ದಿನಾಂಕ : 09/02/2019ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 21/2019 ಕಲಂ. 279 ಐಪಿಸಿ :-

      ದಿನಾಂಕ:08/02/2019 ರಂದು ಪಿರ್ಯಾದಿದಾರರಾದ ಶ್ರೀ ಕೆ.ಓಬಳೇಶ್ ಬಿನ್ ಕೆ.ದಾಸರಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 05/02/2019 ರಂದು ರಾತ್ರಿ 12-30 ಗಂಟೆ ಸಮಯದಲ್ಲಿ ಕೆ.ಓಬಳೇಶ ಬಿನ್ ಕೆ.ದಾಸರಯ್ಯ ಆದ ನಾನು ನಮ್ಮ ಸಾಯಿ ಗಣೇಶ್ ಲಾಜಸ್ಟಿಕ್ಸ್ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೆಎ-51, ಎಬಿ-1116 ನೊಂದಣಿ ಸಂಖ್ಯೆಯ ಲಾರಿ ಚಾಲಕ ಎಂ. ಮೋಹನ್ ಬಿನ್ ಗಂಗನ್ನ, 37 ವರ್ಷ, ನಾಯಕ ಜನಾಂಗ, ವಾಸ: ವೆಂಕಟಾಪುರ ಗ್ರಾಮ, ಪುಲಿವೆಂದಲ ಮಂಡಲಂ, ಕಡಪ ಜಿಲ್ಲೆ, ಎಂಬುವರು ನನಗೆ ದೂರವಾಣಿ ಮುಖಾಂತರ ಕರೆ ಮಾಡಿ ಲಾರಿ ಅಪಘಾತವಾಗಿರುವ ಬಗ್ಗೆ ತಿಳಿಸಿದ್ದು ನಾನು ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ವಿಚಾರ ಮಾಡಲಾಗಿ ದಿನಾಂಕ: 05/02/2019 ರಂದು ಸಾಯಿ ಗಣೇಶ್ ಲಾಜಿಸ್ಟಿಕ್ಸ್  ಕಂಪನಿಯ ಕೆಎ-51, ಎಬಿ-1116 ನೊಂದಣಿ ಸಂಖ್ಯೆಯ ಲಾರಿಯಲ್ಲಿ ಜಂಬಲಮಡಗು ಗ್ರಾಮದಿಂದ ಸೀಮೆಂಟ್ ಮೂಟೆಗಳನ್ನು ತುಂಬಿಕೊಂಡು ಮಾರ್ಗನುಕುಂಟೆ ಗ್ರಾಮದ ಮಾರ್ಗವಾಗಿ ಬೆಂಗಳೂರಿಗೆ ಹೋಗಲು ರಾತ್ರಿ 11-30 ಗಂಟೆ ಸಮಯದಲ್ಲಿ ಬಾಗೇಪಲ್ಲಿ ತಾಲ್ಲೂಕು ಕೃಷ್ಣಾಪುರ ಗ್ರಾಮದ ಕ್ರಾಸ್ ಬಳಿ  ಲಾರಿಯನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಎದರುಗಡೆಯಿಂದ ಬಂದಂತಹ ವಾಹನಕ್ಕೆ ದಾರಿ ಬಿಡಲು ಲಾರಿಯನ್ನು ಎಡಗಡೆಗೆ ತಿರುಗಿಸಿದರ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಲಾರಿಯು ರಸ್ತೆಯ ಎಡಭಾಗಕ್ಕೆ ಉರಳಿ ಬಿದ್ದಿದರಿಂದ ಲಾರಿ ಪೂರ್ತಿ ಜಖಂಗೊಂಡಿದ್ದು, ಲಾರಿ ಚಾಲಕನಾದ ಎಂ. ಮೋಹನ್ ರವರಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಎಂದು ತಿಳಿಯಿತು. ನಾನು ಊರಿನಿಂದ ಸ್ಥಳಕ್ಕೆ ಬಂದು ಲಾರಿಯಲ್ಲಿದ್ದ ಸಿಮೆಂಟ್ ಮೂಟೆಗಳನ್ನು ಬೇರೆ ಲಾರಿಗೆ ತುಂಬಿಸಿ ಕಳುಹಿಸಿಕೊಟ್ಟು, ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದು ಈ ಅಪಘಾತಕ್ಕೆ ಕಾರಣನಾದ ಕೆಎ-51, ಎಬಿ-1116 ನೊಂದಣಿ ಸಂಖ್ಯೆಯ ಲಾರಿ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

2) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 22/2019 ಕಲಂ. 420,421 ಐಪಿಸಿ :-

      ದಿನಾಂಕ:08/02/2019 ರಂದು ಹೆಚ್.ಸಿ 223 ಶ್ರೀ ವಿಶ್ವನಾಥ ರವರು ನ್ಯಾಯಾಲಯದಿಂದ ಸಾದರಾದ ಪ್ರಕರಣದ ವರದಿಯನ್ನು ತಂದು ಹಾಜರುಪಡಿಸಿದ ಸಾರಾಂಶವೇನೆಂದರೆ ಪಿರ್ಯಾದಿದಾರರು ಬಾಗೇಪಲ್ಲಿ ಎಸ್.ಬಿ.ಐ ಬ್ಯಾಂಕ್ ನಲ್ಲಿ ಖಾತೆ ಸಂಖ್ಯೆ 64028402114 ರಂತೆ ವ್ಯವಹಾರ ಮಾಡುತ್ತಿದ್ದು, ದಿನಾಂಕ:20/06/2016 ರಂದು ವ್ಯವಸಾಯದ ಖರ್ಚಿಗೆ ಹಣದ ಅವಶ್ಯಕತೆ ಇದ್ದುದ್ದರಿಂದ ತನ್ನ ಬಳಿ ಇದ್ದ ಸುಮಾರು 5,40,000/- ರೂ ಬೆಲೆ ಬಾಳುವ 168 ಗ್ರಾಂ ಬಂಗಾರದ ಒಡವೆಗಳನ್ನು ಬ್ಯಾಂಕ್ ನಲ್ಲಿ ಅಡವಿಟ್ಟು ಬ್ಯಾಂಕ್ ನಿಂದ 2,60,000/- ರೂಗಳನ್ನು ಸಾಲವಾಗಿ ಪಡೆದಿದ್ದು, ಆದರೆ ವ್ಯವಸಾಯದಲ್ಲಿ ನಷ್ಟ ಉಂಟಾಗಿ ಸಾಲದ ಹಣವನ್ನು ವಾಪಾಸ್ ಕಟ್ಟದೆ ಇದ್ದು, ದಿನಾಂಕ:17/05/2018 ರಂದು ಸದರಿ ಬ್ಯಾಂಕ್ ನಿಂದ ನೋಟೀಸ್ ನೀಡಿ ಈ ನೋಟೀಸ್ ತಲುಪಿದ ಕೂಡಲೇ ಬ್ಯಾಂಕ್ ಸಾಲದ ಹಣ ಮತ್ತು ಬಡ್ಡಿ ಹಣ ಒಟ್ಟು 3,09,741 ರೂ ಹಣವನ್ನು ಬ್ಯಾಂಕ್ ಗೆ ಸಂದಾಯ ಮಾಡುವಂತೆ ತಿಳಿಸಿದ್ದು, ಪಿರ್ಯಾದಿದಾರರು ಸದರಿ ಬ್ಯಾಂಕ್ ನ ವ್ಯವಸ್ಥಾಪಕರನ್ನು ಭೇಟಿ ಮಾಡಿ ದಿನಾಂಕ:05/06/2018 ರಂದು 30,000/- ರೂಗಳನ್ನು ಪಾವತಿ ಮಾಡಿ ಉಳಿದ ಹಣವನ್ನು ಕಟ್ಟಲು 25 ದಿನಗಳ ಸಮಯವಕಾಶವನ್ನು ಕೇಳಿ ದಿನಾಂಕ:18/06/2018 ರಂದು ಮತ್ತೆ 20,000/- ರೂಗಳನ್ನು ಕಟ್ಟಿ ತನ್ನ ಸಾಲದ ವಿವರಗಳನ್ನು ನೀಡುವಂತೆ ವ್ಯವಸ್ಥಾಪಕರಲ್ಲಿ ಕೇಳಲಾಗಿ ನೀಡಿರುವುದಿಲ್ಲ ಹಾಗೂ ಪಿರ್ಯಾದಿದಾರರಿಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡದೇ  ಬ್ಯಾಂಕ್ ನ ನಿಯಮಗಳನ್ನು ಮೀರಿ ಕಾನೂನು ಬಾಹಿರವಾಗಿ ಪಿರ್ಯಾದಿದಾರರ ಬಂಗಾರದ ಒಡವೆಗಳನ್ನು 2,52,700/- ರೂಗಳಿಗೆ ಹರಾಜು ಹಾಕಿ ಬ್ಯಾಂಕಿನ ಸಾಲದ ಬಾಬತ್ತಿಗೆ ಜಮೇ ಮಾಡಿಕೊಂಡಿರುವುದಾಗಿ ತಿಳಿಸಿ ಮೋಸ ಮಾಡಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ಸಾದರಾದ ಪ್ರಕರಣ

3) ಚೇಳೂರು ಪೊಲೀಸ್ ಠಾಣೆ ಮೊ.ಸಂ. 04/2019 ಕಲಂ. 309 ಐಪಿಸಿ :-

      ದಿನಾಂಕ- 08/02/2019 ರಂದು 9.30 ಗಂಟೆ ಗೆ ಎ.ಎಸ್.ಐ ಮಹಮದ್ ಶಫಿ  ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ 08/02/2019 ರಂದು  ಎ.ಎಸ್.ಐ ಮಹಮದ್ ಶಫಿ ರವರನ್ನು  ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಮಾರಪ್ಪರೆಡ್ಡಿ ಬಿನ್ ಲೇಟ್  ಚಿನ್ನ ಮಾರಪ್ಪ ರವರ ಹೇಳಿಕೆಯನ್ನು ಪಡೆದುಕೊಂಡು ಬರುವಂತೆ ಸೂಚಿಸಿದ್ದು ಅದರಂತೆ ತಾನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ  ಮೇಲ್ಕಂಡ ಮಾರಪ್ಪ ರೆಡ್ಡಿ ರವರ ಹೇಳಿಕೆಯನ್ನು ಪಡೆಯಲು ಹೋಗಿ ನೋಡಲಾಗಿ ಆತನು ಚೇಳೂರು ಪೊಲೀಸ್ ಠಾಣೆಯಲ್ಲಿ ತೆರೆದಿರುವ ರೌಡಿ ಹಾಳೆಯ ಆಸಾಮಿಯಾಗಿದ್ದು, ಆತನಿಗೆ ಚಿಕಿತ್ಸೆ ನೀಡುತ್ತಿದ್ದ ವೈಧ್ಯಾಧಿಕಾರಿಗಳು ರೋಗಿಯು ಯಾವುದೇ ಹೇಳಿಕೆಯನ್ನು ನೀಡುವ ಪರಿಸ್ಥಿತಿಯಲ್ಲಿರುವುದಿಲ್ಲ ಎಂತ ತಿಳಿಸಿದ್ದು ನಂತರ ವೈದ್ಯಾಧಿಕಾರಿಗಳನ್ನು ವಿಚಾರಿಸಲಾಗಿ ರೋಗಿಯು ಯಾವುದೋ ವಿಷವನ್ನು ಯಾವುದೋ ಕಾರಣಕ್ಕೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ  ನುಡಿದಿರುತ್ತಾರೆ. ಆದ್ದರಿಂದ ಮೇಲ್ಕಂಡ ಮಾರಪ್ಪರೆಡ್ಡಿ ಬಿನ್ ಲೇಟ್ ಚಿನ್ನ ಮಾರಪ್ಪ, 40 ವರ್ಷ, ವಕ್ಕಲಿಗರು, ಕೊತ್ತಕೋಟವಾಂಡ್ಲಪಲ್ಲಿ ಗ್ರಾಮ , ಬಾಗೇಪಲ್ಲಿ ತಾಲ್ಲೂಕು ರವರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಯಾವುದೋ ವಿಷವನ್ನು ಸೇವನೆ ಮಾಡಿರುವುದರಿಂದ ಆತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ,ಸಂ 4/2019 ಕಲಂ-309 ಐ.ಪಿ.ಸಿ ರೀತ್ಯ ಪ್ರಕರಣ ಧಾಖಲಿಸಿರುತ್ತೆ.

4) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 13/2019 ಕಲಂ. 279,337,338 ಐಪಿಸಿ ರೆ/ವಿ 134 ಐಎಂವಿ ಆಕ್ಟ್:-

      ದಿನಾಂಕ:-09/02/2019 ರಂದು ಸಂಜೆ 4:00 ಗಂಟೆಗೆ ಪಿರ್ಯಾಧಿ ಶ್ರೀ.ರಾಮದಾಸ್ ಬಿನ್ ಗಂಗಪ್ಪ 47 ವರ್ಷ, ನಾಯಕರು, ಜಿರಾಯ್ತಿ, ವಾರ್ಡ್ ನಂ-18, ಕಂದವಾರ ಬಾಗಿಲು, ಚಿಕ್ಕಬಳ್ಳಾಪುರ ಟೌನ್ ರವರು ಠಾಣೆಗೆ ಹಾಜರಾಗಿ ಟೈಪ್ ಮಾಡಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-08/02/2019 ರಂದು ಪಿರ್ಯಾಧಿ ಮತ್ತು ತನ್ನ ಸ್ನೇಹಿತನಾದ ಬಿ.ಎನ್.ನಾರಾಯಣಮೂರ್ತಿ ಬಿನ್ ಬಿ.ವಿ.ನಾರಾಯಣಪ್ಪ 39 ವರ್ಷ, ಬಲಜಿಗರು, ಟೈಲರ್ ವೃತ್ತಿ, ವಾರ್ಡ್ ನಂ-18, ಕಂದವಾರ ಬಾಗಿಲು, ಚಿಕ್ಕಬಳ್ಳಾಪುರ ಟೌನ್ ರವರು ತನ್ನ ಕೆಎ-02-ಇ.ಡಬ್ಲ್ಯೂ-8234 ರ ಬಜಾಜ್ ಪ್ಲಾಟಿನ ದ್ವಿಚಕ್ರವಾಹನದಲ್ಲಿ ಚೊಕ್ಕಹಳ್ಳಿ ಗ್ರಾಮಕ್ಕೆ ಮನೆಗೆ ಹೂಗಳನ್ನು ತರಲು ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಎಚ್-7 ಬೈಪಾಸ್ ರಸ್ತೆಯ ಚೊಕ್ಕಹಳ್ಳಿ ಗೇಟ್ ಬಳಿ ಬೆಳಿಗ್ಗೆ 11:30 ಗಂಟೆಯ ಸಮಯದಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಬಾಗೇಪಲ್ಲಿ ಕಡೆಯಿಂದ ಬಂದ ಎ.ಪಿ-02-ಎ.ವೈ-7420 ರ ಸ್ವಿಫ್ಟ್ ಡಿಜೈರ್ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾವು ಹೋಗುತ್ತಿದ್ದಾಗ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿದ ಪರಿಣಾಮ ದ್ವಿಚಕ್ರವಾಹನ ಸಮೇತ ತಾವುಗಳು ಕೆಳಗೆ ಬಿದ್ದಾಗ ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದ ಬಿ.ಎನ್.ನಾರಾಯಣಮೂರ್ತಿ ರವರ ತಲೆಗೆ, ಎಡ ಕೈಗೆ, ಬಲಕಾಲಿಗೆ ತೀವ್ರತರವಾದ ಗಾಯಗಳಾಗಿದ್ದು ಹಾಗೂ ಹಿಂದೆ ಕುಳಿತ ತನಗೆ ತಲೆಗೆ, ಎರಡೂ ಕಾಲುಗಳಿಗೆ ಹಾಗೂ ಬೆನ್ನಿಗೆ ಗಾಯಗಳಾಗಿದ್ದು ಅಲ್ಲಿನ ಸ್ಥಳಿಯರು ತಮ್ಮಗಳನ್ನು ಉಪಚರಿಸಿ ಅಲ್ಲಿಗೆ ಬಂದ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು, ಆಸ್ಪತ್ರೆಗೆ ಬಂದ ಬಿ.ಎನ್.ನಾರಾಯಣಮೂರ್ತಿ ಅಣ್ಣ ರವರುಬಿ.ಎನ್.ನಾರಾಯಣಮೂರ್ತಿ ರವರಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ವೈಧ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪಡೆದುಕೊಂಡು ನಂತರ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಅಪಘಾತ ಪಡಿಸಿದ ಕಾರಿನ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದು, ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಎಸ್.ಆದಿನಾರಾಯಣ ಬಿನ್ ಪೂರೆ ನಾಯಕ, ಆಂದ್ರ ಪ್ರದೇಶ ಎಂತ ತಿಳಿದು ಬಂದಿದ್ದು, ಸದರಿ ಅಪಘಾತ ಪಡಿಸಿದ ಕಾರಿನ ಚಾಲಕನ ಮೇಲೆ ಈ ದಿನ ತಡವಾಗಿ ಬಂದ ದಿನಾಂಕ:-09/02/2018 ರಂದು ಸಂಜೆ 4:00 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ

5) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 25/2018 ಕಲಂ.279,337 ಐಪಿಸಿ :-

      ದಿನಾಂಕ 09/02/2019 ರಂದು ಮದ್ಯಾಹ್ನ 1-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಚಿಕ್ಕ ಅಪ್ಪಾಲ ಬಿನ್ ಲೇಟ್ ಪೆದ್ದಪೆದ್ದನ್ನ, 45 ವರ್ಷ, ಭೋವಿ ಜನಾಂಗ, ಜಿರಾಯ್ತಿ, ವಾಸ-ಮಸಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಮಾವ ನಾರೆಪ್ಪ ಹಾಗು ಇವರ ಸೊಸೆಯಾದ ರಾಮಕ್ಕ ರವರು ತಮ್ಮ ಗ್ರಾಮದಲ್ಲಿಯೇ ವಾಸವಾಗಿರುತ್ತಾರೆ. ಈ ದಿನ ದಿನಾಂಕ 09/02/2019 ರಂದು ಬೆಳಿಗ್ಗೆ ತನ್ನ ಮಾವನಾದ ನಾರೆಪ್ಪ ರವರು ತನ್ನ ಸೊಸೆಯಾದ ರಾಮಕ್ಕ ರವರ ಹೆಸರಿನಲ್ಲಿ ಹೊಸ ಕೂಪನ್ ಕಾರ್ಡ್ ಅನ್ನು ಮಾಡಿಸಲು ಕೆಎ-40-ವೈ-6268 ಹಿರೋ ಸ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನದಲ್ಲಿ ತಮ್ಮ ಗ್ರಾಮದಿಂದ ಚಿಂತಾಮಣಿ ತಾಲ್ಲೂಕು ಕಚೇರಿಗೆ ಬಂದಿರುತ್ತಾರೆ. ಇದೇ ದಿನ ದಿನಾಂಕ 09/02/2019 ರಂದು ಬೆಳಿಗ್ಗೆ ಸುಮಾರು 11-45 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿಯೊಬ್ಬರು ತಮ್ಮ ಮನೆಯ ಬಳಿ ಬಂದು ಬಾಗೇಪಲ್ಲಿ-ಚಿಂತಾಮಣಿ ಮುಖ್ಯ ರಸ್ತೆಯಿಂದ ತಮ್ಮ ಗ್ರಾಮದ ಕಡೆಗೆ ಬರುವ ರಸ್ತೆಯ ಬಳಿ ತನ್ನ ಮಾವ ಚಾಲನೆ ಮಾಡುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಪಲ್ಸರ್ ದ್ವಿ ಚಕ್ರ ವಾಹನ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿರುವುದಾಗಿ ವಿಷಯ ತಿಳಿಸಿದನು. ಕೂಡಲೇ ತಾನು ತಮ್ಮ ಗ್ರಾಮದ ಕಡೆಗೆ ಬರುವ ರಸ್ತೆಯ ಕಡೆಗೆ ಬರುವ ಬಾಗೇಪಲ್ಲಿ-ಚಿಂತಾಮಣಿ ಮುಖ್ಯ ರಸ್ತೆಗೆ ಬಂದಾಗ ರಸ್ತೆಯ ಪಕ್ಕದಲ್ಲಿ ತನ್ನ ಮಾವ ಚಾಲನೆ ಮಾಡಿಕೊಂಡು ಹೋಗಿದ್ದ ದ್ವಿ ಚಕ್ರ ವಾಹನ ಮತ್ತು ಪಲ್ಸರ್ ದ್ವಿ ಚಕ್ರ ವಾಹನ ಇದ್ದು ನೋಡಲಾಗಿ ಎರಡು ದ್ವಿ ಚಕ್ರ ವಾಹನಗಳು ಜಖಂ ಆಗಿದ್ದು ಪಲ್ಸರ್ ದ್ವಿ ಚಕ್ರ ವಾಹನಕ್ಕೆ ನೊಂದಣಿ ಸಂಖ್ಯೆ ಇಲ್ಲದೆ ಇದ್ದು, ಅದರ ಇಂಜಿನ್ ನಂಬರ್ DHYWJK49122, ಚಾಸೀಸ್ ನಂಬರ್ MD2A11CY4JWK01563 ಆಗಿದ್ದು ನಂತರ ತಾನು ಅಲ್ಲಿದ್ದ ಸಾರ್ವಜನಿಕರನ್ನು ವಿಚಾರ ಮಾಡಲಾಗಿ ಗಾಯಾಳುಗಳನ್ನು ಆಂಬುಲನ್ಸ್ ನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದರು. ಕೂಡಲೇ ತಾನು ಅಲ್ಲಿಂದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ತನ್ನ ಮಾವ ನಾರೆಪ್ಪ ರವರ ತಲೆಗೆ, ಎಡ ಕೈಗೆ ರಕ್ತಗಾಯವಾಗಿದ್ದು, ರಾಮಕ್ಕ ರವರ ಬಲ ಕಾಲಿಗೆ ರಕ್ತಗಾಯವಾಗಿತ್ತು. ನಂತರ ತಾನು ತನ್ನ ಮಾವ ನಾರೆಪ್ಪ ರವರನ್ನು ವಿಚಾರ ಮಾಡಲಾಗಿ ತಾನು ಮತ್ತು ತನ್ನ ಸೊಸೆ ರಾಮಕ್ಕ ರವರು ಹೊಸ ಕೂಪನ್ ಕಾರ್ಡ್ ಮಾಡಿಸಲು ಚಿಂತಾಮಣಿ ತಾಲ್ಲೂಕು ಕಚೇರಿಯ ಬಳಿ ಬಂದು, ಕೆಲಸವನ್ನು ಮುಗಿಸಿಕೊಂಡು ವಾಪಸ್ಸು ತಮ್ಮ ಗ್ರಾಮದ ಕಡೆಗೆ ಬರಲು ತಾನು ಕೆಎ-40-ವೈ-6268 ಹಿರೋ ಸ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ರಾಮಕ್ಕ ರವರನ್ನು ಕೂರಿಸಿಕೊಂಡು ಇದೇ ದಿನ ದಿನಾಂಕ 09/02/2019 ರಂದು ಬೆಳಿಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ಬಾಗೇಪಲ್ಲಿ-ಚಿಂತಾಮಣಿ ಮುಖ್ಯ ರಸ್ತೆಯಿಂದ ತಮ್ಮ ಗ್ರಾಮದ ಕಡೆಗೆ ಹೋಗುವ ರಸ್ತೆಯ ಕಡೆಗೆ ಹೋಗಲು ದ್ವಿ ಚಕ್ರ ವಾಹನದ ಇಂಡಿಕೇಟರ್ ಅನ್ನು ಹಾಕಿಕೊಂಡು ದ್ವಿ ಚಕ್ರ ವಾಹನವನ್ನು ತಮ್ಮ ಗ್ರಾಮದ ಕಡೆಗೆ ತಿರುಗಿಸಿಕೊಳ್ಳುತ್ತಿದ್ದಾಗ ಈ ಸಮಯದಲ್ಲಿ ಬಾಗೇಪಲ್ಲಿ ರಸ್ತೆಯ ಕಡೆಯಿಂದ ಬಂದ ಇನ್ನು ನೊಂದಣಿ ಸಂಖ್ಯೆ ಇಲ್ಲದ ಪಲ್ಸರ್ ದ್ವಿ ಚಕ್ರ ವಾಹನವನ್ನು ಅದರ ಸವಾರನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಮಗೆ ಗಾಯಗಳಾಗಿದ್ದು, ಈ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಯಾರೋ ಸಾರ್ವಜನಿಕರು ತಮ್ಮನ್ನು ಉಪಚರಿಸಿ ಆಂಬುಲನ್ಸ್ ನಲ್ಲಿ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿ ವಿಷಯ ತಿಳಿಸಿರುತ್ತಾರೆ. ನಂತರ ತಮ್ಮ ಮನೆಯವರು ಗಾಯಾಳುಗಳಾದ ತನ್ನ ಮಾವ ನಾರೆಪ್ಪ ಹಾಗು ಇವರ ಸೊಸೆ ರಾಮಕ್ಕ ರವರನ್ನು ಇನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆದ ಕಾರಣ ತನ್ನ ಮಾವನವರಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಮೇಲ್ಕಂಡ ಪಲ್ಸರ್ ದ್ವಿಚಕ್ರ ವಾಹನದ ಸವಾರನ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

6) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 16/2019 ಕಲಂ. 78(3) ಕೆ.ಪಿ. ಆಕ್ಟ್ ಮತ್ತು 420 ಐಪಿಸಿ :-

      ದಿನಾಂಕ: 08/02/2019 ರಂದು ಮದ್ಯಾಹ್ನ 03-30 ಗಂಟೆಗೆ  ಸಮಯದಲ್ಲಿ ಶ್ರೀ ಜಿ,ಸಿ ನಾರಾಯಣಸ್ವಾಮಿ ಪೊಲಿಸ್ ಇನ್ಸ್ ಪೆಕ್ಟರ್ ಚಿಂತಾಮಣಿ ನಗರ ಪೊಲೀಸ್ ಠಾಣೆ ಸಾಹೇಬರವರು ಚಿಂತಾಮಣಿ ನಗರದ ಎಂ.ಜಿ. ರಸ್ತೆಯಲ್ಲಿ ರೌಂಡ್ಸ ಕರ್ತವ್ಯದಲ್ಲಿದ್ದಾಗ   ಚಿಂತಾಮಣಿ ನಗರದ ಗದ್ವಾಲ್ ಪೇಟೆಯಲ್ಲಿ ಪಾಂಡು ವೃತ್ತದಲ್ಲಿ ಅಗ್ರಹಾರ ರಸ್ತೆಯಲ್ಲಿರುವ ಆಟೋ ನಿಲ್ದಾಣದ ಬಳಿ ಯಾರೋ ಒಬ್ಬ ಆಸಾಮಿಯು  ಜನರನ್ನು ಗುಂಪು ಸೇರಿಸಿಕೊಂಡು ಮಟ್ಕಾ ಚೀಟಿ ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಆತನ ಮೇಲೆ ದಾಳಿ ಮಾಡಲು ಆಜಾದ್ ಚೌಕದಲ್ಲಿ ಪಂಚರನ್ನು ಕರೆದುಕೊಂಡು ಮಾಹಿತಿಯನ್ನು ತಿಳಿಸಿ ಪಂಚರೊಂದಿಗೆ ಮತ್ತು ಸಿಬ್ಬಂದಿಯಾದ  ಹೆಚ್.ಸಿ 124 ನರಸಿಂಹ ಮೂರ್ತಿ ರವರೊಂದಿಗೆ ಠಾಣೆಯ ಜೀಫ್ ನಂ: ಕೆಎ 40 ಜಿ 356  ವಾಹನದಲ್ಲಿ ದೊಡ್ಡಪೇಟೆ ರಸ್ತೆಯ ಮಾರ್ಗವಾಗಿ ಪಾಂಡು ವೃತ್ತದ ಬಳಿಗೆ  ಹೋಗಿ ಮೆರೆಯಲ್ಲಿ ಜೀಪನ್ನು ನಿಲ್ಲಿಸಿ ಆಟೋ ನಿಲ್ದಾಣದ ಬಳಿ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು  ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಕೈಯಲ್ಲಿ ಪೆನ್ನು ಹಾಗೂ ಪೇಪರ್ ನ್ನು  ಹಿಡಿದು ಕೊಂಡು  ಮಟ್ಕಾ ನಂಬರ್ ಗಳನ್ನು ಬರೆದುಕೊಂಡು 1 ರೂಗೆ 80 ರೂ ಕೊಡುವುದಾಗಿ ಜನರಿಗೆ ಮಟ್ಕಾ ಹಣ ಕಟ್ಟುವಂತೆ ಪ್ರೇರೆಪಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದನನ್ನು  ಹಿಡಿದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಗೌಸ್ ಪಾಷಾ ಬಿನ್ ಅಲ್ಲಾ ಬಕಾಶ್ ,30 ವರ್ಷ, ಮುಸ್ಲಿಮರು, ಪೈಂಟಿಂಗ್ ಕೆಲಸ ವಾಸ: ಪಟಾಲಮ್ಮ ದೇವಸ್ಥಾನ ಹಿಂಭಾಗ, ಅಗ್ರಹಾರ,ಚಿಂತಾಮಣಿ  ನಗರ  ಎಂತ ತಿಳಿಸಿದ್ದು ಆತನನ್ನು ಪಂಚರ ಸಮಕ್ಷಮ ಅಂಗ ಶೋಧನೆ ಮಾಡಲಾಗಿ ನಗದು ಹಣ 540 ರೂ, ಒಂದು ಮಟ್ಕಾ ಚೀಟಿ, ಒಂದು ಪೆನ್ನು ,ಒಂದು ಎಲ್ ವೈ ಎಫ್ ಮೊಬೈಲ್ ಇದ್ದು, ಹಣದ ಬಗ್ಗೆ ಕೇಳಲಾಗಿ ಈ ದಿನ ಮಟ್ಕಾ ಚೀಟಿ ಬರೆದು ಸಾರ್ವಜನಿಕರಿಗೆ ಮೋಸ ಮಾಡಿ ಸಂಗ್ರಹಿಸಿರುವ ಹಣವೆಂದು ಹಾಗೂ ಸದರಿ ಹಣವನ್ನು ಸಂಜೆ ಮೆಹಬೂಬ್ ನಗರದ ಅಲ್ಲು ಎಂಬುವವರಿಗೆ ನೀಡಿ ಅವರಿಂದ ಕಮೀಷನ್ ಪಡೆಯುತ್ತಿರುತೇನೆಂದು ತಿಳಿಸಿದ್ದು, ಪೊಲೀಸರು ಸದರಿ ಆಸಾಮಿ  ಹಾಗೂ ಮಾಲನ್ನು  ಪಂಚನಾಮೆಯ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತುಪಡಿಸಿಕೊಂಡು ಮಧ್ಯಾಹ್ನ 03-30 ಗಂಟೆಗೆ ಠಾಣೆಗೆ  ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ಮತ್ತು ಪಂಚನಾಮೆಯನ್ನು ಪಡೆದು ಠಾಣೆಯ ಮೊ.ಸಂಖ್ಯೆ:16/2019 ಕಲಂ: 78 ಕ್ಲಾಸ್ (3) ಕೆ.ಪಿ ಆಕ್ಟ್ ಮತ್ತು 420 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

7) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 11/2019 ಕಲಂ. 143,147,148,302 ರೆ/ವಿ 149 ಐಪಿಸಿ ಮತ್ತು ಸೆಕ್ಷನ್ 3(1)(ಎಸ್), 3(1)(ಆರ್), 3(2)(ವಿಎ) ಎಸ್.ಸಿ./ಎಸ್.ಟಿ. ಪಿಓಎ ಆಕ್ಟ್ :-

      ಈ ದಿನಾಂಕ 09/02/2019 ರಂದು ಪಿರ್ಯಾದಿದಾರರಾದ ಅಕ್ಕಯ್ಯಮ್ಮ ಕೋಂ ಮುನಿಯಪ್ಪ, 65ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ, ಸೀತಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಮ್ಮ ಪಕ್ಕದ ಮನೆಯಲ್ಲಿ ವಾಸವಾಗಿರುವ ಒಕ್ಕಲಿಗ ಜಾತಿಗೆ ಸೇರಿದ ದೊಡ್ಡಪೆಮ್ಮರೆಡ್ಡಿ ರವರ ಕುಟುಂಬದವರಿಗೂ ಮತ್ತು ತಮ್ಮ ನಡುವೆ ಸುಮಾರು 6 ವರ್ಷಗಳಿಂದ ಜಮೀನಿಗೆ ಸಂಬಂಧಿಸಿದ ವಿವಾದ ಉಂಟಾಗಿದ್ದು ಈ ವಿಚಾರವಾಗಿ ಆಗಾಗ ದೊಡ್ಡಪೆಮ್ಮರೆಡ್ಡಿ ಮತ್ತು ಆತನ ಕುಟುಂಬದವರು ತಮ್ಮ ಮೇಲೆ ಗಲಾಟೆಮಾಡುತ್ತಿದ್ದು ಈ ಬಗ್ಗೆ ತಾವು ಹಲವಾರು ಬಾರಿ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದೆವು ಆಗ ಹಿರಿಯರು ಮತ್ತು ಪೊಲೀಸ್ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಅವರಿಗೆ ಬುದ್ಧಿವಾದ ಹೇಳಿ ರಾಜಿ ಪಂಚಾಯ್ತಿಮಾಡಿದ್ದರು ಹೀಗಿರುವಲ್ಲಿ ಈ ದಿನ ದಿನಾಂಕ 08/02/2019 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ಶಿವಕುಮಾರ್ ಬಿನ್ ಚಿಕ್ಕಪೆಮ್ಮರೆಡ್ಡಿ, ದೊಡ್ಡಪೆಮ್ಮರೆಡ್ಡಿ ಬಿನ್ ಲೇಟ್ ದೊಡ್ಡವೆಂಕಟಸ್ವಾಮಿ, ಚಿಕ್ಕಪೆಮ್ಮಾರೆಡ್ಡಿ ಬಿನ್ ಲೇಟ್ ದೊಡ್ಡವೆಂಕಟಸ್ವಾಮಿ, ನಾರಾಯಣಮ್ಮ ಕೋಂ ದೊಡ್ಡಪೆಮ್ಮರೆಡ್ಡಿ, ಮುನಿಲಕ್ಷ್ಮಮ್ಮ ಕೋಂ ಚಿಕ್ಕಪೆಮ್ಮರೆಡ್ಡಿ, ಶ್ರೀನಿವಾಸ್ ಬಿನ್ ದೊಡ್ಡಪೆಮ್ಮರೆಡ್ಡಿ, ಮಧು ಬಿನ್ ಚಿಕ್ಕಪೆಮ್ಮರೆಡ್ಡಿ ಇವರೆಲ್ಲರೂ ಅಕ್ರಮ ಗುಂಪುಕಟ್ಟಿಕೊಂಡು ಬಂದು ತಮ್ಮ ಮನೆಯ ಪಕ್ಕದಲ್ಲಿ ಜೋರಾಗಿ ತಮ್ಮನ್ನು ಬೈಯ್ಯುತ್ತಾ ತಮ್ಮ ಹೂ ಗಿಡಗಳ ಮೇಲೆ ಮಣ್ಣು ಹಾಕುತ್ತಿದ್ದರು ಮನೆಯಲ್ಲಿ ತಾನು ಮತ್ತು ತನ್ನ ಸೊಸೆ ನಾರಾಯಣಮ್ಮ ಕೋಂ ವೆಂಟರವಣಪ್ಪ ಇಬ್ಬರೇ ಇದ್ದುದ್ದರಿಂದ ನಾವು ಆಚೆ ಬಂದು ಏಕೆ ನಮ್ಮ ಹೂ ಗಿಡಗಳ ಮೇಲೆ ಮಣ್ಣು ಹಾಕುತ್ತಿದ್ದೀರಾ ಈ ಜಮೀನು ನಮ್ಮದು ಎಂತ ಕೇಳಿದ ತಕ್ಷಣ ಅವರೆಲ್ಲ ಏಕಾಏಕಿ ಅವರ ಕೈ ಯಲ್ಲಿದ್ದ ಸನಿಕೆ, ಗುದ್ದಲಿ, ಮಕ್ಕರಿಗಳಿಂದ ತಮ್ಮ ಮೇಲೆ ಮುಗಿ ಬಿದ್ದು ಹಲ್ಲೆಮಾಡಲು ಮುಂದಾದರು ನಾವು ಭಯದಿಂದ ಮನೆಯ ಒಳಕ್ಕೆ ಓಡಿ ಹೋಗುತ್ತಿದ್ದಾಗ ಇವರೆಲ್ಲರೂ ನಮ್ಮ ಸೊಸೆ ನಾರಾಯಣಮ್ಮಳನ್ನು ಹಿಡಿದುಕೊಂಡು ಶಿವಕುಮಾರ್ ಎಂಬುವನು ತನ್ನ ಕೈಯಲ್ಲಿದ್ದ ಸನಿಕೆಯಿಂದ ತಲೆಗೆ ಜೋರಾಗಿ ಮತ್ತು ಬಲವಾಗಿ ಹೊಡೆದನು. ಇದರ ಪರಿಣಾಮವಾಗಿ ನಾರಾಯಣಮ್ಮಳು ತಕ್ಷಣ ಪ್ರಾಣ ಬಿಟ್ಟಳು ತಾನು ಜೋರಾಗಿ ಕಿರುಚಿಕೊಂಡಾಗ ಅವರೆಲ್ಲಾ ಓಡಿ ಹೋಗಿರುತ್ತಾರೆ. ತನ್ನ ಕಿರುಚಾಟವನ್ನು ಕೇಳಿಸಿಕೊಂಡು ಗ್ರಾಮಸ್ಥರು ಓಡಿ ಬಂದು ನನ್ನ ಸೊಸೆ ಕೊಲೆಯಾಗಿರುವುದನ್ನು ಕಂಡು ಆಂಬುಲೆನ್ಸ್ ಗೆ ಕರೆಮಾಡಿದ್ದು ಅಷ್ಟೋತ್ತಿಗಾಗಲೆ ಈಕೆಯ ಗಂಡ ವೆಂಕಟವಣಪ್ಪ ರವರು ಬಂದರು ಗ್ರಾಮದ ನಾರಾಯಣಸ್ವಾಮಿ ಬಿನ್ ದೊಡ್ಡಬೈರಪ್ಪ, ನಾನು ಮತ್ತು ನನ್ನ ಮಗ ಹಾಗೂ ನಾರಾಯಣಮ್ಮನ ಗಂಡನಾದ ವೆಂಕಟರವಣಪ್ಪ ರವರು ಆಬುಲೆನ್ಸ್ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲು ಮಾಡಿದೆವು. ಮೃತಪಟ್ಟ ನಾರಾಯಣಮ್ಮಳಿಗೆ 32ವರ್ಷ ವಯಸ್ಸಾಗಿದ್ದು ಇಬ್ಬರು ಮಕ್ಕಳು ಸಹ ಇರುತ್ತಾರೆ ಆದ್ದರಿಂದ ತನ್ನ ಸೊಸೆಯನ್ನು ಹಳೆಯ ದ್ವೇಶದಿಂದ ಕೊಲೆಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ತಮಗೆ ನ್ಯಾಯ ಹಾಗೂ ಸೂಕ್ತ ರಕ್ಷಣೆಯನ್ನು ನೀಡಬೇಕಾಗಿ ಕೋಡಿ ನೀಡಿರುವ ದೂರಾಗಿರುತ್ತೆ.

8) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 34/2019 ಕಲಂ. 324,307,504 ರೆ/ವಿ 34 ಐಪಿಸಿ :-

      ದಿನಾಂಕ: 08-02-2019 ರಮದು ಬೆಳಗ್ಗೆ 8:30 ಗಂಟೆಗೆ ಪಿರ್ಯಾಧಿದಾರರಾದ ಭಾಗ್ಯಮ್ಮ.ಸಿ ಕೋಂ ಹರೀಶ್, 28 ವರ್ಷ, ಈಡಿಗ ಜನಾಂಗ, ಕೋನಾಪುರ ಗ್ರಾಮ, ಬೈಚಾಪುರ ಪೋಸ್ಟ್, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ – ದಿ:07-02-2019 ರಂದು ರಾತ್ರಿ 10:00 ಸಮಯದಲ್ಲಿ ನಾನು ಮತ್ತು ನನ್ನ ತಮ್ಮ ಅನಿಲ್ ಕುಮಾರ್, ನನ್ನ ಗಂಡ ಹರೀಶ್,  ನಮ್ಮ ತಂದೆ ತಾಯಿ ಶಾರದಮ್ಮ, ಚನ್ನರಾಯಪ್ಪ ರವರು ಊಟ ಮಾಡಿ ಮನೆಯಲ್ಲಿ ಕುಳಿತುಕೊಂಡಿದ್ದಾಗ, ನಮ್ಮ ಜನಾಂಗದ, ನಮ್ಮ ಸಂಬಂಧಿಕರಾದ ನವೀನ್ ಕುಮಾರ್ ಬಿನ್ ನಾಗರಾಜಪ್ಪ, ಸುಮಾರು 25 ವರ್ಷ ಹಾಗು ಉದಯ್ ಕುಮಾರ್ ನಮ್ಮ ಮನೆ ಮುಂದೆ ಬಂದು, ಬಾರೋ ಲೋಫರ್ ನನ್ನ ಮಗನೇ, ಸೂಳೆ ಮಗನೇ ಎಂದು ಕೂಗಾಡುತ್ತಿದ್ದರು.  ಆಗ ನಾನು ಯಾಕೋ ಕೂಗಾಡುತ್ತಿರುವುದು ನೋಡು ಎಂದು ನನ್ನ ತಮ್ಮ ಅನಿಲ್ ಕುಮಾರ್ ನನ್ನು ಕಳುಹಿಸಿರುತ್ತೇನೆ.  ಅವನು ಆಚೆ ಹೋದಾಗ ಯಾಕೆ ಎಂದು ವಿಚಾರಿಸಲಾಗಿ ನೀನು ನಮ್ಮ ಕ್ಯಾಂಟರ್ ಚಾಲಕ ಚಂದ್ರನನ್ನು ನೀನು ನಿಮ್ಮ ಕ್ಯಾಂಟರ್ ಗೆ ಚಾಲಕನಾಗಿ ಕರೆದುಕೊಂಡಿರುತ್ತೀಯಾ ನಿನ್ನ ಕತೆ ಮುಗಿಸುತ್ತೇನೆಂತ ಕೂಗಾಡುತ್ತಿದ್ದ, ಆಗ ನಾನು, ನನ್ನ ಗಂಡ ಹರೀಶ ರವರು ಆಚೆಗೆ ಬರುವಷ್ಟರಲ್ಲಿ ಕೊಲೆ ಮಾಡುವ ಉದ್ದೇಶದಿಂದ ಉದಯ್ ಕುಮಾರ್ ನನ್ನ  ತಮ್ಮನನ್ನು ಹಿಡಿದುಕೊಂಡಿದ್ದು, ಅಷ್ಟರಲ್ಲಿ ನವೀನ್ ಕುಮಾರ್ ರವರು ಜೇಬಿನಲ್ಲಿ ಸುಮಾರು ಒಂದು ಉದ್ದದ ಚಾಕುವನ್ನು ಜೇಬಿನಿಂದ  ತೆಗೆದು ಎಡಕತ್ತಿನ ಬಳಿ, ಎಡಕೆನ್ನೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ರಕ್ತಗಾಯ ಮಾಡಿರುತ್ತಾನೆ.  ಈ ಘಟನೆಯನ್ನು ಪಕ್ಕದ ಮನೆಯ ವೀರಭದ್ರಯ್ಯ ಬಿನ್ ವೀರಣ್ಣ ರವರು ನೋಡಿ ಓಡಿ ಬಂದಿದ್ದು, ನಾವೆಲ್ಲರೂ ಅವರನ್ನು ಬಿಡಿಸಿ ನನ್ನ ತಮ್ಮನ್ನು ಯಾವುದೋ ಆಟೋದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆ ನಂತರ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಈ ದಿನ ದಿ:08-02-2019 ರಂದು ಬೆಳಗ್ಗೆ ತಡವಾಗಿ ಬಂದು ದೂರು ನೀಡಿರುತ್ತೇನೆ.  ನನ್ನ ತಮ್ಮ ಅನಿಲ್ ಕುಮಾರ್ ಮೇಲೆ ಹಲ್ಲೆ ಮಾಡಿದ ನವೀನ್ ಕುಮಾರ್ ಮತ್ತು ಉದಯ್ ಕುಮಾರ್ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೆಕೆಂದು ಕೋರುತ್ತೇನೆ, ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

9) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 35/2019 ಕಲಂ. 318 ಐಪಿಸಿ :-

      ದಿ: 08-02-2019 ರಂದು ಬೆಳಗ್ಗೆ 11:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಗೌರಮ್ಮ ಕೋಂ ಲಿಂಗಣ್ಣ, 38 ವರ್ಷ, ಲಿಂಗಾಯತರು, ಆಶಾಕಾರ್ಯಕರ್ತೆ, ವಾಸ ಹೊಸೂರು ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ  ಲಿಖಿತ ದೂರಿನ ಸಾರಾಂಶ – ನಾನು ಹೊಸೂರು ಗ್ರಾಮದ ಹೊಸಕಾಲೋನಿ, ಚಾಮರಾಜಪೇಟೆಯಲ್ಲಿ 09 ವರ್ಷಗಳಿಂದ ಆಶಾಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುತ್ತೇನೆ.  ದಿ: 08-02-2019 ರಂದು ಬೆಳಗ್ಗೆ 10:00 ಗಂಟೆಯಲ್ಲಿ ಹೊಸ ಕಾಲೋನಿಯ ಅಂಬೇಡ್ಕರ್ ಭವನದ ಮುಂಭಾಗದಲ್ಲಿರುವ ಸಿಮೆಂಟ್ ತೊಟ್ಟಿಯಲ್ಲಿ ನವಜಾತ ಶಿಶುವನ್ನು ಅದರ ಪಾಲಕರು ಅಥವಾ ತಂದೆ-ತಾಯಿರವರು ಮಗುವಿನ ಜನನವನ್ನು ಮರೆಮಾಚಲು ಅದರಲ್ಲಿ ಬಿಸಾಕಿ ಹೋಗಿದ್ದು,  ಸಾರ್ವಜನಿಕರು ಗುಂಪು ಕಟ್ಟಿಕೊಂಡು ನೋಡುತ್ತಿರುವ ವಿಚಾರ ತಿಳಿದು ನಾನು ಸಹ ಸ್ಥಳಕ್ಕೆ ಹೋಗಿ ನೋಡಿದೆ, ಸಿಮೆಂಟ್ ತೊಟ್ಟಿಯಲ್ಲಿ ನೀರು ಇದ್ದು, ಒಂದು ಗಂಡು ನವಜಾತ ಶಿಶು ಮೃತಪಟ್ಟಿರುತ್ತೆ.  ಮಗುವಿನೊಂದಿಗೆ ಕರುಳುಬಳ್ಳಿಯು ಸಹ ಅದರೊಟ್ಟಿಗೆ ಇರುತ್ತೆ.  ನಾನು ಹಾಗು ಇನ್ನೊಬ್ಬ ಆಶಾ ಕಾರ್ಯಕರ್ತೆಯಾದ ಶ್ರೀಮತಿ ಸರೋಜಮ್ಮ ಕೋಂ ದೊಡ್ಡರಂಗಯ್ಯ, 40 ವರ್ಷ ರವರು ನವಜಾತ ಗಂಡು ಶಿಶುವಿನ ಪೋಷಕರು ಅಥವಾ ತಂದೆ-ತಾಯಿ ರವರನ್ನು ಹೊಸೂರು ಗ್ರಾಮದಲ್ಲೆಲ್ಲಾ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ, ತಾವುಗಳು ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಜರುಗಿಸಲು ತಮ್ಮಲ್ಲಿ ಕೋರುತ್ತೇನೆ.  ಉದ್ದೇಶ ಪೂರ್ವಕವಾಗಿ ನವಜಾತ ಶಿಶುವಿನ ಜನನವನ್ನು ಬಚ್ಚಿಡಲು ಪಾಲಕರು ಅಥವಾ ತಂದೆ-ತಾಯಿಯವರು ರಾತ್ರಿ ಯಾವುದೇ ವೇಳೆಯಲ್ಲಿ ನವಜಾತ ಗಂಡು ಶಿಶುವನ್ನು ಸಿಮೆಂಟ್ ತೊಟ್ಟಿಯಲ್ಲಿ ಬಿಸಾಗಿ ಮಗುವಿನ ಸಾವಿಗೆ ಕಾರಣರಾಗಿರುತ್ತಾರೆ.  ಇವರನ್ನು ಪತ್ತೆ ಮಾಡಿ ಕ್ರಮ ಜರುಗಿಸಲು ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

10) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 22/2019 ಕಲಂ. 457,380 ಐಪಿಸಿ :-

      ದಿನಾಂಕ 08-02-2019 ರಂದು ಪಿರ್ಯಾಧಿದಾರರಾದ ಶ್ರೀಮತಿ ರಾಮಲಕ್ಷ್ಮಮ್ಮ ಕೋಂ ನರಸಿಂಹಪ್ಪ, 40 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ನಡಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 07—02-2019 ರಂದು ತನ್ನ ಗಂಡ ನರಸಿಂಹಪ್ಪ ರವರು ಡ್ರಾಮಗೆ ಹೋಗಿರುತ್ತಾರೆ. ತಾನು ತನ್ನ ಮನೆಗೆ ಬೀಗ ಹಾಕಿಕೊಂಡು ಪಕ್ಕದ ಮನೆಯಲ್ಲಿ ಮಲಗಿರುತ್ತೇನೆ. ದಿನಾಂಕ  08-02-2019 ರಂದು ಬೆಳಗ್ಗೆ 06.00 ಗಂಟೆ ಸಮಯದಲ್ಲಿ ತನ್ನ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಗೆ ಹಾಕಿರುವ ಬೀಗವನ್ನು ಹೊಡೆದು ಮದುವೆ ಕಾರ್ಯಕ್ಕೆ ಗಿರುವಿ ಅಂಗಡಿಯಿಂದ ತಂದು ಮನೆಯ ಬಿರುವಿನಲ್ಲಿ ಇಟ್ಟಿದ್ದ 25 ಗ್ರಾಂ ಬಂಗಾರದ ಮಾಂಗ್ಯಲ್ಯಾ ಚೈನ್ 71250 ರೂ, 8 ಗ್ರಾಂ ಕಿವಿವಾಲೆ 22800 ರೂ, ಹಾಗೂ 40 ಗ್ರಾಂ ಬೆಳ್ಳಿ ಕಾಲು ಚೈನ್ 5000 ರೂ ಹಾಗೂ  ನಗದು ಹಣ 20000 ರೂಗಳನ್ನು ಕಳ್ಳರು ರಸೀದಿ ಹಾಗೂ ಪ್ಯಾಕೇಟ್  ಸಮೇತ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

11) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 23/2019 ಕಲಂ. 324 ಐಪಿಸಿ :-

      ದಿನಾಂಕ:09-02-2019 ರಂದು ಬೆಳಗ್ಗೆ 11-30 ಗಂಟೆಗೆ ಪಿರ್ಯಾಧಿ ಹರೀಶ್ ಬಿನ್ ಗಂಗಪ್ಪ, 30 ವರ್ಷ, ಬೋಡನಮರಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:08-02-2019 ರಂದು ರಾತ್ರಿ 08-30 ಗಂಟೆಯ ಸಮಯದಲ್ಲಿ ಕೆಂಚಾರ್ಲಹಳ್ಳಿ ರೈಸ್ ಮಿಲ್ ಮುಂಭಾಗ ಮಹೇಂದ್ರ ಮತ್ತು ತಾನು ಕುಳಿತುಕೊಂಡು ಇರುವಾಗ ಬೈರೆಡ್ಡಿ ರವರ ಬಳಿ ಮೊಬೈಲ್ ಪೋನ್ ನ್ನು ಕೊಡಿಸಿಕೊಂಡು ಬಾ ಎಂದು ಹೇಳಿದನು. ಡಾಬಾ ಒಳಗಡೆ ಹೋಗಿ ಬೈರೆಡ್ಡಿ ರವರ ಬಳಿ  ಮಹೇಂದ್ರ ಹೇಳಿದಂತೆ ಬೈರೆಡ್ಡಿ ರವರ ಬಳಿ ಪೋನ್ ನನ್ನು ಕೊಡುವಂತೆ ಕೇಳುತ್ತಿದ್ದಾಗ ಅಲ್ಲಿಯೇ ಇದ್ದ ಮುನಿಶಾಮಿರೆಡ್ಡಿ ರವರು ಯಾವುದೋ ದುರುದ್ದೇಶದಿಂದ ಅಲ್ಲಿಯೇ ಇದ್ದ ಖಾಲಿ ಬೀರ್ ಬಾಟಲ್ ನ್ನು ತೆಗೆದುಕೊಂಡು ತಲೆಗೆ ಹೊಡೆದ. ಬಾಟಲ್ ಸಹ ಹೊಡೆದುಹೋಯಿತು. ಮತ್ತೊಂದು ಬಾರಿ ಹೊಡೆದ ಬಾಟಲ್ ನಿಂದ ಹೊಡೆದಾಗ ಬಲ ಕಣ್ಣಿನ ಮೇಲ್ಬಾಗ ಬಾಟಲ್ ತೆರಚಿಕೊಂಡು ರಕ್ತಗಾಯವಾಗಿರುತ್ತದೆ. ಈ ವಿಷಯವನ್ನು ಕೂಗಿ ಹೇಳಿದಾಗ ನರೇಶ ಮತ್ತು ನಾಗೇಂದ್ರ ರವರುಗಳು ಬಂದು ಮುನಿಶಾಮಿರೆಡ್ಡಿ ರವರಿಂದ ಬಿಡಿಸಿದರು. ತನಗೆ ಬಹಳ ರಕ್ತ ಬರುತ್ತಿದ್ದರಿಂದ 108 ಅಂಬ್ಯೂಲೆನ್ಸ್ ನಲ್ಲಿ ಹೋಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಹೋಗಿ ವೈದ್ಯಾಧಿಕಾರಿಗಳ ಬಳಿ ಚಿಕಿತ್ಸೆಯನ್ನು ಪಡೆದುಕೊಂಡು ತಮ್ಮ ಮನೆಯಲ್ಲಿ ತಮ್ಮ ತಾಯಿ ಒಬ್ಬಳೇ ಇದ್ದು, ತಾಯಿ ಬೈಯ ಪಡುತ್ತಾರೆಂತ ತಿಳಿದು ಮನೆಗೆ ಬಂದಿರುತ್ತೇನೆ. ಮೇಲ್ಕಂಡ ಕೃತ್ಯ ವೆಸಿಗಿದ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ನೀಡಿರುವ ಪಿರ್ಯಾಧು.

12) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 24/2019 ಕಲಂ. 307 ಐಪಿಸಿ :-

      ದಿನಾಂಕ:09-02-2019 ರಂದು ಮದ್ಯಾಹ್ನ 03-00 ಗಂಟೆಗೆ ಎ.ಎಸ್.ಐ ಶ್ರೀನಿವಾಸಗೌಡ ರವರು  ಠಾಣೆಗೆ ಹಾಜರಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಬಾಗ್ಯಮ್ಮ ಕೊಂ ಲೇಟ್ ವೆಂಕಟರವಣಪ್ಪ, 45 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಬಸವಾಪುರ ಗ್ರಾಮ ರವರ ಹೇಳಿಕೆಯನ್ನು ಪಡೆದುಕೊಂಡು ಹಾಜರಿಸಿದ ಹೇಳಿಕೆಯ  ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 1, ½  ಹಿಂದೆ ತನ್ನ ಗಂಡ ತೀರಕೊಂಡಿದ್ದು, ತಮ್ಮ ಸಂಬಂದಿಕರೇ ಆದ ಹಿಂದೂಪುರದ ವಾಸಿ ವೆಂಕಟೇಶ್ ಎಂಬುವರು ಒಂದು ವರ್ಷದಿಂದ ತಮ್ಮ ಮನೆಯಲ್ಲಿ ಇದ್ದುಕೊಂಡು ಟ್ರಾಕ್ಟರ್ ಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ತಮ್ಮ ಸಂಬಂಧಿಕರೇ ಆದ್ದರಿಂದ ತನಗೂ ಗಂಡ ಸತ್ತಿರುವುದರಿಂದ ತನಗೂ  ತೋಡಾಗಿರುತ್ತಾರೆಂತ ತಮ್ಮ ಮನೆಯಲ್ಲಿಯೇ ಇಟ್ಟುಕೊಂಡಿದ್ದೇವು. ಆತನು ದಿನೇ ದಿನೇ ಕುಡಿಯುವುದು ಅತಿ ಆಯಿತು ವಿನಾ ಕಾರಣ ತನ್ನ ಮೇಲೆ ಅನುಮಾನ ಪಡುವುದು ಹೊಡೆಯುವುದು ಹೀಗೆ ಮಾಡುತ್ತಿದ್ದ ಆದ್ದರಿಂದ 2 ತಿಂಗಳಿಂದ ಆತನನ್ನು ತಮ್ಮ ಮನೆಗೆ ಬರುಸುತ್ತಿಲ್ಲಾ ಆತನು ತಮ್ಮ ಮನೆಗೆ ಬಂದು ಗಲಾಟೆ ಮಾಡಿದ ಆಗ ತನ್ನ ಮಗನಾದ ವೆಂಕಟೇಶ್ ಸಹ ಬೈಯುದು ತಮ್ಮ ಮನೆಗೆ ಬರದ ಹಾಗೆ ಓಡಿಸಿದರು. ಈ ದಿನ ದಿನಾಂಕ:09-02-2019 ರಂದು ಬೆಳಗ್ಗೆ 09-00 ಗಂಟೆಯ ಸಮಯದಲ್ಲಿ ತಾನು ಮತ್ತು ತನ್ನ ತಮ್ಮ ಹೆಂಡತಿ ಈಶ್ವರಮ್ಮ ಬಟ್ಟೆ ಹೊಗೆಯಲು ತಮ್ಮ ಗ್ರಾಮದ ಸ್ಕೂಲ್ ಬಳಿ ಹೋಗಿದ್ದು, ಅಲ್ಲಿ ಕತ್ತಾಳೆ ಬೇಲಿ ಕಡೆ ತಾನು ಹೋಗಿದ್ದು, ತನ್ನ ಹಿಂದೆಗಡೆಯಿಂದ ವೆಂಕಟೇಶ್ ಎಂಬುವನು ಬಂದು ತನ್ನ ಎರಡೂ ಕೈಗಳನ್ನು ಹಿಡಿದುಕೊಂಡು ಹಿಂದಕ್ಕೆ ಎಳೆದು ಜೋರಾಗಿ ತಬ್ಬಿಕೊಂಡು ನಿನ್ನನ್ನು ಇಲ್ಲಿಯೇ ಸಾಯಿಸುತ್ತೇನೆಂದು ನನ್ನನ್ನು ಏಕೆ ಮನೆಗೆ ಬರಿಸಲಿಲ್ಲಾ ಎಂತ ತನ್ನ ಕೈಯಲ್ಲಿದ್ದ ಬ್ಲೇಡ್ ನಿಂದ ತನ್ನ ಕತ್ತಿನ ಬಳಿ ಕೊಯ್ದು ತನ್ನನ್ನು ಸಾಯಿಸುವ ಉದ್ದೇಶದಿಂದ ರಕ್ತಗಾಯ ಪಡಿಸಿರುತ್ತಾನೆ. ಅಷ್ಠರಲ್ಲಿ ತಾನು ಜೋರಾಗಿ ಕಿರುಚುವಷ್ಠರಲ್ಲಿ ಈಶ್ವರಮ್ಮ ಓಡಿ ಬಂದು ಆತನನ್ನು ತಳ್ಳಿದಳು. ನಂತರ ಗ್ರಾಮದ ವಾಸಿ ಅಂಜಿ ಬಿನ್ ಯರ್ರಪ್ಪ ಮತ್ತು ಬಾಬು ದಿಗವ ಬಸವಾಪುರ ರವರುಗಳು ಸಹ ಓಡಿ ಬಂದು ವೆಂಕಟೇಶಪ್ಪನನ್ನು ಹಿಡಿದುಕೊಂಡು ಆತನ ಕೈಯಲ್ಲಿದ್ದ ಬ್ಲೇಡ್ ನ್ನು ಕಿತ್ತುಕೊಂಡು ಬಿಸಾಡಿದರು. ನಂತರ ತನ್ನನ್ನು ತನ್ನ ಮಗ ವೆಂಕಟೇಶನು ದ್ವಿಚಕ್ರ ವಾಹನದಲ್ಲಿ ಕರೆ ತಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ತನ್ನನ್ನು ಸಾಯಿಸುವ ಉದ್ದೇಶದಿಂದ ತನ್ನ ಕತ್ತು ಕೊಯ್ದಿರುವ ವೆಂಕಟೇಶಪ್ಪ ನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿರುವ ಹೇಳಿಕೆ ಸಾರಾಂಶವಾಗಿರುತ್ತೆ.

13) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 17/2019 ಕಲಂ. 324,504,506 ಐಪಿಸಿ :-

      ದಿನಾಂಕ: 09/02/2019 ರಂದು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ನಾಗರತ್ನ ಕೋಂ ಆವುಲಪ್ಪ ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ತನಗೆ ಈಗ್ಗೆ ಸುಮಾರು 8 ವರ್ಷಗಳ ಹಿಂದೆ ಅಶ್ವತ್ಥಪ್ಪ ರವರ ಮಗನಾದ ಆವುಲಪ್ಪ ರವರೊಂದಿಗೆ ಮಧುವೆಯಾಗಿದ್ದು ತನಗೆ ಇಬ್ಬರು ಮಕ್ಕಳಿರುತ್ತಾರೆ ಈಗ್ಗೆ ಸುಮಾರು 3 ವರ್ಷಗಳ ಹಿಂದೆ ತನ್ನ ಗಂಡ ತನ್ನನ್ನು ಬಿಟ್ಟು ಹೋಗಿದ್ದು ತಾನು ತಮ್ಮ ತಂದೆ ತಾಯಿಯೊಂದಿಗೆ ಪೊತೇನಹಳ್ಳಿ ಗ್ರಾಮದಲ್ಲಿಯೆ ವಾಸವಾಗಿರುತ್ತೇನೆ. ಹೀಗಿರುವಾಗ ಸುಮಾರು 2 ವರ್ಷಗಳ ಹಿಂದೆ ತಾನು ತನ್ನ ಗಂಡನ ವಿರುದ್ದ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಹಾಲಿ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ ಸದರಿ ಕೇಸನ್ನು ವಾಪಸ್ ತೆಗೆದುಕೋ ಎಂದು ಒಂದು ವಾರದ ಹಿಂದೆಯೂ ಸಹ ತನ್ನನ್ನು ಹೊಡೆದಿರುತ್ತಾನೆ. ಇದೇ ವಿಚಾರದಲ್ಲಿ ಈ ದಿನ  ದಿನಾಂಕ: 09/02/2019 ರಂದು ಬೆಳಿಗ್ಗೆ ತಮ್ಮ ತಂದೆ ತಾಯಿ ಜಮೀನಿನ ಬಳಿ ಹೋಗಿದ್ದಾಗ ಬೆಳಿಗ್ಗೆ ಸುಮಾರು 10-00 ಗಂಟೆಯ ಸಮಯದಲ್ಲಿ ತಾನು ಮತ್ತು ತನ್ನ ಮಕ್ಕಳು ಮನೆಯಲ್ಲಿದ್ದಾಗ ಆ ಸಮಯದಲ್ಲಿ ತನ್ನ ಗಂಡ ತಮ್ಮ ಮನೆಗೆ ಬಂದು ನೀನು ಹಾಕಿರುವ ಕೇಸು ವಾಪಸ್ ತೆಗೆದುಕೋ ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಸಿದನು ತನ್ನನ್ನು ಕೆಟ್ಟಪದಗಳಿಂದ ಬೈದು ನೀನು ಇದ್ದರೆ ತಾನೇ ಕೇಸು ನಡೆಯುವುದು ಎಂದು ಹೇಳಿ ತನ್ನ ಮೇಲೆ ವಿನಾಕಾರಣ ಜಗಳ ಮಾಡಿ ತಾನು ತಂದಿದ್ದ ಚಾಕುವಿನಿಂದ ತನ್ನ ಮೈ ಮೇಲೆ ತಿವಿಯಲು ಬಂದಾಗ ತಾನು ತನ್ನ ಕೈಯನ್ನು ಅಡ್ಡ ಇಟ್ಟಾಗ ತನ್ನ ಕೈಗಳಿಗೆ ರಕ್ತಗಾಯವಾಯಿತು ನಂತರ ತನ್ನ ಬಲತೊಡೆಗೆ ತಿವಿದು ರಕ್ತಗಾಯ ಮಾಡಿರುತ್ತಾನೆ ತನ್ನ ಗಂಡನ ವಿರುದ್ದ ಕಾನೂನು ರಿತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

14) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 17/2019 ಕಲಂ. 323,324,504 ರೆ/ವಿ 34 ಐಪಿಸಿ :-

      ದಿನಾಂಕ: 09-02-2019 ರಂದು ಬೆಳಿಗ್ಗೆ 9.30 ಗಂಟೆಯಲ್ಲಿ ಫಿರ್ಯಾದಿದಾರರಾದ ಸಿ.ಎಂ. ಚೇತನ್ ಬಿನ್ ಮುನಿರಾಜಪ್ಪ, ಚಿಂತಡಪಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಒಂದು ವರ್ಷದ ಹಿಂದೆ ನಮ್ಮ ತಂದೆ ಮುನಿರಾಜಪ್ಪ ರವರು ನಮ್ಮ ಮನೆಯ ಪಕ್ಕದ ಸೈಟ್ ನಂ. 8 ರ 100X47 ರ ಸೈಟ್ ನ್ನು ನಂಜಪ್ಪ ಬಿನ್ ದ್ಯಾವಪ್ಪ ರವರ ಕಡೆಯಿಂದ ಕೊಂಡುಕೊಂಡಿದ್ದು ಸದರಿ ಜಮೀನಿನಲ್ಲಿ ನಾವು ಹಾಗೂ ನಮ್ಮ ಗ್ರಾಮದ ನಂಜೇಗೌಡ ರವರು ರೇಷ್ಮೆ ಕಡ್ಡಿಗಳನ್ನು ಹಾಕಿರುತ್ತೇವೆ. ಹೀಗಿದ್ದು ಈಗ್ಗೆ ಕೆಲವು ದಿನಗಳ ಹಿಂದೆ ನಂಜೇಗೌಡ ರವರಿಗೆ ನಮ್ಮ ಜಮೀನಿನಲ್ಲಿ ಹಾಕಿದ್ದ ರೇಷ್ಮೆ ಕಡ್ಡಿಗಳನ್ನು ತೆಗೆಯಲು ಹೇಳಿದ್ದರೂ ಸಹ ತೆಗೆದಿರಲಿಲ್ಲ, ಆದ್ದರಿಂದ ದಿನಾಂಕ: 08-02-2019 ರಂದು ಬೆಳಿಗ್ಗೆ 8.30 ಗಂಟೆ ಸಮಯದಲ್ಲಿ ನಮ್ಮ ತಂದೆ ಮುನಿರಾಜಪ್ಪ, ತಾಯಿ ಶ್ರೀಮತಿ ರೇಣುಕಮ್ಮ ಮತ್ತು ನಮ್ಮ ದೊಡ್ಡಪ್ಪ ವೆಂಕಟೇಶಪ್ಪ ರವರುಗಳು ನಮ್ಮ ಬಾಬತ್ತು ಸೈಟ್ ನಲ್ಲಿದ್ದ ರೇಷ್ಮೆ ಕಡ್ಡಿಗಳನ್ನು ಟ್ರ್ಯಾಕ್ಟರ್ ಗೆ ತುಂಬುತ್ತಿದ್ದಾಗ ನಮ್ಮ ಗ್ರಾಮದ ನಂಜೇಗೌಡ ಬಿನ್ ಮುನಿಶಾಮಪ್ಪ, ಅನಿತಮ್ಮ ಕೋಂ ನಂಜೇಗೌಡ, ರಾಜಣ್ಣ ಬಿನ್ ಮುನಿಶಾಮಪ್ಪ ಮತ್ತು ಮಲ್ಲಿಕಾ ಕೋಂ ರಾಜಣ್ಣ ರವರುಗಳು ಬಂದು ನಮ್ಮ ತಂದೆ-ತಾಯಿ, ನಮ್ಮ ದೊಡ್ಡಪ್ಪ ರವರುಗಳ ಮೇಲೆ ಏಕೆ ನಮ್ಮ ರೇಷ್ಮೆ ಕಡ್ಡಿಗಳನ್ನು ಎತ್ತುತ್ತಿರುವುದು ಎಂದು ಅವಾಚ್ಯ ಶಬ್ದಗಳಿಂದ ಬೈದು ಈ ಸೈಟ್ ನಾವು ತೆಗೆದುಕೊಳ್ಳಬೇಕು ಎಂದುಕೊಂಡಿದ್ದರೆ ನೀವು ತೆಗೆದುಕೊಂಡಿದ್ದೀರ ಎಂದು ಬೈದು ಗಲಾಟೆ ಮಾಡಿದ್ದು ಆ ಪೈಕಿ ನಂಜೇಗೌಡ ರವರು ಅಲ್ಲಿಯೇ ಇದ್ದ ಯಾವುದೋ ಕಲ್ಲಿನಿಂದ ನಮ್ಮ ದೊಡ್ಡಪ್ಪ ವೆಂಕಟೇಶಪ್ಪ ರವರ ಬಲಕಣ್ಣಿನಿಂದ ಮೇಲಕ್ಕೆ ಹೊಡೆದು ರಕ್ತಗಾಯವುಂಟುಮಾಡಿರುತ್ತಾರೆ, ಮೇಲ್ಕಂಡ ಎಲ್ಲರೂ ಸಹ ನಮ್ಮ ತಂದೆ ಮುನಿರಾಜಪ್ಪ, ತಾಯಿ ರೇಣುಕಮ್ಮ ಮತ್ತು ನಮ್ಮ ದೊಡ್ಡಪ್ಪ ವೆಂಕಟೇಶಪ್ಪ ರವರಿಗೆ ಕೈಗಳಿಂದ ಹೊಡೆದಿರುತ್ತಾರೆ. ಆಗ ಅಲ್ಲಿಯೇ ಇದ್ದ ನಮ್ಮ ಗ್ರಾಮದ ಅಶ್ವತ್ಥಪ್ಪ ಬಿನ್ ಲೇಟ್ ಲಕ್ಷ್ಮಯ್ಯ ಮತ್ತು ಕದಿರಪ್ಪ ಬಿನ್ ಲೇಟ್ ಮಲ್ಲಪ್ಪ ರವರು ಗಲಾಟೆ ಬಿಡಿಸಿದ್ದು ಗಾಯಗೊಂಡಿದ್ದ ನಮ್ಮ ದೊಡ್ಡಪ್ಪ ವೆಂಕಟೇಶಪ್ಪ ರವರನ್ನು ನಾನು ಮತ್ತು ನಮ್ಮ ತಂದೆ ಮುನಿರಾಜಪ್ಪ ರವರು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಪಡಿಸಿದ್ದು ಈ ಬಗ್ಗೆ ನಮ್ಮ ಗ್ರಾಮದಲ್ಲಿ ಪಂಚಾಯ್ತಿ ಮಾಡುವುದಾಗಿ ಹೇಳಿದ್ದು ಮೇಲ್ಕಂಡವರು ಇದುವರೆಗೂ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.