ದಿನಾಂಕ: 06-04-2019 ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 69/2019 ಕಲಂ. 323,324,504 ರೆ/ವಿ 34 ಐಪಿಸಿ ಮತ್ತು ಸೆಕ್ಷನ್ 3(1)(ಆರ್)3(1)(ಎಸ್)ಎಸ್.ಸಿ/ಎಸ್.ಟಿ. ಪಿಓಎ ಆಕ್ಟ್ :-

     ದಿನಾಂಕ : 05.04.2019 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೊ ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳುವಿನ ಹೇಳಿಕೆ ಪಡೆದ ಸಾರಂಶವೆನೆಂದರೆ ಗಾಯಾಳು ವಕೀಲ ವೃತ್ತಿ ಮಾಡಿಕೊಂಡು ಜೀವನ  ಮಾಡಿಕೊಂಡಿರುತ್ತೇನೆ. ಕಳೆದ ಜನವರಿ ತಿಂಗಳಲ್ಲಿ ಯಲಗಲಪಲ್ಲಿ ಜಯರಾಮ್ ರೆಡ್ಡಿರವರು ಮರಣ ಪ್ರಮಾಣ ಪತ್ರ ಸಲುವಾಗಿ ನನಗೆ ದಾಖಲಾತಿಗಳನ್ನು ನೀಡಿ  ಬಾಗೇಪಲ್ಲಿ  ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿಸಿದ್ದು,ಸದರಿ ಜಯರಾಮ್ ರೆಡ್ಡಿ ರವರು ಇದುವರೆಗೂ ನ್ಯಾಯಾಲಯದಲ್ಲಿ ವಾಯಿದೆ ಇದ್ದ ದಿನಾಂಕಗಳಲ್ಲಿ ನಾನು ತಿಳಿಸಿದ್ದರೂ ಸಹ  ಹಾಜರಾಗಿರುವುದಿಲ್ಲ. ಹೀಗಿರುವಾಗ ಈ ದಿನ ದಿನಾಂಕ : 05.04.2019 ರಂದು ಸಂಜೆ ಸುಮಾರು 05:30 ಗಂಟೆ ಸಮಯದಲ್ಲಿ ಗೂಳೂರು ವೃತ್ತದ ಸಮೀಪ ಇರುವ ನಂದಿನಿ ಹಾಲಿನ ಅಂಗಡಿಯ ಮಾಲಿಕರಾದ ವೆಂಕಟರಾಮಪ್ಪ ಆಚೇಪಲ್ಲಿರವರು ಮೊಬೈಲ್ ಸಂಖ್ಯೆ 9902300901 ರಿಂದ ನನ್ನ ಮೊಬೈಲ್ ನಂಬರ್ ಗೆ ದೂರವಾಣಿ ಕರೆ ಮಾಡಿ ನಿಮ್ಮಗೆ ನಮ್ಮ ಕಡೆಯಿಂದ ಒಂದು ಕೇಸು  ಕೋಡಬೇಕು ನಮ್ಮ ಅಂಗಡಿಯ ಬಳಿ ಬನ್ನಿ ಎಂದು ತಿಳಿಸಿದ್ದು, ನಾನು ಸಂಜೆ 05:40 ಗಂಟೆ ಸಮಯಕ್ಕೆ ಸ್ಪಂದನ ಆಸ್ಪತ್ರೆಯಲ್ಲಿ ನನ್ನ ಮಗಳಿಗೆ ಚಿಕಿತ್ಸೆಯನ್ನು ಕೋಡಿಸಿಕೊಂಡು ಮಿಲ್ಕ್ ಪಾರ್ಲರ್ ಬಳಿ ಬಂದಾಗ ನನಗೆ ಕೇಸು ನೀಡಿದ್ದ ಜಯರಾಮ್ ರೆಡ್ಡಿ ರವರು ಸ್ಥಳದಲ್ಲಿದ್ದು, ಸದರಿಯವರನ್ನು ಕುರಿತು ನಾನು ನೀವು ಕೇಸು  ಹಾಕಿಸಿ  ನ್ಯಾಯಾಲಯಕ್ಕೆ ಹಾಜರಾಗೇ ಇದ್ದರೆ, ನಾನು ಏನು ಮಾಡಬೇಕು, ನೀವು ವಾಯಿದೆಗೆ ಹಾಜರಾಗಿ ನಾನು  ನಿಮಗೆ ಸಹಾಯ ಮಾಡುತ್ತೇನೆ ಅದನ್ನು ಬಿಟ್ಟು ನೀವು ನಿಮ್ಮ ಸಂಬಂಧಿಕರುಗಳಿಂದ, ಇತರೇಯವರಿಂದ ಪೋನ್ ಮಾಡಿಸಿದರೆ ನಾನು ಏನೂ ಮಾಡಲಾಗುವುದಿಲ್ಲ ಎಂದು ಹೇಳಿದಕ್ಕೆ ಸದರಿಯವರು ನನ್ನನ್ನು ಕುರಿತು ಸಣ್ಣ ನನ್ನ ಮಗನೇ, ನಿನಗೆ ಕೇಸು ನಡೆಸುವುದು ಬರುತ್ತದೆಯೇ ಎಂದು ಅವಾಚ್ಯ ಶಬ್ದಗಳಿಂದ ಬೈದ್ದು, ಕೈಗಳಿಂದ ನನ್ನ ಎದೆಗೆ ಜೋರಾಗಿ ಹೊಡೆದು, ಕೆಳಗೆ ಬಿಳಿಸಿದ್ದು, ಆಗ ನಾನು ನಿಮ್ಮ ಸಂಬಂಧಿಯಾದ ಈಶ್ವರ್ ರೆಡ್ಡಿ ರವರ ಕಡೆಯಿಂದ ಪೋನ್ ಮಾಡಿಸಿ ಏನ್ನಯಾ ನೀನು ಕೇಸನ್ನು ಎಷ್ಟು ದಿನಗಳು ನಡೆಸುವುದು ನೀನು ಅಜಾಮರ ಕೆಲಸ ಮಾಡುತ್ತೀಯಾ, ಲಾಯರ್ ಕೆಲಸ ಮಾಡುತ್ತೀಯಾ ನಮ್ಮ ಜಯರಾಮ್ ರೆಡ್ಡಿ ಬಂದು ನಿನಗೆ ಕೇಸು ನೀಡಿದ್ದಾನೆ. ಎಂದು ಅವಾಚ್ಯವಾಗಿ ಬೈದ್ದಿರುತ್ತಾರೆ ಎಂದು ಜಯರಾಮ್ ರೆಡ್ಡಿರವರನ್ನು ಕೇಳಿದ್ದಾಗ ಸದರಿಯಾವರು ಈಶ್ವರ್ ರೆಡ್ಡಿರವರು ನಮ್ಮ ಅಣ್ಣ ಅವರು ಪೋನ್ ಮಾಡುತ್ತಾರೆ. ನೀನು ಎಷ್ಟು ದಿನ ಕೇಸು ನಡೆಸುವುದು, ವಾಯಿದೆ ಹೇಳುವುದು ಎಂದು ನನ್ನ ಮೇಲೆ  ವಿನಾಕಾರಣ ಗಲಾಟೆಗೆ ಬಂದು ನನ್ನನ್ನು ನೆಲದ  ಮೇಲೆ ಬಿಳಿಸಿ, ಕಲ್ಲಿನಿಂದ ನನ್ನ ಮುಖದ ಎಡಭಾಗಕ್ಕೆ ಹೊಡೆದಿದ್ದರಿಂದ, ನನ್ನ ಮೂರು ಹಲ್ಲುಗಳಿಗೆ ರಕ್ತಗಾಯವಾಗಿ ಊದಿಕೊಂಡಿರುತ್ತದೆ. ಹಾಗೂ ಕೈಗಳಿಂದ ಕುತ್ತಿಗೆಯ ಎಡಭಾಗಕ್ಕೆ ಗೀಚಿದ ರೀತಿಯ ಗಾಯವನ್ನು ಉಂಟು ಮಾಡಿರುತ್ತಾರೆ. ಈ ವೇಳೆಯಲ್ಲಿ ಮಿಲ್ಕ್  ಪಾರ್ಲರ್ ನ ಮಾಲಿಕರಾದ ವೆಂಕಟರಾಮಪ್ಪರವರು ನನ್ನನ್ನು ಹಿಡಿದುಕೊಂಡಿದ್ದು, ಜಯರಾಮ್ ರೆಡ್ಡಿರವರು ನನ್ನ ಮೇಲೆ ಹಲ್ಲೆ ಮಾಡಲು ಸಹಕಾರವಾಗುವಂತೆ ಮಾಡಿರುತ್ತಾರೆ. ನಂತರ ಸ್ಥಳದಲ್ಲಿದ್ದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ವೆಂಕಟೇಶ್ ರವರು ಬಂದು ಜಗಳವನ್ನು ಬಿಡಿಸಿದ್ದು,  ನಾನು ನನ್ನ ಬಾಬತ್ತು ದ್ವಿಚಕ್ರ ವಾಹನದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇನೆ. ಆದ್ದರಿಂದ ವಿನಾ ಕಾರಣ ನನ್ನ ಮೇಲೆ  ಗಲಾಟೆ   ಮಾಡಿ ನನ್ನನ್ನು ಹೊಡೆದ ಮೇಲ್ಕಂಡವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

2) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 70/2019 ಕಲಂ. 323,324,504 ರೆ/ವಿ 34 ಐಪಿಸಿ :-

     ದಿನಾಂಕ:05/04/2019 ರಂದು ಠಾಣೆಯಲ್ಲಿ ಪಿರ್ಯಾದಿದಾರರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ಹಾಲಿನ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ಈಗ್ಗೆ ಸುಮಾರು 7 ತಿಂಗಳಿಂದ ನನ್ನ ಮುಂಖಾತರ ಪಾತಪಾಳ್ಯ ಹೋಬಳಿ ಯಲಗಲಪಲ್ಲಿ ಗ್ರಾಮದ ವಾಸಿ ಜಯರಾಮ್ ರೆಡ್ಡಿ ರವರ ತಾತ ಮತ್ತು ಅಜ್ಜಿಯವರ ಮರಣದ ಪ್ರಮಾಣ ಪತ್ರವನ್ನು ಬಾಗೇಪಲ್ಲಿ ನ್ಯಾಯಾಲಯದಲ್ಲಿ ಮಾಡಿಸಿಕೊಡಲು, ನನ್ನ ಸ್ನೇಹಿತ 01 ನೇ ವಾರ್ಡ್ನ ಬಾಗೇಪಲ್ಲಿ ಪುರದ ವಾಸಿ ಆದಿನಾರಾಯಣಸ್ವಾಮಿ ವಕೀಲರಿಗೆ 4000 ರೂಗಳಿಗೆ ಕೇಸು ಕೋಡಿಸಿದ್ದು, ಮುಂಗಡವಾಗಿ 2000 ಸಾವಿರ ಹಣ ಕೊಡಿಸಿರುತ್ತೇನೆ. ನಂತರದ ವಾಯಿದೆಯ ದಿನ 2000 ಸಾವಿರ ಹಣ ಪಡೆದುಕೊಂಡಿರುತ್ತಾರೆ, ಆದರೆ ಅವರು ಇಲ್ಲಿಯವರೆಗೂ ಮರಣ ಪ್ರಮಾಣ ಪತ್ರವನ್ನು ಕೊಡಿಸಿಕೊಟ್ಟಿರುವುದಿಲ್ಲ.  ಹೀಗಿರುವಾಗ ಈ ದಿನ ದಿನಾಂಕ : 05.04.2019 ರಂದು ಸಂಜೆ ಸುಮಾರು 05-30 ಗಂಟೆಗೆ ನಾನು ನನ್ನ ಮೊಬೈಲ್ ನಿಂದ  ಆದಿನಾರಾಯಣಸ್ವಾಮಿಗೆ ಕರೆಮಾಡಿ ನನ್ನ ಅಂಗಡಿ ಬಳಿ ಬಾ ಕೇಸಿನ ಬಗ್ಗೆ ಮಾತನಾಡಬೇಕು ಎಂದು ಹೇಳಿರುತ್ತೇನೆ. ಸದರಿ ಆದಿನಾರಾಯಣಸ್ವಾಮಿರವರು ಸಂಜೆ 05:40 ಕ್ಕೆ ನಮ್ಮ ಅಣ್ಣನ ಬಳಿ ಬಂದು ಯಾವ ನನ್ನ ಮಗನಿಂದ ಪೋನ್ ಮಾಡಿಸಿದ್ದೀಯಾ, ನೀನು ಯಾರ ಮೊಬೈಲ್ ನಲ್ಲಿ ಕರೆ ಮಾಡಿಸಿದರೂ ನಾನು ನಿನ್ನ ಹಣವನ್ನು ವಾಪಸ್ ಕೊಡುವುದಿಲ್ಲವೆಂದು ಅವಾಚ್ಯವಾಗಿ ಶಬ್ದಗಳಿಂದ ಬೈಯುತ್ತಾ  ನಮ್ಮ ಅಣ್ಣನನ್ನು  ಕೈಗಳಿಂದ ಹೊಡೆದು ನೆಲಕ್ಕೆ ಹೊರಳಿಸಿ ನಮ್ಮ ಅಣ್ಣನ ಮೇಲೆ ಹಲ್ಲೆ ಮಾಡುತ್ತಿದ್ದಾಗ ಅದನ್ನು ನೋಡಿದ ಜಗಳವನ್ನು ಬಿಡಿಸಿ ಕಳುಹಿಸಿರುತ್ತೇನೆ. ಇದ್ದಾದ ನಂತರ ಆದಿನಾರಾಯಣಸ್ವಾಮಿ ನನಗೆ ಕರೆ ಮಾಡಿದ್ದು, ನಾನು ವ್ಯಾಪಾರದಲ್ಲಿದ್ದು ಪೋನ್ ನ್ನು ತೆಗೆದಿರುವುದಿಲ್ಲ. ನಂತರ ಆದಿನಾರಾಯಣಸ್ವಾಮಿರವರು ಅವರ ಸ್ನೇಹಿತರಾದ ಶ್ರೀನಿವಾಸ ಹಾಗೂ ತಮ್ಮನಾದ ಆನಂದ ರವರೊಂದಿಗೆ ನಮ್ಮ  ಅಂಗಡಿಯ ಬಳಿ ಬಂದು, ನನ್ನನ್ನು ಕುರಿತು  ಅಂಗಡಿಯಿಂದ ಹೊರಗೆ ಬಾ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ  ನನ್ನನ್ನು ಅಂಗಡಿಯಿಂದ ಹೊರಗಡೆಗೆ ಎಳೆದು ಮೂರು ಜನರು ಸೇರಿ ಕೈಗಳಿಂದ ಹೊಡೆದಿದ್ದು ನಂತರ ಆದಿನಾರಾಯಣಸ್ವಾಮಿರವರು  ಅಲ್ಲಿಯೇ ಅಂಗಡಿಯ ಮುಂದೆ ಬಿದ್ದಿದ್ದ ಕಲ್ಲಿನಿಂದ ನನ್ನ ಬಲಗೈಗೆ ಹೊಡೆದು ಮೂಗೇಟು ಪಡಿಸಿರುತ್ತಾರೆ. ನಂತರ ಅಲ್ಲೆ ಇದ್ದ ಮಬಾಷಾ ರವರು ಜಗಳವನ್ನು ಬಿಡಿಸಿರುತ್ತಾರೆ. ವಿನಾ ಕಾರಣ ಜಗಳ ತೆಗೆದು ಕೈಗಳಿಂದ ನನ್ನನ್ನು ಹೊಡೆದ ಮೇಲ್ಕಂಡವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು

3) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 57/2019 ಕಲಂ. 279,304(ಎ) ಐಪಿಸಿ ಮತ್ತು ಸೆಕ್ಷನ್ 187 ಐಎಂವಿ ಆಕ್ಟ್ :-

     ದಿನಾಂಕ 05/04/2019 ರಂದು ರಾತ್ರಿ 08.00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 047/04/2019 ರಂದು ತಮ್ಮ ಮನೆಯಲ್ಲಿ ತನ್ನ ತಂಗಿ ಗೌತಮಿ ರವರ ನಿಶ್ಚಿತಾರ್ಥ ಕಾರ್ಯ ಕ್ರಮವಿದ್ದು ಈ ಕಾರ್ಯ ಕ್ರಮಕ್ಕೆ ತಮ್ಮ ಅತ್ತೆಯಾದ ಶ್ರೀಮತಿ ನಾರಾಯಣಮ್ಮ ಕೋಂ ನರಸಿಂಹಪ್ಪ 46 ವರ್ಷ, ಪರಸದಿನ್ನೆ ಗ್ರಾಮದವರು ಬಂದು ವಾಪಸ್ಸು ಹೋಗಲು ಅವರ ಸೊಸೆಯವರುಗಳಾದ ಮುನಿಲಕ್ಷ್ಮಮ್ಮ ಮತ್ತು ಶಾಂತಮ್ಮ ಹಾಗೂ ಮೊಮ್ಮಗ ನರಹರಿ ರವರು ಸಂಜೆ 04.00 ಗಂಟೆ ಸಮಯದಲ್ಲಿ ಲಿಂಗಶೆಟ್ಟಿಪುರ ಗೇಟ್ ಬಳಿ ಎನ್ ಹೆಚ್ 07 ರಸ್ತೆಯನ್ನು ದಾಟುತ್ತಿದ್ದಾಗ ಅದೇ ಸಮಯಕ್ಕೆ ಬಾಗೇಪಲ್ಲಿ ಕಡೆಯಿಂದ ಚಿಕ್ಕಬಳ್ಳಾಪುರ ಕಡೆ ಬರುತ್ತಿದ್ದ ಯಾವುದೋ ಕಾರು ಅದರ ಚಾಲಕನು ಕಾರನ್ನು ಅತೀ ವೇಗ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಅತ್ತೆಯಾದ ನಾರಾಯಣಮ್ಮ ರವರಿಗೆ ಡಿಕ್ಕಿ ಹೋಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೋರಟು ಹೋಗಿದ್ದು ತಮ್ಮ ಅತ್ತೆಯವರಿಗೆ ಎರಡು ಮೊಣಕಾಲು ಎಡಗೈ ಮತ್ತು ಹಣೆಯ ಮೇಲೆ ತರಚಿದ ಗಾಯಗಳಾಗಿದ್ದು ಅಪಘಾತವಾದ ಬಗ್ಗೆ ತನ್ನ ತಮ್ಮನಾದ ನಾಗೇಶ ರವರು ದೂರವಾಣಿ ಮೂಲಕ ತನಗೆ ತಿಳಿಸಿದ್ದು ತಾನು ತಕ್ಷಣ ತಮ್ಮ ಅತ್ತೆಯವರನ್ನು ಬುಲೇರೋ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ವೈದ್ಯರ ಸಲಹೆಯಂತೆ ದಿನಾಂಕ 05/04/2019 ರಂದು ಸಂಜೆ 05.30 ಗಂಟೆ ಸಮಯದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲು ಹೋದಾಗ ವೈದ್ಯರು ಪರೀಕ್ಷಿಸಿ ಮರಣ ಹೊಂದಿರುವುದಾಗಿ ತಿಳಿಸಿರುತ್ತಾರೆ  ತಾನು ತನ್ನ ಅತ್ತೆಗೆ ಚಿಕಿತ್ಸೆ ಕೊಡಿಸಿದ್ದರಿಂದ ಈ ದಿನ ತಡವಾಗಿ ದೂರು ನೀಡಿರುತ್ತೇನೆ ಅಪಘಾತ ಪಡಿಸಿರುವ ವಾಹನ ಸಂಖ್ಯೆ ಎಪಿ-02 ಟಿಸಿ-2018 ಎಂದು ತಿಳಿದು ಬಂದಿದ್ದು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೋರಟು ಹೋಗಿರುವ ಸದರಿ ಎಪಿ-02 ಟಿಸಿ-2018 ವಾಹನ ಚಾಲಕ ಮತ್ತು ವಾಹನವನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

4) ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 58/2019 ಕಲಂ. 87 ಕೆ.ಪಿ. ಆಕ್ಟ್ :-

          ದಿನಾಂಕ 06/04/2019 ರಂದು ಮದ್ಯಾಹ್ನ 01.30 ಗಂಟೆಗೆ ಪಿಎಸ್ಐ ರವರು ಮಾಲು ಅಮಾನತ್ತು ಪಂಚನಾಮೆ ಹಾಗೂ 5 ಜನ ಆಸಾಮಿಗಳನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ; 06-04-2019 ರಂದು ನಾನು, ಠಾಣಾ ಪ್ರಭಾರದಲ್ಲಿರುವಾಗ  ಬೆಳಿಗ್ಗೆ 11.00 ಘಂಟೆ ಸಮಯದಲ್ಲಿ ಬಂದ ಮಾಹಿತಿ ಏನೆಂದರೆ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ 2 ನೇ ಗ್ರಾಮ ಗಸ್ತಿಗೆ ಸೇರಿದ ದೊಡ್ಡೇಗಾನಹಳ್ಳಿಗ್ರಾಮದ ನರಸಿಂಹಪ್ಪ ರವರ ಜಮೀನಿನ  ಬಳಿ ಇರುವ ಹುಣಸೇ  ಮರದ ಬಳಿ ಯಾರೋ ಜನರು ಗುಂಪು ಸೇರಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಬಂದ ಮಾಹಿತಿ ಖಚಿತ ಮೇರೆಗೆ ನಾನು, ಸಿಬ್ಬಂದಿಯವರಾದ, ಹೆಚ್.ಸಿ 141, ಶ್ರೀ ರಮಣಾರೆಡ್ಡಿ, ಹೆಚ್.ಸಿ-237 ರಮೇಶ ಹೆಚ್.ಸಿ-64 ದೇವರಾಜ್ ,ಪಿಸಿ-19 ಮಣಿಕಂಠ ಪಿ.ಸಿ-35 ಸರ್ದಾರ್, ಪಿ.ಸಿ-262 ಅಂಬರೀಶ್ , ಪಿ.ಸಿ-203 ಮಂಜುನಾಯ್ಕ್,   ಪಿಸಿ 271 ನಾಗೇಶ್ ಕುಸಲಾಪೂರ್, ಪಿಸಿ 180 ಬಾಲಚಂದ್ರ,ಪಿಸಿ-244 ಶಶಿಕುಮಾರ್ ಜೀಪ್ ಸಂಖ್ಯೆ ಕೆಎ,40-ಜಿ-567 ರಲ್ಲಿ ಮತ್ತು ದ್ವಿ-ಚಕ್ರವಾಹನಗಳಲ್ಲಿ ಬೆಳಿಗ್ಗೆ 11:15 ಗಂಟೆಗೆ ಠಾಣೆಯಿಂದ ಹೊರಟು ಮದ್ಯಾಹ್ನ:12.00 ಘಂಟೆಗೆ ದೊಡ್ಡೇಗಾನಹಳ್ಳಿ  ಗ್ರಾಮದ ಬಳಿ  ಹೋಗಿ  ಗ್ರಾಮದ ಬಳಿ ಇದ್ದ ಮಲ್ಲೇಶ್  ಬಿನ್ ಹನುಮಂತರಾಯಪ್ಪ, ಡಿ.ಎನ್.ನರಸಿಂಹಪ್ಪಬಿನ್ ನರಸಪ್ಪ, ಪಿಳ್ಳಪ್ಪ ಬಿನ್ ಯಲ್ಲಪ್ಪ, ರವರಗಳಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ. ಪಂಚರು ಮತ್ತು ಸಿಬ್ಬಂದಿಯರೊಂದಿಗೆ  ಸರ್ಕಾರಿ ಜೀಪ್ ಮತ್ತು ದ್ವಿ-ಚಕ್ರವಾಹನಗಳಲ್ಲಿ ದೊಡ್ಡೇಗಾನಹಳ್ಳಿ ಗ್ರಾಮದ ನರಸಿಂಹಪ್ಪರವರ ಜಮೀನಿನ ಬಳಿ ಹುಣಸೇಮರದ  ಬಳಿ ಹೋಗಿ ವಾಹನಗಳನ್ನು ಮರೆಯಾಗಿ ನಿಲ್ಲಿಸಿ  ಪಂಚರು ಮತ್ತು ನಾವು ಹೋಗಿ ಮರೆಯಾಗಿ ನಿಂತು ನೋಡಲಾಗಿ ಹುಣಸೇ ಮರದ ಕೆಳಗೆ ಯಾರೋ ಕೆಲವರು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟು ಎಲೆಗಳಿಂದ ಆ ಪೈಕಿ ಒಬ್ಬ ಆಸಾಮಿ ಅಂದರ್ 200 ಎಂತ ಮತ್ತೋಬ್ಬ ಆಸಾಮಿ ಬಾಹರ್ ಗೆ 100 ಎಂತ ಉಳಿದವರು ಸಹ ಅಂದರ್ ಗೆ 200 ಬಾಹರ್ ಗೆ 200 ಎಂತ ಕೂಗುತ್ತ ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್ ಜೂಜಾಟ ಆಡುತ್ತಿರುವುದನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು, ಸಬ್ ಇನ್ಸ್ ಪೆಕ್ಟರ್ ಆದ ನಾನು ಜೂಜಾಟ ಆಡುತ್ತಿದ್ದವರಿಗೆ ಜೂಜಾಟ ಸ್ಥಳದಿಂದ ಯಾರು ಒಡಿಹೋಗಬಾರದು ಯಥಾಸ್ಥಿತಿಯಲ್ಲಿರುವಂತೆ  ಸೂಚನೆ ನೀಡುತ್ತಿದ್ದಂತೆ ಜೂಜಾಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದವರನ್ನು  ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ನಾವು ಹಿಡಿದುಕೊಂಡು ಸ್ಥಳದಲ್ಲಿ ಸಿಕ್ಕ ಆಸಾಮಿಗಳ ಹೆಸರು ವಿಳಾಸ ಕೆಳಲಾಗಿ 1) ಸುಬ್ರಮಣಿ ಬಿನ್ ಅಶ್ವತಪ್ಪ, 43ವರ್ಷ, ನಾಯಕರು, ಎಲೆಕ್ಟ್ರಿಕಲ್ ಕೆಲಸ, ಗೊಲ್ಲಹಳ್ಳಿ ಗ್ರಾಮ, 2) ನರೇಂದ್ರ ಬಿನ್ ಮುನಿಯಪ್ಪ, 19ವರ್ಷ, ಆದಿಕರ್ನಾಟಕ, ಜಿರಾಯ್ತಿ, ದೊಡ್ಡೇಗಾನಹಳ್ಳಿ ಗ್ರಾಮ,3)ಚಂದ್ರಶೇಖರ್ ಬಿನ್ ಪಿಳ್ಳಪ್ಪ,22ವರ್ಷ, ಕುರುಬರು, ಜಿರಾಯ್ತಿ, ದೊಡ್ಡೇಗಾನಹಳ್ಳಿ ಗ್ರಾಮ,4)ಲಕ್ಷ್ಮಿಪತಿ ಬಿನ್ ನರಸಿಂಹಪ್ಪ 22 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ 5)ಸತೀಶ ಬಿನ್ ನರಸಿಂಹಪ್ಪ, 19 ವರ್ಷ, ಆದಿಕರ್ನಾಟಕ, ಜಿರಾಯ್ತಿ, ದೊಡ್ಡೇಗಾನಹಳ್ಳಿ ಗ್ರಾಮ, ಎಲ್ಲಾರು ಚಿಕ್ಕಬಳ್ಳಾಪುರ ತಾಲ್ಲೂಕು. ಎಂದು ತಿಳಿಸಿದರು. ಜೂಜಾಟದ ಸ್ಥಳದಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲ, 52 ಇಸ್ಪೀಟು ಎಲೆಗಳು ಪಣಕ್ಕಿಟ್ಟದ 3150/- ರೂಗಳನ್ನು  ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆಸಾಮಿಗಳನ್ನುವಶಕ್ಕೆ ತೆಗೆದುಕೊಂಡು ಮಾಲು, ದಾಳಿ ಪಂಚನಾಮೆ, ಆಸಾಮಿಗಳೊಂದಿಗೆ ಮದ್ಯಾಹ್ನ1-30 ಗಂಟೆಗೆ ಠಾಣೆಗೆ ಹಾಜರುಪಡಿಸಿ ವರದಿ ನೀಡಿರುತ್ತೇನೆ. ಅದರಂತೆ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

5) ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 59/2019 ಕಲಂ.73(3) ಕೆ.ಪಿ .ಆಕ್ಟ್ :-

     ದಿನಾಂಕ 05/04/2019 ರಂದು 20-45 ಗಂಟೆಗೆ ಪಿರ್ಯಾದಿ ಚಿಕ್ಕಬಳ್ಳಾಪುರ ನಗರ ಠಾಣೆಯ ಪಿ.ಎಸ್.ಐ ವರುಣ್ ಕುಮಾರ್ ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 05-04-2019 ರಂದು 19-00 ಗಂಟೆಯಲ್ಲಿ ನಾನು ಅಪರಾದ ಸಿಬ್ಬಂದಿಯವರಾದ ಹೆಚ್.ಸಿ. 48 ದಿನೇಶ್, ಪಿ.ಸಿ. 138 ಮುರಳೀರವರೊಂದಿಗೆ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆಯಿಂದ ದಕ್ಷಿಣಕ್ಕೆ ಇರುವ ಕಾಫಿ ಡೇ ( ಕುಕ್ಕಿಸ್ ) ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳವಾದ ಪುಟ್ ಪಾತ್ ನಲ್ಲಿ ಯಾರೋ ಆಸಾಮಿಯು ಹಣವನ್ನು ಪಣವಾಗಿಟ್ಟು ದಿ: 05/04/2019 ರಂದು ರಾತ್ರಿ 8-00 ಗಂಟೆಗೆ ಐ.ಪಿ.ಎಲ್ ಕ್ರಿಕೆಟ್ ಪಂದ್ಯವಳಿಯಲ್ಲಿ ನಡೆಯಲ್ಲಿರುವ ರಾಯಲ್ ಚಾಲೆಂಜ್ ಬೆಂಗಳೂರು- ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿರುವ ಕ್ರಿಕೆಟ್ ಪಂದ್ಯಕ್ಕೆ ಜೂಜಾಟವನ್ನು ಆಡುತ್ತಿದ್ದಾರೆಂದು ಮಾಹಿತಿ ಬಂದಿದ್ದು ಘನ ಪಿ.ಸಿ.ಜೆ. ಮತು ಜೆ.ಎಂ.ಎಫ್.ಸಿ. ಚಿಕ್ಕಬಳ್ಳ್ಳಾಪುರ ನ್ಯಾಯಾಲಯದಿಂದ ದಾಳಿಯನ್ನು ಮಾಡಲು ಅನುಮತಿಯನ್ನು ಪಡೆದುಕೊಂಡು ಪಂಚರನ್ನು ಠಾಣೆಗೆ ಕರೆಯಿಸಿಕೊಂಡು ಪಂಚರಿಗೆ ಮತ್ತು ಚಿಕ್ಕಬಳ್ಳಾಪುರ ನಗರ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ. 48 ದಿನೇಶ್, ಪಿ.ಸಿ. 138 ಮುರಳಿ ಮತ್ತು ಚಾಲಕ ಎ.ಪಿ.ಸಿ. 131 ಅಲೀಂ ಪಾಷ ರವರೊಂದಿಗೆ ಸಕರ್ಾರಿ ವಾಹನ ಕೆ.ಎ.40-ಜಿ-139 ರಲ್ಲಿ ಠಾಣೆಯನ್ನು ರಾತ್ರಿ 7-30 ಗಂಟೆಗೆ ಬಿಟ್ಟು ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮರೆಯಲ್ಲಿ ನಿಂತು ಕೊಂಡು ನೋಡಲಾಗಿ ಸದರಿ ಸ್ಥಳವು ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆಯಿಂದ ದಕ್ಷಿಣಕ್ಕೆ ಇರುವ ಕಾಫಿ ಡೇ ( ಕುಕ್ಕಿಸ್ ) ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳವಾದ ಪುಟ್ ಪಾತ್ ಆಗಿರುತ್ತೆ. ಕೃತ್ಯ ನಡೆದ ಸ್ಥಳದಿಂದ ದಕ್ಷಿಣಕ್ಕೆ ಕುಕ್ಕಿಸ್ ಕಾಫಿ ಡೇ ಅಂಗಡಿ ಇರುತ್ತೆ. ಇದರ ಮುಂಭಾಗದ ಎಂಜಿ ರಸ್ತೆಯಿಂದ ದಕ್ಷಿಣಕ್ಕೆ ಇರುವ ಮಣ್ಣಿನ ರಸ್ತೆ ಆಗಿರುತ್ತೆ. ಮಣ್ಣಿನ ರಸ್ತೆಯಲ್ಲಿ ಅಂಗಡಿಯ ಮುಂಭಾಗ ಯಾರೋ ಒಬ್ಬ ಆಸಾಮಿಯು ನಿಂತಿದ್ದು, ಮೊಬೈಲ್ ನಲ್ಲಿ ಈ ದಿನ ರಾತ್ರಿ ನಡೆಯುವ ಐ.ಪಿ.ಎಲ್ ಕ್ರಿಕೆಟ್ ಪಂದ್ಯವಳಿಯಲ್ಲಿ ನಡೆಯಲ್ಲಿರುವ ರಾಯಲ್ ಚಾಲೆಂಜ್ ಬೆಂಗಳೂರು- ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ಆರ್.ಸಿ.ಬಿ ಗೆಲ್ಲುತ್ತೆ 2000/- ರೂಗಳು ಎಂದು ಪೋನ್ ನಲ್ಲಿ ಬೆಟ್ಟಿಂಗ್ ಕಟ್ಟಲು ಹೇಳುತ್ತಿದ್ದು, ಆಸಾಮಿಯು ಬೆಟ್ಟಿಂಗ್ ಕಟ್ಟುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ನಿಂತಿದ್ದ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ 1) ಶರತ್ ಬಾಬು ಹೆಚ್.ಎನ್. ಬಿನ್ ನಾಗೇಶ್ 25 ವರ್ಷ, ಒಕ್ಕಲಿಗರು, ವ್ಯಾಪಾರ, ವಾಸ ನಾರಾಯಣಮ್ಮ ಬಿಲ್ಡಿಂಗ್ ಮುನಿಸ್ಸಿಪಾಲ್ ಕಾಲೇಜ್ ಉತ್ತರಕ್ಕೆ ಜೈಭೀಮ್ ನಗರ ವಾಡರ್್ ನಂ 8 ಚಿಕ್ಕಬಳ್ಳಾಪುರ ಸ್ವಂತ ಸ್ಥಳ ಹೊಸಹಳ್ಳಿ ಗ್ರಾಮ, ಜಂಗಮಕೋಟೆ ಹೋಬಳಿ, ಶಿಢ್ಲಘಟ್ಟ ತಾಲ್ಲೂಕು. ಎಂದು ತಿಳಿಸಿದನು. ಆರೋಪಿಯನ್ನು ಪಂಚರ ಸಮಕ್ಷಮ ಜಡ್ತಿಯನ್ನು ಮಾಡಲಾಗಿ 1) 80,000/- ನಗದು ಹಣ, 2) 1 ರೆಡ್ ಮೀ ಮೊಬೈಲ್ ದೊರೆತಿದ್ದು, ಆಸಾಮಿಯು ಹಣವನ್ನು ಪಣವಾಗಿಟ್ಟು ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನ್ನು ಆಡುತ್ತಿರುತ್ತಾನೆ. ಪಂಚನಾಮೆಯನ್ನು ಆಸಾಮಿಯನ್ನು ಮತ್ತು ಮಾಲುಗಳನ್ನು 19-45 ಗಂಟೆಯಿಂದ 20-30 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆಸಾಮಿಯನ್ನು, ಮಾಲು ಮತ್ತು ಪಂಚನಾಮೆಯನ್ನು ಹಾಗೂ ನ್ಯಾಯಾಲಯದ ಅನುಮತಿಯನ್ನು 20-45 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು ಆಸಾಮಿಯ ವಿರುದ್ದ ಕಲಂ 78(3) ಕೆ.ಪಿ.ಆಕ್ಟ್ ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

6) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 109/2019 ಕಲಂ. 32,34 ಕರ್ನಾಟಕ ಅಬಕಾರಿ ಕಾಯ್ದೆ :-

     ಈ ಮೂಲಕ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆರ್.ಜಗದೀಶ್ ರೆಡ್ಡಿ ಆದ ನಾನು ತಮ್ಮಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ:05-04-2019 ರಂದು ನಾನು ಠಾಣೆಯ ಸಿಬ್ಬಂದಿಯಾದ ಹೆಚ್.ಸಿ-03 ರಾಜಣ್ಣ ಮತ್ತು ಹೆಚ್.ಸಿ-86 ಹರೀಶ್ ರವರೊಂದಿಗೆ ಸರ್ಕಾರಿ ಜೀಪಿನಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ವಿಶೇಷ ಗಸ್ತು ಕರ್ತವ್ಯಕ್ಕೆ ಹೋಗಿ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 6-15 ಗಂಟೆ ಸಮಯದಲ್ಲಿ ದೊಡ್ಡ ಗಂಜೂರು ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ಕೃಷ್ಣಾರೆಡ್ಡಿ ಬಿನ್ ಸೊಣ್ಣಪ್ಪರವರು ತನ್ನ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಮದ್ಯವನ್ನು ದಾಸ್ತಾನು ಮಾಡಿ ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ನಾನು ಸದರಿ ಗ್ರಾಮದಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಷಯವನ್ನು ತಿಳಿಸಿದ್ದು, ಅವರು ಒಪ್ಪಿಕೊಂಡ ನಂತರ ಅವರೊಂದಿಗೆ ದೊಡ್ಡ ಗಂಜೂರು ಗ್ರಾಮದ ಕೃಷ್ಣಾರೆಡ್ಡಿ ಬಿನ್ ಸೊಣ್ಣಪ್ಪರವರ ಅಂಗಡಿಯ ಬಳಿ ಹೋದಾಗ  ಅಂಗಡಿಯಲ್ಲಿದ್ದ ಒಬ್ಬ ವ್ಯಕ್ತಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಸದರಿ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೃಷ್ಣಾರೆಡ್ಡಿ ಬಿನ್ ಸೊಣ್ಣಪ್ಪ,  49 ವರ್ಷ, ವಕ್ಕಲಿಗರು, ವಾಸ:ದೊಡ್ಡಗಂಜೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಅಂಗಡಿಯಲ್ಲಿ ಪರಿಶೀಲಿಸಲಾಗಿ ಮದ್ಯದ ಟೆಟ್ರಾ ಪಾಕೆಟ್ ಗಳು ಕಂಡುಬಂದಿದ್ದು, ಅವುಗಳನ್ನು ಪರಿಶೀಲಿಸಲಾಗಿ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ನ 60 ಮದ್ಯದ ಟೆಟ್ರಾ ಪಾಕೆಟ್ ಗಳಿದ್ದು, ಪ್ರತಿ ಪಾಕೆಟ್ ನ ಮೇಲೆ 30.32 ರೂ ಎಂತ ಬೆಲೆ ಇರುತ್ತೆ. ಇದರ ಒಟ್ಟು ಬೆಲೆ 1819.2/- ರೂಗಳಾಗಿದ್ದು, ಸದರಿ ಕೃಷ್ಣಾರೆಡ್ಡಿರವರಿಗೆ ಸದರಿ ಮದ್ಯವನ್ನು ಮಾರಾಟ ಮಾಡಲು ನೀನು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆದಿದ್ದೀಯಾ ಎಂದು ಕೇಳಿದಾಗ ಆತನು ಯಾವುದೇ ಪರವಾನಿಗೆ ಪಡೆದಿರುವುದಿಲ್ಲವೆಂದು ತಿಳಿಸಿದ್ದು, ಸಂಜೆ 6-30 ಗಂಟೆಯಿಂದ 7-15 ಗಂಟೆಯವರೆಗೆ ಮಹಜರ್ ಮುಖಾಂತರ ಸದರಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಮತ್ತು ಮಾಲಿನೊಂದಿಗೆ ಸಂಜೆ 7-45 ಗಂಟೆಗೆ ಠಾಣೆಗೆ ವಾಪಸ್ಸಾಗಿ ಸದರಿ ಆರೋಪಿಯ ವಿರುಧ್ಧ ಠಾಣಾ ಮೊ.ಸಂ-109/2019 ಕಲಂ:32-34 ಕೆ.ಇ.ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೆ.

7) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 75/2019 ಕಲಂ. 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:-05-04-2019 ರಂದು ಸಂಜೆ 5-15  ಗಂಟೆಗೆ ಮ.ಎ.ಎಸ್.ಐ ಚಂದ್ರ ಕಳಾ ರವರು ಮಾಲು , ಆಸಾಮಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ, ದಿನಾಂಕ:-05-04-2019 ರಂದು ರಕ್ಷಕ್ ವಾಹನದಲ್ಲಿ  ಗಸ್ತು ಮಾಡುತ್ತಿದ್ದು  ಮದ್ಯಾಹ್ನ ಸುಮಾರು 3-45 ಗಂಟೆಯಲ್ಲಿ ತಾನು  ಮತ್ತು ನರಸಿಂಹಮೂರ್ತಿ ಹೆಚ್.ಸಿ 124 ಮತ್ತು ನಾಗಭೂಷಣ ಹೆಚ್.ಸಿ 126 ರವರೊಂದಿಗೆ ಗಸ್ತು ಮಾಡುತ್ತಿದ್ದಾಗ  ಆರ್.ಎಂ.ಸಿ ಮಾರುಕಟ್ಟೆಯ ಬಳಿ ಇರುವ ದನಗಳ ಸಂತೆಯಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಕುಡಿಯುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾವು ಚೇಳೂರು ವೃತ್ತದಿಂದ ಪಂಚರನ್ನು ಕರೆದುಕೊಂಡು ಮೇಲ್ಕಂಢ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು ಬಿಳಿ ಬ್ಯಾಗ್ ನಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಆ ಪೈಕಿ 1-2  ಟೆಟ್ರಾ ಪಾಕೆಟ್ ಗಳನ್ನು ಹೊರಗಡೆ ಹಾಕಿಕೊಂಡು 3-4 ಪ್ಲಾಸ್ಟಿಕ್ ಗ್ಲಾಸುಗಳನ್ನು 2-3 ವಾಟರ್ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಗ್ಲಾಸಿನಲ್ಲಿ ಹಾಕಿಕೊಂಡು ಕುಡಿಯುತ್ತಿದ್ದು ನಾವುಗಳು ಹೋಗುವಷ್ಟರಲ್ಲಿ ಅಲ್ಲಿದ್ದ 2-3 ಜನರು ಓಡಿ ಹೋದರು. ಸದರಿ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದು ಸದರಿ ವ್ಯಕ್ತಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ತನ್ನ ಕೇಶವರೆಡ್ಡಿ ಬಿನ್ ಬೈರಾರೆಡ್ಡಿ, 34 ವರ್ಷ, ವಕ್ಕಲಿಗರು, ಟೆಂಪೋ ಚಾಲಕ ವಾಸ ಹೆಬ್ಬರಿ ಗ್ರಾಮ ಚಿಂತಾಮಣಿ ತಾಲ್ಲೂಕು   ಎಂದು ತಿಳಿಸಿದ್ದು ಆತನ ಬಳಿ ಇದ್ದ ಚೀಲದಲ್ಲಿ ಪರಿಶೀಲಿಸಲಾಗಿ  90 ML HAYWARDS CHEERS WHISKEY ನ 20 ಟೆಟ್ರಾ ಪ್ಯಾಕೆಟ್ ಗಳು ಇದ್ದು  ಇವು 1 ಲೀಟರ್ 800 ML ನ ಸುಮಾರು 606 ರೂ ಗಳನ್ನು ಬೆಲೆ ಬಾಳುವ ಮಾಲನ್ನು  ಸಂಜೆ 4-00 ರಿಂದ 5-00 ಗಂಟೆಯವರೆಗೆ ಪಂಚನಾಮೆಯ ಮೂಲಕ   ನೀಡಿದ ವರದಿಯನ್ನು  ಪಡೆದು ಠಾಣಾ ಮೊ.ಸಂ 75/2019 ಕಲಂ 15(ಎ) 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

8) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 52/2019 ಕಲಂ. 379 ಐಪಿಸಿ :-

     ದಿನಾಂಕ:05/04/2019 ರಂದು ರಾತ್ರಿ 8-15 ಗಂಟೆಗೆ ಪಿರ್ಯಾದಿದಾರರಾದ ಕೆ.ಜಿ ಶ್ರೀನಿವಾಸ ಬಿನ್ ಗೋವಿಂದಪ್ಪ 38ವರ್ಷ, ಭೋವಿ ಜನಾಂಗ, ವಾಟರ್ ಸಪ್ಲೆ ಕೆಲಸ, ಕುದುರೆಬೇಲ್ಯ ಗೌರಿಬಿದನೂರು ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ದಿನಾಂಕ: 04/04/2019 ರಂದು ಬೆಳಿಗ್ಗೆ 8:00 ಗಂಟೆಯ ಸಮಯದಲ್ಲಿ ಗೌರಿಬಿದನೂರಿನ ಭಾರತಿ ಶೋ ರೂಂ ನಲ್ಲಿ ನನ್ನ ಬಾಬತ್ತು ಕೆ.ಎ40 ಇಸಿ 6636 ಸ್ಪೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಸರ್ವೀಸ್ ಮಾಡಿಸಿ ಕೊಡಲು ಬಿಟ್ಟಿದ್ದು ನಂತರ ಅದೇ ದಿನ ಸಂಜೆ 6:00 ಗಂಟೆಗೆ ಹೋಗಿ ನೋಡಲಾಗಿ ಭಾರತಿ ಶೋ ರೂಂ ಬಳಿ ನನ್ನ ವಾಹನ ಇರುವುದಿಲ್ಲ ಅಲ್ಲಿ ವಿಚಾರಿಸಲಾಗಿ ಅವರು ಸಹ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದ್ದು, ನಾನು ಹಾಗೂ ಅವರ ಶೋರೂಂ ಹುಡುಗರೆಲ್ಲಾ ಹುಡುಕಾಡಿದ್ದು, ನನ್ನ ದ್ವಿಚಕ್ರ ವಾಹನ ಪತ್ತೆಯಾಗಿರುವುದಿಲ್ಲ. ನನ್ನ ದ್ವಿಚಕ್ರ ವಾಹನದ ಬೆಲೆ ಸುಮಾರು 30,000/- ರೂಪಾಯಿಗಳು ಬೆಲೆ ಬಾಳುವುದಾಗಿರುತ್ತದೆ. ಆದ್ದರಿಂದ ಈಗ ತಡವಾಗಿ ದೂರನ್ನು ನೀಡುತ್ತಿದ್ದು, ತಾವುಗಳು ಕಳುವಾಗಿರುವ ನನ್ನ ಬಾಬತ್ತು ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿದ್ದರ ದೂರಿನ ಸಾರಾಂಶವಾಗಿರುತ್ತದೆ.

9) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 74/2019 ಕಲಂ. 87 ಕೆ.ಪಿ. ಆಕ್ಟ್ :-

     ಘನ ನ್ಯಾಯಾಲಯದಲ್ಲಿ  ಕಲಂ 87 ಕೆ,ಪಿ. ಆಕ್ಟ್ ರೀತ್ಯಾ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಅನುಮತಿಯನ್ನು ಪಡೆದುಕೊಂಡ ವರದಿಯ ಸಾರಾಂಶವೇನೆಂದರೆ, ದಿನಾಂಕ 05/04/2019 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿ.ಬಿ -ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀ ವಿ.ಚಿನ್ನಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 05/04/2019 ರಂದು ಗುಡಿಬಂಡೆ ತಾಲ್ಲೂಕಿನಲ್ಲಿ ಸಿಬ್ಬಂದಿಯೊಂದಿಗೆ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿಗಾಗಿ ಗಸ್ತು ಕರ್ತವ್ಯದಲ್ಲಿದ್ದಾಗ, ಸಂಜೆ 4.00 ಗಂಟೆಯಲ್ಲಿ ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಗುಡಿಬಂಡೆ ತಾಲ್ಲೂಕಿನ ಕಮ್ಮಡಿಕೆ ಗ್ರಾಮದ ಕೆರೆಯಂಗಳದಲ್ಲಿ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದವರ ಮೇಲೆ ಪಂಚರೊಂದಿಗೆ ದಾಳಿ ಮಾಡಿದ್ದು, ಧಾಳಿಯಲ್ಲಿ 1) ಪ್ರಕಾಶ್ 2) ವೆಂಕಟೇಶಪ್ಪ 3) ಮಂಜುನಾಥ 4) ಶಂಕರಪ್ಪ 5) ನಾಗರಾಜ 6)ನಾಗೇಶ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ನಂತರ ಸ್ಥಳದಲ್ಲಿ ಪರಿಶೀಲಿಸಿ 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಹಾಗೂ ಪಣಕ್ಕೆ ಇಟ್ಟಿದ್ದ  ಒಟ್ಟು 6710/- ರೂ & ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಕೇಸಿನ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು, 06 ಜನ ಆರೋಪಿಗಳನ್ನು & ಪಂಚನಾಮೆ ಮತ್ತು ಮಾಲುಗಳೊಂದೊಗೆ ಠಾಣೆಯಲ್ಲಿ ಹಾಜರುಪಡಿಸಿ ನೀಡಿದ ವರದಿ ದೂರನ್ನು ಪಡೆದುಕೊಂಡು NCR ದಾಖಲಿಸಿಕೊಂಡು  ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಸಲ್ಲಿಸಿಕೊಂಡ ವರದಿ ಆಗಿರುತ್ತೆ.

10) ಕೆಂಚಾರ್ಲಹಲ್ಲಿ ಪೊಲೀಸ್ ಠಾಣೆ ಮೊ.ಸಂ. 39/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ:06-04-2019 ರಂದು ಸಂಜೆ 5-00 ಕೆಂಚಾರ್ಲಹಳ್ಳಿ  ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಸ್. ವಿಕಾಸ್ ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಆರೋಪಿತರೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ , ತಾನು ಈ ದಿನ ದಿನಾಂಕ;-06-04-2019 ರಂದು ಯುಗಾದಿ ಹಬ್ಬದ ಪ್ರಯುಕ್ತ ಯಾವುದೇ ಜೂಜಾಟ ಕೋಳಿಪಂದ್ಯ ಆಡದಂತೆ ಕರಪತ್ರಗಳನ್ನು ಗ್ರಾಮಗಳಲ್ಲಿ ಹಂಚಿದ್ದರೂ ಸಹ ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಠಾಣಾ ಸರಹದ್ದಿನ ಮಿಟ್ಟಹಳ್ಳಿ ಗ್ರಾಮದ ಚಿನ್ನಪ್ಪರೆಡ್ಡಿ ಬಾಬತ್ತು ಜಮೀನಿನ ಬಳಿ ಕೆರೆ ಏರಿ ಕಾಲುವೆ ಅಂಚಿನ ಹುಣಸೇಮರದ ಕೆಳಗೆ ಹಣವನ್ನು ಪಣವಾಗಿಟ್ಟು ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ತಾನು ಮತ್ತು ಸಿಬ್ಬಂದಿಯವರಾದ ಎ.ಎಸ್.ಐ ಸುಬ್ಬರಾಯಪ್ಪ, ಸಿಹೆಚ್ ಸಿ-161 ಕೃಷ್ಣಪ್ಪ, ಸಿಹೆಚ್ ಸಿ-56 ಅಶ್ವಥಪ್ಪ, ಸಿಪಿಸಿ-101 ಶ್ರೀನಿವಾಸ, ಸಿಪಿಸಿ-110 ಸುರೇಶ, ಸಿಪಿಸಿ-462 ಸಂಪತ್ ಕುಮಾರ್, ಸಿಪಿಸಿ-451 ರಾಮಾಂಜನೇಯ, ಸಿಪಿಸಿ-484 ವಿ.ಎಸ್.ಶಿವಣ್ಣ, ಸಿಪಿಸಿ-499 ರಾಮಕೃಷ್ಣ ಹಾಗೂ ಜೀಪ್ ಚಾಲಕ ಎಹೆಚ್ಸಿ-29 ಮುರಳೀಧರ ರವರೊಂದಿಗೆ ಸಕರ್ಾರಿ ಜೀಪ್ ಸಂಖ್ಯೆ ಕೆಎ 40-ಜಿ-140 ರಲ್ಲಿ ಮಧ್ಯಾಹ್ನ ಸುಮಾರು 3.30 ಗಂಟೆ ಸಮಯದಲ್ಲಿ ಮಿಟ್ಟಹಳ್ಳಿ ಗ್ರಾಮದ ಚಿನ್ನಪ್ಪರೆಡ್ಡಿ ಬಾಬತ್ತು ಜಮೀನಿನ ಬಳಿ ಕೆರೆ ಏರಿ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಕೆರೆ ಏರಿ ಕಾಲುವೆಯ ಅಂಚಿನ ಹುಣಸೇಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣಕ್ಕೆ ಹಾಕಿ ಕೋಳಿ ಪಂಧ್ಯ ಜೂಜಾಟ ಆಡುತ್ತಿದ್ದು, ಸದರಿ ಜೂಜಾಟದ ಮೇಲೆ ದಾಳಿ ಮಾಡಿದಾಗ 1) ಮೇಲೂರಪ್ಪ ಬಿನ್ ಮುನಿನಾರಾಯಣಪ್ಪ, 35 ವರ್ಷ, ನಾಯಕರು, ಟ್ರಾಕ್ಟರ್ ಚಾಲಕ 2) ಪ್ರಬಾಕರ ಬಿನ್ ವೆಂಕಟರೆಡ್ಡಿ, 28 ವರ್ಷ, ವಕ್ಕಲಿಗರು, ವ್ಯವಸಾಯ 3) ಮರಿಯಪ್ಪ ಬಿನ್ ಲೇಟ್ ಅಪ್ಪನ್ನ, 60 ವರ್ಷ, ದೋಬಿ ಜನಾಂಗ, 4) ನಾರಾಯಣಸ್ವಾಮಿ ಬಿನ್ ಮುನಿತೆತಪ್ಪ, 55 ವರ್ಷ, ಕುರುಬರು, 5) ಸುರೇಶ ಬಿನ್ ಹನುಮಯ್ಯ, 43 ವರ್ಷ, ಆದಿ ದ್ರಾವಿಡ, ವ್ಯವಸಾಯ, 6) ಮುನಿಶಾಮಿ ಬಿನ್ ಲೇಟ್ ಮುನಿಯಪ್ಪ, 60 ವರ್ಷ, ಆದಿ ದ್ರಾವಿಡ, ಕೂಲಿ ಕೆಲಸ, ಕ್ರ.ಸಂ 5 ಯರ್ರಪ್ಪಲ್ಲಿ ಗ್ರಾಮ ಉಳಿದವರೆಲ್ಲರೂ ಮಿಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಆಗಿದ್ದು,  ಒಟ್ಟು 06 ಜನ ಆರೋಪಿತರು ಸಿಕ್ಕಿರುತ್ತಾರೆ, ಹಾಗೂ ಸ್ಥಳದಲ್ಲಿದ್ದ ಜೀವಂತವಾಗಿದ್ದ ನಾಲ್ಕು ಕೋಳಿ ಹುಂಜಗಳು ಪಣಕ್ಕೆ ಇಟ್ಟಿದ್ದ 3420/ರೂ ಹಣವನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿ ಸಿಕ್ಕಿಬಿದ್ದ 06 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿರುತ್ತೆ, ವಶಪಡಿಸಿಕೊಂಡ ಮಾಲುಗಳನ್ನು ಮತ್ತು ಸಿಕ್ಕಿಬಿದ್ದ 06 ಜನ ಆರೋಪಿತರನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಆರೋಪಿತರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಮೊ.ಸಂ 39/2019 ಕಲಂ: 87 K.P.Act ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮಕೈಗೊಂಡಿರುತ್ತೆ.

11) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 65/2019 ಕಲಂ. 323.324 ರೆ/ವಿ 34 ಐಪಿಸಿ :-

     ದಿನಾಂಕ 05/04/2019 ರಂದು ಸಂಜೆ 4-00 ಗಂಟೆಗೆ ಹೆಚ್.ಸಿ. 84 ಶ್ರೀವೆಂಕಟೇಶಪ್ಪ ರವರು ಠಾಣೆಗೆ ಹಾಜರಾಗಿ  ಗೌರೀಬಿದನೂರು ಸರ್ಕಾರಿ ಅಸ್ಪತ್ರೆಯಲ್ಲಿ ಪಡೆದ ಗಾಯಾಳುವಿನ ಹೇಳಿಕೆಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ 05/04/2019 ರಂದು ಬೆಳಿಗ್ಗೆ 7-00 ಗಂಟೆಯ ಸಮಯದಲ್ಲಿ ಆರೋಪಿತರು ತಮ್ಮ ಮನೆಯ ಬಳಿ ಬಂದು ವಿನಾಃ ಕಾರಣ ಗಲಾಟೆ ಮಾಡಿ ತನ್ನ ಅಕ್ಕ ಲಕ್ಷ್ಮೀದೇವಿ ರವರಿಗೆ ಕೈಗಳಿಂದ ಹೊಡೆಯುತ್ತಿದ್ದಾಗ ಆಗ ತಾನು ಬಿಡಿಸಲು ಅಡ್ಡ ಹೋದಾಗ ತನಗೆ ಕೈಗಳಿಂದ ಹೊಡೆದು ಅಲ್ಲಿಯೇ ಇದ್ದ ಕುಡುಗೋಲಿನಿಂದ ತಲೆಯ ಡಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದು, ಕಾನೂನಿನ ರೀತ್ಯಾ ಕ್ರಮ ಜರುಗಿಸ ಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

12) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 66/2019 ಕಲಂ. 15(ಎ),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 06/04/2019 ರಂದು ಮದ್ಯಾಹ್ನ 1-45 ಗಂಟೆಗೆ ಪಿರ್ಯಾದಿದಾರರು ಮಾಲು, ಆರೋಪಿ, ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 06/04/2019 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ  ತಾನು ಮತ್ತು ಪಿಸಿ-392 ಬಾಬು ರವರು ಗಸ್ತಿನಲ್ಲಿದ್ದಾಗ ತನಗೆ ಬಂದ ಮಾಹಿತಿ ಏನೇಂದರೆ ಕುಂಟಚಿಕ್ಕನಹಳ್ಳಿ ಗ್ರಾಮದ ಮೈಲಾರಪ್ಪ ಬಿನ್ ನಂಜುಂಡಪ್ಪ ಎಂಬುವರು ಕುಂಟಚಿಕ್ಕನಹಳ್ಳಿ ಗ್ರಾಮದ ಮೋರಿಯ ಬಳಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಬೆಳಿಗ್ಗೆ 11-45 ಗಂಟೆಯ ಸಮಯಕ್ಕೆ ಕುಂಟಚಿಕ್ಕನಹಳ್ಳಿ ಗ್ರಾಮದ ಮೋರಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಮಧ್ಯಸೇವನೆಗೆ ಅವಕಾಶ ಮಾಡಿಕೊಟ್ಟಿದ್ದವನನ್ನು ಹಿಡಿದು ಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಮೈಲಾರಪ್ಪ ಬಿನ್ ನಂಜುಂಡಪ್ಪ, 40 ವರ್ಷ, ಕುರುಬರು, ಕೂಲಿ ಕೆಲಸ, ವಾಸ ಕುಂಟಚಿಕ್ಕನಹಳ್ಳಿ ಗ್ರಾಮ, ತೊಂಡೇಬಾವಿ ಹೋಬಳಿ, ಗೌರೀಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 14 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 3 ಟೆಟ್ರಾ ಪ್ಯಾಕೇಟ್ ಗಳು ಮತ್ತು 2 ಪ್ಲಾಸ್ಟಿಕ್  ಕಪ್ ಗಳನ್ನು ಪಂಚನಾಮೆಯ ಮೂಲಕ ಮದ್ಯಾಹ್ನ 12-00 ಗಂಟೆಯಿಂದ 1-00  ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 424 /- ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಮೈಲಾರಪ್ಪ ವರನ್ನು  ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

13) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 68/2019 ಕಲಂ. 87 ಕೆ.ಪಿ. ಆಕ್ಟ್ ಮತ್ತು ಸೆಕ್ಷನ್ 11(1) PREVENTION OF CRUELTY TO ANIMALS ACT, 1960 :-

     ದಿನಾಂಕ: 06-04-2019 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಸಿ,ಪಿ,ಐ ಶಿಡ್ಲಘಟ್ಟ ವೃತ್ತ ರವರು ಠಾಣೆಗೆ ಹಾಜರಾಗಿ ನೀಡಿದ ಮೆಮೋ ನ ಸಾರಾಂಶವೇನೆಂದರೆ ದಿನಾಂಕ: 06-04-2019 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಕಛೇರಿಯಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ತಾಲ್ಲೂಕು ಬಸವನಪರ್ತಿ ಗ್ರಾಮದ ಹೊರವಲಯದ ಸರ್ಕಾರಿ ಕುಂಟೆಯ ಬಳಿ ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಪಿ.ಎಸ್.ಐ ಶ್ರೀ ಹರೀಶ್ ವಿ. ಸಿಬ್ಬಂದಿಯವರಾದ ಸಿ.ಹೆಚ್.ಸಿ-153 ವೆಂಕಟೇಶ, ಸಿ.ಹೆಚ್.ಸಿ-93 ಶಿವಶಂಕರ್, ಸಿಪಿಸಿ-14 ಗೋವಿಂದಪ್ಪ, ಸಿಪಿಸಿ-444 ನಾರಾಯಣಸ್ವಾಮಿ, ಎ.ಹೆಚ್.ಸಿ-03 ನಾಗೇಶ್ ಮತ್ತು ಎ.ಹೆಚ್.ಸಿ-15 ಗೌರಿಶಂಕರ್ ರವರೊಂದಿಗೆ ಕೆಎ-40-ಜಿ-1666 ಮತ್ತು ಕೆಎ-40 ಜಿ-357 ಸರ್ಕಾರಿ ಜೀಪ್ ಗಳಲ್ಲಿ ಬೆಳಿಗ್ಗೆ 10-15 ಗಂಟೆ ಸಮಯಕ್ಕೆ ವೈ.ಹುಣಸೇನಹಳ್ಳಿ ಗೇಟ್ ಗೆ ಹೋಗಿ ಪಂಚಾಯ್ತಿದಾರರಾದ ಶ್ರೀ. ಮದು ಡಿ.ಇ. ಬಿನ್ ಈರೇಗೌಡ, 23 ವರ್ಷ, ವಕ್ಕಲಿಗರು, ಎಸ್.ಎಲ್.ಕೆ. ಟ್ರಾನ್ಸ್ ಪೋರ್ಟ್ ನಲ್ಲಿ ಸೂಪರ್ ವೈಸರ್ ಕೆಲಸ, ವಾಸ: ದೊಡ್ಡದಾಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಕೇಶವ ಡಿ.ವಿ. ಬಿನ್ ವೆಂಕಟರೆಡ್ಡಿ, 20 ವರ್ಷ, ವಕ್ಕಲಿಗರು, ರಾಯಲ್ ಹಾಲಿಡೇಸ್ ನಲ್ಲಿ ಸೂಪರ್ ವೈಸರ್, ವಾಸ: ದೊಡ್ಡದಾಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು ವೆಂಕಟರೆಡ್ಡಿ ಬಿನ್ ಲೇಟ್ ಮುನಿಯಪ್ಪ, 46 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ದೊಡ್ಡದಾಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರನ್ನು ಬರಮಾಡಿಕೊಂಡು ದಾಳಿಯ ಬಗ್ಗೆ ಮಾಹಿತಿ ನೀಡಿ ಪಂಚಾಯ್ತಿದಾರರು ಹಾಗೂ ಸಿಬ್ಬಂಧಿಯೊಂದಿಗೆ ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಬೆಳಿಗ್ಗೆ 10.30 ಗಂಟೆಗೆ ಬಸವನಪರ್ತಿ ಗ್ರಾಮಕ್ಕೆ ಹೋಗಿ ಬಸವನಪರ್ತಿ ಗ್ರಾಮದಿಂದ ಉತ್ತರಕ್ಕೆ ಇರುವ ಸರ್ಕಾರಿ ಕುಂಟೆಯ ಬಳಿ ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದವರನ್ನು ಮರೆಯಲ್ಲಿ ನಿಂತು ನಿಗಾವಹಿಸಿ ನಂತರ ಅಕ್ರಮವಾಗಿ ಕೋಳಿ ಪದ್ಯ ಜೂಜಾಟವಾಡುತ್ತಿದ್ದರ ಮೇಲೆ ದಾಳಿ ಮಾಡಿದ್ದು ಆ ಪೈಕಿ 4 ಜನ ಆಸಾಮಿಗಳನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಮುನಿಸ್ವಾಚಾರಿ ಬಿನ್ ಲೇಟ್ ವೀರಾಚಾರಿ, 50 ವರ್ಷ, ಆಚಾರಿ ಜನಾಂಗ, ಕುಲಿಮೆ ಕೆಲಸ, ವಾಸ: ವೈ. ಹುಣಸೇನಹಳ್ಳಿ ಗೇಟ್, ಶಿಡ್ಲಘಟ್ಟ ತಾಲ್ಲೂಕು, ಸ್ವಂತ ಸ್ಥಳ: ಬೈಬಂದ ಗ್ರಾಮ, ಇರಗಮ್ ಪಲ್ಲಿ ಬಳಿ, ಚಿಂತಾಮಣಿ ತಾಲ್ಲೂಕು, 2) ವೆಂಕಟೇಶಪ್ಪ ಬಿನ್ ನಾರಾಯಣಪ್ಪ, 55 ವರ್ಷ, ಅಗಸರು, ಜಿರಾಯ್ತಿ, ವಾಸ: ಕುಂದಲಗುರ್ಕಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 3) ತಮ್ಮಣ್ಣ ಬಿನ್ ವೆಂಕಟರಾಯಪ್ಪ, 45 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ದೊಡ್ಡದಾಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು 4) ನರಸಿಂಹಪ್ಪ ಬಿನ್ ದೊಡ್ಡಣ್ಣ, 50 ವರ್ಷ, ಭೋವಿ ಜನಾಂಗ, ಕಲ್ಲು ಕೆಲಸ, ವಾಸ: ಕುಪ್ಪೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾರೆ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ ಆಸಾಮಿಗಳನ್ನು, ಕೋಳಿ ಪಂದ್ಯಕ್ಕೆ ಬಳಸಲು ತಂದಿದ್ದ ನಾಲ್ಕು ಜೀವಂತ ಕೋಳಿಗಳನ್ನು ಮತ್ತು ಪಣಕ್ಕಾಗಿ ಇಟ್ಟಿದ್ದ ನಗದು ಹಣ 2980-00 ರೂಗಳನ್ನು ಪಂಚಾಯ್ತಿದಾರರ ಸಮಕ್ಷಮ ಬೆಳಿಗ್ಗೆ 10.45 ಗಂಟೆಯಿಂದ ಬೆಳಿಗ್ಗೆ 11-45 ಗಂಟೆಯವರೆಗೆ ಮಹಜರ್ ಮೂಲಕ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು, 4 ಜನ ಆರೋಪಿಗಳನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಗಳೊಂದಿಗೆ ಮದ್ಯಾಹ್ನ 12-30 ಗಂಟೆಗೆ ಠಾಣೆಗೆ ವಾಪಸ್ ಬಂದು ಪಿ.ಎಸ್.ಐ ರವರಿಗೆ ಮಹಜರ್, ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ನೀಡಿದ್ದು ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ವರದಿ ಮಾಡಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ. 68/2019 ಕಲಂ 87 ಕೆ.ಪಿ ಆಕ್ಟ್ ರೆ/ವಿ 11 Sub (1) Prevention of Animals Cruealty act-1960 ರೀತ್ಯಾ ಕೇಸು ದಾಖಲಿಸಿರುತ್ತೇನೆ.

14) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 69/019 ಕಲಂ. 87 ಕೆ.ಪಿ. ಆಕ್ಟ್ :-

     ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿ. ಹರೀಶ್ ಆದ ನಾನು ಘನ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ: 06-04-2019 ರಂದು 3.00 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದಾಗ ಯಾರೋ ಸಾರ್ವಜನಿಕರಿಂದ ಕೊತ್ತನೂರು ಗ್ರಾಮದ ಸರ್ಕಾರಿ ಕೆರೆಯ ಅಂಗಳದ ಆಲಪ್ಪನವರ ಜಮೀನಿನ ಪಕ್ಕದ ಸರ್ಕಾರಿ ಕೆರೆಯ ಅಂಗಳದಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರಾದ ಸಿ.ಹೆಚ್.ಸಿ-153 ವೆಂಕಟೇಶ, ಸಿ.ಹೆಚ್.ಸಿ-93 ಶಿವಶಂಕರ್, ಸಿಪಿಸಿ-14 ಗೋವಿಂದ, ಎ.ಹೆಚ್.ಸಿ-15 ಗೌರಿಶಂಕರ್ ರವರೊಂದಿಗೆ ಮದ್ಯಾಹ್ನ 3.30 ಗಂಟೆಗೆ ಕೊತ್ತನೂರು ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರಾದ ಶ್ರೀ ವಾಸುದೇವ ಡಿ. ಬಿನ್ ದೇವರಾಜ್ ಕೆ.ಪಿ., 30 ವರ್ಷ, ಪ.ಜಾತಿ, ಜಿರಾಯ್ತಿ, ವಾಸ: ಕೊತ್ತನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಮಂಜುನಾಥ ಬಿನ್ ಚಿಕ್ಕಮಾದಪ್ಪ, 30 ವರ್ಷ, ಜಿರಾಯ್ತಿ, ನಾಯಕರು, ವಾಸ: ಕೊತ್ತನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು ಚಂದ್ರಣ್ಣ @ ಚಂದ್ರು ಬಿನ್ ಹನುಮಪ್ಪ, 34 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಕೊತ್ತನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರುಗಳನ್ನು ಬರಮಾಡಿಕೊಂಡು ನಂ. ಕೆಎ-40-ಜಿ-357 ಸರ್ಕಾರಿ ಜೀಪು ಮತ್ತು ದ್ವಿಚಕ್ರವಾಹನಗಳಲ್ಲಿ ಸಂಜೆ 3.40 ಗಂಟೆಗೆ ಕೊತ್ತನೂರು ಗ್ರಾಮದ ಸರ್ಕಾರಿ ಕೆರೆಯ ಅಂಗಳದಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಅಡಗಿಕೊಂಡು ನೋಡಿದ್ದು 2-3 ಜನ ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದು ಆ ಪೈಕಿ ಒಬ್ಬನು ಅಂದರ್ 200 ಎಂತಲೂ ಮತ್ತೊಬ್ಬನು ಬಾಹರ್ 200 ಎಂತ ಕೂಗುತ್ತ ಅಂದರ್ ಬಾಹರ್ ಇಸ್ಪೀಟು ಜೂಜಾಟವಾಡುತ್ತಿದ್ದವರ ಮೇಲೆ ದಾಳಿಮಾಡಿದ್ದು ಆ ಪೈಕಿ ಮೂರು ಜನ ಆಸಾಮಿಗಳನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಸಂತೋಷ್ ಕುಮಾರ್ ಬಿನ್ ಚಂದ್ರಶೇಖರರೆಡ್ಡಿ, 30 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ: ಕೊತ್ತನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 2) ಮದು ಬಿನ್ ದೇವರಾಜ, 25 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಕೊತ್ತನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು 3) ನಾರಾಯಣಸ್ವಾಮಿ ಬಿನ್ ನರಸಿಂಹಪ್ಪ, 26 ವರ್ಷ, ಪ.ಜಾತಿ(ಎ.ಕೆ.), ಕೂಲಿ ಕೆಲಸ, ವಾಸ: ಕಾಚಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾರೆ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಮೂರು ಜನ ಆಸಾಮಿಗಳನ್ನು ಮತ್ತು ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆ, ಒಂದು ನೀಲಿ ಬಣ್ಣದ ಪ್ಲಾಸ್ಟಿಕ್  ಪೇಪರ್ ಮತ್ತು ಪಣಕ್ಕಾಗಿ ಇಟ್ಟಿದ್ದ 2040-00 ರೂ ನಗದು ಹಣವನ್ನು ಪಂಚಾಯ್ತಿದಾರರ ಸಮಕ್ಷಮ ಮದ್ಯಾಹ್ನ 3.45 ಗಂಟೆಯಿಂದ ಸಂಜೆ 4.45 ಗಂಟೆಯವರೆಗೆ ಮಹಜರ್ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು, ಮೂರು ಜನ ಆರೋಪಿಗಳನ್ನು  ವಶಕ್ಕೆ ಪಡೆದು ಮಾಲು ಮತ್ತು ಆರೋಪಿಗಳೊಂದಿಗೆ ಸಂಜೆ 5.30 ಗಂಟೆಗೆ ಠಾಣೆಗೆ ವಾಪಸ್ ಬಂದು ಠಾಣಾ ಮೊ.ಸಂ. 69/2019 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿರುತ್ತೇನೆ.

15) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 43/2019 ಕಲಂ. 78(ಎ)(4),87 ಕೆ.ಪಿ. ಆಕ್ಟ್ :-

     ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ವಿ. ಅವಿನಾಶ್ ಪಿ.ಎಸ್.ಐ. (ಕಾ & ಸು) ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಈ ದಿನ ದಿನಾಂಕ:05-04-2019 ರಂದು ರಾತ್ರಿ 8-00  ಗಂಟೆ ಸಮಯದಲ್ಲಿ ನಾನು, ಪಿ.ಸಿ. 127 ಕೃಷ್ಣಪ್ಪ, ಪಿ.ಸಿ.129 ರಾಮಚಂದ್ರ ಮತ್ತು ಪಿ.ಸಿ.134 ಧನಂಜಯ್ ರವರೊಂದಿಗೆ ಶಿಡ್ಲಘಟ್ಟ ನಗರದ ಕೆ.ಕೆ.ಪೇಟೆ, ಕೋಟೆ ಸರ್ಕಲ್, ಅಶೋಕ ರಸ್ತೆ ಕಡೆಗಳಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಶಿಡ್ಲಘಟ್ಟ ನಗರದ ಕಾಂಗ್ರೇಸ್ ಭವನದ ಪಕ್ಕದಲ್ಲಿ ಯಾರೋ ಕೆಲವು ಜನ ಆಸಾಮಿಗಳು ಗುಂಪು ಸೇರಿಕೊಂಡು ಈ ದಿನ ಕಲ್ಕತ್ತ ನೈಟ್ ರೈಡರ್ಸ್ ಮತ್ತು ಆರ್.ಸಿ.ಬಿ ಬೆಂಗಳೂರು ತಂಡಗಳ ಐ.ಪಿ.ಎಲ್ ಕ್ರಿಕೆಟ್ ಆಟ ನಡೆಯುತ್ತಿರುವ ಪಂದ್ಯಕ್ಕೆ ಸಂಬಂದಪಟ್ಟಂತೆ ಎರಡು ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಒಬ್ಬರಿಗೊಬ್ಬರು ಬೆಟ್ಟಿಂಗ್ ಹಣವನ್ನು ಪಣವಾಗಿ ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಬಂದಿದ್ದು, ಸದರಿ ಸ್ಥಳದ ಮೇಲೆ ದಾಳಿ ಮಾಡಿ ಕ್ರಮ ಜರುಗಿಸಲು ಪಂಚರುಗಳಾದ 1) ಪ್ರಕಾಶ್ ಬಿನ್ ಲೇಟ್ ನಾರೆಪ್ಪ, 49 ವರ್ಷ, ಪದ್ಮಸಾಲಿ ಜನಾಂಗ, ರೇಷ್ಮೆ ಕೆಲಸ ವಾಸ: ದೇಶದ ಪೇಟೆ, ಶಿಡ್ಲಘಟ್ಟ 2) ಎಂ.ಎಸ್.ಇನಾಯತ್ ಉಲ್ಲಾ ಬಿನ್ ಲೇಟ್ ಅಬ್ದುಲ್ ಮಜೀದ್ ಸಾಬ್, 54 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ವಾಸ: 13ನೇ ವಾರ್ಡು, ಹಳೆ ಆಸ್ಪತ್ರೆ ಇಂಭಾಗ, ಶಿಡ್ಲಘಟ್ಟ ರವರನ್ನು ಪಂಚರಾಗಿ ಸಹಕರಿಸಲು ಕರೆದುಕೊಂಡು ಸಿಬ್ಬಂದಿಯವರೊಂದಿಗೆ 8-15 ಗಂಟೆಗೆ ಕಾಂಗ್ರೇಸ್ ಭವನದ ಪಕ್ಕದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ದಾಳಿ ಮಾಡಿದಾಗ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1] ಸಿ.ಎಂ.ದೇವರಾಜ ಬಿನ್ ಲೇಟ್ ಮುನಿಯಪ್ಪ, 39ವರ್ಷ, ಪ.ಜಾತಿ, ಜಿರಾಯ್ತಿ, ಶಿಲೇಮಾಕಲಹಳ್ಳಿ, ಶಿಡ್ಲಘಟ್ಟ ತಾಲ್ಲೂಕು 2) ಎ. ಆನಂದ ಬಿನ್ ಲೇಟ್ ಅಂಕಪ್ಪ, 48 ವರ್ಷ, ಕುರುಬರು, ಜಿರಾಯ್ತಿ, ಬೈಪಾಸ್ ರಸ್ತೆ, ಶಿಡ್ಲಘಟ್ಟ ಪೋನ್ ನಂ.9141949238 ಎಂದು ತಿಳಿಸಿದ್ದು, ಮತ್ತೊಬ್ಬ ಆಸಾಮಿ ಓಡಿ ಹೋಗಿದ್ದು ಮೇಲ್ಕಂಡ ಆಸಾಮಿಗಳಿಗೆ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ಬಗ್ಗೆ ವಿಚಾರ ಮಾಡಲಾಗಿ ಸದರಿ ಆಸಾಮಿಗಳು ಈ ದಿನ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಲ್ಕತ್ತ ನೈಟ್ ರೈಡರ್ಸ್ ಮತ್ತು ಆರ್.ಸಿ.ಬಿ ಬೆಂಗಳೂರು ತಂಡಗಳ ಕ್ರಿಕೆಟ್ ಪಂದ್ಯಕ್ಕೆ ಸಂಬಂದಪಟ್ಟಂತೆ ಓಡಿ ಹೋದ ಮುನಿಯಪ್ಪ ಮುನಿಸಿಪಾಲಿಟಿಯಲ್ಲಿ ಕೆಲಸ ರವರ ಮೊಬೈಲ್ ಪೋನ್ ನಲ್ಲಿ ಯಾವ ತಂಡ ಗೆಲ್ಲುತ್ತದೆ ಯಾವ ತಂಡ ಸೋಲುತ್ತದೆ ಎಂದು ಮಾತನಾಡುತ್ತಾ ಒಬ್ಬರಿಗೊಬ್ಬರು ಹಣವನ್ನು ಪಣವಾಗಿ ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಠದ ಜೂಜಾಟ ಆಡುತ್ತಿರುವುದಾಗಿ ತಿಳಿಸಿರುತ್ತಾರೆ. ಇವರುಗಳ ಬಳಿ ಪಣಕ್ಕೆ ಕಟ್ಟಲು ತಂದಿದ್ದ ಒಟ್ಟು 15,600/-ರೂ ನಗದು ಹಣ, ಆನಂದ ರವರ ಬಳಿ ಇದ್ದ ಒಂದು ಕಾರ್ಬನ್ ಕೆ.9 ಕಂಪನಿಯ ಮೊಬೈಲ್ ಪೋನ್ ರಾತ್ರಿ 8-30 ರಿಂದ 9-00 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಆದ್ದರಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವ ಮೇಲೆ ಕಾನೂನು ಕ್ರಮ ಜರುಗಿಸುವ ಸಲುವಾಗಿ ಆರೋಪಿಗಳು ಮತ್ತು ಅಮಾನತ್ತು ಪಡಿಸಿದ ಮಾಲುಗಳ ಸಮೇತ ಠಾಣೆಗೆ ವಾಪಸ್ಸು ಬಂದು ರಾತ್ರಿ 9-20 ಗಂಟೆಗೆ ಠಾಣಾ ಮೊ.ಸಂ.43/2019 ಕಲಂ.78(ಎ) ಕ್ಲಾಸ್(6), 87 ಕೆ.ಪಿ. ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತೆ.

16) ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 44/2019 ಕಲಂ. 279,337,304(ಎ) ಐಪಿಸಿ :-

     ದಿನಾಂಕ.06.04.2019 ರಂದು ಬೆಳಿಗ್ಗೆ 10.15 ಗಂಟೆಗೆ ಪಿರ್ಯಾದಿ ಅಕ್ರಂಪಾಷ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.06.04.2019 ರಂದು ಬೆಳಿಗ್ಗೆ ಸುಮಾರು 9-20 ಗಂಟೆಯಲ್ಲಿ ನಾನು ಮನೆಯಲ್ಲಿದ್ದಾಗ 1ನೇ ಕಾಮರ್ಿಕನಗರ ಪ್ರಥಮ ದಜರ್ೆ ಕಾಲೇಜು ಮುಂಭಾಗದ ವಾಸಿ ಅಮ್ಜದ್ ಬಿನ್ ಹುಮಾಯಾನ್ ಖಾನ್ ರವರು ನನಗೆ ಪೋನ್ ಮಾಡಿ ಈಗ ನಾನು ಮತ್ತು ಯೂನಸ್ ಬಿನ್ ಮಹಮದ್ಶಾನೂ, 2ನೇ ಕಾಮರ್ಿಕನಗರ ರವರು ದಿಬ್ಬೂರಹಳ್ಳಿ ರಸ್ತೆಯ ಅಮೀರ್ ಬಾಬಾ ದಗರ್ಾ ಬಳಿ ಸಪ್ತಗಿರಿ ಹೋಟೆಲ್ ಮುಂದೆ ಇದ್ದಾಗ ನಿಮ್ಮ ಅಕ್ಕನ ಗಂಡ ಅಮಾನುಲ್ಲಾ ಸುಮಾರು 60 ವರ್ಷ, ಮತ್ತು ನಿಮ್ಮ ಅಕ್ಕ ಶ್ರೀಮತಿ ಫರೀದ್ ಉನ್ನಿಸಾ ಸುಮಾರು 50 ವರ್ಷ ರವರು 2ನೇ ಕಾಮರ್ಿಕನಗರ ಕಡೆಯಿಂದ ಅವರ ದ್ವಿಚಕ್ರ ವಾಹನದಲ್ಲಿ ಶಿಡ್ಲಘಟ್ಟ ನಗರಕ್ಕೆ ಹೋಗಲು ಚಾಲನೆ ಮಾಡಿಕೊಂಡು ದಿಬ್ಬೂರಹಳ್ಳಿ ರಸ್ತೆಯ ಮುಖ್ಯ ರಸ್ತೆಗೆ ಬಂದಾಗ ಅಬ್ಲೂಡು ಕಡೆಯಿಂದ ಶಿಡ್ಲಘಟ್ಟ ನಗರಕ್ಕೆ ಬರುತ್ತಿದ್ದ ಎಸ್.ಎಂ.ಬಿ.ಎಸ್ ಬೋರ್ ಲಾರಿ ಆಕ್ಸಿಡೆಂಟ್ ಮಾಡಿದ್ದು, ನಿಮ್ಮ ಭಾವ ಅಮಾನುಲ್ಲಾ ಲಾರಿ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದು, ನಿಮ್ಮ ಅಕ್ಕ ಗಾಯಗೊಂಡಿದ್ದಾರೆ ಬಾ ಎಂದು ತಿಳಿಸಿದಾಗ ಕೂಡಲೇ ನಾನು ನನ್ನ ಸ್ನೇಹಿತ ಅನ್ಸರ್ ಖಾನ್ ಬಿನ್ ಮಜೀದ್ ಖಾನ್, ಜೋಗುಪೇಟೆ, ಶಿಡ್ಲಘಟ್ಟ ಟೌನ್ ರವರು ಸ್ಥಳಕ್ಕೆ ಬಂದು ನೋಡಿದಾಗ ನಮ್ಮ ಭಾವ ಅಮಾನುಲ್ಲಾ ಲಾರಿಯ ಹಿಂಭಾಗದ ಎಡಭಾಗದ ಚಕ್ರಕ್ಕೆ ಸಿಕ್ಕಿಹಾಕಿಕೊಂಡು ಟಾರ್ ರಸ್ತೆಯಲ್ಲಿ ಎಳೆದುಕೊಂಡು ಬಂದು ಮೃತ ದೇಹ ಎಲ್ಲಾ ನುಜ್ಜು ನುಜ್ಜಾಗಿ ಮೃತ ಪಟ್ಟಿದ್ದರು. ನಮ್ಮ ಅಕ್ಕ ಬಲಕೈ ಭುಜಕ್ಕೆ ಮೈಗೆ ರಕ್ತಗಾಯಗಳಾಗಿತ್ತು. ರಸ್ತೆಯಲ್ಲಿ ಅಪಘಾತ ಪಡಿಸಿದ ಬೋರ್ ಲಾರಿ ನಿಂತಿದ್ದು ಅದರ ನಂಬರ್ KA.40.M..3797 SMBS ಲಾರಿ ಆಗಿರುತ್ತೆ. ನಮ್ಮ ಭಾವ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ನಂಬರ್.KA.53.EQ.0251 ಹೊಂಡಾ ಲಿವೋ ಕಂಪನಿಯ ದ್ವಿಚಕ್ರ ವಾಹನ ರಸ್ತೆ ಬದಿ ಬಿದ್ದಿರುತ್ತೆ. ಅಲ್ಲಿದ್ದ ಅಮ್ಜದ್ ಮತ್ತು ಯೂನಸ್ ರವರನ್ನು ವಿಚಾರ ಮಾಡಿದಾಗ ನಮ್ಮ ಅಕ್ಕ ಮತ್ತು ಬಾವ ಅವರ ಮನೆಯಿಂದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಚಿಲ್ಲರೆ ಅಂಗಡಿಯಲ್ಲಿ ಮನೆ ಸಾಮಾನುಗಳನ್ನು ತೆಗೆದುಕೊಂಡು ಬರಲು ಅವರ ದ್ವಿಚಕ್ರ ವಾಹನದಲ್ಲಿ 2ನೇ ಕಾರ್ಮಿಕ ನಗರ ರಸ್ತೆಯಿಂದ ದಿಬ್ಬೂರಹಳ್ಳಿ ಮುಖ್ಯ ರಸ್ತೆಗೆ ಬರುವಾಗ ಬೆಳಿಗ್ಗೆ ಸುಮಾರು 9-15 ಗಂಟೆಯಲ್ಲಿ ಅಬ್ಲೂಡು ಕಡೆಯಿಂದ ಶಿಡ್ಲಘಟ್ಟ ನಗರಕ್ಕೆ ಬರುತ್ತಿದ್ದ ಮೇಲ್ಕಂಡ ಬೋರ್ ಲಾರಿಯನ್ನು ಅದರ ಚಾಲಕ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಭಾವನ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ ಪರಿಣಾಮ ನಮ್ಮ ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ನಮ್ಮ ಅಕ್ಕ ಪಕ್ಕಕ್ಕೆ ಬಿದ್ದು ಹೋಗಿದ್ದು, ನಮ್ಮ ಭಾವ ಬೋರ್ ಲಾರಿ ಹಿಂಭಾಗದ ಎಡ ಭಾಗದ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆಂತ ತಿಳಿಸಿದರು. ಗಾಯಗೊಂಡಿದ್ದ ನಮ್ಮ ಅಕ್ಕನನ್ನು ಕೂಡಲೇ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ  ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಂಗಳೂರುಗೆ ಕಳುಹಿಸಿರುತ್ತೇವೆ. ಮೃತ ಪಟ್ಟಿರುವ ನಮ್ಮ ಭಾವನ ಮೃತ ದೇಹವನ್ನು ಶಿಡ್ಲಘಟ್ಟ ಸಕರ್ಾರಿ ಆಸ್ಪತ್ರೆಗೆ ಸ್ಥಳಾಂತರಿಸಿರುತ್ತೇವೆ. ಲಾರಿ ಚಾಲಕ ಅಪಘಾತ ಪಡಿಸಿದ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ. ಆದ್ದರಿಂದ ನಮ್ಮ ಭಾವ ಮತ್ತು ಅಕ್ಕನ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿ ನಮ್ಮ ಭಾವನ ಸಾವಿಗೆ ಕಾರಣರಾದ ಬೋರ್ ಲಾರಿ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುವುದಾಗಿರುತ್ತೆ.