ದಿನಾಂಕ : 06/02/2019ರ ಅಪರಾಧ ಪ್ರಕರಣಗಳು

1) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 11/2019 ಕಲಂ. 279 ಐಪಿಸಿ :-

      ದಿನಾಂಕ:-05/02/2019 ರಂದು ಮಧ್ಯಾಹ್ನ 2:30 ಗಂಟೆಗೆ ಪಿರ್ಯಾಧಿ ಕುಮಾರಿ ಶ್ರಾವಣಿ ಬಿನ್ ಬಿ.ಎನ್.ಬಾಬುರೆಡ್ಡಿ 22 ವರ್ಷ, ವಕ್ಕಲಿಗರು, ನಂ-40(ಎ), ಆಂಜನೇಯ ದೇವಸ್ಥಾನದ ಹತ್ತಿರ, ಭಾಣಸವಾಡಿ, ಕೆಆರ್.ಪುರಂ ಹೋಬಳಿ, ಬೆಂಗಳೂರು-43. ರವರು ಟೈಪ್ ಮಾಡಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-04/02/2019 ರಂದು ರಾಜಾನುಕುಂಟೆ ಪ್ರಸಿಡೆನ್ಸ್ ಯೂನಿವರ್ಸಿಟಿ ಕಾಲೇಜನಲ್ಲಿ ಎಲ್.ಎಲ್.ಬಿ ವ್ಯಾಸಾಂಗ ಮಾಡುತ್ತಿದ್ದು, ಸಂಜೆ 5:30 ಗಂಟೆಯ ಸಮಯದಲ್ಲಿ ಕಾಲೇಜು ಮುಗಿಸಿಕೊಂಡು ತನ್ನ ಕೆಎ-03-ಎನ್.ಎ-1525 ರ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಸ್ನೇಹಿತರನ್ನು ನೋಡಿಕೊಂಡು ವಾಪಸ್ಸು ಮನೆಗೆ ಹೋಗಲು ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಹೆಚ್-7 ಬೈಪಾಸ್ ರಸ್ತೆಯ ಚೊಕ್ಕಹಳ್ಳಿ ಗೇಟ್ ಬಳಿ ರಾತ್ರಿ 8:00 ಗಂಟೆಯ ಸಮಯದಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ನಾಯಿ ಅಡ್ಡ ಬಂದಿದ್ದರಿಂದ ತಾನು ತನ್ನ ಕಾರನ್ನು ನಿಧಾನವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಹಿಂದೆ ಬರುತ್ತಿದ್ದ ಕೆಎ-50-ಎ-6915 ರ ಟಿಪ್ಪರ್ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ತನ್ನ ಕಾರಿನ ಹಿಂಭಾಗದಿಂದ ಅರ್ಧ ಭಾಗ ಜಕಂಗೊಂಡಿದ್ದು, ಯಾರಿಗೂ ಸಹಾ ಗಾಯಗಳಾಗದೇ ಇದ್ದು, ಸದರಿ ಅಪಘಾತಕ್ಕೆ ಕಾರಣನಾದ ಕೆಎ-50-ಎ-6915 ಟಿಪ್ಪರ್ ಲಾರಿ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಆನಂದ ಬಿನ್ ಮುನಿಸ್ವಾಮಪ್ಪ 36 ವರ್ಷ, ವಕ್ಕಲಿಗರು, ಕನ್ನಮಂಗಲಪಾಳ್ಯ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂತ ತಿಳಿಸಿದ್ದು, ಸದರಿ ಅಪಘಾತ ಪಡಿಸಿದ ಕೆಎ-50-ಎ-6915 ರ ಟಿಪ್ಪರ್ ಲಾರಿ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಟೈಪ್ ಮಾಡಿ ನೀಡಿದ ದೂರಿನ ಮೇರೆಗೆ ದಿನಾಂಕ:-05/02/2019 ರಂದು ಮಧ್ಯಾಹ್ನ 2:30 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

2) ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 12/2019 ಕಲಂ. 279,338 ಐಪಿಸಿ :-

      ದಿನಾಂಕ:-05/02/2019 ರಂದು ಸಂಜೆ 4:00 ಗಂಟೆಗೆ ಪಿರ್ಯಾಧಿ ಶ್ರೀ. ಆರ್.ಎನ್.ವಿಕ್ರಂ ಬಿನ್ ನಾಗರಾಜ್ 30 ವರ್ಷ, ವಲಯ ಅರಣ್ಯಾಧಿಕಾರಿ, ಚಿಕ್ಕಬಳ್ಳಾಪುರ ವಲಯ, ಚಿಕ್ಕಬಳ್ಳಾಪುರ ರವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:-04/02/2019 ರಂದು ತಮ್ಮ ಸಹೋದ್ಯೋಗಿ ಗುಡಿಬಂಡೆ ವಲಯ ಅರಣ್ಯಾಧಿಕಾರಿಗಳಾದ ಸಿ.ಟಿ.ಗೌಡ ಬಿನ್ ಕುನ್ನೇಗೌಡ 59 ವರ್ಷ ರವರು ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿ ವಾಪಸ್ಸು ಚಿಕ್ಕಬಳ್ಳಾಪುರಕ್ಕೆ ಬರಲು ಕೆ.ಎಸ್.ಆರ್.ಟಿ ಬಸ್ ಸಂಖ್ಯೆ ಕೆಎ-40-ಎಫ್-1015 ರಲ್ಲಿ ಚಿಕ್ಕಬಳ್ಳಾಪುರ ಎನ್.ಎಚ್-7 ಬಿ.ಬಿ ರಸ್ತೆಯ ರಾಯಲ್ ಬಾರ್ & ರೆಸ್ಟೋರೆಂಟ್ ಮುಂಭಾಗದ ರಸ್ತೆಯಲ್ಲಿ ತಮ್ಮ ಕಛೇರಿಯ ಬಳಿ ಹೋಗಲು ಬಸ್ಸನ್ನು ನಿಲ್ಲಿಸಿ ಇಳಿದು ಬರುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಕೆಎ-01-ಏ.ಸಿ-1675 ರ ಲಾರಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಸ್ ಇಳಿಯುತ್ತಿದ್ದ ಸಿ.ಟಿ ಗೌಡ ರವರಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ಎರಡುಕಾಲುಗಳಿಗೆ ಮತ್ತು ಬಲಕೈಗೆ ತೀವ್ರತರವಾದ ಗಾಯಗಳಾಗಿದ್ದು ಅಲ್ಲಿನ ಸ್ಥಳೀಯರು ಮತ್ತು ತಮ್ಮ ಕಛೇರಿಯ ಫಾರೆಸ್ಟ್ ಗಾರ್ಡ ಜಾವೀದ್ ಪಾಷಾ ಬಿನ್ ಲೇಟ್ ಷೇಕ್ ಅಮೀರ್ ಸಾಬ್ 29 ವರ್ಷ, ನಂದಿ ಗ್ರಾಮದವರು ಹೋಗಿ ಉಪಚರಿಸಿ ಅಪಘಾತವಾಗಿರುವ ಬಗ್ಗೆ ವಿಷಯವನ್ನು ತನಗೆ ತಿಳಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಕಾರಿನಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದಾಗಿ ತಿಳಿಸಿದ್ದು, ತಾನು ತಕ್ಷಣ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಹೋಗಿ ನೋಡಲಾಗಿ ಸಿ.ಟಿ ಗೌಡ ರವರಿಗೆ ಎರಡು ಕಾಲುಗಳಿಗೆ ಮತ್ತು ಬಲಕೈಗೆ ಗಾಯಗಳಾಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈಧ್ಯರ ಸಲಹೆ ಮೇರೆಗೆ ಬೆಂಗಳೂರಿನ ಕೊಲಂಬಿಯಾ ಏಷಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದು ಅಪಘಾತ ಪಡಿಸಿದ ಸದರಿ ಲಾರಿ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಎನ್.ಆರ್.ಉಮೇಶ್ ಕುಮಾರ್ ಬಿನ್ ರಾಮಾಂಜಿನೇಯಲು ನಲ್ಲಿಗಾನಹಳ್ಳಿ ಗ್ರಾಮ, ಪಾವಗಡ ತಾಲ್ಲೂಕು ಎಂದು ತಿಳಿದುಬಂದಿದ್ದು ತಾನು ಚಿಕಿತ್ಸೆಯನ್ನು ಕೊಡಿಸಿ ಈ ದಿನ ತಡವಾಗಿ ಅಪಘಾತ ಪಡಿಸಿದ ಸದರಿ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ದಿನಾಂಕ:-05/02/2019 ರಂದು ಸಂಜೆ 4:00 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

3) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 23/2019 ಕಲಂ. 279,337,304(ಎ) ಐಪಿಸಿ :-

      ದಿನಾಂಕ:06/02/2019 ರಂದು ಬೆಳಿಗ್ಗೆ 8-15 ಗಂಟೆಗೆ ಪಿರ್ಯಾದಿ ಹೆಚ್. ಮಹಬೂಬ್ ಖಾನ್ ಬಿನ್ ಹುಸೇನ್ ಖಾನ್ ಕಿದ್ವಾಯ್ ನಗರ ಚಿಂತಾಮಣಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೇ, ತನಗೆ ಹೀಬಾ ಎಂಬ ಹೆಣ್ಣು ಮತ್ತು ಫಹದ್ ಅಲಿ ಖಾನ್ ಎಂಬ ಗಂಡು ಮಗನಿರುತ್ತಾನೆ. ದಿನಾಂಕ 05/02/2019 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ನನ್ನ ಮಗನಾದ ಫಹದ್ ಅಲಿ ಖಾನ್-22 ವರ್ಷ ರವರು ನಮ್ಮ ಬಾಬತ್ತು ಕೆಎ-67-ಇ-1935 ಆಕ್ಸಿಸ್ ದ್ವಿ ಚಕ್ರ ವಾಹನವನ್ನು ತೆಗೆದುಕೊಂಡು ಮನೆಯಿಂದ ಎಲ್ಲಿಗೋ ಹೋಗಿರುತ್ತಾನೆ. ಅದೇ ದಿನ ರಾತ್ರಿ ಸುಮಾರು 10-30 ಗಂಟೆ ಸಮಯದಲ್ಲಿ ನಮಗೆ ಪರಿಚಯ ಇರುವ ಸದ್ದಾಂ ಎಂಬ ವ್ಯಕ್ತಿಯು ನಮ್ಮ ಮನೆಯ ಬಳಿ ಬಂದು ನನ್ನ ಮಗ ಫಹದ್ ಅಲಿ ಖಾನ್ ಹಾಗು ಆತನ ಸ್ನೇಹಿತರಾದ ಮಹಮದ್ ಅಜರುಲ್ಲಾ, ತೌಕೀರ್ ರವರಿಗೆ ಕನ್ನಂಪಲ್ಲಿ ಗ್ರಾಮದ ಬಳಿ ಆಕ್ಸಿಡೆಂಟ್ ಆಗಿ ಚಿಕಿತ್ಸೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಬಳಿ ಬಂದಿರುವುದಾಗಿ ವಿಷಯ ತಿಳಿಸಿದನು. ನಂತರ ನಾನು ಕೂಡಲೇ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ನನ್ನ ಮಗ ಫಹದ್ ಅಲಿ ಖಾನ್ ರವರ ತಲೆಗೆ, ಗಡ್ಡದ ಭಾಗದಲ್ಲಿ, ಬಲ ಮೊಣಕಾಲಿನ ಕೆಳಭಾಗದಲ್ಲಿ ರಕ್ತಗಾಯವಾಗಿ, ಮಹಮದ್ ಅಜರುಲ್ಲಾ ರವರ ಸೊಂಟದ ಭಾಗದಲ್ಲಿ, ಎದೆಗೆ, ಕೈ ಕಾಲುಗಳಿಗೆ ರಕ್ತಗಾಯವಾಗಿದ್ದು, ತೌಕೀರ್ ರವರ ತಲೆಗೆ , ಬಲ ಕೈಗೆ ರಕ್ತಗಾಯವಾಗಿತ್ತು. ನಂತರ ನಾವು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಗಾಯಾಳುಗಳನ್ನು ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲನ್ಸ್ ನಲ್ಲಿ ಕೋಲಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ರಾತ್ರಿ ಸುಮಾರು 10-45 ಗಂಟೆ ಸಮಯದಲ್ಲಿ ನನ್ನ ಮಗ ಫಹದ್ ಅಲಿ ಖಾನ್ ರವರು ಕುರಟಹಳ್ಳಿ ಗ್ರಾಮದ ಬಳಿ ಮಾರ್ಗಮದ್ಯೆ ಮೃತ ಪಟ್ಟಿರುತ್ತಾನೆ. ನಂತರ ನಾವು ನನ್ನ ಮಗನ ಶವವನ್ನು ವಾಪಸ್ಸು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿಕೊಂಡು ಬಂದು ಶವಾಗಾರದಲ್ಲಿ ಇಟ್ಟಿರುತ್ತೇವೆ.   ನಂತರ ತಾನು ಗಾಯಾಳುವಾದ ತೌಕೀರ್ ರವರನ್ನು ವಿಚಾರ ಮಾಡಲಾಗಿ ದಿನಾಂಕ 05/02/2019 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ತಾನು ಮತ್ತು ಫಹದ್ ಅಲಿ ಖಾನ್, ಮಹಮದ್ ಅಜರುಲ್ಲಾ ರವರು ಕೆಎ-67-ಇ-1935 ಆಕ್ಸಿಸ್ ದ್ವಿ ಚಕ್ರ ವಾಹನದಲ್ಲಿ ಚಿನ್ನಸಂದ್ರ ಗ್ರಾಮಕ್ಕೆ ಹೋಗಿ ಟೀ ಯನ್ನು ಕುಡಿದು ವಾಪಸ್ಸು ಚಿಂತಾಮಣಿಗೆ ಬರುತ್ತಿದ್ದಾಗ ರಾತ್ರಿ ಸುಮಾರು 10-30 ಗಂಟೆ ಸಮಯದಲ್ಲಿ ಕನ್ನಂಪಲ್ಲಿ ಗ್ರಾಮದ ಬಳಿ ಮಹಮದ್ ಅಜರುಲ್ಲಾ ರವರು ನನ್ನನ್ನು ದ್ವಿ ಚಕ್ರ ವಾಹನದ ಮದ್ಯೆ ಕೂರಿಸಿಕೊಂಡು ಪಹದ್ ಅಲಿ ಖಾನ್ ರವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ದ್ವಿ ಚಕ್ರ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ದ್ವಿ ಚಕ್ರ ವಾಹನವು ಆತನ ನಿಯಂತ್ರಣ ತಪ್ಪಿದಾಗ ರಸ್ತೆಯ ಬದಿಯಲ್ಲಿದ್ದ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ತಾವು ಮೂರು ಜನರು ಕೆಳಗೆ ಬಿದ್ದು ಹೋಗಿ ನಮಗೆ ಗಾಯಗಳಾಗಿದ್ದು ಈ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಯಾರೋ ಸಾರ್ವಜನಿಕರು ತಮ್ಮನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿ ಕೊಡುತ್ತಿರುವುದಾಗಿ ವಿಷಯ ತಿಳಿಸಿದನು. ಗಾಯಾಳುಗಳಾದ ತೌಕೀರ್ ರವರು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ , ಮಹಮದ್ ಅಜರುಲ್ಲಾ ರವರು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಇನ್ನು ಹೆಚ್ಚಿಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ನನ್ನ ಮಗನಾದ ಫಹದ್ ಅಲಿ ಖಾನ್ ರವರ ಶವವು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ತಾವು ಸ್ಥಳಕ್ಕೆ ಬೇಟಿಯನ್ನು ನೀಡಿ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿರುವುದಾಗಿರುತ್ತೆ.

4) ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 13/2019 ಕಲಂ. 96(ಬಿ) ಕೆ.ಪಿ.ಆಕ್ಟ್ :-

      ದಿನಾಂಕ: 0502/2019 ರಂದು  ಠಾಣೆಯ ಹೆಚ್ ಸಿ 81 ರವರು  ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 05/02/2019 ರಂದು ರಾತ್ರಿ 08-00  ಗಂಟೆಯಲ್ಲಿ ಠಾಣಾಧಿಕಾರಿಗಳು ಸಿ ಹೆಚ್ ಸಿ 81 ವಿಶ್ವನಾಥ ಮತ್ತು ಪಿ.ಸಿ 544 ವೆಂಕಟರವಣ ಆದ ನಮಗೆ ನಗರದ ವಿಶೇಷ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ  ನಾವು ರಾತ್ರಿ 08-00 ಗಂಟೆಗೆ ಗಸ್ತು ಪ್ರಾರಂಬಿಸಿ ನಗರದ ಬೆಂಗಳೂರು ವೃತ್ತ, ಎಂ, ಜಿ ರಸ್ತೆ,  ಬೆಂಗಳೂರು ಸರ್ಕಲ್, ಶ್ರೀರಾಮಂದಿರದ ಕಡೆ ಗಸ್ತು ಮಾಡಿಕೊಂಡು ರಾತ್ರಿ 10-30 ಗಂಟೆ ಸಮಯದಲ್ಲಿ  ಎನ್ ಆರ್ ಬಡಾವಣೆಯ ಕಾಳಿಕಾಂಭ ದೇವಾಲಯದ ಬಳಿ  ಕಡೆ  ಗಸ್ತುಮಾಡುತ್ತಿರುವಾಗ ಯಾರೋ ಇಬ್ಬರು ಆಸಾಮಿಗಳು  ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಕಾಂಪೌಂಡ್ ಗೋಡೆಯ ಮರೆಯಲ್ಲಿ ತನ್ನ ಇರುವಿಕೆಯನ್ನು ಮರೆಮಾಚಿಕೊಳ್ಳುತ್ತಾ ಅವಿತುಕೊಳ್ಳಲು ಪ್ರಯತ್ನಿಸುತ್ತಿದ್ದು,ಅವರ ಬಳಿ ಹೋಗುವಷ್ಠರಲ್ಲಿ ನಮ್ಮನ್ನು  ಕಂಡು ಅಲ್ಲಿಂದ ಓಡಿ ಹೋಗಲು ಯತ್ನಿಸಿದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಮೇಧಿ ಬಿನ್ ಅಜೀಜ್ 38 ವರ್ಷ, ಮುಸ್ಲಿಂ ಜನಾಂಗ,  ಬಟ್ಟೆವ್ಯಾಪಾರ, ವಾಸ: ಗಂಗಾನಗರ ಹುಸೇನಿ ಮಸೀದಿ ಪಕ್ಕ, ಗುಂತಕಲ್ಲು ಅನಂತಪುರ ಜಿಲ್ಲೆ. 2) ಇರ್ಪಾನ್  ಬಿನ್ ಬಬ್ಲು 18 ವರ್ಷ, ವಾಸ: ಗಂಗಾನಗರ ಹುಸೇನಿ ಮಸೀದಿ ಪಕ್ಕ, ಗುಂತಕಲ್ಲು ಅನಂತಪುರ ಜಿಲ್ಲೆ ಎಂತ ತಿಳಿಸಿದ್ದು, ಅವರನ್ನು ಹಿಡಿದು ಓಡಿ ಹೋಗಲು ಪ್ರಯತ್ನಿಸಿದ ಬಗ್ಗೆ ಪ್ರಶ್ನಿಸಲಾಗಿ ಸದರಿ ಆಸಾಮಿಗಳು ಸಮಂಜಸವಾದ ಉತ್ತರ ನೀಡದೆ ಇದ್ದು,  ಮೇಧಿ ರವರ ಕೈಯಲ್ಲಿದ್ದ  ಕಬ್ಬಿಣದ ರಾಡ್ ಬಗ್ಗೆ ವಿಚಾರಿಸಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಇವರು ಯಾವುದೋ ಸಂಜ್ಞೆಯ ಅಪರಾಧ ಮಾಡಲು ಬಂದಿರಬಹುದೆಂದು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಆಸಾಮಿಯನ್ನು ರಾತ್ರಿ 11-00 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಠಾಣಾದಿಕಾರಿಗಳ ಮುಂದೆ ಹಾಜರುಪಡಿಸಿ ವರದಿಯನ್ನು ನೀಡಿರುತ್ತೇನೆ.

5) ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 13/2019 ಕಲಂ. 379 ಐಪಿಸಿ :-

      ದಿನಾಂಕ:05/02/2019 ರಂದು ಮದ್ಯಾಹ್ನ 13:50 ಗಂಟೆಗೆ ಪಿರ್ಯಾದಿ ಮಹಮದ್ ನಾಸೀರ್ ಬಿನ್ ಮಹಮದ್ ನಜೀರ್, 28 ವರ್ಷ, ಇಮಾಮ್ ಸಾಬ್ ಗಲ್ಲಿ, ಗೌರಿಬಿದನೂರು ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:18/01/2019 ರಂದು ರಾತ್ರಿ  ಸುಮಾರು 9:30 ಗಂಟೆಗೆ ಆಚಾರ್ಯ ಪದವಿ ಪೂರ್ವ ಕಾಲೇಜಿನ ಬಳಿ ಶಾಲಾ ವಾರ್ಷಿಕೋತ್ಸವ ಇದ್ದ ಕಾರಣ ಕಾಲೇಜ್ ಮುಂಬಾಗ ನನ್ನ ಬಾಬತ್ತು ಕೆ.ಎ-40 ಇ.ಸಿ-7602 ಟಿ.ವಿ.ಎಸ್ ಎಕ್ಸ್.ಎಲ್ -100 ಹೆವಿಡ್ಯೂಟಿ ಯನ್ನು ಆಚಾರ್ಯ ಕಾಲೇಜಿನ ಗೇಟ್ ಮುಂಬಾಗ ನಿಲ್ಲಿಸಿ ನನ್ನ ಚಿಕ್ಕಪ್ಪನ ಮಕ್ಕಳನ್ನು ಕರೆತರುವಷ್ಟರಲ್ಲಿ ಯಾರೋ ಕಳ್ಳರು ನನ್ನ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನಗೆ ಸಂಬಂಧಿಸಿದ ಮತ್ತು ಪರಿಚಯಸ್ಥರನ್ನು ಸಂಪರ್ಕಿಸಿ ಸಿಗದ ಕಾರಣ ಇಂಡು ತಡವಾಗಿ ದೂರನ್ನು ನೀಡುತ್ತಿದ್ದು, ಕಳ್ಳತನವಾಗಿರುವ ನನ್ನ ಬಾಬತ್ತು ದ್ವಿಚಕ್ರ ವಾಹನವನ್ನು ಪತ್ತೆಮಾಡಿಕೊಡಬೇಕಾಗಿ ದೂರನ್ನು ನೀಡಿರುವುದಾಗಿರುತ್ತೆ.

6) ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 15/2019 ಕಲಂ. 324,307 ಐಪಿಸಿ :-

      ದಿನಾಂಕ: 05/02/2019 ರಂದು ರಾತ್ರಿ 11-30 ಗಂಟೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಅಶ್ವತ್ಥಮ್ಮ ಕೋಂ ನರಸಿಂಹಮೂರ್ತಿ 28 ವರ್ಷ, ಆದಿ ಕರ್ನಾಟಕ [ಎ.ಕೆ] ರೆಡ್ಡಿದ್ಯಾವರಹಳ್ಳಿ ಗ್ರಾಮ ತೊಂಡೇಬಾವಿ ಹೋಬಳಿ, ಗೌರಿಬಿದನೂರು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ತನಗೂ ಮತ್ತು ಹಿರೇಬಿದನೂರು ಗ್ರಾಮದ ನರಸಿಂಹರವರಿಗೆ ಪರಿಚಯವಾಗಿದ್ದು, ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುತ್ತಿದ್ದನು. ತಾನು ಅವನ ಬಳಿ ಮಾತನಾಡಿಸದೇ ಇದ್ದರಿಂದ  ಈ ಹಿಂದೆಯು ಸಹ ತನಗೆ ಚಾಕುವಿನಲ್ಲಿ ಹಾಕಿದ್ದನು. ಈಗ್ಗೆ 3 ದಿನಗಳಿಂದ ನಮ್ಮ ಗ್ರಾಮದ ನಂಜಮ್ಮ ರವರನ್ನು ನೋಡಿಕೊಂಡು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದೆನು. ಈ ದಿನ ದಿ: 05/02/2019 ರಂದು ಮಧ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿದ್ದಾಗ ನರಸಿಂಹ ರವರು ತನ್ನನ್ನು ಹುಡುಕಿಕೊಂಡು ಬಂದು ಮಾತನಾಡಬೇಕು ನೀನು ಯಾಕೆ ಇಲ್ಲಿದ್ದಿಯಾ ಎಂದು ಕೇಳಿ ತನ್ನನ್ನು ಕರೆದುಕೊಂಡು ಅವರ ಬಾಬತ್ತು ದ್ವಿಚಕ್ರ ವಾಹನದಲ್ಲಿ ಸುಮಾರು 1-00 ಗಂಟೆಗೆ ಪೋತೇನಹಳ್ಳಿ ಗ್ರಾಮದ ಬಳಿಯಿರುವ ಬೆಟ್ಟಕ್ಕೆ ಕರೆದುಕೊಂಡು ಹೋಗಿ ನನ್ನ ಮೇಲೆ ವಿನಾಕಾರಣ ಜಗಳ ತೆಗೆದು ಕೈಗಳಿಂದ ಹೊಡೆದು ಅಲ್ಲಿಯೇ ಇದ್ದ ಕಲ್ಲಿನಿಂದ ಹಣೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಪಡಿಸಿ ತಾನು ಬರುವಾಗ ತಂದಿದ್ದ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಹೊಟ್ಟೆಗೆ ತಿವಿದು ರಕ್ತಗಾಯಪಡಿಸಿ ತನ್ನನ್ನು ಅಲ್ಲಿಯೇ ಬಿಟ್ಟು ಹೊರಟು ಹೋದನು. ತಾನು ಸುಧಾರಿಸಿಕೊಂಡು ಬೆಟ್ಟ ಇಳಿದು ರೆಡ್ಡಿದ್ಯಾವರಹಳ್ಳಿಗೆ ಬಂದೆನು. ನನ್ನ ತಂಗಿ ಶ್ಯಾಮಲ ನಮ್ಮ ತಂದೆ ಸತ್ಯಪ್ಪರವರು ಚಿಕಿತ್ಸೆಗಾಗಿ 108 ಅಂಬುಲೆನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿರುತ್ತೇನೆ. ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಚಾಕುವಿನಿಂದ ತಿವಿದು ರಕ್ತಗಾಯಪಡಿಸಿದ ನರಸಿಂಹ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

7) ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 06/2019 ಕಲಂ. 326,504 ರೆ/ವಿ 34 ಐಪಿಸಿ :-

      ದಿನಾಂಕ:05/02/2019 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಿರೀಶ ಬಿ ಬಿನ್ ಬಸವರಾಜ 28 ವರ್ಷ ಲಿಂಗಾಯತರು ಜಲಿಪಿಗಾರಿಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕುರವರ ಹೇಳಿಕೆಯನ್ನು ಪಡೆದುದರ ಸಾರಾಂಶವೇನೆಂದರೆ ನಾನು ಜಿ,ಟಿ,ಆರ್ ಬಸ್ಸಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ, ನಾನು ಈಗ್ಗೆ 04 ದಿನಗಳ ಹಿಂದೆ ಡ್ಯೂಟಿಯಿಂದ ಇಳಿದು ನನ್ನ ಸ್ವಂತ ಗ್ರಾಮವಾದ ಜಲಿಪಿಗಾರಿಪಲ್ಲಿಯಲ್ಲಿ ಇರುತ್ತೇನೆ, ದಿನಾಂಕ:04/02/2019 ರಂದು ರಾತ್ರೀ 08-00 ಗಂಟೆ ಸಮಯದಲ್ಲಿ ನನ್ನ ಸ್ನೇಹಿತನಾದ ನರೇಶ ಸೋಮನಾಥಪುರ ವಾಸಿ ನನಗೆ ಕರೆಮಾಡಿ ಏಕಾಏಕಿ ನನ್ನನ್ನು ಉದ್ದೇಶಿಸಿ ಏಕವಚನದಲ್ಲಿ ಮಾತನಾಡಿದ್ದು ಅದಕ್ಕೆ ನಾನು ಯಾಕೇ ಈ ರೀತಿ ಮಾತನಾಡುತ್ತೀಯಾ ನಾನು ನಿನಗಿಂತ ವಯಸ್ಸಿನಲ್ಲಿ ದೊಡ್ಡವನೆಂದು ಹೇಳಿ ಕರೆ ಕಟ್ ಮಾಡಿರುತ್ತೇನೆ, ನಂತರ ಪಾತಪಾಳ್ಯ ಗ್ರಾಮದ ವಾಸಿ ಮೂರ್ತಿ ರವರ ಪೋನಿನಿಂದ ಕರೆ ಮಾಡಿಸಿ ವಿಚಾರ ಮಾಡಿಸಿರುತ್ತೇನೆ, ನಂತರ ದೊಡ್ಡವಾರಪಲ್ಲಿ ಗ್ರಾಮದ ವಾಸಿ ನಾರಾಯಣ ಸ್ವಾಮಿರವರ ಕಡೆಯಿಂದ ಪೋನ್ ಮಾಡಿಸಿ ಸದರಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ವಿಚಾರವಾಗಿ ನನ್ನನ್ನು ರಾಚವಾರಪಲ್ಲಿ ಗ್ರಾಮಕ್ಕೆ ಬರಲು ತಿಳಿಸಿರುತ್ತಾರೆ ಅದರಂತೆ ನಾನು ರಾಚವಾರಪಲ್ಲಿ ಗ್ರಾಮಕ್ಕೆ ಹೋಗಿದ್ದು ಅಷ್ಟೊತ್ತಿಗೆ ಅಲ್ಲಿಗೆ ಬಂದಿದ್ದ ನರೇಶ್ ಮತ್ತು ಆತನ ಸ್ನೀಹಿತರಾದ ಜಗದೀಶ್ ಮತ್ತು ಇತರೇ ಒಬ್ಬನು ಅಲ್ಲಿಗೆ ಬಂದಿದ್ದರು, ನನ್ನನ್ನು ನೋಡಿದ ತಕ್ಷಣ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಮೇಲೆ ಗಲಾಟೆಗೆ ಬಂದರು, ಆಗ ನಾನು ಮಾತುಗಳು ಮಾರ್ಯಾದೆಯಿಂದ ಮಾತನಾಡು ಎಂದು ಹೇಳಿದ್ದು ಅಷ್ಟೊತ್ತಿಗಾಗಲೇ ಕುಡಿದಿದ್ದ ನರೇಶನು ತನ್ನ ಕೈಯಲ್ಲಿದ್ದ ಬೀಯರ್ ಬಾಟಲಿನಿಂದ ನನ್ನ ಮೂತಿಗೆ ಹೊಡೆದಿದ್ದು, ನನ್ನ ಮುಂದಿನ ಮೂರು ಹಲ್ಲುಗಳು ಮುರಿದಿರುತ್ತವೆ, ನನಗೆ ಬಾಯಿಯಿಂದ ರಕ್ತ ಸ್ರಾವ ಆಗಿರುತ್ತೆ, ಆಗ ವಿಷಯವನ್ನು ನಮ್ಮ ತಂದೆಗೆ ಯಾರೋ ವಿಷಯ ತಿಳಿಸಿದ್ದರ ಮೇರೆಗೆ ನಮ್ಮ ತಂದೆಯು ಸ್ಥಳಕ್ಕೆ ಬಂದಿದ್ದು ನನ್ನನ್ನು ನನ್ನ  ದ್ವಿ ಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ, ಮೇಲ್ಕಂಡ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ, ಈ ಘಟನೆಯು ದಿನಾಂಕ:04/02/2019 ರಂದು ರಾತ್ರೀ ಸುಮಾರು 09-20 ಘಂಟೆಯಲ್ಲಿ ನಡೆದಿರುತ್ತೆ,

8) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 14/2019 ಕಲಂ. 143,323,341,448,504,506 ರೆ/ವಿ 149 ಐಪಿಸಿ :-      ದಿನಾಂಕ:05.02.2019 ರಂದು ರಾತ್ರಿ 8-30 ಗಂಟೆಗೆ ಕೆಂಪೇಗೌಡ ಬಿನ್ ಪಟೇಲ್ ನಾರಾಯಣಸ್ವಾಮಿ, 46 ವರ್ಷ    ವಕ್ಕಲಿಗರು, ಜಿರಾಯ್ತಿ ವಾಸ ಮಿತ್ತನಹಳ್ಳಿ ಗ್ರಾಮ,    ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2018-19 ನೇ ಸಾಲಿನ 5 ವರ್ಷಗಳ  ಅವದಿಗೆ ಚುನಾವಣೆಯನ್ನು  ನಡೆಸಲು ದಿನಾಂಕ:16/02/2019 ರಂದು ನಿಗದಿಯಾಗಿದ್ದು,   ದಿನಾಂಕ:02/02/2019 ರಂದು  ಸಂಜೆ 7-00 ಗಂಟೆ ಸಮಯದಲ್ಲಿ ತಾನು ಸದರಿ  ಚುನಾವಣೆಗೆ ಸಂಬಂದಿಸಿದಂತೆ ಮತದಾರರ  ಸದಸ್ಯರ ಪಟ್ಟಿಯನ್ನು ಕೇಳಲು ತಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿ ಒಳಗೆ ಹೋಗಿ ಕಾರ್ಯದರ್ಶಿಗಳಾದ ಎಂ.ಸುಬ್ರಮಣ್ಯಪ್ಪ ಬಿನ್ ಲೇಟ್ ನಾರಾಯಣಪ್ಪ 55 ವರ್ಷ  ವಾಸ ವಿಜಿಪುರ ದೇವನಹಳ್ಳಿ ತಾಲ್ಲೂಕು ರವರನ್ನು ಕೇಳುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ಹರೀಶ ಬಿನ್ ಸಿ.ಎಂ.ಕೃಷ್ಣಪ್ಪ, ನರಸಿಂಹಮೂರ್ತಿ ಬಿನ್ ಲೇಟ್ ಬೈಯಣ್ಣ, ಮಹೇಶ್ ಕುಮಾರ್ ಬಿನ್ ವೆಂಕಟಪ್ಪ, ಶಿವಮೂರ್ತಿ ಬಿನ್ ಲೇಟ್ ಬೈಯಣ್ಣ ರವರುಗಳು ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿ ಒಳಗೆ ಅಕ್ರಮ ಪ್ರವೇಶಮಾಡಿ ಕಾರ್ಯದರ್ಶಿ ಎನ್.ಸುಬ್ರಮಣಿಪ್ಪ ರವರೊಂದಿಗೆ ಸೇರಿಕೊಂಡು ಎಲ್ಲಾರೂ ಅಕ್ರಮಗುಂಪುಕಟ್ಟಿಕೊಂಡು ತನ್ನನ್ನು ಸದಸ್ಯರ ಪಟ್ಟಿಯನ್ನು ಕೇಳಲು ನೀನ್ಯಾರು ಎಂದು ಏಕಾ ಏಕಿ   ಅವಾಚ್ಯಶಬ್ದಗಳಿಂದ ಬೈದಿದ್ದು, ಆ ಪೈಕಿ ಕಾರ್ಯದರ್ಶಿ ಎಂ.ಸುಬ್ರಮಣ್ಯಪ್ಪ ಬಿನ್ ಲೇಟ್ ನಾರಾಯಣಪ್ಪ ರವರು ಕೈಗಳಿಂದ ತನ್ನ ಮುಖಕ್ಕೆ ಗುದ್ದಿರುತ್ತಾನೆ,  ಹರೀಶ ಬಿನ್ ಸಿ.ಎಂ.ಕೃಷ್ಣಪ್ಪ ಮತ್ತು  ನರಸಿಂಹಮೂರ್ತಿ ಬಿನ್ ಲೇಟ್ ಬೈಯಣ್ಣ, ರವರುಗಳು ತನ್ನನ್ನು ಕಾಲುಗಳಿಂದ ಹೊದ್ದಿರುತ್ತಾರೆ. ಮಹೇಶ್ ಕುಮಾರ್ ಬಿನ್ ವೆಂಕಟಪ್ಪ,ಮತ್ತು  ಶಿವಮೂರ್ತಿ ಬಿನ್ ಲೇಟ್ ಬೈಯಣ್ಣ ರವರುಗಳು ತನ್ನ ಬೆನ್ನಿಗೆ ಮತ್ತು ಹೊಟ್ಟೆಗೆ ಕೈಗಳಿಂದ ಗುದ್ದಿರುತ್ತಾರೆ. ತಾನು ಕಚೇರಿಯಿಂದ ಆಚೆ ಬಂದಾಗ ಎಲ್ಲಾರೂ ತನ್ನನ್ನು ಅಡ್ಡಗಟ್ಟಿನಿಲ್ಲಿಸಿ ಇನ್ನೊಮ್ಮೆ   ಮತದಾರರ  ಸದಸ್ಯರ ಪಟ್ಟಿಯನ್ನು ಕೇಳಲು  ಬಂದರೆ ನಿನ್ನನ್ನು ಇಲ್ಲಿಯೇ ಊತುಬಿಡುತ್ತೇನೆ ಎಂದು  ಪ್ರಾಣಬೆದರಿಕೆಹಾಕಿರುತ್ತಾರೆ . ಅಷ್ಠರಲ್ಲಿ ಅಲ್ಲಿಗೆ ಪಿ.ರಾಮರೆಡ್ಡಿ ಬಿನ್ ಲೇಟ್ ಡಿ.ಪಿಳ್ಳಪ್ಪ, ಬಿ. ಮುನಯ್ಯ ಬಿನ್ ಲೇಟ್ ಬುಡ್ಡಪ್ಪ ರವರುಗಳು ಜಗಳ ಬಿಡಿಸಿರುತ್ತಾರೆ,  ಈ ಬಗ್ಗೆ  ಗ್ರಾಮದ ಹಿರಿಯರು ಗ್ರಾಮದಲ್ಲಿ ರಾಜಿ ಪಾಂಚಾಯ್ತಿ ಮಾಡಿಕೊಳ್ಳೋಣ ಎಂದು ಹೇಳಿದ್ದು, ಮೇಲ್ಕಂಡವರು ಈವರೆಗೂ ರಾಜಿ ಪಂಚಾಯ್ತಿಗೆ ಬರಲಿಲ್ಲವಾದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ತನ್ನ ಮೇಲೆ ಜಗಳತೆಗೆದು, ಅಡ್ಡಗಟ್ಟಿ ನಿಲ್ಲಿಸಿ, ಅವಾಚ್ಯಶಬ್ದಗಳಿಂದ ಬೈದು ಕೈಗಳಿಂದ ಹೊಡೆದು, ಕಾಲುಗಳಿಂದ ಹೊದ್ದು, ಪ್ರಾಣಬೆದರಿಕೆ ಹಾಕಿದ ಮಿತ್ತನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ  ಕಾರ್ಯದರ್ಶಿಗಳಾದ ಎಂ.ಸುಬ್ರಮಣ್ಯಪ್ಪ ಬಿನ್ ಲೇಟ್ ನಾರಾಯಣಪ್ಪ ಮತ್ತು ಹರೀಶ ಬಿನ್ ಸಿ.ಎಂ.ಕೃಷ್ಣಪ್ಪ, ನರಸಿಂಹಮೂರ್ತಿ ಬಿನ್ ಲೇಟ್ ಬೈಯಣ್ಣ, ಮಹೇಶ್ ಕುಮಾರ್ ಬಿನ್ ವೆಂಕಟಪ್ಪ, ಶಿವಮೂರ್ತಿ ಬಿನ್ ಲೇಟ್ ಬೈಯಣ್ಣ ರವರುಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಇದ್ದ ಸಾರಾಂಶದ ಮೇರೆಗೆ ಠಾಣಾ ಮೊ.ಸಂ. 14/2019 ಕಲಂ 143,323,341,448,504,506 ರೆ/ವಿ 149 ಐ.ಪಿ.ಸಿ. ರೀತ್ಯಾ ಕೇಸು ದಾಖಲಿಸಿರುತ್ತೇನೆ.

9) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 15/2019 ಕಲಂ. 279,337 ಐಪಿಸಿ ಮತ್ತು 187 ಐಎಂವಿ ಆಕ್ಟ್ :-

      ದಿನಾಂಕ: 06-02-2019 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಫಿರ್ಯಾದಿದಾರರಾದ ಮುನಿರಾಜು ಎನ್ ಬಿನ್ ನಾರಾಯಣಸ್ವಾಮಿ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಕೂಲಿ ಕೆಲಸದಿಂದ ಜೀವನ ಮಾಡಿಕೊಂಡಿದ್ದು ಈಗ್ಗೆ 15 ದಿನಗಳಿಂದ ನಾನು, ನಮ್ಮ ಗ್ರಾಮದ ದೇವರಾಜ ಬಿನ್ ವೆಂಕಟರಾಯಪ್ಪ ಮತ್ತು ಇತರರು ಶಿಡ್ಲಘಟ್ಟ ತಾಲ್ಲೂಕು ತಾದೂರು ಗ್ರಾಮದಲ್ಲಿ ಚರಂಡಿ ಕಟ್ಟುವ ಕೂಲಿ ಕೆಲಸ ಮಾಡಿಕೊಂಡು ತಾದೂರು ಗ್ರಾಮದಲ್ಲಿ ವಾಸವಾಗಿರುತ್ತೇವೆ. ನಮಗೆ ಅಡುಗೆ ಮಾಡಿಕೊಡುವ ಸಲುವಾಗಿ ನಮ್ಮ ಅಜ್ಜಿಯಾದ ನಮ್ಮ ಗ್ರಾಮದ ಸುಮಾರು 70 ವರ್ಷ ವಯಸ್ಸಿನ ಶ್ರೀಮತಿ ತಿಮ್ಮಕ್ಕ ಕೋಂ ನಾರಾಯಣಪ್ಪ ರವರನ್ನು ಕರೆದುಕೊಂಡು ಬಂದಿದ್ದು ಅವರು ಸಹ ನಮ್ಮ ಜೊತೆಯಲ್ಲಿ ವಾಸವಾಗಿರುತ್ತಾರೆ. ಹೀಗಿದ್ದು ದಿನಾಂಕ: 01-02-2019 ರಂದು ಮದ್ಯಾಹ್ನ 1.30 ಗಂಟೆ ಸಮಯದಲ್ಲಿ ನಮ್ಮ ಅಜ್ಜಿ ಶ್ರೀಮತಿ ತಿಮ್ಮಕ್ಕ ರವರು ತಾದೂರು ಗ್ರಾಮದ ಗೇಟ್ ನಲ್ಲಿ ಅಂಗಡಿಗೆ ಹೋಗುವ ಸಲುವಾಗಿ ಶಿಡ್ಲಘಟ್ಟ-ಜಂಗಮಕೋಟೆ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದಾಗ ಜಂಗಮಕೋಟೆ ಕಡೆಯಿಂದ ನಂ. ಕೆಎ-05-ಜೆ.ಎಕ್ಸ್-9239 ದ್ವಿಚಕ್ರ ವಾಹನವನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ನಮ್ಮ ಅಜ್ಜಿ ಶ್ರೀಮತಿ ತಿಮ್ಮಕ್ಕ ರವರಿಗೆ ಅಪಘಾತ ಮಾಡಿ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿದ್ದು ಕೂಡಲೇ ಅಲ್ಲಿಯೇ ಕೆಲಸ ಮಾಡುತ್ತಿದ್ದ ನಾನು, ನಮ್ಮ ಗ್ರಾಮದ ದೇವರಾಜ ಬಿನ್ ವೆಂಕಟರಾಯಪ್ಪ ಮತ್ತು ಕೃಷ್ಣವೇಣಿ ಬಿನ್ ನಾರಾಯಣಪ್ಪ ರವರು ಗಾಯಗೊಂಡಿದ್ದ ನಮ್ಮ ಅಜ್ಜಿಯನ್ನು ನೋಡಲಾಗಿ ನಮ್ಮ ಅಜ್ಜಿಗೆ ಬಲಗೈ ಮೊಣಕೈ, ಮೊಣಕಾಲುಗಳ ಬಳಿ ಮತ್ತು ಬಲಭಾಗದ ಹಣೆಯ ಮೇಲೆ ರಕ್ತದ ಗಾಯಗಳಾಗಿದ್ದು ಗಾಯಾಳುವನ್ನು ನಾವುಗಳು ಉಪಚರಿಸಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ವಾಹನದಲ್ಲಿ ಸಾಗಿಸಿಕೊಂಡು ಬಂದಿದ್ದು ನಂತರ ಚಿಕಿತ್ಸೆಗಾಗಿ ಚಿಂತಾಮಣಿಯ ಡೆಕ್ಕನ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಅಪಘಾತದಲ್ಲಿ ಗಾಯಗೊಂಡಿದ್ದ ನಮ್ಮ ಅಜ್ಜಿಗೆ ಚಿಕಿತ್ಸೆಪಡಿಸಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ಕೊಡುತ್ತಿದ್ದು ನಮ್ಮ ಅಜ್ಜಿಗೆ ಅಪಘಾತ ಮಾಡಿ ಗಾಯಗಳನ್ನುಂಟುಮಾಡಿ ಸ್ಥಳದಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸದೆ ಪರಾರಿಯಾಗಿರುವ ನಂ. ಕೆಎ-05-ಜೆ.ಎಕ್ಸ್-9239 ದ್ವಿಚಕ್ರ ವಾಹನದ ಚಾಲಕ ಮತ್ತು ಮಾಲೀಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ಕೊಟ್ಟ ದೂರಿನ ಮೇರೆಗ ಪ್ರಕರಣ ದಾಖಲಿಸಿಕೊಂಡಿರುತ್ತೆ.

10) ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 16/2019 ಕಲಂ. 279,337 ಐಪಿಸಿ ಮತ್ತು 187 ಐಎಂವಿ ಆಕ್ಟ್ :-

      ದಿನಾಂಕ: 06-02-2019 ರಂದು ಮದ್ಯಾಹ್ನ 14.30 ಗಂಟೆಯಲ್ಲಿ ಫಿರ್ಯಾದಿದಾರರಾದ ಮುಬಾರಕ್ ಪಾಷ ಬಿನ್ ಮಹಮದ್ ನಜೀರ್, ಮಹಬೂಬ್ ನಗರ, 28ನೇ ವಾರ್ಡ್, ಕೋಲಾರ ನಗರ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಟೈಲ್ಸ್ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮ್ಮ ಮೂಲ ಸ್ಥಳ ದೇನಹಳ್ಳಿ ತಾಲ್ಲೂಕು ವಿಜಯಪುರ ವಾಗಿದ್ದು ನಾನು ಮತ್ತು ನನ್ನ ತಮ್ಮ ಮೌಲಾಜಾನ್ ರವರು ಕೋಲಾರ ನಗರದಲ್ಲಿ ವಾಸವಾಗಿರುತ್ತೇನೆ. ನನ್ನ ತಮ್ಮನಾದ ಮೌಲಾಜಾನ್ ರವರು ನಮ್ಮ ತಂದೆಯವನ್ನು ನೋಡಿಕೊಂಡು ಬರುವ ಸಲುವಾಗಿ ದಿನಾಂಕ: 31-01-2019 ರಂದು ಮೌಲಾಜಾನ್ ರವರ ಪಕ್ಕದ ಮನೆಯ ವಾಸಿ ಮಕ್ತಿಯಾರ್ ಬಿನ್ ಮಕ್ಬುಲ್ ಸಾಬ್ ರವರ ನಂ. ಕೆಎ-07-ಇಬಿ-7628 ಟಿವಿಎಸ್ ಸ್ಕೂಟಿಯಲ್ಲಿ ಮಕ್ತಿಯಾರ್ ರವರನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ವಿಜಯಪುರಕ್ಕೆ ಹೋಗುವ ಸಲುವಾಗಿ ದಿನಾಂಕ: 31-01-2019 ರಂದು ಬೆಳಿಗ್ಗೆ 11.30 ಗಂಟೆ ಸುಮಾರಿನಲ್ಲಿ ಹೆಚ್.ಕ್ರಾಸ್ ಕಡೆಯಿಂದ ವಿಜಯಪುರಕ್ಕೆ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ನಂ. ಕೆಎ-43-ಎನ್-0138 ಇನ್ನೋವಾ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕಾರನ್ನು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದು ಅಪಘಾತದಲ್ಲಿ ದ್ವಿಚಕ್ರ ವಾಹನ ಜಖಂ ಆಗಿದ್ದು ನನ್ನ ತಮ್ಮ ಮೌಲಾಜಾನ್ ರವರಿಗೆ ಎರಡೂ ಕಾಲುಗಳಿಗೆ ಸೊಂಟಕ್ಕೆ ಮತ್ತು ಮೊಣಕೈಗಳಿಗೆ ಗಾಯಗಳಾಗಿದ್ದು, ಮುಕ್ತಿಯಾರ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಗಾಯಾಳು ಮೌಲಾಜಾನ್ ರವರನ್ನು ವಿಜಯಪುರ ಮಾನಸ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಅಪಘಾತವನ್ನು ಕಣ್ಣಾರೆ ಕಂಡ ನಮ್ಮ ಸಂಬಂಧಿ ಸೈಯದ್ ಸಲ್ಮಾನ್ ಪಾಷಾ ಬಿನ್ ಸೈಯದ್ ಅಪ್ಜಲ್ ಪಾಷ, ಪಕೀರನಹೊಸಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ನನಗೆ ವಿಚಾರ ತಿಳಿಸಿದ್ದು ನಾನು ಸ್ಥಳಕ್ಕೆ ಬಂದು ವಿಚಾರ ಮಾಡಲಾಗಿ ನಿಜವಾಗಿದ್ದು, ನಂತರ ಗಾಯಾಳು ನನ್ನ ತಮ್ಮ ಮೌಲಾಜಾನ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಕಾರಿನ ಚಾಲಕನ ಬಗ್ಗೆ ವಿಚಾರ ಮಾಡಲಾಗಿ ಶೋಬನ್ ಬಾಬು @ ಬಾಬು ಎಂಬುದಾಗಿ ತಿಳಿದು ಬಂದಿದ್ದು, ಅಪಘಾತದ ಬಗ್ಗೆ ರಾಜಿ ಮಾಡಿಕೊಳ್ಳುವ ಸಲುವಾಗಿ ಇಷ್ಟುದಿನ ಕಾದಿದ್ದು ಕಾರಿನ ಚಾಲಕ ಅಥವಾ ಮಾಲೀಕ ಇದುವರೆಗೂ ರಾಜಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ಕೊಡುತ್ತಿದ್ದು ನನ್ನ ತಮ್ಮ ಮೌಲಾಸಾಬಿ ರವರಿಗೆ ಅಪಘಾತ ಮಾಡಿ ಗಾಯಗಳನ್ನುಂಟುಮಾಡಿ ಸ್ಥಳದಲ್ಲಿ ಕಾರನ್ನು ನಿಲ್ಲಿಸದೆ ಪರಾರಿಯಾಗಿರುವ ನಂ. ಕೆಎ-43-ಎನ್-0138 ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ  ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗ ಪ್ರಕರಣ ದಾಖಲಿಸಿಕೊಂಡಿರುತ್ತೆ.