ದಿನಾಂಕ : 09/01/2019 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.06/2019 ಕಲಂ. 441-447-351-352-355-506 ಐ.ಪಿ.ಸಿ:-

     ದಿನಾಂಕ:09/01/2019 ರಂದು  ಬೆಳಿಗ್ಗೆ 11-30 ಗಂಟೆಗೆ   ನ್ಯಾಯಾಲಯದ ಹೆಚ್.ಸಿ-223  ವಿಶ್ವನಾಥ ರವರು  ನ್ಯಾಯಾಲಯದಿಂದ ಸಾಧರಾದ ದೂರನ್ನು  ಪಡೆದು ಠಾಣೆಯಲ್ಲಿ ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ  ಪಿರ್ಯಾದಿದಾರರು ತಮಗೆ ಸೇರಿದ  ಜಾಗದಲ್ಲಿ ಸುಮಾರು 5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ  ಪಾಯವನ್ನು ಹಾಕಿದ್ದು, ಸದರಿ ಜಾಗಕ್ಕೆ ಸಂಬಂಧಿಸಿದಂತೆ  ಖಾತೆಯನ್ನು ಹೊಂದಿದ್ದು, ತೆರಿಗೆಯನ್ನು ಸಹ ಪಾವತಿ ಮಾಡಿರುತ್ತಾರೆ. ಹೀಗಿರುವಾಗ ದಿನಾಂಕ: 14/12/2018 ರಂದು   ಸೋಮಶೇಖರ್ @ ಸೋಮಶೇಖರ್ ರೆಡ್ಡಿ ಬಿನ್ ನಾರಾಯಣಪ್ಪ, 37 ವರ್ಷ, ಒಕ್ಕಲಿಗರು, ಮೂಲಂಗಿಚೆಟ್ಲಪಲ್ಲಿ ಗ್ರಾಮ ಗೂಳೂರು ಹೋಬಳಿ  ಬಾಗೇಪಲ್ಲಿ ತಾಲ್ಲೂಕು ರವರು  ಸದರಿ ಪಾಯದೊಳಗೆ ಆಕ್ರಮ ಪ್ರವೇಶ ಮಾಡಿ ಹಾಕಿರುವ ಪಾಯವನ್ನು ಕಿತ್ತು ಹಾಕಿರುತ್ತಾರೆಂದು. ನಾರಾಯಸ್ವಾಮಿ ಎಂಬುವರು ಪಿರ್ಯಾದಿದಾರರಿಗೆ  ತಿಳಿಸಿದ್ದು, ಪಿರ್ಯಾದಿದಾರರು ಬಂದು ನೋಡಲಾಗಿ  ವಿಷಯ ನಿಜವಾಗಿದ್ದು, ಈ  ಬಗ್ಗೆ ಸದರಿ ಸೋಮಶೇಖರ್ ರವರನ್ನು  ವಿಚಾರಿಸಲಾಗಿ ಪಿರ್ಯಾದಿದಾರರನ್ನು ಕುರಿತು ಅವಮಾನಕರವಾಗುವಂತೆ ಮಾಡಿ ಪುನಃ ಏನಾದರೂ  ಸದರಿ ಪಾಯ ಹಾಕಿರುವ ಜಾಗದ ವಿಚಾರಕ್ಕೆ  ಬಂದರೆ ನಿನ್ನನ್ನು ಸಾಯಿಸದೇ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು  ಹಾಕಿರುತ್ತಾರೆಂದು  ಅದ್ದರಿಂದ  ಮೇಲ್ಕಂಡ  ಸೋಮಶೇಖರ್ ರವರ ವಿರುದ್ದ   ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಸಾಧರಾದ ದೂರಾಗಿರುತ್ತದೆ.

2) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.04/2019 ಕಲಂ. 279-337 ಐ.ಪಿ.ಸಿ:-

     ದಿನಾಂಕ: 09/01/2019 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾಧಿದಾರರಾದ ವಿ.ಆರ್.ದ್ಯಾವಕೃಷ್ಣಪ್ಪ ಬಿನ್ ರಾಮಯ್ಯ, 45 ವರ್ಷ, ವಕ್ಕಲಿಗರು, ಜಿರಾಯ್ತಿ, ವಲಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೇಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಮಾವನ ಮಗನಾದ ವಿ.ಎಸ್.ವೆಂಕಟಶಿವಪ್ಪ ಬಿನ್ ಸೀತಾರಾಮಪ್ಪ ರವರು ದಿನಾಂಕ: 08/01/2019 ರಂದು ದಿಬ್ಬೂರಹಳ್ಳಿ ಗ್ರಾಮಕ್ಕೆ ಬಂದು ನಂತರ ಸಂಜೆ ಸುಮಾರು 7.00 ಗಂಟೆ ಸಮಯದಲ್ಲಿ ವಲಸೇನಹಳ್ಳಿ ಗ್ರಾಮಕ್ಕೆ ಹೋಗಲು ತನ್ನ ಬಾಬತ್ತು KA-41 ED-4741 HERO HF-DAWN ದ್ವಿಚಕ್ರ ವಾಹನದಲ್ಲಿ ಚಂದಗಾನಹಳ್ಳಿ ಗ್ರಾಮದ ಗೇಟ್ ಬಳಿ ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ ರಾಮಲಿಂಗಾಪುರ ಗ್ರಾಮದ ಕಡೆಯಿಂದ ನಂಬರ್ KA-50 W-0742 ಪ್ಯಾಷನ್ ಪ್ರೋ ದ್ವಿಚಕ್ರ ವಾಹನವನ್ನು ಅದರ ಚಾಲಕ ಚಿಕ್ಕಬಳ್ಳಾಪುರ ತಾಲ್ಲೂಕು, ಕೋಡೂರು ಬೈರಗಾನಹಳ್ಳಿ ಗ್ರಾಮದ ವಾಸಿಯಾದ ಅಶೋಕ ಬಿನ್ ರಾಮಕೃಷ್ಣಪ್ಪ ಮತ್ತು ನಾಗೇಶ ಬಿನ್ ಮುನಿರಾಜಪ್ಪ ರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಾವನ ಮಗನಾದ ವಿ.ಎಸ್.ವೆಂಕಟಶಿವಪ್ಪ ರವರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಬಲಭಾಗದ ಕಾಲಿನ ತೊಡೆಭಾಗದಲ್ಲಿ ಮುರಿದು ಹೋಗಿರುತ್ತೆ. ನಂತರ ಗಾಯಗೊಂಡ  ವಿ.ಎಸ್.ವೆಂಕಟಶಿವಪ್ಪ ರವರನ್ನು ಬೆಂಗಳೂರಿನ ಆಸ್ಟ್ರೀಯಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು, ಮೇಲ್ಕಂಡಂತೆ ಅಪಘಾತವನ್ನುಂಟು ಮಾಡಿದ ದ್ವಿಚಕ್ರ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

3) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.02/2019 ಕಲಂ. 302 ಐ.ಪಿ.ಸಿ:-

     ದಿನಾಂಕ.09.01.2019 ರಂದು ಬೆಳಿಗ್ಗೆ 9.00 ಗಂಟೆಗೆ ಪಿರ್ಯಾದಿ ಕಿರಣ್ ಕುಮಾರ್ ಕೆ.ಕೆ.ಪೇಟೆ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನಂದರೆ, ತಾನು ಸುಮಾರು 5 ವರ್ಷಗಳಿಂದ ಶಿಡ್ಲಘಟ್ಟ ಟೌನ್ ಅಂಬೇಡ್ಕರ್ ಭವನ ಪಕ್ಕದಲ್ಲಿರುವ ಹಳೆಯ ಕೆ.ಎಸ್.ಆರ್.ಟಿ.ಸಿ ಮಿನಿ ಬಸ್ ನಿಲ್ದಾಣದ ಕಟ್ಟಡದಲ್ಲಿ 2 ಅಂಗಡಿಗಳನ್ನು ಬಾಡಿಗೆಗೆ ಪಡೆದು ಅದರಲ್ಲಿ ಎಗ್ ರೈಸ್ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ಪ್ರತಿ ದಿನ ಮದ್ಯಾಹ್ನ 12.00 ಗಂಟೆಗೆ ಬಂದು ವ್ಯಾಪಾರ ಮಾಡಿಕೊಂಡು ರಾತ್ರಿ 10.30 ಗಂಟೆಗೆ ಬೀಗ ಹಾಕಿಕೊಂಡು ಹೋಗುತ್ತಿದ್ದೆ. ದಿನಾಂಕ:09.01.2019 ರಂದು ಬೆಳಿಗ್ಗೆ ಸುಮಾರು 7.15 ಗಂಟೆಗೆ ಪಕ್ಕದ ಟೀ ಅಂಗಡಿಯ ಲಕ್ಕಹಳ್ಳಿ ಗ್ರಾಮದ ಅಂಬರೀಶ್ ರವರು ತನಗೆ ಪೋನ್ ಮಾಡಿ ನಿಮ್ಮ ಅಂಗಡಿಯ ಹಿಂದೆ ಬಸ್ ತಂಗುದಾನದಲ್ಲಿ ಮಲಗಿದ್ದ ಬಿಕ್ಷುಕನಿಗೆ ಯಾರೋ ಕಲ್ಲುನಿಂದ ತಲೆಗೆ ಹೊಡೆದು ಸಾಯಿಸಿರುತ್ತಾರೆ ಬಾ ಎಂದು ತಿಳಿಸಿದಾಗ ಕೂಡಲೇ ತಾನು ಸ್ಥಳಕ್ಕೆ ಬಂದು ನೋಡಿದೆ. ತಮ್ಮ ಅಂಗಡಿಯ ಹಿಂದೆ ಬಸ್ ತಂಗುದಾನದಲ್ಲಿ ಮಲಗಿದ್ದ ಬಿಕ್ಷುಕನಿಗೆ ಯಾರೋ ನಿನ್ನೆ ದಿನ ರಾತ್ರಿ ಸಮಯದಲ್ಲಿ ಸಿಮೆಂಟ್ ಇಟ್ಟಿಗೆಯಿಂದ ಮತ್ತು ಕಲ್ಲುಗಳಿಂದ ತಲೆ ಮೇಲೆ ಹೊಡೆದು ಕೊಲೆ ಮಾಡಿ ಹೊರಟು ಹೋಗಿರುವುದು ಕಂಡು ಬಂದಿದ್ದು, ಬಿಕ್ಷುಕನಿಗೆ ಸುಮಾರು 50 ವರ್ಷ ವಯಸ್ಸಾಗಿದ್ದು ಇತನು 3 ತಿಂಗಳ ಹಿಂದೆ ಎಲ್ಲಿಂದಲೋ ಬಂದು ತಮ್ಮ ಹೊಟೇಲ್ ಮತ್ತು ವಿಜಯಲಕ್ಷ್ಮೀ ಬಾರ್ ಮುಂದೆ ಬಿಕ್ಷೆ ಬೇಡಿಕೊಂಡು ರಾತ್ರಿ ಸಮಯದಲ್ಲಿ ಬಸ್ ತಂಗುದಾನದಲ್ಲಿ ಮಲಗುತ್ತಿದ್ದು, ಆತನ ಹೆಸರು ವಿಳಾಸ ತಿಳಿದು ಬಂದಿಲ್ಲ. ಈತನ ಮೈಮೇಲೆ ಬಿಳಿ ಗೇರೆಗಳ ಮಾಸಲು ಬಣ್ಣದ ಷರಟು, ನೀಲಿ ಬಣ್ಣದ ಸ್ವೇಟರ್ ಮತ್ತು ಮಾಸಲು ಬಣ್ಣದ ನಿಕ್ಕರ್ ಧರಿಸಿರುತ್ತಾನೆ. ಆದ್ದರಿಂದ ತಾವು ಸ್ಥಳಕ್ಕೆ ಬಂದು ಬಿಕ್ಷುಕನನ್ನು ಕೊಲೆ ಮಾಡಿರುವ ಅಪರಿಚತ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.