ದಿನಾಂಕ : 07/02/2019ರ ಅಪರಾಧ ಪ್ರಕರಣಗಳು

1) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.24/2019 ಕಲಂ: 279-337-304(ಎ) ಐ.ಪಿ.ಸಿ:-

     ದಿನಾಂಕ 07/02/2019 ರಂದು ಬೆಳಿಗ್ಗೆ 11-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶೇಷಾದ್ರಿ ಬಿನ್ ಎನ್,ಎಸ್ ಪ್ರಭಾಕರ, 35 ವರ್ಷ, ಬ್ರಾಹ್ಮಣರು, ಬೆಸ್ಕಾಂ ನಲ್ಲಿ ಲೈನ್ ಮ್ಯಾನ್ ಕೆಲಸ, ವಾಸ-ವಿಜಯ ಬ್ಯಾಂಕ್ ಹತ್ತಿರ, ತಿರುಮಲೆ, ಮಾಗಡಿ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಚಿಕ್ಕಪ್ಪನಾದ ಸುಧಾಕರ್ ರವರು ಬೆಂಗಳೂರು ನಗರದ ಎಂ.ಎಸ್ ಪಾಳ್ಯದಲ್ಲಿ ತಮ್ಮ ಸಂಸಾರದ ಸಮೇತವಾಗಿದ್ದು ವಾಸವಾಗಿದ್ದು, ಇದೇ ಚಿಂತಾಮಣಿ ನಗರದ ಎ.ಪಿ.ಎಂ.ಸಿ ಮಾರುಕಟ್ಟೆ ಬಳಿ ಇರುವ ವಿ.ಕೆ ಕನ್ಸ್ ವೆಕ್ಷನ್ ಹಾಲ್ ನಲ್ಲಿ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮ ಇದ್ದು, ಈ ಮದುವೆ ಕಾರ್ಯಕ್ರಮಕ್ಕೆ ಬರಲು ತನ್ನ ಚಿಕ್ಕಪ್ಪನಾದ ಎನ್.ಎಸ್ ಸುಧಾಕರ್ ರವರು ತಮ್ಮ ಬಾಬತ್ತು ಕೆಎ-02-ಎಂಹೆಚ್-9801 ಆಲ್ಟೋ-800 ಕಾರಿನಲ್ಲಿ ತನ್ನ ಅತ್ತೆಯಾದ ಲಲಿತಮ್ಮ, ದೊಡ್ಡಪ್ಪ ಎನ್.ಎಸ್ ನಂಜಣ್ಣ ಹಾಗು ತನ್ನ ಚಿಕ್ಕಮ್ಮ ರವರಾದ ಪದ್ಮಾವತಿ ರವರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಕಾರನ್ನು ತನ್ನ ಚಿಕ್ಕಪ್ಪ ಸುಧಾಕರ್ ರವರೇ ಚಾಲನೆ ಮಾಡಿಕೊಂಡು ಈ ದಿನ ದಿನಾಂಕ 07/02/2019 ರಂದು ಬೆಳಿಗ್ಗೆ ಬೆಂಗಳೂರಿನ ಎಂ.ಎಸ್ ಪಾಳ್ಯದಿಂದ ಬಂದಿದ್ದು, ತಾನು ಮತ್ತು ತಮ್ಮ ಮನೆಯವರು ಬೇರೆ ವಾಹನದಲ್ಲಿ ಬೆಂಗಳೂರಿನಿಂದ ಅವರ ಹಿಂದೆಯೇ ಬರುತ್ತಿದ್ದಾಗ, ಇದೇ ದಿನ ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ತನ್ನ ಚಿಕ್ಕಪ್ಪನಾದ ಸುಧಾಕರ್ ರವರು ಇದೇ ಚಿಂತಾಮಣಿ ತಾಲ್ಲೂಕು ಚಿನ್ನಸಂದ್ರ ಗ್ರಾಮದ ಬಳಿ ಬೆಂಗಳೂರು-ಕಡಪ ಮುಖ್ಯ ರಸ್ತೆಯಲ್ಲಿ ಮೇಲ್ಕಂಡ ಕೆಎ-02-ಎಂಹೆಚ್-9801 ಆಲ್ಟೋ-800 ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಚಿಂತಾಮಣಿ ಕಡೆಗೆ ಬರುತ್ತಿದ್ದಾಗ ಕಾರು ತನ್ನ ಚಿಕ್ಕಪ್ಪನಾದ ಸುಧಾಕರ್ ರವರ ನಿಯಂತ್ರಣ ತಪ್ಪಿ ಕಾರು ರಸ್ತೆಯ ಬದಿಯಲ್ಲಿನ ಹಳ್ಳಕ್ಕೆ ಪಲ್ಟಿಯಾದ ಕಾರಣ ಕಾರಿನಲ್ಲಿದ್ದ ತನ್ನ ಅತ್ತೆ ಲಲಿತಮ್ಮ ರವರ ಎದೆಗೆ , ತನ್ನ ಚಿಕ್ಕಪ್ಪ ಸುಧಾಕರ್ ರವರ ಭುಜಕ್ಕೆ, ಕೈ ಕಾಲುಗಳಿಗೆ, ತನ್ನ ದೊಡ್ಡಪ್ಪನಾದ ನಂಜಣ್ಣ ರವರ ತಲೆಗೆ, ಕೈ ಕಾಲುಗಳಿಗೆ, ತನ್ನ ಚಿಕ್ಕಮ್ಮ ಪದ್ಮಾವತಿ ರವರ ತಲೆಗೆ ರಕ್ತಗಾಯವಾಗಿರುತ್ತದೆ. ಸದರಿ ಕಾರಿನ ಹಿಂಬದಿಯಲ್ಲಿಯೇ ಬರುತ್ತಿದ್ದ ತಾವು ಕೂಡಲೇ ಸ್ಥಳಕ್ಕೆ ಹೋಗಿ ಗಾಯಾಳುಗಳನ್ನು ಉಪಚರಿಸುತ್ತಿದ್ದಾಗ ವಿಷಯ ತಿಳಿದು ಸ್ಥಳಕ್ಕೆ ಬಂದ 108 ಆಂಬುಲನ್ಸ್ ನಲ್ಲಿ ಗಾಯಾಳುಗಳನ್ನು ಕರೆದುಕೊಂಡು ಬಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ತನ್ನ ಅತ್ತೆ ಲಲಿತಮ್ಮ ರವರನ್ನು ಪರೀಕ್ಷಿಸಿ ವೈದ್ಯರು ತನ್ನ ಅತ್ತೆ ಮಾರ್ಗಮದ್ಯೆಯೇ ಸತ್ತು ಹೋಗಿರುವುದಾಗಿ ವಿಷಯ ತಿಳಿಸಿದ್ದು, ಉಳಿದ ಗಾಯಾಳುಗಳನ್ನು ಇನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತಾರೆ. ತನ್ನ ಅತ್ತೆ ಲಲಿತಮ್ಮ ರವರ ಶವವು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ತಾವು ಸ್ಥಳಕ್ಕೆ ಬೇಟಿಯನ್ನು ನೀಡಿ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

2) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.32/2019 ಕಲಂ: 78(ಸಿ) ಕೆ.ಪಿ. ಆಕ್ಟ್:-

     ಘನ ನ್ಯಾಯಾಲಯದಲ್ಲಿ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಉಪ ನಿರೀಕ್ಷಕರಾದ ವಿ.ಅವಿನಾಶ್ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ  ದಿನಾಂಕ:05/02/2019 ರಂದು ಸಂಜೆ ಸುಮಾರು 5-00 ರಿಂದ 5:30 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ವಾಟದಹೊಸಹಳ್ಳಿಯ  ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿ ಯಾರೋ  ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟ್ಕಾ ಜೂಜಾಟವಾಡುತ್ತಿರುವುದಾಗಿ  ಯಾರೋ ಸಾರ್ವಜನಿಕರು ಮೊಬೈಲ್ನಿಂದ ರೆಕಾರ್ಡ್ ಮಾಡಿರುವ ವೀಡಿಯೋ ದೃಶ್ಯವನ್ನು ವ್ಯಾಟ್ಸಪ್ ಮೂಲಕ ಕಳುಹಿಸಿ ಫೋನ್ ಮಾಡಿದ್ದು,  ಸಿಬ್ಬಂದಿಯನ್ನು ಕಳುಹಿಸಿ ಬಾತ್ಮಿಇಟ್ಟಿದ್ದು,  ಈ ದಿನಾಂಕ 06/02/2019 ರಂದು ಖಚಿತವಾದ ಮಾಹಿತಿ ಬಂದ ನಂತರ ದಾಳಿ ಮಾಡಲು ಪಂಚಾಯ್ತಿದಾರರು ಹಾಗು  ಸಿಬ್ಬಂದಿಯರಾದ ಪಿ.ಸಿ-512 ರಾಜಶೇಖರ್ ಮತ್ತು ಪಿ.ಸಿ. 518 ಆನಂದ್ರವರೊಂದಿಗೆ ಪೊಲಿಸ್ ಜೀಪಿನಲ್ಲಿ ವಾಟದಹೊಸಹಳ್ಳಿ ಗ್ರಾಮಕ್ಕೆ ಹೋಗಿ ದೂರದಲ್ಲಿಯೇ ಜೀಪನ್ನು ನಿಲ್ಲಿಸಿ ಮಾಹಿತಿ ಬಂದ ಸ್ಥಳಕ್ಕೆ ಸ್ವಲ್ಪ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ವಾಟದಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿ ಅಶ್ವತ್ಥನಾರಾಯಣ @ ಕೋಡಿ ರವರ ಮನೆಯ ಮುಂಭಾಗದಲ್ಲಿ ಯಾರೋ ಮೂವರು ಆಸಾಮಿಗಳು ನಿಂತುಕೊಂಡು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷ ಒಡ್ಡಿ ಮಟ್ಕಾಚೀಟಿ ಬರೆದುಕೊಟ್ಟು ಹಣ ಪಡೆದುಕೊಂಡು ಮಟ್ಕಾಜೂಟಾವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಆತನನ್ನು ಸುತ್ತುವರೆದು ಹಿಡಿಯಲು ಹೋದಾಗ, ಒಬ್ಬ ಆಸಾಮಿಯು ನಮ್ಮನ್ನು ನೋಡಿ ಸ್ಥಳದಿಂದ ಓಡಿ ಹೋಗಿದ್ದು, ಉಳಿದ ಇಬ್ಬರನ್ನು ಹಿಡಿದುಕೊಂಡು  ಹೆಸರು ವಿಳಾಸ ಕೇಳಲಾಗಿ 1) ಪಿ.ಮಹೇಶ್ ಬಿನ್ ಲೇಟ್  ನಾರಾಯಣಪ್ಪ, 27 ವರ್ಷ, ಬಲಜಿಗರ ಜನಾಂಗ,ಚಾಲಕ ವೃತ್ತಿ, ಸತ್ಯಸಾಯಿ ನಗರ ಬಾಗೇಪಲ್ಲಿಟೌನ್. ಹಾಲಿ ವಾಸ ವಾಟದಹೊಸಹಳ್ಳಿ.  2) ಬೀರ ಬಿನ್ ಲೇಟ್  ಶಿವಪ್ಪ, 20 ವರ್ಷ, ಬಲಜಿಗರ ಜನಾಂಗ, ವಾಟದಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು, ಓಡಿ ಹೋದವನ ಹೆಸರು ವಿಳಾಸವನ್ನು ಕೇಳಲಾಗಿ 3] ಅಶ್ವತ್ಥನಾರಾಯಣ @ ಕೋಡಿ ಬಿನ್ ಪೆದ್ದಣ್ಣ, ಸುಮಾರು 40 ವರ್ಷ, ನಾಯಕ ಜನಾಂಗ, ವಾಟದಹೊಸಹಳ್ಳಿ ಗ್ರಾಮ ಎಂದು ತಿಳಿಸಿರುತ್ತಾರೆ.   ಸದರಿ ಇಬ್ಬರು ಅಸಾಮಿಗಳನ್ನು  ಪರಿಶೀಲಿಸಲಾಗಿ ಕೈಯಲ್ಲಿ ಒಂದು ಮಟ್ಕಾ ಅಂಕಿಗಳನ್ನು ಬರೆದಿರುವ ಚೀಟಿ ಮತ್ತು ಬಾಲ್ ಪೆನ್ನು ಇದ್ದು,  ಇವರ ಬಳಿ 1,780  ರೂ. ನಗದು ಹಣ ಇರುತ್ತೆ. ಸದರಿ ಆಸಾಮಿಗಳನ್ನು ಮಟ್ಕಾಚೀಟಿ, ಬಾಲ್ ಪೆನ್ನು ಮತ್ತು ನಗದು ಹಣ 1,780/- ರೂ. ಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 10-00 ರಿಂದ 10-45 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡುಠಾಣೆಗೆ ವಾಪಸ್ಸು ಬಂದು ಸ್ವತಃ ಆರೋಪಿಯ ವಿರುದ್ದ  ಎನ್.ಸಿ.ಆರ್.51/2019 ರಂತೆ ದಾಖಲಿಸಿಕೊಂಡಿರುತ್ತೆ. ನಂತರ ಮಾನ್ಯ ಘನ ಸಿ.ಜೆ & ಜೆ.ಎಮ್.ಎಫ್.ಸಿ ನ್ಯಾಯಾಲಯ ಗುಡಿಬಂಡೆ ನ್ಯಾಯಾಲಯದ  ಅನುಮತಿಯನ್ನು ಪಡೆದುಕೊಂಡು ಸಂಜೆ 5:15 ಗಂಟೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

3) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.33/2019 ಕಲಂ: 324-341-504 ಐ.ಪಿ.ಸಿ:-

     ದಿ: 06-02-2019 ರಂದು ಸಂಜೆ 6:30 ಗಂಟೆಗೆ ಪಿರ್ಯಾಧಿದಾರರಾದ ನರಸಿಂಹಮೂರ್ತಿ ಬಿನ್ ಲೇಟ್ ನಾರ ಶಿವಯ್ಯ, ಸುಮಾರು 52 ವರ್ಷ, ಸಾದರು ಜನಾಂಗ, ವಾಟರ್ ಮೆನ್ ಕೆಲಸ, ಕುರೂಡಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ – ನಾನು ಎಂದಿನಂತೆ ದಿ: 06-02-2019 ರಂದು ಸುಮಾರು ಮದ್ಯಾಹ್ನ1:30 ರ ಸಮಯದಲ್ಲಿ ಎಸ್.ಸಿ ಕಾಲೋನಿಯಲ್ಲಿ ನೀರು ಬಿಟ್ಟು ಬಾಬು ರವರ ಹೋಟೆಲ್ ಬಳಿ ಬರುತ್ತಿದ್ದಾಗ, ದೇವಗಂಗ ಬಿನ್ ಭಿಮಯ್ಯ ಎಂಬುವವನು ಏಕಾಏಕಿ ನನ್ನನ್ನು ಹಿಡಿದುಕೊಂಡು ಬೈಯ್ದು ನೀರನ್ನು ಯಾಕೆ ಇಷ್ಟು ಬೇಗ ನಿಲ್ಲಿಸಿದ್ದೀಯಾ ಅಂತ ಚೆನ್ನಾಗಿ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯ್ದು ನನಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ಗಾಯ ಮಾಡಿದ್ದು, ರಕ್ತಗಾಯ ಉಂಟಾಗಿದ್ದು, ರಕ್ತಸ್ರಾವವಾಗಿ ನಾನು ಪ್ರಜ್ಞೆ ತಪ್ಪಿ ಬಿದ್ದಿರುತ್ತೇನೆ.  ನಂತರ ನಮ್ಮ ಗ್ರಾಮದ ಕರವಸೂಲಿಗಾರರಾದ  ಎ.ತಿಮ್ಮೇಗೌಡ ಮತ್ತು ಆರ್.ರಾಮಸ್ವಾಮಿ ಎಂಬುವವರು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೊಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿಕೊಂಡು ಠಾಣೆಗೆ ಬಂದು ದೂರು ನೀಡಿರುತ್ತೇವೆ.  ನನ್ನ ಮೇಲೆ ಗಲಾಟೆ ಮಾಡಿ ಹೊಡೆದಿರುವ ದೇವಗಂಗ ಬಿನ್ ಭೀಮಯ್ಯ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.