ದಿನಾಂಕ : 08/02/2019ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ನಗರ  ಪೊಲೀಸ್ ಠಾಣೆ ಮೊ.ಸಂ.23/2019 ಕಲಂ: 384-420-465-467-468  ಐ.ಪಿ.ಸಿ:-

     ದಿನಾಂಕ: 07/02/2019 ರಂದು ಮಧ್ಯಾಹ್ನ 12-30 ಗಂಟೆಗೆ ನ್ಯಾಯಾಲಯದ ಪಿ.ಸಿ 142 ಅಶೋಕ ರವರು ಘನ ನ್ಯಾಯಾಲಯದಿಂದ ಪಿರ್ಯಾದಿ ವಿ. ವೆಂಕಟಕೃಷ್ಣಪ್ಪ ಬಿನ್ ಬಿ.ಪಿ.ವೆಂಕಟರಾಯಪ್ಪ 62 ವರ್ಷ, ಜಿರಾಐತಿ, ದೊಡ್ಡಭಜನೆ ಮನೆ ರಸ್ತೆ, ವಾರ್ಡ್ ನಂ 25 ಚಿಕ್ಕಬಳ್ಳಾಪುರ ನಗರ ರವರು ನ್ಯಾಯಾಲಯದಲ್ಲಿ ದಾಖಲಿಸಿ ಸಾದರುಪಡಿಸಿದ ದೂರಿನ ಸಾರಾಂಶವೇನೆಂದರೆ, ದಿ: 24/11/15 ರಂದು ಪಿರ್ಯಾದಿದಾರರು ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ವಾಪಸಂದ್ರ ಗ್ರಾಮದ ಸರ್ವೆ ನಂ 161/1 ರ 39 ಗುಂಟೆ ಜಮೀನನ್ನು ವಿ.ರಘುನಾಥರೆಡ್ಡಿ ಬಿನ್ ಲೇಟ್ ರಾಮಿರೆಡ್ಡಿ ಮಿಲೇನಿಯಂ ರೆಸಿಡೆನ್ಸಿ ಅಪಾರ್ಟಮೆಂಟ್ ನಂ 2,3 & 4 ರಾಂಕ ಬ್ಲಾಕ್ ಕಾಂಪೌಂಡ್ ಜಕ್ಕೂರು ಮುಖ್ಯ ರಸ್ತೆ ಬ್ಯಾಟರಾಯನಪುರ ಬೆಂಗಳೂರು ರವರಿಗೆ 2,47,00,000 ರೂಗಳಿಗೆ ಮಾರಾಟ ಮಾಡಿ ಬಡಂಬಡಿಕೆ ಪತ್ರ ಮಾಡಿಕೊಂಡಿದ್ದು, ನಂತರ ಅದೇ ದಿನ ಸದರಿ ಜಮೀನನ್ನು 1 ಕೋಟಿ 97 ಲಕ್ಷ ರೂಗಳಿಗೆ ಕ್ರಯಕ್ಕೆ ಕೊಡಲು ಒಪ್ಪಿಕೊಂಡು ಕ್ರಯದ ಕರಾರು ಪತ್ರ ಮಾಡಿಕೊಟ್ಟಿರುತ್ತಾರೆ. ದಿ: 03/10/16 ರಂದು ಸದರಿ ಜಮೀನನ್ನು ಎ.ವಿ.ಲಕ್ಷ್ಮೀಪತಿ ಬಿನ್ ವೆಂಕಟರವಣಪ್ಪ ನಂ 73 1 ನೇ ಮಹಡಿ, 5 ನೇ ಕ್ರಾಸ್ ಆನಂದ ಲೇಔಟ್ ವಿದ್ಯಾರಣ್ಯ ಪುರ ಪೋಸ್ಟ್ಮ ಬೆಂಗಳೂರು ಮತ್ತು ವಿ.ರಘುನಾದ್ ಬಿನ್ ಲೇಟ್ ರಾಮಿರೆಡ್ಡಿ ನಂ 2,3 & 4 ರಾಂಕ ಬ್ಲಾಕ್ ಕಾಂಪೌಂಡ್ ಜಕ್ಕೂರು ಮುಖ್ಯ ರಸ್ತೆ ಬ್ಯಾಟರಾಯನಪುರ ಬೆಂಗಳೂರು ರವರು ಇಬ್ಬರು ಜಮೀನನ್ನು ಖರೀದಿಸಿ ನೊಂದಣೆ ಸಂಖ್ಯೆ 3813/16-17 ರಂತೆ ಚಿಕ್ಕಬಳ್ಳಾಪುರ ಉಪ ನೊಂದಾಣಾಧಿಕಾರಿಗಳ ಕಛೇರಿಯಲ್ಲಿ ನೊಂದಣಿ ಮಾಡಿಸಿಕೊಂಡಿದ್ದು, ಕ್ರಯ ಪತ್ರದಲ್ಲಿ 1 ಕೋಟಿ 29 ಲಕ್ಷ ರೂಗಳಿಗೆ ಖರೀಧಿಸಿದಂತೆ ನಮೂದಿಸಿದ್ದು, ಉಳಿದ 1 ಕೋಟಿ 35 ಲಕ್ಷ ರೂಗಳನ್ನು ಕೋಡುವುದಾಗಿ ಹೇಳಿದ್ದು, ಇದುವರೆವಿಗೂ ಹಣವನ್ನು ಕೋಡದೆ ಹಾಗೂ ಸದರಿ ಜಮೀನಿನಲ್ಲಿ ಪಿರ್ಯಾದಿದಾರರಿಗೆ ತಿಳಿಯದಂತೆ 11 ನಿವೇಶಗಳನ್ನು ಮಾಡಿದಂತೆ ನಗರಸಭೆಯಲ್ಲಿ ನಕಲಿ ದಾಖಲೆ ಸೃಷ್ಠಿಸಿ ಮೋಸಮಾಡಿರುತ್ತಾರೆ ಕಾನೂನು ಕ್ರಮ ಜರುಗಿಸಲು ಘನ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಸಾದರುಪಡಿಸಿರುವುದಾಗಿರುತ್ತೆ.

2) ಚಿಕ್ಕಬಳ್ಳಾಪುರ ನಗರ  ಪೊಲೀಸ್ ಠಾಣೆ ಮೊ.ಸಂ.24/2019 ಕಲಂ: 279-337  ಐ.ಪಿ.ಸಿ:-

     ದಿನಾಂಕ 07/02/2019 ರಂದು ಬೆಳಿಗ್ಗೆ 11-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶೇಷಾದ್ರಿ ಬಿನ್ ಎನ್,ಎಸ್ ಪ್ರಭಾಕರ, 35 ವರ್ಷ, ಬ್ರಾಹ್ಮಣರು, ಬೆಸ್ಕಾಂ ನಲ್ಲಿ ಲೈನ್ ಮ್ಯಾನ್ ಕೆಲಸ, ವಾಸ-ವಿಜಯ ಬ್ಯಾಂಕ್ ಹತ್ತಿರ, ತಿರುಮಲೆ, ಮಾಗಡಿ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಚಿಕ್ಕಪ್ಪನಾದ ಸುಧಾಕರ್ ರವರು ಬೆಂಗಳೂರು ನಗರದ ಎಂ.ಎಸ್ ಪಾಳ್ಯದಲ್ಲಿ ತಮ್ಮ ಸಂಸಾರದ ಸಮೇತವಾಗಿದ್ದು ವಾಸವಾಗಿದ್ದು, ಇದೇ ಚಿಂತಾಮಣಿ ನಗರದ ಎ.ಪಿ.ಎಂ.ಸಿ ಮಾರುಕಟ್ಟೆ ಬಳಿ ಇರುವ ವಿ.ಕೆ ಕನ್ಸ್ ವೆಕ್ಷನ್ ಹಾಲ್ ನಲ್ಲಿ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮ ಇದ್ದು, ಈ ಮದುವೆ ಕಾರ್ಯಕ್ರಮಕ್ಕೆ ಬರಲು ತನ್ನ ಚಿಕ್ಕಪ್ಪನಾದ ಎನ್.ಎಸ್ ಸುಧಾಕರ್ ರವರು ತಮ್ಮ ಬಾಬತ್ತು ಕೆಎ-02-ಎಂಹೆಚ್-9801 ಆಲ್ಟೋ-800 ಕಾರಿನಲ್ಲಿ ತನ್ನ ಅತ್ತೆಯಾದ ಲಲಿತಮ್ಮ, ದೊಡ್ಡಪ್ಪ ಎನ್.ಎಸ್ ನಂಜಣ್ಣ ಹಾಗು ತನ್ನ ಚಿಕ್ಕಮ್ಮ ರವರಾದ ಪದ್ಮಾವತಿ ರವರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಕಾರನ್ನು ತನ್ನ ಚಿಕ್ಕಪ್ಪ ಸುಧಾಕರ್ ರವರೇ ಚಾಲನೆ ಮಾಡಿಕೊಂಡು ಈ ದಿನ ದಿನಾಂಕ 07/02/2019 ರಂದು ಬೆಳಿಗ್ಗೆ ಬೆಂಗಳೂರಿನ ಎಂ.ಎಸ್ ಪಾಳ್ಯದಿಂದ ಬಂದಿದ್ದು, ತಾನು ಮತ್ತು ತಮ್ಮ ಮನೆಯವರು ಬೇರೆ ವಾಹನದಲ್ಲಿ ಬೆಂಗಳೂರಿನಿಂದ ಅವರ ಹಿಂದೆಯೇ ಬರುತ್ತಿದ್ದಾಗ, ಇದೇ ದಿನ ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ತನ್ನ ಚಿಕ್ಕಪ್ಪನಾದ ಸುಧಾಕರ್ ರವರು ಇದೇ ಚಿಂತಾಮಣಿ ತಾಲ್ಲೂಕು ಚಿನ್ನಸಂದ್ರ ಗ್ರಾಮದ ಬಳಿ ಬೆಂಗಳೂರು-ಕಡಪ ಮುಖ್ಯ ರಸ್ತೆಯಲ್ಲಿ ಮೇಲ್ಕಂಡ ಕೆಎ-02-ಎಂಹೆಚ್-9801 ಆಲ್ಟೋ-800 ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಚಿಂತಾಮಣಿ ಕಡೆಗೆ ಬರುತ್ತಿದ್ದಾಗ ಕಾರು ತನ್ನ ಚಿಕ್ಕಪ್ಪನಾದ ಸುಧಾಕರ್ ರವರ ನಿಯಂತ್ರಣ ತಪ್ಪಿ ಕಾರು ರಸ್ತೆಯ ಬದಿಯಲ್ಲಿನ ಹಳ್ಳಕ್ಕೆ ಪಲ್ಟಿಯಾದ ಕಾರಣ ಕಾರಿನಲ್ಲಿದ್ದ ತನ್ನ ಅತ್ತೆ ಲಲಿತಮ್ಮ ರವರ ಎದೆಗೆ , ತನ್ನ ಚಿಕ್ಕಪ್ಪ ಸುಧಾಕರ್ ರವರ ಭುಜಕ್ಕೆ, ಕೈ ಕಾಲುಗಳಿಗೆ, ತನ್ನ ದೊಡ್ಡಪ್ಪನಾದ ನಂಜಣ್ಣ ರವರ ತಲೆಗೆ, ಕೈ ಕಾಲುಗಳಿಗೆ, ತನ್ನ ಚಿಕ್ಕಮ್ಮ ಪದ್ಮಾವತಿ ರವರ ತಲೆಗೆ ರಕ್ತಗಾಯವಾಗಿರುತ್ತದೆ. ಸದರಿ ಕಾರಿನ ಹಿಂಬದಿಯಲ್ಲಿಯೇ ಬರುತ್ತಿದ್ದ ತಾವು ಕೂಡಲೇ ಸ್ಥಳಕ್ಕೆ ಹೋಗಿ ಗಾಯಾಳುಗಳನ್ನು ಉಪಚರಿಸುತ್ತಿದ್ದಾಗ ವಿಷಯ ತಿಳಿದು ಸ್ಥಳಕ್ಕೆ ಬಂದ 108 ಆಂಬುಲನ್ಸ್ ನಲ್ಲಿ ಗಾಯಾಳುಗಳನ್ನು ಕರೆದುಕೊಂಡು ಬಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ತನ್ನ ಅತ್ತೆ ಲಲಿತಮ್ಮ ರವರನ್ನು ಪರೀಕ್ಷಿಸಿ ವೈದ್ಯರು ತನ್ನ ಅತ್ತೆ ಮಾರ್ಗಮದ್ಯೆಯೇ ಸತ್ತು ಹೋಗಿರುವುದಾಗಿ ವಿಷಯ ತಿಳಿಸಿದ್ದು, ಉಳಿದ ಗಾಯಾಳುಗಳನ್ನು ಇನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತಾರೆ. ತನ್ನ ಅತ್ತೆ ಲಲಿತಮ್ಮ ರವರ ಶವವು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ತಾವು ಸ್ಥಳಕ್ಕೆ ಬೇಟಿಯನ್ನು ನೀಡಿ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

3) ಚಿಂತಾಮಣಿ ನಗರ  ಪೊಲೀಸ್ ಠಾಣೆ ಮೊ.ಸಂ.15/2019 ಕಲಂ: 420  ಐ.ಪಿ.ಸಿ & 78(ಸಿ) ಕೆ.ಪಿ. ಆಕ್ಟ್:-

     ದಿನಾಂಕ: 08/02/2019 ರಂದು ಮಧ್ಯಾಹ್ನ 2-00 ಗಂಟೆಗೆ ಪಿ.ಐ ಸಾಹೇಬರು ಪಂಚನಾಮೆ ಮಾಲು ಹಾಗೂ ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಸಾರಾಂಶವೆನೇಂದರೆ, ಶ್ರೀ ನಾರಾಯಣಸ್ವಾಮಿ ಜಿ.ಸಿ  ಪೊಲೀಸ್  ಇನ್ಸ್ ಪೆಕ್ಟರ್ ತನಗೆ ಗೆ ಮಧ್ಯಾಹ್ನ 12-30 ಗಂಟೆಗೆ ಚಿಂತಾಮಣಿ ನಗರದ ಚೌಡರೆಡ್ಡಿ ಪಾಳ್ಯದ ಮದೀನಾ ಮಸೀದಿಯ ಮುಂದೆ  ರಸ್ತೆಯ ಬದಿಯಲ್ಲಿ  ಮಟ್ಕಾ ಚೀಟಿ ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಆತನ ಮೇಲೆ ದಾಳಿ ಮಾಡಲು ಪಂಚರನ್ನು ಮತ್ತು ಸಿಬ್ಬಂದಿಯಾದ  ಹೆಚ್.ಸಿ 124 ನರಸಿಂಹ ಮೂರ್ತಿ ಮತ್ತು ಸಿ.ಹೆಚ್.ಸಿ 126 ನಾಗಭೂಷಣ್  ರವರನ್ನು  ಜೀಫ್ ನಂ: ಕೆಎ 40 ಜಿ 356   ವಾಹನ ದಲ್ಲಿ ಪ್ಲವರ್  ವೃತ್ತ, ಚೇಳೂರು ವೃತ್ತದ ಮಾರ್ಗವಾಗಿ ಚೌಡರೆಡ್ಡಿ ಪಾಳ್ಯದ ಮದೀನ ಮಸೀದಿಯ ಬಳಿ ಹೋಗಿ ಮೆರೆಯಲ್ಲಿ ಜೀಫನ್ನು ಮರೆಯಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಮದೀನ ಮಸೀದಿಯ ಮುಂಭಾಗ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು  ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಕೈಯಲ್ಲಿ ಪೆನ್ನು ಹಾಗೂ ಪೇಪರ್ ನ್ನು  ಹಿಡಿದು ಕೊಂಡು  ಮಟ್ಕಾ ನಂಬರ್ ಗಳನ್ನು ಬರೆದುಕೊಂಡು 1 ರೂಗೆ 80 ರೂ ಕೊಡುವುದಾಗಿ ಜನರಿಗೆ ಮಟ್ಕಾ ಹಣ ಕಟ್ಟುವಂತೆ ಪ್ರೇರೆಪಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದವರನ್ನು  ಹಿಡಿಯುವಷ್ಟರಲ್ಲಿ ಕೂಗುತ್ತಿದ್ದ ವ್ಯೆಕ್ತಿಯು ಓಡಿ ಹೋಗಿದ್ದುಪೇನ್ನು ಮತ್ತು ಮಟ್ಕಾ ಚೀಟಿಯನ್ನು ಹಿಡಿದುಕೊಂಡಿದ್ದನ್ನು ಹಿಡಿದು  ಹೆಸರು ಮತ್ತು ವಿಳಾಸ ಕೇಳಲಾಗಿ ಷೇಕ್ ವಜೀರ್ ಬಿನ್ ಲೇಟ್ ಷೇಕ್ ಹೈದರ್ ಸಾಬ್, 65 ವರ್ಷ,ಮುಸ್ಲಿಂ ಜನಾಂಗ,ಕೂಲಿ ಕೆಲಸ ವಾಸ:ವಿನಾಯಕ ನಗರ, ಚಿಂತಾಮಣಿ ನಗರ  ಎಂತ ತಿಳಿಸಿದ್ದು ಆತನನ್ನು ಪಂಚರ ಸಮಕ್ಷಮ ಅಂಗ ಶೋಧನೆ ಮಾಡಲಾಗಿ ನಗದು ಹಣ 1010 ರೂ, ಒಂದು ಮಟ್ಕಾ ಚೀಟಿ, ಒಂದು ಪೆನ್ನು, ಇದ್ದು ಓಡಿ ಹೋದ ವ್ಯೆಕ್ತಿಯ ಬಗ್ಗೆ ವಿಚಾರಿಸಲಾಗಿ ಈತನು ನಮ್ಮ ಏರಿಯಾದ ವಾಸಿ ಮುನ್ನಾ ಎಂತೆಲೂ ನಾನು ಪ್ರತಿ ದಿನ ಮಟ್ಕಾ ಚೀಟಿಗಳನ್ನು ಬರೆದು  ಸಾರ್ವಜನಿಕರಿಗೆ ಮೋಸ ಮಾಡಿ ಸಂಗ್ರಹಿಸಿರುವ ಹಣವನ್ನು  ಆಗಾಗ ಮುನ್ನಾ ರವರು ಬಂದು ತೆಗೆದುಕೊಂಡು ಹೋಗಿ ಸದರಿ ಹಣವನ್ನು ಮೆಹಬೂಬ ನಗರದ ವಾಸಿಯಾದ ಅಲ್ಲು @ ಸಲೀಂ ರವರಿಗೆ  ನೀಡಿ ಅವರಿಂದ ಕಮೀಷನ್ ಹಣವನ್ನು ತಂದು ತನಗೆ ನೀಡುತ್ತಿರುತ್ತಾನೆಂದು ತಿಳಿಸಿರುತ್ತಾನೆ. ಪಂಚರ ಸಮಕ್ಷಮ ಮಧ್ಯಾಹ್ನ 1-00 ಗಂಟೆರಯಿಂದ 2-00 ಗಂಟೆಯ ವರೆಗೆ ಪಂಚನಾಮೆಯನ್ನು ಜರುಗಿಸಿ ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ  ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ಹಗಲು ಠಾಣಾಧಿಕಾರಿಗಳಿಗೆ  ವರದಿಯ  ಮೇರೆಗೆ ಠಾಣಾ ಮೊ.ಸಂಖ್ಯೆ:15/2019 ಕಲಂ:78(3) ಮತ್ತು 420 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

4) ಗೌರಿಬಿದನೂರು ಪುರ  ಪೊಲೀಸ್ ಠಾಣೆ ಮೊ.ಸಂ.14/2019 ಕಲಂ: 279-304(ಎ)  ಐ.ಪಿ.ಸಿ :-

     ದಿನಾಂಕ :08/02/2019 ರಂದು ಪಿರ್ಯಾದಿ ಶ್ರೀಮತಿ ಮುದ್ದುಗಂಗಮ್ಮ ಟಿ.ಎನ್ ಕೋಂ ಲೊಕೇಶ ಜಿ, 30 ವರ್ಷ, ನಾಯಕರು, ಗೃಹಿಣಿ, ಡಿ.ಫಾಳ್ಯ ಗ್ರಾಮ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಗಂಡ ಲೋಕೇಶ್ ರವರು ಗೌರಿಬಿದನೂರು ಬಿ.ಇ.ಒ  ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಡಿ.ಪಾಳ್ಯದಿಂದ ನಮ್ಮ ಬಾಬತ್ತು. ಡಿಸ್ಕವರ್ ದಿಚಕ್ರ ವಾಹನ CH NO: D2A14AZ3FRM62072, ENG NO:JBZRFM73179 ರಲ್ಲಿ ಗೌರಿಬಿದನೂರಿಗೆ ಬಂದು ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ವಾಪಸ್ಸು ಬರುತ್ತಿದ್ದರು. ಹೀಗಿರುವಾಗ ದಿನಾಂಕ:07/02/2019 ರಂದು ರಾತ್ರಿ ಸುಮಾರು 7-30 ಗಂಟೆಯ ಸಮಯದಲ್ಲಿ ಯಾರೋ ಸಾರ್ವಜನಿಕರು ನನ್ನ ಮೈದುನನಾದ ಅಶ್ವತ್ಥನಾರಾಯಣ ರವರಿಗೆ ಫೋನ್ ಮಾಡಿ ಲೋಕೇಶ್ ರವರು ಗೌರಿಬಿದನೂರು ಕಲ್ಲಿನಾಥೇಶ್ವರ ದೇವಸ್ಥಾನದ ಬಳಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಕೆಳಕ್ಕೆ ಬಿದ್ದಿರುತ್ತಾರೆಂದು ವಿಚಾರವನ್ನು ತಿಳಿಸಿರುತ್ತಾರೆ. ಅವರು ನನಗೆ ವಿಚಾರವನ್ನು ತಿಳಿಸಿದ್ದು, ಕೂಡಲೇ ನಾನು ನಮ್ಮ ಸಂಬಂಧಿಗಳೊಂದಿಗೆ ಅದೇ ರಸ್ತೆಯಲ್ಲಿ ಬಂದಿದ್ದು, ದ್ವಿಚಕ್ರ ವಾಹನ ಕಲ್ಲಿನಾಥೇಶ್ವರ ಗುಟ್ಟದ ಬಳಿ ಬಿದ್ದಿರುತ್ತೆ. ಗಾಯಾಳುವನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿಕೊಂಡು ಹೋಗಿರುತ್ತಾರೆಂದು ಗೌರಿಬಿದನೂರು ಆಸ್ಪತ್ರೆಗೆ ಬಂದಿದ್ದು, ನನ್ನ ಗಂಡನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡುತ್ತಿದ್ದು, ವಿಚಾರ ನಿಜವಾಗಿರುತ್ತೆ. ನನ್ನ ಗಂಡನ ತಲೆಗೆ ಗಾಯವಾಗಿದ್ದು, ರಕ್ತ ಸುರಿಯುತ್ತಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಗೆ ಕಳುಹಿಸಿಕೊಟ್ಟಿದ್ದು, ನನ್ನ ಮೈದುನ ಅಶ್ವತ್ಥನಾರಾಯಣ ಮತ್ತು ನನ್ನ ಅಣ್ಣನಾದ ಗಂಗಾಧರ ರವರು ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಿಕೊಂಡು ಹೋಗಿದ್ದರು. ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮೆದುಳಿನಲ್ಲಿ ತುಂಬಾ ರಕ್ತಸ್ರಾವವಾಗಿದೆ. ಇಲ್ಲಿ ಆಗುವುದಿಲ್ಲ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಮತ್ತೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬೆಳಗಿನ ಜಾವ 6-30 ಗಂಟೆಗೆ ವಾಪಸ್ಸು ಸಾಗಿಸಿಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದರು. ನಾನು ಗೌರಿಬಿದನೂರು ಆಸ್ಪತ್ರೆಯ ಬಳಿಯಿದ್ದು ನನ್ನ ಗಂಡ ಬೆಳಿಗ್ಗೆ 8-30 ಗಂಟೆಯ ಸುಮಾರಿನಲ್ಲಿ ಮೃತಪಟ್ಟಿರುತ್ತಾರೆ. ತಾವುಗಳು ಮುಂದಿನ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

5) ಕೆಂಚಾರ್ಲಹಳ್ಳಿ  ಪೊಲೀಸ್ ಠಾಣೆ ಮೊ.ಸಂ.21/2019 ಕಲಂ: 379  ಐ.ಪಿ.ಸಿ :-

     ದಿನಾಂಕ 07-02-2109 ರಂದು ಪಿರ್ಯಾಧಿದಾರರಾದ ಟಿ.ಎಸ್ ಮಂಜುನಾಥ ನಾಯಕ ಬಿನ್ ಟಿ.ಎಂ ಶ್ರೀನಿವಾಸಮೂರ್ತಿ, 38 ವರ್ಷ, ನಾಯಕ ಜನಾಂಗ, ಪವರ್ ಮ್ಯಾನ್ ಕೆಲಸ, ಕೆಂಚಾರ್ಲಹಳ್ಳಿ ಶಾಖೆ, 31 ನೇ ವಾರ್ಡ, ತಿಮ್ಮಸಂದ್ರ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 04-02-2019 ರಂಧು ಬಂದೇನಹಳ್ಳಿ ಗ್ರಾಮದಲ್ಲಿ ಟ್ರಾನ್ಸ್ ಫಾರ್ಮ ಅಳವಡಿಸಲು ಹೋಗಿದ್ದು ಸುಮಾರು ಮದ್ಯಾಹ್ನ 3.45 ಗಂಟೆ ಸಮಯದಲ್ಲಿ  ಬಂದೇನಹಳ್ಳಿ ಕ್ರಾಸ್ ಬಳಿ ಮರದ ಕೆಳಗೆ ಕುಳಿತುಕೊಂಡು ತಾನು ನಿದ್ದೆಗೆ ಜಾರಿರುತ್ತೇನೆ.  ತನ್ನ ಷರ್ಟ್ ಜೇಬುನಲ್ಲಿದ್ದ ವಿವೋ ಕಂಪನಿಯ ಎಫ್ 83 ಸ್ಮಾರ್ಟ ಪೋನ್ ಮೊಬೈಲ್, ಸಿಮ್ ಸಂಖ್ಯೆ:9731950135 ಹಾಗೂ ಕಾರ್ಬನ್ ಮೊಬೈಲ್  ಸಿಮ್ ಸಂಖ್ಯೆ 9630214566 ಸಂಖ್ಯೆ ಎರಡು ಮೊಬೈಲ್ ಕಳ್ಳತನವಾಗಿರುತ್ತದೆ. ಈ ಬಗ್ಗೆ ತಾನು ಪರಿಚಯಸ್ಥರರಿಗೆ ತಿಳಿಸಿರುತ್ತೇನೆ, ಪತ್ತೆ ಮಾಡೋಣ ಎಂದು ತಿಳಿಸಿರುತ್ತಾರೆ. ದಿನಾಂಕ 07-02-2019 ರಂಧು ಮದ್ಯಾಹ್ನ 03.00 ಗಂಟೆ ಸಮಯದಲ್ಲಿ ಮನೆಯಿಂದ ತನ್ನ ಹೆಂಡತಿ ಶ್ವೇತಾ ರವರು ನನಗೆ ಕರೆ ಮಾಡಿ ವಾಟ್ಸಫ್ ಸ್ಟೇಟಸ್ ನಲ್ಲಿ ನಿಮ್ಮ ಕಳೆದು ಹೋಗಿದ್ದ ಮೊಬೈಲ್ ನಲ್ಲಿ ನಿಮ್ ಪೋಟೋ ಬದಲಾಗಿ ಬೆರೋಬ್ಬರ ಪೊಟೋ ಬಂದಿದ್ದು ಬೇಗ ಬನ್ನಿ ಎಂದರು ಅದರಂತೆ ತಾನು ತನ್ನ ಹೆಂಡತಿ ಮೊಬೈಲ್ ನಲ್ಲಿ ವಾಟ್ಸಫ್ ಸ್ಟೇಟಸ್ ನೋಡಲಾಗಿ ತಾನು ನೋಡಿರುವ ಕದಿರೇನಹಳ್ಳಿ ಕ್ರಾಸ್ ನಲ್ಲಿ ವಾಸವಾಗಿರುವ ವೆಂಕಟೇಶ್ ಬಿನ್ ಶ್ರೀನಿವಾಸಪ್ಪ ರವರ ಪೋಟೋ ಇರುತ್ತದೆ. ದಿನಾಂಕ 04-02-2019 ರಂದು ಕಳ್ಳತನವಾಗಿದ್ದ ತನ್ನ ಎರಡು ಮೊಬೈಲ್ ನ್ನು ವೆಂಕಟೇಶ್ ಬಿನ್ ಶ್ರೀನಿವಾಸಪ್ಪ, ಕದಿರೇನಹಳ್ಳಿ ಕ್ರಾಸ್ ರವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ವಿವೋ ಮೊಬೈಲ್ ಪೋನ್ ಬೆಲೆ 14.990 ರೂ ಹಾಗೂ ಕಾರ್ಬನ್ ಮೊಬೈಲ್ ಬೆಲೆ 500 ರೂ ಆಗಿರುತ್ತದೆ. ಕಳುವಾಗಿದ್ದ ಮೊಬೈಲ್ ಹುಡುಕಾಡಲಾಗಿ ಸೀಗದೆ ಇರುವುದರಿಂದ ತಡವಾಗಿ ದೂರನ್ನು ನೀಡಿದ್ದು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಾಗಿರುತ್ತೆ.

6) ಮಂಚೇನಹಳ್ಳಿ  ಪೊಲೀಸ್ ಠಾಣೆ ಮೊ.ಸಂ.16/2019 ಕಲಂ: 302  ಐ.ಪಿ.ಸಿ & 174 ಸಿ.ಆರ್.ಪಿ.ಸಿ :-

     ದಿನಾಂಕ 08/02/2019 ರಂದು ಬೆಳಿಗ್ಗೆ 10-50 ಗಂಟೆಗೆ ಪಿರ್ಯಾಧಿ ಕಲ್ಲಿನಾಯಕನಹಳ್ಳಿ ಗ್ರಾಮದ ನರಸರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಬಾಬತ್ತು ನಮ್ಮ ಗ್ರಾಮವಾದ ಕಲ್ಲಿನಾಯಕನಹಳ್ಳಿ ಗ್ರಾಮದ ಸರ್ವೇ ನಂ 70 ರ ಜಮೀನಿನ 8.5 ಎಕೆರೆ ಜಮೀನನ್ನು ಈಗ್ಗೆ ಸುಮಾರು 8 ವರ್ಷಗಳ ಹಿಂದ ಮಾನ್ಸೆಂಟ್ ಕಂಪನಿಯ ಬೀಜ ಸಂಶೋಧನ ಕೇಂದ್ರಕ್ಕೆ ಲೀಜ್ ಗೆ ನೀಡಿದ್ದು, ಇವರುಗಳು ಬೆಳೆಗಳಿಗೆ ನೀರು ಹರಿಸಲೆಂತೆ ನಮ್ಮ ಸದರಿ ಜಮೀನಿನಲ್ಲಿ ಸುಮಾರು 8 ಅಡಿ ಆಳ, ಸುಮಾರು 100 ಅಡಿ ಉದ್ದ, ಸುಮಾರು 50 ಅಡಿ ಅಗಲದ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿದ್ದು, ಇದರಲ್ಲಿ ಈಗ ಸುಮಾರು 5 ರಿಂದ 6 ಅಡಿ ನೀರು ಇರುತ್ತೆ. ಹೀಗಿರುವಲ್ಲಿ ಈ ದಿನ ದಿನಾಂಕ 08/02/2019 ರಂದು ಬೆಳಿಗ್ಗೆ ಸುಮಾರು 7-00 ಗಂಟೆಯ ಸಮಯದಲ್ಲಿ ತಾನು ತಮ್ಮ ಮನೆಯಲ್ಲಿದ್ದಾಗ ತಮ್ಮ ಜಮೀನಿನ  ಕೃಷಿ ಹೊಂಡದಲ್ಲಿ ಒಬ್ಬ ಹೆಂಗಸ್ಸು ಮತ್ತು ಹೆಣ್ಣುಮಗಳು ಬಿದ್ದು ಮೃತಪಟ್ಟಿರುತ್ತಾರೆಂದು ವಿಷಯ ತಿಳಿದು. ಆಗ ತಾನು ತಕ್ಷಣ ಅಲ್ಲಿಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ಸದರಿ ಕೃಷಿ ಹೊಂಡದಲ್ಲಿ  ಮಗುವಿನ ಮೃತ ದೇಹ ಬೋರಲಾಗಿ ಬಿದ್ದು ತೇಲುತ್ತಿತ್ತು, ಹೆಂಗಿಸಿನ ಮೃತದೇಹ ನೀರಿನಲ್ಲಿ ಮುಳುಗಡೆಯಾಗಿತ್ತು. ಸುತ್ತಮುತ್ತ ಗ್ರಾಮದ ಜನರನ್ನು ಕೇಳಿದರೂ ಮೃತರು ಯಾರು ಎಂಬುವುದು ಗೊತ್ತಾಗಲಿಲ್ಲ. ಮೃತಳು ಸುಮಾರು 30 ರಿಂದ 35 ವರ್ಷ ವಯಸ್ಸು, ಗೋದಿ ಮೈಬಣ್ಣ, 5.2 ಅಡಿ ಎತ್ತರ, ಬಲಕೈ ಮೇಲೆ R ಎಂದು ಹಚ್ಚೆ ಹಾಕಿಸಿರುವ ಗುರ್ತು ಇರುತ್ತೆ. ಕೋಲು ಮುಖ, ಈಕೆಯು ಕಪ್ಪು ಬಣ್ಣದ ಕುಪ್ಪಸ, ಹಳದಿ ಬಣ್ಣದ ಹೂಗಳಿರುವ ನೀಲಿ ಮತ್ತು ಕಂದುಬಣ್ಣದ ಸೀರೆ ಧರಿಸಿದ್ದು,  ಈಕೆಯು ಯಾವುದೂ ಕಾರಣಕ್ಕೆ ಸುಮಾರು 8 ರಿಂದ 9 ವರ್ಷದ ಹೆಣ್ಣು ಮಗುವನ್ನು ಕೃಷಿ ಹೊಂಡದ ನೀರಿಗೆ ತಳ್ಳಿ ಸಾಯಿಸಿ ತಾನು ನೀರಿಗೆ ಬಿದ್ದು, ಆತ್ಮಹತ್ಯ ಮಾಡಿಕೊಂಡಿರಬಹುದು, ಮಗು ನೇರಳೆ ಬಣ್ಣದ ಬಾಟಂ, ನೇರಳೆ ಬಣ್ಣ ಮತ್ತು ಬಿಳಿ ಬಣ್ಣದ ಗೆರೆಗಳಿರುವ ಟಾಪ್ ನ ಚೂಡಿದಾರ ಇರುತ್ತದೆ, ದಿನಾಂಕ 07/02/2019 ರ ಸಂಜೆ 7-00 ಗಂಟೆ ಸದರಿ ಮಾನ್ಸೆಂಟ್ ಕಂಪನಿಯ ಸೆಕ್ಯೂರಿಟಿ ಗಾರ್ಡ ತಿಮ್ಮರಾಜು ಬಿನ್ ಬೀರಪ್ಪ ರವರು ಸದರಿ ಕೃಷಿ ಹೊಂಡದ ಬಳಿ ಹೋಗಿ ಚೆಕ್ ಮಾಡಿದ್ದು, ಆಗ ಯಾವುದೇ ಕುರುವುಗಳು ಕಂಡುಬಂದಿರುವುದಿಲ್ಲ ಎಂದು ತಿಳಿಸಿದ್ದು, ಸದರಿ ಹೊಂಡ ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿ 9 ರ ಪಕ್ಕದಲ್ಲಿದ್ದು, ಇದು ರಸ್ತೆಯಿಂದ ಸುಮಾರು 50 ಅಡಿ ದೂರ ಪೂರ್ವಕ್ಕೆ ಇರುತ್ತದೆ. ಮಾನ್ಸೆಂಟ್ ಕಂಪನಿಯವರು ಜಮೀನು ಸುತ್ತ ಪೆನ್ಸಿಂಗ್ ಕಾಕಿದ್ದು, ಪೆನ್ಸಿಂಗ್ ವೈರ್ ಮಧ್ಯ ತೋರಿ ಬಂದು ನೀರಿನ ಹೊಂಡದಲ್ಲಿ ಬಿದ್ದಿರುತ್ತಾರೆ.  ಆದ್ದರಿಂದ ಮುಂದಿನ ತನಿಖೆ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.