ದಿನಾಂಕ: 07-04-2019 ರ ಅಪರಾಧ ಪ್ರಕರಣಗಳು

1) ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 17/2019 ಕಲಂ. 279,304(ಎ) ರೆ/ವಿ 187 ಐಎಂವಿ ಆಕ್ಟ್ :-

      ದಿನಾಂಕ 07/04/2019 ರಂದು  ಚಿಂತಾಮಣಿ ತಾಲ್ಲೂಕು, ದಿಗವಪಲ್ಲಿ ಗ್ರಾಮದ ವಾಸಿ ಪಿರ್ಯಾದಿ ಚಂದ್ರಶೇಖರ ಬಿನ್ ಸಿ. ವೆಂಕಟರವಣಪ್ಪರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ 07/04/2019 ರಂದು ಬೆಳಗ್ಗೆ ಸುಮಾರು 11.30 ಗಂಟೆಯಲ್ಲಿ ತಮ್ಮ ಮೋಟಾರು ಸೈಕಲ್ ಸಂಖ್ಯೆ ಕೆ.ಎ 03 ಇ ಕೆ- 532 ರ ವಾಹನದಲ್ಲಿ ದಿಗವಪಲ್ಲಿ ಗ್ರಾಮದಿಂದ ಚಿಂತಾಮಣಿಗೆ ಕೆಲಸದ ನಿಮಿತ್ತ ಹೋಗುತ್ತಿದ್ದು ನಿಮ್ಮಕಾಯಲಹಳ್ಳಿ ಸಮೀಪ ಚಿಂತಾಮಣಿ ಕಡೆಯಿಂದ ಬಂದ ಹೀರೋ ಹೋಂಡಾ ಸ್ಲೆಂಡರ್ ವಾಹನ ಕೆ.ಎ 07 ಎಸ್ 3455 ರ ಚಾಲಕ ತನ್ನ ದ್ವಿಚಕ್ರ ವಾಹನ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಮ್ಮ ವಾಹನದ ಹಿಂಬದಿಯಲ್ಲಿದ್ದ ನಾಗಭೂಷನ್ ಹಾಗೂ ತಾನು ಕೆಳಕ್ಕೆ ಬಿದ್ದಿದ್ದು, ನಾಗಭೂಷನ್ ರವರನ್ನು ನೋಡಲಾಗಿ ಅವರಿಗೆ  ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ರಕ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ತನಗೆ ತರಚಿದ ಗಾಯಗಳಾಗಿರುತ್ತೆ. ಆದ್ದರಿಂದ ಮೇಲ್ಕಂಡ ಹೀರೋ ಹೋಂಡಾ ಸ್ಲೆಂಡರ್ ವಾಹನ ಕೆ.ಎ 07 ಎಸ್ 3455 ರ ಚಾಲಕನ  ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

2) ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 18/2019 ಕಲಂ. 87 ಕೆ.ಪಿ. ಆಕ್ಟ್ :-

      ದಿನಾಂಕ: 07/04/2019 ರಂದು ಎ.ಎಸ್.ಐ ಶ್ರೀ ನಾರಾಯಣಪ್ಪರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 07/04/2019 ರಂದು ಬೆಳಿಗ್ಗೆ 11.00 ಗಂಟೆಯ ಸಮಯದಲ್ಲಿ ಪಿಸಿ – 107 ರವರೊಂದಿಗೆ ತಾನು ಪಿ.ಎಸ್.ಐ ರವರ ಆದೇಶದಂತೆ ಯುಗಾದಿ ಹಬ್ಬದ ಪ್ರಯುಕ್ತ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸರಹದ್ದಿನ ರಾಘುಟ್ಟಹಳ್ಳಿ ಇರಗಂಪಲ್ಲಿ, ಐ.ಕುರಪಲ್ಲಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು  ಮುಂಗಾನಹಳ್ಳಿ ಹೋಬಳಿಯ ಗುಡ್ಡಂಪಲ್ಲಿ ಗ್ರಾಮದ ಕಡೆ ಹೋಗುವಾಗ ಗುಡ್ಡಂಪ್ಲಲಿ  ಗ್ರಾಮದ ಸರ್ಕಾರಿ ಕೆರೆಯ ಅಂಗಳದಲ್ಲ್ಲಿ ಯಾರೋ ಕೆಲವರು ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಟೀಟು ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದರಂತೆ ಸದರಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಂದರ್-ಬಾಹರ್ ಇಸ್ಟೀಟು ಜೂಜಾಟ ದಂಧೆಯ ಮೇಲೆ ಸಿಬ್ಬಂದಿಯೊಂದಿಗೆ ದಾಳಿ ಮಾಡಲು ಪಂಚಾಯ್ತಿದಾರರನ್ನು ಬರ ಮಾಡಿಕೊಂಡು ಅವರೊಂದಿಗೆ ಗುಡ್ಡಂಪಲ್ಲಿ ಗ್ರಾಮ ಪಶ್ಚಿಮ ದಿಕ್ಕಿಗೆ ಇರುವ ಕೆರಯ ಅಂಗಳಕ್ಕೆ ಹೋಗಿ ಗಿಡಗಳ ಮದ್ಯೆ ಮರೆಯಲ್ಲಿ ನೋಡಲಾಗಿ ಯಾರೋ ಕೆಲವೆರು ಕೆರಯ ಮದ್ಯದಲ್ಲಿರುವ ಗಿಡಗಳ ಮೊರೆಯಲ್ಲಿ ಅಂದರ್ 100 ಬಾಹರ್ 200 ರೂಗಳು ಎಂದು ಜೋರಾಗಿ ಕೂಗುತ್ತಾ ಹಣವನ್ನು ಪಣವನ್ನಾಗಿ ಕಟ್ಟಿಕೊಳ್ಳುತ್ತಿರುವುದು ಖಚಿತ ಪಡೆಸಿಕೊಂಡು ನಂತರ ಅಂದರ್-ಬಾಹರ್ ಇಸ್ಟೀಟು ಜೂಜಾಟ ಆಡುತ್ತಿದ್ದವರನ್ನು ನಾನು ಸಿಬ್ಬಂದಿ ಸುತ್ತುವರೆದು ಎಲ್ಲಿಗೂ ಹೋಗದಂತೆ ತಿಳಿಸಿ  ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 4 ಜನರನ್ನು ಹಿಡಿದು ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಪೇಪರ್ ಹಾಸಿದ್ದು ಅದರ ಮೇಲೆ  ಇಸ್ಪಿಟ್ಟು ಎಲೆಗಳು ಹಾಗು ನಗದು ಹಣ ಇದ್ದು ಅದನ್ನು ಎಣಿಕೆ ಮಾಡಲಾಗಿ 52 ಇಸ್ಪಿಟ್ಟು ಎಲೆಗಳು ಹಾಗು 7.240 =00 ರೂಗಳು ನಗದು ಹಣ ಇರುತ್ತೆ. ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆಯೊಂದಿಗೆ ಅಮಾನುತ್ತುಪಡಿಸಿಕೊಂಡಿರುತ್ತೆ. ನಂತರ ಜೂಜಾಟ ಆಡುತ್ತಿದ್ದ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ  1) ಅನಿಲ್ ಕುಮಾರ್ ಬಿನ್ ಗೋವಿಂದಪ್ಪ, 35 ವರ್ಷ , ಗೊಲ್ಲರು,  ಜಿರಾಯ್ತಿ, ವಾಸ ಗುಡ್ಡಂಪಲ್ಲಿ ಗ್ರಾಮ. ಚಿಂತಾಮಣಿ ತಾಲ್ಲೂಕು. 2) ಮುನಿಯಪ್ಪ ಬಿನ್ ಸುಬ್ಬಣ್ಣ, 35 ವರ್ಷ, ವಕ್ಕಲಿಗರು,  ಜಿರಾಯ್ತಿ, ವಾಸ ಗುಡ್ಡಂಪಲ್ಲಿ  ಗ್ರಾಮ. ಚಿಂತಾಮಣಿ ತಾಲ್ಲೂಕು. 3) ನಾರೆಪ್ಪ ಬಿನ್ ವೆಂಕಟಪ್ಪ, 43 ವರ್ಷ, ನಾಯಕರು, ಜಿರಾಯ್ತಿ, ವಾಸ ಗುಡ್ಡಂಪಲ್ಲಿ  ಗ್ರಾಮ. ಚಿಂತಾಮಣಿ ತಾಲ್ಲೂಕು. 4) ಸುಬ್ರಮಣಿ ಬಿನ್ ಹನುಮಪ್ಪ, 35 ವರ್ಷ, ಗೊಲ್ಲರು,  ಜಿರಾಯ್ತಿ, ಗುಡ್ಡಂಪಲ್ಲಿ ಗ್ರಾಮ. ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು  ಆರೋಪಿಗಳು, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ 69/2019 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರನ ದಾಖಲಿಸಿರುವುದಾಗಿರುತ್ತೆ.

3) ಚೇಳೂರು ಪೊಲೀಸ್ ಠಾಣೆ ಮೊ.ಸಂ. 19/2019 ಕಲಂ. 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

      ದಿನಾಂಕ-07/04/2019 ರಂದು ಮದ್ಯಾಹ್ನ-2.00 ಗಂಟೆಗೆ ಠಾಣಾ ಪಿ.ಸಿ-141 ಸಂತೋಷ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಠಾಣಾಧಿಕಾರಿಗಳ ಆದೇಶದಂತೆ ದಿನಾಂಕ-07-04-2019  ರಂದು  ತನಗೆ ಠಾಣಾ ಸರಹದ್ದು ಗ್ರಾಮಗಳಿಗೆ ಭೇಟಿ ನೀಡಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ನೇಮಿಸಿರುತ್ತಾರೆ ಅದರಂತೆ ಸದರಿಯವರು, ರಾಮೋಜಿಪಲ್ಲಿ,ಬಾಣಾಲಪಲ್ಲಿ,ಜಿಂಕಪಲ್ಲಿ,ಕುಂಟ್ಲಪಲ್ಲಿ ಗ್ರಾಮದಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು-1.00 ಗಂಟೆ ಸಮಯದಲ್ಲಿ ಪಾಳ್ಯಾಕೆರೆ ಗ್ರಾಮದಲ್ಲಿ ಗಸ್ತಿನಲ್ಲಿರುವಾಗ ಠಾಣಾ ಸರಹದ್ದು ದಿಗವನೆಟ್ಟಕುಂಟಪಲ್ಲಿ ಗ್ರಾಮದಲ್ಲಿ ಅದೇಗ್ರಾಮದ ವಾಸಿಯಾದ ಪ್ಯಾರಿಮ ಕೋಂ ಖಾದರ್ ಭಾಷ ಎಂಬುವರು ತನ್ನ ಬಾಬತ್ತು ಅಂಗಡಿ ಮುಂದೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾಳೆಂತ ಬಾತ್ಮೀ ತಿಳಿದು ಬಂದಿರುತ್ತೆ.ಆದ್ದರಿಂದ ಠಾಣೆಗೆ ವಾಪಸ್ಸಾಗಿ  ಮುಂದಿನ ಕ್ರಮ ಜರುಗಿಸಲು ನೀಡಿದ ವರದಿ ಯಾಗಿರುತ್ತೆ.

4) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 59/2019 ಕಲಂ. 87 ಕೆ.ಪಿ. ಆಕ್ಟ್ :-

      ದಿನಾಂಕ; 06-04-2019 ರಂದು ನಾನು, ಠಾಣಾ ಪ್ರಭಾರದಲ್ಲಿರುವಾಗ  ಮದ್ಯಾಹ್ನ 3.00 ಘಂಟೆ ಸಮಯದಲ್ಲಿಹೆಚ್.ವಿ. ಸುದರ್ಶನ್  ಸಿಪಿಐ ಸಾಹೇಬರ್ ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಗುಪ್ತ ಸಿಬ್ಬಂದಿಯಾದ ಹೆಚ್.ಸಿ 141, ಶ್ರೀ ರಮಣಾರೆಡ್ಡಿ ಮತ್ತು 12 ನೇ ಗ್ರಾಮ ಗಸ್ತಿನ ಸಿಪಿಸಿ:-271 ನಾಗೇಶ ರವರು ಕಚೇರಿಗೆ ಬಂದು ನೀಡಿದ ಮಾಹಿತಿ ಏನೆಂದರೆ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ ಸೇರಿದ ಹೊನ್ನೇನಹಳ್ಳಿ ಗ್ರಾಮದ ಸತೀಶ್ರವರ ಜಮೀನಿನ  ಬಳಿ ಇರುವ ಆಲದ   ಮರದ ಬಳಿ ಯಾರೋ ಜನರು ಗುಂಪು ಸೇರಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು ಸದರಿ ಜೂಜಾಟದ ಮೇಲೆ ದಾಳಿ ಮಾಡಲು ತಿಳಿಸಿದ್ದರ  ಮೇರೆಗೆ ಡಿಸಿಬಿ-ಸಿಇಎನ್ .ಪಿ.ಎಸ್ ಸಿಬ್ಬಂದಿಯವರಾದ, ಹೆಚ್.ಸಿ:-192 ರಾಜಗೋಪಾಲ್, ಹೆಚ್.ಸಿ:-208 ಗಿರೀಶ್,ಹೆಚ್.ಸಿ:-205 ರಮೇಶ್ ಮತ್ತು ನಾನು ನಮ್ಮ ಸಿಬ್ಬಂದಿಯಾದ  ಹೆಚ್.ಸಿ:-141 ರಮಣಾರೆಡ್ಡಿ, , ಪಿ.ಸಿ-35 ಸರ್ದಾರ್,  ಪಿ.ಸಿ-203 ಮಂಜುನಾಯ್ಕ್,ರವರೊಂದಿಗೆ  ಜಂಟಿ ಕಾರ್ಯದಲ್ಲಿ   ಜೀಪ್ ಸಂಖ್ಯೆ ಕೆಎ,40-ಜಿ-567 ರಲ್ಲಿ ಮತ್ತು ದ್ವಿ-ಚಕ್ರವಾಹನಗಳಲ್ಲಿ ಮದ್ಯಾಹ್ನ 3:15 ಗಂಟೆಗೆ ಠಾಣೆಯಿಂದ ಹೊರಟು ಮದ್ಯಾಹ್ನ:3.30 ಘಂಟೆಗೆ  ಹೊನ್ನೇನಹಳ್ಳಿ  ಗ್ರಾಮದ ಬಳಿ  ಹೋಗಿ  ಗ್ರಾಮದ ಬಳಿ ಇದ್ದಹೆಚ್.ಎ. ಲಕ್ಷ್ಮೀನಾರಾಯಣಸ್ವಾಮಿ  ಬಿನ್ ಲೇಟ್ ಹನುಮಂತಪ್ಪ ಅಶೋಕ್ ಕುಮಾರ್ ಬಿನ್ ನಾರಾಯಣಸ್ವಾಮಿ, ವೆಂಕಟೇಶ್ ಬಿನ್  ಲೇಟ್ ಮುನಿವೆಂಕಟಪ್ಪ ರವರಗಳಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ. ಪಂಚರು ಮತ್ತು ಸಿಬ್ಬಂದಿಯರೊಂದಿಗೆ  ಸರ್ಕಾರಿ ಜೀಪ್ ಮತ್ತು ದ್ವಿ-ಚಕ್ರವಾಹನಗಳಲ್ಲಿ ಹೊನ್ನೇನಹಳ್ಳಿ ಗ್ರಾಮದ  ಸತೀಶ್ ರವರ ಜಮೀನಿನ ಬಳಿ ಆಲದ ಮರದ  ಬಳಿ ಹೋಗಿ ವಾಹನಗಳನ್ನು ಮರೆಯಾಗಿ ನಿಲ್ಲಿಸಿ  ಪಂಚರು ಮತ್ತು ನಾವು ಹೋಗಿ ಮರೆಯಾಗಿ ನಿಂತು ನೋಡಲಾಗಿ ಆಲದ  ಮರದ ಕೆಳಗೆ ಯಾರೋ ಕೆಲವರು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟು ಎಲೆಗಳಿಂದ ಆ ಪೈಕಿ ಒಬ್ಬ ಆಸಾಮಿ ಅಂದರ್ 200 ಎಂತ ಮತ್ತೋಬ್ಬ ಆಸಾಮಿ ಬಾಹರ್ ಗೆ 100 ಎಂತ ಉಳಿದವರು ಸಹ ಅಂದರ್ ಗೆ 200 ಬಾಹರ್ ಗೆ 200 ಎಂತ ಕೂಗುತ್ತ ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್ ಜೂಜಾಟ ಆಡುತ್ತಿರುವುದನ್ನು ನಾನು ಮತ್ತು ನಮ್ಮ  ಸಿಬ್ಬಂದಿಯವರು ಹಾಗೂ ಡಿಸಿಬಿ-ಸಿಇಎನ್ .ಪಿ.ಎಸ್ ಸಿಬ್ಬಂದಿಯವರು ಸುತ್ತುವರೆದು, ಸಬ್ ಇನ್ಸ್ ಪೆಕ್ಟರ್ ಆದ ನಾನು ಜೂಜಾಟ ಆಡುತ್ತಿದ್ದವರಿಗೆ ಜೂಜಾಟ ಸ್ಥಳದಿಂದ ಯಾರು ಒಡಿಹೋಗಬಾರದು ಯಥಾಸ್ಥಿತಿಯಲ್ಲಿರುವಂತೆ  ಸೂಚನೆ ನೀಡುತ್ತಿದ್ದಂತೆ ಜೂಜಾಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದವರನ್ನು  ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ನಾವು ಹಿಡಿದುಕೊಂಡು ಸ್ಥಳದಲ್ಲಿ ಸಿಕ್ಕ ಆಸಾಮಿಗಳ ಹೆಸರು ವಿಳಾಸ ಕೆಳಲಾಗಿ 1) ಪ್ರದೀಪ್ ಬಿನ್ ಮುನಿರಾಜು, 23 ವರ್ಷ, ಆದಿಕರ್ನಾಟಕ, ಅಂಬೂಲೈನ್ಸ್ ಚಾಲಕ ಹೊನ್ನೇನಹಳ್ಳಿ ಗ್ರಾಮ, 2) ಸಂತೋಷ್ ಬಿನ್ ನಾಗರಾಜು, 27 ವರ್ಷ, ಆದಿಕರ್ನಾಟಕ, ಹೊನ್ನೇನಹಳ್ಳಿಗ್ರಾಮ,3) ಮುರಳಿ ಬಿನ್ ನಾರಾಯಣಸ್ವಾಮಿ, 25 ವರ್ಷ,ಆದಿಕರ್ನಾಟಕ ಕಾರು ಚಾಲಕ, ಹೊನ್ನೇನಹಳ್ಳಿ ಗ್ರಾಮ, 4) ಶಿವಕುಮಾರ್ ಬಿನ್ ಸೊಣ್ಣಪ್ಪ ,29 ವರ್ಷ, ಆದಿಕರ್ನಾಟಕ ಸ್ಟೂಡೀಯೊದಲ್ಲಿ ಕೆಲಸ ಹೊನ್ನೇನಹಳ್ಳಿ ಗ್ರಾಮ , 5)ಮಂಜುನಾಥ ಬಿನ್ ಲೇಟ್ ರಾಮಕೃಷ್ಣ, 35ವರ್ಷ, ಕಮ್ಮ ಜನಾಂಗ ಹೊನ್ನೇನಹಳ್ಳಿ ಗ್ರಾಮ 6) ಅರುಣ್ ಕುಮಾರ್ ಬಿನ್ ನಾರಾಯಣಸ್ವಾಮಿ, 34 ವರ್ಷ, ನಾಯಕ, ಕಾರು ಚಾಲಕ, ಹೊನ್ನೇನಹಳ್ಳಿ ಗ್ರಾಮ, 7) ಮಂಜುನಾಥ ಬಿನ್ ನಾಗಪ್ಪ, 28ವರ್ಷ, ನಾಯಕ, ಕೂಲಿ ಕೆಲಸ, ಹೊನ್ನೇನಹಳ್ಳಿ ಗ್ರಾಮ.8) ಹೆಚ್.ಎಂ. ಮುನಿವೆಂಕಟಪ್ಪ  ಬಿನ್ ಲೇಟ್ ಮುನಿಶಾಮಪ್ಪ, 50 ವರ್ಷ, ಆದಿಕರ್ನಾಟಕ, ಹೊನ್ನೇನಹಳ್ಳಿ ಗ್ರಾಮ ಎಲ್ಲಾರು ಚಿಕ್ಕಬಳ್ಳಾಪುರ ತಾಲ್ಲೂಕು 9) ಮಹಮ್ಮದ್ ಆಜಮ್ ಬಿನ್ ಲೇಟ್ ಬಾಬು, 20 ವರ್ಷ, ಗಾರೆ ಕೆಲಸ, ವಾಸ ರೇಷ್ಮೆ ಗೂಡು ಮಾರ್ಕೆಟ್ ಬಳಿ ಚಿಕ್ಕಬಳ್ಳಾಪುರ  ಟೌನ್. ಎಂದು ತಿಳಿಸಿದರು. ಜೂಜಾಟದ ಸ್ಥಳದಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲ, 52 ಇಸ್ಪೀಟು ಎಲೆಗಳು ಪಣಕ್ಕಿಟ್ಟದ 7850/- ರೂಗಳನ್ನು  ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆಸಾಮಿಗಳನ್ನುವಶಕ್ಕೆ ತೆಗೆದುಕೊಂಡು ಮಾಲು, ದಾಳಿ ಪಂಚನಾಮೆ,ಜರುಗಿಸಿ ನೀಡಿದ ವರದಿಯ ಮೇರೆಗೆ ಈ ಪ್ರ.ವ.ವರದಿ.

5) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 60/2019 ಕಲಂ. 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

      ದಿನಾಂಕ 07/04/2019 ರಂದು ಮಧ್ಯಾಹ್ನ 01.00 ಗಂಟಗೆ ಪಿಎಸ್ಐ ರವರು ಮಾಲು ಪಂಚನಾಮೆ ಆಪಾದಿತಳನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ; 07-04-2019 ರಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಹೆಚ್.ಸಿ-237, ಹೆಚ್.ಸಿ-64 ರವರಿಗೆ ಬೆಳಗ್ಗೆ 10.45 ಗಂಟೆ ಸಮಯದಲ್ಲಿ ಠಾಣಾ ಸರಹದ್ದಿಗೆ ಸೇರಿದ ಕೇತೇನಹಳ್ಳಿ ಗ್ರಾಮದಲ್ಲಿ ಬಾಡಿಗೆಗೆ ವಾಸವಾಗಿರುವ ಆಂಜಿನಮ್ಮ ಕೋಂ ರಾಮಕೃಷ್ಣಪ್ಪ ರವರ ಮನೆ ಬಳಿ ಯಾರೋ ಸಾರ್ವಜನಿಕರು ಮದ್ಯಪಾನ ಮಾಡಿ ಸಾರ್ವಜನಿಕರಿಗೆ  ತೊಂದರೆ ಕೊಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು, ಸಿಬ್ಬಂದಿಯವರಾದ ಮ.ಎ.ಎಸ್.ಐ ಶ್ರೀಮತಿ ರತ್ನಾಬಾಯಿ,ಹೆಚ್.ಸಿ-237 ರಮೇಶ್, ಹೆಚ್.ಸಿ-64 ದೇವರಾಜು,ಠಾಣಾ ಜೀಪ್ ಸಂಖ್ಯೆ ಕೆಎ 40 ಜಿ 567 ರಲ್ಲಿ ಚಾಲಕ ಎ.ಹೆಚ್.ಸಿ 23 ಮಂಜುನಾಥರವರೊಂದಿಗೆ  ಬೆಳಗ್ಗೆ 11.00 ಗಂಟೆಗೆ ಠಾಣೆಯಿಂದ ಹೊರಟು ಬೆಳಗ್ಗೆ 11.30 ಗಂಟೆಗೆ ಕೇತೇನಹಳ್ಳಿ ಗ್ರಾಮದ ಗೇಟ್ ಬಳಿ ಹೋಗಿ, ಗೇಟ್ ಬಳಿ ಇದ್ದ ವೆಂಕಟೇಶ್, ಚಂದ್ರ,ರವರುಗಳಿಗೆ ಮೇಲ್ಕಂಡ ವಿಚಾರವನ್ನು ತಿಳಿಸಿ ಪಂಚಾಯ್ತಿದಾರರಾಗಿ ಕರೆದುಕೊಂಡು ನಾವುಗಳು,ಪಂಚರೊಂದಿಗೆ ಬೆಳಗ್ಗೆ 11.15 ಗಂಟೆ ಸಮಯದಲ್ಲಿ ಕೇತೇನಹಳ್ಳಿ ಗ್ರಾಮದ ಲಕ್ಷ್ಮಯ್ಯ ರವರ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಆಂಜಿನಮ್ಮ ರವರ ಮನೆ ಬಳಿ ಹೋದಾಗ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಮದ್ಯಪಾನ ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಕೆಲವರು ಓಡಿ ಹೋದರು. ಮದ್ಯಪಾನ  ಮಾಡುತ್ತಿದ್ದ  ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸ್ಥಳದಲ್ಲಿ ಖಾಲಿ ಟೇಟ್ರಾ ಪಾಕೇಟ್ ಗಳು, ಖಾಲಿ ನೀರಿನ ಭಾಟಲ್ ಗಳು ಮದ್ಯ ತುಂಬಿರುವ ಟೆಟ್ರಾ ಪಾಕೇಟ್ ಗಳು, ಕಡಲೆ ಬೀಜ, ಚೀಪ್ಸ್ ಪೇಪರ್ ಗಳು ಚಲ್ಲಾಪಿಲ್ಲಿ ಯಾಗಿ ಬಿದ್ದಿರುತ್ತೆ ಸ್ಥಳದಲ್ಲಿ ಮದ್ಯಪಾನ ಮಾಡಲು ಉಪಯೋಗಿಸುತ್ತಿದ್ದ 1) ಹೈವಾರ್ಡ್ಸ್ ಚೀರ್  ವಿಸ್ಕಿ ಎಂದು ಲೇಬಲ್ ಇರುವ  90 ಎಂ,ಎಲ್ ನ, 4 ಖಾಲಿ ಟೇಟ್ರಾಪಾಕೇಟ್ , 2) ಒಂದು ಲೀಟರ್ ನ 2 ಖಾಲಿ ನೀರಿನ ಬಾಟಲ್ ಗಳು. 3) ಮದ್ಯ ಪಾನ ಮಾಡಲು ಉಪಯೋಗಿಸಿರುವ 4 ಪ್ಲಾಸ್ಟಿಕ್  ಲೋಟಗಳು , 4) ಮದ್ಯ ತುಂಬಿರುವ   HAYWARDS CHEER WHISKY ಎಂದು ಲೇಬಲ್ ಇರುವ 90 ಎಂ,ಎಲ್ ನ  25 ಟೇಟ್ರಾಪಾಕೇಟ್ ಗಳು, ಸ್ಥಳದಲ್ಲಿದ್ದು   ಸದರಿ ವಸ್ತುಗಳನ್ನು ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ದೊರೆತ ಮದ್ಯ ತುಂಬಿರುವ HAYWARDS CHEER WHISKY ಎಂದು ಲೇಬಲ್ ಇರುವ 90 ಎಂ,ಎಲ್ ನ  25 ಟೇಟ್ರಾಪಾಕೇಟ್ ಗಳಲ್ಲಿ 2.250 ಲೀಟರ್ (ಎರಡು ಲೀಟರ್ ಎರಡು ನೂರು ಐವತ್ತು ಮಿಲಿ ಲೀಟರ್)  ಮದ್ಯ ಇದ್ದು ಬೆಲೆ 758 ರೂಗಳು (ಏಳು ನೂರು ಐವತ್ತೆಂಟು ರೂಪಾಯಿಗಳು) ಅಗಿರುತ್ತೆ. ಸ್ಥಳದಲ್ಲಿ ಸಿಕ್ಕ ಮಾಲುಗಳನ್ನುಬೆಳಗ್ಗೆ 11.45 ಗಂಟೆಯಿಂದ 12.30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ 1) ಆಂಜಿನಮ್ಮ ಕೋಂ ರಾಮಕೃಷ್ಣಪ್ಪ, 55 ವರ್ಷ, ಈಡಿಗರು, ಜಿರಾಯ್ತಿ, ಕೇತೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರನ್ನು ವಶಕ್ಕೆ ತೆಗೆದುಕೊಂಡು ಮದ್ಯಾಹ್ನ 1.00 ಗಂಟೆಗೆ ಮಾಲು, ದಾಳಿ ಪಂಚನಾಮೆ, ಅಪಾದಿತಳನ್ನು ಠಾಣೆಗೆ ಹಾಜರುಪಡಿಸಿದ್ದು ಕಲಂ: 15(A), 32(3) KE ACT ರೀತ್ಯಾ ಪ್ರಕರಣ ದಾಖಲಿಸಿಕೊಂಡು  ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

6) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 60/2019 ಕಲಂ. 15(ಎ),32(3) ಕರ್ನಾಟಕ ಅಬಕಾರಿ ಕಾಯ್ದೆ :-

      ದಿ: 07/04/2019 ರಂದು ಮಧ್ಯಾಹ್ನ 12-30 ಗಂಟೆಗೆ ಠಾಣೆಯ ಹೆಚ್.ಸಿ. 48 ದಿನೇಶ್ ರವರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 07-04-2019 ರಂದು ಬೆಳಿಗ್ಗೆ 08-00 ಗಂಟೆಗೆ ಠಾಣಾ ಹಾಜರಾತಿಗೆ ಹಾಜರಾಗಿದ್ದು ಠಾಣಾಧಿಕಾರಿಗಳು ನನಗೆ ಅಪರಾಧ ಪ್ರಕರಣಗಳ ಪತ್ತೆಯ ಬಗ್ಗೆ ಹಾಗೂ ಯುಗಾದಿ ಹಬ್ಬದ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾನು ನಗರದ ಎಂ.ಜಿ.ರಸ್ತೆ, ಬಾಗೇಪಲ್ಲಿ ವೃತ್ತ, ಶಿಡ್ಲಘಟ್ಟ ವೃತ್ತ, ಎಸ್.ಎಸ್. ವೃತ್ತ, ದಿನ್ನೇಹೊಸಹಳ್ಳಿ ರಸ್ತೆಯಲ್ಲಿ ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ಗಸ್ತು ಮಾಡುತ್ತಿದ್ದಾಗ ದಿನ್ನೇಹೊಸಹಳ್ಳಿ ರಸ್ತೆಯಿಂದ ಮುಷ್ಟೂರು ರಸ್ತೆಯಲ್ಲಿ ಯೋಗೇಶ್ ಭಾರತ್ ಗ್ಯಾಸ್ ಮಾಲೀಕರ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ತಮ್ಮವಾಸದ ಮನೆಯ ಮುಂದೆ ಯಾವುದೇ ಪರವಾನಿಗೆ ಇಲ್ಲದೆ ಮಧ್ಯವನ್ನು ಮಾರಾಟವನ್ನು ಮಾಡಿ ಕುಡಿಯಲು ಅವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ನೋಡಿ ಕುಡಿಯಲು ಬಂದಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ಲೇಟ್ ವೆಂಕಟರಾಯಪ್ಪ 54 ವರ್ಷ, ಪ.ಜಾತಿ [ಎ.ಕೆ] ಗಾರೆ ಕೆಲಸ ವಾಸ ಯೋಗೇಶ್ ಭಾರತ್ ಗ್ಯಾಸ್ ಮಾಲೀಕರ ಮನೆಯ ಹತ್ತಿರ 4 ನೇ ವಾರ್ಡ್ ಪ್ರಶಾಂತನಗರ ಚಿಕ್ಕಬಳ್ಳಾಪುರ ನಗರ ಎಂದು ತಿಳಿಸಿದ್ದು, ಮಧ್ಯ ಮಾರಾಟ ಮಾಡಲು ಪರವಾನಿಗೆಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಆರೋಪಿ ಮತ್ತು ಸ್ಥಳದಲ್ಲಿದ್ದ ಒಂದು ಪ್ಲಾಸ್ಟಕ್ ಕವರ್ ನಲ್ಲಿದ್ದ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ 90 ಎಂ.ಎಲ್ ನ 11 ಟೆಟ್ರಾ ಪ್ಯಾಕ್ ಗಳು, ಒಂದು ಖಾಲಿ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಟೆಟ್ರಾ ಪ್ಯಾಕೇಟ್, ಪ್ಲಾಸ್ಟಿಕ್ ಲೋಟ 1 ಇದ್ದು ಇವುಗಳನ್ನು ವಶಕ್ಕೆ ಪಡೆದುಕೊಂಡಿರುತ್ತೆ. 90 ಎಂ.ಎಲ್ ನಂ 11 ಹೈವಾರ್ಡ್ ಚೀಯರ್ಸ್ ವಿಸ್ಕಿ 990 ಎಂ.ಎಲ್ ಆಗಿದ್ದು ಇದರ ಬೆಲೆ ಸುಮಾರು 333/- ರೂ, ಆಗಿರುತ್ತೆ. ಆಸಾಮಿಯು ಯಾವುದೇ ಪರವಾನಗಿಯಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಿ ಕುಡಿಯಲು ಅವಕಾಶ ಮಾಡಿಕೊಟ್ಟಿರುತ್ತಾನೆ. ಮುಂದಿನ ಕ್ರಮಕ್ಕಾಗಿ ಆಸಾಮಿ, ಮತ್ತು ಮದ್ಯವನ್ನು ಮಧ್ಯಾಹ್ನ 12-30 ಗಂಟೆಗೆ ಠಾಣೆಯಲ್ಲಿ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

7) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 110/2019 ಕಲಂ. 87 ಕೆ.ಪಿ. ಆಕ್ಟ್ :-

      ಈ ಮೂಲಕ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆರ್.ಜಗದೀಶ್ ರೆಡ್ಡಿ ಆದ ನಾನು ನಿವೇಧಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ 06/04/2019 ರಂದು ನಾನು ಠಾಣೆಯ ಅಪರಾಧ ಸಿಬ್ಬಂಧಿಯವರಾದ ಹೆಚ್.ಸಿ-41 ಜಗದೀಶ್, ಹೆಚ್.ಸಿ-86 ಹರೀಶ್ ಹಾಗು ಹೆಚ್.ಸಿ-249 ಸಂದೀಪ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-326 ರಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಠಾಣಾ ಸರಹದ್ದಿನ ಗ್ರಾಮಗಳಾದ ಕುರಟಹಳ್ಳಿ, ಕಾಚಹಳ್ಳಿ, ಹಾದಿಗೆರೆ, ಮೈಲಾಂಡ್ಲಹಳ್ಳಿ ಮುಂತಾದ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 5-15 ಗಂಟೆ ಸಮಯದಲ್ಲಿ ಕುರುಬೂರು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಸದರಿ ಗ್ರಾಮದ ಕೆರೆಯ ಅಂಗಳದಲ್ಲಿರುವ ಬಿದಿರಿನ ಮರಗಳ ಮರೆಯಲ್ಲಿ ಯಾರೋ ಆಸಾಮಿಗಳು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಸಿಕ್ಕಿದ್ದು ನಂತರ ನಾನು ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರ ಮಾಡಿಕೊಂಡು ಅವರಿಗೆ ವಿಷಯವನ್ನು ತಿಳಿಸಿ, ಪಂಚಾಯ್ತಿದಾರರನ್ನು ಸಕರ್ಾರಿ ಜೀಪ್ ನಲ್ಲಿ ಕರೆದುಕೊಂಡು ಕುರುಬೂರು ಗ್ರಾಮದ ಸಕರ್ಾರಿ ಕೆರೆಯ ಅಂಗಳಕ್ಕೆ ಹೋಗಿ ಜೀಪ್ ಅನ್ನು ನಿಲ್ಲಿಸಿ ನಂತರ ನಾವುಗಳು ಸದರಿ ಕೆರೆಯ ಪಶ್ಚಿಮ ದಿಕ್ಕಿಗೆ ಇರುವ ಬಿದಿರಿನ ಮರಗಳ ಕಡೆ ನಡೆದುಕೊಂಡು ಹೋದಾಗ ಸದರಿ ಬಿದಿರಿನ ಮರಗಳ ಕೆಳಗೆ ಯಾರೋ 7 ಜನ ಆಸಾಮಿಗಳು ಒಂದು ಟಾರ್ಪಲ್ ಅನ್ನು ನೆಲಕ್ಕೆ ಹಾಸಿ ಅದರ ಮೇಲೆ ಕುಳಿತುಕೊಂಡು ಇಸ್ಪೀಟ್ ಜೂಜಾಟವಾಡುತ್ತಿದ್ದು ನಾವು ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಆಸಾಮಿಯು ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು ಒಬ್ಬ ಆಸಾಮಿಯು ಅಂದರ್ 200 ರೂ ಎಂತಲೂ, ಮತ್ತೊಬ್ಬ ಆಸಾಮಿಯು ಬಾಹರ್ 300 ರೂ ಎಂತಲೂ ಉಳಿದವರು ಸಹ ಅಂದರ್ ಬಾಹರ್ ಎಂದು ಹಣವನ್ನು ಪಣವಾಗಿ ಕಟ್ಟಿ ಕೂಗಾಡಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದು ಖಚಿತವಾದ ಮೇಲೆ ನಾವು ಸದರಿ ಆಸಾಮಿಗಳನ್ನು ಸುತ್ತುವರೆಯುವಷ್ಟರಲ್ಲಿ ಸದರಿ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಓಡಿ ಹೋಗಿರುತ್ತಾರೆ. ನಾವು ಅವರನ್ನು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದರೂ ಸಹ ಅವರು ಸಿಕ್ಕಿರುವುದಿಲ್ಲ. ನಂತರ ಇಸ್ಪೀಟ್ ಜೂಜಾಟದ ಸ್ಥಳದಲ್ಲಿ ಪರಿಶೀಲಿಸಲಾಗಿ ಚೆಲ್ಲಾ ಪಿಲ್ಲಿಯಾಗಿ ಇಸ್ಪೀಟ್ ಎಲೆಗಳು ಬಿದ್ದಿದ್ದು ಅವನ್ನು ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳಿದ್ದು, ಸ್ಥಳದಲ್ಲಿಯೇ ಆರೋಪಿಗಳು ಪಣವಾಗಿ ಕಟ್ಟಿದ್ದ ಹಣ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಅದನ್ನು ತೆಗೆದು ಎಣಿಕೆ ಮಾಡಲಾಗಿ 4100-00 ರೂ ಹಣ ಇದ್ದು, ಈ ಸ್ಥಳದ ಪಕ್ಕದಲ್ಲಿಯೇ ಒಂದು ದ್ವಿ ಚಕ್ರ ವಾಹನ ಇದ್ದು ಅದರ ಮೇಲೆ ಕೆಎ-40-ಹೆಚ್-433 ಎಂದು ನೊಂದಣಿ ಸಂಖ್ಯೆ ಇದ್ದು ಓಡಿ ಹೋದ ಆಸಾಮಿಗಳ ಪೈಕಿ ಯಾರೋ ಇಸ್ಪೀಟ್ ಜೂಜಾಟವಾಡಲು ಸದರಿ ದ್ವಿ ಚಕ್ರ ವಾಹನದಲ್ಲಿ ಬಂದಿರ ಬಹುದ್ದಾಗಿರುತ್ತದೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಗ್ರಾಮಸ್ಥರನ್ನು ಸದರಿ ಸ್ಥಳದಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಆಸಾಮಿಗಳ ಹೆಸರು ವಿಳಾಸ ವಿಚಾರಿಸಲಾಗಿ 1) ಮಂಜುನಾಥ @ ಕಳ್ಳ ಮಂಜು ಬಿನ್ ಲೇಟ್ ಮುನಿಯಪ್ಪ, 40 ವರ್ಷ, ವಕ್ಕಲಿಗರು, ವಾಸ-ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು, 2) ಮಂಜುನಾಥ ಬಿನ್ ವೆಂಕಟೇಶಪ್ಪ, 44 ವರ್ಷ, ಗಾಣಿಗರು, ಜಿರಾಯ್ತಿ, ವಾಸ-ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು, 3) ಬಾಬಾ ಬಿನ್ ಇಲಿಯಾಜ್ ಪಾಷ, 29 ವರ್ಷ, ಮುಸ್ಲಿಂ, ಕಾಪರ್ೇಂಟರ್ ಕೆಲಸ ವಾಸ-ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು, 4) ಸದ್ದಾಂ ಖಾನ್ ಬಿನ್ ಅಯೂಬ್ ಖಾನ್, 29 ವರ್ಷ, ಮುಸ್ಲಿಂ, ಆಟೋ ಚಾಲಕ, ವಾಸ-ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು, 5) ಮುನಾವರ್ ಖಾನ್ @ ಚಿಂಟು ಬಿನ್ ಜಲೀಲ್ ಖಾನ್, 35 ವರ್ಷ, ಮುಸ್ಲಿಂ, ವಾಸ-ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು, 6) ಅಮ್ರಾಜ್ ಖಾನ್ @ ಇಬ್ಬು ಬಿನ್ ಖಲೀಲ್ ಖಾನ್, 38 ವರ್ಷ, ಮುಸ್ಲಿಂ, ಚಾಲಕ, ವಾಸ-ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು, 7) ಶ್ರೀನಾಥ ಬಿನ್ ಮುನಿವೆಂಕಟಪ್ಪ, 24 ವರ್ಷ, ರಾಜು ಜನಾಂಗ, ವಾಸ-ಬಳಗೆರೆ ಗ್ರಾಮ, ಕೋಲಾರ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸದರಿ ಆಸಾಮಿಗಳು ಸಕರ್ಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಅಂದರ್ ಬಾಹರ್-ಇಸ್ಪೀಟ್ ಜೂಜಾಟವಾಡುತ್ತಿದ್ದ ಕಾರಣ ಮೇಲ್ಕಂಡ 52 ಇಸ್ಪೀಟ್ ಎಲೆಗಳನ್ನು, 4100-00 ರೂ ನಗದು ಹಣವನ್ನು, ಟಾರ್ಪಲ್ ಅನ್ನು ಹಾಗು ಕೆಎ-40-ಹೆಚ್-433 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಸಂಜೆ 5-30 ಗಂಟೆಯಿಂದ 6-30 ಗಂಟೆಯವರೆಗೆ ದಾಳಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಸಂಜೆ 7-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಆರೋಪಿಗಳ ವಿರುದ್ದ ಠಾಣಾ ಮೊಸಂ-110/2019 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

8) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 111/2019 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

      ದಿನಾಂಕ 07-04-2019 ರಂದು ಮದ್ಯಾಹ್ನ 3-30 ಗಂಟೆಗೆ ಕೈವಾರ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್.ಐ ಗಂಗಾಧರ್  ರವರು ಆರೋಪಿ ಮತ್ತು ಮಾಲಿನೋಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ 07/04/2019 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ತಾನು ಕೈವಾರ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮಿದಾರರಿಂದ ಚಿಂತಾಮಣಿ ತಾಲ್ಲೂಕು ಕೈವಾರ ಹೋಬಳಿಯ ಟಿ.ಹೊಸಹಳ್ಳಿ ಗ್ರಾಮದ ವಾಸಿ ಹರೀಶ್ ಬಿನ್ ಮುನಿರೆಡ್ಡಿ ಎಂಬಾತನು ತನ್ನ ಜಮೀನಿನಲ್ಲಿರುವ ಶೆಡ್ ನಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿ ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ನಾನು ಹೊರಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪಿಸಿ-426 ಸರ್ವೇಶ್ ರವರನ್ನು ಕರೆದುಕೊಂಡು ಟಿ.ಹೊಸಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರ ಮಾಡಿಕೊಂಡು ಅವರಿಗೆ ವಿಷಯವನ್ನು ತಿಳಿಸಿ ನಂತರ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಟಿ.ಹೊಸಹಳ್ಳಿ ಗ್ರಾಮದಿಂದ ಸುಬ್ಬರಾಯನಪೇಟೆ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ಬರುವ ಮೇಲ್ಕಂಡ ಹರೀಶ್ ಬಿನ್ ಮುನಿರೆಡ್ಡಿ ರವರ ಜಮೀನಿನ ಬಳಿ ಹೋಗಿ ಜಮೀನಿನಲ್ಲಿನ ಶೆಡ್ ನಲ್ಲಿ ಒಬ್ಬ ಆಸಾಮಿಯು ಕುಳಿತಿದ್ದು ಆತನನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಹರೀಶ್ ಬಿನ್ ಮುನಿರೆಡ್ಡಿ, 29 ವರ್ಷ, ವಕ್ಕಲಿಗರು, ವಾಸ-ಟಿ.ಹೊಸಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಪಂಚಾಯ್ತಿದಾರರಾದ ಸಮಕ್ಷಮ ಸದರಿ ಶೆಡ್ ಅನ್ನು ಪರಿಶೀಲಿಸಲಾಗಿ 2 ಪ್ಲಾಸ್ಟಿಕ್ ಚೀಲಗಳಿದ್ದು ಮೊದಲನೇ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 90 ಎಂ,ಎಲ್ ಸಾಮಥ್ರ್ಯದ 110 ಹೆಯ್ ವಡ್ಸರ್್ ಚೀರ್ ವಿಸ್ಕಿಯ ಟೆಟ್ರಾ ಪಾಕೇಟ್ ಗಳಿದ್ದು ಪ್ರತಿಯೊಂದ ಟೆಟ್ರಾ ಪಾಕೇಟ್ ನ ಮೇಲೆ 30.32 ರೂ ಎಂದು ಬೆಲೆ ನಮೂದಾಗಿರುತ್ತದೆ. 2 ನೇ ಗೋಣಿ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ ಪೊಸ್ಟರ್ ಲಾಗೇರ್ ಬೀರ್ ನ 3 ಬೀರ್ ಬಾಟೆಲ್ ಗಳಿದ್ದು ಪ್ರತಿಯೊಂದು ಬೀರ್ ಬಾಟೆಲ್ ಮೇಲೆ 105 ರೂ ಎಂದು ಬೆಲೆ ನಮೂದಾಗಿದ್ದು, ಅದೇ ಪ್ಲಾಸ್ಟಿಕ್ ಚೀಲದಲ್ಲಿ ನಾಕ್ ಔಟ್ ಹೈ ಪಂಚ್ ಬೀರ್ ನ 7 ಬಾಟೆಲ್ ಗಳಿದ್ದು ಪ್ರತಿಯೊಂದು ಬೀರ್ ಬಾಟೆಲ್ ಮೇಲೆ 125 ರೂ ಎಂದು ಬೆಲೆ ನಮೂದಾಗಿದ್ದು, ಸ್ಥಳದಲ್ಲಿ ವಶಕ್ಕೆ ಪಡೆದಿದ್ದ ಆಸಾಮಿಯನ್ನು ಸದರಿ ಮದ್ಯವನ್ನು ದಾಸ್ತಾನು ಮಾಡಿ ಅದನ್ನು ಮಾರಾಟ ಮಾಡಲು ಸಕರ್ಾರದಿಂದ ಯಾವುದಾದರೂ ಪರವಾನಿಗೆ ತನ್ನ ಬಳಿ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ಸ್ಥಳದಲ್ಲಿದ್ದ ಮದ್ಯವು 16.300 ಲೀಟರ್ ಗಳಿಷ್ಟಿದ್ದು ಇವುಗಳ ಒಟ್ಟು ಬೆಲೆ 4525.20 ರೂ ಬೆಲೆ ಬಾಳುವುದ್ದಾಗಿದ್ದು, ನಂತರ ಮೇಲ್ಕಂಡ ಮದ್ಯದ ಪೈಕಿ 2 ಟೆಟ್ರಾ ಪಾಕೇಟ್ ಗಳನ್ನು ಹಾಗು ಒಂದೊಂದು ಬೀರ್ ಬಾಟೆಲ್ ಅನ್ನು ರಾಸಾಯನಿಕ ತಜ್ಷರ ಪರೀಕ್ಷೆಗೆ ಕಳುಹಿಸಿ ಕೊಡಲು ಅಲಾಯಿದೆಯಾಗಿ ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿ ಅರಗು ಮಾಡಿ  ಎಫ್ಐಕೆ  ಎಂಬ ಸೀಲಿನಿಂದ ಮೊಹರು ಮಾಡಿ ಅಲಾಯಿದೆಯಾಗಿ ಶೇಖರಿಸಿದ ಮದ್ಯವನ್ನು ಹಾಗು ಉಳಿದ ಎಲ್ಲಾ ಮಾಲನ್ನು ಮದ್ಯಾಹ್ನ 2-00 ಗಂಟೆಯಿಂದ 3-00 ಗಂಟೆಯವರೆಗೆ ದಾಳಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 3-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಆರೋಪಿಯ ವಿರುದ್ದ ಮುಂದಿನ ಕ್ರಮಕ್ಕಾಗಿ ವರದಿಯನ್ನು ನೀಡಿರುತ್ತೆ.

9) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 109/2019 ಕಲಂ. 87 ಕೆ.ಪಿ. ಆಕ್ಟ್ :-

      ಪಿರ್ಯಾದಿದಾರರಾದ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ವೆಂಕಟಾಚಲಪ್ಪ, ಎಎಸ್ಐ  ರವರು ದಿನಾಂಕ: 07/04/2019 ರಂದು  ಘನ ಸಿ ಜೆ ಮತ್ತು ಜೆ ಎಂ  ಎಫ್ ಸಿ ನ್ಯಾಯಾಲಯದಿಂದ ಅನುಮತಿ  ಪಡೆದು ಠಾಣೆಯಲ್ಲಿ  ಮದ್ಯಹ್ನ 1.00 ಗಂಟೆಯಲ್ಲಿ ಹಾಜರು ಪಡಿಸಿದ ಠಾಣಾ ಎನ್ ಸಿ ಆರ್ 178/ 2019 ರ ಸಾಸಾಂಶವೇನೇಂದರೆ,   ದಿನಾಂಕ;06/04/2019 ರಂದು 07-00 ಗಂಟೆಯಲ್ಲಿ  ಗೌರೀಬಿದನೂರು ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ. ವೈ.ಅಮರನಾರಾಯಣ್ ಸಾಹೇಬರಿಗೆ  ಮಲ್ಲೇನಹಳ್ಳಿ ಗ್ರಾಮದ  ಕೆರೆಯ ಅಂಗಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು,  ಅದರಂತೆ ಸಿಪಿಐ ಸಾಹೆಬರು, ನನ್ನನ್ನು ಮತ್ತು ಪೊಲೀಸ್ ಸಿಬ್ಬಂದಿಯವರನ್ನು  ಮಲ್ಲೇನಹಳ್ಳಿ ಗ್ರಾಮಕ್ಕೆ ಸರ್ಕಾರಿ ಜೀಪಿನಲ್ಲಿ ಕರೆದುಕೊಂಡು ಹೋಗಿ, ಅಲ್ಲಿ ಪಂಚರನ್ನು ಕರೆದುಕೊಂಡು,  ಕೆರೆಯ ಅಂಗಳಕ್ಕೆ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ,  ಕೆರೆಯ ಅಂಗಳದಲ್ಲಿ  5 ಜನರು ಇದ್ದು, ಇವರಲ್ಲಿ ಕೆಲವರು ಅಂದರ್ ಗೆ  ಐದು ನೂರು ರೂ , ಇನ್ನೂ ಕೆಲವರು, ಬಾಹರ್ ಗೆ ಐದು ನೂರು ರೂ ಎಂದು  ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದನ್ನು  ಖಚಿತಪಡಿಸಿಕೊಂಡು,  ನಾವುಗಳು ಅವರನ್ನು ಸುತ್ತುವರೆದು ಹಿಡಿದುಕೊಂಡು ಅವರ ಹೆಸರು ವಿಳಾಸಗಳನ್ನು ಕೇಳಲಾಗಿ,  1) ಗೋಪಿ ಬಿನ್ ಲಕ್ಷ್ಮಯ್ಯ, 32 ವರ್ಷ,  ಬುಡುಗ ಜಂಗಮ ಜನಾಂಗ, ಕೂಲಿ ಕೆಲಸ,  ಬೆಳ್ಳಾವಲಹಳ್ಳಿ ಗ್ರಾಮ,  2) ಅಂಜಿನಪ್ಪ ಬಿನ್ ಲೇಟ್ ವೆಂಕಟಶಾಮಪ್ಪ, 51 ವರ್ಷ, ಬುಡುಗ ಜಂಗಮ ಜನಾಂಗ, ಮಲ್ಲೇನಹಳ್ಳಿ ಗ್ರಾಮ, 3) ಶ್ರೀನಿವಾಸ ಬಿನ್ ಆದಿಮೂರ್ತಿ 36 ವರ್ಷ,  ಬುಡುಗ ಜಂಗಮ ಜನಾಂಗ,  ಕೂಲಿ ಕೆಲಸ, ಬೆಳ್ಳಾವಲಹಳ್ಳಿ ಗ್ರಾಮ,  4) ರಂಗನಾಥ ಬಿನ್ ಲೇಟ್ ಅಶ್ವತ್ಥಪ್ಪ, 30 ವರ್ಷ,  ಬುಡುಗ ಜಂಗಮ ಜನಾಂಗ, ವ್ಯಾಪಾರ ಬೆಳ್ಳಾವಲಹಳ್ಳಿ  ಗ್ರಾಮ, 5) ಆರ್. ಶ್ರೀನಿವಾಸ  ಬಿನ್ ರಾಮಯ್ಯ, 41 ವರ್ಷ,  ಬೆಲ್ಲಾವಳಹಳ್ಳಿ,  ಗ್ರಾಮ, ಎಲ್ಲರೂ ನಗರಗೆರೆ ಹೋಬಳಿ,  ಗೌರೀಬಿದನೂರು ತಾಲ್ಲೂಕು,ವಾಸಿಗಳು.  ಸ್ಥಳದಲ್ಲಿ ಪರಿಶೀಲಿಲಾಗಿ,  ಸ್ಥಳದಲ್ಲಿ ಜೂಜಾಟವಾಡಲು ಬಳಸುತ್ತಿದ್ದ  52 ಇಸ್ಟೀಟ್ ಎಲೆಗಳು, ಮತ್ತು  3,700/-  ರೂ ನಗದು ಹಣ  ಇದ್ದು, ಇವುಗಳನ್ನು ಸಿಪಿಐ ಸಾಹೇಬರು, ಪಂಚರ ಸಮಕ್ಷಮದಲ್ಲಿ  ಬೆಳಿಗ್ಗೆ 07-45 ರಿಂದ 08-15 ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಂಡಿರುತ್ತೆ.  ಬೆಳಿಗ್ಗೆ 08-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,    ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರಗೆ      ಈ ಕೃತ್ಯವ್ಯ ಅಸಂಜ್ಞೇಯ  ಪ್ರಕರಣವಾಗಿರುವುದರಿಂದ ಮೇಲ್ಕಂಡ ಆಸಾಮಿಯ ವಿರುದ್ಧ ಠಾಣಾ ಎನ್.ಸಿ.ಆರ್. ನಂ.178/ 2019 ರೀತ್ಯಾ ಪ್ರಕರಣ ದಾಖಲಿಸಿ ನಂತರ ನ್ಯಾಯಾಲಯದ ಅನುಮತಿ ಪಡೆದುಕೊಂಢು  ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ಪ್ರ,ವ,ವರದಿಗಳನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೆ.

10) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 110/2019 ಕಲಂ. 87 ಕೆ.ಪಿ. ಆಕ್ಟ್ :-

      ಪಿರ್ಯಾದಿದಾರರಾದ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ವೆಂಕಟಾಚಲಪ್ಪ, ಎಎಸ್ಐ  ರವರು ದಿನಾಂಕ: 07/04/2019 ರಂದು  ಘನ ಸಿ ಜೆ ಮತ್ತು ಜೆ ಎಂ  ಎಫ್ ಸಿ ನ್ಯಾಯಾಲಯದಿಂದ ಅನುಮತಿ  ಪಡೆದು ಠಾಣೆಯಲ್ಲಿ  ಮದ್ಯಾಹ್ನ  1.15  ಗಂಟೆಯಲ್ಲಿ ಹಾಜರು ಪಡಿಸಿದ ಠಾಣಾ ಎನ್ ಸಿ ಆರ್ 179/ 2019 ರ ಸಾರಾಂಶವೇನೇಂದರೆ  ದಿನಾಂಕ :06/04/2019 ರಂದು ಬೆಳಿಗ್ಗೆ 09-00 ಗಂಟೆಯಲ್ಲಿ ಗೌರೀಬಿದನೂರು ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ. ವೈ.ಅಮರನಾರಾಯಣರವರಿಗೆ ಬಾದಿಮರಳೂರು ಗ್ರಾಮದ ಕೆರೆಯ ಅಂಗಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ,  ಸಿಪಿಐ ಸಾಹೇಬರು, ನನ್ನನ್ನು ಮತ್ತು ಪೊಲೀಸ್ ಸಿಬ್ಬಂದಿಯವರನ್ನು       ಕರೆದುಕೊಂಡು, ಬಾದಿಮರಳೂರು ಗ್ರಾಮಕ್ಕೆ  ಹೋಗಿ, ಅಲ್ಲಿ ಪಂಚರನ್ನು ಕರೆದುಕೊಂಡು, ಅಲ್ಲಿಂದ ಗ್ರಾಮದ ಕೆರೆಯ ಅಂಗಳಕ್ಕೆ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ,  ಕೆರೆಯ ಅಂಗಳದಲ್ಲಿ 6 ಜನರು ಇದ್ದು, ಇವರಲ್ಲಿ  ಕೆಲವರು ಅಂದರ್ ಗೆ ಐದು ನೂರು  ರೂ, ಬಾಹರ್ ಗೆ ಐದು ನೂರು ರೂ ಎಂದು ಹಣವನ್ನು ಜೂಜಾಟಕ್ಕೆ ಕಟ್ಟಿ, ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿವುದನ್ನು ಖಚಿತ ಪಡಿಸಿಕೊಂಡು, ನಾವುಗಳು ಅವರನ್ನು ಸುತ್ತುವರಿದು ಹಿಡಿದುಕೊಂಡು, ಅವರ ಹೆಸರು ವಿಳಾಸಗಳನ್ನು ಕೇಳಲಾಗಿ, 1) ನಂಜುಂಡಪ್ಪ ಬಿನ್ ಲೇಟ್ ವೀರಭದ್ರಪ್ಪ, 45 ವರ್ಷ, ಲಿಂಗಾಯಿತರು ಜಿರಾಯ್ತಿ,  ವಿರಪಸಂದ್ರ ಗ್ರಾಮ, 2) ಅಮೀರ್ ಜಾನ್ ಬಿನ್ ಲೇಟ್ ಇಮಾಂಸಾಬ್, 30 ವರ್ಷ,  ಆಟೋ ಚಾಲಕ ವಿರಪಸಂದ್ರ  3) ನಾರಾಯಣಗೌಡ ಬಿನ್ ನಂಜುಂಡಪ್ಪ, 52 ವರ್ಷ,  ಹಿಂದೂ ಸಾದರ ಜನಾಂಗ, ವಿರಪಸಂದ್ರ, 4) ಬಸವರಾಜು ಬಿನ್ ಶಿವಣ್ಣ, 40 ವರ್ಷ,  ಲಿಂಗಾಯಿತರು,  ವಿರಪಸಂದ್ರ ಗ್ರಾಮ,    5) ತಿಮ್ಮಯ್ಯ ಬಿನ್ ಯರ್ರಪ್ಪ, 30 ವರ್ಷ, ಪ.ಜಾತಿ, ಕೂಲಿ ಕೆಲಸ, ವಿರಪಸಂದ್ರ ಗ್ರಾಮ. ಎಂದು ತಿಳಿಸಿದ್ದು, ಒಬ್ಬ ವ್ಯಕ್ತಿ  ತಪ್ಪಿಸಿಕೊಂಡು ಓಡಿ ಹೋಗಿದ್ದು,  ಆತನ ಹೆಸರು ವಿಳಾಸ ತಿಳಿಯಲಾಗಿ 6) ಮುದ್ದುಗಂಗಪ್ಪ ಬಿನ್ ತಿಮ್ಮಯ್ಯ, 60 ವರ್ಷ,  ನಾಯಕ ಜನಾಂಗ,  ವಿರಪಸಂದ್ರ ಗ್ರಾಮ ಎಂದು ತಿಳಿದು ಬಂದಿರುತ್ತೆ  ಸ್ಥಳದಲ್ಲಿ ಪರಿಶೀಲಿಸಲಾಗಿ, ಇಸ್ಟೀಟ್ ಎಲೆಗಳು, ಮತ್ತು ನಗದು ಹಣ ಚೆಲ್ಲಾ ಬಿದ್ದಿದ್ದು, ಇವುಗಳನ್ನು ಎಣಿಸಲಾಗಿ 5,300/- ರೂ ನಗದು ಹಣ ಹಾಗು 52 ಇಸ್ಪೀಟ್ ಎಲೆಗಳು ಇರುತ್ತವೆ. ಇವುಗಳನ್ನು ಸಿಪಿಐ ಸಾಹೇಬರು, ಪಂಚರ ಸಮಕ್ಷಮದಲ್ಲಿ  ಬೆಳಿಗ್ಗೆ 09-30  ರಿಂದ 10-00 ಗಂಟಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಂಡಿರುತ್ತೆ. ಬೆಳಿಗ್ಗೆ 10-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು, ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೇನೆ, ಎಂತ ಇದ್ದ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ : 179/2019 ರೀತ್ಯ ರೀತ್ಯಾ ಪ್ರಕರಣ ದಾಖಲಿಸಿ ನಂತರ ನ್ಯಾಯಾಲಯದ ಅನುಮತಿ ಪಡೆದುಕೊಂಢು  ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ಪ್ರ,ವ,ವರದಿಗಳನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೆ.

11) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 111/2019 ಕಲಂ. 87 ಕೆ.ಪಿ. ಆಕ್ಟ್ :-

      ಪಿರ್ಯಾದಿದಾರರಾದ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ವೆಂಕಟಾಚಲಪ್ಪ, ಎಎಸ್ಐ  ರವರು ದಿನಾಂಕ: 07/04/2019 ರಂದು  ಘನ ಸಿ ಜೆ ಮತ್ತು ಜೆ ಎಂ  ಎಫ್ ಸಿ ನ್ಯಾಯಾಲಯದಿಂದ ಅನುಮತಿ  ಪಡೆದು ಠಾಣೆಯಲ್ಲಿ  ಮದ್ಯಾಹ್ನ  1.30  ಗಂಟೆಯಲ್ಲಿ ಹಾಜರು ಪಡಿಸಿದ ಠಾಣಾ ಎನ್ ಸಿ ಆರ್ 180/2019 ರ ಸಾರಾಂಶವೇನೇಂದರೆ,  ಈ ದಿನ  ದಿನಾಂಕ;06/04/2019 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿ ರುವ ಪ್ರೊಬೇಷನರಿ ಡಿ.ಎಸ್.ಪಿ. ಸಾಹೇಬರಿಗೆ ವಿರುಪಸಂದ್ರ ಗ್ರಾಮದ ಸತ್ಯಮ್ಮ ದೇವಸ್ಥಾನದ ಬಳಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪ್ರೊಬೇಷನರಿ ಡಿ.ಎಸ್.ಪಿ.ಸಾಹೇಬರು, ಶ್ರೀ.ಲಿಯಾಖತ್ ಉಲ್ಲಾ ಪಿಎಸ್ಐ (ಅ.ವಿ) ರವರು,  ಎಎಸ್ಐ ವೆಂಕಟಾಚಲಪ್ಪ ಮತ್ತು ಪೊಲೀಸ್ ಸಿಬ್ಬಂದಿಯವರನ್ನು ಕರೆದುಕೊಂಡು, ವಿರಪಸಂದ್ರ  ಗ್ರಾಮಕ್ಕೆ  ಹೋಗಿ, ಅಲ್ಲಿ ಪಂಚರನ್ನು ಕರೆದುಕೊಂಡು ಗ್ರಾಮದ  ಸತ್ಯಮ್ಮನ ಗುಡಿಯ ಮುಂದೆ ರಸ್ತೆಯ ಬದಿಯ ಮರದ ಕೆಳಗೆ  6 ಜನರು ಇದ್ದು, ಹಣವನ್ನು ಜೂಜಾಟಕ್ಕೆ ಕಟ್ಟಿ, ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿವುದನ್ನು ಖಚಿತ ಪಡಿಸಿಕೊಂಡ ನಂತರ ಪೊಲೀಸರು ಅವರನ್ನು ಸುತ್ತುವರಿದು 1) ಶಿವಶಂಕರ ಬಿನ್ ನಾರಾಯಣಪ್ಪ, 38 ವರ್ಷ, ಬೋವಿ ಜನಾಂಗ,  ವಿರಪಸಂದ್ರ ಗ್ರಾಮ,  2) ಶಶಿಕುಮಾರ್  ಬಿನ್ ನಂಜಪ್ಪ, 25 ವರ್ಷ, ಪರಿಶಿಷ್ಟ ಜಾತಿ 3) ನರಸಿಂಹಮೂರ್ತಿ ಬಿನ್  ಯರ್ರಪ್ಪ, ಪರಿಶಿಷ್ಟಜಾತಿ,  ಕೂಲಿ ಕೆಲಸ,  ವಿರಪಸಂದ್ರ ಗ್ರಾಮ, 4) ನಬೀವುಲ್ಲಾ  ಬಿನ್ ಮಹಮದ್ ರಫೀಕ್, ಆಟೋಚಾಲಕ ವೃತ್ತಿ,  ವಿರಪಸಂದ್ರ ಗ್ರಾಮ,  ಗೌರೀಬಿದನೂರು ತಾಲ್ಲೂಕು,  5) ರಮೇಶ ಬಿನ್ ಲೇಟ್ ತಿಪ್ಪಣ್ಣ, 35 ವರ್ಷ, ಪ.ಜಾತಿ,  ವಿರುಪಸಂದ್ರ, ಗ್ರಾಮ  ಇವರುಗಳು ಸಿಕ್ಕಿದ್ದು,  ಒಬ್ಬ ವ್ಯಕ್ತಿ ತಪ್ಪಿಸಿಕೊಂಡು ಓಡಿ ಹೋಗಿದ್ದು, ಅವನ ಹೆಸರು ವಿಳಾಸ ಕೇಳಲಾಗಿ 6) ಹುಸೇನ್ ಸಾಬಿ ಬಿನ್  ಬಾಷಾಸಾಬಿ, 63 ವರ್ಷ, ವಿರಪಸಂದ್ರ ಗ್ರಾಮ ಎಂದು ತಿಳಿದುಬಂದಿದ್ದು, .  ಜೂಜಾಟಕ್ಕೆ ಬಳಸುತ್ತಿದ್ದ 52 ಇಸ್ಟೀಟ್ ಎಲೆಗಳು, ಮತ್ತು  ಜೂಜಾಟಕ್ಕೆ ಕಟ್ಟಿದ್ದ  10,150/- ರೂ ನಗದು ಹಣವನ್ನು    ಪೊಬೇಷನರಿ ಡಿಎಸ್ಪಿ ಸಾಹೇಬರು ಹಾಗು ಪಂಚರ ಸಮಕ್ಷಮದಲ್ಲಿ  ಬೆಳಿಗ್ಗೆ 11-00  ರಿಂದ 11-30 ಗಂಟಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಂಡಿರುತ್ತೆ. ಮಧ್ಯಾಹ್ನ 12-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು, ಮಾಲನ್ನು ನೀಡಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ  ಠಾಣೆಯಲ್ಲಿ ಎನ್.ಸಿ.ಆರ್ : 180/2019 ರೀತ್ಯ ರೀತ್ಯಾ ಪ್ರಕರಣ ದಾಖಲಿಸಿ ನಂತರ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಢು  ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ಪ್ರ,ವ,ವರದಿಗಳನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೆ.

12) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 112/2019 ಕಲಂ. 87 ಕೆ.ಪಿ. ಆಕ್ಟ್ :-

      ಪಿರ್ಯಾದಿದಾರರಾದ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ವೆಂಕಟಾಚಲಪ್ಪ, ಎಎಸ್ಐ  ರವರು ದಿನಾಂಕ: 07/04/2019 ರಂದು  ಘನ ಸಿ ಜೆ ಮತ್ತು ಜೆ ಎಂ  ಎಫ್ ಸಿ ನ್ಯಾಯಾಲಯದಿಂದ ಅನುಮತಿ  ಪಡೆದು ಠಾಣೆಯಲ್ಲಿ  ಮದ್ಯಾಹ್ನ  1.45  ಗಂಟೆಯಲ್ಲಿ ಹಾಜರು ಪಡಿಸಿದ ಠಾಣಾ ಎನ್ ಸಿ ಆರ್ 181/2019 ರ ಸಾರಾಂಶವೇನೇಂದರೆ,,   ಈ ದಿನ  ದಿನಾಂಕ;06/04/2019 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಪ್ರೊಬೇಷನರಿ ಡಿ.ಎಸ್.ಪಿ. ಸಾಹೇಬರಿಗೆ ಹುದುಗೂರು  ಗ್ರಾಮದ ಕೆರೆಯ ಅಂಗಳದಲ್ಲಿ  ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪ್ರೊಬೇಷನರಿ ಡಿ.ಎಸ್.ಪಿ.ಸಾಹೇಬರು, ಶ್ರೀ.ಲಿಯಾಖತ್ ಉಲ್ಲಾ ಪಿಎಸ್ಐ (ಅ.ವಿ) ರವರು,  ವೆಂಕಟಾಚಪ್ಪ ಎಎಸ್ಐ ಮತ್ತು ಪೊಲೀಸ್ ಸಿಬ್ಬಂದಿಯವರನ್ನು ಕರೆದುಕೊಂಡು, ಹುದುಗೂರು  ಗ್ರಾಮಕ್ಕೆ  ಹೋಗಿ, ಅಲ್ಲಿ ಪಂಚರನ್ನು ಕರೆದುಕೊಂಡು,  ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,     ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ , 1) ರವಿ ಬಿನ್ ಶಾಂತಪ್ಪ, 20 ವರ್ಷ, ಲಿಂಗಾಯಿತ ಜನಾಂಗ,  ವಿರುಪಸಂದ್ರ ಗ್ರಾಮ,  ಗೌರಿಬಿದನೂರು ತಾಲ್ಲೂಕು,   2) ಜಾವಿದ್ ಪಾಷ ಬಿನ್ ಬಾಬು, 32 ವರ್ಷ,  ಇಂದಿರಾ ನಗರ,  ತೊಂಡೇಬಾವಿ ಹೋಬಳಿ,  ಗೌರೀಬಿದನೂರು ತಾಲ್ಲೂಕು, 3) ಕೃಷ್ಣಪ್ಪ ಬಿನ್ ಲೇಟ್ ನರಸಪ್ಪ, 52 ವರ್ಷ,  ನಾಯಕ ಜನಾಂಗ,  ಕೂಲಿ ಕೆಲಸ,  ಹುದುಗೂರು ಗ್ರಾಮ, ಗೌರೀಬಿದನೂರು ತಾಲ್ಲೂಕು. 4) ಮಂಜುನಾಥ ಬಿನ್ ಲೇಟ್ ಬಸಪ್ಪ, 35 ವರ್ಷ, ಲಿಂಗಾಯಿತ ಜನಾಂಗ, ಹುದುಗೂರು ಗ್ರಾಮ,  5) ಬಾಲಕೃಷ್ಣ ಎನ್. ಬಿನ್ ಲೇಟ್ ನರಸಿಂಹಪ್ಪ, 42 ವರ್ಷ,  ಗೊಲ್ಲರು,  ನರಸಾಪುರ ಗ್ರಾಮ,  ಗೌರೀಬಿದನೂರು ತಾಲ್ಲೂಕು ಇವರುಗಳು ಹಿಡಿದುಕೊಂಡು, . ಸ್ಥಳದಲ್ಲಿ ಪರಿಶೀಲಿಸಲಾಗಿ, 6,400/- ರೂ ನಗದು ಹಣ ಹಾಗು 52 ಇಸ್ಪೀಟ್ ಎಲೆಗಳನ್ನು  ಡಿ.ಎಸ್.ಪಿ. ಸಾಹೇಬರು, ಪಂಚರ ಸಮಕ್ಷಮದಲ್ಲಿ ಮಧ್ಯಾಹ್ನ  12-30  ರಿಂದ    13-00 ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಂಡಿರುವುದಾಗಿ, ಮಧ್ಯಾಹ್ನ 13-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು, ಮಾಲನ್ನು ನೀಡಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ  ಠಾಣೆಯಲ್ಲಿ ಎನ್.ಸಿ.ಆರ್ : 181/2019 ರೀತ್ಯ ರೀತ್ಯಾ ಪ್ರಕರಣ ದಾಖಲಿಸಿ ನಂತರ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಢು  ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ಪ್ರ,ವ,ವರದಿಗಳನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೆ.

13) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 113/2019 ಕಲಂ. 87 ಕೆ.ಪಿ. ಆಕ್ಟ್ :-

      ದಿನಾಂಕ: 07/04/2019 ರಂದು ಮದ್ಯಾಹ್ನ 2-15 ಗಂಟ ಸಮಯದಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದು ದಾಖಲಿಸಿರುವ ದೂರಿನ ಸಾರಾಂಶವೇನೆಂದರೆ ದಿನಾಂಕ:06/04/2019 ರಂದು ಮಧ್ಯಾಹ್ನ 15-45 ಗಂಟೆಯಲ್ಲಿ ಶ್ರೀ.ವೆಂಕಟಾಚಲಯ್ಯ, ಎಎಸ್ಐ, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯರವರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದು ಡಿ.ಎ.ನಟರಾಜ ಹೆಚ್.ಸಿ. 80 ರವರು ದಾಖಲಿಸಿರುವ ಎನ್.ಸಿ.ಆರ್ 182/2019 ರಲ್ಲಿ ನಮೂದು ಮಾಡಿರುವುದೇನೆಂದರೆ – ದಿನಾಂಕ;06/04/2019 ರಂದು ಮಧ್ಯಾಹ್ನ 13-00 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿ ರುವ ಪ್ರೊಬೇಷನರಿ ಡಿ.ಎಸ್.ಪಿ. ಸಾಹೇಬರಿಗೆ ನಂಜಯ್ಯಗಾರಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪ್ರೊಬೇಷನರಿ ಡಿ.ಎಸ್.ಪಿ.ಸಾಹೇಬರು, ಶ್ರೀ.ಲಿಯಾಖತ್ ಉಲ್ಲಾ ಪಿಎಸ್ಐ (ಅ.ವಿ) ರವರು, ವೆಂಕಟಾಚಲಪ್ಪ ಎಎಸ್ಐ  ಮತ್ತು ಪೊಲೀಸ್ ಸಿಬ್ಬಂದಿಯವರನ್ನು ಕರೆದುಕೊಂಡು, ನಂಜಯ್ಯಗಾರಹಳ್ಳಿ  ಗ್ರಾಮಕ್ಕೆ  ಹೋಗಿ, ಅಲ್ಲಿ ಪಂಚರನ್ನು ಕರೆದುಕೊಂಡು, ಕೆರೆಯಲ್ಲಿನ ಮರವೊಂದರ  ಕೆಳಗೆ   ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ , 1) ಪಾಪಣ್ಣ ಬಿನ್ ಲೇಟ್ ಲಿಂಗಪ್ಪ, 49 ವರ್ಷ, ಪರಿಶಿಷ್ಟಜಾತಿ, ಕೂಲಿ ಕೆಲಸ, ಹುದುಗೂರು ಗ್ರಾಮ, ಗೌರೀಬಿದನೂರು ತಾಲ್ಲೂಕು 2) ರಾಮಚಂದ್ರಪ್ಪ ಬಿನ್ ಲೇಟ್ ನಾರಾಯಣರೆಡ್ಡಿ, 45 ವರ್ಷ, ಕುರುಬ ಜನಾಂಗ, ಹುದಗೂರು ಗ್ರಾಮ, ಗೌರೀಬಿದನೂರು ತಾಲ್ಲೂಕು, 3) ಶ್ರೀನಿವಾಸ ಬಿನ್ ವೆಂಕಟೇಶ, 27 ವರ್ಷ, ಬುಡುಗ ಜಂಗಮ ಜನಾಂಗ, ಅಕ್ಷಯನಗರ, ಬೇಗೂರು, ಬೆಂಗಳೂರು 4] ಅಜಿತ್ ಬಿನ್ ನಾರಾಯಣಪ್ಪ, 22 ವರ್ಷ,  ಬುಡುಗ ಜಂಗಮ  ಜನಾಂಗ,  ನಂಜಯ್ಯಗಾರಹಳ್ಳಿ ಗ್ರಾಮ,  5) ನಾರಾಯಣಸ್ವಾಮಿ ಬಿನ್ ಲೇಟ್ ಕೋಡೀರ್ಲಪ್ಪ, 47 ವರ್ಷ, ಬುಡುಗ ಜಂಗಮ ಜನಾಂಗ ನಂಜಯ್ಯಗಾರಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು, ಹಿಡಿದುಕೊಂಡು, ಸ್ಥಳದಲ್ಲಿ ಜೂಜಾಟವಾಡಲು ಬಳಸುತ್ತಿದ್ದ 52 ಇಸ್ಪೀಟ್ ಎಲೆಗಳು ಹಾಗು ಜೂಜಾಟಕ್ಕೆ ಕಟ್ಟಿದ್ದ 5,700/- ರೂ ನಗದು ಹಣ  ಡಿ.ಎಸ್.ಪಿ. ಸಾಹೇಬರು, ಮತ್ತು ಪಂಚರ ಸಮಕ್ಷಮದಲ್ಲಿ ಮಧ್ಯಾಹ್ನ  14-15  ರಿಂದ 15-00 ಗಂಟಯವರೆಗೆ ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಂಡು, ಮಧ್ಯಾಹ್ನ 15-45 ಗಂಟೆಗೆ ಠಾಣೆಗೆ ವಾಪಸ್ಸು ಬಂದು, ಮಾಲನ್ನು  ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

14) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 53/2019 ಕಲಂ. 87 ಕೆ.ಪಿ. ಆಕ್ಟ್ :-

      ದಿನಾಂಕ:06/04/2019 ರಂದು ರಾತ್ರಿ 8:45 ಗಂಟೆಗೆ  ಲಕ್ಷ್ಮೀನಾರಾಯಣಪ್ಪ ಎ.ಎಸ್.ಐ ಗೌರಿಬಿದನೂರು ಪುರ ಪೊಲೀಸ್ ಠಾಣೆ  ರವರು ನೀಡಿದ ವರದಿಯ ಸಾರಾಂಶವೇಂದರ,  ದಿನಾಂಕ:06/04/2019 ರಂದು ಸಂಜೆ 7-15 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ ನಮ್ಮ ಪಿ.ಎಸ್.ಐ ರವರಿಗೆ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ಪುರದ ಹನುಮಂತನಗರದ ಮರಳೂರು ಕಾಲುವೆಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಅಂದರ್ – ಬಾಹರ್ ಜೂಜಾಟವಾಡುತ್ತಿರುತ್ತಿರುವುದಾಗಿ ಮಾಹಿತಿ ಬಂದಿದ್ದರ ಮಾಹಿತಿಯನ್ನು ನಮಗೆ ತಿಳಿಸಿದ್ದು, ಕೂಡಲೇ ನಾವು  ಠಾಣೆಗೆ ಪಂಚರನ್ನು ಕರೆಯಿಸಿಕೊಂಡು ಅವರಿಗೆ ವಿಚಾರವನ್ನು ತಿಳಿಸಿದ್ದು, ಅವರು ಒಪ್ಪಿಕೊಂಡ ನಂತರ ನಾನು ಪಿ.ಎಸ್.ಐ ಸಾಹೇಬರವರೊಂದಿಗೆ, ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-12, ಹೆಚ್.ಸಿ-135, ಹೆಚ್.ಸಿ-226, ಪಿಸಿ-455, ಪಿಸಿ-362, ಪಿಸಿ-507, ಪಿ.ಸಿ-06, ಪಿ.ಸಿ-352, ರವರೊಂದಿಗೆ ಇಲಾಖೆಯಿಂದ ಒದಗಿಸಿರುವ ಸರ್ಕಾರಿ ವಾಹನದಲ್ಲಿ ಬಿ-ಹೆಚ್ ರಸ್ತೆಯ ಮುಖಾಂತರ ಮರಳೂರು ಕಾಲುವೆ ಮುಖಾಂತರ ಹನುಮಂತ ನಗರದ ಬಳಿಗೆ ಹೋಗಿ ಅಕ್ಕಯ್ಯಮ್ಮ ದೇವಸ್ಥಾನದ ಬಳಿ ವಾಹನವನ್ನು ನಿಲ್ಲಿಸಿ ಸ್ವಲ್ಪ ದೂರ ಕಾಲುವೆ ಕಟ್ಟೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಂತೆ ಕಾಲುವೆ ಕಟ್ಟೆಯ ಮೇಲೆ ಅಳವಡಿಸಿರುವ ಬೀದಿ ದೀಪದ ಬೆಳಕಿನಲ್ಲಿ ಯಾರೋ ಆಸಾಮಿಗಳು 200 ರೂಪಾಯಿಗಳು ಅಂದರ್, ಎಂದರೆ ಮತ್ತೊಬ್ಬ ಆಸಾಮಿಯು 500/- ರೂಪಾಯಿಗಳು ಬಾಹರ್ ಎಂದು ಕೂಡಾಡಿಕೊಂಡು ಜೂಜಾಟ ಆಡುತ್ತಿದ್ದುದ್ದನ್ನು ಖಾತ್ರಿ ಪಡಿಸಿಕೊಂಡು ಪಂಚರ ಸಮ್ಮುಖದಲ್ಲಿ ಎಲ್ಲರೂ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟವಾಡುತ್ತಿದ್ದವರು ಓಡಿಹೋಗಲು ಪ್ರಯತ್ನಿಸಿದ್ದು, ಸಿಬ್ಬಂದಿಯವರು ಒಬ್ಬೊಬ್ಬರನ್ನು ಬೆನ್ನಟ್ಟಿಕೊಂಡು ಹೋಗಿ ಹಿಡಿದುಕೊಂಡಿದ್ದು, ಅವರ ಹೆಸರು/ವಿಳಾಸಗಳನ್ನು ಕೇಳಿದಾಗ 1) ರಘು ಬಿನ್ ಹನುಮಂತರಾವ್, 30 ವರ್ಷ, ದರ್ಜಿ ಜನಾಂಗ, ಟೈಲರ್ ಕೆಲಸ, ವಾಸ: ಮಾದವನಗರ, 2)ರಾಜೇಂದ್ರ ಬಿನ್ ಲೇಟ್ ಹನುಮಂತರಾಯಪ್ಪ, 38 ವರ್ಷ, ನಾಯಕರು, ಕೂಲಿ ಕೆಲಸ, ಮಾದನಹಳ್ಳಿ ಗ್ರಾಮ, 3)ಕುಮಾರ ಬಿನ್ ಲೇಟ್ ಮುನಿವೆಂಕಟಸ್ವಾಮಿ, 35 ವರ್ಷ, ಭೋವಿ ಜನಾಂಗ, ಚಾಲಕ ವೃತ್ತಿ, ಮಾದವನಗರ, 4)ಶಿವಕುಮಾರ್ ಬಿನ್ ನಾರಾಯಣಪ್ಪ, 28 ವರ್ಷ, ನಾಯಕರು, ಚಾಲಕ ವೃತ್ತಿ, ಮಾದವ ನಗರ, 5)ಮಂಜುನಾಥ ಬಿನ್ ಲೇಟ್ ಶಿವಕುಮಾರ್, 24 ವರ್ಷ, ಈಡಿಗರು, ಚಾಲಕ ವೃತ್ತಿ, ವಾಸ: ಉಪ್ಪಾರ ಕಾಲೋನಿ, ಗೌರಿಬಿದನೂರು ಟೌನ್. 6)ಮಂಜುನಾಥ ಬಿನ್ ಅಶ್ವತ್ಥಪ್ಪ, 39 ವರ್ಷ, ನಾಯಕರು, ಮೆಕಾನಿಕ್, ವಾಸ: ಮಾದನಹಳ್ಳಿ ಗ್ರಾಮ, 7)ಶಿವ ಕುಮಾರ್ ಬಿನ್ ಲೇಟ್ ಅಶ್ವತ್ಥಪ್ಪ, 46 ವರ್ಷ, ನಾಯಕರು, ವ್ಯಾಪಾರ, ವಾಸ: ಮಾದವ ನಗರ, ಗೌರಿಬಿದನೂರು ಟೌನ್. 8)ಗಂಗಾಧರ ಬಿನ್ ಗೋವಿಂದಪ್ಪ, 40 ವರ್ಷ, ಹಿಂದೂ ಸಾದರು, ಚಾಲಕ ವೃತ್ತಿ, ವಾಸ: ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು. 9)ವಿನೋದ್ ಕುಮಾರ್ ಬಿನ್ ತಿಮ್ಮಯ್ಯ, 32 ವರ್ಷ, ನಾಯಕರು, ವಾಸ: ಬ್ಯಾಟರಿ ಕೆಲಸ, ವಾಸ: ಮಾದವನಗರ, 10)ರಾಜೇಶ್ ಬಿನ್ ವೆಂಕಟರವಣಪ್ಪ, 32 ವರ್ಷ, ಕುರುಬರು, ಚಾಲಕ ವೃತ್ತಿ, ವಾಸ: ಮಾದವ ನಗರ, ಗೌರಿಬಿದನೂರು ಟೌನ್. 11)ನವೀನ್ ಕುಮಾರ್ ಬಿನ್ ಲೇಟ್ ಗಂಗಾಧರಪ್ಪ, 29 ವರ್ಷ, ನಾಯಕರು, ವಾಸ: ವಾಟರ್ ಪ್ಲಾಂಟ್, ಮಾದವ ನಗರ, ಗೌರಿಬಿದನೂರು ಟೌನ್. ಎಂದು ತಿಳಿಸಿದ್ದು, ಅವರಿಗೆ ಇಸ್ಪೀಟ್ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೆ ಪರವಾನಗಿ ಇಲ್ಲದೇ ಇದ್ದು, ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳನ್ನು ಮತ್ತು ಪಣಕ್ಕೆ ಕಟ್ಟಿದ್ದ ನಗದು ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತೆ. ಹಣವನ್ನು ಎಣಿಕೆ ಮಾಡಲಾಗಿ ಒಟ್ಟು ಹಣ 22,570/- ರೂಪಾಯಿಗಳಿರುತ್ತದೆ. ರಾತ್ರಿ 7-30 ಗಂಟೆಯಿಂದ 8-30 ಗಂಟೆಯವರೆಗೆ ಪಂಚನಾಮೆಯನ್ನು ಠಾಣಾ ಲ್ಯಾಪ್ ಟಾಪ್ ನಲ್ಲಿ ಸಿದ್ದಪಡಿಸಿ ಪೆನ್ ಡ್ರೈವ್ ಮುಖಾಂತರ ಠಾಣೆಗೆ ಕಳುಹಿಸಿಕೊಟ್ಟು ಪ್ರೀಂಟ್ ತೆಗೆಯಿಸಿಕೊಂಡು ನಂತರ ಸ್ಥಳಕ್ಕೆ ಬಂದು ಹಾಜರುಪಡಿಸಿದ್ದು, ನಂತರ ಆರೋಪಿ ಹಾಗೂ ಮಾಲಿನೊಂದಿಗೆ ರಾತ್ರಿ 8-45 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಮುಂದಿನ ಕ್ರಮಕ್ಕಾಗಿ ನೀಡಿದ ವರಧಿ ಮೇರೆಗೆ ಠಾಣಾ NCR 140/2019 ರಂತೆ ಎನ್.ಸಿ.ಆರ್ ಅನ್ನು ದಾಖಲಿಸಿ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ದಿನಾಂಕ:07/04/2019 ರಂದು ಬೆಳಿಗ್ಗೆ 11:30 ಗಂಟೆಗೆ ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

15) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 54/2019 ಕಲಂ. 87 ಕೆ.ಪಿ. ಆಕ್ಟ್ :-

      ದಿನಾಂಕ:06/04/2019 ರಂದು ರಾತ್ರಿ 10:45 ಗಂಟೆಗೆ  ಲಕ್ಷ್ಮೀನಾರಾಯಣಪ್ಪ ಎ.ಎಸ್.ಐ ಗೌರಿಬಿದನೂರು ಪುರ ಪೊಲೀಸ್ ಠಾಣೆ ರವರು ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ:06/04/2019 ರಂದು ರಾತ್ರಿ 21-15 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ ನಮ್ಮ ಪಿ.ಎಸ್.ಐ ರವರಿಗೆ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ಪುರದ ಕರೇಕಲ್ಲಹಳ್ಳಿಯ ಆದಿತಿಮ್ಮಪ್ಪನ ದೇವಸ್ಥಾನದ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಅಂದರ್ – ಬಾಹರ್ ಜೂಜಾಟವಾಡುತ್ತಿರುತ್ತಿರುವುದಾಗಿ ಮಾಹಿತಿ ಬಂದಿದ್ದರ ಮಾಹಿತಿಯನ್ನು ನಮಗೆ ತಿಳಿಸಿದ್ದು, ಕೂಡಲೇ ನಾವು  ಠಾಣೆಗೆ ಪಂಚರನ್ನು ಕರೆಯಿಸಿಕೊಂಡು ಅವರಿಗೆ ವಿಚಾರವನ್ನು ತಿಳಿಸಿದ್ದು, ಅವರು ಒಪ್ಪಿಕೊಂಡ ನಂತರ ನಾನು ಪಿ.ಎಸ್.ಐ ಸಾಹೇಬರವರೊಂದಿಗೆ, ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-12, ಹೆಚ್.ಸಿ-135, ಹೆಚ್.ಸಿ-226, ಪಿಸಿ-455, ಪಿಸಿ-362, ಪಿಸಿ-507, ಪಿ.ಸಿ-06, ಪಿ.ಸಿ-352, ರವರೊಂದಿಗೆ ಇಲಾಖೆಯಿಂದ ಒದಗಿಸಿರುವ ಸರ್ಕಾರಿ ವಾಹನದಲ್ಲಿ ವೀರಾಂಡಹಳ್ಳಿಯ ಮಾರ್ಗಾವಾಗಿ ಕರೇಕಲ್ಲಹಳ್ಳಿಯ ಬಳಿಗೆ ಹೋಗಿದ್ದು, ವಾಹನವನ್ನು ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ ಸ್ವಲ್ಪ ದೂರ ದೇವಸ್ಥಾನದ ಕಡೆಗೆ ನಡೆದುಕೊಂಡು ಹೋಗಿದ್ದು, ದೇವಸ್ಥಾನದ ಹಿಂಭಾಗದಲ್ಲಿ ಅಳವಡಿಸಿರುವ ಬೀದಿ ದೀಪದ ಬೆಳಕಿನಲ್ಲಿ ಯಾರೋ ಆಸಾಮಿಗಳು 500 ರೂಪಾಯಿಗಳು ಅಂದರ್, ಎಂದರೆ ಮತ್ತೊಬ್ಬ ಆಸಾಮಿಯು 500/- ರೂಪಾಯಿಗಳು ಬಾಹರ್ ಎಂದು ಕೂಗಾಡಿಕೊಂಡು ಜೂಜಾಟ ಆಡುತ್ತಿದ್ದುದ್ದನ್ನು ಖಾತ್ರಿ ಪಡಿಸಿಕೊಂಡು ಪಂಚರ ಸಮ್ಮುಖದಲ್ಲಿ ಎಲ್ಲರೂ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟವಾಡುತ್ತಿದ್ದವರು ಓಡಿಹೋಗಲು ಪ್ರಯತ್ನಿಸಿದ್ದು, ಸಿಬ್ಬಂದಿಯವರು ಅವರನ್ನು ಬೆನ್ನಟ್ಟಿಕೊಂಡು ಹೋಗಿ ಹಿಡಿದುಕೊಂಡಿದ್ದು, ಅವರ ಹೆಸರು/ವಿಳಾಸಗಳನ್ನು ಕೇಳಿದಾಗ 1)ಅನಿಲ್ ಕುಮಾರ್ ಬಿನ್ ವೆಂಕಟಾಚಲಪತಿ, 32 ವರ್ಷ, ಹಿಂದೂ ಸಾದರು, ರೇಮಂಡ್ಸ್ ನಲ್ಲಿ ಕೆಲಸ, ವಾಸ: ಕರೇಕಲ್ಲಹಳ್ಳಿ, ಗೌರಿಬಿದನೂರು ಟೌನ್. 2)ರಾಜು ಬಿನ್ ಲೇಟ್ ಸಂಜೀವಪ್ಪ, 42 ವರ್ಷ, ದೋಭಿ ಜನಾಂಗ, ಎಲೆಕ್ಟ್ರಿಷಿಯನ್, ವಾಸ: ಕೆ.ಇ.ಬಿ. ಮುಂಭಾಗ, ಗೌರಿಬಿದನೂರು ಟೌನ್. 3)ನರೇಂದ್ರ ಬಿನ್ ನಾರಾಯಣ, 50 ವರ್ಷ, ಬಲಜಿಗರು, ರೇಮಂಡ್ಸ್ ಫ್ಯಾಕ್ಟರಿಯಲ್ಲಿ ಕೆಲಸ, ವಾಸ: ಸಮತ ಸ್ಕೂಲ್ ಮುಂಭಾಗ, ವೀರಾಂಡಹಳ್ಳಿ, 4)ಚಂದ್ರು ಕುಮಾರ್ ಬಿನ್ ಮುರುಗೇಶ್, 39 ವರ್ಷ, ನಾಯಕರ ಜನಾಂಗ, ರೇಮಂಡ್ಸ್ ನಲ್ಲಿ ಕೆಲಸ, ವಾಸ: ಮಾರುತಿ ನಗರ, ಗೌರಿಬಿದನೂರು ಟೌನ್. 5)ಆನಂದ ಬಿನ್ ರಾಮಾಂಜಿನಪ್ಪ, 40 ವರ್ಷ, ಬಲಜಿಗರು, ಮೆಕಾನಿಕ್ ಕೆಲಸ, ವಾಸ: ಕೆ.ಇ.ಬಿ ಮುಂಭಾಗ, ಉಪ್ಪಾರ ಕಾಲೋನಿ, ಗೌರಿಬಿದನೂರು ಟೌನ್. 6)ರಾಜಣ್ಣ ಬಿನ್ ಈರಣ್ಣ, 42 ವರ್ಷ, ಭೋವಿ ಜನಾಂಗ, ರೇಮಂಡ್ಸ್ ನಲ್ಲಿ ಕೆಲಸ, ವಾಸ: 2ನೇ ಮುಖ್ಯ ರಸ್ತೆ, ಕೆ.ಎನ್. ಎಕ್ಸ್ಟೆಂಕ್ಷನ್, ಯಶವಂತಪುರ, ಬೆಂಗಳೂರು-02. ಎಂದು ತಿಳಿಸಿದ್ದು, ಅವರಿಗೆ ಇಸ್ಪೀಟ್ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೆ ಪರವಾನಗಿ ಇಲ್ಲದೇ ಇದ್ದು, ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳನ್ನು ಮತ್ತು ಪಣಕ್ಕೆ ಕಟ್ಟಿದ್ದ ನಗದು ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತೆ. ಹಣವನ್ನು ಎಣಿಕೆ ಮಾಡಲಾಗಿ ಒಟ್ಟು ಹಣ 9720/- ರೂಪಾಯಿಗಳಿರುತ್ತದೆ. ರಾತ್ರಿ 9-30 ಗಂಟೆಯಿಂದ 10-30 ಗಂಟೆಯವರೆಗೆ ಪಂಚನಾಮೆಯನ್ನು ಠಾಣಾ ಲ್ಯಾಪ್ ಟಾಪ್ ನಲ್ಲಿ ಸಿದ್ದಪಡಿಸಿ ಪೆನ್ ಡ್ರೈವ್ ಮುಖಾಂತರ ಠಾಣೆಗೆ ಕಳುಹಿಸಿಕೊಟ್ಟು ಪ್ರೀಂಟ್ ತೆಗೆಯಿಸಿಕೊಂಡು ನಂತರ ಸ್ಥಳಕ್ಕೆ ಬಂದು ಹಾಜರುಪಡಿಸಿದ್ದು, ನಂತರ ಆರೋಪಿ ಹಾಗೂ ಮಾಲಿನೊಂದಿಗೆ ರಾತ್ರಿ 10-45 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಎನ್.ಸಿ.ಆರ್ ಅನ್ನು ದಾಖಲಿಸಿಕೊಂಡಿದ್ದು, ದಿನಾಂಕ:07/04/2019 ರಂದು ಮದ್ಯಾಹ್ನ 12:00 ಗಂಟೆಗೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

16) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 40/2019 ಕಲಂ. 279,304(ಎ) ಐಪಿಸಿ :-

     ದಿನಾಂಕ:07-04-2019 ರಂದು ಬೆಳಗ್ಗೆ 07-30 ಗಂಟೆಗೆ ಪಿರ್ಯಾಧಿದಾರರಾದ ಮಂಜುನಾಥರೆಡ್ಡಿ ಬಿನ್ ರಂಗನಾಥರೆಡ್ಡಿ, 31 ವರ್ಷ, ವಕ್ಕಲಿಗರು, ಜಿರಾಯ್ತಿ, ಗೋಪಲ್ಲಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ , ದಿನಾಂಕ:07-04-2019 ರಂದು ತಮ್ಮ ತಂದೆಯವರಾದ ರಂಗನಾಥರೆಡ್ಡಿ ಬಿನ್ ಲೇಟ್ ನಾರೆಪ್ಪ, 55 ವರ್ಷ, ವಕ್ಕಲಿಗರು, ರವರು ಬೆಳಗ್ಗೆ ಸುಮಾರು 05-40 ಗಂಟೆಗೆ ಮನೆಯಿಂದ ವಾಕಿಂಗ್ ಗೆ ಹೋದರು, ನಂತರ ಸುಮಾರು 20 ನಿಮಿಷದಲ್ಲಿ ತಮ್ಮ ಗ್ರಾಮದ ಶಿವಾರೆಡ್ಡಿ ಬಿನ್ ಲೇಟ್ ಯಾಮನ್ನ ರವರು ತನಗೆ ಪೋನ್ ಮಾಡಿ ಗೋಪಲ್ಲಿ ಕ್ರಾಸ್ ನಲ್ಲಿ ನಿಮ್ಮ ತಂದೆ ವಾಕಿಂಗ್ ಹೋಗುವಾಗ ರಸ್ತೆಯಲ್ಲಿ ನಿಮ್ಮ ತಂದೆಗೆ ಕಾರು ಡಿಕ್ಕಿ ಹೊಡೆದು ಅಪಘಾತ ಪಡೆಸಿದೆಂದು ಪೋನ್ ಮಾಡಿ ತಿಳಿಸಿದನು. ಕೂಡಲೇ ತಾನು ಮತ್ತು ತಮ್ಮ ಗ್ರಾಮದ ಬಾಬು ಬಿನ್ ತಮ್ಮಿರೆಡ್ಡಿ ರವರು ದ್ವಿಚಕ್ರವಾಹನದಲ್ಲಿ ಹೋಗಿ ನೋಡಿದೆವು . ತಮ್ಮತಂದೆ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು, ಮೃತಪಟ್ಟಿದ್ದರು. ತಮ್ಮ ತಂದೆಗೆ ತಲೆಗೆ ಪೆಟ್ಟಾಗಿ ರಕ್ತ ಬಂದಿತ್ತು. ಎಡಕಾಲು ಮತ್ತು ಬಲಕಾಲಿನ ಮೊಣಕಾಲುಗಳಿಗೆ, ಮತ್ತು ಬಲಕೈಗೆ ಗಾಯಗಳಾಗಿತ್ತು. ಪಕ್ಕದಲ್ಲಿಯೇ ಸ್ವಲ್ಪ ದೂರದಲ್ಲಿ ಕಾರು ನಿಂತಿತ್ತು. ತಮ್ಮ ಗ್ರಾಮದ ಶಿವಾರೆಡ್ಡಿ ಮತ್ತು ಎಸ್. ಕೃಷ್ಣಪ್ಪ ರವರು ಅಲ್ಲಿದ್ದರು. ಶಿವಾರೆಡ್ಡಿ ರವರನ್ನು ಅಪಘಾತದ ಬಗ್ಗೆ ಕೇಳಲಾಗಿ ತಾವು ಮತ್ತು ನಿಮ್ಮ ತಂದೆಯವರು ಈ ದಿನ ಬೆಳಗ್ಗೆ 06-00 ಗಂಟೆಯ ಸಮಯದಲ್ಲಿ ತಮ್ಮ ಗ್ರಾಮದ ಬಚ್ಚಪ್ಪ ರವರ ತೋಟದ ಪಕ್ಕದಲ್ಲಿ ರಸ್ತೆಯ ಎಡಭಾಗದಲ್ಲಿ ವಾಕಿಂಗ್ ನಡೆದುಕೊಂಡು ಹೋಗುವಾಗ ಕಾರನ್ನು ಅದರ ಚಾಲಕ ಮದನಪಲ್ಲಿ ಕಡೆಯಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಮ್ಮ ತಂದೆಗೆ ಅಪಘಾತ ಪಡೆಸಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರೆಂದು ತಿಳಿಸಿದರು. ಅಲ್ಲಿಯೇ ಪಕ್ಕದಲ್ಲಿ ಮೋರಿಗೆ ಗುದ್ದಿ ಕಾರು ನಿಂತಿತ್ತು.ಕಾರಿನ ಸಂಖ್ಯೆಯನ್ನು ನೋಡಲಾಗಿ ಕಾರಿನ ನೊಂದಣಿ ಸಂಖ್ಯೆ ಕೆ.ಎ-02 ಜೆಡ್-451 ನಂಬರ್ ಇತ್ತು. ತಮ್ಮ ತಂದೆಯವರ ಮೃತ ದೇಹವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಾಗಿರುತ್ತೇವೆ. ಕೆ.ಎ-02 ಜೆಡ್-451 ಕಾರಿನ ಚಾಲಕ ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ತಮ್ಮ ತಂದೆಗೆ ಅಫಘಾತ ಪಡೆಸಿ ಮೃತನಾಗಲು ಕಾರಣನಾದ ಕೆ.ಎ-02 ಜೆಡ್-451 ಕಾರು ಮತ್ತು ಕಾರು ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿರುವ ಪಿರ್ಯಾಧು.

17) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 67/2019 ಕಲಂ. 279,337 ಐಪಿಸಿ :-

      ದಿನಾಂಕ 07/04/2019 ರಂದು ಮದ್ಯಾಹ್ನ 2-15 ಗಂಟೆಗೆ ಪಿರ್ಯಾಧಿ ಬಸವಾಪುರ ಗ್ರಾಮದ ಗಂಗಾಧರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನ್ನ ಮಗ ನವೀನ್ ಕುಮಾರ್ ರವರು ದಿನಾಂಕ 06/04/2019 ರಂದು ಮದ್ಯಾಹ್ನ ಸುಮಾರು 1-30 ಗಂಟೆಯ ಸಮಯದಲ್ಲಿ ತನ್ನ ಬಾಬತ್ತು ಕೆಎ41-ಇಎನ್-9113 ರ ದ್ವಿಚಕ್ರವಾಹನದಲ್ಲಿ ದೊಡ್ಡಬಳ್ಳಾಪುರದಿಂದ ಬಸವಾಪುರ ಗ್ರಾಮಕ್ಕೆ ಬರಲು ಎಸ್.ಹೆಚ್. 9 ರ ರಸ್ತೆಯಲ್ಲಿ ಕ್ರಿಶ್ಚಿಯನ್ ಕಾಲೋನಿಯ ಹತ್ತಿರ ಬರುತ್ತಿದ್ದಾಗ ಇವನ ಎದರುಗಡೆಯಿಂದ ಬಂದ ಟಿಎನ್-52-ಹೆಚ್-4648 ರ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗ ನವೀನ್ ಕುಮಾರ್ ರವರು ಚಾಲನೆ ಮಾಡಿಕೊಂಡು ಬರುತ್ತಿದ್ದ ಕೆಎ41-ಇಎನ್-9113 ರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ನವೀನ್ ಕುಮಾರ್ ರವರ ತೆಲೆಗೆ, ಬಲಕಾಲುಗೆ  ಮತ್ತು ಬಲಗೈಗೆ ರಕ್ತಗಾಯಗಳಾಗಿದ್ದು, ರಸ್ತೆ ಅಪಘಾತ ಉಂಟುಪಡಿಸಿದ ಟಿಎನ್-52-ಹೆಚ್-4648 ರ ಲಾರಿಯ ಚಾಲಕನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

18) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 32/2019 ಕಲಂ. 87 ಕೆ.ಪಿ. ಆಕ್ಟ್ :-

      ದಿನಾಂಕ: 06.04.2019 ರಂದು ರಾತ್ರಿ 7-0 ಗಂಟೆ ಸಮಯದಲ್ಲಿ ನಂದಿಗಿರಿಧಾಮ ಪೊಲೀಸ್ ಠಾಣೆಯ ಪಿಎಸ್ಐ ರವರಾದ ಶ್ರೀ ಬಸವನಗೌಡ.ಕೆ.ಪಾಟೀಲ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದಲ್ಲಿ ಇದೇ ದಿನ ದಿನಾಂಕ:06/04/2019 ರಂದು ಸಂಜೆ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯಾದ ಎ.ಎಸ್.ಐ ರಾಮಚಾರಿ, ಪಿಸಿ-360 ರಾಜೇಶ್, ಪಿಸಿ-517 ಅಂಬರೀಷ, ಪಿಸಿ-269 ನಾಗಪ್ಪ ರವರೊಂದಿಗೆ ನಂದಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಸಂಜೆ 5:00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿಯ, ಜಡಲತಿಮ್ಮನಹಳ್ಳಿ ಗ್ರಾಮದಲ್ಲಿ ಮಹದೇವಾಚಾರಿ ಬಿನ್ ಲೇಟ್ ತಿಮ್ಮಚಾರಿ ರವರ ಖಾಲಿ ನಿವೇಶನದ ಸಾರ್ವಜನಿಕರ ಸ್ಥಳದಲ್ಲಿ ಯಾರೋ ಅಸಾಮಿಗಳು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆಯಲು ಪಂಚರನ್ನು ಬರಮಾಡಿಕೊಂಡು ಮೇಲ್ಕಂಡ ವಿಚಾರ ತಿಳಿಸಿ ಜೂಜಾಟದ ಮೇಲೆ ದಾಳಿ ಮಾಡಲು ಪಂಚರಾಗಿ ಸಹಕರಿಸಲು ಒಪ್ಪಿದ್ದರ ಮೇರೆಗೆ ಪಂಚರು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಸಂಜೆ 5:30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೂಜಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸುಮಾರು ಜನರು ಗುಂಪಾಗಿ ಕುಳಿತುಕೊಂಡು ಕೆಲವರು ಅಂದರ್ ಗೆ 100/-ರೂ ಗಳೆಂದು, ಇನ್ನೂ ಕೆಲವರು ಬಾಹರ್ 100/- ರೂ ಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ದಾಳಿ ಮಾಡಿ ಮೇಲೆಕ್ಕೆ ಏಳದಂತೆ ಸೂಚನೆ ನೀಡಿದಾಗಲು ಸಹ ಇಸ್ಪಿಟ್ ಜೂಜಾಟವಾಡುತ್ತಿದ್ದ ಸುಮಾರು 6 ಜನ ಸ್ಥಳದಿಂದ ಓಡಿ ಹೋಗಿದ್ದು ಅವರನ್ನು ಜೊತೆಯಲ್ಲಿದ್ದ ಸಿಬ್ಬಂದಿ ಬೆನ್ನಟ್ಟಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು ಉಳಿದ 4 ಅಸಾಮಿಗಳು ಸಿಗದೆ ಓಡಿ ಹೋದರು ವಶಕ್ಕೆ ಪಡೆದುಕೊಂಡಿದ್ದ 2 ಜನರ ಹೆಸರು ಮತ್ತು ವಿಳಾಸ ಕೇಳಲಾಗಿ 1) ಅಮರ್ ನಾಥ್ ಬಿನ್ ಲೇಟ್ ಪಿಲ್ಲಮಲ್ಲಪ್ಪ, 40 ವರ್ಷ, ದೇವಾಂಗರು, ನೆಯ್ಗೆ ಕೆಲಸ, ಜಡಲತಿಮ್ಮನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 2) ವೆಂಕಟೇಶ್ ಬಿನ್ ರತ್ನಾಚಾರಿ, 33 ವರ್ಷ, ಅಕ್ಕಸಾಲಿಗ, ಸೀರೆ ಪಾಲಿಶ್ ಕೆಲಸ, ವಾಸ: ಜಡಲತಿಮ್ಮನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸದರಿ ರವರುಗಳನ್ನು ಓಡಿ ಹೋದ ಅಸಾಮಿಗಳ ಹೆಸರು, ವಿಳಾಸ ಕೇಳಲಾಗಿ 1) ಗೋಪಾಲಪ್ಪ ಬಿನ್ ಲೇಟ್ ವೆಂಕಟರವಣಚಾರಿ, 38 ವರ್ಷ, ಅಕ್ಕಸಾಲಿಗರು, ಕಾಂಕ್ರಿಟ್ ಕೆಲಸ, ವಾಸ: ಜಡಲತಿಮ್ಮನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 2) ವೆಂಕಟರೆಡ್ಡಿ ಬಿನ್ ನಾರಾಯಣಪ್ಪ, 40 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಜಡಲತಿಮ್ಮನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 3) ಮಹದೇವಾಚಾರಿ ಬಿನ್ ಲೇಟ್ ತಿಮ್ಮಚಾರಿ, 45 ವರ್ಷ, ಅಕ್ಕಸಾಲಿಗರು, ನೆಯ್ಗೆ ಕೆಲಸ, ವಾಸ: ಜಡಲತಿಮ್ಮನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4) ಶ್ರೀಕಂಠ ಬಿನ್ ದೇವಪ್ಪ, 22 ವರ್ಷ, ಕಾರು ಚಾಲಕ, ಬಲಜಿಗರು, ವಾಸ: ಜಡಲತಿಮ್ಮನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸೆರೆ ಸಿಕ್ಕ ಇಬ್ಬರ ಮುಂದೆ ಪ್ಲಾಸ್ಟಿಕ್ ಚೀಲದ ಮೇಲೆ ಇದ್ದಂತಹ ಇಸ್ಪೀಟ್ ಎಲೆಗಳನ್ನು ಮತ್ತು ಹಣವನ್ನು ಜೊಡಿಸಿ ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳು ಮತ್ತು 850/- ರೂ ನಗದು ಹಣ ಇರುತ್ತೆ. ಸದರಿ 52 ಇಸ್ಪೀಟ್ ಎಲೆಗಳನ್ನು, 850/- ರೂ ನಗದು ಹಣವನ್ನು ಹಾಗೂ ಪ್ಲಾಸ್ಟಿಕ್ ಚೀಲವನ್ನು ಸಂಜೆ 5:40 ಗಂಟೆಯಿಂದ ಸಂಜೆ 6:30 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಸಂಜೆ 7:00 ಗಂಟೆಗೆ ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ ಎಂದು ನೀಡಿದ ಜ್ಞಾಪನವನ್ನು ಪಡೆದು ಠಾಣಾ ಮೊನಂ. 32/2019 ಕಲಂ 87 ಕೆ.ಪಿ. ಆಕ್ಟ್ ರೀತ್ಯ ಕೇಸು ದಾಖಲು ಮಾಡಿ ತನಿಕೆ ಕೈಗೊಂಡಿರುತ್ತದೆ.

19) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 33/2019 ಕಲಂ. 87 ಕೆ.ಪಿ. ಆಕ್ಟ್ :-

      ದಿನಾಂಕ 07-04-2019 ರಂದು   ಮದ್ಯಾಹ್ನ  14-20  ಗಂಟೆಗೆ  ಆ ಉ ನಿ ರವರು  ದಾಳಿಯಿಂದ   2 ಜನ ಆರೋಪಿಗಳು,ಪಂಚನಾಮೆ ಮತ್ತು  ಮಾಲಿನೊಂದಿಗೆ  ಠಾಣೆಗೆ  ಹಾಜರಾಗಿ   ಮುಂದಿನ ಕ್ರಮವನ್ನು  ಜರುಗಿಸಲು  ನೀಡಿದ ಜ್ಞಾಪನದ  ಸಾರಾಂಶವೇನೆಂದರೆ  ದಿನಾಂಕ:07/04/2019 ರಂದು  ಮದ್ಯಾಹ್ನ 12-00 ಗಂಟೆ ಸಮಯದಲ್ಲಿ  ನಾನು ಕೇಶವಾರ ಗ್ರಾಮದ ಕಡೆ ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ನನಗೆ ಬಂದ ಮಾಹಿತಿ ಎನೆಂದರೆ ಎಲೆಹಳ್ಳಿ ಗ್ರಾಮದ  ತಬಲ ಮುನಿಯಪ್ಪ ರವರ ಜಮೀನಿನಲ್ಲಿರುವ ಹಲಸಿನಮರದ ಕೆಳಗೆ ಅಂದರ್-ಬಾಹರ್ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ನನಗೆ ಬಂದ ಬಾತ್ಮಿ ಮೇರೆಗೆ ದಾಳಿ ನಡೆಸಲು ನಾನು ಮತ್ತು ಪಂಚರು ಹಾಗೂ ಪೊಲೀಸ್ ಸಿಬ್ಬಂದಿಗಳಾದ ಎಎಸೈ ಗೋಪಾಲ್ ಹೆಚ್.ಸಿ-94ಪ್ರಕಾಶ್, ಪಿಸಿ-06 ರಾಮಕೃಷ್ಣ, ರವರುಗ ಳೊಂದಿಗೆ  ಮದ್ಯಾಹ್ನ 12:30 ಗಂಟೆಗೆ  ಇಸ್ಪೀಟ್ ಆಡುತ್ತಿದ್ದ  ಜೂಜಾಟದ ಸ್ಥಳದ ಬಳಿಗೆ ಹೊಗಿ ಮರೆಯಲ್ಲಿ ನಿಂತು ನೊಡಲಾಗಿ ಅಂದರ್ಗೆ 200/-ರೂ ಗಳೆಂದು, ಬಾಹರ್ 200/- ರೂ ಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದು ಕಂಡು ಬಂದಿದ್ದು ಅವರ ಮೇಲೆ ದಾಳಿ ಮಾಡಿದಾಗ ಸ್ಥಳದಲ್ಲಿ ಹಣ, ಮತ್ತು ಇಸ್ಪೀಟ್ ಎಳೆಗಳನ್ನು ಬಿಟ್ಟು ಸುಮಾರು ಜನರು ಓಡಿ ಪರಾರಿಯಾದರು ಅವರನ್ನು ಸಿಬ್ಬಂದಿ ಬೆನ್ನಟ್ಟಿದರೂ ಸಹಃ ಸಿಗಲಿಲ್ಲಾ,  ಸ್ಥಳದಲ್ಲಿ ಸೆರೆಸಿಕ್ಕವರ ಹೆಸರು ವಿಳಾಸ ಕೇಳಲಾಗಿ 1) ನಾಗೇಶ ಬಿನ್ ರಮೇಶ್ 28 ವರ್ಷ ಒಕ್ಕಲಿಗರು, ಕಾಂಡಿಮೆಂಟ್ಸ್ ವ್ಯಾಪಾರಿ  ಅಪ್ಪೇಗೌಡನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು  ತಾಲ್ಲೂಕು 2) ರವಿಕುಮಾರ್ ಬಿನ್ ಶಿವಣ್ಣ 22 ವರ್ಷ ವಕ್ಕಲಿಗರು ಜಿರಾಯ್ತಿ ಅಪ್ಪೇಗೌಡನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು  ಎಂತಾ ತಿಳಿಸಿದರು,ಈ ಅಸಾಮಿಗಳು ಅಂದರ್-ಬಾಹರ್ ಜೂಜಾಟ ವಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದ ಮೇಲೆ ಇಸ್ಫೀಟ್ ಎಲೆಗಳು ಮತ್ತು  ಹಣವು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಪಂಚರ ಸಮಕ್ಷಮ ಇಸ್ಪೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳು ಇರುತ್ತವೆ, ಬಿದ್ದಿದ್ದ  ಹಣವನ್ನು ಎಣಿಕೆ ಮಾಡಲಾಗಿ 1710/-ರೂ ನಗದು ಹಣ ಇರುತ್ತೆ. ಸದರಿ 52 ಇಸ್ಪೀಟ್ ಎಲೆಗಳನ್ನು, 1710/- ರೂ ನಗದು ಹಣವನ್ನು ಹಾಗೂ ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 12-40 ಗಂಟೆಯಿಂದ ಸಂಜೆ 13-40 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ   ನೀಡಿದ ಜ್ಞಾಪನದ ಮೇರೆಗೆ ಈ ಪ್ರವವರದಿ

20) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 45/2019 ಕಲಂ. 87 ಕೆ.ಪಿ. ಆಕ್ಟ್ :-

      ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಅವಿನಾಶ್ ಪಿ.ಎಸ್.ಐ. (ಕಾ&ಸು) ಆದ ನಾನು ಘನ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುವುದೇನೆಂದರೆ, ದಿನಾಂಕ:06-04-2019 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ನಾನು ಠಾಣೆಯ ಸಿಬ್ಬಂದಿಯವರೊಂದಿಗೆ ಯಲ್ಲಮ್ಮದೇವಿಯ ಹಸಿ ಕರಗ ಪ್ರಯುಕ್ತ ಶಿಡ್ಲಘಟ್ಟ ನಗರದ್ಲಿ ಬಂದೋಬಸ್ತು ಕರ್ತವ್ಯದಲ್ಲಿದ್ದಾಗ ಬಾತ್ಮಿದಾರರಿಂದ ಶಿಡ್ಲಘಟ್ಟ ಟೌನ್ ಇಲಾಹಿನಗರದ ಜಹೀರ್ ಬಿನ್ ಗಪೂರ್ ರವರ ಮನೆ ಮುಂದೆ  ರಸ್ತೆ ಬದಿ ಇರುವ ವಿದ್ಯುತ್ ಕಂಬದ ಕೆಳಗೆ ಲೇಟ್ ಬೆಳಕಿನಲ್ಲಿ ಯಾರೋ ಜನರು ಸೇರಿಕೊಂಡು ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ನೀಡಿದ್ದು ಕೂಡಲೇ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.162 ರಾಜಶೇಖರ, ಪಿ.ಸಿ.127 ಕೃಷ್ಣ ಮತ್ತು ಪಿ.ಸಿ.458 ರಾಜೇಶ್ ರವರು ಮತ್ತು ಪಂಚರಾದ 1] ಬಾಷ ಬಿನ್ ಸೈಯದ್ ಕಲೀಂಸಾಬ್,  ಮಹಬೂಬ್ ನಗರ, ಶಿಡ್ಲಘಟ್ಟ ಟೌನ್ 2]  ಜಕಾ ಬಿನ್ ಚಾಂದಪಾಷ, ಮಹಬೂಬ್ ನಗರ, ಶಿಡ್ಲಘಟ್ಟ ಟೌನ್ ರವರುಗಳನ್ನು ದಾಳಿಗೆ ಸಹಕರಿಸಲು ನಮ್ಮೊಂದಿಗೆ ಕರೆದುಕೊಂಡು ಎಲ್ಲರೂ ದ್ವಿಚಕ್ರ ವಾಹನಗಳಲ್ಲಿ ಮೇಲ್ಕಂಡ ಸ್ಥಳಕ್ಕೆ ರಾತ್ರಿ 9-45 ಗಂಟೆಗೆ ಹೋಗಿ ವಾಹನಗಳನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ 5 ಜನರು ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಅಸಾಮಿ 500/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 500/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಅವರುಗಳ ಮೇಲೆ ದಾಳಿ ಮಾಡಿ 05 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ನೂರ ಬಿನ್ ಲೇಟ್ ಅಜೀಜ್, ಮಹಬೂಬ್ ನಗರ, ಶಿಡ್ಲಘಟ್ಟ ಟೌನ್ 2] ಯಾಸೀನ್ ಬಿನ್ ಮೌಲಾಸಾಬಿ, ಮಹಬೂಬ್ ನಗರ, ಶಿಡ್ಲಘಟ್ಟ ಟೌನ್ 3] ನವಾಜ್ ಪಾಷ ಬಿನ್ ಸೈಯದ್ ಪೀರ್ ಪಾಷ,  ಪಿಲೇಚರ್ ಕ್ವಾಟ್ರಸ್, ಶಿಡ್ಲಘಟ್ಟ ಟೌನ್ 4] ಇರ್ಪಾನ್ ಬಿನ್ ಬಾಷೂ,  ಕೆ.ಹೆಚ್.ಬಿ ಕಾಲೋನಿ, ಶಿಡ್ಲಘಟ್ಟ ಟೌನ್ ಮತ್ತು 5] ಅದಿಲ್ ಪಾಷ ಬಿನ್ ಗೌಸ್ ಪೀರ್ ಪಾಷ, ಮಹಬೂಬ್ ನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು, ಇವರುಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಬೆಡ್ ಶೀಟ್ ಮೇಲೆ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 16,690-00 ರೂ ನಗದು ಹಣ ಹಾಗೂ ಜೂಜಾಟಕ್ಕೆ ಬಳಸಿ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ 52 ಇಸ್ಟೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು  ರಾತ್ರಿ 10-00 ಗಂಟೆಯಿಂದ 10-30 ಗಂಟೆಯವರೆಗೆ ವಿದ್ಯುತ್ ಲೈಟ್ ಬೆಳಕಿನಲ್ಲಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದ ಮೇಲ್ಕಂಡ 5 ಜನರೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ ವಾಪಸ್ಸು ಬಂದು ರಾತ್ರಿ 11-00 ಗಂಟೆಗೆ ಠಾಣಾ ಮೊ.ಸಂ.45/2019 ಕಲಂ.87 ಕೆ.ಪಿ. ಆಕ್ಟ್ ರೀತ್ಯ ಸ್ವತಃ ಕೇಸು ದಾಖಲಿಸಿರುತ್ತೇನೆ.