗ ರಘು ಬಿನ್ ಶ್ರೀನಿವಾಸ, ಮತ್ತು ಬಾಬು ಬಿನ್ ರಾಮಯ್ಯ ರವರು ಜಗಳ ಬಿಡಿಸಿದರು ನಂದಕುಮಾರ್ ಬಿನ್ ಅಶ್ವತ್ಥಪ್ಪ ರವರು ದ್ವಿಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ತಾನು ನಾರಾಯಣಸ್ವಾಮಿ ರವರ ಪರವಾಗಿ ತಾನು ಸಾಕ್ಷಿ ಹೇಳಲಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು ಇಟ್ಟಿಗೆಯಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುವ ನಾರಾಯಣಸ್ವಾಮಿ ಮತ್ತು ಮುನಿರಾಜು ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡದ ಹೇಳಿಕೆಯ ಮೇರೆಗೆ ಈ ಪ್ರ ವ ವರದಿ.

4) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 39/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ: 08/03/2019 ರಂದು ಚಿಕ್ಕಬಳ್ಳಾಪುರ ನಗರ ಠಾಣೆ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಮತ್ತು ಅಪರಾದ ಸಿಬ್ಬಂದಿಯವರಾದ ಪಿ.ಸಿ.152 , ಪಿ.ಸಿ. 138 ಮುರಳೀರವರೊಂದಿಗೆ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ನಗರದ ಭಾರತಿನಗರದಲ್ಲಿರುವ ಭಾರತಿ ಸ್ಕೂಲ್ ಹತ್ತಿರ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು 52 ಇಸ್ಪೀಟ್ ಎಲೆಗಳಿಂದ  ಅಕ್ರಮ ಅಂದರ್-ಬಾಹರ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಚಿಕ್ಕಬಳ್ಳಾಪುರದ ಘನ ಪಿ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ದಾಳಿ ಮಾಡಲು ಅನುಮತಿಯನ್ನು ಪಡೆದುಕೊಂಡು  ಠಾಣೆಗೆ ಪಂಚರನ್ನು ಬರಮಾಡಿಕೊಂಡು ಹೆಚ್.ಸಿ. 33 ಸಾಧಿಕ್ ಸಾಬ್, ಹೆಚ್.ಸಿ.211 ಮುರಳೀಧರ , ಪಿ.ಸಿ. 152 ಜಯಣ್ಣ, ಪಿ.ಸಿ. 138 ಮುರಳಿ, ಎ.ಪಿ.ಸಿ.131 ಆಲೀಂ ಪಾಶ ರವರುಗಳೊಂದಿಗೆ  ಠಾಣೆಯನ್ನು  ಮಧ್ಯಾಹ್ನ 14-30 ಗಂಟೆಗೆ ಸರ್ಕಾರಿ ವಾಹನ ಸಂಖ್ಯೆ ಕೆ.ಎ.40-ಜಿ-139 ರಲ್ಲಿ ಮತ್ತು ಸಿಬ್ಬಂದಿಯವರ  ದ್ವಿಚಕ್ರವಾಹನಗಳಲ್ಲಿ  ಬಿಟ್ಟು ಎಂಜಿ. ರಸ್ತೆ,  ಪೊಲೀಸ್ ಸರ್ಕಲ್, ಭುವನೇಶ್ವರಿ ಸರ್ಕಲ್,  ನಂದಿ ರೋಡ್ ಮುಖಾಂತರ ಭಾರತಿ ನಗರಕ್ಕೆ ಬಂದು  ಭಾರತಿ ಸ್ಕೂಲ್ ಬಳಿ ವಾಹನಗಳನ್ನು ನಿಲ್ಲಿಸಿ  ಮರೆಯಲ್ಲಿ ನಿಂತು ನೋಡಲಾಗಿ  ಸ್ಕೂಲ್ ನಿಂದ  ಪಶ್ಚಿಮಕ್ಕೆ 50 ಮೀಟರ್ ದೂರದಲ್ಲಿ ಇರುವ ಸರ್ಕಾರಿ ಜಮೀನಿನಲ್ಲಿ 5 ಜನರು ಗುಂಪಾಗಿ ಕುಳಿತುಕೊಂಡಿರುತ್ತಾರೆ. ಸದರಿ ಸ್ಥಳವು ಚಿಕ್ಕಬಳ್ಳಾಪುರ ನಗರದ ಭಾರತಿ ನಗರದ  ಭಾರತಿ ಸ್ಕೂಲ್  ಪಕ್ಕದಲ್ಲಿರುವ  ಸಕರ್ಾರಿ ಜಮೀನಾಗಿರುತ್ತೆ. ಸದರಿ ಜಮೀನಿನಲ್ಲಿ ಗುಂಪಿನಲ್ಲಿ ಅಂದರ್ ಗೆ 100 ರೂ, ಬಾಹರ್ ಗೆ 100 ರೂ. ಎಂದು  ಕೂಗುತ್ತಿದ್ದು ಆಸಾಮಿಗಳು ಅಕ್ರಮ ಜೂಜಾಟವನ್ನು ಆಡುತ್ತಿರುವುದು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ  ದಾಳಿಮಾಡಿ  ಸ್ಥಳದಲ್ಲಿದ್ದ  5 ಜನರನ್ನು ತಲಾ ಒಬ್ಬೊಬ್ಬರು ಹಿಡಿದುಕೊಂಡಿದ್ದು 1) ನಾಗರಾಜ ಬಿನ್ ಸುಬ್ಬರಾವ್, 40 ವರ್ಷ, ವಿಶ್ವಕರ್ಮ, ಕೂಲಿ ಕೆಲಸ, ವಾಸ ಸಂಪತ್ ಕುಮಾರ್ ರವರ ಮನೆಯಲ್ಲಿ ಬಾಡಿಗೆಗೆ, ವೆಂಕಟರಮಣ ಸ್ವಾಮಿ ದೇವಾಲಯದ ಹತ್ತಿರ, 18 ನೇ ವಾಡ್ರ್ , ಕಂದವಾರ ಬಾಗಿಲು, ಚಿಕ್ಕಬಳ್ಳಾಪುರ , 2) ನಾಗರಾಜ ಬಿನ್  ಚನ್ನಪ್ಪ, 52 ವರ್ಷ, ನಾಯಕ, ಕಂಬಿ ಕೆಲಸ, ವಾಸ ಗಾಯಿತ್ರಿ ಟಾಕೀಸ್ ಬಳಿ, ನಂದಿ ರಸ್ತೆ, 15 ನೇ ವಾಡ್ರ್ , ಕಂದವಾರಪೇಟೆ, ಚಿಕ್ಕಬಳ್ಳಾಪುರ , 3)ಆಜಂ ಬಿನ್ ರಜಾಕ್, 28 ವರ್ಷ, ಪೈಂಟಿಂಗ್ ಕೆಲಸ, ವಾಡ್ರ್  ನಂ. 11 ಅಲ್ಲಾಲ್ ಗಡ್ಡೆ, ಚಿಕ್ಕಬಳ್ಳಾಪುರ, 4) ತಿಪ್ಪೇಸ್ವಾಮಿ ಬಿನ್  ಗಾಡಿ ಲಿಂಗಪ್ಪ,  38 ವರ್ಷ, ನಾಯಕ,  ಗಾರೆ ಕೆಲಸ, ವಾಸ ಗಾಯಿತ್ರಿ ಟಾಕೀಸ್ ಬಳಿ, ನಂದಿ ರಸ್ತೆ, 15 ನೇ ವಾಡ್ರ್ , ಕಂದವಾರಪೇಟೆ, ಚಿಕ್ಕಬಳ್ಳಾಪುರ, ಸ್ವಂತ ಸ್ಥಳ ರೈಲ್ವೆ ಸ್ಟೇಷನ್ ಹತ್ತಿರ, 88 ಮುದ್ದಲಾಪುರ, ಹೊಸಪೇಟೆ ಟೌನ್, ಬಳ್ಳಾರಿ ಜಿಲ್ಲೆ, ರವರುಗಳು ಗುಂಪಾಗಿ ಕುಳಿತುಕೊಂಡು  ಇಸ್ಪೀಟ್ ಎಲೆಗಳಿಂದ  ಅಕ್ರಮ ಜೂಜಾಟವನ್ನು ಆಡುತ್ತಿದ್ದು  ಆಸಾಮಿಗಳ ಮುಂದೆ ನೆಲದ ಮೇಲೆ  ಪಣಕ್ಕಿಟ್ಟಿದ್ದ ನಗದು ಹಣ ಎಣಿಸಲಾಗಿ 3200/- ರೂ  ಇರುತ್ತೆ. ಇಸ್ಪೀಟ್ ಎಲೆಗಳನ್ನು  ಎಣಿಸಲಾಗಿ 52 ಇರುತ್ತೆ. ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 3200/-ರೂ ಮತ್ತು ಇಟ್ಪೀಟ್ ಎಲೆಗಳನ್ನು  ಅಮಾನತ್ತುಪಡಿಸಿಕೊಂಡು ಪಂಚನಾಮೆಯನ್ನು 15-00 ಗಂಟೆಯಿಂದ 16-00 ಗಂಟೆಯವರೆಗೆ  ಬರೆದು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ 16-30 ಗಂಟೆಗೆ ವಾಪಸ್ಸಾಗಿ ಆಸಾಮಿಗಳು,  ಮಾಲು , ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿಯನ್ನು ಹಾಜರುಪಡಿಸುತ್ತಿದ್ದು ಆಸಾಮಿಗಳ ವಿರುದ್ದ ಕಲಂ 87 ಕೆ.ಪಿ.ಆಕ್ಟ್ ರೀತ್ಯ ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

5) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 40/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ: 08/03/2019 ರಂದು 17-00 ಗಂಟೆಗೆ ಠಾಣೆಯ ಅಪರಾಧವಿಭಾಗ ಪಿ.ಎಸ್.ಐ ರವರು ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಅಪರಾಧ ಸಿಬ್ಬಂದಿಯದ ಹೆಚ್.ಸಿ. 131 ಅಶ್ವಥರಾಜು ಎಲ್.ಎಂ. ರವರೊಂದಿಗೆ  ಸರ್ಕಾರಿ ವಾಹನ ನಂ: ಕೆ.ಎ.03-ಜಿ-507ರ ಚಾಲಕ ಎ.ಪಿ.ಸಿ.106 ಹರೀಶ್ ಕುಮಾರ್ .ಬಿ.ಎಸ್.ರವರು  ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ನಗರದ ಬಾಪೂಜಿನಗರದಿಂದ ಕಂದವಾರ ಕೆರೆ ಕಟ್ಟೆಯ ಬಳಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಕ್ರಮ ಅಂದರ್-ಬಾಹರ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಚಿಕ್ಕಬಳ್ಳಾಪುರದ ಘನ ಪಿ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ದಾಳಿ ಮಾಡಲು ಅನುಮತಿಯನ್ನು ಪಡೆದುಕೊಂಡು  ಠಾಣೆಗೆ ಪಂಚರನ್ನು ಬರಮಾಡಿಕೊಂಡು ಹೆಚ್.ಸಿ. 131 ಅಶ್ವಥರಾಜು ಎಲ್.ಎಂ., ಪಿ.ಸಿ. 275, ಬೀರಪ್ಪ ಏವೂರಾ, ಪಿ.ಸಿ.259 ಪರಶುರಾಮ ಬೋವಿ, ಪಿ.ಸಿ. 261 ನಿಂಗಪ್ಪ ಸಿದ್ದಪ್ಪ ರವರುಗಳೊಂದಿಗೆ ಮಧ್ಯಾಹ್ನ 15-00 ಗಂಟೆಗೆ ಸಕರ್ಾರಿ ವಾಹನ ಸಂಖ್ಯೆ: ಕೆ.ಎ.03-ಜಿ-507 ವಾಹನ  ಮತ್ತು ಸಿಬ್ಬಂದಿಯವರ  ದ್ವಿಚಕ್ರವಾಹನಗಳಲ್ಲಿ  ಬಿಟ್ಟು ಎಂಜಿ. ರಸ್ತೆ,  ಪೊಲೀಸ್ ಸರ್ಕಲ್, ಭುವನೇಶ್ವರಿ ಸರ್ಕಲ್,  ನಂದಿ ರೋಡ್ ಮುಖಾಂತರ ಕಂದವಾರ ಬಾಗಿಲಿನ ಕೆರೆ ಕೋಡಿ ಬಳಿ ವಾಹನಗಳನ್ನು ನಿಲ್ಲಿಸಿ  ಮರೆಯಲ್ಲಿ ನಿಂತು ನೋಡಲಾಗಿ  ಕಂದವಾರ ಕೆರೆಯ ಒಳಗೆ ಪಶ್ಚಿಮಕ್ಕೆ 50 ಮೀಟರ್ ದೂರದಲ್ಲಿ 4 ಜನರು ಗುಂಪಾಗಿ ಕುಳಿತುಕೊಂಡಿರುತ್ತಾರೆ. ಸದರಿ ಸ್ಥಳವು ಚಿಕ್ಕಬಳ್ಳಾಪುರ ನಗರದ ಬಾಪೂಜಿನಗರದ ಪಕ್ಕ ಕಂದವಾರ ಕೆರೆಯ ಪೊದೆಯಲ್ಲಿ ಕುಳಿತುಕೊಂಡು ಗುಂಪಿನಲ್ಲಿ ಅಂದರ್ ಗೆ 100 ರೂ, ಬಾಹರ್ ಗೆ 100 ರೂ. ಎಂದು  ಕೂಗುತ್ತಿದ್ದು ಆಸಾಮಿಗಳು ಅಕ್ರಮ ಜೂಜಾಟವನ್ನು ಆಡುತ್ತಿರುವುದು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ  ದಾಳಿಮಾಡಿ  ಸ್ಥಳದಲ್ಲಿದ್ದ  4 ಜನರನ್ನು ತಲಾ ಒಬ್ಬೊಬ್ಬರು ಹಿಡಿದುಕೊಂಡಿದ್ದು ಅವರ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 1) ಚಂದ್ರ @ ಚಂದ್ರಶೇಖರ್ ಬಿನ್  ಗಂಗಪ್ಪ 38 ವರ್ಷ,ಗಾರೆ ಕೆಲಸ,  ಪ.ಜಾತಿ(ಎಕೆ) ವಾರ್ಡ-13, ಬಾಪೂಜಿನಗರ,  ಚಿಕ್ಕಬಳ್ಳಾಪುರ. 2) ವೆಂಕಟೇಶ ಬಿನ್ ಮುನಿಶಾಮಪ್ಪ 29 ವರ್ಷ,ಅಟೋಚಾಲಕ, ಪಜಾತಿ(ಎಕೆ) ವಾರ್ಡ-13, ಬಾಪೂಜಿನಗರ,ಚಿಕ್ಕಬಳ್ಳಾಪುರ , 3) ಮುರಳಿ @ ಮುರಳಿ ಕೃಷ್ಣ  ಬಿನ್ ತಿರುಮಳಯ್ಯ 39 ವರ್ಷ, ಪ,ಜಾತಿ(ಎಕೆ) ಕೂಲಿ, ಎಡಿ ಕಾಲೋನಿ ವಾರ್ಡ-12, ಚಿಕ್ಕಬಳ್ಳಾಪುರ ನಗರ. 4) ಪ್ರೇಮ್ ಬಿನ್ ಶಿವಯ್ಯ  30 ವರ್ಷ, ಪ,ಜಾತಿ  ಕೂಲಿ, ವಾರ್ಡ-13, ಬಾಪೂಜಿನಗರ, ಚಿಕ್ಕಬಳ್ಳಾಪುರ ಎಂದು ತಿಳಿದು ಬಂದಿದ್ದು ಗುಂಪಾಗಿ ಕುಳಿತುಕೊಂಡು  ಇಸ್ಪೀಟ್ ಎಲೆಗಳಿಂದ  ಅಕ್ರಮ ಜೂಜಾಟವನ್ನು ಆಡುತ್ತಿದ್ದು  ವಶಕ್ಕೆ ಪಡೆದುಕೊಂಡಿರುತ್ತೇವೆ. ಆಸಾಮಿಗಳು  ಅವರ ಮುಂದೆ ನೆಲದ ಮೇಲೆ  ಪಣಕ್ಕಿಟ್ಟಿದ್ದ ನಗದು ಹಣ ಎಣಿಸಲಾಗಿ 1300/- ರೂ  ಇರುತ್ತೆ. ಇಸ್ಪೀಟ್ ಎಲೆಗಳನ್ನು  ಎಣಿಸಲಾಗಿ 52 ಇರುತ್ತೆ. ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 1300/-ರೂ ಮತ್ತು ಇಟ್ಪೀಟ್ ಎಲೆಗಳನ್ನು  ಅಮಾನತ್ತುಪಡಿಸಿ ಕೊಂಡಿರುತ್ತೆ. ಸದರಿ ದಾಳಿಯ  ಪಂಚನಾಮೆಯನ್ನು 15-30 ಗಂಟೆಯಿಂದ 16-15 ಗಂಟೆಯವರೆಗೆ  ಬರೆದು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ 16-45 ಗಂಟೆಗೆ ವಾಪಸ್ಸಾಗಿ ಆಸಾಮಿಗಳು, ಮಾಲು, ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿಯನ್ನು ಹಾಜರುಪಡಿಸುತ್ತಿದ್ದು, ಆಸಾಮಿಗಳ ವಿರುದ್ದ ಕಲಂ 87 ಕೆ.ಪಿ.ಆಕ್ಟ್ ರೀತ್ಯ ಕ್ರಮ ಜರುಗಿಸಲು ಸೂಚಿಸಿದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

6) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 19/2019 ಕಲಂ. 279,337 ಐಪಿಸಿ ರೆ/ವಿ 187 ಐಎಂವಿ ಆಕ್ಟ್ :-

     ದಿನಾಂಕ:-09/03/2019 ರಂದು ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ.ಶ್ರೀನಿಧಿ ಬಿನ್ ಸತ್ಯನಾರಾಯಣ ರಾವ್ 27 ವರ್ಷ, ಬ್ರಾಹ್ಮಣ ಜನಾಂಗ, ಏಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಇಂಜಿನಿಯರ್, ಶ್ರೀಮಾತ ನಿಲಯ, ವಾರ್ಡ್ ನಂ-01, ಹಳೇ ಪೆಟ್ರೋಲ್ ಬಂಕ್ ಹಿಂಭಾಗ, ಶಾರಧ ಕಾನ್ವೆಂಟ್ ಬಳಿ, ಶಿಡ್ಲಘಟ್ಟ ಟೌನ್ ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ:-08/03/2019 ರಂದು ತನ್ನ ಕೆಎ-40-ಡಬ್ಲ್ಯೂ-0330 ರ ಟಿ.ವಿ.ಎಸ್ ಜುಪಿಟರ್ ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರದಲ್ಲಿ ಕೆಲಸಕ್ಕೆ ಬಂದು ವಾಪಸ್ಸು ಮನೆಗೆ ಹೋಗಲು ಚಿಕ್ಕಬಳ್ಳಾಪುರ – ಶಿಡ್ಲಘಟ್ಟ ಎನ್.ಎಚ್-234 ರಸ್ತೆಯ ಡಿ.ಸಿ ಕಛೇರಿಯ ಬಳಿ ಇರುವ ಪೆಟ್ರೋಲ್ ಬಂಕ್ ಮುಂಭಾಗದ ಮುಂದಿನ ರಸ್ತೆಯ ಬಳಿ ಸಂಜೆ 5:15 ಗಂಟೆಯ ಸಮಯದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಯಾವುದೋ ಟಿಪ್ಪರ್ ಲಾರಿ ಚಾಲಕ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿದರ ಪರಿಣಾಮ ತಾನು ದ್ವಿಚಕ್ರವಾಹನ ಸಮೇತ ರಸ್ತೆಯಲ್ಲಿ ಬಿದ್ದ ಪರಿಣಾಮ ತನಗೆ ಎಡ ಭುಜಕ್ಕೆ, ಎಡ ಮೊಣಕಾಲಿನ ಭಾಗಕ್ಕೆ ಗಾಯಗಳಾಗಿದ್ದು, ಅಲ್ಲಿನ ಸ್ಥಳಿಯರು ತನ್ನನ್ನು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಕಾರಿನಲ್ಲಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು ಸದರಿ ಅಪಘಾತ ಪಡಿಸಿದ ಟಿಪ್ಪರ್ ಲಾರಿಯ ನೊಂದಣಿ ಸಂಖ್ಯೆ ಗೊತ್ತಿರುವುದಿಲ್ಲ. ಸದರಿ ಟಿಪ್ಪರ್ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು, ಸದರಿ ಅಪಘಾತಕ್ಕೆ ಕಾರಣನಾದ ಟಿಪ್ಪರ್ ಲಾರಿ ಹಾಗೂ ಚಾಲಕನನ್ನು ಪತ್ತೇ ಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ದಿನಾಂಕ:-09/03/2019 ರಂದು ಬೆಳಗಿನ ಜಾವ 00:30 ಗಂಟೆಯ ಸಮಯದಲ್ಲಿ ಪ್ರಕರಣ ದಾಖಲಿಸಿರುತ್ತೆ.

7) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 20/2019 ಕಲಂ. 279,337 ಐಪಿಸಿ :-

     ದಿನಾಂಕ:-09/03/2019 ರಂದು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ.ಬಿ.ಚಂದ್ರಕಾಂತ್ ಬಿನ್ ಎಸ್.ಬಸವರಾಜು 25 ವರ್ಷ, ಕೂಲಿಕೆಲಸ, ಲಿಂಗಾಯಿತರು, ವಾರ್ಡ ನಂ-01, ವಾಪಸಂದ್ರ, ಚಿಕ್ಕಬಳ್ಳಾಪುರ ಟೌನ್ ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ:-09/03/2019 ರಂದು ಚಿಕ್ಕಬಳ್ಳಾಪುರ ವಾಪಸಂಧ್ರದಲ್ಲಿರುವ ಸಾಯಿ ಕಿರಣ್ ಆಟೋ ಇಂಜಿನಿಯಂರಿಂಗ್ ವರ್ಕ್ಸ್ ನಲ್ಲಿ ಕೆಲಸಕ್ಕೆ ಹೋಗಲು ತನ್ನ ಕೆಎ-40-ಇ.ಎ-4703 ರ ಪಲ್ಸರ್ ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರ – ಬಾಗೇಪಲ್ಲಿ ಎನ್.ಎಚ್-7 ಬಿ.ಬಿ ರಸ್ತೆಯ ಮಯೂಗ ಬೇಕರಿ ಮುಂಭಾಗದ ರಸ್ತೆಯಲ್ಲಿ ಬೆಳಗ್ಗೆ 09:45 ಗಂಟೆಯ ಸಮಯದಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಾಗೇಪಲ್ಲಿ ಕಡೆಯಿಂದ ಬಂದ ಕೆಎ-51-ಜಿ-5205 ರ 108 ಆಂಬ್ಯೂಲೆನ್ಸ್ ವಾಹನದ ಚಾಲಕ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿದರ ಪರಿಣಾಮ ತಾನು ದ್ವಿಚಕ್ರವಾಹನ ಸಮೇತ ರಸ್ತೆಯಲ್ಲಿ ಬಿದ್ದ ಪರಿಣಾಮ ತನಗೆ ಗದ್ದಕ್ಕೆ, ಕೈ-ಕಾಲುಗಳಿಗೆ ಗಾಯಗಳಾಗಿದ್ದು ತಕ್ಷಣ ಅಲ್ಲಿಗೆ ಬಂದ ಶ್ರೀನಿವಾಸರಾವ್ ಬಿನ್ ವೆಂಕಟೇಶ್ವರರಾವ್ 43 ವರ್ಷ, ವಾರ್ಡ ನಂ-31, ವಾಪಸಂದ್ರ, ಚಿಕ್ಕಬಳ್ಳಾಪುರ ಟೌನ್ ರವರು ಅಲ್ಲಿನ ಸ್ಥಳೀಯರ ಸಹಾಯದಿಂದ ಉಪಚರಿಸಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಅಪಘಾತ ಪಡಿಸಿದ 108 ಆಂಬ್ಯೂಲೆನ್ಸ್ ವಾಹನದ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ಶ್ರೀನಿವಾಸ ಬಿನ್ ನಾಗರಾಜಪ್ಪ 31 ವರ್ಷ, ಭೋವಿ ಜನಾಂಗ, ಬೆಣ್ಣೇಪರ್ತಿ ಗ್ರಾಮ, ಹಂಪಸಂದ್ರ ಹೋಬಳಿ, ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದು ಸದರಿ ಅಪಘಾತ ಪಡಿಸಿದ ಕೆಎ-51-ಜಿ-5205 ರ 108 ಆಂಬ್ಯೂಲೆನ್ಸ್ ವಾಹನದ ಚಾಲಕ ಶ್ರೀನಿವಾಸ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ದಿನಾಂಕ:-09/03/2019 ರಂದು ಬೆಳಗ್ಗೆ 11:00 ಗಂಟೆಯ ಸಮಯದಲ್ಲಿ ಪ್ರಕರಣ ದಾಖಲಿಸಿರುತ್ತೆ.

8) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 21/2019 ಕಲಂ. 279,336 ಐಪಿಸಿ :-

     ದಿನಾಂಕ:-09/03/2019 ರಂದು ಮಧ್ಯಾಹ್ನ 1:30 ಗಂಟೆಗೆ ಪಿರ್ಯಾಧಿ ಶ್ರೀ.ನಾರಾಯಣ ಬಿನ್ ನರಸಿಂಹಪ್ಪ 30 ವರ್ಷ, ಭೋಯ, ಎಪಿ-02-ಬಿ.ಇ-6219 ರ ಕಾರಿನ ಚಾಲಕ, ಪ್ರಕಾಶ್ ನಗರ, ಅನಂತಪುರ ಟೌನ್, ತಾಲ್ಲೂಕು ಮತ್ತು ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:-08/03/2019 ರಂದು ತಾನು ತನ್ನ ಸ್ನೇಹಿತನ ಎಪಿ.02.ಬಿ.ಇ-6219 ರ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಕೆಲಸದ ನಿಮಿತ್ತ ಅನಂತಪುರದಿಂದ ಬೆಂಗಳೂರಿಗೆ ಹೋಗಲು ಮಧ್ಯಾಹ್ನ 2:45 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಎಚ್-7 ಬೈಪಾಸ್ ರಸ್ತೆಯ ಶಿಡ್ಲಘಟ್ಟ ಫ್ಲೈಓವರ್ ಬಳಿ ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ ಕೆಎ-08-3006 ರ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ಸೂಚನೇ ನೀಡದೆ ರಸ್ತೆಯ ಬಲಭಾಗಕ್ಕೆ ತಿರುಗಿಸಿ ತಾನು ಚಾಲನೆ ಮಾಡುತ್ತಿದ್ದ ತನ್ನ ಕಾರಿಗೆ ಡಿಕ್ಕಿ ಹೊಡೆಯಿಸಿ ನಂತರ ರಸ್ತೆಯ ಎಡಭಾಗದ ಹಳ್ಳಕ್ಕೆ ಹೋಗಿದ್ದು ತನ್ನ ಸ್ನೇಹಿತನ ಎಪಿ-02-ಬಿ.ಇ-6219 ರ ಕಾರಿನ ಮುಂಭಾಗದ ಬಂಪರ್, ಗ್ಲಾಸ್, ಎಡಕಡೆಯ ಚಕ್ರ, ಮಿರರ್, ಹಿಂದಿನ ಬಾನೆಟ್ ಹಾಗೂ ಹಿಂಭಾಗದ ಹೆಡ್ ಲೈಟ್ ಹಾಗೂ ಎಡ ಮತ್ತು ಬಲಭಾಗದ ಸ್ಲೈಡರ್, ಬ್ಯಾಗ್ ಭಿಮ್ ಜಕಂಗೊಂಡಿದ್ದು, ಯಾರಿಗೂ ಸಹಾ ಗಾಯಗಳಾಗಿರುವುದಿಲ್ಲ. ಸದರಿ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಮುನ್ನಾ ಬಿನ್ ಸೈಯದ್ ಇಯಾಜ್ ಉರುಗಾಂ, ಕೆ.ಜಿ.ಎಫ್ ಎಂತ ತಿಳಿಸಿದ್ದು, ತಾನು ತನ್ನ ಸ್ನೇಹಿತನಿಗೆ ಕಾರಿನ ಅಪಘಾತದ ಬಗ್ಗೆ ತಿಳಿಸಿ ಈ ದಿನ ತಡವಾಗಿ ದಿನಾಂಕ:-09/03/2019 ರಂದು ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ದಿನಾಂಕ:-09/03/2019 ರಂದು ಮಧ್ಯಾಹ್ನ 1:30 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

9) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 48/2019 ಕಲಂ. 379 ಐಪಿಸಿ :-

     ದಿನಾಂಕ: 08/03/2019 ರಂದು ಪಿರ್ಯಾದಿದಾರರಾದ ಶ್ರೀ ಎಂ.ಎನ್ ಮುನಿಕೃಷ್ಣಪ್ಪ ಬಿನ್ ನಾರಾಯಣಪ್ಪ, 47 ವರ್ಷ, ಗೊಲ್ಲ ಜನಾಂಗ, ಶಿಕ್ಷಕರು, ವಾಸ: ಚಿನ್ನಸಂದ್ರ , ಚಿಂತಾಮಣಿ ತಾಲ್ಲೂಕು, ಮೊ: 9740171858 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ವಾಸಿಯಾಗಿದ್ದು ಶಿಕ್ಷಕನಾಗಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ, ನಾನು ನನ್ನ ಕೆಲಸದ ಸಲುವಾಗಿ  ಪ್ರತಿ ದಿನ ಮಲ್ಲಿಕಾರ್ಜುನ ಪುರ ಗ್ರಾಮಕ್ಕೆ ಹೋಗಿ ಬರುತ್ತಿರುತ್ತೇನೆ, ನಾನು ಈಗ್ಗೆ 01 ವರ್ಷದ ಹಿಂದೆ ನನ್ನ ಓಡಾಟದ ಅನುಕೂಲಕ್ಕಾಗಿ ದ್ವಿ ಚಕ್ರವಾಹನ ಪ್ಯಾಶನ್ ಪ್ರೋ ರಿಜಿಸ್ಟ್ರೇಷನ್ ನಂ: ಕೆ.ಎ-53 ಇ.ಆರ್-2126, ಇಂಜಿನ್ ನಂ: HA10EVG4G05266, ಚಾಸೀಸ್ ನಂ: MBLHA10BSG401896, ಗ್ರೇ ಬಣ್ಣ, ಅಂದಾಜು ಬೆಲೆ: 40,000/ ರೂಗಳು ಅನ್ನು ತೆಗೆದುಕೊಂಡು ನಿರ್ವಹಣೆ ಮಾಡಿಕೊಂಡು ಬಂದಿರುತ್ತೇನೆ. ಈಗಿರುವಲ್ಲಿ ದಿನಾಂಕ: 21/02/2019 ರಂದು ನಾನು ಚಿಂತಾಮಣಿ ನಗರಕ್ಕೆ ಬಂದು ನನ್ನ ಸ್ವಂತ ಕೆಲಸದ ಮೇರೆಗೆ ಚಿಂತಾಮಣಿ ನಗರಕ್ಕೆ ಬಂದಿದ್ದು ಎಂದಿನಂತೆ ನನ್ನ ದ್ವಿ ಚಕ್ರವಾಹನವನ್ನು ನಗರದ ಬಿ.ಇ.ಓ ಕಛೇರಿಯ ಬಳಿ ಬೆಳಿಗ್ಗೆ 09-30 ಗಂಟೆಗೆ ಗುರುಭವನದಲ್ಲಿ ನಿಲ್ಲಿಸಿ ಲಾಕ್ ಮಾಡಿಕೊಂಡು ನಾನು ಕೆಲಸ ಮುಗಿಸಿಕೊಂಡು ಮಲ್ಲಿಕಾರ್ಜುನ ಪುರಕ್ಕೆ ಶಾಲೆಗೆ ಹೋಗಿರುತ್ತೆನೆ. ನಂತರ ಶಾಲೆ ಮುಗಿಸಿಕೊಂಡು ಸಂಜೆ 05 ಗಂಟೆಗೆ ನಾನು ವಾಹನ ನಿಲ್ಲಿಸಿದ ಕಡೆ ಬಂದು ನೋಡಲಾಗಿ ನನ್ನ ದ್ವಿ ಚಕ್ರವಾಹನ ಇರುವುದಿಲ್ಲ, ಎಲ್ಲಾ ಕಡೆ ಹುಡುಕಲಾಗಿ ಪತ್ತೇ ಯಾಗಿರುವುದಿಲ್ಲ, ನನ್ನ ದ್ವಿ ಚಕ್ರವಾಹನವನ್ನು ಯಾರೋ ಕಳ್ಳತು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆದರೂ ಸಹ ಇದುವರೆವಿಗೂ ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೇ ಯಾಗದ ಕಾರಣ ಈ ದಿನ ನನ್ನ ವಾಹನವನ್ನು ಕಳವು ಮಾಡಿರುವ ಕಳ್ಳರನ್ನು ಪತ್ತೇ ಮಾಡಿ ಕಾನೂನು ರಿತ್ಯಾ ಕ್ರಮ ಜರುಗಿಸಿಬೇಕೆಂದು ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

10) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 59/2019 ಕಲಂ. 78(1),(3),(4) ಕೆ.ಪಿ. ಆಕ್ಟ್ :-

     ದಿನಾಂಕ: 07/03/2019 ರಂದು ರಾತ್ರಿ ಸುಮಾರು 9.30 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಡಿ ಸಿ ಬಿ ಸಿ ಈಎನ್ ಪೊಲೀಸ್ ಠಾಣೆಯ ಪಿ ಐ ರವರಾದ ವಿ .ಚಿನ್ನಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,ಈ ದಿನ ದಿನಾಂಕ: 07/03/2019 ರಂದು ಸಿಬ್ಬಂದಿಯೊಂದಿಗೆ ಗೌರಿಬಿದನೂರು ತಾಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿಗಾಗಿ ಗಸ್ತಿನಲ್ಲಿದ್ದಾಗ ಸಂಜೆ ಸುಮಾರು 6.30 ಗಂಟೆಯಲ್ಲಿ ನಗರಗೆರೆ ಹೊಬಳಿಯ ವೆಳಪಿ ಗ್ರಾಮದಲ್ಲಿ ಯಾರೋ ಆಸಾಮಿ ಮಟಕಾ ಅಂಕಿಗಳ ಬರೆದು ಜುಜಾಟವಾಡುತ್ತಿರುವುದಾಗಿ ನನಗೆ ಬಂದ  ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ವೆಳಪಿ ಗ್ರಾಮದ ಮಾಹಿತಿ ಬಂದ ಸ್ಥಳ ಗಂಗಾಧರಪ್ಪ  ಬಿನ್ ಲೇಟ್ ಅಶ್ವತ್ಥಪ್ಪ 50 ವರ್ಷ ನಾಯಕರು ಕೂಲಿ ಕೆಲಸ ರವರು ಅವರ ಆತನ ಬಾಬತ್ತು ವಾಸದ ಮನೆಯ ಮುಂಭಾಗದ ರಸ್ತೆಯಲ್ಲಿ ನಿಂತು ಬನ್ನಿ ಬನ್ನಿ ಅಂತ ಮಟ್ಕಾ ಅಂಕಿಗಳನ್ನು ಬರೆಸಿಕೊಂಡು ಒಂದು ರೂಗೆ 70 ರೂ ಕೊಡುತ್ತೇನೆ.ಎಂತ ಕೂಗುತ್ತಾ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದು, ಆಸಾಮಿಯನ್ನು ನಾವುಗಳು ಪಂಚರ ಸಮಕ್ಷಮ ನ್ನು ಹಿಡಿದು ಆತನ ಬಳಿ ಇದ್ದ ಒಂದು ಮಟಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು , 3.600/ ರೂ ನಗದು ಹಣ ವನ್ನು ಸಂಜೆ 7.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆವಿಗು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು, ಮಾಲನ್ನು ಮತ್ತು ಆರೋಪಿತನನ್ನು ಠಾಣೆಯಲ್ಲಿ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು ಕೋರಿ ದೂರನ್ನು ನೀಡಿರುತ್ತಾರೆ. ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಠಾಣೆಯಲ್ಲಿ ಆರೋಪಿತನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲು ದಿನಾಂಕ  08/03/2019   ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

11) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 60/2019 ಕಲಂ. 279,337 ಐಪಿಸಿ :-

     ದಿ: 08/03/2019 ರಂದು ಸಂಜೆ  5:30 ಗಂಟೆಗೆ ಪಿರ್ಯಾಧಿದಾರರಾದ ಹನುಮಂತ ಗದಿಗಪ್ಪ ಹರಳಕಟ್ಟೆ ಬಿನ್ ಗದಿಗಪ್ಪ ಹರಳಕಟ್ಟೆ , ವಯಸ್ಸು 22 ವರ್ಷ, ಉಪ್ಪಾರ ಜನಾಂಗ, ಡ್ರೈವರ್ , ಚುಳಕಿ ಗ್ರಾಮ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ – ದಿ: 07-03-2019 ರಂದು ಪಿರ್ಯಾಧಿ  ತನ್ನ ಬಾಬತ್ತು ಕೆ ಎ 16 ಡಿ 0534 ಲಾರಿಯಲ್ಲಿ ಸಿಮೆಂಟ್ ತುಂಬಿಸಿಕೊಂಡು ಬಂದು ಗೌರಿಬಿದನೂರಿನಲ್ಲಿ ಇಳಿಸಬೇಕೆಂದು ಬಂದು ರಾತ್ರಿಯಾದ ಕಾರಣ ಶುಗರ್ ಪ್ಯಾಕ್ಟರಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ರಾತ್ರಿ ಸುಮಾರು 8:00 ಗಂಟೆ ಸಮಯದಲ್ಲಿ ಊಟ ಮಾಡಲು ಪಿರ್ಯಾಧಿ ಮತ್ತು  ಜೊತೆಗಿದ್ದ ಪಕ್ಕೀರಪ್ಪ ರವರು ಹಿಂದೆ ಮುಂದೆ ರಸ್ತೆ ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ, KA-03-ಎಂಇ-9326 ಕಾರುನ್ನು ಅದರ ಚಾಲಕ ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಕ್ಕೀರಪ್ಪ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಹಣೆಯ ಮೇಲೆ, ತುಟಿಗೆ, ಎದೆಯ ಬಾಗಕ್ಕೆ, ಎಡಗಾಲಿಗೆ, ರಕ್ತಗಾಯವಾಗಿ ರಕ್ತಸ್ರಾವವಾಗಿದ್ದು, ಪಿರ್ಯಾಧಿ ಅಂಬುಲೆನ್ಸ್ ಗೆ ಕರೆ ಮಾಡಿ ಗೌರಿಬಿದನೂರಿನ ಸರ್ಕಾರಿ ಅಸ್ಪತ್ರೆಗೆ ಸೇರಿಸಿ, ಉನ್ನತ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಅಸ್ಪತ್ರೆಗೆ ಹೋಗಿ ತೋರಿಸಿಕೊಂಡು,.  ಪಕ್ಕೀರಪ್ಪ ರವರಿಗೆ ಅಪಘಾತ ಮಾಡಿದ KA-03-ಎಂಇ-9326 ಕಾರಿನ ಚಾಲಕನ ವಿರುದ್ದ  ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಈ ದಿನ ತಡವಾಗಿ ಬಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

12) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 61/2019 ಕಲಂ. 379 ಐಪಿಸಿ :-

     ದಿನಾಂಕ 08/03/2019 ರಂದು ರಾತ್ರಿ 9;15 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಲಿಯಾಖತ್ ಉಲ್ಲಾ ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೆನೆಂದರೆ ತನಗೆ ಈ ದಿನ ದಿನಾಂಕ:08-03-2019 ರಂದು ರಾತ್ರಿ 7-00 ಸಮಯದಲ್ಲಿ ಗ್ರಾಮಾಂತರ ಠಾಣಾ ಸರಹದ್ದು ನಗರಗೆರೆ ಹೋಬಳಿ, ಮುದ್ದಲೋಡು ಗ್ರಾಮದ ಕೆರೆಯ ಅಂಗಳದಲ್ಲಿ ಯಾರೋ ಅಕ್ರಮವಾಗಿ ಟ್ರಾಕ್ಟರ್ ಟ್ರಾಲಿಗೆ ಮರಳನ್ನು ತುಂಬುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಸಿಬ್ಬಂಧಿ ಮತ್ತು ಪಂಚರೊಂದಿಗೆ ಪೊಲೀಸ್ ಜೀಪ್ ನಲ್ಲಿ ಮುದ್ದಲೋಡು ಗ್ರಾಮದ ಕೆರೆಯ ಅಂಗಳಕ್ಕೆ ಹೋದಾಗ, ಕೆರೆಯ ಅಂಗಳದಲ್ಲಿ ಒಂದು ಟ್ರ್ಯಾಕ್ಟರ್ ಟ್ರ್ಯಾಲಿ ನಿಂತಿದ್ದು, ಅದಕ್ಕೆ  ಮರಳನ್ನು ತುಂಬಿಸುತ್ತಿದ್ದು, ಪೊಲೀಸ್ ಜೀಪಿನಲ್ಲಿ ಹೋದ ನಮ್ಮನ್ನು ಕಂಡು ಅಲ್ಲಿದ್ದವರು ಸದರಿ ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಬಿಟ್ಟು ಪರಿಕರಗಳೊಂದಿಗೆ ಪರಾರಿಯಾಗಿರುತ್ತಾರೆ. ಟ್ರ್ಯಾಕ್ಟರ್ ಟ್ರ್ಯಾಲಿ ಹತ್ತಿರ ಹೋಗಿ ನೋಡಲಾಗಿ, ಅದು ಮಹೇಂದ್ರ-B 275 DI ಕಂಪನಿಯ  ಇಂಜಿನ್ SR.NO.RDT5330-J5 ನ  KA-40.5451  ನೊಂದಣಿ ಸಂಖ್ಯೆಯ ಟ್ರ್ಯಾಕ್ಟರ್ ಮತ್ತು KA-40,5452 ನೊಂದಣಿ ಸಂಖ್ಯೆಯ ಟ್ರ್ಯಾಲಿ ಆಗಿದ್ದು, ಇದರಲ್ಲಿ ಅರ್ದದಷ್ಟು ಮರಳು ತುಂಬಿರುತ್ತೆ. ಮರಳು ಸಾಗಾಣಿಕೆ ಮಾಡಲು ಪರವಾನಗಿ ಇಲ್ಲದೇ ಕಳ್ಳತನವಾಗಿ ಮರಳು ಸಾಗಿಸುತ್ತಿರುವುದರಿಂದ ಈ ವಾಹನದ ಚಾಲಕ ಹಾಗು ಮಾಲೀಕ ಪರಾರಿಯಾಗಿರುತ್ತಾರೆ. ಗೌರೀಬಿದನೂರು ತಾಲ್ಲೂಕಿನಲ್ಲಿ ಮರಳು ತೆಗೆದು ಸಾಗಿಸುವುದು ನಿಷೇಧವಿದ್ದರೂ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮರಳು ಸಾಗಾಣಿಕೆ ತಡೆಯಲು ಮೇಲಾಧಿಕಾರಿಗಳ ಆಧೇಶವಿದ್ದರೂದದ್ದರೂ  ಮೇಲ್ಕಂಡ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯಲ್ಲಿ ಅದರ ಚಾಲಕ ಹಾಗು ಮಾಲೀಕ ಯಾವುದೇ ಪರವಾನಗಿ ಇಲ್ಲದೇ ಕಳ್ಳತನವಾಗಿ ಖನಿಜ ಸಂಪತ್ತಾದ ಮರಳನ್ನು ಸಾಗಿಸಲು ಸದರಿ ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ತುಂಬುತ್ತಿದ್ದರಿಂದ ಸ್ಥಳದಲ್ಲಿದ್ದ  ಮೇಲ್ಕಂಡ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ರಾತ್ರಿ 7-30 ರಿಂದ 8-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ಮುಂದಿನ ಕ್ರಮಕ್ಕಾಗಿ ವಶಕ್ಕೆ ತೆಗೆದುಕೊಂಡು ವಾಹನದೊಂದಿಗೆ  ರಾತ್ರಿ 09-15 ಗಂಟೆಗೆ  ಠಾಣೆಗೆ ವಾಪಸ್ಸು ಬಂದು, ಮೇಲ್ಕಂಡ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯ  ಚಾಲಕ ಮತ್ತು ಮಾಲೀಕನ ಮೇಲೆ ಕಲಂ: 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಮೇರಗೆ ಠಾಣಾ ಮೊ ಸಂ 61/2019 ಕಲಂ 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

13) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 28/2019 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:08-03-2019 ರಂದು ಸಂಜೆ 05-10 ಗಂಟೆ ಪಿರ್ಯಾಧಿದಾರರಾದ   ಶ್ರೀ. ವಿಕಾಸ್ ರವರು ಠಾಣೆಗೆ ಹಾಜರಾಗಿ ನೀಡಿದ ಮಾಲು ಮತ್ತು ಆರೋಪಿಯನ್ನು ನೀಡಿದ ವರದಿಯ ಸಾರಾಂಶವೇನೆಂದರೆ , ಶ್ರೀ.ವಿಕಾಸ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ತಾನು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನ ಗಸ್ತಿನಲ್ಲಿ ಕೆಂಚಾರ್ಲಹಳ್ಳಿಯಲ್ಲಿದ್ದಾಗ ಗೌಡನಹಳ್ಳಿ ಗ್ರಾಮದಲ್ಲಿ ದೇವರಾಜ್ ಬಿನ್ ಲೇಟ್ ಸುಬ್ಬನ್ನ ರವರು ತನ್ನ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಲೈಸನ್ಸ್ ಇಲ್ಲದೆ ಮಧ್ಯಪಾನವನ್ನು ಇಟ್ಟುಕೊಂಡು ಸಾರ್ವಜನಿಕ ರಸ್ತೆಯಲ್ಲಿ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಲು ಠಾಣೆಯ ಸಿಬ್ಬಂದಿಯವರಾದ ಎ.ಎಸ್.ಐ ಸುಬ್ಬರಾಯಪ್ಪ , ಹೆಚ್.ಸಿ-161 ಕ್ರೀಷ್ಣಪ್ಪ ಮತ್ತು ಜೀಫ್ ಚಾಲಕ ಹೆಚ್.ಸಿ-56 ಅಶ್ವಥಪ್ಪ ರವರೊಂದಿಗೆ ಠಾಣೆಯ ಸಕರ್ಾರಿ ಜೀಪ್ ಸಂಖ್ಯೆ ಕೆ ಎ 40 ಜಿ 140 ಜೀಫ್ ನಲ್ಲಿ ಗೌಡನಹಳ್ಳಿ ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕರ ಓಡಾಡುವ ಸ್ಥಳದಲ್ಲಿ ಮಧ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ನಾನು ಮತ್ತು ಸಿಬ್ಬಂದಿ ಸುತ್ತುವರದು ಆಸಾಮಿಯನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಸಲಾಗಿ ನನ್ನ ಹೆಸರು ದೇವರಾಜು ಬಿನ್ ಲೇಟ್ ಸುಬ್ಬನ್ನ, 45 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಗೌಡನಹಳ್ಳಿ ಗ್ರಾಮ ಎಂದು ತಿಳಿಸಿದನು. ಆತನ ಬಳಿ ಇದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 1)ಬ್ಯಾಗ್ ಪೇಪರ್ 180 ಎಂ.ಎಲ್ ಎರಡೂ ಪ್ಯಾಕೇಟ್ ಬೆಲೆ 90.21*2=180.42 ಪೈಸೆ, 2)ಬೆಂಗಳೂರು ಮಾಲ್ಟ್ ವಿಸ್ಕಿ 90 ಎಂ.ಎಲ್ ನ 6 ಪ್ಯಾಕೇಟ್ 24.47*6=146.82 ಪೈಸೆ ಮತ್ತು 3) ಹೈವಡ್ಸ್ ಚೀರ್ಸ್ ವಿಸ್ಕಿ 90 ಎಂ.ಎಲ್ ನ 4 ಪ್ಯಾಕೇಟ್ 30.32*4= 121.28 ಪೈಸೆ ಒಟ್ಟು 448.25 ಪೈಸೆ ಬೆಲೆ ಬಾಳುವ 1260 ಎಂ.ಎಲ್ ಮಧ್ಯವನ್ನು ಪಂಚಾಯ್ತಿದಾರರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಮಧ್ಯವನ್ನು ಮಾರಾಟ ಮಾಡುತ್ತಿದ್ದ ದೇವರಾಜನನ್ನು ಯಾವುದಾದರೂ ಮಧ್ಯ ಮಾರಾಟ ಮಾಡಲು ಪರವಾಣಿಗೆ ಇದೆ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಮಧ್ಯದ ಮಾರಾಟದ ಪರವಾಣಿಗೆ ಇಲ್ಲವೆಂದು ತಿಳಿಸಿರುತ್ತಾರೆ. ಸ್ಥಳವನ್ನು ಪರಿಶೀಲಿಸಲಾಗಿ ಕೆಂಚಾರ್ಲಹಳ್ಳಿ ಕೋರ್ಲಪತರ್ೀ ರಸ್ತೆಯಿಂದ ಗೌಡನಹಳ್ಳಿ ಗ್ರಾಮದೊಳಗೆ ಹೋಗುವ ಮುಖ್ಯ ಸಾರ್ವಜನಿಕ ರಸ್ತೆಯಾಗಿರುತ್ತೆ. ಅಂಗಡಿ ಮುಂಭಾಗದಲ್ಲಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಇರುತ್ತದೆ. ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ  ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿತನ್ನು ವಶಕ್ಕೆ ಪಡೆದುಕೊಂಡಿರುತ್ತೆ, ವಶಪಡಿಸಿಕೊಂಡ ಮಾಲುಗಳನ್ನು ಮತ್ತು ಆರೋಪಿತನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಆರೋಪಿತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದೆ, ( ದಾಳಿಯಲ್ಲಿ ಪಾಲ್ಗೊಂಡ ಸಿಬ್ಬಂದಿಯವರ ಹೆಸರು ಮತ್ತು ಆರೋಪಿತರ ಹೆಸರು ವಿಳಾಸವನ್ನು  ಪಂಚನಾಮೆಯಲ್ಲಿ ವಿವಿರವಾಗಿ ನಮೂದಿಸಿರುತ್ತೆ) ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡಿರುತ್ತೆಂತ ದೂರಿನ ಸಾರಾಂಶವಾಗಿರುತ್ತೆ.

14) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 29/2019 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:08-03-2019 ರಂದು ಸಂಜೆ 06-30 ಗಂಟೆಗೆ ಶ್ರೀ.ವಿಕಾಸ್ , ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಮಾಲು ಮತ್ತು ಆರೋಪಿತರೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನ ಗಸ್ತಿನಲ್ಲಿ ಕೆಂಚಾರ್ಲಹಳ್ಳಿಯಲ್ಲಿದ್ದಾಗ ನಂದನಹೊಸಹಳ್ಳಿ ಗ್ರಾಮದಲ್ಲಿ ಜಯರಾಮ ಬಿನ್ ಲೇಟ್ ಶ್ರೀರಾಮಪ್ಪ ರವರು ತನ್ನ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಲೈಸನ್ಸ್ ಇಲ್ಲದೆ ಮಧ್ಯಪಾನವನ್ನು ಇಟ್ಟುಕೊಂಡು ಸಾರ್ವಜನಿಕರ ರಸ್ತೆಯಲ್ಲಿ ಮಧ್ಯಪಾನವನ್ನು ಮಾಡಲು ಅವಕಾಶ ಮಾಡಿಕೊಟ್ಟು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಲು ಠಾಣೆಯ ಸಿಬ್ಬಂದಿಯವರಾದ ಎ.ಎಸ್.ಐ ಸುಬ್ಬರಾಯಪ್ಪ , ಹೆಚ್.ಸಿ-161 ಕ್ರೀಷ್ಣಪ್ಪ ಮತ್ತು ಜೀಫ್ ಚಾಲಕ ಹೆಚ್.ಸಿ-56 ಅಶ್ವಥಪ್ಪ ರವರೊಂದಿಗೆ ಠಾಣೆಯ ಸರ್ಕಾರಿ ಜೀಪ್ ಸಂಖ್ಯೆ ಕೆ ಎ 40 ಜಿ 140 ಜೀಫ್ ನಲ್ಲಿ ನಂದನಹೊಸಹಳ್ಳಿ ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕರ ಓಡಾಡುವ ಸ್ಥಳದಲ್ಲಿ ಮಧ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ತಾನು ಮತ್ತು ಸಿಬ್ಬಂದಿ ಸುತ್ತುವರದು ಆಸಾಮಿಯನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಸಲಾಗಿ ನನ್ನ ಹೆಸರು ಜಯರಾಮ ಬಿನ್ ಲೇಟ್ ಶ್ರೀರಾಮಪ್ಪ , 50 ವರ್ಷ, ನಾಯಕ ಜನಾಂಗ, ವ್ಯವಸಾಯ, ನಂದನಹೊಸಹಳ್ಳಿ ಗ್ರಾಮ ಎಂದು ತಿಳಿಸಿದನು. ಆತನ ಬಳಿ ಇದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 1)ಬ್ಯಾಗ್ ಪೇಪರ್ 180 ಎಂ.ಎಲ್ 3 ಪ್ಯಾಕೇಟ್ ಬೆಲೆ 90.21*3= 270.63 ಪೈಸೆ, 2) ಬೆಂಗಳೂರು ಮಾಲ್ಟ್ ವಿಸ್ಕಿ 90 ಎಂ.ಎಲ್ ನ 3 ಪ್ಯಾಕೇಟ್ 24.47*3=73.41 ಪೈಸೆ 3) ಹೈವಡ್ಸ್ ಚೀರ್ಸ್ ವಿಸ್ಕಿ 90 ಎಂ.ಎಲ್ ನ 3 ಪ್ಯಾಕೇಟ್ 30.32*3= 90.96 ಪೈಸೆ 4) ಮೆಕ್ ಡೋವೆಲ್ಸ್ 180 ಎಂ.ಎಲ್ 1 ಕ್ಯಾಟರ್ ಬಾಟಲ್ 162.22*1=162.22 ಪೈಸೆ ಒಟ್ಟು ಮೇಲ್ಕಂಡ ಮಧ್ಯವನ್ನು ಪಂಚಾಯ್ತಿದಾರರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಮಧ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಸಾರ್ವಜನಿಕವಾಗಿ ಅವಕಾಶ ಮಾಡಿಕೊಟ್ಟಿರುವ ಬಗ್ಗೆ  ಯಾವುದಾದರೂ ಪರವಾಣಿಗೆ ಇದೆ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಮಧ್ಯದ ಮಾರಾಟದ ಪರವಾಣಿಗೆ ಇಲ್ಲವೆಂದು ತಿಳಿಸಿರುತ್ತಾರೆ.ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ  ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿತನ್ನು ವಶಕ್ಕೆ ಪಡೆದುಕೊಂಡಿರುತ್ತೆ, ವಶಪಡಿಸಿಕೊಂಡ ಮಾಲುಗಳನ್ನು ಮತ್ತು ಆರೋಪಿತನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಆರೋಪಿತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದೆ, ( ದಾಳಿಯಲ್ಲಿ ಪಾಲ್ಗೊಂಡ ಸಿಬ್ಬಂದಿಯವರ ಹೆಸರು ಮತ್ತು ಆರೋಪಿತರ ಹೆಸರು ವಿಳಾಸವನ್ನು  ಪಂಚನಾಮೆಯಲ್ಲಿ ವಿವಿರವಾಗಿ ನಮೂದಿಸಿರುತ್ತೆ) ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡಿರುತ್ತೆಂತ ದೂರಿನ ಸಾರಾಂಶವಾಗಿರುತ್ತೆ.

15) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 41/2019 ಕಲಂ. 379 ಐಪಿಸಿ :-

     ದಿನಾಂಕ 08/03/2019 ರಂದು ಬೆಳಗ್ಗೆ 10-15 ಗಂಟೆಗೆ ಪಿರ್ಯಾದಿ ಹೆಚ್.ಸಿ 52 ಮುನಾವರ್ ಪಾಷ ರವರು ಠಾಣೆಗೆ ಹಾಜರಾಗಿ,  ದಿನಾಂಕ 08-03-2019 ರಂದು ಬೆಳಿಗ್ಗೆ 07-00 ಘಂಟೆಯಲ್ಲಿ ನಾನು ತೊಂಡೇಭಾವಿ ಹೊರಠಾಣೆಯಲ್ಲಿರುವಾಗ ನನಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ನಾಗತೇನಹಳ್ಳಿ ಗ್ರಾಮದ ಸರ್ಕಾರಿ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರನ್ನು ನಿಲ್ಲಿಸಿಕೊಂಡು  ಕೆರೆಯ ಅಂಗಳವನ್ನು ಅಗೆದು ವಿರೂಪಗೊಳಿಸಿ ಸರ್ಕಾರಿ ಖನಿಜ ಸಂಪತ್ತಾದ ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರಿನ ಟ್ರಾಲಿಗೆ ತುಂಬಿಸುತ್ತಿರುವುದಾಗಿ ಬಾತ್ಮಿದಾರರಿಂದ ಮಾಹಿತಿಯು ಬಂದಿತು. ಕೂಡಲೇ ನಾನು ತೊಂಡೇಬಾವಿ ಹೊರ ಠಾಣೆಯ ಪಿ.ಸಿ 537 ಶ್ರೀ ಆನಂದ್ ಕುಮಾರ್, ಪಿ.ಸಿ 238 ದಿಲೀಪ್ ಕುಮಾರ್  ರವರೊಂದಿಗೆ  ಪಂಚರನ್ನು ಕರೆದುಕೊಂಡು ಬೆಳಿಗ್ಗೆ 07-30 ಘಂಟೆಗೆ ದಾಳಿಗೆ ಹೋದೆನು. ನಾವು ಸಮವಸ್ತ್ರದಲ್ಲಿದ್ದುದನ್ನು ಸ್ವಲ್ಪ ದೂರದಿಂದಲೇ ಗಮನಿಸಿದ ಟ್ರಾಕ್ಟರ್ ಚಾಲಕ ಮತ್ತು ಮಾಲೀಕ ಕೂಲಿಯವರೊಂದಿಗೆ ಮರಳು ತುಂಬುತ್ತಿದ್ದ ಟ್ರಾಕ್ಟರ್ ಮತ್ತು ಟ್ರಾಲಿಯೊಂದನ್ನು ಕೆರೆಯ ಅಂಗಳದಲ್ಲೇ ಬಿಟ್ಟು ಮರಳು ತುಂಬಲು ತಂದಿದ್ದ ಚನಿಕೆ, ಬುಟ್ಟಿಗಳನ್ನು ಎತ್ತಿಕೊಂಡು ಹೊಲಗಳಲ್ಲಿ ಓಡಿ ಪರಾರಿಯಾದರು. ನಾವು ಪಂಚರು ಸ್ಥಳಕ್ಕೆ ಹೋಗಿ ಪರಿಶಿಲಿಸಿದ್ದು ಇದು ಅಕ್ರಮ ಮರಳು ಕಳ್ಳಸಾಗಣೆ ಎಂದು ಪಂಚರು ಅಭಿಪ್ರಾಯ ಪಟ್ಟರು. ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಪರಿಶೀಲಿಸಲಾಗಿ (1) ಕೆಂಪು ಬಣ್ಣದ MAHINDRA 475 DI ಆಗಿದ್ದು ಇದಕ್ಕೆ RTO ನೊಂದಣಿ ಸಂಖ್ಯೆಯನ್ನು ಎಲ್ಲೂ ನಮೂದಿಸಿರುವುದಿಲ್ಲ. ಇದರ ಇಂಜನ್ ನಂ.RJNB03132, CHASSIS NO. 472-2014 ಎಂದು ಇರುತ್ತದೆ. ಟ್ರಾಲಿಯನ್ನು ಪರಿಶೀಲಿಸಲಾಗಿ ನೀಲಿ ಬಣ್ಣದ ಟ್ರಾಲಿಯಾಗಿದ್ದು, ಇದರ ಮೇಲೆ ಎಲ್ಲೂ RTO ನೊಂದಣಿ ಸಂಖ್ಯೆ ನಮೂದಿಸಿಲ್ಲ. ಸದರಿ ಟ್ರಾಕ್ಟರಿನ ಟ್ರಾಲಿಯಲ್ಲಿ ಮರಳನ್ನು ಕಳವು ಮಾಡಿ ಟ್ರಾಲಿ ತುಂಬ ಮರಳು ತುಂಬಿಸಿರುತ್ತದೆ. ಸದರಿ ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ಬೆಳಗ್ಗೆ 08-00 ರಿಂದ 09-00 ರವರೆಗೆ ಮಹಜರು ಮಾಡಿ ಮರಳು ತುಂಬಿದ್ದ ಮೇಲ್ಕಂಡ ಟ್ರಾಕ್ಟರ್ ಮತ್ತು ಟ್ರಾಲಿಯನ್ನು  ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡು ತೊಂಡೇಬಾವಿಯ ಹೊರ ಠಾಣೆಗೆ ಮುಂದಿನ ಕ್ರಮಕ್ಕಾಗಿ ತಂದಿತ್ತೇನೆ. ಆದ್ದರಿಂದ ಸದರಿ ಟ್ರಾಕ್ಟರ್ ಮತ್ತು ಟ್ರಾಲಿಯ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

16) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 16/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:09/03/2019 ರಂದು ಸಂಜೆ 3:45 ಗಂಟೆಗೆ ಪಿ.ಎಸ್.ಐ (ಕಾ.ಸು) ರವರು 4 ಜನ ಆರೋಪಿಗಳನ್ನು, ಮಾಲುಗಳನ್ನು ಮತ್ತು ಅಸಲು ದಾಳಿ ಮಹಜರ್ ಹಾಜರ್ಪಡಿಸಿ ನೀಡಿದ ಮೇಮೋವನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ದಿನಾಂಕ:09/03/2019 ರಂದು ಮದ್ಯಾಹ್ನ 1:00 ಗಂಟೆ ಸಮಯದಲ್ಲಿ ಪಿಎಸ್.ಐ ಸಾಹೇಬರಿಗೆ ಬಂದ ಖಚಿತ ಮಾಹಿತಿ ಏನೆಂದರೆ ಯಾರೋ ಆಸಾಮಿಗಳು ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿಯ ತುಮಕಲಹಳ್ಳಿ ಗ್ರಾಮದ ಸಮೀಪವಿರುವ ಎಸ್.ಜೆ.ಸಿ.ಐ.ಟಿ ಕಾಲೇಜಿನ ಪಕ್ಕದ ಹಳ್ಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ದಾಳಿ ನಡೆಸಲು ಚಿಕ್ಕಬಳ್ಳಾಪುರ ಘನ 2ನೇ ಅಡಿಷಿನಲ್ ಸಿ.ಜೆ & ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಅನುಮತಿ ಪಡೆದು ಪಿ.ಎಸ್.ಐ ಸಾಹೇಬರು ಮತ್ತು ಪಂಚರು ಹಾಗೂ ಪೊಲೀಸ್ ಸಿಬ್ಬಂದಿಗಳಾದ ಎ.ಎಸ್,ಐ ಶಿವಣ್ಣ, ಹೆಚ್.ಸಿ-234 ಶೇಖರ್, ಹೆಚ್.ಸಿ-230 ಕೆ.ಪಿ ನಾಗರಾಜ್, ಪಿಸಿ-240 ಮಧುಸೂಧನ್, ಪಿಸಿ-06 ರಾಮಕೃಷ್ಣ, ರವರುಗಳೊಂದಿಗೆ ಮದ್ಯಾಹ್ನ 2:00 ಗಂಟೆಗೆ ಎಸ್.ಜೆ.ಸಿ.ಐ.ಟಿ ಕಾಲೇಜಿನ ಪಕ್ಕದ ಬಳಿಗೆ ಹೊಗಿ ಮರೆಯಲ್ಲಿ ನಿಂತು ನೊಡಲಾಗಿ  ಅಂದರ್ಗೆ 500/-ರೂ ಗಳೆಂದು, ಬಾಹರ್ 500/- ರೂ ಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದರವರ ಮೇಲೆ ದಾಳಿಮಾಡಿದಾಗ ಸ್ಥಳದಲ್ಲಿ ಹಣ, ಮತ್ತು  ಇಸ್ಪೀಟ್ ಎಳೆಗಳನ್ನು ಬಿಟ್ಟು ಓಡಿ ಪರಾರಿಯಾಗಲು ಪ್ರಯತ್ನಿಸಿದ 4 ಜನರನ್ನು ಹಿಡಿದು, ವಶಕ್ಕೆ ಪಡೆದುಕೊಂಡವರ ಹೆಸರು ವಿಳಾಸ ಕೇಳಲಾಗಿ 1) ವಿನೋದ್ ಕುಮಾರ್ @420 ಬಿನ್ ಲೇಟ್ ವೆಂಕಟೇಶಪ್ಪ,,26 ವರ್ಷ,ಪ.ಜಾತಿ (ಎ.ಡಿ) ಆಟೋಚಾಲಕ,ಅಗಲಗುರ್ಕಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು 2)ಜಬೀವುಲ್ಲಾ @ ಜಬೀ ಬಿನ್ ರಹಮತ್ತುಲ್ಲಾ,28 ವರ್ಷ,ಆಟೋಚಾಲಕ ವೃತ್ತಿ,ನಂ-360 9ನೇ ಬೀದಿ, 9ನೇ ಕ್ರಾಸ್, ಯಲಹಂಕ ಟೌನ್ -64 3) ಆದಿನಾರಾಯಣ @ ಆಚಾರಿ ಬಿನ್ ಬಿನ್ ಗಂಗಾಧರಾಚಾರಿ, 26 ವರ್ಷ, ಅಕ್ಕಸಾಲಿಗ, ಆಟೋ ಚಾಲಕ, ಗಂಗೋತ್ರಿ ವಾಟರ್ ಫಿಲ್ಟರ್ ಬಳಿ ಪ್ರಶಾಂತ ನಗರ, ಚಿಕ್ಕಬಳ್ಳಾಪುರ, ಸ್ವಂತ ಸ್ಥಳ ನಲ್ಲಕದಿರೇನಹಳ್ಳಿ ಗ್ರಾಮ. 4) ಶ್ರೀಧರ್.ಎಂ ಬಿನ್ ಎಸ್. ಮಂಜುನಾಥ, 30 ವರ್ಷ, ಬಲಜಿಗರು, ಮೆಕಾನಿಕ್, ಅಗಲಗುರ್ಕಿ ಗೇಟ್, ಕಂದವಾರ ಬಾಗಿಲು. ಎಂದು ತಿಳಿಸಿದರು ಇವರುಗಳ ಮೇಲೆ ದಾಳಿ ಮಾಡಿದಾಗ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಪ್ಲಾಸ್ಟಿಕ್ ಪೇಪರ್ ಮೇಲೆ ಬಿದ್ದಿದ್ದ 52 ಇಸ್ಪೀಟ್ ಎಲೆಗಳು ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ 1,850 ನಗದು ಹಣವನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 2-00 ಗಂಟೆಯಿಂದ 3-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು  ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಮದ್ಯಾಹ್ನ 3-30 ಗಂಟೆಗೆ ಠಾಣೆಗೆ ಬಂದಿರುತ್ತೆ. ಈ ಬಗ್ಗೆ  ಕಾನೂನು ಕ್ರಮ  ಜರುಗಿಸಲು ಸೂಚಿಸಿದ್ದನ್ನು ಪಡೆದು ಪರಿಶೀಲಿಸಿ ಸಂಜೆ:03:45 ಗಂಟೆಗೆ ಠಾಣಾ ಮೊ.ಸಂ:16/2019 ಕಲಂ:87ಕೆ.ಪಿ ಆಕ್ಟ್ ರೀತಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

17) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 36/2019 ಕಲಂ.32,34 ಕರ್ನಾಟಕ ಅಬಕಾರಿ ಕಾಯ್ದೆ :-

     ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹರೀಶ್ ವಿ  ಆದ ನನಗೆ ದಿನಾಂಕ: 08-03-2019 ರಂದು ಸಂಜೆ 4-00 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ನನಗೆ ಗೊರಮಡಗು ಗ್ರಾಮದಲ್ಲಿ ಶ್ರೀನಿವಾಸ ಬಿನ್ ನಾರಾಯಣಸ್ವಾಮಿ ಎಂಬುವರು ಅವರ ವಾಸದ ಮನೆಯ ಮುಂಭಾಗದ ಸಿಮೆಂಟ್  ರಸ್ತೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್  ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ  ಬಂದ ಖಚಿತ  ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಪಿಸಿ-14 ಸಿ.ಎ.ಗೋವಿಂದಪ್ಪ, ಸಿಪಿಸಿ-233 ಮಂಜೇಶ್ ಮತ್ತು ಕೆಎ-40-ಜಿ-357 ಜೀಪಿನಲ್ಲಿ ಚಾಲಕ AHC-09 ಕೃಷ್ಣಪ್ಪ ರವರೊಂದಿಗೆ ಕೆಎ-40-ಜಿ-357ರ ಸರ್ಕಾರಿ ಜೀಪಿನಲ್ಲಿ ಗೊರಮಡಗು ಗ್ರಾಮಕ್ಕೆ ಸಂಜೆ 4.30 ಗಂಟೆಗೆ ಬೇಟಿ ನೀಡಿ ಪಿಸಿ-14 ರವರಿಗೆ ಇಬ್ಬರು ಪಂಚರನ್ನು ಹಾಜರುಪಡಿಸಲು ತಿಳಿಸಿದ್ದು ಅದರಂತೆ ಇಬ್ಬರು ಪಂಚಾಯ್ತಿದಾರರನ್ನು ನನ್ನ ಮುಂದೆ ಹಾಜರುಪಡಿಸಿದ್ದು ಸದರಿಯವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿದ್ದು ಅದಕ್ಕೆ ಅವರು ಒಪ್ಪಿಕೊಂಡಿರುತ್ತಾರೆ. ಆಗ ಪಂಚಾಯ್ತಿದಾರರು ಮತ್ತು ಸಿಬ್ಬಂಧಿಯೊಂದಿಗೆ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ನಿಂತು ಗಮನಿಸುತ್ತಿದ್ದು ಒಬ್ಬ ವ್ಯಕ್ತಿ ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದ ಸಿಮೆಂಟ್ ರಸ್ತೆಯಲ್ಲಿ ಒಂದು ಚೀಲವನ್ನು ಇಟ್ಟುಕೊಂಡಿದ್ದು ಆತನ ಹತ್ತಿರ ಇಬ್ಬರು ಸಾರ್ವಜನಿಕರು ಮದ್ಯವನ್ನು ತೆಗೆದುಕೊಳ್ಳುತ್ತಿದ್ದರು. ಆಗ ನನಗೆ ಬಂದ ಬಾತ್ಮಿಯನ್ನು ಖಾತ್ರಿಪಡಿಸಿಕೊಂಡು ಸಂಜೆ 4.45 ಗಂಟೆಯಲ್ಲಿ ಸುತ್ತುವರೆಯಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಸಾರ್ವಜನಿಕರು ಓಡಿ ಹೋಗಿದ್ದು,ಸದರಿ ವ್ಯಕ್ತಿ ಪೊಲೀಸರನ್ನು ನೋಡಿ ಚೀಲವನ್ನು ಎತ್ತಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ ಆತನನ್ನು ಹಿಡಿದು ಅಂಗಜಪ್ತಿ ಮಾಡಲಾಗಿ ಆತನ ಬಳಿ 2,100-00 ಇದ್ದು ಇದನ್ನು ಕೇಳಲಾಗಿ ಮದ್ಯ ಮಾರಾಟದಿಂದ ಬಂದ ಹಣ ಎಂದು ತಿಳಿಸಿರುತ್ತಾನೆ. ಪಂಚರ ಸಮಕ್ಷಮ ಹೆಸರು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ವಿಳಾಸ ಶ್ರೀನಿವಾಸ ಬಿನ್ ನಾರಾಯಣಸ್ವಾಮಿ, 35 ವರ್ಷ, ಪ.ಜಾತಿ, ಕೂಲಿ ಕೆಲಸ, ಗೊರಮಡಗು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದನು. ಆತನ ಬಳಿ ಇದ್ದ ಚೀಲವನ್ನು ಪರೀಶೀಲಿಸಲಾಗಿ ಸದರಿ ಚೀಲದಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳಿದ್ದವು ಇದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವಾಗಿದ್ದು ಚೀಲದಲ್ಲಿದ್ದ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ  1) 180 Ml ನ Old Tavern Whisky 15 ಟೆಟ್ರಾ ಪ್ಯಾಕೆಟ್ ಇದ್ದು ಪ್ರತಿಯೊಂದರ ಬೆಲೆ Rs. 74-00 ರೂಗಳಾಗಿದ್ದು ಒಟ್ಟು Rs. 1110-00 ರೂಗಳಾಗಿರುತ್ತೆ, 2) 90 Ml ನ Haywards Cheers  Whisky 22 ಟೆಟ್ರಾ ಪ್ಯಾಕೆಟ್ ಇದ್ದು ಪ್ರತಿಯೊಂದರ ಬೆಲೆ Rs. 30-00 ರೂಗಳಾಗಿದ್ದು ಒಟ್ಟು Rs. 660-00 ರೂಗಳಾಗಿರುತ್ತೆ ಮೇಲ್ಕಂಡ ಎಲ್ಲಾ ಮಾಲುಗಳ ಒಟ್ಟು ಬೆಲೆ Rs. 1770-00 (ಒಂದು  ಸಾವಿರದ ಏಳುನೂರು ಎಪ್ಪತ್ತು ರೂಪಾಯಿಗಳು ಮಾತ್ರ) ಸದರಿ ಮಾಲಿನ ಮಾರಾಟದ ಬಗ್ಗೆ ಯಾವುದಾದರೂ ಪರ್ಮಿಟ್/ವಗೆರೆ ಬಗ್ಗೆ ಕೇಳಲಾಗಿ ಸದರಿಯವನು ತನ್ನ ಬಳಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡಲು ಯಾವುದೇ ಪರ್ಮಿಟ್/ವಗೆರೆ  ಇಲ್ಲವೆಂದು ತಿಳಿಸಿದ್ದು, ಸದರಿಯವನು ಯಾವುದೇ ಪರ್ಮಿಟ್/ವಗೆರೆ ಇಲ್ಲದೆ ಅಕ್ರಮವಾಗಿ  ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಚೀಲದಲ್ಲಿ ಇಟ್ಟುಕೊಂಡು ಲಾಬಕ್ಕಾಗಿ ಮಾರಾಟ ಮಾಡುತ್ತಿದ್ದುದಾಗಿರುತ್ತೆ. ಈ ಬಗ್ಗೆ ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ನಗದು ಹಣ 2100-00 ರೂಗಳು ಮತ್ತು ಮಾಲು ಸಮೇತ ಸಂಜೆ 6-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ 36/2019 ಕಲಂ 32, 34 ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

18) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 37/2019 ಕಲಂ. 379 ಐಪಿಸಿ :-

     ದಿನಾಂಕ: 08/03/2019 ರಂದು ರಾತ್ರಿ 8-30 ಗಂಟೆಯಲ್ಲಿ ಪಿರ್ಯಾದಿದಾರರ ಠಾಣೆಗೆ ಹಾಜರಾಗಿ  ಒಬ್ಬ ವ್ಯಕ್ತಿಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ 2007 ನೇ ಸಾಲಿನಲ್ಲಿ ಮಾಡಿಕೆರಿ ಕ್ರಾಸ್ ನಲ್ಲಿ ತನಗೆ ಅಪಘಾತವಾಗಿದ್ದು ಚಿಂತಾಮಣಿ ನ್ಯಾಯಾಲಯದಲ್ಲಿ ಸಿಸಿ-53/2007 ರಂತೆ ಕೇಸ್ ನಡೆಯುತ್ತಿದ್ದು ದಿನಾಂಕ: 08-03-2019 ರಂದು ಸದರಿ ಕೇಸ್ ವಿಚಾರದಲ್ಲಿ ತಮ್ಮ ವಕೀಲರಾದ ಅಮರ್ ರವರನ್ನು ಮಾತನಾಡುವ ಸಲುವಾಗಿ ತಾನು ಮತ್ತು ತನ್ನ ಹೆಂಡತಿಯಾದ ಶ್ರೀಮತಿ ಎಸ್.ಸರಸ್ವತಿ ರವರು ತಮ್ಮ ಬಾಬತ್ತು ನಂ. ಕೆಎ-53-ಎಂಎಫ್-3740 ಮಾರುತಿ ಓಮ್ನಿ ವ್ಯಾನಿನಲ್ಲಿ ಚಿಂತಾಮಣಿ ನಗರಕ್ಕೆ ಹೋಗಿ ವಕೀಲರನ್ನು ಮಾತನಾಡಿಕೊಂಡು ಸಂಜೆ ಸುಮಾರು 7.00 ಗಂಟೆಗೆ ಶಿಡ್ಲಘಟ್ಟ ತಾಲ್ಲೂಕು ಹೆಚ್.ಕ್ರಾಸ್ ಸರ್ಕಲ್ ನಲ್ಲಿ  ಮನೆಗೆ ಸೊಪ್ಪನ್ನು ತೆಗೆದುಕೊಳ್ಳುವ ಸಲುವಾಗಿ ರಸ್ತೆಯ ಬದಿಯಲ್ಲಿ  ಕಾರನ್ನು ನಿಲ್ಲಿಸಿ ಗಾಬರಿಯಲ್ಲಿ ಕಾರಿನ ಗ್ಲಾಸ್ ಗಳು ಮುಚ್ಚದೇ ತಾವಿಬ್ಬರು ಸೊಪ್ಪನ್ನು ತೆಗೆದುಕೊಳ್ಳುವ ಸಲುವಾಗಿ ಅಂಗಡಿಯ ಬಳಿಗೆ ಹೋಗಿರುತ್ತೇವೆ, ಹೋಗಿದ್ದ ಸಮಯದಲ್ಲಿ ತನ್ನ ಕಾರಿನಲ್ಲಿ ತನ್ನ ಹೆಂಡತಿಯ ಹ್ಯಾಂಡ್ ಬ್ಯಾಗ್, ಅದರಲ್ಲಿದ್ದ 1,000-00 ರೂ, ವಿವೋ ವಿ-5 ಮೊಬೈಲ್ ಮತ್ತು ಇತರೆ ವಸ್ತುಗಳು ಅಲ್ಲಿಯೇ ಇಟ್ಟಿದ್ದು. ಸೊಪ್ಪು ತೆಗೆದುಕೊಳ್ಳಲು ಹಣವನ್ನು ಮರೆತು ಬಂದಿದ್ದರಿಂದ ತನ್ನ ಹೆಂಡತಿಗೆ ಕಾರಿನಲ್ಲಿರುವ ಹಣವನ್ನು ತೆಗೆದುಕೊಂಡು ಬರುವಂತೆ ತಿಳಿಸಿದ್ದು ಆಗ ತನ್ನ ಹೆಂಡತಿ ಶ್ರೀಮತಿ ಸರಸ್ವತಿ ರವರು  ತಮ್ಮ ಕಾರಿನ ಬಳಿ ಹೋದಾಗ  ಯಾರೋ ಒಬ್ಬ ಆಸಾಮಿ ಕಾರಿನ ವಿಂಡೋ ಒಳಗಡೆ ತಲೆಯನ್ನು ತೂರಿಸಿ ಹ್ಯಾಂಡ್ ಬ್ಯಾಗ್ ಅನ್ನು ತೆಗೆದುಕೊಳ್ಳುತ್ತಿದ್ದನ್ನು ಕಂಡು ತನ್ನ ಹೆಂಡತಿ ತನ್ನನ್ನು ಕೂಗಿ ಯಾರೋ  ಹ್ಯಾಂಡ್ ಬ್ಯಾಗ್ ತೆಗೆದುಕೊಂಡು ಹೋಗುತ್ತಿದ್ದಾರೆಂದು ಕಿರಿಚಿಕೊಂಡಾಗ  ಆಗ ತಾನು ತಿರುಗಿ  ನೋಡಲಾಗಿ ಒಬ್ಬವ್ಯಕ್ತಿ ಹ್ಯಾಂಡ್ ಬ್ಯಾಗ್, ಅದರಲ್ಲಿದ್ದ 1,000-00 ರೂ ನಗದು ಹಣ, ಮೊಬೈಲ್ ಪೋನ್ ಮತ್ತು ಇತರೆ ವಸ್ತುಗಳ ಸಮೇತ ಎತ್ತಿಕೊಂಡು ಓಡಿ ಹೋಗುತ್ತಿದ್ದು, ಆಗ ತಾನು ಹಾಗೂ ಅಲ್ಲಿದ್ದ ಸಾರ್ವಜನಿಕರು ಆತನನ್ನು ಬೆನ್ನಟ್ಟಿ ಹಿಡಿದುಕೊಂಡಾಗ ಆತ ಕೆಳಗಡೆ ಬಿದ್ದುಹೋಗಿದ್ದು ಆಗ ಆತನಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತೆ. ಸದರಿ  ವ್ಯಕ್ತಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಜಾಕೀರ್ ಹುಸೇನ್ ಬಿನ್ ಅಲ್ತಾಪ್ ವುಲ್ಲಾ, 28 ವರ್ಷ, ಮರದ ಕೆಲಸ, ಮಾವಳ್ಳಿ, ಎಂತ ತಿಳಿಸಿದ್ದು ಆಗ ಸದರಿ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ತಾನು ಮತ್ತು ತನ್ನ ಹೆಂಡತಿ ಕಾರಿನಲ್ಲಿ ಕರೆದುಕೊಂಡು  ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದು ತಮ್ಮ ಕಾರಿನಲ್ಲಿದ್ದ ಬ್ಯಾಗ್, ಬ್ಯಾಗಿನಲ್ಲಿದ್ದ 1,000-00 ರೂ ನಗದು ಹಣ, ಮೊಬೈಲ್ ಪೋನ್ ಅನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿ ಜಾಕೀರ್ ಹುಸೇನ್ ಬಿನ್ ಅಲ್ತಾಪ್ ವುಲ್ಲಾ, 28 ವರ್ಷ, ಮರದ ಕೆಲಸ, ಮಾವಳ್ಳಿ, ಬೆಂಗಳೂರು ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿಕೊಟ್ಟ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.