ದಿನಾಂಕ : 06/12/2018ರ ಅಪರಾಧ ಪ್ರಕರಣಗಳು

1) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.274/2018 ಕಲಂ.307-324-504 ರೆ/ವಿ 34 ಐ.ಪಿ.ಸಿ:-

     ದಿನಾಂಕ:05/12/2018 ರಂದು ರಾತ್ರಿ 7-15 ಗಂಟೆಯಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೋ ಪಡೆದು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಕೃಷ್ಣಮೂರ್ತಿ ಬಿನ್ ಲೇಟ್ ಡಿ.ಪಿ. ನಾರಾಯಣಸ್ವಾಮಿ 52 ವರ್ಷ ವಕ್ಕಲಿಗರು ಜಿರಾಯ್ತಿ ವಾಸ ದಿನ್ನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರ ಹೇಳಿಕೆಯ ದೂರಿನ ಸಾರಂಶವೇನೆಂದರೆ:ದಿನಾಂಕ:05/12/2018 ರಂದು ಮದ್ಯಾನ್ಹ ತಮ್ಮ ಗ್ರಾಮದ ಪಾತಾಳೇಶ್ವರ ದೇವಸ್ಥಾನಕ್ಕೆ ಮಂಜೂರಾಗಿರವ ನಿವೇಶನವನ್ನು ಗ್ರಾಮದ ಆದಿನಾರಾಯಣರೆಡ್ಡಿ ಬಿನ್ ಲೇಟ್ ಡಿ.ಪಿ. ನಾರಾಯಣಸ್ವಾಮಿ ರವರು ಅಕ್ರಮಸಿಕೊಂಡು ತಿಪ್ಪೆ ಮತ್ತು ಹುಲ್ಲಿನ ಬಣವೆ ಹಾಕಿಕೊಂಡಿದ್ದು ಸದರಿ ಜಾಗವನ್ನು ಗುಡಿಬಂಡೆ ತಾಲ್ಲೂಕು ಇ.ಓ. ಮತ್ತು ತಿರುಮಣಿ ಪಂಚಾಯ್ತಿ ಪಿ.ಡಿ.ಓ ರವರು ಪೊಲೀಸ್ ರ ರಕ್ಷಣೆಯಲ್ಲಿ ಸದರಿ ನಿವೇಶನವನ್ನು ತೆರವುಗೊಳಿಸಿದ್ದು  ಈ ಹಿನ್ನಲೆಯಲ್ಲಿ ಇದೇ ದಿನ ದಿನಾಂಕ:05/12/2018 ರಂದು ಸಂಜೆ:06-00 ಗಂಟೆಯಲ್ಲಿ ತಾನು ಕೂಲಿಯವರನ್ನು ಕೂಗಲು ಹಾಲಿನ ಡೈರಿಯ ಕಡೇ ಹೋಗುತ್ತಿದ್ದಾಗ ತಮ್ಮ ಗ್ರಾಮದ ಆದಿನಾರಾಯಣರೆಡ್ಡಿ ಬಿನ್ ಲೇಟ್ ಡಿ.ಪಿ.ನಾರಾಯಣಸ್ವಾಮಿ ರವರ ಮನೆಯ ಮುಂದಿನ ರಸ್ತೆಯಲ್ಲಿ ತಮ್ಮ ಗ್ರಾಮದ ಪ್ರತಾಪರೆಡ್ಡಿ ಬಿನ್ ಶಿವಾರೆಡ್ಡಿ 35 ವರ್ಷ ರವರನ್ನು ಕುರಿತು ಆದಿನಾರಾಯಣರೆಡ್ಡಿ ಬಿನ್ ಲೇಟ್ ಡಿ.ಪಿ. ನಾರಾಯಣಸ್ವಾಮಿ 55 ವರ್ಷ ರವರು ಲೋಪರ್ ನಾ ಕೋಡಕಲ ನಾಕಿ ಅನ್ಯಾಯಮು ಚೇಸ್ತರಾ  ಎಂದು ಅವಾಚ್ಯ ಶಬ್ದಗಳಿಂದ ಬೈದು ಆತನ ಮಗ ನಾರಾಯಣಸ್ವಾಮಿ 26 ವರ್ಷ ರವರು ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಮಚ್ಚು ಮತ್ತು ದೋಣ್ಣೆ ಹಾಗೂ ಗೊಡ್ಡಲಿಯನ್ನು ಹಿಡಿದುಕೊಂಡು ಬಂದು ಆದಿನಾರಾಯಣರೆಡ್ಡಿ ರವರು ತನ್ನ ಕೈಯಲ್ಲಿದ್ದ ಮಚ್ಚುನಿಂದ ಪ್ರತಾಪರೆಡ್ಡಿ ರವರ ಮೂಗಿಗೆ ಮತ್ತು ಎಡ ಹುಬ್ಬಿಗೆ ಹೊಡೆದು ರಕ್ತಗಾಯಳನ್ನುಂಟು ಮಾಡಿದ್ದು ತಲೆ ಮೇಲೆ ನಾರಾಯಣಸ್ವಾಮಿ ಗೊಡ್ಡಲಿಯಿಂದ ಹೊಡೆದು ಗಾಯಪಡಿಸಿದ್ದು ಅಷ್ಟರಲ್ಲಿ ತಾನು ಪ್ರತಾಪರೆಡ್ಡಿ ರವರನ್ನು ಬಿಡಿಸಲು ಅಡ್ಡ ಹೋಗಿದ್ದಕ್ಕೆ ಆದಿನಾರಾಯಣರೆಡ್ಡಿ ಮತ್ತು ಈತನ ಮಗ ನಾರಾಯಣಸ್ವಾಮಿ ಮರದ ರೀಪಿಸ್ ಗಳಿಂದ ತನ್ನ ಬಲ ಕೆನ್ನೆಗೆ ಬಲ ಹುಬ್ಬಿನ ಬಳಿ ಮತ್ತು ಎರಡು ಹುಬ್ಬಿನ ಮದ್ಯ ಹೊಡೆದು ರಕ್ತಗಾಯಪಡಿಸಿದ್ದು ಮೂತಿಗೆ ಹೊಡೆದು ನಂತರ ನಾರಾಯಣಸ್ವಾಮಿ ರೀಪಿಸಿನಿಂದ ತನ್ನ ಎಡ ಬೆನ್ನಿನ ಮೇಲೆ ಹೊಡೆದು ಮೂಗೇಟುವುಂಟು ಮಾಡಿದ್ದು ಅಷ್ಟರಲ್ಲಿ ತಮ್ಮ ಗ್ರಾಮದ ವಿಜಯ್ ಬಿನ್ ಡಿ.ಪಿ.ನಾಗರಾಜ್ 35 ವರ್ಷ ಮತ್ತು ಇತರರು ಕೃತ್ಯವನ್ನು ಕಂಡು ಜಗಳ ಬಿಡಿಸಿ ತನ್ನನ್ನು ಮತ್ತು ಪ್ರತಾಪರೆಡ್ಡಿ ರವರನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು  ತನ್ನನ್ನು ಮತ್ತು ಪ್ರತಾಪರೆಡ್ಡಿ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಮಚ್ಚು ಮತ್ತು ಗೊಡ್ಡಲಿ ಮತ್ತು ಮರದ ರಿಪೀಸ್ ಗಳಿಂದ ಹೊಡೆದು ಗಾಯಪಡಿಸಿರವ ಮೇಲ್ಕಂಡ ಆದಿನಾರಾಯಣರೆಡ್ಡಿ ಮತ್ತು ಆತನ ಮಗ ನಾರಾಯಣಸ್ವಾಮಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಹೇಳಿಕೆಯಾಗಿರುತ್ತೆ.

2) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.159/2018 ಕಲಂ.323-341-353 ರೆ/ವಿ 34 ಐ.ಪಿ.ಸಿ:-

     ದಿನಾಂಕ:06-12-2018 ರಂದು ಬೆಳಗ್ಗೆ 08-00 ಗಂಟೆಗೆ ಪಿರ್ಯಾಧಿಯಾದ ಪಿ. ರಮೇಶ್ ಬಾಬು ಬಿನ್ ಪಿ. ಶಂಕರ್ 42 ವರ್ಷ, A.P.S.R.T.S ಬಸ್ಸು ಡ್ರೈವರ್ ಚಾಲಕ, ಕದಿರಿ ಗ್ರಾಮ, ಅಂನಂತಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಬೆಳಗ್ಗೆ 07-30 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ  ಕೆಂಚಾರ್ಲಹಳ್ಳಿ ಮಾರ್ಗವಾಗಿ ಕದರಿಗೆ ಹೋಗುತ್ತಿದ್ದಾಗ ಕೆಂಚಾರ್ಲಹಳ್ಳಿ ಕೆರೆ ಕಟ್ಟೆ ಮೇಲೆ ಬರುತ್ತಿರುವಾಗ ಕೆಂಚಾರ್ಲಹಳ್ಳಿ ಕಡೆಯಿಂದ ಬಂದ ಕಾರ್ ನಂಬರ್ KA-53 C-5950 ಚಾಲಕ ತನಗೆ ಎದುರು ಗಡೆಯಿಂದ ಬಂದಿದ್ದು , ತಾನು ಕಟ್ಟೆ ತಿರುವಿನಲ್ಲಿ ಎಡಭಾಗಕ್ಕೆ ತಿರುಗಿಸಿಕೊಂಡು ಬರುತ್ತಿದ್ದಾಗ, ಕಾರು ಚಾಲಕ ನೀನು ನಿಮ್ಮಗೆ ಡಿಕ್ಕಿಹೊಡಿಸಿದರೆ, ನಾವು ಏನು ಹಾಗಬೇಕು ಅಂತ ತನ್ನ ಬಸ್ಸಿಗೆ ಅಡ್ಡಹಾಕಿ ಬಸ್ಸನ್ನು ತಡೆದು ಕಾರನಲ್ಲಿ ಇದ್ದವರು ಇಬ್ಬರೂ ಆಸಾಮಿಗಳು ತನ್ನನ್ನು ಬಸ್ಸುನಿಂದ ಎಳೆದು ಕೆಳಗೆ ತನ್ನ ಗಲ್ಲಾಪಟ್ಟಿ ಹಿಡಿದುಕೊಂಡು ಎಳೆದಾಡಿ ಕೆಳಗೆ ಎಳೆದುಕೊಂಡು ಕೈಗಳಿಂದ ಹೊಡೆದು ತನ್ನ ಸಮವಸ್ತ್ರವನ್ನು ಹರಿದು ಗುಂಡಿಗಳ ಕಿತ್ತು ಹೋಗಿರುತ್ತೆ. ತನ್ನ ಬನ್ನೀನು ಸಹಾ ಹರಿದು ಹಾಕಿರುತ್ತಾರೆ. ತನ್ನನ್ನು ಅಡ್ಡಗಟ್ಟಿ ಬಸ್ಸನ್ನು ನಿಲ್ಲಿಸಿ ಹೊಡೆದು ಆಸಾಮಿಗಳ ಬಗ್ಗೆ ಕ್ರಮ ಕೈಗೊಳ್ಳ ಕೋರಿ ಸದರಿಯವರ ಹೆಸರು ವಿಳಾಸ ಗೊತ್ತಿರುವುದಿಲ್ಲ. ತನ್ನ ಬಸ್ಸು ಸುಮಾರು ½ ಗಂಟೆ ಪ್ರಯಾಣ ಸ್ಥಿಗಿತವಾಗಿರುತ್ತದೆ. ಇದ್ದಕ್ಕೆ ಕಾರಣ ಅವರೇ ಆಗಿರುತ್ತಾರೆಂತ ದೂರಿನ ಸಾರಾಂಶವಾಗಿರುತ್ತೆ.

3) ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.160/2018 ಕಲಂ.279-323-504 ರೆ/ವಿ 34 ಐ.ಪಿ.ಸಿ:-

     ದಿನಾಂಕ:06-12-2018 ರಂದು ಬೆಳಗ್ಗೆ 08-30 ಗಂಟೆಗೆ ಪಿರ್ಯಾಧಿಯಾದ ಜಿ.ವಿ. ಸಾಗರ್ ಬಿನ್ ಟಿ.ವೆಂಕಟರೆಡ್ಡಿ, 25 ವರ್ಷ, ವಕ್ಕಲಿಗರು, ಟ್ರಾನ್ಸ್ ಪರೇಟ್ ಸೂಪರ್ ವೈಜರ್ ಕೆಲಸ, ಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:06-12-2018 ರಂದು ಬೆಳಗ್ಗೆ ಸುಮಾರು 07-20 ಗಂಟೆ ಸಮಯದಲ್ಲಿ ತಾನು ಕಾರುನಲ್ಲಿ ತಮ್ಮ ಊರಿನಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಮದ್ಯದಲ್ಲಿರುವ ಕೆಂಚಾರ್ಲಹಳ್ಳಿ ಕೆರೆ ಕಟ್ಟೆ ಮೇಲೆ ತಾನು  ಕಾರನ್ನು ಓಡಿಸಿಕೊಂಡು ಹೋಗುತ್ತಿರುವಾಗ ತನ್ನ ಎದುರು ಗಡೆಯಿಂದ ಬಂದ A.P.S.R.T.C ಬಸ್ಸು ಡ್ರೈವರ್ ಚಾಲಕ ವಾಹನ ಸಂಖ್ಯೆ  AP-02 Z-0439 ಬಸ್ಸಿನಲ್ಲಿರುವ ಪ್ಯಾಷನ್ ಜಾರ್ ಮತ್ತು  ಬಸ್ಸು ಚಾಲಕ ನಾದ ರಮೇಶ ಬಾಬು ಎಂಬುವವರು ಅತಿವೇಗದಿಂದ ಅಜಾಗೂರಕತೆಯಿಂದ ತನ್ನ ಕಾರು ನಂಬರ್ KA-53 C-5950 ಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ತಾನು ಇದ್ದುಕೊಂಡು ಏನಾಪ್ಪ ನೀನು ಬಸ್ಸನ್ನು ಅತಿವೇಗವಾಗಿ ಏಕೇ ಬಂದಿದ್ದು, ಅಂತ ಕೇಳಿದ್ದಕ್ಕೆ ಬಸ್ಸು ಚಾಲಕ ತನ್ನನ್ನು ಹಿಡಿದುಕೊಂಡು ” ಹೇ ಲೋಪರ್ ನನ್ನ ಮಗನೇ ಅಂತ ಬೈಯದು ಹೇ ನಾ ಬಸ್ಸ್ ನಿಂಚಿ ಗುದ್ದೇಸ್ತಾನು ನಾ ಕೊಡಕಾ ” ಅಂತ ಹೇಳಿ ತನ್ನನ್ನು ಹಿಡಿದುಕೊಂಡು ಗಲಾಟೆ ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರನ್ನು ಠಾಣೆಗೆ ಕರೆಸಿ ವಿಚಾರ ಮಾಡಿ ತನ್ನ ಕಾರುಗೆ ಆಗಿರುವ ನಷ್ಟಪರಿಹಾರ ಕೊಡಿಸಿಕೊಡಲು ಕೋರಿ ಪಿರ್ಯಾಧು.