ದಿನಾಂಕ : 06/03/2019ರ ಅಪರಾಧ ಪ್ರಕರಣಗಳು

1) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.38/2019 ಕಲಂ. 403-406-409-420-417 ಐ.ಪಿ.ಸಿ:-

     ದಿನಾಂಕ:05.03.2019 ರಂದು ಸಂಜೆ 05-30 ಗಂಟೆಗೆ ನ್ಯಾಯಾಲಯದ ಮುಖ್ಯ ಪೇದೆ -223 ವಿಶ್ವನಾಥ್ ರವರು ನ್ಯಾಯಾಲಯದಿಂದ ತಂದು ಹಾಜರುಪಡಿಸಿದ ಸಾದರದ ದೂರಿನ ಸಾರಾಂಶವೇನೆಂದರೆ  ಬಾಗೇಪಲ್ಲಿ ತಾಲ್ಲೂಕು ಏಟಿಗಡ್ಡಪಲ್ಲಿ ಗ್ರಾಮದ  ಸರ್ವೆ ನಂ 35/15 ರ ಜಮೀನಿನಲ್ಲಿ ಜೈಕಿಸಾನ್ ಜಂಕ್ಷನ್ ಕೇರ್ ಆಫ್ ಜುವಾರಿ ಆಗ್ರೋ ಕೆಮಿಕಲ್ಸ್ ಲಿಮಿಟೆಡ್ ನ ಸಹ ಭಾಗಿತ್ವದ ಸಂಸ್ಥೆ ಇದ್ದು, ಸದರಿ ಸಂಸ್ಥೆಯ ಮೇಲುಸ್ತುವಾರಿ ಮತ್ತು ವ್ಯವಹಾರಿಕ ಚಟುವಟಿಕೆಗಳ ಜವಾಬ್ದಾರಿಯನ್ನು ಸದರಿ ಸಂಸ್ಥೆಯ ಉದ್ಯೋಗಿ ಸಂಖ್ಯೆ 203312 ಯ  ಕೆ.ಎನ್. ನಾರಾಯಣಸ್ವಾಮಿ ಬಿನ್ ನಾನೆಪ್ಪ 38ವರ್ಷ, ಕೊತ್ತಗಲ್ಲು ಗ್ರಾಮ ಬಾಗೇಪಲ್ಲಿ ತಾಲ್ಲೂಕು  ರವರಿಗೆ ವಹಿಸಿಕೊಟ್ಟಿದ್ದು, ಸದರಿಯವರು ಸಂಸ್ಥೆಗೆ ಸೇರಿದ ರೈತರಿಗೆ ಬೇಕಾಗುವ ವಿವಿದ ಉತ್ಪನ್ನಗಳನ್ನು ಸಂಸ್ಥೆಯ ಪರವಾಗಿ ರೈತರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸಂಸ್ಥೆಗೆ ಪಾವತಿಸುತ್ತಿದ್ದು, ಅದರಂತೆ ದಿನಾಂಕ:27/11/2018 ರಂದು ವಾರ್ಷಿಕ ಲೆಕ್ಕಪರಿಶೋಧನೆಯ ಸಮಯದಲ್ಲಿ ಕೆ.ಎನ್. ನಾರಾಯಣಸ್ವಾಮಿ ರವರು ಸಂಸ್ಥೆಗೆ 4,54,374/- ರೂಗಳನ್ನು ಸಂಸ್ಥೆಗೆ ಪಾವತಿಸದೆ ಮೋಸ ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಕಂಪನಿಗೆ ಲೆಕ್ಕಪರಿಶೋಧನೆಯ ಸಮಯದಲ್ಲಿ ಸಂಸ್ಥೆಗೆ ಪಾವತಿಸದೆ ತನ್ನ ಸ್ವಂತಕ್ಕೆ ಬಳಸಿಕೊಂಡಿರುವುದಾಗಿ ತಿಳಿಸಿ ಸದರಿ 4,54,374/- ರೂಗಳನ್ನು ಇನ್ನು 3 ದಿನಗಳ ಒಳಗೆ ಸಂಸ್ಥೆಗೆ ಪಾವತಿಸುವುದಾಗಿ ತಿಳಿಸಿ ಸಂಸ್ಥೆಗೆ ಮುಚ್ಚಳಿಕೆಯನ್ನು ಬರೆದುಕೊಟ್ಟಿದ್ದು, ಇದುವರೆವಿಗೂ ಪಾವತಿಸದೆ ಮೋಸ ಮಾಡುತ್ತಿರುವುದರಿಂದ  ಸದರಿಯವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಸಾದರದ ದೂರು.

2) ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.39/2019 ಕಲಂ. 279-304(ಎ) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:06/03/2019 ರಂದು ಪಿರ್ಯಾದಿದಾರರಾದ ಶ್ರೀ ರಾಜ್ ಕುಮಾರ್ ಬಿನ್ ಅಶ್ವತ್ಥಪ್ಪ ರವರು ಠಾಣೆಗೆ ಹಾಜರಾಗಿ ನೀಢಿದ ದೂರಿನ ಸಾರಾಂಶವೇನೆಂದರೆ ನಮ್ಮ ಅತ್ತೆಯವರಾದ ಶ್ರೀಮತಿ ಸರೋಜಮ್ಮ ಕೊಂ ಲೇಟ್ ಗೋಪಾಲಪ್ಪ, 50ವರ್ಷ ರವರು ಕೊತ್ತಕೋಟೆ ಗ್ರಾಮದಲ್ಲಿ ವಾಸವಾಗಿದ್ದು, ದಿನಾಂಕ:02/03/2019 ರಂದು ನಮ್ಮ ಮನೆಗೆ ಶಿವರಾತ್ರಿ ಹಬ್ಬಕ್ಕೆ ಬಂದಿದ್ದು, ಹೀಗಿರುವಾಗ ದಿನಾಂಕ:04/03/2019 ರಂದು ಸಂಜೆ 04-30 ಗಂಟೆಗೆ ನಮ್ಮ ಮನೆಯಿಂದ ಕೋಡಿಕೊಂಡದಲ್ಲಿರುವ ಈಶ್ವರ ದೇವಸ್ಥಾನಕ್ಕೆ ಹೋಗಲು ನಡೆದುಕೊಂಡು ಜಿಲಾಜಿರ್ಲ ಕೋಡಿಕೊಂಡ ರಸ್ತೆಯ ಯಿಸೂಬ್ ಸಾಬ್ ರವರ ಬಾವಿಯ ಬಳಿ ಹೋಗುತ್ತಿರುವಾಗ ಹಿಂಭಾಗದಿಂದ ಬಂದ ಅಪರಿಚಿತ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಅತ್ತೆಯವರಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ನಮ್ಮ ಅತ್ತೆಯವರು ರಸ್ತೆಯ ಮೇಲೆ ಬಿದ್ದು ನಮ್ಮ ಅತ್ತೆಯವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಮೈಮೇಲೆ ತರಚಿದ ಗಾಯಗಳಾಗಿದ್ದು, ದ್ವಿಚಕ್ರ ವಾಹನ ಸವಾರ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು, ಸದರಿ ವಿಚಾರವನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ನಾನು ತಕ್ಷಣ ಸ್ಥಳಕ್ಕೆ ಹೋಗಿ ನಮ್ಮ ಅತ್ತೆಯವರನ್ನು ನನ್ನ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ  ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮತ್ತೆ ವಾಪಾಸ್ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ದಿನಾಂಕ:05/03/2019 ರಂದು ರಾತ್ರಿ ಸುಮಾರು 8-00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ನಮ್ಮ ಅತ್ತೆಯವರನ್ನು ವಿವಿಧ ಆಸ್ಪತ್ರೆಗಳಲ್ಲಿ ಕರೆದುಕೊಂಡು ಚಿಕಿತ್ಸೆ ಕೊಡಿಸುತ್ತಿದ್ದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ನಮ್ಮ ಅತ್ತೆಯವರಿಗೆ ಅಪಘಾತ ಪಡಿಸಿರುವ ದ್ವಿಚಕ್ರ ವಾಹನ  ಮತ್ತು ಸವಾರನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

3) ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.07/2019 ಕಲಂ. 32-34 KARNATAKA EXCISE ACT:-

     ದಿನಾಂಕ 06/03/2019 ರಮದು ಸಂಜೆ 6.40 ಗಂಟೆಗೆ  ಎ.ಎಸ್.ಐ ಶ್ರೀ ನಾರಾಯಣಪ್ಪ ಎಂ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 06/03/2019 ರಂದು ಸಂಜೆ 4.00 ಗಂಟೆಯ ಸಮಯದಲ್ಲಿ ಠಾಣಾ ಸರಹದ್ದಿನಲ್ಲಿ ಗ್ರಾಮ ಗಸ್ತಿನ ಸಲುವಾಗಿ ಹೋಗಿದ್ದು ಬಟ್ಲಹಳ್ಳಿ, ಎಂ.ಗೊಲ್ಲಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ ಯಾರೋ ಒಬ್ಬ ಬಾತ್ಮಿದಾರರು ದೂರವಾಣಿ ಮುಖಾಂತರ ಕರೆ ಮಾಡಿ ವೆಂಕಟರಾಯನಕೋಟೆ ಗ್ರಾಮದಲ್ಲಿ ರವಣ ಎಂಬುವವರ ಅಂಗಡಿಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು ಅದರಂತೆ ಜೊತೆಯಲ್ಲಿದ್ದ ಠಾಣಾ ಸಿಬ್ಬಂದಿ ಪಿ.ಸಿ-374 ವಿಜಯ್ ಕುಮಾರ್ ರವರೊಂದಿಗೆ ಸಂಜೆ 4.30 ಗಂಟೆಗೆ ವೆಂಕಟರಾಯನ ಕೋಟೆ ಗ್ರಾಮಕ್ಕೆ ಬೇಟಿ ನೀಡಿ ಸ್ಥಳದಲ್ಲಿದ್ದ ಪಂಚಾಯ್ತಿದಾರರನ್ನು ಬರ ಮಾಡಿಕೊಂಡು ರವಣರವರ ಅಂಗಡಿಯ ಮುಂದೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು ಅದರ ಮೇಲೆ ದಾಳಿ ಮಾಡಲು ಪಂಚರಾಗಿ ಸಹಕರಿಸಲು ಕೋರಿದ್ದು ಅವರು ಒಪ್ಪಿಕೊಂಡಿರುತ್ತಾರೆ. ನಂತರ ವೆಂಕಟರಾಯನಕೋಟೆ ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ರವಣ ಬಿನ್ ವೆಂಕಟಸ್ವಾಮಿರವರ ಚಿಲ್ಲರೆ ಅಂಗಡಿಯ ಬಳಿ ಹೋಗಲಾಗಿ ಅಂಗಡಿಯ ಮಾಲೀಕ ರವಣರವರು ಅಂಗಡಿಯಲ್ಲಿದ್ದು ಸದರಿ ಆಸಾಮಿಯನ್ನು ಎಲ್ಲಿಯೂ ಹೋಗದಂತೆ ಸೂಚಿಸಿ ನಂತರ ಅಂಗಡಿಯ ಮುಂಭಾಗದಲ್ಲಿದ್ದ 2 ರಟ್ಟಿನ ಬಾಕ್ಸ್ ಗಳಲ್ಲಿ ಮದ್ಯದ ಬಾಟಲ್ ಮತ್ತು ಪಾಕೆಟ್ ಗಳು ಇದ್ದು, ಇವುಗಳ ಬಗ್ಗೆ ರವಣರವರನ್ನು ಕೇಳಲಾಗಿ ಮಾರಾಟ ಮಾಡಲು ಇಟ್ಟುಕೊಂಡಿರುವುದಾಗಿ ತಿಳಿಸಿದ್ದು ಅವುಗಳನ್ನು ಪರಿಶೀಲಿಸಲಾಗಿ ಹೈವಾರ್ಡ ವಿಸ್ಕಿನ 90 ಎಂ.ಎಲ್ 21 ಪಾಕೆಟ್ ಗಳು, 2) ಬ್ಯಾಗ್ ಪೈಪರ್ ನ 180 ಎಂಎಲ್  5 ಪಾಕೆಟ್ ಗಳು, 3) ಓಲ್ಡ್ ಟ್ರಾವೆರೆನ್ 180 ಎಂಎಲ್್ನ ನ 10 ಪಾಕೆಟ್ ಗಳು ಮತ್ತು 4) ಕೆ.ಎಪ್ ಸ್ಟ್ರಾಂಗ್ ಬೀರ್ನ 650 ಎಂ.ಎಲ್  ನ 5 ಬಾಟಲ್ ಗಳು ಇರುತ್ತೆ. ಸದರಿ ಪಾಕೆಟ್ ಮತ್ತು ಬಾಟಲ್ ಗಳ ಒಟ್ಟು ಬೆಲೆ 2479.07  ರೂಗಳಾಗಿದ್ದು, 7ಲೀಟರ್ 840 ಎಂ.ಎಲ್  ಮಧ್ಯ ಾಗಿದ್ದು ಇವುಗಳಲ್ಲಿ ತಲಾ ಒಂದೊಂದು ಬಾಟಲನ್ನು ಎಫ್.ಎಸ್.ಎಲ್ ಪರೀಕ್ಷೆಗೆ ಕಳುಹಿಸುವ ಸಲುವಾಗಿ ಅಲಾಯಿದೆಯಾಗಿ ತೆಗೆದು, ಬಿಳಿ ಬಟ್ಟೆಯಲ್ಲಿ ಸುತ್ತಿ ಬಿ.ಟಿ.ಎಲ್ ಅಕ್ಷರದಿಂದ ಸೀಲು ಮಾಡಿದ್ದು ಮೇಲ್ಕಂಡ ಎಲ್ಲಾ ಮಾಲುಗಳನ್ನು ಪಂಚರ ಸಮಕ್ಷಮ ಮುಂದಿನ ತನಿಖೆಯ ಬಗ್ಗೆ ಪಂಚನಾಮೆಯ ಮೂಲಕ ಅಮಾನತ್ತಿಪಡಿಸಿಕೊಂಡು ಆರೋಪಿ ರವಣರವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲು ವರದಿಯನ್ನು ನೀಡಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

4) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.55/2019 ಕಲಂ. 323-324-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ 05-03-2019 ರಂದು ಸಂಜೆ 5-30 ಗಂಟೆಗೆ ಶ್ರೀ ವೆಂಕಟರವಣಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 58 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ವಾಸ-ರಾಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 04/03/2019 ರಂದು ರಾತ್ರಿ ತಮ್ಮ ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಗ್ರಾಮ ದೇವತೆಯಾದ ಶ್ರೀ ಗಂಗಮ್ಮ ದೇವಿಯ ಮೆರವಣಿಗೆಯನ್ನು ಇಟ್ಟುಕೊಂಡಿದ್ದು, ರಾತ್ರಿ ಸುಮಾರು 11-30 ಗಂಟೆ ತನ್ನ ಮಗನಾದ ಚಲಪತಿ ರವರು ಸಹ ತಮ್ಮ ಗ್ರಾಮಸ್ಥರೊಂದಿಗೆ ದೇವರ ಮೆರವಣಿಗೆಯನ್ನು ನೋಡಿಕೊಂಡಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ಹರೀಶ ಬಿನ್ ಎನ್.ವೆಂಕಟೇಶ್ ಮತ್ತು ಚಂದ್ರ ಬಿನ್ ಮುನಿವೆಂಕಟಪ್ಪ ರವರು ತನ್ನ ಮಗನನ್ನು ಕುರಿತು ತಮ್ಮ ಜೊತೆಯಲ್ಲಿ ಬಾ ಕೆರೆಯ ಬಳಿ ಹೋಗಿ ಸುತ್ತಾಡಿಕೊಂಡು ಬರೋಣವೆಂದು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿರುತ್ತಾರೆ. ನಂತರ ಸ್ವಲ್ಪ ಸಮಯದ ನಂತರ ತನ್ನ ಮಗನಾದ ಚಲಪತಿ ರವರು ಕುಂಟುತ್ತಾ ನಮ್ಮ ಬಳಿ ಬಂದಿದ್ದು ನೋಡಲಾಗಿ ತನ್ನ ಮಗನ ಬಲ ಕಾಲಿಗೆ ರಕ್ತಗಾಯವಾಗಿ ಎದೆಗೆ ಭಾಗದಲ್ಲಿ ಮೂಗೇಟು ಉಂಟಾಗಿತ್ತು ನಂತರ ತಾನು ತನ್ನ ಮಗನನ್ನು ವಿಚಾರ ಮಾಡಲಾಗಿ ಮೇಲ್ಕಂಡ ಹರೀಶ್ ಮತ್ತು ಚಂದ್ರ ರವರು ತನ್ನನ್ನು ತಮ್ಮ ಗ್ರಾಮದ ಕೆರೆಯ ಬಳಿ ಕರೆದುಕೊಂಡು ಹೋಗಿ ತನ್ನ ಮೇಲಿನ ಹಳೇ ದ್ವೇಷದ ಹಿನ್ನಲೆಯಲ್ಲಿ ತನ್ನ ಮೇಲೆ ಜಗಳ ತೆಗೆದು ಲೋಫರ್ ನನ್ನ ಮಗನೇ ಈ ದಿನ ನೀನು ಒಬ್ಬಂಟಿಯಾಗಿ ಸಿಕ್ಕಿದ್ದೀಯಾ ಎಂದು ತನ್ನ ಮೇಲೆ ಜಗಳ ತೆಗೆದು ಇಬ್ಬರು ಕೈಗಳಿಂದ ತನ್ನ ಹೊಟ್ಟೆಗೆ, ತಲೆಗೆ, ಮೈ ಮೇಲೆ ಹೊಡೆದು ನೋವುಂಟು ಮಾಡಿ ಹರೀಶ ರವರು ಕಲ್ಲನ್ನು ತೆಗೆದುಕೊಂಡು ತನ್ನ ಕಾಲಿನ ಮೇಲೆ ಹಾಕಿ ರಕ್ತಗಾಯ ಪಡಿಸಿದಾಗ ಚಂದ್ರ ಮತ್ತೋಂದು ಕಲ್ಲನ್ನು ತೆಗೆದುಕೊಂಡು ತನ್ನ ಎದೆಯ ಮೇಲೆ ಹೊಡೆದು ಮೂಗೇಟು ಉಂಟು ಮಾಡಿ ಇಬ್ಬರು ತನ್ನನ್ನು ಕುರಿತು ಈ ದಿನ ಈ ತನ್ನ ಮಗನನ್ನು ಬಿಡಬಾರದು ಸಾಯಿಸಿ ಬಿಡ ಬೇಕು ಎಂದು ಪ್ರಾಣ ಬೆದರಿಕೆ ಹಾಕಿ ಜಗಳ ಮಾಡುತ್ತಿದ್ದಾಗ ನಾನು ಅವರಿಂದ ತಪ್ಪಿಸಿಕೊಂಡು ಓಡಿ ಬಂದಿರುವುದಾಗಿ ವಿಷಯ ತಿಳಿಸಿದನು. ನಂತರ ತಾನು ಮತ್ತು ತಮ್ಮ ಮನೆಯವರು ತನ್ನ ಮಗನನ್ನು ಯಾವುದೋ ಆಟೋದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಸಿಕೊಂಡು ವಾಪಸ್ಸು ತಮ್ಮ ಗ್ರಾಮಕ್ಕೆ ಹೋಗಿರುತ್ತೇವೆ. ಸದರಿ ಗಲಾಟೆಯ ಬಗ್ಗೆ ನಮ್ಮ ಗ್ರಾಮದ ಹಿರಿಯರು ದೇವರ ಮೆರವಣಿಗೆ ಮುಗಿದ ನಂತರ ನ್ಯಾಯ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಮೇಲ್ಕಂಡವರು ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಾನು ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು , ತನ್ನ ಮಗನ ಮೇಲೆ ಹಳೇ ದ್ವೇಷದ ಹಿನ್ನಲೆಯಲ್ಲಿ ಜಗಳ ಮಾಡಿ, ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆಯನ್ನು ಹಾಕಿರುವ ಮೇಲ್ಕಂಡ ಹರೀಶ ಮತ್ತು ಚಂದ್ರ ರವರ ವಿರುದ್ದ ಮುಂದಿನ ಕಾನೂನು ರೀತ್ಯಾ  ಕ್ರಮ ಜರುಗಿಸ ಬೇಕಾಗಿ ಕೋರಿರುತ್ತೆ

5) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.56/2019 ಕಲಂ. 427-447 ಐ.ಪಿ.ಸಿ:-

     ದಿನಾಂಕ:06/03/2019 ರಂದು ಸಂಜೆ 7-30 ಗಂಟೆಗೆ ಪಿರ್ಯಾದಿ ಮಂಜುನಾಥ ಬಿನ್ ಲೇಟ್ ಚಿಕ್ಕಮುನಿಯಪ್ಪ ಕೆ.ಮುತ್ತಕದಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೇ, ನನ್ನ ಬಾಬತ್ತು ಕೈವಾರ ಹೋಬಳಿ ಶೀಗಹಳ್ಳಿ ಗ್ರಾಮದ ಸವರ್ೆ ನಂಬರ್ 8 ರಲ್ಲಿ 3.29 ಗುಂಟೆ ಜಮೀನು ನಮ್ಮ ತಂದೆ ಮುನಿಯಪ್ಪ ರವರ ಹೆಸರಿನಲ್ಲಿರುತ್ತೆ. ಸದರಿ ಜಮಿನಿನಲ್ಲಿ ನಾನು ದ್ರಾಕ್ಷಿ ಬೆಳೆ ಇಟ್ಟಿದ್ದು, ಈಗ ಪಸಲು ಸಹ ಬಂದಿರುತ್ತೆ. ಸದರಿ ಜಮೀನು ವಿಚಾರದಲ್ಲಿ ನನಗೂ ಮತ್ತು ನನ್ನ ತಮ್ಮನಾದ ನಾಗರಾಜ ರವರಿಗೆ ಈಗ್ಗೆ 2 ವರ್ಷಗಳಿಂದ  ಗಲಾಟೆಗಳಿದ್ದು, ಈ ಬಗ್ಗೆ ನಮ್ಮ ಗ್ರಾಮದಲ್ಲಿ ಹಿರಿಯರು ಸೇರಿ ಪಂಚಾಯ್ತಿ ಮಾಡಿದರು ನನ್ನ ತಮ್ಮ ಸರಿಹೋಗದೇ ಇದ್ದು, ದಿನಾಂಖ 27/02/2019 ರಂದು ರಾತ್ರಿ ಸುಮಾರು 10.00 ಗಂಟೆ ಸಮಯದಲ್ಲಿ ನಾನು ನಮ್ಮ ತೋಟವನ್ನು ನೋಡಿಕೊಂಡು ಬರಲು ಹೋಗಿದ್ದು ನಮ್ಮ ಬಾಬತ್ತು ದ್ರಾಕ್ಷಿ ತೋಟದಲ್ಲಿ ಯಾರೋ ಓಡಾಡುವ ಆಗೇ ಆನ್ನಿಸಿದ್ದು ನಾನು ಕತ್ತಲಲ್ಲಿ ಯಾರೂ ಆದು ಎಂತ ಕೂಗಿದಾಗ ನನ್ನ ತಮ್ಮ ನಾಗರಾಜ ಅಲ್ಲಿಂದ ಓಡಿಹೋಗಿರುತ್ತಾನೆ, ಮತ್ತೆ ನಾನು ತೋಟದೋಳಗೆ ಹೋಗಿ ನೋಡಲಾಗಿ ನನ್ನ  ಬಾಬತ್ತು ತೋಟದಲ್ಲಿದ್ದ  20 ದ್ರಾಕ್ಷಿ ಮರಗಳನ್ನು ಕಟಾವು ಮಾಡಿರುವುದು ಕಂಡು ಬಂದಿರುತ್ತೆ. ನನಗೆ ಮತ್ತು ನನ್ನ  ತಮ್ಮನಿಗೆ ಜಮೀನು ವಿಚಾರದಲ್ಲಿ ಗಲಾಟೆಗಳಿದ್ದು ಈ ಬಗ್ಗೆ ನನಗೆ ನಷ್ಟ ಉಂಟು ಮಾಡುವ ಉದ್ದೇಶದಿಂದ ನನ್ನ ತಮ್ಮ ನಾಗರಾಜ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ದ್ರಾಕ್ಷಿ ಮರಗಳನ್ನು ಕಟಾವು ಮಾಡಿರುತ್ತಾನೆ. ಇದರಿಂದ ನನಗೆ ಸುಮಾರು 7-8 ಟನ್ ದ್ರಾಕ್ಷಿ ನೆಲಸಮ ಆಗಿರುತ್ತೆ. ಇದರಿಂದ ಸುಮಾರು 3-4 ಲಕ್ಷ ರೂಪಾಯಿ ನಷ್ಟವಾಗಿರುತ್ತೆ. ಆದ್ದರಿಂದ ನಾಗರಾಜ ರವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಈ ಬಗ್ಗೆ ನಮ್ಮ ಗ್ರಾಮದಲ್ಲಿ ಹಿರಿಯರು ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಇದುವರೆವಿಗೂ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿರುತ್ತೆ.

6) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.43/2019 ಕಲಂ. 323-324-504-506 ರೆ/ವಿ 34  ಐ.ಪಿ.ಸಿ & 3(1)(r),3(1)(s) The Scheduled Castes and the Scheduled Tribes (Prevention of Atrocities) Amendment Bill:-

     ಪಿರ್ಯಾದುದಾರರಾದ ಹರೀಶ ಬಿನ್ ಅಪ್ಪಣ್ಣ, 29 ವರ್ಷ, ಸಾಮ್ರಾಣಿ ವ್ಯಾಪಾರ, ಎನ್.ಎನ್.ಟಿ ದೇವಾಲಯದ ಹಿಂಭಾಗ, ಚಿಂತಾಮಣಿ ನಗರ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 05/03/2019 ರಂದು ಬೆಳಿಗಿನ ಜಾವ 2-00 ಗಂಟೆ ಸಮಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಎನ್.ಎನ್. ಟಿ ದೇವಸ್ಥಾನಕ್ಕೆ ಹೋಗಿ ನಂತರ ಮನೆಗೆ ಹೋಗಲು ಎನ್.ಎನ್.ಟಿ ದೇವಾಲಯದ ಬಳಿಯ ಉದಯ ಸ್ಕೂಲ್ ಬಳಿ ಹೋಗುತ್ತಿದ್ದಾಗ ಅನಿಲ್ ಬಿನ್ ಲೇಟ್ ನಾರಾಯಣಸ್ವಾಮಿ, ಮಂಜುನಾಥ ಬಿನ್ ಲೇಟ್ ನಾರಾಯಣಸ್ವಾಮಿ, ವಕ್ಕಲಿಗರು, ಎನ್.ಎನ್,ಟಿ ಹಿಂಬಾಗ, ವೆಂಕಟೇಶ್ ಬಿನ್ ಲೇಟ್ ಸೊಣ್ಣಪ್ಪ, ಕೃಷ್ಣ ಬಿನ್ ಲೇಟ್ ಸೊಣ್ಣಪ್ಪ ಅಗ್ರಹಾರ ರವರುಗಳು ನನ್ನನ್ನು ಕುರಿತು ಏ ಇಲ್ಲಿ ಬಾರೋ ಎಂದು ಕರೆದರು. ನಾನು ಅಲ್ಲಿಗೆ ಹೋದೆ ಆಗ ಮೇಲ್ಕಂಡವರು ಏ ನನ್ನ ಮಗನೇ ನಿಮ್ಮಅಣ್ಣ ಜಗದೀಶ ಏನು ಗಾಂಜಾಲಿ ಜಾಸ್ತಿ ಮಾಡ್ತಾ ಇದ್ದಾನೆ ಅವನಿಗೆ ಹೇಳು ನಮ್ಮನ್ನೇನಾದರೂ ಬೈದರೆ ನಾನು ಸುಮ್ಮನೆ ಇರುವುದಿಲ್ಲ ಎಂದರು. ನಾನು ಯಾಕೋ ಈಗೆ ಮಾತಾನಾಡುತ್ತಿದ್ದೀರಿ ಎನ್ನುವಷ್ಟರಲ್ಲಿ ಕೃಷ್ಣ ರವರು ನನ್ನನ್ನು ಕೆಟ್ಟ ಮಾತುಗಳಿಂದ ಬೈದು ಕೆಳಕ್ಕೆ ತಳ್ಳಿದ ಹಾಗೂ ನಾನು ಕೆಳಗೆ ಬಿದ್ದಾಗ ಅನಿಲ್, ಮಂಜುನಾಥ ವೆಂಕಟೇಶ್ ರವರು ಕಾಲುಗಳಿಂದ ನನ್ನ ಮೈ ಮೇಲೆ ಒದ್ದು ಮೂಗೇಟುಂಟು ಮಾಡಿರುತ್ತಾರೆ. ಅನಿಲ್ ರವರು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತ ಗಾಯ ಮಾಡಿದ ನಂತರ ಮೇಲ್ಕಂಡವರೆಲ್ಲರು ನನ್ನನ್ನು ಕುರಿತು ನಮ್ಮ ಏರಿಯಾದಲ್ಲಿ ಈ ನಾಯಕ ನನ್ನ ಮಕ್ಕಳದು ಜಾಸ್ತಿಯಾಗಿರುತ್ತೆ. ಇವರನ್ನು ಏರಿಯಾದಿಂದ ಓಡಿಸಬೇಕೆಂದು ಜಾತಿ ನಿಂದನೆ ಮಾಡಿದರು. ಬಿಡಿಸಲು ಬಂದ ನನ್ನ ಬಾಮೈದನಾದ ನವೀನ್ ರವರನ್ನು  ಕೃಷ್ಣ ಕೈಗಳಿಂದ ಬೆನ್ನಿನ ಮೇಲೆ ಗುದ್ದಿ ಮೂಗೇಟುಂಟು ಮಾಡಿರುತ್ತಾರೆ. ವೆಂಕಟೇಶ್ ರವರು ನನ್ನ ದವಡೆಗೆ ಕೈಗಳಿಂದ ಗುದ್ದಿರುತ್ತಾರೆ. ನಂತರ ಮಂಜುನಾಥ ನು ನನ್ನ ಮೂತಿಗೆ ಗುದ್ದಿರುತ್ತಾನೆ. ನಂತರ ಮೇಲ್ಕಂಡವರೆಲ್ಲರೂ ನಮ್ಮ ತಂಟೆಗೆ ಬಂದರೆ ಪ್ರಾಣ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ.

7) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.44/2019 ಕಲಂ.323-324-341-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ:05/03/2019 ರಂದು ಚಿಂತಾಮಣಿ  ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಗಾಯಾಳು  ಕೃಷ್ಣ ಬಿನ್ ಸೊಣ್ಣಪ್ಪ 30 ವರ್ಷ, ಗೊಲ್ಲರು,  ಕಾರ್ಪೆಂಟರ್ ಕೆಲಸ ವಾಸ ಶಾಂತಿನಗರ ಚಿಂತಾಮಣಿ ನಗರ ರವರ ಹೇಳಿಕೆ ಪಡೆದಿದ್ದರ ಸಾರಾಂಶವೇನೆಂದರೆ, ಈ ದಿನ ದಿನಾಂಕ: 5/03/2019 ರಂದು ಬೆಳಿಗಿನ ಜಾವ 3-30 ಗಂಟೆಯಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಜಾಗರಣೆ ಇದ್ದು  ಎನ್ ಎನ್ ಟಿ  ದೇವಾಲಯಕ್ಕೆ  ಪೂಜೆಗಾಗಿ ಹೋಗಿದ್ದು  ವಾಪಸ್ಸು ಬರುತ್ತಿದ್ದಾಗ ದೇವಾಲಯದ ಪಕ್ಕದಲ್ಲಿ ಜನರು ಗುಂಪು ಸೇರಿಕೊಂಡು  ಎನ್ ಎನ್ ಟಿ ದೇವಾಲಯದ ಹಿಂಭಾಗದಲ್ಲಿ ವಾಸವಾಗಿರುವ  ಜಗದೀಶ್ ಮತ್ತು ಹರೀಶ್ ಮತ್ತಿತರರು ಯಾವುದೋ ವಿಚಾರವಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದು ಅದನ್ನು ನೋಡಿದ ನಾನು ಬಿಡಿಸಲು ಹೋದಾಗ ಹರೀಶ್ ಎಂಬುವವನು ಕೈ ಮುಷ್ಟಿಯಿಂದ ಮತ್ತು ಕಬ್ಬಿಣದ ಕಂಬಿಯಿಂದ ನನ್ನ ಮೂತಿಗೆ ಹೊಡೆದಾಗ ಬಾಯಿಯಲ್ಲಿ ರಕ್ತ ಬಂದು ಮುಂಭಾಗದ  3 ಹಲ್ಲುಗಳು ಅಲುಗಾಡುತ್ತಿರುತ್ತವೆ ಜಗದೀಶ್  ಮತ್ತು ಹರೀಶ್  ಎಂಬುವವರು  ನೀನು ಯಾವನೋ ಜಗಳ ಬಿಡಿಸಲು ಲೋಫರ್  ನನ್ನ ಮಗನೇ ಎಂದು ಕೆಟ್ಟ ಮಾತುಗಳಿಂದ  ಬೈಯುತ್ತಾ ನನ್ನನ್ನು  ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ  ತಡೆದರು,  ಕೂಡಲೇ ಅಲ್ಲಿದ್ದ  ಮುನ್ನಾ ರವರು ನನ್ನನ್ನು   ಅವರನ್ನು ಹೊಡೆಯಬೇಡಿ ಎಂದು ಜಗಳ  ಬಿಡಿಸಲು  ಬಂದಾಗ ಪುನ: ಮೇಲ್ಕಂಡ ಇಬ್ಬರು  ನನಗೆ ಕೈಗಳಿಂದ ಹೊಡೆದು ಪ್ರಾಣಬೆದರಿಕೆ ಹಾಕಿರುತ್ತಾರೆ. ನಂತರ ನನ್ನನ್ನು ಮುನ್ನಾ ರವರು  ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ  ದಾಖಲು ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

8) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.45/2019 ಕಲಂ.279-337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:06/03/2019 ರಂದು ಪಿರ್ಯಾದಿದಾರಾದ ಅಂಬರೀಶ್ ಬಿನ್ ವೆಂಕಟರವಣಪ್ಪ , 32 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಾಸ: ತಳಗವಾರ ಹೊಸೂರು ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ.  ನಮ್ಮ ತಂದೆಯಾದ ವೆಂಕಟವರಣಪ್ಪ ಬಿನ್ ಲೇಟ್ ಹನುಮಂತರಾಯಪ್ಪ, ರವರು ಚಿಂತಾಮಣಿ ನಗರದ ಎನ್. ಆರ್  ಬಡಾವಣೆಯಲ್ಲಿರುವ ಹರ್ಬಲ್ ಲೈಫ್  ನ್ಯೂಟ್ರೀಷಿಯನ್ ನ್ನು  ತೆಗೆದುಕೊಳ್ಳಲು ನಮ್ಮ ಗ್ರಾಮದಿಂದ ಸುಮಾರು 2 ವರ್ಷದಿಂದ ಪ್ರತಿ ದಿನ ಕ್ಲಬ್ ಗೆ  ಬರುತ್ತಿದ್ದರು. ದಿನಾಂಕ:06/03/2019 ರಂದು ನನಗೆ ಸ್ವಂತ ಕೆಲಸ ವಿದ್ದ ಕಾರಣ ನಾನು ಮತ್ತು ನಮ್ಮ ತಂದೆ  ಚಿಂತಾಮಣಿ ನಗರದ ಡಿಪೋ ಬಂದು ಬಸ್ಸು ನ್ನು ಇಳಿದು ಮುಂಭಾಗದಲ್ಲಿರುವ ಯಾವುದೋ ಹೋಟೆಲ್ ನಲ್ಲಿ ನಾನು ಮಾತ್ರ ತಿಂಡಿಯನ್ನು ತಿಂದು ನಂತರ ನಮ್ಮ ತಂದೆಯವರು ಹರ್ಬಲ್ ಲೈಫ್ ನ್ಯೂಟ್ರಿಷಿಯನ್ ಕುಡಿಯಲು ಎನ್.ಆರ್ ಬಡಾವಣೆಗೆ ಹೋಗಲು ಬೆಳಗ್ಗೆ ಸುಮಾರು 7-30 ಗಂಟೆಗೆ  ಕೆ.ಎಸ್.ಆರ್.ಟಿ.ಸಿ ಡಿಪೋ ಕಡೆಗೆ ಹೋಗಲು ನಾವುಗಳು ರಸ್ತೆಯನ್ನು ದಾಟುತ್ತಿದ್ದಾಗ  ನಗರದ ಕಡೆಯಿಂದ ಕೆ.ಎ-04 -ಎಂ.ಡಿ-5298 ಟಾಟಾ ಇಂಡಿಗೋ ಕಾರನ್ನು ಅದರ ಚಾಲಕನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಎಡ ಬದಿಯಲ್ಲಿದ್ದ  ರಸ್ತೆಯನ್ನು ದಾಟುತ್ತಿದ್ದ ನಮ್ಮ ತಂದೆಯವರಾದ ವೆಂಕಟರವಣಪ್ಪ ರವರ ಎಡ ಕಾಲಿಗೆ ಡಿಕ್ಕಿ ಹೊಡೆಸಿ ರಕ್ತಗಾಯವನ್ನುಂಟು ಮಾಡಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರೆಟು ಹೋಗಿರುತ್ತಾನೆ. ಕೂಡಲೇ ಕುಸಿದು ಬಿದ್ದ ನಮ್ಮ ತಂದೆಯನ್ನು ನಾನು ಮತ್ತು ಅಲ್ಲಿದ್ದ ಸಾರ್ವಜನಿಕರು ಯಾವುದೋ ಆಟೋವಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ  ದಾಖಲಿಸಿ  ನಂತರ  ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಪಡಿಸಿದ್ದು ಹಾಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಮೇಲ್ಕಂಡಂತೆ ನಮ್ಮ ತಂದೆಯವರಿಗೆ ಅಪಘಾತವನ್ನುಂಟು ಮಾಡಿದ ಕೆ.ಎ-04-ಎಂ.ಡಿ-5298 ಟಾಟಾ ಇಂಡಿಗೋ ಕಾರಿನ ಚಾಲಕನ ಹೆಸರು ದೇವರಾಜ್ ಎಂದು ತಿಳಿದು ಬಂದಿರುತ್ತೆ.ನಾನು ಆಸ್ಪತ್ರೆಯಲ್ಲಿ ನಮ್ಮ ತಂದೆಯವರಿಗೆ ಚಿಕಿತ್ಸೆ ಕೊಡಿಸುತ್ತಿದ್ದ ಕಾರಣ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತಾವುಗಳು ಅಪಘಾತವನ್ನುಂಟು ಮಾಡಿ ಪರಾರಿ ಯಾಗಿರುವ ಕಾರನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

9) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.46/2019 ಕಲಂ.420 ಐ.ಪಿ.ಸಿ & 78(3) ಕೆ.ಪಿ ಆಕ್ಟ್:-

     ದಿನಾಂಕ: 06/03/2019 ರಂದು  ಠಾಣಾ  ಪಿ ಸಿ 375 ಮಂಜುನಾಥ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 06/03/2019 ರಂದು ಸಂಜೆ7-00 ಚಿಂತಾಮಣಿ ನಗರ ಉಪವಿಭಾಗ ಉಪಾಧೀಕ್ಷಕರಾದ ಶ್ರೀ ಶ್ರೀನಿವಾಸ ಸಾಹೇಬರ ಮಾರ್ಗದರ್ಶನದ ನೀಡಿ ಸಿ.ಪಿ.ಸಿ  511ಮುರಳಿ ಕೃಷ್ಣ   ಮತ್ತು ಸಿ.ಪಿ.ಸಿ 375 ಮಂಜುನಾಥ ಆದ ನಮಗೆ  ಚಿಂತಾಮಣಿ ನಗರದಲ್ಲಿ ಮಟ್ಕಾ ಚಟುವಟಿಕೆಗಳ ಪತ್ತೆಯ ಬಗ್ಗೆ ನೇಮಿಸಿ ಕಳುಹಿಸಿದ್ದು ವೆಂಕಟಗಿರಿಕೋಟೆಉ ಬಾಬಾ ಸರ್ಕಲ್ ಬಳಿ  ರಸ್ತೆಯ ಬದಿಯಲ್ಲಿ  ಮಟ್ಕಾ ಚೀಟಿ ಬರೆಯುತ್ತಿರುವುದಾಗಿ ಅವರಿಗೆ ಬಂದ ಖಚಿತ ಮಾಹಿತಿಯಂತೆ ಆತನ ಮೇಲೆ ದಾಳಿ ಮಾಡಲು ಪಂಚರನ್ನು ಗಜಾನನ ವೃತ್ತದಲ್ಲಿ ಬರಮಾಡಿಕೊಂಡು ಠಾಣೆಯ  ಜೀಫ್ ನಂ: ಕೆಎ 07 ಜಿ 158   ವಾಹನ ದಲ್ಲಿ ವೆಂಕಟಗಿರಿ ಕೋಟೆ ಮುಖ್ಯ ರಸ್ತೆಯ ಮೂಲಕ ಬಾಬಾ ಸರ್ಕಲ್ ಬಳಿ ಮರೆಯಲ್ಲಿ ಜೀಫ್ನ ನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರಸ್ತೆ ಬದಿಯಲ್ಲಿ ಯಾರೋ ಒಬ್ಬ ಆಸಾಮಿ ಕೈಯಲ್ಲಿ ಪೆನ್ನು ಮಟ್ಕಾ ಚೀಟಿಯನ್ನು ಹಿಡಿದು ಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿಗಳನ್ನು ಬರೆಯುವಂತೆ ಪ್ರೇರೆಪಿಸುತ್ತಿದ್ದವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ  ಹಿಡಿದು  ಹೆಸರು ಮತ್ತು ವಿಳಾಸ ಕೇಳಲಾಗಿ ಇರ್ಫಾನ್ ಬಿನ್ ಬಾಷಸಾಬಿ, 26 ವರ್ಷ, ಮುಸ್ಲಿಂ ಜನಾಂಗ. ಕಾರ್ಪೆಂಟರ , ವಾಸ: ವೆಂಕಟಗಿರಿಕೋಟೆ ಚಿಂತಾಮಣಿ ನಗರ  ಎಂತ ತಿಳಿಸಿದ್ದು ಆತನನ್ನು ಪಂಚರ ಸಮಕ್ಷಮ ಅಂಗ ಶೋಧನೆ ಮಾಡಲಾಗಿ ನಗದು ಹಣ 1019 ರೂ, ಒಂದು ಮಟ್ಕಾ ಚೀಟಿ, ಒಂದು ಪೆನ್ನು, ಇದ್ದು ಪಂಚರ ಸಮಕ್ಷಮ ಸಂಜೆ 7-30 ಗಂಟೆಯಿಂದ 8-30 ಗಂಟೆಯ ವಿದ್ಯತ್ ದ್ವೀಪ ವರೆಗೆ ಪಂಚನಾಮೆಯನ್ನು ಜರುಗಿಸಿ ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ  ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

10) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.53/2019 ಕಲಂ. 379  ಐ.ಪಿ.ಸಿ:-

     ದಿನಾಂಕ: 06/03/2019 ರಂದು ಮದ್ಯಾಹ್ನ 12.30 ಗಂಟೆಯಲ್ಲಿ  ಗೌರಿಬಿದನೂರು ಗ್ರಾಮಾಂತರ  ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ  ಲಿಯಾಕತ್ ಉಲ್ಲಾ ಠಾಣೆಯಲ್ಲಿ ಸ್ವತಃ  ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ,  ದಿನಾಂಕ :06/03/2019 ರಂದು ಬೆಳಗ್ಗೆ ಸುಮಾರು 11. 00 ಗಂಟೆಯಲ್ಲಿ ಚಿಕ್ಕಕುರುಗೋಡು ಗ್ರಾಮದ  ಉತ್ತರ ಪಿನಾಕಿನಿ ನದಿ ಪಾತ್ರದಲ್ಲಿ ಯಾರೋ ಆಸಾಮಿಗಳು ಕಳ್ಳತನದಿಂದ ಮರಳನ್ನು ಟ್ರಾಕ್ಟರ್ ಗಳಿಗೆ ತುಂಬಿಸಿ ಸಾಗಾಣಿಕೆ ಮಾಡುತ್ತಿರುತ್ತಾರೆಂದು ತನಗೆ ಬಂದ ಖಚಿತ ಭಾತ್ಮೀ ಮೇರೆಗೆ  ಠಾಣೆಗೆ ಪಂಚರ ಮತ್ತು ಪೋಲೀಸ್ ಸಿಬ್ಬಂದಿಯವರಾದ ಚಂದ್ರು ಹೆಚ್ ಸಿ , ಗಂಗರಾಜು ಹೆ ಚ್ ಸಿ 220. ಮಂಜುನಾಥ ಪಿ ಸಿ 379, ಆನಂದ ಪಿ ಸಿ 518, ನಾಗರಾಜು ಪಿ ಸಿ 05 ರವರುಗಳೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ ಎ 40-ಜಿ-281 ರಲ್ಲಿ  ಪೊಲೀಸ್ ಠಾಣೆಯಿಂದ ಹೊರಟು  ಚಿಕ್ಕಕುರುಗೋಡು ಗ್ರಾಮದ ಪಶ್ಚಿಮ ದಿಕ್ಕಿಗೆ ಹೋಗಿ  ಜೀಪನ್ನು ಮರಗಳ ಮದ್ಯ ಮರೆಯಲ್ಲಿ ನಿಲ್ಲಿಸಿ ಬತ್ತಿ ಹೋಗಿರುವ ಉತ್ತರ ಪಿನಾಕಿನಿ  ನದಿ  ಪಾತ್ರಕ್ಕೆ ನಡೆದುಕೊಂಡು ಹೋದಾಗ ಒಂದು ಟ್ರಾಕ್ಟರ್ ಗೆ ಯಾರೋ ಆಸಾಮಿಗಳು ಮರಳನ್ನು ತುಂಬಿಸುತ್ತಿದ್ದು , ನಾವುಗಳು ಸಮವಸ್ತ್ರದಲ್ಲಿರುವುದನ್ನು ನೋಡಿ ಅಲ್ಲಿಂದ ಓಡಿ ಹೋದರು.ನಾವುಗಳು ಬೆನ್ನಟ್ಟಿದರು ಸಿಗಲಿಲ್ಲ ಕೂಡಲೆ ಟ್ರಾಕ್ಟರ್ ಬಳಿಗೆ ಬಂದು ಪರಿಶೀಲಿಸಲಾಗಿ ಟ್ರಾಕ್ಟರ್ ನೊಂದಣಿ ಸಂಖ್ಯೆ ಕೆ ಎ -51 –ಟಿ-1371 ಆಗಿದ್ದು, ಮಹೀಂದ್ರಾ ಕಂಪನಿಯದ್ದಾಗಿರುತ್ತೆ.ಟ್ರಾಲಿಗೆ ಯಾವುದೇ ನೊಂದಣಿ ಸಂಖ್ಯೆ ಇರುವುದಿಲ್ಲ ನೀಲಿ ಬಣ್ಣದ್ದಾಗಿರುತ್ತೆ. ಟ್ರಾಲಿಯಲ್ಲಿ ಸುಮಾರು 20 ಬಾಂಡ್ಲಿಯಷ್ಟು ಮರಳು ಇರುತ್ತೆ. ನಾನು  ಪಿ ಸಿ 05 ನಾಗರಾಜು ರವರನ್ನು ಸದರಿ ಟ್ರಾಕ್ಟರ್ ಗೆ ಬೆಂಗಾವಲಿಗೆ ನೇಮಿಸಿ ಉತ್ತರ ಪಿನಾಕಿನ ನದಿ ಪಾತ್ರದಲ್ಲಿ ಮತ್ತೆ ಯಾರಾದರು ಮರಳನ್ನು ತುಂಬುತ್ತಿದ್ದಾರೆಯೇ ಎಂಬುದಾಗಿ ಹುಡುಕಾಡಲು ಸದರಿ ಟ್ರಾಕ್ಟರ್ ನಿಂದ ದಕ್ಷಿಣ ದಿಕ್ಕಿಗೆ ನದಿ ಪಾತ್ರದಲ್ಲಿ ಸುಮಾರು 300 ಮೀಟರ್ ದೂರ ಸಿಬ್ಬಂದಿಯವರೊಂದಿಗೆ ನಡೆದುಕೊಂಡು ಹೋಗುವಷ್ಟರಲ್ಲಿ ಮತ್ತೊಂದು ಟ್ರಾಕ್ಟರ್ ಗೆ ಯಾರೋ ಆಸಾಮಿಗಳು ಮರಳನ್ನು ತುಂಬಿಸುತ್ತಿದ್ದವರು ನಮ್ಮಗಳನ್ನು ನೋಡಿ ಸ್ಥಳದಿಂದ ಓಡಿ ಹೋದರು. ನಾವುಗಳು ಬೆನ್ನಟ್ಟಿದರು ನಮಗೆ ಆಸಾಮಿಗಳು ಸಿಗದೆ ಮರಗಳ ನಡುವೆ ಓಡಿ ಹೋದರು.ನಂತರ ಸದರಿ ಟ್ರಾಕ್ಟರ್ ಬಳಿ ಬಂದು ಪರಿಶೀಲಿಸಲಾಗಿ ಯಾವುದೇ ನೊಂದಣಿ ಸಂಖ್ಯೆಯ ಇಲ್ಲದೆ ಮಹೀಂದ್ರಕಂಪನಿಯ ಟ್ರಾಕ್ಟರ್ ಆಗಿದ್ದು , ಇದರ ಇಂಜಿನ್ NLBH-00740 ಆಗಿರುತ್ತೆ,ಟ್ರಾಲಿಗೆ ಯಾವುದೇ ನೊಂದಣಿ ಸಂಖ್ಯೆ ಇರುವುದಿಲ್ಲ, ನೀಲಿ ಬಣ್ಣದ್ದಾಗಿದ್ದು ಇದರ ಬಾಡಿಯವರವಿಗು ಮರಳನ್ನು ತುಂಬಿಸಿರುತ್ತಾರೆ. ಈ ಮೇಲ್ಕಂಡ  ಎರಡು ಟ್ರಾಕ್ಟರ್ ಟ್ರಾಲಿಯ ಮಾಲೀಕ ಹಾಗು ಚಾಲಕರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮರಳನ್ನು ಸಾಗಾಣಿಕಗೆ ಮಾಡಲು ನಿಷೇಧವಿದ್ದರು ಸಹ ಕಳ್ಳತನದಿಂದ ತುಂಬಿಸಿ ಸಾಗಣಿಕೆ ಮಾಡುತ್ತಿರುತ್ತಾರೆ.ಈ ಎರಡು ಟ್ರಾಕ್ಟರ್ ಟ್ರಾಲಿಗಳನ್ನು  ಬೆಳಗ್ಗೆ 11.00 ಗಂಟೆಯಿಂದ 12.00 ಗಂಟೆಯವರೆವಿಗು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿ ಟ್ರಾಕ್ಟರ್ ಗಳನ್ನು ಠಾಣೆಯ ಆವರಣಕ್ಕೆ ಸ್ಥಳಾಂತರಿಸಿ ಠಾಣೆಗೆ ಬಂದು ಸ್ವತಃ ಠಾಣಾ ಮೊ.ಸಂ.53/2019 ಕಲಂ: 379 ಐ ಪಿ ಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿರುತ್ತೆ.

11) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.54/2019 ಕಲಂ. 15(A)-32(3) KARNATAKA EXCISE ACT:-

     ದಿನಾಂಕ: 06/03/23019   ರಂದು 4-15 ಗಂಟೆಯಲ್ಲಿ  ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ ಶ್ರೀ ಲಿಯಾಕತ್ ವುಲ್ಲಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ:06/03/2019 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಮರಳೂರು ಗ್ರಾಮದ ಅಂಜಿನಪ್ಪರವರ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಮಾಹಿತಿ ಮೇರೆಗೆ ಸಿ.ಪಿ.ಐ ಸಾಹೇಬರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-281 ರಲ್ಲಿ ಮರಳೂರು ಗ್ರಾಮಕ್ಕೆ ಹೋಗಿ, ಮರೆಯಲ್ಲಿ ಜೀಪು ನಿಲ್ಲಿಸಿ, ಜೀಪಿನಿಂದ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಂಜಿನಪ್ಪರವರ ಚಿಲ್ಲರೆ ಅಂಗಡಿಯ ಮುಂದೆ ಒಬ್ಬ ಆಸಾಮಿ ಚೀಲವನ್ನು ಹಿಡಿದುಕೊಂಡು ನಿಂತಿದ್ದು, ಅದರಲ್ಲಿರುವ ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಅಂಗಡಿಯ ಮುಂದೆ 4 ಜನ ಗಂಡಸರು ಪ್ಲಾಸ್ಟಿಕ್ ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು 4 ಜನ ಗಂಡಸರು ಓಡಿಹೋಗಿದ್ದು, ಚೀಲ ಹಿಡಿದುಕೊಂಡು ನಿಂತಿದ್ದು, ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಸದರಿ ಆಸಾಮಿ ತನ್ನ ಹೆಸರು ಅಂಜಿನಪ್ಪ ಬಿನ್ ಲೇಟ್ ಹನುಮಂತಪ್ಪ, 60 ವರ್ಷ, ಈಡಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಮರಳೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 20 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಬೆಲೆ 606.40 ರೂ.ಗಳಾಗಿದ್ದು, ಸ್ಥಳದಲ್ಲಿ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಆಸಾಮಿಗೆ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯಾ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 3-00 ಗಂಟೆಯಿಂದ 3-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 20 ಟೆಟ್ರಾ ಪಾಕೆಟ್ ಗಳು, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಪ್ಲಾಸ್ಟಿಕ್ ಚೀಲವನ್ನು ವಶಪಡಿಸಿಕೊಂಡು, ಸಾಯಂಕಾಲ 4-15 ಗಂಟೆಗೆ ಠಾಣೆಗೆ ವಾಪಸ್ಸು ಬಂದು, ಮೇಲ್ಕಂಡ ಆರೋಪಿ ಹಾಗು ವಶಪಡಿಸಿಕೊಂಡಿರುವ ಮಾಲನ್ನು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು,  ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ   ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲು ನೀಡಿ ನೀಡಿದ ದೂರನ್ನು ಪಡೆದುಕೊಂಡು ಠಾಣೆಯಲ್ಲಿ  ಪ್ರಕರಣ ದಾಖಲು ಮಾಡಿಕೊಂಡಿರುತ್ತೆ.

12) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.55/2019 ಕಲಂ. 379 ಐ.ಪಿ.ಸಿ:-

     ದಿನಾಂಕ : 06/03/2019 ರಂದು ಸಂಜೆ 06.30 ಗಂಟೆಯಲ್ಲಿ .ಗೌರಿಬಿದನೂರು ಗ್ರಾಮಾಂತರ  ಪೊಲೀಸ್ ಠಾಣೆಯ ಪಿ ಎಸ್ ಐ ರವರಾದ ಲಿಯಾಕತ್ ಉಲ್ಲಾ ಆದ  ನನಗೆ  ದಿನಾಂಕ :06/03/2019 ರಂದು ಮದ್ಯಾಹ್ನ ಸುಮಾರು ನಾಲ್ಕು ಗಂಟೆಯಲ್ಲಿ ಗೌರಿಬಿದನೂರು ಗ್ರಾಮಾಂತರ  ಪೋಲೀಸ್ ಠಾಣಾ ಸರಹದ್ದಿಗೆ ಸೇರಿದ ಮಣಿವಾಲ ಗ್ರಾಮದ ಬಳಿ ಇರುವ ಕೆರೆಯಲ್ಲಿ ಯಾರೋ ಆಸಾಮಿಗಳು ಕಳ್ಳತನದಿಂದ ಮರಳನ್ನು ಟ್ರಾಕ್ಟರ್ ಗಳಿಗೆ ತುಂಬಿಸಿ ಸಾಗಾಣಿಕೆ ಮಾಡುತ್ತಿರುತ್ತಾರೆಂದು ನನಗೆ ಬಂದ ಖಚಿತ ಭಾತ್ಮೀ ಮೇರೆಗೆ ಠಾಣೆಗೆ ಪಂಚರು ಮತ್ತು ಪೋಲೀಸ್ ಸಿಬ್ಬಂದಿಯವರಾದ  ಮಂಜುನಾಥ ಪಿ ಸಿ 379, ಆನಂದ ಪಿ ಸಿ 518, ಮೋಹನ್ ಕುಮಾರ್ ಪಿ ಸಿ 208 ರವರುಗಳೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ ಎ 40-ಜಿ-281 ರಲ್ಲಿ ಪೊಲೀಸ್ ಠಾಣೆಯಿಂದ ಹೊರಟು ಮಣಿವಾಲ ಗ್ರಾಮದ ಬಳಿಗೆ ಹೋಗಿ ಜೀಪನ್ನು ಗ್ರಾಮದಲ್ಲಿಯೇ ಮರೆಯಲ್ಲಿ ನಿಲ್ಲಿಸಿ ಸ್ವಲ್ಪ ದೂರು  ನಡೆದುಕೊಂಡು ಮಣಿವಾಲ ಕೆರೆಯ ಅಂಗಳಕ್ಕೆ,ನಾವುಗಳು ಹೊದಾಗ ಯಾರೋ ಆಸಾಮಿಗಳು  ಒಂದು ಜೆ ಸಿ ಬಿ ಯಂತ್ರದಿಂದ ಟ್ರಾಕ್ಟರ್ ಗೆ ಮರಳನ್ನು ತುಂಬಿಸುತ್ತಿದ್ದವರು ನಾವುಗಳು ಸಮವಸ್ತ್ರದಲ್ಲಿರುವುದನ್ನು ನೋಡಿ  ಜೆ ಸಿ ಬಿ ಯಂತ್ರ ಮತ್ತು ಟ್ರಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದರು .ನಾವುಗಳು ಬೆನ್ನಟ್ಟಿದರು ಸಿಗಲಿಲ್ಲ ಕೂಡಲೆ ಜೆ ಸಿ ಬಿ ಮತ್ತು ಟ್ರಾಕ್ಟರ್ ಬಳಿಗೆ ಬಂದು ಪರಿಶೀಲಿಸಲಾಗಿ ಟ್ರಾಕ್ಟರ್ ನೊಂದಣಿ ಸಂಖ್ಯೆ ಕೆ ಎ 40- ಎಂ- 5721, ಮಹೀಂದ್ರ ಕಂಪನಿಯದ್ದಾಗಿರುತ್ತೆ.ಇದರ  SR No, ZJBCO3412FE ಆಗಿರುತ್ತೆ.ಟ್ರಾಲಿಗೆ ಯಾವುದೇ ನೊಂದಣಿ ಸಂಖ್ಯೆ ಇರುವುದಿಲ್ಲ . ಟ್ರಾಲಿಯ ತುಂಬಾ ಮರಳು ತುಂಬಿಸಿರುತ್ತೆ.ಇದರ ಸಮೀಪವೇ ಜೆ ಸಿ  ಬಿ ಯಂತ್ರವಿದ್ದು, ಯಾವುದೇ ನೊಂದಣಿ ಸಂಖ್ಯೆ ಇರುವುದಿಲ್ಲ, ಇದರ ಇಂಜಿನ್ ನಂಬರ್  SL NO; H00200291,  ಹಾಗು ಚಾಸಿಸ್ಸ್ ನಂಬರ್, RAJ3DXSST02748585 ಅಗಿರುತ್ತೆ. ಜೆ ಸಿ ಬಿ ಬಾಂಡ್ಲಿಯಲ್ಲಿ ಮರಳು ತುಂಬಿಸಿರುವ ನಿಶಾನೆ ಇರುತ್ತೆ. ಈ ಮೇಲ್ಕಂಡ  ಟ್ರಾಕ್ಟರ್ ಹಾಗು ಜೆ ಸಿ ಬಿ ಯಂತ್ರದ ಮಾಲೀಕ ಹಾಗು ಚಾಲಕರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮರಳನ್ನು ಸಾಗಾಣಿಕೆ ಮಾಡಲು ನಿಷೇಧವಿದ್ದರು ಸಹ ಕಳ್ಳತನದಿಂದ ತುಂಬಿಸಿ ಸಾಗಣಿಕೆ ಮಾಡುತ್ತಿರುತ್ತಾರೆ.ಈ  ಟ್ರಾಕ್ಟರ್ ಟ್ರಾಲಿ ಮತ್ತು ಜೆ ಸಿ ಬಿ ವಾಹನಗಳನ್ನು ಸಂಜೆ 5.00 ಗಂಟೆಯಿಂದ 6.00 ಗಂಟೆಯವರೆವಿಗು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿ ಟ್ರಾಕ್ಟರ್ ಟ್ರಾಲಿ ಮತ್ತು ಜೆ ಸಿ ಬಿ ವಾಹನಗಳನ್ನು ಸಂಜೆ 6.30 ಗಂಟೆಗೆ ಠಾಣೆಯ ಆವರಣಕ್ಕೆ ಸ್ಥಳಾಂತರಿಸಿ  ಪ್ರಕರಣ ದಾಖಲು ಮಾಡುವಂತೆ ನೀಡಿದ ದುರನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುತ್ತೆ.

13) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.20/2019 ಕಲಂ. 32-34 KARNATAKA EXCISE ACT:-

     ದಿನಾಂಕ:05/03/2019 ರಂದು 16:45 ಗಂಟೆಗೆ ಪಿ.ಎಸ್.ಐ C.RAVIKUMAR  ಸಾಹೇಬರು ಆರೋಪಿ ಮತ್ತು ಮಾಲಿನೊಂದಿಗೆ ಪಂಚನಾಮೆ ಹಾಗೂ ವರದಿಯನ್ನು ನೀಡಿದ್ದರ ಸಾರಾಂಶವೇನೆಂದರೆ, ದಿನಾಂಕ:05/03/2019 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ, ಗೌರಿಬಿದನೂರು ಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂದೆ ಯಾರೋ ವ್ಯಕ್ತಿಯೊಬ್ಬನು ಅಕ್ರಮವಾಗಿ ಮದ್ಯವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಕೂಡಲೇ ನಾನು ಠಾಣೆಗೆ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ಸಿಹೆಚ್ಸಿಕ-244 ಗೋಪಾಲ್ ಹಾಗೂ ಪಿಸಿ-455 ಅಶ್ವತ್ಥಪ್ಪ ರವರೊಂದಿಗೆ ಬಸ್ ನಿಲ್ದಾಣದ ಬಳಿಗೆ ಹೋಗಿ ಕಾಯುತ್ತಿದ್ದಾಗ ಮಾಹಿತಿಯಂತೆ ಯಾರೋ ಒಬ್ಬ ಆಸಾಮಿಯು ಬಿಳಿ ಚೀಲದಲ್ಲಿ ಮೂಟೆಯೊಂದನ್ನು ಹಿಡಿದುಕೊಂಡು ಬರುತ್ತಿದ್ದು, ಚೀಲದಿಂದ ಹೊರಭಾಗಕ್ಕೆ ಮದ್ಯದ ಟೆಟ್ರಾ ಪಾಕೆಟ್ ಗಳು ಇರುವುದು ಕಂಡುಬರುತ್ತಿತ್ತು. ಆಸಾಮಿಯನ್ನು ತಡೆದು ನಿಲ್ಲಿಸಿದ್ದು, ಆಸಾಮಿಯನ್ನು ಮದ್ಯವನ್ನು ತೆಗೆದುಕೊಂಡು ಹೋಗುವುದಕ್ಕೆ ನಿನ್ನಲ್ಲಿ ಪರವಾನಗಿ ಇದೇಯೇ ಎಂದು ಕೇಳಿದಾಗ ಆತನು ತನ್ನ ಬಳಿ ಪರವಾನಗಿ ಇಲ್ಲವೆಂದು ತಿಳಿಸಿದ್ದು, ಆಸಾಮಿಯನ್ನು ವಶಕ್ಕೆ ತೆಗೆದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಕೇಳಿದಾಗ ಆತನು ತನ್ನ ಹೆಸರು ಚಂದ್ರಶೇಖರ್ ಬಿನ್ ಲೇಟ್ ಚಿನ್ನಪ್ಪರೆಡ್ಡಿ, 52 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ: ಕಾದಲವೇಣಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ವಿಳಾಸವನ್ನು ತಿಳಿಸಿರುತ್ತಾನೆ. ಬಿಳಿಯ ಗೋಣಿಚೀಲವನ್ನು ಬಿಚ್ಚಿ ನೋಡಿದಾಗ ಅದರಲ್ಲಿ 1)ಬೆಂಗಳೂರು ಮಾಲ್ಟ್ ವಿಸ್ಕಿ ಎಂದು ಹೆಸರು ನಮೂಧಿಸಿರುವ 90 ML ನ 48 TETRA POCKET ಗಳು ಇದ್ದು, ಒಂದು ಪಾಕೆಟ್ ಬೆಲೆ 24.47/- ಆಗಿತ್ತು. ಒಟ್ಟು ಪಾಕೆಟ್ಗಳ ಬೆಲೆ 1174.56/-ರೂಪಾಯಿಗಳು ಆಗಿರುತ್ತೆ. 2)OLD TAVERN WHISKY ಎಂದು ಹೆಸರು ನಮೂಧಿಸಿರುವ 180 ಎಂ.ಎಲ್. ನ 20 TETRA POCKET ಗಳು ಇದ್ದು, ಒಂದು ಪಾಕೆಟ್ ನ ಬೆಲೆ74.13/- ರೂಪಾಯಿಗಳು ಆಗಿದ್ದು, ಒಟ್ಟು ಬೆಲೆ 1482.6/- ರೂಪಾಯಿಗಳು ಆಗಿರುತ್ತವೆ. ಅವುಗಳೆಲ್ಲವನ್ನು ಪಂಚರ ಸಮ್ಮುಖದಲ್ಲಿ 3-30 ಗಂಟೆಯಿಂದ 4-30 ಗಂಟೆಯವರೆಗೆ ವಶಕ್ಕೆ ತೆಗೆದುಕೊಂಡು ಪಂಚನಾಮೆ ಜರುಗಿಸಿ ಅವುಗಳಲ್ಲಿ ಪ್ರತ್ಯೇಕವಾಗಿ ಒಂದೊಂದು ಪಾಕೆಟನ್ನು ಎಫ್.ಎಸ್.ಎಲ್ ತಜ್ಞರ ಪರೀಕ್ಷೆಗಾಗಿ ತೆಗೆದಿರಿಸಿರುತ್ತೆ.ಆರೋಪಿ ಹಾಗೂ ಮಾಲನ್ನು ವಶಕ್ಕೆ ತೆಗೆದುಕೊಂಡು ಬಂದಿದ್ದು, ಆರೋಪಿ ಹಾಗೂ ಮಾಲನ್ನು ತೆಗೆದುಕೊಂಡು ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯ ದೂರಾಗಿರುತ್ತೆ.

14) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.21/2019 ಕಲಂ.78(ಸಿ) ಕೆ.ಪಿ. ಆಕ್ಟ್:-

     ದಿನಾಂಕ:05/03/2019 ರಂದು ಸಂಜೆ 6:30 ಗಂಟೆಗೆ ಪಿ.ಎಸ್.ಐ ಸಿ. ರವಿಕುಮಾರ ರವರು ಆರೋಪಿ, ಮಾಲು, ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ:05/03/2019 ರಂದು  ಸಂಜೆ 5:00 ಗಂಟೆಗೆ  ಗೌರಿಬಿದನೂರು ಪುರದ  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಾಂಪೌಂಡ್ ಪಕ್ಕದ  ರಸ್ತೆಯಲ್ಲಿ ಯಾರೋ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಬಾತ್ಮೀ ಮೇರೆಗೆ ನಾನು ಪಂಚರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ಪಂಚರು ಮತ್ತು ಪೊಲೀಸ್ ಸಿಬ್ಬಂದಿಯಾದ ಗೋಪಾಲ ಹೆಚ್.ಸಿ 244 ಮತ್ತು  ಸುಬ್ರಮಣ್ಯ ಸಿ.ಹೆಚ್.ಸಿ 242,  ರವರುಗಳೊಂದಿಗೆ ನಡೆದುಕೊಂಡು  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳಗೆ ಹೋಗಿ ಕಾಂಪೌಂಡ್ ಪಕ್ಕದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಕಾಂಪೌಂಡ್ ಪಕ್ಕದಲ್ಲಿ ಹೊರಗೆ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ 1/- ರೂ.ಗೆ 70/- ರೂ.ಗಳನ್ನು ನೀಡುವುದಾಗಿ ಹಣದ ಆಮಿಷವನ್ನು ಒಡ್ಡುತ್ತ ಸಾರ್ವಜನಿಕರಿಂದ ಹಣವನ್ನು ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಸದರಿ ಜೂಜಾಟದ ಮೇಲೆ ಪಂಚರ ಸಮಕ್ಷಮ  ದಾಳಿ ಮಾಡಿ ಆತನನ್ನು ಸುತ್ತುವರಿದು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಸತೀಶ್ ಬಿನ್ ಲೇಟ್ ಗಂಗಪ್ಪ, 43 ವರ್ಷ, ಆದಿಕರ್ನಾಟಕ ಜನಾಂಗ, ಸೈಕಲ್ ಷಾಪ್ ಅಂಗಡಿ, ಸಂತೇಮೈದಾನ, ಗೌರಿಬಿದನೂರು ಪುರ ಸ್ವಂತ ಸ್ಥಳ ತಿಂಗಳೂರು ಗ್ರಾಮ, ಕೊಡಿಗೇನಹಳ್ಳಿ ಹೋಬಳಿ,ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ  ಎಂದು  ತಿಳಿಸಿದ್ದು, ಆತನ  ಬಳಿ ಇದ್ದ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು608/- ರೂ. ನಗದು ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮಾಲಿನೊಂದಿಗೆ ಆಸಾಮಿಯನ್ನು ಸಂಜೆ 6:30  ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯಾಗಿರುತ್ತೆ.

15) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.23/2019 ಕಲಂ.78(ಸಿ) ಕೆ.ಪಿ. ಆಕ್ಟ್:-

     ದಿನಾಂಕ:06/03/2019 ರಂದು ಮದ್ಯಾಹ್ನ 15:00 ಗಂಟೆಗೆ ಚಿಕ್ಕಬಳ್ಳಾಪುರ CEN ಅಪರಾಧ ಪೊಲೀಸ್ ಠಾಣೆಯ ಪಿ.ಐ ಶ್ರೀ. ಚೆನ್ನಪ್ಪ ರವರು ಆರೋಪಿ ಹಾಗೂ ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:06/03/2019 ರಂದು ತಾನು ಸಿಬ್ಬಂದಿಯೊಂದಿಗೆ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿಗಾಗಿ ಗೌರಿಬಿದನೂರು ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಬಂದ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಹಿಂಬಾಗ ಬರುವ ಬಾಬಯ್ಯ ಗುಡಿ ದೇವಸ್ಥಾನದ ಮುಂಬಾಗದ  ಸಾರ್ವಜನಿಕ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ ಸೈಯ್ಯದ್ ಅಪ್ಸರ್ @ ಅಬು ಬಿನ್ ಸೈಯ್ಯದ್ ಶಂಶುದ್ದೀನ್, 46 ವರ್ಷ, ಮುಸ್ಲಿಂ ಜನಾಂಗ, ವಾಸ ವಿನಾಯಕನಗರ, ಗೌರಿಬಿದನೂರು ನಗರ ಎಂಬುವವರನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ  ಒಂದು ಮಟ್ಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 1970/- ರೂ ನಗದು ಹಣವನ್ನು ಕೇಸಿನ ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿದ್ದು, ಆಸಾಮಿ ಮತ್ತು ಮೇಲ್ಕಂಡ ಮಾಲುಗಳನ್ನು ಮತ್ತು ಪಂಚನಾಮೆಯನ್ನು  ನೀಡುತ್ತಿದ್ದು ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ವರದಿಯಾಗಿರುತ್ತೆ.

16) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.24/2019 ಕಲಂ.420 ಐ.ಪಿ.ಸಿ:-

     ದಿನಾಂಕ:06/03/2019 ರಂದು 19:00 ಗಂಟೆಗೆ ಮಾನ್ಯ ಪೊಲೀಸ್ ಅಧೀಕ್ಷಕರ ಕಛೇರಿಯಿಂದ ಪಿರ್ಯಾದಿದಾರರ ಮುಖಾಂತರ ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ನನಗೆ ಕೆ.ಆರ್ ಪ್ರಕಾಶ್ ಕುಮಾರ್ ಅಲಿಯಾಸ್ ಸ್ವಾಮಿ, ಎಸ್.ಎಲ್.ಎನ್ ಬಸ್ ಮಾಲೀಕರು, ಕುಣಿಗಲ್  ರವರು 1979-80 ರ ಶಾಲಾ ದಿನಗಳಿಂದಲೂ ಪರಿಚಯವಿದ್ದು,  ಇವರು ಗೌರಿಬಿದನೂರಿ ನಲ್ಲಿ  ಸರ್ವೆ ನಂ.7 ರ ಜಮೀನು ಖರೀದಿಸುವ ಉದ್ದೇಶದಿಂದ ನನ್ನಿಂದ ರೂ.36,00,000/- ಗಳನ್ನು ಪಡೆದು ಈಗ ತಮಿಳು ನಾಡಿನ ಈರೋಡ್ ಸತ್ಯಮಂಗಲ ಇಲ್ಲಿ ತಲೆಮರೆಸಿಕೊಂಡಿರುತ್ತಾರೆ. ಈ ಕಾರಣದಿಂದಾಗಿ, ಇಷ್ಟು ದೊಡ್ಡ ಹಣವನ್ನು ಕೈಬಿಟ್ಟಿರುವುದರಿಂದ ನನ್ನ ಸಂಸಾರದಲ್ಲಿ ಬಿರುಗಾಳಿಯೆದ್ದಿದ್ದು, ನನ್ನ ಪತ್ನಿ ನನ್ನಿಂದ ದೂರವಾಗಿರುತ್ತಾರೆ. ಹಾಗೂ ನನ್ನ ಆರೋಗ್ಯ ಸಹ ಕ್ರಮವಾಗಿ ಕ್ಷೀಣಿಸುತ್ತಿದೆ.  ಕೆ.ಆರ್ ಪ್ರಕಾಶ್ ಕುಮಾರ್ ಅಲಿಯಾಸ್ ಸ್ವಾಮಿ ಇವರು ನನಗೆ  ನೀಡಿರುವ ಒಟ್ಟು ಮೌಲ್ಯದ ಮೂರು ಚೆಕ್ ಗಳ ಪ್ರತಿಗಳನ್ನು ತಮ್ಮ ಮಾಹಿತಿಗಾಗಿ ಇದರೊಂದಿಗೆ ಲಗತ್ತಿಸಿರುತ್ತೇನೆ.  ಕೆ.ಆರ್ ಪ್ರಕಾಶ್ ಕುಮಾರ್ ಅಲಿಯಾಸ್ ಸ್ವಾಮಿ ಇವರ ಜೊತೆ ಸಂಪರ್ಕದಲ್ಲಿರುವ ಇವರ ಹಿಂದಿನ ಕಾರ್ ಚಾಲಕ ಅಶೋಕ ರವರ ದೂರವಾಣಿ ಸಂಖ್ಯೆ 9591015906 ಆಗಿದ್ದು, ನನಗೆ ಮೋಸ ಮಾಡಿ ಹೋಗಿರುವ ದೊಡ್ಡ ಮೊತ್ತದ ಹಣವನ್ನು ನನಗೆ ಹಿಂಪಡೆಯುವಲ್ಲಿ ನನಗೆ ಸಹಾಯ ಮಾಡಬೇಕಾಗಿ ನೀಡಿದ ದೂರಾಗಿರುತ್ತೆ.

17) ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.26/2019 ಕಲಂ.379 ಐ.ಪಿ.ಸಿ:-

          ದಿನಾಂಕ:05-03-2019 ರಂದು ಮದ್ಯಾಹ್ನ 1-15 ಘಂಟೆಯಲ್ಲಿ ಪಿರ್ಯಾದುದಾರರಾದ ಶ್ರೀ.ಬೈರಾರೆಡ್ಡಿ.ಬಿ ಬಿನ್ ಲೇಟ್ ಬಚ್ಚಪ್ಪ, 38 ವರ್ಷ, ದಾಸರೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ;02-03-2019 ರಂದು ರಾತ್ರಿ ಸುಮಾರು 10-00 ಘಂಟೆಯಲ್ಲಿ TVS XL-100 ದ್ವಿಚಕ್ರವಾಹನವನ್ನು ಬಾಗೇಪಲ್ಲಿ-ಚಿಕ್ಕಬಳ್ಳಾಪುರ  NH-7 ರಸ್ತೆಯ ಯಲಗಲಹಳ್ಳಿ ಗೇಟ್ ಬಳಿ ಬಿಟ್ಟು ಪೊಲೀಸ್ ದಫೇಧಾರ್ ನನ್ನು ಮಾತನಾಡಿಸಿಕೊಂಡು ಬರುವಷ್ಟರಲ್ಲಿ ತನ್ನ ಅಂದಾಜು 30,000/- ರೂ ಬೆಲೆ ಬಾಳುವ  TVS XL-100 ದ್ವಿಚಕ್ರವಾಹನವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು, ಅಲ್ಲಿ ಇಲ್ಲಿ ಹುಡುಕಾಡಿದರೂ ಸಿಗದೇ ಇದ್ದು, ಪತ್ತೆ ಮಾಡಿಕೊಡಲು ಕೋರಿ ಪಿರ್ಯಾದು.

18) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.37/2019 ಕಲಂ.15(ಎ) KARNATAKA EXCISE ACT:-

     ದಿನಾಂಕ: 05/03/2019 ಮದ್ಯಾಹ್ನ 2-30 ಗಂಟೆಗೆ ಪಿರ್ಯದಿದಾರರು ಠಾಣೆಗೆ ಮಾಲು ಮತ್ತು ಆರೋಪಿ, ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ 05/03/2019 ರಂದು ಠಾಣಾಧಿಕಾರಿಗಳು ತನಗೆ  ಗ್ರಾಮ ಗಸ್ತಿಗೆ ನೇಮಕ ಮಾಡಿದ್ದು ಅದರಂತೆ ತಾನು ಮಂಚೇನಹಳ್ಳಿ, ಹೊನ್ನಪನಹಳ್ಳಿ, ಹಳೆಹಳ್ಳಿ, ವರವಣಿ, ಪುರ, ಬಿಸಲಹಳ್ಳಿ, ಮಾವಿನಕಾಯಲಹಳ್ಳ, ದ್ವಾರಗಾನಹಳ್ಳಿ, ರಾಯರೇಖಲಹಳ್ಳಿ, ನಂದಿಗಾನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ ಮದ್ಯಾಹ್ನ  12-00 ಗಂಟೆ ಸಮಯದಲ್ಲಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ನಂದಿಗಾನಹಳ್ಳಿ ಗ್ರಾಮದ ಮೋರಿಯ ಬಳಿ ಯಾರೋ ಒಬ್ಬ ಅಸಾಮಿ ಯಾವುದೇ ರೀತಿಯ ಅನುಮತಿ ಮತ್ತು ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆಗೆ ಅವಕಾಶಕೊಟ್ಟಿರುವುದಾಗಿ ಬಂದ ಖಚಿತ ಬಾತ್ಮಿಯ ಮೇರೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ವಿಚಾರವನ್ನು ತಿಳಿಸಿ ಪಂಚರಾಗಿ ಬರಲು ಒಪ್ಪಿದ ನಂತರ ತಾನು ಹಾಗೂ ಪಂಚರುಗಳು ಸದರಿ ದಿನದಂದು ಮದ್ಯಾಹ್ನ 12-30 ಗಂಟೆಗೆ ತಮ್ಮ ಬಾಬತ್ತು ದ್ವಿ ಚಕ್ರ ವಾಹನಗಳಲ್ಲಿ ನಂದಿಗಾನಹಳ್ಳಿ ಗ್ರಾಮದ ಮೋರಿಯ ಬಳಿ ಹೋದಾಗ ಮೋರಿಯ ಬಳಿ ಸಾರ್ವಜನಿಕರು ತಿರುಗಾಡುವ ಸ್ಥಳದಲ್ಲಿ ಸುಮಾರು ಮೂರು ಜನರು ಮಧ್ಯವನ್ನು ಕುಡಿಯುತ್ತಿದ್ದರು, ತಾನು ಹಾಗೂ ಪಂಚರು ದಾಳಿ ಮಾಡಲಾಗಿ ನಮ್ಮಗಳನ್ನು ನೋಡಿ ಮಧ್ಯ ಕುಡಿಯುತ್ತಿದ್ದವರು ಓಡಿ ಹೋದರು, ನಂದಿಗಾನಹಳ್ಳಿ ಗ್ರಾಮದ ಮೋರಿಯ ಬಳಿ ಮಧ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟ ವ್ಯಕ್ತಿಗೆ ಮಧ್ಯ ಕುಡಿಯಲು ಅವಕಾಶದ ಬಗ್ಗೆ ಪರವಾನಗಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ಅನುಮತಿ ಮತ್ತು ಪರ್ಮಿಟ್ ಇಲ್ಲವೆಂದು ನಂದಿಗಾನಹಳ್ಳಿ ಗ್ರಾಮದ ಮೋರಿಯ ಬಳಿ ಸಣ್ಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುತ್ತೆನೆಂದು ತಿಳಿಸಿದನು. ಮಧ್ಯ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದವನ ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ಲೇಟ್ ಗಂಗಪ್ಪ, 63 ವರ್ಷ, ಆದಿದ್ರಾವಿಡ ಜನಾಂಗ, ವ್ಯಾಪಾರ, ವಾಸ ನಂದಿಗಾನಹಳ್ಳಿ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದನು ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದರಲ್ಲಿ  90 ML ನ 13 HAYWARDS CHEERS WHISKY ಟೆಟ್ರಾ ಪ್ಯಾಕೆಟ್ ಗಳು ಮತ್ತು 3 ಪ್ಲಾಸ್ಟಿಕ್ ಕಪ್ ಗಳಿದ್ದು ಸದರಿಯವುಗಳನ್ನು ಮದ್ಯಾಹ್ನ 12-30  ಗಂಟೆಯಿಂದ 1-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ದೊರೆತ ಮಧ್ಯದ ಬೆಲೆ ಸುಮಾರು 395 ರೂಗಳು ಬೆಲೆ ಬಾಳುವುದಾಗಿದ್ದು. ದೊರೆತ ಮಾಲನ್ನು ಮತ್ತು ಸಾರ್ವಜನಿಕರಿಗೆ ಕುಡಿಲು ಅನುವುಮಾಡಿಕೊಟ್ಟಿದ್ದ ಅಸಾಮಿ ನರಸಿಂಹಪ್ಪ ಬಿನ್ ಲೇಟ್ ಗಂಗಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು ಮುಂದಿನ ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

19) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.38/2019 ಕಲಂ.15(ಎ) KARNATAKA EXCISE ACT:-

     ದಿನಾಂಕ: 05/03/2019 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿದಾರರು ಮಾಲು ಆರೋಪಿ, ಹಾಗೂ ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ 05/03/2019 ರಂದು ಠಾಣಾಧಿಕಾರಿಗಳು ತನಗೆ ಮತ್ತು ಪಿಸಿ-392 ಬಾಬು ರವರಿಗೆ ಗ್ರಾಮ ಗಸ್ತಿಗೆ ನೇಮಕ ಮಾಡಿದ್ದು ಅದರಂತೆ ತಾವುಗಳು ಮಂಚೇನಹಳ್ಳಿ, ಕಾಟನಾಗೇನಹಳ್ಳಿ, ಬೆಳ್ತೂರು, ದೇವರಹಳ್ಳಿ, ತೊಂಡೆಬಾವಿ, ತೊಂಡೆಬಾವಿ ರೈಲ್ವೆ ಸ್ಟೇಷನ್, ಹುಸೇನ್ ಪುರ, ಅಲಕಾಪುರ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಅಲಕಾಪುರಗೇಟ್ ಬಳಿ ಯಾರೋ ಒಬ್ಬ ಅಸಾಮಿ ಯಾವುದೇ ರೀತಿಯ ಅನುಮತಿ ಮತ್ತು ಪರ್ಮಿಟ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆಗೆ ಅವಕಾಶಕೊಟ್ಟಿರುವುದಾಗಿ ಬಂದ ಖಚಿತ ಬಾತ್ಮಿಯ ಮೇರೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ವಿಚಾರವನ್ನು ತಿಳಿಸಿ ಪಂಚರಾಗಿ ಬರಲು ಒಪ್ಪಿದ ನಂತರ ತಾವು ಹಾಗೂ ಪಂಚರುಗಳು ಸದರಿ ದಿನದಂದು ಮದ್ಯಾಹ್ನ 2-45 ಗಂಟೆಗೆ ತಮ್ಮ ಬಾಬತ್ತು ದ್ವಿ ಚಕ್ರ ವಾಹನಗಳಲ್ಲಿ ಅಲಕಾಫುರಗೇಟ್ ಬಳಿ ಹೋದಾಗ ಅಲಕಾಪುರ ಗೇಟ್ ನಲ್ಲಿ ಸಾರ್ವಜನಿಕರು ತಿರುಗಾಡುವ ಸ್ಥಳದಲ್ಲಿ ಸುಮಾರು ನಾಲ್ಕು ಜನರು ಮಧ್ಯವನ್ನು ಕುಡಿಯುತ್ತಿದ್ದರು, ತಾವು ಹಾಗೂ ಪಂಚರು ದಾಳಿ ಮಾಡಲಾಗಿ ತಮ್ಮಗಳನ್ನು ನೋಡಿ ಮಧ್ಯ ಕುಡಿಯುತ್ತಿದ್ದವರು ಓಡಿ ಹೋದರು, ಅಲಕಾಫುರ ಗೇಟ್ ನಲ್ಲಿ ಮಧ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟ ವ್ಯಕ್ತಿಗೆ ಮಧ್ಯ ಕುಡಿಯಲು ಅವಕಾಶದ ಬಗ್ಗೆ ಪರವಾನಗಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ಅನುಮತಿ ಮತ್ತು ಪರ್ಮಿಟ್ ಇಲ್ಲವೆಂದು ಅಲಕಾಪುರ ಗೇಟ್ ನಲ್ಲಿ ಸಣ್ಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುತ್ತೆನೆಂದು ತಿಳಿಸಿದನು. ಮಧ್ಯ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದವನ ಹೆಸರು ಮತ್ತು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ಹನುಮಂತರಾಯಪ್ಪ, 57 ವರ್ಷ, ಈಡಿಗರು, ವ್ಯಾಪಾರ, ವಾಸ ನಂದಿಗಾನಹಳ್ಳಿ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದನು ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದರಲ್ಲಿ  90 ML ನ 14 HAYWARDS CHEERS WHISKY ಟೆಟ್ರಾ ಪ್ಯಾಕೆಟ್ ಗಳು ಮತ್ತು 4 ಪ್ಲಾಸ್ಟಿಕ್ ಕಪ್ ಗಳಿದ್ದು ಸದರಿಯವುಗಳನ್ನು ಮದ್ಯಾಹ್ನ 2-45  ಗಂಟೆಯಿಂದ 3-45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ದೊರೆತ ಮಧ್ಯದ ಬೆಲೆ ಸುಮಾರು 425 ರೂಗಳು ಬೆಲೆ ಬಾಳುವುದಾಗಿದ್ದು. ದೊರೆತ ಮಾಲನ್ನು ಮತ್ತು ಸಾರ್ವಜನಿಕರಿಗೆ ಕುಡಿಲು ಅನುವುಮಾಡಿಕೊಟ್ಟಿದ್ದ ಅಸಾಮಿ ನಾರಾಯಣಸ್ವಾಮಿ ಬಿನ್ ಲೇಟ್ ಹನುಮಂತರಾಯಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು ಮುಂದಿನ ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

20) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.39/2019 ಕಲಂ.323-324-332-353-355-504-506 ರೆ/ವಿ 149 ಐ.ಪಿ.ಸಿ:-

     ದಿನಾಂಕ 05/03/2019 ರಂದು ಮದ್ಯಾಹ್ನ 3-00 ಗಂಟೆಗೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮಾಹಿತಿ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಅಶ್ವತ್ಥರೆಡ್ಡಿ ಕೆ.ಎಸ್.ಆರ್.ಟಿ.ಸಿ ಬಸ್ಸು ಚಾಲಕ ರವರ ಹೇಳಿಕೆ ಪಡೆದಿದ್ದರ ಸಾರಾಂಶವೇನೆಂದರೆ ತನಗೂ ಮತ್ತು ನಿರ್ವಾಹಕ ಬಿಲ್ಲೆ ನಂ 1159 ಶ್ರೀ ಮಂಜುನಾಥ ರವರಿಗೆ ಕೆಎ 40-ಎಫ್-675 ರ ಬಸ್ಸಿಗೆ ರೂಟ್ ನಂ 24 ಕ್ಕೆ ಗೌರೀಬಿದನೂರು-ಚಿಕ್ಕಬಳ್ಳಾಪುರ ಕ್ಕೆ ಹೋಗುವ ಮಾರ್ಗಕ್ಕೆ ನೇಮಕ ಮಾಡಿದ್ದು ಅದರಂತೆ ಈ ದಿನ ದಿನಾಂಕ 05/03/2019 ರಂದು ಮದ್ಯಾಹ್ನ ಸುಮಾರು 2-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಲಾಪುರ ದಿಂದ ಗೌರೀಬಿದನೂರುಗೆ ಬರಳು ಬಿಸಲಹಳ್ಳಿ ಗ್ರಾಮ ಬಿಟ್ಟು ಸ್ವಲ್ಪ ಮುಂದು ಬ್ರಿಡ್ಜ್ ಹತ್ತಿರ ತಮ್ಮ ದರುಗಡೆಯಿಂದ ಬಂದ ಅಂದರೆ ಗೌರೀಬಿದನೂರು ಕಡೆಯಿಂದ ಬಂದ ಎಪಿ27-ಎಎನ್-1026 ರ ಕಾರಿನ ಚಾಲಕ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ಇನ್ನೇನು ನಾನು ಚಾಲನೆ ಮಾಡುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆಸುವಂತೆ ಬಂದ ಗ ತಾನು ಏನು ಗುರು ನಿಧಾನವಾಗಿ ಬಂದರೆ ಆಗಲ್ಲಾ ಎಂದೆ ಅದಕ್ಕೆ ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಬಂದು ಕೆಟ್ಟ ಮಾತುಗಳಿಂದ ಬೈದು ಬಸ್ಸಿನಿಂದ ಕೆಳಕ್ಕೆ ಎಳೆದುಕೊಂಡು ಕಲ್ಲಿನಿಂದ ಹೊಡೆದಿದ್ದು, ಆಗ ಬಿಡಿಸಲು ಬಂದ ಕಂಡಕ್ಟರ್ ಮಂಜುನಾಥ ರವರಿಗೆ ಬಸ್ಸಿನಲ್ಲಿದ್ದ ತಮ್ಮ ಘಟಕದ ಸೆಕ್ಯೂರಿಟಿ ಗಾರ್ಡ್ ರಾಜೇಶ್ ರವರಿಗೆ ಇನ್ನೊಂದು ಎಪಿ 03-ಎಸ್-7273 ರ ಕಾರಿನಲ್ಲಿ ಬಂದವರು ಕಲ್ಲುಗಳಿಂದ ಮತ್ತು ಚಾಕುವಿನಿಂದ ತಲೆಗೆ ಹೊಡದು ರಕ್ತಗಾಯ ಪಡಿಸಿದ್ದು, ನನಗೂ ಸಹ ಚಾಕುವಿನಿಂದ ತಲೆಗೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.  ಕಾರಿನಲ್ಲಿದ್ದ 4 ಜನ ಹೆಂಗಸರೂ ಚಪ್ಪಲಿಗಳಿಂದ ಮತ್ತು ಕೈಗಳಿಂದ ಹೊಡೆದು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಪ್ರಾಣ ಬೆದರಿಕೆ ಹಾಕಿದವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ಮೇರೆಗೆ ಠಾಣೆಗೆ ವಾಪಾಸ್ಸು ಸಂಜೆ 5-00 ಗಂಟೆಗೆ ಬಂದು ಪ್ರಕರಣ ದಾಖಲಿಸಿಕೊಂಡಿರುತ್ತೆ.

21) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.32/2019 ಕಲಂ. 420 ಐ.ಪಿ.ಸಿ:-

     ದಿನಾಂಕ:05/03/2019 ರಂದು ಸಂಜೆ 19-00 ಗಂಟೆಯಲ್ಲಿ ಪಿರ್ಯಾದಿ ಮುನಿಯಪ್ಪ ಬಿನ್ ಲೇಟ್ ಕುಂಟಿಚಿನ್ನಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ  10 ತಿಂಗಳಹಿಂದೆ ಇದ್ಲೂಡು  ಗ್ರಾಮದ ಮಂಜುನಾಥ ಬಿನ್ ಪಿಳ್ಳಕೊಂಡಪ್ಪ ರವರ ಬಳಿ  ತಿಂಗಳಿಗೆ 20000 ರೂ ಕಂತಿನಂತೆ  5 ಲಕ್ಷದ ಚೀಟಿಯನ್ನು ಹಾಕಿದ್ದು. ತನ್ನ  ಕಷ್ಠಗಳಿಗೆ ಬೇರೆಯವರ ಬಳಿ ಕೈಸಾಲವನ್ನು ಮಾಡಿದ್ದು  ಸದರಿ ಸಾಲವನ್ನು ಹಿಂತಿರುಗಿಸಲು  ನಾನು ಹಾಕಿದ್ದ 5 ಲಕ್ಷದ ಚೀಟಿಯನ್ನು ದಿನಾಂಕ:01/03/2019 ರಂದು  ಒಂದು ಲಕ್ಷ ನಲವತ್ತೈದು ಸಾವಿರ ಬಿಟ್ಟು ಕೋಗಿ  ಸದರಿ ಚೀಟಿಯಲ್ಲಿ ಕೋಗಿದ ಒಟ್ಟು 355000-00 ರೂ  ಹಣವನ್ನು ನಾನು ಮನೆಗೆ ತೆಗೆದುಕೊಂಡು ಬಂದು  ನಂತರ ಇಷ್ಟೋಂದು ಹಣ ಮನೆಯಲ್ಲಿರುವುದು ಬೇಡ ಎಂದು ಕಾರ್ಪೊರೆಷನ್ ಬ್ಯಾಂಕ್ ನ ತನ್ನ ಖಾತೆ ನಂ 520101042602544 ಖಾತೆಗೆ ಜಮೆ ಮಾಡಿ ಬರೋಣವೆಂದು  ದಿನಾಂಕ:02-03-2019 ರಂದು ಒಟ್ಟು ಹಣದ ಪೈಕಿ 275000-00 ರೂ ಹಣವನ್ನು ತೆಗೆದುಕೊಂಡು ತನ್ನ ಬಾಬತ್ತು ಕೆಎ-41 ಎಲ್-8846 ದ್ವಿಚಕ್ರವಾಹನದಲ್ಲಿ ಅಳವಡಿಸಿದ್ದ ಬಾಕ್ಸ್ ನಲ್ಲಿ ಇಟ್ಟುಕೊಂಡು ಶಿಡ್ಲಘಟ್ಟ ಕಾರ್ಪೊರೆಷನ್ ಬ್ಯಾಂಕ್ ಬಳಿ  ಮದ್ಯಾಹ್ನ   3-55 ಗಂಟೆಗೆ ಬಂದಾಗ ಬ್ಯಾಂಕ್  ಸಮಯಯ ಮುಗಿದಿದ್ದರಿಂದ  ಬ್ಯಾಂಕ್ ನಲ್ಲಿ ಹಣಕಟ್ಟಿಸಿಕೊಂಡಿರುವುದಿಲ್ಲಾ , ಸದರಿ ಹಣವನ್ನು ತನ್ನ  ದ್ವಿಚಕ್ರವಾಹನದ ಬಾಕ್ಸ್ ನಲ್ಲಿ ಇಟ್ಟುಕೊಂಡು  ಮೇಲೂರು ಗ್ರಾಮದಲ್ಲಿ ತಮ್ಮ ಗಾರೆಕೆಲಸಗಾರರು ಕೆಲಸ ಮಾಡುತ್ತಿರುವುದನ್ನು ನೋಡಿಕೊಂಡು ಬರಲು ಸಂಜೆ 4-30 ಗಂಟೆಯಲ್ಲಿ  ಶಿಡ್ಲಘಟ್ಟ-ವಿಜಯಪುರ ರಸ್ತೆ ಹಂಡಿಗನಾಳ ಗ್ರಾಮದ ಬಳಿ ಹೋಗುತ್ತಿದ್ದಾಗ  ತನ್ನ ಹಿಂಭಾಗದಲ್ಲಿ ಯಾರೋ ಒಂದು ದ್ವಿಚಕ್ರವಾಹನದಲ್ಲಿ ಒಬ್ಬರು ಮತ್ತು ಇನ್ನೊಂದು ದ್ವಿಚಕ್ರವಾಹನದಲ್ಲಿ ಇಬ್ಬರು ಬರುತ್ತಿದ್ದರು, ಒಂದು ದ್ವಿಚಕ್ರವಾಹನದಲ್ಲಿ ಬಂದ ಒಬ್ಬವ್ಯಕ್ತಿ  ಮುಂದೆ ಬಂದು ಹಿಂದೆ ನಿನ್ನ ಹಣ ಬಿದ್ದು ಹೋಗಿದೆ ಎಂದು ಹೇಳಿದಾಗ ತಾನು ತನ್ನ ದ್ವಿಚಕ್ರವಾಹನವನ್ನು ಅಲ್ಲಿಯೇ ನಿಲ್ಲಿಸಿ ಕೀ ಅನ್ನು ದ್ವಿಚಕ್ರವಾಹನದಲ್ಲಿಯೇ ಬಿಟ್ಟು ಎಲ್ಲಿ ಎಂದು ಕೇಳಿದಾಗ ಆತ ದ್ವಿಚಕ್ರವಾಹನದಲ್ಲಿ ಹಿಂದೆ ಹೋಗಿದ್ದು ತಾನು   ನಡೆದುಕೊಂಡು ಹಿಂದೆ ಹೋದಾಗ ಆತ ಹಣ ಬಿದ್ದಿದ ಸ್ಥಳವನ್ನು ತೋರಿಸಿ ಮತ್ತೆ ವಾಪಸ್ಸು ತಾನು ದ್ವಿಚಕ್ರವಾಹನ ನಿಲ್ಲಿಸಿದ ಸ್ಥಳಕ್ಕೆ ಹೊರಟು ಹೋದನು  ಅಲ್ಲಿ 20-00 ರೂ ಮುಖಬೆಲೆಯ 3 ನೋಟುಗಳು  ಮತ್ತು 10-00 ರೂ ಮುಖಬೆಲೆಯ ಒಂದು ನೋಟು ಬಿದ್ದಿತ್ತು ಆಗ ಸದರಿ ಹಣವನ್ನು ತೆಗೆದುಕೊಂಡು ವಾಪಸ್ಸು ತನ್ನ ದ್ವಿಚಕ್ರವಾಹನದ ಕಡೆ ನೋಡಿದಾಗ ಅಲ್ಲಿ ಇಬ್ಬರು ಒಂದು ದ್ವಿಚಕ್ರವಾಹನವನ್ನು ನಿಲ್ಲಿಸಿಕೊಂಡು ಇದ್ದರು ತನಗೆ ಹಣ ತೋರಿಸಲು ದ್ವಿಚಕ್ರವಾಹನದಲ್ಲಿ  ಬಂದ ವ್ಯಕ್ತಿಯೂ ಸಹ ಅಲ್ಲಿ ಇದ್ದನು ನಂತರ ತಾನು ತನ್ನ ದ್ವಿಚಕ್ರವಾಹನದ ಬಳಿ ಹೋಗುವಷ್ಠರಲ್ಲಿ ಅಲ್ಲಿದ್ದ ಮೂರು ಜನ ಹೊರಟು ಹೋದರು  ತಾನು ದ್ವಿಚಕ್ರವಾಹನ ಸ್ಟಾಟ್ ಮಾಡಲು ಹೋದಾಗ ದ್ವಿಚಕ್ರವಾಹನದಲ್ಲಿ ಕೀ ಇರಲಿಲ್ಲಾ  ಆಗ ತಾನು ದ್ವಿಚಕ್ರವಾಹನವನ್ನು ಸ್ವಲ್ಪಮುಂದೆ ತಳ್ಳಿಕೊಂಡು ಹೋಗಿ ಚಿಲ್ಲರೆ ಅಂಗಡಿಯ ಮುಂದೆ ನಿಲ್ಲಿ ಚಿಲ್ಲರೆ ಅಂಗಡಿಯವರ ಬಳಿ ಆತನ ದ್ವಿಚಕ್ರವಾಹನದ ಕೀಯನ್ನು ಪಡೆದುಕೊಂಡು ಅದರಿಂದ  ತನ್ನ ದ್ವಿಚಕ್ರವಾಹನದ  ಬಾಕ್ಸ್ ಅನ್ನು  ತೆಗೆದು ನೋಡಲಾಗಿ ತಾನು ಇಟ್ಟಿದ್ದ   275000-00 ರೂ  ಹಣ ಇರಲಿಲ್ಲಾ  ಯಾರೋ ಮೂರು ಜನ ವ್ಯಕ್ತಿಗಳು  ಎರಡು ದ್ವಿಚಕ್ರವಾಹಗಳಲ್ಲಿ ತನ್ನನ್ನು ಪಾಲೋ ಮಾಡಿಕೊಂಡು ಬಂದು ಹಿಂಭಾಗದಲ್ಲಿ ಹಣ ಬಿದ್ದಿದೆ ಎಂದು ತನ್ನ ಗಮನವನ್ನು ಬೇರೆ ಕಡೆ ಸೆಳೆದು ತಾನು ತನ್ನ ದ್ವಿಚಕ್ರವಾಹನದ ಬಾಕ್ಸ್ ನಲ್ಲಿ ಇಟ್ಟಿದ್ದ  ಒಟ್ಟು  275000-00 ರೂ ಹಣವನ್ನು ದ್ವಿಚಕ್ರವಾಹನದಲ್ಲಿಯೇ ಇದ್ದ ಕೀ ಯಿಂದ ಬಾಕ್ಸ್ ತೆರೆದು ಹಣವನ್ನು ಮತ್ತು ದ್ವಿಚಕ್ರವಾಹನದ ಕೀಯನ್ನು ತೆಗೆದುಕೊಂಡು ಹೋಗಿ ತನಗೆ ಮೋಸಮಾಡಿರುತ್ತಾರೆ.ತನಗೆ ಗಾಬರಿಯಾಗಿ ವಿಚಾರವನ್ನು ತಮ್ಮ ಮನೆಯಲ್ಲಿ ಯಾರಿಗೂ ತಿಳಿಸದೇ ಮೂರು ದಿನ ನಂತರ ಸದರಿ ವಿಚಾರವನ್ನು ತನ್ನ ಮಗ  ನಾಗರಾಜು ರವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು ಆಗ ತನ್ನ ಮಗ ನಾನು ಬರುತ್ತೇನೆ ಪೊಲೀಸ್ ದೂರು ಕೋಡೊಣವೆಂದು ಹೇಳಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿದ್ದು,  ತನ್ನ ಗಮನವನ್ನು ಬೇರೆ ಕಡೆಗೆ ಸೆಳೆದು ತನ್ನ ಹಣವನ್ನು ತೆಗೆದುಕೊಂಡು ಹೋಗಿ ನನಗೆ ಮೋಸ ಮಾಡಿದ ವ್ಯಕ್ತಿಗಳನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.