ದಿನಾಂಕ : 07/01/2019 ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 03/2019 ಕಲಂ. 279,337 ಐಪಿಸಿ ಮತ್ತು 134 ಐಎಂವಿ ಆಕ್ಟ್ :-

          ದಿನಾಂಕ:-06/01/2019 ರಂದು ಸಂಜೆ 6:30 ಗಂಟೆಗೆ ಪಿರ್ಯಾಧಿ ಶ್ರೀ.ಚಂದ್ರಶೇಖರ ಎಸ್ ಬಿನ್ ಸುಬ್ರಮಣ್ಯ 36 ವರ್ಷ, ಬಲಜಿಗರು, ತಾಲ್ಲೂಕು ಪಂಚಾಯ್ತಿ ದೊಡ್ಡಬಳ್ಳಾಪುರದಲ್ಲಿ ಪ್ರಥಮ ದರ್ಜೆ ಸಹಾಯಕ ವೃತ್ತಿ, ನಂ-170 ವಾರ್ಡ್ ನಂ-15, ಕಂದವಾರ ಬಾಗಿಲು, ನಂದಿ ರಸ್ತೆ, ಚಿಕ್ಕಬಳ್ಳಾಪುರ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಮತ್ತು ತನ್ನ ಸ್ನೇಹಿತ ನವೀನ್ ಕುಮಾರ್ ಆರ್ ಬಿನ್ ರಂಗಪ್ಪ 28 ವರ್ಷ, ಬಲಜಿಗರು, ಇಂದಿರಾ ನಗರ, ಚಿಕ್ಕಬಳ್ಳಾಪುರ ಟೌನ್ ರವರ ನೊಂದಣಿ ಇಲ್ಲದ ಯಮಹಾ ಕಂಪನಿಯ ಹೊಸ ಫ್ಯಾಸಿನೋ ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರ ಎನ್.ಎಚ್-7 ಬಿ.ಬಿ ರಸ್ತೆಯ ಶ್ರೀ.ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಮಧ್ಯಾಹ್ನ 2:00 ಗಂಟೆಯ ಸಮಯದಲ್ಲಿ ಹೋಗುತ್ತಿರುವಾಗ ತಮ್ಮ ದ್ವಿಚಕ್ರವಾಹನದ ಹಿಂದಿನಿಂದ ಬಂದ ಕೆಎ-50-ಎಲ್-9956 ರ ಅಪಾಚಿ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಯಸಿದ ಪರಿಣಾಮ ನಮ್ಮ ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದ ಚಂದ್ರಶೇಖರ್ ರವರಿಗೆ ಕಾಲುಗಳಿಗೆ ಗಾಯಗಳಾಗಿದ್ದು ಹಾಗೂ ಡಿಕ್ಕಿ ಹೊಡೆಯಿಸಿದ ದ್ವಿಚಕ್ರವಾಹನ ಸವಾರ ಮತ್ತು ಹಿಂಬದಿ ಸವಾರನಿಗೂ ಸಹಾ ಗಾಯಗಳಾಗಿದ್ದು ತಮ್ಮಗಳನ್ನು ಅಲ್ಲಿನ ಸ್ಥಳೀಯರು ಉಪಚರಿಸಿ ಅಲ್ಲಿಗೆ ಬಂದ ಸಂತೋಷ ಟಿ.ಎ ಬಿನ್ ಅಶ್ವತ್ಥನಾರಾಯಣ ಚಿಕ್ಕಬಳ್ಳಾಪುರ ಟೌನ್ ರವರು ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆಯನ್ನು ಪಡೆದುಕೊಂಡಿದ್ದು ತಮ್ಮ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿದ ಕೆಎ-50-ಎಲ್-9956 ರ ದ್ವಿಚಕ್ರವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಲಿಖಿತ ದೂರಿನ ಮೇರೆಗೆ ದಿನಾಂಕ:-06/01/2018 ರಂದು ಸಂಜೆ 6:30 ಗಂಟೆಯ ಸಮಯದಲ್ಲಿ ಪ್ರಕರಣ ದಾಖಲಿಸಿರುತ್ತೆ.

2) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 09/2019 ಕಲಂ. 279,337 ಐಪಿಸಿ :-

          ದಿನಾಂಕ:06/01/2019 ರಂದು ಸಂಜೆ 4-30 ಗಂಟೆಗೆ ಪಿರ್ಯದಿ ಭಾರತಮ್ಮ ಕೋಂ ಶಂಕರಪ್ಪ ಧನಮಿಟ್ಟೇನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೇ, ದಿನಾಂಕ 01/01/2019 ರಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ನನ್ನ ಮಗನಾದ ನವೀನ್ ರವರು ಚಿಂತಾಮಣಿಗೆ ಹೋಗಿ ಬರುವುದಾಗಿ ಹೇಳಿ ನಮ್ಮ ಗ್ರಾಮದ ಬಳಿ ಬಂದ ಕೆಎ-40-6785 ಅಪಿ ಆಟೋದಲ್ಲಿ ಹತ್ತಿ ಚಿಂತಾಮಣಿ ಕಡೆಗೆ ಬಂದಿರುತ್ತಾನೆ. ಅದೇ ದಿನ ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ನನ್ನ ಮಗನ ಪೋನ್ ನಿಂದ ನನಗೆ ಪೋನ್ ಮಾಡಿ ನಾಯನಹಳ್ಳಿ ಗ್ರಾಮದ ಗೇಟ್ ಬಳಿ ನನ್ನ ಮಗ ಇದ್ದ ಆಟೋಗೆ ಹಿಂಬದಿಯಿಂದ ಕ್ವಾಲಿಸ್ ವೊಂದು ಡಿಕ್ಕಿ ಹೊಡೆಸಿದ್ದು ಗಾಯಾಳುವಾದ ನನ್ನ ಮಗನನ್ನು ಮತ್ತು ಆಟೋದಲ್ಲಿದ್ದ ಇತರರನ್ನು ಬೇರೆ ವಾಹನಗಳಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿ ವಿಷಯ ತಿಳಿಸಿದರು. ನಂತರ ನಾನು ಕೂಡಲೇ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಬಳಿ ಹೋಗಿ ನೋಡಲಾಗಿ ನನ್ನ ಮಗ ನವೀನ್ ರವರ ಬಲಕಾಲಿನ ಹಿಮ್ಮಡಿಯ ಬಳಿ ರಕ್ತಗಾಯವಾಗಿ, ಎದೆಯ ಭಾಗದಲ್ಲಿ, ಎರಡೂ ಕೈಗಳಿಗೂ ತರಚಿದ ಗಾಯಗಳಾಗಿದ್ದು, ಅದೇ ಆಟೋದಲ್ದಿ ಪ್ರಯಾಣ ಮಾಡುತ್ತಿದ್ದ ನಾಗಸಂದ್ರಗಡ್ಡ ಗ್ರಾಮದ ವಾಸಿ ಹರೀಶ್ ಕುಮಾರ್ ರವರ ತಲೆಗೆ ರಕ್ತಗಾಯವಾಗಿದ್ದು, ಇರಗಂಪಲ್ಲಿ ಗ್ರಾಮದ ವಾಸಿ ರೆಡ್ಡಪ್ಪ ಎಂಬುವರ ಎರಡು ಕಾಲುಗಳಿಗೆ, ಕೈಗಳಿಗೆ, ಮುಖಕ್ಕೆ ತರಚಿದ ಗಾಯಗಳಾಗಿದ್ದು ಆಟೋ ಚಾಲಕನಾದ ನವೀನ್ ರವರ ಭುಜಕ್ಕೆ, ಎಡ ಕಾಲಿಗೆ ತರಚಿದ ಗಾಯಗಳಾಗಿದ್ದವು. ನಂತರ ನಾನು ನನ್ನ ಮಗನನ್ನು ವಿಚಾರ ಮಾಡಲಾಗಿ ಅದೇ ದಿನ ದಿನಾಂಕ 01/01/2019 ರಂದು ತಾನು ಚಿಂತಾಮಣಿಗೆ ಬರಲು ಕೆಎ-40-6785 ಅಪಿ ಆಟೋದಲ್ಲಿ ನಮ್ಮ ಗ್ರಾಮದ ಬಳಿ ಹತ್ತಿ ಚಿಂತಾಮಣಿ ಕಡಗೆ ಬರುತ್ತಿದ್ದಾಗ ಮಾರ್ಗ ಮದ್ಯೆಯಲ್ಲಿ ರೆಡ್ಡಪ್ಪ ಮತ್ತು ಹರೀಶ್ ಕುಮಾರ್ ಎಂಬುವರು ಆಟೋದಲ್ಲಿ ಹತ್ತಿದ್ದು, ಸಂಜೆ ಸುಮಾರು 5-15 ಗಂಟೆ ಸಮಯದಲ್ಲಿ ಆಟೋ ಚಾಲಕನಾದ ನವೀನ್ ರವರು ಆಟೋವನ್ನು ನಾಯನಹಳ್ಳಿ ಗ್ರಾಮದ ಬಳಿ ಚಾಲನೆ ಮಾಡಿಕೊಂಡು ಚಿಂತಾಮಣಿ ಕಡೆಗೆ ಬರುತ್ತಿದ್ದಾಗ ಈ ಸಮಯದಲ್ಲಿ ಬಾಗೇಪಲ್ಲಿ ಕಡೆಯಿಂದ ಕೆಎ-01-ಎಂಡಿ-0420 ಕ್ವಾಲಿಸ್ ವಾಹನವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹಿಂಬದಿಯಿಂದ ಆಟೋ ಡಿಕ್ಕಿ ಹೊಡೆಸಿದ ಪರಿಣಾಮ ಆಟೋ ಪಲ್ಟಿಯಾಗಿ ತಮಗೆ ಗಾಯಗಳಾಗಿದ್ದು, ಈ ಸಮಯದಲ್ಲಿ ಅಲ್ಲಿದ್ದ ಯಾರೋ ಸಾರ್ವಜನಿಕರು ತಮ್ಮನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ  ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿ ತಿಳಿಸಿದನು. ನಂತರ ನಾನು ಚಿಂತಾಮಣಿ ಸರ್ಕಾರಿ  ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ನನ್ನ ಮಗ ನವೀನ್ ರವರನ್ನು ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗೀ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇನೆ. ನಾನು ನನ್ನ ಮಗನ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಸದರಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-01-ಎಂಡಿ-0420 ಕ್ವಾಲಿಸ್ ಚಾಲಕನ ವಿರುದ್ದ ಮುಂದಿನ ಕಾನೂನ ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿರುವುದಾಗಿರುತ್ತೆ.