ದಿನಾಂಕ : 07/03/2019ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.40/2019 ಕಲಂ. ಮನುಷ್ಯ ಕಾಣೆ:-

     ದಿನಾಂಕ:07/03/2019 ರಂದು ಪಿರ್ಯಾದಿದಾರರಾದ ಶ್ರೀ ಅಂಜಿನಪ್ಪ ಬಿನ್ ಲೇಟ್ ಲಕ್ಷ್ಮನ್ನ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿದ್ದು, ನನ್ನ ಮಗನಾದ ಸೋಮಶೇಖರ್ ರವರು ಮೂಗನಾಗಿದ್ದು, ಬಾಗೇಪಲ್ಲಿ ಪುರದಲ್ಲಿ ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ದಿನಾಂಕ:01/02/2019 ರಂದು ಬೆಳಿಗ್ಗೆ ಸುಮಾರು 06-00 ಗಂಟೆಯ ಸಮಯದಲ್ಲಿ ಮನೆಯಲ್ಲಿ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಹೋದವನು ಸಂಜೆ ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ನಾವು ಸಂಬಂಧಿಕರ ಮತ್ತು ಪರಿಚಯಸ್ಥರ ಮನೆಗಳಲ್ಲಿ ಇದುವರೆವಿಗೂ ಹುಡುಕಾಡಲಾಗಿ ಪತ್ತೆಯಾಗದೇ ಇರುವ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಕಾಣೆಯಾಗಿರುವ ನನ್ನ ಮಗನನ್ನು ಪತ್ತೆ ಮಾಡಿಕೊಡಲು ಕೋರಿ ಕೊಟ್ಟ ದೂರು.

2) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.57/2019 ಕಲಂ. 323-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ 07-03-2019 ರಂದು ಬೆಳಗ್ಗೆ 11-30 ಗಂಟೆಗೆ ಘನ ನ್ಯಾಯಾಲಯದ ಪಿಸಿ 348 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರು ಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ ಘನ ನ್ಯಾಯಾಲಯದಲ್ಲಿ ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ನಿವೇಧಿಸಿಕೊಳ್ಳುವುದೇನೆಂದರೆ ದಿನಾಂಕ 17/01/2019 ರಂದು ರಾತ್ರಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮುನಿವೆಂಕಟಪ್ಪ ಬಿನ್ ಚಿಕ್ಕ ವೆಂಕಟರಾಯಪ್ಪ 42 ವರ್ಷ, ಬೋವಿ ಜನಾಂಗ, ಗೂಬಲಹಳ್ಳಿ ಗ್ರಾಮ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ತನ್ನ ಅಣ್ಣನಾದ ನಾರಾಯಣಸ್ವಾಮಿ ರವರು ತಮ್ಮ ಗ್ರಾಮದ ವಾಸಿ ಶ್ರೀನಿವಾಸ್ ಎಂಬುವವರ ಬಳಿ ಗಾರೆ ಕೆಲಸಕ್ಕೆ ಹೋಗುತ್ತಿರುತ್ತಾರೆ. ಹೀಗಿರುವಾಗ ದಿನಾಂಕ 16/01/2019 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ತನ್ನ ಅಣ್ಣ ಸದರಿ ಶ್ರೀನಿವಾಸ್ ರವರ ತಮ್ಮ ಆಂಜಪ್ಪ ರವರ ಬಳಿ ತನ್ನ ಕೂಲಿ ಹಣವನ್ನು ಕೇಳಿದ್ದು ಆಗ ಆಂಜಪ್ಪ ರವರು ತನ್ನ ಅಣ್ಣನ ಮೇಲೆ ಗಲಾಟೆ ಮಾಡಿದ್ದು ಆಗ ತಾನು ಅಲ್ಲಿಗೆ ಹೋಗಿ ಗಲಾಟೆ ಬಿಡಿಸಿರುತ್ತೇನೆ. ಹೀಗಿರುವಾಗ ದಿನಾಂಕ 17/01/2019 ರಂದು ರಾತ್ರಿ 7-00 ಗಂಟೆ ಸಮಯದಲ್ಲಿ ತಾನು ಕೈವಾರದಿಂದ ತಮ್ಮ ಗ್ರಾಮಕ್ಕೆ ಹೋಗುವ ಸಲುವಾಗಿ ತಮ್ಮ ಗ್ರಾಮದ ಕೀರ್ತನಾ ಶಾಲೆ ಬಳಿ ಹೋಗುತ್ತಿದ್ದಾಗ ಮೇಲ್ಕಂಡ ಆಂಜಪ್ಪ ಬಿನ್ ಲೇಟ್ ಮುನಿವೆಂಕಟಪ್ಪ ಮತ್ತು ಅವರ ಸಂಬಂಧಿ ಮುನಿರೆಡ್ಡಿ ಬಿನ್ ಮುನಿವೆಂಕಟರಾಯಪ್ಪ ರವರು ತನ್ನ ಬಳಿ ಬಂದು ಏನೋ ಬೋಳಿ ಮಗನೇ ರಾತ್ರಿ ತಮ್ಮ ಮೇಲೆ ಗಲಾಟೆ ಮಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆದು ಕೆಳಗೆ ತಳ್ಳಿರುತ್ತಾರೆ. ಆಗ ತಾನು ಕೆಳಗೆ ಬಿದ್ದು ಹೋಗಿದ್ದು ತನ್ನ ತಲೆಗೆ ಗಾಯವಾಗಿರುತ್ತೆ. ಅವರಿಬ್ಬರೂ ತನ್ನನ್ನು ಕುರಿತು ಈ ದಿನ ಉಳಿದುಕೊಂಡಿದ್ದೀಯಾ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ತಾನು ಕಿರುಚಿಕೊಂಡು ತಮ್ಮ ಗ್ರಾಮಕ್ಕೆ ಹೋಗಿದ್ದು ತನ್ನ ಅಕ್ಕ ರತ್ನಮ್ಮ ರವರು ತನ್ನನ್ನು ಯಾವುದೋ ಆಟೋದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಆದ್ದರಿಂದ ಮೇಲ್ಕಂಡ ಆಂಜಪ್ಪ ಮತ್ತು ಮುನಿರೆಡ್ಡಿ ರವರನ್ನು ಠಾಣೆಗೆ ಕರೆಸಿ ತನ್ನ ತಂಟೆಗೆ ಬಾರದಂತೆ ಬಂದೋ ಬಸ್ತ್ ಮಾಡಿ ಕೊಡ ಬೇಕಾಗಿ ಕೊಟ್ಟ ಹೇಳಿಕೆಯ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 19/2019 ರಂತೆ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಕೈಗೊಂಡಿರುತ್ತದೆ. ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದು ಕಲಂ 323, 504, 506 ರೆ.ವಿ 34 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಘನ ನ್ಯಾಯಾಲಯದಲ್ಲಿ ಕೋರಿ ಅನುಮತಿ ಪಡೆದುಕೊಂಡಿರುತ್ತೆ.

3) ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.14/2019 ಕಲಂ. 15(A)-32(3) KARNATAKA EXCISE ACT:-

     ಘನ ನ್ಯಾಯಾಲಯದಲ್ಲಿ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಸಬ್ಇನ್ಸಪೆಕ್ಟರ್  ಬಿಕೆ ಪಾಟೀಲ್ ಆಧ ನಾನು ವಿನಂತಿಸಿಕೊಳ್ಳುವುದೇನೆಂದರೆ ದಿನಾಂಕ 07-03-2019 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿ  ನಂದಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀ ದಾರರಿಂದ  ಬಂದ ಖಚಿತ ಮಾಹಿತಿ ಎನೆಂದರೆ ಅಂಗಟ್ಟ ಗೇಟಿನಲ್ಲಿರುವ ಮುನಿಶ್ಯಾಮಪ್ಪ ರವರ ಚಿಲ್ಲರೆ ಅಂಗಡಿಯಲ್ಲಿ ಅಂಗಡಿಯ ಮಾಲೀಕ ಯಾವುದೇ ಲೈಸನ್ಸ್ ಇಲ್ಲದೆ ಅಂಗಡಿಯಲ್ಲಿ ಮದ್ಯದ ಟೆಟ್ರಾ ಪಾಕೇಟುಗಳನ್ನಿಕೊಂಡು ಸಾರ್ವಜನಿಕರಿಗೆ ಮಾರಾಟ ಮತ್ತು ಅಲ್ಲೇ ಕುಡಿಯಲು ಅವಕಾಶ ವ್ಯವಸ್ಥೆ ಮಾಡಿಕೊಟ್ಟಿರುವನೆಂದೂ ಬಂದ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತ ರಾಗಿ ಸಿಬ್ಬಂದಿ ಮತ್ತು ಪಂಚರನ್ನು ಕರೆದುಕೊಂಡು ಮದ್ಯಾಹ್ನ 1-00 ಗಂಟೆಗೆ ಸ್ಥಳಕ್ಕೆ ಹೋಗಿ ಧಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲು ಸದರಿ ಅಂಗಡಿ ಮಾಲೀಕನು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಂಗಡಿ ಮುಂದೆ ಕಲ್ಲಿನ ಕೆಳಗಿದ್ದ ರಟ್ಟಿನ ಬಾಕ್ಸ್ ನ್ನು ಕಾಲಿನಿಂದ ಕೆಳಕ್ಕೆ ತಳ್ಳಿದನು. ಅವನ ಹೆಸರು ವಿಳಾಸ ಕೇಳಿದಾಗ ಮುನಿಶಾಮಪ್ಪ ಬಿನ್ ಲೇಟ್ ವೆಂಕಟರಾಯಪ್ಪ,65 ವರ್ಷ,ವಕ್ಕಲಿಗರು,ಅಂಗಟ್ಟ ಗ್ರಾಮ ಎಂದು ತಿಳಿಸಿದನು. ಬೇಂಚ್ ಬಂಡೆ ಕೆಳಗಿದ್ದ ರಟ್ಟಿನ ಬಾಕ್ಸನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ವಿವಿಧ ಖಾಲಿಯಾಗಿದ್ದ ಮದ್ಯದ ಟೆಟ್ರಾ ಪಾಕೇಟುಗಳು, ಪ್ಲಾಸ್ಟಿಕ್ ಖಾಲೀ ಲೋಟಾಗಳು ,ಮದ್ಯವಿದ್ದ ಟೆಟ್ರಾ ಪಾಕೇಟುಗಳು ಇದ್ದವು. ಇವುಗಳನ್ನು ಇಟ್ಟುಕೊಂಟು ಮಾರಾಟ ಮತ್ತು ಸಾರ್ವಜಿನಿಕರಿಗೆ ಪೂರೈಸಲು ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಅಂಗಡಿ ಮಾಲೀಕ ತನ್ನ ಬಳಿ ಏನೂ ಇಲ್ಲವೆಂದು ಹೇಳಿದನು. ಸದರಿ ರಟ್ಟಿನ ಬಾಕ್ಸನ್ನು ಪರಿಶೀಲಿಸದಾಗ  1)90 ML ಸಾಮರ್ಥ್ಯದ HAYWARDS  WHISKY ಯ  4 ಟೆಟ್ರಾ ಪ್ಯಾಕೇಟುಗಳು 2) 90 ML ಸಾಮರ್ಥ್ಯದ RAJA  WHISKY ಯ 3 ಟೆಟ್ರಾ ಪ್ಯಾಕೇಟುಗಳು, 3)  90 ML ಸಾಮರ್ಥ್ಯದ ORGINAL CHOICE  WHISKY  3 ಟೆಟ್ರಾ ಪ್ಯಾಕೇಟುಗಳು, ಇದ್ದವು, ಪಂಚರ ಸಮಕ್ಷಮ ಮದ್ಯಾಹ್ನ 13-00 ಗಂಟೆಯಿಂದ 14-00 ಗಂಟೆಯವರೆವಿಗೆ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ 15 ವಿವಿದ ಖಾಲಿ ಟೆಟ್ರಾ ಪ್ಯಾಕೇಟುಗಳನ್ನು , ಹಾಗೂ 10 ಪ್ಲಾಸ್ಟಿಕ್ ಲೋಟಗಳು ಮತ್ತು ಮೇಲ್ಕಂಡ 10 ಮದ್ಯವಿದ್ದ  ಟೆಟ್ರಾ ಪ್ಯಾಕೇಟುಗಳನ್ನು ರಟ್ಟಿನ ಬಾಕ್ಸ್ ಸಮೇತ ಅಮಾನತ್ತು ಪಡಿಸಿಕೊಂಡು  ಮೇಲ್ಕಂಡ ಚಿಲ್ಲರೆ ಅಂಗಡಿಯ ಮಾಲೀಕ ಮುನಿಶ್ಯಾಮಪ್ಪನನ್ನು ವಶಕ್ಕೆ ಪಡೆದುಕೊಂಡು 15-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಫಿಯ ವಿರುದ್ದ  ಸ್ವತಃ ಠಾಣಾ ಮೊಸಂ: 14/2019 ಕಲಂ 32(3) 15(A) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ,

4) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.20/2019 ಕಲಂ. 120(ಬಿ)-420-465-468-469-471 ರೆ/ವಿ 34 ಐ.ಪಿ.ಸಿ:-

     ದಿನಾಂಕ:07-03-2019 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿ ನಾರಾಯಣಮ್ಮ ಕೋಂ ವೆಂಕಟರೆಡ್ಡಿ, ರಾಚನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನಗೆ ದಿನಾಂಕ:17-07-1995 ರಂದು ರಾಚನಹಳ್ಳಿ ಗ್ರಾಮದ ಹಳೇ ಸರ್ವೆ ನಂ.53/33 ನೇ ಬ್ಲಾಕ್, ಹೊಸ ಸರ್ವೆ ನಂ.53/ಪಿ20 ರಲ್ಲಿ 3-30 ಎಕರೆ ಜಮೀನು ಮಂಜೂರಾಗಿದ್ದು, ಪಹಣಿ, ಮ್ಯುಟೇಶನ್ ತನ್ನ ಹೆಸರಿನಲ್ಲಿದ್ದು ಸ್ವಾಧೀನದಲ್ಲಿದ್ದು ಬೆಳೆಗಳನ್ನು ಬೆಳೆಯುತ್ತಿರುತ್ತೇನೆ. ಇತ್ತೀಚೆಗೆ ಪಹಣಿಯ ಋಣಭಾರ ಕಾಲಂನಲ್ಲಿ ಕೆನರಾ ಬ್ಯಾಂಕ್ ಶ್ರೀನಿವಾಸಪುರದಲ್ಲಿ ಅಡಮಾನವಿಟ್ಟು ಸಾಲ ಪಡೆದಿರುವ ಬಗ್ಗೆ ನಮೂದಾಗಿರುತ್ತೆ. ಈ ಬಗ್ಗೆ ವಿಚಾರ ಮಾಡಲಾಗಿ ಗೊಲ್ಲಹಳ್ಳಿ ಗ್ರಾಮದ ಮುನಿಯಮ್ಮ ಕೋಂ ಲೇಟ್ ವೆಂಕಟರೆಡ್ಡಿ, ಬೈರಾರೆಡ್ಡಿ ಬಿನ್ ವೆಂಕಟರೆಡ್ಡಿ ಮತ್ತು ಬೈರಾರೆಡ್ಡಿ ರವರ ಮಗ ಆನಂದ ರವರು ಮಾಡಿರುವುದಾಗಿ ತಿಳಿಯಿತು. ಇವರಿಗೆ ನಮ್ಮ ಜಮೀನಿಗೆ ಯಾವುದೇ ಸಂಬಂಧವಿರುವುದಿಲ್ಲ. ಮುನಿಯಮ್ಮ ಕೋಂ ವೆಂಕಟರೆಡ್ಡಿ ರವರ ಹಳೆಯ ಚುನಾವಣೆ ಚೀಟಿ ಸದಸ್ಯ ಆರ್.ಪಿ.ಪಿ 1247741 2016ನೇ ಸಾಲಿನವರೆಗೆ ಇದ್ದು, ಇದನ್ನು ತಿದ್ದುಪಡಿ ಮಾಡಿದ ನಂತರ ಅದೇ ಆರ್.ಪಿ.ಪಿ 1247741 ರಲ್ಲಿ ನಾರಾಯಣಮ್ಮ ಕೋಂ ವೆಂಕಟರೆಡ್ಡಿ ರವರ ಹೆಸರು ನಮೂದಾಗಿರುತ್ತೆ. ನಾವು ಜಮೀನು ಅಡಮಾನ ಇಟ್ಟಿರುವ ಬಗ್ಗೆ ಶಿಡ್ಲಘಟ್ಟ ತಾಲ್ಲೂಕು ಕಚೇರಿಯಲ್ಲಿ ದಾಖಲಾತಿಗಳನ್ನು ಪಡೆದುಕೊಂಡಿದ್ದು. ಅಡಮಾನಪತ್ರದಲ್ಲಿ ಎಂ.ಮುನಿರತ್ನಂ ಬಿನ್ ಮಲ್ಲಪ್ಪ, ಆವುಲಕುಪ್ಪ, ಶ್ರೀನಿವಾಸಪುರ ತಾಲ್ಲೂಕು, ಎಸ್.ಶ್ರೀನಿವಾಸ ಬಿನ್ ಶ್ರೀರಾಮಪ್ಪ, ಶ್ರೀನಿವಾಸಪುರ ಟೌನ್ ರವರುಗಳು ಸಾಕ್ಷಿದಾರರಾಗಿ ಸಹಿ ಮಾಡಿರುತ್ತಾರೆ. ಮೇಲ್ಕಂಡವರು ನಮ್ಮ ಜಮೀನಿನ ಮೇಲೆ ಸಾಲ ಪಡೆದುಕೊಳ್ಳಲು ಸಿದ್ದಾಪುರ ಸರ್ಕಾರಿ ಶಾಲೆ ಬಿ.ಎಲ್.ಓ ನಾಗಭೂಷಣಾಚಾರಿ ರವರ ಜೊತೆ ಶಾಮೀಲಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಶ್ರೀನಿವಾಸಪುರ ಕೆನರಾ ಬ್ಯಾಂಕಿಗೆ ಅಡವಿಟ್ಟು ಸಾಲ ಪಡೆದುಕೊಂಡು ನಮಗೆ ಮೋಸ ಮಾಡಿರುವ ಮೇಲ್ಕಂಡವರ ಮೇರೆ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.