ದಿನಾಂಕ : 08/01/2019 ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.03/2019 ಕಲಂ. 279-337-338 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ 08/01/2019 ರಂದು ಬೆಳಿಗ್ಗೆ 08.30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ನಂಜಮ್ಮ ಕೋಂ ದೊಡ್ಡವೆಂಕಟರವಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಮಗ ಮಧು @ ಮಧುಸೂದನ್ ರವರು ಲಾರಿ ಚಾಲಕ  ವೃತ್ತಿ ಮಾಡುತ್ತಿರುತ್ತಾನೆ, ದಿನಾಂಕ 07/01/2019 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು ರಾತ್ರಿಯಾದರು ಮನೆಗೆ ಬರಲಿಲ್ಲ ಮಧ್ಯ ರಾತ್ರಿ 1.00 ಗಂಟೆ ಸಮಯಕ್ಕೆ ತಮಗೆ ಪರಿಚಯಸ್ಥನಾದ ಶ್ರೀನಿವಾಸ ರವರು ತಮ್ಮ ಮನೆಯ ಬಳಿ ಬಂದು ತನಗೆ ನಿನ್ನ ಮಗನಿಗೆ ಅಪಘಾತವಾಗಿ ಚಿಕ್ಕಬಳ್ಳಾಪುರ ಜಿಲ್ಲಾಸರ್ಕಾರಿ ಆಸ್ಪತ್ರೆಯಲ್ಲಿ ಇರುವುದಾಗಿ ತಿಳಿಸಿದ್ದು ತಾನು ಆಸ್ಪತ್ರೆಗೆ ಹೋಗಿ ನೋಡಲಾಗಿ ನಿಜವಾಗಿರುತ್ತದೆ ಅಪಘಾತವಾದ ವಿಚಾರ ತಿಳಿದುಕೊಳ್ಳಲಾಗಿ ದಿನಾಂಕ 07/01/2019 ರಂದು ರಾತ್ರಿ 11.30 ಗಂಟೆ ಸಮಯದಲ್ಲಿ  ತನ್ನ ಮಗನು ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರಸ್ತೆಯಲ್ಲಿ ತಮ್ಮ ಮನೆಗೆ ಬರಲು ಗಿಡ್ನಹಳ್ಳಿ ಗೇಟ್ ಬಳಿ ರಸ್ತೆಯ ಎಡಭಾಗದಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹಿಂದಿನಿಂದ ಯಾವುದೋ ಈಚರ್ ಟೆಂಪೋ ವಾಹನವನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತನ್ನ ಮಗನಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ತನ್ನ ಮಗನ ಎರಡು ಮುಂಗಾಲುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮತ್ತಿತರೆ ಕಡೆ ಗಾಯಗಳಾಗಿ ರಸ್ತೆಯಲ್ಲೇ ಬಿದ್ದಿದ್ದು, ಸದರಿ ಈಚರ್ ಟೆಂಪೋ ಚಾಲಕನು ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ, ಯಾರೋ ರಸ್ತೆಯಲ್ಲಿ ಓಡಾಡುವವರು ತನ್ನ ಮಗನನ್ನು ಆಂಬುಲೆನ್ಸ್ ನಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ, ಜಿಲ್ಲಾ ಆಸ್ಪತ್ರೆಯ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ತನ್ನ ಮಗನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ತನ್ನ ಮಗನಿಗೆ ಅಪಘಾತ ಪಡಿಸಿದ ಈಚರ್ ಟೆಂಪೋ ವಾಹವನ್ನು ಪತ್ತೆ ಮಾಡಿ ಅದರ ಚಾಲಕನ ಹೆಸರು ವಿಳಾಸ ತಿಳಿದು ಸದರಿ ವಾಹನ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

2) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.12/2019 ಕಲಂ. 380-454-457 ಐ.ಪಿ.ಸಿ:-

     ದಿನಾಂಕ: 03.01.2019 ರಂದು  ಪಿರ್ಯಾಧಿಯು  ಸ್ವಂತ ಕೆಲಸದ ಮೇರೆ    ಮನೆಗೆ ಡೋರ್ ಲಾಕ್ ಹಾಕಿಕೊಂಡು ಮನೆಯ ಗೇಟ್ ಗೆ ಬೀಗ ಹಾಕಿಕೊಂಡು  ನನ್ನ ಕುಟುಂಭದ  ಸಮೇತ ರಾತ್ರಿಹೈದ್ರಾಬಾದ್ ಗೆ  ಹೋಗಿ ದಿನಾಂಕ: 07.01.2019 ರಂದು ಬೆಳಗಿನ ಜಾವ 6-00 ಗಂಟೆಗೆ ಹೈದ್ರಾಬಾದ್ ನಿಂದ ವಾಪದ್ದು ಬಂದು ಗೇಟ್ ತೆಗೆದು ಮನೆಯ ಬಾಗಿಲಿಗೆ ಬಂದಾಗ ಬಾಗಿಲು ತೆರೆದುಕೊಂಡಿದ್ದು ಪರಿಶೀಲಿಸಲಾಗಿ  ಯಾರೋ ಕಳ್ಳರು ಮನೆಯ ಡೋರ್ ಲಾಕ್ ನ್ನು ಯಾವುದೋ ಆಯುಧದಿಂದ ಮೀಟಿ ಬಾಗಿಲು ತೆಗೆದು ಒಳಗೆ ಪ್ರವೇಶ ಮಾಡಿ  ಮನೆಯಲ್ಲಿ ಎರಡು ಬೆಡ್ ರೂಂಗಳಲ್ಲಿದ್ದ ಕಬೋರ್ಡ್ ಗಳನ್ನು ಕಿತ್ತು ಅದರಲ್ಲಿದ್ದ ಬಟ್ಟೆ, ವಸ್ತುಗಳನ್ನು ಕಿತ್ತುಹಾಕಿ  ಅದರಲ್ಲಿಟ್ಟಿದ್ದ  ಚಿನ್ನ, ಬೆಳ್ಳಿ, ನಗದು ಹಣ,  ವಾಚ್ ಗಳು ಹಾಗೂ ಇತರೆ ಸಾಮಾಗ್ರಿಗಳನ್ನು  ಕಳವು ಮಾಡಿಕೊಂಡು ಹೋಗಿದ್ದು ಪರಿಶೀಲಿಸಲಾಗಿ.    ಬೆಡ್ ರೂಂನಲ್ಲಿಟ್ಟ ಕಬೋರ್ಡ್ ನಲ್ಲಿದ್ದ, 1.   45 ಗ್ರಾಂ ತೂಕದ 26 ಚಿನ್ನದ ಉಂಗರಗಳು ಅದರಲ್ಲಿ  6 ಹೆಂಗಸರದ್ದು, 20 ಮಕ್ಕಳದ್ದಾಗಿರುತ್ತದೆ. 2.     65 ಗ್ರಾಂ ತೂಕದ  12 ಜೊತೆ ಚಿನ್ನದ ಕಿವಿ ಓಲೆಗಳು. 3.     4, ಗ್ರಾಂ ತೂಕದ 16 ವಜ್ರಗಳಿರುವ 1 ಜೊತೆ ವಜ್ರದ ಓಲೆಗಳು. 4.   4 ಗ್ರಾಂ ತೂಕದ  8 ಮುಗುತಿಗಳು. 5.     70 ಗ್ರಾಂ ತೂಕದ ಕತ್ತಿನ ನೆಕ್ಲೇಸ್ ಓಲೆ ಮಾಟಿಯೊಂದಿಗೆ ಸೆಟ್. 6.   25 ಗ್ರಾಂ ತೂಕದ ಗುಂಡುಗಳ ಸರ. 7.    30 ಗ್ರಾಂ ತೂಕದ ಡಾಲರ್ ಚೈನ್. 8.         65 ಗ್ರಾಂ ತೂಕದ 1 ಕತ್ತಿನ ಉದ್ದದ ಹಾರ. 9.   60 ಗ್ರಾಂ ತೂಕದ ಉದ್ದದ  1 ರಾಣಿ ಹಾರ. 10.    80 ಗ್ರಾಂ ತೂಕದ 6 ಓಲೆಗಳು,      11.     40 ಗ್ರಾಂ ತೂಕದ  5 ಚಿಕ್ಕ ಚೈನುಗಳು. 12.   15 ಗ್ರಾಂ ತೂಕದ ಮಂಗಳ ಸೂತ್ರ, 13.    5 ಗ್ರಾಂ ತೂಕದ ಮಕ್ಕಳ ಕೈ ಜೈನು, 14. 18 ಗ್ರಾಂ ತೂಕದ ಗಂಡಸರ 2 ಉಂಗರಗಳು. 15.  20 ಗ್ರಾಂ ತೂಕದ ಗಂಡಸರ ಕೈ ಚೈನು, 16.  150 ಗ್ರಾಂ ತೂಕದ  ಬೆಳ್ಳಿಯ ಕಾಲು ಜೈನುಗಳು 3 ಜೊತೆ. 17.  ವಾಚುಗಳು-28  ಅವುಗಳಲ್ಲಿ  ಹೆಂಗಸರದ್ದು-10, ಗಂಡಸರ-18. 18.  ನಗದು ಹಣ 4 ಲಕ್ಷರೂ ಗಳು( ನಾಲ್ಕು ಲಕ್ಷರೂಗಳು)  ಹಾಗೂ ಇತರೆ ವಸ್ತುಗಳು ಕಳುವಾಗಿರುತ್ತದೆ. ಹಾಗೂ  ಮತ್ತೊಂದು  ಮಕ್ಕಳ ಕೊಠಡಿಯಲ್ಲಿದ್ದ ಕಬೋರ್ಡ್ ನ್ನು ಕಿತ್ತು ಅದರಲ್ಲಿದ್ದ   6 ಲಕ್ಷ ರೂ( ರೂ ಆರು ಲಕ್ಷ ರೂ) ನಗದು ಹಣ. ಹಾಗೂ ಇತರೆ ಚಿಲ್ಲರೆ ಹಣ 25, 000/- ರೂ  ಮತ್ತು ಹಾಲ್ ನಲ್ಲಿಟ್ಟಿದ್ದ  ಸೊನಿ ಬ್ರಾವಿಯಾ ಎಲ್ ಇಡಿ ಟಿವಿ ಯನ್ನು ಸಹ ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಮೇಲ್ಕಂಡ  ಎಲ್ಲಾ ವಸ್ತುಗಳಾದ 1.  ಚಿನ್ನದ ವಡವೆಗಳು 543 ಗ್ರಾಂ ಬೆಲೆ ರೂ, 13,57,500=00 ( ಹದಿಮೂರು ಲಕ್ಷದ ಐವತ್ತೇಳು ಸಾವಿರದ ಐದುನೂರು ರೂ) 2. ಬೆಳ್ಳಿ ವಡವೆಗಳು  150 ಗ್ರಾಂ  ಬೆಲೆ  ರೂ,     6000=00( ಆರು ಸಾವಿರ ರೂಗಳು)3.  ಸೋನಿ ಬ್ರಾವಿಯಾ ಎಲ್ ಇಡಿ ಟಿವಿ ಬೆಲೆ  38,000=00( ಮುವ್ವೆಂತೆಂಟು ಸಾವಿರ ರೂಗಳು) 4.  ನಗದು ಹಣ      ರೂ 10, 25,000=00 ( ಹತ್ತು ಲಕ್ಷದ  ಇಪ್ಪತ್ತೈದು ಸಾವಿರ ರೂಗಳು) 5. ಕೈಗಡಿಯಾರಗಳು 28  ಬೆಲೆ  ರೂ 95,000=00 ( ತೊಂಬತ್ತೈದು ಸಾವಿರ ರೂಗಳು) 6.    ವಜ್ರದ ಓಲೆ ಒಂದು ಜೊತೆ ರೂ  55,000=00 ( ಐವ್ವತ್ತೈದು ಸಾವಿರ ರೂಗಳು )  ಹಾಗೂ ಇತರೆ ಸಾಮಾಗ್ರಿಗಳು. ಒಟ್ಟು ಬೆಲೆ ರೂ 25,76,500=00 ( ರೂ ಇಪ್ಪತ್ತೈದು ಲಕ್ಷದ  ಎಪ್ಪತ್ತಾರು ಸಾವಿರದ ಐದು ನೂರು ರೂಗಳು) ಮೊತ್ತದ  ಚಿನ್ನ ಬೆಳ್ಳಿ ವಜ್ರ ನಗದು  ಟಿವಿ ಹಾಗೂ ಇತರೆ ವಸ್ತುಗಳು ಕಳುವಾಗಿರುತ್ತದೆ. ಅದ್ದರಿಂದ  ಸದರಿ ವಡವೆ ವಸ್ತು ನಗದನ್ನು ಕಳವು ಮಾಡಿಕೊಂಡು ಹೋಗಿರುವ  ವಸ್ತುಗಳನ್ನು  ಮತ್ತು  ಅರೋಪಿ ಕಳ್ಳರನ್ನು  ಪತ್ತೆ ಮಾಡಿ  ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ  ಕೋರಿ ನೀಡಿರುವ ದೂರು.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.05/2019 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 07/01/2019 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ದೊಡ್ಡಕುರುಗೋಡು ಗ್ರಾಮದ ಹೊರವಲಯದಲ್ಲಿರುವ ಕೆರೆಯ ಅಂಗಳದಲ್ಲಿ ಯಾರೋ ಅಂದರ್ ಬಾಹರ್ ಜೂಜಾಟವಾಡುತ್ತಿರುವುದಾಗಿ ಬೀಟು ಪೊಲೀಸ್ ಪಿ.ಸಿ-385 ಕೃಷ್ಣಪ್ಪರವರು ನೀಡಿದ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿಯವರೊಂದಿಗೆ ಪಂಚಾಯ್ತಿದಾರರನ್ನು ಕರೆದುಕೊಂಡು ಪೊಲೀಸ್ ಜೀಪಿನಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ದೊಡ್ಡಕುರುಗೋಡು ಗ್ರಾಮಕ್ಕೆ ಹೋಗಿ ಮಾಹಿತಿ ಬಂದ ಸ್ಥಳವಾದ ದೊಡ್ಡಕುರುಗೋಡು ಗ್ರಾಮದ ಹೊರವಲಯದಲ್ಲಿರುವ ಕೆರೆಯ ಅಂಗಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿಯೇ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ನಡೆದುಕೊಂಡು ಜಾಲಿಗಿಡಗಳ ಪೊದೆಯೊಳಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಜಾಲಿಗಿಡಗಳ ಕೆಳಗೆ ಸುಮಾರು 9-10 ಜನರ ಗುಂಪು ಇದ್ದು, ಗುಂಪಿನಲ್ಲಿದ್ದವರು ಅಂದರ್ ಗೆ 500/- ರೂ. ಬಾಹರ್ ಗೆ 500/- ಗಳೆಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟ ವಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1] ಗೋವಿಂದರೆಡ್ಡಿ ಬಿನ್ ಲೇಟ್ ಅಶ್ವಥರೆಡ್ಡಿ, 35 ವರ್ಷ, ವಕ್ಕಲಿಗ ಜನಾಂಗ, ಚೆರ್ಲಪಲ್ಲಿ ಗ್ರಾಮ, ಹಿಂದೂಪುರ ತಾಲ್ಲೂಕು, 2] ಜಯಚಂದ್ರ ಬಿನ್ ಲೇಟ್ ನಾರಾಯಣಪ್ಪ, 30 ವರ್ಷ, ವಕ್ಕಲಿಗ ಜನಾಂಗ, ನಂದಿನಿ ಪಾರ್ಲರ್ ನಲ್ಲಿ ಕೆಲಸ, ಚೆರ್ಲಪಲ್ಲಿ ಗ್ರಾಮ, ಹಿಂದೂಪುರ ತಾಲ್ಲೂಕು, 3] ಅಶ್ವಥನಾರಾಯಣ ಬಿನ್ ಲೇಟ್ ಶಂಕರಪ್ಪ, 21 ವರ್ಷ, ನಾಯಕ ಜನಾಂಗ, ಗಾರ್ಮೆಂಟ್ಸ್ ನಲ್ಲಿ ಕೆಲಸ, ದೊಡ್ಡಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು, 4] ರಾಜೇಶ್ ಬಿನ್ ವೀರನಾಗಪ್ಪ, 19 ವರ್ಷ, ಸೆಂಟ್ರಿಂಗ್ ಕೆಲಸ, ಉಪ್ಪಾರ ಜನಾಂಗ, ದೊಡ್ಡಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು, 5] ನರಸಿಂಹಮೂರ್ತಿ ಬಿನ್ ಲೇಟ್ ಗಂಗಾಧರಪ್ಪ, 22 ವರ್ಷ, ನಾಯಕ ಜನಾಂಗ, ಲಾರಿ ಚಾಲಕ ವೃತ್ತಿ, ದೊಡ್ಡಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು, 6] ಅನಿಲ್ ಕುಮಾರ್ ಬಿನ್ ಲೇಟ್ ಬಾಬುರೆಡ್ಡಿ, 29 ವರ್ಷ, ವಕ್ಕಲಿಗ ಜನಾಂಗ, ಚಾಲಕ ವೃತ್ತಿ, ದೊಡ್ಡಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು, 7] ಅಜಿತ್ ಕುಮಾರ್ ಬಿನ್ ಲೇಟ್ ಲಕ್ಷ್ಮೀನಾರಾಯಣ, 20 ವರ್ಷ, ಬಲಜಿಗರು, ಗಾರ್ಮೆಂಟ್ಸ್  ನಲ್ಲಿ ಕೆಲಸ, ವಾಸ: ನಾಗಪ್ಪ ಬ್ಲಾಕ್, ಗೌರಿಬಿದನೂರು ಟೌನ್ 8] ಹರ್ಷವರ್ದನ ಬಿನ್ ರಾಮಚಂದ್ರಪ್ಪ, 20 ವರ್ಷ, ಹಿಂದೂ ಸಾದರ ಜನಾಂಗ, ಗಾರೆ ಕೆಲಸ, ಕಡಬೂರು ಗ್ರಾಮ, ಗೌರಿಬಿದನೂರು ತಾಲ್ಲೂಕು, 9] ಕೃಷ್ಣಪ್ಪ ಬಿನ್ ಕೊಡಪ್ಪ, 40 ವರ್ಷ, ಕುರುಬ ಜನಾಂಗ, ದನ ಮೇಯಿಸುವುದು, ದೊಡ್ಡಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು ಮತ್ತು 10] ಗಂಗರಾಜ ಬಿನ್ ನರಸಿಂಹಪ್ಪ, 22 ವರ್ಷ, ಪರಿಶಿಷ್ಟ ಜಾತಿ, ಗಾರ್ಮೆಂಟ್ಸ್  ನಲ್ಲಿ ಕೆಲಸ, ದೊಡ್ಡ ಕುರುಗೋಡು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿದ್ದ 1] KA-51-J-788 HERO HONDA SPLENDOR PLUS 2] ನೊಂದಣಿ ಸಂಖ್ಯೆ ಇಲ್ಲದ FASCINO ದ್ವಿಚಕ್ರ ವಾಹನಗಳು, 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ 15,020/- ರೂ. ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದು, ಮೇಲ್ಕಂಡ ಆಸಾಮಿಗಳನ್ನು, 2 ದ್ವಿಚಕ್ರ ವಾಹನಗಳನ್ನು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ ಹಣ 15020/- ರೂ. ನಗದು ಹಣವನ್ನು ಮದ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡು ಸಾಯಂಕಾಲ 4-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಸ್ವತಃ ಪ್ರಕರಣ ದಾಖಲು ಮಾಡಿರುತ್ತೇನೆ.

4) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.03/2019 ಕಲಂ. 279-337 ಐ.ಪಿ.ಸಿ:-

     ದಿನಾಂಕ 07/01/2019 ರಂದು ಸಂಜೆ 6-15 ಗಂಟೆಗೆ  ಪಿರ್ಯಾಧಿ ತಿಮ್ಮಯ್ಯ ಕುಂಟ ಚಿಕ್ಕನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಅಣ್ಣ ಹನುಮಂತರಾಯಪ್ಪ ಬಿನ್ ಲೇಟ್ ಹನುಮನಬೋವಿ  50 ವರ್ಷ, ರವರು ದಿನಾಂಕ 07/01/2019 ರಂದು ಸಂಜೆ ಸುಮಾರು 4-00 ಗಂಟೆಯ ಸಮಯದಲ್ಲಿ ತನ್ನ ಬಾಬತ್ತು  ಕೆಎ40-ಇಬಿ-8358 ರ ದ್ವಿಚಕ್ರವಾಹನದಲ್ಲಿ ಗೌರೀಬಿದನೂರು ನಿಂದ ತಮ್ಮ ಗ್ರಾಮಕ್ಕೆ ಬರಲು ಅಲಕಾಪುರ ಗ್ರಾಮದ ಗೇಟ್ ಬಳಿ ಬೆಂಗಳೂರು-ಗೌರೀಬಿದನೂರು ರಸ್ತೆಯಲ್ಲಿ ಬರುತ್ತಿದ್ದಾಗ  ಎದುರುಗಡೆಯಿಂದ ಬಂದ ಅಂದರೆ ಬೆಂಗಳೂರು ಕಡೆಯಿಂದ ಬಂದ ಕೆಎ03-ಎಎ-582 ರ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಅಣ್ಣ ಚಾಲನೆ ಮಾಡಿಕೊಂಡು ಬರುತ್ತ್ತಿದ್ದ ಮೇಲ್ಕಂಡ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ತಲೆಯ ಹಿಂಭಾಗಕ್ಕೆ ರಕ್ತಗಾಯ, ಬಲಕಾಲಿಗೆ ರಕ್ತಗಾಯ, ಮತ್ತು ಎರಡೂ ಕೈಗಳಿಗೆ ತರಚಿದ ಗಾಯಗಳಾಗಿದ್ದು, ರಸ್ತೆ ಅಪಘಾತ ಉಂಟುಪಡಿಸಿದ ಕೆಎ03-ಎಎ- 582  ರ ಲಾರಿಯ ಚಾಲಕನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.a