ದಿನಾಂಕ : 08/03/2019ರ ಅಪರಾಧ ಪ್ರಕರಣಗಳು

1) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.58/2019 ಕಲಂ. 143-323-341-504-506 ರೆ/ವಿ 149 ಐ.ಪಿ.ಸಿ:-

     ದಿನಾಂಕ 07-03-2019 ರಂದು ಸಂಜೆ 7-00 ಗಂಟೆಗೆ ಶ್ರೀ ಹೆಚ್.ಎಂ ಚರಣ್ ರಾಜ್ ಬಿನ್ ಹೆಚ್.ಸಿ ಮುನೇಗೌಡ, 24 ವರ್ಷ, ಗೊಲ್ಲರು, ವ್ಯಾಪಾರ., ವಾಸ-ವೈ.ಹುಣಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಶಿಡ್ಲಘಟ್ಟ ತಾಲ್ಲೂಕು ವೈ.ಹುಣಸೇನಹಳ್ಳಿ ಗ್ರಾಮದ ಗೇಟ್ ನಲ್ಲಿ ಕಾಂಡಿಮೆಂಟ್ಸ್ ಅನ್ನು ಇಟ್ಟುಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ 04/03/2019 ರಂದು ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಾಸಿಗಳಾದ ರಾಕೇಶ್ ಬಿನ್ ಕೆಂಪರೆಡ್ಡಿ ಮತ್ತು ಪ್ರಸನ್ನ ಬಿನ್ ಸೀತಪ್ಪ ರವರು ತನ್ನ ಅಂಗಡಿಯ ಬಳಿಗೆ ಬಂದು ಸಿಗರೇಟ್ ಗಳನ್ನು ತೆಗೆದುಕೊಂಡು ಸೇವನೆ ಮಾಡಿರುತ್ತಾರೆ. ನಂತರ ತಾನು ಅವರಿಗೆ ಸಿಗರೇಟ್ ನ ಹಣನವನ್ನು ಕೇಳಿದ್ದಕ್ಕೆ ಅವರು ತನಗೆ ಕೆಟ್ಟ ಮಾತುಗಳಿಂದ ಬೈದು, ನೀನು ತಮಗೆ ರೌಡಿ ಮಾಮೂಲಿ ಕೊಡುವುದು ಬಿಟ್ಟು ತಮಗೆ ಹಣವನ್ನು ಕೇಳುತ್ತೀಯಾ ಎಂದು ಬೆದರಿಕೆ ಹಾಕಿದಾಗ ತಾನು ಅವರಿಗೆ ಮರ್ಯಾದೆಯಾಗಿ ಹಣವನ್ನು ಕೊಟ್ಟು ಹೋಗಿ ಎಂದು ಹೇಳಿದಾಗ ಮೇಲ್ಕಂಡವರು ತನಗೆ ಕೈಗಳಿಂದ ಮೈ ಮೇಲೆ ಹೊಡೆದು ತನ್ನನ್ನು ಕುರಿತು ಇನ್ನು 2-3 ದಿನಗಳಲ್ಲಿ ಮುಗಿಸಿ ಬಿಡುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ 07/03/2019 ರಂದು ತಾನು ತನ್ನ ಅಂಗಡಿಗೆ ಬೇಕಾದ ಸಾಮಾನುಗಳನ್ನು ಖರೀದಿ ಮಾಡಲು ತನ್ನ ಬಾಬತ್ತು ಕೆಎ-40-ಜೆ-2384 ದ್ವಿ ಚಕ್ರ ವಾಹನದಲ್ಲಿ ಚಿಂತಾಮಣಿಗೆ ಬಂದು ಅಂಗಡಿಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ವಾಪಸ್ಸು ತಮ್ಮ ಗ್ರಾಮಕ್ಕೆ ಹೋಗಲು ಇದೇ ದಿನ ಬೆಳಿಗ್ಗೆ ಸುಮಾರು 8-45 ಗಂಟೆ ಸಮಯದಲ್ಲಿ ಇದೇ ಚಿಂತಾಮಣಿ ತಾಲ್ಲೂಕು ಅಮಿಟಿಗಾನಹಳ್ಳಿ ಗ್ರಾಮದ ಬಳಿ ಇರುವ ಚಿಕ್ಕಬಳ್ಳಾಪುರ-ಚಿಂತಾಮಣಿ ರಸ್ತೆಯ ಬ್ರಿಡ್ಜ್ ಬಳಿ ನಾನು ನನ್ನ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಈ ಸಮಯದಲ್ಲಿ ಯಾರೋ 4 ಜನ ಆಸಾಮಿಗಳು ಕೆಎ-05-ಜಡ್-1298 ಕಾರಿನಲ್ಲ್ಲಿ ತನ್ನನ್ನು ಹಿಂಬಾಲಿಸಿಕೊಂಡು ಬಂದು ಏಕಾಏಕಿ ತನ್ನ ದ್ವಿ ಚಕ್ರ ವಾಹನವನ್ನು ಅಡ್ಡಗಟ್ಟಿ ಕಾರಿನಿಂದ ಇಳಿದು ಕಾರಿನಲ್ಲಿದ್ದ ಮಾರಕಾಸ್ತ್ರಗಳನ್ನು ಎತ್ತಿಕೊಂಡು ನನ್ನ ಬಳಿ ಬಂದು ನನ್ನ ಮೇಲೆ ಹಲ್ಲೆ ಮಾಡಲು ಮುಂದಾದಾಗ ನಾನು ಅವರಿಂದ ತಪ್ಪಿಸಿಕೊಂಡು ಅಮಿಟಿಗಾನಹಳ್ಳಿ ಗ್ರಾಮಸ್ಥರ ಬಳಿ ಓಡಿ ಹೋಗಿರುತ್ತೇನೆ. ನಂತರ ಮೇಲ್ಕಂಡ ಆಸಾಮಿಗಳು ತಾವು ಬಂದಿದ್ದ ಕಾರಿನ ಸಮೇತವಾಗಿ ಅಲ್ಲಿಂದ ಪರಾರಿಯಾಗಿರುತ್ತಾರೆ. ಮೇಲ್ಕಂಡ ರಾಕೇಶ್ ಮತ್ತು ಪ್ರಸನ್ನ ರವರೇ ತನಗೆ ಈ ಹಿಂದೆ ತಮ್ಮ ಅಂಗಡಿಯ ಬಳಿ ನಡೆದಿದ್ದ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಯಾರೋ ಜನ ಆಸಾಮಿಗಳಿಂದ ತನ್ನ ಮೇಲೆ ಹಲ್ಲೆ ಮಾಡಲು ಕಳುಹಿಸಿ ಕೊಟ್ಟಿರುತ್ತಾರೆ. ಆದ ಕಾರಣ ಮೇಲ್ಕಂಡ ಆಸಾಮಿಗಳ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿರುತ್ತೆ.

2) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.47/2019 ಕಲಂ. 323-324-341-504 ರೆ/ವಿ 34 ಐ.ಪಿ.ಸಿ:-

     ದಿನಾಂಕ:08/03/2019 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಗಾಯಾಳು ಫಯಾಜ್  ಪಾಷ ಬಿನ್ ಖುದ್ದೂಸ್ ಖಾನ್ 40 ವರ್ಷ, ಮುಸ್ಲಿಂರು,  ಲಾರಿ ಡ್ರೈವರ್, ಕೆಲಸ,  ವಾಸ: ವೆಂಕಟಗಿರಿಕೋಟೆ, ಚಿಂತಾಮಣಿ ನಗರ ರವರ ಹೇಳಿಕೆ ಪಡೆದಿದ್ದರ ಸಾರಾಂಶವೇನೆಂದರೆ  ದಿನಾಂಕ: 07/03/2019 ರಂದು  ನಾನು ಕೆಲಸಕ್ಕೆ ಹೋಗಿ ಬರುವಷ್ಟರಲ್ಲಿ  ರಾತ್ರಿ 10-30 ಗಂಟೆಯಾಗಿದ್ದರಿಂದ  ಅಜಾದ್ ಚೌಕ್ ನಲ್ಲಿ  ಇಡ್ಲಿಗಳನ್ನು  ಪಾರ್ಸೆಲ್ ತೆಗೆದುಕೊಂಡು ಮನಗೆ ಹೋಗಲು  ನಡೆದುಕೊಂಡು  ಬಾಗೇಪಲ್ಲಿ  ಕ್ರಾಸ್ ನಲ್ಲಿ  ಊಟಮಾಡಿ ನನ್ನ ಸ್ನೇಹಿತನಾದ ವೆಂಕಟಗಿರಿಕೋಟೆ ವಾಸಿಗಳಾದ ಅಪ್ರೋಜ್ @ ಅಪ್ಪು ಹಾಗೂ ಮುಜಿಮಿಲ್ ರವರು ನನ್ನ ಜೊತೆಯಲ್ಲಿದ್ದರು,  ಊಟ ಮಾಡಿ ಬಾಗೇಪಲ್ಲಿ ಕ್ರಾಸ್ ನ ಚರ್ಚ್ ಮುಂದೆ ನಿಂತುಕೊಂಡು ಬೀಡಿ ಸೇದುತ್ತಿದ್ದೆವು  ರಾತ್ರಿ 11-00 ಗಂಟೆಯ ಸಮಯದಲ್ಲಿ  ಚಿಂತಾಮಣಿ ನಗರ ವೆಂಕಟಗಿರಿಕೋಟೆ ವಾಸಿಗಳಾದ ತನ್ನು @ ತನ್ವೀರ್ ಪಾಷ ಹಾಗೂ ಚೆನ್ನ ರವರು ಯಾವುದೋ  ದ್ವಿಚಕ್ರವಾಹನದಲ್ಲಿ ಬಂದು ನನ್ನ ಮುಂದೆ ದ್ಚಿಚಕ್ರವಾಹನನ್ನು ನಿಲ್ಲಿಸಿ  ನನ್ನ ಬಳಿ ಬೀಡಿ ಕೇಳಿದರು ಅದಕ್ಕೆ ನನ್ನ ಹತ್ತಿರ ಇಲ್ಲವೆಂದು  ಹೇಳಿದೆ  ಅದಕ್ಕೆ ಕೋಡೊ ಲೇ ಜಾಟ್ ಎಂದು  ಬೈದರು, ನಾನು ಅದಕ್ಕೆ ಯಾಕೆ ಕೆಟ್ಟ ಮಾತುಗಳಿಂದ ಬೈಯುತ್ತಿದ್ದೀರ ಎಂದು ಕೇಳಿದಕ್ಕೆ  ಕೈಗಳಿಂದ ಹೊಡೆಯಲು ಬಂದರು ಅದಕ್ಕೆ ನಾನು ದೂರ ತಳ್ಳಿದೆ. ಅಷ್ಟರಲ್ಲಿ  ತನ್ನು @ ತನ್ವೀರ್ ರವರು ಯಾವುದೋ ಚಾಕು ತರಹದ  ಆಯುದದಿಂದ ನನ್ನ ಬೆನ್ನಿನ  ಬಲಗಡೆ  ಹಾಕಿ ರಕ್ತಗಾಯ ಮಾಡಿ  ಅಲ್ಲಿಂದ ಹೊರಟು ಹೋಗಿರುತ್ತಾರೆ. ಆದ್ದರಿಂದ ಸದರಿಯವರ ವಿರುದ್ದ  ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ದೂರು.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.57/2019 ಕಲಂ. 87 ಕೆ.ಪಿ. ಆಕ್ಟ್:-

     ದಿನಾಂಕ:-07/03/2019 ರಂದು ರಾತ್ರಿ 6.30 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ  ಡಿ .ಸಿ .ಬಿ.ಇ. ಎನ್  ಪೊಲೀಸ್ ಠಾಣೆಯ  ಪಿ ಐ ಸಾಹೇಬರು ಮಾಲು , ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ;07/03/2019 ರಂದು  ಸಿಬ್ಬಂದಿಯಾದ ಹೆ ಚ್ ಸಿ 192 ರಾಜಗೋಪಾಲ್ , ಹೆ ಚ್ ಸಿ 205 ರಮೇಶ, ಹೆ ಚ್ ಸಿ 208 ಗಿರೀಶ್ , ಪಿ ಸಿ 535 ಶ್ರೀನಿವಾಸ್ , ಹಾಗು ಜೀಪಿನ ಚಾಲಕರಾದ ಎ ಪಿ ಸಿ 138 ಮೆಹಬೂಬದ್ ಬಾಷ , ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ ಎ 40-ಜಿ-270 ರಲ್ಲಿ ಗೌರಿಬಿದನುರು ತಾಲೂಕಿನಲ್ಲಿ  ಕಾನೂನು ಬಾಹಿರ  ಚಟುವಟಿಕೆಗಳ  ಬಗ್ಗೆ ಮಾಹಿತಿ ಸಂಗ್ರಹಣೆ ಕರ್ತವ್ಯ ದಲ್ಲಿದ್ದಾಗ ಸಂಜೆ 4.30 ಗಂಟೆಗೆ  ನನಗೆ ಬಂದ ಭಾತ್ಮೀ ಮೇರೆಗೆ  ವಿಧುರಾಶ್ವತ್ಥ   ದೇವಸ್ಥಾನದ ಬಳಿ ಬಂದು ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಅವರು ಒಪ್ಪಿಕೊಂಡ ನಂತರ ಎಲ್ಲರೂ ಜೀಪಿನಲ್ಲಿ ಹಾಗು ದ್ವಿ ಚಕ್ರ ವಾಹನಗಳಲ್ಲಿ  ಹಾಲಗಾನಹಳ್ಳಿ ಗ್ರಾಮಕ್ಕೆ ಬಂದು ವಾಹನಗಳನ್ನು ಮರೆಯಲ್ಲಿ ನಿಲ್ಲಿಸಿ ಹಾಲಗಾನಹಳ್ಳಿ ಗ್ರಾಮದ ದಕ್ಷೀಣಕ್ಕೆ ಕಾಲು ನಡಿಗೆಯಲ್ಲಿ ಸುಮಾರುಇ ಅರ್ಧ ಕಿಲೋಮೀಟರ್ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಹೊಂಗೆ ಮರದ ಕೆಳಗೆ  ಕೆಲವರು ವೃತ್ತಾಕಾರದಲ್ಲಿ ಕುಳಿತುಕೊಂಡು ಇಸ್ಪೀಟು ಎಲೆಗಳಿಂದ ಹಣವನ್ನು ಪಣವಾಗಿಟ್ಟುಕೊಂಡು  ಅಂದರ್ ಬಾಹರ್ ಇಸ್ಪೀಟು ಜೂಜಾಟವಾಡುತ್ತಿದ್ದು, ಆಪೈಕಿ  ಒಬ್ಬ  ಆಸಾಮಿ ಅಂದ ರ್ ಗೆ ಇನ್ನೂರು ರೂ ಮತ್ತೊಬ್ಬ ಆಸಾಮಿ ಬಾಹರ್ ಗೆ ಇನ್ನೂರು ರೂ ಅಂತ ಳಿದವರು ಸಹ  ಇನ್ನೂರು ಅಂದ ರ್ ಬಾಹರ್ ಇನ್ನೂರು ರೂ ಅಂತ ಕೂಗುತ್ತಾ ಹಣವನ್ನು ಪಣಕ್ಕೆ ಹಾಕುತ್ತಿದ್ದವರನ್ನು  ಪಂಚರ ಸಮಕ್ಷಮ ದಾಳಿ ಮಾಡಿ ಸುತ್ತುವರೆದು ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಸತೀಶ್ ಬಾಬುರೆಡ್ಡಿ ಬಿನ್ ಲೇಟ್ ಅಂಜನರೆಡ್ಡಿ 44 ವರ್ಷ ವಕ್ಕಲಿಗರು ಜಿರಾಯ್ತಿ ವಾಸ: ಹಾಲಗಾನಹಳ್ಳಿ ಗ್ರಾಮ ಗೌರಿಬಿದನೂರು ತಾಲೂಕು 20 ಸುದರ್ಶಧನ್ ಬಿನ್ ಲೇಟ್ ವೆಂಕಟರಾಮಯ್ಯ 45 ವರ್ಷ ನಾಯಕರು  ಜಿರಾಯ್ತಿ ವಾಸ: ಹಾಲಗಾನಹಳ್ಳಿ ಗ್ರಾಮ ಗೌರಿಬಿದನೂರು  ತಾಲೂಕು.3) ಸುರೇಶ್ ಬಾಬು ಬಿನ್ ಲೇಟ್ ಸಂಜೀವರೆಡ್ಡಿ 496 ವರ್ಷ ವಕ್ಕಲಿಗರು ಜಿರಾಯ್ತಿ ವಾಸ; ಹಾಲಗಾನಹಳ್ಳಿ ಗ್ರಾಮ ಗೌರಿಬಿದನೂರು ತಾಲೂಕು.4) ಲಕ್ಷ್ಮೀ ಪತಿ ಬಿನ್ ಲೇಟ್ ಎಲ್ಲಪ್ಪ 46 ವರ್ಷ  ಈಡಿಗರು ಜಿರಾಯ್ತಿ ವಾಸ: ಹಾಲಗಾನಹಳ್ಳಿ ಗ್ರಾಮ ,5) ರಾಮಾಂಜಿ ಬಿನ್ ಲೇಟ್ ಸಂಜೀವಪ್ಪ 42 ವರ್ಷ ಕುರುಬರು ಜಿರಾಯ್ತಿ ವಾಸ: ಹಾಲಗಾನಹಳ್ಳಿ ಗ್ರಾಮ ಗೌರಿಬಿದನೂರು ತಾಲೂಕು.ಅಂತ ತಿಳಿಸಿರುತ್ತಾರೆ.ಜೂಜಾಟದ ಸ್ಥಳ ಹೊಂಗೆ ಮರದ ಕೆಳಗೆ ಒಂದು ಪ್ಲಾಸ್ಟಿಕ್ ಚೀಲವಿದ್ದು , ಇದರ ಮೇಲೆ ಇಸ್ಪೀಟು ಎಲೆಗಳಿದ್ದು ಎಣಿಸಲಾಗಿ ಒಟ್ಟು 52 ಎಲೆಗಳಾಗಿರುತ್ತವೆ. ಪಣವಾಗಿಟ್ಟಿದ್ದ  ಹಣವನ್ನು ಎಣಿಸಲಾಗಿ ಒಟ್ಟು ವಿವಿಧ ಮುಖ ಬೆಲೆಯ  ಏಳು ಸಾವಿರದ ತೊಂಭತ್ತು ರುಪಾಯಿಗಳಾಗಿರುತ್ತೆ.ಸದರಿ ಜೂಜಾಟಕ್ಕೆ ಬಳಸಿದ್ದ ನಗದು ಹಣ, ಒಂದು ಪ್ಲಾಸ್ಟಿಕ್ ಚೀಲ,52 ಇಸ್ಪೀಟು ಎಲೆಗಳನ್ನು ಹಾಗು ಆರೋಪಿತರನ್ನು ವಶಕ್ಕೆ ಪಡೆದು ಸಂಜೆ 5.00 ಗಂಟೆಯಿಂದ 6.00 ಗಂಟೆಯವರೆವಿಗು ಪಂಚರ ಸಮಕ್ಷಮ ಪಂಚನಾಮೆ ಕ್ರಮವನ್ನು ಜರುಗಿಸಿರುವುದಾಗಿ ನೀಡಿದ ದೂರನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಪ್ರ.ವ.ವ ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೆ

4) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.27/2019 ಕಲಂ. 15(A),32(3) KARNATAKA EXCISE ACT:-

          ದಿನಾಂಕ:07-03-2019 ರಂದು ರಾತ್ರಿ 7-30 ಘಂಟೆಗೆ  ಮಾನ್ಯ ಪಿ.ಎಸ್.ಐ ರವರು ಠಾಣೆಯಲ್ಲಿ ನೀಡಿದ ವರದಿ ದೂರನ್ನು ಪಡೆದು ದಾಖಲಿಸಿದ ದೂರಿನ ಸಾರಾಂಶ ವೇನೆಂದರೆ,  ದಿನಾಂಕ:07-03-2018 ರಂದು ಸಂಜೆ ತಾವು ಗಸ್ತಿನಲ್ಲಿದ್ದಾಗ, ಹಂಪಸಂದ್ರ ಗ್ರಾಮದಲ್ಲಿರುವ ಮುಖ್ಯರಸ್ತೆಯಲ್ಲಿರುವ ಅಂಗಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾವು ಸಿಬ್ಬಂದಿ ಯವರಾದ ಸಿ.ಪಿ.ಸಿ-438 ನರಸಿಂಹಮೂರ್ತಿ, ಸಿ.ಪಿ.ಸಿ-88 ರಮೇಶ ರವರು KA-40-G-58 ಸರ್ಕಾರಿ ಜೀಪಿನಲ್ಲಿ ಸಂಜೆ 5-45 ಘಂಟೆಯಲ್ಲಿ ಹಂಪಸಂದ್ರ ಗ್ರಾಮ ದಲ್ಲಿರುವ ಮುಖ್ಯರಸ್ತೆಯಲ್ಲಿರುವ ಸೂರ್ಯನಾರಾಯಣ ರವರ ಬಾಬತ್ತು ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಸರ್ಕಾರಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳವಾದ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದುದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಅಂಗಡಿಯ ಮಾಲೀಕರ ಹೆಸರು & ವಿಳಾಸ ಕೇಳಲಾಗಿ ಸೂರ್ಯನಾರಾಯಣ ಬಿನ್ ಲೇಟ್ ನಾರಾಯಣಪ್ಪ, 56 ವರ್ಷ, ಈಡಿಗರು, ವ್ಯಾಪಾರ, ವಾಸ: ಹಂಪಸಂದ್ರ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದು, ಮದ್ಯಪಾನ ಮಾಡಲು ಅನುಮತಿಸಲು ಪಡೆದಿರುವ ಲೈಸನ್ಸ್ ತೋರಿಸುವಂತೆ ಕೇಳಲಾಗಿ ಸದರಿಯವರು ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿರುವುದಾಗಿ, ಸದರಿ ಸ್ಥಳದಲ್ಲಿ ಹೈವಾರ್ಡ್ಸ್ ಕಂಪನಿಯ 90 ಎಂ.ಎಲ್ ಸಾಮರ್ಥ್ಯದ ಟೆಟ್ರಾ ಪ್ಯಾಕೇಟ್ ಗಳು ಇದ್ದು, ಸದರಿ ಟೆಟ್ರಾ ಪ್ಯಾಕೇಟ್ ಗಳಲ್ಲಿ 4 ಪ್ಯಾಕೇಟ್ ಗಳನ್ನು ಓಪನ್ ಮಾಡಿ ಸುಮಾರು ಅರ್ಧದಷ್ಟು ಮದ್ಯವಿರುವುದಾಗಿ, 4 ಪ್ಲಾಸ್ಟಿಕ್ ಗ್ಲಾಸುಗಳಲ್ಲಿ ಮದ್ಯವನ್ನು ಹಾಕಿದ್ದು, ಸದರಿ ಗ್ಲಾಸುಗಳಲ್ಲಿದ್ದ ಮಧ್ಯ ಕೆಳಗಡೆಗೆ ಬಿದ್ದು ಹೋಗಿರುವುದಾಗಿ, ನಂತರ ಸದರಿ ಸ್ಥಳದಲ್ಲಿ ಓಪನ್ ಮಾಡದೇ ಇರುವ ಪ್ಯಾಕೇಟ್ ಗಳನ್ನು ಎಣಿಸಲಾಗಿ ಹೈವಾರ್ಡ್ಸ್  ಕಂಪನಿಯ 90 ಎಂ.ಎಲ್ಸಾಮಥ್ರ್ಯದ 20 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 90 ಎಂ.ಎಲ್ ಸಾಮರ್ಥ್ಯದ 24 ಟೆಟ್ರಾ ಪ್ಯಾಕೇಟ್ ಗಳನ್ನು ಹಾಗೂ 4 ಪ್ಲಾಸ್ಟಿಕ್ ಗ್ಲಾಸುಗಳನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 6-00 ಗಂಟೆಯಿಂದ 7-00 ಗಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು,  ಮೇಲ್ಕಂಡ ಸೂರ್ಯನಾರಾಯಣ ಬಿನ್ ಲೇಟ್ ನಾರಾಯಣಪ್ಪ ರವರನ್ನು ವಶಕ್ಕೆ ಪಡೆದುಕೊಂಡು ರಾತ್ರಿ 7-30 ಗಂಟೆಗೆ ಠಾಣೆಗೆ ಬಂದು ಮೇಲ್ಕಂಡ ಆರೋಪಿ, ಮಾಲುಗಳು ಹಾಗೂ ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಪಿರ್ಯಾದು

5) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.40/2019 ಕಲಂ. 87 ಕೆ.ಪಿ. ಆಕ್ಟ್:-

     ದಿನಾಂಕ 07/03/2019 ರಂದು ಸಂಜೆ 5-45 ಗಂಟೆಗೆ ಪಿರ್ಯಾಧಿ ಪಿ.ಎಸ್.ಐ. ಶ್ರೀ ಬಾಸ್ಕರ್ ರವರು ಮಾಲು, ಪಂಚನಾಮೆಯಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ. ದಿನಾಂಕ:07/03/2019 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ ಕುಂಟಚಿಕ್ಕನಹಳ್ಳಿ ಗ್ರಾಮದ ಹತ್ತಿರ ಶ್ರೀ ಶನಿಮಹಾತ್ಮ ದೇವಸ್ಥಾನದ ಹಿಂಭಾಗ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಸಿಬ್ಬಂಧಿಯಾದ ಹೆಚ್.ಸಿ. 52 ಶ್ರೀ ಮುನಾವರ್ ಪಾಷ, ಪಿ.ಸಿ 238 ಶ್ರೀ ದಿಲೀಪ್ ಕುಮಾರ್, ಪಿಸಿ 532 ಶ್ರೀ ಚಿಕ್ಕಣ್ಣ, ಪಿ.ಸಿ 392 ಶ್ರೀ ಬಾಬು, ಪಿ.ಸಿ 537 ಶ್ರೀ ಆನಂದ, ಪಿ.ಸಿ. 100 ಶ್ರೀ ಮಹೇಶ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪಿನಲ್ಲಿ ಮತ್ತು ದ್ವಿಚಕ್ರವಾಹನಗಳಲ್ಲಿ ಕುಂಟಚಿಕ್ಕನಹಳ್ಳಿ ಗ್ರಾಮದ ಹತ್ತಿರ ಶ್ರೀ ಶನಿಮಹಾತ್ಮ ದೇವಸ್ಥಾನದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ವಾಹಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ಗೆ 200/- ರೂ. ಬಾಹರ್ಗೆ 200/-ರೂ.ಗಳು ಎಂದು ಕೂಗುತ್ತಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಅಲ್ಲಿದ್ದವರನ್ನು  ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಅಮೀರ್ ಜಾನ್ ಬಿನ್ ಲೇಟ್ ಯಾಸೀಂಸಾಬ್ 48 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ ಚಿಕ್ಕಹುಸೇನ್ ಪುರ ಗ್ರಾಮ ಗೌರೀಬಿದನೂರು ತಾಲ್ಲೂಕು 2) ಹನುಮಂತಪ್ಪ ಬಿನ್ ಲೇಟ್ ಕೊಂಡಪ್ಪ, 48 ವರ್ಷ, ಅಗಸ ಜನಾಂಗ, ಕುಲಕಸಬು, ಕುಂಟಚಿಕ್ಕನಹಳ್ಳಿ ಗ್ರಾಮ,  ಗೌರೀಬಿದನೂರು ತಾಲ್ಲೂಕು,  3) ವೆಂಕಟರಾಮರೆಡ್ಡಿ ಬಿನ್ ಲೇಟ್ ರಾಮಕೃಷ್ಣರೆಡ್ಡಿ, 43 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ, ಕುಂಟಚಿಕ್ಕನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು, 4) ಚಿನ್ನ ಆಂಜಿನರೆಡ್ಡಿ ಬಿನ್ ಲೇಟ್ ವೆಂಕಟರಾಮರೆಡ್ಡಿ, 50 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ, ಕುಂಟಚಿಕ್ಕನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು, 5) ಶ್ರೀನಿವಾಸರೆಡ್ಡಿ ಬಿನ್ ವೆಂಕಟರಾಮರೆಡ್ಡ್ಪಿ, 42 ವರ್ಷ, ವಕ್ಕಲಿಗ ಜನಾಂಗ, ಕುಂಟಚಿಕ್ಕನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಅವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 3340/-(ಮೂರು ಸಾವಿರದ ಮುನ್ನೂರ ನಲವತ್ತು ರೂಪಾಯಿಗಳು ಮಾತ್ರ.) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು  ಸಂಜೆ 4-00 ಗಂಟೆಯಿಂದ ಸಂಜೆ 5-00 ಗಂಟೆಯ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿಗಳನ್ನು ಮತ್ತು ಮಾಲನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು ಇವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸ ಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

6) ನಂದಿಗಿರಿಧಾಮ  ಪೊಲೀಸ್ ಠಾಣೆ ಮೊ.ಸಂ.15/2019 ಕಲಂ. 15(A),32(3) KARNATAKA EXCISE ACT:-

     ಘನ 2 ನೇ ಅಡಿಷನಲ್ ಸಿಜೆ ಮತ್ತು ಜೆಎಂಎಪ್ಸಿ ನ್ಯಾಯಾಲಯ ಚಿಕ್ಕಬಳ್ಳಾಪುರ  ರವರಲ್ಲಿ  ನಂದಿ ಗಿರಿಧಾಮ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸಪೆಕ್ಟರ್  ಗೋಪಾಲ್  ಆಧ ನಾನು ವಿನಂತಿಸಿಕೊಳ್ಳುವುದೇನೆಂದರೆ ದಿನಾಂಕ 08-03-2019 ರಂದು  ಬೆಳಗ್ಗೆ 11-00  ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿ ನಂದಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಆ ಸಮಯಕ್ಕೆ ನನಗೆ ಬಾತ್ಮೀ ದಾರರಿಂದ  ಬಂದ ಖಚಿತ ಮಾಹಿತಿ ಎನೆಂದರೆ ಕುಪ್ಪಹಳ್ಳಿ ಗ್ರಾಮದಲ್ಲಿನ ಚಿಕ್ಕನರಸಿಂಹಪ್ಪ ರವರ ಚಿಲ್ಲರೆ ಅಂಗಡಿಯಲ್ಲಿ ಅಂಗಡಿಯ ಮಾಲೀಕ ಯಾವುದೇ ಲೈಸನ್ಸ್ ಇಲ್ಲದೆ ಅಂಗಡಿಯಲ್ಲಿ ಮದ್ಯದ ಟೆಟ್ರಾ ಪಾಕೇಟುಗಳನ್ನಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಿ ಸಾರ್ವಜನಿಕರಿಗೆ ಅಲ್ಲೇ ಕುಡಿಯಲು ಅವಕಾಶ  ಮಾಡಿಕೊಟ್ಟಿರುವನೆಂದೂ ಬಂದ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತ ರಾಗಿ  ದಾಳಿ ಮಾಡಲು ಜೊತೆಯಲ್ಲಿನ ಸಿಬ್ಬಂದಿಯೊಡನೆ ಕುಪ್ಪಹಳ್ಳಿ ಗ್ರಾಮದ ಗೇಟಿಗೆ ಹೋಗಿ ಅಲ್ಲಿದ್ದ 1) ನರಸಿಂಹಪ್ಪ 2) ವೆಂಕಟೇಶ್ 3) ನರಸಿಂಹಯ್ಯ ರವರುಗಳನ್ನು  ಪಂಚರಾಗಿ ಬರಮಾಡಿಕೊಂಡು  ಬೆಳಗ್ಗೆ 11-30  ಗಂಟೆಗೆ  ಚಿಕ್ಕನರಸಿಂಹಯ್ಯ  ರವರ ಅಂಗಡಿಯ ಬಳಿಗೆ  ಹೋಗಿ ಧಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ  ಸದರಿ ಅಂಗಡಿ ಮಾಲೀಕನು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಂಗಡಿ ಮುಂದೆ ಕಲ್ಲಿನ ಕೆಳಗಿದ್ದ ರಟ್ಟಿನ ಬಾಕ್ಸ್ ನ್ನು ಕಾಲಿನಿಂದ  ಬಾಗಿಲ ಪಕ್ಕಕ್ಕೆ ತಳ್ಳಿದನು.  ಅವನ ಹೆಸರು ವಿಳಾಸ ಕೇಳಿದಾಗ ಚಿಕ್ಕನರಸಿಂಹಪ್ಪ ಬಿನ್ ಲೇಟ್ ದೊಡ್ಡವೆಂಕಟರಾಯಪ್ಪ,49 ವರ್ಷ, ಪಜಾತಿ ಕುಪ್ಪಹಳ್ಳಿ  ಗ್ರಾಮ ಎಂದು ತಿಳಿಸಿದನು. ಬಾಗಿಲ ಹಿಂದಿದ್ದ  ರಟ್ಟಿನ ಬಾಕ್ಸನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಖಾಲಿಯಾಗಿದ್ದ ಮದ್ಯದ ಟೆಟ್ರಾ ಪಾಕೇಟುಗಳು, ಪ್ಲಾಸ್ಟಿಕ್ ಖಾಲೀ ಲೋಟಾಗಳು ,ಮದ್ಯವಿದ್ದ ಟೆಟ್ರಾ ಪಾಕೇಟುಗಳು ಇದ್ದವು. ಇವುಗಳನ್ನು ಇಟ್ಟುಕೊಂಟು ಮಾರಾಟ ಮತ್ತು ಸಾರ್ವಜಿನಿಕರಿಗೆ ಕುಡಿಯಲು ಪೂರೈಸಲು ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಅಂಗಡಿ ಮಾಲೀಕ ತನ್ನ ಬಳಿ ಏನೂ ಇಲ್ಲವೆಂದು ಹೇಳಿದನು. ಸದರಿ ರಟ್ಟಿನ ಬಾಕ್ಸನ್ನು ಪರಿಶೀಲಿಸದಾಗ  1)90 ML ಸಾಮರ್ಥ್ಯದ HAYWARDS  WHISKY ಯ  4 ಟೆಟ್ರಾ ಪ್ಯಾಕೇಟುಗಳು 2) 90 ML ಸಾಮರ್ಥ್ಯದ  HAYWARDS ನ ಖಾಲಿ  10 ಪ್ಯಾಕೇಟುಗಳು,  ಹಾಗೂ 10 ಖಾಲಿ ಲೋಟಗಳು ಇದ್ದವು, ಇವುಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 11-45 ಗಂಟೆಯಿಂದ 12-45 ಗಂಟೆಯವರೆವಿಗೆ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ 10 ಖಾಲಿ ಟೆಟ್ರಾ ಪ್ಯಾಕೇಟುಗಳನ್ನು ಹಾಗೂ 10 ಪ್ಲಾಸ್ಟಿಕ್ ಲೋಟಗಳು ಮತ್ತು ಮೇಲ್ಕಂಡ 4 ಮದ್ಯವಿದ್ದ  ಟೆಟ್ರಾ ಪ್ಯಾಕೇಟುಗಳನ್ನು ರಟ್ಟಿನ ಬಾಕ್ಸ್ ಸಮೇತ ಅಮಾನತ್ತು ಪಡಿಸಿಕೊಂಡು  ಮೇಲ್ಕಂಡ ಚಿಲ್ಲರೆ ಅಂಗಡಿಯ ಮಾಲೀಕ ಚಿಕ್ಕನರಸಿಂಹಪ್ಪ ಬಿನ್ ಲೇಟ್ ದೊಡ್ಡವೆಂಕಟ ರಾಯಪ್ಪ ರವರನ್ನು  ವಶಕ್ಕೆ ಪಡೆದುಕೊಂಡು 13-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಫಿಯ ವಿರುದ್ದ  ಸ್ವತಃ ಠಾಣಾ ಮೊಸಂ:15/2019 ಕಲಂ: 32(3) 15(A) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ,

7) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.33/2019 ಕಲಂ. 463-464-466-468-469 ರೆ/ವಿ 34

 ಐ.ಪಿ.ಸಿ:-

     ದಿನಾಂಕ; 07-03-2019 ರಂದು ಸಂಜೆ 5-00 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಸಿಪಿಸಿ-90  ಶ್ರೀ. ರಾಜಕುಮಾರ ರವರು ಘನ ನ್ಯಾಯಾಲಯದಿಂದ ಪಿಸಿ ಆರ್ ನಂಬರ್: 19/2018 ನ್ನು ತಂದು ಹಾಜರುಪಡಿಸಿದ್ದನ್ನು ಸ್ವೀಕರಿಸಿ ಪ್ರಕರಣ ಧಾಖಲಿಸಿದ್ದರ ಸಾರಾಂಶವೆನೇಂದರೆ    ಪಿರ್ಯಾದಿದಾರರಾದ ಶ್ರೀ.ನರಸಿಂಹಪ್ಪ @ ನರಸಿಂಹಮೂರ್ತಿ ಬಿನ್ ಲೇಟ್ ಸುಬ್ಬಪ್ಪ @ ಸುಬ್ಬಣ್ಣ, 44 ವರ್ಷ, ಹನುಮಂತಪುರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಸ್ವಾಧೀನದಲ್ಲಿರುವ ಶಿಡ್ಲಘಟ್ಟ ತಾಲ್ಲೂಕು  ಹಂಡಿಗನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹನುಮಂತಪುರ ಗ್ರಾಮದ  ಹಳೆ ಹೆಚ್ ಎಲ್ ನಂಬರ್ 107, ಹೊಸ ಹೆಚ್ ಎಲ್ ನಂಬರ್ 361, ಪೂರ್ವ -ಪಶ್ಚಿಮ: 30 ಅಡಿಗಳು ,ಉತ್ತರ-ದಕ್ಷಿಣ 40 ಅಡಿಗಳ ಸ್ವತ್ತಿಗೆ ಈಗ್ಗೆ ಸುಮಾರು 40 ವರ್ಷಗಳ ಹಿಂದೆಯೇ ಕಾಂಪೌಂಡ್ ಸಹಾ ಹಾಕಿಕೊಂಡು ಅನುಭವದಲ್ಲಿರುತ್ತಾರೆ. ಪಿರ್ಯಾದಿದಾರರ ಸದರಿ ಸ್ವತ್ತಿನ ಪಶ್ಚಿಮದ ಕಡೆ ಪೂರ್ವ -ಪಶ್ಚಿಮ :5 ಅಡಿಗಳು , ಉತ್ತರ-ದಕ್ಷಿಣ: 80 ಅಡಿಗಳ ಸಂದು ಇದ್ದು, ಸಂದಿನ ನಂತರ ಇರುವ ಪಿರ್ಯಾದಿದಾರರ ಪಶ್ಚಿಮದ ಬಾಜೂದಾರಳಾದ ಶ್ರೀಮತಿ.ತಿರುಮಳಮ್ಮ  ಕೋಂ  ದೊಡ್ಡ ನಾರಾಯಣಪ್ಪ , ಡಿ ಆರ್ ನಂ:108/1, ಪೂರ್ವ-ಪಶ್ಚಿಮ : 23 ಅಡಿಗಳು , ಉತ್ತರ-ದಕ್ಷಿಣ: 40 ಅಡಿಗಳು ಹಾಗೂ ಸದರಿ ತಿರುಮಳಮ್ಮನ ಸ್ವತ್ತಿನ ಉತ್ತರಕ್ಕೆ ಇರುವ ಡಿ.ಆರ್. ನಂಬರ್: 108, ದೊಡ್ಡನಾರಾಯಣಪ್ಪ ಬಿನ್ ಲೇಟ್ ಕೈವಾರದಪ್ಪ ವಿಸ್ತೀರ್ಣ , ಪೂರ್ವ-ಪಶ್ಚಿಮ: 23 ಅಡಿಗಳು, ಉತ್ತರ-ದಕ್ಷಿಣ: 15 ಅಡಿಗಳು ಇದ್ದು, ಅದನ್ನು ದೊಡ್ಡನಾರಾಯಣಪ್ಪ ಮತ್ತು ತಿರುಮಳಮ್ಮನಮ್ಮರ ಸ್ವತ್ತಿನ ಪೂರ್ವದ  ಕಡೆ ಅಂದರೆ ಪಿರ್ಯಾದಿದಾರರ ಸ್ವತ್ತಿನ ಪಶ್ಚಿಮದ ಕಡೆ ಸಂದು ಇದ್ದು, ಉಭಯ ಪಕ್ಷಗಾರರು ಸದರಿ ಸಂದನ್ನು ಗಾಳಿ, ಬೆಳಕಿಗಾಗಿ ಮತ್ತು ಉಭಯ ಪಕ್ಷಗಾರರು ಓಡಾಡಲು ಸದರಿ ಸಂದನ್ನು ಪಿರ್ಯಾದಿದಾರನ ಪೂರ್ವಜರ ಕಾಲದಿಂದಲೂ ಸದರಿ ಸಂದನ್ನು ಉಪಯೋಗಿಸಿಕೊಂಡು ಬರುತ್ತಿರುವುದಾಗಿರುತ್ತೆ. ತಿರುಮಳಮ್ಮ ಕೋಂ ದೊಡ್ಡನಾರಾಯಣಪ್ಪರವರು ಸಂದನ್ನು  ಅತಿಕ್ರಮಿಸಿ, ಪಿರ್ಯಾದಿದಾರನ ಸ್ವತ್ತಿನ ಪಶ್ಚಿಮಕ್ಕಿರುವ ಕಾಂಪೌಂಡ್ ಗೋಡೆಯನ್ನು ಹೊಡೆದು ಹಾಕಿ, ಅನಧಿಕೃತವಾಗಿ ಕಟ್ಟಡವನ್ನು ನಿರ್ಮಿಸಲು  ಪ್ರಾರಂಭಿಸಿದಾಗ ಪಿರ್ಯಾದಿದಾರರು ಶಿಡ್ಲಘಟ್ಟ ಪ್ರಥಮ ದರ್ಜೆ  ನ್ಯಾಯಾಲಯದಲ್ಲಿ ಓ ಎಸ್ ನಂ: 347/2017 ರಂತೆ ದೊಡ್ಡನಾರಾಯಣಪ್ಪ ಮತ್ತು ಕುಟುಂಬದವರ ಮೇಲೆ ದಾವೆ ಹೂಡಿರುತ್ತಾರೆ, ಸದರಿ ದಾವೆಯಲ್ಲಿ  ಪಿರ್ಯಾದಿದಾರರನ ಪರವಾಗಿ ಮದ್ಯಂತರ ಆದೇಶವನ್ನು ನೀಡಿ ಮುಂದಿನ  ಆದೇಶದವರೆವಿಗೂ ಉಭಯ ಪಕ್ಷಗಾರರ ನಡುವೆ ಇರುವ ಪೂರ್ವ-ಪಶ್ಚಿಮ 5 ಅಡಿಗಳು, ಉತ್ತರ ದಕ್ಷಿಣ: 80 ಅಡಿಗಳ ಸಂದಿಯಲ್ಲಿ ಯಾವುದೇ  ಅನದೀಕೃತ ಕಟ್ಟಡ ನಿರ್ಮಾಣ ಮಾಡಲು ನಿಷೇದಿಸಿ ಆದೇಶವನ್ನು  ಘನ ನ್ಯಾಯಾಲಯವು ಪಿರ್ಯಾದಿದಾರರ ಪರವಾಗಿ ನೀಡಿದ್ದು, ಸದರಿ ಆದೇಶದ ಪ್ರತಿಯನ್ನು  ಆರೋಪಿಗಳಾದ ಕ್ರ.ಸಂ 1 ಮತ್ತು 2 ರವರಿಗೆ ಪತ್ರದ ಮೂಲಕ ದಿನಾಂಕ: 04/09/2017 ರಂದು ಪಿರ್ಯಾದಿದಾರರು ತಲುಪಿಸಿರುತ್ತಾರೆ. ಹಾಗೂ 3ನೇ ಆರೋಪಿಗೆ ಅಂಚೆ ಮೂಲಕ ರವಾನಿಸಿರುತ್ತೆ. ಸದರಿ ಅದೇಶವನ್ನು 3 ನೇ ಆರೋಪಿ ದಿಕ್ಕರಿಸಿ ತನ್ನ ಕಟ್ಟಡ ಕಾಮಗಾರಿಯನ್ನು ಮುಂದುವರೆಸಿರುತ್ತಾನೆ. ಶ್ರೀಮತಿ. ತಿರುಮಳಮ್ಮರವರ ಗಂಡನಾದ ದೊಡ್ಡನಾರಾಯಣಪ್ಪ ಬಿನ್ ಲೇಟ್ ಕೈವಾರದಪ್ಪ ರವರು  ಓಎಸ್ 347/2017 ರ ಪ್ರಕರಣದಲ್ಲಿ ಪಿರ್ಯಾದಿದಾರರ ಪರವಾಗಿ ಆದೇಶಿಸಿರುವ ಆದೇಶವನ್ನು  ಮರೆಮಾಚಿ ಶಿಡ್ಲಘಟ್ಟ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಓ ಎಸ್ ನಂಬರ್ 354/2017 ರಲ್ಲಿ ಶ್ರೀಮತಿ. ತಿರುಳಮ್ಮ ಕೋಂ ದೊಡ್ಡನಾರಾಯಣಪ್ಪರವರು ಪಿರ್ಯಾದಿದಾರರ ಮತ್ತು ಅವರ ಕುಟುಂಬದವರನ್ನು  ಪ್ರತಿವಾದಿಗಳನ್ನಾಗಿ ಮಾಡಿ, ಸದರಿಯವರ  ಸ್ವತ್ತಾದ ಹೆಚ್ ಎಲ್ ನಂ: 108/1  ಸ್ವತ್ತಿಗೆ  ತಾತ್ಕಾಲಿಕ ತಡೆಯಾಜ್ಞೆಯನ್ನು ಪಡೆದಿರುತ್ತಾರೆ. ಸದರಿ ಆದೇಶವನ್ನು ಪಿರ್ಯಾದಿದಾರರು ಪ್ರಶ್ನಿಸಿ ಆಧೇಶ 39 ನಿಯಮ 4 ಅಡಿಯಲ್ಲಿ  ಅರ್ಜಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿ, ಶ್ರೀಮತಿ. ತಿರುಳಮ್ಮ ಕೋಂ ದೊಡ್ಡನಾರಾಯಣಪ್ಪರವರ ಪರವಾಗಿ ಆಗಿರುವ ಆದೇಶವನ್ನು ಸಮಾಪನಗೊಳಿಸಲು  ವಿನಂತಿಸಿದ್ದರ ಮೇರೆಗೆ , ಅದರಂತೆ ಘನ ನ್ಯಾಯಾಲಯವು ಪಿರ್ಯಾದಿದಾರರ ಪರವಾಗಿ ಆಧೇಶವನ್ನು ನೀಡಿರುತ್ತೆ. ಸದರಿ ಆದೇಶದ ಪ್ರತಿಯನ್ನು ಆರೋಪಿ 1 ಮತ್ತು 2 ರವರ ಕಛೇರಿಗೆ ದಿನಾಂಕ: 25/10/2017 ರಂದು ಸಂಬಂದಿಸಿದ ಧಾಖಲೆಗಳೊಂದಿಗೆ ಸಲ್ಲಿಸಿ ಸದರಿಯವರುಗಳ ಕಛೇರಿಯಿಂದ ಸ್ವೀಕೃತಿಯನ್ನು ಪಡೆದುಕೊಂಡಿರುವುದಾಗಿರುತ್ತೆ.  ಅಲ್ಲದೆ ಆರೋಪಿಗಳು ಹಾಲಿ ಇರುವ ಡಿ ಆರ್ ನಂಬರ್ 108 ರ ಸ್ವತ್ತಿಗೆ ಹೆಚ್ ಎಲ್ ನಂಬರ್ 58 ಎಂದು ಮತ್ತೊಂದು ದಾಖಲೆಯು ಸೃಷ್ಟಿಸಿ, ಸದರಿ ಧಾಖಲೆಯ ಆಧಾರದ ಮೇರೆಗೆ ಹಾಲಿ ದೊಡ್ಡನಾರಾಯಣಪ್ಪ ಬಿನ್ ಕೈವಾರದಪ್ಪರವರು ಶಿಡ್ಲಘಟ್ಟ  ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಹೆಚ್ ಎಲ್ ನಂ: 58 ರ ಖೊಟ್ಟಿ ದಾಖಲೆಯ ಮೇಲೆ ಮೂಲದಾವೆ ಸಂಖ್ಯೆ 451/2017 ರಂತೆ ಪ್ರಕರಣವನ್ನು ದಾಖಲಿಸಿ ಸಂದಿನ ವಿಚಾರವನ್ನು ಮರೆಮಾಚಿ ತಡೆಯಾಜ್ಞೆಯನ್ನು ಪಡೆಯುವ ಹುನ್ನಾರವನ್ನು ನಡೆಸಿದ್ದು, ಅಲ್ಲದೆ ಅನಧಿಕೃತವಾಗಿ ನಿರ್ಮಿಸಲು ಹೊರಟಿರುವ ಸದರಿ ಸ್ವತ್ತನ್ನು ಪೂರ್ಣಗೊಳಿಸಬೇಕೆಂಬ ದುರುದ್ದೇಶದಿಂದ ಸದರಿ ಕ್ರಮವನ್ನು ಅನುಸರಿಸಿರುವುದಾಗಿ ಇದ್ದ ದೂರಿನ ಮೇರಗೆ  ಪ್ರಕರಣ ದಾಖಲಿಸಿಕೊಂಡಿರುತ್ತೆ.

8) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.34/2019 ಕಲಂ. 323-448-504-506 ರೆ/ವಿ 34  ಐ.ಪಿ.ಸಿ:-

     ದಿನಾಂಕ: 07-03-2019 ರಂದು ಸಂಜೆ 6-30 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀಮತಿ ಲಲಿತ ಕೋಂ ಗೋಪಿ, ಮೇಲೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತನ್ನ ಮೇಲೆ ತಿಮ್ಮಯ್ಯ ರವರ ಮಗ ನಾದ ಚಲಪತಿ, ಆತನ ಹೆಂಡತಿ ಸುಗುಣಮ್ಮ, ಮತ್ತು ಆತನ ತಂಗಿ ಪದ್ಮ  ಇವರುಗಳು ಕೈವಾರದಲ್ಲಿ  ಗಲಾಟೆ ಮಾಡಿರವ ವಿಷಯದಲ್ಲಿ   ಇವರ ಮೇಲೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಕೇಸು ನಂ 49 -16/10/2018 ರಂತೆ ದಾಖಲಿಸಿದ್ದು ಕೇಸು ಚಿಂತಾಮಣಿ ನ್ಯಾಯಾಲಯದಲ್ಲಿ ಸಿ.ಸಿ ನಂ 620/2018 ರಂತೆ ವಿಚಾರಣೆಯಲ್ಲಿರುತ್ತೆ,  ದಿನಾಂಕ:03/03/2019 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ  ತಾನು ಮನೆಯಲ್ಲಿ ಊಟ ಮಾಡುತ್ತಿರುವಾಗ  ಚಲಪತಿ , ಆತನ ಹೆಂಡತಿ ಸುಗುಣಮ್ಮ, ಮತ್ತು ಆತನ ತಂಗಿ ಪದ್ಮಾ  ತಮ್ಮ ಮನೆಗೆ  ಒಳಗೆ ನುಗ್ಗಿ ಬಂದು ಬಾಗಿಲು ಮುಚ್ಚಿ ಚಿಲುಕ ಹಾಕಿ ಕೆಟ್ಟ ಮಾತುಗಳಿಂದ ಬೈದು ತಾನು ಊಟ ಮಾಡುತ್ತಿದ್ದ ತಟ್ಟೆಯನ್ನು ಕಾಲಿನಿಂದ ಒದ್ದು ಮೂರು ಜನರು ಸೇರಿ ಚನ್ನಾಗಿ ಹೊಡೆದು ತನ್ನ ದೇಹಕ್ಕೆ ತುಂಬಾ ತೊಂದರೆ ಅಗುವ ಹಾಗೆ ಮಾಡಿರುತ್ತಾರೆ  ಯಾಕೇ ಎಂತ ಕೇಳಿದರೇ  ಚಿಂತಾಮಣಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕೇಸುಗಳು ವಾಪಸ್ಸು ತೆಗೆದುಕೋ ಮತ್ತು ನನ್ನ ಬಾಮೈದಾ ಗೋವರ್ದನ ನ ತಂಟೆಗೆ ಬರಬೇಡ  ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ತಾನು  ಕೇಸು ರಾಜಿ ಮಾಡಿಕೊಳ್ಳುತ್ತೇನೆಂದು ಹೇಳಿದಾಗ ಸದಿರಯವರು ತನ್ನ ಮೊಬೈಲ್ ನಂಬರ್ ತೆಗೆದುಕೊಂಡು ಚಿಂತಾಮಣಿ ನ್ಯಾಯಾಲಯದ ಕೇಸು ಇರುವ ದಿನಾಂಕದಂದು ಕರೆ ಮಾಡುವುದಾಗಿ ತಿಳಿಸಿ ಹೊರಟು ಹೋಗಿದ್ದು ಆಗ ತಾನು ಆಟೋದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆ ಬಂದು ಚಿಕಿತ್ಸೆಯನ್ನು ಪಡೆದುಕೊಂಡಿದ್ದು   ಹಬ್ಬ ಇದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ಕೊಡುತ್ತಿದ್ದು  ತಾನು ಊಟ ಮಾಡುತ್ತಿದ್ದಾಗ ಏಕಾ ಏಕಿ ಮನೆಗೆ ನುಗ್ಗಿ  ಕೆಟ್ಟ ಮಾತುಗಳಿಂದ ಬೈದು ಹಲ್ಲೆ ಮಾಡಿ, ಪ್ರಾಣಬೆದರಿಕೆ ಹಾಕಿರುವ ಚಲಪತಿ, ಸುಗುಣಮ್ಮ, ಮತ್ತು ಪದ್ಮಾ ರವರ ವಿರುದ್ದ ಕಾನೂನು ರೀತ್ಯ ಕ್ರ ಜರುಗಿಸಲು  ಕೋರಿ ಕೊಟ್ಟ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

9) ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.35/2019 ಕಲಂ. 379  ಐ.ಪಿ.ಸಿ:-

     ದಿನಾಂಕ:08-03-2019 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಪಿರ್ಯಾದಿದಾರರಾದ  ಕೆ.ಎಸ್.ಶಿವಾನಂದರೆಡ್ಡಿ ಬಿನ್  ಕೆ.ಎಸ್.ಸುಬ್ಬಾರೆಡ್ಡಿ, ಸುಮಾರು 48 ವರ್ಷ, ವಕ್ಕಲಿಗರು, ಜಿರಾಯ್ತಿ, ಕೊತ್ತನೂರು ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ.  ತನ್ನ  ಬಾಬತ್ತು  ಗ್ರಾಮದ ಬಳಿ  ಸರ್ವೆ ನಂ 142 ರಲ್ಲಿ  ಒಂದುವರೆ ಎಕರೆ ಜಮೀನು ಇದ್ದು ಸದರಿ ಜಮೀನಿನಲ್ಲಿ ಒಂದು ಬೋರ್ ವೆಲ್ ಹಾಕಿದ್ದು  ಸದರಿ ಬೋರವೆಲ್ ಗೆ ಸಂಬಂದಿಸಿದಂತೆ ಒಂದು ಬಾಕ್ಸ್ ನಲ್ಲಿ ಸ್ಟಾಟರ್ ಮತ್ತು  ಬಾಕ್ಸ್ ನಿಂದ ಬೋರವೆಲ್ ವರೆಗೂ 6 ಬಾರು ಕೇಬಲ್ ವೈರ್ ಅನ್ನು ಅಳವಡಿಸಿರುತ್ತೆ. ತಾನು ಪ್ರತಿ ದಿನ ಸದರಿ ಜಮೀನಿನ ಬಳಿ ಹೋಗಿ ಬರುತ್ತಿದ್ದು,  ದಿನಾಂಕ:06-03-2019 ರಂದು ಸಹ ತಾನು ಸದರಿ ಜಮೀನಿ ಬಳಿ ಹೋಗಿ ರಾತ್ರಿ 8-00 ಗಂಟೆಗೆ ವಾಪಸ್ಸು ಮನೆಗೆ ಬಂದಿರುತ್ತಾರೆ. ನಂತರ ಎಂದಿನಂತೆ ದಿನಾಂಕ:07-03-2019 ರಂದು ತಾನು ಬೆಳಿಗ್ಗೆ 7-30 ಗಂಟೆಯ ಸಮಯದಲ್ಲಿ ತನ್ನ ಬಾಬತ್ತು ಸರ್ವ ನಂ 142 ರ ಜಮೀನಿನ ಬಳಿ ಹೋದಾಗ ಸದರಿ ಜಮೀನಿನಲ್ಲಿ ಬೋರ್ವೆಲ್ ಗೆ ಅಳವಡಿಸಿದ್ದ  ಸ್ಟಾಟರ್ ಮತ್ತು 6 ಬಾರು ಕೇಬಲ್ ವೈರ್ ಕಾಣಿಸಲಿಲ್ಲಾ  ಸುತ್ತಮುತ್ತಾ ಎಲ್ಲಾ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲಾ ದಿನಾಂಕ: 06-03-2019 ರಂದು ರಾತ್ರಿ 8-30 ಗಂಟೆಯಿಂದ ದಿನಾಂಕ:07-03-2019 ರ ಬೆಳಿಗ್ಗೆ 7-30 ಗಂಟೆಯ ಮದ್ಯೆ ಯಾರೋ ಕಳ್ಳರು ಸುಮಾರು 15 ಸಾವಿರ ರೂ ಬೆಲೆ ಬಾಳುವ ಬೋರ್ ವೆಲ್ ಸ್ಟಾಟರ್ ಮತ್ತು 6 ಬಾರು ಕೇಬಲ್ ವೈರ್ ಅನ್ನು ಕಳ್ಳತಮಾಡಿಕೊಂಡು ಹೋಗಿರುತ್ತಾರೆ. ಸ್ಟಾಟರ್ ಮತ್ತು ಕೇಬಲ್ ವೃರ್ ಅನ್ನು ಸುತ್ತಾಮುತ್ತಾ ಎಲ್ಲಾ ಕಡೆ ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ಕೊಡುತ್ತಿದ್ದು  ಸ್ಟಾಟರ್ ಮತ್ತು ಕೇಬಲ್ ವೈರ್ ಅನ್ನು ಹಾಗೂ ಕಳ್ಳರನ್ನು ಪತ್ತೆಮಾಡಿ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.