ದಿನಾಂಕ: 08-04-2019 ರ ಅಪರಾಧ ಪ್ರಕರಣಗಳು

1)  ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 72/2019. ಕಲಂ. 143,147,148, 323, 324, 504 ರೆ/ವಿ 149 ಐ.ಪಿ.ಸಿ:-

     ದಿನಾಂಕ:07/04/2019  ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನರಸಿಂಹಪ್ಪ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ  ಸುಮಾರು 6 ತಿಂಗಳುಗಳಿಂದ ನಮ್ಮ ಬಾಬತ್ತು ಸರ್ವೇ ನಂಬರ್-26 ರ 4 ಎಕರೆ16 ಗುಂಟೆ ಜಮೀನಿನ ವಿಚಾರದಲ್ಲಿ ನಮಗೂ ಮತ್ತು ನಮ್ಮ ಗ್ರಾಮದ ವಾಸಿಯಾದ ನರಸಿಂಹಪ್ಪ@ಮುರುವಾಡು ಬಿನ್ ಲಕ್ಷ್ಮಪ್ಪ ರವರಿಗೂ ಗಲಾಟೆಗಳಾಗಿದ್ದು, ಈ ವಿಚಾರದಲ್ಲಿ ಈ ದಿನ ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ  ಸದರಿ ನರಸಿಂಹಪ್ಪ@ಮುರುವಾಡು ಮತ್ತು ಆತನ ಮಕ್ಕಳಾದ ನರಸಿಂಹಮೂರ್ತಿ, ನಾರಾಯಣಸ್ವಾಮಿ ಮತ್ತು  ಆದಿನಾರಾಯಣ @ಮಾರಪ್ಪ ಬಿನ್  ಲೇಟ್ ಗಂಗಪ್ಪ, ವೆಂಕಟರಾಯಪ್ಪ ಬಿನ್ ಲಕ್ಷ್ಮಪ್ಪ, ತಿಮ್ಮಪ್ಪ ಬಿನ್ ಲಕ್ಷ್ಮಪ್ಪ, ನರೇಶ ಬಿನ್ ತಿಮ್ಮಪ್ಪ ಮತ್ತು ಆದಿನಾರಾಯಣ ಬಿನ್ @ಕೀರೋಡು ಬಿನ್ ಚಿಕ್ಕ ತಿಮ್ಮಪ್ಪ ರವರಗಳು ಆಕ್ರಮ ಗುಂಪನ್ನು ಕಟ್ಟಿಕೊಂಡು ಕೈಯಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ನಮ್ಮ ಮನೆಯ ಬಳಿ ಬಂದು ಮನೆಯಲ್ಲಿ ಮಲಗಿದ್ದ ನನ್ನನ್ನು ಮನೆಯಿಂದ  ಆಚೆ ಕರೆದು ನನ್ನನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದು ವಿನಃ ಕಾರಣ ನನ್ನ ಮೇಲೆ ಗಲಾಟೆಗೆ ಬಂದು ನನ್ನ ತಲೆಯ ಬಲಭಾಗಕ್ಕೆ ದೊಣ್ಣೆಯಿಂದ ಹೊಡೆದು ರಕ್ತ ಗಾಯವನ್ನು ಮಾಡಿ, ಬಲಗೈಗೆ ಮೂಗೇಟು ಉಂಟು ಮಾಡಿರುತ್ತಾರೆ ಹಾಗೂ ಬೆನ್ನಿನ ಮೇಲೆ ಮತ್ತು  ಹೊಟ್ಟೆಗೆ ತರಚಿದ ಗಾಯವನ್ನುಂಟು ಮಾಡಿರುತ್ತಾರೆ. ನನ್ನನ್ನು ಹೊಡೆಯುತ್ತಿದ್ದಾಗ ಬಿಡಿಸಲು ಬಂದ ನನ್ನ ತಮ್ಮನಿಗೆ ಆದಿನಾರಾಯಣ @ಕೀರೋಡು ರವರು  ತಲೆಗೆ ದೊಣ್ಣೆಯಿಂದ ಹೊಡೆದು ರಕ್ತ ಗಾಯವನ್ನು ಉಂಟು ಮಾಡಿರುತ್ತಾರೆ. ನಂತರ ಸ್ಥಳದಲ್ಲಿದ್ದ ನಮ್ಮ ಗ್ರಾಮದ ವಾಸಿಗಳಾದ ಶಿವಪ್ಪ ಬಿನ್ ವೆಂಕಟರಾಮಪ್ಪ ಮತ್ತು ಬಾಬು ಬಿನ್ ಶಿವಪ್ಪ ರವರು ಗಲಾಟೆಯನ್ನು ಬಿಡಿಸಿದ್ದು, ಗಾಯಗೊಂಡಿದ್ದ ನಾನು ಮತ್ತು ನನ್ನ ತಮ್ಮ ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಚಿಕಿತ್ಸೆಯನ್ನು ಪಡೆಯುತ್ತಿರುತ್ತೇವೆ,ಅದ್ದರಿಂದ ವಿನಃ ಕಾರಣ ನಮ್ಮ ಮೇಲೆ ಗಲಾಟೆಗೆ ಬಂದು ನಮ್ಮನ್ನು ಹೊಡೆದು ರಕ್ತ ಗಾಯಗಳನ್ನುಂಟು ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

2)  ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 19/2019. ಕಲಂ. ಮನುಷ್ಯ ಕಾಣೆ:-

     ದಿನಾಂಕ 08/04/2019ರಂದು ಚಿಂತಾಮಣಿ ತಾಲ್ಲೂಕು ಗೌನಿಚೆರುವುಪಲ್ಲಿ ಗ್ರಾಮದ ವಾಸಿ ಜಿ.ಎಸ್. ವರದರಾಜು ಬಿನ್ ಸೂರ್ಯನಾರಾಯಣರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ 03/04/2019 ರಂದು ಮದ್ಯಾಹ್ನ ಸುಮಾರು 4.00 ಗಂಟೆಯ ಸಮಯದಲ್ಲಿ ತನ್ನ ಅಣ್ಣನಾದ ಜಿ.ಎಸ್ ರಘುನಾಥರೆಡ್ಡಿ ಬಿನ್ ಸೂರ್ಯನಾರಾಯಣರೆಡ್ಡಿ  ರವರು ತಮ್ಮ ಮನೆಯಿಂದ ಹೊರಗೆ ಹೋದವರು ರಾತ್ರಿಯಾದರೂ ಮನೆಗೆ ವಾಪಸ್ಸು ಬಾರದೇ ಇದ್ದು, ಈ ಬಗ್ಗೆ ತಮ್ಮ ಸಂಬಂಧಿಕರ ಮನೆಗಳಲ್ಲಿ, ಸ್ನೇಹಿತರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗದೇ ಇದ್ದು, ಈ ದಿನ ಮುಂದಿನ ಕ್ರಮಕ್ಕಾಗಿ ತಡವಾಗಿ ದೂರು ನೀಡಿರುವುದಾಗಿರುತ್ತೆ.

3)  ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 61/2019. ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 07/04/2019 ರಂದು ಸಂಜೆ 05.15 ಗಂಟೆ ಸಮಯದಲ್ಲಿ ಪಿಎಸ್ಐ ರವರು ಮಾಲು ಪಂಚನಾಮೆ, ಆರೋಪಿಗಳನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ; 07-04-2019 ರಂದು ನಾನು, ಠಾಣಾ ಪ್ರಭಾರದಲ್ಲಿರುವಾಗ  ಮದ್ಯಾಹ್ನ03.30 ಘಂಟೆ ಸಮಯದಲ್ಲಿ ಬಂದ ಮಾಹಿತಿ ಏನೆಂದರೆ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ 18 ನೇ ಗ್ರಾಮ ಗಸ್ತಿಗೆ ಸೇರಿದ ಸಿ ಎಂ ಸಿ ಲೇಔಟ್ ನ ಕಂದವಾರ ಕೆರೆಯ ಕಟ್ಟೆಯ ಬಳಿ ಸಿ..ವಿ.ವೆಂಕಟರಾಯಪ್ಪರವರ  ಜಮೀನಿನ ಜಾಲಿ ಮರದ  ಬಳಿ ಯಾರೋ ಜನರು ಗುಂಪು ಸೇರಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಬೀಟ್  ಪಿ.ಸಿ.:-231 ನವೀನಬಾಬು ರವರು ನೀಡಿದ  ಮಾಹಿತಿ ಮೇರೆಗೆ ನಾನು, ಸಿಬ್ಬಂದಿಯವರಾದ, , ಹೆಚ್.ಸಿ 169 ಸೋಮಶೇಖರ್ ,ಪಿಸಿ-19 ಮಣಿಕಂಠ ಪಿ.ಸಿ-35 ಸರ್ದಾರ್, ಪಿ.ಸಿ-262 ಅಂಬರೀಶ್ , ಪಿ.ಸಿ-203 ಮಂಜುನಾಯ್ಕ್,   ಪಿಸಿ 271 ನಾಗೇಶ್ ಕುಸಲಾಪೂರ್, ಪಿಸಿ 260 ಮುತ್ತಪ್ಪ ಜೀಪ್ ಸಂಖ್ಯೆ ಕೆಎ,40-ಜಿ-567 ರಲ್ಲಿ ಮತ್ತು ದ್ವಿ-ಚಕ್ರವಾಹನಗಳಲ್ಲಿ  ಮದ್ಯಾಹ್ನ 03.45  ಗಂಟೆಗೆ ಠಾಣೆಯಿಂದ ಹೊರಟು ಮದ್ಯಾಹ್ನ:04.00 ಘಂಟೆಗೆ ಕಂದವಾರ ಕೆರೆ  ಬಳಿ  ಹೋಗಿ  ಚಿಕ್ಕಬಳ್ಳಾಪುರ ನಗರ ವಾಸಿಗಳಾದ ಶಾಹೀದ್ ಬಿನ್ ಮಹಮ್ಮದ್ ಗೌಸ್, ಕೃಷ್ಣಪ್ಪ ಬಿನ್ ಲೇಟ್ ಮುನಿಯಪ್ಪ, ರಾಮಕೃಷ್ಣಪ್ಪ ಬಿನ್ ಲೇಟ್ ನಾರಾಯಣಪ್ಪ ರವರಗಳಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ. ಪಂಚರು ಮತ್ತು ಸಿಬ್ಬಂದಿಯರೊಂದಿಗೆ  ಸರ್ಕಾರಿ ಜೀಪ್ ಮತ್ತು ದ್ವಿ-ಚಕ್ರವಾಹನಗಳಲ್ಲಿ ಕಂದವಾರ ಕೆರೆ ಜಮೀನಿನ ಬಳಿ  ಜಾಲಿ ಮರ ಬಳಿಗೆ ಹೋಗಿ ವಾಹನಗಳನ್ನು ಮರೆಯಾಗಿ ನಿಲ್ಲಿಸಿ  ಪಂಚರು ಮತ್ತು ನಾವು ಹೋಗಿ ಮರೆಯಾಗಿ ನಿಂತು ನೋಡಲಾಗಿ ಹುಣಸೇ ಮರದ ಕೆಳಗೆ ಯಾರೋ ಕೆಲವರು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟು ಎಲೆಗಳಿಂದ ಆ ಪೈಕಿ ಒಬ್ಬ ಆಸಾಮಿ ಅಂದರ್ 200 ಎಂತ ಮತ್ತೋಬ್ಬ ಆಸಾಮಿ ಬಾಹರ್ ಗೆ 100 ಎಂತ ಉಳಿದವರು ಸಹ ಅಂದರ್ ಗೆ 200 ಬಾಹರ್ ಗೆ 200 ಎಂತ ಕೂಗುತ್ತ ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್ ಜೂಜಾಟ ಆಡುತ್ತಿರುವುದನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು, ಸಬ್ ಇನ್ಸ್ ಪೆಕ್ಟರ್ ಆದ ನಾನು ಜೂಜಾಟ ಆಡುತ್ತಿದ್ದವರಿಗೆ ಜೂಜಾಟ ಸ್ಥಳದಿಂದ ಯಾರು ಒಡಿಹೋಗಬಾರದು ಯಥಾಸ್ಥಿತಿಯಲ್ಲಿರುವಂತೆ  ಸೂಚನೆ ನೀಡುತ್ತಿದ್ದಂತೆ ಜೂಜಾಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದವರನ್ನು  ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ನಾವು ಹಿಡಿದುಕೊಂಡು ಸ್ಥಳದಲ್ಲಿ ಸಿಕ್ಕ ಆಸಾಮಿಗಳ ಹೆಸರು ವಿಳಾಸ ಕೆಳಲಾಗಿ 1) ವೆಂಕಟೇಶ ಬಿನ್ ಶ್ರೀನಿವಾಸ 41 ವರ್ಷ, ಬಲಜಿಗರು ಆಟೋ ಚಾಲಕ, 16 ನೇ ವಾರ್ಡ ಟೌನ್ ಹಾಲ್ 2) ಮೌಲ ಬಿನ್ ಅನ್ವರ್ 49 ವರ್ಷ, ಮುಸ್ಲಿಂ ಜನಾಂಗ ಆಟೋ ಚಾಲಕ 25 ನೇ ವಾರ್ಡ್, ಚಿಕ್ಕಬಜನೆಮಂದಿರ ಹಿಂಭಾಗ 3) ನಜೀರ್ ಅಹಮ್ಮದ್ ಬಿನ್ ಉಸೇನ್ ಸಾಬ್ 41 ವರ್ಷ, ಚಾಲಕ ವೃತ್ತಿ, 1 ನೇ ವಾರ್ಡ ವಾಪಸಂದ್ರ 4) ಮುನಿರಾಜು ಕೆ ಬಿನ್ ಕೃಷ್ಣಪ್ಪ 41 ವರ್ಷ, ಬಲಜಿಗರು ಅಟೋ ಚಾಲಕ, 17 ನೇ ವಾರ್ಡ್ ಬಾಪೂಜಿ ನರಗ  5) ಶಿವಪ್ಪ ಬಿನ್ ಕೃಷ್ಣಪ್ಪ 47 ವರ್ಷ, ವಕ್ಕಲಿಗರು ಆಟೋ ಚಾಲಕ ಕಂದವಾರ  ಎಲ್ಲಾರು ಚಿಕ್ಕಬಳ್ಳಾಪುರ ನಗರ ವಾಸಿಗಳು ಎಂದು ತಿಳಿಸಿದರು. ಜೂಜಾಟದ ಸ್ಥಳದಲ್ಲಿದ್ದ ಒಂದು ನ್ಯೂಸ್ ಪೇಪರ್, 52 ಇಸ್ಪೀಟು ಎಲೆಗಳು ಪಣಕ್ಕಿಟ್ಟದ 7650/- ರೂಗಳನ್ನು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆಸಾಮಿಗಳನ್ನುವಶಕ್ಕೆ ತೆಗೆದುಕೊಂಡು ಮಾಲು, ದಾಳಿ ಪಂಚನಾಮೆ, ಆಸಾಮಿಗಳೊಂದಿಗೆ ಸಂಜೆ 05.15 ಗಂಟೆಗೆ ಠಾಣೆಗೆ ಹಾಜರುಪಡಿಸಿ ವರದಿ ನೀಡಿರುತ್ತೇನೆ. ಅದರಂತೆ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

4)  ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 62/2019. ಕಲಂ. 353, 504 ಐ.ಪಿ.ಸಿ:-

     ದಿನಾಂಕ; 08-04-2019 ರಂದು ಬೆಳಗ್ಗೆ 11.30 ಗಂಟೆಗೆ ಚಿಕ್ಕಬಳ್ಳಾಪುರ (ಗ್ರಾ) ಪೊಲೀಸ್ ಠಾಣೆಯಲ್ಲಿ ಕತ್ರವ್ಯ ನಿರ್ವಹಿಸುತ್ತಿರುವ ಎನ್.ಗಂಗಾಧರಯ್ಯ ಎ.ಎಸ್.ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ . ಮಾನ್ಯ ಎಸ್.ಪಿ ಸಾಹೇಬರು ಚಿಕ್ಕಬಳ್ಳಾಪುರ ಜಿಲ್ಲೆ ರವರ ಆದೇಶ ದಂತೆ ಪಿ.ಎಸ್.ಐ (ಕಾ.ಸು) ರವರ ಸೂಚನೆಯಂತೆ ದಿನಾಂಕ:23/03/2019 ರಂದು ತಾನು, ಎ.ಎಸ್.ಐ ರೇಣುಕಯ್ಯ ಜೀಪ್ ಚಾಲಕ ಎ.ಪಿ.ಸಿ 118 ಅಶೋಕ್ ಮತ್ತು ಸಿಪಿಸಿ 255 ಡಾನಿಂಗ್ ಶಂಕು ರವರೊಂದಿಗೆ  ಕೆಎ-07-ಜಿ-220 ಸರ್ಕಾರಿ ಜೀಪ್ ನಲ್ಲಿ  ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಹಾರೋಬಂಡೆ ಗ್ರಾಮದ ಗೇಟ್ ಬಳಿ ಟಾರು ರಸ್ತೆಯ ಪೂರ್ವ ಕಡೆ ಇರುವ  ಪ್ರಯಾಣಿಕರ ತಂಗುದಾಣದ ಬಳಿ ಬಾಗೇಪಲ್ಲಿ-ಚಿಕ್ಕಬಳ್ಳಾಪುರ ಎನ್.ಎಸ್-7 ಟಾರು ರಸ್ತೆಯ ಬಾಗೇಪಲ್ಲಿ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಿ ಮೋಟಾರು ವಾಹನ ಕಾಯ್ದೆ ಅಡಿ ದಾಖಲಾತಿಗಳನ್ನು ಪರಿಶೀಲಿಸಿ ವಾಹನಗಳ ಚಾಲಕ/ಸವಾರರ ವಿರುದ್ದ ಐ.ಎಮ್.ವಿ ಪ್ರಕರಣಗಳನ್ನು ದಾಖಲು ಮಾಡುತ್ತಿದ್ದಾಗ ಸಂಜೆ ಸುಮಾರು 6.00 ಗಂಟೆ ಸಮಯದಲ್ಲಿ ಮರಸನಹಳ್ಳಿ ಗ್ರಾಮದ ಕಡೆಯಿಂದ ಒಬ್ಬ ಆಸಾಮಿ ಹೆಲ್ಮೇಟ್  ಧರಿಸದೆ  ದ್ವಿ-ಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ  ದ್ವಿ-ಚಕ್ರವಾಹನವನ್ನು  ಜೀಪ್ ಚಾಲಕ ಎ.ಪಿ.ಸಿ,118 ಅಶೋಕ್ ರವರು ನಿಲ್ಲಿಸಿ ಅಸಾಮಿಯನ್ನು ಐ,ಎಂ,ವಿ ಪ್ರಕರಣಗಳನ್ನು ದಾಖಲಿಸುತ್ತಿದ್ದ ನಮ್ಮ ಬಳಿ  ಕರೆದುಕೊಂಡು ಬಂದರು.ಸದರಿ ಅಸಾಮಿಯನ್ನು ದ್ವಿ-ಚಕ್ರವಾಹನದ  ದಾಖಲಾತಿಗಳು ,ಚಾಲನಾ ಪರವಾನಿಗೆ, ವಿಮಾ  ಇತರೆ ದಾಖಲಾತಿಗಳನ್ನು ಬಗ್ಗೆ ಕೇಳಿದಾಗ ಗಾಡಿಗೆ ಹಾಕಿರುವ ಬಂಡವಾಳ ನನ್ನದು,ನನ್ನ ಕಷ್ಟಾರ್ಜಿತ,ದ್ವಿ-ಚಕ್ರವಾಹನ.ಗಾಡಿಯಿಂದ ಬಿದ್ದರೆ ಕೈಕಾಲು ಮುರಿಯುದು ನನ್ನದು ಇದರಿಂದ ನನ್ನಕುಂಟುಂಬಕ್ಕೆನಷ್ಟವಾಗುತ್ತೆ ಅದರಲ್ಲಿ ನಿನ್ನದೇನು ಪಾತ್ರ. ನಿಮಗೆ ಗಾಡಿ ನಿಲ್ಲಿಸುವುದಕ್ಕೆ ಅಧಿಕಾರ ಕೊಟ್ಟವರು ಯಾರು,ನಿಮಗೆ ದಾಖಲಾತಿಗಳು ಏಕೆ ತೋರಿಸಬೇಕು  ನೀವು ರೋಡ್ ನಲ್ಲಿ ನಿಂತು  ಯಾವ ಸಿದ್ದಾಂತದ  ಮೇಲೆ ಹಣ ವಸೂಲು ಮಾಡುತ್ತಿದ್ದರಾ, ನೀವು ಇಲ್ಲಿಗೆ ಬಂದು  ಏನು  ಕಿಸಿತ್ತಿದ್ದಿರಾ, ಯಾರಪ್ಪನದು ಈ ರೋಡ್ ನಾನು 8 ವರ್ಷಗಳಿಂದ ರೋಡ್ ನಲ್ಲಿ ಓಡಾಡುತ್ತಿದ್ದೇನೆ .ಹೇಲ್ಮಟ್ ಹಾಕಬೇಕು ,ಎಲ್ಲಿ ಕಾನೂನು ಇದೆ ಹೆಲ್ಮಟ್ ಎಕೆ ಹಾಕಬೇಕು, ಅದರಿಂದ ಎಷ್ಟು ತೊಂದರೆ ಇದೆ, ಇನ್ಯೂರೆನ್ಸ್  ಏಕೆ ಬೇಕು, ಗಾಡಿ ಬಿದ್ದ ತಕ್ಷಣ ಇನ್ಯೂರೆನ್ಸ್ ಬಂದು ಬಿಡುತ್ತಾ  ರಕ್ಷಣೆ ಕೊಡಲಾಗದ ಅಯೋಗ್ಯ ಪೊಲೀಸರು ನೀವು  ಏಕವಚನದಲ್ಲಿ ಮಾತನಾಡಿ ನಿಮ್ಮ ಎಸ್,ಪಿ ಚೈತ್ರಾ ರವರಿಂದ ಡಿ,ಸಿ  ಅನಿರುದ್ ಶ್ರವಣ್ ರವರ ವರೆಗೂ ನೋಡಿದ್ದೇನೆ ಎಂದು ಸಮವಸ್ತ್ರದಲ್ಲಿ  ನಮ್ಮಗಳನ್ನು ನಿಂದಿಸಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ ನಂತರ ಅಸಾಮಿಯು ಅಲ್ಲಿದ ಗುಂಡನ್ನು ತೆಗದುಕೊಂಡು ಐ,ಎಂ,ವಿ ಪ್ರಕರಣಗಳನ್ನು ದಾಖಲಿಸಲು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಜೀಪ್ ಗೆ  ಗುಂಡನ್ನು ತೆಗದುಕೊಂಡು ಹಾಕಲು ಬಂದಿದ್ದು, ಅಸಮಯದಲ್ಲಿ ಸಾರ್ವಜನಿಕರು ತಡೆದಿದ್ದು,  ಅಸಾಮಿಯು ಬಂದಿದ್ದ ದ್ವಿ-ಚಕ್ರವಾಹನ ನೊಂದಣಿ ಸಂಖ್ಯೆ ನೋಡಲಾಗಿ ಕೆಎ-40-ಆರ್-5927 ಹೀರೊ ಹೊಂಡಾ ಸ್ಲೇಂಡರ್  ಪ್ಲಸ್ ಆಗಿರುತ್ತೆ  ಸದರಿ ಅಸಾಮಿಯು ದ್ವಿ-ಚಕ್ರವಾಹನದೊಂದಿಗೆ ಪರಾರಿಯಾಗಿದ್ದು,  ಅಸಮಯಕ್ಕೆ ದ್ವಿ-ಚಕ್ರವಾಹನದ  ಸವಾರನ ಹೆಸರು ವಿಳಾಸ ತಿಳಿದು ದ್ವಿ-ಚಕ್ರವಾಹನ ಸವಾರನ ಹೆಸರು ವಿಳಾಸ ತಿಳಿಯಲಾಗಿ ರಾಜಕಿಶೋರ್  ದರಬೂರು ಗ್ರಾಮ ಮಂಡಿಕಲ್  ಹೋಬಳಿ  ಚಿಕ್ಕಬಳ್ಳಾಫುರ ತಾಲ್ಲೂಕು  ಮತ್ತು  ಜಿಲ್ಲೆ ಎಂದು ತಿಳಿದುಕೊಂಡು ಈ ದಿನ  ದಿನಾಂಕ; 08/04/2019 ರಂದು  ತಡವಾಗಿ ದೂರು ನೀಡುತ್ತಿದ್ದು ದಿನಾಂಕ;23/03/2019 ರಂದು ಸಂಜೆ ಸುಮಾರು 6;00 ಗಂಟೆ ಸಮಯದಲ್ಲಿ  ಸಮವಸ್ತ್ರದಲ್ಲಿದ್ದ ತಮ್ಮನ್ನು ಸಾರ್ವಜನಿಕ ರಸ್ತೆಯಲ್ಲಿ ಅವಾಚ್ಯವಾಗಿ ನಿಂದಿಸಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವ ಮೇಲ್ಕಂಡ  ರಾಜಕಿಶೋರ್ ರವರ ವಿರುದ್ದ ಮುಂದಿನ  ಕ್ರಮಕ್ಕಾಗಿ ನೀಡಿದ ವರದಿಯ ದೂರಿನ ಮೇರೆಗೆ ಈ ಪ್ರ.ವ.ವರದಿ.

5) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 62/2019. ಕಲಂ. 323, 324,504 ರೆ/ವಿ 34 ಐ.ಪಿ.ಸಿ ಮತ್ತು 3(1)(r), 3(1)(s) SC AND THE ST  (PREVENTION OF ATTROCITIES) ACT, 1989:-

     ದಿನಾಂಕ: 07/04/2019 ರಂದು 16-30 ಗಂಟೆಗೆ ಆಸ್ಪತ್ರೆಯಲ್ಲಿ ಗಾಯಾಳು ವಿನಯ್ ಕುಮಾರ್ ವಿ ಬಿನ್ ಲೇಟ್ ವೆಂಕಟೇಶಪ್ಪ 25 ವರ್ಷ, ಬೋವಿ ಜನಾಂಗ, ಶ್ರೀರಾಮ ಫೈನಾನ್ಸ್ ನಲ್ಲಿ ಕೆಲಸ, ವಾಸ ಗುಂತುಪ್ಪನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು. ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ದಿ: 07/04/2019 ರಂದು ಬೆಳ್ಳಿಗ್ಗೆ 11-20 ಗಂಟೆಯಲ್ಲಿ ನಾನು ಮತ್ತು ನಮ್ಮ ಗ್ರಾಮದ ಗೋಪಿ ಇಬ್ಬರು ಚಿಕ್ಕಬಳ್ಳಾಪುರಕ್ಕೆ ಕೋಳಿ ಕ್ಲೀನ್ ಮಾಡಿಸಲು ಗೋಪಿ ದ್ವಿಚಕ್ರ ವಾಹನ ಸ್ಲೈಂಡರ್ ಬೈಕ್ ನಂ ಕೆ.ಎ.40.ವಿ.8093 ರಲ್ಲಿ ಭಗತ್ ಸಿಂಗ್ ನಗರದಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ ಬರುತ್ತಿದ್ದಾಘ ಮುಂದೆ ಎದುರುಗಡೆಯಿಂದ ಯಾವುದೋ ಒಂದು ಆಟೋ ಬರುತ್ತಿದ್ದು ಆಟೋ ತಪ್ಪಿಸಿ ಮುಂದಕ್ಕೆ ಹೋಗುತ್ತಿದ್ದಾಗ ಮುನಿರಾಜು ಎಂಬ ವ್ಯಕ್ತಿ ಅಡ್ಡವಾಗಿ ಬಂದಿದ್ದು, ನಾನು 3 ಜನರು ಕೆಳಗೆ ಬಿದ್ದೆವು ಅಗ ನನಗೆ ಬಲ ಮೊಣಕಾಲಿಗೆ ಬಲಗಾಲಿನ ಹೆಬ್ಬೆರಳಿಗೆ ರಕ್ತಗಾಯವಾಯಿತು. ನಾನು ಮತ್ತು ಗೋಪಿ ಮುನಿರಾಜು ರವರನ್ನು ಎತ್ತಿ ಕೂರಿಸಿ ಉಪಚರಿಸುತ್ತಿದ್ದಾಗ ಅಲ್ಲಿಗೆ ಭಗತ್ ಸಿಂಗ್ ನಗರದ ವಾಸಿ ಮಂಜುನಾಥ ಬಿನ್ ಮುನಿರಾಜು ಎಂಬುವನು ಏಕಾಏಕಿ ಅಲ್ಲಿಗೆ ಬಂದು ಯಾವುದೋ ಒಂದು ಪೈಪ್ ನಿಂದ ನನಗೆ ಮತ್ತು ಗೋಪಿಗೆ ಹೊಡೆದನು. ನಂತರ ನನಗೆ ಕೈಯಿಂದ ಬಲಗಣ್ಣಿನ ಹುಬ್ಬಿಗೆ ಗುದ್ದಿ ರಕ್ತಗಾಯ ಮಾಡಿದನು. ಅಲ್ಲಿಗೆ ನಟರಾಜು ಮತ್ತು ಇತರರು ಬಂದು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಕಾಲಿನಿಂದ ಒದ್ದರು. ಆಗ ನಾನು ಮತ್ತು ಗೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದು, ನಾನು ನಮ್ಮೂರು ಕಡೆಯಿಂದ ಬರುತ್ತಿದ್ದು ಯಾವುದೋ ಗಾಡಿಯಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬಂದೆ ಆಸ್ಪತ್ರೆ ಬಳಿ ನನ್ನ ಅಣ್ಣ ವಿನೋದ ಅಲ್ಲಿಗೆ ಬಂದಿದ್ದು, ನನ್ನನ್ನು ಮತ್ತು ಗೋಪಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಂಜುನಾಥ, ನಟರಾಜು ಮತ್ತು ಇತತರು ಅಡ್ಡಗಟ್ಟಿ ನಮಗೆ ಹೊಡೆಯಲು ಬಂದಾಗ ನನ್ನ ಅಣ್ಣ ವಿನೋದ ಅಡ್ಡ ಬಂದಿದ್ದು, ಅವರಿಗೆ ಮೇಲ್ಕಂಡ ಮಂಜುನಾಥ ಮತ್ತು ಇತರರು ಕೈಗಳಿಂದ ಹೊಡೆದರು. ನಮ್ಮ ಮೇಲೆ ಗಲಾಟೆ ಮಾಡಿ ಮೇಲ್ಕಂಡ ಮಂಜುನಾಥ ನಟರಾಜು ಅವರ ಜೋತೆಯಲ್ಲಿದ್ದ ಇತರರ ಮೇಲೆ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

6) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 63/2019. ಕಲಂ. 87 ಕೆ.ಪಿ.ಆಕ್ಟ್ :-

     ದಿನಾಂಕ 07-04-2019 ರಂದು  ಪಿರ್ಯಾದಿದಾರರಾದ  ಶ್ರೀ ಹೆಚ್.ವಿ. ಸುದರ್ಶನ್ ರವರು ಆಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು  ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 07-04-2019 ರಂದು ಸಂಜೆ 04-30 ಗಂಟೆಯಲ್ಲಿ ತಾನು ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ನಗರದ ಕಂದವಾರಬಾಗಿಲಿನಲ್ಲಿರುವ  ರಾಜಕಾಲುವೆ ಬಳಿ ಇರುವ  ಗೋಲ್ ಮಾಲ್ ಕುಂಟೆಯಲ್ಲಿ  ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು 52 ಇಸ್ಪೀಟ್ ಎಲೆಗಳಿಂದ  ಅಕ್ರಮ ಅಂದರ್-ಬಾಹರ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಚಿಕ್ಕಬಳ್ಳಾಪುರದ ಘನ ಪಿ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ದಾಳಿ ಮಾಡಲು ಅನುಮತಿಯನ್ನು ಪಡೆದುಕೊಂಡು  ಕಛೇರಿಗೆ  ಪಂಚರನ್ನು ಬರಮಾಡಿಕೊಂಡು ನಗರ ಠಾಣೆಯ ಪಿ.ಎಸ್.ಐ. ವರುಣ್ ಕುಮಾರ್,  ಹೆಚ್.ಸಿ. 48 ದಿನೇಶ್ ಪಿ.ಸಿ. 138 ಮುರಳಿ, ಪಿ.ಸಿ. 152 ಜಯಣ್ಣ, ಎ.ಹೆಚ್.ಸಿ. 58 ಭಾಷ, ಎ.ಪಿ.ಸಿ.131 ಆಲೀಂ ಪಾಶ ರವರುಗಳೊಂದಿಗೆ ಸಂಜೆ 05-00 ಗಂಟೆಗೆ ಸರ್ಕಾರಿ  ವಾಹನ ಸಂಖ್ಯೆ ಕೆ.ಎ.40-ಜಿ.538 ಮತ್ತು ಕೆ.ಎ.40-ಜಿ-139 ರಲ್ಲಿ ಕಛೇರಿಯನ್ನು ಬಿಟ್ಟು ಎಂ.ಜಿ. ರಸ್ತೆ, ಪೊಲೀಸ್ ಸರ್ಕಲ್, ಭುವನೇಶ್ವರಿ ಸರ್ಕಲ್, ಸಿ.ಸಿ ವೃತ್ತ, ಕಂದವಾರ ಬಾಗಿಲು ಮುಖಾಂತರ ನಂದಿ ರಸ್ತೆಯಲ್ಲಿರುವ ಮಠದ ಬಳಿ ವಾಹನಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಮಠದಿಂದ ಪೂರ್ವ-ಪಶ್ಚಿಮವಾಗಿ ರಾಜಕಾಲುವೆ ಇರುತ್ತೆ. ಸದರಿ ರಾಜಕಾಲುವೆಯ ಪಕ್ಕದಲ್ಲಿರುವ ಗೋಲ್ ಮಾಲ್ ಕುಂಟೆಯಲ್ಲಿ 4 ಜನರು ಗುಂಪಾಗಿ ಕುಳಿತುಕೊಂಡಿರುತ್ತಾರೆ. ಅಲ್ಲಿಂದ ಇಬ್ಬರು ಓಡಿಹೋದರು. ಸದರಿ ಸ್ಥಳದಲ್ಲಿ ಗುಂಪಿನಲ್ಲಿ ಅಂದರ್ ಗೆ 100 ರೂ, ಬಾಹರ್ ಗೆ 100 ರೂ. ಎಂದು  ಕೂಗುತ್ತಿದ್ದು ಆಸಾಮಿಗಳು ಅಕ್ರಮ ಜೂಜಾಟವನ್ನು ಆಡುತ್ತಿರುವುದು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ  ದಾಳಿಮಾಡಿ  ಸ್ಥಳದಲ್ಲಿದ್ದ  ಇಬ್ಬರನ್ನು ಹಿಡಿದುಕೊಂಡಿದ್ದು 1) ಬಾಲಾಜಿ ಬಿನ್ ಶ್ರೀನಿವಾಸ.ಕೆ.ವಿ., 29 ವರ್ಷ, ಬಲಜಿಗರು, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ ವಾರ್ಡ್ ನಂ. 15, ಸೊಪ್ಪಿನ ಬೀದಿ, ನಂದಿ ರಸ್ತೆ,  ಚಿಕ್ಕಬಳ್ಳಾಪುರ, 2) ಶ್ರೀ ಹರಿ ಬಿನ್ ಲೇಟ್ ಶ್ರೀನಿವಾಸ, 23 ವರ್ಷ, ಬಲಜಿಗರು, ಕೂಲಿ ಕೆಲಸ, ವಾಸ ಅಂಜುಮನ್ ರಸ್ತೆ, 17 ನೇ ವಾರ್ಡ್  , ಕೋಟೆ, ಚಿಕ್ಕಬಳ್ಳಾಪುರ ಎಂದು ತಿಳಿಸಿದ್ದು ಅಲ್ಲಿಂದ  ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 3) ಹೇಮಂತ್  ಬಿನ್ ಶ್ರೀನಿವಾಸ, ಕಂದವಾರಪೇಟೆ, ಚಿಕ್ಕಬಳ್ಳಾಪುರ 4) ವಿಜ್ಞೇಶ್ ಬಿನ್ ಭಾಸ್ಕರ್ , 20 ವರ್ಷ, ಕಂದವಾರಪೇಟೆ, ಚಿಕ್ಕಬಳ್ಳಾಪುರ ಎಂದು ತಿಳಿಸಿದ್ದು  ಮೇಲ್ಕಂಡ 4 ಜನರು  ಗುಂಪಾಗಿ ಕುಳಿತುಕೊಂಡು  ಇಸ್ಪೀಟ್ ಎಲೆಗಳಿಂದ  ಅಕ್ರಮ ಅಂದರ್ -ಬಾಹರ್  ಜೂಜಾಟವನ್ನು ಆಡುತ್ತಿದ್ದು  ಆಸಾಮಿಗಳ ಮುಂದೆ ಪಣಕ್ಕಿಟ್ಟಿದ್ದ ಹಣ 5100/-ರೂ ನಗದು ಹಣ, ಮತ್ತು ಇಟ್ಪೀಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಪಂಚನಾಮೆಯನ್ನು 17-30 ಗಂಟೆಯಿಂದ 18-30 ಗಂಟೆಯವರೆಗೆ  ಬರೆದು ಇಬ್ಬರು  ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ 19-00 ಗಂಟೆಗೆ ಬಂದು ಆಸಾಮಿಗಳು, ಮಾಲು, ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿಯನ್ನು ಹಾಜರುಪಡಿಸುತ್ತಿದ್ದು ಆಸಾಮಿಗಳ ವಿರುದ್ದ ಕಲಂ 87 ಕೆ.ಪಿ.ಆಕ್ಟ್ ರೀತ್ಯ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುವುದು.

7) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 112/2019. ಕಲಂ. 87 ಕೆ.ಪಿ.ಆಕ್ಟ್ :-

     ದಿನಾಂಕ 07-04-2019 ರಂದು  ಸಂಜೆ  5-00 ಗಂಟೆ ಗೆ  DCB CEN ಪೋಲಿಸ್ ಠಾಣೆಯ ಪಿ ಐ ಶ್ರೀ ವಿ. ಚಿನ್ನಪ್ಪ ರವರು ಮಾಲು ಆರೋಪಿಗಳೋಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 07-04-2019 ರಂದು ಚಿಂತಾಮಣಿ ತಾಲ್ಲೂಕು ಉಪ್ಪರಪೇಟೆ ಗ್ರಾಮದ ಬಳಿ ಕಾನೂನು ಬಾಹಿರವಾಗಿ  ಅಂದರ್ ಬಾಹರ್ ಜೂಜಾಟ ಆಡುತ್ತಿರುವುಧಾಗಿ ಮಾಹಿತಿ ಬಂದಿದ್ದು ಅದರಂತೆ ತಾನು ಮತ್ತು ಸಿಬ್ಬಂದಿಯವರು ಸದರಿ ಉಪ್ಪರಪೇಟೆ ಬಳಿ ಸುನಿಲ್ ರವರ ಮಾವಿನ ತೋಟದಲ್ಲಿ  ಪಂಚರ ಸಮಕ್ಷಮ ದಾಳಿ ಮಾಡಲಾಗಿ ಅಲ್ಲಿ ಜೂಜಾಟದಲ್ಲಿ ತೊಡಗಿದ್ದ 1)ರವಿ ಬಿನ್ ನಾರಾಯಣಸ್ವಾಮಿ, ಉಪ್ಪರಪೇಟೆ, 2) ಸೈಯದ್ ರಿಯಾಜ್ ಬಿನ್ ಶೇಖ್ ಇಬ್ರಾಹಿಂ ಉಪ್ಪರಪೇಟೆ, 3)ಮುನಿಯಪ್ಪ ಬಿನ್ ಲೇಟ್ ದೊಡ್ಡ ವೆಂಕಟರಾಯಪ್ಪ, ಉಪ್ಪರಪೇಟೆ,  4) ವೆಂಕಟೇಶಪ್ಪ ಬಿನ್ ಲೇಟ್ ನಾರಾಯಣಪ್ಪ ಉಪ್ಪರಪೇಟೆ, ರವರನ್ನು ಮತ್ತು ಜೂಜಾಟಕ್ಕೆ ಬಳಸಿದ್ದ ಒಂದು ನ್ಯೂಸ್ ಪೇಪರ್, 52 ಇಸ್ಪೇಟ್ ಎಲೆಗಳು, ಪಣಕ್ಕಿಟ್ಟಿದ್ದ  ನಗದು ಹಣ 4030 ರೂ ಗಳನ್ನು  ಮದ್ಯಾಹ್ನ 3-30 ರಿಂದ 4-30 ಗಂಟೆ ವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ನಾಲ್ಕು ಜನ ಆಸಾಮಿಗಳನ್ನು ಹಾಗೂ ಮಾಲನ್ನು ವಶಕ್ಕೆ ಪಡೆದು ಠಾಣೆಗೆ ಬಂದು ವರದಿ ನೀಡಿರುತ್ತೆ.

8) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 113/2019. ಕಲಂ. 87 ಕೆ.ಪಿ.ಆಕ್ಟ್ :-

     ದಿನಾಂಕ 07/04/2019 ರಂದು ಸಂಜೆ 5-45 ಗಂಟೆಗೆ ಚಿಕ್ಕಬಳ್ಳಾಪುರ DCB-CEN ವಿಶೇಷ ಪೊಲೀಸ್ ಠಾಣೆಯ ಪಿ.ಐ ರವರಾದ ಚಿನ್ನಪ್ಪ ರವರು ಆರೋಪಿಗಳು, ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 07/04/2019 ರಂದು ತಾನು ಸಿಬ್ಬಂಧಿಯೊಂದಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಬಗ್ಗೆ ಗಸ್ತಿನಲ್ಲಿದ್ದಾಗ ಸಂಜೆ 4-30 ಗಂಟೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರನ್ನು ಬರಮಾಡಿಕೊಂಡು ಚಿಂತಾಮಣಿ ತಾಲ್ಲೂಕಿನ ಬಿಂಗಾನಹಳ್ಳಿ ಗ್ರಾಮದ ಉತ್ತರಕ್ಕೆ ಸುಮಾರು ಒಂದು ಕಿ.ಮೀ ದೂರದಲ್ಲಿರುವ ರಾಯಪ್ಪನಹಳ್ಳಿ ಗ್ರಾಮದ ವಾಸಿ ಶ್ರೀರಾಮರೆಡ್ಡಿ ರವರ ಹುಣಸೇ ತೋಪಿನಲ್ಲಿ ಕಾನೂನು ಬಾಹೀರವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ್ದು, ದಾಳಿಯಲ್ಲಿ ಇಬ್ಬರು ಆರೋಪಿತರು ಸಿಕ್ಕಿ ಬಿದ್ದಿದ್ದು ಸ್ಥಳದಲ್ಲಿದ್ದ ಒಂದು ಜೀವಂತ ಕೋಳಿ ಹುಂಜ ,ಒಂದು ಸತ್ತು ಹೋಗಿರುವ ಕೋಳಿ ಹುಂಜ ಹಾಗು ಪಣಕ್ಕೆ ಹಾಕಿದ್ದ ಒಟ್ಟು 3400-00 ರೂ ಗಳನ್ನು ಕೇಸಿನ ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸಿಕ್ಕಿ ಬಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡು, ಆರೋಪಿತರನ್ನು ಹಾಗು ಮಾಲನ್ನು ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ಹಾಜರು ಪಡಿಸಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ.

9) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 114/2019. ಕಲಂ. 87 ಕೆ.ಪಿ.ಆಕ್ಟ್:-

     ಘನ ನ್ಯಾಯಾಲಯದಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆರ್.ಜಗದೀಶ್ ರೆಡ್ಡಿ ಆದ ನಾನು ನಿವೇಧಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ 07/04/2019 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನಾನು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕುರುಬೂರು ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಯ ಬಂದೋ ಬಸ್ತ್ ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮಿದಾರರಿಂದ ಚಿಕ್ಕಬೊಮ್ಮನಹಳ್ಳಿ ಹಾಗು ದೊಡ್ಡಬೊಮ್ಮನಹಳ್ಳಿ ಗ್ರಾಮಗಳ ಮದ್ಯೆ ಇರುವ ಮಹಾದ್ವಾರದ ಪಕ್ಕದಲ್ಲಿರುವ ಬಗಳಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ ರವರ ನೀಲಗಿರಿ ತೋಪಿನಲ್ಲಿ ಯಾರೋ ಆಸಾಮಿಗಳು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಸಿಕ್ಕಿದ್ದು ನಂತರ ನಾನು ಈ ಮಾಹಿತಿಯನ್ನು ನಾನು ಚಿಂತಾಮಣಿ ಗ್ರಾಮಾಂತರ ವೃತ್ತ ನಿರೀಕ್ಷಕರಿಗೆ ತಿಳಿಸಿ ಸಿಪಿಐ ರವರ ಮಾರ್ಗದರ್ಶನವನ್ನು ಪಡೆದುಕೊಂಡು ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ನಂತರ ಪಂಚಾಯ್ತಿದಾರರನ್ನು ಹಾಗು ಠಾಣೆಯ ಸಿಬ್ಬಂಧಿಯವರಾದ ಹೆಚ್.ಸಿ-249 ಸಂದೀಪ್, ಹೆಚ್ಸಿ-86 ಹರೀಶ್, ಹೆಚ್ಸಿ-89 ಆಂಜಪ್ಪ, ಪಿಸಿ-504 ಸತೀಶ್ ಹಾಗು ಜೀಪ್ ಚಾಲಕನಾದ ಮುಖೇಶ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-138 ರಲ್ಲಿ ಸೀಕಲ್ ಮಾರ್ಗವಾಗಿ ಚಿಕ್ಕಬೊಮ್ಮನಹಳ್ಳಿ-ದೊಡ್ಡಬೊಮ್ಮನಹಳ್ಳಿ ಗ್ರಾಮಗಳ ಮದ್ಯೆ ಇರುವ ಮಹಾದ್ವಾರದ ಬಳಿ ಹೋಗಿ ಜೀಪ್ ಅನ್ನು ನಿಲ್ಲಿಸಿ ನಂತರ ನಾವು ನಡೆದುಕೊಂಡು ರಸ್ತೆಯ ಪಕ್ಕದಲ್ಲಿರುವ ನೀಲಗಿರಿ ತೋಪಿಗೆ ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 5 ಜನ ಆಸಾಮಿಗಳು ನೀಲಗಿರಿ ತೋಪಿನಲ್ಲಿ ಟಾರ್ಪಲ್ ಅನ್ನು ನೆಲಕ್ಕೆ ಹೊದಿಸಿ ಅದರ ಮೇಲೆ ಕುಳಿತುಕೊಂಡು ಒಬ್ಬ ಆಸಾಮಿಯು ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು ಆ ಪೈಕಿ ಒಬ್ಬ ಆಸಾಮಿ ಅಂದರ್ 200 ರೂ ಎಂತಲೂ ಮತ್ತೊಬ್ಬ ಆಸಾಮಿಯು ಬಾಹರ್ 200 ರೂ ಎಂತಲೂ ಉಳಿದ ಆಸಾಮಿಗಳು ಸಹ ಅಂದರ್ ಬಾಹರ್ ಎಂದು ಕೂಗಾಡಿಕೊಂಡು ಇಸ್ಪೀಟ್ ಜೂಜಾಟವಾಡುತ್ತಿರುವುದು ಖಚಿತವಾದ ಮೇಲೆ ನಾವು ಸದರಿ ಆಸಾಮಿಗಳನ್ನು ಸುತ್ತುವರೆದು ಅವರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1) ಮುನಿರಾಜು ಬಿನ್ ವೆಂಕಟರಾಯಪ್ಪ, 40 ವರ್ಷ, ಗಾಣಿಗರು, ಜಿರಾಯ್ತಿ, ವಾಸ-ಸೀಕಲ್ ಗ್ರಾಮ, ಚಿಂತಾಮಣಿ ತಾಲ್ಲೂಕು, 2) ಶ್ರೀನಿವಾಸ ಬಿನ್ ನಾರಾಯಣಸ್ವಾಮಿ, 35 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ-ಮೈಲಾಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 3) ಕೃಷ್ಣಮೂತರ್ಿ ಬಿನ್ ಶ್ರೀರಾಮಪ್ಪ, 30 ವರ್ಷ, ಗಾಣಿಗರು, ಕೂಲಿ ಕೆಲಸ, ವಾಸ-ಸೀಕಲ್ ಗ್ರಾಮ, ಚಿಂತಾಮಣಿ ತಾಲ್ಲೂಕು, 4) ಮಂಜು ಬಿನ್ ಚಿಕ್ಕ ವೆಂಕಟಪ್ಪ, 30 ವರ್ಷ, ನಾಯಕರು, ಜಿರಾಯ್ತಿ, ವಾಸ-ಸೀಕಲ್ ಗ್ರಾಮ, ಚಿಂತಾಮಣಿ ತಾಲ್ಲೂಕು, 5) ಮಂಜು ಬಿನ್ ಕೃಷ್ಣಪ್ಪ, 32 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಸೀಕಲ್ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ ಟಾರ್ಪಲ್ ಮೇಲೆ ಇಸ್ಪೀಟ್ ಎಲೆಗಳು ಹಾಗು ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಇಸ್ಪೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳಿದ್ದು ಹಣವನ್ನು ತೆಗೆದು ಎಣಿಕೆ ಮಾಡಲಾಗಿ 32.700-00 ರೂಗಳಿದ್ದು ಈ ಸ್ಥಳದ ಪಕ್ಕದಲ್ಲಿಯೇ ಅಲ್ಲಿಲ್ಲಿ 4 ದ್ವಿ ಚಕ್ರ ವಾಹನಗಳನ್ನು ನಿಲ್ಲಿಸಿದ್ದು ಸದರಿ ದ್ವಿ ಚಕ್ರ ವಾಹನಗಳ ಬಗ್ಗೆ ಆರೋಪಿಗಳನ್ನು ವಿಚಾರ ಮಾಡಲಾಗಿ ತಾವು ಇವುಗಳಲ್ಲಿಯೇ ಇಸ್ಪೀಟ್ ಜೂಜಾಟವಾಡಲು ಬಂದಿರುವುದಾಗಿ ತಿಳಿಸಿದ್ದು ನಂತರ ಸದರಿ ದ್ವಿ ಚಕ್ರ ವಾಹನಗಳ ನೊಂದಣಿ ಸಂಖ್ಯೆಗಳನ್ನು ಪರಿಶೀಲಿಸಲಾಗಿ 1 ನೇ ದ್ವಿ ಚಕ್ರ ವಾಹನದ ನೊಂದಣಿ ಸಂಖ್ಯೆ ಕೆಎ-40-ವಿ-8353 ಆಗಿದ್ದು, 2 ನೇ ದ್ವಿ ಚಕ್ರ ವಾಹನದ ನೊಂದಣಿ ಸಂಖ್ಯೆಯು ಕೆಎ-40-ಕೆ-7165 ಆಗಿದ್ದು, 3 ನೇ ದ್ವಿ ಚಕ್ರ ವಾಹನದ ನೊಂದಣಿ ಸಂಖ್ಯೆಯು ಕೆಎ-40-ಎಲ್-6040 ಆಗಿದ್ದು, 4 ನೇ ದ್ವಿ ಚಕ್ರ ವಾಹನದ ನೊಂದಣಿ ಸಂಖ್ಯೆಯು ಕೆಎ-40-ವಿ-2024 ಆಗಿದ್ದು, ಆರೋಪಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ನಂತರ ಸ್ಥಳದಲ್ಲಿದ್ದ ಟಾರ್ಪಲ್ ಅನ್ನು, 52 ಇಸ್ಪೀಟ್ ಎಲೆಗಳನ್ನು , 32.700-00 ರೂ ನಗದು ಹಣವನ್ನು ಹಾಗು 4 ದ್ವಿ ಚಕ್ರ ವಾಹನಗಳನ್ನು ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆಗೆ ದಾಳಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಸಂಜೆ 6-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಆರೋಪಿಗಳ ವಿರುದ್ದ ಠಾಣಾ ಮೊಸಂ-114/2019 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

10) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 115/2019. ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ 07/04/2019 ರಂದು ಸಂಜೆ 7-15 ಗಂಟೆಗೆ ಚಿಕ್ಕಬಳ್ಳಾಪುರ DCB-CEN ವಿಶೇಷ ಪೊಲೀಸ್ ಠಾಣೆಯ ಪಿ.ಐ ರವರಾದ ಚಿನ್ನಪ್ಪ ರವರು ಆರೋಪಿಗಳು, ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 07/04/2019 ರಂದು ತಾನು ಸಿಬ್ಬಂಧಿಯೊಂದಿಗೆ ಸರ್ಕಾರಿ ಜೀಪ್ ನಂಬರ್ ಕೆಎ-40-ಜಿ-270 ರಲ್ಲಿ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಬಗ್ಗೆ ಕಟಮಾಚನಹಳ್ಳಿ ಗ್ರಾಮದ ಗೇಟ್ ಬಳಿ ಗಸ್ತಿನಲ್ಲಿದ್ದಾಗ ಸಂಜೆ 5-30 ಗಂಟೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರನ್ನು ಬರಮಾಡಿಕೊಂಡು ಚಿಂತಾಮಣಿ ತಾಲ್ಲೂಕಿನ ನಾರಾಯಣಹಳ್ಳಿ ಗ್ರಾಮದ ಕೊಳಾಯಿ ಕೆರೆಯ ಬಳಿ ಯಾರೋ ಕೆಲವರು ವೃತ್ತಾಕಾರವಾಗಿ ಕುಳಿತುಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದರ  ಮೇಲೆ ದಾಳಿ ಮಾಡಿ 4 ಜನ ಆರೋಪಿತರನ್ನು ಹಾಗು ಸ್ಥಳದಲ್ಲಿದ್ದ ಒಂದು ನ್ಯೂಸ್ ಪೇಪರ್ , 52 ಇಸ್ಪೀಟ್ ಎಲೆಗಳನ್ನು , 4300 ರೂ ನಗದು ಹಣವನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು 4 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿತರನ್ನು , ಪಂಚನಾಮೆಯನ್ನು ಹಾಗು ಮಾಲನ್ನು ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ಹಾಜರು ಪಡಿಸಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ.

11) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 37/2019. ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ: 07/04/2019 ರಂದು ಮದ್ಯಾಹ್ನ ಪಿ.ಎಸ್.ಐ ರವರಿಗೆ ಠಾಣಾ ವ್ಯಾಪ್ತಿಯ ಜರುಗಹಳ್ಳಿ ಗ್ರಾಮದ ಮುನಿಶಾಮರೆಡ್ಡಿ ರವರ ಜಮೀನಿನಲ್ಲಿರುವ ಅಶ್ವಥಕಟ್ಟೆಯ ಮೇಲೆ ಯಾರೋ ಆಸಾಮಿಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಇಸ್ಪೀಟ್ ಜೂಜಾಟವಾಡುತ್ತಿದ್ದ 04 ಜನ ಆರೋಪಿಗಳನ್ನು ವಶಕ್ಕೆ ಪಡೆದು 3200 ರೂ ನಗದು ಹಣ, 52 ಇಸ್ಪೀಟ್ ಎಲೆ ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 2.00 ಗಂಟೆಯಿಂದ 3.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು, 04 ಜನ ಆರೋಪಿಗಳನ್ನು ಹಾಗೂ ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಮದ್ಯಾಹ್ನ 3.15 ಗಂಟೆಗೆ ಠಾಣೆಗೆ ವಾಪಸ್ಸಾಗಿ ಠಾಣಾ ಮೊ.ಸಂ.37/2019 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.

12) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 38/2019. ಕಲಂ. 87 ಕೆ.ಪಿ.ಆಕ್ಟ್ ಮತ್ತು U/s 11(1) ) PREVENTION OF CRUELTY TO ANIMALS ACT 1960:-

     ದಿನಾಂಕ: 07/04/2019 ರಂದು ಮದ್ಯಾಹ್ನ ಪಿ.ಎಸ್.ಐ ರವರಿಗೆ ಠಾಣಾ ವ್ಯಾಪ್ತಿಯ ವೆಂಕಟಕೃಷ್ಣಮ್ಮನಹಳ್ಳಿ ಗ್ರಾಮದ ಕರೆ ಅಂಗಳದಲ್ಲಿ ಯಾರೋ ಆಸಾಮಿಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡಿ 02 ಜನ ಆರೋಪಿಗಳನ್ನು ವಶಕ್ಕೆ ಪಡೆದು 1800 ರೂ ನಗದು ಹಣ, ಒಂದು ಕೋಳಿ ಹುಂಜ ಹಾಗೂ ಒಂದು ಕತ್ತಿಯನ್ನು ಸಂಜೆ 4.00 ಗಂಟೆಯಿಂದ 5.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು, 02 ಜನ ಆರೋಪಿಗಳನ್ನು ಹಾಗೂ ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಸಂಜೆ 5.20 ಗಂಟೆಗೆ ಠಾಣೆಗೆ ವಾಪಸ್ಸಾಗಿ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.

13) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 39/2019. ಕಲಂ. 87 ಕೆ.ಪಿ.ಆಕ್ಟ್ ಮತ್ತು U/s 11(1) ) PREVENTION OF CRUELTY TO ANIMALS ACT 1960:-

     ದಿನಾಂಕ: 07/04/2019 ರಂದು ಸಂಜೆ ಪಿ.ಎಸ್.ಐ ರವರಿಗೆ ಠಾಣಾ ವ್ಯಾಪ್ತಿಯ ಬಂಡಹಳ್ಳಿ ಗ್ರಾಮದ ಅಕ್ಕಯ್ಯಮ್ಮ ದೇವಾಲಯದ ಹಿಂಭಾಗದಲ್ಲಿ ಯಾರೋ ಆಸಾಮಿಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಿ.ಎಸ್.ಐ ರವರ ಮೌಖಿಕ ಆದೇಶದಂತೆ ಎ.ಎಸ್.ಐ ಸತ್ಯನಾರಾಯಣರಾವ್ ರವರು ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡಿ 02 ಜನ ಆರೋಪಿಗಳನ್ನು ವಶಕ್ಕೆ ಪಡೆದು 1100 ರೂ ನಗದು ಹಣ, ಒಂದು ಕೋಳಿ ಹುಂಜ ಹಾಗೂ ಒಂದು ಕತ್ತಿಯನ್ನು ಸಂಜೆ 5.00 ಗಂಟೆಯಿಂದ 6.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು, 02 ಜನ ಆರೋಪಿಗಳನ್ನು ಹಾಗೂ ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಸಂಜೆ 6.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.

14) ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 40/2019. ಕಲಂ. 87 ಕೆ.ಪಿ.ಆಕ್ಟ್ :-

     ದಿನಾಂಕ: 08/04/2019 ರಂದು ಬೆಳಿಗ್ಗೆ ಪಿ.ಎಸ್.ಐ ರವರಿಗೆ ಠಾಣಾ ವ್ಯಾಪ್ತಿಯ ಪಿಲ್ಲಗುಂಡ್ಲಹಳ್ಳಿ ಗ್ರಾಮದ ಅಶ್ವಥಕಟ್ಟೆಯ ಮೇಲೆ ಯಾರೋ ಆಸಾಮಿಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಇಸ್ಪೀಟ್ ಜೂಜಾಟವಾಡುತ್ತಿದ್ದ 02 ಜನ ಆರೋಪಿಗಳನ್ನು ವಶಕ್ಕೆ ಪಡೆದು 1870 ರೂ ನಗದು ಹಣ, 52 ಇಸ್ಪೀಟ್ ಎಲೆ ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಬೆಳಿಗ್ಗೆ 09.00 ಗಂಟೆಯಿಂದ 10.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು, ಮಾಲು ಅಮಾನತ್ತು ಪಂಚನಾಮೆ, 02 ಜನ ಆರೋಪಿಗಳು ಹಾಗೂ ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಬೆಳಿಗ್ಗೆ 10.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೆಮೋ ಸಾರಾಂಶವಾಗಿರುತ್ತೆ.

15) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 115/2019. ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ: 07/04/2019 ರಂದು ಮದ್ಯಾಹ್ನ 2-45 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದು ದಾಖಲಿಸಿರುವ ದೂರಿನ ಸಾರಾಂಶವೇನೆಂದರೆ ದಿನಾಂಕ:06/04/2019 ರಂದು ಮಧ್ಯಾಹ್ನ 15-45 ಗಂಟೆಯಲ್ಲಿ ಶ್ರೀ.ವೆಂಕಟಾಚಲಯ್ಯ, ಎಎಸ್ಐ, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯರವರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದು ಡಿ.ಎ.ನಟರಾಜ ಹೆಚ್.ಸಿ.80ರವರು ದಾಖಲಿಸಿರುವ ಎನ್.ಸಿ.ಆರ್ 184/2019 ರಲ್ಲಿ ನಮೂದು ಮಾಡಿರುವುದೇನೆಂದರೆ – ದಿನಾಂಕ :06/04/2019 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ಗೌರಿಬಿದನೂರು ತಾಲೂಕಿನ ಚಿಕ್ಕಕುರುಗೋಡು  ಗ್ರಾಮದ ಅಶ್ವತ್ಥಕಟ್ಟೆ  ಬಳಿ ಯಾರೋ ಆಸಾಮಿಗಳು ಅಂದರ್ ಬಾಹರ್ ಇಸ್ಪೀಟು ಜೂಜಾಟವಾಡುತ್ತಿರುವುದಾಗಿ ಠಾಣಾ ಪ್ರಬಾರದಲ್ಲಿರುವ ಪ್ರೊಬೆಷನರಿ  ಡಿ ವೈ ಎಸ್ ಪಿ ಶ್ರೀ ಗೌತಮ್ ಕೆ ಸಿ ಸಾಹೇಬರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಕ್ರೈಂ ಪಿ ಎಸ್ ರವರಾದ ಶ್ರೀ ಲಿಯಾಕತ್ ಉಲ್ಲಾ, ರವರು ನನ್ನನ್ನು ಮತ್ತು ಪೊಲೀಸ್ ಸಿಬ್ಬಂದಿ ಮತ್ತು ಪಂಚರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ ಎ 40- ಜಿ-61 ರಲ್ಲಿ ಚಿಕ್ಕಕುರುಗೋಡು  ಗ್ರಾಮದ ಬಳಿಗೆ ಹೋಗಿ ಮನೆಗಳ ಮರೆಯಲ್ಲಿ ಜೀಪನ್ನು ಮರೆಯಾಗಿ ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಸರ್ಕಾರಿ ಶಾಲೆಯ ಕಾಂಪೌಡ್ ನ ಬಳಿ ನಿಂತು ನೋಡಿದಾಗ ಅಶ್ವತ್ಥಕಟ್ಟೆ  ಬಳಿ  13 – 14 ಜನರ ಗುಂಪು ಅಂದರ್ಗೆ 500 ರೂ ಬಾಹರ್ಗೆ 500 ರೂಗಳಂತ ಕೂಗಿ ಹಣವನ್ನು ಪಣವಾಗಿಟ್ಟು ಇಸ್ಪೀಟು  ಜೂಜಾಟವಾಡುತ್ತಿರುವವರ ಮೇಲೆ ದಾಳಿ  ಮಾಡಿ ಅವರುಗಳನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1).ರಮೇಶ ಬಿನ್ ಚಿನ್ನರಾಯಪ್ಪ, 55 ವರ್ಷ, ಕಲ್ಲೂಡಿ  ಗ್ರಾಮ, ಗೌರಿಬಿದನೂರು ತಾಲೂಕು.2). ಶ್ರೀನಿವಾಸ ಬಿನ್ ಗೋವಿಂದಪ್ಪ, 33ವರ್ಷ,ನಾಯಕ ಜನಾಂಗ, ಚಾಲಕವೃತ್ತಿ, ಚಿಕ್ಕಕುರುಗೋಡು ಗ್ರಾಮ ಗೌರಿಬಿದನೂರು ತಾಲೂಕು  3) ರಮೇಶ ಬಿನ್ ಗಂಗಪ್ಪ, 35 ವರ್ಷ, ಜಿರಾಯ್ತಿ, ಚಿಕ್ಕಕುರುಗೋಡು ಗ್ರಾಮ, ಗೌರಿಬಿದನೂರು ತಾಲೂಕು.4) ರಾಮಾಂಜಿ ಬಿನ್ ಕೊಂಡಪ್ಪ, 45 ವರ್ಷ, ಚಿಕ್ಕಕುರುಗೋಡು ಗ್ರಾಮ, ಗೌರಿಬಿದನೂರು ತಾಲೂಕು.5) ಪ್ರಕಾಶ ಬಿನ್ ಸಿ ಕೆ ಸುಬ್ಬಾರಾವ್, 49 ವರ್ಷ, ಚಿಕ್ಕಕುರುಗೋಡು  ಗ್ರಾಮ, ಗೌರಿಬಿದನೂರು ತಾಲೂಕು. 6). ವೆಂಕಟೇಶ ಬಿನ್ ತಿರುಮಲಪ್ಪ,  57 ವರ್ಷ, ಎ ಕೆ  ಜನಾಂಗ, ಜಿರಾಯ್ತಿ, ಚಿಕ್ಕಕುರುಗೋಡು ಗ್ರಾಮ, ಗೌರಿಬಿದನೂರು ತಾಲೂಕು  7).ಮಹೇಶ ಬಿನ್ ರುದ್ರಪ್ಪ, 40 ವರ್ಷ, ಜಿರಾಯ್ತಿ, ಕರೆಕಲ್ಲಹಳ್ಳಿ ಗ್ರಾಮ ಗೌರಿಬಿದನೂರು ತಾಲೂಕು. 8) ಅನಿಲ್ ಬಿನ್ ಬಾಲಕೃಷ್ಣಾರೆಡ್ಡಿ, 32 ವರ್ಷ, ಚಾಲಕ ವೃತ್ತಿ, ಚಿಕ್ಕಕುರುಗೋಡು ಗ್ರಾಮ, ಗೌರಿಬಿದನೂರು ತಾಲೂಕು.9).ಸಂಜೀವರಾಯಪ್ಪ ಬಿನ್ ನರಸಿಂಹಪ್ಪ, 32 ವರ್ಷ,ವಕ್ಕಲಿಗರು, ಚಾಲಕ ವೃತ್ತಿ, ಚಿಕ್ಕಕುರುಗೋಡು  ಗ್ರಾಮ, ಗೌರಿಬಿದನೂರು ತಾಲೂಕು, 10) ಲಕ್ಷೀನಾರಾಯಣ ಬಿನ್ ನರಸಿಂಹಪ್ಪ, 30 ವರ್ಷ, ಚಿಕ್ಕಕುರುಗೋಡು  ಗ್ರಾಮ, ಗೌರಿಬಿದನೂರು ತಾಲೂಕು. 11). ಗೋಪಿ ಬಿನ್ ಗಂಗಪ್ಪ 38 ವರ್ಷ, ನಾಯಕ  ಜನಾಂಗ, ಚಿಕ್ಕಕುರುಗೋಡು ಗ್ರಾಮ ಗೌರಿಬಿದನೂರು ತಾಲೂಕು  12) ರಾಮಕೃಷ್ಣಾರೆಡ್ಡಿ ಬಿನ್ ನಾರಾಯಣರೆಡ್ಡಿ, 57 ವರ್ಷ, ವಕ್ಕಲಿಗರು, ಚಿಕ್ಕಕುರುಗೋಡು  ಗ್ರಾಮ, ಗೌರಿಬಿದನೂರು ತಾಲೂಕು. 13) ಅಶೋಕ ಬಿನ್ ಬಾಬು, 32 ವರ್ಷ, ಪೈಟಿಂಗ್ ಕೆಲಸ, ಚಿಕ್ಕಕುರುಗೋಡು ಗ್ರಾಮ, ಗೌರಿಬಿದನೂರು ತಾಲೂಕು. 14) ಬಾಬು ಬಿನ್ ಕೊಂಡಪ್ಪ, 60 ವರ್ಷ,ನಾಯಕರು,ಜಿರಾಯ್ತಿ, ಚಿಕ್ಕಕುರುಗೋಡು  ಗ್ರಾಮ, ಗೌರಿಬಿದನೂರು ತಾಲೂಕು ಅಂತ ತಿಳಿಸಿದ್ದು ,ಜೂಜಾಟದ ಸ್ಥಳವನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲವಿದ್ದು ,ಸದರಿ  ಪ್ಲಾಸ್ಟಿಕ್ ಚೀಲದ ಮೇಲೆ ಇಸ್ಪೀಟು ಎಲೆಗಳು ಮತ್ತು ನಗದು ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಇಸ್ಪೀಟು ಎಲೆಗಳನ್ನು ಸಂಗ್ರಹಿಸಿಕೊಂಡು ಎಣಿಸಲಾಗಿ 52 ಎಲೆಗಳಿರುತ್ತೆವೆ.ವಿವಿಧ ಮುಖ ಬೆಲೆಯ ನಗದು 21,300 ರೂ (ಇಪ್ಪತ್ತೊಂದು ಸಾವಿರದ ಮುನ್ನೂರು ) ನಗದು ಹಣವಿರುತ್ತೆ. ಇಸ್ಪೀಟು ಜೂಜಾಟವಾಡುತ್ತಿದ್ದ  14 ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು 52 ಇಸ್ಪೀಟು ಎಲೆಗಳನ್ನು ಹಾಗು 21,300 ರೂ ನಗದು ಹಣವನ್ನು ಪಂಚರ ಸಮಕ್ಷಮ ಸಂಜೆ  6.00 ಗಂಟೆಯಿಂದ 6.45 ಗಂಟೆಯವರೆವಿಗು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಸಂಜೆ  7.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಬಂದು, ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

16) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 116/2019. ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ: 07/04/2019 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದು ದಾಖಲಿಸಿರುವ ದೂರಿನ ಸಾರಾಂಶವೇನೆಂದರೆ ದಿನಾಂಕ:06/04/2019 ರಂದು ಮಧ್ಯಾಹ್ನ 15-45 ಗಂಟೆಯಲ್ಲಿ ಶ್ರೀ.ವೆಂಕಟಾಚಲಯ್ಯ, ಎಎಸ್ಐ, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯರವರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದು ಡಿ.ಎ.ನಟರಾಜ ಹೆಚ್.ಸಿ.80ರವರು ದಾಖಲಿಸಿರುವ ಎನ್.ಸಿ.ಆರ್ 185/2019 ರಲ್ಲಿ ನಮೂದು ಮಾಡಿರುವುದೇನೆಂದರೆ – ದಿನಾಂಕ;06/04/2019 ರಂದು ರಾತ್ರಿ 19-00  ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿ ರುವ ಪ್ರೊಬೇಷನರಿ ಡಿ.ಎಸ್.ಪಿ. ಸಾಹೇಬರಿಗೆ ಬೆಳ್ಳಾವಲಹಳ್ಳಿ  ಗ್ರಾಮದ ಕೆರೆಯ ಕಾಲುವೆಯಲ್ಲಿ ಯಾರೋ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪ್ರೊಬೇಷನರಿ ಡಿ.ಎಸ್.ಪಿ.ಸಾಹೇಬರು, ಶ್ರೀ.ಲಿಯಾಖತ್ ಉಲ್ಲಾ ಪಿಎಸ್ಐ (ಅ.ವಿ) ರವರು, ವೆಂಕಟಾಚಲಪ್ಪ ಎಎಸ್ಐ ಆದ ನನ್ನನ್ನು ಮತ್ತು ಪೊಲೀಸ್ ಸಿಬ್ಬಂದಿಯವರನ್ನು ಕರೆದುಕೊಂಡು, ಬೆಳ್ಳಾವಲಳ್ಳಿ ಗ್ರಾಮಕ್ಕೆ  ಹೋಗಿ, ಅಲ್ಲಿ ಪಂಚರನ್ನು ಕರೆದುಕೊಂಡು,  ಮಾಹಿತಿ ಇದ್ದ ಕೆರೆಯ ಕಾಲುವೆ ಬಳಿ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ,   ಕೆರೆಯ ಕಾಲುವೆಯಲ್ಲಿ  5 ಜನರು ಇದ್ದು, ಇವರಲ್ಲಿ  ಕೆಲವರು ಅಂದರ್ ಗೆ ಒಂದು ಸಾವಿರ  ರೂಪಾಯಿಗಳು,  ಬಾಹರ್ ಗೆ ಒಂದು ಸಾವಿರ  ರೂಪಾಯಿಗಳು ಎಂದು ಹಣವನ್ನು ಜೂಜಾಟಕ್ಕೆ ಕಟ್ಟಿ, ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿವುದನ್ನು ಖಚಿತ ಪಡಿಸಿಕೊಂಡು, ನಾವುಗಳು ಅವರನ್ನು ಸುತ್ತುವರಿದು ಹಿಡಿದುಕೊಂಡಿದ್ದು, ಒಬ್ಬ ತಪ್ಪಿಸಿಕೊಂಡು ಓಡಿಹೋಗಿರುತ್ತಾನೆ. 4  ಜನರು ಸಿಕ್ಕಿದು    ಅವರ ಹೆಸರು ವಿಳಾಸಗಳನ್ನು ಕೇಳಲಾಗಿ, 1) ಹರೀಶ್ ಕುಮಾರ್ ಬಿನ್ ಶ್ರೀರಾಮಪ್ಪ, 28 ವರ್ಷ,  ನಾಯಕ ಜನಾಂಗ, ವ್ಯಾಪಾರ ವಾಟದಹೊಸಹಳ್ಳಿ ಗ್ರಾಮ, 2) ಬಾಲಕೃಷ್ಣ ಬಿನ್ ಲೇಟ್ ತಿಮ್ಮಯ್ಯ, 32 ವರ್ಷ, ಕುಂಬಾರ ಜನಾಂಗ, ಕೂಲಿ ಕೆಲಸ, ವಾಟದಹೊಸಹಳ್ಳಿ ಗ್ರಾಮ, 3)ಶಿವಪ್ಪಬಿನ್ ಅಶ್ವತ್ಥನಾರಾಯಣಪ್ಪ, 35 ವರ್ಷ,  ಬುಡುಗ ಜಂಗಮ ಜನಾಂಗ, ಚಾಲಕ ವೃತ್ತಿ,  ನಗರಗೆರೆ ಗ್ರಾಮ,  4) ರಾಮಾಂಜಿ ಬಿನ್ ಲೇಟ್ ನಾರಾಯಣಪ್ಪ, 33 ವರ್ಷ,  ಬುಡುಗ ಜಂಗಮ ಜನಾಂಗ, ಬೆಳ್ಳಾವಲಹಳ್ಳಿ ಗ್ರಾಮ,  ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಓಡಿಹೋದವನ ಹೆಸರು 5)ಲಕ್ಷ್ಮಿನಾರಾಯಣ ಗೌಡ ಬಿನ್ ವೆಂಕಟಶ್ಯಾಮಪ್ಪ, 59 ವರ್ಷ,  ಸಾದರ ಗೌಡರ ಜನಾಂಗ,  ಸೈಕಲ್ ರಿಪೇರಿ ಕೆಲಸ,  ವಾಟದಹೊಸಹಳ್ಳೀ ಎಂದು  ತಿಳಿಸಿರುತ್ತಾರೆ. ಸ್ಥಳದಲ್ಲಿ ಪರಿಶೀಲಿಸಲಾಗಿ, ಇಸ್ಟೀಟ್ ಎಲೆಗಳು, ಮತ್ತು ನಗದು ಹಣ ಚೆಲ್ಲಾಪಿಲ್ಲಿಯಾಗಿ  ಬಿದ್ದಿದ್ದು, ಇವುಗಳನ್ನು ಎಣಿಸಲಾಗಿ 9,200/- ರೂ ನಗದು ಹಣ ಹಾಗು 52 ಇಸ್ಪೀಟ್ ಎಲೆಗಳು ಇರುತ್ತವೆ. ಇವುಗಳನ್ನು ಡಿ.ಎಸ್.ಪಿ. ಸಾಹೇಬರು, ಪಂಚರ ಸಮಕ್ಷಮದಲ್ಲಿ ರಾತ್ರಿ 20-00 ರಿಂದ 20-30 ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಂಡಿರುತ್ತೆ. ರಾತ್ರಿ 21-15  ಗಂಟೆಗೆ ಠಾಣೆಗೆ ವಾಪಸ್ಸು ಬಂದು, ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

17) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 55/2019. ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ:07/04/2019 ರಂದು ಮದ್ಯಾಹ್ನ 15:00 ಗಂಟೆಗೆ ಮುರಳಿ ಕೆ.ವಿ – ಎ.ಎಸ್.ಐ ಗೌರಿಬಿದನೂರು ಪುರ ಠಾಣೆ ರವರು ನೀಡಿದ ವರದಿಯ ಸಾರಾಂಶವೇನೆಂದರೆ, ನಾನು  ಠಾಣೆಯಲ್ಲಿರುವಾಗ್ಗೆ ನಮ್ಮ ಪಿ.ಎಸ್.ಐ ರವರಿಗೆ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ಪುರದ ವಿನಾಯಕ ನಗರದ ಸತ್ಯಸಾಯಿ ಶಾಲೆ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಅಂದರ್ – ಬಾಹರ್ ಜೂಜಾಟವಾಡುತ್ತಿರುತ್ತಿರುವುದಾಗಿ ಮಾಹಿತಿ ಬಂದಿದ್ದರ ಮಾಹಿತಿಯನ್ನು ನಮಗೆ ತಿಳಿಸಿದ್ದು, ಕೂಡಲೇ ನಾವು  ಠಾಣೆಗೆ ಪಂಚರನ್ನು ಕರೆಯಿಸಿಕೊಂಡು ಅವರಿಗೆ ವಿಚಾರವನ್ನು ತಿಳಿಸಿದ್ದು, ಅವರು ಒಪ್ಪಿಕೊಂಡ ನಂತರ ನಾನು ಪಿ.ಎಸ್.ಐ ಸಾಹೇಬರವರೊಂದಿಗೆ, ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-135, ಹೆಚ್.ಸಿ-226, ಹೆಚ್.ಸಿ-244, ಹೆಚ್.ಸಿ-45, ಹೆಚ್,ಸಿ-214, ಹೆಚ್.ಸಿ-242, ಪಿಸಿ-455, ಪಿಸಿ-362, ಪಿ.ಸಿ-17, ರವರೊಂದಿಗೆ ಇಲಾಖೆಯಿಂದ ಒದಗಿಸಿರುವ ಸರ್ಕಾರಿ ವಾಹನದಲ್ಲಿ ಬಜಾರ್ ರಸ್ತೆಯ ಮಾರ್ಗವಾಗಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಕೋಟೆಯಲ್ಲಿ ವಾಹನವನ್ನು ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ ಎಲ್ಲರೂ ಕೆಳಕ್ಕೆ ಇಳಿದು ಸ್ವಲ್ಪ ದೂರ ಶಾಲೆಯ ಕಡೆಗೆ ನಡೆದುಕೊಂಡು ಹೋಗಿದ್ದು, ಶಾಲೆಯ ಹಿಂಭಾಗದಲ್ಲಿ ಸೀಮೆಜಾತಿ ಮರದ ಕೆಳಗೆ ಯಾರೋ ಆಸಾಮಿಗಳು 500 ರೂಪಾಯಿಗಳು ಅಂದರ್, ಎಂದು ಮತ್ತೊಬ್ಬ ಆಸಾಮಿಯು 500/- ರೂಪಾಯಿಗಳು ಬಾಹರ್ ಎಂದು ಕೂಗಾಡಿಕೊಂಡು ಜೂಜಾಟ ಆಡುತ್ತಿದ್ದುದ್ದನ್ನು ಖಾತ್ರಿ ಪಡಿಸಿಕೊಂಡು ಪಂಚರ ಸಮ್ಮುಖದಲ್ಲಿ ಎಲ್ಲರೂ ದಾಳಿ ಮಾಡಿ ಯಾರಿಗೂ ಓಡಬಾರದೆಂದು ತಿಳಿಸಿದರೂ ಇಸ್ಪೀಟ್ ಜೂಜಾಟವಾಡುತ್ತಿದ್ದ ಕೆಲವರು ಓಡಿಹೋಗಲು ಪ್ರಯತ್ನಿಸಿದ್ದು, ಸಿಬ್ಬಂದಿಯವರು ಅವರನ್ನು ಬೆನ್ನಟ್ಟಿಕೊಂಡು ಹೋಗಿ ಹಿಡಿದುಕೊಂಡಿರುತ್ತಾರೆ. ಅವರ ಹೆಸರು/ವಿಳಾಸಗಳನ್ನು ಕೇಳಿದಾಗ 1)ಲೋಕೇಶ್ ಜೆ ಬಿನ್ ಜಯಣ್ಣ, 31 ವರ್ಷ, ಬಲಜಿಗರ ಜನಾಂಗ, ವ್ಯವಸಾಯ, ವಾಸ: ಕೋಟೆ, ಗೌರಿಬಿದನೂರು 2)ರಮೇಶ್ ಬಿನ್ ಗಂಗಪ್ಪ, 41 ವರ್ಷ, ನಾಯಕ ಜನಾಂಗ, ಡ್ರೈವರ್ ಕೆಲಸ, ವಾಸ: ಕೋಟೆ, ಗೌರಿಬಿದನೂರು ಟೌನ್. 3)ಸಾಗರ್ ಬಿನ್ ವೇಣುಗೋಪಾಲ್, 30 ವರ್ಷ, ಬಲಜಿಗರ ಜನಾಂಗ, ವ್ಯಾಪಾರ, ವಾಸ: ಕೋಟೆ, 4)ರಮೇಶ್ ಬಿನ್ ವೆಂಕಟಾಚಲಪ್ಪ, 48 ವರ್ಷ, ಬಲಜಿಗರು, ಡ್ರೈವರ್ ಕೆಲಸ, ವಾಸ: ಕೋಟೆ, ಗೌರಿಬಿದನೂರು ಟೌನ್. 5)ಚಾಂದ್ ಪಾಷ ಬಿನ್ ಶೇಖ್ ಮಹಮದ್, 50 ವರ್ಷ, ಸೈಕಲ್ ಶಾಪ್, ಮರಿಸ್ವಾಮಿ ಗಲ್ಲಿ, ಗೌರಿಬಿದನೂರು ಟೌನ್. 6)ಲಕ್ಷ್ಮೀಶ ಬಿನ್ ಜಯಣ್ಣ, 36 ವರ್ಷ, ಬಲಜಿಗರು, ವ್ಯಾಪಾರ, ವಾಸ: ಕೋಟೆ, 7)ನಾಗೇಶ್ ಬಾಬು ಬಿನ್ ರಾಮಣ್ಣ, 32 ವರ್ಷ, ಬಲಜಿಗರ ಜನಾಂಗ, ಕೂಲಿ ಕೆಲಸ, ವಾಸ: ಕೋಟೆ, 8)ಬಾಬು ಬಿನ್ ಗಂಗಪ್ಪ, 45 ವರ್ಷ, ಕೂಲಿ ಕೆಲಸ, ಮಡಿವಾಳ ಜನಾಂಗ, ವಾಸ: ಕೋಟೆ, 9)ಖಾದರ್ ಬಿನ್ ಅಬ್ದುಲ್ ಬಷೀರ್, 30 ವರ್ಷ, ಮುಸ್ಲಿಂ ಜನಾಂಗ, ವಾಸ: ಪ್ರಶಾಂತ್ ನಗರ, ಗೌರಿಬಿದನೂರು ಟೌನ್. 10)ಅರುಣ್ ಕುಮಾರ್ ಬಿನ್ ಲೇಟ್ ಜಿ.ಎನ್. ಕೊಂಡಯ್ಯ, 29 ವರ್ಷ, ಬಲಜಿಗರ ಜನಾಂಗ, ವಾಸ: ವಿನಾಯಕ ನಗರ, ಗೌರಿಬಿದನೂರು ಟೌನ್. 11)ರಮೇಶ್ ಬಿನ್ ವೆಂಕಟಪ್ಪ, 45 ವರ್ಷ, ಡ್ರೈವರ್ ಕೆಲಸ, ಬಲಜಿಗರ ಜನಾಂಗ, ವಾಸ: ಉಪ್ಪಾರ ಕಾಲೋನಿ, ಗೌರಿಬಿದನೂರು ಟೌನ್ ಎಂದು ತಿಳಿಸಿದ್ದು, ಅವರಿಗೆ ಇಸ್ಪೀಟ್ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೆ ಪರವಾನಗಿ ಇಲ್ಲದೇ ಇದ್ದು, ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳನ್ನು ಮತ್ತು ಪಣಕ್ಕೆ ಕಟ್ಟಿದ್ದ ನಗದು ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತೆ. ಹಣವನ್ನು ಎಣಿಕೆ ಮಾಡಲಾಗಿ ಒಟ್ಟು ಹಣ 21679/- ರೂಪಾಯಿಗಳಿರುತ್ತದೆ. 13-45 ಗಂಟೆಯಿಂದ 14-45 ಗಂಟೆಯವರೆಗೆ ಪಂಚನಾಮೆಯನ್ನು ಠಾಣಾ ಲ್ಯಾಪ್ ಟಾಪ್ ನಲ್ಲಿ ಸಿದ್ದಪಡಿಸಿ ಪೆನ್ ಡ್ರೈವ್ ಮುಖಾಂತರ ಠಾಣೆಗೆ ಕಳುಹಿಸಿಕೊಟ್ಟು ಪ್ರೀಂಟ್ ತೆಗೆಯಿಸಿಕೊಂಡು ನಂತರ ಸ್ಥಳಕ್ಕೆ ಬಂದು ಹಾಜರುಪಡಿಸಿದ್ದು, ನಂತರ ಆರೋಪಿ ಹಾಗೂ ಮಾಲಿನೊಂದಿಗೆ ಮದ್ಯಾಹ್ನ 15-00 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ 143/2019 ಎನ್.ಸಿ.ಆರ್ ಅನ್ನು ದಾಖಲಿಸಿ ನಂತರ ನ್ಯಾಯಾಲಯದ ಅನುಮತಿ ಪಡೆದು ದಿನಾಂಕ:07/04/2019 ರಂದು 19:45 ಗಂಟೆಗೆ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

18) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 56/2019. ಕಲಂ. 87 ಕೆ.ಪಿ.ಆಕ್ಟ್:-

     ದಿನಾಂಕ:07/04/2019 ರಂದು ರಾತ್ರಿ 8:40 ಗಂಟೆಗೆ ಲಕ್ಷ್ಮೀನಾರಾಯಣಪ್ಪ ಎ.ಎಸ್.ಐ ಗೌರಿಬಿದನೂರು ಪುರ ಠಾಣೆ ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:07/04/2019 ರಂದು 19-15 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ ನಮ್ಮ ಪಿ.ಎಸ್.ಐ ರವರಿಗೆ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ಪುರದ ನೆಹರೂಜಿ ಕಾಲೋನಿಯ ಸಿದ್ದೇಶ್ವರ ದೇವಸ್ಥಾನದ ಮುಂಬಾಗದ ಸಾರ್ವಜನಿಕ ರಸ್ತೆಯಲ್ಲಿ ಯಾರೋ  ಆಸಾಮಿಗಳು ಅಂದರ್ – ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುತ್ತಿರುವುದಾಗಿ ಮಾಹಿತಿ ಬಂದಿದ್ದರ ಮಾಹಿತಿಯನ್ನು ನಮಗೆ ತಿಳಿಸಿದ್ದು, ಕೂಡಲೇ ನಾವು  ಠಾಣೆಗೆ ಪಂಚರನ್ನು ಕರೆಯಿಸಿಕೊಂಡು ಅವರಿಗೆ ವಿಚಾರವನ್ನು ತಿಳಿಸಿದ್ದು, ಅವರು ಒಪ್ಪಿಕೊಂಡ ನಂತರ ನಾನು ಪಿ.ಎಸ್.ಐ ಸಾಹೇಬರವರೊಂದಿಗೆ, ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-226, ಹೆಚ್.ಸಿ-135, ಹೆಚ್.ಸಿ-45, ಹೆಚ್,ಸಿ-214,  ರವರೊಂದಿಗೆ ಇಲಾಖೆಯಿಂದ ಒದಗಿಸಿರುವ ಸರ್ಕಾರಿ ವಾಹನದಲ್ಲಿ ಬೆಂಗಳೂರು ವೃತ್ತದ ರಸ್ತೆಯ ಮಾರ್ಗವಾಗಿ ನೆಹರೂಜಿ ಕಾಲೋನಿಯ ಸಿದ್ದೇಶ್ವರ ದೇವಸ್ಥಾನದ ಪಕ್ಕ  ನಿಲ್ಲಿಸಿ ಎಲ್ಲರೂ ಕೆಳಕ್ಕೆ ಇಳಿದು ಸ್ವಲ್ಪ ದೂರ  ಕಡೆಗೆ ನಡೆದುಕೊಂಡು ಹೋಗಿದ್ದು,  ಸಿದ್ದೇಶ್ವರ ದೇವಸ್ಥಾನದ ಮುಂಬಾಗದ ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಆಸಾಮಿಗಳು 100 ರೂಪಾಯಿಗಳು ಅಂದರ್, ಎಂದು ಮತ್ತೊಬ್ಬ ಆಸಾಮಿಯು 100/- ರೂಪಾಯಿಗಳು ಬಾಹರ್ ಎಂದು ಕೂಗಾಡಿಕೊಂಡು ಜೂಜಾಟ ಆಡುತ್ತಿದ್ದುದ್ದನ್ನು ಖಾತ್ರಿ ಪಡಿಸಿಕೊಂಡು ಪಂಚರ ಸಮ್ಮುಖದಲ್ಲಿ ಎಲ್ಲರೂ ದಾಳಿ ಮಾಡಿ ಯಾರಿಗೂ ಓಡಬಾರದೆಂದು ತಿಳಿಸಿ  ಅವರ ಹೆಸರು/ವಿಳಾಸಗಳನ್ನು ಕೇಳಿದಾಗ 1) ಸುಬ್ಬಣ್ಣ ಬಿನ್ ಲೇಟ್ ದೊಡ್ಡಗಂಗಪ್ಪ, 45  ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ನೆಹರೂಜಿ ಕಾಲೋನಿ, ನೆಹರೂಜಿ ಕಾಲೋನಿ, ಗೌರಿಬಿದನೂರು ಪುರ  2) ಮುದ್ದಪ್ಪ ಬಿನ್ ಲೇಟ್ ಮಲ್ಲಪ್ಪ, 48 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ನೆಹರೂಜಿ ಕಾಲೋನಿ, ಗೌರಿಬಿದನೂರು ಪುರ 3) ಸಂಜಯ್ ಬಿನ್ ರಾಜು, 19 ವರ್ಷ, ಕ್ರಿಶ್ಚಿಯನ್ನರು, ಮಾಧವನಗರ, ಗೌರಿಬಿದನೂರು ಪುರ 4) ರಮೇಶ ಬಿನ್ ಗಂಗಪ್ಪ, 47 ವರ್ಷ, ಎ.ಕೆ ಜನಾಂಗ, ಶ್ರೀನಗರ, ಗೌರಿಬಿದನೂರು ಪುರ 5)ಅಂಜಿನಪ್ಪ ಬಿನ್ ಗಂಗಪ್ಪ, 32 ವರ್ಷ, ಶ್ರೀನಗರ, ಗೌರಿಬಿದನೂರು ಪುರ ಎಂದು ತಿಳಿಸಿದ್ದು, ಅವರಿಗೆ ಇಸ್ಪೀಟ್ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೆ ಪರವಾನಗಿ ಇಲ್ಲದೇ ಇದ್ದು, ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳನ್ನು ಮತ್ತು ಪಣಕ್ಕೆ ಕಟ್ಟಿದ್ದ ನಗದು ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತೆ. ಹಣವನ್ನು ಎಣಿಕೆ ಮಾಡಲಾಗಿ ಒಟ್ಟು ಹಣ 4940/- ರೂಪಾಯಿಗಳಿರುತ್ತದೆ. 19-30 ಗಂಟೆಯಿಂದ 20-15 ಗಂಟೆಯವರೆಗೆ ಪಂಚನಾಮೆಯನ್ನು ಠಾಣಾ ಲ್ಯಾಪ್ ಟಾಪ್ ನಲ್ಲಿ ಸಿದ್ದಪಡಿಸಿ ಪೆನ್ ಡ್ರೈವ್ ಮುಖಾಂತರ ಠಾಣೆಗೆ ಕಳುಹಿಸಿಕೊಟ್ಟು ಪ್ರೀಂಟ್ ತೆಗೆಯಿಸಿಕೊಂಡು ನಂತರ ಸ್ಥಳಕ್ಕೆ ಬಂದು ಹಾಜರುಪಡಿಸಿದ್ದು, ನಂತರ ಆರೋಪಿ ಹಾಗೂ ಮಾಲಿನೊಂದಿಗೆ ರಾತ್ರಿ 20-40 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಮುಂದಿನ ಕ್ರಮಕ್ಕಾಗಿ  ನೀಡಿದ ವರದಿಯ ಮೇರೆಗೆ ಠಾಣಾ ಎನ್.ಸಿ.ಆರ್ 144/2019 ರಂತೆ ಎನ್.ಸಿ.ಆರ್ ದಾಖಲಿಸಿಕೊಂಡು ದಿನಾಂಕ:08/04/2019 ರಂದು ಮದ್ಯಾಹ್ನ 12:00 ಗಂಟೆಗೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

19) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 75/2019. ಕಲಂ. 87 ಕೆ.ಪಿ ಆಕ್ಟ್ :-

     ಘನ ನ್ಯಾಯಾಲಯದಿಂದ ಠಾಣಾ ಎನ್,ಸಿ,ಆರ್ 93/2019 ರಲ್ಲಿ ಕಲಂ:87 ರೀತ್ಯಾ ಆರೋಪಿತರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಅನುಮತಿ ಪಡೆದುಕೊಂಡ ವರದಿಯ ಸಾರಾಂಶವೇನೆಂದರೆ, ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ವಿ,ಎಲ್ ರಮೇಶ  ರವರು ದಿನಾಂಕ:07-04-2019 ರಂದು ಸಂಜೆ 6-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ, ಠಾಣಾ ಸಿ,ಎಚ್,ಸಿ-102 ಆನಂದ ರವರು ತಮಗೆ ಪೋನ್ ಮಾಡಿ ಗುಡಿಬಂಡೆ ಪಟ್ಟಣದಲ್ಲಿ ಏಳು ಅಕ್ಕಯ್ಯಮ್ಮ ಗುಡಿ ಬಳಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಗುಪ್ತ ಮಾಹಿತಿ ಬಂದಿದೆಂದು ತನಗೆ ತಿಳಿಸಿದರ ಮೇರೆಗೆ, ತಾನು ಠಾಣಾ ಸಿಬ್ಬಂದಿಯಾದ ಸಿ,ಪಿ,ಸಿ-438 ನರಸಿಂಹಂಮೂರ್ತಿ, ಸಿ,ಪಿ,ಸಿ-88 ರಮೇಶ, ರವರನ್ನು ಕರೆದುಕೊಂಡು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-47 ವೆಂಕಟಚಲಪತಿ ರವರೊಂದಿಗೆ  ಗುಡಿಬಂಡೆ ಪಟ್ಟಣದ ಮಾರುತಿ ಸರ್ಕಲ್ ಬಳಿ ಸಿಬ್ಬಂದಿ ಆನಂದ ರವರನ್ನು & ಸ್ಥಳದಲ್ಲಿ ದೊರೆತ ಪಂಚರನ್ನು ಕರೆದುಕೊಂಡು ಸದರಿ ಸ್ತಳಕ್ಕೆ ಹೋಗಿ, ಮರೆಯಲ್ಲಿ ಜೀಪನ್ನು ನಿಲ್ಲಿಸಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದವರ ಮೇಲೆ ಪಂಚರ ಸಮಕ್ಷಮ ಧಾಳಿ ಮಾಡಿದಾಗ, ಆ ಪೈಕಿ ಜೂಜಾಟದಲ್ಲಿ ತೊಡಗಿದ್ದವರವನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1)ಅಲ್ಲಾ ಬಕಾಶ್ ಬಿನ್ ಲೇಟ್ ಷರೀಪ್ ಸಾಬ್,50 ವರ್ಷ, ಮುಸ್ಲೀಂ, ಗಾರೆ ಕೆಲಸ, ವಾಸ- ಭತ್ತಲಪಲ್ಲಿ ಗ್ರಾಮ, ಗುಡಿಬಂಡೆ ತಾಲೂಕು, 2)ಅನ್ಸರ್ ಬಿನ್ ಸನಾವುಲ್ಲಾ 28 ವರ್ಷ, ಮುಸ್ಲೀಂ, ಗಾರೆ ಕೆಲಸ, ವಾಸ-ಖಾಜಿಪೇಟೆ ಗುಡಿಬಂಡೆ ಟೌನ್, 3)ಗಂಗಾಧರ ಬಿನ್ ಲೇಟ್ ಆದಿಮೂರ್ತಿ 40 ವರ್ಷ, ಕೂಲಿ ಕೆಲಸ, ವಾಸ-ತಿರುಮಲ ನಗರ, ಗುಡಿಬಂಡೆ ಪಟ್ಟಣ 4)ಆದಿನಾರಾಯಣಪ್ಪ ಬಿನ್ ಲೇಟ್ ವೆಂಕಟಪ್ಪ 34 ವರ್ಷ, ನಾಯಕರು, ಟ್ರಾಕ್ಟರ್ ಚಾಲಕ, ವಾಸ-ತಿರುಮಲ ನಗರ, ಗುಡಿಬಂಡೆ ಪಟ್ಟಣ, 5) ಸುರೇಶ ಬಿನ್ ಚಿಕ್ಕ ರಾಮಪ್ಪ 25 ವರ್ಷ, ನಾಯಕರು, ಕಂಬಿ ಕೆಲಸ, ವಾಸ-ಬೊಮ್ಮನಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು, ಸದರಿಯವರನ್ನು ಪರಿಶೀಲಿಸಲಾಗಿ, ಸದರಿಯವರು ಇಸ್ಪೀಟ್ ಜೂಜಾಟದಲ್ಲಿ ತೊಡಗಿಸಿದಂತ 6350 ಹಣವನ್ನು & ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ಸ್ಥಳದಲ್ಲಿದ್ದ ಕೆ,ಎ-01 ಯು-7031 ನೊಂದಣಿಯ ಪ್ಯಾಷನ್ ದ್ವಿ ಚಕ್ರ ವಾಹನದ ಕೇಳಲಾಗಿ, 4) ಆದಿನಾರಾಯಣಪ್ಪ ರವರು ತಾನು ಸ್ಥಳಕ್ಕೆ ಜೂಜಾಟ ಆಡಲು ಸದರಿ ವಾಹನದಲ್ಲಿ ಬಂದಿರುವುದಾಗಿ ತಿಳಿಸಿದ್ದು, ನಂತರ ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಸಂಜೆ 6-45 ಗಂಟೆಯಿಂದ ರಾತ್ರಿ 7-30 ಗಂಟೆಯಲ್ಲಿ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿದ್ದ, ರಾತ್ರಿ 8-00 ಗಂಟೆಯಲ್ಲಿ ಠಾಣೆಯಲ್ಲಿ ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ದೂರು ಆಗಿರುತ್ತೆ.

20) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 34/2019. ಕಲಂ. 87 ಕೆ.ಪಿ.ಆಕ್ಟ್ :-

     ದಿನಾಂಕ 07-04-2019 ರಂದು ಸಂಜೆ 17-10 ಗಂಟೆಗೆ ಪಿಎಸೈರವರಾದ ಶ್ರೀ ಬಿಕೆ ಪಾಟೀಲ್ ರವರು ದಾಳಿ ನಡೆಯಸಿದ್ದ ಆರೋಫಿತರು, ಮಾಲು ಮತ್ತು ಪಂಚನಾಮೆಯನ್ನು ಹಾಜರ್ಪಡಿಸಿ ಆರೋಪಿತರ ವಿರುದ್ದ  ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ನೀಡಿದ ಜ್ಞಾಪನದ ಸಾರಾಂಶವೇನೆಂದರೆ ತಾನು ಇದೇ ದಿನ ಮದ್ಯಾಹ್ನ 14-30 ಗಂಟೆ ಸಮಯದಲ್ಲಿ ನಾನು ಗ್ರಾಮಗಳ ಕಡೆ ಸಿಬ್ಬಂದಿ ಯೊಂದಿಗೆ ಗಸ್ತಿನಲ್ಲಿದ್ದಾಗ ನನಗೆ ಬಂದ ಮಾಹಿತಿ ಎನೆಂದರೆ ಅರಸನಹಳ್ಳಿ  ಗ್ರಾಮದ  ಶ್ರೀ,ಸಾಯಿಬಾಬಾ ದೇವಾಲಯದ ಬಳಿ ಜನರು ಗುಂಪಾಗಿ ಕುಳಿತುಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡು ತ್ತಿರುವುದಾಗಿ ಪಿಎಸ್ಐ ರವರಿಗೆ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ದಾಳಿ ನಡೆಸಲು ಪಂಚರು ಹಾಗೂ ಪೊಲೀಸ್ ಸಿಬ್ಬಂದಿಗಳಾದ ಹೆಚ್.ಸಿ-94ಪ್ರಕಾಶ್, ಹೆಚ್,ಸಿ 230 ನಾಗರಾಜು ಹೆಚ್,ಸಿ 234 ಶೇಖರ ಪಿಸಿ-06 ರಾಮಕೃಷ್ಣ, ರವರುಗಳೊಂದಿಗೆ  ಮದ್ಯಾಹ್ನ 15:00 ಗಂಟೆಗೆ  ಇಸ್ಪೀಟ್ ಆಡುತ್ತಿದ್ದ  ಜೂಜಾಟದ ಸ್ಥಳದ ಬಳಿಗೆ ಹೊಗಿ ಮರೆಯಲ್ಲಿ ನಿಂತು ನೊಡಲಾಗಿ ಅಂದರ್ಗೆ 500/-ರೂ ಗಳೆಂದು, ಬಾಹರ್ಗೆ 500/- ರೂಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದು ಕಂಡು ಬಂದಿದ್ದು ಅವರ ಮೇಲೆ ದಾಳಿ ಮಾಡಿದಾಗ ಜೂಜಾಟ ವಾಡುತ್ತಿದ್ದ  ಜನರು ಓಡಿ ಪರಾರಿಯಾಗಲು ಪ್ರಯತ್ನಿಸಿದರು. ಅವರನ್ನು ಜೊತೆಯಲ್ಲಿದ್ದ ಸಿಬ್ಬಂದಿ 5 ಜನರನ್ನು ತಮ್ಮ ವಶಕ್ಕೆ ಪಡೆದುಕೊಂಡರು  ಸ್ಥಳದಲ್ಲಿ ಸೆರೆಸಿಕ್ಕವರ ಹೆಸರು ವಿಳಾಸ ಕೇಳಲಾಗಿ 1) ಮಂಜುನಾಥ ಬಿನ್ ದಾಸಪ್ಪ 29 ವರ್ಷ ಬಲಜಿಗರು  ಟ್ರಾಕ್ಟರ್ ಚಾಲಕ ಅರಸನಹಳ್ಳಿ  ಗ್ರಾಮ  ಚಿಕ್ಕಬಳ್ಳಾಪುರ ತಾಲ್ಲೂಕು  2)ಮುನಿರಾಜು ಬಿನ್ ಲೇಟ್ ಶ್ರೀನಿವಾಸ 35 ವರ್ಷ ಗೊಲ್ಲರು  ಮಹೇಶ್ವರಿ ಗ್ಯಾಸ್  ಸಪ್ಲೆಯರ್  ಸುಲ್ತಾನಪೇಟೆ ಗ್ರಾಮ 3) ಪ್ರವೀಣ್ ಬಿನ್ ಚಂದ್ರಪ್ಪ 24 ವರ್ಷ ಬೋವಿ ಜನಾಂಗ ಟೀ ವ್ಯಾಪಾರ ಅರಸನಹಳ್ಳಿ  ಗ್ರಾಮ  4) ಶಿವ ಬಿನ್ ಮುನಿನರಸಪ್ಪ 26 ವರ್ಷ ನಾಯಕರು ಕೂಲಿ ಕೆಲಸ ಗೌಚೇನಹಳ್ಳಿ  ಗ್ರಾಮ  5) ನವೀನ್ಕುಮಾರ್ ಬಿನ್ ಮುನಿಶ್ಯಾಮಿ 21 ವರ್ಷ ನಾಯಕರು ಜೆಸಿಬಿ ಚಾಲಕ  ಅರಸನಹಳ್ಳಿ  ಗ್ರಾಮ  ಎಂಬುದಾಗಿ  ತಿಳಿಸಿದರು, ,ಈ ಅಸಾಮಿಗಳು ಅಂದರ್-ಬಾಹರ್ ಜೂಜಾಟವಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಕಲ್ಲು ಬಂಡೆಗಳ ಮೇಲೆ  ಇಸ್ಫೀಟ್ ಎಲೆಗಳು ಮತ್ತು  ಹಣವು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಪಂಚರ ಸಮಕ್ಷಮ ಇಸ್ಪೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳು ಇರುತ್ತವೆ, ಬಿದ್ದಿದ್ದ  ಹಣವನ್ನು ಎಣಿಕೆ ಮಾಡಲಾಗಿ 8320/-ರೂ ನಗದು ಹಣ ಇರುತ್ತೆ. ಸದರಿ 52 ಇಸ್ಪೀಟ್ ಎಲೆಗಳನ್ನು, 8320/- ರೂ ಹಣವನ್ನು ಮದ್ಯಾಹ್ನ 15-00 ಗಂಟೆಯಿಂದ ಸಂಜೆ 16-30 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಸಂಜೆ 17-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಫಿತರ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು  ನೀಡಿದ ಜ್ಷಾಪನದ ಮೇರೆಗೆ ಈ ಪ್ರವವರದಿ.

21) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 35/2019. ಕಲಂ. 87 ಕೆ.ಪಿ.ಆಕ್ಟ್ :-

     ದಿನಾಂಕ 07-04-2019 ರಂದು ಸಂಜೆ 19-10 ಗಂಟೆಗೆ ಪಿಎಸೈರವರಾದ ಶ್ರೀ ಬಿಕೆ ಪಾಟೀಲ್ ರವರು ದಾಳಿ ನಡೆಯಸಿದ್ದ ಆರೋಫಿತರು, ಮಾಲು ಮತ್ತು ಪಂಚನಾಮೆಯನ್ನು ಹಾಜರ್ಪಡಿಸಿ ಆರೋಪಿತರ ವಿರುದ್ದ  ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ನೀಡಿದ ಜ್ಞಾಪನದ ಸಾರಾಂಶವೇನೆಂದರೆ ತಾನು ಇದೇ ದಿನ ¸ಸಂಜೆ 5-30 ಗಂಟೆ ಸಮಯದಲ್ಲಿ ಪಿಎಸ್ಐ ರವರು ಮುದ್ದೇನಹಳ್ಳಿ ಗ್ರಾಮದ ಕಡೆ ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಅವರಿಗೆ ಬಂದ ಮಾಹಿತಿ ಎನೆಂದರೆ ಬಂಡಹಳ್ಳಿ ಗ್ರಾಮದ  ಶ್ರೀ, ಗೋವಿಂದಪ್ಪ ರವರ ಜಮೀನಿನಲ್ಲಿರುವ ಹಲಸಿನ ಮರದಡಿಯಲ್ಲಿ  ಜನರು ಗುಂಪಾಗಿ ಕುಳಿತುಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಪಿಎಸ್ಐ ರವರಿಗೆ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ದಾಳಿ ನಡೆಸಲು ಪಂಚರು ಹಾಗೂ ಪೊಲೀಸ್ ಸಿಬ್ಬಂದಿಗಳಾದ ಹೆಚ್.ಸಿ-94ಪ್ರಕಾಶ್, ಹೆಚ್,ಸಿ 230 ನಾಗರಾಜು ಹೆಚ್,ಸಿ 234 ಶೇಖರ ಪಿಸಿ-06 ರಾಮಕೃಷ್ಣ, ರವರುಗಳೊಂದಿಗೆ  ಸಂಜೆ 17:30 ಗಂಟೆಗೆ  ಇಸ್ಪೀಟ್ ಆಡುತ್ತಿದ್ದ  ಜೂಜಾಟದ ಸ್ಥಳದ ಬಳಿಗೆ ಹೊಗಿ ಮರೆಯಲ್ಲಿ ನಿಂತು ನೊಡಲಾಗಿ ಅಂದರ್ಗೆ 400/-ರೂ ಗಳೆಂದು, ಬಾಹರ್ಗೆ 400/- ರೂಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದು ಕಂಡು ಬಂದಿದ್ದು ಅವರ ಮೇಲೆ ದಾಳಿ ಮಾಡಿದಾಗ ಜೂಜಾಟ ವಾಡುತ್ತಿದ್ದ  ಜನರು ಓಡಿ ಪರಾರಿಯಾಗಲು ಪ್ರಯತ್ನಿಸಿದರು. ಅವರನ್ನು ಜೊತೆಯಲ್ಲಿದ್ದ ಸಿಬ್ಬಂದಿ 5 ಜನರನ್ನು ತಮ್ಮ ವಶಕ್ಕೆ ಪಡೆದುಕೊಂಡರು ಸ್ಥಳದಲ್ಲಿ ಸೆರೆಸಿಕ್ಕವರ ಹೆಸರು ವಿಳಾಸ ಕೇಳಲಾಗಿ  1) ಮಹೇಶ ಬಿನ್ ಬಸವರಾಜ್ 32 ವರ್ಷ ಲಂಗಾಯಿತರು ಟ್ರಾಕ್ಟರ್ ಚಾಲಕ ತಿರ್ನಹಳ್ಳಿ ಗ್ರಾಮ 2)ಹರೀಶ  ಬಿನ್ ಲೇಟ್  ವೆಂಕಟೇಶಪ್ಪ 29 ವರ್ಷ ಬಲಜಿಗರು ಲಾರಿ ಚಾಲಕ ತಿರ್ನಹಳ್ಳಿ   ಗ್ರಾಮ 3) ನವಾಜ್ ಪಾಷ ಬಿನ್ ಎಂಡಿ ನವಾಬ್ 38 ವರ್ಷ  ಮುಸ್ಲಿಂ ಜನಾಂಗ ಅಗರಬತ್ತಿ ವ್ಯಾಪಾರ ನೆಂ 20-22 ಮಂಜುರವರ ಮನೆಯಲ್ಲಿ  ಬಾಡಿಗೆ ಬ್ರೈಟ್ ಸ್ಕೂಲ್ ಮುಂಬಾಗ ಮದರ್ ಥೆರೆಸಾ ನಗರ ಇಸ್ಲಾಂಪುರ 12 ನೇ ವಾರ್ಡ  ಚಿಕ್ಕಬಳ್ಳಾಪುರ ಟೌನ್ ಎಂಭುದಾಗಿ  ತಿಳಿಸಿದರು, ಈ ಅಸಾಮಿಗಳು ಅಂದರ್-ಬಾಹರ್ ಜೂಜಾಟವಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದ ಮೇಲೆ   ಇಸ್ಫೀಟ್ ಎಲೆಗಳು ಮತ್ತು  ಹಣವು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಪಂಚರ ಸಮಕ್ಷಮ ಇಸ್ಪೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳು ಇರುತ್ತವೆ, ಬಿದ್ದಿದ್ದ  ಹಣವನ್ನು ಎಣಿಕೆ ಮಾಡಲಾಗಿ 2000/-ರೂ ನಗದು ಹಣ ಇರುತ್ತೆ. ಸದರಿ 52 ಇಸ್ಪೀಟ್ ಎಲೆಗಳನ್ನು, 2000/- ರೂ ಹಣವನ್ನು ಸಂಜೆ 17-45 ಗಂಟೆಯಿಂದ ಸಂಜೆ 18-30 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಸಂಜೆ 19-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಫಿತರ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು  ನೀಡಿದ ಜ್ಷಾಪನದ ಮೇರೆಗೆ ಈ ಪ್ರವವರದಿ.

22) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 36/2019. ಕಲಂ. 143, 147, 148, 323, 324, 504, 506 ರೆ/ವಿ 149 ಐ.ಪಿ.ಸಿ :-

     ದಿನಾಂಕ: 07.04.2019 ರಂದು ರಾತ್ರಿ 8-30 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದ ಗಾಯಾಳು ಗಣೇಶ್  ರವರು ವೈದ್ಯರ ಸಮಕ್ಷಮದಲ್ಲಿ ನೀಡಿರುವ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ: 07.04.2019 ರಂದು ಸಂಜೆ 5-30 ಗಂಟೆಯಲ್ಲಿ ತನ್ನ ಅಣ್ಣನ ಮಗನಾದ ಬಾಬು ಮತ್ತು ಮುನಿರಾಜು ರವರ ಮಕ್ಕಳು ಗಲಾಟೆ ಮಾಡಿಕೊಂಡ ವಿಚಾರದಲ್ಲಿ ತಮ್ಮ ಗ್ರಾಮದ  ರಾಜು ಬಿನ್ ನಾಗರಾಜು, ರಂಜಿತ್ ಬಿನ್ ಮುನಿರಾಜು, ವೆಂಕಟೇಶ್ ಬಿನ್ ಪಿಳ್ಳವೆಂಕಟರಾಯಪ್ಪ, ಸೀನ ಬಿನ್ ವೆಂಕಟೇಶ್, ಮುನಿರಾಜು ಬಿನ್ ಪಿಳ್ಳಪ್ಪ, ಗಂಗರಾಜು ಬಿನ್ ಪಿಳ್ಳಪ್ಪ ಹಾಗೂ ನಾಗ ಬಿನ್ ಪಿಳ್ಳವೆಂಕಟರಾಯಪ್ಪ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ತನ್ನ ಅಣ್ಣ ಮುನಿರಾಜು ರವರ ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡುತ್ತಿದ್ದಾಗ ಏಕೆ ಈ ರೀತಿ ಗಲಾಟೆ ಮಾಡುತ್ತಿದ್ದೀರಿ ಏನಾದರೂ ಇದ್ದರೆ ಕುಳಿತು ಮಾತನಾಡಿಕೊಳ್ಳೋಣ ಎಂದು ಕೇಳುತ್ತಿದ್ದಾಗ  ಮೇಲ್ಕಂಡ ಎಲ್ಲರೂ  ಏಕಾಏಕಿಯಾಗಿ   ತನ್ನ  ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ರಂಜಿತ  ಎಂಬುವನು ತನ್ನ ಕೈಯ್ಯಲ್ಲಿದ್ದ ಚಾಕುವಿನಿಂದ ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದ ನಂತರ ರಾಜು ಎಂಬುವರು ದೊಣ್ಣೆಯಿಂದ ತನ್ನ ಎಡಗಾಲಿನ ಪಾದಕ್ಕೆ ಹೊಡೆದು ಮೂಗೇಟು ಮಾಡಿದರು ನಂತರ ಅದೇ ದೊಣ್ಣೆಯನ್ನು ನಾಗ ಎಂಬುವರು ತೆಗೆದುಕೊಂಡು ತನ್ನ ಮೈಕೈಗೆ ಹೊಡೆದು ಮೂಗೇಟು ಮಾಡಿರುತ್ತಾರೆ. ಇನ್ನುಳಿದವರು ಕೈಕಾಲುಗಳಿಂದ ಹೊಡೆದು ತನಗೆ ಮೈಕೈಗೆ ನೋವುಂಟು ಮಾಡಿ ನಿನಗೆ ಒಂದು ಗತಿ ಕಾಣಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕುತ್ತಿದ್ದಾಗ ಅಲ್ಲೆ ಇದ್ದ ನಮ್ಮೂರಿನ ಶ್ರೀನಿವಾಸ, ಚಿನ್ನಪ್ಪ ಮತ್ತು ಸಾಕಮ್ಮ ರವರು ಗಳು ಜಗಳ ಬಿಡಿಸಿ ನಮ್ಮ ಅಣ್ಣನ ಮಗ ಪ್ರಶಾಂತ್ ರವರ ಜೊತೆಯಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ. ಈ ಘಟನೆಗೆ ಕಾರಣರಾದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆಯ ದೂರು ಆಗಿರುತ್ತದೆ.

23) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 27/2019. ಕಲಂ. 15(A), 32(3) ಕೆ.ಇ.ಆಕ್ಟ್ :-:-

     ದಿನಾಂಕ:08/04/2019 ರಂದು ಫಿರ್ಯಾದಿದಾರರು ಮದ್ಯಾಹ್ನ 12-15 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:08/04/2019 ರಂದು ಬೆಳಗ್ಗೆ 09-30 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು  ಪೈಪಾಳ್ಯ ಗ್ರಾಮದಲ್ಲಿ ಚಿಲ್ಲರೆ ಅಂಗಡಿಯ ಬಳಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ಪೈಪಾಳ್ಯ ಗ್ರಾಮದ ಚಿಲ್ಲರೆ ಅಂಗಡಿಯ ಬಳಿಗೆ ಹೋಗಲಾಗಿ ನಾವು ಹೋಗಿದ್ದ ಜೀಪನ್ನು ನೋಡಿ ಚಿಲ್ಲರೆ ಅಂಗಡಿಯ ಮುಂಬಾಗದಲ್ಲಿದ್ದ ಯಾರೋ ಒಬ್ಬರು ಓಡಿ ಹೋಗಿದ್ದು ಚಿಲ್ಲರೆ ಅಂಗಡಿಯ ಬಳಿ ಒಬ್ಬ ಆಸಾಮಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ನಂಜುಂಡಪ್ಪ ಬಿನ್ ಲಕ್ಷ್ಮನ್ನ, 60 ವರ್ಷ ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ ಪೈಪಾಳ್ಯ  ಗ್ರಾಮ  ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ 22  ಹೈ ವಾರ್ಡ್ಸ್ ಚೀರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕಟ್ ಗಳು (ಸುಮಾರು  660/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ ನೀರಿನ ಬಾಟಲ್ ಮತ್ತು 02 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 01 ಖಾಲಿ ಹೈ ವಾರ್ಡ್ಸ್ ಚೀರ್ಸ್ ವಿಸ್ಕಿ ಟೆಟ್ರಾ ಪಾಕೆಟ್ ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ, ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ 27/2019 ಕಲಂ 15(ಎ) 32 (3) KE ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.